Hemashree Sayed – Peepal Media

ಪ್ರೀತಿ-ಸೌಹಾರ್ದತೆಯ ಒರತೆಯನ್ನು ತಲುಪುವ ಬಹುದೂರದ ದಾರಿಯಲ್ಲಿನ ಒಯಸಿಸ್:’ಡೇರ್ ಡೆವಿಲ್ ಮುಸ್ತಾಫಾ’
ಸಿನೆಮಾ

ರಾಮಾನುಜ ತನ್ನ ಅಕ್ಕನ ಮಡಚಿಟ್ಟ ಫೋಟೋವನ್ನು ಮತ್ತೆ ಮುನ್ನೆಲೆಗೆ ತರುವುದು, ಮತ್ತು ಇಂಗ್ಲಿಷ್ ಟೀಚರ್ – ಪಿ. ಟಿ ಸರ್ ನಡುವೆ ಒಲವು ಮೂಡಿಸುವುದು ಚಿತ್ರದಲ್ಲಿ ಎಷ್ಟು ಸುಲಭವೋ, ಅಷ್ಟೇ ಸಲೀಸಾಗಿ ರಮಾಮಣಿಯ ಪ್ರೀತಿಯನ್ನು ಮುಸ್ತಾಫಾ ಸ್ವೀಕರಿಸುವುದನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗದೇ ಇರುವುದು, ಈ ಕಾಲದ ದ್ವಂದ್ವವೇ? –  ಹೇಮಶ್ರೀ ಸಯದ್‌, ಕ್ಯಾಲಿಫೋರ್ನಿಯಾ

ಚಿತ್ರ ಆರಂಭವಾಗುವ ಮುನ್ನ ತೇಜಸ್ವಿಯವರು ತಮ್ಮ ಮಾತಿನ ಮೂಲಕ ನಮ್ಮನ್ನು ಎದುರುಗೊಳ್ಳುತ್ತಾರೆ. ಮುಂದೆ ನಾವು ನೋಡುವ ದೃಶ್ಯಾವಳಿಗೆ ಪೀಠಿಕೆ ಇದು. ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಸಣ್ಣ ಕತೆಗೆ ರೆಕ್ಕೆ ಪುಕ್ಕ ಜೋಡಿಸಿ, ತೇಜಸ್ವಿಯವರ ಫ್ಯಾನ್ಸ್ ಗಳೇ ಜತೆಗೂಡಿ crowd funding ಮೂಲಕ ತಯಾರಿಸಿದ ಈ  ಚಿತ್ರ, ಸುಮಾರು ಎರಡೂವರೆ ಗಂಟೆಯಷ್ಟಿದ್ದರೂ ಲವಲವಿಕೆಯಿಂದ ನೋಡಿಸಿಕೊಂಡು ಹೋಗುತ್ತದೆ.

ನಿರ್ದೇಶಕ ಶಶಾಂಕ್ ಸೋಗಲ್ ಅವರು ಕತೆಯನ್ನು ತಿಳಿಹಾಸ್ಯ ಕೂಡಿದ ನವಿರಾದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅರ್ಧ ಶತಮಾನದಷ್ಟು ಹಳೆಯ ಕಾಲದ ಕತೆ, ಅಬಚೂರು ಕಾಲೇಜಿನ ಮೇಷ್ಟ್ರುಗಳು, ಅವರ ಸಣ್ಣತನಗಳು, ಪಾಠದೊಳಗೆ ನುಸುಳುವ ಪಂಪ – ಕುಮಾರ ವ್ಯಾಸ, ಖಲಿಲ್ ಗಿಬ್ರಾನ್ – ಶೇಕ್ಸ್ ಪಿಯರ್, ಫ಼ುಟ್ ಬಾಲ್ – ಕ್ರಿಕೆಟ್, ಸೀರೆಯುಟ್ಟ ಮುಗುದೆಯರ ವೈಯಾರ – ಬಿಗುಮಾನ, ಕಾಲೇಜು ಹುಡುಗರ ತರಲೆ – ತುಂಟಾಟ, ಗೆಳೆತನ – ಬಾಂಧವ್ಯದ ಮಧುರ ಘಳಿಗೆಗಳ ಜೊತೆ ಜೊತೆಗೇ ಅಸಹನೆ – ಅಸೂಯೆ – ತಿಕ್ಕಾಟ – ಸಂಘರ್ಷಗಳೂ ಇವೆ. ನೋಸ್ಟಾಲ್ಜಿಕ್ ಅನ್ನಿಸುವ ಕ್ಷಣಗಳು ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.

ಸಿನಿಮಾ ದೃಶ್ಯರೂಪಕಗಳ ಮೂಲಕ, ಬಹಳಷ್ಟನ್ನು ಹೇಳಲು ಹೊರಟಿದೆ. ಸಂಭಾಷಣೆಯ ಮೊನಚು, ಪೆಟ್ಟು ಎಲ್ಲಿ ಬೀಳಬೇಕೋ ಅಲ್ಲಿಗೇ ಬೀಳುತ್ತದೆ. ಸರಿ ತಪ್ಪುಗಳನ್ನು, ‘ನಾವು’ ‘ಅವರು’ ಎನ್ನುವ ಪೂರ್ವಾಗ್ರಹಗಳನ್ನು ಹಾಗೆ ಹಾಗೆಯೇ ನೋಡುಗರ ಮುಂದಿಡುತ್ತದೆ. ಬಹಳಷ್ಟು ಕಡೆ ಆ ಪೂರ್ವಾಗ್ರಹಗಳನ್ನು ಒಡೆಯುವ ಪ್ರಯತ್ನವನ್ನೂ ಮಾಡುತ್ತದೆ. ನಿರ್ದೇಶಕ, ಮೂಲ ಕತೆಯನ್ನು ವಿಸ್ತರಿಸಿ ಈಗಿನ ವರ್ತಮಾನದ ತಲ್ಲಣಗಳನ್ನು, ಆತಂಕಗಳನ್ನು ಚಿತ್ರಕತೆಯೊಳಗೆ ತಂದಿರುವುದು ಮೆಚ್ಚಬೇಕಾದ್ದೇ. ತೇಜಸ್ವಿ ಈ ಕತೆ ಬರೆದದ್ದು ೧೯೭೦ ರ ಸುಮಾರಿಗೆ. ನಾವು ಪರದೆಯ ಮೇಲೆ ಮುಸ್ತಾಫಾನನ್ನು ನೋಡುವ ಈ ಕಾಲಘಟ್ಟದಲ್ಲಿ, ನಮ್ಮ ಹೆಗಲೇರಿ ನಮಗರಿವಿಲ್ಲದೆಯೇ ಹತ್ತಿ ಕೂತು ಕೊಂಡಿರುವ (ಜಾತಿ- ಧರ್ಮ-ಕೋಮುವಾದ-ಗಲಭೆ-ಸಾವು-ನೋವುಗಳ) ಬೇತಾಳಭಾರವನ್ನು ಇಳಿಸಿಕೊಂಡು ಈ ಚಿತ್ರವನ್ನು ನೋಡುವುದು ಸಾಧ್ಯವೇ? ಆ ಕಾರಣಕ್ಕಾಗಿಯೇನೋ, ಮೂಲಕತೆಯಿಂದಾಚೆಗೆ ಚಿತ್ರ ಸಮರ್ಪಕವಾಗಿ ಧ್ವನಿಸುವುದಿಲ್ಲ.

ರಾಮಾನುಜ ಅಯ್ಯಂಗಾರಿಗೆ ಮುಸ್ತಾಫಾ ಮೇಲಿನ ದ್ವೇಷಕ್ಕೆ ವೈಯಕ್ತಿಕ ಕಾರಣ ಇರುವುದರಿಂದ ಕೊನೆಯಲ್ಲಿ, ಸಿನಿಮಾದ ಒಂದು ನಾಟಕೀಯ ಕ್ಷಣದಲ್ಲಿ, ಅವ ಬದಲಾಗುತ್ತಾನೆ. ಒಂದು ಖರ್ಜೂರ ತಿಂದು ಹಲವು ಮನಸ್ಸುಗಳು ಬದಲಾಗುವಂತಿದ್ದರೆ!! ರಾಮಾನುಜನ ಮನಸು ಬದಲಾದ ಹಾಗೆ ಅವನ ಗೆಳೆಯರ, ಊರು ಕೇರಿಯ, ಸುತ್ತ ಮುತ್ತಲಿನ ಜನರ ಎಲ್ಲರ ಮನಸ್ಸುಗಳೂ ಮುಂದೊಂದು ದಿನ ಬದಲಾಗಬಹುದಲ್ಲವೇ?! ಬದಲಾಗಬೇಕು ಎನ್ನುವುದು ಚಿತ್ರದ ಆಶಯವೂ ಹೌದು.

ಇವತ್ತಿನ ಸಂದರ್ಭದಲ್ಲಿ ಮುಸ್ತಾಫಾ ಹೇಗೆ ತನ್ನ ಮುಸಲ್ಮಾನ ಸಮುದಾಯವನ್ನು ಪ್ರತಿನಿಧಿಸುತ್ತಾನೆಯೋ ಹಾಗೆ ಎಲ್ಲಾ ರೀತಿಯ ಅಲ್ಪಸಂಖ್ಯಾತ ದನಿಗಳಿಗೂ ಒಂದು ರೂಪಕ. ನಾವು, ಅವರು, ನಮ್ಮವರು, ಬೇರೆಯವರು, ಭಾಷೆ, ಸಂಸ್ಕೃತಿ, ಮೈ ಬಣ್ಣ – ಹೀಗೆ ಅಸಮಾನತೆ-ತಾರತಮ್ಯಗಳ ಬೇಲಿ ದಾಟಿ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರ ಒಳಗೊಳ್ಳುವಿಕೆಯ ಪ್ರಕ್ರಿಯೆ ಸಹಜ ಎನ್ನುವ ಉದಾಹರಣೆಗಳು ಈ ಹೊತ್ತಿನ ಅಗತ್ಯ. ಪ್ರೀತಿ-ಸೌಹಾರ್ದತೆಯ ಒರತೆಯನ್ನು ತಲುಪುವ ಬಹುದೂರದ ದಾರಿಯಲ್ಲಿನ ಒಯಸಿಸ್, ‘ಡೇರ್ ಡೆವಿಲ್ ಮುಸ್ತಾಫಾ’.

ಇಂದಿನ ಯುವ ಪೀಳಿಗೆ, ತಮಗೆ ಸುಲಭಕ್ಕೆ ದಕ್ಕಿರುವ ರೀಲ್ಸ್ ವಿಡಿಯೋಗಳಲ್ಲೇ ಕಾಲಹರಣ ಮಾಡುತ್ತಾ ಅದರಲ್ಲೇ ತಮ್ಮ ಆತ್ಮರತಿಯನ್ನು ಪೋಷಿಸಿಕೊಳ್ಳುತ್ತಿರುವ ಸಮಯದಲ್ಲಿ, ಸಾಹಿತ್ಯದ ಓದು ಅದರಲ್ಲೂ ಮಾನವೀಯ ಚಿಂತನೆಗಳನ್ನು ಎತ್ತಿ ಹಿಡಿಯುವ ಬರವಣಿಗೆಗಳನ್ನು ಅವರಿಗೆ ಈ ಮೂಲಕವಾದರೂ ತಲುಪಿಸುವುದು ಪ್ರಜ್ಞಾಪೂರ್ವಕವಾಗಿ ಆಗಲೇಬೇಕಾದ್ದು. ಆ ದಿಕ್ಕಿನಲ್ಲಿ ಹೊಸ ಕಲಾವಿದರಿಂದ ಕೂಡಿದ ‘ಡೇರ್ ಡೆವಿಲ್ ಮುಸ್ತಾಫಾ’ ತಂಡದ ಕೊಡುಗೆ ಗಮನಾರ್ಹ.

“ಪ್ರಾರಂಭ ಪಯಣ ಎಲ್ಲಾ ಗಡಿಗಳನ್ನು ಮೀರುತಾ… ಬೆರೆಯೋಣ ಬಾ ನಿಯಮ ಮೀರಿ …

ರೆಕ್ಕೆ ಬಿಚ್ಚಿ ಹಾರಾಡೋಕೆ ಬಿಡಲೇಬೇಕು ಎಲ್ಲ ಭಾರ … ಆಕಾಶಕ್ಕೆ ಅಂಕೆ ಇಲ್ಲ ಸಾಗೋಣ ಬಾ ಇನ್ನೂ ದೂರ…”,

ಚಿತ್ರದಲ್ಲಿ ಬರುವ ಹಾಡೊಂದರ ಸಾಲುಗಳು ಭರವಸೆ ಮತ್ತು ವಿಷಾದವನ್ನು ಜತೆಜತೆಗೇ ಮೂಡಿಸುತ್ತವೆ.

ರಮಾಮಣಿ ಮತ್ತು ಮುಸ್ತಾಫ಼ರ ನಡುವೆ ಮುಂದಿನ ದಿನಗಳಲ್ಲಿ ಅರಳಬಹುದಾಗಿದ್ದ ಸಹಜ ಪ್ರೇಮವೊಂದನ್ನು ಚಿವುಟಿ ಹಾಕಿದ್ದು, ಈ ಚಿತ್ರದ ಬಗ್ಗೆ ನನಗಿರುವ ಒಂದೇ ಒಂದು ತಕರಾರು. ರಾಮಾನುಜ ತನ್ನ ಅಕ್ಕನ ಮಡಚಿಟ್ಟ ಫೋಟೋವನ್ನು ಮತ್ತೆ ಮುನ್ನೆಲೆಗೆ ತರುವುದು, ಮತ್ತು ಇಂಗ್ಲಿಷ್ ಟೀಚರ್ – ಪಿ. ಟಿ ಸರ್ ನಡುವೆ ಒಲವು ಮೂಡಿಸುವುದು ಚಿತ್ರದಲ್ಲಿ ಎಷ್ಟು ಸುಲಭವೋ, ಅಷ್ಟೇ ಸಲೀಸಾಗಿ ರಮಾಮಣಿಯ ಪ್ರೀತಿಯನ್ನು ಮುಸ್ತಾಫಾ ಸ್ವೀಕರಿಸುವುದನ್ನು ತೆರೆಯ ಮೇಲೆ ತೋರಿಸಲು ಸಾಧ್ಯವಾಗದೇ ಇರುವುದು, ಈ ಕಾಲದ ದ್ವಂದ್ವವೇ? ಚಿತ್ರದುದ್ದಕ್ಕೂ ಗಟ್ಟಿತನವಿದ್ದ (ಮೂಲ ಕಥೆಯಲ್ಲಿ ಇಲ್ಲದ) ರಮಾಮಣಿಯ ಪಾತ್ರದ ಮೂಲಕ ಸೂಚ್ಯವಾಗಿಯಾದರೂ ಸಮಾಜಕ್ಕೆ ಸಂದೇಶ ಕೊಡಬಹುದಾಗಿದ್ದ ಎಳೆಯನ್ನು ಅಲ್ಲಿಗೇ ಬಿಟ್ಟಿರುವುದು ಯಾವ ಸಾಮಾಜಿಕ ಹಿಂಜರಿಕೆಯ ಕಾರಣಕ್ಕಾಗಿ? ಅಥವಾ ಈ ಕಾಲಘಟ್ಟದಲ್ಲಿ ಹಾಗೊಂದು ಸಕಾರಾತ್ಮಕ ಹೊಳಹನ್ನು ಯುವ ಜನಾಂಗಕ್ಕೆ ನೀಡುವುದು, ಈ ‘ಫೀಲ್ ಗುಡ್’ ಚಿತ್ರಕ್ಕೆ ದುಬಾರಿಯಾಗಬಹುದೆಂದು ಅನ್ನಿಸಿತೋ ಏನೋ?

(ಕೋಮುಗಲಭೆಯಲ್ಲಿ ತೊಡಗಿಸಿಕೊಳ್ಳುವ) ನಮ್ಮ ಯುವಕ ಯುವತಿಯರಿಗೆ ಭವಿಷ್ಯವಿದೆಯೇ ಎನ್ನುವ ತೇಜಸ್ವಿಯವರ ಆತಂಕಕ್ಕೆ ‘ಡೇರ್ ಡೆವಿಲ್ ಮುಸ್ತಾಫಾ’, ತಕ್ಕ ಮಟ್ಟಿನ ಉತ್ತರವನ್ನೇನೋ ಕೊಡುತ್ತದೆ. ಆದರೆ, ವೈಯಕ್ತಿಕ ನೆಲೆಗಳಲ್ಲಿ ನಾವು ಕಂಡುಕೊಳ್ಳುವ ಧೈರ್ಯ, ಸಾಮರಸ್ಯ ಸಾಮಾಜಿಕವಾಗಿಯೂ ಗಟ್ಟಿಗೊಳ್ಳುವುದು ಹೇಗೆ? ಯಾವಾಗ? ಎನ್ನುವ ಪ್ರಶ್ನೆಯನ್ನೇ ಮತ್ತೆ ಮತ್ತೆ ನಮ್ಮ ಮುಂದಿಡುತ್ತದೆ.

ಬದಲಾಗಿರುವ (??) ಸದ್ಯದ ರಾಜ್ಯ ರಾಜಕೀಯದ ಹಿನ್ನೆಲೆಯಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದ ಜನತೆಗೆ ಹೊಸ ಹುರುಪನ್ನು ನೀಡುವಂತಾದರೆ ಅದೇ ಖುಷಿ.

ಹೇಮಶ್ರೀ ಸಯದ್

ಕಲಾವಿದೆ, ಕ್ಯಾಲಿಫೋರ್ನಿಯಾ

‘ಕಾಂತಾರ’: ದೃಶ್ಯಸಂಭ್ರಮದ ಮಂಜು ಕರಗಿದ ಮೇಲೆ…
ಹಿಂದೆ ನಡೆದಿರುವ ನಿಜ ಘಟನೆಗಳನ್ನು ದೈವ-ಕಾರ್ಣಿಕ-ಮಾಯಕ ಎನ್ನುವ ಬಟ್ಟಲಿನಲ್ಲಿ ಮೃಷ್ಟಾನ್ನ ಭೋಜನವಾಗಿ ಉಣಬಡಿಸಿದ್ದು ಈ ಚಿತ್ರದ ಜಾಣ್ಮೆ. ಹೊಟ್ಟೆ ತುಂಬಿದ ಮೇಲೆ ಪ್ರಶ್ನಿಸುವ ಪ್ರಜ್ಞೆ ಮತ್ತು ಹಕ್ಕು ಎರಡನ್ನೂ ಕಳಕೊಳ್ಳುವ ಅಪಾಯ ಹೆಚ್ಚು ಎಂದು ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಕ್ಯಾಲಿಫೋರ್ನಿಯಾದಿಂದ ಹೇಮಶ್ರೀ ಸಯೇದ್.

ದಲಿತನೊಬ್ಬ ಮಾಸ್ ಕಮರ್ಶಿಯಲ್ ಕನ್ನಡ ಚಿತ್ರವೊಂದರ ನಾಯಕನಾಗಿರುವುದು, ದಮನಿತರ ಕತೆಯೊಂದು ನೇಟಿವಿಟಿ, ಭೂತಾರಾಧನೆಯ ವೈಭವಗಳೊಂದಿಗೆ ದೊಡ್ಡ ಪರದೆಯ ಮೇಲೆ ನ ಭೂತೋ ನ ಭವಿಷ್ಯತಿ ಎಂಬಂತೆ ಚಿತ್ರಿತವಾಗಿರುವುದು, ಕರಾವಳಿಯ ಹಸಿರು ಮರ ಕಾಡು ಬೆಟ್ಟ ಬೈಲು ಗುಡಿಸಲು ಎಲ್ಲವೂ ಡ್ರೋನ್ ಷಾಟ್ ಗಳಲ್ಲಿ ಸುಂದರವಾಗಿ ಕಂಗೊಳಿಸುತ್ತಿರುವುದು, ಕೆಲವೊಂದು ಸನ್ನಿವೇಶಗಳು ನಮ್ಮನ್ನು ಮುಖ್ಯವಾಗಿ ಕರಾವಳಿಗರನ್ನು ಭಾವುಕರನ್ನಾಗಿಸುವಲ್ಲಿ ಯಶಸ್ವಿಯಾಗಿರುವುದು ಇವೆಲ್ಲ ಖಂಡಿತವಾಗಿಯೂ ‘ಕಾಂತಾರ’ ಚಿತ್ರದ ಗೆಲುವು.

ಆರೋಗ್ಯಕರವಾದ ಚರ್ಚೆ, ಅಗತ್ಯ ಮತ್ತು ಒಂದು ಸಿನಿಮಾ ಅದನ್ನು ಹುಟ್ಟು ಹಾಕಿದೆಯೆಂದರೆ ಸಂತೋಷವೇ! ಸಿನಿಮಾವೊಂದರ ವಿಮರ್ಶೆ ಎನ್ನುವುದೇ ಇತ್ತೀಚಿನ ದಿನಗಳಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿದೆ. ಹಾಗಿರುವಾಗ, ವಿವಿಧ ಸ್ತರಗಳಿಂದ ಬರುವ ಪರ ವಿರೋಧ ಅಭಿಪ್ರಾಯಗಳನ್ನು ಕಲೆ ಹಾಕಿ ಒಂದು ಸಿನಿಮಾವನ್ನು ಮರು ಓದಿಕೊಳ್ಳುವುದು ಆದಾಗಲೇ ಮುಂದಿನ (ಸಿನಿಮಾ) ‘ನೋಡುವಿಕೆ’ ಗೆ ಸಹಾಯವಾಗಬಹುದು.

ಕರಾವಳಿಯ ಮೂಲವಾಸಿಗಳ – ತಳಸಮುದಾಯಗಳ ನೆಲದ ಹಕ್ಕನ್ನು ಕಸಿದು, ಅವರನ್ನು ಜೀತದಾಳುಗಳನ್ನಾಗಿಸಿದ ಸತ್ಯಕತೆಯನ್ನು ದಂತಕತೆ ಎನ್ನುವ taglineನೊಂದಿಗೆ ಜೋಡಿಸಿದ ಕೂಡಲೇ ನಂಬುವುದು ಬಿಡುವುದು ಪ್ರೇಕ್ಷಕನಿಗೆ ಬಿಟ್ಟದ್ದು. ಕರಾವಳಿಯ ಜನಕ್ಕೆ ಭಾವನಾತ್ಮಕವಾಗಿ ಹತ್ತಿರವಿರುವ ದೈವಾರಾಧನೆಯ ನಂಬಿಕೆಯ ಸುತ್ತ ಕತೆ ಕಟ್ಟಲು ಬಳಸಿಕೊಂಡದ್ದು ಸೂಕ್ತವೇ. ಚಿತ್ರದಲ್ಲಿ ಬರುವ ಹಲವು ರೆಬೆಲ್ ಅನ್ನಿಸುವ ಸನ್ನಿವೇಶಗಳು, ಮೈ ಜುಂ ಎನ್ನಿಸುವ ವಾಹ್ ಅನಿಸುವ ದೃಶ್ಯಗಳೇ. ಆದರೆ, ಅದರ ಆಚೆಗೆ ಒಟ್ಟಾರೆಯಾಗಿ ಚಿತ್ರ ಏನನ್ನು ಧ್ವನಿಸುತ್ತದೆ, ಹೊಸ ಹೊಳಹುಗಳನ್ನು ನೀಡುತ್ತಿದೆಯಾ ಅಥವಾ ಇರುವ ಕತೆಯನ್ನೇ ಹೇಗೆ ಜನರಿಗೆ ತಲುಪಿಸುತ್ತಿದೆ ಮತ್ತು ಹಾಗೆ ತಲುಪಿಸುವ ಪ್ರಕ್ರಿಯೆಯಲ್ಲಿ ನಿಜವಾಗಿಯೂ ಜನರಿಗೆ ಸಂದೇಶ ಮುಟ್ಟಿದೆಯೇ ಎನ್ನುವುದು ಕೂಡ ಮುಖ್ಯ. ಕರಾವಳಿಯ ಈಗಿನ ಸಂಕೀರ್ಣ ರಾಜಕೀಯದ ಸಂದರ್ಭದಲ್ಲಿ ಅದು ಸಾಧ್ಯವೇ? ಜನರು ಭಕ್ತಿಯಿಂದಾಚೆಗೆ ಬಂದು ಕತೆಯ ನಿಜವಾದ ಹೂರಣ ಏನು ಎನ್ನುವುದನ್ನು ಗಮನಿಸುತ್ತಾರೆಯೇ?

ದಲಿತ ಸಂವೇದನೆಯ ಕತೆಯೊಂದು ಮಾಸ್ ಕಮರ್ಶಿಯಲ್ ಸಿನೆಮಾ ಆಗಿರುವುದೂ ಸಹ ಚಿತ್ರದ ಗೆಲುವು ಮತ್ತು ಸೋಲೂ ಸಹ. ಚಿತ್ರದ ಕ್ಲೈಮಾಕ್ಸ್ ನಲ್ಲಿನ ರಿಷಭ್ ನಟನೆ, ದೈವಾರಾಧನೆಯ ಅಬ್ಬರ, ಕೊನೆಯ 20 ನಿಮಿಷಗಳು ಇಡೀ ಚಿತ್ರದ ಸಂದೇಶವನ್ನು ಮರೆ ಮಾಚುವಂತೆ ಮಾಡುವ ಅಪಾಯವಿದೆ. ಮತ್ತು ಈಗಾಗಲೇ ಜನ ಮಾತಾಡುತ್ತಿರುವುದು ಆ ಅಬ್ಬರವನ್ನೇ. ಜನರಿಗೆ ನೆನಪಲ್ಲಿ ಉಳಿಯುವುದೂ ಅಷ್ಟೇ. ದರ್ಶನ ಮುಗಿದ ನಂತರ ಪಾತ್ರಿ ಏನಿದ್ದರೂ ಅವ ಮುಟ್ಟಿಸಿಕೊಳ್ಳಲಾಗದವನೇ!

ಚಿತ್ರದ ಕೊನೆಯಲ್ಲಿ,  ಧಣಿ ಊರವರ ಮೇಲೆ unleash ಮಾಡುವ ಹಿಂಸೆ ಸಾಮಾನ್ಯದ್ದಲ್ಲ. ಎದುರಿಗೆ ಬಂದ ಎಲ್ಲರನ್ನೂ ಕೊನೆಗೆ ತನ್ನ ನಿಷ್ಠಾವಂತ ಬಂಟನನ್ನೂ ಲೆಕ್ಕಿಸದೆ ಕೊಲ್ಲುತ್ತಾ ಹೋಗುತ್ತಾನೆ. ಈ ಹಿಂಸೆಗೆ ಎದುರಾಗಿ ದೈವಾವೇಶಕ್ಕೆ ಒಳಗಾದ ನಾಯಕ ಶಿವ ದುಷ್ಟ ಸಂಹಾರ ಮಾಡುತ್ತಾನೆ. ಧಣಿಯ ಕ್ರೌರ್ಯದೆದುರು ಅರಣ್ಯಾಧಿಕಾರಿಯದ್ದು ಸಾತ್ವಿಕ ಹಿಂಸೆಯಾಗಿ ತೋರುತ್ತದೆ. ಹಾಗಾಗಿಯೇ ಅರಣ್ಯಾಧಿಕಾರಿ ಊರವರ ದೃಷ್ಟಿಯಲ್ಲಿ ಒಮ್ಮಿಂದೊಮ್ಮೆಲೇ ಖಳನಾಯಕನಿಂದ lesser evil ಆಗಿಬಿಡುತ್ತಾನೆ. ಕೊನೆಗೆ ದೈವವೇ ಎಲ್ಲರನ್ನು ಒಟ್ಟುಗೂಡಿಸಿತು ಎನ್ನುವಲ್ಲಿಗೆ … ಮಂಗಳ!

ಕತೆಯ ಆಶಯ ದೈವ ಎಲ್ಲರನ್ನೂ ಒಟ್ಟುಗೂಡಿಸಿತು ಎನ್ನುವುದು ಚಂದದ ಆದರ್ಶವೇನೋ ಹೌದು. ಹಾಗೆ ಒಟ್ಟು ಗೂಡಿಸಿದ್ದಾದರೂ ಯಾರನ್ನು? ಕತೆಯ ಉದ್ದಕ್ಕೂ ಕಾಡಿನವಾಸಿಗಳ ಬಗ್ಗೆ ಸಂಶಯ ತೋರಿ ಅವರನ್ನು ಶಿಕ್ಷಿಸುವ ಅರಣ್ಯ ಇಲಾಖೆಯ ಅಧಿಕಾರಿಯನ್ನು ಮತ್ತು ಅದೇ ಅಧಿಕಾರಿಯ ಕೆಳಗೆ ಶೋಷಣೆಗೊಳಗಾದ ಮಂದಿಯನ್ನು. ಆ ಅಧಿಕಾರಿ ಒಂದು ಕೇವಲ ಪಾತ್ರವಾಗದೆ ಒಟ್ಟು ಪೋಲಿಸ್ – ಅಧಿಕಾರಶಾಹಿ ವರ್ಗದ ಪ್ರತಿನಿಧಿಯಲ್ಲವೇ? ಇರಲಿ, ಆ ಅಧಿಕಾರಿಯಾದರೂ ಮೊದಲಿಂದಲೂ ಶೋಷಿತರ ಬಗ್ಗೆ ಕಾಳಜಿ ಇದ್ದವನೆಂದು ತೋರಿಸಿದ್ದರೂ ದೈವದ ನುಡಿಗೆ ಹೆಚ್ಚಿನ ಬಲ ಬರುತಿತ್ತೇನೋ?

ನಮ್ಮ ಕಣ್ಣೆದುರೇ ಲಿಖಿತ ಇತಿಹಾಸಗಳನ್ನೇ ತಿದ್ದಿ ತಿರುಚಲಾಗುತ್ತಿದೆ. ಇನ್ನು ಮೌಖಿಕ ಪರಂಪರೆಯ ಜನಪದರ ಕತೆಗಳನ್ನು ದಂತಕತೆಯಾಗಿಸುವುದೇನು ಕಷ್ಟವೇ? ಧಣಿಗಳ ಯಾಜಮಾನ್ಯ ಪರಂಪರೆ ಹೋಗಿ ನವ ವಸಾಹತುಶಾಹಿ ವರ್ಗ ಆ ಜಾಗದಲ್ಲಿ ಬಂದು ಕೂತಾಗಿದೆ. ದಮನಿತರ ಕತೆಯನ್ನು ಹೇಳುತ್ತಲೇ ಅವರು ಒಪ್ಪಂದದ ಮಾರ್ಗವನ್ನೇ ಅನುಸರಿಸಬೇಕೆನ್ನುವುದು ನಿರ್ದೇಶಕರ ಸೇಫ್ ಆಯ್ಕೆ. ಚಿತ್ರದ ಮೊದಲು ಮತ್ತು ಕೊನೆಯಲ್ಲಿ ಬರುವ ವರಾಹ ಸ್ತೋತ್ರ (?) ಇಡೀ ಚಿತ್ರವನ್ನು ಪ್ರಸಾದದ ಗಿಫ್ಟ್ ಕವರ್ ನಲ್ಲಿ ಕೊಟ್ಟು ಕಣ್ಣಿಗೆ ಒತ್ತಿಕೊಳ್ಳಿ ಎಂದ‌ ಹಾಗಿದೆ.

ಸಿನಿಮಾದ ಕೊನೆಯ ವಿಶುವಲ್ ರಚನೆ ನೋಡಿದಾಗ – ಗರ್ಭಿಣಿ ಲೀಲಾಳ closeup tilt down, ಶಿವ ಮತ್ತೆ ಕಾಡಿನಲ್ಲಿ ಮಾಯವಾಗುವುದು, ಕೊನೆಯಲ್ಲಿ ಮಗು ಕೇಳುವ ಪ್ರಶ್ನೆಗೆ ನಗುವಿನ ಉತ್ತರ ಎಲ್ಲವೂ open ended ಆಗಿರುವುದು, ಶಿವನೂ ಸಹ ಮಾಯವಾಗುವ (ಮಾಯವಾಗಿಸಿದ) ಸುಳಿವಿಗೆ ಅರ್ಥವೇನು ಎನ್ನುವುದನ್ನು ನಿರ್ದೇಶಕ ನೋಡುಗರಿಗೇ ಬಿಟ್ಟಿದ್ದಾರೆ!

‘ನಾವು ಬಂದದ್ದು ಎಲ್ಲಿಂದ ಎನ್ನುವುದನ್ನು ಮರೆತು ಬಿಡುವುದು ನಮ್ಮ ಜನರ ಸಮಸ್ಯೆ’. ಹೌದು. ಹಾಗೆ ಮರೆತು ಬಿಡಲು

ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತ್ಯಂತರಗಳೂ ಕಾರಣವಾಗುತ್ತವೆಯೇನೋ?

ಸ್ವಾತಂತ್ರ್ಯೋತ್ತರದಲ್ಲಿ ಹೆಚ್ಚಿನ ಶೂದ್ರ-ದಲಿತ ಸಮುದಾಯಗಳು ವಿದ್ಯಾವಂತರಾಗಿ  ತಮ್ಮ ಭೂಮಿಯ ಹಕ್ಕು, ಶಿಕ್ಷಣದ ಹಕ್ಕು,  ಉದ್ಯೋಗದ ಹಕ್ಕು, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕುಗಳನ್ನು  ಗುರುತಿಸಿಕೊಳ್ಳುವ, ದಕ್ಕಿಸಿಕೊಳ್ಳುವ, ಉಳಿಸಿಕೊಳ್ಳುವ , ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಸಾಮಾನ್ಯ ಜನರ ಈ ಸಂಘರ್ಷಗಳು ‘ದಂತಕತೆ’ಯ ಹೆಸರಲ್ಲಿ ಆರಾಧನೆಯ ಪೀಠವೇರಿ ಕೂತರೆ, ಮುಂದೆಯೂ ಹೋರಾಟ, ದುರಂತಗಳು ನಡೆದಾಗ ಪ್ರಶ್ನಿಸುವ ಹಕ್ಕು ಇರುವವರೂ ಧರ್ಮಸಂಕಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಗೊತ್ತಿದ್ದೂ ಗೊತ್ತಿದ್ದೂ ಎಲ್ಲರೂ ಧರ್ಮ-ಜಾತಿ-ವರ್ಗದ ಹೆಸರಲ್ಲಿ ಅನ್ಯಾಯ ನಡೆಸುವವರಿಗೆ ಸಾಥ್ ನೀಡುವ ಹಾಗಾಗುತ್ತದೆ.

ಹಿಂದೆ ನಡೆದಿರುವ ನಿಜ ಘಟನೆಗಳನ್ನು ದೈವ-ಕಾರ್ಣಿಕ-ಮಾಯಕ ಎನ್ನುವ ಬಟ್ಟಲಿನಲ್ಲಿ ಮೃಷ್ಟಾನ್ನ ಭೋಜನವಾಗಿ ಉಣಬಡಿಸಿದ್ದು ಈ ಚಿತ್ರದ ಜಾಣ್ಮೆ. ಹೊಟ್ಟೆ ತುಂಬಿಸಿದ ಮೇಲೆ ಜನ ಮರುಳೇ. ಪ್ರಶ್ನಿಸುವ ಪ್ರಜ್ಞೆ ಮತ್ತು ಹಕ್ಕು ಎರಡನ್ನೂ ಕಳಕೊಳ್ಳುವ ಅಪಾಯ ಹೆಚ್ಚು.

ದೈವ ದೇವರ ನಂಬಿಕೆ ಇರುವ ವ್ಯಕ್ತಿಗಳನ್ನು ಅವರ ನಂಬಿಕೆಯ ಕಾರಣಕ್ಕಾಗಿಯೇ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಆದರೆ ಖಾಸಗಿಯಾಗಿರಬೇಕಾದ ನಂಬಿಕೆ ಆಚರಣೆಗಳು ಆ ಚೌಕಟ್ಟನ್ನು ದಾಟಿ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆಯ ಬುನಾದಿಯಾಗಿರುವಾಗ, ಬಹುತೇಕ ಭಾರತದ ಹೆಗ್ಗುರುತೇ ಆಗಿರುವಾಗ ‘ಕಾಂತಾರ’ ದಂತಹ ಚಿತ್ರಗಳು ಸಾಂಸ್ಕೃತಿಕ ರಾಯಭಾರದ ಸಿದ್ಧಮಾದರಿಯ ಅಧಿಕೃತ ದಾಖಲೆಗಳಾಗಿಬಿಡುತ್ತವೆ. ಜತೆಗೆ ಅವುಗಳ ಲೋಪ ದೋಷಗಳೂ ಸಹ.

ಕನ್ನಡದ ಸಿನಿಮಾವೊಂದು ತಮಿಳು, ತೆಲುಗು, ಹಿಂದಿ ಚಿತ್ರಗಳ ಕಲಾತ್ಮಕತೆ, ತಂತ್ರಜ್ಞಾನಕ್ಕೆ ಸರಿಸಮಾನವಾಗಿ ನಿಂತಿರುವುದೂ ಹೆಗ್ಗಳಿಕೆಯೇ. ಮತ್ತು ಆ ಕಾರಣಕ್ಕಾಗಿಯೇ ರಿಷಭ್ ಶೆಟ್ಟಿ ಹಾಗೂ ‘ಕಾಂತಾರ’ ಚಿತ್ರ ತಂಡಕ್ಕೆ ಥ್ಯಾಂಕ್ಸ್ ಹೇಳಲೇಬೇಕು.‌

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

(ಹೇಮಶ್ರೀ ಸಯೇದ್ – ಈಟಿವಿ-ಕನ್ನಡ, ದೂರದರ್ಶನ ಸುದ್ದಿ ವಿಭಾಗದಲ್ಲಿ ಕೆಲಸದ ಅನುಭವ. ಫ್ರೀಲಾನ್ಸರ್‌ ಆಗಿಯೂ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆ ಹವ್ಯಾಸ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ)

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ರಾಹುಲ್‌ ಗಾಂಧಿಯವರೇ ಕನ್ನಡಿಗರ ಈ ಸೊಲ್ಲು ಆಲಿಸಿ
ಭಾರತವನ್ನು ಜೋಡಿಸಲು ಚಾರಿತ್ರಿಕ “ಬಾರತ್‌ ಜೋಡೋ” ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿಯವರು ಕನ್ನಡಿಗರ ಆತಂಕಗಳನ್ನು ನಿವಾರಿಸುವ ಬದ್ಧತೆ ತೋರುರೆ, ಕನ್ನಡಿಗರ ಈ ಸೊಲ್ಲನ್ನು ಆಲಿಸುವವರೆ? ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ಕನ್ನಡಿಗರ ಹಕ್ಕೊತ್ತಾಯವೇನು ಎಂದು ಇಲ್ಲಿ ತಿಳಿಸಿದ್ದಾರೆ

https://www.facebook.com/peepaltvkannada/videos/1200412170521513

ಈ ವಿಡಿಯೋವನ್ನು ಯೂಟ್ಯೂಬ್‌ ನಲ್ಲಿ ನೋಡಲು 👇🏼
https://youtu.be/