Dr Indira Heggade – Peepal Media

ಬೂತಾರಾಧನೆಗೆ ಅವಮಾನ ಆದರೆ ಹಿಂದೂ ಧರ್ಮಕ್ಕೆ ಮಾಡುವ ಅವಮಾನ ಅಲ್ಲವೆ?
ಕಾರ್ಕಳ  ಈಗ ಜನರ ಗಮನ ಸೆಳೆಯುತ್ತಿದೆ.  ಜೊತೆಗೆ ತುಳುನಾಡಿಗರ ಆಕ್ರೊಶಕ್ಕೂ ಕಾರಣವಾಗಿದೆ. ಕಾರ್ಕಳದಲ್ಲೊಂದು ಪರಶುರಾಮ ಥೀಮ್ ಪಾರ್ಕ್ ರಚನೆಮಾಡಿದೆ ಘನ ಸರಕಾರ

ಇಂಡಾಲಜಿ ವಿದ್ಯಾರ್ಥಿಗಳಾಗಿ ಇಂದಿರ ಗಾಂಧಿ ನ್ಯಾಶನಲ್‌ ಮ್ಯೂಸಿಯಂಗೆ ನಾವು ಭೇಟಿನೀಡಿದ್ದಾಗ ತುಳುನಾಡಿನ ಉಯ್ಯಾಲೆಯಲ್ಲಿ ಇರುವಂತ ಸಣ್ಣ ಸಣ್ಣ ಹಿತ್ತಾಳೆಯ ಪ್ರತಿಮೆಗಳನ್ನು ನಾನು ಅಲ್ಲಿ ಗಮನಿಸಿದೆ. ಈ ಬಗ್ಗೆ ನಮ್ಮ ಇಂಡಾಲಜಿ ಗುರುಗಳಾದ ಎಸ್ ನಾಗರಾಜು ಅವರಲ್ಲಿ ಚರ್ಚೆ ನಡೆಯಿತು. “ನಿಮ್ಮ ಕಡೆ ಅಧ್ಯಯನ ನಡೆಯಲು ಬಹಳಷ್ಟು ಇದೆ. ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಿಮ್ಮನ್ನು ಮೆಚ್ಚಬೇಕು. ನೀವು ರಾಕೆಟ್ ಯುಗಕ್ಕೆ ಹೋದರೂ ಲೋಹಯುಗದ ಪಳೆಯುಳಿಕೆಗಳನ್ನು ಬಿಟ್ಟಿಲ್ಲ ಎಂದರು. ಅದು ನಿಜವೇ. ಜಗದಗಲ ತಮ್ಮ ಛಾಪನ್ನು ಛಾಪಿಸಿದ ತುಳುವರು ಆದಿ ಕಾಲದ ಬೂತಾರಾಧನೆಯನ್ನು ಅಭಿಮಾನದಿಂದ ಸಮರ್ಪಣಾ ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. “

ತುಳುವ ನಂಬಿಕೆಯ ಪ್ರಕಾರ ‘ನಾರಾಯಣ (ಸೂರ್ಯ) ಚಂದ್ರರ ಉದಯದೊಂದಿಗೆ ನೀರು ತುಂಬಿಕೊಂದ್ದ  ಭೂಮಿಯಲ್ಲಿ ಜೀವಿಗಳೂ ಹುಟ್ಟಿದುವು. ಆದ್ದರಿಂದಲೇ ಏನೋ ತುಳುನಾಡಿನ ದೇವಾಲಯಗಳ ಬಾಗಿಲಲ್ಲಿ  ಸೂರ್ಯ ಚಂದ್ರರ ಚಿಹ್ನೆಗಳನ್ನು ಕೆತ್ತಿ ಇಣುಕಿ ಕಿಂಡಿಯಾಗಿಸಲಾಗಿದೆ. ಬೂತ ನರ್ತನಕಾರರ ಬಣ್ಣಗಾರಿಕೆಯಲ್ಲಿ ಮತ್ತು ಅವರ ಕೆಂಪುಡುಗೆಯಲ್ಲಿ ಸೂರ್ಯ ಚಂದ್ರರ ಚಹ್ನೆಯನ್ನು ಬಿಡಿಸುತ್ತಾರೆ. ಸಿರಿ ಸೂಕೆ (ದರ್ಶ) ಬರುವಾಗ ಪಾತ್ರಿಗಳು ‘ನರಯಣ, ನರಾಯಣ’ ಎಂದು ಸೊಲ್ಲು ಬಿಡುತ್ತವೆ. ಪಾಡ್ದನಗಳಲ್ಲೂ ಸೂರ್ಯ ಚಂದ್ರರೇ ಹೊಳೆಯುತ್ತಿದ್ದಾರೆ. ಆದರೆ ಇದುವರೆಗಿನ ಯಾವ ಪಾಡ್ದನಗಳಲ್ಲೂ ಪರಶುರಾಮನ ಪ್ರಸ್ತಾಪ  ಇಲ್ಲ. ಬೇಸಾಯಗಾರ ಶಿವನಿದ್ದಾನೆ ಅಲ್ಲಿ. ಪಾರ್ವತಿ ಇದ್ದಾಳೆ ಅಲ್ಲಿ. ಬ್ರಾಹ್ಮಣ ತಂತ್ರ ಮಂತ್ರವಾದಿಗಳೂ ಇದ್ದಾರೆ.  ಆದರೆ ಪರಶುರಾಮನ ಸುಳಿವಿಲ್ಲ. ಕೃತ ತ್ರೇತಾಯುಗದ ಸಂಧಿಕಾಲದಲ್ಲಿ ಜನಿಸಿದ ಪುರಾಣ ಚಿತ್ರಿಸಿರುವ ಪರಶುರಾಮ ತುಳುನಾಡಿಗೆ ಬಂದುದು ತೀರಾ ತಡವಾಗಿ…..ವೈಷ್ಣವ ಬ್ರಾಹ್ಮಣರ ಮೂಲಕ ಇರಬಹುದು.

ಪರಶುರಾಮನ ಕಥೆ ಪುರಾಣ ಕಥೆ. ಇತಿಹಾಸ ಅಲ್ಲ.  ಸನಾತನ ಧರ್ಮವನ್ನು ಅಬ್ರಾಹ್ಮಣವರ್ಗದವರಿಗೂ ತಲುಪಿಸಲು ಹೆಣೆದ ಇತರ ಪುರಾಣಗಳಂತೆ ಇದೂ ಪುರಾಣ ಕಥೆ.  ತುಳುನಾಡಿನ ಯಕ್ಷಗಾನಗಳಲ್ಲಿ, ಸಮಾರಂಭದ ವೇದಿಕೆಗಳಲ್ಲಿ ಡಕ್ಕೆ ಬಲಿ, ನಾಗಾರಾಧನೆಗಳಲ್ಲಿ –ಹೀಗೆ ಈ ತುಳುನಾಡು  ಪರಶುರಾಮ ಕಡಲಿಗೆ ಕೊಡಲಿ ಎಸೆದು ಕಡಲಿನಿಂದ ಬಿಡಿಸಿಕೊಂಡ- ಸ್ಥಳ ಆತನ ಸೃಷ್ಟಿ ಎಂದು. ಮತ್ತೆ ಮತ್ತೆ ಕೇಳಿಸಿಕೊಂಡಿದ್ದೇವೆ.

ಪರಶುರಾಮನ ಪುರಾಣದ ಪ್ರಕಾರ ಕನ್ಯಾಕುಮಾರಿಯಿಂದ ಗುಜರಾತಿನ ವರೆಗೆ ಆತ ಕಡಲಿನಿಂದ ಬೂಮಿಯನ್ನು ಬಿಡಿಸಿಕೊಂಡಿದ್ದಾನೆ.  ಆದರೆ ಕನ್ಯಾಕುಮಾರಿಯಿಂದ ಗುಜರಾತಿನವರೆಗೆ ಇರುವ ಪರಶುರಾಮನ ಸೃಷ್ಟಿಯಲ್ಲಿ ಪರಶುರಾಮನ ಬಗ್ಗೆ ಕೇಳಿಬರುವುದು ಕಡಿಮೆ. ಆದರೆ ತುಳುನಾಡಿನಲ್ಲಿ ಪರಶುರಾಮನನ್ನು ಕಟ್ಟಿಹಾಕುವ ಪ್ರಯತ್ನ ಯಾಕೋ ಅಭಾಸವಾಗಿ ಕಾಣುತ್ತಿದೆ.

ಆದರೂ ಪರಶುರಾಮ  ಇದುವರೆಗೆ ತುಳುನಾಡಿನ ಭೂತಗಳ ತಂಟೆಗೆ ಬರಲಿಲ್ಲ.  ಈ ಬಾರಿ ಈ ಥೀಮ್ ಪಾರ್ಕ್ ನಲ್ಲಿ ಆತ ಬೂತಗಳನ್ನು ಬೆದರಿಸಿ  ತುಳಿದು ನಿಂತಿದ್ದಾನೆ.  ಈ ರೀತಿಯ ಉಬ್ಬು ಶಿಲ್ಪಗಳನ್ನು ಕೆತ್ತಿಸಿರುವ ಹಿನ್ನೆಲೆ, ಉದ್ದೇಶವೇನೋ?

ಈ ಬೆಟ್ಟದ ಬಗ್ಗೆ ಸ್ಥಳೀಯರು ನೀಡುವ ವಿವರಣೆ ಕುತೂಹಲಕಾರಿಯಾಗಿದೆ. ಈ ಮಾಹಿತಿಯಿಂದ  ಇದು ಸೂಕ್ಷ್ಮ ಶಿಲಾಯುಗದ ನೆಲೆ ಆಗಿತ್ತು ಎನ್ನುವುದು ವಿದಿತವಾಗುತ್ತದೆ.  ಪುರಾತತ್ವ ನೆಲೆಗಳಲ್ಲಿ  ಕಲ್ಲುಗೋರಿಯಂತಹ ಸಮಾಧಿಗಳು, ಇರುತ್ತವೆ. ಇಲ್ಲೂ ಅಂತಹುದೇ ಇತ್ತು, ಮಾತ್ರವಲ್ಲ ಇಲ್ಲಿ  ಜೋಡಿ ಶಿಲಾ ಪಾದಗಳು- ಇದ್ದುವು,  ಅವು ಕೋಟಿ ಚೆನ್ನಯರ ಪಾದ  ಎಂದೂ ಹೇಳುತ್ತಾರೆ ಎಂಬ ಮಾಹಿತಿಯೂ ದೊರಕಿದೆ. . ಇಲ್ಲಿ ಉಮಿಕಲ್ಲ್ ಎನ್ನುವ ಕ್ಷೇತ್ರವೂ ಇತ್ತು ಎನ್ನುತ್ತಾರೆ. . ಪುತ್ತಿಗೆ ಚೌಟರ ಉಮೆಗುಂಡಿ ಬನ, , ಕಾಸರಗೋಡಿನ ಕುಂಬ್ಡಾಜೆಯ ಉರ್ಮಿತ್ತಾಯ ಬನ-(ಕುಂಬ್ಡಾಜೆ ಬೀಡಿನ ಯಜಮಾನಿಯನ್ನು ‘ಉರ್ಮಿತ್ತಾಯಿ’ ಎಂದು ಬೂತ ಪಾತ್ರಿ ಗೌರವಿಸುತ್ತದೆ. ) ಇರುವಂತೆ  ಈ ಬೆಟ್ಟದ ಮೇಲೂ ಉರ್ಮಿಕಲ್ಲೋ ಉರ್ಮಿಕಲವೋ ಇತ್ತು ಎಂದೂ ಕೇಳಿ ಬರುತ್ತಿದೆ. ಹಾಗಿದ್ದಿದ್ದರೆ ಆದೂ ನಾಗನಿಗೆ ಸಂಬಂಧಿಸಿರಬೇಕು.

ತುಳುವರ ಮೂಲತಾನಗಳು ಸತ್ತವರ ಸಮಾಧಿಗಳು ಇರುವ ಕ್ಷೇತ್ರ ಎನ್ನುತ್ತಾರೆ ವಿದ್ವಾಂಸರು.  ಇಂತಹ ಅನೇಕ ಕ್ಷೇತ್ರಗಳಲ್ಲಿ ಪುರಾತತ್ವ ನೆಲೆಗಳಲ್ಲಿ ದೊರಕುವು ನಿಲವುಗಲ್ಲುಗಳು ಇವೆ. ಗೋರಿಗಳೂ ಇವೆ. ಉದ್ಯಾವರ ನಾಗ ಬನದಲ್ಲಿ, ಕುಂಬ್ಡಾಜೆಯಲ್ಲಿ, ಕೆಲಿಂಜೆ ಉಲ್ಲಾಲ್ತಿಯ  ಮೂಲ ಕ್ಷೇತ್ರದಲ್ಲಿ ನಾನು ಇಂತಹ ನಿಲುಗಲ್ಲುಗಳನ್ನು ಕಂಡಿರುವೆ.

ಪುರಾತತ್ವಕಾರರಿಂದ ಶೋಧ ಮಾಡಿಸಬೇಕಾದ ಸೂಕ್ಷ್ಮ ಶಿಲಾಯುಗದ ನೆಲೆ ಇದು. ಈ  ನೆಲೆಯನ್ನು ಈಗ ಬುಲ್ಡೋಜರ್ ನಿಂದ ನೆಲಸಮ ಮಾಡಿಸಿದೆ ನಮ್ಮ ಸರಕಾರ.  ಪರಶುರಾಮನಿಗಾಗಿ  ಸೂಕ್ಷ್ಮ ಶಿಲಾಯುಗದ ಕುರುಹುಗಳನ್ನು ಮಾತ್ರವಲ್ಲ ಸ್ಥಳೀಯರ ಆರಾಧನಾ ಪರಂಪರೆಯ ಮೇಲೆಯೇ ಬುಲ್ಡೋಜರ್ ಓಡಿಸಿದೆ.

ಪರಶುರಾಮ ಸೃಷ್ಟಿ ಈ ತುಳುನಾಡು ಎಂದು ಮತ್ತೆ ಮತ್ತೆ ಪಠಿಸಿದರೂ  ಪರಶುರಾಮ ಸ್ಥಳೀಯರಿಗೆ ದೇವರಾಗಲಿಲ್ಲ  ತುಳುನಾಡು ಮಾತೃಶಕ್ತಿಗಳ ನಾಡು. ಹೀಗಾಗಿ ಮಾತೃ ಹಂತಕನನ್ನು ತುಳುವರು ದೇವರೆಂದು ಆರಾದಿಸಲಿಲ್ಲ ಎಂದರೂ ತಪ್ಪಾಗಲಾರದು.

ಈ ನೆಲದಲ್ಲಿ ಬೌದ್ಧ ಪರಂಪರೆಗೆ ಸೇರಿದ ಕದ್ರಿಯಲ್ಲಿ ಬುದ್ಧನಿದ್ದಾನೆ. ಅಲ್ಲಿ ಬುದ್ಧಶಿಲ್ಪವನ್ನು ವಿಷ್ಣು ಮಾಡಲಾಗಿದೆ, ವ್ಯಾಸ ಮಾಡಲಾಗಿದೆ. ಉಡುಪಿ ತಾಲೂಕಿನ ಮೂಳೂರಿನಲ್ಲಿ ಬುದ‍್ದ ಶಿಲ್ಪ ಇರುವ ದೇವಸ್ಥಾನ ಇದೆ. ಆದರೆ ಪರಶುರಾಮನಿಗೆ ರಚನೆಗೊಂಡ ಪುರಾತನ ದೇವಾಲಯ ಒಂದೂ ನನ್ನ ಗಮನಕ್ಕೆ ಬಂದಿಲ್ಲ. ಪರಶುರಾಮ ತಪಸ್ಸಿಗೆ ಕುಳಿತ ಜಾಗ ಎಂದು ಹೇಳುವ ಕದ್ರಿ ಗುಡ್ಡದ ಸ್ಥಳವೂ ನಾಥ ಪಂಥದವರ ವಿಭೂತಿ-ಭಸ್ಕು ಉತ್ತತ್ತಿಯ ಸ್ಥಳ  ಎಂದು ಅನೇಕರು ನಂಬುತ್ತಾರೆ.  ಪರಶುರಾಮ ತ್ರಿಶೂಲ ಹಿಡಿದವನಲ್ಲ. ಅಲ್ಲಿಯ ವಿಭೂತಿ ಹೊಂಡದ ನಡುವೆ ತ್ರಿಶೂಲ ನಿಲ್ಲಿಸಲಾಗಿದೆ. ಇಷ್ಟಾದರೂ  ಬೂತಾರಾಧನೆಯ ತುಳು ಸಂಸ್ಕೃತಿಯು ಹಿಂದೂ ಧರ್ಮವು ಸನಾತನ ಧರ್ಮದ ದೇವರುಗಳನ್ನು ನಿರಾಕರಿಸಿಲ್ಲ. ಜನಪದ ಮತ್ತು ವೈದಿಕದ ಆಚರಣೆಗಳು ಮುಖಾಮುಖಿಯಾಗಿಯೂ ಹೊಂದಿಕೊಂಡು ನಡೆದಿವೆ. ಎಷ್ಟೋ ಬೂತಾರಾಧನೆಯ ಕ್ಷೇತ್ರಗಳು ಜನಾರ್ಧನ ದೇವಾಲಯಗಳಾಗಿವೆ, ಶಿವ ದೇವಾಲಯಗಳಾಗಿವೆ. ಹೀಗಿದ್ದೂ ಅಲ್ಲಿ ಈಗಲೂ ನಡೆಯುತ್ತಿರುವ ಬೂತಾರಾದನೆ ಮತ್ತು ವೈದಿಕ ಆರಾಧನೆಯ ಕೆಲವೊಂದು ಆಚರಣೆಗಳು ನಡೆಯುತ್ತವೆ. ಇವು ಆರ್ಯ ಅನಾರ್ಯ ಸಂಘರ್ಷ‍್ ವನ್ನು ನೆನಪಿಸುತ್ತದೆ. ( ಉದಾ : ಜಳಕದ ಬಳಿ ಆದ ಮೇಲೆ ಮರಳಿ ಬರುವ ದೇವರ ಪಾತ್ರಿಯನ್ನು ಭೂತದ ಪಾತರಿ ತಡೆಯುವ ದೃಶ್ಯ) ಆದರೂ ತಾಳ ಮದ್ದಳೆ ಮತ್ತು ಯಕ್ಷಗಾನದಲ್ಲಿ ರಾವಣ ರಾಮನಿಗ ಸೋಲಲೇ ಬೇಕೆಂಬ ನಿಯಮದಂತೆ ಹಾಗೂ  ಸೋಲುವಂತೆ ಸ್ಥಳೀಯ ಬೂತಗಳು ವೈದಿಕ ದೇವರನ್ನು ಹೊತ್ತ ತಂತ್ರಿಗಳಿಗೆ ದಾರಿ ಬಿಟ್ಟುಕೊಟ್ಟು ತೆಪ್ಪಗಾಗುತ್ತವೆ.

ವೈದಿಕ ದೇವರುಗಳಿಗೆ ರಾಜಾತಿಥ್ಯ ಕೊಟ್ಟ ಈ ನೆಲದಲ್ಲಿ ನಾಗ-ಸುಬ್ರಹ್ಮಣ್ಯ ಮತ್ತು ಬೂತಗಳ ಉಬ್ಬುಶಿಲ್ಪಗಳನ್ನು ಮಾಡಿ ಅವನ್ನು ಉಗ್ರರೂಪಿ ಪರಶುರಾಮ ತುಳಿಯುವ ದೃಶ್ಯಮಾತ್ರವಲ್ಲಅವನಿಗೆ ಬೆದರಿ ಮಕ್ಕಳಂತೆ ಯಾಚಿಸುವ ಬೂತಗಳ ಉಬ್ಬುಶಿಲ್ಪಗಳನ್ನು ನೋಡುವಾಗ ಬೂತಾರಾಧನೆಯನ್ನು ತುಳಿಯಲೆಂದು ಪರಶುರಾಮನನ್ನು ಇಲ್ಲಿ ನಿಲ್ಲಿಸಿಲಾಯಿತು ಎಂದು ಜನ ಬಾವಿಸುವಂತಾಗಿದೆ.

ತುಳುನಾಡಿನ ಬೂತಾರಾಧನೆ ಇತ್ತೀಚಿನ ದಶಕಗಳಲಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಹೊರ ರಾಜ್ಯ, ಹೊರ ದೇಶಗಳಿಗೆ ಹೋಗಿ ಸಂಪಾದಿಸಿದ ಹಣದಿಂದ  ಬೂತಾರಾಧನೆಯನ್ನು ಶ್ರೀಮಂತಗೊಳಿಸಿದ್ದಾರೆ.  ಪಂಬದ ಪರವ ಮುಂತಾದ ನರ್ತನಕಾರರಿಗೆ ಮಾತ್ರವಲ್ಲ ವೈದಿಕ ಪುರೋಹಿತರಿಗೂ  ಬೂತಾರಾಧನೆಯಿಂದ ಶ್ರೀಮಂತ ಜೀವನ ಪಡೆಯಲು ಸಾಧ್ಯವಾಗಿದೆ.

ಅಂತಹ ಶಕ್ತಿವಂತ ಬೂತಗಳನ್ನು ಪರಶುರಾಮನ ಕಾಲಡಿಯಲ್ಲಿ ಹಾಕಿ ಅವು ಭೀತಿಗೊಂಡಂತೆ ಚಿತ್ರಿಸಿದ್ದು ಕೆತ್ತಿಸಿದ್ದು ಭೂತಾರಾಧನೆಗೆ ಮಾಡಿದ ಅವಮಾನ ಮಾತ್ರವಲ್ಲ ಹಿಂದೂ ಧರ್ಮಕ್ಕೆ ಮಾಡಿದ ಅವಮಾನ! ಹಿಂದೂ ದೇವ ದೇವತೆಗಳಿಗೆ ಅವಮಾನ ಆದರೆ ಸಿಡಿದೇಳುವ ಹಿಂದುಗಳು ಬೂತಾರಾಧನೆಗೆ ಆದ ಅವಮಾನವನ್ನೂ ತಾಳಲಾರರು.

ಆ ಉಬ್ಬು ಶಿಲ್ಪಗಳನ್ನು ಕಿತ್ತು ಹಾಕಬೇಕು ಎಂದು ನಾನು ಆಗ್ರಹಿಸುತ್ತೇನೆ.

ಬೂತಾರಾಧಕರೂ ಹಿಂದುಗಳು! ಅವರ ಬೂತಗಳನ್ನು ತುಳಿಯುವ ಪ್ರಯತ್ನ ಬಹಳ ಅಪಾಯಕಾರಿ!

ಬೂತಾರಾಧನೆಗೆ ಅವಮಾನ ಆದರೆ ಹಿಂದೂ ಧರ್ಮಕ್ಕೆ ಮಾಡುವ ಅವಮಾನ ಅಲ್ಲವೆ?

ಡಾ. ಇಂದಿರಾ ಹೆಗ್ಗಡೆ

ಲೇಖಕರು ಖ್ಯಾತ ತುಳು ಸಂಸ್ಕೃತಿ ವಿದ್ವಾಂಸರು.

ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ!
‘ಕಟ್ಟಿಂಗರು’ 2000ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಬಂದಿದ್ದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು. ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ…ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ  ನೋವಿನಿಂದ ಹೇಳುತ್ತಾರೆ.

ಸರಸ್ವತಿ, ಕಸ್ತೂರಿ ನಾನು ಅ ದಿನ  ಹೊರಟಿದ್ದು ಶಿರ್ವ ಕಟ್ಟಿಂಗೇರಿ ಎಂಬಲ್ಲಿಗೆ. ಉಡುಪಿಯ ಪ್ರೇಮಕ್ಕ ಎಂದಿನಂತೆ ಹೊಟ್ಟೆ ತುಂಬಾ ತಿನ್ನಿಸಿ ನಮ್ಮನ್ನು ಬೀಳ್ಕೊಟ್ಟರು. ಉಡುಪಿ ಪರಿಸರದಲ್ಲಿ ಯಾವ ಮನೆಗೆ ಅಧ್ಯಯನಕ್ಕಾಗಿ ಹೋಗಬಹುದು ಎಂಬ ಬಗ್ಗೆ ನಮಗೆ ಅರಿವು ನೀಡಿದ್ದು ಸರಸ್ವತಿ ಹೆಗ್ಗಡಿತಿ. ಆ ದಿನ ನಾವು ಶಿರ್ವ ಕಟ್ಟಿಂಗೇರ್ ಆಲಡೆಗೇ ನೇರವಾಗಿ ಹೋದೆವು. ದಂತ ಕಥೆಯ ಪ್ರಕಾರ ‘ಬಾಲು ಮಾಡೆದಿ’  ಹೆಸರಿನ ಮಹಿಳೆ ಇಲ್ಲಿಯ ಕಟ್ಟೆಯಲ್ಲಿ ಕುಳಿತು ಪಂಚಾಯಿತಿ ಮಾಡುತ್ತಿದ್ದರಂತೆ. ಬಾಲು ಮಾಡೆದಿಯ ವಂಶಕ್ಕೆ ಸೇರಿದವರು ಸರಸ್ವತಿ. ಬಾಲು ಮಾಡೆದಿಯ ಸುಳಿವು ಸಿಗಬಹುದೇನೋ ಎಂಬ ಕುತೂಹಲ ಆಕೆಗೆ.

“ಈರ್ ಇಂದ್ರಕ್ಯ ಅತ್ತೆ?”

ಈಗ ಇದು ಸಿರಿ ಆಲಡೆಯಾಗಿ ಉಳಿದಿಲ್ಲ. ಬ್ರಹ್ಮಸ್ಥಾನವಾಗಿ ಮಾತ್ರ ಇದೆ. ಆದರೆ ಸಿರಿ ಆಲಡೆಯ ಕುರುಹುಗಳು ಇವೆ. ನಾವು ಬ್ರಹ್ಮಸ್ಥಾನದ ಒಳಗೆ ಹೋದೆವು. ಅಲ್ಲಿ ಮಾಹಿತಿದಾರರು ಇರಲಿಲ್ಲ. ಮಾಹಿತಿದಾರರನ್ನು ಕೇಳಿದಾಗ ಬ್ರಹ್ಮಸ್ಥಾನದ ಹಿಂಭಾಗದ ಮನೆಯನ್ನು ತೋರಿಸಿದರು. ಅಲ್ಲಿ ಬೆರ್ಮೆರ ಉಯ್ಯಾಲೆ ಇದೆಯೆಂದರು. ಬ್ರಹ್ಮಸ್ಥಾನದ ಸೇವಾ ಕರ್ತರು!  ಬೆರ್ಮರ ಉಯ್ಯಾಲೆ ಅಲ್ಲಿದ್ದರೆ ಅದು ಆಲಡೆ ಮನೆ. ನಾವು ಆ ಮನೆಗೆ ಹೋದೆವು. ಒಂದು ಗದ್ದೆಯಾಚೆ ಆ ಮನೆ ಇತ್ತು. ಚಾವಡಿಯ ಮೆಟ್ಟಲ ಬಳಿ ಎದುರಾದ ಹರೆಯದ ಹೆಣ್ಣು ಮಗಳು, “ಈರ್ ಇಂದ್ರಕ್ಯ ಅತ್ತೆ?” (ನೀವು ಇಂದ್ರಕ್ಕ ಅಲ್ಲವೆ?) ಎಂದು ಮುಗುಳ್ನಗುತ್ತಾ ಕೇಳಿದಳು. ನಾನು ಅಚ್ಚರಿಯಿಂದ ಕಣ್ಣಗಲಿಸಿ ನಿಂತೆ.

ನಮ್ಮೂರ ಜಾತಿ ರಹಿತ ಬಾಂಧವ್ಯ ಹೀಗಿತ್ತು…

“ಇದು ನನ್ನ ಗಂಡನ ಮನೆ. ನೀವು ಫೋನ್ ಮಾಡಿ ಬಂದಿದ್ದರೆ ನಾನು ಹೆಬ್ಬಾರ್ (ಇಲ್ಲಿಯ ಈಗಿನ ಆಡಳಿತ ಮೊಕ್ತೇಸರ)  ಅವರನ್ನು ಇವತ್ತು ಇರಿ ಎನ್ನುತ್ತಿದ್ದೆ” ಎಂದ  ಆಕೆ ಅಷ್ಟಕ್ಕೆ ಮುಗಿಸದೆ, ಕೂಡಲೇ ದೂರವಾಣಿ ಕರೆ ಮಾಡಿ ಮುಗಿಸಿ, ʼಈಗ ಬರುತ್ತಾರಂತೆ’ ಎಂದಾಗ ನಾವು ಸಂತೋಷಪಟ್ಟೆವು. ಆಗಲೇ ಶರಬತ್ ಕುಡಿಸಿ ನಮ್ಮ ಅಸರ್ ತಣಿಸಿದರು.

ಲೋಟ ಕವಚಿ ಹಾಕಿಡಿ!

ಈಗ ಆಕೆಯ ಗಂಡನೂ ಬಂದರು. ಅವರಿಗೂ ಈ ಹುಡುಗಿಯ ಕರೆ ಹೋಗಿರಬೇಕು. ಅವರೂ ಸಡಗರಪಟ್ಟರು. ಆಕೆಗೆ ತವರೂರ ಮೋಹ! ಆದರೆ ಆಕೆಯ ಗಂಡ ಮತ್ತು ಅತ್ತೆಯ ಸಡಗರ? ನನಗೆ ನನ್ನ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಬ್ರಾಹ್ಮಣ ಕುಟುಂಬದ ಮನೆಗೆ ಮಲಗಲೆಂದು ಹೋಗಿ ಅವರು ಬೆಳಿಗ್ಗೆ ಚಾಪೆ ಒಗೆದು ಹಾಕಿ ಹೋಗಲು ಹೇಳಿದ್ದು ನೆನಪಾಯಿತು. ನಾನು ಅಂದು ದುರು ದುರು ಎಂದು ಆ ಕತ್ತಲೆಯಲ್ಲಿ ನನ್ನ ಹಳ್ಳಿ ಮನೆಯತ್ತ ಹೆಜ್ಜೆ ಹಾಕಿದ್ದೂ ನೆನಪಾಯಿತು. ನಾವು ಅವರ ಮನೆಯಲ್ಲಿ ಕುಡಿದ ನೀರಿನ ಲೋಟವನ್ನು ‘ಕವಚಿ’ ಹಾಕಿಡಿ ಎಂದುದು ನೆನಪಾಯಿತು. ಮತ್ತೊಂದು ಮನೆಯ ಬ್ರಾಹ್ಮಣರು, ‘ಅವರು ಕವಚಿ ಹಾಕಲು ಹೇಳಿದ್ದಾರ? ಅದು ಅವಲಕ್ಷಣ! ಎಂದುದೂ ನೆನಪಾಯಿತು. ಒಟ್ಟಿನಲ್ಲಿ ಈ ಮನೆಯ ಸತ್ಕಾರ ಹಳೆಯದನ್ನು ನೆನಪಿಸಿತು.

‘ಬೆರ್ಮರೆ ಉಜ್ಜಾಲ್’

ಮನೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ವಿಶಾಲ ಚಾವಡಿ ಇತ್ತು. ಆ ಚಾವಡಿಯಲ್ಲಿ ಒಂದು ತೂಗು ಉಯ್ಯಾಲೆ ಇತ್ತು. ಉಯ್ಯಾಲೆಯಲ್ಲಿ ಯಾವ ವಸ್ತುವೂ ಇರಲಿಲ್ಲ. ಆದರೆ ಅದನ್ನು ‘ಬೆರ್ಮರೆ ಉಜ್ಜಾಲ್’ ಎಂದು ಪರಿಚಯಿಸಿದರು. ಬೆರ್ಮೆರೆ ನಿರಾಕಾರ ರೂಪ ಇಲ್ಲಿಯೂ ಇತ್ತು. ಸಾಮಾನ್ಯವಾಗಿ ಬ್ರಾಹ್ಮಣರು ಆರಾಧನೆ, ಉಪಾಸನೆಯ ವಿಷಯದಲ್ಲಿ ಆಡಂಬರ ಮಾಡರು.

ಕಟ್ಟಿಂಗೇರಿ…

ಕಟ್ಟಿಂಗೇರಿ ಬ್ರಹ್ಮಸ್ಥಾನ ಸಿರಿ ಆಲಡೆ ಆಗಿದ್ದರೂ ಇತ್ತೀಚೆಗೆ ಸಿರಿ ಆಲಡೆಯ ರೀತಿ ನಡೆಯುತ್ತಿಲ್ಲ ಎಂದಳು ವಾಣಿ.

ಎಲ್ಲಾ ಬ್ರಹ್ಮಸ್ಥಾನಗಳು, ಸಿರಿ ಆಲಡೆಗಳು ಕಾಡಿನ ನಡುವೆಯೇ ಇದ್ದವುಗಳು. ಹಾಗೆಯೇ ಈ ಊರು ಕೂಡಾ ಕಾಡಾಗಿತ್ತು. ಈಗಲೂ ಹೆಚ್ಚಿನ ಭಾಗ ಕಾಡು ಆಗಿ ಉಳಿದಿದೆ. ಇಲ್ಲಿ ರಸ್ತೆ ಅಗಲೀಕರಣ ಆದಾಗ ಈ ಕಾಡಲ್ಲಿ ಬದುಕು ಕಟ್ಟಿರುವ ಜನರ ಅವಶೇಷಗಳು ದೊರಕಿವೆ ಎಂದವರು ಮೊಕ್ತೇಸರರಾದ ಹೆಬ್ಬಾರರು. ಆ ಜನರು ‘ಕಟ್ಟಿಂಗ’ ಎಂಬ ದಲಿತ ಜನಾಂಗದವರು ಎಂದರು. ಇವರ ಜನಾಂಗದ ಗುರಿಕಾರನನ್ನು ‘ಕಟ್ಟಿಂಗ’ ಎಂದು ಗುರುತಿಸುತ್ತಾರೆ ಎಂದು ವಿವರಿಸಿದರು. ಕಟ್ಟಿಂಗರ ಕೇರಿ ‘ಕಟ್ಟಿಂಗೇರಿ’ ಎಂದಾಗಿದೆ. ಕಟ್ಟಿಂಗರ ಆಲಡೆ ಕಟ್ಟಿಂಗೇರಿ ಆಲಡೆ ಎಂದರು. ಕಟ್ಟಿಂಗರ ಬಾಕುಡರು ಎಂದೂ ಗುರುತಿಸುತ್ತಾರಂತೆ.  ಇಲ್ಲಿ ‘ಕಟ್ಟಿಂಗ ಕೆರೆ’ ಕೂಡಾ ಇದೆಯೆಂದರು. ಅದು ಈಗ ದೇವಸ್ಥಾನದ ಕೆರೆ ಆಗಿದೆ. ಈ ದೇವರ ಕೆರೆಯೇ ಆರು ಎಕ್ರೆ ಇದೆಯಂತೆ. ಈ ಕೆರೆಯನ್ನು ಮರು ನಿರ್ಮಾಣ ಮಾಡುವಾಗ ಕಟ್ಟಿಂಗರ ಸಮುದಾಯಕ್ಕೆ ಸೇರಿರಬಹುದಾದ ತಾಮ್ರದ ಪಾಪೆ-ಮುಂತಾದ ಪಳೆಯುಳಿಕೆಗಳು ದೊರೆತಿವೆ ಎಂದವರು ಹೆಬ್ಬಾರರು.

ಕಟ್ಟಿಂಗರ ಮೂಲದ ಬನ

ಅಷ್ಟಮಂಗಳ ಪ್ರಶ್ನೆಯಲ್ಲಿ ಕೂಡಾ ಕಟ್ಟಿಂಗರ ವಿಷಯ ತೇಲಿ ಬಂತು ಎಂದರು ಹೆಬ್ಬಾರರು. “ಓ ಅಲ್ಲಿ ಕಟ್ಟಿಂಗರ ಬನ ಇದೆ” ಕೈಚಾಚಿ ಹೇಳಿದರು. ಅವರು ಕೈನೀಡಿ ತೋರಿಸಿದ ಬನ ಆಕೆಯ ಮನೆಯ ಹಿಂಭಾಗದ ಗದ್ದೆಯ ಹಿಂದೆ ಸ್ವಲ್ಪ ಎತ್ತರದ ಜಾಗದಲ್ಲಿತ್ತು. ಬನದ ಪೊದೆ, ಗಿಡ, ಮರ ಕಡಿಯಲಾಗಿದೆ. ಕೆಲವು ಮುರಕಲ್ಲುಗಳನ್ನು ಸಾಲಾಗಿ ಇಡಲಾಗಿದೆ. ಅಲ್ಲಿಗೇ ನಡೆದೆವು ನಾವು. “ ಇದು ಕಟ್ಟಿಂಗರ ಮೂಲದ ಬನ. ಈ ಕಲ ಅವರ ಮೂಲಸ್ಥಾನವಂತೆ. ಅವರೆಲ್ಲ ಇಲ್ಲಿಗೆ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಇಲ್ಲಿ ಜಾತ್ರೆ ನಡೆಯುವ ದಿನಗಳವು. ಹೀಗೆ ತುಳುನಾಡಿನ ನೆಲಮೂಲದ ಆಚರಣೆಯಂತೆ ಬೇಸಗೆಯಲ್ಲಿ ವರ್ಷಕ್ಕೆ ಒಮ್ಮೆ ಇವರ ಬನದಲ್ಲಿ ತನು ಸೇವೆ ಮುಗಿಸಿ ಮರಳುತ್ತಾರೆ.’

ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆ!

ನಮ್ಮ ಜೊತೆ ಇದ್ದ ಸ್ಥಳೀಯರು ಮಾತು ಮುಂದುವರಿಸಿದರು. 2000 ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಕಟ್ಟಿಂಗರು ಬಂದಿದ್ದರು. ಬಂದವರು ಇಲ್ಲೇ (ಬನದ ನೆಲದಲ್ಲಿ) ಮಾಮೂಲಿಯಂತೆ ತನು ಹುಯ್ಯಲು/ಎರೆಯಲು ಮುಂದಾದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಇದ್ದರು. ಆತ ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು ಎಂದಳು! ಇದು ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆಯಾಗಬಲ್ಲುದು. ಆ ದಬ್ಬಾಳಿಕೆಯ ಮಾಹಿತಿ ಪಡೆದ ನನಗೆ ನನ್ನ ಮನೆಯಿಂದ ನನ್ನನ್ನು ಹೊರಗೆ ತಳ್ಳಿದಂತೆ ನೋವಾಯಿತು. ನಾವು ಇಲ್ಲಿಗೆ ಹೋದುದು 2000ಕ್ಕೆ. ಆಗ ಜಾತ್ರೆ ಮುಗಿದಿತ್ತು.

ದಲಿತರ ಇಂತಹ ಮೂಲಸ್ಥಾನಗಳನ್ನು ನವೀಕರಣದ ಹೆಸರಲ್ಲಿ ಸಂಸ್ಕೃತೀಕರಣಗೊಳಿಸಿ ದಲಿತರನ್ನು ಕೆಳವರ್ಗದವರನ್ನು ಅವರದೇ ಮೂಲತಾನಗಳಿಂದ, ಅವರದೇ ಕುಲದೇವರುಗಳಿಂದ ದೂರೀಕರಿಸುವುದು ತುಳುನಾಡಿನಲ್ಲಿ ನನ್ನ ಅಧ್ಯಯನ ಕಂಡ ವಿಷಯ. ಉತ್ತರ ಭಾರತ ಮೂಲದವರ ಅಷ್ಟಮಂಗಳದವರ ಬೆಂಬಲವೂ ಇಲ್ಲಿ ಕಾಣಬರುತ್ತದೆ. ಆದರೂ ಇದು ಬ್ರಾಹ್ಮಣರ ಅಥವಾ ಅಷ್ಟಮಂಗಳದವರ ತಪ್ಪಲ್ಲ. ತುಳುನಾಡಿನ ಇತರ ಮೇಲ್ವರ್ಗದವರ ಪಾಲು ಇದರಲ್ಲಿ ಹೆಚ್ಚಿದೆ. ಜೀರ್ಣೋದ್ಧಾರಕ್ಕೆ ರೂಪು ರೇಷೆ ಹಾಕಿ ಅಷ್ಟಮಂಗಳದವರನ್ನು ಕರೆಸುವುದು ಹೆಚ್ಚಾಗಿ ಬಂಟರು.

ಈ ಕಟ್ಟಿಂಗರ ಮೂಲತಾನದ ಆಡಳಿತ, ಹೆಬ್ಬಾರ ಕುಟುಂಬಕ್ಕೆ ಹಸ್ತಾಂತರ ಆದುದು ಜೈನ ಕುಟುಂಬದಿಂದ. ಇಲ್ಲಿ ಇದ್ದ ಜೈನ ಕುಟುಂಬದವರು 1957ರಲ್ಲಿ ಆಸ್ತಿ, ಪಟೇಲ ಹುದ್ದೆ ಹಾಗೂ ಈ ಬ್ರಹ್ಮಸ್ತಾನದ ಒಡೆತನವನ್ನು ಈಗಿನ ಹೆಬ್ಬಾರ ಕುಟುಂಬಕ್ಕೆ ದಾನ ನೀಡಿದ್ದರಂತೆ. ಸಾಮಾನ್ಯವಾಗಿ ಜೈನರ ಕುಟುಂಬ ಸಂಸ್ಥೆ ಚಿಕ್ಕದಿದ್ದರೆ ಅಲ್ಲಿ ಮುಂದೆ ಸಂತಾನ ನಶಿಸುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಕ್ಷೇತ್ರಗಳನ್ನು ಬ್ರಾಹ್ಮಣರಿಗೆ ದಾನ ನೀಡಿ ಪೂಜಾ ವ್ಯವಸ್ಥೆಯನ್ನು ಮಾಡಲು ಕರಾರು ಮಾಡಿರುವುದು ನನ್ನ ಅಧ್ಯಯನ ಕಾಲದಲ್ಲಿ ದೊರಕಿದೆ.

ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ…

ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಸ್ಥಾನ ಎಂದು ಗುರುತಿಸಿಕೊಳ್ಳುವ ಈ ದೇವಸ್ಥಾನದಲ್ಲಿ ಚತುರ್ಮುಖ ಬ್ರಹ್ಮ ಶಿಲ್ಪ ಇದೆ. ತುಳುವರ ನಿರಾಕಾರ ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ. ಡಾ. ಗುರುರಾಜ ಭಟ್ಟರ ಸಂಗ್ರಹದಲ್ಲಿ ಈ ಶಿಲ್ಪದ ಚಿತ್ರ ಇದೆ. ನಾಲ್ಕು ತಲೆ ಒಂದು ಕಿರೀಟ, ನಾಲ್ಕು ಕೈಗಳ ಹತ್ತು ಅಡಿ ಎತ್ತರದ ಶಿಲ್ಪ ಎಂದು ಬರೆಯುತ್ತಾರೆ ಅವರು. ಈ ಶಿಲ್ಪದ ಮೇಲ್ಭಾಗದ ಒಂದೊಂದು ಕೈಗಳಲ್ಲಿ ಜಪಸರ ಮತ್ತು ಕುಂಡಲಗಳಿವೆ. ಇದು ಪದ್ಮಾಸನದಲ್ಲಿ ಇದ್ದು ಧ್ಯಾನ ಮುದ್ರೆಯಲ್ಲಿರುವ ವೇದ ಬ್ರಹ್ಮ ಎಂದು ಗುರುರಾಜ ಭಟ್ಟರು ಬರೆಯುತ್ತಾರೆ. ಪದ್ಮಾಸನ ಭಂಗಿಯಲ್ಲಿ ಇರುವ ಈ ಚತುರ್ಮುಖ ಶಿಲ್ಪದ ಪೀಠದಲ್ಲಿ ಕೋಳಿಯ ಚಿತ್ರ ಇದೆ. ಕೋಳಿ (ಮಯೂರ) ಕುಮಾರನ ಸಂಕೇತ. ಸಿರಿಯ ಮಗ ಕುಮಾರನ ಸಂಕೇತವೂ ಕೋಳಿ. ತುಳುವರ ಆರಾಧನಾ ಕ್ಷೇತ್ರಗಳಲ್ಲಿ ಕೋಳಿಯ ಪ್ರತಿಮೆಗಳಿವೆ.

ಸಿರಿಯ ಕುಟುಂಬ ಇಲ್ಲಿಲ್ಲ…

ಸಿರಿಯ ಕುಟುಂಬದ ಅಬ್ಬಗ, ದಾರಗ, ಸೊನ್ನೆ, ಗಿಂಡೆ ಮಾತ್ರ ಇಲ್ಲಿ ಇಲ್ಲ. ಆದರೆ ಕುಮಾರ, ನಂದಿಗೋನ, ರೆಕ್ಕೆಸಿರಿ, ಚವುಂಡಿ -ಹೀಗೆ ಪರಿವಾರ ದೈವಗಳಿವೆ. ಕುಮಾರ ಶಿಲ್ಪ ಇದ್ದರೂ ಕುಮಾರ ದರ್ಶನ ಇಲ್ಲ. ಆದರೆ ಕೆಲವು ಕಾಲದ ಹಿಂದೆ ಬ್ರಹ್ಮದರ್ಶನ ಇತ್ತು ಇತ್ತೀಚೆಗೆ ಅದೂ ನಿಂತಿದೆ. ಇಲ್ಲಿ ಹಿಂದೆ ದೆಯ್ಯೊಲೆ ನಲಿಕೆ ಆಗುತ್ತಿತ್ತು ಎನ್ನುತ್ತಾರೆ. ಹೀಗಾಗಿ ಇಲ್ಲಿ ಅತಿಕಾರೆ ಭತ್ತದ ಪ್ರಾತಿನಿಧಿಕ ಸಿರಿಗಳು ಇದ್ದಿರಬಹುದು. ದೆಯ್ಯೊಲೆ ನಲಿಕೆ ನಡೆಯುತ್ತಿದ್ದ ಗದ್ದೆಯನ್ನು ‘ಜಕ್ಕೆದ ಬಾಕ್ಯಾರ್’ ಎಂದು ಇಂದಿಗೂ ಕರೆಯಲಾಗುತ್ತದೆ. ‘ಜಕ್ಕೆದ ಬಳಿ’ ಅಂದರೆ  ಢಕ್ಕೆ ಬಳಿ. ದೆಯ್ಯೊಲಿ ನಲಿಕೆ ಆಗುತ್ತಿದ್ದಲ್ಲಿ ಬೀಜದ ಜೊತೆ ಬಂದಿರುವ (ಕುಂಭ) ಕಡ್ಯ ಸಿರಿಯ ಜಕ್ಕೆದ ನಲ್ಕೆ, ದೆಯ್ಯೊಲೆ ನಲ್ಕೆ ನಡೆಯುತ್ತಿದ್ದಿರಬೇಕು.

ಸಂಸ್ಕೃತೀಕರಣ ಮತ್ತು ಮೂಲ ಅಸ್ಮಿತೆ…

ಸಾಮಾನ್ಯವಾಗಿ ಪಾಳೆಯಗಾರರ ಆಲಡೆ ಕ್ಷೇತ್ರಗಳಲ್ಲಿ ಅಂಬೊಡಿ ನಡೆಯುವ ಗದ್ದೆ, ಅಂಕದ ಗದ್ದೆ ಇತ್ಯಾದಿ ಇರುತ್ತವೆ. ಇಲ್ಲಿಯೂ ಇತ್ತು. ಈಗ ಇಲ್ಲಿಯ ಅಂಕ ಅಂಬೊಡಿಯ ಆಚರಣೆ ನಿಂತಿದೆ. ಆದರೂ ‘ಅಂಕದ ಗದ್ದೆ, ಅಂಬೊಡಿ ಗದ್ದೆ, ಚೆಂಡಿನ ಗದ್ದೆ’ ಎಂಬ ಹೆಸರುಗಳು ನೆಲಮೂಲದ ಕ್ಷೇತ್ರವೊಂದು ವೈದಿಕೀಕರಣ ಗೊಂಡುದಕ್ಕೆ ಸಾಕ್ಷಿ ನೀಡುತ್ತವೆ. ಹೀಗೆ ತುಳು ಜನಪದರ ಉಪಾಸನಾ ಕಲಗಳು ಸಂಸ್ಕೃತೀಕರಣ ಗೊಂಡರೂ ತಮ್ಮ ಮೂಲ ಅಸ್ಮಿತೆಯ ಚಿತ್ರಣವನ್ನು ಕಳೆದುಕೊಳ್ಳುವುದಿಲ್ಲ.

ಸರಸ್ವತಿ ಹೆಗ್ಗಡಿತಿ ಇಲ್ಲಿಗೆ  ಬಂದುದರ ಕಾರಣ ನಾನು ಆರಂಭದಲ್ಲೇ ಹೇಳಿರುವೆನು.  ಅವರ ನಂಬಿಕೆಯ ‘ಬಾಲು ಮಾಡೆದಿ’ ಕಟ್ಟೆಯನ್ನು ವಾಣಿ ತೋರಿಸಿದಾಗ ಸರಸ್ವತಿಯ ಸಂತಸಕ್ಕೆ ಪಾರವೇ ಇಲ್ಲ. ಆಲಡೆಯ ಜಾತ್ರೆಯ ದಿನಗಳಲ್ಲಿ ಆ ಕಟ್ಟೆಯಲ್ಲಿ ದೀಪ ಹೊತ್ತಿಸಲಾಗುತ್ತದೆಯೆಂದರು. ಐತಿಹ್ಯ ತಲೆಮಾರಿನಿಂದ ತಲೆಮಾರಿಗೆ ಹೀಗೇ ಮುಂದುವರಿಯುತ್ತದೆ.

ಡಾ. ಇಂದಿರಾ ಹೆಗ್ಗಡೆ

ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಗಳಲ್ಲಿ ಸದಾ ಸಕ್ರಿಯರು.

ದೈವ ಪಾತ್ರಿ ಧರ್ಮ ಚಾವಡಿಯ ಒಳ ನುಗ್ಗಿದಾಗ…
ಸಂತೋಷ ಪ್ರದರ್ಶಿಸಿ, ನರ್ತಿಸುತ್ತಾ  ‘ಧರ್ಮ ಚಾವಡಿ’ ಯ ಮೆಟ್ಟಲು ಬಳಿ ಹೋಗಿ ಚಾವಡಿಯೊಳಗೆ ನುಗ್ಗಿಯೇ ಬಿಡ್ತು ರಾಜನ್ ದೈವ!. ಮುಂದೇನಾಯ್ತು ಓದಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರ ಕ್ಷೇತ್ರ ಕಾರ್ಯದ ಒಂದು ಅನುಭವ.

ನಾನು ಮತ್ತು ನನ್ನ ನಾದಿನಿ ಕಸ್ತೂರಿ ಈ ಸುತ್ತಲ್ಲಿ ಒಂದು ರಾಜ ಗುತ್ತು ಕಡೆ ಹೊರಟೆವು. ನಮ್ಮ ಮಾರುತಿ 800 ಕಾರು ಒಂದು ಗುಡ್ಡದ ಬದಿಯ ರಸ್ತೆಯಲ್ಲಿ ನಿಂತಿತು. ನಮ್ಮ ರಸ್ತೆಯ ಎಡ ಬದಿ ಗುಡ್ಡ. ಮುಂದೆ ಆಳ ಕಣಿವೆ. ಅದರಾಚೆ ಬಲಬದಿಯಲ್ಲಿ  ಗುಡ್ಡ. ಗುಡ್ಡ ಇಳಿದೆವು. ನೇತ್ರಾವತಿ ಬೈಲು ದಾಟಿ ಮತ್ತೆ ಹತ್ತಿದೆವು ಗುಡ್ಡ! ಗುಡ್ಡದ ತುದಿಯಲ್ಲಿ ಗುತ್ತು! ಕೆಳಗಡೆ ಬೈಲು ಗದ್ದೆಗಳು! ಇಡಿಯ ನೇತ್ರಾವತಿಯ ಬೈಲನ್ನು ಒಂದೇ ಕಣ್ಣಳತೆಯಲ್ಲಿ ನೋಡಬಹುದಿಲ್ಲಿ! ಎದುರು ಗುಡ್ಡೆಯಲ್ಲಿ ನಿಂತ ನಮ್ಮ ಕಾರು ಕೂಡಾ ಕಾಣುತ್ತಿತ್ತು!

ಕೆಳಗೆ ಬೈಲಲ್ಲಿ ಗದ್ದೆಗಳು. ಸುಂದರ ನೋಟ!  ನೇತ್ರಾವತಿ ಈ ಬೈಲು ಭೂಮಿಯಲ್ಲಿ ಒಮ್ಮೊಮ್ಮೆ ದೊಡ್ಡ ಸರೋವರ ಸೃಷ್ಟಿಸುತ್ತಾಳೆ. ಈ ಬೈಲು ಭಾಗದಲ್ಲಿ ನೆರೆತುಂಬಿದಾಗ ಇದೇ ಗುಡ್ಡದ ಮೇಲೆ ಅಭೂತಪೂರ್ವ ನೋಟ ಸೆರೆಯಾಗಬಹುದು. ಆದರೆ ರೈತರ ಗದ್ದೆ, ನೇಜಿ, ಹಸು, ಕರು, ಕೋಣ, ಗೊಬ್ಬರ -ಇತ್ಯಾದಿಗಳನ್ನು ರಕ್ಷಿಸುವುದು ಹೇಗೆ?

ಬೈಲನ್ನು ಅಸ್ವಾದಿಸುವುದನ್ನು ಬಿಟ್ಟು ಪ್ರೇಮಕ್ಕಳ ಶಾಖೆಗೆ ಹೋದೆವು. ಪರಂಪರೆಯ ಗುತ್ತುಗಳಲ್ಲಿ ಇರುವಂತೆ ಇಲ್ಲೂ ಹಿರಿ ತಲೆಮಾರುಗಳಲ್ಲಿ ಭಾಗವಾಗಿದ್ದ ಕೆಲವು ಶಾಖೆಗಳಿದ್ದುವು. ಬೂತೊಟ್ಯ ಇದ್ದ ಚಾವಡಿಯಲ್ಲಿ ಕಟ್ಟು ಕಟ್ಟಳೆ ನಿಷೇಧಗಳು ಹೆಚ್ಚು! ಅಂತಹ ನಿಷೇಧಕ್ಕೆ ಸಂಬಂಧ ಪಟ್ಟ ವಿಷಯವನ್ನು  ಹೇಳಿದವರು ಪ್ರೇಮಕ್ಯ.

ಇದು ಧರ್ಮನೇಮ ನಡೆಸಿದ ಮನೆ/ಗುತ್ತು.  ‘ನನಗೆ ಹಾಲು ಕುಡಿಸಿದ ಗುತ್ತು!’ ಎಂದು ಭೂತ/ದೈವಗಳು ಅನೇಕ ಕಡೆ ಹೊಗಳುತ್ತವೆ. ಧರ್ಮ ನೇಮ ಅಂದರೆ ಈ ರಾಜನ್ ದೈವಗಳಿಗೆ ಉಕ್ಕಿಬರುತ್ತದೆ ಉಲ್ಲಾಸ ಸಂತೋಷ. ಧರ್ಮನೇಮದ ಚಪ್ಪರದಡಿಯಲ್ಲಿ ಗಗ್ಗರದೆಚ್ಚಿಯ ಸೊಗಸು, ಪಂಬದೆಚ್ಚಿಯ ಗಾಂಭೀರ್ಯ ಆಗ ನೋಡಬೇಕು! ಸಂತೋಷವನ್ನು ಹೊರಹಾಕುವ ಅರಬಾಟದ ಪರಿಯೂ ಅಪರೂಪ! ಆ ಗಾಂಭೀರ್ಯಕ್ಕೆ ತಲೆಬಾಗಬೇಕು!

ಹೀಗೆ ಆ ಗುತ್ತಿನಲ್ಲಿಯೂ ಒಮ್ಮೆ ಧರ್ಮ ನೇಮ ನಡೆಯಿತು. ಅಂದಿನ ಧರ್ಮನೇಮದಲ್ಲೂ ಪಂಬದೆಚ್ಚಿಯ ನರ್ತನ, ಅರಬಾಟ ಗಾಂಭೀರ್ಯ ಇತ್ತು. ಇಂತಹ ಉಲ್ಲಾಸದ ಅರಬಾಟ ಹೆಚ್ಚಾದಷ್ಟು ಬೂತ/ದೈವಗಳು ಖುಷಿಪಟ್ಟಿವೆ ಎಂದು ತಿಳಿಯಲಾಗುತ್ತದೆ. ಬೂತ ಧರ್ಮ ನೇಮವನ್ನು ಮನತುಂಬಿ ಸ್ವೀಕರಿಸಿದೆ ಎಂದು ಆಗ ಭಾವಿಸಲಾಗತ್ತದೆ. ಅಂದೂ ‘ಪಂಬದೆಚ್ಚಿ’ ಯಲ್ಲಿ ಕುಮ್ಮುಚೆಟ್ಟು ನೆಗೆದು (ಹಾರಿ, ಹಾರಿ) ನರ್ತಿಸುತ್ತದೆ ಈ ಬೂತ! ಹೀಗೆ ಸಂತೋಷ ಪ್ರದರ್ಶಿಸಿ, ನರ್ತಿಸುತ್ತಾ  ‘ಧರ್ಮ ಚಾವಡಿ’ ಯ ಮೆಟ್ಟಲು ಬಳಿ ಹೋಗಿ ಚಾವಡಿಯೊಳಗೆ ನುಗ್ಗಿಯೇ ಬಿಡ್ತು ರಾಜನ್ ದೈವ! ಪಾತ್ರಿ!  ರೆಪ್ಪೆ ಮಿಟುಕಿಸುವುದರೊಳಗೆ ನಡೆದ ಈ ಕಣ್ಣ ಮುಂದಿನ ಘಟನೆ ಕಂಡು ನೆರೆದ ಸಭೆ, ‘ಹೋ…!’ ಎಂದು ಬೊಬ್ಬಿಟ್ಟಿತು- ಮನೆಗೆ ಬೆಂಕಿ ಬಿದ್ದಂತೆ! ಆ ಕ್ಷಣದವರೆಗೆ ಪಂಬದೆಚ್ಚಿಯ ಮುಂದೆ ಕೈಜೋಡಿಸಿ ‘ಶರಣು’ ಎಂದಿದ್ದ ಆ ಚಾವಡಿ ಕುಟುಂಬ ಸದಸ್ಯರ ‘ಪಿಸಿರು’ (ಸಿಟ್ಟು) ನೆತ್ತಿ ಹತ್ತಿತು! ಆಗ ಅವರ ಮುಂದೆ ಕಂಡಿದ್ದು ಪಂಬದ! ಬರೇ ಪಂಬದ! ಎಲ್ಲರ ಕಿರುಚಾಟ ಅಬ್ಬರಕ್ಕೆ ರಾಜನ್ ದೈವ ಹೆದರಿ ಓಡಿತ್ತು!  ಮಾಯೆಯೇ ಹೆದರಿ ಮಾಯೆಗೆ ಸರಿದಿತ್ತು! ಪಂಬದ ಈಗ ರಸ ಹೀರಿದ ಕಬ್ಬು!

ಪಂಬದ ಚಾವಡಿ ಹತ್ತಿ ಆಗಿದೆ. ಮುಂದೆನು!

ಆಗಿನ್ನೂ ಪುರೋಹಿತಶಾಹಿ ಬಂಟರ ಮೇಲೆ ಅಷ್ಟಾಗಿ ಪ್ರಭಾವ ಬೀರಿಲ್ಲ. ಹೀಗಾಗಿ ಬ್ರಾಹ್ಮಣ ಅರ್ಚಕರನ್ನು ಬೂಲ್ಯ ನೀಡಿ ಕರೆಯಲಿಲ್ಲ. ಅವರಿಂದ ಕಲಶ ಪರಿಹಾರ ಮಾಡಿಸಲಿಲ್ಲ.  ಬ್ರಾಹ್ಮಣ ಅರ್ಚಕರೂ ತುಳುವ ಕಟ್ಟು ಕಟ್ಟಲೆಯ ಮಧ್ಯೆ ಪ್ರವೇಶಿಸಲಿಲ್ಲ.ತುಳುವ ಕಟ್ಟು ಕಟ್ಟಳೆಯಂತೆ ಸತ್ಯ/ಧರ್ಮಚಾವಡಿಯ ಎಲ್ಲರನ್ನೂ -ಬೂತಗಳನ್ನು ಮನುಷ್ಯರನ್ನು ಮನೆಯಿಂದ ಹೊರಹಾಕಿದರು ಗಡಿ ಹಿಡಿದ ಗುರಿಕಾರರು. ಮನೆ ಖಾಲಿ ಮಾಡಿದರು. ಮನೆಯನ್ನು ಒಂದು ತಿಂಗಳು ಖಾಲಿ ಬಿಟ್ಟರು. ಒಂದು ತಿಂಗಳು ಧರ್ಮ ಚಾವಡಿಯ ಒಲೆ ಉರಿಯಲಿಲ್ಲ, ಹೊಗೆ ಏಳಲಿಲ್ಲ. ಒಂದು ತಿಂಗಳ ಬಳಿಕ ಮನೆಗೆ ಸುಣ್ಣ ಬಣ್ಣ ಮಾಡಿ ಮನೆ ಮಂದಿಯನ್ನೂ ಸಂಸಾರದ ನಡುವೆ ಇರಬೇಕಾಗಿದ್ದ ಬೂತಗಳನ್ನೂ ಮತ್ತೆ ಚಾವಡಿಗೆ ತಂದು ನಂಬಿದರು!

(ಕ್ಷೇತ್ರ ಕಾರ್ಯದಲ್ಲಿ ಕಂಡಿದ್ದು, ಕೇಳಿದ್ದು)

ಡಾ. ಇಂದಿರಾ ಹೆಗ್ಗಡೆ
ಹಿರಿಯ ಸಂಶೋಧಕರು, ಲೇಖಕರು.