Arun Jolada Kudligi – Peepal Media

ಬರಹ ಮಾಡುವವರು ಮತ್ತು ಸಾಮಾಜಿಕ‌ ಧೋರಣೆ
ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ  – ಅರುಣ್ ಜೋಳದಕೂಡ್ಲಿಗಿ, ಸಂಶೋಧಕರು

ಈಚೆಗೆ ನಂದಿನಿ ವಿಶ್ವನಾಥ (ನಂದಿನಿ ಹೆದ್ದುರ್ಗ) ಎನ್ನುವ ಕವಯಿತ್ರಿ ತಮ್ಮ ಫೇಸ್ ಬುಕ್ ಪೇಜಲ್ಲಿ (19.06.2023) ಉಚಿತ ಬಸ್ ಫಲಾನುಭವಿ ಬಳ್ಳಾರಿ ಭಾಗದ ಹಿರಿಯ ಮಹಿಳೆಯ ನಡೆ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದರು. ವಾರಗಟ್ಟಲೆ ಪ್ರಯಾಣ ಮಾಡಿ ಅಶುಚಿಯಾಗಿದ್ದರು ಎಂದು ಹೇಳುವ ಭರದಲ್ಲಿ  ಆ ಮಹಿಳೆಯ ಬಗೆಗೆ ತಿರಸ್ಕಾರ ಮತ್ತು ಅಸಹ್ಯ ಪಟ್ಟುಕೊಳ್ಳುವ ಧ್ವನಿ ಆ ಟಿಪ್ಪಣಿಯಲ್ಲಿತ್ತು. ಇದು ಆ ಮಹಿಳೆಯ ಬಗೆಗೆ ತೋರಿದ ಅಗೌರವ ಮಾತ್ರವಲ್ಲದೆ ಮಧ್ಯಮ ವರ್ಗದ ಅಹಂ ಮತ್ತು ಸಾಮಾಜಿಕ ತಿಳಿವಿನ ಅಜ್ಞಾನವನ್ನು ಸೂಚಿಸುತ್ತಿತ್ತು. ಈ ಮಹಿಳೆಯ ಧೋರಣೆಯನ್ನು ವಿರೋಧಿಸಿ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಾನು ‘ನೀವೊಬ್ಬ ಸೂಕ್ಷ್ಮ ಕವಯಿತ್ರಿಯಾಗಿ ನಿಮ್ಮಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದೆ. ಕಾರಣ ಹೀಗೆ ಬರೆದ ಮಹಿಳೆ ಕವಯಿತ್ರಿಯೂ ಆಗಿದ್ದುದು.

ಬಹುತೇಕರು ಈ ಧೋರಣೆಯನ್ನು ವಿರೋಧಿಸಿದ್ದರು. ಆನಂತರ ಹೆಣ್ಣಿನ ಪ್ರತಿಕ್ರಿಯೆ ಎನ್ನುವ ಕಾರಣಕ್ಕೆ ಗಂಡಸರು ಮುಗಿಬಿದ್ದರು ಎನ್ನುವ ಅಸೂಕ್ಷ್ಮ ಸ್ತ್ರೀವಾದಿಗಳ ಬೆಂಬಲವೂ ವ್ಯಕ್ತವಾಯಿತು. ನಂತರ ನಂದಿನಿ ಅವರು ತಮ್ಮ ಪೋಸ್ಟ್‌ ನ್ನು ಡಿಲೀಟ್ ಮಾಡಿ ಇದನ್ನು  ಮತ್ತಷ್ಟು ವಿಸ್ತರಿಸಿ ಸಮರ್ಥನೆ ಮಾಡಿಕೊಂಡರು.

ಇದು ನಂದಿನಿ ವಿಶ್ವನಾಥ ಅವರ ಸಮಸ್ಯೆ ಮಾತ್ರವಲ್ಲ ಪ್ರಧಾನವಾಗಿ ಸಾಮಾಜಿಕ ಜಾಲತಾಣಗಳಿಂದಲೆ ಮುನ್ನಲೆಗೆ ಬಂದ ಅಥವಾ ಸಾಮಾಜಿಕ ಜಾಲತಾಣವನ್ನು ಬರಹ ಮಾಧ್ಯಮದ ಪ್ರಧಾನ ಅಭಿವ್ಯಕ್ತಿಯಾಗಿ ಬಳಸುವ/ ಹೊಸ ತಲೆಮಾರಿನ ಬಹುತೇಕ ಬರಹಗಾರ್ತಿ/ಗಾರರ ಸಮಸ್ಯೆ ಇದು. ಅಂತೆಯೇ ಎಷ್ಟೇ ದೊಡ್ಡ ಲೇಖಕಿ/ಲೇಖಕರಾದರೂ ಆಳದಲ್ಲಿ ಮೇಲ್ಜಾತಿಯ/ಮೇಲ್ವರ್ಗದ ಮೇಲರಿಮೆಯನ್ನು ಮೀರಲು ಸಾಧ್ಯವಾಗದಿದ್ದರೆ/ಮಧ್ಯಮವರ್ಗದ ಸಿನಿಕತನ/ಅಹಂನ್ನು ಮೀರಲಾಗದಿದ್ದರೆ/ಗಂಡಿನ ಅಹಮಿಕೆಯಿಂದ ಹೊರಬರಲಾಗದಿದ್ದರೆ ಈ  ತರಹದ  ಟೀಕೆಗಳು/ತಮ್ಮ ಅಜ್ಞಾನದ ಬಗೆಗೆ ಕೆಟ್ಟದಾದ ಸಮರ್ಥನೆಗಳು ಶುರುವಾಗುತ್ತವೆ.

ಇದು ಕೇವಲ ಹೊಸದಾಗಿ ಬರಹ ಮಾಡುವ ಅಥವಾ ಹೊಸ ತಲೆಮಾರಿನ ಸಮಸ್ಯೆ ಮಾತ್ರವಲ್ಲ. ಕೆಲ ಹಿರಿಯರೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ ಬಹಳ ಪೂರ್ವಾಗ್ರಹ ಪೀಡಿತರಾಗಿಯೂ ಮೇಲ್ಜಾತಿ/ಮೇಲ್ವರ್ಗದ ಪ್ರತಿನಿಧಿಗಳಾಗಿಯೂ ಪ್ರತಿನಿಧಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಬಹಳ ಹಿಂದೆ ಹಿರಿಯ ವಿಮರ್ಶಕರಾದ ಸಿ‌.ಎನ್.ರಾಮಚಂದ್ರನ್ ಅವರು ಪ್ರಜಾವಾಣಿ ಕಥಾ ಸ್ಪರ್ಧೆಯ ತೀರ್ಪುಗಾರರ ಮಾತು‌ ಬರೆಯುತ್ತ ಕತೆಗಳೆಲ್ಲಾ ಹಳ್ಳಿಗಳತ್ತಲೇ ಗಿರಿಕಿ ಹೊಡೆಯುತ್ತವೆ ಎಂದಿದ್ದರು. ಇದು ನಗರದ ಅನುಭವವೂ ಕತೆಗಳಾಗಬೇಕು ಎನ್ನುವ ನೋಟವಾಗಿರದೆ ಒಂದು ಬಗೆಯ ಹಳ್ಳಿಗಳ ಬಗೆಗಿನ  ತಿರಸ್ಕಾರದ ಧ್ವನಿ ಇಲ್ಲಿತ್ತು. ಇದಕ್ಕೆ ಕತೆಗಾರ ಅಮರೇಶ ನುಗಡೋಣಿ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಲೇಖಕಿ ವೈದೇಹಿ ಅವರು ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಚರ್ಚೆ ನಡೆದಾಗ ಮಡೆ ಸ್ನಾನಕ್ಕೆ ಒಳಗಾಗುವ ಕೊರಗರು ಅವರಿಗೆ ಅವಮಾನವಾಗಿದ್ದರೆ ಅವರು ಮಾತಾಡಬೇಕು ವಿನಃ ನಾವು ನೀವಲ್ಲ ಎಂದಿದ್ದರು. ಎಷ್ಟೊಂದು ಶೋಷಿತ ಹೆಣ್ಣಿನ ಧ್ವನಿಯಾಗಿ ಕತೆಗಳನ್ನು ಬರೆದ ವೈದೇಹಿಯ ಈ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸಿತ್ತು. ವೈದೇಹಿಯವರೇ ಈಚೆಗೆ ಸರಕಾರದ ಉಚಿತ ಕೊಡುಗೆಗಳು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದರು. ಹಿಂದೊಮ್ಮೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯೊಬ್ಬರ ಸಾವಿನ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಬಹಿರಂಗವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಬೆಂಬಲಿಸಿದ್ದರು.

ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಸಹಮನುಷ್ಯರ ನೋವು ಸಂಕಟಗಳು ಬರಹ ಮಾಡುವವರನ್ನು ಕಂಗೆಡಿಸದಿದ್ದರೆ, ಒಳಗೆ ಒಂದು ಬಗೆಯ ವೇದನೆಯನ್ನೋ ತಳಮಳವನ್ನೋ/ ಇದಕ್ಕೆ ಕಾರಣವಾದ ವ್ಯವಸ್ಥೆಯ ಬಗೆಗೆ ಸಿಟ್ಟನ್ನೋ ಹುಟ್ಟಿಸದಿದ್ದರೆ ಸಾಮಾಜಿಕ ವಿದ್ಯಮಾನಗಳ ಬಗೆಗೆ ಬರಹ‌ ಮಾಡುವವರು ಕುರುಡಾಗುತ್ತಾರೆ. ಇದು ಹೆಚ್ಚಾದರೆ ಸಿನಿಕರಾಗಿ ಬಡಬಡಿಸುತ್ತಾರೆ.

ಬರಹ ಮಾಡುವ ಸಮುದಾಯ ಕತೆ ಕವಿತೆ ಪ್ರಬಂಧ ಬರೆದಾಗಲೂ, ಸಂಶೋಧನೆ ವಿಮರ್ಶೆ ಬರೆದಾಗಲೂ  ಅವರ ಸಾಮಾಜಿಕ ಧೋರಣೆ ವ್ಯಕ್ತವಾಗುವುದಕ್ಕೂ, ಸಾಮಾಜಿಕ‌ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ/ಪ್ರತಿಕ್ರಿಯಿಸುವಾಗ ಅವರುಗಳು ತಾಳುವ ನೆಲೆ ನಿಲುವುಗಳಿಗೆ ಬಹಳ ಸಲ ತಾಳೆಯಾಗುವುದಿಲ್ಲ. ಬರಹದಲ್ಲಿ ಮಾನವತಾವಾದಿಗಳಾಗಿದ್ದವರು ಸಾಮಾಜಿಕ ವಿದ್ಯಮಾನವೊಂದಕ್ಕೆ ಪ್ರತಿಕ್ರಿಯಿಸುವಾಗ ಜಾತಿವಾದಿಯಾಗಿಯೂ, ಮೆಲ್ವರ್ಗ-ಮೇಲ್ಜಾತಿ ಪ್ರತಿನಿಧಿಯಾಗಿಯೂ/ಗಂಡಿನ ಅಹಮಿಕೆಯಿಂದಲೂ/ಬಡವರ ಬಗೆಗೆ ಅಸಹನೆಯಿಂದಲೂ ಕುಬ್ಜರಾಗಿ ಕಾಣುತ್ತಾರೆ.  ಇದಕ್ಕೆ ಆಳವಾದ ಓದು ಅಧ್ಯಯನ ಇರಬೇಕಂತಿಲ್ಲ ಕನಿಷ್ಟ ಮನುಷ್ಯತ್ವದ ಗುಣಗಳಿದ್ದರೂ ಸಾಕು.‌ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ತಿದ್ದುವಂತಹ ಒಂದಷ್ಟು ಆರೋಗ್ಯಕರವಾದ ಓದು, ಚರ್ಚೆ ಸಂವಾದಗಳು ಬೇಕಾಗುತ್ತವೆ. ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೂ ಒಂದಷ್ಟು ಸಮತೆಯ ಕಣ್ಣೋಟ ಸಾಧ್ಯವಾಗುತ್ತದೆ.

ಯಾವುದೇ ಸರಕಾರವು ಅಧಿಕಾರ ರಹಿತ/ತಳವರ್ಗದ ಬಡ ಜನರಿಗಾಗಿ ನೆರವಾಗುವ  ಯೋಜನೆಗಳನ್ನು ಮಾಡಿದಾಗ ಮೊದಲಿಗೆ ಅದನ್ನು ಮಾನವೀಯತೆಯ ಕಣ್ಣೋಟದಲ್ಲಿ ನೋಡಬೇಕು. ಈ ಯೋಜನೆ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆಯೋ ಅಥವಾ ದುರ್ಬಲಗೊಳಿಸುತ್ತದೆಯೋ ಎನ್ನುವುದನ್ನು ಪರೀಕ್ಷಿಸಬೇಕು. ಬಹುಸಂಖ್ಯಾತರನ್ನು ಒಳಗೊಳ್ಳುವ ಯಾವುದೇ ಜನಪರ ಯೋಜನೆಯೂ ಆರಂಭಕ್ಕೆ ಒಂದಷ್ಟು ಅಸ್ತವ್ಯಸ್ತತೆಯನ್ನು ಹುಟ್ಟಿಸುತ್ತದೆ. ಇಂತಹ ಯೋಜನೆಗಳು ಆರಂಭವಾದಾಗಲೇ ಅದರ ನಿಜದ ಸಮಸ್ಯೆಗಳು/ಸಂಕೀರ್ಣತೆ ಅರ್ಥವಾಗುವುದು. ಕೆಲವು ಸಮಸ್ಯೆಗಳನ್ನು ಊಹೆ ಮಾಡಿ ಮುಂಜಾಗರೂಕತೆ ತೆಗೆದುಕೊಳ್ಳಲು ಆಗದು. ಯಾವುದೇ ಪಕ್ಷದ  ಯಾವುದೇ ಯೋಜನೆಯ ಆರಂಭದ ಒಂದಷ್ಟು ತಿಂಗಳಾದರೂ ಕಾಯಬೇಕು. ನಂತರವಷ್ಟೇ ಅದರ ಮಿತಿಗಳ ಬಗ್ಗೆ, ಯೋಜನೆಯ ತಪ್ಪುಗಳ ಬಗ್ಗೆ, ಸರಿಪಡಿಸಬೇಕಾದ ಮಾರ್ಗಗಳ ಬಗ್ಗೆ ಆರೋಗ್ಯಕರ ಚರ್ಚೆ ಟೀಕೆ ವಿಮರ್ಶೆ ನಡೆಯಬೇಕು. ಆ ಚರ್ಚೆ ಸಂವಾದ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿರಬೇಕು. ಹಾಗಾಗಿ ಕಾಂಗ್ರೇಸ್ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಒಂದಷ್ಟು ತಾಳಿಕೆಯಿಂದ ಪ್ರತಿಕ್ರಿಯಿಸಬೇಕಾಗಿದೆ.

ಯಾವುದೇ ಟೀಕೆ-ವಿಮರ್ಶೆ-ಮನುಷ್ಯ ಘನತೆಯನ್ನು ಹೆಚ್ಚಿಸುವುದರ ಕಡೆ ಮಾನವೀಯವಾಗಿರಬೇಕೆ ವಿನಃ ಮನುಷ್ಯ ಘನತೆಗೆ ಕುಂದುಂಟಾಗಬಾರದು.

ಅರುಣ್ ಜೋಳದಕೂಡ್ಲಿಗಿ

ಸಂಶೋಧಕರು

ಇದನ್ನೂ ಓದಿ-ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು: ಕುಸಿದ ಮಾಧ್ಯಮ ನೈತಿಕತೆ

ಟಿಪ್ಪು ಸುಲ್ತಾನನ್ನು ಯಾರು ಯಾರು ಏಕೆ ನೆನೆಯಬೇಕು?
ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ.

ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು?

ಸಾಮಾಜಿಕ‌ ಪಿಡುಗನ್ನು ನಿಶೇಧಿಸಿದ.

ಮನೆಗೆಲಸಕ್ಕೆ ಗುಲಾಮ ಮಹಿಳೆಯರನ್ನು ನೇಮಿಸಿ ಕೊಳ್ಳುವುದನ್ನು ನಿಶೇಧಿಸಿದ.

ಮಲಬಾರ್ ಪ್ರಾಂತದಲ್ಲಿದ್ದ ಬಹುಪತ್ನಿತ್ವ ಪದ್ಧತಿಯನ್ನು‌ ನಿಶೇಧಿಸಿದ.

ಮಲಬಾರಿನ ಬುಡಕಟ್ಟು ಮಹಿಳೆಯರು ಸೊಂಟದ ಮೇಲೆ ಉಡುಪು ಧರಿಸುವಂತಿರದ ಅಮಾನವೀಯ ಕ್ರೌರ್ಯವನ್ನು ನಿಶೇಧಿಸಿ ಉಡುಪು ಧರಿಸುವಂತೆ ನಿಯಮ ಜಾರಿಗೊಳಿಸಿದ.

ಮದುವೆಯ ದುಂದು ವೆಚ್ಚವನ್ನು ನಿಯಂತ್ರಿಸಿ ಸರಳ ಮದುವೆಗಳನ್ನು ಬೆಂಬಲಿಸಿದ.

ಟಿಪ್ಪುವನ್ನು ರೈತರೇಕೆ ನೆನೆಯಬೇಕು?

ರೈತರ ಜೀವ ಹಿಂಡುತ್ತಿದ್ದ ಸ್ಥಳೀಯ ಪಾಳೆಯಗಾರರನ್ನು ಮಟ್ಟಹಾಕಿನು.

ಮಧ್ಯವರ್ತಿ ದಲ್ಲಾಳಿಗಳನ್ನು ನಿಯಂತ್ರಿಸಿ ರೈತ ಮತ್ತು ಸರಕಾರದ ನೇರ ಸಂಪರ್ಕಕ್ಕೆ ಕ್ರಮ ಕೈಗೊಂಡನು.

ಜಮೀನ್ದಾರಿ ಪದ್ಧತಿಯನ್ನು ನಿಯಂತ್ರಿಸಿ, ತಕಾವಿ ಕಿರುಸಾಲ ಯೋಜನೆಯನ್ನು ಜಾರಿಗೆ ತಂದನು.

ರೈತರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದನು.

ತೆರಿಗೆಯಲ್ಲಿ ದೊಡ್ಡ ಸುಧಾರಣೆ ತರಲಾಯಿತು. ಹೊಲ ಬೆಳೆ ಎಲ್ಲವನ್ನು ಸರ್ವೆಮಾಡಿ ನ್ಯಾಯಯುತ ತೆರಿಗೆ ವಿಧಿಸತೊಡಗಿದ.

ಬಂಗಾಳದಿಂದ ರೇಶ್ಮೆಹುಳು ತರಿಸಿ ರೇಶ್ಮೆ ಕೃಷಿ ಯನ್ನು ಆರಂಭಿಸಿದ.

ನೀರಾವರಿಗಾಗಿ 39,000 ಕೆರೆಕಟ್ಟೆಗಳನ್ನು ಕಟ್ಟಿಸಿದ, 16,000 ಬಾವಿಗಳನ್ನು ತೋಡಿಸಿದ. 24 ಕಡೆ ನದಿ ಆಣೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಕೃಷಿಯನ್ನು ಅಭಿವೃದ್ಧಿಗೊಳಿಸಿದ. 1803-04 ರ ಹೊತ್ತಲ್ಲಿ 30 ಲಕ್ಷ ಎಕರೆ ಜಮೀನಿನಲ್ಲಿ 8 ಲಕ್ಷ ಎಕರೆ ಜಮೀನು ಅಂದರೆ ಶೇ 35 ರಷ್ಟು ನೀರಾವರಿಯಾಯಿತು.

1798 ರಲ್ಲಿ KRS ಇರುವ ಜಾಗದಲ್ಲಿ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟಿಸುವ ಅಡಿಗಲ್ಲು ಹಾಕಿಸಿದ.

ಕಬೀರ್ ಕಾಸರ್ ಗುರುತಿಸುವಂತೆ, ರೈತನ ಜಾತಿ, ಮತ, ಪಂಥ, ಧರ್ಮ ಏನೇ ಇದ್ದರೂ ಉಳುವವನೆ ಭೂಒಡೆಯ ಎಂಬ ಕ್ರಾಂತಿಕಾರಿ ಯೋಜನೆಯನ್ನು ತಂದನು.

ಜೀತ ಪದ್ಧತಿ ಮುಕ್ತಗೊಳಿಸಿ ದಿನಕೂಲಿ ಪದ್ಧತಿಯನ್ನು‌ ಜಾರಿಗೊಳಿಸಿದನು.

ರೈತರ ಆರೋಗ್ಯ  ಹಿತದೃಷ್ಟಿಯಿಂದ ಗಾಂಜಾ ಮತ್ತು ಮದ್ಯಪಾನ ನಿಶೇಧ ಜಾರಿಗೆ ತರುತ್ತಾನೆ.

ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು?

ತನ್ನ ರಾಜ್ಯದಲ್ಲಿ ಅಸ್ಷೃಶ್ಯತೆಯ ಆಚರಣೆಯನ್ನು ನಿಶೇಧ ಮಾಡುತ್ತಾನೆ.

2.ಟಿಪ್ಪು ಕಟ್ಟಿಸಿದ ಕೆರೆ ಬಾವಿಗಳಿಗೆ ದಲಿತರನ್ನು ನೀರಗಂಟಿ ಗಳನ್ನಾಗಿ ನೇಮಿಸುತ್ತಾರೆ.

3.ನಂಜನಗೂಡಿನಲ್ಲಿ 500 ಬ್ರಾಹ್ಮಣರಿಗಿದ್ದ 14,000 ಎಕರೆ ಜಮೀನನ್ನು ಹೊಲವಿಲ್ಲದ 700 ದಲಿತ ಶೂದ್ರರಿಗೆ ಹಂಚುತ್ತಾನೆ.

ಜೀತಪದ್ಧತಿಗೆ ಬಲಿಯಾಗಿದ್ದ ಬಹುಸಂಖ್ಯಾತ ದಲಿತರನ್ನು ಜೀತಪದ್ಧತಿ‌ ನಿಶೇಧ ಕಾಯ್ದೆ ಬಿಡುಗಡೆಗೊಳಿಸುತ್ತದೆ.

6.’ಉಳುವವನೆ ಭೂ ಒಡೆಯ’ ಕಾನೂನಿನಡಿ  ಉಳುವ ಭೂಮಿಗೆ ಒಡೆಯರಾದವರಲ್ಲಿ ದಲಿತರ ಪಾಲು ದೊಡ್ಡದಿದೆ.

ಟಿಪ್ಪುವನ್ನು ಹಿಂದುಗಳೇಕೆ‌ ನೆನೆಯಬೇಕು?

ಬಹುಸಂಖ್ಯಾತ ಹಿಂದುಗಳಿರುವ ತನ್ನ ರಾಜ್ಯದಲ್ಲಿ ಆತ ಮುಸ್ಲಿಮರಿಗಿಂತ ಹಿಂದುಗಳಿಗೆ ಹೆಚ್ಚು ಕೆಲಸ ಮಾಡಿದ್ದಾನೆ.

ಟಿಪ್ಪುವಿನ ರಾಜ್ಯನೀತಿಯ ಮುಖ್ಯ ಅಂಶ ಜಾತ್ಯತೀತತೆ

1916 ರಲ್ಲಿ ಆರ್.ನರಸಿಂಹಾಚಾರ್ಯರು ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ರಗಳನ್ನು ಓದಿದರೆ ಟಿಪ್ಪುವಿನ ಧರ್ಮಾತೀತ ಗುಣ ತಿಳಿಯುತ್ತದೆ. ಮರಾಠರ ಪರುಶುರಾಮ ಭಾವು ಶೃಂಗರಿಯ ಮಠವನ್ನು ದಾಳಿ ಮಾಡಿದಾಗ ಶಾರದಾ ಮಠವನ್ನು ಮತ್ತೆ ಜೀರ್ಣೋದ್ಧಾರ ಮಾಡಿದವನು ಟಿಪ್ಪು.

ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿಬಟ್ಟಲು, ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನಕ್ಕೆ ಆನೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟಿದ್ದಾನೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಅಪೂರ್ವ ಪಚ್ಚೆಲಿಂಗ ಕೊಡಿಸಿದ್ದಾನೆ. ಈ ಪಟ್ಟಿ ದೊಡ್ಡದಿದೆ. ಒಟ್ಟು 154 ದೇವಾಲಯಗಳಿಗೆ ದತ್ತಿ ಕಾಣಿಕೆ ನೀಡಿದ್ದಾನೆ.

ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನು ನೇಮಿಸಿದ್ದ.

ದಿವಾನ್ ಪೂರ್ಣಯ್ಯ-ಕಂದಾಯ, ಹಣಕಾಸು ಸಚಿವ

ಕೃಷ್ಣಾರಾವ್- ಕೋಶಾಧಿಕಾರಿ.

ಶ್ಯಾಮ್ ಅಯ್ಯಂಗಾರ್-ಅಂಚೆ ಸಚಿವರು.

ಹರಿಸಿಂಗ್- ಅಶ್ವದಳದ ಮುಖ್ಯಸ್ಥ

ಶಿವಾಜಿ ಎಂಬ ಮರಾಠಿ ಸೈನಿಕ 3,000 ಅಶ್ವದಳದ ಮುಖ್ಯಸ್ಥನಾಗಿದ್ದ.

ನರಸಿಂಗ ರಾವ್, ಶ್ರೀನಿವಾಸರಾವ್, ಅಪ್ಪಾಜಿರಾವ್ ಟಿಪ್ಪುಗೆ ಮುತ್ಸದ್ದಿ ಸಲಹೆಗಾರರಾಗಿದ್ದರು.

ಹೀಗೆ ಪಟ್ಟಿ ಬೆಳೆಯುತ್ತದೆ.

ಅರುಣ್ ಜೋಳದಕೂಡ್ಲಿಗಿ

ಕರ್ನಾಟಕದ ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು
ಈ ವರ್ಷ ಕರ್ನಾಟಕದ ರೈತರಿಗೆ ಮಳೆಯೂ ಕಣ್ಣೀರೂ ಏಕೀಭವಿಸಿದ ವಾತಾವರಣ.

ಒಂದೆಡೆ ವಿಪರೀತ ಸುರಿದ ಮಳೆಗೆ ಶೇಂಗಾ ಬಳ್ಳಿಗಳಲ್ಲೆ ಮೊಳೆತಿವೆ. ಮೆಕ್ಕೆಜೋಳ ತೆನೆಯಲ್ಲಿಯೇ ಮೊಳೆತಿವೆ..ಕೆಲವು ಕಡೆಗಳಲ್ಲಿ ಈರುಳ್ಳಿಯನ್ನು ರಸ್ತೆಗೆ ಚೆಲ್ಲಲಾಗಿದೆ. ಈ ವರ್ಷದ ಆರಂಭಕ್ಕೆ ರೈತರು ಒಳ್ಳೆಯ ಮಳೆ ಎಂದು ಸಂಭ್ರಮಿಸಿದರು. ಈ ಅತಿಯಾದ ಮಳೆ ಸಂಭ್ರಮಿಸಿರುವವರನ್ನೆ ಅಳುವಂತೆ ಮಾಡಿದೆ. ಇದು ರೈತರು ನಿಸರ್ಗದ ಜತೆ ನಡೆಸುವ‌ ನಿರಂತರ ಜೂಜಾಟವಾಗಿದೆ. ಒಮ್ಮೆ ಗೆಲುವು, ಮತ್ತೊಮ್ಮೆ ಸೋಲು. ವಾತಾವರಣ ಹೀಗಿರುವಾಗ ಮತ್ತೊಂದು ದೀಪಾವಳಿ ಬಂದಿದೆ. ಹಳ್ಳಿಗಳಲ್ಲಿ ದೀಪಾವಳಿಯ ದೊಡ್ಡ ಸಂಭ್ರಮ ಇಲ್ಲದಿದ್ದರೂ ನೋವು ಮರೆಯಲಾದರೂ ದೀಪಾವಳಿ ಆಚರಿಸಿ ನಗು ಚಲ್ಲುವ ಪ್ರಯತ್ನ ಮಾಡುತ್ತಾರೆ.

ಇದೀಗ ಗ್ರಾಮೀಣ ಭಾಗ ಮತ್ತು ನಗರದ ಮಧ್ಯಮವರ್ಗ ತನ್ನದೇ ರೀತಿಯಲ್ಲಿ ಸಂಭ್ರಮದ ಆಚರಣೆಗೆ ಅಣಿಯಾಗಿದೆ.  ಇದು ನಗರಕೇಂದ್ರಿತ ಶ್ರೀಮಂತ, ಮಧ್ಯಮವರ್ಗದ ಹಬ್ಬವೆನ್ನುವಂತೆ ಬಿಂಬಿತವಾಗುತ್ತದೆ. ಹೀಗಾಗಿಯೇ ದೀಪಾವಳಿ ಸಂದರ್ಭಕ್ಕೆ ದೊಡ್ಡ ವ್ಯಾಪಾರದ ವಹಿವಾಟು ಶುರುವಾಗುತ್ತದೆ. ಇದನ್ನೆಲ್ಲ ಆಚೆ ಸರಿಸಿ ನೋಡಿದರೆ ದೀಪಾವಳಿ ಮೂಲತಃ ಗ್ರಾಮೀಣ ಪ್ರದೇಶದ ಬಹುಸಂಸ್ಕೃತಿಯಲ್ಲಿ ಅರಳುವ ಒಂದು ವಿಧ್ಯಮಾನ. ಹೀಗೆ ಬಹುಸಂಸ್ಕೃತಿಯ ಬೇರುಗಳನ್ನು ಪರಿಶೀಲಿಸಿದರೆ ದೀಪಾವಳಿಯ ಸಾಂಸ್ಕೃತಿಕ ಲೋಕವೊಂದು ತೆರೆದುಕೊಳ್ಳುತ್ತದೆ.

ನಾವು ಯಾವುದೇ ಹಬ್ಬಗಳನ್ನು ಇಂದು ನಗರ ಕೇಂದ್ರಿತವಾಗಿ ನೋಡುತ್ತಿದ್ದೇವೆ. ಅದೆ ನಿಜದ ಸ್ವರೂಪ ಎಂದು ಬಿಂಬಿಸಲಾಗುತ್ತದೆ. ದೀಪಾವಳಿ ವಿಷಯದಲ್ಲೂ ಹಾಗೆ ಇದೆ. ಆದರೆ ಗ್ರಾಮೀಣ ಜಗತ್ತು ದೀಪಾವಳಿಯನ್ನು ಹೇಗೆ ಪರಿಭಾವಿಸಿದೆ ಎಂದು ಹುಡುಕಿದರೆ ಅಚ್ಚರಿಯಾಗುವಷ್ಟು ವೈವಿಧ್ಯವಿದೆ. ತುಂಬಾ ಫರಕುಗಳನ್ನು ಒಡಲೊಳಗಿಟ್ಟುಕೊಂಡಿದೆ. ಹಾಗೆ ನೋಡಿದರೆ ಜನಪದರ ದೀಪಾವಳಿ ಒಂದಲ್ಲ ಹಲವಿವೆ. ಕರ್ನಾಟಕದ ಪ್ರಾದೇಶಿಕ ಭಿನ್ನತೆಗಳ ಜತೆ, ಹಲವು ಸಮುದಾಯಗಳ ಜತೆ, ಬೇರೆ ಬೇರೆ ದೈವಗಳ ಜತೆ ವಿವಿಧ ಆಕಾರಗಳಲ್ಲಿ ಮೈದಾಳಿದೆ. ಹಾಗಾಗಿ ಇದನ್ನು ಗ್ರಾಮಜಗತ್ತಿನ ಬಹುರೂಪಿ ದೀಪಾವಳಿಗಳು ಎನ್ನಬಹುದು.

ಕೊಳ್ಳೇಗಾಲ ಮತ್ತು ಚಾಮರಾಜನಗರ ಭಾಗದ ಬೇಡಗಂಪಣ ಸಮುದಾಯದ ದೀಪಾವಳಿ ವಿಶಿಷ್ಠವಾಗಿದೆ. ಮದುವೆಯಾಗದ 101 ಹೆಣ್ಣು ಮಕ್ಕಳು ಮಲೆಮಾದೇಶ್ವರನಿಗೆ ʼಹಾಲರಿವೆ ಸೇವೆ’ ಎಂಬ ಆಚರಣೆಯನ್ನು ಮಾಡುತ್ತಾರೆ. ಇದು ಬೇಡಗಂಪಣರ ಮಹಿಳೆಯರಿಂದ ಮಾತ್ರ ಸಲ್ಲುತ್ತದೆ. ಇದಕ್ಕೊಂದು ಸೃಷ್ಟಿಪುರಾಣವಿದೆ. ಹಿಂದೆ ಶೇಷಣ್ಣೊಡೆಯ ಮಾದೇಶ್ವರ ಪೂಜೆಗೆ ಹಾಲರಿವೆ ಒಯ್ಯುವಾಗ, ಶೇಷನ ಪರೀಕ್ಷಿಸಲು ಮಾದೇಶ ಕಾಲಿನಿಂದ ಹಾಲರಿವೆ ಉರುಳಿಸುತ್ತಾನೆ. ಆಗ ಶೇಷಣ್ಣ ಮಾದೇಶ್ವರನಿಗೆ ಹಾಲಿಲ್ಲದಾಯಿತೆಂದು ಆತ್ಮಹತ್ಯೆಗೆ ಸಜ್ಜಾಗುತ್ತಾನೆ. ಕೂಡಲೇ ಮಾದೇಶ್ವರ ಭಕ್ತಿಗೆ ಮೆಚ್ಚಿ ಈ ಹಾಲರಿವೆಯಿಂದ ಹರಿದ ಹಾಲು ಹಳ್ಳವಾಗಲಿ, ದೀಪಾವಳಿಯಲ್ಲಿ ಬೇಡಗಂಪಣರ ಕೋರು ಮಹಿಳೆಯರು ಹಾಲರಿವೆ ಸೇವೆ ಮಾಡಲಿ ಎಂದನಂತೆ. ಈಗ ಶೇಷಣ್ಣೊಡೆಯನ ವಂಶಸ್ಥ ಮಹಿಳೆಯರು ಹಾಲರಿವೆ ಸೇವೆ ಮಾಡುತ್ತಾರೆ.

ಹಾಲಕ್ಕಿ ಒಕ್ಕಲಿಗರಲ್ಲಿ ಬಲಿಯ ಆಚರಣೆ ನಡೆಯುವುದು ದೀಪಾವಳಿಯಲ್ಲಿ. ಬಲಿ ಹಾಲಕ್ಕಿಗಳ ಮನೆಗೆ ಬೆಳ್ಳಿ ರಥದಲ್ಲಿ ಬಂದು, ಗೋವಿನ ಮೇಲೆ ಮರಳುತ್ತಾನೆ. ಮಳೆ ನಿಂತು, ಬೆಳೆ ಕೊಯ್ಲಾಗಿ ಹೊಲಗಳಿಂದ ಕಣಗಳಿಗೆ ಬರುತ್ತದೆ. ಪಶುಪಾಲಕರಿಗೆ ನಿರ್ಬಂಧಗಳು ಇಲ್ಲವಾಗುವ  ಈ ಕಾಲದಲ್ಲಿ ಬಲಿ ಆಚರಣೆ ಜೀವಪಡೆಯುತ್ತದೆ. ಹಾಗಾಗಿ ದೀಪಾವಳಿ ಕೆಲ ಸಮುದಾಯಗಳಿಗೆ ಮಾಂಸಾಹಾರಿ ಹಬ್ಬ.

ಮಧ್ಯ ಕರ್ನಾಟಕದ ಬೇಡರು ದೀಪಾವಳಿಗೆ ಗುಗ್ಗರಿಹಬ್ಬ ಮಾಡುತ್ತಾರೆ. ಹೊಸಧಾನ್ಯ ಹುರುಳಿ ಜೋಳದೊಂದಿಗೆ ಬಾಳೆಹಣ್ಣು ಬೆಲ್ಲವನ್ನು ಸೇರಿಸಿ ವಿಶೇಷ ಆಹಾರವನ್ನು ಸಿದ್ದಪಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಅಪರೂಪದ ಆಚರಣೆಗಳು ದೀಪಾವಳಿಯೊಂದಿಗೆ ಬೆಸೆದುಕೊಂಡಿವೆ. ಬೆಳಗಾಂ ಬಿಜಾಪುರ ಭಾಗದ ಅಲೆಮಾರಿ ಕುರುಬರು ಕುರಿದಡ್ಡಿಗಳಲ್ಲಿ `ಹಾಲು ಬಿಂದಿಗೆ’ ಆಚರಣೆ ಮಾಡುತ್ತಾರೆ. ಕುರಿ ಕುಳ್ಳಿನ ಬೆಂಕಿಯಲ್ಲಿ ಕುರಿಹಾಲು ಕಾಯಿಸಿ ಉಕ್ಕುವ ದಿಕ್ಕಿಗೆ ಮಳೆ-ಬೆಳೆ ಹೆಚ್ಚೆಂದು ನಂಬುತ್ತಾರೆ. ಆ ದಿಕ್ಕಿಗೆ ಕುರಿಗಳೊಂದಿಗೆ ವಲಸೆ ಹೋಗುತ್ತಾರೆ. ಕುರಿಗಾರ ಸಮುದಾಯಗಳು ಕುರಿಯನ್ನು ಲಕ್ಷ್ಮಿ ಎಂದು ಭಾವಿಸುತ್ತಾರೆ. ಹಾಗಾಗಿ ಕುರಿಗಳನ್ನು ಪೂಜಿಸಿ ಓಡಿಸುವ ಆಚರಣೆಯೂ ಇದೆ. ಕುರಿದೊಡ್ಡಿಯನ್ನು ಹೊಲದ ಬೆಳೆಗಳಿಂದ ಅಲಂಕರಿಸಿ ವಿಶೇಷವಾಗಿ ಕುರಿಗಳಿಗೆ ಭಕ್ತಿಯನ್ನು ಅರ್ಪಿಸುವುದಿದೆ.

ಉತ್ತರಕರ್ನಾಟಕದ ಕೊಪ್ಪಳ ಕುಷ್ಟಗಿ ಭಾಗದಲ್ಲಿ ಕುಂಬಾರ ಮನೆಯ ಕರಿಬೂದಿಯಿಂದ ಮನೆ ಮುಂದೆ ಎರಡು ದೀಪಸ್ತಂಬ ಬರೆಯುವುದಿದೆ. ಇದಕ್ಕೆ ಕರಿಮಂಠ ಎಂದು ಕರೆಯುತ್ತಾರೆ. ಇದಕ್ಕಿರುವ ಮಿತ್ ಕುತೂಹಲವಾಗಿದೆ. ಒಮ್ಮೆ ಪತಿವ್ರತೆ ಲಕ್ಷ್ಮಿ ಪೂಜೆಗೆ ಅಡ್ಡಿಯಾಗದಿರಲೆಂದು ಕಾವಲಿಗೆ ಮಣ್ಣಿನ ಕರಿ ಮತ್ತು ಮಂಠ ಎಂಬ ಯೋಧರನ್ನು ನಿಲ್ಲಿಸುತ್ತಾಳೆ. ಇವಳ ಭಕ್ತಿ ಮೆಚ್ಚಿ ಸ್ವತಃ ಲಕ್ಷ್ಮಿಯೇ ಮನೆಗೆ ಬರುತ್ತಾಳೆ. ಆಗ ಕಾವಲಿನ ಕರಿ ಮಂಠರು ಲಕ್ಷ್ಮಿಯನ್ನು ತಡೆದಾಗ ಕೋಪಗೊಂಡು ಇವರನ್ನು ಸಂಹರಿಸುತ್ತಾಳೆ. ಇದನ್ನು ಕಂಡ ಪತಿವ್ರತೆ ಗೋಳಾಡಿ  ಲಕ್ಷ್ಮಿಯಿಂದ ಮರುಜೀವ ಪಡೆಯುತ್ತಾಳೆ. ಈ ನೆನಪಿಗೆ ಕರಿಮಂಠನ ಆಚರಣೆ ನಡೆದುಕೊಂಡುಬಂದಿದೆ. ಲಕ್ಷ್ಮಿ ಪೂಜೆಗೆ ಅಡ್ಡಿಯಾಗದು ಎಂದು ನಂಬುತ್ತಾರೆ.

ಅಂತೆಯೇ ಹುಲಿಜಂತಿಯಲ್ಲಿ ನಡೆವ ಕುರುಬರ ಮಾಳಪ್ಪನ ಮುಂಡಾಸು ಆಚರಣೆಯೊಂದಿದೆ. ದೀಪಾವಳಿ ಅಮವಾಸ್ಯೆಗೆ ಮಾಳಪ್ಪನ ಸಮಾದಿ. ಮೇಲೆ ಯಾವ ಕಡೆ ಮುಂಡಾಸ ಹೆಚ್ಚು ಬಿದ್ದಿರುತ್ತದೋ ಆ ಕಡೆ ಮಳೆ-ಬೆಳೆ ಹೆಚ್ಚೆಂದು ತಿಳಿಯುತ್ತಾರೆ. ಈ ಸಂದರ್ಭದ ಮಾಳಪ್ಪನ ಜಾತ್ರೆಗೆ ಗುರು ಬೀರಪ್ಪನ ಸಾಕುಮಗ ಬುಳ್ಳಪ್ಪ ಉಟಗಿ ಬರಮಲಿಂಗ, ಸೂನ್ಯಳ ವಿಠಲ, ಹುನೂರಿನ ಬೀರಪ್ಪ,  ಬೀರಪ್ಪನ ತಂಗಿ ಶೀಲವಂತೆ ಸಿರಿಕೋನ ಜೀರಂಕಲಗಿ ಬೀರಪ್ಪ ದೈವಗಳ ಪಲ್ಲಕ್ಕಿಗಳು ಆಗಮವಾಗುತ್ತವೆ. ಈ ಪಲ್ಲಕ್ಕಿಗಳ ಉತ್ಸವ ರೋಮಾಂಚನಕಾರಿಯಾಗಿರುತ್ತದೆ. ಇದೇ ದೀಪಾವಳಿಗೆ ಜತ್ತ ತಾಲೂಕಿನ ಉಮದಿ ಮಲಕಾರಿಸಿದ್ಧ ಹಾಗೂ ಮಂಗಳವೇಡ ತಾಲೂಕಿನ ಡೋಣಜದ ಮಹಾಸಿದ್ಧನ ಜಾತ್ರೆಗಳು ನಡೆಯುತ್ತವೆ.

ದೀಪಾವಳಿ ಪಾಡ್ಯಕ್ಕೆ ನಡೆವ ಭೀಮಾಂಬಿಕೆಯ ಜಾತ್ರೆಯಲ್ಲಿ ಬಂದವರಿಗೆಲ್ಲಾ ಸಂಗಟಿ ಸಾರಿನ  ಪ್ರಸಾದವನ್ನು ವಿತರಿಸುತ್ತಾರೆ. `ಸಂಗಟಿ ಉಂಡು ಸಂಕಟ ಕಳೆದುಕೊಳ್ಳಿರಿ’ ಎಂದು ಭೀಮವ್ವ ವಚನ ನೀಡಿದ್ದಾಳೆಂದು ಜನ ನಂಬುತ್ತಾರೆ. ತುಳುನಾಡಿನ ನಲಿಕೆ(ಪಾಣಾರ)ಸಮುದಾಯ ದೀಪಾವಳಿಯಲ್ಲಿ ಮಾಂಕಾಳಿ ಕುಣಿತ ನಡೆಸುತ್ತಾರೆ. ದೀಪಾವಳಿಯ ವೇಳೆ ಹೊಸ ಬತ್ತದಿಂದ ಮಡಿಯಲ್ಲಿ ತಯಾರಿಸಿದ ಅವಲಕ್ಕಿಯನ್ನು ನೈವೇದ್ಯವಾಗಿ ಅರ್ಪಿಸುವುದಿದೆ. ತನ್ನದಾಗಿದ್ದ ನಾಡಿನ ಬೆಳೆ ಭಾಗ್ಯಗಳನ್ನು ನೋಡಲು ಬರುವನೆನ್ನಲಾದ ಬಲೀಂದ್ರನಿಗೂ ಹೊಸ ಅವಲಕ್ಕಿಯ ಔತಣವನ್ನು ನೀಡುತ್ತಾರೆ.

ಲಂಬಾಣಿ ಮಹಿಳೆಯರಿಗೆ ದೀಪಾವಳಿ ವಿಶಿಷ್ಠವಾಗಿದೆ. ಇವರು ಲಕ್ಷ್ಮಿ ಪೂಜೆಗೆ ಮೊದಲು ಗೋಪೂಜೆ ಮಾಡುತ್ತಾರೆ. ಅಮವಾಸ್ಯೆಯ ರಾತ್ರಿ ಶೃಂಗರಿಸಿಕೊಂಡ ಯುವತಿಯರು ಹರಳೆಣ್ಣೆ ದೀಪದಿಂದ ತಾಂಡಾ ನಾಯಕನಿಗೆ ಬೆಳಗುತ್ತಾರೆ. ತಾಂಡಾದ ಮನೆಗಳಿಗೆ ಆರತಿ ಹೋದ ನಂತರ ಕಾಣಿಕೆಯಾಗಿ ಹಣವನ್ನು ಢಾಕಣಿ (ಪಣತಿ)ಯಲ್ಲಿ ಹಾಕುತ್ತಾರೆ. ಆಗ ಹುಡುಗಿಯರು ಮೇರಾ (ಆರತಿ) ಗೀತೆ ಹಾಡುತ್ತಾರೆ. `ಬಾಪು ತೋನ ಮೇರಾ/ವರ್ಷೆ ದಾಡೇರ ಕೋಟ ದವಾಳಿ/ಯಾರಿ ತೋನ ಮೇರಾ/ ವರ್ಷೆ ದಾಡೇರ ಕೋಟ ದವಾಳಿ/ಭೀಯಾ ತೋನ ಮೇರಾ/ವರ್ಷೆ ದಾಡೇರ ಕೋಟ ದವಾಳಿ’ ಎನ್ನುವಂತಹ ಹಾಡುಗಳಲ್ಲಿ ತಂದೆ, ತಾಯಿ ಸಹೋದರರ ಗುಣಗಾನ ಮಾಡುತ್ತಾರೆ.

ಉತ್ತರ ಕನ್ನಡ ಭಾಗದ ಮುಕರಿ ಸಮುದಾಯದ ಮಹಿಳೆಯರಿಗೆ ದೀಪಾವಳಿ ದೊಡ್ಡ ಹಬ್ಬ. ವಾರಗಟ್ಟಲೆ ಹಬ್ಬದ ತಯಾರಿ ಮಾಡುತ್ತಾರೆ. ದೀಪಾವಳಿಯ ನೀರು ಮೀಯುವ ದಿನ ನಸುಕಿನಲ್ಲಿ ಸ್ನಾನ ಮಾಡಿ, ಒಂದು ಹಲಗೆಯ ಮಣೆಯ ಮೇಲೆ ಕುಡಿ ಬಾಳೆಯನ್ನಿಟ್ಟು ಅದರ ಮೇಲೆ ಅಕ್ಕಿ ಹರಗಿ ಮೊಗ ಕಾಯಿಯನ್ನಿಟ್ಟು ಅದಕ್ಕೆ ಮಸಿಯಿಂದ ಮೀಸೆಯಿರುವ ಮುಖದಾಕೃತಿಯನ್ನು ಬಿಡಿಸಿ ಬಲೀಂದ್ರನೆಂದು ಪೂಜಿಸುತ್ತಾರೆ. ಮುಕರಿ ಅಜ್ಜಿಯರು ಮಕ್ಕಳಿಗೆ ಹಬ್ಬದ ಸಂಜೆ ಬಲೀಂದ್ರನ ಕತೆ, ಬಸ್ಯಾ ಹುಲಿ ಸವಾರಿ ಮಾಡಿದ ಕತೆ ಹೇಳುತ್ತಾಳೆ.

ಆಗೇರರ ಸಮುದಾಯ  ದೀಪಾವಳಿಯನ್ನು `ದೇಪಳಿಗ’ ಹಬ್ಬ ಎನ್ನುತ್ತಾರೆ. ಎಣ್ಣೆ ಸ್ನಾನ ಮಾಡುವ ಕಾರಣಕ್ಕೆ `ನೀರ ಮೀಯಾ ಹಬ್ಬ’ ಎಂದೂ ಕರೆಯುತ್ತಾರೆ. ದೇಪಳಿಗದ ಹಿಂದಿನ ದಿನ ಹೆಂಗಸರದು ‘ಅಡಕಲ’ದಲ್ಲಿ (ದೊಡ್ಡ ಮಣ್ಣಿನ ಮಡಕೆ) ನೀರು ತುಂಬುವ ಸಂಭ್ರಮ. ಅಡಕಲನ್ನು ತೊಳೆದು ಶೇಡಿ ಹಲಿ ಹೊಯ್ದು ಅಡಕಲ ಕೊರಳಿಗೆ ಹಿಂಡಲಕಾಯಿ ಬಳ್ಳಿ-ಹೂಮಾಲಿ ಸುತ್ತಿ ಅಲಂಕರಿಸುತ್ತಾರೆ. ನೀರಿಗೆ ಬೇವಿನ ಎಲೆ, ನೇರಳಿ ಚಕ್ಕೆ ಹಾಕುತ್ತಾರೆ. ಚತುರ್ದಶಿಯ ದಿವಸ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ.

ದೀಪವಾಳಿಯಲ್ಲಿ ಕಹಿ ಬಳಕೆಯೇ ಒಂದು ವಿಶೇಷ. ಹಿಂಡಲಕಾಯವನ್ನು ಕಾಲಿನಿಂದ ಮೆಟ್ಟಿ ಒಡೆದು ಬೀಜವನ್ನು ಹೆಣೆಗೆ ಇಟ್ಟುಕೊಳ್ಳುವುದರ ಜೊತೆಗೆ (ವಿಷ್ಣು ಬಲಿಚಕ್ರವರ್ತಿಯನ್ನು ಮೆಟ್ಟಿದ ಸಾಂಕೇತಿಕ ಆಚರಣೆ) ಕಹಿಬೇವು, ಓಮ (ಅಜವಾನ). ಜೀರಿಗೆ ಅರೆದು ಕಹಿ ಮದ್ದನ್ನು ಮಾಡಿ ಕುಡಿಯುತ್ತಾರೆ. ಮೊಗೆಕಾಯಿಯ ಕಡುಬು ಈ ಹಬ್ಬದ ವಿಶೇಷ ಖಾದ್ಯ. ಅಂಕೋಲ ಭಾಗದಲ್ಲಿ ಮಣ್ಣಿನ ಹೊಂಡೆ ರಚಿಸಿ ಅದನ್ನು ಬಲೀಂದ್ರನ ಕೋಟೆ ಎಂದು ಕರೆಯುತ್ತಾರೆ. ಮನೆಗಳ ಪೂಜಾ ಕೋಣೆಯಲ್ಲಿ ಬೋರಜ್ಜಿ ಮತ್ತು ಬಲೀಂದ್ರನ ಮಣ್ಣಿನ ಮೂರ್ತಿ ಮಾಡಿ ಆರಾಧಿಸಿವ ವಿಶಿಷ್ಠತೆ ಇದೆ.

ಬಾಗಲಕೋಟೆ ಜಿಲ್ಲೆಯ ಸಿರೂರಿನಲ್ಲಿ ಕರ್ನಾಟಕದಲ್ಲಿ ಬೇರೆಲ್ಲೂ ಕಾಣದ ಆಚರಣೆಯೊಂದಿದೆ. ಪಾಡ್ಯದ ಮಧ್ಯರಾತ್ರಿ ಕೆರೆಯಂಗಳದ ಸಾಮಫಡಿ(ಕುಸ್ತಿ ತಾಲೀಮಿನ ಸ್ಥಳ)ಗೆ ಕುಸ್ತಿ ಜಟ್ಟಿಗಳೆಲ್ಲಾ ಮೆರವಣಿಗೆಯಲ್ಲಿ ಬಂದು ಸಾಮು ತೆಗೆಯುತ್ತಾರೆ. ನಂತರ ಎರಡು ಗರಡಿಮನೆಯವರ ಮಧ್ಯೆ ಸ್ಪರ್ಧೆಯೂ ಏರ್ಪಡುತ್ತದೆ. ಹೀಗೆ ಸಾಮು ತೆಗೆಯುವಾಗ ಇದಕ್ಕೆ ಪೂರಕವಾದ ಜನಪದ ಗೀತೆಗಳನ್ನು ಹಾಡಲಾಗುತ್ತದೆ. ಮಲೆನಾಡಿದ ಒಕ್ಕಲಿಗರು ಮಾಡುವ ಮೇಳಿಪೂಜೆ ರೈತಾಪಿ ಬದುಕನ್ನು ಬಿಂಬಿಸುತ್ತದೆ. ಬೇಸಾಯದ ಎಲ್ಲಾ ಸಾಮಗ್ರಿಗಳನ್ನು ಒಪ್ಪವಾಗಿಟ್ಟು, ಬೆಳೆಯುವ ಎಲ್ಲಾ ಬೆಳೆಗಳನ್ನು ಜೋಡಿಸಿ ವಿಶಿಷ್ಠವಾಗಿ ಪೂಜೆ ಮಾಡಲಾಗುತ್ತದೆ. ಕೆಲವೆಡೆ ಸೆಗಣಿಯಿಂದ ದೇವಿ ಮೂರ್ತಿಮಾಡಿ ಆರಾಧಿಸುವ ಪದ್ದತಿ ಇದೆ. ಇದಕ್ಕವರು ಕೆರಕ ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಲೆಮರದ ಕಂಬಕ್ಕೆ ಶೃಂಗಾರ ಮಾಡಿ ಪೂಜೆ ಮಾಡುವುದಿದೆ.

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ದೀಪಾವಳಿಯನ್ನು ದೊಡ್ಡಹಬ್ಬ ಎಂದು ಕರೆಯುತ್ತಾರೆ. ಇದರಲ್ಲಿ ಗೋವುಗಳನ್ನು ಅಲಂಕರಿಸುತ್ತಾರೆ. ಎತ್ತುಗಳ ಕೊರಳಿಗೆ ನೋಟಿನ ಹಾರ, ಬೆಳ್ಳಿ ಬಂಗಾರದ ಸರಗಳನ್ನು ಹಾಕುವುದು ಮದುಮಗನಂತೆ ಬಾಸಿಂಗ ಕಟ್ಟಿ ಶೃಂಗಾರ ಮಾಡುವುದು, ಹೀಗೆ ಶೃಂಗರಿಸಿದ ಎತ್ತು ಆಕಳ ಜಾನುವಾರುಗಳನ್ನು ಪೂಜಿಸಿ ಊರಮುಂದೆ ತಂದು ಎಲ್ಲರೂ ಸಂಭ್ರಮಿಸುವುದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ದೀಪಾವಳಿಗೆ ಮಣ್ಣಿನ ಬೊಂಬೆಗಳನ್ನು ಮಾಡುವುದಿದೆ. ಇದರಲ್ಲಿ ಕೋಟೆಕೊತ್ತಲಗಳನ್ನು ಮಾಡಿ ಶಿವಾಜಿಯ ಪ್ರತಿಮೆ ಮಾಡುವುದಿದೆ. ಈ ಮಣ್ಣಿನ ಬೊಂಬೆಗಳು ವರ್ತಮಾನದ ವಿದ್ಯಮಾನಗಳನ್ನು ಆಧರಿಸಿಯೂ ಗೊಂಬೆಗಳನ್ನು ಮಾಡಲಾಗುತ್ತದೆ. ಹಾಗಾಗಿ ಚಿಕ್ಕೋಡಿ ಭಾಗದವರಿಗೆ ದೀಪಾವಳಿಯೆಂದರೆ ಮಣ್ಣಿನ ಗೊಂಬೆಗಳ ಹಬ್ಬವೇ ಆಗಿದೆ.

ಮೊದಲೆ ಹೇಳಿದಂತೆ ಕೆಲವು ಸಮುದಾಯಗಳಿಗೆ ದೀಪಾವಳಿ ಮಾಂಸಾಹಾರಿ ಹಬ್ಬ. ಕೊರಗ ಸಮುದಾಯಕ್ಕೆ ದೀಪಾವಳಿ ಹಿರಿಯರಿಗೆ ಹೆಡೆ ಅರ್ಪಿಸುವ ಹಬ್ಬ. ಸತ್ತ ವ್ಯಕ್ತಿಗಳ ಹೆಸರಲ್ಲಿ ಮಾಡಿದ ತಾಳಿಗಳನ್ನು ನೀರುತುಂಬಿದ ಮಡಕೆಗಳ ಕಂಠಕ್ಕೆ ಕಟ್ಟುವ ವಿಶಿಷ್ಠ ಆಚರಣೆ ಇದೆ. ಕೊರಗರು ಈ ಹಬ್ಬಕ್ಕೆ ಹಂದಿಯನ್ನು ಕೊಯ್ಯುವುದು, ಹಂದಿ ಮಾಂಸ ಮಾಡುವುದು ಕೂಡ ವಿಶೇಷ. ಗೊಂದಲಿಗ ಸಮುದಾಯವು ಈ ಹಬ್ಬದಲ್ಲಿ ಲಕ್ಷ್ಮಿಪೂಜೆಯನ್ನು ವಿಶೇಷವಾಗಿ ಮಾಡುತ್ತಾರೆ. ಗೊಂದಲಿಗ ಹೆಣ್ಣುಮಕ್ಕಳೆಲ್ಲಾ ಈ ಹಬ್ಬಕ್ಕೆ ಕಡ್ಡಾಯವಾಗಿ ಬರುತ್ತಾರೆ. ಅಂತೆಯೇ ಗ್ರಾಮದೇವಿಗೆ ಬಲಿಕೊಡುವ ಆಚರಣೆಯೂ ಈ ಹಬ್ಬದಲ್ಲಿ ನಡೆಯುತ್ತದೆ.

ಕರ್ನಾಟಕದ ಹಲವೆಡೆ ಗ್ರಾಮೀಣ ಭಾಗಗಳಲ್ಲಿ `ಅಂಟಿಗೆ ಪಿಂಟಿಗೆ’ ಹಬ್ಬ, ದೀಪಾವಳಿಗೆ ಪರ್ಯಾಯವಾದ ಜನಪದರ ಹಬ್ಬವೆಂಬಂತೆ ಕಾಣುತ್ತದೆ. ಇದು ದನಕಾಯುವ ಹುಡುಗರು ಮತ್ತು ದನ ಸಾಕುವವರ ನಡುವೆ ಬಾಂದವ್ಯ ಬೆಸೆವ ಸಂಕೇತಿಕತೆ ಕಾಣುತ್ತದೆ. ದನಕಾಯುವ ಹುಡುಗರು ಹುಲ್ಲು ಆಪು ರವದಿ ಸೇರಿಸಿ ಒಂದು ವಿಶಿಷ್ಠವಾದ ಆಣೀಪೀಣೀ ದೀಪ ತಯಾರಿಸಿ ಮನೆಮನೆಗಳಿಗೆ ಮರಳಿ ಅವರ ಮನೆಗಳ ದನಗಳಿಗೆ ಆರತಿ ಮಾಡುತ್ತಾ ಹಾಡು ಹೇಳುವುದಿದೆ. ಬಿಜಾಪುರ ಬೀದರ್ ಗುಲ್ಬರ್ಗಾ ದಾರವಾಡ ಬೆಳಗಾಂ ಮೊದಲಾದೆಡೆ ಈ ಆಚರಣೆ ಕಾಣುತ್ತದೆ.

ಸಾಗರ, ಸೊರಬ, ಸಿದ್ದಾಪುರ, ಸಿರಸಿ ಭಾಗದಲ್ಲಿ ಹಲಸರ ಸಮುದಾಯವು ದೀಪಾವಳಿಯನ್ನು ಹಬ್ಬಹಾಡುವುದೆನ್ನುತ್ತಾರೆ. ಪಾಡ್ಯದಿಂದ ಮೂರು ದಿನಗಳವರೆಗೆ ರಾತ್ರಿ ಮನೆಮನೆಗೆ ದೀಪವನ್ನು ಮುಟ್ಟಿಸಿ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಈ ಗುಂಪನ್ನು ದೀವಳಿಗೆ ದಂಡು ಎನ್ನುತ್ತಾರೆ. ಅಂತೆಯೇ ಈ ಸಂದರ್ಭಕ್ಕೆ ಭಗವಂತಿಕೆ ಮೇಳಗಳು ಹೊಸ ಉತ್ಸಾಹಗಳೊಂದಿಗೆ ಪಾಲ್ಗೊಳ್ಳುತ್ತವೆ. ಹರಿಕಾಂತ ಸಮುದಾಯ ದೀಪಾವಳಿಯನ್ನು ಕೃಷಿಸ್ವಾಮಿ ಹಬ್ಬ ಎಂದು ಕರೆಯುತ್ತಾರೆ. ಇವರನ್ನು ಅಂಟಿಗೆ ಪಿಂಟಿಗೆಯವರು ಎಂದೂ ಕರೆಯುತ್ತಾರೆ. ಹೀಗೆ ಅಂಟಿಗೆ ಪಿಂಟಿಗೆ ಸಂಪ್ರದಾಯದ ಹಾಡು ಹೇಳುವುದು ಸ್ವಲ್ಪ ಫರಕುಗಳೊಂದಿಗೆ ಬೇರೆ ಬೇರೆ ಭಾಗಗಲ್ಲಿ ನೆಲೆಸಿದೆ. ತೀರ್ಥಹಳ್ಳಿ ಚಿಕ್ಕಮಗಳೂರು ಭಾಗದಲ್ಲಿ ಅಂಟಿಗೆ ಪಿಂಟಿಗೆ ಅಂದರೆ, ಶಿರಸಿ, ಸಿದ್ದಾಪುರ ಭಾಗದಲ್ಲಿ ಭಿಂಗಿ ಪದಗಳೆಂದೂ, ಹೊಸನಗರ ಸಾಗರದ ಕಡೆ ದೀಪನೀಡುವುದೆಂದೂ, ಶಿವಮೊಗ್ಗ ಸೊರಬ ಭಾಗದಲ್ಲಿ ಬಲ್ಲಾಳಿ ಪದಗಳೆಂದೂ ಭಿನ್ನವಾಗಿ ಗುರುತಿಸಲಾಗುತ್ತದೆ. ಈ ಸಂಪ್ರದಾಯವನ್ನು ಪ್ರಾದೇಶಿಕವಾಗಿ ಆಡೀಪೀಡೀ, ಆವಂಟಿಗ್ಯೋ ಪಾವಂಟಿಗ್ಯೋ ಅಂಟಿಸುಂಟಿ ಮುಂತಾಗಿ ಕರೆಯುತ್ತಾರೆ. ಬಹುಪಾಲು ಪಶುಪಾಲಕ ಜಾತಿಸಮುದಾಯಗಳು ಈ ಹಬ್ಬದಲ್ಲಿ ಭಾಗಿಯಾಗುತ್ತವೆ.

ಮಲೆನಾಡಿನ ಅಂಟಿಗೆ ಪಿಂಟಿಗೆ ತಂಡ

ಇಷ್ಟೆಲ್ಲಾ ದೀಪಾವಳಿ ವೈವಿದ್ಯವನ್ನೂ ಹೇಳಿದ ಮೇಲೂ, ಮತ್ತೊಂದು ಮಗ್ಗಲಿದೆ. ಕರ್ನಾಟಕದ ಸಾವಿರಾರು ಹಳ್ಳಿಗಳಿಗೆ ದೀಪಾವಳಿ ಹಬ್ಬ ಗೊತ್ತೇ ಇಲ್ಲ. ನನ್ನ ಬಾಲ್ಯದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕನಾಳೆಂಬ 300 ಮನೆಗಳ ಗ್ರಾಮದಲ್ಲಿ ಒಂದು ಜಂಗಮರ ಮನೆಯಲ್ಲಿ ಮಾತ್ರ ದೀಪಾವಳಿ ಮಾಡುತ್ತಿದ್ದರು. ಇಡೀ ಊರು ಈ ಮನೆಯನ್ನು ಕೌತುಕದಿಂದ ನೋಡುತ್ತಿತ್ತು. ಅಂತೆಯೇ ಹಾರಕನಾಳು ಸಮೀಪದ ಕೊಟ್ಟೂರಿನಲ್ಲಿ ಕೃಷಿಮಾರುಕಟ್ಟೆಯ ದಲ್ಲಾಳಿ ಅಂಗಡಿಗಳಲ್ಲಿ ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಆಗ ನಮ್ಮೂರಿನವರು ಕೃಷಿಸಾಲ ಪಡೆದ ದಲ್ಲಾಳಿ ಅಂಗಡಿಯವರ ದೀಪಾವಳಿ ಪೂಜೆಗೆ ತೆರಳುತ್ತಿದ್ದರು. ಲಕ್ಷ್ಮಿ ಪೂಜೆಯ ದಿನ ಹಳ್ಳಿಗರು ತಮ್ಮ ಟವಲ್ಲುಗಳಲ್ಲಿ ಪೂಜೆಯಲ್ಲಿ ಕೊಟ್ಟ ಹಣ್ಣು, ಸಿಹಿತಿಂಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ಇದು ಹಾರಕನಾಳಿನ ಪಾಲಿನ ದೀಪಾವಳಿಯಾಗಿತ್ತು. ಇದನ್ನು ನೋಡಿದರೆ ಎಷ್ಟೋ ಹಳ್ಳಿಗಳಲ್ಲಿ ದೀಪಾವಳಿ ಎಂದರೆ ಹಣವಿದ್ದ ಶ್ರೀಮಂತರು ಮಾಡುವ ಲಕ್ಷ್ಮಿ ಪೂಜೆಯ ಹಬ್ಬವೆಂದೂ, ನಗರದವರು ಮಾಡುವ ಹಬ್ಬವೆಂದೂ ತಿಳಿದಿದ್ದಾರೆ. ಹೀಗೆ ದೀಪಾವಳಿಯನ್ನು ಗ್ರಾಮಜಗತ್ತಿನ ಹಾಜರಿಯ ವೈವಿದ್ಯ ಮತ್ತು ಗೈರುಹಾಜರಿಯ ನೆಲೆಯಲ್ಲಿ ಮರು ಪರಿಶೀಲಿಸುವ ಅಗತ್ಯವಿದೆ. ಒಂದಂತೂ ಸತ್ಯ ಜಗತ್ತು ಏಕರೂಪವಾಗುತ್ತಿರುವ ಹೊತ್ತಿನಲ್ಲಿ ದೀಪಾವಳಿ ತಮ್ಮ ಬಹುಸಂಸ್ಕೃತಿಯ ನೆಲೆಯಲ್ಲಿ ಬಹುತ್ವದ ಸಂಕೇತವಾಗಿ ಮುಖ್ಯವಾಗುತ್ತದೆ.

-ಅರುಣ್ ಜೋಳದಕೂಡ್ಲಿಗಿ

ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.

500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.

2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.

ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ

ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.

ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ನಿಜಕ್ಕೂ ದರೋಡೆಕೋರ ಆಗಿದ್ದರೆ?
ಈ ದಿನದ ವಾಲ್ಮೀಕಿ  ಜಯಂತಿ ವಿಶೇಷವಾಗಿದೆ. ಕಾರಣ

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರಸನ್ನಾನಂದ ಸ್ವಾಮೀಜಿ 240 ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಾಜ್ಯ ಸರಕಾರ ಹೆಚ್ಚಿಸುವ ಅಧಿಕೃತ ಘೋಷಣೆಯನ್ನು ಇಂದು ಮುಖ್ಯಮಂತ್ರಿಗಳು ಮಂಡಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ನಿಲುವನ್ನು ಸ್ವಾಗತಿಸಿ ಪ್ರಸನ್ನಾಂದ ಸ್ವಾಮೀಜಿ ತಮ್ಮ ‌ಬೇಡಿಕೆ ಈಡೇರಿದ ನಿಟ್ಟಿನಲ್ಲಿ ಧರಣಿ ಅಂತ್ಯಗೊಳಿಸುವ ಮಾತನಾಡಿದ್ದಾರೆ. ಹಾಗಾದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರುವ 54 ಬುಡಕಟ್ಟುಗಳು ಇಂದು ವಿಜಯದ ದಿವಸವನ್ನಾಗಿ ಆಚರಿಸಬೇಕಿದೆ.

ಕರ್ನಾಟಕದಲ್ಲಿ ಆಚರಿಸಲ್ಪಡುವ ವಾಲ್ಮೀಕಿ ಜಯಂತಿಗಳಲ್ಲಿ ಮಹರ್ಷಿ ವಾಲ್ಮೀಕಿಯ ಬಗೆಗೆ ಕಡ್ಡಾಯವಾಗಿ ಉಲ್ಲೇಖಿಸುವ ಕಟ್ಟುಕತೆಯೊಂದಿದೆ. ಅದೆಂದರೆ ವಾಲ್ಮೀಕಿ ಪೂರ್ವಾಶ್ರಮದಲ್ಲಿ ರತ್ನಾಕರ ಎಂಬ ದರೋಡೆಕೋರನಾಗಿದ್ದ. ನಾರದರು ಒಮ್ಮೆ ಎದುರಾಗಿ ನಿನ್ನ ಈ ಅಪರಾದದಲ್ಲಿ ಮನೆಯವರು ಪಾಲುದಾರರೇ? ಎನ್ನುತ್ತಾನೆ, ವಿಚಾರಿಸಲಾಗಿ ರತ್ನಾಕರನ ಕುಟುಂಬ ಆತನ ಅಪರಾಧದಲ್ಲಿ ಪಾಲು ಪಡೆಯಲು ನಿರಾಕರಿಸುತ್ತಾರೆ. ನಂತರ ಆತನಿಗೆ ಅರಿವಾಗಿ ದರೋಡೆಯನ್ನು ನಿಲ್ಲಿಸಿ ತಪಸ್ಸು ಮಾಡುತ್ತಾನೆ. ಬಹುದಿನಗಳ ನಂತರ ಜ್ಞಾನೋದಯವಾಗಿ ತಪಸ್ಸಿಗೆ ಕೂತಲ್ಲಿಯೇ ಬೆಳೆದಿದ್ದ ಹುತ್ತವನ್ನು ಒಡೆದು ವಾಲ್ಮೀಕಿಯಾಗಿ ಹೊರಬಂದು ನಾರದರ ನಿರ್ದೇಶನದಂತೆ ರಾಮಾಯಣ ರಚನೆ ಮಾಡಿದ ಎನ್ನುವ ಕತೆ ಹೇಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳ ಅಧ್ಯಾಪಕರಿಂದ ಹಿಡಿದು, ರಾಜಕಾರಣಿ, ಸಾಮಾನ್ಯ ಜನರ ತನಕ ಈ ಕತೆಯನ್ನು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಪುರಾವೆ ಏನು?

ಒಂದೋ ಸ್ವತಃ ವಾಲ್ಮೀಕಿ ತಾನೇ ಬರೆದ ರಾಮಾಯಣದಲ್ಲಿ ದರೋಡೆಕೋರನಾಗಿರುವ ಬಗ್ಗೆ ಹೇಳಿಕೊಂಡಿರಬೇಕು. ಇಲ್ಲವೇ ವಾಲ್ಮೀಕಿಯ ಜತೆ ಬದುಕಿದ್ದ ಸಮಕಾಲೀನರು ಈತನ ಬದುಕನ್ನು ನೋಡಿ ಉಲ್ಲೇಖಿಸಿರಬೇಕು. ಸದ್ಯಕ್ಕೆ ಈ ಎರಡೂ ಪುರಾವೆಗಳು ಇಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕಥೆ ಹುಟ್ಟಿದ್ದೆಲ್ಲಿ? ಚಾರಿತ್ರಿಕ ಅಧ್ಯಯನಗಳ ಕಡೆ ಹೊರಳೋಣ. ವಾಲ್ಮೀಕಿ ಮತ್ತು ರಾಮಾಯಣ ರಚನೆ ಕುರಿತಂತೆ ವ್ಯಾಪಕವಾದ ಅಧ್ಯಯನಗಳು ನಡೆದಿವೆ. ಇತಿಹಾಸ ತಜ್ಞ ಹೆಚ್.ಡಿ. ಸಾಂಕಾಲಿಯ ಉಲ್ಲೇಖಿಸುವಂತೆ, ಈ ಅಧ್ಯಯನ 1843 ರಿಂದ 1867 ರ ಅವಧಿಯಲ್ಲಿ ಗೊರೆಸ್ಯೋನ ಪ್ರಕಟಿಸಿದ ರಾಮಾಯಣದ ಆರು ಸಂಪುಟಗಳಿಂದ ಆರಂಭವಾಗಿದೆ. ಕಾಲನಿರ್ಣಯದ ಬಗ್ಗೆ ಎ.ವೆಬರ್ (1873) ಮೊದಲು ವಿಮರ್ಶೆ ಮಾಡಿರಬೇಕೆಂದು ಅಭಿಪ್ರಾಯ ತಾಳುತ್ತಾರೆ. ವಿಲಿಯಂ ಜೋನ್ಸ್, ರಾಮಸ್ವಾಮಿಶಾಸ್ತ್ರಿ, ಆರ್.ಸಿ.ಮುಜುಂದಾರ್, ಗೊರೇಸಿಯಾ, ಪುಲಸ್ಕರ್, ಪಿ.ವಿ ಕಾಣೆ, ಡಿ.ಡಿ.ಕೋಸಾಂಬಿ, ಎ.ಎಲ್.ಬಾಷಂ, ರೋಮಿಲಾ ಥಾಫರ್, ಇರ್ಫಾನ್ ಹಬೀಬ್, ಪೆರಿಯಾರ್, ಲೋಹಿಯಾ, ಅಂಬೇಡ್ಕರ್ ತನಕ ಹೀಗೆ ನೂರಾರು ಜನ ಇತಿಹಾಸ ತಜ್ಞರು, ಪುರಾತತ್ವಜ್ಞರು, ಹಲವು ಜ್ಞಾನಶಾಖೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ.

ವಾಲ್ಮೀಕಿ ರಾಮಾಯಣದ ರಚನೆಯ ಕಾಲ ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಕ್ರಿ.ಪೂ. 3 ರಿಂದ 5 ನೇ ಶತಮಾನದ ಅಂತರದಲ್ಲಿ ವಾಲ್ಮೀಕಿ ಬದುಕಿದ್ದಿರಬೇಕು, ರಾಮಾಯಣ ರಚನೆಯಾಗಿದ್ದಿರಬೇಕು ಎಂಬ ನಿಲುವಿಗೆ ಹೆಚ್ಚು ಮಾನ್ಯತೆ ದೊರೆತಿದೆ. ಹೀಗೆ ವಾಲ್ಮೀಕಿ ಬದುಕಿದ್ದ ಕಾಲಘಟ್ಟವೇ ಮಸುಕಾಗಿರುವಾಗ ವಾಲ್ಮೀಕಿ ದರೋಡೆಕೋರನಾಗಿದ್ದನ್ನು ನೋಡಿದವರು ಯಾರು? ಮೇಲೆ ಉಲ್ಲೇಖಿಸಿದ ಅಧ್ಯಯನಗಳೂ ಸಹ ರಾಮಾಯಣದ ಕಣ್ಣೋಟದಲ್ಲಿ ವಾಲ್ಮೀಕಿಯ ಜೀವನ ವೃತ್ತಾಂತವನ್ನು ವಿವರಿಸಿದ್ದು ಬಿಟ್ಟರೆ, ಇತರೆ ಜೀವನ ವಿವರಗಳನ್ನು ದಾಖಲಿಸುವುದಿಲ್ಲ. ಹಾಗಾದರೆ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವುದರ ನೆಲೆಗಟ್ಟೇನು? ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ.

ಕರ್ನಾಟಕದಲ್ಲಿ ಈ ತನಕ ವಾಲ್ಮೀಕಿ ದರೋಡೆಕೋರನಾಗಿದ್ದನು ಎನ್ನುವ ಕಟ್ಟುಕತೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕಿಂತ ಒಪ್ಪಿಕೊಂಡಿರುವುದೇ ಹೆಚ್ಚು. ಆದರೆ ಉತ್ತರ ಭಾರತದ ಪಂಜಾಬ್ ಒಳಗೊಂಡಂತೆ ಅಲ್ಲಿನ ವಾಲ್ಮೀಕಿ ಸಮುದಾಯದವರು ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಉಲ್ಲೇಖ ಮತ್ತು ಕಟ್ಟುಕತೆಗಳ ವಿರುದ್ಧ ಬಂಡೆದ್ದಿದ್ದಾರೆ. ಉಲ್ಲೇಖಿಸಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಕೋರ್ಟಿನ ಕಟಕಟೆಗೆ ಎಳೆತಂದು ಸಾಕ್ಷಿ ಕೇಳಿದ್ದಾರೆ. 2003 ರಲ್ಲಿ ಪ್ರಸಾರವಾಗಿದ್ದ `ಕುಮ್ ಕುಮ್ ಏಕ್ ಪ್ಯಾರ್ ಬಂಧನ್’ ಎನ್ನುವ ಧಾರವಾಹಿಯಲ್ಲಿ ಮಹರ್ಷಿ ವಾಲ್ಮೀಕಿಯನ್ನು `ಡಾಕು’ ಎಂದು ಪದ ಬಳಸಿ ಪರಿಚಯಿಸಲಾಗಿತ್ತು. ಇದರ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು. ಬ್ಯಾಗ್ ಫಿಲ್ಮ್ ಲಿಮಿಟೆಡ್ ನವರು ಪಂಜಾಬಿನ ವಾಲ್ಮೀಕಿ ಸಮುದಾಯವನ್ನು ಕ್ಷಮೆಕೋರಿದ್ದರು. ಟಿ.ವಿ ಮೂಲಕವೇ ಬಹಿರಂಗ  ಕ್ಷಮೆಯಾಚಿಸಿ, ಸ್ಪಷ್ಟನೆಯ ಕಾರ್ಯಕ್ರಮ ಪ್ರಸಾರ ಮಾಡಿ ಕೇಸನ್ನು ವಾಪಾಸು ಪಡೆಯುವಂತೆ ಮನವಿ ಮಾಡಿದ್ದರು. ಇನ್ನು 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ ಎನ್ನುವ ಜಸ್ಟೀಸ್ ರಾಜೀವ ಭಲ್ಲಾ ಅವರ ತೀರ್ಪಿನೊಂದಿಗೆ ತಾರ್ಕಿಕ ಅಂತ್ಯ ಕಂಡಿತು.

ಪಂಜಾಬ್‌ನ ಜಲಂಧರ್ ಜಿಲ್ಲೆಯ ಮಾಡೆಲ್ ಟೌನ್‌ನ ರಿಷಿನಗರದ ನಿವಾಸಿ ನವ್ವಿಕಾಸ್ ಎನ್ನುವವರು 6.10.2009 ರಲ್ಲಿ ಸ್ಟಾರ್ ಪ್ಲಸ್ ಟಿವಿಯಲ್ಲಿ `ಸಪ್ನ ಬಾಬುಲ್ ಕಾ ಬಿದಾಯಿ’ ಎನ್ನುವ ದಾರವಾಹಿ ನೋಡುತ್ತಿದ್ದರು. ಆ ದಾರವಾಹಿಯಲ್ಲಿ ವಾಲ್ಮೀಕಿಯ ಋಷಿಪೂರ್ವ ಜೀವನದಲ್ಲಿ ದರೋಡೆಕೋರನಾಗಿದ್ದ, ರೋಡ್ ರಾಬರ್ ಆಗಿದ್ದ ಎನ್ನುವ ಸಂಭಾಷಣೆ ಬರುತ್ತದೆ. ಸ್ವತಃ ವಾಲ್ಮೀಕಿ ಸಮುದಾಯದ ನವ್ವಿಕಾಸ್ ಅವರು ಈ ಸಂಭಾಷಣೆ ಮತ್ತು ದಾರವಾಹಿಯ ವಿರುದ್ಧ ಎಫ್.ಐ.ಆರ್ ದಾಖಲಿಸುತ್ತಾರೆ. ಈ ಕಟ್ಟುಕಥೆಗೆ ದಾಖಲೆ ಕೊಡಿ ಎಂದು ಕೇಳುತ್ತಾರೆ. ಸ್ಥಳೀಯ ಪೋಲೀಸರಿಂದ ನಿರೀಕ್ಷಿತ ಬೆಂಬಲ ಸಿಗದ  ಕಾರಣ ನವ್ವಿಕಾಸ್ ಕೋರ್ಟ್ ಮೆಟ್ಟಿಲೇರುತ್ತಾರೆ.

ಪಂಜಾಬ್ ಯುನಿವರ್ಸಿಟಿ ಪಾಟಿಯಾಲದ ಪ್ರೊಫೆಸರ್ ಮಂಜುಳಾ ಸಹದೆವ್ ಅವರ ವಾಲ್ಮೀಕಿ ಜೀವನ ವೃತ್ತಾಂತವನ್ನು ಕುರಿತ ಸಂಶೋಧನೆಯನ್ನು ಕೋರ್ಟ್ ಪರಿಶೀಲಿಸುತ್ತದೆ. ಮಂಜುಳ ಸಹದೆವ್ 1979 ರಿಂದ ಪಂಜಾಬ್ ಯುನಿವರ್ಸಿಟಿಯಲ್ಲಿ ಸಂಸ್ಕೃತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. 1995 – 2004ರ ತನಕ ಮಹರ್ಷಿ ವಾಲ್ಮೀಕಿ ಚೇರ್ ಮುಖ್ಯಸ್ಥರಾಗಿದ್ದರು. ಸಂಸ್ಕೃತ ಶಾಸ್ತ್ರೀಯ ಭಾಷೆಯ ಖಾಯಂ ಸದಸ್ಯರೂ ಆಗಿದ್ದಂತವರು. ಎಂಬತ್ತರ ದಶಕದಿಂದಲೂ ವಿಶೇಷವಾಗಿ ರಾಮಾಯಣ ಮತ್ತು ವಾಲ್ಮೀಕಿ ಕುರಿತು ನಿರಂತರ ಅಧ್ಯಯನ ಸಂಶೋಧನೆಗಳನ್ನು ಪ್ರಕಟಿಸಿದವರು. `ಮಹರ್ಷಿ ವಾಲ್ಮೀಕಿ ಏಕ್ ಸಮೀಕ್ಷಾತ್ಮಕ ಅಧ್ಯಯನ’ ಇವರ ಮಹತ್ವದ ಸಂಶೋಧನೆ. ಈ ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಋಷಿಪೂರ್ವದಲ್ಲಿ ಡಕಾಯಿತ್, ರೋಡ್ ರಾಬರ್ ಆಗಿರಲಿಲ್ಲ ಎನ್ನುವುದರ ತಾರ್ಕಿಕ ವಿಶ್ಲೇಷಣೆ ಮಾಡಿದ್ದಾರೆ.

ಈ ಸಂಶೋಧನೆಯ ಮುಖ್ಯಾಂಶಗಳೆಂದರೆ, ವೇದಗಳ ಕಾಲದಿಂದ ಕ್ರಿ.ಶ 9 ನೇ ಶತಮಾನದ ತನಕ ವಾಲ್ಮೀಕಿ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಎನ್ನುವುದಕ್ಕೆ ಎಲ್ಲಿಯೂ ಉಲ್ಲೇಖಗಳಿಲ್ಲ. ಅಂತೆಯೇ ವಾಲ್ಮೀಕಿ ಅಂದರೆ ಹುತ್ತದಿಂದ ಎದ್ದು ಬಂದವ ಎನ್ನುವ ಪವಾಡ ಸದೃಶ್ಯ ಕಥನದ ಬಳಕೆಯೂ ಇಲ್ಲ. ವಾಲ್ಮೀಕಿ ಸ್ವರಚಿತ ರಾಮಾಯಣದಲ್ಲಿಯೇ ಎಲ್ಲಿಯೂ ತಾನು ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬದಲಾಗಿ ತನ್ನನ್ನು ಭಗವಾನ್, ಮುನಿ, ರಿಷಿ, ಮಹರ್ಷಿ ಎಂದು ಕರೆದುಕೊಂಡದ್ದಕ್ಕೆ ಸಾಕ್ಷ್ಯಗಳಿವೆ. ಮೊಟ್ಟಮೊದಲ ಬಾರಿಗೆ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವುದನ್ನು ಹತ್ತನೆ ಶತಮಾನದ ಸ್ಕಂದ ಪುರಾಣ ಉಲ್ಲೇಖಿಸುತ್ತದೆ. ಇದು ಎಲ್ಲವನ್ನೂ ಪುರಾಣೀಕರಿಸುವ ಕಾಲಘಟ್ಟ. ಬಹುಶಃ ಸ್ಕಂದ ಪುರಾಣದ ಉಲ್ಲೇಖದ ನಂತರ ವಾಲ್ಮೀಕಿ ದರೋಡೆಕೋರನಾಗಿದ್ದ ಎನ್ನುವ ಕತೆಯನ್ನು ಹೆಣೆಯಲಾಗಿದೆ.

`ಮರ ಮರ’ ಎನ್ನುವ ಮಂತ್ರದ ಉಲ್ಲೇಖ 15 ಶತಮಾನದ `ಆದ್ಯಾತ್ಮ ರಾಮಾಯಣ’ ಮತ್ತು 16 ನೇ ಶತಮಾನದ `ಆನಂದ ರಾಮಾಯಣ’ ದಲ್ಲಿ ಸಿಗುತ್ತದೆ. ಅಂದರೆ `ಮರ ಮರ’ ಮಂತ್ರದಿಂದಲೆ ವಾಲ್ಮೀಕಿ ರಾಮಾಯಣ ರಚಿಸಿದ ಎನ್ನುವುದೂ ಕಟ್ಟುಕತೆ. 13 ಮತ್ತು 16 ನೇ ಶತಮಾನದಲ್ಲಿ ರಾಮನನ್ನು ವಿಷ್ಣುವಿನ ಅವತಾರ ಎಂದು ದೈವೀಕರಿಸಿದ ಮೇಲೆ ವಾಲ್ಮೀಕಿಯ ಬಗೆಗೆ ಇಂತಹ ಕತೆಗಳು ಹೆಣೆಯಲ್ಪಟ್ಟಿವೆ. ಹೆಚ್.ಡಿ.ಸಾಂಕಾಲಿಯ ಅವರ ಪ್ರಕಾರ ವಾಲ್ಮೀಕಿಯ ಕಾಲದಲ್ಲಿಯೇ ಬಿಡಿಬಿಡಿ ಜನಪದ ಕತೆಗಳಲ್ಲಿದ್ದ ರಾಮಕತೆಯನ್ನು ಜೋಡಿಸಿ ಮಹಾಕಾವ್ಯದ ರೂಪಕೊಟ್ಟು ರಾಮನನ್ನು ಶ್ರೀರಾಮನನ್ನಾಗಿಸಿ ಪುನರ್‌ಸೃಷ್ಠಿಸಿದ್ದು ವಾಲ್ಮೀಕಿ. ಆದರೆ ರಾಮನಾಮದ ಬಲದಿಂದಲೇ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಎಂದು ವಾಲ್ಮೀಕಿಯನ್ನು ಆಧೀನ ಮಾಡಲಾಯಿತು. ಈ ಉದ್ದೇಶಕ್ಕಾಗಿ ವಾಲ್ಮೀಕಿಯ ಬಗೆಗೆ ಇಂತಹ ಕಟ್ಟುಕತೆಗಳನ್ನು ಕಟ್ಟಲಾಯಿತು. ಇದನ್ನು ಪರಿಶೀಲಿಸಿದಾಗ ವಾಲ್ಮೀಕಿ ಬದುಕಿದ್ದ 1500 ವರ್ಷಗಳ ನಂತರ ಆತ `ದರೋಡೆಕೋರನಾಗಿದ್ದ’ ಎನ್ನುವ ಕತೆ ಸಿಗುತ್ತದೆ. ಹೀಗಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪುರಾಣವನ್ನು ಉಲ್ಲೇಖಿಸುವುದು ಅಪರಾಧವಾಗುತ್ತದೆ ಎಂದು, 2009 ರ `ಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ಜಸ್ಟೀಸ್ ರಾಜೀವ ಭಲ್ಲಾ `ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ’ ಎನ್ನುವ ತೀರ್ಪು ನೀಡುತ್ತಾರೆ. 2019 ರಲ್ಲಿ ಪ್ರೊ.ಮಂಜುಳ ಸಹದೇವ್ ವಿರುದ್ಧದ ಕೇಸಿನಲ್ಲಿ ಜಸ್ಟೀಸ್ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ರಾಜೀವ ಭಲ್ಲಾ ಅವರ ತೀರ್ಪನ್ನು ಎತ್ತಿಹಿಡಿದಿದ್ದಾರೆ.

ರಾಜಾಸ್ತಾನದ ಮೇವಾರಿ ಬುಡಕಟ್ಟು ಚಿತ್ರಕಲೆಯಲ್ಲಿ ದೊರೆತ ರಅಮಾಐಣದ ಹಸ್ತಪ್ರತಿ

ಪಂಜಾಬ್ ಹೈಕೋರ್ಟಿನ ಜಸ್ಟೀಸ್ ರಾಜೀವ ಭಲ್ಲಾ ಅವರು ಮಂಜುಳ ಸಹದೇವ್ ಅವರ ಸಂಶೋಧನೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಮೇಲಿನ ಮುಖ್ಯಾಂಶಗಳನ್ನು ಉಲ್ಲೇಖಿಸಿ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ. ಕಾಲಾನಂತರದಲ್ಲಿ ಆದ ಸೇರ್ಪಡೆಗಳಲ್ಲಿ ಈ ಬಗೆಯ ಕತೆಯನ್ನು ಕಟ್ಟಲಾಗಿದೆ. ಒಂದು ಸಮುದಾಯದ ಧರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತೀರ್ಪು ನೀಡುತ್ತಾರೆ. ಈ ತೀರ್ಪಿನ ತರುವಾಯ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ವಾಲ್ಮೀಕಿಯು ದರೋಡೆಕೋರನಾಗಿದ್ದ ಎನ್ನುವ ಕಥೆಯ ಉಲ್ಲೇಖ ನಿಷೇಧವಾಗಿದೆ. ಅಕಸ್ಮಾತ್ ಈ ಕಥೆಯನ್ನು ಉಲ್ಲೇಖಿಸಿದರೆ ಎಫ್.ಐ.ಆರ್ ದಾಖಲಾಗುತ್ತದೆ.

ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳು ಮತ್ತು ಸ್ವರಚಿತ ರಾಮಾಯಣವನ್ನು ಆಧರಿಸಿ ನೋಡುವುದಾದರೆ ವಾಲ್ಮೀಕಿ ರಾಮನೆಂಬ ಕಾಲ್ಪನಿಕ ಪಾತ್ರವನ್ನು ಸಶಕ್ತವಾಗಿ ಕಟ್ಟಿದ ಭರತಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ. ಸಂಸ್ಕೃತವನ್ನು ಕೆಳಜಾತಿ ದಮನಿತ ಸಮುದಾಯಗಳಿಗೆ ನಿಶೇಧಿಸಿದ್ದ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು ಮೇರು ಕಾವ್ಯವನ್ನು ರಚನೆ ಮಾಡಿದ್ದು ಈ ಸಮುದಾಯಗಳಿಗೆ ಒಂದು ಸ್ಪೂರ್ತಿದಾಯಕ ಸಂಗತಿ. ಕೆಳಜಾತಿ ಜನರು ಯಾವುದೇ ಮಹತ್ಸಾಧನೆಯನ್ನು ಮಾಡಿದಾಗ ಮೇಲ್ಜಾತಿಗಳು ಅವರ ಹುಟ್ಟನ್ನೆ ಅನುಮಾನಿಸುವ, ಅವರ ಚಾರಿತ್ರ್ಯವನ್ನು ತಿರುಚುವ ಯತ್ನ ನಡದೇ ಇದೆ. ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕಥೆ ಕೂಡ ಇಂತಹದ್ದೇ ಒಂದು ಪ್ರಯತ್ನ. ಹಾಗಾಗಿ ವಾಲ್ಮೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ. ಇನ್ನಾದರೂ ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕತೆಯನ್ನು ಹೇಳುವುದನ್ನು ನಿಲ್ಲಿಸಬೇಕು.

-ಡಾ. ಅರುಣ್ ಜೋಳದಕೂಡ್ಲಿಗಿ ‌

ಡಾ. ಅರುಣ್‌ ಜೋಳದ ಕೂಡ್ಲಿಗಿ