Prasad Raxid – Peepal Media

ಆ ಹೊಣೆ ನಮ್ಮದೇ…
ಮನುಷ್ಯ ಕೇಂದ್ರಿತ ಅಭಿವೃದ್ಧಿ ಯೋಜನೆಗಳು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗುವ ಬದಲು ಅವುಗಳೇ ಸಮಸ್ಯೆಯಾಗುತ್ತಿವೆ. ಮಾನವ ಬೇರೆಲ್ಲ ಜೀವಿಗಳ ಜತೆಗಿರುವ ತನ್ನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಿದೆ. ಇವು ಐದು ತಿಂಗಳ ಕಾಲ ವಾರಕ್ಕೊಂದರಂತೆ ಮನುಷ್ಯ ಆನೆ ಮತ್ತು ಇತರ ಜೀವಿಗಳ ಸಹಬಾಳ್ವೆಯ ಕುರಿತು ಪ್ರಸಾದ್‌ ರಕ್ಷಿದಿಯವರು ಬರೆದ ಅಂಕಣದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅಂಶಗಳು. ಪ್ರಕೃತಿಗೆ ತನಗೆ ಬೇಡವಾದ್ದನ್ನು ನಿವಾರಿಸಿಕೊಳ್ಳುವ ಅಪಾರ ಶಕ್ತಿ ಇದೆ. ಅದು ಮನುಷ್ಯನೇ ಆಗದಿರಲು ನಾವೇ ಪ್ರಯತ್ನ ಪಡಬೇಕು. ರಕ್ಷಿದಿಯವರ ʼಕಾಡುಹೆಜ್ಜೆಯ ಜಾಡು ಹಿಡಿದು ಅಂಕಣದʼ ಕೊನೆಯ ಕಂತು ಇದು.

ಇಷ್ಟೆಲ್ಲ ವಿಚಾರಗಳನ್ನು ಚರ್ಚಿಸದ ನಂತರವೂ ನಾವೇನು ಮಾಡಬೇಕು, ಮತ್ತು ಮಾಡಬಹುದು ಎನ್ನುವ ಪ್ರಶ್ನೆ ಹಾಗೇ ಉಳಿದಿದೆ. ಇದಕ್ಕೆ ಉತ್ತರವನ್ನು ಮನುಷ್ಯನೇ ಹುಡುಕಬೇಕು. ಯಾಕೆಂದರೆ ಪ್ರಕೃತಿಯ ಸಹಜ ಪ್ರಕ್ರಿಯೆಗಳಲ್ಲಿ ಬದಲಾವಣೆಯನ್ನು ತರುವ ಶಕ್ತಿ ಇರುವುದು ಮನುಷ್ಯನಿಗೆ ಮಾತ್ರ. ಅದೂ ಕೂಡಾ ಪ್ರಕೃತಿಯೇ ಅವನಿಗೆ ಕೊಟ್ಟಿದೆ. ಜೊತೆಗೆ ಅಪಾರವಾದ ಸಾಧ್ಯತೆಗಳ  ಮಿದುಳನ್ನೂ ನೀಡಿದೆ. ಆದರೆ ಮನುಷ್ಯ ಜೀವಿ ಈಗ ಹಿಡಿದಿರುವುದು ಖಂಡಿತವಾಗಿಯೂ ವಿನಾಶದ ಹಾದಿ. ನಮ್ಮ ಹಾದಿಯನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಈ ಎಚ್ಚರ ಮಾತ್ರ ನಮ್ಮನ್ನು ಕಾಪಾಡಬಲ್ಲದೇನೋ.

ಯಾಕೆಂದರೆ ಭೂಮಿಯ ಮೇಲಿನ ಹಲವಾರು ಜೀವ ಪ್ರಬೇಧಗಳು ಮರೆಯಾಗಿ ಹೋಗಿವೆ. ಜೀವ ಸಂಕುಲವನ್ನು ಕೃತಕವಾಗಿ ಉಳಿಸಿಕೊಂಡು “ಸಹಬಾಳ್ವೆ” ನಡೆಸುತ್ತೇವೆ ಎನ್ನುವುದು ಪುಸ್ತಕದ ಬದನೆಕಾಯಿ ಆಗುತ್ತಿದೆ ಎನ್ನುವುದು ಪದೇ ಪದೇ ನಮ್ಮ ಅನುಭವಕ್ಕೆ ಬರುತ್ತಿದೆ. ವಿದೇಶದಿಂದ ತಂದ ಚಿರತೆಗಳು ನಮ್ಮಲ್ಲಿ ಒಂದೊಂದಾಗಿ ಸಾಯುತ್ತಿರುವುದು ಇತ್ತೀಚಿನ ಉದಾಹರಣೆ. ಇದೆಲ್ಲವೂ ನಮಗೆ ಪಾಠವಾಗಬೇಕು.

ಪರಿಸರ ಪ್ರಜ್ಞೆ ನಮ್ಮ ಧರ್ಮವಾಗಬೇಕು, ಜನಾಂದೋಲನವಾಗಬೇಕು. ಇದು ಮನೆಯಿಂದ ಪ್ರಾರಂಭವಾಗಿ  ಶಾಲೆ ಕಾಲೇಜುಗಳ ವರೆಗೆ ನಿರಂತರ ಕಲಿಕೆಯ ವಿಷಯವಾಗಿರಬೇಕು.  ಪ್ರತಿ ಪಂಚಾಯತ್ ಗಳ ಮಟ್ಟದಲ್ಲಿ ಪರಿಸರ ರಕ್ಷಣೆಗಾಗಿಯೇ ಕಾರ್ಯ ಪಡೆ ಇರಬೇಕು. ಇದರ ಜೊತೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಈಗ ಆಗಿರುವ ಅಭಿವೃದ್ಧಿ ಅನಾಹುತಗಳು ಸಾಕು. ಅಂತಹ ಎಲ್ಲ ಯೋಜನೆಗಳನ್ನು ನಿಲ್ಲಿಸಬೇಕು. ಪಕ್ಕದ ಪ್ರದೇಶಗಳಲ್ಲಿ ಪಾರಂಪರಿಕವಾಗಿ ನಡೆಯುತ್ತಿದ್ದ ಕೃಷಿ ಇದ್ದರೆ ಮಾತ್ರ ಅವುಗಳಿಗೆ ಅನುಮತಿ ನೀಡಿ, ಬೇರೆ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ಅಲ್ಲಿಂದ ಹೊರ ಬರುತ್ತೇವೆ ಎನ್ನುವ ಕೃಷಿಕರಿಗೆ ಉತ್ತೇಜನ ನೀಡಿ ಸ್ಥಳಾಂತರಿಸಬೇಕು. ಯಾಕೆಂದರೆ ಶತಮಾನಗಳಿಂದಲೂ ಜನರು ಅರಣ್ಯಗಳಲ್ಲಿ ಸಂಘರ್ಷವಿಲ್ಲದೆ ವಾಸವಿದ್ದರು. ಆದರೆ ಆ ಜನರೂ ಬದಲಾಗಿದ್ದಾರೆ. ಅವರಲ್ಲಿಯೂ ಆಧುನಿಕತೆಯ ಎಲ್ಲ ದುಷ್ಪ್ರವೃತ್ತಿಗಳು ಸಾಕಷ್ಟು ಸೇರಿಕೊಂಡಿವೆ. ಇಲ್ಲಿ ಯಾವುದೇ ಭಾವನಾತ್ಮಕತೆಯನ್ನು ಬದಿಗಿಟ್ಟು ಸಾಧ್ಯತೆಗಳ ಬಗೆಗೆ ಪ್ರಾಕ್ಟಿಕಲ್ ಆಗಿ ಯೋಚಿಸಿ, ಯೋಜನೆಗಳನ್ನು ರೂಪಿಸಬೇಕು.

ಹೀಗೆ ಮಾಡುವಾಗಲೂ ಮತ್ತೆ ಇನ್ನೊಂದು ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅದು ಮತ್ತೆ ನಮ್ಮ ರಾಜಕೀಯ ವಲಯದಿಂದಲೇ. ಕೃಷಿಕರೋ ಆದಿವಾಸಿಗಳೋ ಮುಂತಾದವರನ್ನು ತೆರವುಗೊಳಿಸಿದ ಭೂಮಿಯನ್ನು ಸರ್ಕಾರಗಳು ಯಾವುದೋ ಕೆಲವು ಉದ್ಯಮಿಗಳ ಮಡಿಲಿಗೆ ಹಾಕುವ ಅಪಾಯದ ಬಗ್ಗೆಯೂ ನಾವು ಎಚ್ಚರವಾಗಿರಬೇಕು. ಈಗಾಗಲೇ ಅಂತವು ಸಾಕಷ್ಟು ನಡೆದಿವೆ. ಪರಿಸರ ಮತ್ತು ಪ್ರಾಣಿಗಳು ನಮ್ಮ ಜೀವ ಸಂಕುಲದ ಅವಿಭಾಜ್ಯ ಅಂಗಗಳು. ಇವುಗಳಲ್ಲಿ ಯಾವುದು ಊನವಾದರೂ ಅದರ ನೇರ ಪರಿಣಾಮ ಮನುಷ್ಯನ ಮೇಲೆ ಆಗಿಯೇ ಆಗುತ್ತದೆ, ಮತ್ತು ಆಗಿದೆ ಕೂಡಾ.

ಮತ್ತೆ ಮತ್ತೆ ನಾವು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ- ಪ್ರಕೃತಿಗೆ ತನಗೆ ಬೇಡವಾದ್ದನ್ನು ನಿವಾರಿಸಿಕೊಳ್ಳುವ ಅಪಾರ ಶಕ್ತಿ ಇದೆ ಎನ್ನುವುದು. ಅದು ಮನುಷ್ಯನೇ ಆಗದಿರಲು ನಾವೇ ಪ್ರಯತ್ನ ಪಡಬೇಕು. ಆ ಹೊಣೆ ಭೂಮಿಯ ಮೇಲಿನ ಬೇರಾವ ಜೀವಿಯದ್ದೂ ಅಲ್ಲ… ನಮ್ಮದೇ.

(ಇಲ್ಲಿಗೆ ʼಕಾಡುಹೆಜ್ಜೆಯ ಜಾಡು ಹಿಡಿದುʼ ಅಂಕಣ ಮುಗಿಯಿತು)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

ಇದನ್ನೂ ಓದಿ-http://ಮಾನವ ಪ್ರಾಣಿ ಸಂಘರ್ಷ | ಸಮಸ್ಯೆಗಳಿಂದ ಸಮಸ್ಯೆಗಳತ್ತ …https://peepalmedia.com/from-problems-to-problems/

ಮಾನವ ಪ್ರಾಣಿ ಸಂಘರ್ಷ | ಸಮಸ್ಯೆಗಳಿಂದ ಸಮಸ್ಯೆಗಳತ್ತ …
ಆನೆಗಳಿಗೆ ವಿದ್ಯುತ್ ಬೇಲಿಯನ್ನು ನಿಷ್ಕ್ರಿಯ ಗೊಳಿಸುವ ವಿಧಾನ ತಿಳಿದಿದೆ. ವಿದ್ಯುತ್ ಬೇಲಿಯ ಮೇಲೆ ಪಕ್ಕದಲ್ಲಿರುವ ಸಣ್ಣ ಮರವೊಂದನ್ನು ತಳ್ಳಿ ಬೇಲಿ ದಾಟಿ ಬರುವ ಜ್ಞಾನ ಅದಕ್ಕಿದೆ. ಪಕ್ಕದಲ್ಲಿ ಮರ ಸಿಗದಿದ್ದಾಗ ಬೇರೆ ಕಡೆಯಿಂದ ಟೊಂಗೆಯೊಂದನ್ನು ತಂದು ಬೇಲಿಯ ಮೇಲೆಸೆದು ಬೇಲಿಯನ್ನು ನಿಷ್ಕ್ರಿಯಗೊಳಿಸಿ ಬರುವ ಆನೆಗಳಿವೆ !! – ಪ್ರಸಾದ್‌ ರಕ್ಷಿದಿ

ಈಗ ಸರ್ಕಾರಗಳು ಏನು ಮಾಡುತ್ತಿವೆ?  ಸರ್ಕಾರ ನಡೆಸುವವವರಲ್ಲಿ ಹೆಚ್ಚಿನವರಿಗೆ ಪರಿಸರದ ಬಗ್ಗೆ  ಜ್ಞಾನ ಮತ್ತು ಅಧ್ಯಯನದ ಕೊರತೆ ಇದೆ.  ನಮ್ಮಲ್ಲಿ ಯಾವುದೇ ಆಡಳಿತಾತ್ಮಕ ನಿರ್ಧಾರಗಳು ತಜ್ಞರ ಸಲಹೆ ಮತ್ತು ಮಾರ್ಗದರ್ಶನದ ಬದಲಿಗೆ ಆಳುವವರ ಅಂದರೆ ಇಂದಿನ ಸಂದರ್ಭದಲ್ಲಿ ಬೃಹತ್ ಉದ್ಯಮಿಗಳ ಅನುಕೂಲಕ್ಕೆ ತಕ್ಕಂತೆ ಇರುತ್ತವೆ. ಅದಕ್ಕೆ ಬೇಕಾದಂತೆ “ತಜ್ಞರ ವರದಿ” ಯನ್ನು ಸೃಷ್ಟಿಸುವ ಕೆಲಸ ನಡೆಯುತ್ತದೆ.  ದೇಶದ  ಆಗು ಹೋಗುಗಳನ್ನು ನಿರ್ಧರಿಸುವ ರಾಜಕೀಯ ಪಕ್ಷಗಳು ಕೂಡಾ ಇಂತಹ ವಿಚಾರಗಳಲ್ಲಿ  ಉದ್ಯಮಿಗಳ ಎ. ಟೀಮ್, ಬಿ ಟೀಮ್ ಗಳಾಗಿ ವರ್ತಿಸುತ್ತಾರೆ.  ನಾಡಿನಲ್ಲಿ ಜಾರಿಗೆ ಬಂದ ನೂರಾರು “ಅಭಿವೃದ್ಧಿ” ಯೋಜನೆಗಳೇ ಇದಕ್ಕೆ ಉದಾಹರಣೆ.

ಅಧಿಕಾರಶಾಹಿ ಕೂಡಾ ಇವರನ್ನೇ ಹಿಂಬಾಲಿಸುತ್ತಿದೆ. ಹೀಗಿದ್ದಾಗ  ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗಲಿ, ಅಥವಾ ಪರಿಸರಕ್ಕೆ ಸಂಬಂಧಿಸಿದಂತೆ ಏನೇ ಅನಾಹುತಗಳಾಗಲೀ, ಜನರ ಸಿಟ್ಟು ತಣಿಯುವಂತಹ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಪ್ರಾಣಿಗಳಿಂದ  ಸಾವು ನೋವು ಸಂಭವಿಸಿದರೆ ತಕ್ಷಣ ಒಂದಷ್ಟು ಪರಿಹಾರ ನೀಡುವುದು, ನಿರಂತರವಾಗಿ ಆನೆಗಳ ಸ್ಥಳಾಂತರದ ಮತ್ತು ಶಾಶ್ವತ ಪರಿಹಾರ ಕಂಡು ಹಿಡಿಯುವ ಮಾತು ಆಡುತ್ತಲೇ ಇರುವುದು. ಇಂತವನ್ನು ಮಾಡುತ್ತಲೇ ಇರುತ್ತಾರೆ.

ಈಗ ಆನೆಗಳಿಂದ ಹಾನಿಯಾಗುತ್ತಿರುವ ಪ್ರದೇಶದಲ್ಲಿ ಅರಣ್ಯ  ಇಲಾಖೆಯಲ್ಲಿ ಒಂದು ಕಾರ್ಯ ಪಡೆ ರಚಿಸಿದ್ದಾರೆ, ಹಾಗೆಯೇ ಆನೆಗಳ ಸಂಚಾರ ಮತ್ತು ಉಪಟಳ ಇರುವ ಪ್ರದೇಶದಲ್ಲಿ  ಸಾಮಾಜಿಕ ಜಾಲಗಳಲ್ಲಿ ಮಾಹಿತಿ ನೀಡುವ ಗುಂಪುಗಳನ್ನು ರಚಿಸಲಾಗಿದೆ, ಆನೆಗಳನ್ನು ಗುಂಪುಗಳಾಗಿ ವಿಂಗಡಿಸಿ ಅವುಗಳಿಗೆ ರೇಡಿಯೋ ಕಾಲರ್ ಅಳವಡಿಸಿ ನಿರಂತರವಾಗಿ ಆನೆಗಳ ಚಲನವಲನಗಳ ಮಾಹಿತಿಯನ್ನು ಜನರಿಗೆ ನೀಡಲಾಗುತ್ತಿದೆ. ಜೊತೆಗೆ ಜನರೂ ಈ ಗುಂಪುಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಖಂಡಿತ ಸಾಕಷ್ಟು ಅನುಕೂಲ ಆಗಿದೆ. ಹೇಗೆಂದರೆ ಆನೆಗಳಿಂದ ಆಗುತ್ತಿದ್ದ ಜೀವಹಾನಿಯ ಸಂದರ್ಭಗಳು ಕಡಿಮೆಯಾಗಿವೆ. ಆದರೆ ಬೆಳೆ ನಾಶ ಮತ್ತಿತರ ಉಪಟಳಗಳು? ಅವು ಹಾಗೇ ಮುಂದುವರಿದಿವೆ. ಮತ್ತು ಇನ್ನು ಕೆಲವು ಕ್ರಮಗಳಿಂದ ಆನೆಗಳು ಇನ್ನಷ್ಟು ತೊಂದರೆಗೊಳಗಾಗಿ ರೊಚ್ಚಿಗೆದ್ದಿವೆ.

ಅವುಗಳಲ್ಲಿ ಮೊದಲನೆಯದು, ಆನೆಗಳ ಇರವು ತಿಳಿಯುವುದರಿಂದ ಅಲ್ಲಿನ ಜನರು ಅವುಗಳನ್ನು ಹೇಗಾದರೂ ಮಾಡಿ ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಾರೆ, ಇದರಲ್ಲಿ ಬೆಂಕಿ ಹಚ್ಚುವುದೂ ಪಠಾಕಿ ಹೊಡೆಯುವುದೂ ಮುಂತಾದವು ಸೇರಿವೆ. ಇದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಯೂ ಸಹಕರಿಸುತ್ತಾರೆ.  ಜೊತೆಯಲ್ಲಿ ಆನೆಗಳು ಆಹಾರ ಹುಡುಕಿ ಬರುವುದರಿಂದ ಆನೆಗಳ ಆಹಾರ ಸಿಗದಂತೆ ಮಾಡಲು, ಬೈನೆ,  ಬಿದಿರು, ಬಾಳೆ, ಹಲಸಿನ ಕಾಯಿ ಮುಂತಾದವನ್ನು  ಜನರು ನಾಶ  ಮಾಡುತ್ತಿದ್ದಾರೆ, ಹೀಗೆ ಆಡುವಂತೆ ಅಲ್ಲಲ್ಲಿ ಬೋರ್ಡುಗಳನ್ನು ಕೂಡಾ ಹಾಕಲಾಗಿದೆ !! ಮೊದಲೇ ಆಹಾರವಿಲ್ಲದೆ ಕಂಗೆಟ್ಟಿರುವ ಆನೆಗಳು ಇನ್ನಷ್ಟು ಕಂಗಾಲಾಗಿ ಜನ ವಸತಿ ಪ್ರದೇಶಗಳಿಗೆ ನುಗ್ಗಿ ಆಹಾರವನ್ನು ಹುಡುಕುವುದೂ ಅಕ್ಕಿ, ಭತ್ತದ ಮೂಟೆಗಳನ್ನು ಎಳೆದು ತಿನ್ನುವುದೂ ನಡೆಯುತ್ತಿದೆ.

ಆನೆಗಳ ಗುಂಪುಗಳಿದ್ದಲ್ಲಿ ಅನೇಕ ದಿನಗಳ ಕಾಲ ಕೃಷಿ ಕೆಲಸ ಅಸಾಧ್ಯವಾಗುತ್ತದೆ. ಖಾಯಂ ಕೆಲಸಗಾರರಿರುವ ತೋಟಗಳಲ್ಲಿ ಈ ರೀತಿ ನೂರಾರು ಮಾನವ ದಿನಗಳ ನಷ್ಟವಾಗುತ್ತಿದೆ. ಅಲ್ಲದೆ ಅನಿವಾರ್ಯವಾಗಿ ಕೆಲಸಗಾರರನ್ನು ಸಾಕುವ ಜವಾಬ್ದಾರಿ ಕೃಷಿಕನ ಮೇಲೇ ಬೀಳುತ್ತದೆ. ಹೀಗಾಗಿ ಅನೇಕ ಕಡೆಗಳಲ್ಲಿ ಖಾಯಂ ಕೆಲಸಗಾರರನ್ನೇ ನೇಮಿಸಿಕೊಳ್ಳುತ್ತಿಲ್ಲ. ಅನೇಕ ಸಣ್ಣ ಸಣ್ಣ ಕೃಷಿಕರ ತೋಟಗಳು ಸಂಪೂರ್ಣ ನಾಶವಾಗಿವೆ.

ಕೆಳ ಹಂತದ ಅರಣ್ಯ ಇಲಾಖೆಯ ಸಿಬ್ಬಂದಿ ಪಾಡೂ ಇದಕ್ಕಿಂತ ಭಿನ್ನವಲ್ಲ. ಸಾರ್ವಜನಿಕರ ಸಿಟ್ಟಿಗೆ ನಿರಂತರ ಗುರಿಯಾಗುವವರೂ ಇವರೇ. ಹಗಲು ರಾತ್ರಿಯೆನ್ನದೆ ಇವರಿಗೆ ಫೋನ್ ಕರೆಗಳು ಬರುತ್ತವೆ, ಆನೆಗಳು ಇಂತಲ್ಲಿ ಬಂದಿವೆ ಬನ್ನಿ ಎಂದು ಜನರು ಕರೆಯುತ್ತಾರೆ, ಅಧಿಕಾರಿಗಳಿಗೆ ದೂರು ಕೊಡುತ್ತಾರೆ.  ಅವರಾದರೂ ತಮಗೆ ತೋಚಿದ್ದನ್ನು ಮಾಡುತ್ತಾರೆ. ಆನಂತರ ಸದ್ಯಕ್ಕೆ  ಆನೆಗಳನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಾರೆ.  ಸಮಸ್ಯೆ ಪಕ್ಕದ ಊರಿಗೆ ವರ್ಗಾವಣೆಯಾಗುತ್ತದೆ.

ಇತ್ತೀಚೆಗೆ ಸರ್ಕಾರ ಆನೆಗಳ ಹಾವಳಿ ತಡೆಯಲು ಕೃಷಿಕರಿಗೆ ಸೌರವಿದ್ಯುತ್ ಬೇಲಿ ಮಾಡಲು ಹೇಳುತ್ತಿದೆ.  ಹಲವಾರು ಕಡೆಗಳಲ್ಲಿ ಈಗಾಗಲೇ ಸೌರ ವಿದ್ಯುತ್ ಬೇಲಿ ನಿರ್ಮಾಣ ಆಗಿದೆ. ಬೀಡಾಡಿ ದನಗಳು ಮತ್ತು ಇತರ ಕೆಲವು ಪ್ರಾಣಿಗಳ ತಡೆಗೆ ಇವು ಬಹಳ ಪರಿಣಾಮಕಾರಿ. ಆದರೆ ಆನೆಗಳಿಗೆ ಈ ಬೇಲಿಯನ್ನು ನಿಷ್ಕ್ರಿಯ ಗೊಳಿಸುವ ವಿಧಾನ ತಿಳಿದಿದೆ. ವಿದ್ಯುತ್ ಬೇಲಿಯ ಮೇಲೆ ಪಕ್ಕದಲ್ಲಿರುವ ಸಣ್ಣ ಮರವೊಂದನ್ನು ತಳ್ಳಿ ಬೇಲಿ ದಾಟಿ ಬರುವ ಜ್ಞಾನ ಅದಕ್ಕಿದೆ. ಪಕ್ಕದಲ್ಲಿ ಮರ ಸಿಗದಿದ್ದಾಗ ಬೇರೆ ಕಡೆಯಿಂದ ಟೊಂಗೆಯೊಂದನ್ನು ತಂದು ಬೇಲಿಯ ಮೇಲೆಸೆದು ಬೇಲಿಯನ್ನು ನಿಷ್ಕ್ರಿಯಗೊಳಿಸಿ ಬರುವ ಆನೆಗಳಿವೆ !!

ಆದರೂ ಈ ವಿದ್ಯುತ್ ಬೇಲಿ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂದೇ ಹೇಳಬಹುದು. ಈ ಬೇಲಿ ಇರುವ ತೋಟಗಳಲ್ಲಿ  ಜನರು ಭಯವಿಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬೆಳೆ ನಾಶ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಆನೆ ಮತ್ತಿತರ ಪ್ರಾಣಿಗಳ ಸಂಚಾರದ ಪ್ರದೇಶ ಮತ್ತು ಆಹಾರ ಲಭ್ಯತೆ ಇನ್ನಷ್ಟು ಕಡಿಮೆಯಾಗಿದೆ. ಅವು ಹೊಸ ಹೊಸ ಜಾಗಗಳನ್ನು ಹುಡುಕುತ್ತ ಅಂಡಲೆಯುತ್ತವೆ.  ನಾವು ಸಮಸ್ಯೆಗಳಿಂದ ಸಮಸ್ಯೆಗಳತ್ತ ಸಾಗಿದ್ದೇವೆ.

ಪ್ರಸಾದ್‌ ರಕ್ಷಿದಿ

ಪರಿಸರ ಬರಹಗಾರರು

ಇದನ್ನೂ ಓದಿ-   ಮುಚ್ಚಿದ ಆನೆ ದಾರಿ | ದಿಕ್ಕೆಟ್ಟ ಆನೆಗಳು

ಮುಚ್ಚಿದ ಆನೆ ದಾರಿ | ದಿಕ್ಕೆಟ್ಟ ಆನೆಗಳು
ಮನುಷ್ಯನ ನಾನಾ ತರದ ಚಟುವಟಿಕೆಗಳಿಂದಾಗಿ ಆನೆಗಳ ವಾಸಸ್ಥಾನಗಳು ನಾಶವಾಗಿವೆ. ಆನೆದಾರಿಗಳು ಮುಚ್ಚಿವೆ ಇಲ್ಲವೇ ತುಂಡರಿಸಲ್ಪಟ್ಟಿವೆ. ಇದರಿಂದಾಗಿ ಆನೆಗಳು ದಿಕ್ಕೆಟ್ಟಿವೆ. ಸಾಲದೆಂಬಂತೆ ಅವುಗಳು ಇರುವ ಜಾಗದಲ್ಲೇ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಅವು  ಆಹಾರ  ಹುಡುಕುತ್ತ ಎಲ್ಲೆಂದರಲ್ಲಿ ಬರುತ್ತವೆ – ಪ್ರಸಾದ್‌ ರಕ್ಷಿದಿ

ಸಾವಿರಾರು ವರ್ಷಗಳಿಂದ ಪಶ್ಚಿಮ ಘಟ್ಟಗಳು ಆನೆಗಳ ವಾಸಸ್ಥಾನವೇ. ಅವು ಅಲ್ಲಲ್ಲಿ ತಮ್ಮ  ನೆಲೆಗಳನ್ನು ಮಾಡಿಕೊಂಡಿವೆ.  ಅವುಗಳು ಮನುಷ್ಯರು ಕಟ್ಟಿಕೊಂಡ ಸಣ್ಣ ಸಣ್ಣ ಸಣ್ಣ ಸಂಸ್ಥಾನಗಳಂತೆ. ಅಲ್ಲಿಂದ ಅವು ನಿಗದಿತ ಕಾಲದಲ್ಲಿ ತಮ್ಮ ಇನ್ನೊಂದು  ಆವಾಸಕ್ಕೆ ಹೋಗುತ್ತವೆ. ಅಲ್ಲಿ ಕೆಲವು ಕಾಲ ಇದ್ದು ತಮ್ಮ ಮೊದಲಿನ ನೆಲೆಗೆ ವಾಪಾಸಾಗುತ್ತವೆ. ಇದು ಒಂದು ನಿಗದಿತ ಅವಧಿಯಲ್ಲಿ ಪುನರಾವರ್ತನೆಯಾಗುತ್ತದೆ. ಅದು ಕೆಲವು ಕಡೆ ವರ್ಷಕ್ಕೊಮ್ಮೆ ಆಗಿರಬಹುದು ಅಥವಾ ವರ್ಷಕ್ಕೆ ಎರಡು ಬಾರಿ ಇರಬಹುದು. ಹೀಗೆ ಅವುಗಳು ತಮ್ಮ ನೆಲೆಯಿಂದ ಇನ್ನೊಂದು ನೆಲೆಗೆ ಸಂಚರಿಸುವ ಹಾದಿಯನ್ನು “ಆನೆದಾರಿ” (ಎಲಿಫೆಂಟ್ ಕಾರಿಡಾರ್) ಎನ್ನುತ್ತೇವೆ. ಆನೆಗಳ ನೆಲೆ ಸ್ವಲ್ಪ ವಿಸ್ತಾರವಾಗಿದ್ದಾಗಿರುತ್ತದೆ. ಒಂದು ಆನೆಗೆ ದಿನಕ್ಕೆ ಸುಮಾರು  ಇನ್ನೂರೈವತ್ತು ಕಿಲೋ ಆಹಾರ ಬೇಕು. ಅದಕ್ಕಾಗಿ ಅದು ಸುಮಾರು ಹದಿನೈದು ಕಿಲೋಮೀಟರ್ ಗಳಷ್ಟು ಸಂಚರಿಸುತ್ತದೆ. ಇದರಿಂದಾಗಿ ಒಂದೇ ಕಡೆ ಸಸ್ಯ ನಾಶವಾಗುವುದು ತಪ್ಪುತ್ತದೆ. ಅಲ್ಲದೆ ಆನೆಯನ್ನು ಹಿಂಬಾಲಿಸಿ ಆಹಾರ ಸಂಪಾದಿಸುವ ಅನೇಕ ಜೀವಿಗಳಿಗೂ ಆಹಾರ ದೊರೆಯುತ್ತದೆ. ಇದು ಪರಿಸರದಲ್ಲಿ ಅಂತರ್ಗತವಾಗಿರುವ ಸಹಜ ಸಮತೋಲನ ವ್ಯವಸ್ಥೆಯಾಗಿದೆ. ಆನೆ ತನ್ನ ಆವಾಸ ಸ್ಥಾನವನ್ನು ಯಾವ ಕಾರಣಕ್ಕೂ ಬಿಟ್ಟುಕೊಡದು. ಅದು ತನ್ನ ಗಡಿಗಳನ್ನು ಗುರುತಿಸಿಕೊಂಡಿರುತ್ತದೆ. ಒಂದು ವೇಳೆ ಮನುಷ್ಯ ನೆಲೆಯಲ್ಲಿ ಬಂದು ತನ್ನ ಇರುವಿಕೆಯನ್ನು ಸಾಧಿಸಿದರೂ ಅದು ತನ್ನ ನೆಲೆಯನ್ನು ಬಿಟ್ಟುಕೊಡದು. ಪಕ್ಕದಲ್ಲಿ ವಿಸ್ತಾರವಾದ ಬೇರೆ ಕಾಡು ಇದ್ದರೂ ಸಹ ಅದು ತನ್ನ ಮೂಲನೆಲೆಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ಆನೆಗಳ ವಿಶಿಷ್ಟ ಗುಣ. ಇದನ್ನು ಅರಿಯದೆ ನಾವು ಆನೆಗಳನ್ನು ಸ್ಥಳಾಂತರಿಸುವುದಾಗಲೀ, ಬೇರೆ ನೆಲೆಗಳನ್ನು ವ್ಯವಸ್ಥೆ ಮಾಡುವುದಾಗಲೀ ಮಾಡಿದರೆ ಅವು ಹೊಂದಿಕೊಳ್ಳವುದಿಲ್ಲ. ಈ ರೀತಿ ಮಾಡಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದಕ್ಕೆ ಶ್ರೀಲಂಕಾದಲ್ಲಿ ಆದ ದುರಂತ ನಮ್ಮ ಕಣ್ಣಮುಂದೆಯೇ ಇದೆ.

ಆನೆಗಳ ಮೆದುಳಿನ ಗಾತ್ರವೂ ಹಿರಿದಾದದ್ದು. ಅವುಗಳ ನೆನಪಿನ ಶಕ್ತಿಯೂ ಆಗಾಧವಾದುದು. ಇದು ಪೀಳಿಗೆ ಪೀಳಿಗೆಗೆ ಹರಿದು ಬರುತ್ತದೆ. ಆದ್ದರಿಂದಲೇ ಇವು ತುಂಬ ಭಾವನಾತ್ಮಕ ಜೀವಿಗಳೂ ಕೂಡಾ. ಮನುಷ್ಯನ ಜೊತೆಗೂ ಇವು ಭಾವನಾತ್ಮಕ ಸಂಬಂಧವನ್ನು ಹೊಂದುವುದನ್ನು ನಾವು ಕಾಣಬಹುದು. ಆನೆಗಳ ಇನ್ನೊಂದು ವಿಶೇಷ ಶಕ್ತಿಯನ್ನೂ ವಿಜ್ಞಾನಿಗಳು ಈಗ ಗುರುತಿಸಿದ್ದಾರೆ. ಅದು ಅವುಗಳ ಸಂವಹನ ಶಕ್ತಿ. ಆನೆಗಳು ತಮ್ಮ ತಮ್ಮ ಸೊಂಡಿಲು, ಕಾಲುಗಳನ್ನು ಬಳಸಿ ಹೊರಡಿಸುವ ಧ್ವನಿ ತರಂಗಗಳಿಂದ ಮೂವತ್ತು ಕಿಲೋಮೀಟರ್ ದೂರದವರೆಗೂ  ಪರಸ್ಪರ ಸಂಪರ್ಕ ಸಾಧಿಸಬಲ್ಲವು ಎನ್ನುತ್ತಾರೆ.

ಇವೆಲ್ಲ ಕಾರಣಗಳಿಂದ  ಆನೆ ಭೂಮಿಯ ಮೇಲಿನ ಜೀವಿಗಳಲ್ಲಿ ಬಹಳ ವಿಶೇಷವಾದ, ವಿಭಿನ್ನವಾದ ಸ್ಥಾನ ಹೊಂದಿದೆ.

ಮನುಷ್ಯನ ನಾನಾ ತರದ ಚಟುವಟಿಕೆಗಳಿಂದಾಗಿ ಆನೆಗಳ ವಾಸಸ್ಥಾನಗಳು ನಾಶವಾಗಿವೆ. ಆನೆದಾರಿಗಳು ಮುಚ್ಚಿವೆ ಇಲ್ಲವೇ ತುಂಡರಿಸಲ್ಪಟ್ಟಿವೆ. ಇದರಿಂದಾಗಿ ಆನೆಗಳು ದಿಕ್ಕೆಟ್ಟಿವೆ. ಸಾಲದೆಂಬಂತೆ ಅವುಗಳು ಇರುವ ಜಾಗದಲ್ಲೇ ಆಹಾರದ ಕೊರತೆ ಉಂಟಾಗಿದೆ. ಹಾಗಾಗಿ ಅವು  ಆಹಾರ  ಹುಡುಕುತ್ತ ಎಲ್ಲೆಂದರಲ್ಲಿ ಬರುತ್ತವೆ. ಮನುಷ್ಯ ಕೃಷಿಮಾಡಿದ ಬಾಳೆ, ಭತ್ತ, ಕಬ್ಬಿನ ಗದ್ದೆಗಳು, ತೋಟಗಳು ಅವುಗಳಿಗೆ ತುತ್ತಾಗುತ್ತಿವೆ.

ಇಲ್ಲಿ ಒಂದು ವಿಚಾರ ಗಮನಿಸಿಬೇಕು. ಹೀಗೆ ಸ್ಥಳಾಂತರಗೊಂಡು ಆಹಾರಕ್ಕಾಗಿ ಈಗ ಆನೆಗಳು ಮತ್ತು ಇತರ ಪ್ರಾಣಿಗಳು ಧಾಳಿ ಮಾಡುತ್ತಿರುವ ಸ್ಥಳಗಳಲ್ಲಿ ಹಲವಾರು ಪ್ರದೇಶಗಳು ಈ ಪ್ರಾಣಿಗಳ ಪರಂಪರಾಗತ ಆವಾಸವಾಗಲೀ, ದಾರಿಯಾಗಲೀ ಅಲ್ಲ. ಬದಲಿಗೆ  ಕೃಷಿ ವಲಯಗಳು. ಕಳೆದ ಶತಮಾನದಿಂದಲೂ ಅಲ್ಲಿ ಆನೆಗಳ ಉಪಟಳ ಎನ್ನುವ ಸಂಗತಿಯೇ ಅರಿಯದ ಪ್ರದೇಶಗಳು ಅವು. ಯಾರೋ ಎಲ್ಲಿಯೋ ಮಾಡಿದ ತಪ್ಪಿಗಾಗಿ ಈ ಪ್ರದೇಶಗಳ ಜನರು ತಮ್ಮ ಬೆಳೆನಾಶವನ್ನು ಅನುಭವಿಸುತ್ತಿದ್ದಾರೆ. ಜೀವ ಕಳೆದುಕೊಳ್ಳುತ್ತಿದ್ದಾರೆ. ಕೊಡಗು ಮತ್ತು ಹಾಸನ ಜಿಲ್ಲೆಯ ಹಲವು ಭಾಗಗಳು ಈ ರೀತಿಯ ಪ್ರದೇಶಗಳು. ಜನರು ಅಲ್ಲಿ ಯಾಕೆ ಕೃಷಿ ಮಾಡಬೇಕು? ಎಂದು ಕೇಳುವವರಿಗೆ ಇಂತಹ ವಿಚಾರಗಳು ತಿಳಿಯವು.

ಪ್ರಸಾದ್‌ ರಕ್ಷಿದಿ

ಪರಿಸರ ಬರಹಗಾರರು

ಇದನ್ನೂ ಓದಿ-  ಪ್ರಾಣಿಗಳು ನೀಡುವ ತೊಂದರೆಗಳಿಗೆ ಮನುಷ್ಯರೇ ಕಾರಣ

ಪ್ರಾಣಿಗಳು ನೀಡುವ ತೊಂದರೆಗಳಿಗೆ ಮನುಷ್ಯರೇ ಕಾರಣ
ಅನೇಕರು ನೀವು ಬೇರೆ ಬೆಳೆ ಬೆಳೆಯಬಾರದೇ? ಬೇರೆ ಉದ್ಯೋಗ ಮಾಡಬಾರದೇ? ನೀವು ಕಾಡಿನಲ್ಲಿ ಹೋಗಿ ಕೃಷಿ ಮಾಡಲು ಹೇಳಿದವರು ಯಾರು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ವಾಸ್ತವದ ಅರಿವಿಲ್ಲದಿರುವವರು ಕೇಳುವ ಈ ಪ್ರಶ್ನೆಗಳಿಗೆ  ಒಂದೊಂದಾಗಿ ಉತ್ತರ ಕಂಡುಕೊಳ್ಳಬೇಕು – ಪ್ರಸಾದ್‌ ರಕ್ಷಿದಿ, ʼಕಾಡು ಹೆಜ್ಜೆಯ ಜಾಡಿನಲ್ಲಿʼ ಅಂಕಣದಲ್ಲಿ.

ನಮ್ಮ ಮಲೆನಾಡಿನ ಆನೆ, ಕಾಟಿ, ಮಂಗ, ನವಿಲು ಮುಂತಾದ ಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಯೋಚಿಸೋಣ. ಇಲ್ಲಿ ಆಗುತ್ತಿರುವ ಎಲ್ಲಾ ತೊಂದರೆಗಳಿಗೂ ಮೂಲ ಕಾರಣ ಮನುಷ್ಯನೇ ಎನ್ನುವುದನ್ನೂ  ಬಹುಷಃ ಯಾರೂ ಅಲ್ಲಗಳೆಯಲಾರರು.

ಆದರೆ ಈ ವಿಚಾರದಲ್ಲಿ ಮಲೆನಾಡಿನ  ಅಥವಾ ಇತರ ಪ್ರದೇಶದ ರೈತರ, ಕಾರ್ಮಿಕರ, ಅರಣ್ಯದಲ್ಲೇ ಬದುಕುತ್ತಿದ್ದ ಇತರ ಹಲವು ಸಮುದಾಯಗಳ  ಬಗ್ಗೆ ಹಾಗೂ  ಅವರ ಜೀವನದ ಬಗ್ಗೆ ಹೊರಗಿನವರಿಗೆ ಅಂದರೆ ನಗರ ಮಧ್ಯಮ ವರ್ಗಕ್ಕೆ ಬಹಳವಾಗಿ ತಪ್ಪು ತಿಳುವಳಿಕೆಗಳೇ ಇವೆ. ಇದಕ್ಕೆ ಮುಖ್ಯ ಕಾರಣ  ನಮ್ಮ ಮಾಧ್ಯಮಗಳು ಇಲ್ಲಿನ ಜೀವನವನ್ನು ಮತ್ತು ಸುದ್ದಿಗಳನ್ನು ಬಿಂಬಿಸುತ್ತಿರುವ ರೀತಿ. ನಮ್ಮ ಹೆಚ್ಚಿನ ಎಲ್ಲಾ ಮಾಧ್ಯಮಗಳು ಉದ್ಯಮಿಗಳ ಮತ್ತು ರಾಜಕಾರಣಿಗಳ ಕೈಯಲ್ಲಿ ಇರುವುದರಿಂದ  ಅವುಗಳು ಅವರ ಹಿತಾಸಕ್ತಿಯನ್ನೇ ಕಾಪಾಡುತ್ತವೆ.  ಆದ್ದರಿಂದ ಪರಿಸರ ಸಂಬಂಧಿತ ಸುದ್ದಿಗಳು ಬಂದಾಗಲೂ ಅರ್ಧ ಸತ್ಯವನ್ನು ಹೇಳುತ್ತವೆ. ಎಲ್ಲಾ ವಿಚಾರಗಳನ್ನು ಹೇಳಿದ ನಂತರವೂ ಈ “ಅಭಿವೃದ್ಧಿ” ಕೆಲಸಗಳು ಅನಿವಾರ್ಯ ಎನ್ನುವ ಮನಸ್ಥಿತಿಯ ನಿರ್ಮಾಣಕ್ಕೆ ಒತ್ತು ಕೊಡುತ್ತವೆ.

ಹಾಗೆಯೇ ಕೃಷಿಯ ವಿಚಾರಕ್ಕೆ ಬಂದಾಗ ಗಮನಿಸಿ, ಉದಾಹರಣೆಗೆ- ಯಾವುದಾದರೂ ಒಂದು ಬೆಳೆಗೆ ಒಂದು ಬಾರಿ ಉತ್ತಮ ಬೆಲೆ ಬಂದರೆ ಕೂಡಲೇ ನಮ್ಮ ಮಾಧ್ಯಮಗಳು  “ಮೆಣಸಿಗೆ ಉತ್ತಮ ಬೆಲೆ ರೈತರ ಮೊಗದಲ್ಲಿ ಸಂತಸ” ಎಂದು ಬರೆಯುತ್ತವೆ.  ಕಳೆದ ವರ್ಷ ಯಾವನೋ ಒಬ್ಬ  “ಅಡಿಕೆಗೆ ಉತ್ತಮ ಬೆಲೆ ಚಿನ್ನದಂಗಡಿಯಲ್ಲಿ ನೂಕು ನುಗ್ಗಲು” ಎಂದು ಬರೆದಿದ್ದ. ಇಂತಹ ವಾಕ್ಯಗಳು ವರ್ಷಗಟ್ಟಲೆ ರೈತರ ಬದುಕಿನ ಹೋರಾಟವನ್ನು ಮರೆಮಾಚುತ್ತವೆ. ಹವಾಮಾನ ವೈಪರೀತ್ಯ ಮತ್ತು ರೋಗಗಳಿಂದ ಮೆಣಸು, ಅಡಿಕೆ ತೋಟಗಳೇ ನಾಶವಾಗಿ ಕಂಗೆಟ್ಟವರು  ಕಾಣಿಸುವುದಿಲ್ಲ.

ಕಾಫಿ ನಾಡಿನಲ್ಲಿ ಒಂದು ಹೂವಿನ ಮಳೆ ಬಿದ್ದರೆ, ಬೆಲೆ ಒಂದಿಷ್ಟು ಚೇತರಿಸಿಕೊಂಡರೆ, ಮಾಧ್ಯಮದವರಿಗೆ “ಐಷಾರಾಮೀ ದೊರೆಗಳು” ಮಾತ್ರ ಕಣ್ಣಿಗೆ ಬೀಳುತ್ತಾರೆ.

ಇದರಿಂದಾಗಿ ಅನೇಕರು ನೀವು ಬೇರೆ ಬೆಳೆ ಬೆಳೆಯಬಾರದೇ? ಬೇರೆ ಉದ್ಯೋಗ ಮಾಡಬಾರದೇ ? ನೀವು ಕಾಡಿನಲ್ಲಿ ಹೋಗಿ ಕೃಷಿ ಮಾಡಲು ಹೇಳಿದವರು ಯಾರು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ವಾಸ್ತವದ ಅರಿವಿರುವುದಿಲ್ಲ.

ಈ ಪ್ರಶ್ನೆಗಳನ್ನು ಒಂದೊಂದಾಗಿ ನೋಡೋಣ.

ಬೇರೆ ಬೆಳೆಗಳನ್ನು ಬೆಳೆಯುವುದು ಸುಲಭವೂ ಅಲ್ಲ, ಕೆಲವನ್ನು ಸಾಧ್ಯವೂ ಇಲ್ಲ. ಉದಾಹರಣೆಗೆ ಮಲೆನಾಡಿನ ಕಾಫಿ, ಏಲಕ್ಕಿ , ಮೆಣಸು ಬೇರೆ ಕಡೆ ಪ್ರಯತ್ನ ಪಟ್ಟು ಬೆಳೆಯಬಹುದು ಆದರೆ ಇಲ್ಲಿನ ಗುಣಮಟ್ಟ ಬರಲಾರದು ಹಾಗೇ ಕರಾವಳಿಯ ಬೆಟ್ಟಗಳಲ್ಲಿ ಬೆಳೆಯುವ ರಬ್ಬರ್, ಅಡಿಕೆ, ಗೋಡಂಬಿ ಇಲ್ಲಿ ಬರಲಾರದು. ಎಲ್ಲಾ ಬೆಳೆಗಳಿಗೂ ಒಂದು ಪ್ರಾದೇಶಿಕ  ವೈಶಿಷ್ಟ್ಯ ಮತ್ತು ಗುಣಗಳಿವೆ. ಇವೆಲ್ಲ ಪ್ರಯೋಗಳನ್ನು ಕೃಷಿಕರು ಕಾಲ ಕಾಲಕ್ಕೆ ಮಾಡುತ್ತಲೇ ಬಂದಿದ್ದಾರೆ.

ಇನ್ನು ಕಾಡಿನಲ್ಲಿ ಕೃಷಿ ಮಾಡಿರುವ ಬಗ್ಗೆ- ಹೌದು ಅರಣ್ಯ ಒತ್ತುವರಿ ಮಾಡಿಲ್ಲವೆಂದಲ್ಲ. ಸಾಕಷ್ಟು  ಕಡೆಗಳಲ್ಲಿ ಒತ್ತುವರಿ ಆಗಿದೆ. ಅದಕ್ಕೆ ಕಾರಣ ಯಾರು? ನಮ್ಮ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಏನು ಮಾಡುತ್ತಿದೆ ? ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ನಡೆದಿರುವುದು ದೊಡ್ಡ ಬೆಳೆಗಾರರರಿಂದಲೇ. ಇವರಿಗೆಲ್ಲ ರಾಜಕಾರಣಿಗಳ ಬೆಂಬಲವಿದೆ. ಉಳಿದವರು ಒತ್ತುವರಿ ಮಾಡಿರುವುದು ಕಂದಾಯ ಭೂಮಿಯನ್ನು. ಆದು ಕೃಷಿ ಭೂಮಿಯೇ.

ಶಿರಾಡಿ ಬೆಟ್ಟ ಸಾಲಿನ ಕೆಳಭಾಗದಲ್ಲಿ ಕೇರಳದಿಂದ ಬಂದ ವಲಸಿಗರು ಲೆಮನ್ ಗ್ರಾಸ್(ಸಿಟ್ರೊನೆಲ್ಲಾ) ಎನ್ನುವ  ಸುಗಂಧದ ಎಣ್ಣೆಯ ಹುಲ್ಲನ್ನು ಬೆಳೆದರು. ತಮ್ಮ ಸಣ್ಣ ಸಣ್ಣ ಜಮೀನಿನಲ್ಲಿ ಅಲ್ಲದೆ ಸರ್ಕಾರಿ ನೆಲದಲ್ಲೂ ಬೆಳೆದರು. ಘಟ್ಟದ ಮೇಲೂ ಕೆಲವರು ಇದನ್ನು ಬೆಳೆದರು. ಮೊದಲಿಗೆ ಇದು ಲಾಭದಾಯಕವಾಗಿತ್ತು. ನಂತರದ ದಿನಗಳಲ್ಲಿ ಈ ಸುಗಂಧಕ್ಕೆ ಬದಲಿಯಾಗಿ ಅಗ್ಗದ ಕೃತಕ ಸುಂಗಂಧವೊಂದು ಬಂದಿತು. ಇದರಿಂದಾಗಿ  ಸಿಟ್ರೋನೆಲ್ಲ ಎಣ್ಣೆಗೆ ಬೇಡಿಕೆಯಿಲ್ಲದೆ  ರೈತರು ಅದರ ಕೃಷಿಯನ್ನು ಬಿಟ್ಟರು. ಆಗಲೇ ಅರಣ್ಯ ಇಲಾಖೆ ಎಚ್ಚರ ವಹಿಸಬೇಕಿತ್ತು. ಯಾಕೆಂದರೆ ಈ ಹುಲ್ಲನ್ನು ಪ್ರಾಣಿಗಳು ತಿನ್ನುವುದಿಲ್ಲ. ಅದೀಗ ಘಟ್ಟ ಪ್ರದೇಶಗಳಿಗೂ ಹಬ್ಬಿ ನಮ್ಮೂರಿನ ರಸ್ತೆ ಬದಿಯವರೆಗೂ ಬಂದಿದೆ. ಈಗ ಮಲೆನಾಡಿನ ಎಲ್ಲ ರಸ್ತೆಗಳ ಬದಿಯಲ್ಲಿ ಬೆಳೆದಿರುವ ಲೆಮನ್ ಗ್ರಾಸ್ ಅನ್ನು ನಾವು ಕಾಣಬಹುದು. ಇದರಿಂದಾಗಿ ಶಿರಾಡಿ ಘಟ್ಟ ಪ್ರದೇಶದಲ್ಲಿ ಆನೆ, ಕಾಟಿ ಮುಂತಾದ ಪ್ರಾಣಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮೇವಿನ ಕೊರತೆ ಆಯಿತು. ಅವು ಮೇವಿಗಾಗಿ ಕೃಷಿ ಭೂಮಿಯತ್ತ ಬಂದವು.

ಹೀಗೇ ಇನ್ನೂ ಹಲವಾರು ಸಂಗತಿಗಳಿವೆ…

(ಮುಂದುವರಿಯುವುದು..)

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ

ಇದನ್ನೂ ಓದಿ-https://peepalmedia.com/the-magic-of-false-development/  http://ತಪ್ಪಾದ ʼಅಭಿವೃದ್ಧಿʼ ಎಂಬ ಮಾಯಾಜಾಲ

ನಿಸರ್ಗದ ನಿರಂತರ ನಾಶ
ಭಾರತ ತನ್ನ ಎಲ್ಲ ರೀತಿಯ ಸಂಪನ್ಮೂಲಗಳಿಗೆ ಆಂತರಿಕವಾಗಿಯೇ ಹೆಚ್ಚು ಅವಲಂಬಿತವಾಗಿದೆ. ಇದನ್ನು ನಿಭಾಯಿಸಲು ಒಂದು ಸುಸ್ಥಿರವಾದ ಪರಸರ ಸ್ನೇಹಿಯಾದ ಸಂಯಮದ ಆರ್ಥಿಕ ಸಾಮಾಜಿಕ ವ್ಯವಸ್ಥೆ ಅಗತ್ಯ – ಪ್ರಸಾದ್‌ ರಕ್ಷಿದಿ.

ಈ ಹಿಂದೆ ಹೇಳಿದ ಎಲ್ಲಾ ವಿಷಯಗಳೂ ಸೇರಿ ಜಗತ್ತಿನಾದ್ಯಂತ ನಗರೀಕರಣ ನಡೆದಿದೆ. ಅಷ್ಟೇ ಅಲ್ಲ ಭೂಮಿಯ ನೈಸರ್ಗಿಕ ಸಂಪತ್ತಿನ ಬಹುದೊಡ್ಡ ಪಾಲನ್ನು ನಗರಗಳು ಬಳಸುತ್ತಿವೆ.  ಇದರ ಫಲವೇ  ನಿಸರ್ಗದ ನಿರಂತರ ನಾಶ. ಇದರಲ್ಲಿ ಮತ್ತೂ ಒಂದು ಸಂಗತಿಯಿದೆ. ಕೆಲವು ದೇಶಗಳು ಬಹು ವಿಸ್ತಾರವಾದ ಭೂ ಪ್ರದೇಶವನ್ನು ಹೊಂದಿವೆ. ಆದರೆ ಅವುಗಳ ಜನ ಸಂಖ್ಯೆ ಆ ಗಾತ್ರಕ್ಕೆ ಹೋಲಿಸಿದರೆ ಕಡಿಮೆಯಿದೆ. ಅದರಿಂದಾಗಿ  ಅವು ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ನಮಗಿಂತ ಹೆಚ್ಚು ಕಾಪಾಡಿಕೊಳ್ಳ ಬಲ್ಲವು. ಅದಲ್ಲದೆ ಆ ದೇಶಗಳೆಲ್ಲ “ಮುಂದುವರಿದ” ದೇಶಗಳು, ಯುದ್ಧೋದ್ಯಮ ಮತ್ತು ಇತರ ರಾಜಕೀಯ ಕಾರಣಗಳಿಂದ ಆರ್ಥಿಕ ಶಕ್ತಿಗಳಾಗಿ ಶ್ರೀಮಂತ ದೇಶಗಳೆನಿಸಿಕೊಂಡಿವೆ. ನವ ಆರ್ಥಿಕ ಸಿದ್ಧಾಂತಗಳ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ. ಇಡೀ ಪ್ರಪಂಚದ ನೈಸರ್ಗಿಕ ಸಂಪತ್ತಿಗೆ ಕೈಚಾಚಿ ಕಬಳಿಸುತ್ತವೆ. ಜೊತೆಗೆ ತಮ್ಮ ದೇಶವನ್ನು ಮಾದರಿಯೆಂದು ಪರಿಗಣಿಸಿ ಇತರರಿಗೆ, ಪರಿಸರ ರಕ್ಷಣೆಯ ಪಾಠವನ್ನೂ ಹೇಳುತ್ತವೆ!

ಭಾರತದಂತಹ ಅನೇಕ ದೇಶಗಳ ಸಮಸ್ಯೆಯೆಂದರೆ ನಮ್ಮ ಜನಸಂಖ್ಯೆ. ಅದಕ್ಕೆ ಹೋಲಿಸಿದರೆ ಸೀಮಿತ ಭೂಪ್ರದೇಶ, ಜೊತೆಗೆ ಮುಂದುವರಿದ ದೇಶಗಳ ಮಾದರಿ ಅಭಿವೃದ್ಧಿಯ ಅನುಕರಣೆ. ಮುಂದುವರಿದ ದೇಶಗಳಿಗೆ ದೂರ ದೂರ ದೇಶಗಳವರೆಗೆ ಕೈಚಾಚಿ ಕಬಳಿಸುವ ಶಕ್ತಿ ಇರುವುದರಿಂದ ಅವುಗಳ ಭ್ರಷ್ಟಾಚಾರವೂ ಜಾಗತಿಕ ಮಟ್ಟದ್ದೂ ಮತ್ತು ಅತಿ ದೊಡ್ಡ ಪ್ರಮಾಣದ್ದೂ ಆಗಿರುತ್ತದೆ. ಆ ಮೂಲಕ ಗಳಿಸಿದ ಅಪಾರ ಸಂಪತ್ತಿನ ಕೆಲವು ಭಾಗವನ್ನು ಅವು ತಮ್ಮ ದೇಶದ ಪ್ರಜೆಗಳ ಸುಖ ಸಂತೋಷಗಳಿಗೆ ಬಳಸಿ ಅವರನ್ನು ಒಂದು ರೀತಿಯ ಸಂತೃಪ್ತಿಯಲ್ಲಿಡ ಬಲ್ಲವು. ಅದ್ದರಿಂದಲೇ ಉದಾಹರಣೆಗೆ ಅಮೆರಿಕಾದಂತಹ ದೇಶಗಳ ಸಾಮಾನ್ಯ ಜನರು ಬೇರೆ ದೇಶಗಳ ಆಗುಹೋಗುಗಳ ಬಗ್ಗೆ ಮಾತಾಡಿದಷ್ಟು ತಮ್ಮ ದೇಶದ ರಾಜಕಾರಣದ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ.  ಈ ಸ್ಥಿತಿಯಿದ್ದಾಗ ಆ ಪ್ರಜಾಪ್ರಭುತ್ವ ಕೇವಲ ಅಲಂಕಾರಿಕವಾಗಿರುತ್ತದೆ.

ಆ ದೇಶಗಳಲ್ಲಿ ಪ್ರಜ್ಞಾವಂತರು ಇಲ್ಲವೇ?  ಖಂಡಿತ ಇದ್ದಾರೆ. ಅಲ್ಲಿ ಕೂಡಾ ಅವರ ಧ್ವನಿ ವಿರಳವಾದದ್ದೇ. ಭಾರತದಂತಹ ದೇಶಗಳಿಗೆ  ಬೇರೆ ದೇಶಗಳನ್ನು ತನ್ನ ಆರ್ಥಿಕ ಸಾಮ್ರಾಜ್ಯದ ಅಧೀನವಾಗಿಸಿಕೊಂಡು ಲಾಭ ಗಳಿಸುವ ಶಕ್ತಿ ಬಹಳ ಕಡಿಮೆ. ಈ ವಿಚಾರದಲ್ಲಿ ಚೀನಾದ ಶಕ್ತಿ ದೊಡ್ಡದು. ಆದ್ದರಿಂದ ಭಾರತ ತನ್ನ ಎಲ್ಲ ರೀತಿಯ ಸಂಪನ್ಮೂಲಗಳಿಗೆ ಆಂತರಿಕವಾಗಿಯೇ ಹೆಚ್ಚು ಅವಲಂಬಿತವಾಗಿದೆ. ಇದನ್ನು ನಿಭಾಯಿಸಲು ಒಂದು ಸುಸ್ಥಿರವಾದ ಪರಸರ ಸ್ನೇಹಿಯಾದ ಸಂಯಮದ ಆರ್ಥಿಕ ಸಾಮಾಜಿಕ  ವ್ಯವಸ್ಥೆ ಅಗತ್ಯ.

ಆದರೆ ಇಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ.  ಅಪಾರ ಜನಸಂಖ್ಯೆ, ಜಾಗತಿಕವಾಗಿ ಹಬ್ಬಿ ಬಂದ ಕೊಳ್ಳುಬಾಕ ಜೀವನ ಶೈಲಿ, ಹೆಸರಿಗೆ ಪ್ರಜಾಪ್ರಭುತ್ವವಾದರೂ ಇನ್ನೂ ಪಾಳೇಗಾರಿ ವ್ಯವಸ್ಥೆಯಲ್ಲೇ ಇರುವ ರಾಜಕಾರಣ, ವ್ಯಾಪಕ ಭ್ರಷ್ಟಾಚಾರ ಇವೆಲ್ಲವುಗಳಿಂದಾಗಿ ಹೇಗಾದರೂ ಸರಿ ಹಣ ಸಂಪಾದಿಸು, ಕೂಡಿಡು ಸಂಪತ್ತು ಹೆಚ್ಚಿಸಿಕೋ ಎನ್ನುವ ಸ್ಥಿತಿ ವ್ಯಾಪಕವಾಗಿದೆ. ಇದರಿಂದಾಗಿಯೇ ಭ್ರಷ್ಟಾಚಾರ ಒಂದು ವಿಷಯವೇ ಅಲ್ಲ ಎನ್ನುವ ಸ್ಥಿತಿಗೆ ಸಾಮಾನ್ಯ ಜನರೂ ಬಂದು ನಿಂತಿದ್ದಾರೆ. ಇದು ನಮ್ಮನ್ನು ಆಳುವವರಿಗೆ ಮತ್ತು ದೋಚುವವರಿಗೆ ಬಹಳ ಅನುಕೂಲವಾದ ಸ್ಥಿತಿ. ಹಾಗಾಗಿ ಹಣ ಗಳಿಸು ಉಳಿದೆಲ್ಲವೂ ನೀನು ಹೇಳಿದಂತೆ ನಡೆಯುತ್ತದೆ ಎನ್ನುವ ತೀರ್ಮಾನಕ್ಕೆ ಬಂದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ನಮ್ಮ ಕಾರ್ಯಕ್ರಮಗಳೂ ರೂಪಿತವಾಗುತ್ತಿವೆ. ಇದರಿಂದಾಗಿ ಪ್ರಜ್ಞಾವಂತರು ಕಾಲ ಕಾಲಕ್ಕೆ ನೀಡುತ್ತಿರುವ ಸೂಚನೆ, ಎಚ್ಚರಿಕೆ, ತಿಳುವಳಿಕೆಗಳು ಉಪೇಕ್ಷಿಸಲ್ಪಡುತ್ತವೆ ಮತ್ತು ಇತ್ತೀಚಿನ ದಿನಗಳಲ್ಲಿ ಅದನ್ನು ಹತ್ತಿಕ್ಕಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ನಾನು ಮನುಷ್ಯ ಮತ್ತು ಜೀವಸಂಕುಲದ ಉಳಿವಿನ ಬಗ್ಗೆ ಏನು ಮಾಡಬಹುದು ?

ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಒಂದೆಡೆ ಇಟ್ಟು ನಾವು ಆಂತರಿಕವಾಗಿ ಮತ್ತು ಸ್ಥಳೀಯವಾಗಿ ಏನು ಮಾಡಬಹುದು? ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

ಇದನ್ನೂ ಓದಿ-https://peepalmedia.com/hydropower-lines-and-environmental-degradation%e0%b2%b6/ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ

ತಪ್ಪಾದ ʼಅಭಿವೃದ್ಧಿʼ ಎಂಬ ಮಾಯಾಜಾಲ
ನಮ್ಮ ಎಲ್ಲ ಸಮಸ್ಯೆಗಳ ಮೂಲ ತಪ್ಪಾದ “ಅಭಿವೃದ್ಧಿ” ಎಂಬ ಮಾಯಾಜಾಲ. ಇದೊಂದು ಅತಿದೊಡ್ಡ ಭ್ರಷ್ಟಾಚಾರ. ನಾವು ಇದರ ಸುಳಿಯಲ್ಲಿ ಸಿಕ್ಕಿ ಕೊಂಡಿದ್ದೇವೆ. ಇಡೀ ಭೂಮಂಡಲವನ್ನೇ ಸೂರೆ ಮಾಡುತ್ತಿದ್ದೇವೆ. ನಮ್ಮ  ಕೃತಕ ಅಭಿವೃದ್ಧಿಗಾಗಿ ಹೊಳೆ, ಸಮುದ್ರ, ಕಾಡು, ಗುಡ್ಡ ಎಲ್ಲವನ್ನೂ ಲೂಟಿ ಮಾಡಿದ್ದೇವೆ – ಪ್ರಸಾದ್‌ ರಕ್ಷಿದಿ

ಆದರೆ ನಮ್ಮ ಅಭಿವೃದ್ದಿ ಯೋಜನೆಗಳು ಮತ್ತು ಅವುಗಳನ್ನು  ಮಾಡುತ್ತಿರುವ ರೀತಿ ಅರಿವಿಲ್ಲದ ಅಸಂಬದ್ಧತೆಯೋ ಅಥವಾ ಉದ್ದೇಶಿತ ಹುನ್ನಾರಗಳೋ ಈ ಬಗ್ಗೆ ನಾವೇ ಅರಿತು ಕೊಳ್ಳಬೇಕು. ಇದಕ್ಕೆ ಉದಾಹರಣೆ ಮೊದಲೇ ನಾನು ಹೇಳಿದಂತೆ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ. ಇದು ಪ್ರಾರಂಭವಾಗುವಾಗಲೇ ದೊಡ್ಡ ಪ್ರಮಾಣದಲ್ಲಿಯೇ ವಿರೋಧ ಬಂತು ಮತ್ತು ಅದನ್ನು ಹೇಗೆ ನಿವಾರಿಸಲಾಯಿತು  ಎನ್ನುವುದು ಸಾಕಷ್ಟು ಚರ್ಚೆ ಆಗಿದೆ.  ಇಲ್ಲೀಗ ಅದರ ಪುನರಾವರ್ತನೆ ಬೇಡವೆನಿಸುತ್ತದೆ.

ಅದರೆ ಈ ಸ್ಥಾವರವನ್ನು ಸ್ಥಾಪಿಸಿದ್ದು ಕರಾವಳಿಯ ಉದ್ಯಮಗಳಿಗೆ ಅನುಕೂಲವಾಗಲಿ ಎಂದು. ಅದೇ ಕಾಲದಲ್ಲಿ ವಾರಾಹಿ ವಿದ್ಯುತ್ ಯೋಜನೆಯ ವಿದ್ಯುತ್ ಅನ್ನು ಅದೇ ಕರಾವಳಿಯ ಪಕ್ಕದಲ್ಲೇ ಹಾದು ಹಾಸನಕ್ಕೆ ತರುವ ಸಿದ್ಧತೆ ನಡೆಯುತ್ತಿತ್ತು!  ಅದರ ಬದಲಿಗೆ  ವಾರಾಹಿ ವಿದ್ಯುತ್ತನ್ನು ಹತ್ತಿರದ ಕರಾವಳಿಗೆ ಕೊಟ್ಟು ನಂದಿಕೂರಿನಲ್ಲಿ ಸ್ಥಾಪಿಸಿದ ಉಷ್ಣ ವಿದ್ಯುತ್ ಸ್ಥಾವರವನ್ನು ಹಾಸನಕ್ಕೆ ಸ್ಥಳಾಂತರಿಸ ಬಹುದಿತ್ತಲ್ಲ !

ಇದರಿಂದ ವಿದ್ಯುತ್ ಸಾಗಾಣಿಕೆಗಾಗಿ ಸಾವಿರಾರು ಎಕರೆ ಅರಣ್ಯ ನಾಶವಾಗುವುದು ತಪ್ಪುತ್ತಿತ್ತು. ಯೋಜನೆಗಳ ಖರ್ಚು ಕೂಡಾ ಕಡಿಮೆಯಾಗುತ್ತಿತ್ತು. ಅಲ್ಲದೆ ಹಾಸನಕ್ಕೆ ಹೇಗೂ ದೇಶದ ಪೂರ್ವ ಮತ್ತು ಪಶ್ಚಿಮದ ಎರಡೂ ಬಂದರುಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ಇದೆ. ಕಲ್ಲಿದ್ದಲು ಸಾಗಣೆಗೂ ಅನುಕೂಲವಿತ್ತು.

ಉಷ್ಣವಿದ್ಯುತ್ ಸ್ಥಾವರಕ್ಕೆ ಅಪಾರ ಪ್ರಮಾಣದ ಕಲ್ಲಿದ್ದಲು ಬೇಕು, ನಂದಿಕೂರು ಕರಾವಳಿಯ ಬಂದರಿಗೆ ಹತ್ತಿರದಲ್ಲಿದೆ ಇತ್ಯಾದಿ ವಾದಗಳನ್ನು ಆಗ ಮುಂದಿಡಲಾಯಿತು. ಈ ಸ್ಥಾವರಕ್ಕಾಗಿ ಮಂಗಳೂರು ಬಂದರಿನಿಂದ ಹೊಸದಾಗಿ ರೈಲು ಹಳಿ ಹಾಕಬೇಕಾಯಿತು.

ಹಾರುಬೂದಿ-ನಂದಿಕೂರು ವಿದ್ಯುತ್ ಸ್ಥಾವರ

ನಂದಿಕೂರು ವಿದ್ಯುತ್ ಸ್ಥಾವರ  ಮಾನ್ ಸೂನ್ ಗಾಳಿ ಬೀಸುವ ಹಾಗೂ ಹೆಚ್ಚು ಮಳೆಯಾಗುವ ಪಡುಬಿದ್ರಿ ಪ್ರದೇಶದಲ್ಲಿ ಇದೆ. ಈಗಾಗಲೇ ಅಲ್ಲಿನ ಜನ ಹಾರು ಬೂದಿ  ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತು ಘಟ್ಟ ಪ್ರದೇಶದಲ್ಲಿ ಮಳೆಯಲ್ಲಿ ಆಮ್ಲಗಳ ಪ್ರಮಾಣ ಹೆಚ್ಚಾಗುವಂತಹ ಅನೇಕ ಸಮಸ್ಯೆಗಳನ್ನು ಇದು ತಂದಿಟ್ಟಿದೆ. ಆದರೆ ಹಾಸನ ಘಟ್ಟದ ಮೇಲೆ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಇದೆ. ವಾರಾಹಿ ವಿದ್ಯುತ್ ಕರಾವಳಿಗೆ ಕೊಟ್ಟು ನಂದಿಕೂರಿನ ಬದಲಿಗೆ ಹಾಸನದಲ್ಲಿ ಉಷ್ಣವಿದ್ಯುತ್ ಸ್ಥಾವರ ಮಾಡಿದ್ದರೆ (ಇದೂ ಸಂಪೂರ್ಣ ಸರಿಯಲ್ಲ ಯಾಕೆಂದರೆ ಉಷ್ಣ ವಿದ್ಯುತ್ ಸ್ಥಾವರಗಳು ನಿರಂತರ ಪರಿಸರ ಸಮಸ್ಯೆಯೇ)  ಈ ಪ್ರದೇಶದಲ್ಲಿ ಪರಿಸರ ನಾಶದ ಪ್ರಮಾಣ ತುಂಬ ಕಡಿಮೆಯಾಗುತ್ತಿತ್ತು. ದೇಶದ ತುಂಬ ಇಂತಹ ಯೋಜನಾ ತಪ್ಪುಗಳನ್ನು ಕಾಣಬಹುದು.

ಇದನ್ನೂ ಓದಿ–http://ಪರಿಸರ ನಾಶದಲ್ಲಿ ಭೂಸ್ವಾಧೀನದ ಕಬಂಧ ಬಾಹು

ಅಭಿವೃದ್ಧಿ ಯೋಜನೆ ಎಂದರೆ ದೊಡ್ಡ ಗಾತ್ರದ, ಸಾವಿರಾರು ಕೋಟಿಗಳ ಕೆಲವರಿಗೆ ಲಾಭದಾಯಕವಾದ ಯೋಜನೆಯೇ ಆಗಿರಬೇಕೆಂಬ “ಸಿದ್ಧಾಂತ”ದ ನಡುವೆ ಇವೆಲ್ಲ ವಿಷಯಗಳು ಪಕ್ಕಕ್ಕೆ ಸರಿಸಲ್ಪಡುತ್ತವೆ.

ನಾನು ಮತ್ತೆ ಮತ್ತೆ ಇಂತಹ ವಿಷಯಗಳನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ ನಾವು ಮಾನವ ಪ್ರಾಣಿ ಸಂಘರ್ಷ ಎನ್ನುವ ತಪ್ಪಾದ ನುಡಿಗಟ್ಟನ್ನು ಬಳಸುವ ಮೂಲಕ ನಮ್ಮ ಯೋಚನಾ ವಿಧಾನವನ್ನೂ ಸೀಮಿತ ಗೊಳಿಸಿ ಕೊಳ್ಳುತ್ತಿದ್ದೇವೆ. ನಮ್ಮ ಯೋಜನೆಗಳು ದಿಕ್ಕು ತಪ್ಪುತ್ತಿವೆ. ನಮಗೆ ಇದು ಗೋಚರವಾಗುವಾಗ ಸರಿಪಡಿಸಲಾಗದಷ್ಟು ಅಪಾರ ಹಾನಿಯಾಗಿರುತ್ತದೆ. ಇದು ಮಾನವ ನಾಗರಿಕತೆಯ ಸಮಸ್ಯೆ, ಮನುಷ್ಯನ ದುರಾಸೆಯ ಸಮಸ್ಯೆ.

ನಮ್ಮ ಎಲ್ಲ ಸಮಸ್ಯೆಗಳ ಮೂಲ  ಈ ತಪ್ಪಾದ “ಅಭಿವೃದ್ಧಿ” ಎಂಬ ಮಾಯಾಜಾಲ. ಇದೊಂದು ಅತಿದೊಡ್ಡ ಭ್ರಷ್ಟಾಚಾರ. ನಾವು ಇದರ ಸುಳಿಯಲ್ಲಿ ಸಿಕ್ಕಿ ಕೊಂಡಿದ್ದೇವೆ.  ಇಡೀ ಭೂಮಂಡಲವನ್ನೇ ಸೂರೆ ಮಾಡುತ್ತಿದ್ದೇವೆ. ನಮ್ಮ  ಕೃತಕ ಅಭಿವೃದ್ಧಿಗಾಗಿ ಹೊಳೆ, ಸಮುದ್ರ, ಕಾಡು, ಗುಡ್ಡ ಎಲ್ಲವನ್ನೂ ಲೂಟಿ ಮಾಡಿದ್ದೇವೆ. ಈಗ ಆಕಾಶಕ್ಕೂ ಕೈಹಾಕಿದ್ದೇವೆ. ಇದಕ್ಕಾಗಿ ಯುದ್ಧಗಳಾಗಿವೆ. ಸರ್ಕಾರಗಳು ಉರುಳಿವೆ, ಬದಲಾಗಿವೆ.

ಮನುಷ್ಯ ಮತ್ತು ಪ್ರಾಣಿ ಎನ್ನುವ ವಿಭಜನೆಯೇ ಅಸಹಜವಾದದ್ದು. ಜೀವಸಂಕುಲ ಒಂದೇ ಎನ್ನುವುದೇ ನಮ್ಮ ಅರಿವಿನ ಮೂಲವಾಗಬೇಕು. ಈ ನಿಟ್ಟಿನಲ್ಲಿ ಏನು ಮಾಡಬಹುದು ಮುಂದೆ ಚರ್ಚಿಸೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ

ಇದನ್ನೂ ಓದಿ-http://ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ

ಮೊದಲು ಹಣ ಗಳಿಸು ಉಳಿದೆಲ್ಲವೂ ಮತ್ತೆ…
ಅಪಾರ ಜನಸಂಖ್ಯೆ, ಜಾಗತಿಕವಾಗಿ ಹಬ್ಬಿ ಬಂದ ಕೊಳ್ಳುಬಾಕ ಜೀವನ ಶೈಲಿ, ಹೆಸರಿಗೆ ಪ್ರಜಾಪ್ರಭುತ್ವವಾದರೂ ಇನ್ನೂ ಪಾಳೇಗಾರಿ ವ್ಯವಸ್ಥೆಯಲ್ಲೇ ಇರುವ ರಾಜಕಾರಣ, ವ್ಯಾಪಕ ಭ್ರಷ್ಟಾಚಾರ ಇವೆಲ್ಲವುಗಳಿಂದಾಗಿ ಹೇಗಾದರೂ ಸರಿ ಹಣ ಸಂಪಾದಿಸು, ಕೂಡಿಡು ಸಂಪತ್ತು ಹೆಚ್ಚಿಸಿಕೋ ಎನ್ನುವ ಸ್ಥಿತಿ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಮನುಷ್ಯ ಮತ್ತು ಜೀವಸಂಕುಲದ ಉಳಿವಿನ ಬಗ್ಗೆ ಏನು ಮಾಡಬಹುದು? – ಪ್ರಸಾದ್‌ ರಕ್ಷಿದಿ.

ಈ ಹಿಂದೆ ಹೇಳಿದ ಎಲ್ಲಾ ವಿಷಯಗಳೂ ಸೇರಿ ಜಗತ್ತಿನಾದ್ಯಂತ ನಗರೀಕರಣ ನಡೆದಿದೆ. ಅಷ್ಟೇ ಅಲ್ಲ ಭೂಮಿಯ ನೈಸರ್ಗಿಕ ಸಂಪತ್ತಿನ ಬಹುದೊಡ್ಡ ಪಾಲನ್ನು ನಗರಗಳು ಬಳಸುತ್ತಿವೆ.  ಇದರ ಫಲವೇ  ನಿಸರ್ಗದ ನಿರಂತರ ನಾಶ. ಇದರಲ್ಲಿ ಮತ್ತೂ ಒಂದು ಸಂಗತಿಯಿದೆ. ಕೆಲವು ದೇಶಗಳು ಬಹು ವಿಸ್ತಾರವಾದ ಭೂ ಪ್ರದೇಶವನ್ನು ಹೊಂದಿವೆ. ಆದರೆ ಅವುಗಳ ಜನ ಸಂಖ್ಯೆ ಆ ಗಾತ್ರಕ್ಕೆ ಹೋಲಿಸಿದರೆ ಕಡಿಮೆಯಿದೆ. ಅದರಿಂದಾಗಿ  ಅವು ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ನಮಗಿಂತ ಹೆಚ್ಚು ಕಾಪಾಡಿಕೊಳ್ಳ ಬಲ್ಲವು. ಅದಲ್ಲದೆ ಆ ದೇಶಗಳೆಲ್ಲ “ಮುಂದುವರಿದ” ದೇಶಗಳು, ಯುದ್ಧೋದ್ಯಮ ಮತ್ತು ಇತರ ರಾಜಕೀಯ ಕಾರಣಗಳಿಂದ ಆರ್ಥಿಕ ಶಕ್ತಿಗಳಾಗಿ ಶ್ರೀಮಂತ ದೇಶಗಳೆನಿಸಿಕೊಂಡಿವೆ. ನವ ಆರ್ಥಿಕ ಸಿದ್ಧಾಂತಗಳ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ. ಇಡೀ ಪ್ರಪಂಚದ ನೈಸರ್ಗಿಕ ಸಂಪತ್ತಿಗೆ ಕೈಚಾಚಿ ಕಬಳಿಸುತ್ತವೆ.  ಜೊತೆಗೆ ತಮ್ಮ ದೇಶವನ್ನು ಮಾದರಿಯೆಂದು ಪರಿಗಣಿಸಿ ಇತರರಿಗೆ, ಪರಿಸರ ರಕ್ಷಣೆಯ ಪಾಠವನ್ನೂ ಹೇಳುತ್ತವೆ!

ಭಾರತದಂತಹ ಅನೇಕ ದೇಶಗಳ ಸಮಸ್ಯೆಯೆಂದರೆ ನಮ್ಮ ಜನಸಂಖ್ಯೆ. ಅದಕ್ಕೆ ಹೋಲಿಸಿದರೆ ಸೀಮಿತ ಭೂಪ್ರದೇಶ, ಜೊತೆಗೆ ಮುಂದುವರಿದ ದೇಶಗಳ ಮಾದರಿ ಅಭಿವೃದ್ಧಿಯ ಅನುಕರಣೆ. ಮುಂದುವರಿದ ದೇಶಗಳಿಗೆ ದೂರ ದೂರ ದೇಶಗಳವರೆಗೆ ಕೈಚಾಚಿ ಕಬಳಿಸುವ ಶಕ್ತಿ ಇರುವುದರಿಂದ ಅವುಗಳ ಭ್ರಷ್ಟಾಚಾರವೂ ಜಾಗತಿಕ ಮಟ್ಟದ್ದೂ ಮತ್ತು ಅತಿ ದೊಡ್ಡ ಪ್ರಮಾಣದ್ದೂ ಆಗಿರುತ್ತದೆ. ಆ ಮೂಲಕ ಗಳಿಸಿದ ಅಪಾರ ಸಂಪತ್ತಿನ ಕೆಲವು ಭಾಗವನ್ನು ಅವು ತಮ್ಮ ದೇಶದ ಪ್ರಜೆಗಳ ಸುಖ ಸಂತೋಷಗಳಿಗೆ ಬಳಸಿ ಅವರನ್ನು ಒಂದು ರೀತಿಯ ಸಂತೃಪ್ತಿಯಲ್ಲಿಡ ಬಲ್ಲವು. ಅದ್ದರಿಂದಲೇ ಉದಾಹರಣೆಗೆ ಅಮೆರಿಕಾದಂತಹ ದೇಶಗಳ ಸಾಮಾನ್ಯ ಜನರು ಬೇರೆ ದೇಶಗಳ ಆಗುಹೋಗುಗಳ ಬಗ್ಗೆ ಮಾತಾಡಿದಷ್ಟು ತಮ್ಮ ದೇಶದ ರಾಜಕಾರಣದ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ.  ಈ ಸ್ಥಿತಿಯಿದ್ದಾಗ ಆ ಪ್ರಜಾಪ್ರಭುತ್ವ ಕೇವಲ ಅಲಂಕಾರಿಕವಾಗಿರುತ್ತದೆ.

ಆ ದೇಶಗಳಲ್ಲಿ ಪ್ರಜ್ಞಾವಂತರು ಇಲ್ಲವೇ?  ಖಂಡಿತ ಇದ್ದಾರೆ. ಅಲ್ಲಿ ಕೂಡಾ ಅವರ ಧ್ವನಿ ವಿರಳವಾದದ್ದೇ. ಭಾರತದಂತಹ ದೇಶಗಳಿಗೆ  ಬೇರೆ ದೇಶಗಳನ್ನು ತನ್ನ ಆರ್ಥಿಕ ಸಾಮ್ರಾಜ್ಯದ ಅಧೀನವಾಗಿಸಿಕೊಂಡು ಲಾಭ ಗಳಿಸುವ ಶಕ್ತಿ ಬಹಳ ಕಡಿಮೆ. ಈ ವಿಚಾರದಲ್ಲಿ ಚೀನಾದ ಶಕ್ತಿ ದೊಡ್ಡದು. ಆದ್ದರಿಂದ ಭಾರತ ತನ್ನ ಎಲ್ಲ ರೀತಿಯ ಸಂಪನ್ಮೂಲಗಳಿಗೆ ಆಂತರಿಕವಾಗಿಯೇ ಹೆಚ್ಚು ಅವಲಂಬಿತವಾಗಿದೆ. ಇದನ್ನು ನಿಭಾಯಿಸಲು ಒಂದು ಸುಸ್ಥಿರವಾದ ಪರಸರ ಸ್ನೇಹಿಯಾದ ಸಂಯಮದ ಆರ್ಥಿಕ ಸಾಮಾಜಿಕ  ವ್ಯವಸ್ಥೆ ಅಗತ್ಯ.

ಆದರೆ ಇಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ.  ಅಪಾರ ಜನಸಂಖ್ಯೆ, ಜಾಗತಿಕವಾಗಿ ಹಬ್ಬಿ ಬಂದ ಕೊಳ್ಳುಬಾಕ ಜೀವನ ಶೈಲಿ, ಹೆಸರಿಗೆ ಪ್ರಜಾಪ್ರಭುತ್ವವಾದರೂ ಇನ್ನೂ ಪಾಳೇಗಾರಿ ವ್ಯವಸ್ಥೆಯಲ್ಲೇ ಇರುವ ರಾಜಕಾರಣ, ವ್ಯಾಪಕ ಭ್ರಷ್ಟಾಚಾರ ಇವೆಲ್ಲವುಗಳಿಂದಾಗಿ ಹೇಗಾದರೂ ಸರಿ ಹಣ ಸಂಪಾದಿಸು, ಕೂಡಿಡು ಸಂಪತ್ತು ಹೆಚ್ಚಿಸಿಕೋ ಎನ್ನುವ ಸ್ಥಿತಿ ವ್ಯಾಪಕವಾಗಿದೆ. ಇದರಿಂದಾಗಿಯೇ ಭ್ರಷ್ಟಾಚಾರ ಒಂದು ವಿಷಯವೇ ಅಲ್ಲ ಎನ್ನುವ ಸ್ಥಿತಿಗೆ ಸಾಮಾನ್ಯ ಜನರೂ ಬಂದು ನಿಂತಿದ್ದಾರೆ. ಇದು ನಮ್ಮನ್ನು ಆಳುವವರಿಗೆ ಮತ್ತು ದೋಚುವವರಿಗೆ ಬಹಳ ಅನುಕೂಲವಾದ ಸ್ಥಿತಿ. ಹಾಗಾಗಿ ಹಣ ಗಳಿಸು ಉಳಿದೆಲ್ಲವೂ ನೀನು ಹೇಳಿದಂತೆ ನಡೆಯುತ್ತದೆ ಎನ್ನುವ ತೀರ್ಮಾನಕ್ಕೆ ಬಂದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ನಮ್ಮ ಕಾರ್ಯಕ್ರಮಗಳೂ ರೂಪಿತವಾಗುತ್ತಿವೆ. ಇದರಿಂದಾಗಿ ಪ್ರಜ್ಞಾವಂತರು ಕಾಲ ಕಾಲಕ್ಕೆ ನೀಡುತ್ತಿರುವ ಸೂಚನೆ, ಎಚ್ಚರಿಕೆ, ತಿಳುವಳಿಕೆಗಳು ಉಪೇಕ್ಷಿಸಲ್ಪಡುತ್ತವೆ ಮತ್ತು ಇತ್ತೀಚಿನ ದಿನಗಳಲ್ಲಿ ಅದನ್ನು ಹತ್ತಿಕ್ಕಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ನಾನು ಮನುಷ್ಯ ಮತ್ತು ಜೀವಸಂಕುಲದ ಉಳಿವಿನ ಬಗ್ಗೆ ಏನು ಮಾಡಬಹುದು ?

ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಒಂದೆಡೆ ಇಟ್ಟು ನಾವು ಆಂತರಿಕವಾಗಿ ಮತ್ತು ಸ್ಥಳೀಯವಾಗಿ ಏನು ಮಾಡಬಹುದು? ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ

ಇದನ್ನೂ ಓದಿ –ಮಾನವ ಪ್ರಾಣಿ ಸಂಘರ್ಷ | ಕಾರ್ಪೋರೇಟ್‌ ಧಣಿಗಳ ಪಾತ್ರ

ಧಗಧಗಿಸುತ್ತಿದೆ  ಪಡುವಣ ಘಟ್ಟ

ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ
ಅಭಿವೃದ್ಧಿಯ ಸಂಕೇತಗಳಾಗಿರುವ  ನೂರಾರು ವಿದ್ಯುತ್ ಮಾರ್ಗಗಳು ದೇಶದ ತುಂಬ ಇವೆ. ಇವುಗಳಿಂದಾಗಿ ಆಗಿರುವ ಪರಿಸರ ನಾಶ ಮತ್ತು ಪ್ರಾಣಿ ಪಕ್ಷಿಗಳ ಬದುಕಿಗೆ ಆಗಿರುವ ಅನಾಹುತ ಎಷ್ಟಿರಬಹುದು? ಹಾಗಾದರೆ ನಮಗೆ ವಿದ್ಯುತ್ ಬೇಡವೇ? ಅಭಿವೃದ್ಧಿ ಬೇಡವೇ? ಕಾಡುಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್‌ ರಕ್ಷಿದಿ.

ನಮ್ಮ ಅಭಿವೃದ್ದಿ ಯೋಜನೆಗಳು ಯಾವ ರೀತಿಯಲ್ಲಿ ರೂಪಿಸಲ್ಪಡುತ್ತವೆ ಎನ್ನುವುದಕ್ಕೆ ನಮ್ಮ ಕರ್ನಾಟಕದ ಎರಡು ಯೋಜನೆಗಳನ್ನು ನೋಡೋಣ. ಅವುಗಳೆಂದರೆ ಶಿವಮೊಗ್ಗ ಜಿಲ್ಲೆಯ ವಾರಾಹಿ ಜಲವಿದ್ಯುತ್ ಯೋಜನೆ ಮತ್ತು ಕರಾವಳಿಯ ಉಡುಪಿ ಜಿಲ್ಲೆಯ ನಂದಿಕೂರು ಉಷ್ಣವಿದ್ಯುತ್ ಸ್ಥಾವರ.

ಇವೆರಡೂ ಯೋಜನೆಗಳು ಸುಮಾರಾಗಿ ಒಂದೇ ಕಾಲದಲ್ಲಿ ಪ್ರಾರಂಭವಾದವು. ವಾರಾಹಿ ಜಲವಿದ್ಯುತ್ ಯೋಜನೆ ಅತ್ಯಂತ “ಪರಿಸರ ಸ್ನೇಹಿ” ಯೋಜನೆಯೆಂದು ಹೆಸರು ಗಳಿಸಿತು. ಇದಕ್ಕೆ ಕಾರಣ ಯೋಜನಾ ಪ್ರದೇಶದಲ್ಲಿ ಹೆಚ್ಚು ಅರಣ್ಯ ನಾಶ ಮಾಡದೆ ಈ ಯೋಜನೆಯನ್ನು ನೆಲದಡಿಯಲ್ಲಿ ಸುರಂಗ ಕೊರೆದು ಮಾಡಿರುವುದು. ಇದು ನಮ್ಮ ಶಿರಾಡಿ ಘಟ್ಟ ಪ್ರದೇಶದ ಮಿನಿ ಹೈಡಲ್ ಯೋಜನೆಗಳಂತೆ  ಭಾಸವಾಗುತ್ತದೆ. ಆದರೆ ಇಲ್ಲೂ ಕೂಡಾ ಅರಣ್ಯ ನಾಶ ಆಗಿರುವುದು ಟ್ರಾನ್ಸ್ ಮಿಷನ್ ಲೈನುಗಳಲ್ಲಿ. ವಾರಾಹಿ ಪ್ರಾರಂಭವಾಗಿ ಕೆಲವು ವರ್ಷಗಳ ಕಾಲ  ಈ ಸಾಗಾಣಿಕಾ ಲೈನುಗಳ ಕೆಲಸವೇ ಆಗದೆ ಅದು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಲಿಲ್ಲ.

ವಾರಾಹಿ

ಆದರೆ ಈಗ ಸಾಗಾಣಿಕೆಗೆ ಮಾರ್ಗ ಇದೆ. ಆದರೆ ವಾರಾಹಿಯ ವಿದ್ಯುತ್ತನ್ನು ಸಾಗಾಣಿಕೆ ಮಾಡಿರುವುದು ಎಲ್ಲಿಗೆ?  ಶಿವಮೊಗ್ಗ ಜಿಲ್ಲೆಯ ಹೊಸನಗರ ಬಳಿಯ ಹುಲಿಕಲ್ಲು ಘಾಟಿಯಲ್ಲಿ ಇರುವ  ವಾರಾಹಿ ಯೋಜನೆಯ ಟ್ರಾನ್ಸ್ ಮಿಷನ್ ಲೈನುಗಳು ಅಲ್ಲೇ ಘಟ್ಟ ಇಳಿದು ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ, ಉಜಿರೆಗಳ ಪಕ್ಕದಲ್ಲಿ ಹಾದು ಚಾರ್ಮಾಡಿ ಘಟ್ಟದ ಮೂಲಕ  ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ತಾಲ್ಲೂಕನ್ನು ಪ್ರವೇಶಿಸಿ ಅಲ್ಲಿಂದ ಹಾಸನ ಜಿಲ್ಲೆ ಬೇಲೂರು ಸಕಲೇಶಪುರ ತಾಲ್ಲೂಕನ್ನು ದಾಟಿ ಹಾಸನದ ರಿಸೀವಿಂಗ್ ಸ್ಟೇಷನ್ ಗೆ ಬರುತ್ತದೆ. ಅಂದರೆ ಎರಡು ಘಟ್ಟ ಪ್ರದೇಶಗಳನ್ನು ಹಾದು ಬರುವುದಲ್ಲದೆ ಉಳಿದ ಪ್ರದೇಶದಲ್ಲಿ ಉದ್ದಕ್ಕೂ ದಟ್ಟ ಮಲೆನಾಡಿನ ಕೃಷಿವಲಯದಲ್ಲೇ ಬರುತ್ತದೆ. ಇದು  ಸುಮಾರು ಇನ್ನೂರೈವತ್ತು ಕಿಲೋ ಮೀಟರ್ ಉದ್ದಕ್ಕೂ  ಸಾಗಿ ಹಾಸನವನ್ನು ತಲುಪುತ್ತದೆ.

ಅಲ್ಲಿ ಕಡಿಯಲಾದ ಮರಗಳ ಸಂಖ್ಯೆ ಲಕ್ಷಾಂತರ. ಅದೂ ಹೈ ಟೆನ್ಷನ್ ಟ್ರಾನ್ಸ್ ಮಿಷನ್ ಲೈನ್ ಹಾಕಿದ ಸ್ಥಳದಲ್ಲಿ ಮತ್ತೆ ಮರಗಳನ್ನು ಬೆಳೆಯುವಂತೆಯೇ ಇಲ್ಲ. ಆ ನೆಲ ಸರ್ಕಾರದ ವಶದಲ್ಲಿ ಇರುತ್ತದೆ.  ಅಲ್ಲಿ  ಹೆಚ್ಚು ಎತ್ತರಕ್ಕೆ ಬೆಳೆಯದ  ಅಲ್ಪಾವಧಿ ಬೆಳೆಗಳನ್ನು ಅದೂ ಕೂಡಾ ಅನಧಿಕೃತವಾಗಿ ಮಾಡುತ್ತಾರೆ. ಆದರೆ ಹೈಟೆನ್ಷನ್ ವಿದ್ಯುತ್ ಸಾಗುವಲ್ಲಿ ಅದರ  ದುಷ್ಪರಿಣಾಮ ಇರುತ್ತದೆ. ಅಲ್ಲದೆ ತಂತಿಗಳು ನಿಗದಿತ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿ ಇದ್ದರೆ ಅದರ ಕೆಳಗೆ, ಮಳೆಗಾಲ ಪ್ರಬಲವಾದ ವಿದ್ಯುತ್ ಶಾಕ್ ಬರುತ್ತದೆ. ಅಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಅಪಾಯ ತಪ್ಪಿದ್ದಲ್ಲ. ಇಂತಹ ಹಲವಾರು ಪ್ರದೇಶಗಳಿವೆ.

ಹೆಬ್ರಿ ಕಡೆಯಿಂದ ಹಾಗೇ ಕಾರ್ಕಳವನ್ನು ದಾಟಿ ಚಾರ್ಮಾಡಿ ಘಾಟಿಯ ಮೂಲಕ ಬೇಲೂರಿನತ್ತ ಪ್ರಯಾಣ ಮಾಡುವವರೆಲ್ಲರೂ ಎತ್ತರದ ಟವರ್ ಗಳ ಮೂಲಕ ಸಾಗಿರುವ ಈ ವಿದ್ಯುತ್  ತಂತಿಗಳನ್ನು ಕಾಣಬಹುದು.

ಅಭಿವೃದ್ಧಿಯ ಸಂಕೇತಗಳಾಗಿರುವ ಇಂತಹ ನೂರಾರು ವಿದ್ಯುತ್ ಮಾರ್ಗಗಳು ದೇಶದ ತುಂಬ ಇವೆ. ಇವುಗಳಿಂದಾಗಿ ಆಗಿರುವ ಪರಿಸರ ನಾಶ ಮತ್ತು ಪ್ರಾಣಿ ಪಕ್ಷಿಗಳ ಬದುಕಿಗೆ ಆಗಿರುವ ಅನಾಹುತ ಎಷ್ಟಿರಬಹುದು? ಪ್ರಕೃತಿಯ ಸೌಂದರ್ಯ ಸವಿಯುತ್ತ ಸಾಗುವಾಗ ಇವೆಲ್ಲ ವಿಚಾರಗಳು ಮರೆಯಾಗಿಬಿಡುತ್ತವೆ.

UPCL

ಹೌದು. ಹಾಗಾದರೆ ನಮಗೆ ವಿದ್ಯುತ್ ಬೇಡವೇ? ಅಭಿವೃದ್ಧಿ ಬೇಡವೇ ? ಆಧುನಿಕ ಬದುಕಿನಲ್ಲಿ ಇವೆಲ್ಲ ಅನಿವಾರ್ಯ. ನಿಮ್ಮಂತವರು ಬರಿಯ  ನೆಗೆಟಿವ್ ವಿಚಾರಗಳನ್ನು ಹೇಳುತ್ತೀರಿ. ನಿಮ್ಮಲ್ಲಿ ಬದಲಿ ಯೋಜನೆಗಳಿಲ್ಲ, ಬರಿಯ ವಿರೋಧ ಮಾತ್ರ ಇತ್ಯಾದಿ ಮಾತುಗಳು ಮತ್ತು  ಪ್ರಶ್ನೆಗಳನ್ನು  ಪರಿಸರದ ಬಗ್ಗೆ ಮಾತನಾಡುವ ಎಲ್ಲರೂ ಎದುರಿಸ ಬೇಕಾಗುತ್ತದೆ.

ಹೌದು. ಆ ಪ್ರಶ್ನೆಗಳಲ್ಲೂ  ಸತ್ಯಾಂಶವಿದೆ. ಯಾಕೆಂದರೆ ನಾವು  ಈಗ ಸಂಪೂರ್ಣವಾಗಿ ಹಿಂದಕ್ಕೆ ಹೋಗಲಾಗದು. ಈ ಆಧುನಿಕ ತಾಂತ್ರಿಕ ಬದುಕು ಅಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿದೆ. ( ನಾನು ಈ ಲೇಖನವನ್ನು ಬರೆಯುತ್ತಿರುವುದೂ ಕಂಪ್ಯೂಟರ್ ನಲ್ಲಿ ಅಲ್ಲವೇ?) ನಾವು ಖಂಡಿತ ಸಮತೋಲನದ ಬದಲಿ ಮಾರ್ಗಗಳನ್ನು ಹುಡುಕಬೇಕು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

ಪರಿಸರ ನಾಶದಲ್ಲಿ ಭೂಸ್ವಾಧೀನದ ಕಬಂಧ ಬಾಹು
ಕೆಲವು ಸಲ ನಮ್ಮ ಯೋಜನೆಗಳನ್ನು ನೋಡಿದರೆ ಇವುಗಳನ್ನು ಪರಿಸರನಾಶಕ್ಕಾಗಿಯೇ ಯೋಜಿಸಿದಂತೆ ಇರುತ್ತವೆ. ನಮ್ಮ ಇಂಜಿನಿಯರ್ ಗಳಾಗಲೀ ಯೋಜನಾ ಅಧಿಕಾರಿಗಳಾಗಲೀ ದಡ್ಡರಲ್ಲ. ಅವರಲ್ಲಿ ಕೆಲವರಿಗಾದರೂ ಇದರ ಹಿಂದಿನ ಹುನ್ನಾರ ತಿಳಿದಿರುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಲಾರರು- ಕಾಡು ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್‌ ರಕ್ಷಿದಿ.

ಸರ್ಕಾರ ಯಾವುದೇ ದೊಡ್ಡ ಯೋಜನೆ ಪ್ರಾರಂಭಿಸುವಾಗ ಅದು ಕಾರ್ಖಾನೆ, ವಿಮಾನ ನಿಲ್ದಾಣ, ಅಣೆಕಟ್ಟು, ರೈಲ್ವೆ, ರಸ್ತೆ, ವಿದ್ಯುತ್ ಯೋಜನೆ, ಗಣಿಗಾರಿಕೆ ಯಾವುದೇ ಇರಲಿ ಮೊದಲ ಹಂತವೇ ಭೂ ಸ್ವಾಧೀನ. ಹಿಂದಿನಿಂದಲೂ ಸರ್ಕಾರ ಭೂಸ್ವಾಧೀನಕ್ಕೆ ಹೊರಟಾಗಲೆಲ್ಲ ನಾಡಿನ‌ ಪ್ರಜ್ಞಾವಂತರು ಪ್ರಶ್ನೆ ಮಾಡಿದ್ದಾರೆ, ವಿರೋಧ ವ್ಯಕ್ತ ಪಡಿಸಿದ್ದಾರೆ. ಚಳುವಳಿ ಹೂಡಿದ್ದಾರೆ.ಇವರಲ್ಲಿ ಪರಿಸರ ಹೋರಾಟಗಾರರಿದ್ದಾರೆ, ನ್ಯಾಯವಾದಿಗಳಿದ್ದಾರೆ, ರೈತ ಸಂಘಟನೆಗಳಿವೆ, ರಾಜಕೀಯ ಪಕ್ಷಗಳ ಒಳಗೇ ಕೆಲವರು ಜನಪರ ಚಿಂತಕರೂ ಇದ್ದಾರೆ. ಕೆಲವು ವರ್ಷಗಳ ಹಿಂದೆ ಇವರೆಲ್ಲರ ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ ಹಲವು ಪರಿಸರ ನಾಶದ ಯೋಜನೆಗಳು ನಿಂತವು. ಉದಾಹರಣೆಗೆ ಕೊಡಗಿನ ಕಂಬದಕಡ ಅಣೆಕಟ್ಟು, ಕುದುರೆ ಮುಖ ಗಣಿಗಾರಿಕೆ, ಗುಂಡ್ಯ ಜಲವಿದ್ಯುತ್ ಯೋಜನೆ ಮುಂತಾದವು. ಅದಲ್ಲದೇ ಹಲವರು ಕೃಷಿಕರು ಭೂಸ್ವಾಧೀನದ ವಿರುದ್ಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ತರುತ್ತಿದ್ದರು.

ನಂತರದ ದಿನಗಳಲ್ಲಿ ಸರ್ಕಾರಗಳು ತಮ್ಮ ಕಾರ್ಯ ವಿಧಾನವನ್ನು ಬದಲಿಸಿಕೊಂಡವು.

ಮೊದಲನೆಯದು, ಒಂದು ಯೋಜನೆ ಪ್ರಾರಂಭ ಮಾಡುವಾಗಲೇ ತಾವೇ ಒಂದು ವಿರೋಧಿ ಚಳುವಳಿಯನ್ನು ಹುಟ್ಟು ಹಾಕುವುದು. ಮತ್ತು ಜನರಲ್ಲಿ ಆಮೂಲಕ ಗೊಂದಲ ಮೂಡಿಸುವುದು. ಇದೇ ಸಂಘಟನೆಯನ್ನು ಎರಡನೇ ಹಂತದಲ್ಲಿ ಕೃಷಿಕರ ಜೊತೆಯಲ್ಲಿ ಮಾತುಕತೆ ಮತ್ತು ಸಂಧಾನಕ್ಕೆ  ಬಳಸಿಕೊಂಡು ನಿಜವಾದ ಹೋರಾಟಗಾರರನ್ನು ಪಕ್ಕಕ್ಕೆ ಸರಿಸುವುದು.

UPCL

ಎರಡನೆಯದು, ಜಮೀನು ವಶಪಡಿಸಿಕೊಳ್ಳುವಾಗ ಹೆಚ್ಚಿನ ಬೆಲೆ ಕೊಡುವುದು. ಇದು ರೈತರ ಪಾಲಿಗೆ ದೊಡ್ಡ ಮೊತ್ತವಾಗಿರುತ್ತದೆ.  ಇದರಿಂದ ರೈತರು ಆಮಿಷಕ್ಕೆ ಒಳಗಾಗುತ್ತಾರೆ, ಆದರೆ ಒಟ್ಟೂ ಯೋಜನೆ ಮೊತ್ತದಲ್ಲಿ ಸಣ್ಣ ಪಾಲಾಗಿರುತ್ತದೆ. ( ಕರಾವಳಿಯ ನಂದಿಕೂರು ವಿದ್ಯುತ್ ಯೋಜನೆಯಲ್ಲಿಯೂ  ಇದೇ ತಂತ್ರ ಅನುಸರಿಸಲಾಯಿತು)

ಮೂರನೆಯದು, ಸುತ್ತಲಿನ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರಿನ‌ ವ್ಯವಸ್ಥೆ ಮುಂತಾದ ಅಭಿವೃದ್ಧಿ ಕೆಲಸಗಳ ಆಸೆ ತೋರಿಸುವುದು. ಈ ಪರಿಸರ ನಾಶದ ಬೃಹತ್ ಯೋಜನೆ ಇಲ್ಲದೆಯೂ ಅಂತಹ ಅಭಿವೃದ್ಧಿ ಯಾಕೆ ಮಾಡುವುದಿಲ್ಲ? ಎನ್ನುವ ಪ್ರಶ್ನೆಯನ್ನು ಮರೆಮಾಚಲಾಗುತ್ತದೆ.

ಉದಾಹರಣೆಗೆ ಎತ್ತಿನ ಹೊಳೆ ಯೋಜನೆಯಿಂದ ಮಲೆನಾಡಿನ ರಸ್ತೆಯನ್ನೇ ಕಾಣದ ನೂರಾರು ಹಳ್ಳಿಗಳಿಗೆ ರಸ್ತೆ ಆಯಿತು. ಎತ್ತಿನಹೊಳೆ ಯೋಜನೆಯಲ್ಲಿ ಇದುವರೆಗೆ ಆಗಿರುವ ಖರ್ಚು ಹದಿನೇಳು ಸಾವಿರ ಕೋಟಿ, ಇದರಲ್ಲಿ ರಸ್ತೆ ನಿರ್ಮಾಣಕ್ಕೆ ಆದ ಖರ್ಚು ಮುನ್ನೂರು ಕೋಟಿಗೂ ಕಡಿಮೆ. ಅಂದರೆ ಬಹಳ ಸಣ್ಣ ಮೊತ್ತ. ಎತ್ತಿನ ಹೊಳೆ ಯೋಜನೆ ಇಲ್ಲದೆಯೂ ಸರ್ಕಾರ ಈ ರಸ್ತೆ ಗಳನ್ನು ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಯಾಕೆಂದರೆ ಇಂತಹ ಅಭಿವೃದ್ಧಿಯ ಆಮಿಷ ತೋರಿಸಿ ಎತ್ತಿನ ಹೊಳೆ ಯೋಜನೆಗೆ ಬರುವ ವಿರೋಧಗಳನ್ನು ನಿವಾರಿಸಿಕೊಳ್ಳುವುದು ಇವರ ಕಾರ್ಯ ಸೂಚಿಗಳಲ್ಲಿ ಒಂದು.

ಇದಲ್ಲದೆ ಇನ್ನೂ ಜನ ಜನ ಹಲವು ‌ನೇರ ಭ್ರಷ್ಟಾಚಾರದ  ವಿಧಾನಗಳಂತೂ ಇದ್ದೇ ಇದೆ.

ಇಂತಹ ಕಾರ್ಯ ವಿಧಾನಗಳಿಂದ ( ಪ್ರತಿಯೊಂದು ಯೋಜನೆಯಲ್ಲಿ ವಿವರಗಳು ಬೇರೆ ಬೇರೆ ಇರಬಹುದು. ಪರಿಣಾಮ ಇದೇ) ಪರಿಸರ ನಾಶದ ಯೋಜನೆಗಳಿಗೆ ಬರುವ ಅಡ್ಡಿಗಳನ್ನು‌ ನಿವಾರಿಸಿಕೊಳ್ಳಲಾಗಿದೆ ಹಾಗೂ ಪರಿಸರವಾದಿಗಳನ್ನು ಖಳರಾಗಿ, ಜನವಿರೋಧಿಗಳಾಗಿ ಬಿಂಬಿಸಲಾಗಿದೆ.

ಯೋಜನೆಗಳನ್ನು ಹೆಚ್ಚು ಹೆಚ್ಚು ದೊಡ್ಡದಾಗಿಸುವುದು ಯಾವಾಗಲೂ ಉದ್ಯಮಿಗಳಿಗೆ ಮತ್ತು ಅವರ ಕೃಪೆಯಲ್ಲಿರುವ ಆಳುವವರಿಗೆ ಅಚ್ಚುಮೆಚ್ಚು. ಇದರಿಂದ ಅವರಿಗೆ ದೊರೆಯುವ ಲಾಭ ಗರಿಷ್ಟ ಮಾತ್ರ ವಲ್ಲ ದೀರ್ಘ ಕಾಲದ್ದೂ ಆಗಿರುತ್ತದೆ. ಉದಾಹರಣೆಗೆ ಈಗ ನಮ್ಮ ಹೆದ್ದಾರಿ ಯೋಜನೆಗಳನ್ನು ನೋಡಿ.

ಕೆಲವು ಸಲ ನಮ್ಮ ಯೋಜನೆಗಳನ್ನು ನೋಡಿದರೆ ಇವುಗಳನ್ನು ಪರಿಸರನಾಶಕ್ಕಾಗಿಯೇ ಯೋಜಿಸಿದಂತೆ ಇರುತ್ತವೆ. ನಮ್ಮ ಇಂಜಿನಿಯರ್ ಗಳಾಗಲೀ ಯೋಜನಾ ಅಧಿಕಾರಿಗಳಾಗಲೀ ದಡ್ಡರಲ್ಲ. ಅವರಲ್ಲಿ ಕೆಲವರಿಗಾದರೂ ಇದರ ಹಿಂದಿನ ಹುನ್ನಾರ ತಿಳಿದಿರುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಲಾರರು. ವಿರೋಧಿಗಳನ್ನು ಹಣಿಯುವುದು ಹೇಗೆ ಎಂದು ಆಳುವವರಿಗೆ ತಿಳಿದಿದೆ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

ಮಾನವ ಪ್ರಾಣಿ ಸಂಘರ್ಷ | ಕಾರ್ಪೋರೇಟ್‌ ಧಣಿಗಳ ಪಾತ್ರ
ಹೋರಾಟ ಮಾಡುವವರನ್ನು ಸುಮ್ಮನಿರಿಸುವುದು, ಬಾಯಿ ಮುಚ್ಚಿಸುವುದು ಹೇಗೆಂದು ಕಾರ್ಪೋರೇಟ್ ಜಗತ್ತಿಗೆ ಚೆನ್ನಾಗಿ ಗೊತ್ತಿದೆ. ಅದು ಹಿಂದೆಂದಿಗಿಂತ ಈಗ ಸುಲಭವಾಗುತ್ತಿದೆ. ಹಣ, ಮಾಧ್ಯಮ, ಅಧಿಕಾರ ಎಲ್ಲವೂ ಅವರ ಕೈಯಲ್ಲೇ ಇದೆ...ಕಾಡು ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಪ್ರಸಾದ್‌ ರಕ್ಷಿದಿ.

ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿರುವಾಗ ಆನೆಗಳು ದೊಡ್ಡ ಪ್ರಮಾಣದಲ್ಲಿ ಜನವಸತಿಗಳತ್ತ ನುಗ್ಗಿಬಂದ ಅಥವಾ ಧಾಳಿಮಾಡಿದ ಘಟನೆಗಳು ನಡೆದಿರಲಿಲ್ಲ. ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಿಂದ ಆನೆದಾರಿ ವಿಭಾಗಿಸಲ್ಪಟ್ಟು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಮತ್ತು ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಉತ್ತರ ಭಾಗದಲ್ಲಿ ನೆಲೆನಿಂತ ಆನೆಗಳು ಅಲ್ಲಲ್ಲಿ ಉಪಟಳ ಪ್ರಾರಂಭಿಸಿದ್ದವು ಮಾತ್ರವಲ್ಲ ಸಂತತಿಯನ್ನೂ ಹೆಚ್ಚಿಸಿಕೊಂಡಿದ್ದವು.

ಉಳಿದ ಕಡೆಗಳಲ್ಲಿ ಮಂಗ, ಕಾಟಿ ಮತ್ತು ಕಾಡುಹಂದಿಗಳು ತೊಂದರೆ ಮಾಡುತ್ತಿದ್ದವು. ಇದು ಘಟ್ಟದ ಮೇಲೆ ಮಾತ್ರವಲ್ಲ ಕರಾವಳಿಯ ಮಲೆನಾಡಿನ ಭಾಗಗಳಲ್ಲಿಯೂ ವ್ಯಾಪಕವಾಗಿ ಇತ್ತು.

ಆನೆ ಧಾಳಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದದ್ದು ಬೆಂಗಳೂರಿನ ಹೊರವಲಯ, ಹಾಗೂ ಮೈಸೂರು ನಗರಕ್ಕೇ ಆನೆಗಳು ನುಗ್ಗಿ ಬಂದಾಗ. ಮೈಸೂರು ನಗರಕ್ಕೆ ನುಗ್ಗಿದ ಆನೆ ಒಬ್ಬನನ್ನು ಸಾಯಿಸಿದಾಗ ನಗರಗಳ ಜನ ಬೆಚ್ಚಿ ಬಿದ್ದಿದ್ದರು. ಮತ್ತು ಮಾಧ್ಯಮಗಳೂ ಅದಕ್ಕೆ ವ್ಯಾಪಕ ಪ್ರಚಾರವನ್ನೂ ಕೊಟ್ಟವು. ಅದರ ಆನಂತರ ಈ ದುರಂತಗಳಿಗೆ ಕಾರಣ ಹುಡುಕಿ ಪರಿಹಾರ ಕಂಡು ಕೊಳ್ಳುವುದಕ್ಕಿಂತ, ಜನರ ಆಕ್ರೋಶವನ್ನು ತಪ್ಪಿಸಿಕೊಳ್ಳಲು ಮನುಷ್ಯನ ಜೀವಕ್ಕೆ ಬೆಲೆ ಕಟ್ಟಿ ಸ್ಥಳದಲ್ಲಿ ಪರಿಹಾರದ ಚೆಕ್ ಕೊಟ್ಟು ಫೋಟೋಕ್ಕೆ ಫೋಸ್ ಕೊಡುವ ಪರಿಪಾಠ ಪ್ರಾರಂಭವಾಯಿತು. ಜೀವ ಹಾನಿ ಆದಂತೆಲ್ಲ ನಿಧಾನವಾಗಿ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಯಿತೇ ಹೊರತು ಸಮಸ್ಯೆಯ ಮೂಲ ಕಾರಣಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಯಾವ ರಾಜಕೀಯ ಪಕ್ಷವೂ ಮಾಡಲಿಲ್ಲ .

ಇದಕ್ಕೆ ಕಾರಣಗಳಿವೆ.

ಇದರ ಹಿಂದೆ ಬಹಳ ದೊಡ್ಡ ರಾಜಕಾರಣವಿದೆ, ಎಲ್ಲಾ ಸಂಪತ್ತು ಇರುವುದು ಮನುಷ್ಯನ ಉಪಭೋಗಕ್ಕಾಗಿ ಎಂದು ಹೇಳುವ ಮನುಷ್ಯನ ಅಪಾರವಾದ ದುರಾಸೆಯಿದೆ. ಆಧುನಿಕತೆಯ ಹೆಸರಿನಲ್ಲಿ ಹುಟ್ಟು ಹಾಕಲಾಗಿರುವ “ಕನ್ಸೂಮರಿಸಂ” ಎಂದು ಕರೆಯಲಾಗುವ ಕೊಳ್ಳುಬಾಕ ಸಂಸ್ಕೃತಿಯಿದೆ. ಇದೆಲ್ಲದರ ಹಿಂದೆ ಇಂದು ಇಡೀ ಪ್ರಪಂಚವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಕಾರ್ಪೋರೇಟ್ ಜಗತ್ತಿದೆ.

ಇದರ ವಿರುದ್ಧ ಹೆಚ್ಚಿನ ರಾಜಕೀಯ ಪಕ್ಷಗಳು ಹೋರಾಟ ಮಾಡಲಾರವು. ಹೋರಾಟ ಮಾಡುವವರನ್ನು ಸುಮ್ಮನಿರಿಸುವುದು, ಬಾಯಿ ಮುಚ್ಚಿಸುವುದು ಹೇಗೆಂದು ಈ ಶಕ್ತಿಗಳಿಗೆ ಹಿಂದೆಂದಿಗಿಂತ ಸುಲಭವಾಗುತ್ತಿದೆ. ಹಣ, ಮಾಧ್ಯಮ, ಅಧಿಕಾರ ಎಲ್ಲವೂ ಅವರ ಕೈಯಲ್ಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಕಡೆಯೂ ಮೊದಲು ಸೂರೆಯಾಗುವುದು ಬಡ ಮತ್ತು ಈಗ ತಾನೇ ಒಂದಷ್ಟು ಚೇತರಿಸಿಕೊಂಡಿರುವ ದೇಶಗಳು. ಭಾರತವೂ ಇದೇ ಗುಂಪಿನಲ್ಲಿ ಇದೆ.

ಈ ಎಲ್ಲ ದೇಶಗಳಲ್ಲಿರುವ ನೀರು, ಅರಣ್ಯ, ಖನಿಜ ಎಲ್ಲವೂ ಈ ಕಾರ್ಪೋರೇಟ್ ಧನಿಗಳ ಅನುಕೂಲಕ್ಕಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇದೆಲ್ಲದರ ಒಟ್ಟು ಮೊತ್ತದ ಫಲಶ್ರುತಿಯಾಗಿ ನಮ್ಮ ಸರ್ಕಾರಗಳ ನೀತಿ ನಿರೂಪಣೆಗಳು ಇರುತ್ತವೆ. ಕೆಲವು ಸಲ ಅವು ಮಂದಗಾಮಿಯಾಗಿರ ಬಹುದು ಅಷ್ಟೇ.. ಆದರೆ ಈಗಂತೂ  ಪ್ರಪಂಚದ ಎಲ್ಲ ಕಡೆಗಳಲ್ಲಿಯೂ ತೀವ್ರಗಾಮಿ ಸರ್ಕಾರಗಳೇ ಮುನ್ನೆಲೆಗೆ ಬರುತ್ತಿವೆ. ಇದನ್ನು ವಿರೋಧಿಸಿದವರನ್ನು ದೇಶದ್ರೋಹಿ, ಜನವಿರೋಧಿ, ಅಭಿವೃದ್ಧಿ ವಿರೋಧಿ ಎಂದು ಹಣೆಪಟ್ಟಿ ಹಚ್ಚಿ ಅದುಮಲಾಗುತ್ತಿದೆ.

ಇಂತಹ ಒಂದು ವ್ಯವಸ್ಥೆಗೆ ಭ್ರಷ್ಟಾಚಾರವೂ ಒಂದು ಅನುಕೂಲದ ಅಸ್ತ್ರ. ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಲೇ ಅದನ್ನು ಸಾಂಸ್ಥೀಕರಣ ಗೊಳಿಸಲಾಗುತ್ತದೆ. ಭ್ರಷ್ಟಾಚಾರದ ಮೂಲಕವೇ ಒಂದು ಅತಿದೊಡ್ಡ “ಅಭಿವೃದ್ಧಿ ಯೋಜನೆ” ಯನ್ನು ಜಾರಿಗೊಳಿಸುವುದು. ಅದರಲ್ಲಿ ಮತ್ತೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಜನರಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಿ ಇಡೀ ಜನ ಸಮೂಹವನ್ನು ಭ್ರಷ್ಟಗೊಳಿಸುತ್ತಾ  ಅವರು ಈ ಯೋಜನೆಗಳ ವಿರುದ್ಧ ನಿಲ್ಲದಂತೆ ಮಾಡುವುದು…ಇವೆಲ್ಲವೂ ಸೇರಿವೆ.

ಇದಕ್ಕೆ ಬಹಳ ಸ್ಪಷ್ಟವಾದ ಉದಾಹರಣೆಯೆಂದರೆ ಎತ್ತಿನ ಹೊಳೆ ನದೀ ತಿರುವು ಯೋಜನೆ. ಸರ್ಕಾರದ ಯಾವುದೇ  ಅಭಿವೃದ್ಧಿ ಯೋಜನೆಗೆ ಮೊದಲನೆಯ ಹಂತವೇ ಭೂಸ್ವಾಧೀನ. ಇದರಲ್ಲಿ ಹಲವು ಬಗೆಯ ಭೂಮಿಗಳಿವೆ. ಸರ್ಕಾರದ ಸ್ವಾಧೀನದಲ್ಲೇ ಇರುವ  ಅರಣ್ಯ ಮತ್ತು ಕಂದಾಯ ಭೂಮಿಗಳು, ಹಾಗೂ ವಿವಿಧ  ಸರ್ಕಾರಿ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಭೂಮಿ, ಕೃಷಿಕರಲ್ಲಿರುವ  ಕಂದಾಯ ಭೂಮಿ.

ಇದಕ್ಕಾಗಿ ಒಂದು ಪ್ರಕ್ರಿಯೆಯನ್ನೇ ಹುಟ್ಟು ಹಾಕಲಾಗಿದೆ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,