Manoj R Kambali – Peepal Media

ಪ್ರೇಕ್ಷಕರ ಮನ ಕದಡಿದ ʼನಕ್ಷತ್ರದ ದೂಳು’
ನಾನು ಇತ್ತೀಚಿಗೆ ನೋಡಿದ ಅದ್ಭುತ ನಾಟಕ ‘ನಕ್ಷತ್ರದ ದೂಳು’. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರ್ ನಾಗ್ ನಾಟಕೋತ್ಸವದಲ್ಲಿ ದೂರದ ರಾಯಚೂರಿಂದ ಬಂದು ನಾಟಕವನ್ನು ಪ್ರದರ್ಶನ ಮಾಡಿದರು. ಇದು ಕೇವಲ ನಾಟಕವಲ್ಲ. ದಲಿತ ಬದುಕಿನ ಕಥನ. ಅಮೇರಿಕಾದ‌ ಖಗೋಳ ಶಾಸ್ತ್ರಜ್ಞ ಕಾರ್ಲ್ ಸೆಗನ್ ರೀತಿ ನಾನು ಸಹ ದೊಡ್ಡ ವಿಜ್ಞಾನಿ ಆಗಬೇಕು ಎಂದು ಕನಸು ಕಂಡಿದ್ದ ವೇಮುಲ ರೋಹಿತ್ ಚಕ್ರವರ್ತಿಯ ಬದುಕಿನ ಅನಾವರಣ.

ನಾಟಕ ಎಂದಾಗ ರಂಗದ ಮೇಲೆ ಒಂದಷ್ಟು ಜನರಿರಬೇಕು, ಹಾಡು-ಕುಣಿತಗಳು ಇರಬೇಕು ಎನ್ನುವ ಸಾಕಷ್ಟು ಕಲ್ಪನೆಗಳಿರುತ್ತವೆ. ಈ ಎಲ್ಲ ರೀತಿಯ ಕಲ್ಪನೆಗಳನ್ನು‌ ಮೀರಿ ದೃಶ್ಯಕಾವ್ಯವಾಗಿ ನಮ್ಮ ಮುಂದೆ ಬಂದದ್ದು ʼನಕ್ಷತ್ರದ ದೂಳು’ ಏಕವ್ಯಕ್ತಿ ರಂಗಪ್ರಯೋಗದ ಮೂಲಕ. ಇದೊಂದು ನೈಜ ಘಟನೆ. ಅಂಬೇಡ್ಕರ್ ತತ್ವಗಳನ್ನು ನಂಬಿದ್ದ, ದೊಡ್ಡ ವಿಜ್ಞಾನಿಯಾಗಬೇಕು ಎಂದು ಕನಸು ಕಂಡಿದ್ದ ರೋಹಿತ್ ವೇಮುಲನ ಬದುಕು ಇದು. ಈತನ ಚಿತ್ರಣವನ್ನು ಬರವಣಿಗೆಯಲ್ಲಿ ತಂದದ್ದು ಖ್ಯಾತ ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ. ಈ ರೀತಿಯ ಬರವಣಿಗೆಗೆ ಸೂಕ್ಷ್ಮ ಸಂವೇದನೆಯ ಒಳನೋಟ ಬೇಕಾಗುತ್ತದೆ. ಇವರ ಒಳನೋಟದಲ್ಲಿದ್ದ ವೇಮುಲನನ್ನು ಅಭಿನಯದ ಮೂಲಕ ಚಿತ್ರಿಸಿದ್ದು ಸ್ನೇಹಿತರಾದ ಲಕ್ಷ್ಮಣ್‌ ಮಂಡಲಗೇರಾ.

ನಾನು‌ ಮೊದಲು ಹೇಳಿದ ಹಾಗೆ ಇದು ದಲಿತ ಬದುಕಿನ ಕಥನ. ಅಂದರೆ ರೋಹಿತ್ ವೇಮುಲ ಪಾತ್ರಧಾರಿಯ  ಅಭಿನಯದಲ್ಲಾಗಲೀ ಅಥವಾ ಆತ ಇದ್ದಷ್ಟು ದಿನ‌ ಬದುಕಿನಲ್ಲಾಗಲಿ ಹೇಳಿದ ಮಾತುಗಳನ್ನು ಗಮನವಿಟ್ಟು ಪ್ರತಿಯೊಬ್ಬರು ಕೇಳಲೇಬೇಕು. ‘ನಾವು ದೂರದಲ್ಲಿರುವ ಮಲಾಲಾಳ ಧ್ವನಿ ನಮ್ಮದು ಎಂದು ಹೆಮ್ಮೆಪಡುತ್ತೇವೆ. ಆದರೆ ನಮ್ಮ ಪಕ್ಕದಲ್ಲಿಯೇ ನಡೆದ ಕೈರ್ಲಾಂಜಿಯಲ್ಲಿ ಸುರೇಖಾಳ ಇಡೀ ಕುಟುಂಬವನ್ನು ಅತ್ಯಾಚಾರ ಮಾಡಿದ್ದು ಕಾಣುವುದೇ ಇಲ್ಲ ಅಥವಾ ಕಂಡರೂ ಧ್ವನಿ ಎತ್ತುವುದಿಲ್ಲ’ ಇದು ನಾಟಕದಲ್ಲಿ ಬರುವ ಡೈಲಾಗ್. ಇದು ಕೇವಲ ಒಂದು ಡೈಲಾಗ್ ಎಂದು ಪರಿಗಣಿಸಿದರೆ ನಮ್ಮ ಅಸ್ಮಿತೆಗೆ ನಾವೇ ಧಕ್ಕೆ ತಂದುಕೊಂಡಂತೆ.

ನಾಟಕದ‌ ಪ್ರತಿ ಮಾತು ಕೂಡ ದಲಿತರ ಅಸ್ತಿತ್ವದ ಪ್ರಶ್ನೆಯಾಗಿ ಕಾಡುತ್ತದೆ. ಹಿಂದೂ ರಾಷ್ಟ್ರ ಮಾಡಬೇಕು ಎಂದು ಪದೇಪದೇ ಕೂಗಾಡುವ ಸಂಘ ಪರಿವಾರದವರಿಗೆ ರೋಹಿತ್ ಕೂಡ ನಮ್ಮವನು ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇರಲಿಲ್ಲ ಅನಿಸುತ್ತದೆ.‌ ಕೊನೆಗೂ ರೋಹಿತ್ ಸಂಶೋಧನೆ ಮಾಡುತ್ತಿದ್ದ ಹೈದ್ರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ‌ 17 ಜನವರಿ 2016 ರಂದು ತನ್ನ ರೂಮಿ‌ನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ‌. ಆದರೆ ರೋಹಿತ್ ಸಾವನ್ನು ಆತ್ಮಹತ್ಯೆ ಎಂದರೆ ತಪ್ಪಾಗುತ್ತದೆ. ಇದು ಸಾಂಸ್ಥಿಕ ಕೊಲೆ. ಹೈದ್ರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಇದ್ದ ಪ್ರೊಫೆಸರುಗಳು ಮತ್ತು ಸಂಘಪರಿವಾರದ ಗ್ಯಾಂಗ್ ಎಲ್ಲವೂ ಸೇರಿ ಒಬ್ಬ ಅಂಬೇಡ್ಕರ್ ವಾದಿ ಸ್ಕಾಲರ್ ಅನ್ನು ನೇಣಿಗೆ ಶರಣಾಗುವಂತೆ ಮಾಡುತ್ತಾರೆ‌.

ರಾಯಚೂರಿನ ರಂಗ ಕನಸು(ರಿ)  ಮಂಡಲಗೇರಾ ತಂಡ ಪ್ರಸ್ತುತ ಪಡಿಸಿದ ನಕ್ಷತ್ರದ ದೂಳು ನಾಟಕವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ ಇನ್ಸಾಫ್ ಹೊಸಪೇಟೆ ಮತ್ತು ಬೆಳಕು ನಿರ್ವಹಣೆಯಲ್ಲಿ ಭೈರವ ಎಂ ಪೂಜಾರಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ನಾಟಕ ಇನ್ನೂ ಹೆಚ್ಚು ಪ್ರದರ್ಶನವನ್ನು ಕಾಣಬೇಕು. ನಮ್ಮ‌ ನಡುವೆಯೇ ಎಲ್ಲರ ರೀತಿಯಲ್ಲಿ ಘನತೆಯಿಂದ ಬದುಕಬೇಕಾದ ಹುಡುಗ ರೋಹಿತನ ಕಥೆಯನ್ನು ಎಲ್ಲರೂ ಕಿವಿಕೊಟ್ಟು ಶ್ರದ್ಧೆಯಿಂದ ಕೇಳಬೇಕಾದ ಸಂದರ್ಭವಿದು. ನಮ್ಮ ನಾಡಿನಲ್ಲಿನ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ‌ಪ್ರತಿಯೊಬ್ಬರು ನಿಮ್ಮ ನೆಲಕ್ಕೆ ರೋಹಿತನನ್ನು ಕರೆಸಿಕೊಳ್ಳಬೇಕು. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು.

ಮನೋಜ್ ಆರ್ ಕಂಬಳಿ,   ಶಿವಮೊಗ್ಗ

ಇದನ್ನೂ ಓದಿ-ಕಾವ್ಯವಾಚನದ ಮೇಲೆ ಪೊಲೀಸರ ದಮನ ; ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ

ಜೆಡಿಎಸ್ ರಾಜಕಾರಣದ ಪ್ರಮುಖ ಘಟ್ಟಗಳು
ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ, ನನಗೆ ಯಾವ ಮಾತು ಹೇಳದೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಗುಡುಗುತ್ತಾರೆ. ಇಬ್ರಾಹಿಂ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ತಿಳಿದ ಕೆಲವೇ ದಿನಗಳಲ್ಲಿ ಪಕ್ಷದ ಮುಖಂಡ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಸಿ ಎಂ ಹಿಬ್ರಾಹಿಂ ರವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ನಿನ್ನೆ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ  ಹೆಚ್ ಡಿ ದೇವೇಗೌಡರು ಪತ್ರಿಕಾ ಗೋಷ್ಠಿ ಕರೆದು, ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ತೆರವು ಮಾಡಿ, ಹೆಚ್ ಡಿ ಕುಮಾರಸ್ವಾಮಿಯವರನ್ನು ಹಂಗಾಮಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಆದರೆ, ‘ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆಯಲು ಆಗಲ್ಲ. ಪಕ್ಷದ ಸದಸ್ಯರ ಸಭೆ ಕರೆದು ಸಭೆಯಲ್ಲಿ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡರೆ ಮಾತ್ರ ನನ್ನನ್ನು ತೆಗೆಯಲು ಸಾಧ್ಯ’ ಎಂದು ಸಿ ಎಂ ಇಬ್ರಾಹಿಂ ಹೇಳ್ತಿದ್ದಾರೆ. ಇದರ ಚರ್ಚೆ ಒತ್ತಟ್ಟಿಗಿರಲಿ.

ಈಗ ನಾವು, ಜೆಡಿಎಸ್ ಪಕ್ಷ, ಈ ಹಿಂದೆ ಯಾವ ಯಾವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಯಾವ ಮುಖ್ಯ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂಬುದನ್ನು ಸ್ವಲ್ಪ ಇತಿಹಾಸ ತೆಗೆದು ನೋಡೋಣ.

ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು 1977 ರಲ್ಲಿ ಶುರುವಾಗಿದ್ದೆ ‘ಜನತಾ ಪಕ್ಷ’. ಇದೇ ಜನತಾ ಪಕ್ಷ ಹತ್ತು ವರ್ಷಗಳ ನಂತರ ಅಂದರೆ 1988 ರಲ್ಲಿ ಜನತಾ ದಳವಾಗಿ ಬದಲಾಯಿತು. ಇದೇ ಜನತಾ ದಳ ಮತ್ತು ಸಂಯುಕ್ತ ರಂಗದ ಸಹಯೋಗದಿಂದ ಹೆಚ್ ಡಿ ದೇವೇಗೌಡರು, 1  ಜೂನ್ 1996 ರಲ್ಲಿ ದೇಶದ ಪ್ರಧಾನ ಮಂತ್ರಿ‌ ಹುದ್ದೆಗೇರಿದರು. ಆ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಮೊಟ್ಟಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದರು.

ಮುಂದೆ 1999 ರಲ್ಲಿ ಜನತಾ ದಳ ವಿಭಜನೆಗೊಂಡು ದೇವೇಗೌಡರು ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಜನತಾ ದಳ (ಜಾತ್ಯತೀತ) ಹಾಗೂ ಮಧ್ಯಪ್ರದೇಶದ ಮುಖಂಡ ಶರದ್ ಯಾದವ್ ನೇತೃತ್ವದಲ್ಲಿ ಜನತಾ ದಳ (ಯುನೈಟೆಡ್) ಸೃಷ್ಟಿಯಾಯಿತು.

2004 ರಲ್ಲಿ ಜೆಡಿಎಸ್ ಒಂದು ಸ್ವತಂತ್ರ ರಾಜಕೀಯ ಪಕ್ಷವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಿತು. 2004 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ 75 ಅಭ್ಯರ್ಥಿಗಳಲ್ಲಿ 58 ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಕಾಂಗ್ರೆಸ್ 65 ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ 79 ಸ್ಥಾನಗಳನ್ನು ಪಡೆದಿತ್ತು. ಅಂದಿನ ರಾಜ್ಯಪಾಲರಾಗಿದ್ದ ಟಿ ಎನ್ ಚರ್ತುವೇದಿ ಸಮ್ಮಿಶ್ರ ಸರ್ಕಾರ ರಚಿಸಲು ಆಹ್ವಾನ ನೀಡುತ್ತಾರೆ. ಆಗ 58 ಸೀಟು ಬಂದಿದ್ದ ಜೆಡಿಎಸ್ ಮತ್ತು 65 ಸೀಟು ಬಂದಿದ್ದ ಕಾಂಗ್ರೆಸ್ ಜೊತೆಗೂಡಿ ಸರಕಾರ ರಚಿಸಿ ಸರ್ವಾನುಮತದಿಂದ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ.. ಉಪ ಮುಖ್ಯಮಂತ್ರಿ ಆಗಿ ಜೆಡಿಎಸ್ ಪಕ್ಷದಿಂದ ಸಿದ್ದರಾಮಯ್ಯ ನೇಮಕವಾಗುತ್ತಾರೆ.

ಈ ನಡುವೆ ಸಿನಿಮಾ ನಿರ್ಮಾಪಕರಾಗಿದ್ದ ಎಚ್‌ ಡಿ ಕುಮಾರಸ್ವಾಮಿ ರಾಜಕೀಯಕ್ಕೆ ಧುಮುಕುವ ಮೂಲಕ ರಾಜ್ಯ ರಾಜಕಾರಣ ಹೊಸ ತಿರುವು ಪಡೆಯಿತು ಎಂದೇ ಹೇಳಬೇಕು. ಯಾಕೆಂದರೆ ಜೆಡಿಎಸ್‌ ವರಿಷ್ಠರಾಗಿದ್ದ ದೇವೇಗೌಡರ ಸುಪುತ್ರ ಕುಮಾರಸ್ವಾಮಿ ಜೆಡಿಎಸ್‌ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಅಲ್ಲಿ ಕುಂದುಂಟಾಯಿತು. ಮುಂದೆ ಜೆ ಡಿ ಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಗುವುದು ಕುಮಾರಸ್ವಾಮಿಯೇ ಹೊರತು ಸಿದ್ದರಾಮಯ್ಯ ಅಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಅರಿತ ಸಿದ್ದರಾಮಯ್ಯ ಕಾಂಗ್ರೆಸ್‌ ಗೆ ಹೊರಡುವ ತಯಾರಿ ನಡೆಸಿದರು. ಅವರು ಅಹಿಂದ ಸಮಾವೇಶಗಳನ್ನು ನಡೆಸಲು ಹೊರಟಿದ್ದು ದೇವೇಗೌಡರಿಗೆ ಇಷ್ಟವಾಗಲಿಲ್ಲ. ನಂತರ 2005 ರಲ್ಲಿ ಸಿದ್ದರಾಮಯ್ಯರವರನ್ನು ಪಕ್ಷದಿಂದ ಹೊರಹಾಕಲಾಯಿತು.

18 ಜನವರಿ 2006ರಂದು  ಕುಮಾರಸ್ವಾಮಿಯವರ ನಾಯಕತ್ವದಲ್ಲಿ 40 ಜೆಡಿಎಸ್ ಎಂಎಲ್ಎ ಗಳನ್ನು ಸರ್ಕಾರದಿಂದ ಹೊರತಂದು ಧರ್ಮಸಿಂಗ್ ಸರ್ಕಾರವನ್ನು ಉರುಳಿಸಲಾಗುತ್ತದೆ. ರಾಜ್ಯಪಾಲರಾದ ಟಿ ಎನ್ ಚರ್ತುವೇದಿ ಕುಮಾರಸ್ವಾಮಿ ಅವರಿಗೆ ಸರ್ಕಾರವನ್ನು ರಚಿಸಲು ಬನ್ನಿ ಎಂದು ಕರೆಯುತ್ತಾರೆ. ಆದರೆ ಕುಮಾರಸ್ವಾಮಿ ಅವರು ಬಿ ಎಸ್ ಯಡಿಯೂರಪ್ಪ ಜೊತೆಗೂಡಿ ಬಿಜೆಪಿ ಪಕ್ಷದ ಜೊತೆಸೇರಿ ಹೊಸ ಸರ್ಕಾರವನ್ನು ರಚಿಸಿ 3 ಪೆಬ್ರವರಿ 2006 ರಂದು ಕರ್ನಾಟಕದ 12ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ.

ಆದರೆ 20 ತಿಂಗಳ ನಂತರ ಬಿಜೆಪಿಗೆ ಅಧಿಕಾರ ವಹಿಸಿಕೊಡದೇ ʼವಚನ ಭ್ರಷ್ಟʼ ಎಂಬ ಹಣೆಪಟ್ಟಿ ಪಡೆದು ಕೊಳ್ಳುತ್ತಾರೆ. ಇದೇ ಸಿಂಪತಿಯಲ್ಲಿ ಬಿಜೆಪಿ ಗೆದ್ದು ಬರುತ್ತದೆ.

ಮುಂದೆ 2018 ರಲ್ಲಿ ನಡೆದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರುವುದಿಲ್ಲ. ಬಿಜೆಪಿ 104, ಕಾಂಗ್ರೆಸ್ 80, ಜೆಡಿಎಸ್ 37. ಈ ಎಲ್ಲಾ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಎರಡನೇ ಬಾರಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ದೊರೆಯುತ್ತದೆ. ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಅಧ್ಯಕ್ಷರಾಗುತ್ತಾರೆ. 23 ಮೇ 2018ರಲ್ಲಿ ಮುಖ್ಯಮಂತ್ರಿಯಾಗಿ 23 ಜುಲೈ 2019 ಕ್ಕೆ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬರುತ್ತದೆ. ಮತ್ತು ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ.  ಅಪರೇಷನ್‌ ಕಮಲದ ಸಹಾಯದಿಂದ ಬಹುಮತಗಳೊಂದಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ.

ಸಿ ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ 17 ಏಪ್ರಿಲ್ 2022 ಕ್ಕೆ ಜೆಡಿಎಸ್ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಅವರು ಪಕ್ಷಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ನಂತರ 2023 ಕ್ಕೆ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಬರುತ್ತದೆ. 2023 ರಲ್ಲಿ ಜೆಡಿಎಸ್ ಕೇವಲ 19 ಸೀಟ್ ಪಡೆದು ಸಮಾಧಾನವಾಗುತ್ತದೆ. ಈ ಚುನಾವಣೆ ಆಗಿ ಕೆಲವೇ ದಿನಗಳಲ್ಲಿ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿ ಜತೆಯಾಗಿ ದೆಹಲಿಗೆ ಹೋಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಬರುತ್ತಾರೆ.

ಇದರ ಬೆನ್ನಲ್ಲೇ, ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿ ಎಂ ಇಬ್ರಾಹಿಂ, ನನಗೆ ಯಾವ ಮಾತು ಹೇಳದೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕರ ವಿರುದ್ಧ ಗುಡುಗುತ್ತಾರೆ. ಇಬ್ರಾಹಿಂ, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ತಿಳಿದ ಕೆಲವೇ ದಿನಗಳಲ್ಲಿ ಪಕ್ಷದ ಮುಖಂಡ ದೇವೇಗೌಡರು ಪತ್ರಿಕಾಗೋಷ್ಠಿ ಕರೆದು ಸಿ ಎಂ ಹಿಬ್ರಾಹಿಂ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ಮನೋಜ್ ಆರ್ ಕಂಬಳಿ

ಪತ್ರಕರ್ತ

ಇದನ್ನೂ ಓದಿ- ದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

ಸಿನೆಮಾ ಲೋಕಕ್ಕೊಂದು ಹೊಸ ಸೂತ್ರ ಹೆಣೆದ ʼಟೋಬಿʼ
ನಮ್ಮ ಜೀವನದ ಪ್ರತಿ ಕ್ಷಣವನ್ನು ಪ್ರೀತಿಸುವುದೇ ನಿಜವಾದ ಪ್ರೀತಿ.

“ಹರಕೆ ಕುರಿ ತಪ್ಪಿಸ್ಕೊಂಡಿದೆ. ಯಾವ್ದೆ ಕಾರಣಕ್ಕೂ ಕುರಿ ಊರಿಗೆ ಕಾಲಿಡ್ಬಾರ್ದು. ಕುರಿ ಊರಿಗೆ ಬಂದ್ರೆ ಬರಿ ಕುರಿ ಆಗಿರಲ್ಲ, ಮಾರಿ ಆಗಿರತ್ತೆ” ಸಿನಿಮಾದ ಬಹಳ ಮುಖ್ಯ ಡೈಲಾಗ್ ಇದು.

ನಮ್ಮ‌ ನಡುವೆ ಇರುವ, ನಮ್ಮ ನಡುವೆ ಇದ್ದೂ ನಾವು ಗುರುತಿಸಲು ಪ್ರಯತ್ನವೇ ಪಡದ ವ್ಯಕ್ತಿ ಟೋಬಿ. ಸಮಾಜದಿಂದ ದೂರ ಇಡಲ್ಪಟ್ಟ ವ್ಯಕ್ತಿ ನಮ್ಮ ನಡುವಿ‌ನ ಹೀರೋ ಆಗ್ತಾನೆ ಅಂದ್ರೆ ಅದು ನಮ್ಮ ಟಿ ಕೆ ದಯಾನಂದ್ (ದಯಣ್ಣ) ಅವರ ಕಥೆಗೆ ಇರುವ ತಾಕತ್ತು. ನಮ್ಮ ದಯಣ್ಣ ಸಮಾಜವನ್ನು ನೋಡುವ ದೃಷ್ಟಿ ಕೋನವೇ ವಿಭಿನ್ನ. ಎಲ್ಲರಂತೆ ಇವರು ನೋಡಿದ್ದರೆ ‘ರಸ್ತೆ ನಕ್ಷತ್ರ’ದಂತಹ ಪುಸ್ತಕ ಹೊರಬರುತ್ತಿರಲಿಲ್ಲ ಮತ್ತು ಟೋಬಿ ಅಂತವನು ಹೀರೋ ಆಗುತ್ತಿರಲಿಲ್ಲ. ಟೋಬಿಯೂ ಸಹ ನಮ್ಮ ನಡುವಿನ ರಸ್ತೆ ನಕ್ಷತ್ರವಾಗಿ ಕಾಣಿಸುತ್ತಾನೆ.

“ಟೋಬಿ” ಇಲ್ಲಿಯವರೆಗಿನ ಕನ್ನಡ ಚಿತ್ರಗಳಲ್ಲಿ ವಿಶೇಷ ಪ್ರಯತ್ನ. ಹಿಂದೆಂದೂ ಯಾರೂ ಮಾಡಿರದ ಕಥೆ ಮತ್ತು ಪಾತ್ರವೇ ಟೋಬಿ. ನಮ್ಮ ನಡುವೆ ಅನಾಥರಾಗಿ ಬದುಕುವ ಎಷ್ಟೋ ಜೀವಗಳು ಇವೆ. ಆ ಜೀವಗಳು ಅನಾಥರಾಗಿದ್ದಾರೆ ಎಂದ ಮಾತ್ರಕ್ಕೆ ಅವರಿಗೆ ಮನುಷ್ಯತ್ವ ಇಲ್ಲ ಅಂತಲ್ಲ. ಅವರಿಗೆ ನಮ್ಮಲ್ಲೆರಿಗಿಂತ ಜಾಸ್ತಿ ಮಾನವೀಯತೆಯ ಜೊತೆಗೆ ಸಮಾಜವನ್ನು ಪ್ರೀತಿಸುವ ಮನಸ್ಸು ಇರುತ್ತದೆ. ಅದೇ ರೀತಿಯ ವ್ಯಕ್ತಿ ಟೋಬಿ. ಇದು ಕೇವಲ ಟೋಬಿ ಒಬ್ಬನ ಕಥೆ ಮಾತ್ರವಲ್ಲ. ನಮ್ಮೂರಿನಲ್ಲಿ / ನಿಮ್ಮೂರಿನಲ್ಲಿ ಎಷ್ಟೋ ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ ಸಮುದಾಯ, ನಿರ್ಲಕ್ಷ್ಯಕ್ಕೊಳಪಟ್ಟ ವ್ಯಕ್ತಿಗಳು, ಸಮಾಜದಿಂದ ದೂರವಿರಿಸಿದ ಕುಟುಂಬಗಳ ಕಥೆ.

ರಾಜ್ ಬಿ ಶೆಟ್ಟಿ ಅವರ ಹಿಂದಿನ ಸಿನಿಮಾ ಗುರಡ ಗಮನ ವೃಷಭ ವಾಹನ ರೀತಿಯಲ್ಲಿ ಹೊಡಿ-ಬಡಿ, ಕೊಲೆಯ ಮೂಲಕ ಕರ್ಮಷಿಯಲ್ ಟಚ್ ಕೊಟ್ಟಿದ್ದಾರೆ ಎಂದು ನೋಡಿದರೆ ಅದು ನಮ್ಮ ಮೂರ್ಖತನ. ಟೋಬಿ ಸಿನಿಮಾ ಕೊಡುವ ಆಯಾಮವೇ ಬೇರೆ. ಸಮಾಜದಲ್ಲಿ ಯಾರೂ ಹತ್ತಿರ ಸೇರಿಸದ ವ್ಯಕ್ತಿಯ ಹೃದಯದಲ್ಲೂ ಪ್ರೀತಿ ಮೊಳೆಯುತ್ತದೆ. ಆತನು ವ್ಯಕ್ತಪಡಿಸುವ ಪ್ರೀತಿಯೂ ನಮ್ಮ ಸಂವೇದನಾ ಶೀಲತೆಯನ್ನು ಬಡಿದೆಚ್ಚರಿಸುತ್ತದೆ. ಆದರೆ ಟೋಬಿಯ ಮುಗ್ಧತೆಯನ್ನು ಕ್ರಿಮಿನಲ್ ಕೆಲಸಗಳಿಗೆ ಬಳಸಲಾಗುತ್ತದೆ. ಇಲ್ಲಿ ನಮ್ಮೆಲ್ಲರ ಮನುಷ್ಯತ್ವವನ್ನೇ ಪ್ರಶ್ನಿಸಲಾಗುತ್ತದೆ.

ತಾನು ಯಾವ ಮತ, ಕುಲ, ಎಲ್ಲಿಯವನು ಎಂದು ಏನೂ ಗೊತ್ತಿಲ್ಲದೆ ಇದ್ದ ಹುಡುಗನಿಗೆ ಟೋಬಿ ಎಂದು ಹೆಸರಿಟ್ಟಿದ್ದು ಒರ್ವ ಪಾದ್ರಿ ಇಗ್ನೇಷಿಯಸ್. ಟೋಬಿ ಅನ್ನುವ ಪದ ಹೀಬ್ರೂ ಭಾಷೆಯದ್ದು. ಮೊದಲೆಲ್ಲ ಹುಡುಗ ಟೋಬಿ ಇಷ್ಟಪಡುವ ವ್ಯಕ್ತಿಯನ್ನು, ಕೆಲಸವನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರಿಗೆ ಹೊಡೆದು ಬಿಡುತ್ತಿದ್ದ. ಅವನ ಮುಗ್ಧತೆಯ ಜೊತೆಗೆ ಆತನ ಕೋಪವನ್ನು ಬಳಸಿಕೊಂಡವರು ಹಲವರು.

ತಾನು ಅನಾಥ ಎಂದು ಎಂದಿಗೂ ತೋರ್ಪಡಿಸಿಕೊಳ್ಳದ ಟೋಬಿಗೆ ಅನಾಥ ಹೆಣ್ಣು ಮಗುವೊಂದು ಸಿಗುತ್ತದೆ. ಆ ಮಗುವನ್ನು ತನ್ನದೇ ಸ್ವಂತ ಮಗಳ ರೀತಿಯಲ್ಲಿ ಬೆಳೆಸುತ್ತಾನೆ. ಇಲ್ಲಿ ಟೋಬಿ ಸ್ರೀವಾದಿಯಾಗಿಯೂ ಕಾಣಿಸುತ್ತಾನೆ. ಪುಟ್ಟ ಮಗಳು ಜೆನ್ನಿಯ ಸ್ವಾತಂತ್ರ್ಯಕ್ಕೆ  ಎಂದಿಗೂ ಅಡ್ಡಿ ಪಡಿಸುವುದಿಲ್ಲ. ವಿಶೇಷವೆಂದರೆ, ಜೆನ್ನಿ ಟೋಬಿಯನ್ನು ಹೆಸರಿಡಿದೆ ಕರೆಯುತ್ತಾಳೆ. ಇನ್ನು ಟೋಬಿ, ತಾನು ಇಷ್ಟ ಪಟ್ಟವಳು ಸೆಕ್ಸ್ ವರ್ಕರ್ ಎಂದು ಗೊತ್ತಿದ್ದರೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನನ್ನನ್ನು ಮದುವೆ ಆಗು ಎಂದು ಕೇಳುತ್ತಾನೆ. ಅದಕ್ಕೆ ಅವಳು ‘ನಾನು ಮೈ ಮಾರ್ಕೊಂಡು ಬದ್ಕೋಳು’ ಅಂತಾಳೆ. ‘ನೀನು ಏನಾದರೂ ಮಾರ್ಕೊಂಡು ಇರು, ನಮ್ಮ ಟೋಬಿನ ಮದುವೆ ಆಗು’ ಎಂದು ಜೆನ್ನಿ ಪ್ರತ್ಯುತ್ತರ ನೀಡುತ್ತಾಳೆ. ಇಲ್ಲಿ ಹೆಣ್ಣಿನ ಸ್ವಾತಂತ್ರ್ಯವನ್ನು  ಗೌರವಿಸುವ ಜೊತೆಗೆ ಆಕೆಯನ್ನು ಮನುಷ್ಯಳಂತೆ ಕಾಣುವುದನ್ನು ಟೋಬಿ ತೋರಿಸುತ್ತಾನೆ.

ಸತ್ತ ನಂತರ ಹೆಣ ಕೊಯ್ಯುವ (Mortuary) ಶವಾಗಾರವನ್ನೇ ಟೋಬಿ ತನ್ನ ಮನೆ ಮಾಡಿಕೊಂಡಿರುತ್ತಾನೆ. ಮಾತು ಬಾರದ ಟೋಬಿಗೆ ಸತ್ತ ವ್ಯಕ್ತಿಯು ಯಾವ ಜಾತಿ, ಯಾವ ಕುಲ, ಯಾವ ಧರ್ಮ ಎಂಬುದನ್ನು ಲೆಕ್ಕಿಸದೆ ಮಾನವೀಯತೆ ಒಂದೇ ಮುಖ್ಯ ಎಂದು ತೋರುತ್ತಾನೆ.

ರಾಜ್ ಬಿ ಶೆಟ್ಟಿ ಅಭಿನಯದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ ಅಂತ ಹೇಳಬಹುದು. ಮಾತಿಲ್ಲದೆ ಕೇವಲ ಆಂಗಿಕ ಚಲನೆಗಳ ಮೂಲಕ ಅಭಿನಯಿಸುವುದು ಕಷ್ಟವೇ. ಆದರೂ ರಾಜ್ ಕಷ್ಟವನ್ನು ಸುಲಭವಾಗಿಸಿದ್ದಾರೆ. ಟೋಬಿ ಅನ್ನುವ ನಮ್ಮ ನಡುವೆ ಇದ್ದು ನಾವು ಗುರುತಿಸಲು ಪ್ರಯತ್ನವೇ ಪಡದ ಪಾತ್ರವನ್ನು ರಾಜ್ ಅಭಿನಯದಲ್ಲಿ ಹಿಡಿದಿಟ್ಟಿರುವುದು ಅದ್ಭುತ. ನನ್ನ ಪ್ರಕಾರ ಇದೊಂದು ಪ್ರಯೋಗ. ರಾಜ್ ಅವರ ಹಿಂದಿನ ಸಿನಿಮಾ GGVV (ಗರುಡ ಗಮನ ವೃಷಭ ವಾಹನ) ಯಲ್ಲಿ ಅವರು ಶಿವನಾಗಿ ಅಭಿನಯಿಸಿದ್ದಾರೆ. ಆದೇ ಟೋಬಿಯಲ್ಲಿ ತನ್ನನ್ನೇ ತಾನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.

ರಾಜ್ ಅವರ ಪಾತ್ರಕ್ಕೆ ಬೆಂಬಲವಾಗಿ ಚೈತ್ರ ಜೆ ಆಚಾರ್ ಕಾಣಿಸಿಕೊಂಡಿದ್ದಾರೆ. ಚೈತ್ರ ಅವರನ್ನು ಎರಡು ಶೇಡ್‌ನಲ್ಲಿ ನೋಡಬಹುದು. ಮೊದಲು ಕಾಲೇಜು ಹುಡುಗಿಯಾಗಿ ನಂತರ ಮನೆ ನಡೆಸುವಂತಹ ಜವಾಬ್ದಾರಿಯುತ ಮಹಿಳೆಯಾಗಿ. ಚೈತ್ರ ಟೋಬಿಯ ಮಗಳಾಗಿ ಬಹಳ ಕಾಡುತ್ತಾರೆ. ಯಾರು ಇಲ್ಲದ ತನಗೆ ಟೋಬಿಯೇ ತಂದೆ- ತಾಯಿ ಎಂದು ತಿಳಿದಿದ್ದ ಮಗಳು ಜೆನ್ನಿ, ಕೇವಲ ಮಗಳಾಗಿ ಉಳಿಯುವುದಿಲ್ಲ. ಮಾತು ಬಾರದ, ಯಾರು ಏನೇ ಹೇಳಿದರು ಕುರಿಯಂತೆ ತಲೆ ಆಡಿಸುವ ಟೋಬಿಗೆ ಆಸರೆಯಾಗಿ‌ ನಿಲ್ಲುತ್ತಾಳೆ. ಜೆನ್ನಿಯ ಪಾತ್ರ ಬದುಕಿನ ಭರವಸೆಯ ಬಗ್ಗೆ ಮಾತಾಡುತ್ತದೆ.

ಸಮಾಜದಲ್ಲಿ ನಿಕೃಷ್ಟ ಎಂದು ಹೇಳುವ ವ್ಯಕ್ತಿಗೂ  ಇಲ್ಲಿ ಪ್ರೀತಿ ಹುಟ್ಟಿ ಇಲ್ಲಿನ ಪ್ರೀತಿ‌ ಮನುಷ್ಯತ್ವವನ್ನು ಮಾತನಾಡುತ್ತದೆ. ಮೇಲೆ ಹೇಳಿದ ಹಾಗೇ ಸ್ತ್ರೀ ದೃಷ್ಟಿಕೋನದಿಂದ ನೋಡಿದರೆ ಹೆಣ್ಣಿನ ಸ್ವಾತಂತ್ಯವನ್ನು ಸಿನೆಮಾ ಅತೀ ಹೆಚ್ಚಾಗಿ ಪ್ರತಿಧ್ವನಿಸುತ್ತದೆ. ಇಲ್ಲಿ ಸಂಯುಕ್ತ ಹೊರನಾಡ್ ಅವರ ಬದುಕು ಎಲ್ಲರಂತೆ ಕಾಣುವುದಿಲ್ಲ. ಬದುಕಿನ ಉಳಿವಿಗಾಗಿ ವೇಶ್ಯಾವೃತ್ತಿ ಮಾಡಿ ಬದುಕುವ ಸಾವಿತ್ರಿ ಪಾತ್ರದಲ್ಲಿ ಕಾಣಿಸುವ ಸಂಯುಕ್ತ ಹೊರನಾಡ್ ಅವರ ಮೇಲೆ ಟೋಬಿಗೆ ಪ್ರೀತಿ ಹುಟ್ಟುತ್ತದೆ.‌ ಟೋಬಿಯ ಪ್ರೀತಿ ಎಷ್ಟು ಮಹತ್ವದ್ದು ಎಂದು ತೋರಿಸಲು ಸಂಯುಕ್ತ ಅವರು ಹೇಳುವ ಮಾತಿಗೆ ತಾನು ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ ಟೋಬಿ. ಟೋಬಿಯ ಪಾತ್ರಕ್ಕೆ ಸರಿಸಮಾನಾಗಿ ಸಂಯುಕ್ತ ಅವರ ಪಾತ್ರ ಹೆಚ್ಚು ಕಾಡುತ್ತದೆ.

ಬಹಳ ಮುಖ್ಯ ಮತ್ತು ಇವರು ಇಲ್ಲದಿದ್ದರೆ ಟೋಬಿಯ ಅಸ್ತಿತ್ವಕ್ಕೆ ಬೆಲೆ ಸಿಗುವುದು ಕಡಿಮೆ ಅನಿಸುವಷ್ಟು ಪಾದ್ರಿ ಪಾತ್ರದಲ್ಲಿ ಕಾಣಿಸಿದ ಯೋಗಿ ಬಂಕೇಶ್ವರ್, ಇಗ್ನೀಷಿಯಸ್ ಎಂಬ ಪಾತ್ರದಲ್ಲಿ ಟೋಬಿಯ ಅಳಿವು-ಉಳಿವಿನ ಪ್ರಶ್ನೆಯಾಗುತ್ತಾರೆ. ಟೋಬಿಯ ಸ್ನೇಹಿತನ ಪಾತ್ರವಾಗಿ ಜೀವಿಸಿದ ಗೋಪಾಲಕೃಷ್ಣ ದೇಶಪಾಂಡೆ ಚಿತ್ರದಲ್ಲಿ ಬಹಳ ಮುಖ್ಯವಾಗುತ್ತಾರೆ.. ದಾಮೋದರ ಪಾತ್ರಕ್ಕೆ ಇವರೇ ಸೂಕ್ತ ಅನ್ನುವಷ್ಟರ ಮಟ್ಟಿಗೆ ಗೋಪಾಲಕೃಷ್ಣ ನಟಿಸಿದ್ದಾರೆ.

ಸಿನಿಮಾದಲ್ಲಿ ಹೀರೋನ ಅಸ್ತಿತ್ವ ಇರಬೇಕಾದರೆ ವಿಲನ್ ಎಂಬ ಪಾತ್ರ ಇರಬೇಕು. ಟೋಬಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ದೀಪಕ್ ಶೆಟ್ಟಿ. ದೀಪಕ್‌‌ ವಿಲನ್ ಪಾತ್ರಕ್ಕೆ ಅಷ್ಟಾಗಿ ಜೀವತುಂಬಿದ್ದಾರೆ ಅನಿಸುವುದಿಲ್ಲ. ಒಂದು ಒಳ್ಳೆಯ ಚಿತ್ರದಲ್ಲೂ ಕೆಲವೊಂದು ಕೊರತೆಗಳು ಇರುತ್ತವೆ. ಆ ಕೊರತೆ ಸ್ಕ್ರೀನ್ ಪ್ಲೇ ನಲ್ಲಿ ಕಾಣುತ್ತದೆ‌. ಮೊದಲಾರ್ಧದಲ್ಲಿ ಇದ್ದಂತಹ ಕುತೂಹಲ ದ್ವಿತೀಯಾರ್ಧದಲ್ಲಿ ಕಡಿಮೆಯಾಗುತ್ತದೆ.

ಇನ್ನು ಚಿತ್ರದಲ್ಲಿ ಸಂಭಾಷಣೆ ಕಡಿ‌ಮೆ ಇದ್ದರೂ ಸಿನೆಮಾ ಸಾಕಷ್ಟು ಹಿಡಿದಿಡುತ್ತದೆ. ಜೆನ್ನಿ ಪಾತ್ರಕ್ಕೆ ಬರೆದಿರುವ ಸಂಭಾಷಣೆಯಂತು ಪದೆಪದೆ ಗೊಣಗುವಂತೆ ಮಾಡುತ್ತದೆ. ಕ್ಯಾಮರಾ ಕೈಚಳಕದ ಮೂಲಕ ದೃಶ್ಯಗಳನ್ನು ಸೆರೆಹಿಡಿದು ಅಚ್ಚುಕಟ್ಟಾಗಿ ಸಂಕಲನ‌‌ ರೂಪಿಸುವಲ್ಲಿ ಪ್ರವೀಣ್ ಶಿಯಾನ್ ಮತ್ತು ನಿತಿನ್ ಶೆಟ್ಟಿ‌ ಯಶಸ್ವಿಯಾಗಿದ್ದಾರೆ. ಪದೆ ಪದೆ ಟೋಬಿ ಎಂದರೆ ಕಾಡುವುದು ಮಿದುನ್ ಮುಕುಂದನ್ ಅವರ ಸಂಗೀತ. ಸಿನಿಮಾ ರಿಲೀಸ್ ಗೆ ಮೊದಲು ಬಿಟ್ಟ “ಮಾರಿ ಮಾರಿ ಮಾರಿಗೆ ದಾರಿ” ಸಂಗೀತದ ತುಣುಕಂತೂ ಸಾಕಷ್ಟು ವೈರಲ್ ಆಗಿತ್ತು. ಮಿಧುನ್ ಸಂಗೀತ ನಿರ್ದೇಶನದಲ್ಲಿ ಹತ್ತಕ್ಕೆ ಹತ್ತು ಅಂಕ ಪಡೆಯುತ್ತಾರೆ.

ಒಂದು ಸಿನಿಮಾ ಆಗಬೇಕು ಅಂದರೆ ಅದಕ್ಕೆ ಕಥೆ ಇರಬೇಕು. ಆ ಕಥೆಯನ್ನು ದೃಶ್ಯಗಳಲ್ಲಿ ಕಟ್ಟಿಕೊಡುವ ಚಾಣಾಕ್ಷ ನಿರ್ದೇಶಕರಿರಬೇಕು. ಚಿತ್ರದ ನಿರ್ದೇಶನದ ಕೆಲಸವನ್ನು ಬಾಸಿಲ್ ನಿರ್ವಹಿಸಿದ್ದಾರೆ. ಟೋಬಿಯನ್ನು ತಮ್ಮ ಎದೆಗೆ ಅಪ್ಪಿಕೊಂಡು ಮಾರಿಯಾಗಿ ಹೊರಬರುವವರೆಗೂ ತಮ್ಮ ಕೆಲಸದಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ.

ಮನೋಜ್‌ ಆರ್‌ ಕಂಬಳಿ

ಪತ್ರಕರ್ತ

ಇದನ್ನೂ ಓದಿ-ಟೋಬಿ ಸಿನೆಮಾದಲ್ಲಿ ಕಾಡುವ ಕಣ್ಣಿಗೆ ಕಾಣದ ಕ್ರೌರ್ಯ

ಸಿನಿಮಾ | ಎಲ್ಲಾ ವರ್ಗದ ಪ್ರೇಕ್ಷಕರನ್ನು ಮುಟ್ಟುವ ʼಜೈಲರ್ʼ
ದೇಶದಾದ್ಯಂತ ರಜನೀಕಾಂತ್‌, ಶಿವರಾಜ್‌ ಕುಮಾರ್ ನಟನೆಯ ಜೈಲರ್‌ ಸಿನೆಮಾ ತೆರೆಯ ಮೇಲೆ ಬಂದಿದೆ.‌ ಜೈಲರ್‌ ಹೇಗಿದೆ? ಮನೋಜ್ ಆರ್ ಕಂಬಳಿಯವರ ರಿವ್ಯೂ ಓದಿ.

ತಮ್ಮ ವಿಶೇಷ ಅಭಿನಯದ ಮೂಲಕವೇ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೊಸ ಛಾಪನ್ನು ಮೂಡಿಸಿದ ಕಲಾವಿದ ಸೂಪರ್ ಸ್ಟಾರ್ ರಜನಿಕಾಂತ್. ಅವರ ಬಹಳಷ್ಟು ಸಿನಿಮಾಗಳಲ್ಲಿ ಮಾತು ಕಡಿಮೆ, ಚಟುವಟಿಕೆ ಜಾಸ್ತಿ. ಒಂದು ರೀತಿಯಲ್ಲಿ ಕೈಗೆ ಬಂದರೆ ಕನ್ನಡಕ ಎದುರಾಳಿ ನಡುಕ. ಅದೇ ರೀತಿ ಈ ಸಿನಿಮಾದಲ್ಲೂ (ಜೈಲರ್) ಮುಂದುವರೆದಿದೆ.

ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ.  ಚಿತ್ರಕ್ಕೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.  ಮುಖ್ಯ ತಾರಾಗಣದಲ್ಲಿ ರಜನಿಕಾಂತ್, ವಿನಾಯಕನ್, ರಮ್ಯಾಕೃಷ್ಣ, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ಮೋಹನ್ ಲಾಲ್, ಯೋಗಿ ಬಾಬು, ಸುನೀಲ್, ವಸಂತ್ ರವಿ ಇದ್ದಾರೆ.

ನಿರ್ದೇಶಕ ನೆಲ್ಸನ್‌ ರವರು ರಜನಿಕಾಂತ್‌ ಇಟ್ಟುಕೊಂಡು ಒಂದು ಮಾಸ್‌ ಸಿನಿಮಾ ಮಾಡಲು ಹೋಗಿದ್ದಾರೆ. ಒಂದು ರೀತಿಯಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ದಾರೆ ಅನ್ನಿಸುತ್ತದೆ. ಒಂದು ಕಾಲದಲ್ಲಿ ರಜನಿಕಾಂತ್‌ ಜೈಲರ್‌ ಆಗಿದ್ದು, ನಂತರ ತನ್ನ ಮಗನು ಪೊಲೀಸ್‌ ಆಫೀಸರ್‌ ಆಗಿ ಯಾವುದೋ ಕೇಸ್‌ ಇನ್ವೆಷ್ಟಿಗೇಟ್‌ ಮಾಡುವ ಸಂದರ್ಭದಲ್ಲಿ ಕಳೆದು ಹೋದಾಗ, ರಜನಿಕಾಂತ್‌ ಮಗನನ್ನು ಬಿಡಿಸಿಕೊಂಡು ಬರಲು ತಾನು ಎಷ್ಟು ಪಂಟರ್‌ ಎಂದು ತೋರಿಸಿರುವುದೇ ಕಥೆಯ ಹಂದರ.

ಟೈಗರ್‌ ಮುತ್ತುವೇಲ್‌ ಪಾಂಡಿಯನ್‌ ಎಂಬ ನಿವೃತ್ತ ಜೈಲರ್ ಪಾತ್ರದಲ್ಲಿ ರಜನಿಕಾಂತ್‌ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಹಳಷ್ಟು ಅಬ್ಬರಿಸುತ್ತಿದ್ದ ವ್ಯಕ್ತಿ ಈಗ ತುಂಬಾ ಸೈಲೆಂಟ್‌ ಆಗಿದ್ದು, ಮಗನು ಕಾಣೆಯಾದ ಆನಂತರದಿಂದ ತಾನು ಎಷ್ಟು ವೈಲೆಂಟ್ ಎಂದು ತೋರಿಸಿದ್ದಾರೆ.

ನಿರ್ದೇಶಕ ನೆಲ್ಸನ್ ಸಿನಿಮಾಗಳಲ್ಲಿ ಮಾಸ್ ಮತ್ತು ಕ್ರೈಂ ಜೊತೆಗೆ ಡಾರ್ಕ್ ಹ್ಯೂಮರ್ ಇರುವುದು ನಿಶ್ಚಿತ. ಚಿತ್ರದಲ್ಲಿ ಯಾವ ಪಾತ್ರವೇ ಕೊಲೆಯಾಗಲಿ ರಕ್ತವು ಪರದೆಯ ಮೇಲೆ ಬರಲೇಬೇಕು. ಇದನ್ನು ಜೈಲರ್ ನಲ್ಲಿಯೂ ಅಳವಡಿಸಿದ್ದಾರೆ.

ಮುಖ್ಯವಾಗಿ ಅತಿಥಿ ಪಾತ್ರಗಳು ಚಿತ್ರದಲ್ಲಿ ಹೊಸ ಬೆಳಕನ್ನು ಬೀರುತ್ತವೆ. ಅಂದರೆ ಈಗ ಬರುತ್ತಿರುವ ಸಾಕಷ್ಟು ಚಿತ್ರಗಳು ಪ್ಯಾನ್ ಇಂಡಿಯಾವನ್ನು ತಲೆಯಲ್ಲಿ ಕಟ್ಟಿಕೊಂಡು ಐದಾರು ಭಾಷೆಯಲ್ಲಿ ರಿಲೀಸ್ ಆಗುತ್ತಿವೆ. ಈ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿಯೇ ಇದೆ. ಆದರೆ ಇದರ ವಿಶೇಷವೆಂದರೆ ಪ್ಯಾನ್ ಇಂಡಿಯಾ ನಟರನ್ನು ಒಂದೇ ತೆರೆಯಲ್ಲಿ ತಂದಿರುವುದು. ರಜನಿಕಾಂತ್, ತಮಿಳುನಾಡು ಸುತ್ತಮುತ್ತಲಿನ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿಯ ನಟರನ್ನು ಭೇಟಿ ಮಾಡುವುದು ಮತ್ತು ಅವರ ಭಾಷೆಯಲ್ಲಿ ಮಾತನಾಡುವುದು ವಿಶೇಷ. ಕರ್ನಾಟಕದಲ್ಲಿ  ಶಿವರಾಜ್ ಕುಮಾರ, ಕಿಶೋರ್, ಕೇರಳದಲ್ಲಿ ಮೋಹನ್ ಲಾಲ್, ತೆಲುಗಿನ ನಾಗ ಬಾಬು, ಸುನಿಲ್ ಕೂಡ ಇದ್ದಾರೆ. ಬಿಹಾರಿನಲ್ಲಿ ಜಾಕಿಶ್ರಾಫ್ ಸಿಗುತ್ತಾರೆ. ಇವೆಲ್ಲವೂ ಸಹ ಪ್ಯಾನ್ ಇಂಡಿಯಾ ತಲುಪಲು ಇನ್ನಷ್ಟು ಸುಲಭವಾಗಬಹುದು ಎಂಬ ಉದ್ದೇಶದಿಂದಲೇ ಬಳಸಿರುವಂತಿದೆ.

ಇತ್ತಿಚೆಗೆ ವೈರಲ್ ಆದ ‘ಕಾವಲಯ್ಯ’ ಸಾಂಗ್ ಇದೇ ಚಿತ್ರದ್ದು. ಈ ಹಾಡಿನಲ್ಲಿ ತಮನ್ನಾ ಭಾಟಿಯ ಅವರ ಡ್ಯಾನ್ಸ್ ಸಾಕಷ್ಟು ವೈರಲ್ ಆಗಿತ್ತು. ಆದರೆ ಚಿತ್ರದಲ್ಲಿ ತಮನ್ನಾ ಭಾಟಿಯ ಪಾತ್ರ ಇರುವಿಕೆಗೆ ಸಂಬಂಧವಿಲ್ಲ ಅನ್ನಿಸುತ್ತದೆ.

ರಜನಿಕಾಂತ್ ಅವರ  ವಯಸ್ಸಿಗೆ  ಸಹಜವಾದ  ಪಾತ್ರವನ್ನೆ ಕಟ್ಟಿಕೊಟ್ಟಿರುವುದು ವಿಶೇಷ. ಇದು ರಜನಿಕಾಂತ್ ಫ್ಯಾನ್‌ ಗಳಿಗೆ ಸ್ವಲ್ಪವೂ ಬೇಸರ ತರಿಸುವುದಿಲ್ಲ. ಎಲ್ಲಾ ಚಿತ್ರಗಳಂತೆ ರಜನಿಕಾಂತ್ ಕನ್ನಡಕ ಹಾಕುವುದು, ಸಿಗರೇಟ್ ಹಚ್ಚುವುದು, ಇನ್ನು ಫೈಟ್ ಸೀನ್‌ಗಳಲ್ಲಿ ಆದೇ ಸ್ಟೈಲ್ ಅನ್ನು ಮುಂದುವರಿಸಿದ್ದಾರೆ. ಬಹಳ ಮುಖ್ಯವಾಗಿ ರಜನಿಕಾಂತ್ ಒನ್ ಮ್ಯಾನ್ ಶೋ ರೀತಿಯಲ್ಲಿ ಕಂಡರೂ ಅವರ ಪಾತ್ರವನ್ನು ಸರಿದೂಗಿಸಲು ಸಾಕಷ್ಟು ಪಾತ್ರಗಳು ಜೊತೆಯಾಗಿ ನಿಲ್ಲುತ್ತವೆ. ತಂದೆ  ಮಗನ ಎಮೋಷನ್ ಸೀನ್ ನೋಡುಗರನ್ನು ಭಾವುಕರಾಗಿಸುತ್ತದೆ.

ಚಿತ್ರದಲ್ಲಿ ಮ್ಯೂಸಿಕ್ ಮತ್ತು ಕ್ಯಾಮೆರಾ ಕೆಲಸ ಜನರನ್ನು ಹಿಡಿದಿಡುತ್ತದೆ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತದ ಮೂಲಕ ಪ್ರೇಕ್ಷಕರನ್ನು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಾರೆ. ವಿಜಯ್ ಕಾರ್ತಿಕ್ ಕಣ್ಣನ್ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಒಂದು ಮಾಸ್ ಲೋಕವನ್ನೆ ಸೃಷ್ಟಿಸಿದ್ದಾರೆ.

ಮನೋಜ್ ಆರ್ ಕಂಬಳಿ

ಇದನ್ನೂ ಓದಿ – ‘ಗುಲಾಬಿ ಚೌಕಟ್ಟಿ’ನಲ್ಲಿಯೇ ಲಿಂಗ ಸಮಾನತೆಯ ಚರ್ಚೆಗೆ ಆಹ್ವಾನಿಸುವ ಬಾರ್ಬಿ..