ಮಂಜುಳ ಹುಲಿಕುಂಟೆ – Peepal Media

ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಧರಣಿ ಘೋಷಣೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಹೋಬಳಿಯ ಹದಿಮೂರು ಹಳ್ಳಿಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.

ಈ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ, 2025 ಜೂನ್ 26ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೂನ್ 25, ಬುಧವಾರ ‘ದೇವನಹಳ್ಳಿ ಚಲೋ’ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದರು.

ಗುರುವಾರ ನಟ ಪ್ರಕಾಶ್ ರಾಜ್, ಹಿರಿಯ ಪತ್ರಕರ್ತೆ ವಿಜಯಾ, ಕೆ. ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ತೆರಳಿದ್ದರು, ಈ ವೇಳೆ ಮೊದಲು ಅವರನ್ನು ಪೊಲೀಸರು ತಡೆದಿದ್ದು, ಆನಂತರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳು ಸಭೆ ನಡೆಸಿ, ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ, ಫ್ರೀಡಂ ಪಾರ್ಕಿನಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಜೂನ್ 26 ಮಧ್ಯಾಹ್ನ 1:30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕ ಅನಿರ್ದಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

‘ಅಮಾಯಕ ನಾಗರಿಕರ ಮೃತ ದೇಹಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಒತ್ತಾಯಿಸುವುದಿಲ್ಲ’: ಒಮರ್ ಅಬ್ದುಲ್ಲಾ
ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಸಮಯದಲ್ಲಿ ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡುವುದಿಲ್ಲ ಎಂದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು “ರಾಜ್ಯ ಸ್ಥಾನಮಾನ ಸ್ಥಾಪನೆ ನಮ್ಮ ಪ್ರಮುಖ ಉದ್ದೇಶವಾದರೂ ಸದ್ಯಕ್ಕೆ ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಮತ್ತೊಂದು ಬಾರಿಗೆ ಈ ಬೇಡಿಕೆಯನ್ನು ವ್ಯಕ್ತಪಡಿಸುತ್ತೇನೆ. ಶವಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಕೇಳುವುದಿಲ್ಲ. ಹಾಗೆಯೇ ಕೇಂದ್ರದಿಂದ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸಲು ನಾನು ಇಂದಿನ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿಲ್ಲ” ಎಂದು ಹೇಳಿದರು.

ಈ ಮೂಲಕ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ರಾಜಕೀಯಗೊಳಿಸುವುದನ್ನು ಅವರು ತಳ್ಳಿಹಾಕಿದರು.

“ಜನರು ಸರ್ಕಾರವನ್ನು ಬೆಂಬಲಿಸಿದಾಗ ಉಗ್ರವಾದ ಮತ್ತು ಭಯೋತ್ಪಾದನೆ ಕೊನೆಗೊಳ್ಳುತ್ತದೆ. ನಾವು ಬಂದೂಕುಗಳನ್ನು ಬಳಸಿ ಉಗ್ರವಾದವನ್ನು ನಿಯಂತ್ರಿಸಬಹುದು, ಆದರೆ ಜನರು ನಮ್ಮನ್ನು ಬೆಂಬಲಿಸಿದಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಈಗ ಜನರು ಆ ಹಂತವನ್ನು ತಲುಪುತ್ತಿದ್ದಾರೆಂದು ತೋರುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.

“ನಾನು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿಲ್ಲದಿದ್ದರೂ, ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರನ್ನು ಆಹ್ವಾನಿಸಿದೆ. ಅವರ ಆತಿಥೇಯನಾಗಿ, ಅವರನ್ನು ನೋಡಿಕೊಳ್ಳುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಆದರೆ ಈಗ ಪ್ರವಾಸಿಗರಿಗೆ ವಿಷಾದಿಸಲು ನನಗೆ ಪದಗಳಿಲ್ಲ” ಎಂದು ಹೇಳಿದರು.

ಸಂತ್ರಸ್ತರ ನೋವಿಗೆ ದುಃಖ ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ, “ಕೆಲವೇ ದಿನಗಳ ಹಿಂದೆ ವಿವಾಹವಾದ ನೌಕಾಪಡೆಯ ಅಧಿಕಾರಿಯ ಪತ್ನಿಗೆ ನಾನು ಏನು ಹೇಳಬೇಕು? ಅವರಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಮೃತಪಟ್ಟ ಅನೇಕ ಕುಟುಂಬ ಸದಸ್ಯರು ಮಾಡಿದ ಅಪರಾಧವೇನು ಎಂದು ನನ್ನನ್ನು ಆನೇಕರು ಕೇಳಿದರು? ಆದರೆ ನನ್ನಲ್ಲಿ ಉತ್ತರವಿರಲಿಲ್ಲ” ಎಂದು ಹೇಳಿದರು.

ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಒಮರ್ ಅಬ್ದುಲ್ಲಾ ಅವರು ದೇಶಾದ್ಯಂತವಿರುವ ಎಲ್ಲ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸಿದರು.

ತಕ್ಷಣದ ಕ್ರಮಗಳನ್ನು ಕೈಗೊಂಡು ಅಹಿತಕರ ಘಟನೆಗಳನ್ನು ತಡೆಗಟ್ಟಿದ ಎಲ್ಲ ರಾಜ್ಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ-RSS ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನು ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ: ಸಿದ್ದರಾಮಯ್ಯ ಗುಡುಗು
ಬೆಳಗಾವಿ: ನಾವು ಬಿಜೆಪಿ-RSS ಗೊಡ್ಡು ಬೆದರಿಕೆಗಳಿಗೆ  ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನೆಲ್ಲಾ ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗಿದೆ. ನಮ್ಮ ಕಾರ್ಯಕರ್ತರಿಗೂ ಇದೆ ಎಂದು ಸಿದ್ದರಾಮಯ್ಯ ಗುಡುಗಿದರು.

ಏಪ್ರಿಲ್ 28ರಂದು ಬೆಳಗಾವಿಯಲ್ಲಿ AICC ಆಯೋಜಿಸಿದ್ದ, ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯ ದೇಶ ವಿರೋಧಿ ಆಡಳಿತ, ಜನ ವಿರೋಧಿ ಕ್ರಮಗಳನ್ನು ಖಂಡಿಸಿ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿ ಪಡಿಸಿದ, ಬಿಜೆಪಿ ಕಿಡಿಗೇಡಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬಿಜೆಪಿ-RSS ಗೆ ನೇರವಾಗಿ ಸವಾಲೆಸೆದು ಸೆಡ್ಡು ಹೊಡೆದರು.

ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಜನರಿಗಾಗಿ ಬೇರೆ ಏನು ಮಾಡಿದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.

ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ ? ಸ್ವಾತಂತ್ರ್ಯ. ಹೋರಾಟಕ್ಕೆ  ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ ಆಗ ಎಂದು ಪ್ರಶ್ನಿಸಿದರು.

ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್ ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲವಾ ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು  ಪ್ರಶ್ನಿಸಬಾರದಾ ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸ್ತೀರಾ ಎಂದು ಪ್ರಶ್ನಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ RSS ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ ನೀವು. ಇದಕ್ಕೂ ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನು ಕೊಟ್ಟಿದ್ದೀರಿ ಎಂದು ದೇಶದ ಜನಕ್ಕೆ ವಿವರಿಸಿ ಎಂದು ಸವಾಲು ಹಾಕಿದರು.

ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅತ್ಯಂತ ಶ್ರೀಮಂತರ ಮೇಲೆ 32% ಟ್ಯಾಕ್ಸ್ ಇತ್ತು. ಮೋದಿ ಬಂದ ಮೇಲೆ ಅತ್ಯಂತ ಶ್ರೀಮಂತರ ಮೇಲಿನ ತೆರಿಗೆಯನ್ನು ಶೇ25 ಇಳಿಸಿದಿರಿ. ಬಡವರು, ಮಧ್ಯಮ ವರ್ಗದವರ ಮೇಲಿನ ತೆರಿಗೆಯನ್ನು ಹೆಚ್ಚಿಸಿದಿರಿ. ನಾಚಿಕೆ ಆಗುತ್ತಿಲ್ಲ ನಿಮಗೆ. ಬಡವರ, ಮಧ್ಯಮ ವರ್ಗದವರ ವಿರೋಧಿ ಬಿಜೆಪಿಯ ಆಡಳಿತವನ್ನು ಪ್ರಶ್ನಿಸಬಾರದಾ ? ಭಾರತೀಯರನ್ನು ನಿರಂತರ ಸುಳ್ಳುಗಳಲ್ಲಿ ಇನ್ನೂ ಎಷ್ಟು ವರ್ಷ ಮರಳು ಮಾಡ್ತೀರಿ. ಸತ್ಯ ಹೇಳಿ ಎಂದು ಪ್ರಶ್ನಿಸಿದರು.

ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟೀಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ-RSS ನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ ಎಂದು ಎಚ್ಚರಿಕೆ ನೀಡಿದರು.

ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಒಂದು ರೂಪಾಯಿ ಕೂಡ ಸರ್ಕಾರಕ್ಕೆ ಬರಲ್ಲ. ನಾವು 4 ರೂ ಹೆಚ್ಚಿಸಿದರೂ ಹಾಲಿನ‌ ದರ ಇಡೀ ದೇಶದಲ್ಲಿ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ಬಸ್ ದರ, ನೀರಿನ ದರ,  ವಿದ್ಯುತ್ ದರ ಅಕ್ಕ ಪಕ್ಕದ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಇರುವುದು ನಮ್ಮ ರಾಜ್ಯದಲ್ಲಿ ಮಾತ್ರ. ನಿಮ್ಮ ಸುಳ್ಳು, ಅಪಪ್ರಚಾರ, ಬೆದರಿಕೆಗೆ ಈ ಸಿದ್ದರಾಮಯ್ಯ ಹೆದರುವವನಲ್ಲ. ನಿಮ್ಮನ್ನು ಮೆಟ್ಟಿ ನಿಲ್ತೀವಿ. ಕಾಂಗ್ರೆಸ್ ಸರ್ಕಾರಕ್ಕೆ ಆ ಶಕ್ತಿ ಇನ್ನೂ ಇದೆ ಎಂದರು.

ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ ಹೇಳಿ ಎಂದರು.

ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಿರಂತರವಾಗಿ ಭಾರತೀಯರನ್ನು ಸುಳ್ಳುಗಳ ಸರಮಾಲೆಯಲ್ಲಿ ಮುಳುಗಿಸಿ, ಸಮಾಜವನ್ನು ಬಿರುಕು ಮೂಡಿಸಿ ಕಾಲ ಕಳೆಯುತ್ತಿದೆ. ನಿಮಗೆ ತಕ್ಕ ಉತ್ತರ ಕೊಡುವ ಶಕ್ತಿ ನಮಗಿದೆ. ನಾವು ಉತ್ತರ ಕೊಡ್ತೀವಿ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಚ್.ಸಿ. ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಿಕಿಹೊಳಿ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಅನೇಕ ಸಚಿವರು, ಮುಖಂಡರು ಭಾಗಿಯಾಗಿದ್ದರು.

ಪಹಲ್ಗಾಮ್ ದಾಳಿ: ಮೋದಿಯನ್ನು ಟೀಕಿಸಿದ ಭೋಜ್ ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದೇಶದ್ರೋಹ ಪ್ರಕರಣ
ಜಮ್ಮ-ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿ ಕುರಿತು ಅಕ್ಷೇಪಾರ್ಹ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಭೋಜ್ ಪುರಿ ಗಾಯಕಿ ನೇಹಾ ಸಿಂಗ್ ರಾಠೋಡ್  ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಅಭಯ್ ಪ್ರತಾಪ್ ಸಿಂಗ್ ಎಂಬುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ನೇಹಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ದೂರಿನಲ್ಲಿ ನೇಹಾ ಸಿಂಗ್ ರಾಠೋಡ್ ಅವರ ಎಕ್ಸ್ ಪೋಸ್ಟ್ ಗಳು ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಪರಸ್ಪರ ಅಪರಾಧಗಳನ್ನು ಮಾಡಲು ಜನರನ್ನು ಪ್ರಚೋದಿಸುತ್ತದೆ.

ಪಹಲ್ಗಾಮ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಮಾಯಕರ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾ ಅವರು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಎಂದು ಎಫ್‌ಐಆರ್ ತಿಳಿಸಿದೆ.

ನೇಹಾ ಸಿಂಗ್ ರಾಥೋಡ್ ಅವರ “ದೇಶ ವಿರೋಧಿ” ಹೇಳಿಕೆಗಳು ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿವೆ, ಅಲ್ಲಿ ಅವರು ಮೋದಿ ಸರ್ಕಾರದ ಮೇಲಿನ ದಾಳಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. “ನೇಹಾ ಸಿಂಗ್ ರಾಥೋಡ್ ಅವರ ಈ ಎಲ್ಲಾ ದೇಶ ವಿರೋಧಿ ಹೇಳಿಕೆಗಳನ್ನು ಪಾಕಿಸ್ತಾನಿ ಮಾಧ್ಯಮಗಳು ಭಾರತದ ವಿರುದ್ಧ ಬಳಸುತ್ತಿವೆ” ಎಂದು ಅದು ಹೇಳಿದೆ.

ಭೋಜ್‌ಪುರಿ ಗಾಯಕಿ ದೇಶದ ಕವಿ ಸಮುದಾಯದ ಹಾಗೂ ಒಂದು ರಾಷ್ಟ್ರವಾಗಿ ಭಾರತದ ಗೌರವ ಮತ್ತು ಗೌರವವನ್ನು ಕುಗ್ಗಿಸಿದ್ದಾರೆ ಎಂಬ ಆರೋಪವೂ ಇದೆ.

ಏಪ್ರಿಲ್ 25 ರಂದು ಪೋಸ್ಟ್ ಮಾಡಿರುವ ಗಾಯಕಿ ತನ್ನ ವೀಡಿಯೊದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಬಂದೂಕುಗಳನ್ನು ಗುರಿಯಿಟ್ಟು, (ರಷ್ಯಾ-ಉಕ್ರೇನ್) ಯುದ್ಧವನ್ನು ನಿಲ್ಲಿಸಬಲ್ಲ ವ್ಯಕ್ತಿಗೆ ತನ್ನದೇ ಆದ ದೇಶದಲ್ಲಿ ಭಯೋತ್ಪಾದಕ ದಾಳಿಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಮತ್ತು ಈ ವಿಷಯವನ್ನು “ರಾಜಕೀಯಗೊಳಿಸಬೇಡಿ” ಮತ್ತು ಪ್ರಶ್ನೆಗಳನ್ನು ಕೇಳಬೇಡಿ ಎಂದು ಕೇಳಿದ್ದಕ್ಕಾಗಿ ಪ್ರಧಾನಿಯವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡರು.

“ನಾನು ಸರ್ಕಾರವನ್ನು ಯಾವುದರ ಬಗ್ಗೆ ಪ್ರಶ್ನಿಸಬೇಕು? ಶಿಕ್ಷಣ ಮತ್ತು ಆರೋಗ್ಯದ ವಿಷಯಗಳು ಇನ್ನು ಮುಂದೆ ಪ್ರಸ್ತುತವಾಗಿಲ್ಲ. ರಾಷ್ಟ್ರೀಯತೆಯ ರಾಜಕೀಯ ಮತ್ತು ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ಉತ್ತುಂಗದಲ್ಲಿದ್ದರೂ ಜನರು ಕೊಲ್ಲಲ್ಪಡುತ್ತಿದ್ದಾರೆ” ಎಂದು ನೇಹಾ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಉಲ್ಲೇಖಿಸಲು ಸಾಮಾನ್ಯವಾಗಿ ಬಳಸುವ 56 ಇಂಚಿನ ಎದೆಯ ಹೊರತಾಗಿಯೂ, ಜನರು ಕೊಲ್ಲಲ್ಪಡುತ್ತಿದ್ದಾರೆ ಎಂದು ಅವರು ಪ್ರಧಾನಿಯ ಮೇಲೆ ವಾಗ್ದಾಳಿ ನಡೆಸಿದರು. “ನಾನು ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಶ್ನಿಸಬೇಕೇ?”

“ಪುಲ್ವಾಮಾ ದಾಳಿಯ ನಂತರದಂತೆ” ಪ್ರಧಾನಿ ಮೋದಿ ಪಹಲ್ಗಾಮ್ ದಾಳಿಯ ಸಂತ್ರಸ್ತರ ಹೆಸರಿನಲ್ಲಿ ಮತ ಕೇಳುತ್ತಾರೆ ಎಂದು ಅವರು ಹೇಳಿದ್ದರು.

ನೇಹಾ ಅವರ ಈ ವಿಡಿಯೋಗಳನ್ನು ಪಾಕಿಸ್ತಾನದ ಪತ್ರಕರ್ತರು, ಹಾಗೂ ಜನಸಾಮಾನ್ಯರು ಶೇರ್ ಹೆಚ್ಚು ಶೇರ್ ಮಾಡುವ ಮೂಲಕ ಅವುಗಳನ್ನು ಪ್ರಧಾನಿ ಮೋದಿ ವಿರುದ್ಧ ಬಳಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಗಾಯಕಿ ನೇಹಾ ಸಿಂಗ್ ಮೇಲೆ ಸದ್ಯ ಎಫ್ ಐ ಆರ್ ದಾಖಲಾಗಿದೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ನೇಹಾ ಸಿಂಗ್, ಮೋದಿ ಭಕ್ತರು ನನ್ನನ್ನು ದೇಶದ್ರೋಹಿ ಎನ್ನುತ್ತಿದ್ದಾರೆ, ನಾನು ನನ್ನ ದೇಶದ ಪರ ಮಾತಾಡುವುದನ್ನು ಬಿಡುವುದಿಲ್ಲ, ನನ್ನ ಕುಟುಂಬದಲ್ಲಿ ಅನೇಕರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ, ದೇಶ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪಾಕಿಸ್ತಾನಿಗಳು ನನ್ನ ವಿಡಿಯೋ ಶೇರ್ ಮಾಡಿದ ಕಾರಣಕ್ಕೆ ನಾನು ದೇಶದ್ರೋಹಿ ಆಗುವುದಿಲ್ಲ, ಇಲ್ಲಿ ನಡೆದ ಭಯೋತ್ಪಾದಕ ದಾಳಿ, ಕೇಂದ್ರ ಸರ್ಕಾರದ ರಕ್ಷಣಾ ವೈಫಲ್ಯದಿಂದ ಆದದ್ದು, ಹಾಗಾಗಿ ನಾನು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತೇನೆ ಎಂದು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಪರ-ವಿರೋಧಗಳು ಚರ್ಚೆಯಾಗುತ್ತಿವೆ.

ಈ ಹಿಂದೆ 2023 ರಲ್ಲಿ, ಕಾನ್ಪುರ ದೇಹತ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ತಾಯಿ-ಮಗಳ ಜೋಡಿ ಸಾವಿನ ಬಗ್ಗೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ ‘ಯುಪಿ ಮೇ ಕಾ ಬಾ- ಸೀಸನ್ 2’ ಹಾಡಿಗಾಗಿ ನೇಹಾ ಅವರಿಗೆ ಪೊಲೀಸ್ ನೋಟಿಸ್ ನೀಡಲಾಗಿತ್ತು.

ಕಾಶ್ಮೀರ ನಮ್ಮದು, ಭಾರತೀಯರು ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಅವರ ಜೊತೆ ನಿಲ್ಲಬೇಕು: ಅತುಲ್ ಕುಲಕರ್ಣಿ
ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಆ ಪ್ರದೇಶದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಹಿರಿಯ ನಟ ಅತುಲ್ ಕುಲಕರ್ಣಿ ಕರೆ ನೀಡಿದ್ದಾರೆ.

ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್ ಗೆ ಏಪ್ರಿಲ್ 27ರ, ಭಾನುವಾರ ಭೇಟಿ ನೀಡಿರುವ ಅವರು ಇದು ನಮ್ಮ ಕಾಶ್ಮೀರ, ಇದು ನಮ್ಮ ದೇಶ, ನಾವು ಬರುತ್ತೇವೆ” ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.

ಜಗತ್ತಿಗೆ ಈ ಸಂದೇಶ ನೀಡಲು ನಾನು ಸಹ ಪಹಲ್ಗಾಮ್ ಗೆ ಬಂದಿದ್ದೇನೆ. “ಕಾಶ್ಮೀರ ಭಾರತದ ಆಸ್ತಿ. ಧೈರ್ಯ ಭಯಕ್ಕಿಂತಲೂ ಹೆಚ್ಚು ತೂಕ ಹೊಂದಿರುತ್ತದೆ. ದ್ವೇಷವು ಪ್ರೀತಿಗೆ ಸೋತಿದೆ. ಕಾಶ್ಮೀರಕ್ಕೆ ಹೋಗೋಣ. ಸಿಂಧ್, ಝೀಲಂ ತೀರಕ್ಕೆ ಹೋಗೋಣ. ನಾನು ಬಂದಿದ್ದೇನೆ, ನೀವು ಕೂಡ ಬನ್ನಿ ಎಂದು  ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ.

ಪಹಲ್ಗಾಮ್ ದಾಳಿಯಿಂದಾಗಿ ಪ್ರವಾಸೋಧ್ಯಮವನ್ನೇ ನಂಬಿ ಬದುಕುತ್ತಿದ್ದ ಕಾಶ್ಮೀರಿಗಳು ಆತಂಕದಲ್ಲಿದ್ದಾರೆ. ಈ ಕಾರಣಕ್ಕೆ ಅತುಲ್ ಕುಲಕರ್ಣಿ ಈ ನಿರ್ಣ/ವನ್ನು ತೆಗೆದುಕೊಂಡಿದ್ದು, ಸಹ ಭಾರತೀಯರಿಗೆ ಕಾಶ್ಮೀರಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ.

ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಖಾಲಿ ವಿಮಾನದ ಸೀಟುಗಳು, ಅವರ ಬೋರ್ಡಿಂಗ್ ಪಾಸ್ ಮತ್ತು ವಿಮಾನ ಸಿಬ್ಬಂದಿಯ ಟಿಪ್ಪಣಿಗಳೊಂದಿಗೆ ಖಾಲಿ ವಿಮಾನವನ್ನು ನಾವು ಭರ್ತಿ ಮಾಡಬೇಕಾಗಿದೆ ಚಲಿಯೇ ಜಿ, ಕಾಶ್ಮೀರ್ ಚಲೀನ್” ಎಂದು ಶೀರ್ಷಿಕೆ ನೀಡಿದ್ದಾರೆ.

Mumbai to Srinagar, Kashmir. #ChaloKashmir #Feet_in_Kashmir #Kashmiriyat #love_compassion #DefeatTerror pic.twitter.com/kncqpA9Xpd
— atul kulkarni (@atul_kulkarni) April 27, 2025

ಏಪ್ರಿಲ್ 27 ರಂದು, ಅತುಲ್ ಕುಲಕರ್ಣಿ ಅವರು ಪಹಲ್ಗಮ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ಅಂಗಡಿಯಲ್ಲಿ ಸ್ಥಳೀಯ ಖಾದ್ಯಗಳನ್ನು ಖರೀದಿಸುತ್ತಿರುವ ಒಂದೆರಡು ಭಾವಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಒಂದು ಭಾವಚಿತ್ರದಲ್ಲಿ, ಅವರು “ಐ ಲವ್ ಪಹಲ್ಗಾಮ್” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಭಾವಚಿತ್ರದಲ್ಲಿ ಅವರು ಕಾಶ್ಮೀರಿ ಅಂಗಡಿಯಿಂದ ಕ್ರಿಕೆಟ್ ಬ್ಯಾಟ್ ಖರೀದಿಸುತ್ತಿರುವುದನ್ನು ತೋರಿಸಲಾಗಿದೆ. ಅಂಗಡಿಯ ಮಾಲೀಕರು ನಟನಿಗೆ ಕಷ್ಟದ ಸಮಯದಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಅವರ ಒಂದು ಪೋಸ್ಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಅತುಲ್ ಸರ್, ನೀವು ನಮ್ಮೂರಿನಲ್ಲಿ ಆತಿಥ್ಯ ವಹಿಸಿದ್ದು ತುಂಬಾ ಸಂತೋಷವಾಯಿತು. ಈ ಕಷ್ಟದ ಸಮಯದಲ್ಲಿ ಆಗಮಿಸಿ ಶತ್ರುಗಳಿಗೆ ನಾವು ಹೆದರುವುದಿಲ್ಲ ಎಂದು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾವು ಒಟ್ಟಾಗಿ ಇದನ್ನು ಜಯಿಸುತ್ತೇವೆ” ಎಂದು ಹೇಳಿದ್ದಾರೆ.

20ನೇ ಶತಮಾನದ ಬಹಳ ದೊಡ್ಡ ಪುಸ್ತಕ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ರಹಮತ್ ತರೀಕೆರೆ
ಬೆಂಗಳೂರು: ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಲೇಖಕರ ಸಂಘ ಬಹುತ್ವ ಆಯಾಮದ ಚಳವಳಿಯಾಗಿ ಮೂಡಲಿ ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಏಪ್ರಿಲ್ 23ರ, ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆದ  ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘದ ಉದ್ಘಾಟನೆ ಜೊತೆಗೆ ಅಂಬೇಡ್ಕರ್ ಜಯಂತಿ-ವಿಶ್ವ ಪುಸ್ತಕ ದಿನಾಚರಣೆಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

1979 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಲಿತ ಸಾಹಿತ್ಯಕ್ಕೆ ವೇದಿಕೆಯಲ್ಲಿ ಅವಕಾಶ ನೀಡದಿದ್ದಕ್ಕಾಗಿ ಒಂದು ಪ್ರತಿಭಟನೆಯಾಗಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಿದಂತೆ, ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘವೂ ಕೆಲಸ ಮಾಡುತ್ತೆ ಎಂದೆನಿಸುತ್ತೆ. ಇದರಲ್ಲಿ ಒಂದು ಪ್ರತಿರೋಧ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿಯಲ್ಲಿ ಮೂರು ಮಾದರಿಗಳಿವೆ. ಶುದ್ಧ ವ್ಯಾಪಾರ ಮಾದರಿ, ಪುಸ್ತಕವನ್ನು ರಾಜಕೀಯ ಅಜೆಂಡಾವನ್ನಾಗಿ ನೋಡುವ ಮಾದರಿ, ಪುಸ್ತಕವನ್ನು ಮನುಕುಲದ ಸೇವೆಯನ್ನಾಗಿ, ಪ್ರಜಾಪ್ರಭುತ್ವದ ಸಂವೇದನಾಶೀಲ ನಾಗರಿಕರನ್ನು ಸೃಷ್ಠಿ ಮಾಡುವುದೇ ಪುಸ್ತಕ ಸಂಸ್ಕೃತಿಯ ಉದ್ದೇಶವನ್ನಾಗಿಸಿಕೊಂಡ ಮಾದರಿಯಾಗಿದೆ.

ಕಳೆದ 5ವರ್ಷಗಳಲ್ಲಿ ಪುಸ್ತಕದ ಅಂಗಡಿಯಲ್ಲಿ ಹೆಚ್ಚು ಮಾತಾಡಿದ್ದೇನೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದ ಚರ್ಚೆಗಳು ಪುಸ್ತಕದಂಗಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.

20ನೇ ಶತಮಾನದಲ್ಲಿ ಬಹಳ ದೊಡ್ಡ ಪುಸ್ತಕ ಪ್ರೇಮಿ ಯಾರಾದರೂ ಇದ್ದರೆ, ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಕಾರ್ಮಿಕ ಮಂತ್ರಿ ಯಾಗಿದ್ದಾಗ, ಹಳೆಯ ಪುಸ್ತಕದಂಗಡಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಭಾರತದ ಮಂತ್ರಿಯೊಬ್ಬರು ಧೂಳಿನ ಪುಸ್ತಕದಂಗಡಿಯಲ್ಲಿ ಸಮಯ ಕಳೆದಿದ್ದೂ ಯಾರಾದೂ ಇದ್ದರೆ ಅದೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರ ಚಳವಳಿಯ ಪುಸ್ತಕಗಳು ಮುಖ್ಯ ಪಾತ್ರವಹಿಸಿವೆ ಎಂದು ತಿಳಿಸಿದರು.

ಸಿನೆಮಾ ಮತ್ತು ನಾಟಕಗಳು ನಾಯಕ ಮತ್ತು ನಿರ್ದೇಶಕ  ಕೇಂದ್ರಿತವಾಗಿರುತ್ತವೆ. ಆದರೆ ಸಿನೆಮಾದಲ್ಲಿ ಲೈಟ್‌ಬಾಯ್, ಪರದೆ ಎಳೆಯುವವರು ಇಲ್ಲದಿದ್ದರೇ ಏನಾಗುತ್ತಿತ್ತು. ಸಾಮೂಹಿಕ ದುಡಿಮೆಯ ಸಂಸ್ಕೃತಿಯ ಭಾಗವಾಗಿ ಕಲಾ ಮಾದ್ಯಮಗಳು ಸೃಷ್ಠಿಯಾಗಿವೆ. ಆದರೆ ನಟ ಕೇಂದ್ರಿತವಾಗಿ ವ್ಯಾಖ್ಯಾನ ಮಾಡಿ, ಇಡೀ ಕಲೆಯ ಸೃಷ್ಠಿಯ ಹಿಂದೆ ಇರುವ ವ್ಯಕ್ತಿಗಳನ್ನು ನಾವು ಮರೆತಿದ್ದೇವೆ.

ಇದು ಭಾರತೀಯರು ವ್ಯಕ್ತಿ ಕೇಂದ್ರಿತ ಇತಿಹಾಸವನ್ನು ರಚನೆ ಮಾಡುವ ದುಷ್ಪರಿಣಾಮದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು.

ಈಗ ಸಾಮೂಹಿಕ ಪ್ರಜ್ಞೆಯೇ ಇಲ್ಲವಾಗಿದೆ. ಆದಷ್ಟು ಹೊಸ ಉದ್ಯಮಶೀಲತೆಗಳನ್ನು ಸಾಮೂಹಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕು. ಬಹುತ್ವ ಎನ್ನುವುದು ಆದರ್ಶವಾದಾಗ ಅದನ್ನು ಪಾಲಿಸಬೇಕು. ಕರ್ನಾಟಕದ ಎಲ್ಲ ಕ್ಷೇತ್ರಗಳ ಸಾಧಕರ ಹಿನ್ನೆಲೆಯಲ್ಲಿ ದುಡಿದಿರುವವರನ್ನು ಸೇರಿಸಿಕೊಂಡೇ ನಾವು ಚರಿತ್ರೆಯನ್ನು ಕಟ್ಟಬೇಕಿದೆ ಎಂದು ತಿಳಿಸಿದರು.

ಹೊಸತಲೆಮಾರು ಓದನ್ನು ಹೇಗೆ ನೋಡುತ್ತಾರೆ, ಡಿಜಿಟಲ್ ಯುಗದಲ್ಲಿ ನೋಡುವ ಮತ್ತು ಕೇಳುವ ಸಂಸ್ಕೃತಿ ಅತಿವೇಗವಾಗಿ ಬೆಳೆಯುತ್ತಿದ್ದು, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ‘ನಾನು ಬರಹಗಾರನಲ್ಲ, ಚಿಂತಕನೂ ಅಲ್ಲ, ಆದರೆ ಬರಹಗಾರರು, ಚಿಂತಕರ ಜೊತೆ ಓದುತ್ತಾ, ಅವರ ಒಡನಾಟದಲ್ಲಿ ಬೆಳೆದ ಹೋರಾಟಗಾರ, ನಾವು ಓದಿಗೆ ತೆರೆದುಕೊಂಡದ್ದೇ ವಿಭಿನ್ನ ಎಂದು ಹೇಳಿದರು.

ಈ ವೇಳೆ ದೇಶದಲ್ಲೆಡೆ, ಹಾಗೂ ಜಗತ್ತಿನ ಸುತ್ತಮುತ್ತ ನೋಡಿರೆ ಪ್ರಜಾತಂತ್ರವನ್ನು ಬಳಸಿಕೊಂಡೇ ಸರ್ವಾಧಿಕಾರಿಗಗಳು ಅಧಿಕಾರಕ್ಕೇರುತ್ತಿದ್ದಾರೆ. ಅವರೆಲ್ಲರೂ ಪುಸ್ತಕ ದ್ವೇಷಿಗಳೇ, ಅವರಿಗೆ ಒಬ್ಬ ಕನ್ನಡಿಗನನ್ನು, ಒಂದು ಮಗುವನ್ನು ಕೂಡ ಸಹಿಸಿಕೊಳ್ಳಲಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯ ಪಾತ್ರ ಏನು ಎನ್ನುವುದನ್ನು ಕೂಡ ಆಲೋಚನೆ ಮಾಡಬೇಕಿದೆ. ಇಡೀ ಪುಸ್ತಕೋದ್ಯಮ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿವೆ. ಪುಸ್ತಕ ಮೇಳಗಳನ್ನು ಕೂಡ ಬಂಡವಾಳಶಾಹಿಗಳು ಸ್ಟಾರ್ ಹೊಟೇಲ್‌ಗಳಲ್ಲಿ ನಡೆಸುತ್ತಿದ್ದಾರೆ ಅಂತಾ ಆತಂಕ ವ್ಯಕ್ತ ಪಡಿಸಿದರು.

ಜೊತೆಗೆ ಪುಸ್ತಕ ಲೋಕ ಹೇಗೆ ಅಂಬೇಡ್ಕರ್ ಬರಹಗಳನ್ನು ವ್ಯವಸ್ಥಿತವಾಗಿ ಜನರ ಕೈಗೆ ಸಿಗದಂತೆ ನೋಡಿಕೊಂಡಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ದಾರಿ ಮಾಡಿಕೊಡುತ್ತಿರುವ ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಶುಭಾಷಯ ಕೋರುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಪ್ರಕಾಶಕ ಗುರುಪ್ರಸಾದ್ ಡಿ.ಎನ್, ಪ್ರಕಾಶಕಿ ಡಾ.ಮಮತಾ ಕೆ.ಎನ್, ರಹಮತ್ ತರೀಕೆರೆ ಸೇರಿದಂತೆ ಅನೇಕ ಗಣ್ಯರು, ಪುಸ್ತಕಾಸಕ್ತರು ಉಪಸ್ಥಿತರಿದ್ದರು.

ಗಾಂಧೀಜಿ, ಪೊಲೀಸ್ ಅಧಿಕಾರಿ ವಿರುದ್ಧ ನಿಂದನಾತ್ಮಕ ಹೇಳಿಕೆ: ಯತಿ ನರಸಿಂಹಾನಂದನ ಮೇಲೆ ಕೇಸ್ ದಾಖಲು
ಗಾಜಿಯಾಬಾದ್: ಗಾಂಧೀಜಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ವಿಡಿಯೋಗಳನ್ನು ಆಧರಿಸಿ ದಾಸ್ನಾ ದೇವಾಲಯದ ಅರ್ಚಕ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿಯ ವಿರುದ್ಧ ಮಾರ್ಚ್ 22, ಶನಿವಾರ ಅಧಿಕೃತವಾಗಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನರಸಿಂಹಾನಂದ ಗಿರಿ ಸ್ವಾಮೀಜಿ ವಿರುದ್ಧ ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ತಿವಾರಿ ಅವರು ವೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಾಮೀಜಿ ಹೇಳಿಕೆಗಳು ಕೋಮು ಸಾಮರಸ್ಯ ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅರ್ಚಕ ಯತಿ ನರಸಿಂಹಾನಂದ ಮಹಾತ್ಮ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಆಯುಕ್ತ ಸುರೇಂದ್ರನಾಥ್ ತಿವಾರಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾಮೀಜಿ ಅವರು ಮಾತನಾಡಿರುವ ವಿಡಿಯೊದಲ್ಲಿ ಗಾಜಿಯಾಬಾದ್ ಪೊಲೀಸ್ ಆಯುಕ್ತ ಮತ್ತು ಲೋನಿಯ ಸಹಾಯಕ ಪೊಲೀಸ್ ಆಯುಕ್ತರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದೂ ಸುರೇಂದ್ರ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಸಾರಸ್ವತ ಭೂಮಿ ಸಂಶೋಧನೆಯ ಕನ್ನೆ ನೆಲವಾಗಿದೆ: ಪ್ರೊ.ಹಂಪ ನಾಗರಾಜಯ್ಯ
ನಮ್ಮ ಕನ್ನಡ ಸಾರಸ್ವತ ಭೂಮಿಯು ಯಾವತ್ತೂ ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ ಎಂದು ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು” ಕುರಿತ 5 ದಿನಗಳ ರಾಷ್ಟ್ರಮಟ್ಟದ ‘ಸಂಶೋಧನ ಕಾರ್ಯಾಗಾರ’ವನ್ನು ಅಂತರ್ಜಾಲದ ಜೂಮ್ ವೇದಿಕೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಂಶೋಧನೆ ಎಂದರೆ ಹುಡುಗಾಟವಲ್ಲ; ಅದು ನಿರಂತರವಾಗಿ ನಡೆಸಬೇಕಾದ ಹುಡುಕಾಟ. ಸಂಶೋಧನೆಗಿರುವುದು ಬೆವರಿನ ದಾರಿಯೇ ಹೊರತು ಯಾವುದೇ ಅಡ್ಡದಾರಿಗಳಿಲ್ಲ. ಶಿಸ್ತುಬದ್ಧವಾದ ಪೂರ್ವ ತಯಾರಿ, ಸತತ ಅಭ್ಯಾಸ, ವ್ಯಾಪಕವಾದ ಅಧ್ಯಯನವು ಸಂಶೋಧನೆಗೆ ಅತ್ಯವಶ್ಯಕ. ಭಾಷಾವಿಜ್ಞಾನದ ಅರಿವಿನೊಂದಿಗೆ ಸ್ವಭಾಷಾ ಜ್ಞಾನವೂ ಇರಬೇಕು. ಆಯ್ಕೆ ಮಾಡಿಕೊಳ್ಳುವ ವಸ್ತುವನ್ನು ಕುರಿತು ಈಗಾಗಲೇ ನಡೆದಿರುವ ಸಂಶೋಧನೆಯನ್ನು ಪರಾಮರ್ಶೆ ಮಾಡುವುದು ಔಚಿತ್ಯಪೂರ್ಣವಾದುದು. ಪೂರ್ವಸೂರಿಗಳ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಮುನ್ನಡೆದು ಸ್ವೋಪಜ್ಞತೆಯಿಂದ ಹೊಸತಾದ ಸಂಶೋಧನೆಯನ್ನು ಕೈಗೊಳ್ಳಬೇಕು. ಹೇಳಿದ್ದನ್ನೇ ಹೇಳಿದರೆ ಸಂಶೋಧನೆಯಾಗದು. ಹಳೆ ಮಾತಿಗೆ ಹೊಸಮಾತನ್ನು ಕೂಡಿಸಿದರೆ ಕರಿಮೋಡಕ್ಕೆ ಬಿಳಿಚೌಕಟ್ಟು ಕಟ್ಟಿದಂತಾಗುತ್ತದೆ ಎಂದರು.

ಇಂದಿನ ಯುವಸಮುದಾಯವು ಸೃಜನಶೀಲ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಸಂಶೋಧನ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿದೆ. ಕನ್ನಡ ಸಂಶೋಧನ ಕ್ಷೇತ್ರಕ್ಕೆ ಇಂದು ದೊಡ್ಡ ದೊಡ್ಡ ವಿದ್ವಾಂಸರ ಬರಗಾಲ ಬಂದಿದೆ ಎಂದುಕೊಳ್ಳಬಾರದು. ಈಗಿನ ಹೊಸ ತಲೆಮಾರಿನ ಸಂಶೋಧಕರೇ ದೊಡ್ಡ ವಿದ್ವಾಂಸರಾಗಿ ರೂಪುಗೊಳ್ಳಬೇಕು. ಹಿಂದಿನ ಅನೇಕ ವಿದ್ವಾಂಸರ ಮಾದರಿಗಳು ನಮ್ಮ ಮುಂದಿವೆ. ಅವುಗಳನ್ನು ಅನುಸರಿಸಿ ಪುನರವಲೋಕನ ಮಾಡುವ ಮೂಲಕ ಮುಂದೆ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡದ ಆದಿಕವಿಯಾದ ಪಂಪನು ಸಂಸ್ಕೃತ ಮೂಲದ ಮಹಾಭಾರತವನ್ನು ಮೊಟ್ಟಮೊದಲ ಬಾರಿಗೆ ತರುವಾದ ಪ್ರಾದೇಶಿಕ ಭಾಷೆಗಲ್ಲಿ ಒಂದಾದ ಕನ್ನಡಕ್ಕೆ ತಕ್ಕುದಾಗಿ ಪುನರ್ ಸೃಷ್ಠಿ ಮಾಡಿದನೇ ಹೊರತು ಯಥಾವತ್ತು ಅನುಸೃಷ್ಠಿ ಮಾಡಲಿಲ್ಲ. ಪಂಪನ ಸೃಜನಶೀಲ ಪ್ರತಿಭಾ ವ್ಯಕ್ತಿತ್ವದಿಂದ ಮೂಡಿಬಂದ ಪಂಪಭಾರತವು ತದನಂತರ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಹಾಭಾರತಗಳ ಸೃಷ್ಟಿಗೆ ಪ್ರೇರಣೆಯಾಯ್ತು. ತೆಲುಗಿನಲ್ಲಿ ನನ್ನಯ, ಎರ್ರನ, ತಿಕ್ಕನರ ಭಾರತಗಳು ಮೂಡಿಬಂದವು. ಪಂಪನು ಕನ್ನಡದ ಆದಿಕವಿಯಾದಂತೆ, ಆತನ ತಮ್ಮನಾದ ಜಿನವಲ್ಲಭನು ತೆಲುಗಿನ ಆದಿಕವಿಯೇ ಆಗಿದ್ದಾನೆ. ಯಾಕೆಂದರೆ ತಾಯಿ ಭಾಷೆಯಾದ ಕನ್ನಡದಲ್ಲಿ ಪಂಪ ಬರೆದರೆ, ತಂದೆ ಭಾಷೆಯಾದ ತೆಲುಗಿನಲ್ಲಿ ಜಿನವಲ್ಲಭನು ಕಾವ್ಯ ನೀಡುವ ಮೂಲಕ ಕನ್ನಡ ಹಾಗೂ ತೆಲುಗಿಗೆ ತನ್ನದೇ ಆದ ಅಮೂಲ್ಯ ಕಾಣಿಕೆ ನೀಡಿದ್ದಾನೆ. ಪಂಪನ ಮಹಾಕಾವ್ಯಗಳನ್ನು ಇತರ ಪ್ರಾದೇಶಿಕ ಹಾಗೂ ಜಾಗತಿಕ ಮಹಾಕಾವ್ಯಗಳೊಂದಿಗೆ ತೌಲನಿಕವಾಗಿ ಅಧ್ಯಯನ ನಡೆಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆಶಯ ಮಾತುಗಳನ್ನಾಡಿದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರೂ ಆದ ಫಾ.ಡಾ.ಜೋಶಿ ಮ್ಯಾಥ್ಯೂ ಅವರು, ಸಂಶೋಧನೆ ಎಂಬುದು ನಿರಂತರ ಹುಡುಕಾಟದ ಮೂಲಕ ನಿಚ್ಚಂಪೊಸತಾಗಿ ಮೂಡುವ ಲೋಕದ ಬೆಳಗು. ಕನ್ನಡ ಸಂಶೋಧನ ಚರಿತ್ರೆಯಲ್ಲಿ ವಿದ್ವನ್ಮಣಿಗಳಾಗಿ ಬೆಳಗಿದ ಹಿಂದಿನ ಸಂಶೋಧಕ ದೀಪಗಳನ್ನು ಇಂದಿನ ಸಂಶೋಧಕರು ತಮ್ಮೊಳಗೆ ಅಂತಸ್ಥ ಮಾಡಿಕೊಂಡು ಸಾಗಬೇಕಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಪ್ರಾಧ್ಯಾಪಕರೂ ಆದ ಪ್ರೊ.ಎನ್.ಕೆ.ಲೋಲಾಕ್ಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನರಾದ ಡಾ.ಎ.ವಿ.ಗೋಪಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್. ಅವರು ವಂದಿಸಿದರು. ಕಾರ್ಯಾಗಾರದ ಸಂಯೋಜಕರಾದ ಕನ್ನಡ ಪ್ರಾಧ್ಯಾಪಕ ಡಾ.ಎಂ.ಭೈರಪ್ಪ ಅವರು ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ಡಾ.ಪ್ರೇಮಕುಮಾರ್ ಕೆ., ಡಾ.ಕಿರಣಕುಮಾರ್ ಹೆಚ್.ಜಿ. ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ ಸುಮಾರು 300 ಜನ ಸಂಶೋಧಕರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಮಧ್ಯಮ ವರ್ಗದ ಸುಧಾರಣೆಗಾಗಿ ಕೇಂದ್ರ ಸರ್ಕಾರದ ಮುಂದೆ 7 ಬೇಡಿಕೆಗಳನ್ನಿಟ್ಟ ಕೇಜ್ರಿವಾಲ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದೆ. ಫೆಬ್ರವರಿ 5ರಂದು  ಚುನಾವಣೆ ನಡೆಯಲಿದ್ದು. ಇಲ್ಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅದರಲ್ಲೂ ಈ ಚುನಾವಣೆ ಬಿಜೆಪಿ ಮತ್ತು ಎಎಪಿ ನಡುವಿನ ಹೋರಾಟ ಅಂತಲೇ ಬಣ್ಣಿಸಲಾಗ್ತಿದೆ.

ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್  ಮತ್ತೊಮ್ಮೆ ದೆಹಲಿಯ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ. ಇದೀಗ ಕೇಜ್ರಿವಾಲ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮಧ್ಯಮ ವರ್ಗದವರಿಗಾಗಿ ಏಳು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಈ ಕುರಿತು ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ಮಧ್ಯಮ ವರ್ಗವು ಭಾರತೀಯ ಆರ್ಥಿಕತೆಯ ನಿಜವಾದ ಶಕ್ತಿಯಾಗಿದೆ. ಆದರೆ ದೀರ್ಘಕಾಲದಿಂದ ಅವರನ್ನು ನಿರ್ಲಕ್ಷಿಸುತ್ತಿದ್ದು ಅವರನ್ನು ಕೇವಲ ತೆರಿಗೆ ಸಂಗ್ರಹಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಅವರ ಬದುಕಿನ ಸುಧಾರಣೆಗಾಗಿ 7 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.

ಬೇಡಿಕೆಗಳು:

ಶಿಕ್ಷಣ ಕ್ಷೇತ್ರಕ್ಕೆ ಸಂಬಧಿಸಿದ ಬಜೆಟ್‌ ಈಗಿರುವ ಶೇ 2ರಿಂದ ಶೇ 10ಕ್ಕೆ ಏರಿಸಬೇಕು ಮತ್ತು ಖಾಸಗಿ ಶಾಲೆಗಳ ಶುಲ್ಕವನ್ನು ಮಿತಿಗೊಳಿಸಬೇಕು .

ಗುಣಮಟ್ಟದ ಶಿಕ್ಷಣ ಎಲ್ಲರಿಗೂ ತಲುಪುವಂತೆ ಮಾಡಲು ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಮತ್ತು ವಿದ್ಯಾರ್ಥಿವೇತನ ನೀಡಬೇಕು.‌

ಆರೋಗ್ಯ ವಿಮಾ ಕಂತುಗಳ ಮೇಲಿನ ತೆರಿಗೆಗಳನ್ನು ತೆಗೆದು ಹಾಕಬೇಕು. ಜತೆಗೆ ಅದರ ಜಿಡಿಪಿಯನ್ನು ಶೇ 10ಕ್ಕೆ ಏರಿಸಬೇಕು.

ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವ ಕಾರಣ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸಬೇಕು.

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತೆಗೆದುಹಾಕಬೇಕು

ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ಸೇರಿದಂತೆ ವಿವಿಧ ನಿವೃತ್ತಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದರು.

ಇತ್ತೀಚಿನ ವರ್ಷಗಳಲ್ಲಿ ಸ್ಥಗಿತಗೊಂಡಿರುವ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿಯನ್ನು ಮತ್ತೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬೇಡಿಕೆಗಳ ಜೊತೆಗೆ ಎಎಪಿ ಪಕ್ಷದ ಜವಾಬ್ದಾರಿಯನ್ನು ವಿವರಿಸಿದ ಅವರು ಎಎಪಿ ಸಂಸದರು ಮುಂಬರುವ ಸಂಸತ್ತಿನ ಅಧಿವೇಶನಗಳಲ್ಲಿ ಮಧ್ಯಮ ವರ್ಗದ ಪರ ಧ್ವನಿ ಎತ್ತುತ್ತಾರೆ, ಅವರ ಸಮಸ್ಯೆಗಳನ್ನು ರಾಜಕೀಯ ಭಾಷಣದ ಕೇಂದ್ರಬಿಂದುವನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ ಎಂದು ವಾಗ್ದಾನ ನೀಡಿದ್ದಾರೆ.

ಜಾತಿ ವಾಸ್ತವವಾಗಿರುವ ಭಾರತದಲ್ಲಿ ಜಾತಿಗಣತಿ ಅತೀ ಮುಖ್ಯ: ಬಂಜಗೆರೆ ಜಯಪ್ರಕಾಶ್
ಬೆಂಗಳೂರು: 2025ನೇ ಸಾಲಿನಲ್ಲಿ ರಾಷ್ಟ್ರೀಯ ಜನಗಣತಿ ನಡೆಸುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸಬೇಕು, ಈ ಮೂಲಕ ಎಲ್ಲಾ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಲೋಹಿಯ ವಿಚಾರ ವೇದಿಕೆ ಒತ್ತಾಯಿಸಿದ್ದು. ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು, ಉಭಯ ಸದನಗಳಲ್ಲಿಯೂ ಈ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಏರಬೇಕೆಂದು ಆಗ್ರಹಿಸಿದೆ.

2025 ಜನವರಿ 15 ರಂದು ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅವರು ‘ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ಕಾರಣ ನಡೆಸಲಾಗಲಿಲ್ಲ. ಇದನ್ನು 2025ರಲ್ಲಿ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಕಲಂ ಸೇರಿಸಿ, ದೇಶಾದ್ಯಂತ ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕೆನ್ನುವುದು ನಮ್ಮ ಒತ್ತಾಯ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕೆನ್ನುವುದು ನಮ್ಮ ಬೇಡಿಕೆ. ಇದನ್ನು ಸಾಧಿಸಲು ನಾವು ಪ್ರತಿ ಜಿಲ್ಲೆಯಲ್ಲಿ ಜಾತಿ ಜನಗಣತಿ ಜಾಥಾ ಆಯೋಜಿಸಲು ನಿರ್ಧರಿಸಿದ್ದೇವೆ’ ಎಂದರು.

ದೇಶದಲ್ಲಿ ಮೊದಲ ಬಾರಿ ಜಾತಿಗಣತಿ ನಡೆದಿದ್ದು 1931ರಲ್ಲಿ. ಈ 94 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ 100 ಕೋಟಿಗಿಂತಲೂ ಹೆಚ್ಚು ಏರಿದ್ದು, ನೂರಾರು ಅತಿ ಹಿಂದುಳಿದ ಸಮುದಾಯಗಳ ವಿವರ ದೊರೆಯದೆ ಅವುಗಳು ಅವಕಾಶ ವಂಚಿತವಾಗಿವೆ.

ಈ ಹಿಂದುಳಿದ ಸಮುದಾಯಗಳ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ, ಇವುಗಳಿಗೆ ಸೇರಿದ ಮುಕ್ಕಾಲು ಪಾಲು ಜನರು ಪ್ರೌಢಶಿಕ್ಷಣ ಪಡೆದುಕೊಳ್ಳಲಾಗಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 102 ಜಾತಿಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಯ ಪ್ರವರ್ಗ -1ರಲ್ಲಿ ಸೇರಿಸಲಾಗಿದೆ. ಇನ್ನುಳಿದ 95 ಜಾತಿಗಳು ಪ್ರವರ್ಗ- 2(ಎ)ರಲ್ಲಿ ಒಳಗೊಂಡಿವೆ. ಅಧ್ಯಯನವೊಂದರ ಪ್ರಕಾರ ಇವುಗಳಲ್ಲಿ 97 ಜಾತಿಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿಯೂ ಸರ್ಕಾರದಲ್ಲಿ ಆಟೆಂಡರ್ ಹುದ್ದೆ ಕೂಡಾ ಪಡೆದುಕೊಳ್ಳಲು ಆಗಿಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿದ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 54ರಷ್ಟಿದ್ದರೂ, ಅವುಗಳಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಅವಕಾಶ ಸಿಕ್ಕಿಲ್ಲ.

ಈ ಬಗೆಯ ತಾರತಮ್ಯದಿಂದ ಜನತಂತ್ರದ ಮೂಲ ಆಶಯವಾದ ಸಮಸಮಾಜದ ನಿರ್ಮಾಣ ಅಸಾಧ್ಯ. ಜಾತಿ, ಉಪಜಾತಿಗಳ ಸಮೀಕ್ಷೆ ನಡೆಸಿ, ಅವುಗಳ ಸ್ಥಿತಿಗತಿಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುವುದೇ ಈ ಸಮಸ್ಯೆಗೆ ಪರಿಹಾರ.

ಇದನ್ನು ಮನಗಂಡ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2015ರಲ್ಲಿ ಜಾತಿಗಣತಿ ನಡೆಸುವ ಕಾರ್ಯವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಿತ್ತು. ಆ ಮೂಲಕ ಕರ್ನಾಟಕ, ಜಾತಿಗಣತಿ ಕೈಗೆತ್ತಿಕೊಂಡ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಎಚ್.ಕಾಂತರಾಜ್ ವರದಿ ಅಪ್ರಸ್ತುತ

ತಾಂತ್ರಿಕ ಕಾರಣಗಳಿಂದಾಗಿ ಎಚ್. ಕಾಂತರಾಜ್ ನೇತೃತ್ವದ ಆಯೋಗ 2018ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ಆನಂತರ ಬಂದ ಸರ್ಕಾರಗಳು ವಿವಿಧ ಕಾರಣಗಳಿಗಾಗಿ ವರದಿಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ಪ್ರಯತ್ನ ನಡೆಸಿದ ಫಲವಾಗಿ ಕೆ. ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರದಿಯನ್ನು 2024ರ ಫೆಬ್ರವರಿಯಲ್ಲಿ ಸಲ್ಲಿಸಿತು.

ಆದರೆ, ವರದಿಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ದತ್ತಾಂಶ ಪ್ರಸ್ತುತ ಜನಸಂಖ್ಯೆಗೆ ಅಪ್ರಸ್ತುತವಾಗಿದೆ ಇದೇ ವೇಳೆ, ಕೇಂದ್ರ ಸರ್ಕಾರ ಜನಗಣತಿಗೆ ಸಜ್ಜಾಗಿದೆ. ಈ ಗಣತಿಯನ್ನು ಜಾತಿಗಣತಿಯಾಗಿ ಪರಿವರ್ತಿಸುವುದೇ ಈಗಿನ ಸಮಸ್ಯೆಗೆ ಸೂಕ್ತ ಪರಿಹಾರ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಅಂಶವನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರರವನ್ನು ಒತ್ತಾಯಿಸುವುದರೊಂದಿಗೆ ನಾವು ರಾಜ್ಯ ಸರ್ಕಾರವನ್ನು ಈ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸುತ್ತೇವೆ. ನಿರ್ಣಯವನ್ನು ರಾಜ್ಯ ಸಂಪುಟ ಮತ್ತು ಉಭಯ ಶಾಸನ ಸಭೆಗಳಲ್ಲಿ ಅಂಗೀಕರಿಸಬೇಕು.

ಮಾರ್ಚ್‌ನಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದ ವೇಳೆ ನಿರ್ಣಯವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಅಂಗೀಕರಿಸಬೇಕು. ಆಧಿವೇಶನದ ಅಂತ್ಯದವರೆಗೂ ಕಾದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾವು ಜಾತಿ ಜನಗಣತಿ ಜಾಥಾ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಜಾತಿಗಣತಿ ಇಲ್ಲದೇ ಸಮಾನತೆಯ ಪ್ರಾತಿನಿಧ್ಯ ಕಲ್ಪಿಸೋದು ಸಾಧ್ಯವಿಲ್ಲ ಎಂದ ಅವರು ಜಾತಿಗಣತಿ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನ ಎತ್ತಿಹಿಡಿಯಬೇಕು ಎಂದು ಹೇಳಿದರು.

ಜಾತಿ ವಾಸ್ತವವಾಗಿರುವ ಭಾರತದಲ್ಲಿ ಜಾತಿಗಣತಿ ಅನಿವಾರ್ಯ: ಬಂಜಗೆರೆ ಜಯಪ್ರಕಾಶ್

ಇದೇ ವೇಳೆ ಮಾತನಾಡಿದ ಸಮಾಜವಾದಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ಭಾರತದಂತಹ ಜಾತಿಯ ದೇಶದಲ್ಲಿ ಜಾತಿಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅರಿಯಲು ಜಾತಿಜನಗಣತಿ ಮುಖ್ಯ, ಯಾಕೆಂದರೆ ಜಾತಿಗಣತಿ ಮಾಡದೇ ಜಾತಿಪ್ರಾತಿನಿಧ್ಯ ಒದಗಿಸುವುದು ಸಾಧ್ಯವಿಲ್ಲ’ ಎಂದು ವಿವರಿಸಿದರು.

ಭಾರತದಲ್ಲಿ 1931ರಲ್ಲಿ ಬ್ರಿಟೀಷರಿಂದ ಜಾತಿ ಜನಗಣತಿ ನಡೆಯಿತು. ಆನಂತರ ಈವರೆಗೆ ಜಾತಿಜನಗಣತಿ ನಡೆದಿಲ್ಲ. ಈಗ ಸರ್ಕಾರಗಳು ಸವಲತ್ತು ಕೊಡುತ್ತಿರುವುದು ಅದೇ ದತ್ತಾಂಶದ ಆಧಾರದಲ್ಲಿ. ಇಷ್ಟು ವರ್ಷಗಳು ಕಳೆದರೂ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಇನ್ನೂ ನಿರ್ಧರಿಸಿಲ್ಲ. ವಾಸ್ತವವಾಗಿ ನಮ್ಮ ಸಂವಿಧಾನವೇ ಜಾತಿ ಗುಂಪುಗಳಿಗೆ ಸವಲತ್ತು ನೀಡುತ್ತಿದೆ; ಯಾವ ಆಧಾರದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದೀರ ಎಂದು ಸುಪ್ರೀಂ ಕೋರ್ಟ್ ಜಾತಿ ದತ್ತಾಂಶಗಳನ್ನು ಕೇಳಿದೆ. ಆದರೂ ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು

“ಮನಮೋಹನ್ ಸಿಂಗ್ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಅದನ್ನು ನರೇಗಾ ಮತ್ತು ಬಿಪಿಎಲ್ ಯೋಜನೆ ಜಾರಿಗೆ ಬಳಸಿದ್ದರು. ಆದರೆ, ಆ ಮಾಹಿತಿಯನ್ನು ಈಗ ಬಹಿರಂಗಪಡಿಸಿಲ್ಲ. 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ಕಾಂತರಾಜು ಆಯೋಗದ ಮೂಲಕ ವರದಿ ಮಾಡಿಸಿತ್ತು; ಈಗ ಅದಕ್ಕೆ 10 ವರ್ಷ ಕಳೆದು ಹೋಗಿದೆ. ಆ ವರದಿಯನ್ನು ಈಗ ಅಧಿಕೃತ ಎಂದು ಬಳಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಜನಗಣತಿ ಬಾಕಿ ಇದ್ದು, ಕೇಂದ್ರ ಸರ್ಕಾರವೇ ಈಗ ಉಪಜಾತಿಗಳ ಸಹಿತ ಜಾತಿಗಣತಿ ನಡೆಸಬೇಕು” ಎಂದು ಆಗ್ರಹಿಸಿದರು.

“ಒಳ ಮೀಸಲಾತಿ ನೀಡಲು ಜಾತಿ ಸಮೀಕ್ಷೆ ಅನಿವಾರ್ಯ; ಕೆಲವರು 2(ಎ) ಕ್ಯಾಟಗರಿಯಲ್ಲಿ ನಮ್ಮನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ. ಮೀಸಲಾತಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯಗಳ ಮುಂದೆ ಸರ್ಕಾರಕ್ಕೆ ಉತ್ತರ ಕೊಡಲು ಜಾತಿ ಸಮೀಕ್ಷೆ ಅನುಕೂಲ ಆಗುತ್ತದೆ. ಇಷ್ಟೆಲ್ಲಾ ಗೊತ್ತಿದ್ದೂ ಸರ್ಕಾರ ಜಾತಿಗಣತಿಗೆ ಮೀನಾಮೇಷ ಎಣಿಸುತ್ತಿರುವುದು ಯಾಕೆ? ಬಿಹಾರ ಸರ್ಕಾರ ಮಾಡಿರುವ ಗಣತಿಯಿಂದ ಸಾಕಷ್ಟು ಅನುಕೂಲ ಆಗಿದೆ” ಎಂದು ಹೇಳಿದರು.

‘ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಜಾತಿಗಣತಿ ಅನಿವಾರ್ಯ’ ಎಂದು ಆರ್ಥಿಕತಜ್ಞ ಡಾ. ಕೃಷ್ಣ ರಾಜ್ ಅಭಿಪ್ರಾಯ ಪಟ್ಟರು.

ಸುದ್ಧಿಗೋಷ್ಠಿಯಲ್ಲಿ ಜಾತಿಗಣತಿಯ ಪ್ರಾಮುಖ್ಯತೆ ಕುರಿತು ಮಾತನಾಡಿದ ಅವರು ಭಾರತ ಆರ್ಥಿಕವಾಗಿ ಸದೃಢವಾಗುತ್ತಿದೆ. ಯಾವುದೇ ಒಂದು ಆರ್ಥಿಕನೀತಿ ಜಾರಿ ಮಾಡುವಾಗ ದತ್ತಾಂಶ ಮುಖ್ಯ ಆಗುತ್ತೆ. ಈ ದತ್ತಾಂಶದಲ್ಲಿ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಸಾಧ್ಯವಾಗುತ್ತಿದೆಯಾ ಅನ್ನೋದನ್ನ ನೋಡಬೇಕು.

ಹಾಗೆ ನೋಡಿದರೆ ಭಾರತ ಆರ್ಥಿಕವಾಗಿ ಮುಂದುವರೆಯುತ್ತಿರುವಾಗಲೇ ಸಂಪತ್ತಿನ ಹಂಚಿಕೆಯಲ್ಲಿ ಅತೀಹೆಚ್ಚು ಅಸಮಾನತೆ ಇದೆ. ಬಂಡವಾಳಶಾಯಿಗಳು ಹೆಚ್ಚು ಶ್ರೀಮಂತರಾಗುತ್ತಿರುವಾಗಲೇ ಅತೀ ಬಡತನದಿಂದ ನರಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಎಲ್ಲರನ್ನು ಒಳಗೊಂಡಂತೆ ಅಭಿವೃದ್ಧಿ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ. ಇದಕ್ಕೆ ಸಾಮಾಜಿಕ ಆರ್ಥಿಕ ನೀತಿಗಳನ್ನು ರೂಪಿಸಬೇಕು. ಸರ್ಕಾರ ವಿಕಸಿತ ಭಾರತದ ಕುರಿತು ಮಾತನಾಡುತ್ತಿದೆ. ಈ ವಿಕಸಿತ ಭಾರತವನ್ನು ಯಾರಿಗಾಗಿ ಮಾಡುತ್ತಿದೆ. ಇದು ಎಲ್ಲರನ್ನು ಒಳಗೊಂಡಿದೆಯೇ ಅನ್ನೋ ಪ್ರಶ್ನೆ ಎದುರಾಗುತ್ತದೆ.

ಈ ಅಭಿವೃದ್ಧಿಯಲ್ಲಿ ಎಲ್ಲಾ ವರ್ಗದ ಜನರನ್ನು ಒಳಗೊಳ್ಳಬೇಕು. ದಲಿತರು, ಆದಿವಾಸಿಗಳು, ಮಹಿಳೆಯರು ಇವರೆಲ್ಲರನ್ನು ಒಳಗೊಂಡಾಗಲೇ ಅಭಿವೃದ್ಧಿಗೆ ಒಂದು ಅರ್ಥ ಬರುತ್ತದೆ ಎಂದ ಕೃಷ್ಣರಾಜ್ ಅವರು ನಮ್ಮ ಸಂವಿಧಾನ ಹೇಳುವ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಈ75ವರ್ಷಗಳಲ್ಲಿ ಸಾಧ್ಯವಾಗಿಲ್ಲ ಎಂದರು.

ಈ ಎಲ್ಲಾ ಅಸಮಾನತೆಯನ್ನು ತೊಡೆದುಹಾಕಲು ಜಾತಿಗಣತಿ ಮುಖ್ಯ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಸ್. ಶಿವಣ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ಕೃಷ್ಣರಾಜ್, ಕೆ. ಫಾತಿಮ ಉಪಸ್ಥಿತರಿದ್ದರು.