Devika Nagesh – Peepal Media

ಮಹಿಳಾ ಅಸ್ಮಿತೆಯ ಸಂಕೇತ- ಸಾರಾ
ಹೊಸ ತಲೆಮಾರಿನ ಬರಹಗಾರರಲ್ಲಿ ಸಾರಾ ಅಬೂಬಕ್ಕರ್ ಅವರಂತಹ ವಿಚಾರಶೀಲ, ದಿಟ್ಟ ದನಿಯ ಲೇಖಕಿಯರ ಕೊರತೆ ಎದ್ದು ಕಾಣುತ್ತಿರುವ ಹೊತ್ತಿನಲ್ಲೇ ಸಾರಾ ಅವರ ನಿರ್ಗಮನವಾಗಿದೆ. ಅವರು ಬಿಟ್ಟು ಹೋದ ನಿರ್ವಾತವನ್ನು ತುಂಬುವವರು ಯಾರು ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಸಾರಾ ಅವರ ಕೊನೆಯ ದಿನಗಳವರೆಗೂ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಲೇಖಕಿ ದೇವಿಕಾ ನಾಗೇಶ್ ಸಾರಾ ಅವರಿಗೆ ತಮ್ಮ ಕೊನೆಯ ಪ್ರಣಾಮವನ್ನು ಈ ಲೇಖನದ ಮೂಲಕ ಸಲ್ಲಿಸಿದ್ದಾರೆ.

“ನಾನು ಹುಟ್ಟಿ ಬೆಳೆದ ಸಮಾಜವನ್ನು ತಿದ್ದುವ ಸಲುವಾಗಿ ಈ ಸಮಾಜದ ಕೆಲವು ಕ್ರೂರ ಪದ್ಧತಿಗೆ ಬೆಳಕು ಚೆಲ್ಲಿದ್ದೇನೆ ಹೊರತು ಅದನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ಸಾಹಿತ್ಯ ಸಮಾಜದ ಪ್ರತಿಬಿಂಬ ಎಂಬ ನಂಬಿಕೆ ನನ್ನದು. ಕೊಳೆತ ಭಾಗವನ್ನು ಹಾಗೆಯೇ ಮುಚ್ಚಿಟ್ಟರೆ ಇನ್ನಷ್ಟು ಕೊಳೆತು ಹೋಗುತ್ತದೆ. ಆದ್ದರಿಂದ ಬೇರೆ ಕಡೆಗೆ ಬೆಳಕು  ಚೆಲ್ಲುವ ಕೆಲಸ ನನ್ನದು” ಎಂದವರು ಡಾ. ಸಾರಾ ಅಬೂಬಕರ್. ಕೇರಳದ ಕಾಸರಗೋಡಿನ ಪುದಿಯಾಪುರ ತರವಾಡು ಮನೆಯ ಪಿ.ಅಹ್ಮದ್ ಹಾಗೂ ಜೈನಾಬಿ ದಂಪತಿಗಳ ಆರು ಗಂಡು ಮಕ್ಕಳ ನಡುವೆ ಮುದ್ದಿನ ಮಗಳಾಗಿ ಜನಿಸಿದವರು ಸಾರಾ. ಮನೆ ಮಾತು ಮಲೆಯಾಳಂ ಆಗಿದ್ದರೂ  ಕನ್ನಡ ಶಾಲೆಯಲ್ಲಿ ಕಲಿತರು. ಮಗಳು ವಿದ್ಯಾವಂತೆಯಾಗಬೇಕೆಂದು ಬಯಸಿದ ಇವರ ತಂದೆ ಮಗಳನ್ನು ಕಾಸರಗೋಡಿನಲ್ಲಿ ಕನ್ನಡ ಶಾಲೆಗೆ ಸೇರಿಸಿದ್ದರು. ವಕೀಲರಾಗಿದ್ದ ತಂದೆಯವರ ಗರಡಿಯಲ್ಲಿ ಪಳಗಿದ್ದ ಸಾರಾ ಅವರನ್ನು ಕನ್ನಡದ ಪ್ರಬುದ್ಧ ಲೇಖಕಿಯಾಗಿ ರೂಪಿಸಿದ್ದು ಅವರು ಬಾಲ್ಯದಲ್ಲಿ ಒಡನಾಡಿದ್ದ ಪರಿಸರ ಮತ್ತು ಪಡೆದ ಸಂಸ್ಕಾರ.

ಆ ಕಾಲದ ಮಹಿಳೆಯರಲ್ಲಿ ಅಪರೂಪವಾಗಿದ್ದ ಸ್ಪಷ್ಟ ಸಮುದಾಯ ಪ್ರಜ್ಞೆ, ರಾಜಕೀಯ ಪ್ರಜ್ಞೆ ಇದ್ದ ಸಾರಾ ದಿನಪತ್ರಿಕೆಯ ಓದನ್ನು ಎಂದೂ ತಪ್ಪಿಸಿ ಕೊಂಡವರಲ್ಲ. ಅಪ್ಪನ ಪುಸ್ತಕ ಪ್ರೀತಿ ಇವರನ್ನು  ಅರಿವಿನ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದ್ದರೆ, ಆಟದ ಮೇಲಿನ ಇವರ ವಿಶೇಷ ಪ್ರೀತಿ ಹೆಣ್ಣೆಂಬ ಕಾರಣಕ್ಕೆ ತನ್ನ ಚಟುವಟಿಕೆಗೆ ನಿರ್ಬಂಧ ಹೇರುತ್ತಿದ್ದ ಅಮ್ಮನ ಎದುರು ಬಂಡೇಳುವಂತೆ ಮಾಡುತ್ತಿತ್ತು.

ನಲುವತ್ತರ ಆಸು ಪಾಸಿನಲ್ಲಿ ಬರೆಯಲು ಪ್ರಾರಂಭಿಸಿದ ಸಾರಾ ಕವನಗಳನ್ನು ಬರೆದದ್ದು ಕಡಿಮೆ. ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು ‘ಲಂಕೇಶ್ ಪತ್ರಿಕೆಯಲ್ಲಿ ಬೆಳಕು ಕಂಡ ಇವರ ಆತ್ಮಕಥನದ ತುಣುಕು. ‘ಚಂದ್ರಗಿರಿಯ ತೀರದಲ್ಲಿʼ ಕಾದಂಬರಿ ಇವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟ ಕೃತಿ. ಅಲ್ಲಿಯವರೆಗೆ ಅಂಧಕಾರದಲ್ಲಿದ್ದ ಮುಸ್ಲಿಂ ಮಹಿಳಾ ಜಗತ್ತಿನ ಸಂಘರ್ಷಗಳಿಗೆ ಮುಖಾಮುಖಿಯಾದ ಈ ಕೃತಿಯಿಂದ ಮುಸ್ಲಿಂ ಸಮುದಾಯದ ಒಳಗೆ ಸಾರಾ ಅವರು ಬಹುದೊಡ್ಡ ಸಂಘರ್ಷವನ್ನು ಎದುರಿಸ ಬೇಕಾಯಿತು. ಆದರೆ ಇದರಿಂದ ಎದೆಗುಂದದ ಸಾರ ಲೇಖನಿಯನ್ನೇ ತನ್ನ ಅಸ್ತ್ರವಾಗಿಸಿಕೊಂಡರು. ತಾನು ಬರೆದೇ ಬದುಕುತ್ತೇನೆ ಎಂದು ನಿರ್ಧರಿಸಿದರು. ಇದಕ್ಕೆ ಒತ್ತಾಸೆಯಾಗಿ ನಿಂತವರು ಅವರ ತಂದೆ ಎಂದು ಅವರು ತಮ್ಮ ಜೀವನದ ಕೊನೆಯವರೆಗೂ ಸ್ಮರಿಸಿಕೊಳ್ಳುತ್ತಿದ್ದರು.

ಕೋಮು ಮೂಲಭೂತವಾದಿಗಳ ಬಗ್ಗೆ ಕೆಂಡವಾಗುತ್ತಿದ್ದ ಸಾರಾ ಧರ್ಮ ಏನಿದ್ದರೂ ಮನೆಯೊಳಗೆ ಆಚರಣೆಗೆ, ಜಾತ್ಯತೀತ  ಬಹುತ್ವ ಭಾರತದ ಪ್ರಜೆಗಳಾದ ನಾವು ಈ ನೆಲದ ಸಾಮರಸ್ಯವನ್ನು ಕಾಪಾಡ ಬೇಕಾದುದು ಮೊದಲ ಕರ್ತವ್ಯ ಎಂದು ಭಾವಿಸಿದ್ದರು, ಮಾತ್ರವಲ್ಲ ಅದರಂತೆ ಬದುಕಿದರು ಕೂಡ.

ಅಪ್ಪಟ ಗೃಹಿಣಿಯಾಗಿ ಮನೆಯೊಳಗೆ ಹಬ್ಬ ಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದ ಇವರು ಸಮುದಾಯದೊಳಗಿನ ಅಂಧ ಶ್ರದ್ಧೆಯನ್ನು, ಮಹಿಳೆಯರನ್ನು ಹತ್ತಿಕ್ಕುವ ಪುರುಷ ಶಾಹಿ ಮನೋಭಾವವನ್ನು ಪ್ರಶ್ನಿಸಿದರು. ಇವರ ಅಂತರಂಗದ ಗೆಳತಿ ಲೇಖಕಿ ಬಿ.ಎಂ.ರೋಹಿಣಿ ಅವರು ಹೇಳುವಂತೆ “ಸಾಮಾಜಿಕ ಬದ್ಧತೆಯಿಂದ ಬರೆದವರು ಸಾರಾ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಅಲೆಯನ್ನು ಸೃಷ್ಟಿಸಿದ, ಮಹಿಳಾ ಸಮುದಾಯದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿದ, ಕನ್ನಡಿಗರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಿದ ಇವರ ಸಾಧನೆಗೆ ಸರಿಗಟ್ಟುವವರಿಲ್ಲ “. ಧರ್ಮ, ಜಾತಿ, ಸಂಸ್ಕೃತಿ, ಸಂಪ್ರದಾಯ, ಶೀಲ ಇತ್ಯಾದಿಗಳು ಯಾವ ಧರ್ಮದಲ್ಲಿಯೇ ಆಗಲಿ ಮಹಿಳೆಯರನ್ನು ಬಾಧಿಸಿದಂತೆ ಇತರರನ್ನು ಬಾಧಿಸುವುದಿಲ್ಲ. ಆಕೆ ಪ್ರಜ್ಞಾವಂತಳಾದರೆ  ಛಲದಿಂದ ಬದುಕು ಮುನ್ನಡೆಸಲು ಸಾಧ್ಯವಾಗುತ್ತದೆ. ಬದುಕಿನ ಒಂದಷ್ಟು ಸಮಸ್ಯೆಗಳಿಗೆ ಉತ್ತರ ಹುಡುಕಿ ಅದನ್ನು ಸಹ್ಯವಾಗುವಂತೆ ಮಾಡಿ ತಾನು ಮುನ್ನಡೆದು ಕುಟುಂಬವನ್ನು ಮುನ್ನಡೆಸಬಲ್ಲಳು. ಎಲ್ಲಾ ಧರ್ಮಕ್ಕಿಂತಲೂ ಮನುಷ್ಯ ಧರ್ಮ ಮುಖ್ಯ ಎಂದು ನಂಬಿದವರು ಸಾರಾ. ನಿಜ ಧರ್ಮದ ಶೋಧಕಿ ಎಂದು ಸಾರಾ ಅವರನ್ನು ಖ್ಯಾತ ಲೇಖಕಿ ವೈದೇಹಿಯವರು ಸರಿಯಾಗಿಯೇ ಗುರುತಿಸಿದ್ದಾರೆ.

ಇಂದು ವರ್ಗ, ಲಿಂಗ, ಜಾತಿ, ಮತ, ಧರ್ಮಗಳ ನಡುವಿನ ಕಂದಕ ಹೆಚ್ಚುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.

30-6-1936ರಲ್ಲಿ ಹುಟ್ಟಿ 10-01-2023 ಅಂದರೆ ನಿನ್ನೆ ಮಣ್ಣಿಗೆ ಸಂದ ಸಾರ ಅವರದ್ದು ಒಂದು ರೀತಿಯಲ್ಲಿ ಸಮೃದ್ಧ ಜೀವನ.  ಸರಕಾರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಎಂ. ಅಬೂಬಕರ್ ರನ್ನು 1953ರಲ್ಲಿ ವಿವಾಹವಾಗಿ ಸಾರಾ ಮಂಗಳೂರಿಗೆ ಬಂದರು. ಆಗ ಗಂಡನ ಮನೆಯಲ್ಲಿ ಅವರೊಬ್ಬರೇ ಕಲಿತ ಹೆಣ್ಣುಮಗಳು. ಪುರುಷರ ಸಾಮ್ರಾಜ್ಯದಲ್ಲಿ ಇರುತ್ತಿದ್ದ ದಿನಪತ್ರಿಕೆಯನ್ನು ಓದಲು ಅವರು ಬಿಡುವಿನ ವೇಳೆಗಾಗಿ ಕಾಯುತ್ತಿದ್ದ ಪರಿಸ್ಥಿತಿ ಅಲ್ಲಿತ್ತು. ವಾಚನಾಲಯದಿಂದ ಪತ್ನಿಗಾಗಿ ಪುಸ್ತಕಗಳನ್ನು ಓದಲು ತರುತ್ತಿದ್ದ ಸಹೃದಯಿ ಪತಿ ಅವರಿಗಿದ್ದದ್ದರಿಂದ ಅಲ್ಲಿ ದಿನ ಹೇಗೋ ಕಳೆಯುತ್ತಿತ್ತು. ನಿರಂತರ ಪುಸ್ತಕ ಸಂಗಾತಿಯಾಗಿದ್ದ ಸಾರಾ ಅವರೊಳಗೆ ತಾವು ಬರೆಯ ಬೇಕೆನ್ನುವ ತುಡಿತ ತೀವ್ರವಾಗಿತ್ತು. ಇದಕ್ಕೆ ಚಾಲನೆ ದೊರೆತದ್ದು ಲಂಕೇಶ್ ಪತ್ರಿಕೆಯಿಂದ. ಇದನ್ನು ಅವರು ಯಾವತ್ತೂ ನೆನಪಿಸಿಕೊಳ್ಳುತ್ತಿದ್ದರು.

ಪುರುಷೋತ್ತಮ ಬಿಳಿಮಲೆಯವರು ಹೇಳುವಂತೆ ‘ಸಾರಾ ಅವರಂತಹವರು ನಮ್ಮ ನಡುವೆ ಇರುವುದರಿಂದಲೇ ನಮಗೆ ಮಾನವೀಯತೆಯ ಬಗ್ಗೆ ನಂಬಿಕೆ ಉಳಿದಿದೆ. ಹೋರಾಟಗಳ ಬಗ್ಗೆ ಗೌರವ ಬರುತ್ತಿದೆ’. ಕರಾವಳಿಯ ಈ ಭಾಗದ ಸಾಕ್ಷಿಪ್ರಜ್ಞೆ  ಎನ್ನುವಂತೆ ಬದುಕಿದ್ದ ಸಾರಾ ಅವರನ್ನು ಕಳೆದೊಂದು ವರ್ಷದಿಂದ ಮರೆವು ಆವರಿಸಿಕೊಂಡಿದ್ದರೂ, ಇದರ ಮೊದಲು ಒಮ್ಮೆ ಲೇಖನಿ ಹಿಡಿದ ನಂತರ ಕಳೆದ 45 ವರ್ಷಗಳಿಂದ ವರ್ತಮಾನದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತ ಬರೆದವರು. ಸಮಾಜದಲ್ಲಿ ಅನ್ಯಾಯಗಳಾದಾಗ ಅದರ ವಿರುದ್ಧ ಧ್ವನಿ ಎತ್ತಿದರು, ಮಾತ್ರವಲ್ಲ ಜನಸಾಮಾನ್ಯರ ನಡುವೆ ನಿಂತು ಮಾತನಾಡಿದರು. ಯಾವುದೇ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಸಾಥ್ ನೀಡುತ್ತಿದ್ದ ಸಾರಾ ಇನ್ನಿಲ್ಲವೆನ್ನುವುದು ನಾವು ಅರಗಿಸಿಕೊಳ್ಳಬೇಕಾದ ಸತ್ಯ.

ಕೋಮು ಮೂಲಭೂತವಾದಿಗಳು ನಮ್ಮನ್ನಾಳುತ್ತಿರುವ ಈ ಹೊತ್ತು ಸಾರಾ ಅಂತಹವರು ನಮ್ಮ ನಡುವೆ ನೂರು ಸಾವಿರ ಮಂದಿ ಇರಬೇಕಾಗಿತ್ತು. ದುರಂತವೆಂದರೆ ಅಂತಹ ಸಂವೇದನಾಶೀಲರನ್ನು ಹುಡುಕಿ ತೆಗೆಯಲಾಗದಷ್ಟು ಆ ಸಂಖ್ಯೆ ಕಡಿಮೆ ಇದೆ.

ಇದ್ದರೂ ಅವರ ಧ್ವನಿ ಕೇಳಿಸುವುದೇ ಇಲ್ಲವೆನ್ನುವಷ್ಟು ಕ್ಷೀಣವಾಗಿದೆ. ಇದು ನಮ್ಮ ವರ್ತಮಾನದ ದುರಂತ! ಅವರು ಉಳಿಸಿ ಹೋದ ನಿರ್ವಾತವನ್ನು ತುಂಬಿಸುವುದು ಹೇಗೆ ಎನ್ನುವ ಪ್ರಶ್ನೆ ನಮ್ಮ ಮುಂದೆ ಹಾಗೆಯೇ ಉಳಿದಿದೆ.

ತಮ್ಮ ಸ್ತ್ರೀ ಪರ ಸಂವೇದನೆಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿ ಹೋದ ಲೇಖಕಿ ಸಾರಾ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ನಂತರ ನಾಲ್ಕು ವರ್ಷ ಈ ಸಂಘದ ಅಧ್ಯಕ್ಷರೂ ಆಗಿದ್ದು ಸಂಘಕ್ಕೊಂದು ಸ್ವಂತ ನೆಲೆಯಾಗುವಲ್ಲಿ ಶ್ರಮಿಸಿದ ಹಲವು ಸಮಕಾಲೀನ ಲೇಖಕಿಯರಲ್ಲಿ ಒಬ್ಬರಾದರು.

ಮುಸ್ಲಿಂ ಸಮುದಾಯದ ಒಳಗೆ ಇದ್ದ ತಲಾಖ್ ಮತ್ತು ಬಹುಪತ್ನಿತ್ವ ಸಾರಾ ಅವರನ್ನು ಸದಾ ಕಾಡಿದ ವಿಷಯ ಗಳು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕಥಾ ನಾಯಕಿ ನಾದಿರ, ವಜ್ರಗಳು ಕಾದಂಬರಿಯ ನಾಯಕಿ ನಫಿಸಾ ಓದುಗರನ್ನು ಸದಾ ಕಾಡುವ ಪಾತ್ರಗಳು. ತಮ್ಮ ಬಹುತೇಕ ಕೃತಿಗಳಲ್ಲಿ ಇವರು ಈ ಬಗ್ಗೆ ಚರ್ಚಿಸಿದರು. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯಗಳನ್ನು ದೌರ್ಜನ್ಯವನ್ನು ಖಂಡಿಸಿದರು. ಸಾರಾ ಅವರದ್ದು ಸಮೃದ್ಧವಾದ ಬಾಲ್ಯ. ಅವರೇ ಹೇಳುವಂತೆ ಅವರ ಕಥೆಯಲ್ಲಿ ಬರುವ ಪಾತ್ರಗಳು  ಅವರು ಬಾಲ್ಯದಲ್ಲಿ ಒಡನಾಡುತಿದ್ದ ವ್ಯಕ್ತಿ, ಸಂಬಂಧಗಳು ಆಳು ಕಾಳುಗಳು. ಅಲ್ಲಿರುತ್ತಿದ್ದ ಹೆಣ್ಣು ಮಕ್ಕಳ ದಯನೀಯ ಬದುಕಿಗೆ ಅಮ್ಮನ ಜೊತೆ ಇವರೂ ಕಣ್ಣೀರು ಮಿಡಿಯುತ್ತಿದ್ದರು. ಧರ್ಮ ಕಾರಣಗಳ ಸಂಬಂಧ ತಿಳಿಯದೆ ಒದ್ದಾಡುತ್ತಿದ್ದರು. ತಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದ ನಂತರ  ತಮ್ಮ ಕಥೆ ಕಾದಂಬರಿ ಗಳ ಮೂಲಕ ಅವುಗಳನ್ನು ದಾಖಲಿಸಿದರು.

ಪಾಕಶಾಸ್ತ್ರ ವೂ ಬದುಕಿನ ಒಂದು ಭಾಗ. ಬಿಡುವಿರದ ಬರೆವಣಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದರೂ ಅಡುಗೆ ಮನೆಯ ವ್ಯಾಮೋಹ ಅವರನ್ನು ಬಿಟ್ಟಿರಲಿಲ್ಲ. ಕೇರಳದ ಸ್ವಾದಿಷ್ಟ ತಿನಿಸುಗಳ ಅವರ ಕೈ ಅಡುಗೆಗೆ ಸಿಕ್ಕಿದ ಪ್ರಶಂಸೆ ಅವರಿಂದ  ʼಅಡುಗೆ ವೈವಿಧ್ಯಗಳುʼ ಎಂಬ ಅಡುಗೆ ಪುಸ್ತಕವನ್ನು ಬರೆಸಿತು. ಕುಟುಂಬದಲ್ಲಿ ಮೂಲೆ ಗುಂಪಾಗಿರುವ ಮಹಿಳೆಯರನ್ನು ಸಮಾಜದಲ್ಲಿ ಮುನ್ನೆಲೆಗೆ ತರಬೇಕು, ಗೌರವದಿಂದ ಕಾಣಬೇಕೆಂಬ ಕಾಳಜಿ ಇವರದಾಗಿತ್ತು. ಇವುಗಳನ್ನೇ ಪ್ರಮುಖವಾಗಿಸಿಕೊಂಡು ಲೇಖನ ಗುಚ್ಛಗಳನ್ನು ಬರೆದರು. ಅವಕಾಶ ಸಿಕ್ಕಲ್ಲೆಲ್ಲ ಮಾತಾಡಿದರು. ತಮ್ಮ ಚಿಂತನೆಗಳಿಂದ ಸ್ತ್ರೀವಾದಿಯಾಗಿ ಗುರುತಿಸಿಕೊಂಡರು.

ಚಪ್ಪಲಿಗಳು, ಧರ್ಮ ಬಲೆ ಬೀಸಿದಾಗ, ನಿಯಮ ನಿಯಮಗಳ ನಡುವೆ ಇವರು ಬರೆದ ಕನ್ನಡದ ಪ್ರಮುಖ ಕಥೆಗಳು. ಹತ್ತು ಕಾದಂಬರಿ, ಐದು ಕಥಾ ಸಂಕಲನ, ಎಂಟು ಮಲೆಯಾಳ ಲೇಖಕರ ಕೃತಿಗಳ  ಅನುವಾದ, ಒಂದು ಪ್ರವಾಸ ಕಥನ, ಐದು ನಾಟಕ, ನಾಲ್ಕು ಪ್ರಬಂಧಗಳ ಸಂಕಲನ ಬರೆದ ಸಾರಾ ಅವರ ಆತ್ಮಕಥನ ‘ಹೊತ್ತು ಕಂತುವ  ಮುನ್ನʼ.  ಸಾರಾ ಅವರ ಬಹುತೇಕ ಕೃತಿಗಳಿಗೆ ವಿವಿಧ ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಬಿರುದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸಾರಾ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ 1995ರಲ್ಲಿ ಅಲಂಕರಿಸಿದ್ದರು.

‘ಚಂದ್ರಗಿರಿ ‘ಸಾರಾ ಅವರ ಅಭಿನಂದನ ಗ್ರಂಥ. ತಾನು ಮುಸ್ಲಿಂ ಲೇಖಕಿ ಎನ್ನುವ ವರ್ಗೀಕರಣವನ್ನು ಒಪ್ಪದ ಅವರು ತಾನು ಕನ್ನಡ ಲೇಖಕಿ ಎನ್ನುವ ಮೂಲಕ ಮಹಿಳಾ ಸಂವೇದನೆಗೆ ಜಾತಿ, ಮತ, ಧರ್ಮ, ವರ್ಗಗಳ ಹಂಗಿಲ್ಲ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವೇ ನಮಗೆ ನೀಡಿರುವುದರಿಂದ ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಭಯಪಡಬೇಕಾಗಿಲ್ಲ. ಆದರೆ ಅದು ಸಹಜೀವಿಯ ಹಕ್ಕುಗಳನ್ನು ಕಸಿದು‌ ಕೊಳ್ಳುವಂತಿರಬಾರದು ಎಂದು ನಂಬಿದ್ದರು ಸಾರಾ.

ಕವಯತ್ರಿ ಸವಿತಾ ನಾಗಭೂಷಣ್ ಹೇಳುವಂತೆ  ” ಸಾರಾ ಎಂಬುದು ಬರಿ ಒಂದು ಹೆಸರಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿದ್ಯಮಾನ. ಮಹಿಳಾ ಅಸ್ಮಿತೆಯ ಸಂಕೇತ. ನಿರ್ಭೀತ ವ್ಯಕ್ತಿತ್ವ. ಕಾಳಜಿ, ಕಾರುಣ್ಯದ ಸಂಗಮ “

ಸಾರಾ ಅವರ ಒಡನಾಟದಲ್ಲಿ ಪುಷ್ಟಿ ಗೊಂಡವರು ನಾವು. ಮಹಿಳಾ ಸಬಲೀಕರಣವೆಂದರೆ ನಮ್ಮೊಳಗೆ ನಾವು ಕಂಡುಕೊಳ್ಳುವ ಅನುಭಾವ ಪರಂಪರೆ. ಇಲ್ಲಿ ಇಂದು ಅವರು, ನಾಳೆ ನಾವು. ನಮ್ಮ ಸರದಿ ಬಂದ ತಕ್ಷಣ ಹೊರಟು ಬಿಡಬೇಕು. ‘ಹೆದರದಿರು ಮನವೇ ಬೆದರದಿರು ತನುವೇ ನಿಜವರಿತು  ನಿಶ್ಚಿಂತವಾಗಿರು’ ಎಂದ   ಅಕ್ಕನನ್ನು ನೆನೆದು ಕನ್ನಡ ಸಾಹಿತ್ಯ ವನ್ನು ತನ್ನ ಸಂವೇದನೆಗಳ ಮೂಲಕ ಸಂಪನ್ನಗೊಳಿಸಿದ  ಈ ಹಿರಿಯಕ್ಕನಿಗೆ ಎದೆ ತುಂಬಿ ಹೇಳುವ ಕೊನೆಯ ಪ್ರಣಾಮವಿದು.

ದೇವಿಕಾ ನಾಗೇಶ್‌

ಕವಯಿತ್ರಿ, ಸಾಮಾಜಿಕ ಹೋರಾಟಗಾರ್ತಿ

ಅವಳ ಸೋಲು ಅವಳ ಸೋಲಲ್ಲ!
ಪ್ರತಿ ವರ್ಷ ಆಗಸ್ಟ್‌ ೨೬ ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತಿದೆ. ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಕಾಯ್ದೆಯನ್ನು ಅಮೇರಿಕವು ೧೯೨೦ ರಲ್ಲಿ ಜಾರಿಗೆ ತಂದಿತ್ತು. ಅದರ ನೆನಪಿಗಾಗಿ ಅಂದೇ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮಹಿಳಾ ಸಾಧನೆಯ ಏಳು ಬೀಳುಗಳನ್ನು ಅವಲೋಕಿಸುವುದು, ಮಹಿಳಾ ಸಮಾನತೆ, ಲಿಂಗತ್ವ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ದಿನದ ವಿಶೇಷವಾಗಿದೆ. ಈ ವಿಶೇಷ ದಿನದಂದು, ಮಹಿಳಾ ಸಮಾನತೆ ಎತ್ತ ಸಾಗಿದೆ ಎಂಬುದನ್ನು ಅವಲೋಕಿಸುತ್ತಾ ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ ಎಂದು ಸಮಾಜದ ಗಮನ ಸೆಳೆದಿದ್ದಾರೆ ದೇವಿಕಾ ನಾಗೇಶ್‌

‘ನಿನ್ನೊಳಗಿನ ಶಾಂತಿ ನೀನು ಕಂಡುಕೊಳ್ಳುವುದೆಂದರೆ ನಿನ್ನ ಭಾವನೆಗಳನ್ನು ಇತರರು ನಿಯಂತ್ರಿಸಲು ಆಸ್ಪದ ಕೊಡದಿರುವುದು’ ಮಹಿಳೆ ತನ್ನೊಳಗೆ ಗಟ್ಟಿಗಿತ್ತಿ. ಎಂತಹುದೇ ಅಗ್ನಿದಿವ್ಯಗಳನ್ನು ದಾಟಿ ಮುನ್ನಡೆಯುವ ಶಕ್ತಿ ಅವಳಿಗೆ ಪ್ರಕೃತಿಯಿಂದ ಸಹಜವಾಗಿಯೇ ದಕ್ಕಿದೆ. ಸುಸ್ಥಿರ ಅಭಿವೃದ್ಧಿ ಎಂದರೆ ಸಮಾಜದ ಒಟ್ಟು ಅಭಿವೃದ್ಧಿ. ಇಲ್ಲಿ ಮಹಿಳೆಯರನ್ನು ಹಾಗೂ ಮಕ್ಕಳನ್ನು ಪರಿಗಣಿಸ ಬೇಕಾಗುತ್ತದೆ. ಅಭಿವೃದ್ಧಿಯ ಮಾನದಂಡಗಳೆಂದರೆ ಆರೋಗ್ಯ, ಶಿಕ್ಷಣ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಲಿಂಗ ಸಮಾನತೆ ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.

ಅವಳ ಅಭಿವೃದ್ಧಿಯ ಕಥನವೆಂದರೆ…

ವಿಶ್ವ ಆರ್ಥಿಕ ವರದಿ ಸೂಚಿಸುವ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶ ಲಿಂಗ ಸಮಾನತೆಯಲ್ಲಿ 135 ನೇ ಸಾಲಿನಲ್ಲಿದೆ. ಇದು ತೀರ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಸೊನ್ನೆಯಿಂದ 18 ವಯಸ್ಸಿನ ಗಂಡು-ಹೆಣ್ಣು ಮಕ್ಕಳ ಲಿಂಗಾನುಪಾತ ಸಾವಿರ ಗಂಡಿಗೆ 929 ಹೆಣ್ಣು ಇದ್ದರೆ ಪಟ್ಟಣಕ್ಕೆ ತಾಕಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲಿ ಇದು ಸಾವಿರ ಗಂಡಿಗೆ 943 ಇದೆ. ಹೆಣ್ಣು ಹುಟ್ಟೋದು ಎಂದರೆ ಖರ್ಚಿನ ಬಾಬತ್ತು ಎಂದು ಭಾವಿಸುವ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು ಶಿಶು ಭ್ರೂಣ ಹತ್ಯೆ ಎಗ್ಗಿಲ್ಲದೆ ನಡೆಯುತ್ತದೆ. “ಈ ಬೆಲ್ಲ ತಿನ್ನು ಸ್ವರ್ಗಕ್ಕೆ ಹೋಗು ವಾಪಾಸು ಬರಬೇಡ ಅಲ್ಲಿಂದ ತಮ್ಮನನ್ನು ಕಳುಹಿಸು”. ಹೆಣ್ಣು ಮಗುವಿಗಾಗಿ ಅವ್ವನೇ ಹೇಳುವ ಜೋಗುಳದ ಹಾಡೊಂದು ಈ ರೀತಿ ಇದೆ ಎಂದರೆ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಎಂತಹುದೆಂದು ಯಾರಾದರೂ ಊಹಿಸಬಹುದು. ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಅತ್ಯಾಚಾರ, ಅಪೌಷ್ಟಿಕತೆ ಹೀಗೆ ಬೆಳೆಯುತ್ತ ಸಾಗುವ ಅವಳ ಅಧ:ಪತನದ ಈ ಅಂಕಪಟ್ಟಿ ಯಲ್ಲಿ ಅಭಿವೃದ್ಧಿಯ ಕಥನವೆಂದರೆ ಅವಳೇ ಹೊತ್ತ ಶಿಲುಬೆ. ಮೊಳೆ ಜಡಿಯುವವರು ಇನ್ನಾರೋ?

ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ

ಲಿಂಗ ಸಮಾನತೆಗೆ ಮಹತ್ವ ಇಲ್ಲದ ದೇಶಗಳಲ್ಲಿ ಜನನ ಪ್ರಮಾಣ ಕುಸಿದಿದೆ ಎಂಬ ಒಂದು ಹೇಳಿಕೆ ಇದೆ. ಇದು ನಿಜ ಕೂಡ! ಕೆಲವು ಹೆತ್ತವರು ಗಂಡಾಗಲಿ ಹೆಣ್ಣಾಗಲಿ ಒಂದು ಮಗು ಸಾಕು ಎಂದು ನಿರ್ಧರಿಸುವುದು ಕೂಡ ಲಿಂಗಾನುಪಾತದ ಕುಸಿತಕ್ಕೆ ಒಂದು ಕಾರಣ ಇರಬಹುದು. ಆದರೆ ಬಯಸಿದಷ್ಟು ಜೀವಗಳನ್ನು ಸೃಷ್ಟಿಸಲು ನಮ್ಮ ಸಂಸ್ಕೃತಿಯು ಮಹಿಳೆಗೆ ಬೆಂಬಲ ನೀಡುತ್ತಿಲ್ಲ ಎಂದು ಇದರ ಅರ್ಥವಲ್ಲವೇ? ಗಂಡು ಹೆಣ್ಣಿನ ಅನುಪಾತದಲ್ಲಿರುವ ಈ ದೊಡ್ಡ ವ್ಯತ್ಯಾಸ ಇಡೀ ಜೀವ ಸಂಕುಲಕ್ಕೆ ದೊಡ್ಡ ಬೆದರಿಕೆಯ ಗಂಟೆಯಾಗಿದೆ. ಆಧುನಿಕ ಜಗತ್ತಿಗೆ ಪಿತೃ ಪ್ರಧಾನ ವ್ಯವಸ್ಥೆ ಸಮಂಜಸ ಅಲ್ಲ ಎಂಬ ಪಾಠವನ್ನು ಫಲವತ್ತತೆಯ ಈ ಕೊರತೆಯಿಂದ ನಾವು ಕಲಿಯಬೇಕು.

ಮಹಿಳಾಪರ ನೀತಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯದ ಹೆಚ್ಚಳದ ನಡುವೆ ಸಂಬಂಧ ಇದೆ. ಗಂಡು-ಹೆಣ್ಣು ಇಬ್ಬರು ವ್ಯಕ್ತಿಗಳಿರುವ ಕುಟುಂಬಗಳಲ್ಲಿ ಮನೆ ಕೆಲಸವನ್ನು ದಂಪತಿಗಳು ಹಂಚಿಕೊಂಡು ಹೋಗುವ ಸಂಪ್ರದಾಯವಿದ್ದಲ್ಲಿ ಎರಡನೇ ಮಗುವನ್ನು ಪಡೆಯುವ ಸಾಧ್ಯತೆಗಳು ಹೆಚ್ಚು .ಆದರೆ ಸದ್ಯದ ವರ್ತಮಾನ ಮಹಿಳೆಗೆ ಹಿತಕಾರಿಯಾಗಿಲ್ಲ. ಕೃಷಿ, ಮನೆ ವಾರ್ತೆ, ಸ್ವಚ್ಛತೆಯಿಂದ ತೊಡಗಿ 66% ದಿನನಿತ್ಯದ ಕೆಲಸಗಳನ್ನು ಮಹಿಳೆ ನಿರ್ವಹಿಸುತ್ತಾಳೆ. ಆಹಾರ ಉತ್ಪಾದನೆಯ 50% ಅವಳದೇ ಪಾಲಿದೆ. ಶ್ರಮ ವಿಭಜನೆಯಲ್ಲಿ 60% ದಿಂದ 70% ಅವಳದೇ ಮೇಲುಗೈ. ಆದರೆ ಒಟ್ಟಾರೆ ಅವಳ ಸಂಪಾದನೆ 10% ಮಾತ್ರ. ಆಸ್ತಿ ಹಕ್ಕನ್ನು ಪರಿಗಣಿಸಿದರೆ ಅವಳು ಹೊಂದಿರುವ ಆಸ್ತಿ ಒಂದು ಶೇಕಡ ಮಾತ್ರ.
ಮುಂದಿನ ದಿನಗಳಲ್ಲಿ ಈ ಅಂಕಿ ಅಂಶಗಳು ಬದಲಾಗಬಹುದು. ಅವಕಾಶ ಸಿಕ್ಕಿದರೆ ಮಹಿಳೆ ಪುರುಷರಿಗಿಂತ ಹೆಚ್ಚಿನದನ್ನು ಸಾಧಿಸಬಹುದು. ಅನುನಯದ, ಸಹಬಾಳ್ವೆಯ, ಸಾಮರಸ್ಯದ ಈ ಬದುಕಿನಲ್ಲಿ ಸಂಗಾತಿಗಳು ಅವರು. ಸಮಾನತೆ ಎಂದರೆ ಹಂಚಿ ತಿನ್ನುವ ಒಡನಾಡುವ ಪ್ರೀತಿಯ ಪಯಣವೇ ಹೊರತು ಪೈಪೋಟಿ ಅಲ್ಲ.

ಸಮಾನ ಅವಕಾಶಗಳೆಂಬ ಮರೀಚಿಕೆ

ನಮ್ಮ ಸಂವಿಧಾನದ 16ನೇ ವಿಧಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಬೇಕು ಎಂಬ ಉಲ್ಲೇಖವಿದೆ. ಮಹಿಳೆ ಘನತೆಯಿಂದ ಆತ್ಮ ಗೌರವ ಉಳ್ಳವಳಾಗಿ ಬದುಕುವ ಹಕ್ಕು ಅವಳಿಗೆ ಇದೆ. ಇದಕ್ಕೆ ಪೂರಕವೆನ್ನುವಂತೆ ಅವಳ ಶ್ರಮಕ್ಕೆ ಸಮಾನ ಕೂಲಿ, ಉಚಿತ ಕಾನೂನು ನೆರವು ಪಡೆಯುವುದು ಅವಳ ಹಕ್ಕು. ಆದರೆ ನಮ್ಮ ದೇಶದಲ್ಲಿ ಬಹುತೇಕ ಮಹಿಳೆಯರಿಗೆ ತಮ್ಮ ಹಕ್ಕಿನ ಅರಿವೇ ಇರುವುದಿಲ್ಲ. ಕಾನೂನು ಹೊತ್ತಿಗೆಯಲ್ಲಿದ್ದರೆ ಅವರು ಏಳು ಸುತ್ತಿನ ಕೋಟೆಯೊಳಗೆ ಎನ್ನುವಂತೆ ತಾವೇ ಸುತ್ತಿಕೊಂಡ ಬಲೆಯೊಳಗೆ ಮೋಹಕ ಬಂಧಿ ಆಗಿರುತ್ತಾರೆ. ಅವರನ್ನು ಇವತ್ತಿಗೂ ಕತ್ತಲಿನಲ್ಲಿ ಇಟ್ಟಿರುವುದು ಈ ನಿರ್ಲಿಪ್ತತೆಯೋ ಮರೆಗುಳಿಯೋ.. ಉದ್ಯೋಗಾವಕಾಶಗಳಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆ ಹೆಚ್ಚುತ್ತಿದೆ. ತಾಂತ್ರಿಕ ಹುದ್ದೆಗಳಲ್ಲಿ ಅವರು ಪುರುಷರಿಗಿಂತ ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿ ಅವರ ಸಂಖ್ಯೆ ೭% ಮಾತ್ರ. ವಿಶ್ವ ಆರ್ಥಿಕ ವರದಿಯ ಪ್ರಕಾರ ಆರ್ಥಿಕ ಚಟುವಟಿಕೆಗಳಲ್ಲಿ ಸ್ತ್ರೀಯರ ಭಾಗೀದಾರಿಕೆ ಫುರುಷರಿಗೆ ಹೋಲಿಸಿದರೆ 143 ನೇ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಮಹಿಳೆ ಮತ್ತು ಪುರುಷರ ನಡುವಿನ ಈ ಅಂತರದಲ್ಲಿ 107ನೇ ಸ್ಥಾನ ಪಡೆದಿದೆ. ವಿಶ್ವದ 146 ದೇಶಗಳು ಈ ಪಟ್ಟಿಯಲ್ಲಿದ್ದು ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರಿಗೆ ಇರುವ ಅವಕಾಶಗಳ ನಡುವಿನ ಅಂತರ 48 ಇದೆ.

ಲಿಂಗ ಸಮಾನತೆ ಎಂದರೆ…

imege-the hans india

ಮಹಿಳೆ ತನ್ನ ವೃತ್ತಿ ಕೌಶಲ್ಯ ,ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಈ ಜಗತ್ತಿನಲ್ಲಿ ಭಯಗಳನ್ನು ಮೀರಿ ಬದುಕಬಲ್ಲಳು. ಆಕೆ ಪ್ರತಿ ಸಲ ನಡೆದ ನಡೆಯುತ್ತಿರುವ ತನಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾಳೆ ಎಂದರೆ ಅಲ್ಲಿರುವ ಪ್ರತಿರೋಧದ ಧ್ವನಿ ಅವಳದು ಮಾತ್ರವಲ್ಲ, ಇಡೀ ಮಹಿಳಾ ಸಮೂಹದ್ದು ಎಂದು ಅರ್ಥ ಮಾಡಿಕೊಳ್ಳಬೇಕು. ಲಿಂಗತ್ವ ಸಮನ್ಯಾಯವೆನ್ನುವುದು ಮಹಿಳೆಗೆ ಇವತ್ತಿಗೂ ಬಿಡಿಸಲಾಗದ ಕಗ್ಗಂಟು. ಸಮಾಜೋ ಸಾಂಸ್ಕೃತಿಕ ಸಂಬಂಧಗಳು ಇಲ್ಲಿ ಜಟಿಲವಾಗಿ ಸುರಳಿ ಸುತ್ತಿಕೊಂಡಿರುವ ಕಾರಣಕ್ಕೆ ಇದು ಬಾಯಿ ಮಾತಿನಲ್ಲಿ, ಅರಿವು ಜಾಗೃತಿಯಲ್ಲಿ ಪರಿಹಾರವಾಗುವ ಸಮಸ್ಯೆ ಅಲ್ಲ. ಸಮಸ್ಯೆಯನ್ನು ಸಮಸ್ಯೆ ಎಂದು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಆಕೆ ಇರುವಾಗ, ಪುರುಷ ತಾನಿರುವ ಸ್ಥಿತಿಯಲ್ಲಿ ಆರಾಮ ಇದ್ದೇನೆ ಎಂದು ಭಾವಿಸಿರುವಷ್ಟು ಕಾಲ ಲಿಂಗ ಅಸಮಾನತೆಯ ಈ ಜಾಲವನ್ನು ಛೇಧಿಸುವುದು ಹೇಗೆ?. ಸಮಾನತೆ ಎಂದರೆ ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಪರಿಕಲ್ಪನೆ. ಇಲ್ಲಿ ಶ್ರೇಷ್ಠ, ಕನಿಷ್ಠ, ಬಡವ, ಶ್ರೀಮಂತ ಎಂಬ ಬೇಧ ಇರುವುದಿಲ್ಲ. ಗಂಡ ಹೆಂಡತಿ ಕೂಡಿ ಬಾಳುವಾಗ ಒಂದು ಚಪಾತಿ ನೀನು ಮಾಡು ಒಂದು ಚಪಾತಿ ನಾನು ಮಾಡುತ್ತೇನೆ ಎಂಬ ಮಾದರಿಯದ್ದು ಅಲ್ಲ. ಈ ಲಿಂಗ ಸಮಾನತೆ ಅಂದರೆ ಸುಸ್ಥಿರ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ಸಮಾನ, ಆರೋಗ್ಯಕರ ಭಾಗೀದಾರಿಕೆ. ಸಮಷ್ಟಿ ಹಿತವೇ ಮೂಲ ಮಂತ್ರವಾಗಿರಿಸಿಕೊಂಡ ಈ ಶ್ರಮ ವಿಭಜನೆಯಲ್ಲಿ ಕುಟುಂಬ, ಶಾಲೆ, ಸಂಘ, ಸಂಸ್ಥೆ, ಸಮಾಜ ಹೀಗೆ- ಹುಟ್ಟಿನಿಂದ ತೊಡಗಿ ಸಾವಿನವರೆಗಿನ ಪ್ರತಿಯೊಂದು ಸಂಗತಿಯೂ ಮುಖ್ಯವಾಗುತ್ತವೆ. ಕಟ್ಟುವ ಈ ಕ್ರಿಯೆಯಲ್ಲಿ ಬದುಕಿನ ಅತಿ ಸೂಕ್ಷ್ಮ ವಿಚಾರಗಳಿಂದ ತೊಡಗಿ ಮಕ್ಕಳ ಪಾಲನೆ ಪೋಷಣೆಯು ಸೇರಿಕೊಂಡಂತೆ ಹತ್ತು ಹಲವು ಸಂಗತಿಗಳು ಇರುತ್ತವೆ. ಜವಾಬ್ದಾರಿಗಳು ಇರುತ್ತವೆ. ಸುಸ್ಥಿರ ಅಭಿವೃದ್ಧಿಯ ವಿವಿಧ ರಂಗಗಳನ್ನು ತೆಗೆದುಕೊಂಡಾಗ ಅಲ್ಲಿ ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಬೇಕು ಮತ್ತು ಅವರ ಧ್ವನಿ ಮಹಿಳಾಪರ ಜೀವಪರ ಆಗಿರಬೇಕು ಎನ್ನುವ ಕಾಳಜಿ ಇಂದು ನಿನ್ನೆಯದಲ್ಲ.

ಸೋಲು ಅವಳ ಸೋಲಲ್ಲ..

ಮಹಿಳಾಪರ ಎಂದ ಕೂಡಲೇ ಎಲ್ಲಾ ಸೌಕರ್ಯಗಳು ಮಹಿಳೆಯರಿಗೆ, ಪುರುಷರು ನಿರ್ಲಕ್ಷಿತರು ಎಂಬ ಕೂಗು ಮನೆಯೊಳಗಿನಿಂದ ತೊಡಗಿ ಅಭಿವೃದ್ಧಿಯ ವಿವಿಧ ರಂಗಗಳಲ್ಲಿ ವ್ಯಾಪಿಸಿದ್ದರ ಪರಿಣಾಮ ಲಿಂಗ ಸಮಾನತೆಯನ್ನು ಸಾಧಿಸುವುದರಲ್ಲಿ ನಾವು ಹಿಂದೆ ಉಳಿದಿದ್ದೇವೆ. ತಯಾರಿಕೆ, ಮೂಲ ಸೌಕರ್ಯದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ನಾಯಕತ್ವದಲ್ಲಿ ಜಾಗತಿಕವಾಗಿ ಗಣನೀಯವಾಗಿ ಹಿಂದೆ ಇದ್ದಾರೆ ಎಂದರೆ ಈ ಸೋಲು ಅವಳದ್ದೇ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೂ ಇದು ಅವಳ ಸೋಲಲ್ಲ. ಮಹಿಳೆ ಸ್ವತಂತ್ರವಾಗಿ ಬದುಕುವ ಗಡಸುತನ ತೋರುವ ನಿಟ್ಟಿನಲ್ಲಿ ಅವಳ ಸಹಚರಿಗಳು ಅವಳಿಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಇದನ್ನು ಅರ್ಥೈಸಿಕೊಳ್ಳಬೇಕಲ್ಲವೇ? ಸಮಾಜ ಯಾವತ್ತೂ ಚಲನಶೀಲವಾಗಿರುವಂತಹದ್ದು.ಇದಕ್ಕೆ ಬೆಂಕಿಯ ತೀವ್ರತೆ ಇರುತ್ತದೆ. ಈ ಉರಿಯಲ್ಲಿ ಸುಟ್ಟು ಬೂದಿಯಾಗುವವರು, ಹೇಳ ಹೆಸರಿಲ್ಲದಂತೆ ನಾಶವಾಗುವವರು ಅದೆಷ್ಟೋ ಮಂದಿ. ಅಂತಹವರ ಸಾಲಿನಲ್ಲಿ ಮಹಿಳೆಯರ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ. ಆದರೆ ಧೀ ಶಕ್ತಿ ಇರುವ ದೃಢತೆ ಇರುವ ಕೆಲವಷ್ಟೇ ಮಹಿಳೆಯರು ಈ ಬೂದಿಯಿಂದ ಫಿನಿಕ್ಸ್ ನಂತೆ ಎದ್ದು ಬಂದು ಇಡೀ ಸಮುದಾಯದ ಧ್ವನಿಯಾಗಿ ಇತಿಹಾಸ ಬರೆಯುತ್ತಾರೆ. ಇಂತಹ ಮಹಿಳೆಯರು ಹಿಂದೆಯೂ ಇದ್ದರು. ಇವತ್ತೂ ಇದ್ದಾರೆ. ನಾಳೆಯೂ ಇರುತ್ತಾರೆ. ಇವರ ಸಂಖ್ಯೆ ಹೆಚ್ಚಾಗಲಿ.

ಪ್ರೀತಿ ಸಾಮರಸ್ಯದ ಧ್ವನಿ ಮೊಳಗಲಿ

ಸಮ ಸಮಾಜದ ಅಭಿವೃದ್ಧಿಯ ಮಾನದಂಡದಲ್ಲಿ ಪ್ರೀತಿ ಸಾಮರಸ್ಯದ ಧ್ವನಿ ಮೊಳಗಲಿ ಎಂಬ ಕಾಳಜಿ ನಮ್ಮೆಲ್ಲರದು. ಸ್ತ್ರೀವಾದ ಎಂದರೆ ಮಾನವತಾ ವಾದ. ಇದು ಮಹಿಳೆಯರಿಗೆ ಮಾತ್ರ ಸೀಮಿತವಾದದ್ದಲ್ಲ. ಪ್ರಕೃತಿ ಸಹಜವಾಗಿಯೇ ಅವಳಿಗೆ ದಕ್ಕಿದೆ. ಸಮಾಜದಲ್ಲಿರುವ ಹಿಂಸೆ ದೌರ್ಜನ್ಯ ಕಡಿಮೆಯಾಗುವುದಕ್ಕೆ, ಅಧ:ಪತನದತ್ತ ಸಾಗುತ್ತಿರುವ ಸಮಾಜವನ್ನು ಬಡಿದೆಚ್ಚರಿಸುವುದಕ್ಕೆ ಅರಿವೆಂಬ ಮಹಾ ಜಾಗೃತಿಯನ್ನು ಮುನ್ನಡೆಸುವುದಕ್ಕೆ, ಸರ್ವರ ಏಳ್ಗೆಯತ್ತ ಜಗತ್ತನ್ನು ಮುನ್ನಡೆಸುವುದಕ್ಕೆ ಮಾನವತಾವಾದ ನಮಗೆ ಬೇಕು. ಇದು ಪ್ರೀತಿಯ ಗಾಳಿಯಾಗಿ ಬೀಸುತ್ತಿರಬೇಕು. ನಮ್ಮೆಲ್ಲರ ಉಸಿರಿನೊಂದಿಗೆ ಸೇರಿರಬೇಕು ಎಂಬ ಆಶಯವೇ ನಮ್ಮ ಅನುದಿನದ ಕ್ರಿಯಾಶೀಲತೆಯ ಗುಟ್ಟು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ದೇವಿಕಾ ನಾಗೇಶ್‌
ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ, ಮಂಗಳೂರು.