Manjula Kirugavalu – Peepal Media

ಪ್ರೀತಿ ಅಂದ್ರೆ ಇಷ್ಟೇನಾ….
ಎಂದಿನಂತೆ ಮತ್ತೊಂದು ಪ್ರೇಮಿಗಳ ದಿನ ಬಂದಿದೆ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಮಾತಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಒತ್ತಡದ ಬದುಕಿನ ಈ ದಿನಗಳಲ್ಲಿ ದ್ವೇಷವನ್ನು ದ್ವೇಷಿಸುವ, ಪ್ರೀತಿಯನ್ನು ಪ್ರೀತಿಸುವ ಪ್ರೇಮದಿನವನ್ನು ಒಂದು ದಿನದ ಮಟ್ಟಿಗಾದರೂ ಸಂಭ್ರಮಿಸೋಣ. ಬನ್ನಿ.. ಪ್ರೇಮಗೀತೆಗಳ ಗುನುಗುತ್ತಾ  ಕವಯಿತ್ರಿ ಮಂಜುಳಾ ಕಿರುಗಾವಲು ಬರೆದ ಪ್ರೀತಿ ಪದಗಳ ಓದೋಣ.

ಫೆಬ್ರವರಿ ಬಂತು ಎಂದರೆ ಪ್ರೇಮಿಗಳಿಗೆಲ್ಲಾ ಸಂಭ್ರಮ, ಸಡಗರ. ತಾವು ಬಯಸುವವರಿಗೆ ತಮ್ಮ ಪ್ರೇಮ ನಿವೇದಿಸಿಕೊಳ್ಳಲು ಈ ಒಂದು ದಿನಕ್ಕಾಗಿ ಕಾತರಿಸುತ್ತಾರೆ. ಅದೆಷ್ಟೋ ಸಮಯದಿಂದ ಮನಸೊಳಗೆ ಬಚ್ಚಿಕೊಂಡ ಭಾವವನ್ನು ತನ್ನವನು/ವಳು ಮುಂದೆ ಹೇಳಿಕೊಳ್ಳಲು ಕಾತರಿಸುತ್ತಿರುತ್ತಾರೆ. ಆದರೆ ಪ್ರೀತಿ ಸಂಭ್ರಮಿಸಲು ಒಂದು ನಿರ್ದಿಷ್ಟ ದಿನದ ಅಗತ್ಯವಾದರೂ ಏನಿದೆ. ಪ್ರೀತಿ ನಮ್ಮೊಳಗೆ ನಿರಂತರವಾಗಿ ಹರಿಯುವ ನದಿ. ಎಂದಿಗೂ ತಣಿಯದ ಬೆಂಕಿ. ಸಾಗರದಷ್ಟು ಆಳ, ಆಗಸದಷ್ಟು ವಿಶಾಲ.

ಪ್ರೀತಿ ಪ್ರೀತಿ ಪ್ರೀತಿ….!

ಹಾಗಾದರೆ ಈ ಪ್ರೀತಿ ಎಂದರೇನು..?

ಈ ಪ್ರೀತಿನಾ ಒಂದು ನಿರ್ದಿಷ್ಟ ಪದದ ಮೂಲಕ ವ್ಯಾಖ್ಯಾನಿಸಲು ಸಾಧ್ಯವೇ…? ಖಂಡಿತ ಇಲ್ಲ. ಪ್ರೀತಿ ಒಂದು ಅಧ್ಭುತ ಭಾವನೆ. ಪ್ರೀತಿಗೆ ನಿರ್ದಿಷ್ಟ ಅರ್ಥ ಕಲ್ಪಿಸಲಾಗದು. ಪ್ರೀತಿ ಮನಸುಗಳ ಪಿಸುಮಾತು, ಮಧುರ ಭಾವಗಳು ಸೃಜಿಸುವ ಅನನ್ಯ ಭಾವ. ಪ್ರೀತಿಯನ್ನು ಯಾರೇನೇ ಅರ್ಥೈಸಿದರೂ ಅದನ್ನು ಪದಗಳ ಚೌಕಟ್ಟಿನೊಳಗೆ ಬಂಧಿಸಿಡಲಾಗದು. ದ್ವೇಷ, ಆಕ್ರೋಷ, ರೋಷ, ಸೇಡು, ಮನಸ್ತಾಪ ಈ ಎಲ್ಲವೂ ಮನುಷ್ಯರಲ್ಲಿ ಕಂಡು ಬರುವ ಸಂಚಾರಿ ಭಾವಗಳು. ಆದರೆ, ಪ್ರೀತಿಯೊಂದೇ ಸ್ಥಾಯಿ ಭಾವ. ನಮ್ಮ ಮನಸ್ಸಿನ ಮೂಲಭಾವವೇ ಪ್ರೀತಿ.

ಜಾತಿ, ಧರ್ಮ, ಬಣ್ಣ,  ರಂಗು – ರೂಪು, ಬಡವ- ಶ್ರೀಮಂತ ಮತ್ತು ವಯಸ್ಸು ನೋಡಿ ಪ್ರೀತಿ ಆಗುವುದಿಲ್ಲ. ಪ್ರೀತಿ ಯಾವಾಗ ಯಾರ ಮೇಲಾದರೂ ಆಗಬಹುದು. ಪ್ರೀತಿಗೆ ಯಾವುದೇ ತಡೆಗಳಿರುವುದಿಲ್ಲ. ಅದು ಎಲ್ಲೆಗಳನ್ನು ಮೀರಿದ್ದು. ಹಾಗೇನಾದರೂ ಇದ್ದರೆ ಅದು ನಮಗೆ ನಾವೇ ಕಟ್ಟಿಕೊಂಡ ಬೇಲಿಗಳು.

ಪ್ರೀತಿ ದೈಹಿಕ ಆಕರ್ಷಣೆಯೇ? ಮನಸಿನ ಆಕರ್ಷಣೆಯೇ? ಇದೆಲ್ಲವನ್ನು ಮೀರಿದ್ದೇ? ಪ್ರೀತಿ ಏಕಾಯಿತು? ಎಂದರೆ ಕಾರಣವೇ  ತಿಳಿದಿರುವುದಿಲ್ಲ. ಅದರರ್ಥ ಇಷ್ಟೇ- ದೈಹಿಕ, ಮಾನಸಿಕ ಎಲ್ಲಾ ಆಕರ್ಷಣೆಗಳನ್ನು ಮೀರಿದ್ದು ಪ್ರೀತಿ.  ಅದಕ್ಕೆ ಏನೋ ಪ್ರೀತಿ ಕುರುಡು ಅನ್ನೋದು. ಪ್ರೀತಿಯಲ್ಲಿ ಪರಸ್ಪರ ಹೊಂದಾಣಿಕೆ, ಮನ್ನಿಸುವ ಗುಣ, ಅರ್ಪಣಾ ಮನೋಭಾವ ಇದೆ.

ಪ್ರೀತಿ ಇಲ್ಲದೇ ಮಾನವೀಯತೆಯಾಗಲಿ, ಮಮಕಾರವಾಗಲಿ ಹುಟ್ಟುವುದಿಲ್ಲ. ಜಗತ್ತು ಪ್ರೀತಿಯಿಂದಲೇ ನಿಂತಿದೆ. ಹಾಗಾಗಿ ಕವಿ ಆಲ್ಬೈರ್ ಕ್ಯಾಮು ಒಂದ್ಕಡೆ ಹೇಳ್ತಾರೆ ಪ್ರೀತಿ ಇಲ್ಲದ ಜಗತ್ತು ಸತ್ತಂತೆ ಎಂದು.

ಪ್ರೀತಿ ದೇಹದ ಬಂಧದಿಂದ ಮುಕ್ತವಾಗಿರಬೇಕು. ಪ್ರೀತಿ ಅಂದ್ರೆ ಪ್ರೀತಿ ಅಷ್ಟೇ ಆಗಿರಬೇಕು, ಗೀಳಾಗಬಾರದು. ಯಾರು ಯಾರನ್ನು ಪ್ರೀತಿಸಬೇಕು ಎಂಬ ನಿರ್ಬಂಧವಿರಬಾರದು. ಪ್ರೀತಿ ಸ್ವಚ್ಚಂದವಾಗಿ ಉಸಿರಾಡಬೇಕು.  ಪ್ರೀತಿಯನ್ನು ಬೇಡಿ ಪಡೆಯಲಾಗದು. ಹಾಗೆ ಬಲವಂತಕ್ಕೆ ಪ್ರೀತಿ ಹುಟ್ಟದು. ಪ್ರೀತಿ ಎಂಬ ಹಕ್ಕಿ ಮುಕ್ತವಾಗಿರಬೇಕು. ಪ್ರೀತಿಯ ಜಗತ್ತಿನಲ್ಲಿ ನಿಯಮಗಳಾಗಲಿ, ಕಟ್ಟುಪಾಡುಗಳಾಗಲೀ ಇರುವುದಿಲ್ಲ. ಅಲ್ಲಿರೋದು ಇಬ್ಬರೇ ಪರಸ್ಪರ ಅಪಾರವಾಗಿ ಪ್ರೀತಿಸುವ ಎರಡು ಜೀವಗಳು, ಪ್ರೀತಿಸುವವರ ನಡುವೆ ನಿಸ್ವಾರ್ಥ ಕೊಡುಕೊಳ್ಳುವಿಕೆ ಅಷ್ಟೇ, ಸ್ವಾರ್ಥಕ್ಕಿಲ್ಲಿ ಜಾಗವಿಲ್ಲ.

ಹಿಂದಿಯ ಪ್ರಾಖ್ಯಾತ ಕವಿ, ಗೀತ ರಚನಾಕಾರ ಗುಲ್ಜಾರ್ ಅವರು ಹೇಳ್ತಾರೆ :

ಪ್ರೀತಿ ಎಂದಾದರೂ ಏಕಮುಖವಾಗಿ ಆಗುತ್ತದಾ;

ಇಲ್ಲ,  ಅದು ಎರಡು ಆತ್ಮಗಳ ಅವಳಿ ಜನನ..

ಪ್ರೀತಿ ಏಕಾಂಗಿಯಾಗಿ ಜೀವಿಸಲಾರದು.

ಜೀವಿಸುತ್ತದೆ ಎಂದಾದರೆ ಇಬ್ಬರು ವ್ಯಕ್ತಿಗಳಲ್ಲಿ,

ಸಾಯುವುದಾದರೆ ಇಬ್ಬರು ಸಾಯುತ್ತಾರೆ…

ಪ್ರೀತಿ ಹರಿಯುವ ನದಿ…

ದಡಗಳಿಂದ ಬಂಧಿಸಲು ಪ್ರೀತಿ ಕೊಳ(ಕೆರೆ)ವೂ ಅಲ್ಲ….

ದಡವಿಲ್ಲದಿರುವುದಕ್ಕೆ ಪ್ರೀತಿ ಸಾಗರಲ್ಲ..

ಪ್ರೀತಿಯೊಂದು ನದಿ… ಹರಿಯುತ್ತಲೇ ಇರುತ್ತದೆ.

ನದಿಯಂತೆ ಏರುತ್ತದೆ… ಇಳಿಯುತ್ತದೆ..

ಪ್ರೀತಿಯಲ್ಲಿ ಏರಿಳಿತವೂ ಇದ್ದೇ ಇರುತ್ತದೆ...

ಪ್ರೀತಿಯನ್ನು ಒಂದು ದಿನ ಆಚರಣೆಯಂತೆ ಆಚರಿಸಲು ಸಾಧ್ಯವೇ. ಅದು ಒಂದು ದಿನದ ಸಂಭ್ರಮವೇ? ಇಲ್ಲವೇ ಇಲ್ಲ. ಪ್ರೀತಿಯನ್ನು ಅನುದಿನವೂ, ಅನುಕ್ಷಣವೂ ಅನುಭವಿಸಬೇಕು.

ಪ್ರೀತಿಯನ್ನು ಸಂಭ್ರಮಿಸಲು ಒಂದು ದಿನ ಇದ್ದರೆ ಅದು ಪ್ರೇಮಿಗಳ ಪಾಲಿನ ಹಬ್ಬವೇ ಸರಿ. ಎದೆಯಲ್ಲಿ ಮೊಗ್ಗಾಗಿ ಇರುವ ಪ್ರೀತಿ ಆ ದಿನ ಅರಳಿ ನಳನಳಿಸಲಿ. ಪ್ರೀತಿಸುವ ಮನಸುಗಳು ಸ್ವಚ್ಚಂದವಾಗಿ ನಗಲಿ. ಅರಳುವ ಒಲವಿನ ಹೂವುಗಳಿಗೆ ಬ್ಲಾಕ್, ಕೌವ್ ಡೇಗಳು ಪೀಡಕವಾಗದಿರಲಿ.

ಮಂಜುಳಾ ಕಿರುಗಾವಲು

ಜನೋದಯ ಪ್ರಾದೇಶಿಕ ಪತ್ರಿಕೆಯ ಮಾಲೀಕರು ಹಾಗೂ ಸಂಪಾದಕರಾಗಿರುವ ಇವರು ಕವಯಿತ್ರಿ, ಅನುವಾದಕಿಯಾಗಿ ಓದುಗರಿಗೆ ಪರಿಚಿತರು.