Murali Maluru – Peepal Media

ಮಿರಾಯ್ ಟ್ರೇಲರ್ ರಿಲೀಸ್..ಸೂಪರ್ ಯೋಧನಾಗಿ ಬಂದ ತೇಜ ಸಜ್ಜಾ
ನಿರೀಕ್ಷೆ ಹೆಚ್ಚಿಸಿದ ತೇಜ ಸಜ್ಜಾ ನಟನೆಯ ಮಿರಾಯ್ ಟ್ರೇಲರ್…ಭರ್ಜರಿ ವಿಷ್ಯುವಲ್ ಟ್ರೀಟ್

ಹನುಮಾನ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ‌ ಕೊಟ್ಟಿದ್ದಾರೆ. ಬಹು ನಿರೀಕ್ಷಿತ ಮಿರಾಯ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ. ಮೂರು ನಿಮಿಷ ಏಳು ಸೆಕೆಂಡ್ ಇರುವ ಟ್ರೇಲರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ತೇಜ ಸಜ್ಜಾ ಹೋರಾಟ ಮಾಡ್ತಾರೆ. ಅವರ ವಿರುದ್ಧ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆಕ್ಷನ್ ಜೊತೆಗೆ ಪುರಾಣದ ಕಥೆಯನ್ನು ಸೊಗಸಾಗಿ ಟ್ರೇಲರ್ ನಲ್ಲಿ ಕಟ್ಟಿಕೊಡಲಾಗಿದೆ. ಧರ್ಮ ರಕ್ಷಕನಾಗಿ ತೇಜ ಸಜ್ಜಾ ಹೋರಾಟ ನಡೆಸುತ್ತಾರೆ. ಟ್ರೇಲರ್ ಕೊನೆಯಲ್ಲಿ ಬರುವ ಭಗವಾನ್ ಶ್ರೀರಾಮ ಝಲಕ್ ಪ್ರೇಕ್ಷಕರಿಗೆ ರೋಮಾಂಚನ ನೀಡಲಿದೆ.

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದ್ದಾರೆ. ರಿತಿಕಾ ನಾಯಕ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸೆಪ್ಟೆಂಬರ್ 12ರಂದು ಮಿರಾಯ್ ಸಿನಿಮಾ 2D ಮತ್ತು 3D ಫಾರ್ಮಾಟ್ನಲ್ಲಿ ಏಳು ಭಾಷೆಯಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಚಿತ್ರವನ್ನು ವಿಕೆ‌ ಫಿಲ್ಮ್ ಬ್ಯಾನರ್ ನಡಿ ಹೊಂಬಾಳೆ ಫಿಲ್ಮ್ ರಿಲೀಸ್ ಮಾಡುತ್ತಿದೆ.

ಪುರಿ ಜಗನಾಥ್‌ ಹಾಗೂ ವಿಜಯ್‌ ಸೇತುಪತಿ ಸಿನಿಮಾ ಶೂಟಿಂಗ್‌ ಶುರು
ಶೂಟಿಂಗ್‌ ಅಖಾಡಕ್ಕೆ ಇಳಿದ ವಿಜಯ್‌ ಸೇತುಪತಿ..ಪುರಿ ಜಗನ್ನಾಥ್‌ ಆಕ್ಷನ್‌ ಕಟ್‌

ಟಾಲಿವುಡ್‌ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್‌ ಹಾಗೂ ವಿಜಯ್‌ ಸೇತುಪತಿ ಜೋಡಿಯ ಬಹುನಿರೀಕ್ಷಿತ ಸಿನಿಮಾ ಇಂದು ಸೆಟ್ಟೇರಿದೆ. ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಪ್ರಸ್ತುತ ವಿಜಯ್ ಸೇತುಪತಿ, ಸಂಯುಕ್ತಾ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್‌ ಬ್ಯಾನರ್‌ ಸಹಯೋಗದಲ್ಲಿ ಚಾರ್ಮಿ ಕೌರ್‌ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ನಟಿ ಸಂಯುಕ್ತ ಮೆನನ್‌, ಟಬು, ದುನಿಯಾ ವಿಜಯ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪ್ಯಾನ್-ಇಂಡಿಯಾ ಯೋಜನೆಯು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಘಟಾನುಘಟಿ ಕಲಾವಿದರ ಎಂಟ್ರಿಯಿಂದಾಗಿ ಪಾತ್ರವರ್ಗದ ತೂಕ ಹೆಚ್ಚುತ್ತಿದೆ.

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಸಿಎಂ
ಬೆಂಗಳೂರು ಜು1: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ರಿಕಾ ದಿನಾಚರಣೆ-2025” ಹಾಗೂ “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ. ಸುಳ್ಳು ಮತ್ತು ಊಹಾ ಪತ್ರಿಕೋದ್ಯಮ

ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದರು.

ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ ? ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ ಎಂದು ಪ್ರಶ್ನಿಸಿದರು.

ನಾನು ಇವತ್ತು ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಆರೋಗ್ಯ ಸಂಜೀವಿನಿ ಉದ್ಘಾಟಿಸಿ ಪತ್ರಕರ್ತರಿಗೆ ಅನುಕೂಲ ಒದಗಿಸಿದ್ದೇವೆ. ನಮ್ಮ ಪರವಾಗಿ ಬರೆಯಲಿ ಎನ್ನುವ ಕಾರಣದಿಂದ ಜಾರಿ ಮಾಡಿರುವುದಲ್ಲ. ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಿ ಎಂದು ಕರೆ ನೀಡಿದರು.

ಭಾಷಣದ ಹೈಲೈಟ್ಸ್..

*ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು.

*ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು.

*ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಜಾತಿ-ವರ್ಗ ರಹಿತ ಸಮಾಜ ಸೃಷ್ಟಿಯಾಗಬೇಕು ಎನ್ನುವುದು ಸಂವಿಧಾನದ ಮೌಲ್ಯ. ಇದನ್ನು ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ.

*ದ್ವೇಷದ, ಪ್ರೀತಿಯಿಲ್ಲದ ಸಮಾಜ ಸೃಷ್ಟಿಸುವ ಪ್ರಯತ್ನಕ್ಕೆ ಮಾಧ್ಯಮಗಳು ಬೆಂಬಲಿಸಬಾರದು.

*ನನ್ನ ಮಾತುಗಳನ್ನು ಕೇವಲ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನೋಡದೆ ಸಮಾಜ ಮುಖಿಯಾಗಿ ಕೂಡ ನೋಡಬೇಕು.

‘ಬ್ಯಾಂಗಲ್ ಬಂಗಾರಿ’ಗೆ ಭರ್ಜರಿ ರೆಸ್ಪಾನ್ಸ್… ಎಕ್ಕ ಸಿನಿಮಾದ ಲವ್ ನಂಬರ್ ಗೆ 10 ಮಿಲಿಯನ್ ವೀವ್ಸ್
ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಹಾಡಿಗೆ ಆಂತೋನಿ ದಾಸ್ ಕಂಠ ಕುಣಿಸಿದ್ದರು. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ನಾಯಕಿ ಸಂಜನಾ ಆನಂದ್ ಇಲ್ಲಿ ಬ್ಯಾಂಗಲ್ ಬಂಗಾರಿ ಆಗಿದ್ದಾರೆ. ಯವರಾಜ್ ಕುಮಾರ್ ಲೈಫ್ ಅಲ್ಲಿ ಬರೋ ಈ ಬಂಗಾರಿಗೆ ಬ್ಯಾಂಗಲ್ ತೊಡಿಸಿದಾಗ ಶುರು ಆಗೋ ಹಾಡು ಇದಾಗಿದೆ. ಸಂಭ್ರಮಾಚರಣೆಯ ಕ್ಷಣದ ಈ ಗೀತೆಗೆ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್‌ಗಳನ್ನೆ ಕಂಪೋಸ್ ಮಾಡಿದ್ದಾರೆ.

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ಸಂಜನಾ ಆನಂದ್ , ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ-18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.

ಬೆಂಗಳೂರಿನಲ್ಲಿ ಸಿದ್ದಾರ್ಥ್ ನಟನೆಯ 3BHK ಸಿನಿಮಾ ಪ್ರಚಾರ..ಡಾಲಿ ಧನಂಜಯ್ ಸಾಥ್
ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ಸಿದ್ದಾರ್ಥ್ ನಟನೆಯ 3bhk ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿದೆ. ಜುಲೈ 4ರಂದು ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ ಹಾಗೂ ನಿರ್ದೇಶಕ ಹೇಮಂತ್ ರಾವ್ ವಿಶೇಷ ಅತಿಥಿಯಾಗಿ ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು.

ಇದೇ ವೇಳೆ ನಟ ಸಿದ್ದಾರ್ಥ್ ಮಾತನಾಡಿ,‌ 3bhk ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಇದು‌ ನಿಮ್ಮದೇ ಕಥೆ. ನಿಮ್ಮ ಮನೆಯಲ್ಲಿ ನಡೆದಿರುವ ಕಥೆ. ಮತ್ತೆ ಮತ್ತೆ ಪ್ರಯತ್ನ ಮಾಡುವುದೇ ಜೀವನ. ಈ ಸಿನಿಮಾ ನೋಡಿದ ಮೇಲೆ ನಿಮ್ಮ ತಂದೆಯನ್ನು ಬಿಗಿದಪ್ಪಿಕೊಳ್ಳುತ್ತೀರ ಎಂದು ಹೇಳಿದರು.

ನಟಿ ಚೈತ್ರಾ ಆಚಾರ್ ಮಾತನಾಡಿ, ಇದು ನನ್ನ ಮೊದಲ ತಮಿಳು ಸಿನಿಮಾ. ಈ ಚಿತ್ರ ನೋಡಲು ಎಕ್ಸೈಟ್ ಆಗಿದ್ದೇನೆ. ಚಿಕ್ಕ‌ಮಕ್ಕಳಿಂದ ಎಲ್ಲರೂ ನೋಡಬಹುದು ಸಿನಿಮಾ. ಹ್ಯಾಪಿ ಮೂಮೆಂಟ್ ಕೊಡುವ ಸಿನಿಮಾ. ಸ್ಫೂರ್ತಿ ಚಿತ್ರ ಇದಾಗಿದೆ. ಜುಲೈ 4ರಂದು 3bhk ತೆರೆಗೆ ಬರ್ತಿದೆ ಎಂದು ಹೇಳಿದರು.

ನಟ ಡಾಲಿ ಧನಂಜಯ್ ಮಾತನಾಡಿ, 3bhk ಟ್ರೇಲರ್ ನೋಡಿದಾಗ ಬಹಳ ಇಷ್ಟವಾಯ್ತು. ಫಸ್ಟ್ ಶಾಟ್ ನಮ್ಮನ್ನು ಬಾಲ್ಯದಜೀವನಕ್ಕೆ ಕರೆದುಕೊಂಡು ಹೋಯ್ತು. ಪ್ರತಿಯೊಬ್ಬರಿಗೂ ಮನೆ ತೆಗೆದುಕೊಳ್ಳಬೇಕು ಎಂಬ ಕನಸು ಇರುತ್ತದೆ. ಬದುಕಿಗೆ ಹತ್ತಿರುವ ಸಿನಿಮಾ ಇದು. ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಸಹೋದರ ಸಿದ್ದಾರ್ಥ್ ನನಗೆ ಇಷ್ಟ. ಈ ಮನುಷ್ಯನಿಗೆ ವಯಸ್ಸೇ ಆಗಲ್ವಾ ಅನಿಸುತ್ತದೆ. ಹೀಗೆ ಅವರು ಮೇನ್ ಟೈನ್ ಮಾಡಿದ್ದಾರೆ. ತುಂಬಾ ಹೃದಯಕ್ಕೆ ಹತ್ತಿರ ಮನುಷ್ಯ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

3bhk ಸಿನಿಮಾದಲ್ಲಿ ನಟ ಸಿದ್ದಾರ್ಥ್ ಜೊತೆ ಶರತ್ ಕುಮಾರ್, ದೇವಯಾನಿ, ಯೋಗಿಬಾಬು, ಮೀತಾ ರಘುನಾಥ್ ಹಾಗೂ ಕನ್ನಡ ನಟಿ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಶ್ರೀ ಗಣೇಶ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮೃತ್ ರಾಮನಾಥ್ ಸಂಗೀತ ನಿರ್ದೇಶನ, ಗಣೇಶ್ ಶಿವ ಸಂಕಲನ, ವಿನೋತ್ ರಾಜ್ ಕುಮಾರ್ ಎನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಅರುಣ್ ವಿಶ್ವ ನಿರ್ಮಾಣದ 3bhk ಸಿನಿಮಾ ಜುಲೈ 4ರಂದು ರಿಲೀಸ್ ಆಗಲಿದೆ.

ಲೋಕಾಯುಕ್ತರು ರಾಜಿನಾಮೆ ನೀಡಲಿ : ರವಿ ಕೃಷ್ಣಾರೆಡ್ಡಿ ಆಗ್ರಹ
ಬೆಂಗಳೂರು, ಜೂ,30 : ನಗರದ ಫ್ರೀಡಂ ಪಾರ್ಕ್ ನಲ್ಲಿ ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆಯೆ ನಿರಂತರವಾಗಿ ಅಕ್ರಮಗಳಲ್ಲಿ ಮತ್ತು ಅವ್ಯವಹಾರಗಳಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗುತ್ತಿವೆ ಮತ್ತು ಸ್ಪಷ್ಟವಾಗಿ ಭ್ರಷ್ಟಾಚಾರವೆಸಗಿರುವ ಪ್ರಕರಣಗಳು ಕೂಡ ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ. ಇದು ಲೋಕಾಯುಕ್ತ ಸಂಸ್ಥೆಯೆ ಹಳ್ಳ ಹಿಡಿದಿರುವುದನ್ನು ತೋರಿಸುತ್ತದೆ. ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಮತ್ತು ವಿಶ್ವಾಸವನ್ನು ಎತ್ತಿ ಹಿಡಿಯಬೇಕಾದ ಹೊಣೆಗಾರಿಕೆ ಹಾಲಿ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ಅವರ ಮೇಲಿರುತ್ತದೆ, ಆದರೆ ಪ್ರಸ್ತುತ ಲೋಕಾಯುಕ್ತರು ಈ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದು ಸ್ಪಷ್ಟವಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆಯುತ್ತಿದ್ದರೂ ಕೂಡ ಅದನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಹಾಗೆಯೆ, ಅವರ ಕುಟುಂಬದವರು ಅವರ ಸ್ಥಾನವನ್ನು ದುರ್ಬಳಕೆ ಮಾಡಿರುವ ಬಗ್ಗೆ ಗಂಭೀರ ಆರೋಪವಿದ್ದು, ಆ ಬಗೆಗಿನ ಪ್ರಕರಣವು ನ್ಯಾಯಾಲಯದಲ್ಲಿದೆ. ಇಂತಹವರು ಲೋಕಾಯುಕ್ತರ ಸ್ಥಾನದಲ್ಲಿ ಮುಂದುವರೆಯುವುದು ಉಚಿತವಲ್ಲ. ಈ ಬಗ್ಗೆ ನೈತಿಕ ಹೊಣೆಗಾರಿಕೆ ಹೊತ್ತು ಲೋಕಾಯುಕ್ತರು ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದರು.

ಕರ್ನಾಟಕ ಲೋಕಾಯುಕ್ತವು ದೇಶಕ್ಕೆ ಮಾದರಿಯಾದಂತಹ ಸಂಸ್ಥೆಯಾಗಿತ್ತು, ಆದರೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅದಕ್ಷತೆ, ಅಕ್ರಮಗಳಿಗೆ ಕುಖ್ಯಾತಿ ಪಡೆದು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಲೋಕಾಯುಕ್ತ ಸಂಸ್ಥೆಯ ಅಕ್ರಮಗಳ ವಿರುದ್ದ ಮತ್ತು ಅದರ ಬಲವರ್ಧನೆಗಾಗಿ ಕೆ.ಆರ್.ಎಸ್. ಪಕ್ಷವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಈ ವಿಚಾರಗಳ ಬಗ್ಗೆ ಧ್ವನಿ ಎತ್ತಬೇಕಾದ ವಿರೋಧ ಪಕ್ಷಗಳು ಗಾಢ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಮತ್ತು ಬಲಿಷ್ಠ ಲೋಕಾಯುಕ್ತವು ಅವರಿಗೂ ಕೂಡ ಬೇಕಾಗಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ರಾಜ್ಯ ಉಪಾಧ್ಯಕ್ಷರಾದ ಜ್ಞಾನ ಸಿಂಧು ಸ್ವಾಮಿ ತಿಳಿಸಿದರು.

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಲು ಸಾಲು ಹಗರಣಗಳು ನಡೆಯುತ್ತಿದ್ದು, ನಿಯಂತ್ರಿಸಲು ಸರ್ಕಾರದ ವತಿಯಿಂದ ಯಾವುದೇ ಕ್ರಮವಾಗುತ್ತಿಲ್ಲ. ಸಿದ್ದರಾಮಯ್ಯನವರ ಸರ್ಕಾರವು ಕೇವಲ
ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲದ ಕೊರತೆ ಕಾಡಲಿದ್ದು, ದಕ್ಷ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣದ ಮೂಲಕ ಕಲ್ಯಾಣ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಬಹುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಹೇಳುತ್ತಾ ಬಂದಿದೆ. ಈ ಬಗ್ಗೆ ಗಮನ ನೀಡದೆ, ಈಗ ಸ್ವಪಕ್ಷೀಯರಿಂದಲೆ ಭ್ರಷ್ಟಾಚಾರದ ಬಗ್ಗೆ ಹೇಳಿಕೆಗಳು ಬರುತ್ತವೆ. ಸರ್ಕಾರದ ಬಹುತೇಕ ಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರುಗಳು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿರುವುದೆ ಸಾಕ್ಷಿಯಾಗಿದೆ. ಇನ್ನು ಲೋಕಾಯುಕ್ತ ಪೊಲೀಸರ ವಸೂಲಿಬಾಜಿಗೆ ಪ್ರಮುಖವಾಗಿ ಅಬಕಾರಿ ಇಲಾಖೆಯ ಬಹುತೇಕ ಅಧಿಕಾರಿಗಳು ಗುರಿಯಾಗಿದ್ದಾರೆ. ಇಂದು ಅಬಕಾರಿ ಇಲಾಖೆಯಲ್ಲಿ ಅಸಹ್ಯಕರ ಅವ್ಯವಹಾರ, ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇವನ್ನೆಲ್ಲ ನಿಯಂತ್ರಿಸಬೇಕಾದ ಅಬಕಾರಿ ಸಚಿವರಾದ ಆರ್. ಬಿ. ತಿಮ್ಮಾಪುರ ಅವರು ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಗಂಭೀರ ವಿಷಯವಾಗಿದೆ. ಆದ್ದರಿಂದ ಈ ಕೂಡಲೆ ಆರ್. ಬಿ. ತಿಮ್ಮಾಪುರ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರನ್ನು ತಮ್ಮ ಸಚಿವ ಸಂಪುಟದಿಂದ ವಜಾ ಮಾಡಬೇಕು. ಹಾಗೆಯೆ ಈ ಪ್ರಕರಣದ ತನಿಖೆಯಲ್ಲಿ ಹಲವು ಸಚಿವರು ಮತ್ತು ಅವರ ಆಪ್ತರು ಆರೋಪಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು, ಆ ಸಚಿವರುಗಳನ್ನು ಕೂಡ ತಮ್ಮ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ರಾಜ್ಯ ಉಪಾಧ್ಯಕ್ಷರಾದ ರಘು ಜಾಣಗೆರೆ ಆಗ್ರಹಿಸಿದರು.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳನ್ನು ಲೋಕಾಯುಕ್ತ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ, ಆದರೆ ರಾಜ್ಯ ಪೊಲೀಸ್ ಇಲಾಖೆ ಹಾಗು ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಒಂದೇ ಮೂಲದವರಾಗಿದ್ದು, ಇವೆರಡೂ ಸಂಸ್ಥೆಗಳಿಂದ ತನಿಖೆ ಮಾಡುವುದು ಸ್ವಹಿತಾಸಕ್ತಿಯ ಸಂಘರ್ಷವಾಗುತ್ತದೆ ಮತ್ತು ತನಿಖೆ ಪಾರದರ್ಶಕವಾಗಿ ನಡೆಯುವ ಸಂಭವ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಸರ್ಕಾರವು ಈ ಕೂಡಲೇ, ಈ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐಗೆ ವಹಿಸಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ಆಗ್ರಹಿಸಿದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳನ್ನು ಪೊಲೀಸರು ತಡೆದರು ಆಗ ಪ್ರತಿಭಟನಾಕಾರರು ಪೊಲೀಸರ ಕಾಲಿಗೆ ಬಿದ್ದು ವಿಧಾನಸೌಧ ನಮ್ಮದು ನಾವು ವಿಧಾನಸೌಧದಲ್ಲಿ ದಾಂದಲೆ ಮಾಡಲು ಹೊರಟಿಲ್ಲ ನಮ್ಮ ಆಗ್ರಹವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಬಿಡಿ ಎಂದು ಪೊಲೀಸರ ಬಳಿ ಕೇಳಿಕೊಂಡರು

ನಂತರ ಕೆಆರ್‌ಎಸ್ ಪಕ್ಷದ ಒಂದು ನಿಯೋಗವನ್ನು ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿಸಿ ಪಕ್ಷದ ಆಗ್ರಹ ಪತ್ರವನ್ನು ಸರ್ಕಾರಕ್ಕೆ ನೀಡಲಾಯಿತು

ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್. ರಾಜ್ಯ ಉಪಾಧ್ಯಕ್ಷರುಗಳಾದ ಮಂಜುನಾಥ ಎಸ್, ಸೋಮಸುಂದರ್ ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನಯ್ಯ ಬಿ ಎಸ್, ವಿಜಯ್ ಕುಮಾರ್ ಯು ಬಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಘು ನಂದನ, ಕೃಷ್ಣ ವಿ ಬಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್, ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲ, ರೈತ ಘಟಕದ ಅಧ್ಯಕ್ಷರಾದ ಜೋಗ್ನಳ್ಳಿ ಗುರುಮೂರ್ತಿ, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಪ ಯ ಗಣೇಶ್ ಹಾಗು ಸಾವಿರಾರು ಪಕ್ಷದ ಸೈನಿಕರು ಭಾಗವಹಿಸಿದ್ದರು.

ಡಬ್ಬಿಂಗ್ ಮುಗಿಸಿದ ‘ದಿ ರೈಸ್ ಆಫ್ ಅಶೋಕ’..ಶೀಘ್ರದಲ್ಲೇ ತೆರೆಗೆ ಅಭಿನಯ ಚತುರ ಸತೀಶ್ ನೀನಾಸಂ
ಅಭಿನಯ ಚತುರ ಸತೀಶ್ ನೀನಾಸಂ ಹೊಸ ಅವತಾರವೆತ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ. ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಚಿತ್ರದ ನಾಯಕ ಸತೀಶ್ ಹಾಗೂ ನಾಯಕಿ ಸಪ್ತಮಿ ಗೌಡ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ.

ಡಬ್ಬಿಂಗ್ ಪೂರ್ಣಗೊಂಡ ಬಳಿಕ ಮಾಧ್ಯಮದವರೊಂದಿಗೆ ನಟ ಸತೀಶ್ ನೀನಾಸಂ ಮಾತನಾಡಿ, ದಿ ರೈಸ್ ಆಫ್ ಅಶೋಕ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿತ್ತು. ಈಗ ಡಬ್ಬಿಂಗ್ ಕೂಡ ಕಂಪ್ಲೀಟ್ ಆಗಿದೆ. ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಮುಗಿಸಿದ್ದೇವೆ. ಆನಂದ್ ಇಂಜಿನಿಯರ್ ನನ್ನ ಸಾಕಷ್ಟು ಚಿತ್ರಗಳಿಗೆ ಅವರೇ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ಡಬ್ ಮಾಡಿರುವುದು ಪಾಸಿಟಿವ್ ಎನರ್ಜಿ ಇದೆ. ಈ ಜಾಗದಲ್ಲಿ ಅಣ್ಣಾವ್ರು, ವಿಷ್ಣು ಸರ್ ಸೇರಿದಂತೆ ಹಲವರು ಇಲ್ಲಿಯೇ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ನಮ್ಮ ಚಿತ್ರದ ಡಬ್ಬಿಂಗ್ ಮುಗಿದಿರುವುದು ಖುಷಿ ಇದೆ. ಕನ್ನಡ, ತೆಲುಗು ಹಾಗೂ ತಮಿಳ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಕನ್ನಡ ಭಾಷೆ ಡಬ್ಬಿಂಗ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ತೆಲುಗು ಹಾಗೂ ತಮಿಳು ಶುರು ಮಾಡುತ್ತೇವೆ ಎಂದರು.

ನಟಿ ಸಪ್ತಮಿ ಗೌಡ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಯಾವುದೇ ಸಿನಿಮಾ ಶುರು ಮಾಡಿ ಅದರಲ್ಲಿಯೂ ಡಬ್ಬಿಂಗ್ ‌ಮುಗಿಸಿದಾಗ ನಟಿಯಾಗಿ ಪರಿಪೂರ್ಣ ಜವಾಬ್ದಾರಿ ಅನಿಸುತ್ತದೆ. ಅಂಬಿಕಾ ಎಂಬ ಪಾತ್ರ ಎಮೋಷನ್. ತುಂಬಾ ಇಸಿಯಾಗಿಯಾದ ಪಾತ್ರ. ನನ್ನನ್ನು ಚಿತ್ರ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಡಿಫರೆಂಟ್ ಅವತಾರದಲ್ಲಿ ಅಂಬಿಕಾ ಆಗಿ ನೀವು ನನ್ನನ್ನು ನೋಡುತ್ತೀರ. ದಿ ರೈಸ್ ಆಫ್ ಅಶೋಕ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆ ಎಂದು ಹೇಳಿದರು.

ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು

ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ದಿ ರೈಸ್ ಆಫ್ ಅಶೋಕ.

ಸತೀಶ್ಗೆ ಜೋಡಿಯಾಗಿ ಸಪ್ತಮಿ ಗೌಡ

ಚಿತ್ರದಲ್ಲಿ ಸತೀಶ್ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.

ಸತೀಶ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾವನ್ನು ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡು ಕೆಲಸ ಪ್ರಾರಂಭಿಸಿದರು. ಈಗ ಆ ಕೆಲಸ ಮುಕ್ತಾಯಗೊಂಡಿದ್ದು, ಚಿತ್ರ ಬಿಡುಗಡೆ ಹಂತ ತಲುಪಿದೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ.

ಬಹುಭಾಷೆಯಲ್ಲಿ ಚಿತ್ರ

ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ನೀನಾಸಂ ಸತೀಶ್ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ನಿರ್ವಹಿಸಿದ್ದರೆ, ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಿನಿಮಾ ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಸುರತ್ಕಲ್ ಡಿವೈಎಫ್‌ಐನಿಂದ ‘ಸೌಹಾರ್ದ ಯುವ ಸಮ್ಮಿಲನ’ ಕಾರ್ಯಕ್ರಮ
ಸುರತ್ಕಲ್: ಡಿವೈಎಫ್‌ಐ ಸುರತ್ಕಲ್ ವತಿಯಿಂದ “ತುಳುನಾಡಿನ ಸಾಮರಸ್ಯದ ಪರಂಪರೆಯ ಉಳಿವಿಗಾಗಿ, ಕರಾವಳಿಯ ಕೋಮುಸೌಹಾರ್ದದ ರಕ್ಷಣೆಗಾಗಿ, ಜಾತಿ-ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗಿದ್ದರೆ ಸಾಕು”ಎಂಬ ಸಂದೇಶ ಸಾರುವ ಸೌಹಾರ್ದ ಯುವ ಸಮ್ಮಿಲನ ಕಾರ್ಯಕ್ರಮವು ಕುಳಾಯಿ ಮಹಿಳಾ ಮಂಡಲದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಹಳೆಯಂಗಡಿ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಅನಿಲ್ ಚೆರಿಯನ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಭಾಗ ಮಾಡಲು ಹವಣಿಸುತ್ತಿರುವಾಗ ಡಿವೈಎಫ್ಐ ಸುರತ್ಕಲ್ ಈ ಕಾರ್ಯಕ್ರಮದ ಮೂಲಕ ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತದಲ್ಲಿ ಸಂವಿಧಾನ ಎಲ್ಲದಕ್ಕಿಂತಲೂ ಮಿಗಿಲಾದ ಸ್ಥಾನವನ್ನು ಪಡೆಯಬೇಕಿತ್ತು ಆದರೆ ಪ್ರಸ್ತುತ ಸಂವಿಧಾನವು ಜಾತಿ ಧರ್ಮಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ ಇದರ ಪರಿಣಾಮ ದೇಶದಲ್ಲಿ ಕೋಮು ಕಲಬೆಗಳಂತಹ ಘಟನೆಗಳು ನಡೆಯುತ್ತಿವೆ ಎಂದರು.

ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರು ಅದು ರಾಜಕೀಯಕಷ್ಟೇ ಸೀಮಿತವಾಗಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರಜಾಪ್ರಭುತ್ವ ಇಲ್ಲದಾಗಿದೆ. ಹಾಗಾಗಿ ದೇಶದಲ್ಲಿ ಜಾತಿ ಧರ್ಮಗಳನ್ನು ಮುಂದಿಟ್ಟು, ಗಲಭೆಗಳನ್ನು ನಡೆಸಲಾಗುತ್ತಿದೆ.

ಜನರ ತಲೆಗೆ ವಿವೇಕ ವಿವೇಚನೆಯ ಬದಲಿಗೆ ಧರ್ಮ ಎಂಬ ವಿಷಯವನ್ನು ತುಂಬಲಾಗುತ್ತಿದೆ. ಇದನ್ನು ಸಾಂಸ್ಕೃತಿಕವಾಗಿ ಇಲ್ಲದಾಗಿಸಲು ವಿವಿಧ ಪ್ರಕಾರದ ಕಾರ್ಯಕ್ರಮಗಳ ಮೂಲಕ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಚರಿಯನ್ ನುಡಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡೇ ಹಾಗೂ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಧರ್ಮ‌ ಮತ್ತು ರಾಜಕೀಯ ಒಂದಾದಾಗ ಧರ್ಮ ಸಂಘರ್ಷಗಳು ಉಂಟಾಗುತ್ತವೆ. ಇದೇ ಪರಿಸ್ಥಿತಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಹಾಗಾಗಿ ಮಂಗಳೂರಿನಲ್ಲಿ ಬದುಕುವುದು ಅಸಾಧ್ಯ ಎಂದ ಅವರು ಮಂಗಳೂರು ಸುರಕ್ಷಿತವಲ್ಲ ಎಂದು ಆತಂಕ‌ ವ್ಯಕ್ರಪಡಿಸಿದರು.

ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ಇದೆ. ಕೋಮು ಹಿಂಸೆಗಳು ಜಿಲ್ಲೆಯ ಜನರ ನೆಮ್ಮದಿಯನ್ನು ಕೆಡಿಸುತ್ತಿದೆ. ಹಿಂಸೆಗೆ ಪ್ರಚೋದನೆ ಕೊಡುವವರು ಅಧಿಕಾರದ ಪೀಠದಲ್ಲಿದ್ದರೆ ಹಿಂಸೆಗಿಳಿದ ಯುವಕರು ಜೈಲು, ಸ್ಮಶಾನ ಸೇರುತ್ತಿದ್ದಾರೆ. ಸುಳ್ಳು ಮತ್ತು ದ್ವೇಷ ಹಬ್ಬಿಸುವ ಜನರನ್ನು ಸಮಾಜದಿಂದ ದೂರವಿಡುವ ಕೆಲಸ ಆಗಬೇಕು.ಜನಪ್ರತಿನಿದಿನಗಳಾದವರೇ ದ್ವೇಷ ಹಬ್ಬಿಸುತ್ತಿರುವಾಗ ಸಾರ್ವಜನಿಕರು ಮೌನವಾಗಿರಬಾರದು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹೀಗಾದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಡಿವೈಎಫ್‌ಐ ದ.ಕ.‌ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು 7 ಗಂಟೆಗೆ ಸಂಫೂರ್ಣ ಸ್ತಬ್ದ ವಾಗುತ್ತಿದೆ.‌ ಕತ್ತಲಾಗುತ್ತಲೇ ಮನೆ ಸೇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯನ್ನು ಸರಿಪಡಿಸುವ ಕೆಲಸ‌ಆಗಬೇಕು.‌ ರಾಜಕೀಯ ಲಾಭಕ್ಕಾಗಿ ನಮ್ಮ ನಂಬಿಕೆಗಳು ಸೌಹಾರ್ದ ಬದುಕನ್ನು ಹೊಡೆದು ಹಾಕಲಾಗುತ್ತಿದೆ.

ಯಾವುದೇ ವೈಯಕ್ತಿಕ ದ್ವೇಷ ಇಲ್ಲದೆ ಇದ್ದರೂ ರಾಜಕೀಯ ದುರುದ್ದೇಶಕ್ಕಾಗಿ ದೇಶದಲ್ಲಿ ಹಿಂದೂ ಮುಸ್ಲಿಮರ ಐಕ್ಯತೆಗಾಗಿ ಹೋರಾಡುತ್ತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ನಾಥೂರಾಮ್‌ ಗೋಡ್ಸೆ ಮೂಲಕ ಕೊಲ್ಲಿಸಿದ ದ್ವೇಷದ ರಾಜಕಾರಣವೇ ಅಬ್ದುಲ್ ರಹಿಮಾನ್ ನನ್ನೂ ಕೊಲೆ ಮಾಡಿದೆ ಎಂದರು.

ಉದ್ಯೋಗ, ಆರೋಗ್ಯ ಸಮಸ್ಯೆ‌, ಶಿಕ್ಷಣ ವ್ಯಾಪಾರೀಕರಣಗಳು ನಡೆಯುತ್ತಿದ್ದರೆ, ಅಸನ್ನು ಪ್ರಶ್ನಿಸಬೇಕಾಗಿರುವ ಯುವಕರನ್ನು ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ‌ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಇದೇ ಸಂದರ್ಭ ಸೌಹಾರ್ದ ಸಾರುವ ಪೋಸ್ಟರ್ ಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ‌ ಮುಖಂಡ ಸದಾಶಿವ ಶೆಟ್ಟಿ ಹೊಸಬೆಟ್ಟು, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಶ್‌ ಕುಮಾರ್ ಬಜಾಲ್, ವಕೀಲರು ಹಾಗೂ ಮೊಗವೀರ‌ ಸಮುದಾಯದ ಮುಖಂಡ ಗಂಗಾಧರ ಹೊಸಬೆಟ್ಟು, ಸಾಮಾಜಿಕ ಹೋರಾಟಗಾರ ಟಿ.ಎನ್. ರಮೇಶ್ ಮೊದಲಾದವರು ಮಾತನಾಡಿದರು.

ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸಿಪಿಐಮ್ ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಶಶಿಧರ್,ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಮೂಡ ಸದಸ್ಯರಾದ ಅಬ್ದುಲ್ ಜಲೀಲ್ ಅದ್ದು,ಡಿವೈಎಫ್ ಐ ಮುಖಂಡರಾದ ಬಿಕೆ ಮಕ್ಸೂದ್,ಆಜ್ಮಲ್ ಅಹ್ಮದ್,ಆಶಾ ಬೈಕಂಪಾಡಿ,ಜೋಯ್ ರೋಷನ್ ಡಿಸೋಜಾ, ಉದಯ ಜನತಾಕಾಲನಿ, ತೌಸೀಫ್ ಅಂಗರಗುಂಡಿ, ಮುಸ್ತಫಾ ಬೈಕಂಪಾಡಿ, ನವಾಜ್ ಕುಲಾಯಿ,ಐ ಮೊಹಮ್ಮದ್,ಕಾಂಗ್ರೆಸ್ ಮುಂದಾಳುಗಳಾದ ರಾಜೇಶ್ ಕುಳಾಯಿ, ಹಿದಾಯತ್ ಬಿಕೆ,ಯಶವಂತ ಹೊಸಬೆಟ್ಟು,ಮೊಹಮ್ಮದ್ ಶರೀಫ್ ಕಾನ,ಕೊರಗ ಸಮುದಾಯದ ಮುಖಂಡರಾದ ಜಯ ಮಧ್ಯ, ಸಾಮಾಜಿಕ ಮುಂದಾಳುಗಳಾದ ಸಲೀಮ್ ಶಾಡೊ
ಶರೀಫ್ ಜನತಾ ಕಾಲನಿ,ಶರೀಫ್ ಕುಳಾಯಿ, ಆಟೋ ರಿಕ್ಷಾ ಚಾಲಕರ ಸಂಘ ಸಿಐಟಿಯುನ ಲಕ್ಷ್ಮೀಷ ಅಂಚನ್ ಕುಲಾಯಿ, ಬಷೀರ್ ಕಾನ, ಹಂಝ ಮೈಂದಗುರಿ, ಅನಿಲ್, ಮೊದಲಾದವರು ಉಪಸ್ಥಿತರಿದ್ದರು

ನಾಳೆಯಿಂದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿಸಿ ಪ್ರತಿ ದಿನವೂ ವಿಚಾರಗೋಷ್ಠಿ
ಬಲವಂತದ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಕಳೆದ ಮೂರೂವರೆ ವರ್ಷದಿಂದ (1180 ದಿನ) ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಅಡಿಯಲ್ಲಿ, ಫಲವತ್ತಾದ ಕೃಷಿ ಭೂಮಿ ಉಳಿಸಲು ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇಂದಿನ ಕಾಂಗ್ರೆಸ್ ಸರ್ಕಾರ ಅದನ್ನು ರೈತರ ಪ್ರಬಲ ವಿರೋಧದ ನಡುವೆಯೂ 10 ಹಳ್ಳಿಗಳ ಭೂಸ್ವಾಧೀನಕ್ಕೆ 2025ರ ಏಪ್ರಿಲ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಮೂಲಕ ರೈತರು ಮತ್ತು ಸರ್ಕಾರದ ನಡುವಿನ ಸಂಘರ್ಷ ಅಂತಿಮ ಹಂತಕ್ಕೆ ತಲುಪಿದ್ದು, ಚನ್ನರಾಯಪಟ್ಟಣ ರೈತರ ಬೆಂಬಲಕ್ಕೆ ನಿಂತಿರುವ ದಲಿತ, ಕಾರ್ಮಿಕ, ಮಹಿಳಾ ಮತ್ತು ರೈತ  ಸಂಘಟನೆಗಳ ಐಕ್ಯ ಹೋರಾಟವಾದ ‘ಸಂಯುಕ್ತ ಹೋರಾಟ-ಕರ್ನಾಟಕ’ ದಿನಾಂಕ: 25-06-2025ರಂದು ‘ದೇವನಹಳ್ಳಿ ಚಲೋ’ ಪ್ರತಿಭಟನೆಗೆ ಕರೆ ನೀಡಿತ್ತು. ದೇವನಹಳ್ಳಿ ಪಟ್ಣಣದ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ರೈತರ ಶಾಂತಿಯುತ ಹೋರಾಟವನ್ನು ಸರ್ಕಾರವು ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನಮಾಡಿದೆ. ಸಂವಿಧಾನನಾತ್ಮಕವಾಗಿ ಭೂಸ್ವಾಧೀನ ವಿರೋಧಿಸುತ್ತಿದ್ದ ಹೋರಾಟಗಾರರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಬಂದಿಸಿರುವುದಕ್ಕೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿ ಸುದ್ದಿಗಳೆ ಸಾಕ್ಷಿಯಾಗಿವೆ.

ಭೂಸ್ವಾಧೀನ ವಿರೋಧಿಸಿದ ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ರಾಜ್ಯದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದಿ.26-06-2-25ರಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಬಲವಂತದ ಭೂಸ್ವಾಧೀನ ಕೈಬಿಡಬೇಕು ಎಂದು ಒತ್ತಾಯಿಸಿವೆ.

ರೈತರ ಮೇಲಿನ ದೌರ್ಜನ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಹಠಮಾರಿ ಧೋರಣೆ ಖಂಡಿಸಿ ಚಿತ್ರನಟರಾದ ಪ್ರಕಾಶ್‌ ರಾಜ್, ಹಿರಿಯ ಪತ್ರಕರ್ತರು ಹಾಗೂ ಬರಹಗಾರರಾದ ಡಾ.ವಿಜಯಮ್ಮ, ರೈತರ ಸಂಘದ ವೀರಸಂಗಯ್ಯ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಮರುದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕಠುಶಬ್ಧಗಳಲ್ಲಿ ಖಂಡಿಸಿದ್ದಾರೆ. ಕೂಡಲೇ ಬಲವಂತದ ಭೂಸ್ವಾಧೀನ ಕೈಬಿಡಬೇಕು ಎಂದು ಗಡುವು ನೀಡಿ ಬಂದಿದ್ದಾರೆ.

ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುವವರೆಗೂ ಸಂಯುಕ್ತ ಹೋರಾಟ-ಕರ್ನಾಟಕ ಮತ್ತು ಚನ್ನರಾಯಪಟ್ಟಣ 13 ಹಳ್ಳಿಗಳ ರೈತರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ‘ಭೂಮಿ ಸತ್ಯಾಗ್ರಹ’ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಜುಲೈ-4 ರಂದು, ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು, ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯವರೊಂದಿಗೆ ಸಮಗ್ರ ಸಭೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಜುಲೈ 3ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಅಂದಿನ ಸಭೆಯಲ್ಲಿ, ಚನ್ನರಾಯಪಟ್ಟಣ ಹೋಬಳಿಯ ಬಲವಂತದ ಭೂಸ್ವಾಧೀನ ಹಿಂಪಡೆಯುವ ಜೊತೆಗೆ, ಕೆಐಎಡಿಬಿ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಕೃಷಿ ಭೂಮಿ ದುರುಪಯೋಗಕ್ಕೆ ಶಾಶ್ವತವಾಗಿ ಪರಿಹಾರ ರೂಪಿಸಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕ ಒತ್ತಾಯಿಸಿದೆ.

‘ಭೂಮಿ ಸತ್ಯಾಗ್ರಹ’ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡರು, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂಡವಾಳಶಾಹಿಗಳ ಪರ ನಿಲ್ಲದೆ, ಬಲವಂತದ ಭೂಸ್ವಾಧೀನ ಹಿಂಪಡೆಬೇಕು ಎಂದು ಆಗ್ರಹಿಸಿದರು. ಅವರ ಮಾತಿನ ಸಂಕ್ಷಿಪ್ತ ಬರಹರೂಪ ಹೀಗಿದೆ:

ನೆಲ ಜನ ಸಂಸ್ಕೃತಿಯನ್ನ ಉಳಿಸುವ ಹೋರಾಟವಿದು

ಚನ್ನರಾಯಪಟ್ಟಣ ರೈತ ಹೋರಾಟದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತರಪರ ಹೋರಾಟ ನಡೀತಿದೆ.

ಈ ಸಮಸ್ಯೆ ಹುಟ್ಟುಹಾಕಿರುವ ಸರ್ಕಾರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ದಾರೆ. ಇವತ್ತು ರೈತರ ವಿರುದ್ಧ ನಿಂತಿರುವ ಅದೇ ಸಿದ್ದರಾಮಯ್ಯ ಅವರು ಅವತ್ತು ರೈತರ ಪರ ಮಾತಾಡಿದ್ರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀನಿ ಅಂತಾ ಹೇಳ್ತಿದ್ದೀರಿ, ಈ ಮಾತನ್ನು ಉಳಿಸಿಕೊಳ್ಳಿ ಕಾರ್ಪೊರೇಟ್ ಗಳ ಪರ ನಿಂತು, ಸಾವಿರಾರು ಎಕರೆ ರೈತ ಭೂಮಿಯನ್ನ ಲಾಭಕೋರರಿಗೆ ಕೊಡಬೇಡಿ. ನೀವು ಜನಪರವಾಗಿಯೇ ಇರಿ

ಈ ಕಾರ್ಪೊರೇಟ್ ಸೆಕ್ಟರ್ ಎಲ್ಲಾ ನೊಂದವರನ್ನ ಬಳಸಿಕೊಳ್ತಿದೆ. ಅಭಿವೃದ್ಧಿ ಅಂದ್ರೆ ಬರೀ ಕಾರ್ಖಾನೆಗಳನ್ನ ಕಟ್ಟೊದಲ್ಲ, ಎಲ್ಲ ಜನರ ನೆಮ್ಮದಿ..ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಬೇಕು. ಅದು ಬಿಟ್ಟು ಸರ್ಕಾರ ಯಾಕೆ ಈ ದುಷ್ಟಕೂಟದ ಭಾಗವಾಗುತ್ತಿದೆ.

ಎಂ.ಬಿ ಪಾಟೀಲ್ ಗೆ ಹೇಳ್ತಿದ್ದಾರೆ ಕಾರ್ಪೊರೇಟ್ ಕಂಪನಿಗಳು ಒಳ್ಳೆ ಭೂಮಿಯನ್ನ ಕೇಳ್ತಾರೆ. ಅವರಿಗೆ ಅವರು ಕೇಳಿದ ಭೂಮಿ ಕೊಡಬೇಕು ಅಂತಾ ಅವರಿಗೆ ನಾನು ಕೇಳ್ತೀನಿ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದ್ರೆ ಕೊಡ್ತೀರಾ,  ಯಾಕೆ ಮೂರ್ಖ ಹೇಳಿಕೆಗಳನ್ನ ಕೊಡ್ತಿದ್ದೀರಿ. ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಾ..ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿಂತೀರಾ..

ನಮ್ಮನ್ನ ಉಳ್ಳವರ ಮನೆಗೆ ಜೀತಗಾರರನ್ನಾಗಿಸಬೇಡಿ, ಅವರ ಬಾಗಿಲು ಕಾಯುವ ಹಾಳುಗಳನ್ನಾಗಿಸಬೇಡಿ. ನಿಮಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ರೆ ಇದನ್ನ ಕೈ ಬಿಡಿ. ಅಭಿವೃದ್ಧಿ ಅಂದ್ರೆ ಎಲ್ಲಾ ಜನರ ಪರವಾಗಿರೋದು, ಕಾರ್ಖಾನೆಗಳ ಮಾಲೀಕರು ಯಾರಿಗೊ ಒಪ್ಪತ್ತಿನ ಅನ್ನ ಹಾಕಿದ್ದನ್ನ ನೋಡಿಲ್ಲ, ನೀವು ಈ ದುಷ್ಟಕೂಟದ ಭಾಗ ಆಗ್ಬೇಡಿ…

ಸಿದ್ದರಾಮಯ್ಯ ಅವರೇ ನೀವೆಲ್ಲರು ವಿವೇಚನೆ ಇರೋರು ಅಂತಾ ನಾವು ನಂಬಿದ್ದೇವೆ..ನೀವು ಎಲ್ಲರ ಒಳಿತು. ಈ ನೆಲ, ಜಲವನ್ನ ಉಳಿಸೋದು ಅನಿವಾರ್ಯ ನಿಮಗೆ ಒತ್ತಡ ಇದೆ ಅಂತಾ ಗೊತ್ತು, ನೀವು ನಿಮ್ಮ ಬದ್ಧತೆಯನ್ನು ಈ ಮೂಲಕ ತೋರಿಸಬೇಕು.

ಈ ಹೋರಾಟದ ಮೂಲಕ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲಾ ಚಳವಳಿಗಳಿಗೂ ಪುನಃಚ್ಛೇತನ ಆಗುವಂತ ಹೋರಾಟಗಳ ಮೊಳಕೆ ಇವತ್ತು ಇಲ್ಲಿ ಚಿಗುರೊಡೆಯುತ್ತಿದೆ.

ನಿಮ್ಮೆಲ್ಲರನ್ನು ಕಿತ್ತು ಎಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ. ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ಇಲ್ಲಿ ಮೊಳಕೆ ಹೊಡೆಯುತ್ತಿವೆ

ಕರ್ನಾಟಕದ ಎಲ್ಲಾ ಚಳವಳಿಗಳು, ಕಾರ್ಮಿಕರು, ರೈತರು ಎಲ್ಲರೂ ಕರ್ನಾಟಕದ ಮೂಲೆ ಮೂಲೆಯಲ್ಲು ಈ ಹೋರಾಟಕ್ಕೆ ಜೊತೆಯಾಗ್ತಿದ್ದಾರೆ..ಇದು ಎಚ್ಚರಿಕೆ ಈ ವಿಚಾರದಲ್ಲಿ ನೀವು ರೈತಪರ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ ಆ ನಂಬಿಕೆಯನ್ನು ಉಳಿಸಿಕೊಳ್ಳಿ ಒಳ್ಳೆ ತೀರ್ಮಾನವನ್ನು ತೆಗೆದುಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಿ…

ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿವಿಧ ಚಳುವಳಿಗಳ ಹಿರಿಯ ನಾಯಕರಾದ ಸಿದ್ಧನಗೌಡ ಪಾಟೀಲ್‌, ವಿ ನಾಗರಾಜ್‌, ಡಿ ಎಚ್‌ ಪೂಜಾರ್‌ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟದ ನೂರ್ ಶ್ರೀಧರ್, ದಸಂಸ ಹಿರಿಯ ನಾಯಕ ವಿ.ನಾಗರಾಜ, ಇಂದೂಧನ ಹೊನ್ನಾಪುರ, ಸಿದ್ದನಗೌಡ ಪಾಟೀಲ್, ಡಿ.ಎಚ್. ಪೂಜಾರ್, ವರಲಕ್ಷ್ಮಿ, ಬಡಗಲಪುರ ನಾಗೇಂದ್ರ, ಯಶವಂತ್, ತಾರಾ ರಾವ್, ಕುಮಾರ್‌ ಸಮತಳ, ಬಸವರಾಜ್ ಕೌತಾಳ್, ಶಿವಾನಂದ ಕುಗ್ವೆ, ಪ್ರಭಾ ಬೆಳವಂಗಲ, ಚನ್ನರಾಯಪಟ್ಟಣ ರೈತರಾದ ನಲ್ಲಪ್ಪನಹಳ್ಳಿ ನಂಜಪ್ಪ, ಲಕ್ಷ್ಮಮ್ಮ, ಜಯಮ್ಮ, ಮಾರೇಗೌಡ, ಚೀಮಾಚನಳ್ಳಿ ರಮೇಶ್, ನಾಗನಾಯಕನಹಳ್ಳಿ ರಘು, ನಲ್ಲೂರು ಗೋಪಿನಾಥ್, ಮುಕುಂದ್ ಚೀಮಾಚನಹಳ್ಳಿ ಸೇರಿದಂತೆ ಹಲವರಿದ್ದರು.

ನಾಳೆಯಿಂದ ನಡೆವ ಪ್ರತಿಭಟನೆಯು ಪ್ರತಿದಿನವೂ ರೈತರ ಭೂಮಿ ಮತ್ತು ಬದುಕಿಗೆ ಸಂಬಂಧಿಸಿದ ಗಹನವಾದ ವಿಷಯಗಳು, ಭೂಮಿ ಕುರಿತಾದ ಕಾಯ್ದೆಗಳು ಅವುಗಳಿಗೆ ಬಂದಿರುವ ತಿದ್ದುಪಡಿಗಳು, ಕೆಐಎಡಿಬಿ ಮೊದಲಾದ ಸರ್ಕಾರಿ ಅಂಗಗಳ ಮೂಲಕ ನಡೆಸುವ ಭೂಕಬಳಿಕೆಯ ಹುನ್ನಾರಗಳು ಮುಂತಾದ ಅನೇಕ ವಿಷಯಗಳ ಬಗ್ಗೆ ವಿಷಯತಜ್ಷರನ್ನು ಕರೆಸಿ ವಿಚಾರ ಗೋಷ್ಟಿಯ ರೂಪದಲ್ಲಿರುತ್ತದೆ. ಪ್ರತಿದಿನ ಪಾಲ್ಗೊಳ್ಳುವ ರೈತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಈ ಚಿಂತನ-ಮಂಥನಗಳು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ವೇದಿಕೆಗಳಾಗಲಿವೆ ಎಂದು ಇಂದಿನ ಪ್ರತಿಭಟನೆಯ ಸಮನ್ವಯ ನಡೆಸುತ್ತಿದ್ದ ಮುಂದಾಳುಗಳು ತಿಳಿಸಿದ್ದಾರೆ. ವಿವರಗಳು ಹೀಗಿವೆ:

ದಿನಾಂಕ

ವಿಚಾರ

June 28

ಬಿಜೆಪಿ ಮಾಡಿದ ಭೂ ಕಾಯ್ದೆಯ ತಿದ್ದುಪಡಿಯನ್ನು ಕಾಂಗ್ರೆಸ್‌ ಸಹ ಮುಂದುವರೆಸುತ್ತಿದೆ ಏಕೆ? ವಿಷಯ ತಜ್ಞರು: ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷರು, ವಿ.ಗಾಯತ್ರಿ, ಕೃಷಿ ತಜ್ಞರು ಮತ್ತು ಹೋರಾಟಗಾರರು.

June 29

ಸರ್ಕಾರದ ಭೂ ನೀತಿ ಕಾಯುತ್ತಿರುವುದು ಯಾರ ಹಿತ?

June 30

ಬಗರ್‌ ಹುಕುಂ ಸಮಸ್ಯೆ: ಬಗೆಹರಿಸಲಾಗದ ಸಮಸ್ಯೆಯೋ, ಬಗೆಹರಿಸಲು ಸಿದ್ಧವಿಲ್ಲದ ಸಮಸ್ಯೆಯೋ?

July 1

ವಸತಿ ಸಮಸ್ಯೆ; ಸಾವಿರಾರು ಎಕರೆ ಪ್ರತಿಯೊಬ್ಬ ರಾಜಕಾರಣಿಗೇ ಇದ್ದರೂ ಕೋಟ್ಯಾಂತರ ಜನರ ತಲೆ ಮೇಲೆ ಒಂದು ಸ್ವಂತದ ಸೂರು ಇಲ್ಲ ಏಕೆ?

July 2

ಅರಣ್ಯ ನೀತಿ; ಕಾಡಿನ ವಾಸಿಗಳು ತಬ್ಬಲಿಗಳಾಗಿರುವ ಕಥೆ,

July 3

KIADB ಎಂಬ ಕಾರ್ಪರೇಟ್‌ ಭೂ ಮಾಫಿಯಾ

ಹಂಸಲೇಖ ನಿರ್ದೇಶನದ ‘ಓಕೆ’ ಸಿನಿಮಾಗೆ ರವಿಚಂದ್ರನ್ ಹಾರೈಕೆ
ಕನ್ನಡ ಚಿತ್ರರಂಗದ ದಿಗ್ಗಜರೊಬ್ಬರಲ್ಲಿ ಒಬ್ಬರು ಹಂಸಲೇಖ. ಸಂಗೀತ ನಿರ್ದೇಶಕರಾಗಿ, ಚಿತ್ರ ಸಾಹಿತಿಯಾಗಿ ಗೆದ್ದಿರುವ ಹಂಸಲೇಖ ಈಗ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. ಹಂಸಲೇಖ ಈಗ ಡೈರೆಕ್ಟರ್‌ ಕುರ್ಚಿ ಅಲಂಕರಿಸಿದ್ದು, ‘ಓಕೆ’ ಎಂಬ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ‘ಓಕೆ’ ಚಿತ್ರದ ಲಾಂಚ್‌ ಹಾಗೂ ಸುದ್ದಿಗೋಷ್ಠಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌ ವಿಶೇಷ ಅತಿಥಿಯಾಗಿ ಹಂಸಲೇಖ ಸಿನಿಮಾಗೆ ಸಾಥ್‌ ಕೊಟ್ಟರು.

ಬಳಿಕ ಮಾತನಾಡಿದ ಕ್ರೇಜಿಸ್ಟಾರ್‌ ರವಿಚಂದ್ರನ್‌, ಇಂದು ಶೂಟಿಂಗ್ ಕ್ಯಾನ್ಸಲ್ ಮಾಡಿ ಕನಕಪುರದಿಂದ ನಾನು ಈ ಕಾರ್ಯಕ್ರಮಕ್ಕೆ ಓಡಿಬಂದೆ. ಎಲ್ಲಿಂದ ಮಾತು ಶುರು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನೀವು ರಾಜು (ಹಂಸಲೇಖ). ಆದರೆ ನನ್ನನ್ನು ಪರದೆ ಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ನಾನು ಪರದೆಯಲ್ಲಿ ಮೆರೆದಿದ್ದರೆ ಅದಕ್ಕೆ ನೀವು ಮತ್ತು ನಿಮ್ಮ ಹಾಡುಗಳು ಕಾರಣ. ಸಿನಿಮಾ ಓಡುತ್ತಿಲ್ಲ ಅಂತ ಜನ ಹೇಳ್ತಾರೆ. ಆದರೆ ಪ್ರತಿ ವಾರ ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಅದು ಸಮಸ್ಯೆ ಆಗಿದೆ. 1986ರಲ್ಲಿ ನಾವು ಕೊಡಲು ಶುರು ಮಾಡಿದೆವಲ್ಲ ಅದು ಸಕ್ಸಸ್. ಒಂದು ದಿನವೂ ನಾವು ಸಕ್ಸಸ್ ಅನ್ನು ಹೆಗಲಮೇಲೆ ಹಾಕಿಕೊಳ್ಳಲಿಲ್ಲ. ಯಾಕೆಂದರೆ ಒಂದು ಸಿನಿಮಾ ಆಗುತ್ತಿದ್ದಂತೆಯೇ ಇನ್ನೊಂದು ಸಿನಿಮಾ ಶುರು ಮಾಡುತ್ತಿದ್ದೆವು. ಹಂಸಲೇಖ ನನಗೆ ಸಿಕ್ಕಿದ್ದು ವಿಧಿ ಬರಹದಿಂದ. ನನ್ನ ಮತ್ತು ಹಂಸಲೇಖ ಸ್ನೇಹದಲ್ಲಿ ಲೆಕ್ಕಾಚಾರ ಇರಲಿಲ್ಲ. ನನಗೆ ಲೆಕ್ಕಾಚಾರ ಗೊತ್ತಿಲ್ಲ. ಸಿನಿಮಾ ಮಾಡುವುದು ಮಾತ್ರ ನನಗೆ ಗೊತ್ತು. ಇಂದಿಗೂ ಯಾರಾದರೂ ಪ್ರೇಮಲೋಕ, ರಣಧೀರ ಸಿನಿಮಾಗಳ ಲಾಭ ಎಷ್ಟು ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಎನ್.ಎಸ್. ರಾವ್ ಅವರು ನನಗೆ ಹಂಸಲೇಖ ಅವರ ಪರಿಚಯ ಮಾಡಿಕೊಟ್ಟರು. ನನ್ನ ಮತ್ತು ಹಂಸಲೇಖ ಸ್ನೇಹ ಕಲ್ಮಶ ಇಲ್ಲದ್ದು. ಹೆಗಲ ಮೇಲೆ ಕೈ ಹಾಕಿಕೊಂಡು ಹೋಗಿಲ್ಲ. ಬಾರಲ್ಲಿ ಕುಳಿತಿಲ್ಲ. ಒಟ್ಟಿಗೆ ಸಿನಿಮಾ ಮಾಡಿದೆವು ಅಷ್ಟೇ’ ಎಂದರು.

ಹಂಸಲೇಖ ಮಾತನಾಡಿ, ನಾನು ಈ ಕಾರ್ಯಕ್ರಮಕ್ಕೆ ರವಿಚಂದ್ರನ್‌ ಸ್ವಾಗತಿಸಲು ಅವರನ್ನು ಭೇಟಿಯಾಗಿದ್ದೆ. ಎರಡೂವರೆ ಗಂಟೆ ಕಾಲ ಉದ್ಯಮದ ಬಗ್ಗೆ, ಆಗುಹೋಗುಗಳ ಬಗ್ಗೆ ಮಾತನಾಡಿದ್ದೇವು. ಯಾಕೆ ಈ ಜನ ರಾಮಚಾರಿ, ಹಳ್ಳಿಮೇಸ್ಟ್ರು, ರಾಜಾಹುಲಿ ತರ ಸಿನಿಮಾ ಮಾಡ್ತಿಲ್ಲ ಎಂದು ಕೇಳಿದರು. ಅವರು ಯಾಕೆ ಇದನ್ನು ಮಾಡ್ತಿಲ್ಲ. ಅವರು 10 ಕೆಜಿ ಕಡಿಮೆ ಮಾಡಿಕೊಂಡ್ರೆ ಸುರದ್ರೂಪಿ ನಟ. ಸುರಸುಂದರ ನಟ. ಸಂಗೀತ ಹುಚ್ಚಿರುವ ವ್ಯಕ್ತಿ. ಚಿಕ್ಕ ಚಿಕ್ಕ ಚಿತ್ರ ಮಾಡಬಹುದು. ಆದ್ರೆ ಈ ಟೆಕ್ನಾಲಾಜಿ ಹಿಂದೆ ಹೋಗಿ ಪ್ಯಾನ್‌ ಇಂಡಿಯಾ ಮಾತನಾಡುತ್ತಿದ್ದಾರೆ. ನಮ್ಮ ಉದ್ಯಮ ಕೂಡ ಆ ಕಡೆ ತಿರುಗಿದೆ. ನಮ್ಮಲ್ಲಿ 150-200 ಜನ ನಿರ್ದೇಶಕರಿದ್ದಾರೆ. ಅವರೆಲ್ಲರೂ ಪ್ರಯೋಗಳನ್ನೂ ಮಾಡುತ್ತಿದ್ದಾರೆ. ಪ್ರಯೋಗ ಪ್ರಯೋಗಶಾಲೆಗೆ. ಅಡುಗೆ ಮನೆಗಲ್ಲ. ಸಿನಿಮಾ ಅಂದ್ರೆ ಹಾಡು, ಸಂಭಾಷಣೆ, ಹಾಸ್ಯ. ಈ ರೀತಿ ಇದ್ರೆ ಪ್ರೇಕ್ಷಕರಿಗೆ ರುಚಿ. ಹಳ್ಳಿಕಡೆ ಸಂತೆಬೆಳೆ. ಮನೆಬೆಳೆ ಅಂತಾ ಒಂದನ್ನು ಬೆಳೆಯುತ್ತಾರೆ. ಸಂತೆಬೆಳೆ ಕಬ್ಬು. ಅದನ್ನು ದಿನ ತಿನಲು ಅಷ್ಟೇ. ಹಾಗೆಯೇ ಮನೆಬೆಳೆ ಅಂದ್ರೆ ಈರುಳ್ಳಿ, ಬದನೇಕಾಯಿ, ಆಲೂಗಡ್ಡೆ, ಅದೇ ರೀತಿ ನಮ್ಮ ಸಂಸ್ಕೃತಿ ಇರುವ ಕಥೆಗಳ ಚಿಕ್ಕ ಚಿಕ್ಕ ಸಿನಿಮಾ ಮಾಡಬೇಕು ಅಗತ್ಯ ಎನಿಸುತ್ತಿದೆ. ನನ್ನ ಬಳಿ ಸಾಕಷ್ಟು ಕಥೆ ಇವೆ. ಆದ್ರೆ ನಾನು ಈ ಸಿನಿಮಾ ಮಾಡಬೇಕು ಎಂದುಕೊಂಡೆ. ಐದು ವರ್ಷಗಳ ಹಿಂದೆ ಆದಿಪ್‌ ಅಖ್ತರ್ ಪಂಜರ ಎಂಬ ಕಥೆ ಬರೆದಿದ್ದರು. ಕಥೆ ಓದಿ ಅವರನ್ನು ಕರೆಸಿ ಸಹಿ ಮಾಡಿಸಿಕೊಂಡು ಅಡ್ವಾನ್ಸ್‌ ಕೊಟ್ಟೆ. ಮಣ್ಣಿನಗುಣವಿರುವ ಕಥೆಗಳು, ಕಥೆಗಾರರು ನಮ್ಮ ಸಿನಿಮಾ ಬೇಕು. ಅದು ಬಂದ್ರೆ ಕಾಮನ್‌ ಆಡಿಯನ್ಸ್‌ ಬೇಗ ಬೇಗ ಚಿತ್ರರಂಗ ಆನಂದಿಸುತ್ತಾರೆ. ಕಥೆಗಳಲ್ಲಿ ಕನ್ನಡದ ಡಿಎನ್‌ಎ ಇದ್ರೆ ಜನ ಚಿತ್ರ ನೋಡುತ್ತಾರೆ. ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ದೊಡ್ಡ ಆಂದೋಲ ಸಾಮಾಜಿಕ, ಶೈಕ್ಷಣಿಕ, ಪ್ರೀತಿಯಿಂದ ನಡೆಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಹಂಸಲೇಖ ಅವರು ಸಿನಿಮಾ ನಿರ್ದೇಶನ ಸಿನಿಮಾಕ್ಕೆ ಚಾಲನೆ ಸಹ ದೊರೆತಿದೆ. ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರ ಸಾಹಸಕ್ಕೆ ಶುಭಾಶಯ ತಿಳಿಸಿದ್ದಾರೆ. ಹಂಸಲೇಖ ಅವರು ‘ಓಕೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹಂಸಲೇಖ ನಿರ್ದೇಶನ ಮಾಡಲಿರುವ ಸಿನಿಮಾಕ್ಕೆ ನಾಗೇಶ್ ವಾಷ್ಟರ್ ಮತ್ತು ಸೂರ್ಯಪ್ರಕಾಶ್ ಬಂಡವಾಳ ತೊಡಗಿಸಿದ್ದಾರೆ. ಈ ಸಿನಿಮಾವನ್ನು ಆಕಾಂಕ್ಷ ಪ್ರೊಡಕ್ಷನ್ ಮತ್ತು ಐದನಿ ಎಂಟರ್ಟೈನ್ ಮೆಂಟ್ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಐದನಿ, ಹಂಸಲೇಖ ಅವರದ್ದೆ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಕಲಾವಿದರನ್ನು ಘೋಷಿಸಲಾಗುವುದು.