Hanumanth Halageri – Peepal Media

ಗೂಗಿ ವಾ ಥಿಯೋಂಗ: ನಮ್ಮೊಳಗಿರಬೇಕಾದ ಎಚ್ಚರ
‘ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು,
ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ
ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.’
-ಗೂಗಿ ವಾ ಥಿಯೋಂಗಾ, ‘ಡಿಕಾಲೊನೈಸಿಂಗ್ ಮೈಂಡ್’

ಗೂಗಿ ವಾ ಥಿಯೋಂಗ ನಿನ್ನೆ (28.05.2025) ನಮ್ಮನ್ನಗಲಿದ್ದಾರೆ. ಕೀನ್ಯಾದ ಆದಿವಾಸಿ ಜನಾಂಗವೊಂದರಲ್ಲಿ ಜನಿಸಿ ಲೋಕ ಬೆರಗಾಗುವಂತೆ ಬದುಕಿದ ಗೂಗಿ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕವನ್ನು ತೊರೆದಿದ್ದಾರೆ. ಯುರೋಪಿನ ವಸಾಹತುಗಳಾಗಿದ್ದ ಪೂರ್ವ ಆಫ್ರಿಕಾದ ದೇಶಗಳ ಕಪ್ಪು ಜನರ ನೈಜ ಪ್ರತಿನಿಧಿಯಾಗಿ ಗೂಗಿ ನಿರಂತರವಾಗಿ ಬರೆದರು. ನಾನು ಬರೆದದ್ದು ಬರವಣಿಗಾಗಿ ಅಲ್ಲ, ಬರೆದದ್ದು ನನ್ನವರ ವಿಮೋಚನೆಗಾಗಿ. ನನ್ನ ಬರವಣಿಗೆಯಲ್ಲಿ ಸೌಂದರ್ಯವಿದೆಯೇ? ಅಲಂಕಾರಗಳಿವೆಯೇ? ಪ್ರತಿಮೆಗಳಿವೆಯೇ ಎಂಬುದು ನಿಮಗೆ ಬಿಟ್ಟ ವಿಚಾರ.

ಆದರೆ ನಾನು ಬರೆದದ್ದು ನನ್ನ ಜನರ ಅತ್ಮಪ್ರತ್ಯಯಗಳ ಉಳುವಿಕೆಗಾಗಿ. ಯುರೋಪಿನ ಭ್ರಮೆಗಳು ನಮ್ಮ ಜನಾಂಗಗಳನ್ನು ಆವರಿಸಿಕೊಂಡುಬಿಟ್ಟವೆ. ಯುರೋಪ್ ನಮ್ಮ ಜನಾಂಗಗಳ ಅಂತರಂಗಗಳನ್ನು ಹೊಕ್ಕು ಕೂತಿದೆ. ನಮ್ಮ ದೇಶಗಳು ವಸಾಹತುಶಾಹಿಯಿಂದ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದಿವೆ. ಆದರೆ ಮಾನಸಿಕವಾಗಿ ಇನ್ನೂ ಯುರೋಪಿನ ದಾಸ್ಯದಲ್ಲಿಯೇ ಬದುಕುತ್ತಿವೆ. ಇಂತಹ ಗುಲಾಮಗಿರಿಯಿಂದ ನನ್ನ ಜನ ವಿಮೋಚಿತರಾಗಬೇಕು ಎಂಬ ಕಾರಣಕ್ಕಾಗಿ ನಾನು ಬರೆದೆ’ ಎಂದು ಗೂಗಿ ತನ್ನ ಬರಹದ ಉದ್ದೇಶಗಳನ್ನು ಹೇಳಿಕೊಳ್ಳುತ್ತಲೇ ಬದುಕಿದರು.

ಹೀಗೆ ಬದುಕಿದ ಗೂಗಿ ಆಫ್ರಿಕಾದ ವಿವಿಧ ದೇಶಗಳ ಕಪ್ಪು ಜನರ ದಮನಿಗಳಲ್ಲಿ ಎಚ್ಚರಗಳ ದೀಪ ಹಚ್ಚಿದರು. ನೈಜೀರಿಯಾದ ಚಿನುವ ಅಚಿಬೆ, ವೋಲೆ ಸೋಯಿಂಕಾರಂತಹ ದೊಡ್ಡ ಲೇಖಕರಿಗೆ ಗೂಗಿ ಪ್ರೇರಣೆ ನೀಡಿದರು. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯನ್ನು ಆಫ್ರಿಕಾದ ಲೇಖಕರು ರಾಜಕೀಯಾರ್ಥಿಕ ನೆಲೆಯಲ್ಲಿ ಮುಖಾಮುಖಿಯಾದರು. ಕೆನ್ ಸರೋವಿವಾ, ಫ್ರಾಂಜ್ ಫ್ಯಾನನ್, ಅಲ್ಬರ್ಟ್ ಮೆಮ್ಮಿ, ಏಮಿ ಸಿಸಾರೆ ತರಹದ ಚಿಂತಕ/ಹೋರಾಟಗಾರರಿಗೆ ಗೂಗಿ ಒಂದು ಸೈದ್ಧಾಂತಿಕ ವೇದಿಕೆಯನ್ನು ನಿರ್ಮಾಣ ಮಾಡಿದರು.

ತಮ್ಮ Petals of Blood ಕೃತಿಯಲ್ಲಿ ಗೂಗಿ;ಅವರು ಬೈಬಲ್ ಹೊತ್ತುಕೊಂಡು ಬಂದರು, ಸೈನಿಕರು ಬಂದೂಕು ಹೊತ್ತು ಬಂದರು, ವಸಾಹತುಶಾಹಿಗಳು ಬಂಡವಾಳ ಹೂಡಲು ಬಂದರು. ಈ ಕ್ರಿಶ್ಚಿಯನ್ ಧರ್ಮ, ಬಂದೂಕು ಮತ್ತು ಬಂಡವಾಳಗಳೆಂಬ ತ್ರಿಮೂರ್ತಿಗಳು ಏಕತ್ರಗೊಂಡು ಆಫ್ರಿಕಾಕ್ಕೆ ಬಂದರು.’ ಎಂದು ಯುರೋಪಿನ ಸಾಮ್ರಾಜ್ಯಶಾಹಿಯನ್ನು ಗೂಗಿ ವಿಶ್ಲೇಷಿಸುತ್ತಾರೆ. ಧರ್ಮದ ಹರಡುವ ಭ್ರಮೆಗಳನ್ನು, ಯುದ್ಧಗಳ ಹಿಂಸೆಗಳನ್ನು ಮತ್ತು ಬಂಡವಾಳಶಾಹಿ ಆಧುನಿಕತೆಯು ನಮ್ಮ ಮುಂದೊಡ್ಡುವ ಪ್ರಲೋಭನೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸದಿದ್ದಲ್ಲಿ ನಮ್ಮ ವಿಮೋಚನೆ ಅಸಾಧ್ಯ ಎಂಬುದನ್ನು ಗೂಗಿ ಸಮಸ್ತ ತಳಸಮುದಾಯಗಳಿಗೆ ಅರುಹಿದರು. ಆದರೆ ಜಗತ್ತು ಇಂದು ಧಾರ್ಮಿಕ ಮತ್ತು ಜನಾಂಗೀಯ ಶ್ರೇಷ್ಟತೆಯ ಬೆನ್ನು ಬಿದ್ದಿದೆ. ಫ್ಯಾಸಿಸಂ ಮೈಮುರಿದು ಎದ್ದು ಕುಳಿತಿದೆ. ಸಾಮ್ರಾಜ್ಯಶಾಹಿ ತನ್ನ ಕಬಂಧಬಾಹುಗಳನ್ನು ಇನ್ನಿಲ್ಲದಂತೆ ವಿಸ್ತರಿಸುತ್ತಿದೆ.
ಗೂಗಿ ವಾ ಥಿಯೋಂಗಾ, ವೋಲೆ ಶೋಯಿಂಕಾ, ಅಚಿಬೆ, ಅಂಬೇಡ್ಕರ್ ರಂತಹ ಮಹಾನುಭಾವರು ಓದುವ ನಮ್ಮಗಳ ಆನಂದಕ್ಕೆ ಸೀಮಿತಗೊಳ್ಳಬಾರದು. ವರ್ತಮಾನವನ್ನು ಬದಲಿಸುವ ನಮ್ಮ ಶ್ರಮದಲ್ಲಿ ಅವರು ಪರ್ಯವಸಾನಗೊಳ್ಳಬೇಕು.

–ಎ.ಎಸ್‌.ಪ್ರಭಾಕರ
ಕನ್ನಡ ವಿವಿ, ಹಂಪಿ

ವಚನಗಳಿಗೆ ವೇದಗಳೇ ಮೂಲ ಆಕರ ಎಂದಿರುವ ಪೇಜಾವರ ಶ್ರೀಗಳಿಗೆ ಕೆಲವು ಪ್ರಶ್ನೆಗಳು
ಕಳೆದ ವಾರ ಮಂಗಳೂರಿನಲ್ಲಿ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ವಚನ ಸಾಹಿತ್ಯ ಸಮ್ಮೇಳನ ನಡೆಯಿತು. ಈಗಾಗಲೇ  RSS  ಬೆಲ್ಟ್‌ ಎಂದು ಗುರುತಿಸಿಕೊಂಡಿರುವ ಕರಾವಳಿ ಭಾಗದಲ್ಲಿ ಲಿಂಗಾಯತರ ವಚನ ಸಾಹಿತ್ಯ ಸಮ್ಮೇಳನ ನಡೆಸುವುದೇ? ಅಡ್ಡಿಯಿಲ್ಲ, ಬಸವಣ್ಣನವರ ವಚನ ಸಾಹಿತ್ಯ ಎಲ್ಲೆಡೆ ಪಸರಿಸುವ ಒಳ್ಳೆಯ ಕೆಲಸ ಎಂದು ಖುಷಿಯಿಂದ ಯಾರು ಮಾಡ್ತಿರೋದು ಅಂತ ನೋಡಿದರೆ ಈ ಸಮ್ಮೇಳನ, ಪ್ಲೆಕ್ಸ್‌ ಬ್ಯಾನರ್‌ಗಳೆಲ್ಲೆ ಸುತ್ತೂರು ಶ್ರೀಗಳೇ ಕಾಣಿಸಿಕೊಂಡಿದ್ದರು.

ಸುತ್ತೂರು ಶ್ರೀಗಳು ಈ ಹಿಂದೆ ಮೋದಿಯವರನ್ನುಮತ್ತು ಬಿಜಾಪುರದ ಸಿದ್ದೇಶ್ವರ ಶ್ರೀಗಳನ್ನು ಒಂದೇ ವೇದಿಕೆಗೆ ಹತ್ತಿಸಿದ್ದು ಮತ್ತು ಆ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳ ಮಾನ ಹರಾಜಿಗಿಟ್ಟಿದ್ದು ಎಲ್ಲವೂ ನೆನಪಾದವು. ಈ ಸಲ ಯಾರನ್ನು ಹರಾಜಿಗಿಡ್ತಾರೋ ಅನ್ನೋ ಅನುಮಾನ ಸಹಜವಾಗಿ ಕಾಡತೊಡಗಿತ್ತು. ನಂತರ ಈ ಕಾರ್ಯಕ್ರಮಲ್ಲಿ  ಪೇಜಾವರ ಶ್ರೀಗಳ ಭಾಷಣ ಕೇಳಿಸಿಕೊಂಡ ಮೇಲೆ ನನ್ನ ಅನುಮಾನ ನಿಜವೇ ಆಯಿತು. ಶ್ರೀ ಯತಿಗಳು ವೇದ ಆಗಮ, ಉಪನಿಷತ್ತುಗಳ ಶ್ಲೋಕಗಳನ್ನೇ ಬಳಸಿಕೊಂಡು ಕಾಪಿ ಮಾಡಿ ವಚನಗಳು ಸೃಷ್ಟಿಯಾಗಿವೆ ಅನ್ನುವ ರೀತಿಯಲ್ಲಿ ಮಾತನಾಡಿದರು. ಅಂದರೆ ಈ ಕಾರ್ಯಕ್ರಮದ ಮೂಲಕ ಸುತ್ತೂರು ಶ್ರೀಗಳು ಇಡೀ ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯದ ಮಾನವನ್ನೇ ಹರಾಜಿಗಿಟ್ಟಂತಾಯಿತು.

(ಈ ಬರಹದ ಕುರಿತು ವಿಡಿಯೋ ಲಿಂಕ್‌ ಇಲ್ಲಿದೆ https://www.youtube.com/watch?v=h5Ks-E1hssk)

ಪೇಜಾವರ ಶ್ರೀಗಳು ಈ ಹಿಂದೆ ತಮ್ಮ ಯಾವ ಭಾಷಣದಲ್ಲೂ ವಚನಕಾರರ ವಚನಗಳನ್ನು ಕೋಟ್‌ ಮಾಡಿದವರೇ ಅಲ್ಲ, ಒಟ್ಟಿನಲ್ಲಿ ಅವರ  ಶ್ರೀ ನಾಲಿಗೆಯು ವಚನಗಳನ್ನು ನುಡಿಯಿತಲ್ಲ, ಅಂತ ಒಂದಡೆ ಸಮಾಧಾನ ಅನಕೊಂಡರೆ, ಈ ವಚನಗಳೆಲ್ಲವಕ್ಕೂ ಸನಾತನ ಶಾಸ್ತ್ರಗಳೇ ಮೂಲ. ಅಲ್ಲಿಂದಲೇ ವಚನಕಾರರು ತುಗೊಂಡು ಸರಳವಾಗಿ ಕನ್ನಡಕ್ಕೆ ತಂದಿದ್ದಾರೆ ಎಂಬ ಹೇಳಿಕೆ ಅಚ್ಚರಿಯನ್ನುಂಟು ಮಾಡಿತು.

ನಮಗೆಲ್ಲ ಗೊತ್ತಿರುವಂತೆ ಬ್ರಾಹ್ಮಣ ಧರ್ಮದ ಮೌಡ್ಯಾಚಾರಗಳಿಂದ ಬೇಸತ್ತು  ಮತ್ತು ಮೌಡ್ಯಾಚಾರಗಳಿಂದಲೇ ಪುರೋಹಿತವರ್ಗ  ಜನ ಸಾಮಾನ್ಯರನ್ನು ಗೋಳು ಹೋಯ್ದುಕೊಳ್ಳುವುದನ್ನು ಕಂಡು ರೋಸಿ ಹೋಗಿ ಬಸವಣ್ಣಾದಿ ಶರಣರು ಬೇರೆ ದಾರಿಯನ್ನು ಕಂಡು ಕೊಂಡವರು. ಗುಡಿ ಗುಂಡಾರಗಳಲ್ಲಿ ಬಂಧಿಯಾಗಿದ್ದ ದೇವರನ್ನು ಜನ ಸಾಮಾನ್ಯರ ಅಂಗೈಯಲ್ಲಿಟ್ಟು ಇಷ್ಟಲಿಂಗ ತತ್ವವನ್ನು ಭೋದಿಸಿದರು. ಶರಣರ ನಂತರ ಬಂದ ದಾಸವರಣ್ಯರು ಕೂಡ ಬ್ರಾಹ್ಮಣ್ಯದ ಮಡಿ ಮೌಡ್ಯಗಳ ಕಡು ವಿರೋಧಿಗಳಾಗಿದ್ದರು. ಇದೇ ಉಡುಪಿ ಮಠದಲ್ಲಿ ದಾಸಶ್ರೇಷ್ಠ ಕನಕದಾಸರು ಶ್ರೀಕೃಷ್ಣದ ದರ್ಶನಕ್ಕೆ ಬಂದಾಗ ಈ ಬ್ರಾಹ್ಮಣ ಯತಿಗಳು ದೇವಸ್ಥಾನದ ಬಾಗಿಲನ್ನೇ ತೆರೆದಿರಲಿಲ್ಲ. ಈಗ ನೋಡಿದರೆ ಶರಣರು, ದಾಸರು ಬ್ರಾಹ್ಮಣರ ಶ್ಲೋಕಗಳಲ್ಲಿದ್ದುದನ್ನೇ ಕಾಪಿ ಮಾಡಿದ್ದಾರೆ ಅನ್ನೋ ಅರ್ಥದಲ್ಲಿ ಶ್ರೀಗಳು ಈ ಸಮ್ಮೇಳನದಲ್ಲಿ ಮಾತಾಡಿದ್ದಾರೆ.ಈ ವಚನಗಳಲ್ಲಿರುವ ಸಾರ ಮೊದಲೇ ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಇತ್ತು. ಅದನ್ನು ಕಾಲಾನಂತರದಲ್ಲಿ ವಚನಕಾರರು, ಶರಣರು ಸರಳ ಕನ್ನಡಕ್ಕೆ ತಂದು ಅಥವಾ ಅನುವಾದ ಮಾಡಿ ಅದನ್ನು ಮನೆಗೆ ಮನೆಗೆ ಮುಟ್ಟಿಸಿದರು ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.

ಹಾಗಾದರೆ ಶ್ರೀಗಳಿಗೆ ಕೆಲವು ಪ್ರಶ್ನೆಗಳು. ಆಯ್ತು ನೀವು ಹೇಳಿದಂತೆ ವಚನಗಳ ಸಾರ  ವೇದ, ಆಗಮ ಉಪನಿಷತ್ತು ಶಾಸ್ತ್ರಗಳಲ್ಲಿ ಇತ್ತು ಅಂತಲೇ ಬಾವಿಸೋಣ. ಆದರೆ, ಅವುಗಳನ್ಯಾಕೆ ನೀವು ಸಂಸ್ಕೃತದಲ್ಲಿ ಬರೆದಿಟ್ಟು ಜನ ಸಾಮಾನ್ಯರಿಂದ ದೂರ ಇಟ್ಟಿರಿ? ಅಲ್ಲದೇ ಈ ವೇದ ಉಪನಿಷತ್ತುಗಳನ್ನು ಕೇಳಿಸಿಕೊಂಡ ಶೂದ್ರನ ಕಿವಿಗೆ ಕಬ್ಬಿಣದ ಸೀಸವನ್ನು ಹುಯ್ಯಬೇಕು ಅಂತ ಕಾನೂನು ಮಾಡಿದ್ರಿ ಯತಿಗಳೇ?

ಇದೆಲ್ಲ ಇರಲಿ, ಈಗಲೂ ನಿಮಗೆ ನಿಜವಾಗಿಯೂ ವಚನಗಳ ಮೇಲೆ ಪ್ರೀತಿ ಇದ್ದರೆ, ಯಾಕೆ ವಚನಗಳಲ್ಲಿರುವ ಸಾರವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ನಿವೇ ಮಾಡಬಾರದು. ಇವತ್ತಿನ ಈ ಲಿಂಗಾಯತರ ಕಾರ್ಯಕ್ರಮ ಹೊರತುಪಡಿಸಿ ಬೇರೆ ಯಾವುದಾದರೂ ಕಾರ್ಯಕ್ರಮದಲ್ಲಿ ನೀವು ವಚನಗಳನ್ನು ಕೋಟ್‌ ಮಾಡಿ ಮಾತಾಡಿದ್ದಿರಾ ಯತಿಗಳೇ? ಬರಿ ನೀವು ಅರ್ಥವಾಗದ ಕಬ್ಬಿಣದ ಕಡಲೇಯಿಂತಿರುವ, ನೀವು ಮಾತ್ರ ಉಚ್ಚರಿಸಬಹುದಾದ ಸಂಸ್ಕೃತ ಶ್ಲೋಕಗಳನ್ನೇ ಯಾಕೆ ಹೇಳುತ್ತಿರಿ? ಹೋಗಲಿ, ಈ ಕನ್ನಡದ ನೆಲದಲ್ಲಿ ನಿಮ್ಮೀ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕನ್ನಡದಲ್ಲೇ ಹೇಳಬೇಕೆಂದು ನಿಮಗೆ ಯಾವತ್ತು ಅನ್ನಿಸಿಲ್ಲವೇ?

ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಶ್ರೀಗಳು ಏನು ಜಾಣತನ ಮಾಡಿದರು ಎಂದರೆ,  ತಮಗೆ ಬೇಕಾದ ಒಂದೆರಡು ವಚನಗಳನ್ನು ಓದಿಕೊಂಡು ಬಂದು ಪದೇ ಪದೇ ಅವುಗಳನ್ನೇ ಈ ಕಾರ್ಯಕ್ರಮದಲ್ಲಿ ಕೋಟ್‌ ಮಾಡಿದರು. ಹಿಂದೂ ಧರ್ಮದ ಮೌಡ್ಯಗಳನ್ನು, ಕಂದಾಚಾರಗಳನ್ನು ವಿರೋಧಿಸುವ, ದೇವರು, ದೇವಸ್ತಾನ,  ಧರ್ಮದ ಹೆಸರಲ್ಲಿ ಬ್ರಾಹ್ಮಣರು ನಡೆಸುತ್ತಿದ್ದ ಶೋಷಣೆಗಳನ್ನು ವಿರೋಧಿಸಿ ಬರೆದಿರುವ ಎಷ್ಟೊಂದು ವಚನಗಳಿವೆ, ಅವುಗಳನ್ನು ಅವರು ಕೋಟ್‌ ಮಾಡಲು ಹೋಗಲಿಲ್ಲ.  ಶ್ರೀಗಳು ಶರಣರ ವಚನಗಳನ್ನು ನೀವು ಪೂರ್ತಿಯಾಗಿ ಅಧ್ಯಯನ, ಅದರಲ್ಲಿ ಸಾರವನ್ನು ಅಳವಡಿಸಿಕೊಂಡಿದ್ದರೆ.ಲಿಂಗಾಯತರ ಕಾರ್ಯಕ್ರಮದಲ್ಲಿ ಮನುಷ್ಯ ದೇವರ ಅನುಗ್ರಹವನ್ನು ಪಡೆಯಲೇಬೇಕು, ಮನುಷ್ಯ ದೇವರ ಆರಾಧನೆಯನ್ನು ಮಾಡಲೇಬೇಕು ಅಂತ ಹೇಳುತ್ತಿರಲಿಲ್ಲ.  ಬಸವಣ್ಣ ಗುಡಿ ಸಂಸ್ಕೃತಿಯ ಇಂಥವರಿಗೆ ಏನು ಹೇಳಿದ್ದಾ ಗೊತ್ತಾ?, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂದಿದ್ದಾರೆ.

ದೇವರ ಆರಾಧನೆಯಲ್ಲಿ ಸಮಯ ಕಳೆಯುವುದಕ್ಕಿಂತ ʼಕಾಯಕ ಕೈಲಾಸ, ಎಲ್ಲರೂ ದುಡಿದು ಉಣ್ಣುವ ಮೂಲಕ ನಿಮ್ಮ ಕಾಯಕಗಳಲ್ಲಿಯೇ ದೇವರನ್ನು ಕಾಣಿ ಎಂದಿದ್ದರು ಬಸವಣ್ಣ.

ಮಾದಾರ ಧೂಳಯ್ಯ, ನುಲಿಯ ಚಂದಯ್ಯನವರಂಥ ಶೂದ್ರ ಶರಣರಂತೂ ಬಸವಣ್ಣನವರ ಇಷ್ಟಲಿಂಗ ತಾತ್ವಿಕತೆಯನ್ನು ಮೀರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದರು. ಮಾದಾರ ಧೂಳಯ್ಯನಿಗೆ ಒಮ್ಮೆ ಇಷ್ಟ ಲಿಂಗ ದೇವರೇ ಪ್ರತ್ಯಕ್ಷವಾಗಿ ವರ ನೀಡುತ್ತೇನೆ ಎಂದಿದ್ದಾಗ ನಾನು. ಕಾಯಕ ಮಾಡುತ್ತಿದ್ದೇನೆ. ನೀನು ಡಿಸ್ಟರ್ಬ ಮಾಡಬೇಡ, ವರ ನೀಡುವುದಾದರೆ ಬೇರೆಯವರಿಗೆ ನೀಡು ಎಂದಿದ್ದ. ಇನ್ನು ನುಲಿಯ ಚಂದಯ್ಯ ಕಾಡಿನಲ್ಲಿ ಕೆಲಸ ಮಾಡುವಾಗ, ಆತನ ಕೊರಳಲ್ಲಿದ್ದ ಇಷ್ಟಲಿಂಗ್‌ ಕೆಳಗೆ ಜಾರಿ ಬಿದ್ದಾಗ ನೀನು ಬಿದ್ದರೆ ಬೀಳು ನನಗೆ ನಿನಗಿಂತಲೂ ಕಾಯಕ ಮುಖ್ಯ ಎಂದಿದ್ದ.

ಇನ್ನು ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಹೋಗುವವರನ್ನು ಕುರಿತು,

`ಕಟ್ಟಿದ ಲಿಂಗವ ಬಿಟ್ಟು

ಬೆಟ್ಟದ ಲಿಂಗಕ್ಕೆ ಹೋಗಿ

ಹೊಟ್ಟೆಯಡಿಯಾಗಿ ಬೀಳುವ

ಲೊಟ್ಟೆ ಮೂಗನ ಕಂಡರೆ

ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು

ಲಟಲಟನೆ ಹೊಡೆ ಎಂದ ಅಭಿಗರ ಚೌಡಯ್ಯ

` ಹಿಂದೆಲ್ಲಾ ವೃತ್ತಿಯಿಂದಲೇ ಅವರ ಜಾತಿಯನ್ನು ಗುರುತಿಸಿ ಕೀಳಾಗಿ ಕಾಣುವ ಪ್ರವೃತ್ತಿ ಇತ್ತು. ಶರಣರು ಅದಕ್ಕೆ `ಕಾಯಕ’ವೆಂದು ಕರೆದು `ಕಾಯಕವೇ ಕೈಲಾಸ’ವೆಂದು ಗೌರವಿಸಿ ಜಾತಿಯನ್ನು ತೊಳೆದು ಸ್ವಚ್ಚಗೊಳಿಸಿದ್ದರು. ಅಲ್ಲಮನನ್ನು ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಕೂರಿಸಿದ ಬಸವಣ್ಣ ಹಾಗೂ ಇತರ ಶರಣರು ಅಸ್ಪೃಶ್ಯನೊಬ್ಬನನ್ನು ಗೌರವಿಸಿ ಮೇಲುಜಾತಿ ಡಾಂಭಿಕರನ್ನು ಕೆಣಕಿ ಅಣಕಿಸಿದ್ದಾರಲ್ಲವೆ? `ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ.  ಕುಲವೊಂದೇ ತನ್ನತಾನರಿದವಂಗೆ’ ಎನ್ನುವ ಬಸವಣ್ಣನಿಗೆಲ್ಲಿಯ ಬ್ರಾಹ್ಮಣ್ಯದ ದಾಕ್ಷಿಣ್ಯ ಇತ್ತು ಹೇಳಿ?

`ಕಾಸಿ ಕಮ್ಮೋರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ವೇದವನೋದಿ ಬ್ರಾಹ್ಮಣನಾದ, ಲಿಂಗಸ್ಥಲನರಿದವನೇ ಕುಲಜನೆಂಬೋ’ ಎಂಬ ಬಸವಣ್ಣನ ವಿಚಾರವಾದದೆದುರು ಬ್ರಾಹ್ಮಣ್ಯ ಅರ್ಥ ಕಳೆದುಕೊಂಡು ಕಳಾಹೀನವಾಗತೊಡಗಿತ್ತು. ಇಂಥವರೆಲ್ಲರ ಬದುಕನ್ನು, ವಚನಗಳನ್ನು ಈ ಶ್ರೀಗಳು ಅರ್ಥ ಮಾಡಿಕೊಂಡಿದ್ದರೆ ದೇವರ ಅನುಗ್ರಹಕ್ಕಾಗಿ ಯಾವಾಗಲೂ ಆರಾಧನೆ ಮಾಡಬೇಕು ಎಂಬ ಹುಸಿಯ ಮಾತುಗಳನ್ನು ಹೇಳುತ್ತಿರಲಿಲ್ಲ  ಅಲ್ಲವೇ ಶ್ರೀಗಳೇ?

ಈ ಹಿಂದೆ ಹಿರಿಯ ಪೇಜಾವರ ಶ್ರೀಗಳು ಲಿಂಗಾಯತರು ಕೂಡ ಹಿಂದೂಗಳೇ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅವರ ಹೇಳಿಕೆಯಿಂದ ಲಿಂಗಾಯತರೆಲ್ಲ ಒಗ್ಗಟ್ಟಾಗಿ  ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ಆಗ್ರಹಿಸಿ ದೊಡ್ಡ ಹೋರಾಟವನ್ನೆ ಮಾಡಿದ್ದು ಈಗ ಇತಿಹಾಸ. ಲಿಂಗಾಯತ ಧರ್ಮ ಹೇಗೆ ವೈದಿಕ ಧರ್ಮಕ್ಕಿಂತ ಭಿನ್ನ ಮತ್ತು ವೈದಿಕ ಧರ್ಮದಲ್ಲಿನ ಅಸಮಾನತೆಯನ್ನು ಪ್ರತಿರೋಧಿಸಿಯೇ ಹೇಗೆ ಲಿಂಗಾಯತ ಧರ್ಮ ಹುಟ್ಟಿಕೊಂಡಿತು ಎನ್ನುವುದಕ್ಕೆ ಗೂಗಲ್‌ ಮಾಡಿದರೆ  ಸಾಕಷ್ಟು ಲೇಖನಗಳು, ವರದಿಗಳು ಸಿಗುತ್ತವೆ. ಈ ಶ್ರೀಗಳು ಎಟಲಿಸ್ಟ್‌ ಈ ವರದಿಗಳನ್ನು ಓದಿಕೊಂಡು ಬಂದಿದ್ದರೂ ಸಾಕಿತ್ತು.  ವಚನಕಾರರು ವೈದಿಕರ ಶಾಸ್ತ್ರಗಳನ್ನೆ ಕಾಪಿ ಮಾಡಿದ್ದಾರೆ ಎಂಬಂಥ  ಅಸಂಬದ್ಧ ಹೇಳಿಕೆಗಳನ್ನು ಹೇಳದೇ ಬಚಾವಾಗುತ್ತಿದ್ದರು.

ವೈದಿಕ ಧರ್ಮದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಮಾನವೀಯ ಮಡಿ ಮೈಲಿಗೆಗಳನ್ನು ವಿರೋಧಿಸಿ ನಮ್ಮ ದೇಶದಲ್ಲಿ ಮೊದಲು ಹುಟ್ಟಿದ್ದು ಬೌದ್ಧಧರ್ಮ. ನಂತರ ಹುಟ್ಟಿ ಬಂದ ಜೈನಧರ್ಮ, ಚಾರ್ವಾಕ ಧರ್ಮ. ವೀರಶೈವ ಧರ್ಮಗಳು ಕೂಡ ವೈದಿಕ ಧರ್ಮದಲ್ಲಿನ  ಪೊಳ್ಳುತನ ಡಾಂಭಿಕತೆ, ಜಾತೀಯತೆಯನ್ನು ವಿರೋದಿಸುವ ನಿಲುವನ್ನೇ ಪ್ರದರ್ಶಿಸಿದ್ದವು. ಇದು ಸಕಲ ವಿದ್ಯಾಪಾರಂಗತರಾದ ಯತಿಗಳಿಗೆ ಗೊತ್ತಿರದ ವಿಷಯವೇನಲ್ಲ, ಆದರೂ ಸತ್ಯವನ್ನು ಮರೆಮಾಚಿ ಶರಣರ, ದಾಸರ ತತ್ವಗಳನ್ನು ಹಿಂದೂ ಶಾಸ್ತ್ರಗಳ ನಕಲು ಎಂದು ಕರೆಯುವ ಬುದ್ದಿವಂತಿಕೆ ಏಕೋ ತಿಳಿಯುತ್ತಿಲ್ಲ.

ಹುಟ್ಟಿನಿಂದ ಬ್ರಾಹ್ಮಣನಾದ ಬಸವಣ್ಣ ತನ್ನ ಜನರ ಜಾತೀಯತೆಯಿಂದ ಬೇಸತ್ತು, ಅಸ್ಪೃಶ್ಯ ಆಚರಣೆಗೆ ಅಸಹ್ಯಿಸಿ ಜನಿವಾರ ಕಿತ್ತೆಸೆಯುತ್ತಾನೆ. ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು `ಇಂವಾ ನಮ್ಮವ ಇಂವಾ ನಮ್ಮವ’ ಎಂದು ತಬ್ಬಿ ಮೈದಡವಿ ಮುಟ್ಟಿ ಸಂತೈಸಿದ ಸಂತನಾಗುತ್ತಾನೆ. `ಅನುಭವ ಮಂಟಪ’ವನ್ನೇ ಕಟ್ಟಿ ಅದರಲ್ಲಿ ದಲಿತರು ಶೂದ್ರರು ಮಹಿಳೆಯರನ್ನು ಒಗ್ಗೂಡಿಸಿ. ಇತರ ಶರಣ ಶರಣೆಯರಿಂದಲೂ ಖಡಕ್ಕಾದ ವಚನಗಳನ್ನು ಬರೆಸಿದ ಮಹಾನುಭಾವ ಈ ಬಸವಣ್ಣ.

`ವೇದಕ್ಕೆ ಬರೆಯ ಕಟ್ಟುವೆ / ಶಾಸ್ತ್ರಕ್ಕೆ ನಿಗಳವನಿಕ್ಕುವೆ / ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯ’  ಎಂದಿದ್ದಾನೆ ಬಸವಣ್ಣ. ಅಣ್ಣನ ಈ ಒಂದೇ ಒಂದು ವಚನ ಓದಿದ್ದರೆ ಶ್ರೀಗಳು ವಚನಗಳಿಗೆ ಶಾಸ್ತ್ರಗಳೇ  ಮೂಲ ಎನ್ನುವ ಅಪದ್ಧ ಹೇಳಿಕೆಯನ್ನು ಹೇಳುತ್ತಿರಲಿಲ್ಲ. ಅಷ್ಟೇಕೆ  ` ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ’ ಎಂದಿರುವ ಅಕ್ಕಮಹಾದೇವಿಯ ವಚನವನ್ನುಈ ಶ್ರೀಗಳು ಓದಿದ್ದರೂ ಸಾಕಿತ್ತು.

ಇನ್ನು ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ, ಪೇಜಾವರ ಶ್ರೀಗಳ ಈ ವಚನ ವಿರೋಧಿ ಹೇಳಿಕೆಯನ್ನು  ರಾಜ್ಯದಲ್ಲಿ ಯಾರೂ ಅಷ್ಟಾಗಿ ವಿರೋದಿಸಿದ್ದು ಕಂಡಬರಲಿಲ್ಲ.ಕಲ್ಬುರ್ಗಿಯ ಶರಣರಾದ ಈ ವಿಶ್ವಾರಾಧ್ಯ ಸತ್ಯಂಪೇಟೆಯವರನ್ನು ಹೊರತುಪಡಿಸಿದರೆ ಬೇರೆ ಯಾವ ಲಿಂಗಾಯತರು ಯತಿಗಳ ಹೇಳಿಕೆಯನ್ನು ಖಂಡಿಸಿದ್ದು ನನಗೆ ಬೇರೆಲ್ಲೂ ಕಾಣಲಿಲ್ಲ.  ಲಿಂಗಾಯತ  ಪ್ರತ್ಯೇಕ  ಧರ್ಮ ಹೋರಾಟದಲ್ಲಿ ಅಷ್ಟೊಂದೆಲ್ಲ ದೊಡ್ಡ ಹೋರಾಟವನ್ನು ಮಾಡಿದ್ದ ಲಿಂಗಾಯತರು, ವಚನಗಳಿಗೆ ಸನಾತನದ ಧರ್ಮದ ಶಾಸ್ತ್ರಗಳೇ ಮೂಲ ಎಂದ  ಪೇಜಾವರ ಶ್ರೀಗಳ ಹೇಳಿಕೆಗೆ ಯಾಕೆ ವಿರೋಧ ಕಂಡು ಬಂದಿಲ್ಲವೋ ಗೊತ್ತಿಲ್ಲ. ಇನ್ನು ಮೇಲಾದರೂ ಲಿಂಗಾಯತರು ಪಕ್ಷಬೇದವನ್ನು ಮರೆತು ಯತಿಗಳಿಗೆ ಮತ್ತು ಸುತ್ತೂರು ಶ್ರೀಗಳಿಗೆ ಸರಿಯಾದ ಅರ್ಥ ಮಾಡಿಸುವ ಕೆಲಸ ಮಾಡಿಸಬೇಕಿದೆ.

ಈ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ, ಜಾತ್ಯತೀತತೆ ಸ್ತ್ರೀಸಮಾನತೆಯನ್ನು ನಿಜ ಅರ್ಥದಲ್ಲಿ ತರಬೇಕೆಂದರೆ  ಅದಕ್ಕೆ  ಶರಣರ ತತ್ವಗಳೆ ಪಾಲನೆ ಒಂದೇ ದಾರಿ ಎನ್ನುವುದನ್ನು ನಾವು ಈಗಲಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ಹನಮಂತ ಹಾಲಿಗೇರಿ

ವಿನೇಶ್‌ ಪೋಗಟ್‌: ಈ ದಿಟ್ಟ ಹುಡುಗಿಯನ್ನು ಭಾರತದ ಬೀದಿಗಳಲ್ಲಿ ಅಕ್ಷರಶಃ ಎಳೆದಾಡಲಾಗಿತ್ತು!
ಹನುಮಂತ ಹಾಲಿಗೇರಿ

“ನನ್ನ ಸಹ ಆಟಗಾರ್ತಿಯರ, ನನ್ನ ಗೆಳತಿಯರ ಮೇಲೆ ಕೆಲವು ತಿಂಗಳ  ಹಿಂದೆಯಷ್ಟೇ ನಮ್ಮವರಿಂದಲೇ ಲೈಂಗಿಕ ದೌರ್ಜನ್ಯ  ನಡಿತಲ್ಲ,  ಆಗ ಆದ ಅವಮಾನದ ಕೆಂಡ ಇನ್ನೂ ನನ್ನ ಎದೆಯಲ್ಲಿ ಹಾಗೆ ಉರಿಯುತ್ತಿದೆ. ಆಗ ನನಗೆ ಅನಿಸಿದ್ದು ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಒಲಂಪಿಕ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ನಾವು ಮಹಿಳಾ ಕುಸ್ತಿ ಪಟುಗಳು ಅಂದ್ರೆ ಎಂಥ ತಾಕತ್ತು ಅನ್ನುವುದನ್ನುತೋರಿಸ್ತಿನಿ ನೋಡ್ತಿರಿ” ಎಂದಿದ್ದಳು ಈ ಹುಡುಗಿ ವಿನೇಶ್‌ ಪೊಗಟ್.‌

ಹೀಗಂತ ಟಿವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಟೋಕಿಯೋದಲ್ಲಿ ಒಲಂಪಿಕ್‌ನಲ್ಲಿ ಕಂಚು ಗೆದ್ದು  ತಂದಿರುವ ಹೆಮ್ಮೆಯ ಕ್ರೀಡಾಪಟು ಭಜರಂಗ್‌ ಪೋನಿಯಾ. ಅಂಥ ದಿಟ್ಟ ಹುಡುಗಿಯ ಚಿನ್ನದ ಕನಸು ಈಗ ಭಗ್ನಗೊಂಡಿದೆ. ಈ ನೆಲದ ಮಗಳು ಚಿನ್ನ ತಂದೆ ತರುತ್ತಾಳೆ ಎಂದು ಕಾಯ್ತು ಕುಳಿತಿದ್ದ ಭಾರತೀಯರೆಲ್ಲರಿಗೂ ಸಹ ಈಗ ನಿರಾಶೆ ಮಡುವುಗಟ್ಟಿದೆ. ಕೇವಲ ತೂಕದಲ್ಲಿ 100 ಗ್ರಾಮ ವ್ಯತ್ಯಾಸವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವಿನೇಶ್‌ ಪೊಗಟ್‌ ಅವರನ್ನು ಆಟದಿಂದ ಹೊರಗಿಟ್ಟಿರುವುದನ್ನು ಅನ್ಯಾಯ ಏನ್ನಬೇಕೋ, ವಿಧಿ ವಿಪರ್ಯಾಸವೆನ್ನಬೇಕೋ ಗೊತ್ತಾಗುತ್ತಿಲ್ಲ.

ಇತ್ತೀಚೆಗಷ್ಟೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಸಂಸ್ಥೆ ವಿರುದ್ಧದ ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ವಾರಗಟ್ಟಲೇ ಪ್ರತಿಭಟನೆ ನಡೆಸಿದ್ದರು. ಆಗ  ಯಥಾಪ್ರಕಾರ ನಮ್ಮ ದೇಶದ ಕ್ಷುಲ್ಲಕ ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಪೊಲೀಸರು ಈ ವಿನೇಶ್‌ ಪೋಗಟ್‌ಪ್ರತಿಭಟನಾ ನಿರತ ಕ್ರೀಡಾಪಟುಗಳನ್ನು ದರದರನೆ ಎಳೆದೊಯ್ದಿದ್ದರು. ಆದರೆ, ಆಗ ಅವರ ಬೆಂಬಲಕ್ಕೆ ಯಾವ ಸರ್ಕಾರವೂ ಬರಲಿಲ್ಲ. ಕುಸ್ತಿ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸದ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ತಮ್ಮ ಅಧಿಕಾರ ಬಳಸಿ ಕುಸ್ತಿಪಟುಗಳ ಧರಣಿಯನ್ನು ಬಲವಂತವಾಗಿ ಅಂತ್ಯಗೊಳಿಸಿದ್ದರು. ನ್ಯಾಯ ಸಿಗದೇ ಇದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಪದಕಗಳನ್ನೇ ಕುಸ್ತಿಪಟುಗಳು ನದಿಗೆ ಬಿಸಾಡಿದ್ದ ಹೀನಾಯ ಘಟನೆಗೆ ಅಂದು ದೆಹಲಿ ಸಾಕ್ಷಿಯಾಗಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಒಳಗೊಳಗೆ ಉರಿಯುತ್ತ ಕುಳಿತಿದ್ದ ವಿನೇಶ್‌ಗೆ ಅಂದೇ ನಮ್ಮಗಳ ಗೆಲುವೊಂದೆ ಇದಕ್ಕೆಲ್ಲ ಉತ್ತರ. ನಾನು ಗೆದ್ದು ತೋರಿಸುತ್ತೇನೆ. ಇವರ ದೌರ್ಜನ್ಯಕ್ಕೆ ಅದೇ ನನ್ನ ಉತ್ತರ ಎಂದು ಸಂಕಲ್ಪ ಮಾಡಿದ್ದರು. ಆ ಮೂಲಕ ಅವರು, ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ವಿಭಿನ್ನ ಮಾರ್ಗ ತುಳಿಯಲು ಹಟ ತೊಟ್ಟಿದ್ದರು.

ವಿಶ್ವಚಾಂಪಿಯನ್‌ ಆಗಲು ಹೊರಟಿರುವ ಈ ಹುಡುಗಿಯನ್ನು ಅವಳ ದೇಶದಲ್ಲಿ ಕಾಲಿನಿಂದ ಒದೆಯಲಾಗಿತ್ತು, ಈ ಹುಡುಗಿಯನ್ನು ತನ್ನ ದೇಶದ ಬೀದಿಗಳಲ್ಲಿ ಎಳೆದಾಡಲಾಗಿತ್ತು. ಈ ಹುಡುಗಿ ಈಗ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆ ವಿರುದ್ಧ ಹೋರಾಡಿ ಆಕೆ ಸೋತಿದ್ದಳು.” ಎಂದು ವಿನೇಶ್‌ ಫೋಗಾಟ್‌ ಅವರ ಭಾವ ಕೂಡ ಆಗಿರುವ ಬಜರಂಗ್ ಪುನಿಯಾ ಟ್ವೀಟ್‌ ಮಾಡಿದ್ದಾರೆ.  ಅಷ್ಟೇ ಅಲ್ಲದೇ ಇಎಸ್‌ಪಿಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಜರಂಗ್ ಪುನಿಯಾ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಾಟ್‌ ಭಾರತೀಯ ಯುವ ಮಹಿಳಾ ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಪದಕ ಗೆಲ್ಲಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

“ನಾನು ಕುಸ್ತಿಪಟುಗಳ ಭವಿಷ್ಯ ಸಲುವಾಗಿ ಹೋರಾಡುತ್ತಿದ್ದೇನೆ. ಇದು ನನಗೋಸ್ಕರ ಅಲ್ಲ. ನನ್ನ ವೃತ್ತಿಬದುಕು ಮುಗಿದಿದೆ. ಇದು ನನ್ನ ಕೊನೆಯ ಒಲಿಂಪಿಕ್ಸ್‌. ನಾನು ಯುವ ಮಹಿಳಾ ಕುಸ್ತಿಪಟುಗಳ ಸಲುವಾಗಿ ಹೋರಾಡಬೇಕು. ದೇಶದಲ್ಲಿ ಯುವ ಮಹಿಳಾ ಕುಸ್ತಿಪಟುಗಳು ಯಾವುದೇ ಭಯ ಅಂಜಿಕೆ ಇಲ್ಲದೆ ಬಂದು ಕುಸ್ತಿ ಅಖಾಡದಲ್ಲಿ ಸುರಕ್ಷಿತವಾಗಿ ಹೋರಾಡುವಂತ್ತಾಗಬೇಕು. ಈ ಉದ್ದೇಶ ಸಲುವಾಗಿಯೇ ನಾನು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈಗ ಇಲ್ಲಿದ್ದೇನೆ ಎಂದು ವಿನೇಶ್ ನನ್ನ ಬಳಿ ಹೇಳಿದ್ದರು,” ಎಂದು ಬಜರಂಗ್ ಪೂನಿಯಾ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ.

ವಿನೇಶ್‌ ಅವರ ಹಟ ಇನ್ನೇನು ಫಲಪ್ರದವಾಗುವುದರಲ್ಲಿತ್ತು. ಆ ಕ್ಷಣಕ್ಕಾಗಿ ಇಡೀ ಭಾರತ ಕಾಯ್ದು ಕುಳಿತಿತ್ತು.  ನಿನ್ನೆಯಷ್ಟೆ ಸೆಮಿಫೈನಲ್‌ನಲ್ಲಿ ವಿಜಯ ಸಾಧಿಸಿ ಐತಿಹಾಸಿಕ  ಬೆಳ್ಳಿ ಪದಕ ಖಾತರಿಪಡಿಸಿದ್ದ ವಿನೇಶ್‌ ಇವತ್ತು ಬೆಳಗ್ಗೆ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಚಿನ್ನದ ಪದಕವನ್ನು ಜಸ್ಟ್‌ ಮಿಸ್‌ ಮಾಡಿಕೊಂಡಿರುವುದು ಭಾರತೀಯರೆಲ್ಲರ ಕಣ್ಣಲ್ಲಿ ನಿರಾಸೆ ಕವಿಯುವಂತಿದೆ ಮಾಡಿದೆ.

“ನಿನ್ನೆಯಷ್ಟೇ ನಡೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಗೆದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್, 4 ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಕುಸ್ತಿಪಟುಗಳನ್ನು ಸೋಲಿಸಿ ವಿಜಯದ ನಗೆ ಬೀರಿದ್ದರು. ಆ ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ವಿಶ್ವಚಾಂಪಿಯನ್‌ ಎದುರು ಜಯ ದಾಖಲಿಸಿದರು.

ಇಂದು,ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್‌ ಕುಸ್ತಿಯ ಫೈನಲ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಸಲುವಾಗಿ ವಿನೇಶ್‌ ಫೋಗಾಟ್‌ ಅಮೆರಿಕದ ರೆಸ್ಲರ್‌ ಸಾರಾ ಹಿಲ್‌ಡೆಬ್ರಾಂಟ್‌ ಎದುರು ಪೈಪೋಟಿ ನಡೆಸಲಿದ್ದರು. ಗೆದ್ದರೆ ಚಿನ್ನ ಸೋತರೆ ಬೆಳ್ಳಿ ಪದಕಕ್ಕೆ ಕೊರಳೊಡ್ಡವವರಿದ್ದರು. ಆದರೆ ತೂಕದಲ್ಲಾದ ಸಣ್ಣ ಎಡವಟ್ಟಿನಿಂದ ಈ ದಿಟ್ಟ ಹುಡುಗಿಯ ಕನಸು ಭಗ್ನಗೊಂಡಿರುವುದು ಭಾರತೀಯ ಕ್ರೀಡಾಜಗತ್ತಿಗಾದ ದೊಡ್ಡ ಗಾಯವೇ ಸರಿ.

ಹನುಮಂತ ಹಾಲಿಗೇರಿ

ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ನಿಂದ ನೈತಿಕತೆ ಪ್ರಶ್ನೆ ಸಭೆ: ಡಿಕೆಶಿ
ಬೆಂಗಳೂರು: “ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ನಾಳೆಯಿಂದ ಬಿಜೆಪಿ ನಾಯಕರ ನೈತಿಕತೆ ಪ್ರಶ್ನಿಸುವ ಸಭೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾಲದ ಅಕ್ರಮ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಗುರುವಾರ ರಾತ್ರಿ ತುರ್ತು ಮಾಧ್ಯಮಗೋಷ್ಟಿ ನಡೆಸಿದ ಶಿವಕುಮಾರ್ ಅವರು, “ನಾಳೆ (ಶುಕ್ರವಾರ) ಬಿಡದಿಯಲ್ಲಿ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಹಗರಣ, ಅನ್ಯಾಯಗಳ ಬಗ್ಗೆ ಪ್ರಶ್ನೆ ಮಾಡಿ ಜನರಿಗೆ ತಿಳಿಸುತ್ತೇವೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು” ಎಂದು ತಿಳಿಸಿದರು.

“ಬಿಜೆಪಿ ನಾಯಕರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಒಂದೊಂದು ದಿನ ಮುಂಚಿತವಾಗಿ ಈ ಕಾರ್ಯಕ್ರಮ ಮಾಡುತ್ತೇವೆ. ಆಗಸ್ಟ್ 2ರಂದು ಬಿಡದಿ, 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ರಂದು ಮಂಡ್ಯದಲ್ಲಿ, 9ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

“ಇದೇ ವೇಳೆ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾವ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿಸುತ್ತೇವೆ. ಪ್ರತಿನಿತ್ಯ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶಾಸಕರು ಹಾಗು ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಇದು ಎನ್ ಡಿಎ ಅಲ್ಲ, ಬಿಜೆಪಿ ಪಾದಯಾತ್ರೆ:

“ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಘೋಷಣೆ ಮಾಡಿದ್ದಾರೆ. ಇಷ್ಟುದಿನ ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರು ಈ ವಿಚಾರದಲ್ಲಿ ಅತಂತ್ರವಾಗಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಜೆಡಿಎಸ್ ಕಾರ್ಯಕಾರಿ ಸಮಿತಿ ಮುಖ್ಯಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದನ್ನೂ ಗಮನಿಸಿದ್ದೇನೆ. ಬಿಜೆಪಿಯವರು ಕೂಡ ಗೊಂದಲದಲ್ಲಿದ್ದರು.

ಈಗ ಎರಡೂ ಪಕ್ಷಗಳ ನಾಯಕರು ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕೂ ಮುನ್ನ ನಾವು ಅವರನ್ನು ಪ್ರಶ್ನೆ ಮಾಡಬೇಕಿದೆ. ಈ ಪಾದಯಾತ್ರೆಯನ್ನು ಎನ್ ಡಿಎ ಮೈತ್ರಿಕೂಟ ಘೋಷಣೆ ಮಾಡಿಲ್ಲ. ಕೇವಲ ಬಿಜೆಪಿ ಮಾತ್ರ ಘೋಷಣೆ ಮಾಡಿದೆ.

ಪಾದಯಾತ್ರೆ ಸಂಬಂಧ ಪೊಲೀಸರು ಹಾಗೂ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ಬಿಜೆಪಿಯ ಪಾದಯಾತ್ರೆ ಎಂದು ಹೇಳಲಾಗಿದೆ ಹೊರತು, ಜೆಡಿಎಸ್ ಪಕ್ಷದ ಚಿಹ್ನೆ ಸಹ ಇಲ್ಲ.

ಪಾದಯಾತ್ರೆಗೆ ಅಪಸ್ವರ ಎತ್ತಿದ್ದ ಜೆಡಿಎಸ್ ನಾಯಕರು ಒಪ್ಪಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಾವಿಸಿದ್ದೆ” ಎಂದರು.

ಪಾದಯಾತ್ರೆ ಸ್ವಾಗತಿಸುತ್ತೇನೆ:

“ಅವರ ಪಾದಯಾತ್ರೆಗೆ ನಮ್ಮ ವತಿಯಿಂದ ಯಾವುದೇ ಅಡ್ಡಿ ಮಾಡುವುದಿಲ್ಲ. ಬೆಂಗಳೂರಿನಲ್ಲಿ ನಗರದ ಒಳಗೆ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಅವರ ಪಾದಯಾತ್ರೆ ಬೇಡ ಎಂದು ನಾನೇಕೆ ಹೇಳಲಿ. ನಾನು ಅವರ ಪಾದಯಾತ್ರೆ ಸ್ವಾಗತಿಸುತ್ತೇವೆ. ನಮ್ಮನ್ನು ನೋಡಿ ಅವರು ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಅವರ ವಿಚಾರ ತಿಳಿಸಲಿ, ನಮ್ಮ ವಿಚಾರ ನಾವು ತಿಳಿಸುತ್ತೇವೆ” ಎಂದು ತಿಳಿಸಿದರು.

ನೀವು ಪಾದಯಾತ್ರೆ ಮಾಡುತ್ತೀರಾ ಎಂದು ಕೇಳಿದಾಗ, “ನಾವು ಪಾದಯಾತ್ರೆ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರರಂತೆ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಅವರ ಕಾಲದಲ್ಲಿನ ಅಕ್ರಮಗಳ ಬಗ್ಗೆ, ರಾಜ್ಯಕ್ಕೆ ಮಾಡಿರುವ ಅನ್ಯಾಯ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರಾವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ನಮ್ಮ ಬಳಿಯೂ ದಾಖಲೆಗಳಿವೆ. ದಾಖಲೆ ಸಮೇತ ನಾವು ಪ್ರಶ್ನೆ ಮಾಡುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ಜತೆ ಜೆಡಿಎಸ್ ವಿಲೀನ ಮಾಡಿಕೊಂಡಿರಬೇಕು:

ಪಾದಯಾತ್ರೆ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದವರು ಈಗ ಒಟ್ಟಿಗೆ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರ ಮಾತು, ವಿಚಾರ ನೋಡಿದ್ದೇನೆ. ಬಿಜೆಪಿ ಜತೆ ಜೆಡಿಎಸ್ ಅನ್ನು ವಿಲೀನ ಮಾಡಿಕೊಂಡಿರಬೇಕು. ಹೀಗಾಗಿ ಬಿಜೆಪಿ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಪಕ್ಷ ಉಳಿಸಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ:

ಯಾವುದಾದರೂ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಅವರು ಕೊನೆ ಗಳಿಗೆಯಲ್ಲಿ ಪಾದಯಾತ್ರೆಗೆ ಸಮ್ಮತಿ ಸೂಚಿಸಿದ್ದಾರಾ ಎಂದು ಕೇಳಿದಾಗ, “ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಜೆಡಿಎಸ್ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಬಹುದು. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಪಾದಯಾತ್ರೆ ವಿರೋಧಿಸುತ್ತಿದ್ದಾರೆ ಎಂದು ಭಾವಿಸಿದ್ದೆ. ಅದು ಅವರ ಇಚ್ಛೆ. ಅವರು ಒಟ್ಟಿಗೆಯಾದರೂ ಮಾಡಲಿ, ವಿಲೀನವಾದರೂ ಮಾಡಿಕೊಳ್ಳಲಿ. ನಮ್ಮ ಅಭ್ಯಂತರವಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಭಾಗವಹಿಸುತ್ತಾರಾ ಎಂದು ಕೇಳಿದಾಗ, “ಕೆಲವು ಸಚಿವರಿಗೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಜವಾಬ್ದಾರಿ ನೀಡಲಾಗಿದೆ. ಅವರ ಹೊರತಾಗಿ ಬೇರೆ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾವ ದಿನ ಯಾರು ಭಾಗವಹಿಸುತ್ತಾರೆ ಎಂಬ ಮಾಹಿತಿ ಶೀಘ್ರ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತಾ, ಪ್ರಶ್ನೆಗಳನ್ನು ಕೇಳುತ್ತೇವೆ, ದಾಖಲೆ ಬಿಡುಗಡೆ ಮಾಡುತ್ತೇವೆ” ಎಂದು ತಿಳಿಸಿದರು.

ಬಿಜೆಪಿ ಕಾಲದ ಅಕ್ರಮಗಳ ಬಗ್ಗೆ ತನಿಖೆ ಮಾಡಬಹುದಲ್ಲವೇ ಎಂದು ಕೇಳಿದಾಗ, “ನಾವು ತನಿಖೆ ಮಾಡುತ್ತಿದ್ದೇವೆ. ಸತ್ಯಾಂಶ ಜನರಿಗೆ ತಿಳಿಯಬೇಕು. ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ವೀರಯ್ಯ ಅವರು ಅಕ್ರಮದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಅವರು ಇಂತಹ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಯಾರಿಗೂ ಗೊತ್ತಿರಲಿಲ್ಲ. ನಾವು ತನಿಖೆ ಚುರುಕು ಮಾಡಿದ ಕಾರಣ ಈಗ ಜೈಲು ಸೇರಿದ್ದಾರೆ” ಎಂದು ತಿಳಿಸಿದರು.

ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಲಿದೆಯೇ ಅಥವಾ ಬೆದರಿಕೆ ತಂತ್ರವೇ ಎಂದು ಕೇಳಿದಾಗ, “ನಾವು ಯಾರನ್ನೂ ಬೆದರಿಸುವ ಅಗತ್ಯವಿಲ್ಲ” ಎಂದು ತಿಳಿಸಿದರು

ಸೋರುತಿಹುದು ನೂತನ ಸಂಸತ್ ಭವನ: ವೀಡಿಯೊ ಹಂಚಿಕೊಂಡ ಕಾಂಗ್ರೆಸ್ ಸಂಸದ
ಹೊಸದಿಲ್ಲಿ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ನೂತನ ಸಂಸತ್ ಭವನದ ಆವರಣದೊಳಗೆ ನೀರು ಸೋರಿಕೆಯಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಬೇಕು ಎಂಬ ನೊಟೀಸ್‌ ಅನ್ನು ಕಾಂಗ್ರೆಸ್ ಸಂಸದ ಮಾನಿಕಮ್ ಠಾಗೋರ್ ಸಲ್ಲಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಸದನದ ಆವರಣದಲ್ಲಿ ಮಳೆ ನೀರು ಸೋರುತ್ತಿರುವ ಕುರಿತು ಠಾಗೋರ್‌ ಅವರು ವಿಡಿಯೊವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರ ಸತ್ಯಾಸತ್ಯತೆಯನ್ನ ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದೂ hindustantimes.com ವರದಿ ತಿಳಿಸಿದೆ.

ನೂತನ ಸಂಸತ್ ಭವನಕ್ಕೆ ರಾಷ್ಟ್ರಪತಿಗಳು ಪ್ರವೇಶಿಸುವ ಪಥ ಸೇರಿದಂತೆ ಸಂಸತ್ತಿನ ಆವರಣದೊಳಗೆ ನೀರು ಸೋರಿಕೆಯಾಗುತ್ತಿರುವ ವಿಷಯವನ್ನು ತಾನು ಪ್ರಸ್ತಾಪಿಸಲು ಬಯಸಿರುವುದಾಗಿ ಠಾಗೋರ್ ತಮ್ಮ ನೋಟಿಸ್ ನಲ್ಲಿ ಹೇಳಿದ್ದಾರೆ.

ನೂತನ ಸಂಸತ್ ಭವನ ನಿರ್ಮಾಣಗೊಂಡು ಇನ್ನು ಒಂದು ವರ್ಷವೂ ಮುಗಿದಿಲ್ಲ.  ಕೇವಲ ಒಂದು ವರ್ಷ ಮುಕ್ತಾಯಗೊಳ್ಳುವುದರೊಳಗಾಗಿ ಸಂಸತ್ ಭವನದ ಕಟ್ಟಡದ ನಿರ್ಮಾಣದಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಟ್ಟಡದ ಆಳವಾದ ಪರೀಕ್ಷೆಗಾಗಿ ಎಲ್ಲ ಪಕ್ಷಗಳ ಸಂಸದರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಸೋರಿಕೆಯ ಕಾರಣಗಳತ್ತ ಗಮನ ಹರಿಸಿ, ವಿನ್ಯಾಸ ಮತ್ತು ಬಳಕೆಯಾಗಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡುವ ಜೊತೆಗೆ ಅಗತ್ಯ ದುರಸ್ತಿ ಕ್ರಮಗಳನ್ನು ಶಿಫಾರಸು ಮಾಡುವಂತಾಗಬೇಕು ಎಂದು ಅವರು ಆಶಿಸಿದ್ದಾರೆ. ಠಾಗೋರ್‌ ಹಂಚಿಕೊಂಡಿರುವ ವಿಡಿಯೋ ಲಿಂಕ್‌ ಇಲ್ಲಿದೆ.

ಪಶ್ಚಿಮ ಬಂಗಾಳ: ಸಿಕ್ಕಿಂ ಮಾಜಿ ಸಚಿವರ ಮೃತದೇಹ ನಾಲೆಯೊಂದರಲ್ಲಿ ಪತ್ತೆ
ಗ್ಯಾಂಗ್ಟಕ್: ಸಿಕ್ಕಿಂನ ಮಾಜಿ ಸಚಿವ ಆರ್‌.ಸಿ.ಪೌಡ್ಯಾಲ್ ಮೃತದೇಹವು ಪಶ್ಚಿಮ ಬಂಗಾಳದ ಸಿಲಿಗುರಿ ಬಳಿಯ ನಾಲೆಯೊಂದರಲ್ಲಿ ಪತ್ತೆಯಾಗಿದೆ ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಫುಲ್ಬರಿಯಲ್ಲಿನ ತೀಸ್ತಾ ನಾಲೆಯಲ್ಲಿ 80 ವರ್ಷ ವಯಸ್ಸಿನ ಪೌಡ್ಯಾಲ್ ಅವರ ಮೃತದೇಹ ತೇಲುತ್ತಿತ್ತು ಎಂದು ಅವರು ಹೇಳಿದ್ದಾರೆ. ಪೌಡ್ಯಾಲ್‌ ಅವರು ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದರು ಎಂದು ಬುಧವಾರ ಪೊಲೀಸರು ತಿಳಿಸಿವೆ.

ಜುಲೈ 7ರಂದು ಹಿರಿಯ ರಾಜಕಾರಣಿಯಾದ ಪೌಡ್ಯಾಲ್ ಪಾಕ್ಯಾಂಗ್ ಜಿಲ್ಲೆಯ ತಮ್ಮ ಸ್ವಗ್ರಾಮವಾದ ಛೋಟಾ ಸಿಂಗ್ಟಮ್‌ನಿಂದ ನಾಪತ್ತೆಯಾದ ನಂತರ, ಅವರ ಶೋಧಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಮೇಲ್ನೋಟಕ್ಕೆ ನದಿಯ ಮೇಲ್ಭಾಗದಿಂದ ಅವರ ಮೃತದೇಹವು ತೀಸ್ತಾ ನದಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅವರು ತೊಟ್ಟಿದ್ದ ಕೈಗಡಿಯಾರ ಹಾಗೂ ಬಟ್ಟೆಗಳ ಮೂಲಕ ಅವರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್.ಸಿ.ಪೌಡ್ಯಾಲ್ ಅವರು ಮೊದಲ ಸಿಕ್ಕಿಂ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದರು. ನಂತರ, ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಸಾವಿನ ಕುರಿತು ತನಿಖೆ ಮುಂದುವರೆದಿರುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.

ವಾಲ್ಮಿಕಿ ನಿಗಮದ ಅಕ್ರಮl ಇಡಿ ದಾಳಿ ಅಗತ್ಯ ಇರಲಿಲ್ಲ: ಡಿಕೆಶಿ
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ತನಿಖಾ ಸಂಸ್ಥೆ ಎಸ್‌ಐಟಿ ತನಿಖೆ ನಡೆಸುತ್ತಿರುವಾಗ ಇಡಿ ದಾಳಿ ನಡೆಸಿರುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯ ಪಟ್ಟಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಶಿವಕುಮಾರ್ ಅವರು,ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ವಿರುದ್ಧ ಈಡಿಗೆ ಯಾರೂ ದೂರು ನೀಡಿಲ್ಲ. ಆದರೂ ದಾಳಿ ನಡೆದಿದೆ ಎಂದರು.

ಈ ದಾಳಿಯ ಅಗತ್ಯವೇ ಇರಲಿಲ್ಲ. ಅಲ್ಲದೆ, ಈಡಿಯವರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಮೇಲೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಏನೂ ಗೊತ್ತಿಲ್ಲ. ಈ ಪ್ರಕರಣದಲ್ಲಿ ವಂಚನೆ ನಡೆದಿರುವುದು ಸತ್ಯ. ಈ ಪ್ರಕರಣದ ಸಾಕಷ್ಟು ವಿವರಗಳು ನಮ್ಮ ಬಳಿ ಇವೆ. ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸುತ್ತಿದೆ. ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳುತ್ತಿದ್ದೇವೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರವಾದರೆ ಸಿಬಿಐಗೆ ತನಿಖೆ ಮಾಡುವ ಅಧಿಕಾರವಿದೆ. ಈ ಎಲ್ಲಾ ತನಿಖೆ ಮುಕ್ತಾಯದ ನಂತರ ಈ ತನಿಖೆಗೆ ಸರಿಯಾಗಿ ನಡೆದಿದೆಯೇ ಎಂದು ಈಡಿ ಪರಾಮರ್ಶನ ನಡೆಸಿ ಆಮೇಲೆ ಪ್ರವೇಶ ಪಡೆಯಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.

“ಎಸ್ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದೆ. ತನಿಖೆಗೆ ಅಡಚಣೆಯಾಗಬಾರದು ಎಂಬ ಉದ್ದೇಶಕ್ಕೆ ನಾಗೇಂದ್ರ ಅವರು ಮಂತ್ರಿ ಸ್ಥಾನಕ್ಕೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ನಾವು ಕೂಡ ಕ್ರಾಸ್ ಚೆಕ್ ಮಾಡಿದ್ದೇವೆ. ಸಚಿವರು ಯಾವುದೇ ಸಹಿ ಮಾಡಿಲ್ಲ ಮತ್ತು ಅವರ ಹಸ್ತಕ್ಷೇಪವಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಈ ಮಧ್ಯೆ ಈಡಿ ದಾಳಿ ಯಾಕೆ ಮಾಡಬೇಕಿತ್ತು ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಕುರಿತು ಆತ್ಮಾವಲೋಕನ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶನೆ ನಡೆಸುತ್ತಿದ್ದೇವೆ. ಕಳೆದ ಸಲ 1 ಸ್ಥಾನ ಹೊಂದಿದ್ದವರು ಈಗ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ನಾವು 14-15 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಇಂದು ಪರಾಮರ್ಶನೆ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ನಾನು ಕೂಡ ನಾಲ್ಕು ವಿಭಾಗಗಳ ವರದಿ ಕಳುಹಿಸಿಕೊಡಲಿದ್ದೇನೆ ಎಂದರು.

11 ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ: ವಿವಿಧೆಡೆ 56 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯ ಸರಕಾರದ ಇಬ್ಬರು ನಿವೃತ್ತ ಎಂಜಿನಿಯರ್ ಗಳು ಸೇರಿದಂತೆ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಇಂದು ಮುಂಜಾನೆಯಿಂದ ಲೋಕಾಯುಕ್ತ ದಾಳಿ ಮುಂದುವರೆದಿದೆ.

ಭ್ರಷ್ಟಾಚಾರ ಎಸಗಿದ ಆರೋಪ ಕೇಳಿಬಂದ ಅಧಿಕಾರಿಗಳ ಮನೆಗಳ ಮೇಲೆ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಕೋಲಾರದ ತಹಶೀಲ್ದಾರ್ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್ ಎಂಜಿನಿಯರ್ ಮಹೇಶ್ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆ.ಜಿ. ಜಗದೀಶ್, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಜು ಎಸ್., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಎಚ್. ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್.ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್ ಬೆನ್ನೂರು, ಹಾಸನದ ಗ್ರಾಮ ಪಂಚಾಯತ್ ಒಂದರ ಗ್ರೇಡ್-1 ಕಾರ್ಯದರ್ಶಿ ಎನ್.ಎಂ. ಜಗದೀಶ್ ಎಂಬವರ ಮನೆ, ಅವರಿಗೆ ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಮೀನಿಗೆ ತಡೆ: ಕೇಜ್ರಿವಾಲ್‌ ಬೆನ್ನಿಗೆ ನಿಂತ 150 ವಕೀಲರಿಂದ ಸಿಜೆಐಗೆ ಪತ್ರ
ನವದೆಹಲಿ: ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಆದೇಶವನ್ನು ಓದದೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನನ್ನು ರದ್ದುಗೊಳಿಸಿರುವ ರೀತಿಯ ಕುರಿತು ದೆಹಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ 150 ವಕೀಲರ ನಿಯೋಗವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.

ದಿ ಹಿಂದೂ ವರದಿಯ ಪ್ರಕಾರ,  ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರ ಸಹೋದರ ಜಾರಿ ನಿರ್ದೇಶನಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಕೇಜ್ರಿವಾಲ್‌ ವಿರುದ್ಧ ಆದೇಶ ಬಂದಿರಬಹುದು ಎಂಬ ಅನುಮಾನುವನ್ನು ವಕೀಲರು ಪತ್ರದಲ್ಲಿ ಹೊರ ಹಾಕಿದ್ದಾರೆ.

ಇದು ಆಪಾದಿತ ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಪ್ರಕರಣವಾಗಿದ್ದು, ಬಂಧನಕ್ಕೊಳಗಾಗಿರುವ ಕೇಜ್ರಿವಾಲ್ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಆರ್ಥಿಕ ಅಪರಾಧಗಳ ಸಂಸ್ಥೆಯಾದ ಇಡಿ ಕೇಜ್ರಿವಾಲ್ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಿತ್ತು. ಕಳೆದ ತಿಂಗಳ ಕೊನೆಯಲ್ಲಿ, ಕೇಜ್ರಿವಾಲ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಜಾಮೀನು ನೀಡಿತ್ತು. ಈ ಬೆನ್ನಲ್ಲೇ ಮತ್ತೊಂದು ತನಿಖಾ ಸಂಸ್ಥೆ ಸಿಬಿಐ ಕೇಜ್ರಿವಾಲ್ ಅವರನ್ನು ಮತ್ತೆ ಬಂಧಿಸಿದೆ.

ಜೂ.20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯವು, ಇಡಿ ಕೇಜ್ರಿವಾಲ್ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿತ್ತು. ಇಡಿ ಮುಖ್ಯಮಂತ್ರಿಗಳ ಬಂಧನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ನ್ಯಾ. ನ್ಯಾಯಬಿಂದು ಹೇಳಿದ್ದರು.

ನ್ಯಾ.ಜೈನ್ ಅವರ ಖಾಸಾ ಸೋದರ ಇಡಿ ವಕೀಲರಾಗಿರುವುದರಿಂದ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿಯಬೇಕಾಗಿತ್ತು. ಈ ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ನ್ಯಾ.ಜೈನ್ ಎಂದಿಗೂ ಪ್ರಕಟಿಸಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಅಪರೂಪದ ಬೆಳವಣಿಗೆಯಲ್ಲಿ” ಜಾಮೀನು ಆದೇಶವು ಅಧಿಕೃತವಾಗಿ ಅಪ್ಲೋಡ್ ಆಗುವ ಮುನ್ನವೇ ನ್ಯಾ.ಜೈನ್ ಅವರು ಕೇಜ್ರಿವಾಲ್‌ರ ಜಾಮೀನನ್ನು ಪ್ರಶ್ನಿಸಲು ಇಡಿ ವಕೀಲರಿಗೆ ಅನುಮತಿ ನೀಡಿದ್ದರು ಮತ್ತು ಜಾಮೀನು ಆದೇಶಕ್ಕೆ ತಡೆ ವಿಧಿಸಿದ್ದರು. ಈ ರೀತಿ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ವಕೀಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಜುಲೈ 12 ರವರೆಗೆ ಇಲ್ಲಿನ ನ್ಯಾಯಾಲಯವು ಬುಧವಾರ ವಿಸ್ತರಿಸಿದೆ. ಮತ್ತಿಬ್ಬರು ಪ್ರಮುಖ ಆರೋಪಿಗಳಾದ ಮನೀಶ್ ಸಿಸೋಡಿಯಾ ಮತ್ತು ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಕೋರ್ಟ್‌ ಜುಲೈ 25 ರವರೆಗೆ ವಿಸ್ತರಣೆ ಮಾಡಿದೆ.

ಇಂದು ಬುಧವಾರ ಕೇಜ್ರಿವಾಲ್ ಅವರು ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ಜೂನ್ 26 ರಂದು ಸಿಬಿಐ ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಇದಕ್ಕೂ ಮೊದಲು ಕೇಜ್ರಿವಾಲ್ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠದ ಮುಂದೆ ಕೇಜ್ರಿವಾಲ್ ಅವರ ವಕೀಲ ರಜತ್ ಭಾರದ್ವಾಜ್ ಅವರು ಜಾಮೀನು ಅರ್ಜಿಯನ್ನು ಪ್ರಸ್ತಾಪಿಸಿದರು.

ಸೆಕ್ಷನ್ 41 ಸಿಆರ್‌ಪಿಸಿಯನ್ನು ಅನುಸರಿಸದೆ ಸಿಎಂ ಅವರನ್ನು ಅಕ್ರಮ ಬಂಧನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ ಗುರುವಾರ ಸಲ್ಲಿಸಿರುವ ಮನವಿಯನ್ನು ಪಟ್ಟಿ ಮಾಡುವಂತೆ ಭಾರದ್ವಾಜ್ ನ್ಯಾಯಾಲಯವನ್ನು ಒತ್ತಾಯಿಸಿದರು.

ವಾದವನ್ನು ಪರಿಗಣಿಸಿದ ನ್ಯಾಯಾಲಯವು ಕಳೆದ ಶುಕ್ರವಾರ ವಿಷಯವನ್ನು  ಆರೋಪ ಪಟ್ಟಿ ಮಾಡಲು ಒಪ್ಪಿಕೊಂಡಿತು. “ನಾವು ಅದನ್ನು ಮುಂದಿನ ದಿನದಲ್ಲಿ ಪಟ್ಟಿ ಮಾಡುತ್ತೇವೆ” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹೇಳಿದರು.

ಮಾರ್ಚ್ 21ರಂದು ಇಡಿಯಿಂದ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜೂನ್ 20ರಂದು ಜಾಮೀನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಿಬ್ಬರ ನಾಯಕರ ಬಂಧನ ಅವಧಿ ವಿಸ್ತರಣೆ

ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯವು ಜುಲೈ 25 ರವರೆಗೆ ವಿಸ್ತರಿಸಿದೆ. ಈ ಹಿಂದೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಕಸ್ಟಡಿಯನ್ನು ವಿಸ್ತರಿಸಿದ್ದಾರೆ.

ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಈ ಹಿಂದೆ ನೀಡಲಾಗಿದ್ದ ಕಸ್ಟಡಿ ಅವಧಿ ಮುಗಿದಿರುವ ಕಾರಣ ಅವರ ನ್ಯಾಯಾಂಗ ಬಂಧನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಸ್ತರಿಸಿದರು. ಟ ನಂತರ ಜುಲೈ 12 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಎಪಿ ಸಂಚಾಲಕರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು.