Pragath K R – Peepal Media

ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ತರಲೇಬೇಕು: ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ
ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕರಿಗೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಮಿತಿ ಸದಸ್ಯರು ಎಚ್ಚರಿಕೆ ಪತ್ರ ನೀಡಿದ್ದಾರೆ. ದ್ರಾವಿಡ ಕನ್ನಡಿಗರು ಚಳುವಳಿಯ ಅಭಿ ಒಕ್ಕಲಿಗ ಎಚ್ಚರಿಕೆ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಒಂದು ವಾರ ಗಡುವು ನೀಡುತ್ತೇವೆ ಅಷ್ಟರ ಒಳಗೆ ನೀವು ಲಿಖಿತವಾಗಿ ಉತ್ತರಿಸಬೇಕು. ನಮ್ಮ ಬೇಡಿಕೆ ಬಿಹಾರದಲ್ಲಿ ಪಾಸ್ ವಿಥೌಟ್ ಇಂಗ್ಲಿಷ್ ಕಾನೂನಿರುವಂತೆ ಕರ್ನಾಟಕದಲ್ಲಿ ಪಾಸ್ ವಿಥೌಟ್ ಹಿಂದಿ ಕಾನೂನು ಈ ಕೂಡಲೇ ಬರಬೇಕು ಇಲ್ಲವಾದಲ್ಲಿ 2026 ಮಾರ್ಚ್ 30ರಂದು ನಡೆಯುವ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷೆ ಕೊಠಡಿಗೆ ರಾಜ್ಯಾದ್ಯಂತ ನುಗ್ಗಿ ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕದಂಬ ಪಡೆಯ ಚೇತನ್ ರವರು ಮಾತನಾಡಿ ಎರಡು ನುಡಿ ನೀತಿ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಮೂರು ವರ್ಷ ಕಳೆದರೂ ಜಾರಿ ಮಾಡಿಲ್ಲ ಈ ಕೂಡಲೇ ಜಾರಿ ಮಾಡದಿದ್ದರೆ ಎಸ್ ಎಸ್ ಎಲ್ ಸಿ ಹಿಂದಿ ಪರೀಕ್ಷಾ ಕೊಠಡಿಗೆ ನುಗ್ಗಿ ಉಂಟಾಗುವ ಅವಾಂತರಕ್ಕೆ ನೇರವಾಗಿ ಮುಖ್ಯಮಂತ್ರಿಯ ಸಿದ್ರಾಮಯ್ಯನವರು ಕಾರಣರಾಗುತ್ತಾರೆ ಎಂದರು.

ಪ್ರಕಾಶ್ ಹೆಬ್ಬಳ್ಳಿ, ನಾಗೇಶ್ ಅರಳಕುಪ್ಪೆ, ಮಂಜು ಗಣಪತಿಪುರ , ರಘುನಂದನ್, ಸಚಿನ್ ಮತ್ತಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

‘ಟಾಕ್ಸಿಕ್’ ಟ್ರೈಲರ್: ರಾಕಿಂಗ್ ಸ್ಟಾರ್ ಯಶ್‌ನ ಹೊಸ ಅವತಾರ, ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಟಚ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಯಶ್ ಅವರ ಸಿನಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯನ್ನು ಟ್ರೈಲರ್ ಮತ್ತಷ್ಟು ಬಲಪಡಿಸಿದೆ.

ಯಶ್ ಅವರ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಗ್ಗೆ 10 ಗಂಟೆ 10 ನಿಮಿಷಕ್ಕೆ ಟ್ರೈಲರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಟ್ರೈಲರ್ ನೋಡುತ್ತಿದ್ದಂತೆಯೇ ಇದು ಸಾಮಾನ್ಯ ಮಾಸ್ ಸಿನಿಮಾ ಅಲ್ಲ, ಬದಲಾಗಿ ವಿಷಯಾಧಾರಿತ, ವಿಭಿನ್ನ ಶೈಲಿಯ ಪ್ರಯತ್ನ ಎನ್ನುವುದು ಸ್ಪಷ್ಟವಾಗುತ್ತದೆ.

ಬೋಲ್ಡ್ ಕಥನ, ರೆಟ್ರೋ ಲೋಕದ ನೋಟ
‘ಟಾಕ್ಸಿಕ್’ ಟ್ರೈಲರ್ ಆರಂಭದಲ್ಲೇ ಬೋಲ್ಡ್ ಹಾಗೂ ಅಚ್ಚರಿಯ ದೃಶ್ಯಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಕಥನ ಶೈಲಿ, ದೃಶ್ಯ ಸಂಯೋಜನೆ ಮತ್ತು ಕಲರ್ ಪ್ಯಾಲೆಟ್ ಎಲ್ಲವೂ ಸೇರಿ ಸಿನಿಮಾವನ್ನು ರೆಟ್ರೋ ವಾತಾವರಣದಲ್ಲಿ ಕಟ್ಟಿಕೊಟ್ಟಿರುವುದು ಗಮನಸೆಳೆಯುತ್ತದೆ. ಈ ರೀತಿಯ ಮೇಕಿಂಗ್ ಕನ್ನಡ ಚಿತ್ರರಂಗದಲ್ಲಿ ಅಪರೂಪ ಎನ್ನುವ ಬದಲು ಈವರೆಗೆ ಬಂದೇ ಇಲ್ಲ ಎನ್ನುವಂತೆ ಹಾಲಿವುಡ್ ಸಿನಿಮಾಗಳ ನೆನಪು ತರಿಸುತ್ತದೆ.

ಮಾಸ್ ಜೊತೆ ಕ್ಲಾಸ್ ಮಿಶ್ರಣ: ಯಶ್‌ನ ಪ್ರಭಾವ ಪ್ರಸ್ತುತಿ
ಟ್ರೈಲರ್‌ನ ಪ್ರಮುಖ ಆಕರ್ಷಣೆಯೇ ಯಶ್ ಅವರ ಪರಿವರ್ತಿತ ಅವತಾರ. ಮಾತು ಕಡಿಮೆ, ಕಣ್ಣುಗಳ ಮೂಲಕ ಮಾತನಾಡುವ ಅಭಿನಯ, ಗಟ್ಟಿಯಾದ ದೇಹಭಾಷೆ ಮತ್ತು ತೀವ್ರತೆಯ ಲುಕ್ ಎಲ್ಲವೂ ಸೇರಿ ಯಶ್ ಅವರನ್ನು ಇನ್ನೊಂದು ಮಟ್ಟದಲ್ಲಿ ತೋರಿಸುತ್ತಿವೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಪ್ರೆಸೆನ್ಸ್ ಸಖತ್ ಮಾಸ್ ಆಗಿದ್ದರೆ, ಮೌನದ ಕ್ಷಣಗಳಲ್ಲಿ ಕ್ಲಾಸ್ ಟಚ್ ಸ್ಪಷ್ಟವಾಗಿ ಕಾಣಿಸುತ್ತದೆ.

ನಾಯಕಿಯರ ಪಾತ್ರಕ್ಕೆ ತೂಕ
ಟ್ರೈಲರ್‌ನಲ್ಲಿ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ನಾಯಕಿಯರ ಪಾತ್ರಗಳು ಕೇವಲ ಅಲಂಕಾರಕ್ಕೆ ಸೀಮಿತವಾಗಿಲ್ಲ ಎನ್ನುವ ಸೂಚನೆ ಸಿಗುತ್ತಿದೆ. ಪ್ರತಿಯೊಬ್ಬರಿಗೂ ಕಥೆಯೊಳಗಿನ ಪ್ರಾಮುಖ್ಯತೆ ಇರುವಂತೆ ಟ್ರೈಲರ್ ಕಟ್ಟಿಕೊಟ್ಟಿದ್ದು, ಮಹಿಳಾ ಪಾತ್ರಗಳಿಗೆ ಬಲ ನೀಡುವ ಗೀತು ಮೋಹನ್‌ದಾಸ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ತಾಂತ್ರಿಕವಾಗಿ ಶ್ರೀಮಂತ ಸಿನಿಮಾ
‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್ ಭಾರಿ ಬಂಡವಾಳ ಹೂಡಿದ್ದು, ಅದರ ಪ್ರತಿಫಲನ ಟ್ರೈಲರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ಕಾಣಿಸುತ್ತದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಆ್ಯಕ್ಷನ್ ಕೊರಿಯೋಗ್ರಫಿ ಮತ್ತು ಆರ್ಟ್ ಡಿಸೈನ್ ಎಲ್ಲವೂ ಹೈ ಸ್ಟ್ಯಾಂಡರ್ಡ್‌ನಲ್ಲಿ ರೂಪುಗೊಂಡಿವೆ. ಹಿನ್ನೆಲೆ ಸಂಗೀತವು ಟ್ರೈಲರ್‌ಗೆ ತೀವ್ರತೆಯನ್ನು ಹೆಚ್ಚಿಸಿ, ಪ್ರೇಕ್ಷಕರನ್ನು ಕಥೆಯೊಳಗೆ ಎಳೆದುಕೊಳ್ಳುತ್ತದೆ.

ಕಥೆಗೆ ಯಶ್‌ಗೂ ಪಾಲು
ಈ ಚಿತ್ರದ ಕಥೆಯನ್ನು ಗೀತು ಮೋಹನ್‌ದಾಸ್ ಜೊತೆ ಯಶ್ ಕೂಡ ಸಹ-ರಚನೆ ಮಾಡಿದ್ದಾರೆ ಎಂಬ ಅಂಶ ಟ್ರೈಲರ್‌ಗೆ ಮತ್ತಷ್ಟು ಕುತೂಹಲ ಸೇರಿಸಿದೆ. ಇದು ಯಶ್ ಕೇವಲ ನಟನಾಗಿ ಮಾತ್ರವಲ್ಲ, ಕಥನದ ಭಾಗವಾಗಿಯೂ ಈ ಸಿನಿಮಾಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಬಾಕ್ಸ್ ಆಫೀಸ್‌ನಲ್ಲಿ ಕಠಿಣ ಪೈಪೋಟಿ
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ವೇಳೆ ಹಿಂದಿಯ ಸೂಪರ್ ಹಿಟ್ ಸಿನಿಮಾ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಜೊತೆ ನೇರ ಸ್ಪರ್ಧೆ ಎದುರಿಸಲಿದೆ. ಆದರೂ, ವಿಭಿನ್ನ ಕಥನ, ಅಂತಾರಾಷ್ಟ್ರೀಯ ಮಟ್ಟದ ಮೇಕಿಂಗ್ ಮತ್ತು ಯಶ್ ಅವರ ಬೃಹತ್ ಅಭಿಮಾನಿ ಬಳಗ ‘ಟಾಕ್ಸಿಕ್’ಗೆ ಬಲವಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಈವರೆಗಿನ ಯಾವ ಸಿನಿಮಾ ಕೂಡಾ ಈ ಮೇಕಿಂಗ್ ಮೀರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಇದೆ.

ಒಟ್ಟಾರೆ, ‘ಟಾಕ್ಸಿಕ್’ ಟ್ರೈಲರ್ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನವಾಗಿದ್ದು, ಮಾಸ್ ಮತ್ತು ಕ್ಲಾಸ್ ಎರಡನ್ನೂ ಸಮತೋಲನವಾಗಿ ಒಟ್ಟುಗೂಡಿಸಿರುವ ಸಿನಿಮಾ ಎಂಬ ಭರವಸೆಯನ್ನು ನೀಡುತ್ತದೆ. ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಪ್ರಯೋಗ, ಗೀತು ಮೋಹನ್‌ದಾಸ್ ಅವರ ಗಂಭೀರ ನಿರ್ದೇಶನ ಮತ್ತು ಅದ್ದೂರಿ ನಿರ್ಮಾಣ ಎಲ್ಲವೂ ಸೇರಿ ‘ಟಾಕ್ಸಿಕ್’ ಅನ್ನು 2026ರ ಬಹುನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿಸಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ತೆರೆ ಮೇಲೆ ಯಾವ ಮಟ್ಟದ ಪ್ರಭಾವ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶೃಂಗೇರಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಹೆಸರೇ ಇಲ್ಲ! ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸಂದೇಶವೇನು?
ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ಮೂರೂ ತಾಲ್ಲೂಕುಗಳನ್ನು ಒಳಗೊಂಡಂತಾ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾದ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರನ್ನು ಕೈಬಿಟ್ಟು ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ನೇರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಕಡೆಗೆ ಕಾರ್ಯಕರ್ತರು ಕಿಡಿಕಾರುವಂತಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಶೃಂಗೇರಿ ಕ್ಷೇತ್ರದ ಕಾರ್ಯಕರ್ತರ ಕಡೆಯಿಂದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದಿದೆ. ತನಗಾಗದ ಎಲ್ಲರನ್ನೂ ಡಾ.ಅಂಶುಮಂತ್ ಕಡೆಗಣಿಸುವ ರೀತಿ ಮತ್ತು ಕ್ಷೇತ್ರದಲ್ಲೇ ಜಿಲ್ಲಾಧ್ಯಕ್ಷರ ಬಗೆಗಿರುವ ಅಸಹನೆ ತೀವ್ರ ಮಟ್ಟದಲ್ಲಿ ಈಗ ಹೊರ ಬಿದ್ದಿದೆ. ಇದೇ ರೀತಿ ಮುಂದುವರೆದರೆ ಪಕ್ಷ ಕಟ್ಟಲು ಶ್ರಮಿಸಿರುವ ನೈಜ ಕಾರ್ಯಕರ್ತರೇ ಪಕ್ಷದಿಂದ ದೂರ ಉಳಿಯುವ ಕಾಲ ಹತ್ತಿರದಲ್ಲೇ ಇದೆ ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದಾರೆ.

2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿಂದೆ ಸುಧೀರ್ ಕುಮಾರ್ ಮುರೊಳ್ಳಿಯವರ ಶ್ರಮವೇ ಪ್ರಮುಖವಾಗಿ ನಿಲ್ಲುತ್ತದೆಯೇ ಹೊರತು ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಅಲ್ಲ ಎಂದು ಪೀಪಲ್ ಮೀಡಿಯಾ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ಇದೇ ಏಪ್ರಿಲ್ 23 ರಂದು ಕಾಂಗ್ರೆಸ್ ಪಕ್ಷದ ಕಡೆಯಿಂದ ಆಯೋಜಿಸಲಾದ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ಸ್ಥಳೀಯ ಪ್ರಭಾವಿ ಕಾಂಗ್ರೆಸ್ಸಿಗ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರು ಕೈ ಬಿಟ್ಟ ಹಿನ್ನೆಲೆಯಲ್ಲಿ ಈ ಆಕ್ರೋಶ ಭುಗಿಲೆದ್ದಿದೆ. ಈ ಹಿಂದೆಯೂ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಇದೇ ರೀತಿಯ ಅನೇಕ ಯಡವಟ್ಟುಗಳನ್ನು ಮಾಡಿಕೊಂಡು ಬಂದಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅನೇಕ ಸ್ಥಳೀಯ ನಾಯಕರು ಜಿಲ್ಲಾಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದಾರೆ.

ಡಾ. ಅಂಶುಮಂತ್ ನಡೆಯ ಇನ್ನೊಂದು ದೊಡ್ಡ ದುರಂತವೆಂದರೆ ಏಪ್ರಿಲ್ 23 ರಂದು ನಡೆಯಲಿರುವ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಈ ಹಿಂದೆ ಮಾಡಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರ ಭಾವಚಿತ್ರವೇ ಮರೆಯಾಗಿತ್ತು. ಇದು ಸ್ಪಷ್ಟವಾಗಿ ಕಣ್ತಪ್ಪಿನಿಂದ ಆದ ಪ್ರಮಾದ ಅಲ್ಲವೇ ಅಲ್ಲ ಎಂದು ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆಯೂ ಶಾಸಕ ರಾಜೇಗೌಡರ ಬಗ್ಗೆ ತೀವ್ರ ಅಸಮಾಧಾನ ಇದ್ದ ಹಿನ್ನೆಲೆಯಲ್ಲಿ ಶಾಸಕರು ಆಯೋಜಿಸಿದ್ದ ಬಹುತೇಕ ಕಾರ್ಯಕ್ರಮಕ್ಕೆ ಡಾ.ಅಂಶುಮಂತ್ ಗೈರು ಹಾಜರಾಗಿದ್ದರು. ಏಪ್ರಿಲ್ 23 ರ ಕಾರ್ಯಕ್ರಮಕ್ಕೂ ಇದೇ ರೀತಿಯ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶ ಹೊರಬಿದ್ದ ನಂತರ ಅಂಶುಮಂತ್ ಶೃಂಗೇರಿ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡರ ಹೆಸರು ಮತ್ತು ಭಾವಚಿತ್ರ ಹಾಕಿದ್ದಾರೆ.

ರಾಜ್ಯದ ಯಾವುದೇ ಮೂಲೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಪಕ್ಷದ ಚಿಂತನೆ ಮತ್ತು ವೈಚಾರಿಕ ನಿಲುವಿನ ಯಾವುದೆ ಕಾರ್ಯಕ್ರಮ ಇದ್ದರೆ ತನ್ನ ಸ್ವಂತ ಖರ್ಚಿನಲ್ಲಿ ಅಲ್ಲಿಗೆ ಹೋಗಿ ಭಾಷಣ ಮತ್ತು ವಿಷಯ ಮಂಡನೆ ಮಾಡಿ ಬರುವ ಸುಧೀರ್ ಕುಮಾರ್ ಮುರೋಳ್ಳಿ, ರಾಜ್ಯ ಕೆ.ಪಿ.ಸಿ.ಸಿ ಮಟ್ಟದಲ್ಲಿ ಗುರುತರ ಜವಾಬ್ಧಾರಿ ಹೊಂದಿರುವ ನಾಯಕರು. ಇಂತವರು ತನ್ನ ಸ್ವಂತ ಕ್ಷೇತ್ರದಲ್ಲೇ ಪಕ್ಷದ ಆಹ್ವಾನ ಪತ್ರಿಕೆಯಲ್ಲಿ ಅವರನ್ನು ಹೊರಗಿಟ್ಟದ್ದು ಸ್ಪಷ್ಟವಾಗಿ ಅವರ ಮೇಲಿನ ಅಸೂಯೆಯೇ ಕಾರಣ ಎಂಬ ಬಗ್ಗೆ ಕ್ಷೇತ್ರದಾದ್ಯಂತ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸುಧೀರ್ ಕುಮಾರ್ ಮುರೋಳ್ಳಿಯವರ ಬೆಂಬಲಿಸುವವರನ್ನೂ ಸಹ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಡಾ.ಅಂಶುಮಂತ್ ಅವರ ಮತ್ತೊಂದು ಯಡವಟ್ಟು ಎಂದರೆ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಅವಿಭಜಿತ ಉಡುಪಿ ಚಿಕ್ಕಮಗಳೂರು ಕ್ಷೇತ್ರದವರೇ ಆದರೂ ಅವರ ಹೆಸರನ್ನೂ ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪಕ್ಕದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ನಾಯಕ ಮಾಜಿ ಸಚಿವರು ಜೊತೆಗೆ ಚಿಕ್ಕಮಗಳೂರು ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿಯೂ ಆದ ಕಿಮ್ಮನೆ ರತ್ನಾಕರ್ ಅವರ ಹೆಸರನ್ನೂ ಜಿಲ್ಲಾಧ್ಯಕ್ಷರು ಕೈ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿನಯ್ ಕುಮಾರ್ ಸೊರಕೆ ಮತ್ತು ಕಿಮ್ಮನೆ ರತ್ನಾಕರ್ ಅವರು ಆಯೋಜಿಸಿದ್ದ ಈ ಹಿಂದಿನ ಹಲವು ಕಾರ್ಯಕ್ರಮಗಳಲ್ಲಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಗೈರಾಗಿದ್ದರು. ಕ್ಷುಲ್ಲಕ ಕಾರಣ ಕೊಟ್ಟು ದೂರ ಇದ್ದರು. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಈ ಎಲ್ಲಾ ನಾಯಕರು ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಆಪ್ತರಾಗಿದ್ದಾರೆ ಎಂಬುದು. ಇದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕ್ಷೇತ್ರದಾದ್ಯಂತ ವ್ಯಕ್ತವಾಗಿದೆ.

ಈ ಅವಧಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲೂ ಸಹ ಡಾ.ಅಂಶುಮಂತ್ ಮೂಗು ತೂರಿಸಿದ್ದು ಜಿಲ್ಲಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳ ಫಲಿತಾಂಶವನ್ನೂ ಜಿಲ್ಲಾಧ್ಯಕ್ಷರು ತಡೆ ಹಿಡಿದಿದ್ದರು. ಜಿಲ್ಲೆಯಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಸುಧೀರ್ ಕುಮಾರ್ ಮುರೊಳ್ಳಿಯವರ ಬೆಂಬಲಿಗರೇ ಆಗಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಫಲಿತಾಂಶ ಹೊರಬಿದ್ದರೂ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಶ್ರೀಜಿತ್ ಸೇರಿದಂತೆ ಎಲ್ಲರ ಫಲಿತಾಂಶ ಕೂಡ ತಡವಾಗಿ ಹೊರಬಿದ್ದಿತ್ತು. ಇದಕ್ಕೆ ನೇರ ಕಾರಣ ಡಾ.ಅಂಶುಮಂತ್ ಎಂಬುದು ಕ್ಷೇತ್ರದಾದ್ಯಂತ ಕೇಳಿ ಬಂದ ಆರೋಪವಾಗಿದೆ.

ಒಂದು ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳ ಎಂದರೆ ದೊಡ್ಡ ದಂಡೇ ಇತ್ತು. ಇದನ್ನು ತನ್ನ ಸಂಘಟನಾ ಚತುರತೆಯಲ್ಲಿ ಮಟ್ಟ ಹಾಕಿದ್ದು ಸುಧೀರ್ ಕುಮಾರ್ ಮುರೊಳ್ಳಿಯವರ ತಂತ್ರಗಾರಿಕೆ. ಇಂದಿಗೂ ಸಹ ಕ್ಷೇತ್ರದಲ್ಲಿ ಭಜರಂಗದಳ ಆಗಿನ ಕಾಲದಲ್ಲಿ ಮೆರೆದಂತೆ ಮೆರೆಯಲು ದೊಡ್ಡ ಅಡ್ಡಗಾಲಾಗಿರುವುದು ಸುಧೀರ್ ಕುಮಾರ್ ಮುರೊಳ್ಳಿಯವರು. ಹೀಗಿರುವಾಗ ಸುಧೀರ್ ಅವರನ್ನು ಪಕ್ಷದ ಕಾರ್ಯಕ್ರಮದಿಂದ ದೂರ ಇಟ್ಟಿರುವುದು ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ಎಂಬುದು ಕ್ಷೇತ್ರದ ಕಾರ್ಯಕರ್ತರ ದೊಡ್ಡ ಆರೋಪವಾಗಿದೆ.

ಕೆಲವೇ ದಿನಗಳ ಹಿಂದೆ ಬಿಜೆಪಿ ಮಾಜಿ ಶಾಸಕ ಡಿ‌.ಎನ್ ಜೀವರಾಜ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರನ್ನು ಹೊಗಳಿ ಮಾತಾಡಿದ್ದರು. ಇದು ಅವರ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಗೆ ಸ್ಪಷ್ಟ ಉದಾಹರಣೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಡಾ.ಅಂಶುಮಂತ್ ಪರೋಕ್ಷವಾಗಿ ಬಿಜೆಪಿ ಜೊತೆಗೂ ಕೈ ಜೋಡಿಸಿರಬಹುದೇ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ನ ಈ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಎಲ್ಲಾ ರೀತಿಯ ಅನುಕೂಲ ಆಗಲಿದ್ದು, ಡಾ.ಅಂಶುಮಂತ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆದು ಎಚ್ಚರಿಕೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಡಾ.ಅಂಶುಮಂತ್ ಕಾಂಗ್ರೆಸ್ಸನ್ನು ಸಂಪೂರ್ಣ ನಿರ್ಣಾಮ ಮಾಡಿಯೇ ನಿರ್ಮಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಿಂದ ಕೇಳಿ ಬರುತ್ತಿದೆ.

ಗ್ಯಾರಂಟಿ ಯೋಜನೆಗಳ ಕಾಪಿ ಪೇಸ್ಟ್, ಬಿಜೆಪಿಯವರದು ಡಬಲ್ ಸ್ಟ್ಯಾಂಡರ್ಡ್ ಬುದ್ದಿ: ಸಚಿವ ಪ್ರಿಯಾಂಕ್ ಖರ್ಗೆ
ಗೋಸುಂಬೆ ಗುಣದ ಬಿಜೆಪಿಯವರ ಡಬಲ್ ಸ್ಟ್ಯಾಂಡರ್ಡ್ ಬುದ್ದಿ ಹಲವು ಬಾರಿ ಸಾಬೀತಾಗಿದೆ. ಈಗ ಮತ್ತೊಂದು ನಿದರ್ಶನ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳನ್ನು “ದಿವಾಳಿಯ ರೇವಡಿ“ ಎಂದು ಲೇವಡಿ ಮಾಡಿದ್ದರು. ನಂತರ ತಾವೇ ”ಮೋದಿ ಕಿ ಗ್ಯಾರಂಟಿ“ ಎನ್ನುತ್ತಾ ಗ್ಯಾರಂಟಿ ಪದವನ್ನು ಕದ್ದರು ಎಂದು ಬಿಜೆಪಿ ಗ್ಯಾರಂಟಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು, ಝಾರ್ಖಂಡ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿಯವರು ಈಗ ಅದೇ ಗ್ಯಾರಂಟಿ ಮಾದರಿಯನ್ನು ಅನುಸರಿಸಿದ್ದನ್ನು ಹಿಪಾಕ್ರಸಿ ಎನ್ನಬೇಕೋ, ನಿರ್ಲಜ್ಜತನ ಎನ್ನಬೇಕೋ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಯಥಾವತ್ ನಕಲು ಮಾಡಿ ಝಾರ್ಖಂಡ್ ಚುನಾವಣೆಯ ಪ್ರಣಾಳಿಕೆ ತಯಾರಿಸಿರುವ ಬಿಜೆಪಿಯ ಈ ನಡೆಯ ಬಗ್ಗೆ ಪ್ರಹ್ಲಾದ್ ಜೋಷಿ ಅವರ ಪ್ರತಿಕ್ರಿಯೆ ಏನು? ಗ್ಯಾರಂಟಿಗಳನ್ನು ನಕಲು ಮಾಡಿರುವ ಬಗ್ಗೆ ನಾಯಕರ ಪ್ರತಿಕ್ರಿಯೆ ಕೇಳುವ ಕುತೂಹಲ ಹೆಚ್ಚಿದೆ ನನ್ನಲ್ಲಿ ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳ ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು : ಸಿ.ಎಂ
ಇನ್ಮೇಲೆ ಪ್ರತಿ ತಿಂಗಳ ಕೊನೆಗೆ ನಾನೇ one to one ಪ್ರಗತಿ ಪರಿಶೀಲನೆ ನಡೆಸ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸ್ತೀನಿ: ಜಂಟಿ ಆಯುಕ್ತರುಗಳಿಗೆ ಸಿ.ಎಂ ಸ್ಪಷ್ಟ ಎಚ್ಚರಿಕೆ

ಇನ್ಮೇಲೆ ಪ್ರತಿ ತಿಂಗಳ ಕೊನೆಗೆ ನಾನೇ one to one ಪ್ರಗತಿ ಪರಿಶೀಲನೆ ನಡೆಸ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿ ಆಯುಕ್ತರುಗಳಿಗೆ ಸಿ.ಎಂ ಸ್ಪಷ್ಟ ಸೂಚನೆ ನೀಡಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ವೇಳೆ ಈ ಸೂಚನೆ ನೀಡಿದರು.‌

2024-25 ನೇ ಸಾಲಿನಲ್ಲಿ ಒಟ್ಟು ಗುರಿ ರೂ. 1,10,000 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.
ಅಕ್ಟೋಬರ್‌ ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್‌ಟಿ ರೂ. 44,783 ಕೋಟಿ, ಕೆಎಸ್‌ಟಿ ರೂ. 13,193 ಕೋಟಿ, ವೃತ್ತಿ ತೆರಿಗೆ ರೂ. 797 ಕೋಟಿ ಸೇರಿದೆ ಎಂದರು.

ಅಕ್ಟೋಬರ್‌ ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿರುತ್ತದೆ.

ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10200ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್‌ ಒಳಗಾಗಿ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಗುರಿಯನ್ನು ಸಾಧಿಸಬೇಕಿದೆ ಎಂದರು.

ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿಯನ್ನು ಸಾಧಿಸದ ಅಧಿಕಾರಿಗಳನ್ನು ಹೊಣೆಗಾರ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇ ಬಾರದು.

ಕರ ಸಮಾಧಾನ ಯೋಜನೆ ಅಡಿ ರೂ. 2ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಣೆಯ ನಿರೀಕ್ಷೆಯಿದೆ ಎಂದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಎ.ಶಿಖಾ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಬಕಾರಿ ಇಲಾಖೆ ತೆರಿಗೆ ಸಂಗ್ರಹ ಪರಿಶೀಲನೆ

• 2024-25 ನೇ ಸಾಲಿನಲ್ಲಿ ಒಟ್ಟು ಗುರಿ ರೂ. 38525 ಕೋಟಿ ಅಬಕಾರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಅಕ್ಟೋಬರ್‌ 28ರವರೆಗೆ ರೂ. 20237 ಕೋಟಿ ಸಂಗ್ರಹವಾಗಿದೆ.

• ಇದುವರೆಗೆ ಶೇ.52.53 ಗುರಿ ಸಾಧನೆ ಮಾಡಲಾಗಿದ್ದು, ಮಾರ್ಚ್‌ ಒಳಗಾಗಿ ನಿಗದಿತ ಗುರಿಯನ್ನು ಸಾಧಿಸಲು ಕ್ರಮ ಕೈಗೊಳ್ಳಬೇಕು.

• ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ 1301.15ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದೆ.

• ಗೋವಾದಿಂದ ಅಕ್ರಮ ಮದ್ಯ ಸಾಗಾಟವನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

• ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.

ಅಶ್ಲೀಲ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಅಪಾಯಕಾರಿ ಮಾಧ್ಯಮಗಳು
ಎರಡು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣನ ಹೇಳಿಕೆಯ ವಿಡಿಯೋ ಬಂದ ಜಾಡನ್ನು ಹುಡುಕುವಾಗ ಹುಟ್ಟಿದ ಅನೇಕ ಪ್ರಶ್ನೆಗಳ ಹಿಂದೆ ನ್ಯೂಸ್ ರೂಂಗಳು ಇಂತಹ ಒಂದು ಗಂಭೀರ ಪ್ರಕರಣದ ದಾರಿ ತಪ್ಪಿಸುತ್ತಿರುವ ಸ್ಪಷ್ಟತೆ ಹೊರಬಿದ್ದಿದೆ. ಅಷ್ಟಕ್ಕೂ ಎಲ್ಲಿಯೂ ಸಿಗದ ವಿಡಿಯೋ ಮತ್ತು ಆಡಿಯೋಗಳನ್ನು ಚಾನಲ್ ವರೆಗೂ ತಲುಪಿಸಿದ್ದು ಯಾರು? ಗೊತ್ತಾ? Exclusive ಮಾಹಿತಿ.. ತಪ್ಪದೇ ಓದಿ

ಪ್ರಜ್ವಲ್ ರೇವಣ್ಣ ಎಂಬ ವಿಕೃತ ಮನಸ್ಸಿನ ಸ್ತ್ರೀ ಪೀಡಕನ ಬಂಧನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅಧಿಕಾರ, ಅಂತಸ್ತು, ಕುಟುಂಬದ ಹಿನ್ನೆಲೆಯ ಅಹಮ್ಮಿಕೆಯಡಿಯಲ್ಲಿ ಅಸಂಖ್ಯಾತ ಹೆಣ್ಣು ಮಕ್ಕಳನ್ನು ವಿಡಿಯೋ ಮೂಲಕ ಮಾನಹರಣ ಮಾಡಿದ ಫ್ಯೂಡಲ್ ಮನಸ್ಥಿತಿಯ, ಗೌಡಿಕೆಯ ಸೊಕ್ಕಿನ ಮೂಟೆ, ಹೊರ ಪ್ರಪಂಚಕ್ಕೆ ತನ್ನ ಬೆತ್ತಲು ಹೊರ ಬಿದ್ದ ತಕ್ಷಣವೇ ದೇಶ ಬಿಟ್ಟು ಓಡಿ ಹೋಗಿ ಇಡೀ ದೇಶ, ರಾಜ್ಯ, ಹಾಸನ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದು ಇನ್ನು ಶತಮಾನಗಳು ಉರುಳಿದರೂ ಇಲ್ಲಿನ ಜನ ಮರೆಯಲಾರರು.

ನಾಗರೀಕರು ಮಾತನಾಡಲೂ ಮುಜುಗರಕ್ಕೆ ಬೀಳುವ ಇಂತಹ ಅನಿಷ್ಠ ಕಾರ್ಯ ಯಾರೂ ಸಹ ಊಹಿಸಿರಲಾರರು. ಏನೋ ಹನಿಟ್ರಾಪ್ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ಬಂದು ಹೋದರೂ ಅದು ಕೆಲವು ತಿಂಗಳಲ್ಲಿ ಜನರ ಬಾಯಿಂದ ಮರೆಯಾಗಿ ಹೋಗುವಂತದ್ದು. ಅದು ಜಸ್ಟ್ ಹನಿಟ್ರಾಪ್ ಅಷ್ಟೆ. ಆದರೆ ಪಕ್ಷದ ಮಹಿಳಾ ಮುಖಂಡರು, ಮಹಿಳಾ ಕಾರ್ಯಕರ್ತರು, ಸರ್ಕಾರಿ ಮಹಿಳಾ ಅಧಿಕಾರಿಗಳು, ಕಷ್ಟ ಹೇಳಿಕೊಂಡು ಬಂದ ಜನಸಾಮಾನ್ಯ ಹೆಣ್ಣು ಮಕ್ಕಳು, ಕೊನೆ ಕೊನೆಗೆ ಕೈ ಮುಗಿದು ಬೇಡಿಕೊಂಡ ಮನೆ ಕೆಲಸದಾಕೆಯನ್ನೂ ಬಿಡದೇ ಪೀಡಿಸಿದ, ತನ್ನ ಲೈಂಗಿಕ ತೃಷೆಗೆ ವಿಡಿಯೋ ಮೂಲಕ ಬೆತ್ತಲಾಗಿಸಿದ್ದು ಸೆಲ್ಫ್ ಟ್ರಾಪ್ ಅಲ್ಲದೇ ಬೇರಿನ್ನೇನು?

ಇಂತಹದ್ದೊಂದು ಅತಿ ದೊಡ್ಡ ದೌರ್ಜನ್ಯದ ಕರ್ಮಕಾಂಡ ಹೊರ ಬಿದ್ದರೂ ಒಬ್ಬ ನೈಜ ಅಪರಾಧಿಯನ್ನ, ಫ್ಯೂಡಲ್ ಕುಟುಂಬವನ್ನು ಹೊರ ಪ್ರಪಂಚಕ್ಕೆ ಅಮಾಯಕರಂತೆ, ಇವರೇ ನೈಜ ಸಂತ್ರಸ್ತರಂತೆ ತೋರಿಸುತ್ತಿರುವುದರಲ್ಲಿ ನಾಡಿನ ಅಪಾಯಕಾರಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಪ್ರಜ್ವಲ್ ರೇವಣ್ಣನ ವಿಕೃತಿಯ ಬಗ್ಗೆ ಇಡೀ ಕುಟುಂಬಕ್ಕೇ ಗೊತ್ತಿದ್ದರೂ ಅದನ್ನು ಕಿಂಚಿತ್ ವಿರೋಧಿಸದೇ ಪೋಷಿಸಿಕೊಂಡು ಬಂದ ಕುಟುಂಬವೊಂದು ಮುಂದೆ ಇಂತಹದ್ದೊಂದು ಅನಾಹುತ ಘಟಿಸಬಹುದೆಂದು ಊಹಿಸಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಗೊತ್ತಿದ್ದೂ ಆದ ತಪ್ಪಿಗೆ ಕುಟುಂಬವೂ ಹೊಣೆ ಆಗಬೇಕು. ಹೀಗಿರುವಾಗ ಮಾಧ್ಯಮಗಳು ಮಾತ್ರ ಬಹು ದೊಡ್ಡ ಗೇಮ್ ಪ್ಲಾನ್ ನ್ನು ಇಲ್ಲಿ ನಡೆಸುತ್ತಿವೆ ಎಂಬುದು ಸ್ಪಷ್ಟ.

ಕಳೆದೆರಡು ದಿನಗಳ ಹಿಂದೆ 30 ದಿನಗಳಿಂದ ತಲೆಮರೆಸಿಕೊಂಡಿದ್ದ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನ ವಿಡಿಯೋ ಒಂದು ಮಾಧ್ಯಮಗಳ ಮೂಲಕ ಹೊರ ಬಿದ್ದಿತ್ತು. ಇದನ್ನು ಮೊಟ್ಟ ಮೊದಲು “ಬ್ರೇಕ್” ಮಾಡಿದ್ದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಒಡೆತನದ ಏಷಿಯಾನೆಟ್ ಸುವರ್ಣ ನ್ಯೂಸ್. ಸತತ 40 ನಿಮಿಷಗಳ ಕಾಲ ಈ ವಿಡಿಯೋ ಇಟ್ಟು ಬ್ರೇಕಿಂಗ್ ಹೊಡೆದ ನಂತರ, ಮೀಡಿಯಾ ಗ್ರೂಪ್ ಗಳಲ್ಲಿ ಈ ವಿಡಿಯೋ ಓಡಾಡಿ ಉಳಿದೆಲ್ಲಾ ಚಾನಲ್ ಗಳ ಕೈ ಸೇರಿದೆ. ಆ ನಲವತ್ತು ನಿಮಿಷಗಳ ಕಾಲ ಎಲ್ಲಾ ಚಾನಲ್ ಗಳ ನ್ಯೂಸ್ ರೂಂ ಗಳು ಇರೋ ಬರೋ ಸೋಷಿಯಲ್ ಮೀಡಿಯಾವನ್ನು ತಡಕಾಡಿದ್ದೇ ಬಂತು.

ಆದರೆ ಮೊಟ್ಟ ಮೊದಲು ಸುವರ್ಣ ನ್ಯೂಸ್ ಗೆ ಈ ವಿಡಿಯೋ ಕ್ಲಿಪ್ಸ್ ತಲುಪಿಸಿದ ಮಹಾನುಭಾವ ಯಾರು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಪ್ರಕರಣದ ತನಿಖೆ ವಹಿಸಿಕೊಂಡಿರುವ ಎಸ್‌ಐಟಿ ಕೂಡ ವಿಡಿಯೋ ಮೂಲದ ಜಾಲ ಜಾಲಾಡಲು ಪ್ರಯತ್ನಿಸಿದರೂ ಸುವರ್ಣ ನ್ಯೂಸ್ ತನ್ನ ಸೋರ್ಸ್ ಬಿಟ್ಟು ಕೊಡದಿರುವುದು ಮೊಟ್ಟ ಮೊದಲು ಮಾಧ್ಯಮಗಳು ಈ ಪ್ರಕರಣವನ್ನು ಸಂಪೂರ್ಣ ಹಿಡಿತಕ್ಕೆ ತಡೆದುಕೊಳ್ಳುವ ಹಂತಕ್ಕೆ ಬಂದದ್ದು ಸ್ಪಷ್ಟವಾಗಿದೆ.

ಈಗಾಗಲೇ ಎಸ್ಐಟಿ ಇದರ ಜಾಡನ್ನು ಬೆನ್ನತ್ತಿದರೂ ಸುವರ್ಣ ನ್ಯೂಸ್ ನಮ್ಮ ಸೋರ್ಸ್ ಬಿಟ್ಟು ಕೊಡುವುದಿಲ್ಲ ಎಂದು ಎಸ್‌ಐಟಿ ಗೆ ನೇರವಾಗಿ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಈಗ ಸುವರ್ಣ ನ್ಯೂಸ್ ಗೆ ನೋಟೀಸ್ ಜಾರಿ ಮಾಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಇದು ಒಂದು ಅಂಶವಾದರೆ ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎಂದು ಗುರುತಿಸಿದ ಮಹಿಳೆಯೊಬ್ಬರು ವಿಡಿಯೋ ಮುಂದೆ ಮಾತನಾಡಿದ್ದು ವೈರಲ್ ಆಗಿತ್ತು. ಮಾಧ್ಯಮಗಳನ್ನು ಹೊರತುಪಡಿಸಿ ಸಂತ್ರಸ್ತೆ ಮಾತನಾಡಿದ ವಿಡಿಯೋ ಆಕೆಯ ಮುಖ ಕೂಡ ಬ್ಲರ್ ಮಾಡದೇ ವಾಟ್ಸಪ್ ಮೂಲಕ ಓಡಾಡಿತ್ತು. ಮಾಧ್ಯಮಗಳೇನೋ ಮುಖ ಬ್ಲರ್ ಮಾಡಿ ವಿಡಿಯೋ ಹಾಕಿದ್ದಾರೆ. ಆಕೆಯೂ ಅದೇನೇ ಮಾತನಾಡಿರಬಹುದು, ಅದಿಲ್ಲಿ ಅಸಂಬದ್ಧ. ಆದರೆ ಆ ವಿಡಿಯೋ ನ್ಯೂಸ್ ಚಾನಲ್ ವರೆಗೂ ತಲುಪಿಸಿದ ಸೋರ್ಸ್ ಯಾವುದು?

ಸಂತ್ರಸ್ತೆ ಮಾತನಾಡಿದ ವಿಡಿಯೋ ಮೊದಲು ಓಡಾಡಿದ್ದು ಕನ್ನಡದ ‘ವಿಸ್ತಾರ’ ಸುದ್ದಿ ವಾಹಿನಿಯಲ್ಲಿ. ಅಲ್ಲೂ ಸಹ ಈ ವಿಡಿಯೋ ತಲುಪಿಸಿದ ಮೂಲ ಕೆದಕಿದಾಗ ಎಸ್‌ಐಟಿಗೆ ಸಿಕ್ಕ ಮಾಹಿತಿ ಕೇವಲ ಶೂನ್ಯ. ಅಂದ್ರೆ ಎಸ್ಐಟಿಗೂ ಸಿಗದ ಮಾಹಿತಿಗಳು ನ್ಯೂಸ್ ರೂಂ ಗಳನ್ನು ತಲುಪುತ್ತಿರುವ ಬಗೆ ಹೇಗೆ.? ಎಸ್ಐಟಿ ಕೂಡ ಇದರ ಮೂಲ ಜಾಡನ್ನು ಹುಡುಕುವ ಬಗೆಯಲ್ಲಿ ತಲೆ ಕೆಡಿಸಿಕೊಂಡಿದೆ. ಯಾರ ಮೂಲಕ ಈ ವಿಡಿಯೋ ತಲುಪಿದೆ, ವಾಟ್ಸಪ್ ಮೂಲಕವೋ? ವಾಟ್ಸಪ್ ಮೂಲ ಎಂಬುದನ್ನು ತನಿಖೆಗೆ ಬಿಟ್ಟರೆ ಪ್ರಕರಣದ ಅಸಲಿ ಕಿಂಗ್ ಪಿನ್ ಹೊರ ಬರುತ್ತಾನೆ. ಆದರೆ ಮಾಧ್ಯಮಗಳು ತನಿಖಾ ತಂಡಕ್ಕೆ ಸಹಕರಿಸುತ್ತಿಲ್ಲ ಎಂಬುದು ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿದೆ.

ಇಷ್ಟೆಲ್ಲ ಹೇಳಿದ ಮೇಲೆ ಈ ಪ್ರಕರಣದಲ್ಲಿ ಬಹು ದೊಡ್ಡ ಪಾತ್ರವಾಗಿ ಮುಂಚಿನಿಂದಲೂ ತೋರಿಸಿಕೊಂಡು ಬಂದ ‘ಪವರ್ ಟಿವಿ’ ಕೂಡ ಹಲವು ಮಾಹಿತಿಗಳನ್ನು ಗೌಪ್ಯವಾಗಿಯೇ ಮುನ್ನಡೆಸಿಕೊಂಡು ಬಂದಿದೆ. ಪ್ರಕರಣದ ಶುರುವಿನಿಂದಲೂ ಅನೇಕ ಮಾಹಿತಿಗಳನ್ನು ‘ಬ್ರೇಕ್’ ಮಾಡಿದ ‘ಪವರ್ ಟಿವಿ’ಗೆ ಸಿಕ್ಕ ಹಲವಷ್ಟು ಮಾಹಿತಿಗಳ ಬಗ್ಗೆ ಇನ್ನೂ ಸಹ ಎಸ್‌ಐಟಿ ಮುಂದೆ ಬಾಯಿ ಬಿಟ್ಟಿಲ್ಲ. ಅದು ವಕೀಲ ದೇವರಾಜೇ ಗೌಡನ ಅಶ್ಲೀಲ ವಿಡಿಯೋ ಫೋನ್ ಟ್ರಾಪ್ ವಿಚಾರ ಆಗಿರಬಹುದು, ಪ್ರಜ್ವಲ್ ರೇವಣ್ಣನ ಬಗೆಗಿನ ಪ್ರಮುಖ ‘ಬ್ರೇಕಿಂಗ್’ ಗಳ ಬಗ್ಗೆಯಾಗಿರಬಹುದು. ಈವರೆಗೂ ಸುದ್ದಿ ಮಾಧ್ಯಮಗಳು ತಮಗೆ ಸಿಕ್ಕ ಮಾಹಿತಿಯ ಬಗ್ಗೆ ಎಸ್ಐಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ಕಾರಣಕ್ಕೆ ಈಗ ಎಸ್‌ಐಟಿ ಅಧಿಕಾರಿಗಳು ಪವರ್ ಟಿವಿ, ಸುವರ್ಣ ನ್ಯೂಸ್ ಮತ್ತು ವಿಸ್ತಾರ ನ್ಯೂಸ್ ಗೆ ಪ್ರಮುಖ ಸಾಕ್ಷ್ಯಗಳಾಗಿ ನೋಟೀಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಬೇರೆಲ್ಲಾ ಸಾಕ್ಷ್ಯಗಳಿಗಿಂತ ಅತಿ ದೊಡ್ಡ ದೊಡ್ಡ ಸಾಕ್ಷ್ಯಗಳನ್ನು ಇಟ್ಟುಕೊಂಡಿರುವ ಮಾಧ್ಯಮಗಳೇ ತನಿಖೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವುದಾದರೆ ತನಿಖೆ ಒಂದು ತಾರ್ಕಿಕ ಅಂತ್ಯ ತಲುಪುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಈ ನಡುವೆ ಮಾಧ್ಯಮಗಳು ಮತ್ತು ಜೆಡಿಎಸ್ ಪಕ್ಷ ಎರಡೂ ಸೇರಿಕೊಂಡು, ಆರೋಪಿ ಕುಟುಂಬವೊಂದನ್ನು, ಸಂತ್ರಸ್ತ ಕುಟುಂಬವಾಗಿ, ಸರ್ಕಾರವನ್ನೇ ಅಪರಾಧಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಹೀಗಾದರೆ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎನ್ನಲಾದೀತೇ?

ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇನ್ನಿಲ್ಲದಂತೆ ಗೇಮ್ ಪ್ಲಾನ್ ರೂಪಿಸಿದಂತಿದೆ. ದಿನಕ್ಕೊಂದರಂತೆ ಸರಣಿ ಪತ್ರಿಕಾಗೋಷ್ಠಿ ನಡೆಸಿ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ. ಒಂದು ಪ್ರಭಾವಿ ಕುಟುಂಬದ ಮಗನಾಗಿ, ಮಾಜಿ ಪ್ರಧಾನಿ, ಮಾಜಿ ಸಿಎಂ, ಹಾಲಿ ಶಾಸಕರು, ಹಾಲಿ ಪರಿಷತ್ ಸದಸ್ಯರಿರುವ ಕುಟುಂಬ ಹಿನ್ನೆಲೆಯ ವ್ಯಕ್ತಿ 30 ದಿನಗಳ ಕಾಲ ತನ್ನ ಕುಟುಂಬದ ಸಂಪರ್ಕವೇ ಇಲ್ಲದಿರಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಎಸ್‌ಐಟಿ ತನಿಖೆಗೆ ಒಡ್ಡಿಕೊಳ್ಳಲಿಲ್ಲವೋ ಅಥವಾ ಆ ಒಂದು ಕುಟುಂಬ ಅಥವಾ ಕಾಣದ ಕೈಗಳು ತನಿಖಾ ತಂಡ ಎಸ್‌ಐಟಿಯನ್ನು ನಿಯಂತ್ರಿಸುತ್ತಿವೆಯೋ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.

ಇನ್ನೊಂದು ಕಡೆ ಯಾರಿಗೂ ಸಿಗದ ಮಹತ್ವದ ದಾಖಲೆಗಳು ಮಾಧ್ಯಮಗಳ ಕೈ ಸೇರುವ ಮೂಲ ಯಾವುದು.? ಎಲ್ಲಿಂದ ಈ ವಿಡಿಯೋಗಳು ಹೊರಬರುತ್ತಿವೆ? ಸಿಕ್ಕ ದಾಖಲೆಗಳ್ಯಾವವೂ ನಿರ್ಲಕ್ಷಿಸುವಂತದ್ದು ಅಲ್ಲವೇ ಅಲ್ಲ. ಎಲ್ಲೋ ಜರ್ಮನಿಯ ಮೂಲೆಯಲ್ಲಿ ಕೂತ ಪ್ರಜ್ವಲ್ ರೇವಣ್ಣ ಮಾಡಿ ಕಳಿಸಿದ ವಿಡಿಯೋ, ಸಂತ್ರಸ್ತೆಯೊಬ್ಬಳು ಅಪರಾಧಿ ಕುಟುಂಬವೊಂದನ್ನು ಅಮಾಯಕರು ಎಂದು ಹೇಳುವ ವಿಡಿಯೋ ಮಾಡಿಸಿದವರು, ತಲುಪಿಸಿದವರ ಜಾಡು ಹಿಡಿದರೆ ನೂರಕ್ಕೆ ನೂರರಷ್ಟು ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಹೇಳಬಹುದು. ಅಥವಾ ಎಸ್‌ಐಟಿ ಮೇಲೆ ನಂಬಿಕೆಯೂ ಮಾಡಬಹುದು.

ಬಹುತೇಕ ವಿಚಾರ ಗೊತ್ತಿರುವ ಮಾಧ್ಯಮಗಳೇ ಮುಂದೆ ಪ್ರಜ್ವಲ್ ರೇವಣ್ಣನಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ಅಮಾಯಕ, ಸಂತ್ರಸ್ತನನ್ನಾಗಿ ಬಿಂಬಿಸುವ ಕಾಲವೂ ದೂರವಿಲ್ಲ. ನಾಗರೀಕ ಸಮಾಜ ಮಾಧ್ಯಮಗಳಲ್ಲಿ ಬಂದದ್ದನ್ನೇ ಸತ್ಯ ಎಂದು ನೋಡದೇ, ಅವರನ್ನೇ ಸಾಕ್ಷ್ಯಗಳನ್ನಾಗಿ ನೋಡಬೇಕಿದೆ. ಈಗಾಗಲೇ ಎಸ್ಐಟಿ, ಮೇಲೆ ಉಲ್ಲೇಖಿಸಿದ ಮೂರೂ ಮಾಧ್ಯಮ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ. ಸಾಕ್ಷ್ಯ ಅಂದಮೇಲೆ ಅವರನ್ನು ಬಂಧಿಸುವಂತಿಲ್ಲ. ಆದರೆ ಸಾಕ್ಷ್ಯ ಇಟ್ಟುಕೊಂಡಿರುವ ಮಾಧ್ಯಮಗಳು ತನಿಖೆಗೆ ಸ್ಪಂದಿಸಬೇಕಷ್ಟೆ.

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ
ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ (ಜೆಡಿಎಸ್ ಪಕ್ಷ ಅಥವಾ ದೇವೇಗೌಡರ ಕುಟುಂಬ ಅನ್ನೋದು ಬಿಡಿಸಿ ಹೇಳಿಲ್ಲ) ರೇವಣ್ಣನ ಕುಟುಂಬಕ್ಕೂ ಸಂಬಂಧ ಇಲ್ಲ. ನಮ್ಮ ಕುಟುಂಬಕ್ಕೂ ಅವರನ ತಳುಕು ಹಾಕಬೇಡಿ. ಅವರು ಅವರದೇ ಸಂಸಾರ ಅಂತ ಬೇರೆ ಇದ್ದಾರೆ ಅಂತೆಲ್ಲಾ ಹೇಳಿ ತಿಪ್ಪೆ ಸಾರಿಸೋಕೆ ನೋಡ್ತಿದ್ದಾರೆ. ಆದರೆ ರಕ್ತ ಸಂಬಂಧ ಅನ್ನೋದನ್ನ ಈ ಜನ್ಮ ಇರೋ ವರೆಗೂ ಅಳಿಸೋಕೆ ಸಾಧ್ಯವೇ ಕುಮಾರಣ್ಣಾ?

ಇರಲಿ. ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿಯವರೆಗೂ ಕೇವಲ ಪ್ರಜ್ವಲ್ ರೇವಣ್ಣನ ಹೆಸರು ಮಾತ್ರ ಓಡಾಡಿತ್ತು. ಫೋಟೋ ವಿಡಿಯೋ ಸಾಕ್ಷಿಗಳು ಜಗಜ್ಜಾಹೀರಾದ್ವು. ಸ್ವಪಕ್ಷದವರೇ ಛೀ ತೂ ಅಂದ್ರು. ಆದರೆ ವಿಷಯ ಗುಲ್ಲಾಗಿ, ಸಂತ್ರಸ್ತರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತಿದ್ದಂತೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಅಣ್ಣ ರೇವಣ್ಣನ ಹೆಸರೂ ಓಡಾಡ್ತಿದೆ. ದೌರ್ಜನ್ಯ ಪ್ರಕರಣವೊಂದರಲ್ಲಿ ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಕೂಡ  A1 ಆರೋಪಿ. ಇಲ್ಲಿ ಪ್ರಜ್ವಲ್ ಹಾಗೂ ರೇವಣ್ಣ ಇಬ್ಬರ ಮೇಲೂ ಆರೋಪ ಸಾಭೀತಾಗಿಲ್ಲ.. ಹೀಗಿರುವಾಗ ರೇವಣ್ಣನನ್ನು ಜೆಡಿಎಸ್ ಪಕ್ಷ ಉಚ್ಛಾಟಿಸೋದು ಯಾವಾಗ ಕುಮಾರಣ್ಣ?

ಇದು ಪಕ್ಷದ ಆಂತರಿಕ ವಿಚಾರ. ಹೇಳಬೇಕಾದ ಪ್ರಮುಖ ವಿಚಾರ ಏನೆಂದರೆ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಅಸಂಖ್ಯಾತ ವಿಡಿಯೋಗಳು ಇವೆ ಎಂದು ಮೊದಲು ಬಾಯ್ಬಿಟ್ಟದ್ದೇ ಹಾಸನದ ಬಿಜೆಪಿ ನಾಯಕರು. ಈ ಬಗ್ಗೆ ಅಲ್ಲಲ್ಲಿ ಗುಸುಗುಸು ಹರಿದಾಡುವಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹಾಸನದ ಬಿಜೆಪಿ ನಾಯಕ ದೇವರಾಜೇ ಗೌಡ ಒಂದು ಪ್ರೆಸ್ ಮೀಟ್ ಮಾಡುವ ಮೂಲಕ ಎಲ್ಲಾ ಹೊರಹಾಕಿದ್ರು. ಅಲ್ಲಿಂದ ಪ್ರಜ್ವಲ್ ರೇವಣ್ಣನ ಕಾಮಕಾಂಡವೊಂದು ಇದೆ ಅಂತ ಎಲ್ಲರ ಬಾಯಲ್ಲೂ ಓಡಾಡೋಕೆ ಶುರು ಆಯ್ತು. ವಿಶೇಷ ಎಂದರೆ ಈ ಇಷ್ಟೂ ಹಂತದಲ್ಲೂ ಕಾಂಗ್ರೆಸ್ ಎಲ್ಲೂ ಸಹ ತನ್ನ ಪಾತ್ರ ತೋರಿಸಿಲ್ಲ ಎಂಬುದು ಗಮನಾರ್ಹ.

ದೇವರಾಜೇ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಜನರ ಗಮನ ಸೆಳೆಧಿದ್ದರು. ಜೆಡಿಎಸ್ ಭದ್ರಕೋಟೆಯಂತಿದ್ದ ಹೊಳೆನರಸೀಪುರದಲ್ಲೂ ಹೆಚ್.ಡಿ.ರೇವಣ್ಣ ಸ್ವಲ್ಪ ಯಾಮಾರಿದ್ದರೂ ತನ್ನ ಕ್ಷೇತ್ರ ಕಳೆದುಕೊಳ್ಳುವ ಮಟ್ಟಕ್ಕೆ ಜೆಡಿಎಸ್ ತನ್ನ ಮತ ಕಳೆದುಕೊಂಡಿತ್ತು. ಇದಕ್ಕೆ ಪ್ರತ್ಯಕ್ಷ ಕಾರಣ ಇದೇ ಅಶ್ಲೀಲ ಪೆನ್ ಡ್ರೈವ್ ಹಗರಣವೇ ಆದರೂ ಇಲ್ಲೂ ಸಹ ತನ್ನ ಪಾತ್ರ ವಹಿಸಿದ್ದು ಬಿಜೆಪಿ ಎಂಬುದು ಮರೆಯುವಂತಿಲ್ಲ.

ಲೋಕಸಭಾ ಚುನಾವಣೆ ಹಂತದಲ್ಲೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಹಾಸನ ಬಿಜೆಪಿ ನಾಯಕರೇ ಮೈತ್ರಿ ವಿರುದ್ಧ ದೊಡ್ಡ ಮಟ್ಟದ ಅಪಸ್ವರ ಎತ್ತಿದ್ದರು. ಯಾವ ಕಾರಣಕ್ಕೂ ಈ ಮೈತ್ರಿ ಒಪ್ಪುವುದಿಲ್ಲ ಎಂದೇ ತಮ್ಮ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಲೇ ಬಂದಿದ್ದರು. ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಸಹ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದಾದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳಿವೆ, ಆ ವ್ಯಕ್ತಿಯನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮುಂದೆ ಬಿಜೆಪಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ ಎಂದು ಪತ್ರ ಮತ್ತು ಇ ಮೇಲ್ ಮೂಲಕವೂ ಎಚ್ಚರಿಸಿದ್ದು ಮರೆಯುವಂತಿಲ್ಲ.

ಸರಿ. ಪೆನ್ ಡ್ರೈವ್ ಅಂತೂ ರಿಲೀಸ್ ಆಯ್ತು. ಆಗ ಬಿಜೆಪಿ ಮುಖಂಡ ದೇವರಾಜೇ ಗೌಡ ಪೆನ್ ಡ್ರೈವ್ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಪೆನ್ ಡ್ರೈವ್ ನನಗೆ ಸಿಗುವುದಕ್ಕಿಂತ ಮೊದಲೇ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೆ ತಲುಪಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಹೇಗಿದ್ದರೂ ಬಿಜೆಪಿ ಜೆಡಿಎಸ್ ಮೈತ್ರಿ ಇದೆ. ಕುಮಾರಣ್ಣ ಹೋದಲ್ಲಿ ಬಂದದ್ದೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ತಿದ್ದಾರೆ. ಹೀಗಿರುವಾಗ ಪೆನ್ ಡ್ರೈವ್ ರಿಲೀಸ್ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಯೋಜಿಸಿದ್ದರು. ಆದರೆ ಮೊದಲು ಪೆನ್ ಡ್ರೈವ್ ನೀಡಿದ್ದೇ ದೇವರಾಜೇ ಗೌಡರಿಗೆ, ನಾನು ಡಿಕೆಶಿ ಮತ್ತು ಡಿಕೆ ಸುರೇಶ್ ಭೇಟಿ ಮಾಡಿದ್ದು ನಿಜ, ಆದರೆ ಅವರಿಗೆ ನಾನು ಪೆನ್ ಡ್ರೈವ್ ಕೊಟ್ಟೇ ಇಲ್ಲ ಎಂದು ಎಂದು ಪ್ರಜ್ವಲ್ ರೇವಣ್ಣ ಕಾರ್ ಡ್ರೈವರ್ ಹೇಳಿಕೆ ಕೊಟ್ಟು, ಅದನ್ನು ಎಸ್ಐಟಿ ಗೂ ಹೇಳಿರುವುದಾಗಿ ಕೇಳಿ ಬಂದಿದೆ.

ಹೀಗೇ ಅಶ್ಲೀಲ ಪೆನ್ ಡ್ರೈವ್ ಹಗರಣದಲ್ಲಿ ಮುಂಚಿನಿಂದಲೂ ನೇರವಾಗಿ ಬಿಜೆಪಿಯೇ ಕೈವಾಡ ಮೆರೆದಿದ್ದರೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಕುಮಾರಸ್ವಾಮಿ ಈ ವರೆಗೆ ಹೆಚ್ಚಿನ ಪಾತ್ರ ಇರುವ ಬಿಜೆಪಿ ವಿರುದ್ದವಾಗಿ  ಒಂದೂ ಹೇಳಿಕೆ ಕೊಟ್ಟಿಲ್ಲ. ಇದಕ್ಕೆ ಅಸಲಿ ಕಾರಣ ನೋಡ್ತಾ ಹೋದರೆ ಸಿಗೋದು, ಕುಮಾರಸ್ವಾಮಿಗೆ ಬಿಜೆಪಿ ಮೇಲಿರುವ ಭಯ ಎದ್ದು ಕಾಣುತ್ತಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಸುಮ್ಮನೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಒಂದೆರಡು ಸೀಟು ಪಡೆಯಲು ಮೋಸ ಇರಲಿಲ್ಲ. ಆದರೆ ತಾವಾಗೇ ಬಿಜೆಪಿಗೆ ಜುಟ್ಟು ಕೊಡುವ ಮೂಲಕ ದೊಡ್ಡ ಪೀಕಲಾಟ ಎದುರಿಸುವಂತಾಗಿದೆ. ಕುಮಾರಸ್ವಾಮಿಗೆ ಚುನಾವಣೆ ಫಲಿತಾಂಶ ಬರುವ ಮೋದಲೇ ಈಗ ಬಿಜೆಪಿ ಸಹವಾಸ ಬೇಡ ಎನ್ನಿಸಿದ್ದರೂ ಬಿಜೆಪಿ ವಿರುದ್ಧವಾಗಿ ಉಸಿರೆತ್ತದ ಉಸಿರುಗಟ್ಟಿಸುವ ವಾತಾವರಣದಿಂದ ಅನಿವಾರ್ಯವಾಗಿ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ತಿದ್ದಾರೆ. ಕುಮಾರಸ್ವಾಮಿಯವರು ಪ್ರತೀ ಬಾರಿ ಮಾಧ್ಯಮಗಳ ಪ್ರಶ್ನೆ ಎದುರಿಸುವಾಗಲೂ ಹತಾಶೆ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ  ಪೆನ್ ಡ್ರೈವ್ ಕಾಮಕಾಂಡಕ್ಕೆ ಮಂಡ್ಯದಲ್ಲೂ ತಮ್ಮ ಗೆಲುವು ಅನುಮಾನ ಎಂಬಂತಾಗಿದೆ.

ನೇರವಾಗಿ  ಬಿಜೆಪಿ ನಾಯಕರಿಗೆ ಬೈದರೆ ಎಲ್ಲಿ ತಮ್ಮ ಅಸ್ತಿತ್ವ ಅಲುಗಾಡುತ್ತೋ ಎಂಬ ಭಯ ಕುಮಾರಸ್ವಾಮಿಯವರಲ್ಲಿ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ಹಗರಣದ ಒಂದೇ ಒಂದು ಕಾರಣಕ್ಕೆ ಕುಮಾರಸ್ವಾಮಿಯಂತಹ ಮನುಷ್ಯ ಹೋದಲ್ಲಿ ಬಂದಲ್ಲಿ ತಲೆ ತಗ್ಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಗೆ ಬಿಜೆಪಿ ಸಹವಾಸವೇ ಬೇಡದಿತ್ತು. ಆದರೆ ಗೊತ್ತಿದ್ದೂ ಬಿಜೆಪಿಗೆ ತನ್ನ ಜುಟ್ಟು ಕೊಡುವ ಮೂಲಕ ದಶಕಗಳಿಂದ ಕೇವಲ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಬಿಜೆಪಿ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಇನ್ನೆಂದೂ ತಲೆ ಎತ್ತದ ಸ್ಥಿತಿಗೆ ಜೆಡಿಎಸ್ ಬಂದು ನಿಂತದ್ದು, ಬಹುಶಃ ಜೆಡಿಎಸ್ ನ ಅಂತ್ಯಕ್ಕೆ ಬಿಜೆಪಿ ಪಕ್ಷವೇ ಕೊನೆ ಮೊಳೆ ಹೊಡೆಯಲು ಸಿದ್ಧವಾಗಿದೆ. ಈ ಸತ್ಯ ಜೆಡಿಎಸ್ ನಾಯಕರಿಗೆ ಗೊತ್ತಿದ್ದರೂ ಪ್ರತಿರೋಧಿಸುವಂತಿಲ್ಲ.

Breaking News : ಮೆಟ್ರೋ ಹಳಿಗೆ ಜಿಗಿದು ಪ್ರಾಣ ಕಳೆದುಕೊಂಡ ವ್ಯಕ್ತಿ.
ಜಾಲಹಳ್ಳಿ ಮೆಟ್ರೋ ಸ್ಟೇಷನ್ನಿನಲ್ಲಿ ಇಂದು ಸಂಜೆ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಂಜೆ ಸರಿಸುಮಾರು ಏಳು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದ್ದು ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಮೆಟ್ರೊ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ್ದು, ನಾಗಸಂದ್ರ ನಿಲ್ದಾಣದಿಂದ ಯಶವಂತಪುರ ವರೆಗೂ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಒಂದು ಗಂಟೆ ಸಮಯದ ನಂತರ ಮೆಟ್ರೋ ಪುನಃ ಪ್ರಾರಂಭವಾಗಿತ್ತು. ಮೆಟ್ರೋ ಹಳಿಯ ಮೇಲೆ ಹಾರಿದ ವ್ಯಕ್ತಿಯನ್ನ ಜಾಲಹಳ್ಳಿ ಸ್ಟೇಷನ್ನಿನ ಸಿಬ್ಬಂದಿ ತಕ್ಷಣಕ್ಕೆ ಆಸ್ಪತ್ರೆ ರವಾನಿಸುವ ಕೆಲಸ ಮಾಡಿದರೂ ಸಹಾ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ವಿದ್ಯುತ್‌ ಘರ್ಷಣೆಯಿಂದಾಗಿ ಈ ಸಾವು ಸಂಭವಿಸಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿರುತ್ತದೆ.

ಸ್ಥಳಕ್ಕೆ ಆಗಮಿಸಿದ ಪೋಲೀಸರು ಸ್ಥಳದ ಮಹಜರು ಮಾಡಿದ್ದು ತನಿಖೆಯನ್ನ ಆರಂಭಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಪೊಲೀಸರ ತನಿಖೆಯ ನಂತರವಷ್ಟೆ ವ್ಯಕ್ತಿಯ ವಿವರ ಮತ್ತು ಘಟನೆಯ ವಿವರಗಳು ಲಭ್ಯವಾಗಲಿವೆ.

ಸರ್ಕಾರಿ ಶಾಲೆಗಳ ದುಸ್ಥಿತಿ ಜೆಸಿಬಿ ಪಕ್ಷಗಳ ಕೊಡುಗೆ : KRS ಪಕ್ಷ
ದಿನಪತ್ರಿಕೆಯೊಂದರ ಮಾಹಿತಿ ಪ್ರಕಾರ ರಾಜ್ಯದಲ್ಲಿ 48,285 ಸರ್ಕಾರಿ ಶಾಲೆಗಳಿದ್ದು, ಅದರಲ್ಲಿ 17,258 ಕೊಠಡಿಗಳ ಕೊರತೆ ಇದೆ. ಏಳು ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲಾ ಕೊಠಡಿಗಳ ಅಗತ್ಯವಿದೆ. ಸರ್ಕಾರಿ ಶಾಲೆಯ ಮಕ್ಕಳು, ಬೇಸಿಗೆಯಲ್ಲಿ ಬೇಯುತ್ತಾ, ಮಳೆಗಾಲದಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನಡುಗುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ದುಸ್ಥಿತಿಗೆ ನೇರವಾಗಿ ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿದ ಜೆಸಿಬಿ ಪಕ್ಷಗಳೇ (ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ) ಕಾರಣ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಂಭೀರವಾಗಿ ಆರೋಪಿಸಿದೆ.

ಶಾಲಾ ಕೊಠಡಿಗಳ ಕೊರತೆಯಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು, ಬೇಸಿಗೆಯಲ್ಲಿ ಬೇಯುತ್ತಾ, ಮಳೆಗಾಲದಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನಡುಗುತ್ತಾ ವಿದ್ಯಾಭ್ಯಾಸ ಮಾಡುತ್ತಿರುವುದು ಕನ್ನಡ ನಾಡು-ನುಡಿಯ ಕುರಿತು ಉದ್ದುದ್ದ ಭಾಷಣ ಮಾಡುವ ನಮ್ಮ ರಾಜಕಾರಣಿಗಳು, ಸಾಹಿತಿಗಳು, ಹೋರಾಟಗಾರರು ಸರ್ಕಾರಿ ಶಾಲೆಗಳ ಕುರಿತು ದಿವ್ಯ ನಿರ್ಲಕ್ಷ್ಯ ತಾಳಿರುವುದು ಎದ್ದು ಕಾಣುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್ ಜೀವನ್ ಆರೋಪಿಸಿದ್ದಾರೆ.

ನಾನು ಗ್ರಾಮ ಪಂಚಾಯಿತಿ ಸದಸ್ಯನಾದರೆ, ಅಧ್ಯಕ್ಷನಾದರೆ, ಶಾಸಕನಾದರೆ, ಸಚಿವನಾದರೆ ರಾಜ್ಯವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಪಡಿಸುತ್ತೇನೆ. ಹೀಗಾಗಿ ನನಗೆ ಓಟು ಹಾಕಿಯೆಂದು ಕೇಳುವ ಜೆಸಿಬಿ ಪಕ್ಷದ ರಾಜಕಾರಣಿಗಳಿಗೆ ತಮ್ಮದೇ ಊರುಗಳಲ್ಲಿರುವ ಸರ್ಕಾರಿ ಶಾಲೆಗಳತ್ತ ಮುಖ ಎತ್ತಿ ನೋಡುವುದಿಲ್ಲ.

ಹಾಗೆಯೇ ನಮ್ಮ ಸಾಹಿತಿಗಳು, ಬುದ್ಧಿಜೀವಿಗಳು ಅಧಿಕಾರ, ಅಂತಸ್ತು, ಪ್ರಶಸ್ತಿಗಳಿಗಾಗಿ ತಮ್ಮ ಇಡೀ ಸಾಹಿತ್ಯವನ್ನು ಮುಡಿಪಾಗಿಟ್ಟಂತೆ ಕಾಣುತ್ತದೆ. ಇಲ್ಲದಿದ್ದರೆ, ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಕಂಡೂ ಕಾಣದಂತೆ ಕುರುಡಾಗಿ ಇರುತ್ತಿರಲಿಲ್ಲ. ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಮಾಡುವ ನಮ್ಮ ಸಂಘಟನೆಗಳು, ನಾವು ವಿದ್ಯಾಭ್ಯಾಸ ಮಾಡಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ವಲ್ಪ ಕಾಳಜಿ ವಹಿಸಿ, ಅಂದೋಲನದ ರೀತಿಯಲ್ಲಿ ಜಾಗೃತಿ ಮೂಡಿಸಿದರೆ ಸರ್ಕಾರಿ ಶಾಲೆಗಳು ಸುಧಾರಣೆಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಹೀಗೆ ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ಪ್ರತಿಯೊಬ್ಬರ ನಿರ್ಲಕ್ಷ್ಯ, ಉದಾಸೀನತೆಯೇ ಕಾರಣವಾಗಿದೆ. ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ನವಂಬರ್ ತಿಂಗಳಿನಲ್ಲಿ ಕನ್ನಡ ಶಾಲೆಗಳ ವಾಸ್ತವ ಪರಿಸ್ಥಿತಿ ಅನಾವರಣ ಅಭಿಯಾನವನ್ನು ರಾಜ್ಯಾದ್ಯಂತ ಮಾಡಿ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ಡಿ ಡಿ ಪಿ ಐ ಹಾಗೂ ಬಿಇಓ ಗಳಿಗೆ ಶಾಲೆಗಳ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಕೊಟ್ಟಡಿಗಳು ಇಲ್ಲದೆ ಇರುವುದು, ಶಿಕ್ಷಕರ ಕೊರತೆ, ಶಾಲೆಗಳ ಶೌಚಾಲಯ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಮುಂತಾದವುಗಳ ಬಗ್ಗೆ ಗಂಭೀರವಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕು ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು KRS ಪಕ್ಷ ಸರ್ಕಾರವನ್ನು ಆಗ್ರಹಿಸಿದೆ.

“ಕರ್ನಾಟಕದಲ್ಲಿ ಬಿಜೆಪಿ ದಿವಾಳಿಯಾಗಿದೆ” : ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮೈಸೂರಿನ ಸರ್ಕಾರಿ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಇಸ್ರೋಗೆ ಭೇಟಿ ನೀಡಲು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಗೆ ಸ್ವಾಗತ ಮಾಡಲು ಆಗಮಿಸುವುದು ಬೇಡ ಎಂದು ಸೂಚಿಸಿದ್ದರು. ಆದ್ದರಿಂದ ನಾವು ಸ್ವಾಗತಕ್ಕೆ ತೆರಳಲಿಲ್ಲ ಎಂದರು.

ತಮ್ಮ ಪಕ್ಷದವರನ್ನೇ ಪ್ರಧಾನಿಗಳು ಬರಮಾಡಿಕೊಂಡಿಲ್ಲದ್ದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಕರ್ನಾಟಕದಲ್ಲಿ ದಿವಾಳಿಯಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷಕ್ಕೆ ಇಂಥ ಪರಿಸ್ಥಿತಿ ಎದುರಾಗಿರಲ್ಲಿಲ್ಲ ಎಂದರು.