Ranjita G H – Peepal Media

ಟೇಲರ್ ಸ್ವಿಫ್ಟ್ ಹಾಗೂ ಶಾರುಖ್ ಖಾನ್ : ತಾರೆಗಳ ರಾಜಕೀಯ ನಿಲುವು,ದ್ವಂದ್ವಗಳು
ಇತ್ತೀಚಿಗೆ ಅಮೆರಿಕದ ಅತಿದೊಡ್ಡ ವೃತ್ತಪತ್ರಿಕೆ/ಮಾಧ್ಯಮ ಸಮೂಹ ಸಂಸ್ಥೆ ಗ್ಯಾನೆಟ್, ಪ್ರಸಿದ್ಧ ಗಾಯಕಿಯರಾದ  ಟೇಲರ್ ಸ್ವಿಫ್ಟ್ ಹಾಗೂ ಬೆಯಾನ್ಸೆಯರ “ಸಂಗೀತ ಮತ್ತು ಸಾಂಸ್ಕೃತಿಕ ಪ್ರಭಾವವನ್ನು” ವರದಿ ಮಾಡಲು ಪ್ರತ್ಯೇಕ ಪತ್ರಕರ್ತರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿತು. ಈ ಸುದ್ಧಿಯನ್ನು ಉಲ್ಲೇಖಿಸಿ ಭಾರತದ ಪತ್ರಕರ್ತೆ ಪ್ರಿಯಾ ರಮಣಿ, – ಮೀ ಟೂ (#MeToo) ಆಂದೋಲನದ ಸಮಯದಲ್ಲಿ, ಮಾಜಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದವರು. ನಂತರ ಮಾಜಿ ಸಚಿವರು ಇವರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಮಣಿಯವರ ಖುಲಾಸೆ ಒಂದೇ ಬಹುಶ ಭಾರತದಲ್ಲಿ  ಅಭಿಯಾನಕ್ಕೆ ಸಿಕ್ಕಿದ  ಗಮನಾರ್ಹ ಗೆಲುವು ! – ಭಾರತದಲ್ಲೂ ಶಾರುಖ್ ಖಾನ್ ರನ್ನು ಈ ರೀತಿಯಲ್ಲಿ ವರದಿ ಮಾಡಲು ಪ್ರತ್ಯೇಕ ಪತ್ರಕರ್ತರನ್ನು ನೇಮಿಸಿಕೊಳ್ಳಬೇಕು ಎಂದು ತಮ್ಮ ಲೇಖನದಲ್ಲಿ ಘೋಷಿಸಿದರು.

ಹಿಂದಿ ಚಿತ್ರರಂಗದಲ್ಲಿ 30 ವರ್ಷಗಳ ಕಾಲ ಶಾರುಖ್ ಖಾನ್ ಎಲ್ಲಾ ರೀತಿಯ ಪ್ರೇಮಿಯಾಗಿ ನಟಿಸಿದ್ದಾರೆ. “ರಾಜ್ ,ನಾಮ್ ತೊ ಸುನಾ ಹೋಗಾ” ದಿಂದ “ವಿಕ್ರಂ ರಾಥೋಡ್, ನಾಮ್ ತೊ ಸುನಾ ಹೋಗಾ ..” ದವರೆಗೆ ತನ್ನ ಸಿನೆಮಾಗಳಲ್ಲಿ  ನಾಯಕಿಯೆದುರು ಸೋಲುವ, ಅವಳೆದುರು ತಲೆ ಬಾಗುವ ,ಕಾಲು ಒತ್ತುವ, ಅವಳೊಂದಿಗೆ  ಸ್ಪರ್ಧೆಗೆ ಬಿದ್ದವರಂತೆ ಅಳುವ  ಹೆಣ್ಮನದ  ಪಾತ್ರಗಳನ್ನೆ ಹೆಚ್ಚು ಮಾಡಿ ಗೆದ್ದ  ನಟ ಬಹುಶ  ಶಾರುಖ್ ಒಬ್ಬನೇ ಇರಬೇಕು.ಮದುವೆಗಳಲ್ಲಿ ನೃತ್ಯ ಮಾಡುವುದರಿಂದ ಹಿಡಿದು, TED ವೇದಿಕೆ ,ಬ್ರಾಡ್ ಪಿಟ್- ಜೆಫ್ ಬಿಜೋಜ್ ಜೊತೆಗೆ ಚರ್ಚೆಯಂತಹ ಹಲವು ಪ್ರಥಮಗಳನ್ನು ಸಾಧಿಸಿ, ವಿದೇಶೀ ಪತ್ರಕರ್ತರ ಎದುರು ಬಾಲಿವುಡ್ ಫ್ಯಾಂಟಸಿಗಳನ್ನು ಅತ್ಯುತ್ತಮವಾಗಿ ಸಮರ್ಥಿಸಿಕೊಂಡು  ವಿಶ್ವ ವೇದಿಕೆಯಲ್ಲಿ ಭಾರತದ ಅನಧಿಕೃತ ಸಾಂಸ್ಕೃತಿಕ ರಾಯಭಾರಿಯಾದ  ಈ ನಟ/ಸಿನಿ ಉದ್ಯಮಿಯ ಯಶಸ್ಸು ಯಾರೂ ಕರುಬುವಂಥದ್ದು,ಬಯಸುವಂಥದ್ದು.

ಸಿನೆಮಾಗಳಲ್ಲಿ ಶಾರುಖ್ -ಕಾಜೋಲ್ ರನ್ನು ಒಟ್ಟಿಗೆ ನೋಡಬೇಕು ಎಂದು ಹೆಚ್ಚಿನ ಅಭಿಮಾನಿಗಳು ಬಯಸಿದರೆ  ಸಂದರ್ಶನಗಳಲ್ಲಿ ಶಾರುಖ್ ನ ಚುರುಕು ಹಾಸ್ಯ ಪ್ರಜ್ಞೆಗೆ ಅನುಷ್ಕಾ  ತಕ್ಕ ಜೊತೆಗಾತಿಯಾಗಿ  ಸ್ಪರ್ಧೆಗೆ ಬಿದ್ದವರಂತೆ ನಗುತ್ತಾರೆ,ನಗಿಸುತ್ತಾರೆ.ಜವಾನ್ ಚಿತ್ರ ಯಶಸ್ಸಿನ ನಂತರದ ಸಂದರ್ಶನದಲ್ಲಿ  ವಿಜಯ್ ಸೇತುಪತಿ-ಶಾರುಖ್ ರ  ಪರಸ್ಪರ ಪ್ರೇಮ ನಿವೇದನೆ, ಮದುವೆಯಾಗಿ ಒಟ್ಟಿಗೆ ಸಿನೆಮಾ ಮಾಡುವ ನಿರ್ಧಾರ ಮಾಡಿದ್ದಂತೂ ಅತ್ಯಂತ ಸ್ವಾಭಾವಿಕವಾಗಿ ,ಆತ್ಮೀಯವಾಗಿತ್ತು .ಜವಾನ್ ಚಲನಚಿತ್ರಕ್ಕಿಂತ ಈ ಸಂದರ್ಶನವು ನನಗೆ ಹೆಚ್ಚು ಸಂತೋಷ ಕೊಟ್ಟುದುದರಿಂದ ಇಲ್ಲಿ ಮರೆಯದೇ ಉಲ್ಲೇಖಿಸಿದ್ದೇನೆ!.  ತನ್ನ ಸಿನೆಮಾಗಳಷ್ಟೇ ಸಂದರ್ಶನಗಳಿಗೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ಯಾರೂ ಜೊತೆಗಿರದಿದ್ದರೂ ರಂಜಿಸಬಲ್ಲ ,ಕೆಲವೊಮ್ಮೆ ಪೋಲಿ ಜೋಕುಗಳನ್ನ ಕೂಡ ನಯವಾಗಿ ಪ್ರೇಕ್ಷಕರಿಗೆ ದಾಟಿಸುವ ಅದ್ಭುತ ಮಾತುಗಾರ. ದಕ್ಷಿಣದ ರಾಜ್ಯಗಳಲ್ಲೂ ಶಾರುಖ್ ಖಾನ್ ರ  ಹೊರತಾಗಿ ಬೇರೆ ಯಾವ ಬಾಲಿವುಡ್ ನಟನಿಗೂ ಇಷ್ಟು ದೊಡ್ಡ ಅಭಿಮಾನಿ ಬಳಗವಿಲ್ಲ ಅನಿಸುತ್ತೆ.

ಶಾರುಖ್ ಖಾನ್ ರ  ತಂದೆ ಸ್ವಾತಂತ್ರ್ಯ ಹೋರಾಟಗಾರರು. ದೆಹಲಿಯ ಮಧ್ಯಮ ವರ್ಗದ ಕುಟುಂಬದ  ಸಾಧಾರಣ ರೂಪದ ಈ ಯುವಕ ಯಾವುದೇ ಗಾಡ್ ಫಾದರ್ ಇಲ್ಲದೆಯೇ  ಹಿಂದಿ ಚಿತ್ರರಂಗ ಪ್ರವೇಶಿಸಿ ಅಂದಿನ ನಾಯಕರು ಮಾಡುತ್ತಿದ್ದ ಸಾಂಪ್ರದಾಯಿಕ ಪಾತ್ರಗಳಿಗೆ ಹೊರತಾದ ಪಾತ್ರಗಳನ್ನು ಮಾಡಿ ಗೆದ್ದವನು. ಅವರ ಧರ್ಮದ ಕಾರಣ,  ದೇಶಪ್ರೇಮವನ್ನು  ಪ್ರಶ್ನೆ ಮಾಡಿದ್ದಕ್ಕಿಂತ ಹಲವು  ಲಕ್ಷ ಹೆಚ್ಚಿನ ಜನ ಅವನನ್ನು ಪ್ರೀತಿಸಿದ್ದಾರೆ. 2012ರಲ್ಲಿ – ಎರಡನೇ ಬಾರಿ –  ಅಮೆರಿಕಾದ ಏರ್ ಪೋರ್ಟಿನಲ್ಲಿ ಶಾರುಖ್ ಖಾನ್ ರನ್ನು  ಗಂಟೆಗಟ್ಟಲೆ ವಿಚಾರಣೆ ಮಾಡಿದ ಪ್ರಸಂಗವು  ಅಮೆರಿಕಾ ರಾಯಭಾರಿ ಕಛೇರಿ ಹಾಗೂ ಅಂದಿನ ವಿದೇಶಾಂಗ ಮಂತ್ರಿ ಎಸ್ .ಎಮ್ ಕೃಷ್ಣರ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿ ಅಮೆರಿಕ ರಾಯಭಾರಿ ಕಛೇರಿ ಕ್ಷಮೆ ಕೇಳಿದ ಘಟನೆಯೂ ನಡೆಯಿತು. ನಂತರದ 10 ವರ್ಷಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ  ಧರ್ಮ ಈ ಹಿಂದಿಗಿಂತ ಹೆಚ್ಚು ಹಸ್ತಕ್ಷೇಪ ಮಾಡತೊಡಗಿದೆ. ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ರಾಜಕೀಯದ ನಾಯಕರು,ಧರ್ಮ ಗುರುಗಳು ಸ್ಟಾರ್ ಗಳಾಗಿದ್ದಾರೆ .ಸಾಮಾಜಿಕ ಮಾಧ್ಯಮಗಳಲ್ಲಿ ಅನ್ಯಧರ್ಮೀಯ ನಟ/ನಟಿಯರನ್ನು “ ಮುಲ್ಲಾ , ತುರ್ಕ, ವಿದೇಶೀ ಏಜೆಂಟ್ .. “ಗಳೆಂದು  ಸಂಭೋಧಿಸುವುದು ಸಹಜವಾಗಿದೆ. ಈ ಭಾಷೆ  ಕೆಲವು ದಿನಗಳ ಹಿಂದೆ ಸಂಸತ್ತನ್ನು ಪ್ರವೇಶಿಸಿ ಆಡಳಿತ ಪಕ್ಷದ ಸಂಸದರು,ಇನ್ನೊಂದು ಪಕ್ಷದ  ಮುಸ್ಲಿಂ ಧರ್ಮಾನುಯಾಯಿ ಸಂಸದರನ್ನು ಇವುಗಳೊಂದಿಗೆ  ಇನ್ನಷ್ಟು ಕಟು ಶಬ್ದಗಳಿಂದ  ನಿಂದಿಸಿದ ಮೊದಲಿಗರಾಗಿ ಪ್ರಸಿದ್ಧರಾಗಿದ್ದಾರೆ.

ಅಮೆರಿಕದ ಏರ್ಪೋರ್ಟುಗಲ್ಲಿ ತಾನು ಹಲವು ಬಾರಿ ಗಂಟೆಗಟ್ಟಲೆ ವಿಚಾರಣೆಗೊಳಗಾದ ಘಟನೆಗಳ ಕುರಿತು  ಲಘು ಹಾಸ್ಯದ ಧಾಟಿಯಲ್ಲೇ “ನನ್ನ ಬಗ್ಗೆ ನನಗೆ ಅಹಂಕಾರ ಶುರುವಾಗಿದೆಯೆಂದೆನಿಸಿದಾಗಲೆಲ್ಲ  ನಾನು ಅಮೆರಿಕಾ ಪ್ರವಾಸ ಕೈಗೊಳ್ಳುತ್ತೇನೆ. ಅಲ್ಲಿ ವಲಸೆ ಅಧಿಕಾರಿಗಳು ನನ್ನನ್ನು ಆ ತಾರಾ ಪ್ರಪಂಚದಿಂದ ಕೆಳ ಬೀಳುವಂತೆ ಒದೆಯುತ್ತಾರೆ“ ಎಂದು ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ನಡೆದ ರಾಜಕೀಯದ ನಂತರ  ಬಾಲಿವುಡ್ ಹಿಂದೆಂದಿಗಿಂತಲೂ ಧ್ರುವೀಕರಣಗೊಂಡಿತು. ಧರ್ಮ -ಸಂಸ್ಕೃತಿ ರಕ್ಷಣೆ ನೆಪದಲ್ಲಿ ಸ್ಟಾರ್ ನಟ -ನಟಿಯರನ್ನು  ಬಹಿಷ್ಕರಿಸುವ  ಅಭಿಯಾನಗಳು ,ಅವರ ತಲೆ ಕಡಿಯಬೇಕೆಂಬ ಕರೆ ಕೊಡುವುದು ಸಾಮಾನ್ಯವಾಯಿತು. ಈಗ ತನ್ನ ಅಹಂಕಾರವನ್ನು ವಿಮರ್ಶಿಸಿಕೊಳ್ಳಲು ಶಾರುಖ್ ಖಾನ್ ಅಥವಾ ಯಾವುದೇ ಸ್ಟಾರ್ ಬೇರೆ ದೇಶದ ಪ್ರವಾಸ ಕೈಗೊಳ್ಳುವ ಅಗತ್ಯವಿಲ್ಲ.

ಈ  ನಡುವೆ ದಕ್ಷಿಣ ಚಿತ್ರರಂಗದ  ಕೆಲವು ಸಿನಿಮಾಗಳು ಗಮನಾರ್ಹ ಯಶಸ್ಸು ಸಾಧಿಸಿದವು. ಹಿಂದಿ ಚಿತ್ರೋದ್ಯಮ  ಕೊರೋನಾ ಪೂರ್ವದ ಯಶಸ್ಸನ್ನು ಇನ್ನು ಕಾಣಲಾರದೇನೋ  ಎನ್ನುವ ಆತಂಕವನ್ನು  ಪಠಾಣ್ ಚಿತ್ರ ಗಳಿಸಿದ ಅಮೋಘ ಯಶಸ್ಸು  ದೂರ ಮಾಡಿತು. ಬಾಲಿವುಡ್ ನ  ಡ್ರಗ್ಸ್ ವಿವಾದ ಹಾಗೂ  ಪಠಾಣ್ ಚಿತ್ರದ ಕೇಸರಿ ಬಟ್ಟೆಯ ಕುರಿತ ಬಹಿಷ್ಕಾರ ಅಭಿಯಾನಗಳಲ್ಲಿ  ಶಾರುಖ್ ಖಾನ್ ರ ವೈಯುಕ್ತಿಕ ಬದುಕಿನ ಮೇಲೆ ನಡೆದ ದಾಳಿ ಬಹಳ ಅತಿರೇಕದ್ದಾಗಿತ್ತು. ಈ ಬಾರಿ  ಜನರೇ  ಅವರ  ಪರ ನಿಂತು ಈ ರಾಜಕೀಯವನ್ನ ವಿರೋಧಿಸಿ ಶಾರುಖ್ ಖಾನ್ -ಹಾಗೂ ಪಠಾಣ್ – ನನ್ನು  ಅಕ್ಷರಶ ಕಾಪಾಡಿದರು. ‘ಪಠಾಣ್’   ಹಾಗೂ ‘ ಜವಾನ್’  ನಿಜಕ್ಕೂ ಅತೀ ಸಾಧಾರಣ ಚಿತ್ರಗಳು.  ವಿವಾದಗಳ  ಫಲವಾಗಿ  ಹುಟ್ಟಿದ ಮಮತೆ  ಜನರ ಮನಸ್ಸಲ್ಲಿ  ಇನ್ನೂ ಸುಪ್ತವಾಗಿ ಹರಿಯುತ್ತಿದ್ದು  ‘ಜವಾನ್’ ಯಶಸ್ಸಿಗೆ ಕಾರಣವಾದ ಹಲವು ಅಂಶಗಳಲ್ಲಿ ಒಂದು.

ಅಮೆರಿಕದ ಯುವಜನತೆಯ ಮೇಲೆ ಟೇಲರ್ ಸ್ವಿಫ್ಟ್ ಹಾಗೂ ಬೆಯಾನ್ಸ್ ಹೊಂದಿರುವ ಪ್ರಭಾವ ಅಗಾಧವಾದುದು. 2018ರಲ್ಲಿ ಮೊದಲ ಬಾರಿಗೆ  ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಯನ್ನು (ನಂತರದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ರನ್ನು) ಬೆಂಬಲಿಸಿದಾಗ ಆಕೆಯ ಅಭಿಮಾನಿ ಬಳಗದ ಹಲವರು ಬೀದಿಗಿಳಿದು ಪ್ರತಿಭಟಿಸಿದರೆ, ಅಭಿಮಾನಿಗಳ ಇನ್ನೊಂದು ಗುಂಪು  ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪಾಪ್ ಸ್ಟಾರ್ ಗಳು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು. ಅಂದಿನಿಂದ ರಾಜಕೀಯದ ಕುರಿತ ಆಕೆಯ ಟ್ವೀಟ್ ಅಥವಾ ಟಿಪ್ಪಣಿಗಳು ದೇಶದ ಪ್ರಮುಖ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುಗಳಾಗಿವೆ. 2019ರ ನಂತರ ಸ್ವಿಫ್ಟ್ ಬರೆದ ಹಾಡುಗಳಲ್ಲಿ LGBTQ ಸಮುದಾಯದ ಪರ ಅವರ  ರಾಜಕೀಯ ಸ್ಪಷ್ಟವಾಗತೊಡಗಿತು. ಆಕೆಯ ‘ಓನ್ಲಿ ದಿ ಯಂಗ್.. ‘ ಗೀತೆಯನ್ನು  2020ರ ಡೆಮಾಕ್ರಟಿಕ್ ಪ್ರಚಾರ ತಂತ್ರದಲ್ಲಿ  ಯುವ ಮತದಾರರನ್ನು  ಮತ ಚಲಾಯಿಸಲು ಪ್ರೋತ್ಸಾಹಿಸುವ ಪ್ರತಿಭಟನಾ ಗೀತೆಯಾಗಿ ಬಳಸಲಾಯಿತು. ಹಲವು ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಆಕೆ ತನ್ನ ರಾಜಕೀಯ ನಿಲುವನ್ನು ವ್ಯಕ್ತಪಡಿಸಿ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದ ಹಲವು ಗಣ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಸೆ.19 ರಾಷ್ಟ್ರೀಯ ಮತದಾರರ ನೋಂದಣಿ ದಿನದಂದು ಟೇಲರ್ ಸ್ವಿಫ್ಟ್ ರ ಒಂದು ಇನ್ಸ್ಟಾ ಗ್ರಾಂ ಬರಹವು ಸರ್ಕಾರೇತರ ಸಂಸ್ಥೆ (NGO)ಯೊಂದಕ್ಕೆ 35,000 ಕ್ಕೂ ಹೆಚ್ಚು ಹೊಸ ಮತದಾರರನ್ನು ನೋಂದಾಯಿಸಲು ಸಹಾಯ ಮಾಡಿತು.ಇದು   ಕಳೆದ ವರ್ಷ(2022)ರ ಇದೇ ದಿನ ನೋಂದಣಿಯಾದುದಕ್ಕಿಂತ  ಸುಮಾರು 25% ಹೆಚ್ಚು. ನೋಂದಣಿಯಲ್ಲಿ  18 ವರ್ಷ ವಯಸ್ಸಿನವರ ಸಂಖ್ಯೆ  115% ಹೆಚ್ಚಳವಾಯಿತು.

ಜವಾನ್ ಚಿತ್ರದಲ್ಲಿ ಕೂಡ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಜನರು ಯೋಚಿಸಬೇಕೆಂದು  ‘ಜಾಗರೂಕ’ ನಾಯಕ ಆಗ್ರಹಿಸುವ ಧೀರ್ಘ ಭಾಷಣವಿದೆ. ಚಿತ್ರದ ಹಲವು  ಸಂಭಾಷಣೆಗಳು, ಕಳೆದ ಕೆಲವು ವರ್ಷಗಳಲ್ಲಿ ಶಾರುಖ್ ಖಾನ್ ರ ವಿರುದ್ಧ ನಡೆದ ವೈಯುಕ್ತಿಕ ದಾಳಿ ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ನಟ ತೋರಿದ ಪ್ರತಿರೋಧ ಎಂಬ ಧಾಟಿಯಲ್ಲಿ ಇದ್ದುದರಿಂದ ಚಲನಚಿತ್ರಕ್ಕೆ ಅತೀವ ಪ್ರಚಾರ ದೊರಕಿದ್ದುದು ಕೂಡ ಚಿತ್ರದ ಯಶಸ್ಸಿಗೆ ಕಾರಣವಾಯಿತು. ಟೇಲರ್ ಸ್ವಿಫ್ಟ್ ತನ್ನ ಹಾಡುಗಳ ಮೂಲಕ ಬಲಪಂಥೀಯ ರಾಜಕಾರಣವನ್ನು ಸ್ಪಷ್ಠವಾಗಿ ವಿರೋಧಿಸುತ್ತಾ ಮುನ್ನಡೆದರೆ, ಚಲನಚಿತ್ರದ ಅಪೂರ್ವ ಯಶಸ್ಸಿನ ನಂತರ ಶಾರುಖ್ ಖಾನ್  ಕೋಮು ದ್ವೇಷ ರಾಜಕಾರಣವನ್ನು ಪ್ರೋತ್ಸಾಹಿಸುತ್ತಾ ಅವರ ತಾರಾ ಪಟ್ಟಕ್ಕೆ ಕುತ್ತು ತಂದ ಪಕ್ಷದ ರಾಜಕಾರಣಿಗಳಿಂದ ಆಹ್ವಾನಿತರಾಗಿ ಸನ್ಮಾನ ಸ್ವೀಕರಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ನಟರು ಸ್ಯಾನಿಟರಿ ಪ್ಯಾಡ್ ಬಗ್ಗೆ ಜಾಗೃತಿ ಮೂಡಿಸುವ ಜಾಹೀರಾತು ಮಾಡುತ್ತಾರೆ, ಪಾನ್ ಮಸಾಲ ಕೂಡ ಮಾರುತ್ತಾರೆ. ಬಾಲಿವುಡ್ ನಿಂದ ವಿಶ್ವ ವೇದಿಕೆಗೆ ಹಾರಿದ ನಟಿಯರು ತಾವು 50 ದಾಟಿದ ಮೇಲೆಯೂ ಚಾಲ್ತಿಯಲ್ಲಿರಲು  ಬೇಕಾಗುವಷ್ಟು ಮಹಿಳಾ ಸಬಲೀಕರಣದ ಕುರಿತು ಮಾತಾಡಿ ಮೇಲ್ ಮಧ್ಯಮ ವರ್ಗದ ಮಹಿಳೆಯರೂ ಕೊಳ್ಳಲು ಹಿಂಜರಿಯುವಷ್ಟು ದುಬಾರಿ ಸೌಂದರ್ಯ ವರ್ಧಕಗಳ ಕಂಪನಿ ಸ್ಥಾಪಿಸುತ್ತಾರೆ. ಆದರೆ ಸಾಮಾಜಿಕ ಮಾಧ್ಯಮ ನಾಗರಿಕರಿಗೆ ಈ ತಾರೆಯರ ದ್ವಂದ್ವ ನಡೆಗಳನ್ನು ಪ್ರಶ್ನಿಸುವ,ತಮ್ಮ ಸಾಮಾಜಿಕ ಜವಾಬ್ದಾರಿ ನೆನಪಿಸುವ ಶಕ್ತಿಯನ್ನು ಕೊಟ್ಟಿದೆ. ಪಾನ್ ಮಸಾಲ ಜಾಹೀರಾತಿನಲ್ಲಿ ತೊಡಗಿದ ನಟರ ವಿರುದ್ಧ ನಡೆದ ಸಾಮಾಜಿಕ ಮಾಧ್ಯಮ ಅಭಿಯಾನದಿಂದಾಗಿ   ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್ ರಂತಹ ನಟರು  ಈ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ರದ್ಧು ಮಾಡುವಂತಾಯಿತು.

5 ವರ್ಷದ ಹಿಂದೆ ಮಾಧ್ಯಮ ಹಾಗೂ ಬಾಲಿವುಡ್ ನಡುವಿನ ಚರ್ಚೆಯೊಂದರಲ್ಲಿ ಪತ್ರಕರ್ತ ಅರ್ನಬ್ ಗೋ ಸ್ವಾಮಿ ಪ್ರಶ್ನೆಗೆ   “ಬಡತನದಲ್ಲಿ ಸೃಜನಶೀಲತೆ ನಲುಗುತ್ತದೆ ,ಮೊದಲು ಶ್ರೀಮಂತರಾಗೋಣ  ಆಮೇಲೆ ತತ್ವಜ್ಞಾನದ ಬಗ್ಗೆ ಮಾತಾಡೋಣ”  ಎಂಬ ಶಾರುಖ್ ಖಾನ್ ರ  ಹರಿತವಾದ ಪ್ರತ್ಯುತ್ತರ  ಬಹಳ ಪ್ರಸಿದ್ಧವಾಗಿತ್ತು. ಶಾರುಖ್ ನ ಮಾತಿಗೆ ವಿರುದ್ಧವಾಗಿ ಅಮಿತಾಭ್ ಸೇರಿದಂತೆ ಹಲವರು ‘ಹಲವು ಪ್ರತಿಭಾವಂತರು  ಬಡತನದಲ್ಲೇ ಅಮೋಘವಾದುದನ್ನ ಸೃಷ್ಟಿಸಿದ್ದಾರೆ’ ಎಂಬ ಆದರ್ಶವಾದಿ ಮಾತುಗಳನ್ನಾಡಿದರು. ಆದರೆ ಶಾರುಖ್ ಖಾನ್ ರ ಜೀವನಾನುಭವದಿಂದ ಹೊರಹೊಮ್ಮಿದ ಮಾತುಗಳೊಂದಿಗೆ ಬಡ -ಮಧ್ಯಮ ವರ್ಗದ ಭಾರತೀಯರು ತಮ್ಮನ್ನು ಗುರುತಿಸಿಕೊಂಡು ಸಮ್ಮತಿಸಿದರು. ಪಠಾಣ್ ಹಾಗೂ ಜವಾನ್ ಎರಡೂ ಸಿನೆಮಾಗಳು ಸಾವಿರ ಕೋಟಿಗೆ ಮೀರಿ ಹಣ ಗಳಿಸಿ ಹಿಂದಿ ಚಿತ್ರರಂಗಕ್ಕೆ ಚೈತನ್ಯವನ್ನು ಮರಳಿ ತಂದಿವೆ, ಈ ಗೆಲುವುಗಳಿಂದಾಗಿ  ಶಾರುಖ್ ಖಾನ್ ರ  ಪ್ರಭಾವವನ್ನು ಈ ಮೊದಲಿಗಿಂತಲೂ ಹಲವು ಪಟ್ಟು ಹೆಚ್ಚಿದೆ. ಇಷ್ಟು ಶ್ರೀಮಂತಿಕೆ ದೊರಕಿದ ನಂತರವಾದರೂ  ಬಾದ್ ಶಹಾ, ಕೋಮು ರಾಜಕೀಯವನ್ನು ವಿರೋಧಿಸುವ – ಅಂತರ ಕಾಯ್ದುಕೊಳ್ಳುವ – ಪ್ರಯತ್ನ ಮಾಡುತ್ತಾರೋ ಎಂದು ನೋಡಬೇಕಿದೆ.

‘ಗುಲಾಬಿ ಚೌಕಟ್ಟಿ’ನಲ್ಲಿಯೇ ಲಿಂಗ ಸಮಾನತೆಯ ಚರ್ಚೆಗೆ ಆಹ್ವಾನಿಸುವ ಬಾರ್ಬಿ..
ಬಾರ್ಬಿ ಈ ವರ್ಷದ ಯಶಸ್ವೀ ಚಿತ್ರವಾಗಿ ಹೊರಹೊಮ್ಮಿದೆ. ಓಪನ್ಹೈಮರ್ ಚಿತ್ರದೊಂದಿಗೆ ಬಿಡುಗಡೆಯಾದ ಚಿತ್ರ ಈ ವರ್ಷದ ಎಲ್ಲಾ ಹಾಲಿವುಡ್ ಚಿತ್ರಗಳನ್ನು – ಹಾಗೂ ಓಪನ್ಹೈಮರ್ ಅನ್ನು- ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮೀರಿಸಿ, ‘ಮಹಿಳಾ ನಿರ್ದೇಶಕರೊಬ್ಬರ ಅತಿ ಹೆಚ್ಚು ಗಳಿಕೆ ದಾಖಲಿಸಿದ ಚಲನಚಿತ್ರ’ ಎಂಬ ಕೀರ್ತಿಯನ್ನು ಗ್ರೇಟಾ ಗೆರ್ವಿಗ್ ರಿಗೆ ತಂದುಕೊಟ್ಟಿದೆ.

ಟ್ರೇಲರ್ ಬಿಡುಗಡೆಯಾದಾಗಲೆ ಚಿತ್ರದ ಉದ್ದೇಶ ಏನಿರಬಹುದೆಂಬ ಅಂದಾಜಾಗಿತ್ತು, ಆದರೆ ಚಿತ್ರದ “ಗುಲಾಬಿ ಚೌಕಟ್ಟು” ಅಷ್ಟೇನೂ ಹಿಡಿಸದ ಪರಿಣಾಮ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದುಕೊಂಡಿದ್ದೆ. ಈ ಹಿಂದೆ ‘ಲಿಟ್ಲ ವುಮೆನ್’ ನಂತಹ ಚಿತ್ರ ಕೊಟ್ಟಿದ್ದ ನಿರ್ದೇಶಕಿ ಈ ಪ್ರಯತ್ನಕ್ಕೆ ಕೈ ಹಾಕಿದ್ದು ಅಚ್ಚರಿ ಎನಿಸಿದರೂ ಸದ್ಯ ಅಮೆರಿಕಾದ -ಎಲ್ಲಾ ವರ್ಗದ -ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಕಂಫರ್ಟ್ ಫುಡ್ ನಂಥ ಸಿನೆಮಾ ಇದಾಗಿರಬಹುದು ಎನಿಸಿತ್ತು. ಹಾಗಾಗಿಯೇ ಚಿತ್ರ ಬಿಡುಗಡೆಯಾದ ನಂತರ ಅದರ ಪರ -ವಿರೋಧವಾಗಿ ನಡೆದ ರಾಜಕೀಯ ಕೂಡ ನನ್ನನ್ನು ಚಿತ್ರ ನೋಡುವಂತೆ ಉತ್ತೇಜಿಸಲಿಲ್ಲ.

ಬಾರ್ಬಿಯ ಜೊತೆಗೇ ಕ್ರಿಸ್ಟೋಫರ್ ನೋಲನ್ ರ ಓಪನ್ಹೈಮರ್ ಕೂಡ ಬಿಡುಗಡೆಯಾಗಿದ್ದರಿಂದ, ಸಹಜವಾಗಿ ಭಾರತದ ಸಿನಿಮಾ ಪ್ರಿಯರ ಮೊದಲ ಆಯ್ಕೆ ಓಪನ್ಹೈಮರ್ ಆಗಿತ್ತು. ಹಾಸ್ಯ, ಮನೋರಂಜನೆ ಹಾಗೂ (ಗ್ರೇಟಾ ನಿರ್ದೇಶನದ ಚಿತ್ರವಾದ್ದರಿಂದ ನಿರ್ದಿಷ್ಟ) ಸಂದೇಶವನ್ನು ನಿರೀಕ್ಷಿಸಬಹುದಾದ ಚಿತ್ರ ಎಂದು ಅದರ ಜಾಹೀರಾತು ಹೇಳಿದರೂ ಬಾರ್ಬಿಯ ಕುರಿತ ಪೂರ್ವಾಗ್ರಹಗಳು ಹಾಗೂ ಗುಲಾಬಿ ಬಣ್ಣ ನೋಡಿ ನಾನು ದೂರ ಉಳಿದಂತೆ ಸಂವೇದನಾಶೀಲ ಚಿತ್ರಗಳನ್ನಷ್ಟೆ ಆದ್ಯತೆಯೆಂದು ಪರಿಗಣಿಸುವ ಪ್ರೇಕ್ಷಕರು ದೂರ ಉಳಿಯುವ ತೀರ್ಮಾನ ಮಾಡಿದ್ದಿರಬಹುದು.

ಬಾರ್ಬಿಯಂತಹ ವಿವಾದಾಸ್ಪದ ಪಾತ್ರದ ಕುರಿತು ಚಲನಚಿತ್ರ ನಿರ್ದೇಶನದ ಪ್ರಯತ್ನ ನಿರ್ದೇಶಕಿಯಾಗಿ ತನ್ನ ವೃತ್ತಿಜೀವನಕ್ಕೆ ದುಬಾರಿಯಾಗಬಹುದು ಎಂಬ ಭಯ ತಮಗೆ ಈ ಮೂರು ವರ್ಷವೂ  ಕಾಡಿದ್ದನ್ನು ನಿರ್ದೇಶಕಿ ಗ್ರೇಟಾ ಗೆರ್ವಿಗ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ನಿರ್ಮಾಪಕಿಯೂ ಆಗಿರುವ ಚಿತ್ರದ ನಾಯಕಿ ಮಾರ್ಗೊಟ್ ರಾಬ್ಬಿ ‘ಬಾರ್ಬಿಯ ಪರಂಪರೆಯನ್ನು ಗೌರವಿಸಲಾಗುವುದು, ಧಕ್ಕೆ ತರುವಂಥ ಯಾವುದೇ ಅಂಶಗಳಿಗೆ ಆಸ್ಪದ ಕೊಡದೇ ಸಮತೋಲನ ಕಾಯ್ದುಕೊಳ್ಳಲಾಗುವುದು’ ಎಂದು ನಿರ್ಮಾತೃ ಕಾಂಪನಿ ಮ್ಯಾಟೆಲ್ ಗೆ ಅಶ್ವಾಸನೆ ನೀಡಿ ಅನುಮತಿ ಪಡೆದಿದ್ದೆ ಎಂದು ಹೇಳಿದರು – ಗ್ರೇಟಾ ಗೇರ್ವಿಗ್ ರಿಗೆ ತಮ್ಮ ಹಿಂದಿನ ಚಿತ್ರಗಳನ್ನು ನಿರ್ದೇಶಿಸುವಾಗ ಇದ್ದಷ್ಟು ಸ್ವಾತಂತ್ರ ಇಲ್ಲಿ ದೊರಕಿಲ್ಲದೇ ಇರುವುದು ಸ್ಪಷ್ಟವಾಗಿದೆ – ಬಾರ್ಬಿಯ ಕುರಿತ ಈ ಚಿತ್ರದ ಮೊದಲ ಪ್ರಸ್ತಾಪವೂ ಮಾರ್ಗೊಟ್ ಅವರದ್ದೇ. ಈ ಸಂದರ್ಶನ ನೋಡಿದ ನಂತರವಷ್ಟೇ ನಾನು ಚಲನಚಿತ್ರ ನೋಡಲು ತೀರ್ಮಾನಿಸಿದೆ.

ಬಾರ್ಬಿಯರ ಕಾಲ್ಪನಿಕ ಜಗತ್ತಿನ ಕೇಂದ್ರ ಬಾರ್ಬಿಯಷ್ಟೇ. ಆಕೆಯೇ ಅಲ್ಲಿ ಎಲ್ಲವೂ – ಅಧ್ಯಕ್ಷೆ, ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ, ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕ ಮಹಿಳೆ. ಅವಳ ಗೆಳೆಯ ಕೆನ್ ಅಲ್ಲಿ ಬರೀ ಒಂದು ಅಲಂಕಾರಿಕ ಪಾತ್ರವಷ್ಟೆ, ಅಲ್ಲಿಗೆ ಬಾರ್ಬಿಯ ಈ ಜಗತ್ತಿನಲ್ಲಿ ಕೂಡ ಲಿಂಗ ಸಮಾನತೆ ಇಲ್ಲ ಎಂದೇ ನಿರ್ದೇಶಕಿ ಹೇಳಿದ್ದಾರೆ. ನಿಜ ಜಗತ್ತಿನಲ್ಲಿ ತನ್ನ ಪ್ರತಿರೂಪದೊಂದಿಗೆ ಸಂಪರ್ಕದಲ್ಲಿದ್ದು, ಅದುವರೆಗೆ ತನಗೆ ಅಪರಿಚಿತವಾಗಿದ್ದ ಸವಾಲುಗಳನ್ನು ಸಾಂಕ್ರಾಮಿಕವಾಗಿ ಹಬ್ಬಿಸಿದ ವ್ಯಕ್ತಿಯನ್ನು ಹುಡುಕಿ ಪರಿಹಾರ ಕಂಡುಕೊಳ್ಳಲು ‘ಸ್ಟೀರಿಯೋಟೈಪ್ ಬಾರ್ಬಿ’ ವಾಸ್ತವ ಜಗತ್ತಿಗೆ ಪ್ರಯಾಣಿಸುತ್ತಾಳೆ, ಗೆಳೆಯ ಕೆನ್ ಕೂಡ ಹಿಂಬಾಲಿಸುತ್ತಾನೆ.

ವಾಸ್ತವ ಜಗತ್ತಿನಲ್ಲಿ ಪಿತೃಪ್ರಧಾನ ವ್ಯವಸ್ಥೆಯಿಂದಾಗಿ ತನಗಿರುವ ಪ್ರಾಮುಖ್ಯತೆಯನ್ನು ಕೆನ್ ಕಂಡುಕೊಂಡರೆ, ಮಹಿಳೆಯರನ್ನು ಸಿದ್ಧ ನಿಯಮಗಳಡಿಯಲ್ಲಿ ಬಂಧಿಸಿ ಸಮಾನತೆಯನ್ನು ನಿರಾಕರಿಸಿರುವ ವ್ಯವಸ್ಥೆಯನ್ನು ಬಾರ್ಬಿ ಕಾಣುತ್ತಾಳೆ. ಬಾರ್ಬಿಯನ್ನು ವಾಪಸು ಪೆಟ್ಟಿಗೆಯಲ್ಲಿ ಬಂಧಿಸಿಡಲು ಮ್ಯಾಟೆಲ್ ಸಂಸ್ಥೆಯ ನಿರ್ದೇಶಕ ಹಾಗೂ ಬಿಳಿ ಪುರುಷರ ತಂಡ ಮಾಡುವ ವಿವಿಧ ಹಾಸ್ಯಮಯ ಪ್ರಯತ್ನಗಳ ರೂಪಕ- ಸಂಭಾಷಣೆಯ ಮೂಲಕ ನಿರ್ದೇಶಕಿ ಈ ವ್ಯವಸ್ಥೆಯನ್ನು ವಿವರಿಸಿದ್ದಾರೆ.

ವಾಸ್ತವ ಜಗತ್ತಿಗೆ ತನ್ನ ಪರಿಚಯಿಸುವಿಕೆಯಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿ ಅಲ್ಲೀಗ ಸಮಾನತೆ ನೆಲೆಸಿದೆ ಎಂಬ ಭ್ರಮೆಯಲ್ಲಿದ್ದ ಬಾರ್ಬಿ ತನಗೆ ಗೌರವ- ಅಭಿನಂದನೆ ಸಲ್ಲಿಸಲು ಮಹಿಳೆಯರು ಕಾದಿದ್ದಾರೆ ಎಂಬ ಸಂಭ್ರಮದಲ್ಲಿ ಹರೆಯದ ಹುಡುಗಿಯರ ಗುಂಪನ್ನು ಸಮೀಪಿಸುತ್ತಾಳೆ.  ಆದರೆ ತನ್ನನ್ನು ಆದರ್ಶವಾಗಿ ನೋಡದೆ ಖಳನಾಯಕಿಯಾಗಿ,ಅಮೇರಿಕನ್ ಕೊಳ್ಳುಬಾಕತನದ ಪ್ರತೀಕ ಎಂದು ನಿಂದಿಸುವ 16 ವರ್ಷದ ಹುಡುಗಿಯ ವಿವರಣೆಯಿಂದ ‘ನಿಜ ಜಗತ್ತು ನಿರ್ದಿಷ್ಟ ಸೌಂದರ್ಯ ಮಾನದಂಡಗಳಲ್ಲಿ ಮಹಿಳೆಯರನ್ನು ಬಂಧಿಸಲು ತನ್ನನ್ನು ಬಳಸಿಕೊಂಡಿದೆ’ ಎಂಬ ಸತ್ಯವನ್ನು ಅರಿಯುತ್ತಾಳೆ.‌

ಮ್ಯಾಟೆಲ್ ಕಂಪನಿಯ ಸಂಸ್ಥಾಪಕಿ ರುತ್ ಹ್ಯಾಂಡ್ಲರ್, ತಾನು ಬಾರ್ಬಿಯನ್ನು ಪರಿಚಯಿಸಿ ಜಗತ್ತನ್ನು ಬದಲಾಯಿಸಬೇಕೆಂಬ ಉದ್ದೇಶದಿಂದ ವ್ಯವಹಾರ ಆರಂಭಿಸಿರಲಿಲ್ಲ, ಆದರೆ ವ್ಯವಹಾರದಲ್ಲಿ ಮಹಿಳೆಯರ ಸುಳಿವೇ ಇರದ ಅಂದಿನ ಸಮಯದಲ್ಲಿ ವ್ಯವಹಾರಸ್ಥ ಮಹಿಳೆಯಾಗಿ ನನ್ನ ಜಗತ್ತನ್ನಷ್ಟೇ ಬದಲಾಯಿಸಿಕೊಳ್ಳಲು, ಅಲ್ಲಿ ನನ್ನ ಆಸ್ತಿತ್ವವನ್ನು ಸಹಜವಾಗಿಸಲು ಮಾಡಬೇಕಾದ ಪ್ರಯತ್ನಗಳನ್ನ ನಾನು ಮಾಡಿದೆ (ಆಕರ :ಹಳೆಯ ಟಿವಿ ಸಂದರ್ಶನ) ಎಂದಿದ್ದರು. ಮಗುವಿನ ರೂಪದಲ್ಲಷ್ಟೇ ಲಭ್ಯವಿದ್ದ ಆಟಿಕೆಗಳಿಗೆ ತಾಯಿಯ ಪಾತ್ರವಹಿಸಿ ಆಡುತ್ತಿದ್ದ ಚಿಕ್ಕ ಹುಡುಗಿಯರ ಆಟಿಕೆಯ ಜಗತ್ತಿಗೆ  ಪ್ರಮಾಣಬದ್ಧ ದೇಹದ ಬಾರ್ಬಿಯ ಪರಿಚಯಸಿದ್ದನ್ನು ರುತ್ ಹ್ಯಾಂಡ್ಲರ್ ಪಾತ್ರಧಾರಿ ‘ಮಗುವೊಂದಕ್ಕೆ ಎಂದೆಂದಿಗೂ ಎಲ್ಲಾ ಸಮಯದಲ್ಲೂ ತಾಯಿಯಾಗಿರುವುದು ಸುಲಭವೇನಲ್ಲ, ಬೇಕಿದ್ದರೆ ನಿಮ್ಮ ತಾಯಂದಿರನ್ನ ಕೇಳಿ’ ಎಂದು ಚಿತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ. ನಂತರದ ಸಮಯದ ಸ್ತ್ರೀವಾದದ ಹೊಸ ಅಲೆಯು ಬಾರ್ಬಿ ಪ್ರತಿನಿಧಿಸುವ ಅಸಹಜ ಸೌಂದರ್ಯದ ನಿಯಮಗಳನ್ನು ಖಂಡಿಸುತ್ತಾ, ಋಣಾತ್ಮಕ ಅಭಿಪ್ರಾಯವನ್ನು ಮುನ್ನೆಲೆಗೆ ತಂದಿತು.

ಬಾಬ್ಬಿ ಹಾಗೂ ಭಾರತದ ಮಕ್ಕಳು…

ಬಾರ್ಬಿಯನ್ನು ಕಳೆದ ಅರವತ್ನಾಲ್ಕು ವರ್ಷಗಳಲ್ಲಿ ಮಹಿಳೆಯರ ಪ್ರಯಾಣದ ಪ್ರತೀಕವಾಗಿಯೂ ಕಾಣಬಹುದು. 1968ರಲ್ಲಿ ಸಮಾನ ನಾಗರಿಕ ಹಕ್ಕುಗಳನ್ನು ಗೌರವಿಸುತ್ತಾ ಮೊದಲ ಕಪ್ಪು ಬಾರ್ಬಿಯಾಗಿ ಕ್ರಿಸ್ಟಿ; 1980 ರ ದಶಕದಲ್ಲಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಹೆಚ್ಚಿದ ಭಾಗೀದಾರಿಕೆಯನ್ನು ಪ್ರತಿಬಿಂಬಿಸುವ ಸಿ. ಇ. ಓ ಬಾರ್ಬಿ; 1992ರಿಂದ ದೇಶದ ಅಧ್ಯಕ್ಷ ಪದವಿಗಾಗಿ ಸ್ಪರ್ಧಿಸುತ್ತಿರುವ ಬಾರ್ಬಿಯಾಗಿ ನಾವೆಲ್ಲರೂ ಬಯಸುವ ಬದಲಾವಣೆಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುತ್ತ ಮಹಿಳೆಯರ ಸಮಕಾಲೀನ ದೃಷ್ಟಿಕೋನಗಳನ್ನು ದಾಖಲಿಸುತ್ತಿದ್ದಾಳೆ ಎಂಬುದು ಮ್ಯಾಟೆಲ್ ನ ಸಮರ್ಥನೆ.

ವಾಸ್ತವ ಜಗತ್ತಿನ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕಡೆಗಣಿಸಿಲ್ಪಟ್ಟು ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು, ಬಾರ್ಬಿಯರ ಮಾತೃಪ್ರಧಾನ ಕಾಲ್ಪನಿಕ ಜಗತ್ತಿನಲ್ಲಿ ನಗಣ್ಯವಾಗಿರುವ “ಐ ಆಮ್ ಜಸ್ಟ್ ಕೆನ್( ನಾನು ಬರೀ ಕೆನ್..)..” ಎಂದು ಶೋಕಿಸುವ ಕೆನ್ ಪಾತ್ರದ ಮೂಲಕ ನಿರ್ದೇಶಕಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಬಾರ್ಬಿಗಿಂತ ಮುಂಚೆಯೇ ಕಾಲ್ಪನಿಕ ಜಗತ್ತಿಗೆ ಮರಳಿ ಅಲ್ಲೀಗ ಪಿತೃ ಪ್ರಧಾನ ವ್ಯವಸ್ಥೆಯನ್ನು ಸ್ಥಾಪಿಸಿರುವ ಕೆನ್ ನನ್ನು ಹುರಿದುಂಬಿಸಲು ನರ್ತಿಸುತ್ತಿರುವ ಮಹಿಳೆಯರ ತಂಡವನ್ನು ನೋಡಿ “ಅಯ್ಯೋ ಈ ಬಾರ್ಬಿಯರು ಈ ಮೊದಲು ಸುಪ್ರೀಂ ಕೋರ್ಟ್ ನ್ಯಾಯಾಧೀಶೆಯರಾಗಿದ್ದರಲ್ಲವೇ” ಎಂಬ ಸಂಭಾಷಣೆಯು ಸದ್ಯದ ಅಮೆರಿಕದ ರಾಜಕೀಯ ಪರಿಸ್ಥಿತಿಯ ಕುರಿತ ವಿಡಂಬನೆಯೇ ಆಗಿದೆ. ಯಾವುದೇ ಒಂದು ಲಿಂಗಕ್ಕೆ ಸಿಗುವ ಅತೀ ಪ್ರಾಮುಖ್ಯತೆಯು ಸಮಾನತೆಗೆ ವಿರುದ್ಧವಾದುದು ಎಂದು ನಿರ್ದೇಶಕಿ ತನಗಿರುವ ಮಿತಿಗಳನ್ನು ಮೀರದೆ ಹೇಳಲು ಪ್ರಯತ್ನಿಸಿದ್ದಾರೆ ಎಂಬುದು ನನ್ನ ಅನಿಸಿಕೆ.

ಇದು ಅಮೆರಿಕಾದ ಮಹಿಳೆಯರು ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮವಾಗಿ ಕಾನೂನಾತ್ಮಕ ಗರ್ಭಪಾತದ ಹಕ್ಕುಗಳನ್ನು ಕಳೆದುಕೊಂಡ ವರ್ಷ. ಬಾರ್ಬಿ ಚಿತ್ರದ ವಿರುದ್ಧ ಬಲಪಂಥೀಯ ರಾಜಕಾರಣಿ – ಮಾಧ್ಯಮಗಳ ಅಭಿಯಾನವೂ ತೀವ್ರವಾಗಿದ್ದು, ಹಲವು ರಾಜಕಾರಣಿಗಳು ‘ಇದು ಕೆನ್ ಗಳ ಮೇಲೆ ದಾಳಿ,’ ‘ಕಮ್ಯೂನಿಸ್ಟ್ ಬಾರ್ಬಿ’, ಎಂದು ಪ್ರತಿಕ್ರಿಯಿಸಿದರು. ಸಹಜವಾಗಿಯೇ ಬಲಪಂಥೀಯ ರಾಜಕಾರಣಕ್ಕೆ ಪ್ರತಿರೋಧ ತೋರುವ ಸಲುವಾಗಿ ದಾಖಲೆ ಸಂಖ್ಯೆಯ – ಮಹಿಳಾ – ಪ್ರೇಕ್ಷಕರು ವೀಕ್ಷಿಸಿದ್ದಾರೆ. ಫಿನ್ಲೆಂಡಿನಲ್ಲಿ ಬಾರ್ಬೀ ವಯಸ್ಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ ವೀಕ್ಷಿಸಲು ಇಚ್ಛಿಸಿದ ಮಕ್ಕಳ ವಯಸ್ಸಿನ ದಾಖಲೆಯನ್ನು ತೋರಿಸಬೇಕಾಗುವ ಸರ್ಕಾರದ ನಿರ್ಬಂಧ ಅತಿರೇಕವೆಂದು ಪ್ರತಿಭಟಿಸುತ್ತ ಹೆಚ್ಚು ಜನ ತಮ್ಮ ಮಕ್ಕಳನ್ನೂ ಚಿತ್ರ ವೀಕ್ಷಣೆಗೆ ಕಳುಹಿಸಿದ ಘಟನೆ ನಡೆದಿದೆ( ಬಾರ್ಬಿ 13 ವರ್ಷ ಮೇಲ್ಪಟ್ಟವರಿಗಾಗಿ ಎಂದು ಚಿತ್ರಕ್ಕೆ ದೊರಕಿರುವ PG -13 ರೇಟಿಂಗ್ ಸ್ಪಷ್ಟಪಡಿಸುತ್ತಿದೆ).

ಬಾರ್ಬಿ ಹಾಗೂ ಒಪೆನ್ಹೆಮೇರ್ ಚಿತ್ರಗಳ ಗೆಲುವು ನಟ-ನಟಿಯರು ಹಾಗೂ ಚಿತ್ರರಂಗದ ಕಾರ್ಮಿಕರ ಒಕ್ಕೂಟದ ಮುಷ್ಕರದಿಂದ ಬಾಧಿತವಾದ ಹಾಲಿವುಡ್ ಗೆ ಅಗತ್ಯವಿತ್ತು. ಎರಡೂ ಚಿತ್ರಗಳನ್ನು ಗೆಲ್ಲಿಸಬೇಕೆಂಬ ಉದ್ದೇಶದಿಂದ ಸೃಷ್ಟಿಸಲಾದ “ಬಾರ್ಬೆನ್ಹೈಮರ್” ಎಂಬ ಪ್ರಚಾರ ತಂತ್ರ, ಇತಿಹಾಸದ ಘೋರ ಘಟನೆಗೆ ಬಲಿಪಶುವಾದ ಜನರ ಕುರಿತು ಎಳ್ಳಷ್ಟೂ ಸಹಾನುಭೂತಿ ಇಲ್ಲದ್ದು ಎಂದು ಅಣುಬಾಂಬ್ ದಾಳಿಗೆ ಗುರಿಯಾದ ಜಪಾನ್ ನಾಗರೀಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಎರಡೂ ಚಿತ್ರಗಳನ್ನು ಜಪಾನ್ ನಲ್ಲಿ ನಿಷೇಧಿಸಲಾಗಿಲ್ಲ.

ಬಾರ್ಬಿ ಅಮೆರಿಕನ್ ಪರಿಸರಕ್ಕೆ ಹತ್ತಿರವಾದ ವಿಡಂಬನತ್ಮಾಕ ಚಿತ್ರವಾದರೂ ಪಿತೃಪ್ರಧಾನ ವ್ಯವಸ್ಥೆ ಜಗತ್ತಿನೆಲ್ಲೆಡೆ ಹರಡಿರುವ ವಾಸ್ತವ. ಆದ್ದರಿಂದ ಭಾರತ ಅಥವಾ ಜಗತ್ತಿನ ಇತರೆ ದೇಶಗಳ ಮಹಿಳೆಯರೂ ಚಿತ್ರದ ಪಾತ್ರಗಳು ಚರ್ಚಿಸುವ ವಿಷಯಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಬಲ್ಲರು.ಈ ಬರಹದ ಶೀರ್ಷಿಕೆ ಸಂದರ್ಶನವೊಂದರಲ್ಲಿನ ಗ್ರೇಟ ಗೆರ್ವಿಗ್ ರ  ಅಭಿಪ್ರಾಯದಿಂದ ಪ್ರಭಾವಿತವಾಗಿದೆ.

– ರಂಜಿತಾ ಜಿ ಎಚ್

ಹವಾಮಾನ ವೈಪರೀತ್ಯ ಸಂಬಂಧಿತ ವ್ಯಾಜ್ಯಗಳು, ಕಟಕಟೆಯಲ್ಲಿ ಸರ್ಕಾರಗಳು
ಫಿನ್ಲೆಂಡ್ ಸೇರಿದಂತೆ ಉತ್ತರ ಯೂರೋಪಿನ ದೇಶಗಳ ನಾಗರೀಕರು ತಮ್ಮ ಎರಡು ತಿಂಗಳ ಬೇಸಿಗೆಯನ್ನು, 30 ದಿನಗಳ ರಜೆಯನ್ನು ಅತ್ಯಮೂಲ್ಯವೆಂದು ಪರಿಗಣಿಸುತ್ತಾರೆ. ಸರ್ಕಾರೀ ಕಛೇರಿ ಸಿಬ್ಬಂದಿಯೂ ರಜೆಯಲ್ಲಿರುತ್ತಾರೆಯಾದ್ದರಿಂದ ಈ ಅವಧಿಯಲ್ಲಿ ಸರ್ಕಾರವೇ ಸ್ತಬ್ಧವಾಗಿದೆಯೇನೋ ಅನಿಸುತ್ತದೆ. ಸದ್ಯ ಫಿನ್ಲೆಂಡ್ನ ಹೊಸ ಪ್ರಧಾನಿ ಕೂಡ ಬೇಸಿಗೆ ರಜೆಯ ಸುಖ ಅನುಭವಿಸುತ್ತಿದ್ದಾರೆ ಹಾಗೂ ಮೂವರು ಮಂತ್ರಿಗಳು ಸರದಿಯಲ್ಲಿ ಈ ಅವಧಿಗೆ ಹಂಗಾಮಿ ಪ್ರಧಾನಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೇಸಿಗೆಯ ಪ್ರವಾಸ ಭತ್ಯೆಯ ಕೊಡಬೇಕೆಂಬ ಕಾನೂನು ಫಿನ್ಲೆಂಡ್ ನಲ್ಲಿಯಂತೂ ಇದೆ, – ಇತರೆ ಯೂರೋಪಿನ ದೇಶಗಳಲ್ಲೂ ಇರಬಹುದು – ಆದ್ದರಿಂದ ಹತ್ತಿರದ ದಕ್ಷಿಣ ಯೂರೋಪಿನ ದೇಶಗಳು ಈ ಅವಧಿಯಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತವೆ.

ಬೇಸಿಗೆಯಲ್ಲಿ ಹೆಚ್ಚುವ ವಾಹನ/ವಿಮಾನ ಪ್ರಯಾಣಗಳೂ ಸಹ ಹವಾಮಾನ ವೈಪರೀತ್ಯಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತವೆಯಾದರೂ ಉತ್ತರ ಯೂರೋಪ್ ನ ಕಡು ಚಳಿಗಾಲದ ಅನುಭವವಾಗಿರುವುದರಿಂದ ಕ್ಷಣಿಕ ಬೇಸಿಗೆಯ ಆನಂದ ಅನುಭವಿಸಲು ಇತರೆ ದೇಶಗಳಿಗೆ ಸೈಕಲ್/ಕಾಲ್ನಡಿಗೆ/ವ್ಯಾನು/ವಿಮಾನ ಪ್ರಯಾಣ ಮಾಡುವ ಉತ್ತರ ಯರೋಪ್ ದೇಶವಾಸಿಗಳ ಈ ನಡೆಯನ್ನು ಖಂಡಿಸುವುದೇ ಬೇಡವೇ ಎಂದು ನಾನೂ ಗೊಂದಲಕ್ಕೆ ಬಿದ್ದಿದ್ದೇನೆ.

ಗ್ರೀಸ್ ಕಾಡ್ಗಿಚ್ಚಿನಿಂದ ರಕ್ಷಿಸಲ್ಪಟ್ಟು ಸ್ಟೇಡಿಯಂಗಳಲ್ಲಿ ಆಶ್ರಯ ಪಡೆದಿರುವ ಪ್ರವಾಸಿಗಳು

ಆದರೆ ಹವಾಮಾನ ವೈಪರೀತ್ಯದಿಂದಾಗಿ ಯೂರೋಪ್ ಅದರಲ್ಲೂ ದಕ್ಷಿಣ ಯೂರೋಪಿನ ಹಲವು ದೇಶಗಳು ಇತ್ತೀಚಿನ ವರ್ಷಗಳ ಬೇಸಿಗೆಯಲ್ಲಿ ಉರಿಯುವ ಒಲೆಗಳಂತಾಗುತ್ತಿವೆ. ಈ ವರ್ಷ ಗ್ರೀಸ್ ನ ಪ್ರಸಿದ್ಧ ಪ್ರವಾಸಿ ತಾಣ ಅಥೆನ್ಸ್ ಕಳೆದ 50 ವರ್ಷಗಳಲ್ಲಿ ಅತೀ ಹೆಚ್ಚು ತಾಪಮಾನವನ್ನು ದಾಖಲಿಸಿತು. ಕ್ರಿ .ಪೂ 5ನೇ ಶತಮಾನದ ಐತಿಹಾಸಿಕ ಸ್ಮಾರಕ ಆಕ್ರೊಪೊಲಿಸ್ ಹಾಗೂ ಇನ್ನಿತರ ಪುರಾತತ್ವ ಸ್ಥಳಗಳನ್ನು ಕುದಿ ಬೇಸಿಗೆಯ ಕಾರಣದಿಂದಾಗಿ ಮುಚ್ಚಬೇಕಾಯಿತು. ಅಥೆನ್ಸ್ ಸಮೀಪದ ರಹೋಡ್ಸ್ ದ್ವೀಪದಲ್ಲಿ ಸಂಭವಿಸಿದ ಮಹಾ ಕಾಡ್ಗಿಚ್ಚಿನ ಬಗ್ಗೆ ಸಾಕಷ್ಟು ಸುದ್ದಿಯಾಗಿದೆ. 700ಕ್ಕೂ ಹೆಚ್ಚು ಫಿನ್ಲೆಂಡಿಗರು ಸೇರಿದಂತೆ ಹಲವು ಯೂರೋಪಿನ ಪ್ರವಾಸಿಗಳು ಕಾಡ್ಗಿಚ್ಚಿಗೆ ಸಿಲುಕದಂತೆ ರಕ್ಷಿಸಿ ಅವರನ್ನು ವಾಪಸು ಕಳಿಸಿದ ಗ್ರೀಸ್ ಜನತೆ ಹಾಗೂ ಸರ್ಕಾರದ ಪ್ರಯತ್ನಕ್ಕೆ ಆಯಾ ದೇಶಗಳು ಅಭಿನಂದನೆ ಸಲ್ಲಿಸಿವೆ, ಕಾಡ್ಗಿಚ್ಚು ನಂದಿಸಲು ತಮ್ಮ ಸಿಬ್ಬಂದಿಗಳನ್ನೂ ಕಳುಹಿಸಿವೆ.ಸುಮಾರು 30000 ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ನಿರ್ಮಿಸಿದ, ಗ್ರೀಸ್ ನ ಇತಿಹಾಸದಲ್ಲೇ ಅತಿ ಗಂಭೀರ ಕಾಡ್ಗಿಚ್ಚು ಇದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಹವಾಮಾನ ವೈಪರೀತ್ಯಗಳ ‘ಹಾಟ್ ಸ್ಪಾಟ್’ ಎಂದೇ ಕರೆಯಲಾಗುವ ಮೆಡಿಟರೇನಿಯನ್ ಸಮುದ್ರ ತೀರದ ಈ ದಕ್ಷಿಣ ಯೂರೋಪಿನ ದೇಶಗಳಲ್ಲಿ ಈಗ ಮಕ್ಕಳನ್ನು ,ವೃದ್ಧರನ್ನು ಬೇಸಿಗೆಯಿಂದ ರಕ್ಷಿಸುವುದೇ ಮನೆಯ ಇತರೆ ಸದಸ್ಯರಿಗೆ ಅತೀ ಕಷ್ಟದ ಕೆಲಸ. ಮೇ -ಜೂನ್ ಅವಧಿಯಲ್ಲಿ ಕೆನಡಾದಲ್ಲಿಯೂ ಇದೇ ರೀತಿಯ ಕಾಡ್ಗಿಚ್ಚು ಹಬ್ಬಿ (ಅಮೆರಿಕದ ) ನ್ಯೂಯಾರ್ಕ್ ರಾಜ್ಯದಲ್ಲಿ ಧೂಳಿನ ಕಪ್ಪು ಮೋಡ ಆವರಿಸಿ ಉಸಿರಾಟ ಸಂಬಂಧಿ ಸಮಸ್ಯೆಗಳು ವರದಿಯಾಗಿದ್ದವು. ಮಾರ್ಚ್ನಲ್ಲಿ ಕೇರಳದ ಕೊಚ್ಚಿಯ ಅತೀ ದೊಡ್ಡ ಕಸದ ಬೆಟ್ಟಕ್ಕೆ ಹೊತ್ತಿದ ಬೆಂಕಿಯು, ಹಲವು ದಿನಗಳವರೆಗೆ ನಗರ ವಾಸಿಗಳನ್ನು ಗೃಹ ಬಂಧನದಲ್ಲಿರುವಂತೆ ಮಾಡಿ ಇಂತಹ ತಾಪಮಾನ ಹೆಚ್ಚಳ ಸಂಭಂದಿತ ಆಕಸ್ಮಿಕಗಳನ್ನು ನಿರ್ವಹಿಸಲು ಸರ್ಕಾರಗಳ ಸಿದ್ಧತೆಯಲ್ಲಿನ ಕೊರತೆಯನ್ನು ಜನರಿಗೆ ಬಯಲು ಮಾಡಿತು.

ಪ್ರತಿಭಟನಾ ನಿರತ ಸ್ವಿಟ್ಸರ್ಲೆಂಡ್ ನ ಹಿರಿಯ ಮಹಿಳೆಯರ ಗುಂಪು

ಹವಾಮಾನ ವೈಪರೀತ್ಯದ ಕುರಿತ ನ್ಯಾಯಾಲಯ ಪ್ರಕರಣಗಳ ಸಂಖ್ಯೆಯನ್ನು 2017 ರಲ್ಲಿ ಕಲೆಹಾಕಲು ಆರಂಭಿಸಿದಾಗ 884 ವ್ಯಾಜ್ಯಗಳ ಕುರಿತ ವರದಿ ಸಲ್ಲಿಸಲಾಗಿತ್ತು .ಆದರೆ 5 ವರ್ಷಗಳಲ್ಲಿ ಈ ಮೊಕದ್ದಮೆಗಳ ಸಂಖ್ಯೆಯು ದ್ವಿಗುಣಗೊಂಡು -ಇಂದು 2180 ಮೊಕದ್ದಮೆಗಳು – ಹೆಚ್ಚಳವಾಗುತ್ತಿವೆ ಎಂದು ಯುಎನ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಬಿನ್ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಆಂಡ್ ಲಾ ಕಳೆದ ವಾರ ಪ್ರಕಟಿಸಿದ ವರದಿಯು ಹೇಳುತ್ತಿದೆ. ವಿಶ್ವದ ಹಲವು ಸರ್ಕಾರ ಅಥವಾ ಪಳೆಯುಳಿಕೆ ಇಂಧನೋದ್ಯಮಗಳ ವಿರುದ್ಧ ಈ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು – ಅಮೆರಿಕದಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಾಗಿಸಲಾಗಿದೆ – ಸುಮಾರು 17 ಪ್ರತಿಶತ ಪ್ರಕರಣಗಳು ಈಗ ಸಣ್ಣ ದ್ವೀಪಗಳನ್ನೊಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ.ಪಾಕಿಸ್ತಾನ ಮತ್ತು ಭಾರತದಲ್ಲಿ ಕ್ರಮವಾಗಿ ಏಳು ಮತ್ತು ಒಂಬತ್ತು ವರ್ಷ ವಯಸ್ಸಿನ(ರಿದ್ಧಿಮಾ ಪಾಂಡೆ Vs ಭಾರತ ಸರ್ಕಾರ) ಹುಡುಗಿಯರು ಸೇರಿದಂತೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಯುವಜನರೇ 34 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ ನ ಸರ್ಕಾರದ ಹವಾಮಾನ ಬದಲಾವಣೆಯ ಕುರಿತ ನೀತಿಯು ತಮ್ಮ ಜೀವನ ಮತ್ತು ಆರೋಗ್ಯದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು 2,000 ಕ್ಕೂ ಹೆಚ್ಚು ಹಿರಿಯ ಮಹಿಳೆಯರು(Club of Climate Seniors ) ತಮ್ಮ ದೇಶದ ಸರ್ಕಾರದ ವಿರುದ್ಧ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ECHR) ನಲ್ಲಿ ದಾವೆ ಹೂಡಿದ್ದಾರೆ. ಇದು ಮಾನವ ಹಕ್ಕುಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಕುರಿತ ಮೊತ್ತ ಮೊದಲ ಪ್ರಕರಣವಾಗಿದ್ದು ಈ ಮಹಿಳೆಯರು ಸಾಕ್ಷಿಯಾಗಿ ತಮ್ಮ ವೈದ್ಯಕೀಯ ದಾಖಲೆಗಳನ್ನು ಮುಂದಿಟ್ಟಿದ್ದಾರೆ .

ಯುರೋಪಿಯನ್ ಹವಾಮಾನ ಮತ್ತು ಆರೋಗ್ಯ ವೀಕ್ಷಣಾಲಯದ ಅಧ್ಯಯನವು ಸರಾಸರಿ ತಾಪಮಾನದಲ್ಲಿನ ಹೆಚ್ಚಳವು ಯುರೋಪಿನಾದ್ಯಂತ, “ಸಾರ್ವಜನಿಕರ -ವಿಶೇಷವಾಗಿ ಹಿರಿಯ ನಾಗರಿಕರ – ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ” ಎಂದಿದೆ. ಕಳೆದ 20 ವರ್ಷಗಳಲ್ಲಿ, ಯುರೋಪ್‌ನಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಉಷ್ಣ ಅಲೆಗಳ (Heat wave )ಸಂಬಂಧಿತ ಮರಣ ಪ್ರಮಾಣವು 30% ಕ್ಕಿಂತ ಹೆಚ್ಚಾಗಿದೆ ಎಂದು ಅದು ಹೇಳುತ್ತದೆ.

ಮೊಂಟಾನಾ ಸರ್ಕಾರದ ವಿರುದ್ಧ ಉತ್ತಮ ಪರಿಸರ ಹಕ್ಕಿಗಾಗಿ ದಾವೆ ಹೂಡಿರುವ ಮಕ್ಕಳ ಗುಂಪು

ಅಮೇರಿಕಾದ ಸಾಂವಿಧಾನಿಕ ಹವಾಮಾನ ಮೊಕದ್ದಮೆಯೊಂದರ ಮೊಟ್ಟಮೊದಲ ವಿಚಾರಣೆಯು ಈ ವರ್ಷದ ಜೂನ್ ನಲ್ಲಿ ಮೊಂಟಾನಾ ರಾಜ್ಯದ ಹೆಲೆನಾ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು . ಹೆಲ್ಡ್ Vs ಮೊಂಟಾನಾ ಸರ್ಕಾರ ಎಂಬ ಈ ಮೊಕದ್ದಮೆಯನ್ನು 2020 ರಲ್ಲಿ ರಾಜ್ಯದಾದ್ಯಂತ ಐದು ಮತ್ತು 22 ವರ್ಷದೊಳಗಿನ 16 ಮಕ್ಕಳು ಫಿರ್ಯಾದುದಾರರಾಗಿ ತಮ್ಮ ರಾಜ್ಯ ಸರ್ಕಾರವು ಪಳೆಯುಳಿಕೆ ಇಂಧನ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಆರೋಗ್ಯಕರ ಪರಿಸರಕ್ಕೆ ತಮಗಿರುವ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ .

ಹವಾಮಾನ ಬದಲಾವಣೆಯ ಕುರಿತಾದ ಇಂಟರ್‌ಗವರ್ನಮೆಂಟಲ್ ಪ್ಯಾನಲ್‌ನ ಸದಸ್ಯರಾಗಿ ಸಲ್ಲಿಸಿದ ಸೇವೆಗಾಗಿ, 2007 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ – ಮೊಂಟಾನಾ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವ್ಯವಸ್ಥೆ ಮತ್ತು ಸಂರಕ್ಷಣಾ ವಿಜ್ಞಾನದ ಪ್ರಾಧ್ಯಾಪಕ – ಸ್ಟೀವನ್ ರನ್ನಿಂಗ್ ಈ ಮಕ್ಕಳ ಬೆಂಬಲಕ್ಕೆ ನಿಂತು ವಿಚಾರಣೆಯ ಪ್ರಗತಿಯನ್ನು ಗಮನಿಸುತ್ತಿದ್ದಾರೆ.

ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ರೈತ ಹೋರಾಟವನ್ನು ಸಮರ್ಥಿಸಿಕೊಂಡ ಟ್ವೀಟ್ ಸಲುವಾಗಿ ಬಂಧನಕ್ಕೊಳಗಾಗುವ ವರ್ಷದ ಮುಂಚೆಯೇ ತಾವು ನಡೆಸಿದ ಈಮೇಲ್ ಅಭಿಯಾನವೊಂದರ ಕಾರಣದಿಂದಾಗಿ, ಕೇಂದ್ರ ಪರಿಸರ ಸಚಿವಾಲಯದ ಕೆಂಗಣ್ಣಿಗೆ ತಾವು ಗುರಿಯಾಗಿದ್ದನ್ನು ನೆನಪಿಸಿಕೊಂಡರು. ‘ಪರಿಸರವಾದವನ್ನು ಭಾರತದಲ್ಲಿ ಅಪರಾಧೀಕರಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರೂ ಇದು ಭಾರತಕ್ಕಷ್ಟೇ ಸೀಮಿತವಾದುದೇನಲ್ಲ.

ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ

ಭಾರತದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸಂಬಂಧಿಸಿದ ಮೊಕದ್ದಮೆ – ವಿಚಾರಣೆಗಳ ಕಡೆ ಜನರ – ಮಾಧ್ಯಮಗಳ ಗಮನ ಹರಿಯುವುದು ಕಡಿಮೆಯೇ,ಇನ್ನು ಸಾಕ್ಷರತೆಯಲ್ಲಿ ನಮ್ಮ ಸಾಧನೆಯ ಹೊರತಾಗಿಯೂ ಪರಿಸರವಾದಿ ಹೋರಾಟಗಳಿಗೆ ಬೆಂಬಲ ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿಸಲೂ ಅಸಾಧ್ಯ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಗ್ರೀಸ್ ನ ಕಾಡ್ಗಿಚ್ಚಿನಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಯಿತು,ಆ ಪ್ರದೇಶವು ಪ್ರವಾಸೀ ತಾಣವಾಗಿದ್ದರೂ ಹಾಗೂ ಕಾಡ್ಗಿಚ್ಚಿನ ಸಂಧರ್ಭದಲ್ಲಿ ಪ್ರವಾಸಿಗಳಿಂದ ತುಂಬಿ ತುಳುಕುತ್ತಿದ್ದರೂ ಹೆಚ್ಚಿನ ಪ್ರಾಣ ಹಾನಿ ಸಂಭವಿಸಲಿಲ್ಲ. ಆದರೆ ಎರಡು ದಿನಗಳ ಪಂಜಾಬ್ ಪ್ರವಾಹದಲ್ಲಿ 40ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೇಘಸ್ಪೋಟ ,ಪ್ರವಾಹ ,ಬರ ,ಕಾಡ್ಗಿಚ್ಚು ನಮ್ಮಲ್ಲಿ ‘ಹಣೆಬರಹ’ ಎಂಬುದಕ್ಕಿಂತ ವಿಭಿನ್ನವಾದ ಪ್ರತಿಕ್ರಿಯೆ -ಸಂಘಟಿತ ಆಕ್ರೋಶವನ್ನೇನೂ ಸೃಷ್ಟಿಸುವುದಿಲ್ಲ.

ಪರಿಸರ ಕಾಳಜಿ ಭಾರತದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಾಣುವ ವಿಷಯವೇನಲ್ಲ. ಹವಾಮಾನ ಬದಲಾವಣೆ ಸೃಷ್ಠಿಸಲಿರುವ ಅರೋಗ್ಯ ಹಾಗೂ ಆಹಾರ ಪೂರೈಕೆ -ಹಂಚಿಕೆಯ ಸಮಸ್ಯೆಯು, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸೋಲು – ಗೆಲುವನ್ನು ನಿರ್ಧರಿಸುವಷ್ಟು ನಿರ್ಣಾಯಕವಾಗುವುವವರೆಗೂ ಹವಾಮಾನ ವೈಪರೀತ್ಯದ ಕುರಿತ ಮಕ್ಕಳ ಪ್ರಶ್ನೆಗಳು ಹಾಗೂ ಪರಿಸರ ರಕ್ಷಣೆಯ ಕುರಿತಾದ ನಿಯಮಗಳನ್ನು ಉಲ್ಲಂಘನೆ ಮಾಡುವ ಉದ್ಯಮಗಳು /ಸರ್ಕಾರ ವಿರುದ್ಧದ ಮೊಕದ್ದಮೆ ,ಹೋರಾಟಗಳನ್ನು ‘ಟೂಲ್ ಕಿಟ್, ವಿದೇಶೀ ಕೈವಾಡ‘ ಎಂದು ತಳ್ಳಿ ಹಾಕಿ ಭಾರತೀಯರು ಹಾಗೂ ಸರ್ಕಾರಗಳು ಹುಸಿ ಸಮಾಧಾನದಲ್ಲಿ ಜೀವನ ಮುಂದುವರೆಸಲಿದ್ದಾರೆ.

- ರಂಜಿತಾ ಜಿ. ಎಚ್.

ವಿಕ್ಟೋರಿಯಾ ಅಮೆಲಿನಾ: “ನಾನು ರಷ್ಯನ್ನರು ಮಾಡಿದ ಅತ್ಯಂತ ಕೆಟ್ಟ ಹೂಡಿಕೆ” (ಭಾಗ 1)
1989ರಲ್ಲಿ ಬರ್ಲಿನ್ ಗೋಡೆಯ ಪತನವಾದ ನಂತರ, ಎಲ್ಲಾ ಗಡಿಗಳು ಕಣ್ಮರೆಯಾಗುತ್ತವೆ ಎಂದು ಹಲವರು ನಂಬಿದ್ದರು. ಸೋವಿಯತ್ ಒಕ್ಕೂಟದ ಪ್ಸ್ಕೋವ್ ಬಳಿಯ 1990 ರ ಅಂತರರಾಷ್ಟ್ರೀಯ ಬೇಸಿಗೆ ಶಿಬಿರದಲ್ಲಿ, ಜರ್ಮನ್ ಬ್ಯಾಂಡ್- ದಿ ಸ್ಕಾರ್ಪಿಯಾನ್ಸ್‌ ಹಾಡಿದ ‘ ವಿಂಡ್ ಆಫ್ ಚೇಂಜ್ (ಬದಲಾವಣೆಯ ಗಾಳಿ) …‘ ನನಗೆ ನೆನಪಿದೆ ಮತ್ತು ಅದರ ಸಾಹಿತ್ಯವು ನಿಜವಾಗಿಯೂ ನನ್ನೊಂದಿಗೆ ಸಂವಾದಿಸುತ್ತಿದೆ ಎಂದು ನಾನು ಭಾವಿಸಿದ್ದೆ: “ಜಗತ್ತು ಹತ್ತಿರವಾಗುತ್ತಿದೆ / ಮತ್ತು ನೀವು ಎಂದಾದರೂ ನಾವು ಸೋದರರಂತೆ ತುಂಬಾ ಹತ್ತಿರವಾಗಬಹುದೆಂದು ಯೋಚಿಸಿದ್ದೀರಾ? ನಾವೆಲ್ಲರೂ ಉತ್ತಮ ಭವಿಷ್ಯವನ್ನು ನಂಬುವ,ಕನಸುವ ನಾಳೆಯ ಮಕ್ಕಳೆ? ನಾವೀಗ ಎಲ್ಲಿ ಬಂದು ನಿಂತಿದ್ದೇವೆ ? “

ಈ ‘ಬದಲಾವಣೆಯ ಗಾಳಿ’ಯು ಭ್ರಮೆಗಿಂತ ಹೆಚ್ಚಿನದಾಗಿ ಉಳಿಯಲಿಲ್ಲ, ಮತ್ತು ಅದರಲ್ಲಿ ನಾನಿರಿಸಿದ್ದ ನಂಬಿಕೆಯು ಸಾಂಸ್ಕೃತಿಕವಾಗಿ ಮತ್ತು ಮಾನಸಿಕವಾಗಿ, ಉಕ್ರೇನ್ ಯಾವಾಗಲೂ ಸ್ವಲ್ಪ ಅನನುಭವಿ ಮುಗ್ಧ ಪಶ್ಚಿಮದ ಭಾಗವಾಗಿದೆ ಎಂದು ತೋರಿಸುತ್ತದೇನೋ. ಅಂತಿಮವಾಗಿ ಸತ್ಯವನ್ನು ಎದುರಿಸುವುದು ಉಕ್ರೇನಿಯನ್ನರ ವಿಧಿಯಾಗಿತ್ತು. ಈ ಹಾಡು ಬಿಡುಗಡೆಯಾಗುವ ಐದು ವರ್ಷಗಳ ಮೊದಲು ರಷ್ಯಾದ ಜೈಲಿನಲ್ಲಿ ಕೊಲ್ಲಲ್ಪಟ್ಟ ಪ್ರಖ್ಯಾತ ಉಕ್ರೇನಿಯನ್ ಭಾಷೆಯ ಕವಿ ವಾಸಿಲ್ ಸ್ಟಸ್ ರಂತಹ ಉದಾಹರಣೆಗಳಿಂದ ಕೆಲವರು ವಿಧಿಯನ್ನು ಅರಿತರು. ಇತರರು, ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯು ಕೇವಲ ಔಪಚಾರಿಕತೆಯಲ್ಲ, ಅದು ನಮ್ಮ ಉಳಿವಿಗಾಗಿ ಅತ್ಯಗತ್ಯ ಎಂದು ಅರಿತುಕೊಳ್ಳಲು, ನನ್ನಂತೆಯೇ ರಷ್ಯಾದ ಜಗತ್ತನ್ನು ನೇರವಾಗಿ ಅನುಭವಿಸಬೇಕಾಯಿತು .

ನಮ್ಮ ಮನೆ – ಎಂಬ ನಂಬಿಕೆಯ ಸುರಕ್ಷಿತ ಸ್ಥಳ – ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಅದರ ಯಾವ ಗಡಿಗಳನ್ನು ವಿಶೇಷವಾಗಿ ಚೆನ್ನಾಗಿ ಕಾಪಾಡಬೇಕು ಎಂದು ನಮಗೆ ತಿಳಿದಿಲ್ಲದಿದ್ದರೆ, ನಾವೆಲ್ಲರೂ ನಮ್ಮ ತಪ್ಪುಗಳನ್ನು ಪುನರಾವರ್ತಿಸುವ ದುರ್ವಿಧಿಗೆ ಬೀಳುತ್ತೇವೆ ಎಂದೆನಿಸುತ್ತಿದೆ .

ನಾನು 1986ರಲ್ಲಿ ಪಶ್ಚಿಮ ಉಕ್ರೇನ್‌ನಲ್ಲಿ ಜನಿಸಿದೆ, ಆ ವರ್ಷ ಚೋರ್ನೋಬಿಲ್ ಪರಮಾಣು ರಿಯಾಕ್ಟರ್ ಸ್ಫೋಟಗೊಂಡಿತು ಮತ್ತು ಸೋವಿಯತ್ ಒಕ್ಕೂಟವು ಕುಸಿಯಲು ಪ್ರಾರಂಭಿಸಿತು. ನನ್ನ ಜನ್ಮಸ್ಥಳ ಮತ್ತು ನನ್ನ ಜನ್ಮ ಸಮಯದ ಹೊರತಾಗಿಯೂ, ನನಗೆ ರಷ್ಯನ್ ಶಿಕ್ಷಣ ನೀಡಲಾಯಿತು. ‘ನನ್ನ ಬ್ರಹ್ಮಾಂಡದ ಕೇಂದ್ರ ಮಾಸ್ಕೋ’-ಕೈವ್ ಅಲ್ಲ – ಎಂದು ನಾನು ನಂಬುವಂತೆ ಮಾಡುವ ಉದ್ದೇಶ ಹೊಂದಿದ ಸಂಪೂರ್ಣ ವ್ಯವಸ್ಥೆಯು ಅಲ್ಲಿತ್ತು. ನಾನು ರಷ್ಯನ್ ಶಾಲೆಯಲ್ಲಿ ಓದಿದೆ, ರಷ್ಯಾದ ಕವಿ ಅಲೆಕ್ಸಾಂಡರ್ ಪುಷ್ಕಿನ್ ಅವರ ಹೆಸರಿನ ಶಾಲಾ ರಂಗಮಂದಿರದಲ್ಲಿ ಪ್ರದರ್ಶನ ನೀಡಿದ್ದೇನೆ ಮತ್ತು ರಷ್ಯನ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಪ್ರಾರ್ಥಿಸಿದೆ. ರಷ್ಯಾದಲ್ಲಿ ಹದಿಹರೆಯದವರಿಗಾಗಿ ನಡೆಯುವ ಬೇಸಿಗೆ ಶಿಬಿರವನ್ನು ಸಹ ನಾನು ಆನಂದಿಸಿದೆ ಮತ್ತು ಎಲ್ವಿವ್‌ನ ರಷ್ಯಾದ ಸಾಂಸ್ಕೃತಿಕ ಕೇಂದ್ರದಲ್ಲಿ ಯುವ ಕೂಟಗಳಿಗೆ ಹಾಜರಾಗಿದ್ದೇನೆ, ಅಲ್ಲಿ ನಾವು ರಷ್ಯನ್ ರಾಕ್ ಸಂಗೀತವನ್ನು ಹಾಡಿದ್ದೇವೆ, ಈ ಸಂಗೀತವು ಸ್ಕಾರ್ಪಿಯೊನ್ ತಂಡದ ಮುಗ್ಧ ಸಂಯೋಜನೆಗಳಿಗಿಂತ ರಷ್ಯಾದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹೆಚ್ಚು ಪ್ರಾಮಾಣಿಕವಾಗಿತ್ತು.

ನಾನು 15 ವರ್ಷದವಳಾಗಿದ್ದಾಗ, ಸ್ಥಳೀಯ ಸ್ಪರ್ಧೆಯೊಂದರಲ್ಲಿ ವಿಜೇತಳಾಗಿ, ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ರಷ್ಯನ್ ಭಾಷೆಯ ಸ್ಪರ್ಧೆಯಲ್ಲಿ, ನನ್ನ ತವರು ಪಟ್ಟಣವಾದ ಎಲ್ವಿವ್ ಅನ್ನು ಪ್ರತಿನಿಧಿಸಲು ಆಯ್ಕೆಯಾದೆ. ನಾನು ರಷ್ಯಾದ ರಾಜಧಾನಿಗೆ ಭೇಟಿ ನೀಡಲು ಉತ್ಸುಕನಾಗಿದ್ದೆ. ಏಕೆಂದರೆ ಮಾಸ್ಕೋ ನಾನು ಮನೆಯೆಂದು ಪರಿಭಾವಿಸಿದ ಪ್ರದೇಶದ ಕೇಂದ್ರವಾಗಿತ್ತು. ನನ್ನ ಗ್ರಂಥಾಲಯವು ರಷ್ಯನ್ ಕ್ಲಾಸಿಕ್‌ಗಳಿಂದ ತುಂಬಿತ್ತು, ಸೋವಿಯತ್ ಒಕ್ಕೂಟವು ಸುಮಾರು ಒಂದು ದಶಕದ ಹಿಂದೆಯೇ ಕುಸಿದಿದ್ದರೂ, ನಾನು ಓದಿದ ರಷ್ಯನ್ ಶಾಲೆಯಲ್ಲಿ ಅಥವಾ ನನ್ನ ಕುಟುಂಬವು ನೋಡುವ ಅಭ್ಯಾಸವನ್ನು ಹೊಂದಿದ್ದ ರಷ್ಯನ್ ಚಾನೆಲ್ ನಲ್ಲಿ ಹೆಚ್ಚೇನೂ ಬದಲಾವಣೆಯಾಗಿರಲಿಲ್ಲ. ಉಕ್ರೇನ್‌ನಲ್ಲಿ ಪ್ರಯಾಣಿಸಲು ನನ್ನ ಬಳಿ ಹಣವಿಲ್ಲದಿದ್ದರೂ, ನನ್ನ ರಷ್ಯನೀಕರಣದಲ್ಲಿ ಹೂಡಿಕೆ ಮಾಡಲು ರಷ್ಯಾ ಕೂಡ ಸಂತೋಷದಿಂದಲೇ ಸಿದ್ಧವಿತ್ತು.

ಮಾಸ್ಕೋದಲ್ಲಿ ನಡೆದ ಸ್ಪರ್ಧೆಯಲ್ಲಿ, ರಷ್ಯಾ ನಂತರದ ಸಮಯದಲ್ಲಿ ಆಕ್ರಮಣ ಮಾಡಲು ಅಥವಾ ಆಪೋಶನ ತೆಗೆದುಕೊಳ್ಳಲು ಉದ್ದೇಶಿಸಿರುವ ಆ ಎಲ್ಲಾ ದೇಶಗಳ ಮಕ್ಕಳನ್ನು ನಾನು ಭೇಟಿಯಾದೆ: ಲಾಟ್ವಿಯಾ, ಲಿಥುವೇನಿಯಾ, ಎಸ್ಟೋನಿಯಾ, ಕಝಾಕಿಸ್ತಾನ್, ಅರ್ಮೇನಿಯಾ, ಅಜೆರ್ಬೈಜಾನ್, ಜಾರ್ಜಿಯಾ ಮತ್ತು ಮೊಲ್ಡೊವಾ. ರಷ್ಯಾದ ಒಕ್ಕೂಟವು ನಮ್ಮಂತಹ “ಮಾಜಿ ಸೋವಿಯತ್ ಗಣರಾಜ್ಯಗಳ” ಮಕ್ಕಳನ್ನು ರಷ್ಯನ್ನರಾಗಿ ಬೆಳೆಸಲು ಬಹಳಷ್ಟು ಹಣವನ್ನು ಹೂಡಿಕೆ ಮಾಡಿದೆ. ಗ್ರಾಮೀಣ ರಶಿಯಾದಲ್ಲಿನ ಮಕ್ಕಳ ಶಿಕ್ಷಣದಲ್ಲಿ ಅವರು ಹೂಡಿಕೆ ಮಾಡಬೇಕಾಗಿದ್ದುದಕ್ಕಿಂತ ಹೆಚ್ಚಾಗಿ ಅವರು ನಮ್ಮಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ: ಈಗಾಗಲೇ ವಶದಲ್ಲಿರುವವರಿಗೆ ಬೇಸಿಗೆ ಶಿಬಿರಗಳು ಮತ್ತು ರೆಡ್ ಸ್ಕ್ವೇರ್ ವಿಹಾರಗಳ ಪ್ರಲೋಭನೆ ನೀಡುವ ಅವಶ್ಯಕತೆಯೇನಿಲ್ಲವಲ್ಲ? ಆದರೆ ಅದೃಷ್ಟವಶಾತ್, ನಾನು ರಷ್ಯನ್ ಒಕ್ಕೂಟವು ಮಾಡಿದ ಅತ್ಯಂತ ಕೆಟ್ಟ ಹೂಡಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಮಾಸ್ಕೋದ ಆ ಭೇಟಿಯಲ್ಲಿ, ರಷ್ಯಾದ ಅಂದಿನ ಪ್ರಸಿದ್ಧ ಟಿವಿ ಚಾನೆಲ್ ORT ಯ ಪ್ರಸಿದ್ಧ ಪತ್ರಕರ್ತರೊಬ್ಬರು ಸಂದರ್ಶನಕ್ಕಾಗಿ ನನ್ನನ್ನು ಸಂಪರ್ಕಿಸಿದರು. ನಾನು ನನ್ನನ್ನೇ ಸ್ಟಾರ್ ಎಂದು ಭಾವಿಸಿ ತೇಲಾಡಿದೆ. ಪತ್ರಕರ್ತರು ನಾನು ಈ ಕಾರ್ಯಕ್ರಮ ಮತ್ತು ರಷ್ಯಾದ ರಾಜಧಾನಿಯಲ್ಲಿ ಸಮಯವನ್ನು ಆನಂದಿಸುತ್ತಿದ್ದೇನೆಯೇ ಎಂಬ ಸಭ್ಯ ಪ್ರಶ್ನೆಯೊಂದಿಗೆ ಪ್ರಾರಂಭಿಸಿದರು, ಆದರೆ ಬೇಗನೇ ತಮ್ಮ ನಿಜ ಅಜೆಂಡಾಕ್ಕೆ ಇಳಿದರು. “ಪಶ್ಚಿಮ ಉಕ್ರೇನ್‌ನಲ್ಲಿ ರಷ್ಯನ್ ಭಾಷಿಕರಾಗಿ ನೀವು ಎಷ್ಟು ತುಳಿತಕ್ಕೊಳಗಾಗಿದ್ದೀರಿ? ಎಲ್ವಿವ್‌ನ ಬೀದಿಗಳಲ್ಲಿ ರಷ್ಯನ್ ಭಾಷೆಯನ್ನು ಮಾತನಾಡುವುದು ಎಷ್ಟು ಅಪಾಯಕಾರಿ?”

ನಾನು ಸ್ಟಾರ್ ಅಲ್ಲ ಎಂದು ಅರ್ಥವಾಗುತ್ತಿದ್ದಂತೆಯೇ ನನಗೆ ಉಸಿರುಗಟ್ಟಿದಂತಾಯಿತು; ಸಂಜೆಯ ಸುದ್ದಿಯ ಲಕ್ಷಾಂತರ ವೀಕ್ಷಕರನ್ನು ನಿರ್ಲಜ್ಜವಾಗಿ ಪ್ರಭಾವಿಸಲು ನನ್ನನ್ನು ಬಳಸಲು ಉದ್ದೇಶಿಸಲಾಗಿತ್ತು. ನನಗಾಗ ಕೇವಲ 15 ವರ್ಷ. ಆದರೆ ಆ ಕ್ಷಣ , ನನ್ನ ಮನೆಯ ಗಡಿಗಳು ಎಲ್ಲಿವೆ ಎಂದು ನಾನು ಲೆಕ್ಕಾಚಾರ ಮಾಡಬೇಕಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ರಷ್ಯನ್ ಆಗಿರಲಿಲ್ಲ , – ನಾನು ರಷ್ಯಾದ ಕೆಲವು ನಿರೂಪಣೆಗಳನ್ನು ಬಲಪಡಿಸಲು ಮಾಸ್ಕೋಗೆ ಕರೆತರಲ್ಪಟ್ಟ ಉಕ್ರೇನಿಯನ್ ಹುಡುಗಿಯಾಗಿದ್ದೆ. 15 ವರ್ಷದ ಅನನುಭವಿ ಯುವತಿಯನ್ನು ತನ್ನ ಪ್ರೊಪೋಗಂಡಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಾನಲ್ ಅನ್ನು ನಿರಂತರವಾಗಿ ಈ ಹಿಂದೆ ನೋಡಿದ್ದರಿಂದ ನಾನು ರಷ್ಯಾವು ಶಾಂತಿಯ ಉದ್ದೇಶ ಹೊಂದಿರುವ ಮಹಾನ್ ದೇಶ ಎಂದು ನಾನು ನಂಬಿದ್ದಿರಬಹುದು.

“ನಮ್ಮ ಇಷ್ಟೆಲ್ಲಾ ಸಂಕೀರ್ಣ ಇತಿಹಾಸದ ನಂತರ, ಉಕ್ರೇನಿಯನ್ನರು ಅಹಿತಕರ ಭಾವನೆಗಳನ್ನು ಹೊಂದಿರುವುದು ಮತ್ತು ಕೆಲವೊಮ್ಮೆ ರಷ್ಯನ್ ಭಾಷೆಗೆ ಪ್ರತಿಕ್ರಿಯಿಸುವುದು ಸಹಜ. ಆದಾಗ್ಯೂ, ನಾನು ಯಾವುದೇ ದಬ್ಬಾಳಿಕೆಯನ್ನು ಅನುಭವಿಸಿಲ್ಲ. ಬಹುಶಃ ನಿಮಗೆ ಸಿಕ್ಕಿರುವ ಮಾಹಿತಿಯು ಹಳೆಯದಿರಬಹುದು, ಯುವ ಪೀಳಿಗೆಯಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ.“ ಎಂದು ನಾನು ಉತ್ತರಿಸಿದೆ.

ಪತ್ರಕರ್ತರು ನನ್ನನ್ನು ಮತ್ತೆ ಕೇಳಲು ಪ್ರಯತ್ನಿಸಿದರೂ ನನ್ನ ಪ್ರತಿಕ್ರಿಯೆಯೇನೂ ಬದಲಾಗಲಿಲ್ಲ. ಅವರು ಈ ಸಂದರ್ಶನವನ್ನು ಸಂಜೆಯ ಸುದ್ದಿಯಲ್ಲಿ ಪ್ರಸಾರ ಮಾಡಿದರೇ ಎಂದು ನನಗೆ ಅನುಮಾನವಿದೆ ಅಥವಾ ಬಹುಶಃ ಅವರು ಅದನ್ನು ತಮ್ಮ ಅಜೆಂಡಾಕ್ಕೆ ಸೂಕ್ತವಾದ ರೀತಿಯಲ್ಲಿ ಬಳಸಿರಬಹುದು. ಈಗ, ಉಕ್ರೇನಿಯನ್ ಲೇಖಕಿಯಾಗಿ , ರಷ್ಯಾದ ವಿವಿಧ ಚಾನಲ್‌ಗಳಿಂದ ಸಂದರ್ಶನಗಳಿಗಾಗಿ ಬಂದ ವಿನಂತಿಗಳನ್ನು ನಾನು ನಿರಾಕರಿಸುತ್ತೇನೆ. ನನ್ನ ಮಾಸ್ಕೋ ಅನುಭವವೇ ನನಗೆ ಸಾಕಷ್ಟು ಕಲಿಸಿತ್ತು .

2022 ರಲ್ಲಿ ರಷ್ಯಾವು ಮರಿಯುಪೋಲ್‌ನ ಮೇಲೆ ದಾಳಿ ಮಾಡಿದಾಗ ಅಲ್ಲಿನ ವೃದ್ಧರೊಬ್ಬರ ಸಂದರ್ಶನವನ್ನು ನೋಡಿದಾಗ ಈ ಘಟನೆ ನನಗೆ ಮತ್ತೆ ನೆನಪಾಯಿತು. ತನ್ನ ಪ್ರೀತಿಯ ನಗರದ ಅವಶೇಷಗಳಿಂದ ಸುತ್ತುವರೆದಿದ್ದ ಅವರು ದಿಗ್ಭ್ರಮೆಗೊಂಡಿದ್ದರು ಮತ್ತು ಹತಾಶರಾಗಿ ಪ್ರಾಮಾಣಿಕವಾಗಿ ಹೇಳಿದರು. “ಆದರೆ ನಾನು ಈ ರಷ್ಯನ್ ಪ್ರಪಂಚವನ್ನು ನಂಬಿದ್ದೆ, ನಿಮಗೆ ಗೊತ್ತೇ ? ನನ್ನ ಜೀವನದುದ್ದಕ್ಕೂ ನಾವು ಸಹೋದರರು ಎಂದು ನಾನು ಬದುಕಿನ ಅತ್ಯುತ್ತಮ ವರ್ಷಗಳನ್ನು ಜೀವಿಸಿದ್ದ, ಅವರು ತನ್ನ ಮಾತೃಭೂಮಿ ಎಂದು ಗ್ರಹಿಸಿದ ಸ್ಥಳ, ಮನೆಯ ಕಲ್ಪನೆಯು, ಇನ್ನಷ್ಟು ಕ್ರೂರವಾಗಿ ನಾಶವಾಗಿತ್ತು. ರಷ್ಯಾದ ಬಾಂಬ್‌ಗಳು ಬಿದ್ದ ನಂತರವಷ್ಟೇ ರಷ್ಯನ್ ಪ್ರೊಪೋಗಂಡಾ ಅವನ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಉಕ್ರೇನ್‌ನಲ್ಲಿರುವ ನನ್ನ ತವರು ಪಟ್ಟಣದ ಬಗ್ಗೆ ಸುಳ್ಳು ಹೇಳಲು, ಆ ಮೂಲಕ ರಷ್ಯಾದ ವೀಕ್ಷಕರು ಅದನ್ನು ಇನ್ನಷ್ಟು ದ್ವೇಷಿಸುವಂತೆ ಮಾಡಲು ಮಾತ್ರ ನನ್ನನ್ನು ಸಂಭ್ರಮದ ಮಾಸ್ಕೋಗೆ ಕರೆತರಲಾಗಿದೆ ಎಂದು ನಾನು ಅರಿತುಕೊಂಡಾಗ ನನ್ನ ಮನಸ್ಸಿನಲ್ಲಿ ಗಡಿಯೊಂದು ಹುಟ್ಟಿದಂತೆ, ಸ್ವತಂತ್ರ ಉಕ್ರೇನ್ ಮತ್ತು ರಷ್ಯನ್ ಒಕ್ಕೂಟದ ನಡುವಿನ ಗಡಿಯು ನಿರ್ಣಾಯಕ ತಡೆಗೋಡೆಯಾಗಿ ಅಂದು ಅವರ ಮನಸ್ಸಿನಲ್ಲಿ ಹುಟ್ಟಿಕೊಂಡಿರಬಹುದು. ‌

ಪ್ರತಿಯೊಬ್ಬ ನೆರೆಹೊರೆಯವರು ಸ್ನೇಹಿತರಾಗಿರುವ ಜಗತ್ತು ಹಾಡಲು ಒಂದು ಉತ್ತಮವಾದ ಕಲ್ಪನೆ, ಆದರೆ ದುರದೃಷ್ಟವಶಾತ್ ರಷ್ಯಾಕ್ಕೆ ಸಂಬಂಧಿಸಿದಂತೆ ಇದು ವಾಸ್ತವಿಕವಾಗಿಲ್ಲ.

ಉಕ್ರೇನಿನ ನಿಜ ಇತಿಹಾಸವು ನೋವಿನಿಂದ ಕೂಡಿದ್ದು, ಸಂಕೀರ್ಣ ಹಾಗೂ ನಾಟಕೀಯವಾಗಿದೆ. ದೀರ್ಘಕಾಲದವರೆಗೆ, ನನ್ನ ಕುಟುಂಬದ ಅನುಭವಗಳನ್ನು ಪ್ರತಿಬಿಂಬಿಸುವ ಅಥವಾ ನನ್ನ ಅಜ್ಜ ಅಜ್ಜಿಯರಿಂದ ಉಕ್ರೇನಿಯನ್ ಭಾಷೆಯನ್ನು ನಾನು ಏಕೆ ಆನುವಂಶಿಕವಾಗಿ ಪಡೆಯಲಿಲ್ಲ ಎಂಬುದನ್ನು ವಿವರಿಸುವ ಯಾವುದೇ ಪುಸ್ತಕವು ಹೊರಬರಲಿಲ್ಲ . ತಮ್ಮ ಮಕ್ಕಳನ್ನು ರಷ್ಯನ್ ಭಾಷಿಕರಾಗಿ ಬೆಳೆಸುವ ಮೂಲಕ ಅವರನ್ನು ರಕ್ಷಿಸುವ ನನ್ನ ಪೋಷಕರ ನಿರ್ಧಾರವು ಬಾಲ್ಯದಲ್ಲಿ ನನಗೆ ಅರ್ಥವಾಗಲಿಲ್ಲ. ರಷ್ಯನ್ ಭಾಷಿಕಳಾಗಿ ಬೆಳೆದ ನಾನು ಆ ಸ್ಥಳದವಳಲ್ಲವೇನೋ ಎಂದು ನನಗೆ ಅನಿಸುತ್ತಿತ್ತು . ಆದ್ದರಿಂದ ಅಂತಿಮವಾಗಿ, ನನ್ನಂತಹ ಕುಟುಂಬಗಳ ಬಗ್ಗೆ ನಾನು ಕಾದಂಬರಿಯನ್ನು ಬರೆಯಬೇಕಾಯಿತು. ಇತಿಹಾಸಕಾರ ಟಿಮೋತಿ ಸ್ನೈಡರ್ ಬಾಲ್ಟಿಕ್‌ನಿಂದ ಕಪ್ಪು ಸಮುದ್ರದವರೆಗಿನ ಭೂಮಿಯನ್ನು “ಬ್ಲಡ್‌ಲ್ಯಾಂಡ್ಸ್” ಎಂದು ಕರೆದರು,ನನ್ನ ತವರು ಎಲ್ವಿವ್ ಈ ಪ್ರದೇಶದ ಹೃದಯಭಾಗದಲ್ಲಿತ್ತು. ಎರಡನೆಯ ಮಹಾಯುದ್ಧದ ಆರಂಭದಲ್ಲಿ ಸೋವಿಯತ್ ಸೈನ್ಯವು ಸಾವಿರಾರು ಉಕ್ರೇನಿಯನ್ನರನ್ನು ಕೊಂದಿದೆ ಮತ್ತು ಅದೇ ಅವಧಿಯಲ್ಲಿ ಎಲ್ವಿವ್‌ನ ಸುಮಾರು 100,000 ಯಹೂದಿ ನಾಗರಿಕರು ನಾಶವಾದರು ಎಂದು ನಾನು ಕಂಡುಹಿಡಿಯಬೇಕಾಯಿತು .

ನನ್ನ ಕುಟುಂಬವು 1932-33ರಲ್ಲಿ ಸಂಭವಿಸಿದ ಮಹಾ ಕ್ಷಾಮ ಎಂದೂ ಕರೆಯಲ್ಪಡುವ ಹೊಲೊಡೋಮರ್‌ನ ಆಘಾತವನ್ನು ಅನುಭವಿಸಿ ಬದುಕಿದೆ, ಆದರೆ ನನ್ನ ಅಜ್ಜ- ಅಜ್ಜಿಯರು ಅದರ ಬಗ್ಗೆ ವಿವರವಾಗಿ ಮಾತನಾಡಲಿಲ್ಲ. ಮೌನವು ಅದೆಷ್ಟು ಆಳವಾದ ಬಿರುಕುಗಳನ್ನು ಸೃಷ್ಟಿಸುತ್ತದೆಂದರೆ, ಅದು ಮನೆಯ ಭಾವನೆಯನ್ನು ಅನುಭವಿಸಲು ಕಷ್ಟವಾಗುವ ಪರಿಸ್ಥಿತಿ ನಿರ್ಮಿಸುತ್ತದೆ. ಹತ್ಯಾಕಾಂಡ ಅಥವಾ ಹೋಲೋಡೋಮರ್ ಕುರಿತಾದ ಕಥೆಗಳು – ಮಾಹಿತಿಗಳು ಸಂಪೂರ್ಣವಾಗಿ ಬಹಿರಂಗವಾಗದಿದ್ದಾಗ, ನಾವು ಒಬ್ಬರನ್ನೊಬ್ಬರು ಸಂಶಯಿಸುವುದು ಸಹಜವಿರಬಹುದು. 1933ರಲ್ಲಿ ನೀವು ಯಾರಾಗಿದ್ದಿರಿ? ಹಸಿದವನೋ ಅಥವಾ ಎಲ್ಲ ಆಹಾರವನ್ನು ಕಸಿದುಕೊಂಡವನೋ ? 1941ರಲ್ಲಿ ಉಕ್ರೇನಿಯನ್ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದವರಾಗಿದ್ದಿರೆ ಅಥವಾ ಕೊಳೆತ ದೇಹಗಳ ನಡುವೆ ತಮ್ಮ ಪ್ರೀತಿಪಾತ್ರರನ್ನು ಹುಡುಕುವವರಾಗಿದ್ದಿರಾ? ಯಹೂದಿಗಳನ್ನು ಕರೆದೊಯ್ಯುವಾಗ ಭಯದಿಂದ ಕಿಟಕಿಯಿಂದ ಇಣುಕಿದವನೋ ಅಥವಾ ಅವರನ್ನು ಸೆಳೆದೊಯ್ದವನೋ? ನಿಮ್ಮ ನೆರೆಹೊರೆಯವರ ಬಗ್ಗೆ ಕೆಜಿಬಿಗೆ ಬರೆದು ತಿಳಿಸಿದವರೇ ಅಥವಾ ಉಕ್ರೇನಿಯನ್ ಭಿನ್ನಮತೀಯರಿಗೆ ಸಹಾಯ ಮಾಡಿದವರೇ? ಅಲ್ಲಿ ತೀರಾ ಅಗತ್ಯವಾದ ಕಥೆಗಳ ಬದಲಿಗೆ ಮೌನಗಳಿದ್ದವು ಮತ್ತು ನಿಜವಾದ ಕಥೆಗಳ ಕೊರತೆ ಇರುವಲ್ಲಿ, ನಂಬಿಕೆಯ ಕೊರತೆ ಇರುತ್ತದೆ. ಪರಿಸ್ಥಿತಿ ಹೀಗಿದ್ದಾಗ ನಾವು ಪ್ರೊಪೋಗಂಡಾ/ಪ್ರಚಾರವನ್ನು ನಂಬುತ್ತೇವೆ ಮತ್ತು ಎಂದಿಗೂ ಮನೆಯ ಭಾವವನ್ನು ಸಂಪೂರ್ಣವಾಗಿ ಭಾವಿಸದೆ ಎಲ್ಲಾ ತಪ್ಪು ಗಡಿಗಳನ್ನು ಮತ್ತೆ ಮತ್ತೆ ಬರೆಯುತ್ತಿರುತ್ತೇವೆ.

(ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿಕ್ಟೋರಿಯಾ ಯೂರಿವ್ನಾ ಅಮೆಲಿನಾ ಕವಯಿತ್ರಿಯಾಗಿ, ಲೇಖಕಿಯಾಗಿ ಪ್ರಸಿದ್ಧರಾದ ನಂತರ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಪೆನ್ ಇಂಟರ್ನಾಷನಲ್ ನ ಸದಸ್ಯರಾಗಿದ್ದ ಲೇಖಕಿ ಭಾರತದಲ್ಲಿ 2018ರಲ್ಲಿ ನಡೆದ 84 ನೇ ವಿಶ್ವ PEN ಕಾಂಗ್ರೆಸ್‌ನಲ್ಲಿ ಉಕ್ರೇನ್ ಪ್ರತಿನಿಧಿಯಾಗಿ ರಷ್ಯಾದಲ್ಲಿ ರಾಜಕೀಯ ಕೈದಿಯಾಗಿದ್ದ ಉಕ್ರೇನಿಯನ್ ಚಲನಚಿತ್ರ ನಿರ್ಮಾಪಕ ಒಲೆಗ್ ಸೆಂಟ್ಸೊವ್ ಕುರಿತು ಭಾಷಣ ಮಾಡಿದರು. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ತನ್ನ ಮಗನನ್ನು ಬೇರೆ ದೇಶಕ್ಕೆ ಕಳಿಸಿ ಯುದ್ಧ ಸಂಬಂಧೀ ಮಾಹಿತಿ ದಾಖಲಾತಿ ತಂಡದಲ್ಲಿ ಭಾಗವಹಿಸುತ್ತಾ ಉಕ್ರೇನ್ ನಲ್ಲಿಯೇ ಉಳಿದ ಯುವ ಲೇಖಕಿ ತಮ್ಮ ಮಿತ್ರರೊಂದಿಗೆ ರಷ್ಯನ್ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡು ಕಳೆದ ತಿಂಗಳು ಆಸ್ಪತ್ರೆಯಲ್ಲಿ ಮರಣಿಸಿದರು.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿ 500 ದಿನಗಳು ಕಳೆದಿವೆ. ಇದು Expanding the Boundaries Of Home: a Story for Us All ಎಂಬ ಅವರ ಸುಧೀರ್ಘ ಲೇಖನದ ಅನುವಾದದ ಮೊದಲ ಭಾಗ )

ಅನುವಾದ: ರಂಜಿತಾ ಜಿ ಎಚ್

ಹಂಗೇರಿಯ ಅಂಬೇಡ್ಕರ್ ಶಾಲೆಯಲ್ಲಿ ಯೂರೋಪಿನ ದಮನಿತರು!
ಹಂಗೇರಿಯ  ಸಣ್ಣ ಪಟ್ಟಣವಾದ ಸಜೋಕಾಜಾದ ಐದು ಸ್ಥಳಗಳಲ್ಲಿ ಯುರೋಪಿನ ಅಸ್ಪೃಶ್ಯರಾದ ರೋಮಾ ಜನರಿಗಾಗಿ ಡಾ. ಅಂಬೇಡ್ಕರ್ ಬುದ್ಧಿಸ್ಟ್ ಶಾಲೆಯನ್ನು ಆರಂಭಿಸಿ  ಅಂಬೇಡ್ಕರ್ ಅವರ ಬೋಧನೆಗಳ ಮೂಲಕ ಭವಿಷ್ಯದ ಸವಾಲುಗಳಿಗೆ ಅವರನ್ನು ಸಿದ್ಧ ಗೊಳಿಸುಲ್ಲಿ ಟಿಬೋರ್ ಮತ್ತು ಇನ್ನೊಬ್ಬ ರೋಮಾ ನಾಯಕ  ಜಾನೋಸ್ ಹಂಗೇರಿ  ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್‌ ನೆನಕೆಯಲ್ಲಿ  ರಂಜಿತಾ ಜಿ ಎಚ್‌ ಬರೆದಿರುವ ಲೇಖನ ಇಲ್ಲಿದೆ.

ಒಂದು ವರ್ಷದ ಉಕ್ರೇನ್ -ರಷ್ಯಾದ ಯುದ್ಧದಿಂದಾಗಿ  ಪೂರ್ವ ಯೂರೋಪಿನ ಬಡ  ದೇಶಗಳಿಂದ ಹಲವು ಸಾವಿರ ನಿರಾಶ್ರಿತರು ಹಾಗೂ ನಾಗರೀಕರು ಉತ್ತಮ ಜೀವನ – ಆಶ್ರಯ ಬಯಸಿ  ಜರ್ಮನಿ ಹಾಗೂ ಇತರೆ ದೇಶಗಳಿಗೆ ವಲಸೆ ಬಂದರು. ರಷ್ಯಾದ ನೆರೆಯ ಪುಟ್ಟ ಮಾಜಿ ಸೋವಿಯತ್  ರಾಷ್ಟ್ರ  ಮೊಲ್ಡೊವಾದಲ್ಲಿ ಕೆಲ ಸಮಯ  ನೆಲೆಸಿದ್ದ  ಉಕ್ರೇನ್ ನಾಗರಿಕರು ಹಾಗೂ ಇತರೆ ಮಾಲ್ಡೋವಾದ ನಾಗರಿಕರು ಬರ್ಲಿನ್‌ ಪ್ರವೇಶಿಸುವಾಗ  ಪೂರ್ವಗ್ರಹ ಪೀಡಿತ  ಅಧಿಕಾರಿಗಳು  ಅವರನ್ನು  ಸಾಮಾನ್ಯವಾಗಿ ‘ರೋಮಾ’ ಎಂದು ಭಾವಿಸಿದ್ದರಿಂದ  ಪ್ರವೇಶ ನಿರಾಕರಣೆಗೊಳಗಾಗುವಂಥ ಹಲವು ನಕಾರಾತ್ಮಕ ಅನುಭವಗಳನ್ನು ಎದುರಿಸಬೇಕಾಯಿತು.

ಜರ್ಮನ್ ಸರ್ಕಾರದಲ್ಲಿ ರೋಮಾ ಮತ್ತು ಸಿಂಟಿ ವಿರುದ್ಧದ  ತಾರತಮ್ಯ ನಿವಾರಣಾ ಯೋಜನೆಯ ಹೊಣೆ ಹೊತ್ತಿರುವ ಫರ್ಸ್ಟ್  ಕಮಿಷನರ್ ಮೆಹ್ಮೆತ್ ಡೈಮಾಗುಲರ್, ಉಕ್ರೇನ್‌ನಿಂದ ಜರ್ಮನಿವರೆಗಿನ  ತಮ್ಮ ಪ್ರಯಾಣದ ಎಲ್ಲಾ ಹಂತಗಳಲ್ಲಿ ಉಕ್ರೇನ್‌ವಾಸಿ ರೋಮಾ ಜನಾಂಗದ  ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದು ದೃಢಪಡಿಸಿದರು. ಒಂದು ಪ್ರಕರಣದಲ್ಲಿ, ಜರ್ಮನಿಯ ಪೊಲೀಸರು ಮತ್ತು ರೈಲು ಸಿಬ್ಬಂದಿ 30 ಕ್ಕೂ ಹೆಚ್ಚು ಜನರನ್ನು ರೈಲಿನಿಂದ ಕೆಳಗಿಳಿಯಲು ಒತ್ತಾಯಿಸಿದರು ಏಕೆಂದರೆ ರೋಮಾಗಳಾಗಿದ್ದರಿಂದ ಅವರ  “ನಿರಾಶ್ರಿತರ  ಸ್ಥಿತಿ” ಯುರೋಪಿಯನ್ನರಿಗೆ ಎಂದೂ ಸಂದೇಹ ತರುವಂಥದ್ದು.

ಆಂಟಿಜಿಗನಿಸಂ ಜರ್ಮನಿಯಲ್ಲಿ ರೋಮಾ ಮತ್ತು ಸಿಂಟಿ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗಿದೆ. “2022 ರಲ್ಲಿ, 12 ಹಿಂಸಾತ್ಮಕ ಅಪರಾಧಗಳನ್ನು ಒಳಗೊಂಡಂತೆ 145 ಆಂಟಿಜಿಗನಿಸ್ಟ್ ಅಪರಾಧಗಳು ವರದಿಯಾಗಿವೆ” ಎಂದು ಜರ್ಮನ್ ಸರ್ಕಾರವು ಎಡ ಪಕ್ಷದ ಸಂಸದೀಯ ಗುಂಪಿನ ಪ್ರಶ್ನೆಗೆ ಉತ್ತರಿಸಿದೆ. 2017 ರಲ್ಲಿ ಈ ಅಪರಾಧಗಳನ್ನು ದಾಖಲಿಸಲು ಪ್ರಾರಂಭಿಸಿದ ನಂತರ ಇದು ಅತ್ಯಧಿಕ ಅಂಕಿಅಂಶವಾಗಿದೆ. ಆದರೆ ಇದು ಬಹುಶಃ “ವಾಸ್ತವ ಸ್ಥಿತಿಯ  ಒಂದು ಭಾಗವನ್ನು” ಮಾತ್ರ ತೋರಿಸಿದೆ ಎಂಬುದು  ಡೈಮಗುಲರ್ ರ ಅಭಿಪ್ರಾಯ.

ರೋಮಾ ಜನಾಂಗದ ಇತಿಹಾಸ

ರೋಮಾ (ಜಿಪ್ಸಿಗಳು) ಎಂಬ  ಉತ್ತರ ಭಾರತದ ಪಂಜಾಬ್ ಪ್ರದೇಶದಲ್ಲಿ ಹುಟ್ಟಿದ  ಈ  ಅಲೆಮಾರಿ ಜನಾಂಗವು 8 ಮತ್ತು 10ನೇ ಶತಮಾನದ ನಡುವೆ ಯುರೋಪ್ ನ್ನು ಪ್ರವೇಶಿಸಿತು. ಯುರೋಪಿಯನ್ನರು ಅವರು ಈಜಿಪ್ಟ್‌ನಿಂದ ಬಂದವರು ಎಂದು ತಪ್ಪಾಗಿ ನಂಬಿ ಅವರನ್ನು “ಜಿಪ್ಸಿಗಳು” ಎಂದು ಕರೆದರು. ಜರ್ಮನಿಯಲ್ಲಷ್ಟೇ ಅಲ್ಲದೆ ಎರಡನೇ ಮಹಾಯುದ್ಧದಲ್ಲಿ ಜರ್ಮನಿಯು ಆಕ್ರಮಿಸಿಕೊಂಡ ಪೂರ್ವ ಯೂರೋಪಿನ ದೇಶಗಳಲ್ಲಿ  ಅತೀ ಹೆಚ್ಚು ಸಂಖ್ಯೆಯ ಸಿಂಟಿ ಮತ್ತು ರೋಮಾ ಕುಟುಂಬಗಳು  ನೆಲೆಸಿದ್ದವು. ಈ  ಎರಡೂ ಗುಂಪುಗಳು ಸಂಸ್ಕೃತ ಆಧಾರಿತ ರೋಮಾನಿ ಎಂಬ ಸಾಮಾನ್ಯ ಭಾಷೆಯ ಉಪಭಾಷೆಗಳನ್ನು ಮಾತನಾಡುತ್ತವೆ. “ರೋಮಾ” ಎಂಬ ಪದವು ಸಿಂಟಿ ಮತ್ತು ರೋಮಾ ಗುಂಪುಗಳನ್ನು ಒಳಗೊಂಡಿದ್ದರೂ , ಕೆಲವು ರೋಮಾಗಳು ತಮ್ಮನ್ನು  “ಜಿಪ್ಸಿಗಳು” ಎಂದು ಗುರುತಿಸಿಕೊಳ್ಳಲು ಬಯಸುತ್ತಾರೆ. ಪರ್ಷಿಯಾ, ನೈರುತ್ಯ ಏಷ್ಯಾ ಮತ್ತು  ಬಾಲ್ಕನ್ ದೇಶಗಳ  ಮೂಲಕ ತಮ್ಮ ವಲಸೆಯ ಸಮಯದಲ್ಲಿ ಕೆಲವು ರೋಮಾಗಳು ಕ್ರಿಶ್ಚಿಯನ್ ಮತ್ತು ಕೆಲವರು ಮುಸ್ಲಿಂ ಧರ್ಮದ ಅನುಯಾಯಿಗಳಾದರು .

ಶತಮಾನಗಳಿಂದ ರೋಮಾ ಜನಾಂಗವು ಯುರೋಪಿನಾದ್ಯಂತ  ತಿರಸ್ಕಾರ, ಕಿರುಕುಳ ಮತ್ತು ಬಹಿಷ್ಕಾರಕ್ಕೊಳಗಾಗಿದೆ.‘ಜಿಪ್ಸಿ’ ಗೆ ಜರ್ಮನ್ ನಲ್ಲಿ ಬಳಸಲಾಗುವ ‘ಜಿಗೆನರ್’ ಎಂಬ ಪದವು ಗ್ರೀಕ್ ಮೂಲದ್ದಾಗಿದ್ದು  ಅದರ ಅರ್ಥ  ‘ಅಸ್ಪೃಶ್ಯ’ ಎಂದು. ಯುರೋಪ್‌ನಲ್ಲಿ ಸಿಂಟಿ ಮತ್ತು ರೋಮಾ ವಿರುದ್ಧ ನಡೆದ  ನಾಜಿ ಅಪರಾಧಗಳ ಕಾರಣದಿಂದಾಗಿ  ಜರ್ಮನಿಯು ಅವರೆಡೆಗೆ ತಾನು ಪೂರೈಸಬೇಕಾದ  ಒಂದು ಗುರುತರ ಜವಾಬ್ದಾರಿಯನ್ನು ಹೊಂದಿದೆ: ಜರ್ಮನ್ನರ  ‘ನಿರ್ನಾಮ ಅಭಿಯಾನ’ವು ಉಕ್ರೇನ್ ಭೂಪ್ರದೇಶದಲ್ಲಿಯೂ ‘ಗುಂಡುಗಳಿಂದ ಹತ್ಯಾಕಾಂಡ’ (Holocaust by Bullets) ಎಂಬ ಹೆಸರಿನಲ್ಲಿ  ನಡೆಯಿತು.

1900 ರ ದಶಕದ ಆರಂಭದ ವೇಳೆಗೆ ನಿಜವಾದ ಅಲೆಮಾರಿ ರೋಮಾಗಳ ಸಂಖ್ಯೆಯು ಅನೇಕ ಸ್ಥಳಗಳಲ್ಲಿ ಇಳಿಮುಖವಾಗಿತ್ತು. 1920-30ರ ದಶಕದ ಹೊತ್ತಿಗಾಗಲೇ ಅವರು  ನೆಲೆ ನಿಂತು ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಸರ್ಕಾರೀ ನೌಕರಿಯಲ್ಲೂ ತೊಡಗಿದ್ದರು.  ಆದರೆ ಯುದ್ಧದಲ್ಲಿ ಯೆಹೂದಿಗಳೊಂದಿಗೆ ರೋಮಾ ಹಾಗೂ ಸಿಂಟಿ ಜನರ ಮೇಲೆ ನಡೆದ ಸಾಮೂಹಿಕ ಹತ್ಯೆ ಹಾಗೂ ದಬ್ಬಾಳಿಕೆಗಳು  ಮತ್ತೆ ಅವರನ್ನು ನಿರಾಶ್ರಿತರನ್ನಾಗಿಸಿ ಆಘಾತಕ್ಕೆ ದೂಡಿದವು.

ಡಾ. ಅಂಬೇಡ್ಕರ್ ಬುದ್ಧಿಸ್ಟ್ ಶಾಲೆ

ಪೂರ್ವ ಯೂರೋಪಿನ ಹಂಗೇರಿಯ ಒಟ್ಟು ಜನಸಂಖ್ಯೆಯ ಶೇಕಡಾ 7 ರಷ್ಟಿರುವ  ರೋಮಾ ಜನಾಂಗವು  ಈ ದೇಶದ  ಅತಿದೊಡ್ಡ ಅಲ್ಪಸಂಖ್ಯಾತ ಗುಂಪಾಗಿದೆ. 1948 ರಿಂದ 1989 ರವರೆಗಿನ ಕಮ್ಯುನಿಸ್ಟ್ ಯುಗದಲ್ಲಿ ಜಾರಿಗೊಳಿಸಲಾದ ಸಾಮಾಜಿಕ ಸಮಾನತೆ ಯೋಜನೆಗಳಿಂದಾಗಿ ರೋಮಾ ಜನರಿಗೆ ಉದ್ಯೋಗದಲ್ಲಿ ಮೀಸಲಾತಿಯು  ಕಾನೂನುಬದ್ಧವಾಗಿ ಕಡ್ಡಾಯವಾಗಿತ್ತು. ಆನಂತರದ ಸರ್ಕಾರಗಳು ಅಂಥ ಬದ್ಧತೆಯನ್ನೇನೂ ತೋರಿಸಲಿಲ್ಲ. 2011ರ ಯುರೋಪಿಯನ್ ಒಕ್ಕೂಟದ   ಸಮೀಕ್ಷೆಯು ಶೇಕಡಾ 55 ರಷ್ಟು ಹಂಗೇರಿಯನ್ ರೋಮಾ ಜನರು 16 ವರ್ಷಕ್ಕಿಂತ ಮುಂಚೆಯೇ ಶಾಲೆಯನ್ನು ತೊರೆದಿದ್ದಾರೆ ಎಂದು ಹೇಳುತ್ತಿದೆ .

ಈ ಶಾಲೆಯ ಸಹ ಸಂಸ್ಥಾಪಕರಾದ  ಡೆರ್ಡಾಕ್ ಟಿಬೋರ್ ( ಸಮಾಜಶಾಸ್ತ್ರಜ್ಞರು ಮತ್ತು ಹಂಗೇರಿಯನ್ ಸಂಸತ್ತಿನ ಮಾಜಿ ಸದಸ್ಯ, ನಂತರ  ರೋಮಾ ಸಮುದಾಯಕ್ಕಾಗಿನ  ಕೆಲಸದಲ್ಲಿ ತೊಡಗಿಸಿಕೊಂಡವರು) ಪ್ಯಾರಿಸ್‌ನಲ್ಲಿ ಬಾಬಾಸಾಹೇಬರ ಕುರಿತ ಪುಸ್ತಕವೊಂದನ್ನು ಓದಿದರು. ಮತ್ತು ಹೊಸ ಪ್ರಪಂಚವೊಂದು ಅವರ ಮುಂದೆ ತೆರೆದುಕೊಂಡಿತು. ಭಾರತದಲ್ಲಿ ದಲಿತರು ಮತ್ತು ಯುರೋಪಿನ ರೋಮಾಗಳು ಎದುರಿಸುತ್ತಿರುವ ತಾರತಮ್ಯದ ನಡುವಿನ ಸಾಮ್ಯತೆಗಳನ್ನು ಅವರು ತಕ್ಷಣವೇ ಗುರುತಿಸಿದರು. ಸಂದರ್ಶನದಲ್ಲಿ ತಿಬೊರ್ ಹೇಳಿದಂತೆ ಈ ಮುಂಚೆಯೂ ಅವರಿಗೆ ಅನೇಕ ಏಷ್ಯನ್ ಹಾಗೂ ಬೌದ್ಧ ಧರ್ಮದ ಅನುಯಾಯಿಗಳಾದ ಸ್ನೇಹಿತರಿದ್ದರು. ಆದರೆ ಅವರ್ಯಾರೂ ಅಂಬೇಡ್ಕರ್ ಕುರಿತಾಗಿ ಅವರೊಂದಿಗೆ ಚರ್ಚಿಸಿರಲಿಲ್ಲ.

ಅಂಬೇಡ್ಕರ್ ಕುರಿತು ಓದಿದ ನಂತರ, ಟಿಬೋರ್ ಮತ್ತು ಇತರ ರೋಮಾ ಕಾರ್ಯಕರ್ತರು ಹಲವು ವರ್ಷಗಳಿಂದ ಭಾರತದಲ್ಲಿ ಅಂಬೇಡ್ಕರ್ ರ ಚಿಂತನೆಯನ್ನು ಅನುಸರಿಸುವ  ಬೌದ್ಧರೊಂದಿಗೆ ಕೆಲಸ ಮಾಡುತ್ತಿರುವ ಫ್ರೆಂಡ್ಸ್ ಆಫ್ ವರ್ಲ್ಡ್ ಬೌದ್ಧ ಆರ್ಡರ್ (FWBO) ನೊಂದಿಗೆ ಸಂವಾದ ನಡೆಸಿದರು. 2005 ಮತ್ತು 2007 ರಲ್ಲಿ ಟಿಬೋರ್ ಮತ್ತು ಜಾನೋಸ್ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದರು.

ಜಾನೋಸ್ ಓರ್ಸೋಸ್ ರ ಐದು ವಾರಗಳ  ಭಾರತದ  ಪ್ರಯಾಣವು ಅವರ ಪ್ರಕಾರ ಒಂದು ಜೀವನವನ್ನು ಬದಲಾಯಿಸುವ ಅನುಭವ. “ಡಾ. ಅಂಬೇಡ್ಕರ್ ಅವರ ಬೋಧನೆಗಳ ಆಧಾರದ ಮೇಲೆ ದಲಿತರು ಶಿಕ್ಷಣವನ್ನು ಅತೀ ಮುಖ್ಯ ಎಂದು ಭಾವಿಸುತ್ತಾರೆ ಹಾಗೂ  ತಮ್ಮ ವಿಧಿಯ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ ಎಂದು ನಾನು ಕಂಡು ಕೊಂಡೆ. ಈ ಬಲವಾದ ಆಧ್ಯಾತ್ಮಿಕ ನಿಲುವು ದಲಿತರ ಜೀವನದಲ್ಲಿ ಬೆರಗುಗೊಳಿಸುವ ಬದಲಾವಣೆಗಳಿಗೆ ಮತ್ತು ಸಂಘಟನೆ- ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ” ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ಅಂಬೇಡ್ಕರ್ ಅವರ ಸಾಮಾಜಿಕ ಪರಿವರ್ತನೆಯ ತತ್ತ್ವಶಾಸ್ತ್ರ ಮತ್ತು ದಲಿತರಿಗಾಗಿ ಅವರ ಹೋರಾಟದಿಂದ ಪ್ರೇರಣೆ ಪಡೆದು ಟಿಬೋರ್ ಮತ್ತು ಇನ್ನೊಬ್ಬ ರೋಮಾ ನಾಯಕ  ಜಾನೋಸ್ ಹಂಗೇರಿಯ  ಸಣ್ಣ ಪಟ್ಟಣವಾದ ಸಜೋಕಾಜಾದ 5 ಸ್ಥಳಗಳಲ್ಲಿ ಈ ಶಾಲೆಯನ್ನು ಆರಂಭಿಸಿ  ರೋಮಾ ಸಮುದಾಯದ ಸಮಾನ ಹಕ್ಕುಗಳ ಹೋರಾಟದಲ್ಲಿ ಅಂಬೇಡ್ಕರ್ ವಿಚಾರಗಳನ್ನು ನಿಯೋಜಿಸಲು ಪ್ರಯತ್ನಿಸುತ್ತಿದ್ದಾರೆ.

ಸಜೋಕಾಜಾ, ಈ  ಹಿಂದೆ  ಕೈಗಾರಿಕಾ ಮತ್ತು ಗಣಿಗಾರಿಕೆ ಕೇಂದ್ರವಾಗಿದ್ದು ವಿಸ್ತಾರವಾದ ಹಂಗೇರಿಯನ್ “ರಸ್ಟ್ ಬೆಲ್ಟ್”  ನ ಭಾಗವಾಗಿತ್ತು. ರೋಮಾಗಳು ಹೆಚ್ಚಾಗಿ ಹತ್ತಿರದ ಗಣಿಗಳು  ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಗಣಿಗಾರಿಕೆ ಉದ್ಯಮವು ಕುಸಿದ ನಂತರ, ಮೂಲತಃ ಗಣಿಗಾರರಿಗೆ 1980 ರ ದಶಕದಲ್ಲಿ ನಿರ್ಮಿಸಲಾಗಿದ್ದ ಪಾಳು ಬಿದ್ದ ಕಟ್ಟಡಗಳಲ್ಲಿ  ಇಂದು ರೋಮಾಗಳು ವಾಸಿಸುತ್ತಿದ್ದಾರೆ. ಕಳಪೆ ನಿರ್ವಹಣೆ ಮತ್ತು ಅತೀ  ಬಡತನದಿಂದ ಕಟ್ಟಡಗಳು ಕುಸಿತದ ಅಂಚಿನಲ್ಲಿವೆ. ಮೂಲಸೌಕರ್ಯಗಳನ್ನು ರೋಮಾ ಸಮುದಾಯಕ್ಕೆ ಸಂಪೂರ್ಣವಾಗಿ ನಿರಾಕರಿಸಲಾಗಿದೆ.

ಆದರೆ ತಮ್ಮ ಬೌದ್ಧ ಧರ್ಮದ ಅನುಯಾಯಿಗಳ ಸಂಪರ್ಕಜಾಲದಿಂದ  ಈ ಸಣ್ಣ ಶಾಲೆಯ ವಿದ್ಯಾರ್ಥಿಗಳಿಗಾಗಿ ಬುಡಾಪೆಸ್ಟ್ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ (ಉದಾಹರಣೆಗೆ, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಸ್ಲೋವಾಕಿಯಾ) ಅನುಕೂಲಕರ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸಿರುವ ಕುರಿತು ಓರ್ಸೋಸ್ ಹೆಮ್ಮೆಯಿಂದ ವಿವರಿಸುತ್ತಾರೆ “ಅಂತಹ ಪ್ರವಾಸಗಳು ಪ್ರಮುಖ ಪ್ರೇರಕ ಅಂಶಗಳಾಗಿವೆ. ಏಕೆಂದರೆ ವಿದ್ಯಾರ್ಥಿಗಳು “ಕೊಳಕು ಜಿಪ್ಸಿಗಳು” ಎಂದು ಪರಿಗಣಿಸದ ಗೆಳೆಯರನ್ನು ಪಡೆಯಬಹುದು ಮತ್ತು  ಅಭಿವೃದ್ಧಿಯ ವಿಭಿನ್ನ ಮಾದರಿಯನ್ನು ಸಹ ನೋಡುತ್ತಾರೆ”.

ಈ ಮಾದರಿಯು  ಯಶಸ್ವಿಯಾಗುವುದೋ  ಇಲ್ಲವೋ  ಎಂಬುದನ್ನು ಸಮಯವೇ ನಿರ್ಧರಿಸುತ್ತದೆ; ಆದರೆ, ಸಂಸ್ಥೆಯನ್ನು ನಿರ್ಮಿಸಲು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ರೂಪಿಸಿ ಬಳಸಿಕೊಂಡ ರೀತಿ ಅದ್ಭುತವಾದದ್ದು. ಹಾಗೆಯೇ ಹಂಗೇರಿಯ ಹಳ್ಳಿಯ ಸನ್ನಿವೇಶದಲ್ಲಿ ಅಂಬೇಡ್ಕರ್ ತತ್ವಗಳು, ಆಚರಣೆಗಳು ಮತ್ತು ಮೌಲ್ಯಗಳ ಆಮದು ಮತ್ತು ಅನುವಾದವು ಸಮಕಾಲೀನ ಹಂಗೇರಿಯನ್ ಜನಾಂಗೀಯ-ರಾಷ್ಟ್ರೀಯವಾದಿ ಭೂದೃಶ್ಯದಲ್ಲಿ  ಅಲ್ಪಸಂಖ್ಯಾತ ಯುವಕರನ್ನು ಸಬಲೀಕರಣಗೊಳಿಸಲು ನಿರ್ಣಾಯಕ ಮಾದರಿಯಾಗಿ ಒದಗಿ ಬಂದಿದೆ ಎಂದು ಹೇಳಬಹುದು.

(ಈ ಲೇಖನಕ್ಕಾಗಿ ಪೂರಕ ಮಾಹಿತಿಯನ್ನು ಜೆಕಟ್ಯೆರಿನಾ ಡುನಾಜೆವಾ, ಅಸಿಸ್ಟೆಂಟ್ ಪ್ರೊಫೆಸರ್  ಪಜ್ಮನಿ ಪೀಟರ್ ಕ್ಯಾಥೋಲಿಕ್ ವಿಶ್ವವಿದ್ಯಾಲಯ ಮತ್ತು ಪ್ಯಾಟ್ರಿಕ್ ಸಿಯಾಸ್ಚಿ, ನ್ಯೂ ಸ್ಕೂಲ್ ಫಾರ್ ಸೋಶಿಯಲ್ ರಿಸರ್ಚ್, ನ್ಯೂಯಾರ್ಕ್ ಅವರ  ಪರ್ಯಾಯ ಶಿಕ್ಷಣ ಮತ್ತು ರೋಮಾ ಸಬಲೀಕರಣ: ಡಾ. ಅಂಬೇಡ್ಕರ್ ಬೌದ್ಧ ಶಾಲೆಯ ಕುರಿತ ಅಧ್ಯಯನ  ಮಹಾ ಪ್ರಬಂಧದಿಂದ -ಹಾಗೂ ಇನ್ನಿತರ ಮೂಲಗಳಿಂದ  ಪಡೆಯಲಾಗಿದೆ)‌

ರಂಜಿತಾ ಜಿ ಎಚ್

ಬರಹಗಾರರು

ಸರ್ಕಾರೇತರ ಸಂಸ್ಥೆ (NGO)ಗಳ ವಿರುದ್ಧ ಸರ್ಕಾರಗಳ ಯುದ್ಧ
ಆಡಳಿತ ಪಕ್ಷವು ಎಲೆಕ್ಟೋರಲ್ ಬಾಂಡ್ ಗಳ ಮೂಲಕ ಅಪಾರದರ್ಶಕ ರೀತಿಯಲ್ಲಿ ದೇಶ ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳಿಂದ  ದೇಣಿಗೆಯಾಗಿ ಹರಿದು ಬರುವ ಹಣದ ಅತೀ ದೊಡ್ಡ ಫಲಾನುಭವಿಯಾಗಿದ್ದರೂ, ಜನರು ಆ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲು  ಹಿಂಜರಿಯುವುದು ಮಾತ್ರ ಭಾರತಕ್ಕೆ ಸೀಮಿತವಾದ ವಿದ್ಯಮಾನ ಎನಿಸುತ್ತಿದೆ – ರಂಜಿತಾ ಜಿ ಎಚ್, ಫಿನ್ಲೆಂಡ್

ಮಾರ್ಚ್ ಮೊದಲ ವಾರದಲ್ಲಿ ಜಾರ್ಜಿಯಾದ ರಾಜಧಾನಿಯಲ್ಲಿ ಸಾವಿರಾರು ನಾಗರಿಕರು ತನ್ನ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿದ “ ವಿದೇಶೀ ದೇಣಿಗೆಯಲ್ಲಿ ಪಾರದರ್ಶಕತೆ “ ಕುರಿತಾದ ಮಸೂದೆಯ ವಿರುದ್ಧ ಪ್ರತಿಭಟಿಸಿದರು. ಮೂರು ದಿನಗಳ ಭಾರೀ ಪ್ರತಿಭಟನೆಗೆ ಮಣಿದ ಸರ್ಕಾರ ಮಸೂದೆಯನ್ನು ಹಿಂಪಡೆಯಿತು ಹಾಗೂ ಯೂರೋಪಿಯನ್ ಒಕ್ಕೂಟ ಸೇರಲು ತಮ್ಮ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಜನರಿಗೆ ಆಶ್ವಾಸನೆ ನೀಡಿತು.

ಈ ಪ್ರಸ್ತಾಪಿತ  ಕಾನೂನಿನ ಪ್ರಕಾರ  ನಾಗರಿಕ ಸಮಾಜದ ಸಂಸ್ಥೆಗಳು, ಎನ್ .ಜಿ .ಓ ಗಳು  ಮತ್ತು  ಮಾಧ್ಯಮ ಸಂಸ್ಥೆಗಳು ವಿದೇಶೀ ಮೂಲದಿಂದ ಶೇಕಡಾ 20ಕ್ಕಿಂತ ಹೆಚ್ಚು ಹಣವನ್ನು ಪಡೆದಲ್ಲಿ  ತಮ್ಮನ್ನು  “ವಿದೇಶಿ ಪ್ರಭಾವದ ಏಜೆಂಟ್” ಎಂದು ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ  $9,600ವರೆಗೆ ದಂಡ ವಿಧಿಸಲಾಗುತ್ತದೆ. ಜಾರ್ಜಿಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಸಂಸ್ಥೆಯ ಪ್ರಕಾರ “ಎನ್‌ಜಿಒಗಳು ದೇಣಿಗೆಗೆ ಸಂಬಂಧಿಸಿದಂತೆ ಈಗಾಗಲೇ 10 ವಿಭಿನ್ನ ಕಾನೂನುಗಳಿಗೆ ಒಳಪಟ್ಟಿವೆ ಮತ್ತು ಹಣಕಾಸು ಸಚಿವಾಲಯವು ಈಗಾಗಲೇ ಖಾತೆಗಳು, ಹಣ ಮತ್ತಿತರ ಮಾಹಿತಿಗಳನ್ನು ಹೊಂದಲು  ಸಂಪೂರ್ಣ ಪ್ರವೇಶವನ್ನು ಹೊಂದಿದೆ”

ಜಾರ್ಜಿಯಾದಲ್ಲಿನ ಪ್ರತಿಭಟನಾಕಾರರ ಮುಖ್ಯ  ಕಳವಳ,  ಪ್ರಸ್ತಾವಿತ ಕಾನೂನು ರಷ್ಯಾದ ವಿದೇಶಿ ದೇಣಿಗೆಯನ್ನು ನಿರ್ಬಂಧಿಸುವ ಕಾಯ್ದೆಯನ್ನು ಅನುಸರಿಸುತ್ತದೆ ಎಂಬುದಾಗಿತ್ತು. ರಷ್ಯಾದಲ್ಲಿನ ಈ ಕಾನೂನು  ಪ್ರಬಲವಾದ ಸಾಧನವಾಗಿ ಮಾರ್ಪಟ್ಟು ಸುದ್ದಿ ಸಂಸ್ಥೆಗಳು, ಎನ್‌ ಜಿ ಓ ಹಾಗೂ ಅನೇಕ ಇತರೆ ಪಾಶ್ಚಿಮಾತ್ಯ ಸಂಸ್ಥೆ, ಕಂಪನಿಗಳನ್ನು ನಿಷೇಧಿಸಿ  ನಾಗರಿಕ ಸಮಾಜವನ್ನು ‘ಸ್ವಚ್ಛಮಾಡಲು’ ಸಹಾಯ ಮಾಡಿತು. 2008ರ ಯುದ್ಧದಲ್ಲಿ ಶೇಕಡಾ 20ರಷ್ಟು ತನ್ನ ಭೂಭಾಗವನ್ನು ರಷ್ಯಾ ವಶಪಡಿಸಿಕೊಂಡ ನಂತರ ಜಾರ್ಜಿಯನ್ನರಿಗೆ ‘ರಷ್ಯನ್ ಮಾದರಿ’ ಎಂಬ ಯಾವುದೇ ಮಸೂದೆ/ವಸ್ತುವು ರುಚಿಸದು.

ಭಾರತದಲ್ಲಿ ಸರ್ಕಾರಗಳೂ, ಎನ್‌.ಜಿ.ಒಗಳೂ..

ಸಾಮಾನ್ಯವಾಗಿ ಈ ಹಿಂದಿನ ಯಾವ  ಸರ್ಕಾರಗಳೂ  ಎನ್‌.ಜಿ.ಒಗಳೊಂದಿಗೆ ಉತ್ತಮ ಒಡನಾಟವನ್ನು  ಹೊಂದಿರಲಿಲ್ಲ. ಆದರೆ ವಿಶೇಷವಾಗಿ ಪ್ರಸ್ತುತ ಸರ್ಕಾರವು ಅವುಗಳ ವಿರುದ್ಧ ಯುದ್ಧ ಸಾರಿದಂತಿದೆ. 2015ರಲ್ಲಿ  ಗ್ರೀನ್ ಪೀಸ್ ಇಂಡಿಯಾ ದ ಪರವಾನಗಿ ರದ್ದು ಮಾಡುವ ಮೂಲಕ ಶುರುವಾದ ಈ ಯುದ್ಧ ವರ್ಷದಿಂದ ವರ್ಷಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌, ಆಕ್ಸ್ಫ್ಯಾಮ್ ಇಂಡಿಯಾದಂಥ ಹಲವು ಸರ್ಕಾರೇತರ ಸಂಸ್ಥೆಗಳ ದೇಣಿಗೆಯ ಮೂಲವನ್ನು ನಿಯಂತ್ರಿಸುತ್ತ  ಅಥವಾ ಕೊನೆಗಾಣಿಸುತ್ತ ನಡೆದಿದೆ.

2020ರಲ್ಲಿ ಸುಪ್ರೀಂ ಕೋರ್ಟು, ಇಂಡಿಯನ್ ಸೋಶಿಯಲ್ ಆಕ್ಷನ್ ಫೋರಂ ಸಂಘಟನೆ ಕುರಿತ ವಿಚಾರಣೆ ಪ್ರಕರಣದಲ್ಲಿ “ರಾಜಕೀಯ ಉದ್ದೇಶ ಹೊಂದಿರದ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಂಘಟನೆಗಳು ವಿದೇಶೀ ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗದು (ಆದರೆ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸಂಸ್ಥೆಗಳ ವಿದೇಶೀ ದೇಣಿಗೆ ಸಂಗ್ರಹವನ್ನು ತಡೆಯಬಹುದು)” ಎಂದು ಹೇಳಿತ್ತು.

ವಿದೇಶೀ ದೇಣಿಗೆ ಪರವಾನಗಿ ಕಳೆದುಕೊಂಡ ಎನ್‌ಜಿಒಗಳು…

ಈ ತೀರ್ಪಿನ ಹೊರತಾಗಿಯೂ ಎರಡು ವರ್ಷಗಳ ಆನಂತರ 12,500 ಕ್ಕೂ ಹೆಚ್ಚು  ಎನ್‌ಜಿಒಗಳು ವಿದೇಶೀ ದೇಣಿಗೆ ಪಡೆಯುವ ಪರವಾನಗಿ ಕಳೆದುಕೊಂಡವು. ಹಲವು ಎನ್‌ಜಿಒಗಳು ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಿರಲಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾದರೆ ತಡರಾತ್ರಿಯಲ್ಲಿ ಗೃಹಸಚಿವಾಲಯವು ತಾನೇ ತರಾತುರಿಯಲ್ಲಿ  ಸುಮಾರು 5,933 ಎನ್‌ಜಿಒಗಳ ಪರವಾನಗಿ ರದ್ದು ಪಡಿಸಿ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಪರವಾನಗಿ ಕಳೆದುಕೊಂಡ ಹಲವು ಸಂಸ್ಥೆಗಳೆಂದರೆ – ಕರ್ನಾಟಕದ ಸಿಟಿಜನ್ ಆಕ್ಷನ್ ಗ್ರೂಪ್, ಸೆಂಟ್ರಲ್ ಡಯಾಲಿಸಿಸ್ ಸೆಂಟರ್, ಭಾರತ ಕ್ಷಯ ರೋಗ ಸಂಸ್ಥೆ, ನೆಹರೂ ಮೆಮೊರಿಯಲ್ ಮ್ಯೂಸಿಯಂ, ಕೊಲ್ಕೊತ್ತದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉತ್ತರಾಖಂಡ ವಿಪತ್ತು ನಿರ್ವಹಣಾ ಕೇಂದ್ರ, ದೆಹಲಿ ಪಬ್ಲಿಕ್ ಸ್ಕೂಲ್ ಸೊಸೈಟಿ, ಸತ್ಯಜಿತ್ ರೇ ಫಿಲ್ಮ್ ಸೊಸೈಟಿ… ಇತ್ಯಾದಿ! ಸರ್ಕಾರದ ಈ ನಡೆಯ ಕೆಲವೇ ತಿಂಗಳ ಹಿಂದೆ ಮದರ್ ಥೆರೇಸಾರವರು ಸ್ಥಾಪಿಸಿದ ಮಿಷನರಿ ಆಫ್ ಚಾರಿಟಿ ಸಂಸ್ಥೆಯ ಪರವಾನಗಿ ನವೀಕರಿಸಲು ನಿರಾಕರಿಸಿದ್ದು  ದೊಡ್ಡ ವಿವಾದವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು.

ಹೀಗೆ ಹಂತ ಹಂತವಾಗಿ ಎನ್. ಜಿ .ಓ  ಗಳಿಗೆ ವಿದೇಶೀ ದೇಣಿಗೆಯನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರವು ಕಳೆದ ನವೆಂಬರ್ (2022) ನಲ್ಲಿ ‘ಸೇವ್ ದಿ ಚಿಲ್ಡ್ರನ್ ‘ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯು, ದೇಶದೊಳಗಿನ ದಾನಿಗಳಿಂದಲೂ  ಹಣ ಸಂಗ್ರಹಣೆ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರಗಳಿಗೆ ಆದೇಶಿಸಿತು. ಹಾಗೂ “ಅಂತಹ ಎನ್‌ಜಿಒಗಳಿಂದ ಹರಡುತ್ತಿರುವ ಸುಳ್ಳು ಮಾಹಿತಿಯನ್ನು ಬಹಿರಂಗಪಡಿಸಲು” ಮತ್ತು ಸರ್ಕಾರದ ಸ್ವಂತ ಪೌಷ್ಟಿಕಾಂಶ ಯೋಜನೆಗಳ ಬಗ್ಗೆ “ಸಕ್ರಿಯವಾಗಿ ಜಾಗೃತಿಯನ್ನು ಪ್ರಸಾರ ಮಾಡಲು” ರಾಜ್ಯಗಳಿಗೆ ಹೇಳಿತು.

ಅವಕೃಪೆಗೆ ತುತ್ತಾದ ‘ಸೈಟ್‌ಸೇವರ್ಸ್ ಇಂಡಿಯಾ’ ಸಂಸ್ಥೆ

ಡಿಸೆಂಬರ್ ನಲ್ಲಿ ಸರ್ಕಾರದ ಅವಕೃಪೆಗೆ ಪಾತ್ರವಾಗುವ ಸರದಿ,  57 ವರ್ಷಗಳಿಂದ  ಭಾರತದಲ್ಲಿ ಅಂಧರಿಗೆ ಮತ್ತು ದೃಷ್ಟಿಹೀನರಿಗೆ ಅಂಗವೈಕಲ್ಯ-ಹಕ್ಕುಗಳ ವಕಾಲತ್ತುಗಳನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿರುವ ‘ಸೈಟ್‌ಸೇವರ್ಸ್ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಯದ್ದಾಯಿತು. ಸೈಟ್‌ಸೇವರ್ಸ್ ಯಾವ ಕಾನೂನುಗಳು ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂಬುದನ್ನು ವಿವರಿಸದೆ, ಆರೋಗ್ಯ ಸಚಿವಾಲಯವು ಅಂಧರು ಮತ್ತು ದೃಷ್ಟಿಹೀನರ ಹೆಸರಿನಲ್ಲಿ ದೇಶದೊಳಗಿನ ಮೂಲಗಳಿಂದ ಏಕೆ ದೇಣಿಗೆ ಸಂಗ್ರಹಿಸಿದೆ ಎಂಬುದನ್ನು ವಿವರಿಸಲು ಈ  ಎನ್‌ಜಿಒಗೆ ಕೇಳಿದೆ.

ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR ) ಸಂಸ್ಥೆ

6 ತಿಂಗಳ ಹಿಂದೆ ಆಕ್ಸ್ಫ್ಯಾಮ್ ಇಂಡಿಯಾ, ಐಪಿಎಸ್ ಮೀಡಿಯಾ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR ) ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ‘ಸರ್ವೇ’ ನಡೆಸಿದ ನಂತರ,  2023 ಮಾರ್ಚ್ ನಲ್ಲಿ ಸರ್ಕಾರವು CPR ಸಂಸ್ಥೆಯ ವಿದೇಶೀ ದೇಣಿಗೆ ಸಂಗ್ರಹಣೆಯ ಪರವಾನಗಿ ರದ್ದು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯು ‘ಸಿಎಜಿ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಂದ ನಾವು  ನಿಯಮಿತವಾಗಿ ಲೆಕ್ಕಪರಿಶೋಧನೆ  ಮತ್ತು ಪರಿಶೀಲನೆಗೊಳಗಾಗಿದ್ದೇವೆ ಹಾಗೂ ಎಲ್ಲ ಅಗತ್ಯ ನಿಯಮಗಳನ್ನು ಪಾಲಿಸಲಾಗಿದೆ’ ಎಂದು ಹೇಳಿದೆ .

1973 ರಲ್ಲಿ ಸ್ಥಾಪಿತವಾದ CPR ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ನೀತಿ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮತ್ತು ಜಗತ್ತಿನಾದ್ಯಂತದ  ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಕೆಲಸ ಮಾಡುತ್ತದೆ. ಕಳೆದ ಐದು ದಶಕಗಳಲ್ಲಿ, ಇದು ಭಾರತ ಎದುರಿಸುತ್ತಿರುವ ಪ್ರಮುಖ ಸಾರ್ವಜನಿಕ ನೀತಿ ಪ್ರಶ್ನೆಗಳು ಮತ್ತು ಸವಾಲುಗಳ ಕುರಿತು ಜ್ಞಾನ ಮತ್ತು ಸಂಶೋಧನೆಯ ಪ್ರಮುಖ ಮತ್ತು ದೃಢವಾದ ಪಕ್ಷಾತೀತ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ. ಸಿಪಿಆರ್ ನಿರ್ಮಿಸಿದ ಅತ್ಯುತ್ತಮ ವಿದ್ಯಾರ್ಥಿವೇತನವು ಭಾರತೀಯ ಸಾರ್ವಜನಿಕ ಚರ್ಚೆಗಳನ್ನು ನಿರಂತರವಾಗಿ ಜಾರಿಯಲ್ಲಿಟ್ಟು ಉತ್ತಮ  ಮಾಹಿತಿ ಸಂಗ್ರಹಣೆಗೆ ನೆರವಾಗಿದೆ.

ಸರ್ಕಾರವು ಅಸಮಂಜಸ ಕಾರಣ ನೀಡಿ, ಇಂಥ ವಿಶ್ವಮಾನ್ಯ ಭಾರತೀಯ ಸಂಸ್ಥೆಯೊಂದರ  ವಿದೇಶೀ ದೇಣಿಗೆ ಪರವಾನಗಿ ರದ್ಧು ಮಾಡಿರುವುದನ್ನು ಖಂಡಿಸಿ 100ಕ್ಕೂ ಹೆಚ್ಚು  ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶಿಕ್ಷಣ ತಜ್ಞರು ಹಾಗೂ  ವಿದ್ವಾಂಸರು “CPR ವಿರುದ್ಧದ ಇತ್ತೀಚಿನ ನಡೆಗಳು ಬೌದ್ಧಿಕ ಸ್ವಾತಂತ್ರ್ಯಕ್ಕೆ ಹೊಡೆತ” ಎಂದು ಭಾರತ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ!

ಹರ್ಷ ಮಂದರ್ ಅವರ ಅಮನ್ ಬಿರಾದಾರಿ ಸಂಸ್ಥೆ

ಈ ಲೇಖನ ಬರೆಯುವ ಹೊತ್ತಿಗೆ ಗೃಹ ಮಂತ್ರಿಗಳು, ಹರ್ಷ ಮಂದರ್ ರ ಅಮನ್ ಬಿರಾದಾರಿ ಸಂಸ್ಥೆಯ  ವಿದೇಶೀ ದೇಣಿಗೆಯ ಮೂಲದ ಕುರಿತು  ಸಿಬಿಐ ವಿಚಾರಣೆಗಾಗಿ ಆದೇಶಿಸಿದ್ದಾರೆ. ಸರ್ಕಾರದ ಕಟು ಟೀಕಾಕಾರರಾಗಿರುವ ಹರ್ಷ ಮಂದರ್ ರವರ ಬಾಲಾಶ್ರಮಗಳು ಈಗಾಗಲೇ ದೇಣಿಗೆ  ದುರುಪಯೋಗದ ನೆಪದಲ್ಲಿ ಹಲವು ಬಾರಿ ವಿಚಾರಣೆಗೊಳಗಾಗಿವೆ. ಇದು ಅವರಿಗೆ ಅನಿರೀಕ್ಷಿತವೇನೂ ಆಗಿರಲಿಕ್ಕಿಲ್ಲ. ಆದರೆ ಸರ್ಕಾರ ಮಾತ್ರ ಯಾರ ಸಲಹೆಗೂ ಕಿವಿಗೊಡದೆ, ಚುನಾವಣಾ ವರ್ಷಕ್ಕೆ ತಯಾರಿ ಎಂಬಂತೆ  ತನ್ನ ಅಧೀನದಲ್ಲಿರುವ ವಿವಿಧ ತನಿಖಾ ಸಂಸ್ಥೆಗಳನ್ನು ಹೇಗೆಲ್ಲಾ ಬಳಸಬಲ್ಲೆ ಎಂದು  “ಎಲ್ಲರಿಗೂ” ತನ್ನ ಬಲ  ಪ್ರದರ್ಶಿಸಲು ತಯಾರಾಗಿ ನಿಂತಿದೆ.

ನಾಗರೀಕರ ಪ್ರತಿಭಟನೆ

ಮಾರ್ಚ್ 2022ರಲ್ಲಿ ( ರಷ್ಯಾ ಉಕ್ರೇನ್ ನ್ನು ಆಕ್ರಮಿಸಿದ  ತಿಂಗಳ ನಂತರ ) ಯೂರೋಪಿಯನ್ ಒಕ್ಕೂಟ ಸೇರಲು ಜಾರ್ಜಿಯಾ ಕೂಡ ಅರ್ಜಿ ಸಲ್ಲಿಸಿತ್ತು.  ಆದರೆ ಯೂರೋಪಿಯನ್ ಒಕ್ಕೂಟವು ಉಕ್ರೇನ್, ಮಾಲ್ಡೋವಾದ ಅರ್ಜಿಯನ್ನು ಮನ್ನಿಸಿ ಅಭ್ಯರ್ಥಿ ಸ್ಥಾನ ಕೊಟ್ಟರೆ ಜಾರ್ಜಿಯಾ ಗೆ ತನ್ನ ಸರ್ಕಾರದ ಅಂಗಗಳನ್ನು ಭ್ರಷ್ಟಾಚಾರ ಮುಕ್ತ ಮಾಡುವ ಹಾಗೂ ಆಡಳಿತದಲ್ಲಿ ರಷ್ಯನ್ ಶ್ರೀಮಂತರ ಹಸ್ತಕ್ಷೇಪವನ್ನು ತಡೆಯುವ ಕ್ರಮ ಕೈಗೊಳ್ಳಬೇಕೆಂಬ  ಷರತ್ತು ವಿಧಿಸಿ ಅದರ ಅರ್ಜಿಯನ್ನು ಕಾಯ್ದಿರಿಸಿತು. ತನ್ನ ಸರ್ಕಾರವು ಒಕ್ಕೂಟದ ಸದಸ್ಯತ್ವ ಪಡೆಯಲು ಈ ಬಾರಿ ವಿಫಲವಾಗಿದ್ದಕ್ಕೆ 60,000ಕ್ಕೂ ಹೆಚ್ಚು ನಾಗರೀಕರು ಆಗ  ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ಹಾಗೂ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯ ರಚನೆಯಲ್ಲಿ ರಷ್ಯನ್ ಹಸ್ತಕ್ಷೇಪವನ್ನು ಶಂಕಿಸಿದ ನಾಗರೀಕರ  ಪ್ರತಿಭಟನೆಯೂ  ಮಾರ್ಚ್ ನಲ್ಲಿ ಅಷ್ಟೇ ಉಗ್ರವಾಗಿ ವ್ಯಾಪಿಸಿತು.

ಭಾರತದಲ್ಲಿ ನಾಗರೀಕರು ಎನ್‌ ಜಿ ಒ ಗಳ ಪರವಹಿಸುವುದಿಲ್ಲ ಯಾಕೆ?

ಭಾರತದಲ್ಲಿ ನಾಗರೀಕರು ಯಾವುದೇ ಸರಕಾರವು ಎನ್ .ಜಿ .ಓ ಗಳ ಮೇಲೆ ದಾಳಿ ಮಾಡಿದರೆ ಅದರ ಪರವಹಿಸುವುದು ಅಥವಾ ಪ್ರತಿಭಟನೆ ಮಾಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ‘ಪ್ರತೀ ವಿದೇಶೀ ದೇಣಿಗೆ ಪಡೆದ (ಅದೆಷ್ಟೇ ಸಣ್ಣ ಮೊತ್ತವಾಗಿರಲಿ ) ಸಂಸ್ಥೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ’ ಎಂದು ಸರ್ಕಾರವು  ಜನರ ಮನಸ್ಸಿನಲ್ಲಿ ಸಂದೇಹ ಬಿತ್ತುವುದರಲ್ಲಿ ಯಶಸ್ವಿಯಾಗಿರುವುದರಿಂದ ಜನರು ಆ ಸಂಸ್ಥೆಗಳನ್ನು ‘ವಿಮರ್ಶಿಸುವುದರಲ್ಲಿ -ಟೀಕಿಸುವಲ್ಲಿ ‘ ಹಿಂದೆ ಬೀಳುವುದಿಲ್ಲ .

ಆಡಳಿತ ಪಕ್ಷವು ದೇಣಿಗೆಗಳ ಅತೀ ದೊಡ್ಡ ಫಲಾನುಭವಿ

ಸಾರ್ವಜನಿಕ ಸೇವೆಯಲ್ಲಿ ದಶಕಗಳಿಂದ ತೊಡಗಿದ ಸರ್ಕಾರೇತರ ಸಂಸ್ಥೆಗಳು ಹಾಗೂ  ವಿರೋಧ ಪಕ್ಷಗಳ ದೇಣಿಗೆಯ ಮೂಲವನ್ನು ಇಷ್ಟು ಸಮರ್ಥವಾಗಿ ನಿಯಂತ್ರಿಸಿ, ಉಸಿರುಗಟ್ಟಿಸುತ್ತಿರುವ  ಸರ್ಕಾರ ಬಹುಶ ಇನ್ನೊಂದಿರಲಿಕ್ಕಿಲ್ಲ. ಆದರೆ ಆಡಳಿತ ಪಕ್ಷವು ಎಲೆಕ್ಟೊರಲ್ ಬಾಂಡ್ ಗಳ ಮೂಲಕ ಅಪಾರದರ್ಶಕ ರೀತಿಯಲ್ಲಿ ದೇಶ ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳಿಂದ  ದೇಣಿಗೆಯಾಗಿ ಹರಿದು ಬರುವ ಹಣದ ಅತೀ ದೊಡ್ಡ ಫಲಾನುಭವಿಯಾಗಿದ್ದರೂ, ಜನರು ಆ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲು  ಹಿಂಜರಿಯುವುದು ಮಾತ್ರ ಭಾರತಕ್ಕೆ ಸೀಮಿತವಾದ ವಿದ್ಯಮಾನ ಎನಿಸುತ್ತಿದೆ.

ರಂಜಿತಾ ಜಿ ಎಚ್‌

ಬರಹಗಾರರು

ಎಂಟು ವರ್ಷಗಳ ಹಿಂದೆ ಆ ಒಂದು ಕ್ಷಣ-ಮಿಶೆಲ್ ಯೋಹ್
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸದ್ಭಾವನಾ ರಾಯಭಾರಿ ಆಗಿರುವ ಮಿಶೆಲ್ ಯೋಹ್ ಈ ವರ್ಷದ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಏಷ್ಯನ್ – ಮಲೇಷಿಯಾ – ನಟಿ ಎಂಬ ಹೆಗ್ಗಳಿಕೆ ಅವರದು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಾಗಿ ಅವರು ಬರೆದ ಲೇಖನವನ್ನು ರಂಜಿತಾ ಎಚ್‌ ಅನುವಾದ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಪ್ರಪಂಚದಾದ್ಯಂತದ ಅನೇಕ ಜನರು ನನ್ನ ವೃತ್ತಿ ಜೀವನದ ಹಲವು ಪ್ರಥಮಗಳನ್ನು  ಆಚರಿಸಲು,  ನನ್ನ ಮೊದಲ ಗೋಲ್ಡನ್ ಗ್ಲೋಬ್, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಮತ್ತು ಇಂಡಿಪೆಂಡೆಂಟ್  ಸ್ಪಿರಿಟ್ ಪ್ರಶಸ್ತಿಯಿಂದ ನನ್ನ ಮೊದಲ ಆಸ್ಕರ್  ಗಳಿಸುವವರೆಗೆ ನನ್ನೊಂದಿಗೆ ಜೊತೆಯಾದರು. ನನ್ನ ವೃತ್ತಿಪರ ಜೀವನದ ಈ ಮರೆಯಲಾಗದ ಕ್ಷಣಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಆ ಜಾಗತಿಕ ಗಮನವನ್ನು ನನಗೆ ತುಂಬಾ ವೈಯಕ್ತಿಕವಾದ ಮತ್ತು ಪ್ರಪಂಚದ ಗಮನದ ಅಗತ್ಯ ವಿರುವ  ವಿಷಯದೆಡೆಗೆ ಸೆಳೆಯಲು ನಾನು ಬಯಸುತ್ತೇನೆ.

ಎಂಟು ವರ್ಷಗಳ ಹಿಂದೆ…

ಎಂಟು ವರ್ಷಗಳ ಹಿಂದೆ ಆ ಒಂದು ಕ್ಷಣ ಪ್ರಪಂಚದ ಬಗ್ಗೆ ನನ್ನ ದೃಷ್ಟಿಕೋನವನ್ನು ಅಲುಗಾಡಿಸಿತು, ಅದು ನನ್ನ ಜೀವನವನ್ನು  ಬದಲಾಯಿಸಿತು.

ಏಪ್ರಿಲ್ 25, 2015ರಂದು   ನಾನು ನನ್ನ ಜತೆಗಾರ  ಜೀನ್ ಟಾಡ್ ಅವರೊಂದಿಗೆ ನೇಪಾಳದಲ್ಲಿ   ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದೆ. ಇದ್ದಕ್ಕಿದ್ದಂತೆ, ಭೂಮಿಯು ಉಗ್ರವಾಗಿ  ನಡುಗಲು ಪ್ರಾರಂಭಿಸಿತು. ನಾನು ತಂಗಿದ್ದ ಆ  ಕಟ್ಟಡದ ಬಾಗಿಲುಗಳ ಹೊರಗೆ, ಮಾರಣಾಂತಿಕ ಭೂಕಂಪವು ದೇಶವನ್ನು ಧ್ವಂಸಗೊಳಿಸಿತು. ನನ್ನ ಪಾದದಡಿಯ  ನೆಲವು ತುಂಬಾ ಜೋರಾಗಿ ಅಲುಗಾಡಿದ ಆ ದಿನ ನಾನು ಅನುಭವಿಸಿದ ಭಯ ಮತ್ತು ಗಾಬರಿಯನ್ನು  ನಾನು ಎಂದಿಗೂ ಅನುಭವಿಸಿಲ್ಲ. ನನ್ನ ಕಾಲಿನ ಮೇಲೆ ನಿಲ್ಲಲು ನನಗೆ ಸಾಧ್ಯವಾಗಲಿಲ್ಲ. ತಪ್ಪಿಸಿಕೊಳ್ಳಲು ಬಾಗಿಲಿಗೆ ಹೋಗಲು ನಾನು ತೆವಳ ಬೇಕಾಯಿತು. ನಾವು ಹೊರಬಂದ ಆನಂತರ ಯಾವ ಕಟ್ಟಡಗಳು ಹಿಂತಿರುಗಲು  ಸುರಕ್ಷಿತವಾಗಿವೆ ಎಂಬ ಖಚಿತ ಮಾಹಿತಿಯಿಲ್ಲದೆ ಗಂಟೆಗಳ ಕಾಲ ಬಯಲಲ್ಲಿ  ಉಳಿಯ ಬೇಕಾಯಿತು.

ಆ ದಿನ ಯಾವುದೇ ಹಾನಿಯಾಗದಂತೆ ಪಾರಾದ  ನಾನು ಅದೃಷ್ಟಶಾಲಿಯಾಗಿದ್ದೆ. ಆದರೆ ಆ ಘಟನೆ ಮಾತ್ರ  ಭಯಾನಕ  ಅನುಭವ. ಅದರ ಪರಿಣಾಮಗಳು ಈಗಲೂ ನನ್ನಲ್ಲಿ ಉಳಿದು ಕೊಂಡಿವೆ.

ಭೂಕಂಪದ ಸಮಯದಲ್ಲಿ ನಮ್ಮ ಹೋಟೆಲ್  ವಾಸಿಸಲಾಗದಷ್ಟು ಹಾನಿಗೊಳಗಾಯಿತು. ಆದ್ದರಿಂದ ನಾವು ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿ  ಎರಡು ರಾತ್ರಿಗಳನ್ನು ಕಳೆದ ಬಳಿಕ ವಿಮಾನದ ಮೂಲಕ ಸ್ಥಳಾಂತರಗೊಂಡೆವು. ನಾವು ಮತ್ತೆ ರಸ್ತೆಗಿಳಿದಾಗ ನನ್ನ ಸುತ್ತಲೂ ಇದ್ದ ಅವಶೇಷಗಳು ಮತ್ತು ಅದ ಹಾನಿಯನ್ನು ನಾನು ನೋಡಿದೆ. ಇಡೀ ಜೀವನವು ಹಠಾತ್ತನೆ ಕುಸಿದು ಹೋದ ಸಾವಿರಾರು ಕುಟುಂಬಗಳ ನಡುವೆ ʼನನಗೆ ಹೋಗಿ ನಿದ್ರಿಸಲು  ಒಂದು ಮನೆ ಇರುವುದು ಎಷ್ಟು ಅನ್ಯಾಯ’ ಎಂಬ ಆಲೋಚನೆಯನ್ನು ನಾನು ತೊಡೆಯಲು  ಸಾಧ್ಯವಾಗಲಿಲ್ಲ.

ಅಷ್ಟು ದೊಡ್ಡ ಪ್ರಮಾಣದ ವಿಪತ್ತುಗಳು ಈಗಾಗಲೇ ಕನಿಷ್ಠ ಸವಲತ್ತುಗಳಲ್ಲಿ ಬದುಕು  ನಡೆಸುತ್ತಿರುವ ಜನರ  ಜೀವನಕ್ಕೆ ಬಹುಶ: ಎಂದೂ ಸರಿಪಡಿಸಲಾಗದಂಥ  ಹಾನಿಯನ್ನುಂಟುಮಾಡುತ್ತವೆ. ಭೂಕಂಪದ ಮೂರು ವಾರಗಳ ಆನಂತರ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ನೇಪಾಳಕ್ಕೆ ಹಿಂದಿರುಗಿದಾಗ ಮತ್ತು ಒಂದು ವರ್ಷದ ಆನಂತರ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸದ್ಭಾವನಾ ರಾಯಭಾರಿಯಾಗಿ (Goodwill Ambassador) ಮತ್ತೆ ನೇಪಾಳಕ್ಕೆ ಹೋದಾಗ ನಾನು ಇದನ್ನು ಗಮನಿಸಿದೆ .

ಟರ್ಕಿ ಮತ್ತು ಸಿರಿಯಾ ಭೂಕಂಪ ಹೀಗೆ ಯೋಚನೆಗೆ ಹಚ್ಚಿತು…

ಕಳೆದ ತಿಂಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಕುರಿತ ವರದಿಗಳನ್ನು ವೀಕ್ಷಿಸಿದಾಗ ನಾನು ನೇಪಾಳದ ಬಗ್ಗೆ ಮತ್ತೊಮ್ಮೆ ಯೋಚಿಸಿದೆ. ಭೂಕಂಪ ಸಂಭವಿಸುವ ಮುಂಚೆಯೇ, ಸಿರಿಯಾದಲ್ಲಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಭೀಕರವಾಗಿದ್ದವು. ಅಲ್ಲಿನ  ಸರಿಸುಮಾರು ಶೇಕಡಾ 90  ಜನಸಂಖ್ಯೆಯು ಬಡತನದಲ್ಲಿ ವಾಸಿಸುತ್ತಿದೆ. ಅನೇಕರು ಈಗ ನಿರಾಶ್ರಿತರಾಗಿದ್ದಾರೆ ಮತ್ತು ಅವರ ಜೀವನವನ್ನು ಪುನರ್ನಿರ್ಮಿಸಲು ಅಥವಾ ಅವರ ಕುಟುಂಬಗಳನ್ನು ಸುರಕ್ಷಿತವಾಗಿರಿಸಲು ಅಗತ್ಯವಿರುವ ಸಂಪನ್ಮೂಲಗಳ ಕೊರತೆಯಿದೆ.

Michelle Yeoh in Nepal

ವಿಪತ್ತುಗಳು  ಕೇವಲ ದುರಂತದ ಕ್ಷಣಗಳಲ್ಲ…

ಅವು ಆಳದಲ್ಲಿ  ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ಬಹಿರಂಗ ಪಡಿಸುತ್ತವೆ. ಬಡತನದಲ್ಲಿ ಬದುಕುತ್ತಿರುವವರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು ಇಲ್ಲಿ ಅತೀವ ಭಾರ ಹೊರುತ್ತಾರೆ.  ದುರಂತದ ಬಳಿಕದ ಕ್ಷಣಗಳಲ್ಲಿ , ನೈರ್ಮಲ್ಯ, ಆರೋಗ್ಯ ಸೌಲಭ್ಯಗಳು ಮತ್ತು ಸುರಕ್ಷತೆಯ ಕೊರತೆಯು ಮಹಿಳೆಯರ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ.  ಸದ್ಭಾವನಾ ರಾಯಭಾರಿಯಾಗಿದ್ದ ಸಮಯದಲ್ಲಿ, ಮಹಿಳೆಯರು ಮತ್ತು ಹುಡುಗಿಯರು ಸಾಮಾನ್ಯವಾಗಿ ಶಾಲೆಗೆ ಮರಳುವವರಲ್ಲಿ  ಕೊನೆಯವರು.  ಮತ್ತು ಶುದ್ಧ ನೀರು, ಲಸಿಕೆಗಳು, ಗುರುತಿನ ಚೀಟಿಗಳು, ಕೌನ್ಸೆಲಿಂಗ್‌ನಂತಹ ಮೂಲಭೂತ ಸೇವೆಗಳನ್ನು ಪಡೆಯುವಲ್ಲಿಯೂ  ಕೊನೆಯವರಾಗಿರುತ್ತಾರೆ  ಎಂಬುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹಾಗೂ  ಅವರು ಸಾಮಾನ್ಯವಾಗಿ ಉದ್ಯೋಗಗಳು ಮತ್ತು ಸಾಲಗಳನ್ನು ಪಡೆಯುವವವರಲ್ಲಿ  ಕೊನೆಯವರು.

ಸಿರಿಯಾದಲ್ಲಿ ಮುಂಬರುವ ತಿಂಗಳುಗಳಲ್ಲಿ ನೈರ್ಮಲ್ಯ ವ್ಯವಸ್ಥೆಗಳನ್ನು ಹೊಂದದೆಯೇ  ಸುಮಾರು 40,000 ಮಹಿಳೆಯರು  ತಾಯಂದಿರಾಗಲಿದ್ದಾರೆ  ಎಂದು UN ನ ಅಂಕಿ ಅಂಶಗಳು ಹೇಳುತ್ತಿವೆ. ಮಹಿಳೆಯರು, ಕಟ್ಟಡಗಳು ಅಸುರಕ್ಷಿತವೆನಿಸಿದಾಗ ಅಥವಾ  ಕುಸಿದಾಗ   ಸಾಕಷ್ಟು ಗೌಪ್ಯತೆ ಅಥವಾ ರಕ್ಷಣೆಯಿಲ್ಲದೆ  ಗುಂಪುಗಳ  ಆಶ್ರಯದಲ್ಲಿ ತೆರೆದ ಸ್ಥಳದಲ್ಲಿ ಮಲಗಬೇಕಾದಾಗ, ಲೈಂಗಿಕ ದೌರ್ಜನ್ಯ ಮತ್ತು ಆಕ್ರಮಣಗಳಂತಹ   ಅಪಾಯಕ್ಕೀಡಾಗುತ್ತಾರೆ.  ದುರಂತದ ನಂತರದ ಸಮಯದಲ್ಲಿ ಈ ಪ್ರಕರಣಗಳ ಸಂಖ್ಯೆ  ಗಗನಕ್ಕೇರುತ್ತದೆ.

ವಿಪತ್ತಿನಿಂದ ಚೇತರಿಸಿಕೊಳ್ಳಲು…

ವಿಪತ್ತಿನಿಂದ ಚೇತರಿಸಿಕೊಳ್ಳಲು ಮತ್ತು ಮುಂದಿನದಕ್ಕೆ ಸಿದ್ಧರಾಗಿರಲು, ಮುಖ್ಯವಾಗಿ  ಮಹಿಳೆಯರು ಮತ್ತು ಹುಡುಗಿಯರ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ಸಹಾಯ, ಸ್ಪಂದನೆಯ ಕಾರ್ಯಕ್ರಮಗಳು  ತಯಾರಾಗಬೇಕು. ಮಹಿಳೆಯರು ತಮ್ಮ ಸಮುದಾಯಗಳ ಆಧಾರವಾಗಿರುತ್ತಾರೆ  ಎಂದು ನಮಗೆ ತಿಳಿದಿದೆ. ಅವರ ಧ್ವನಿಗಳು, ನಾಯಕತ್ವ ಮತ್ತು ಪೂರ್ಣ ಭಾಗವಹಿಸುವಿಕೆಯು ಎಲ್ಲರನ್ನೂ ಒಳಗೊಳ್ಳುವ ಯಶಸ್ವಿ ಮತ್ತು ಸುಸ್ಥಿರ ಚೇತರಿಕೆಗೆ ಪ್ರಮುಖವಾಗಿದೆ. ನೆರೆಹೊರೆಗಳನ್ನು ಮರು ನಿರ್ಮಾಣ ಮಾಡುವಾಗ ಮತ್ತು ಶಾಲೆಗಳು, ಮಾರುಕಟ್ಟೆ ಸ್ಥಳಗಳನ್ನು ನಿರ್ಮಿಸುವಾಗ ಮಹಿಳೆಯರ ಅಗತ್ಯಗಳು, ಆದ್ಯತೆಗಳು ಮತ್ತು ಸುರಕ್ಷತೆಯನ್ನು ಮೊದಲು ಪರಿಗಣಿಸಬೇಕಿದೆ.  ಮಹಿಳೆಯರಿಗೆ ಮಾಹಿತಿ, ಉದ್ಯೋಗದ ಅವಕಾಶಗಳು ಮತ್ತು ಕೌಶಲ್ಯ ತರಬೇತಿಯ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಮರಳಿ ಪಡೆಯಲು ನಿರ್ಣಾಯಕವಾಗಿರುವ ಸಾಲಗಳು ಮತ್ತು ವಿಮಾ ಕಾರ್ಯವಿಧಾನಗಳಿಗೆ  ಸಮಾನ ಪ್ರವೇಶವನ್ನು ಖಾತರಿ ಪಡಿಸಬೇಕಿದೆ.

ಸಮುದಾಯ, ರಾಷ್ಟ್ರೀಯ ಮತ್ತು ಸಾಂಸ್ಥಿಕ ಹಂತಗಳಲ್ಲಿ ಅಧಿಕಾರಯುತ ಹಾಗೂ ನಿರ್ಧಾರ ತೆಗೆದುಕೊಳ್ಳುವಂಥ  ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರಿದ್ದಲ್ಲಿ , ಎಲ್ಲಾ ಹಂತಗಳಲ್ಲಿ ಲಿಂಗ ಸಮಾನತೆಯನ್ನು ರಕ್ಷಿಸುವಂಥ  ಭಾಗೀದಾರಿಕೆಯ ನೀತಿಗಳು, ಕಾನೂನುಗಳು ಮತ್ತು ಅಭ್ಯಾಸಗಳಿಗೆ ಕಾರಣವಾಗುತ್ತದೆ ಎಂದು ನಮಗೆ ತಿಳಿದಿದೆ. ಇಂಥ ಸ್ಥಾನಗಳಲ್ಲಿ ಅವರ ಪ್ರತಿಭೆಯ ಪೂರ್ಣ ಉಪಯೋಗ ಪಡೆಯಲು ನಾವು ಮೊದಲು  ಮನೆಯಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಆನ್‌ಲೈನ್‌ನಲ್ಲಿ ಅಥವಾ ಎಲ್ಲೆಡೆ  ಲಿಂಗ ಆಧಾರಿತ ಹಿಂಸೆಯೆಡೆಗೆ  ಶೂನ್ಯ ಸಹಿಷ್ಣುತೆಗಾಗಿ (zero tolerance ) ಶ್ರಮಿಸಬೇಕು. ಅವರ ಧ್ವನಿಯು ಸರ್ಕಾರ ಮತ್ತು ಸಮಾಜದ ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಮಹಿಳಾ ಶಿಕ್ಷಣದಲ್ಲಿ ಹೂಡಿಕೆ ಮಾಡುವುದರ ಅಗತ್ಯದ ಕಡೆ ಇದು ಬೊಟ್ಟು ಮಾಡುತ್ತಿದೆ.

ಮರುಕಳಿಸುವ ಸಾಂಕ್ರಾಮಿಕಗಳು, ಯುದ್ಧ ಹಾಗೂ ವಿಪತ್ತುಗಳಿಂದ ಪೀಡಿತ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ ಮತ್ತು ಹವಾಮಾನ ಬದಲಾವಣೆಯೊಂದಿಗೆ ಹೋರಾಡುತ್ತಿದ್ದೇವೆ. ಇದು ದುಸ್ತರವೆಂದು ಎನಿಸಬಹುದು. ಆದರೆ, ನಂಬಲಾಗದಷ್ಟು ವೇಗದ  ತಾಂತ್ರಿಕ ಪ್ರಗತಿಯ ಸಮಯದಲ್ಲಿ ನಾವು ವಾಸಿಸುತ್ತಿದ್ದೇವೆ. ಈ ಬಿಕ್ಕಟ್ಟುಗಳನ್ನು ಎದುರಿಸುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ನಮ್ಮ ಅತ್ಯಂತ ಶಕ್ತಿಶಾಲಿ ಸ್ನೇಹಿತರಾಗಿವೆ. ವಿಪತ್ತಿಗೆ  ಪ್ರತಿಕ್ರಿಯೆಯ ಗತಿಯನ್ನು  ತಂತ್ರಜ್ಞಾನವು ಸುಧಾರಿಸುತ್ತಿದೆ. ಸಮುದಾಯಗಳನ್ನು ಬಲಪಡಿಸುತ್ತ, ಆರ್ಥಿಕ ಚೇತರಿಕೆಯನ್ನು ಹೆಚ್ಚಿಸುತ್ತಿದೆ.

Michelle Yeoh Nepal Photo

ಡಿಜಿಟಲ್ ಪ್ರಪಂಚವು ಅಸಮಾನತೆಯ ಸ್ಥಳವಾಗಿದೆ…

ಆದರೆ  ಡಿಜಿಟಲ್ ಪ್ರಪಂಚವು ಇನ್ನೂ ಅಸಮಾನತೆಯ ಸ್ಥಳವಾಗಿದೆ. ಜಾಗತಿಕವಾಗಿ, 2.7 ಬಿಲಿಯನ್ ಜನರನ್ನು ಡಿಜಿಟಲ್ ಸಂಪರ್ಕದಿಂದ ಹೊರಗಿಡಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು.  ವಿಶ್ವಬ್ಯಾಂಕ್ ಪ್ರಕಾರ ವಿಪತ್ತನ್ನು  ಎದುರಿಸಲು  ಸಮರ್ಪಕ ತಯಾರಿ, ಪ್ರತಿಕ್ರಿಯೆ  ಮತ್ತು ನಿಭಾಯಿಸುವುದು ಇವೇ ಮುಂತಾದ ವಿಷಯಗಳು ಸೇರಿದಂತೆ ಮಹಿಳೆಯರು ತಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ಸಂಪನ್ಮೂಲಗಳಿಗೆ  ಪ್ರವೇಶ ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ. ಈ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ನಾವು ಡಿಜಿಟಲ್ ಸಾಕ್ಷರತೆ ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಕ್ಷೇತ್ರಗಳನ್ನು ಪ್ರೋತ್ಸಾಹಿಸುವಂಥ  ಮಹಿಳಾ ಶಿಕ್ಷಣದಲ್ಲಿ ಉತ್ತಮ ಹೂಡಿಕೆ ಮಾಡಬೇಕು.

ಈ ವರ್ಷ ನಾವು ವಿಶ್ವಸಂಸ್ಥೆಯು ‘ಸುಸ್ಥಿರ ಅಭಿವೃದ್ಧಿ ಗುರಿಗಳು-2030 (Sustainable Development Goals) ಎಂದು ಕರೆಯುವ ಘಟ್ಟವನ್ನು  ಸಾಧಿಸುವಲ್ಲಿ  ಅರ್ಧದಾರಿಯನ್ನಷ್ಟೇ  ಕ್ರಮಿಸಿದ್ದೇವೆ. ಇದು ಬಡತನ ಅಥವಾ ಅಸಮಾನತೆ ಇಲ್ಲದ ಜಾಗತಿಕ ದೃಷ್ಟಿಕೋನದ ನೀಲನಕ್ಷೆಯಾಗಿದೆ. UNDP ಯೊಂದಿಗಿನ ನನ್ನ ಕೆಲಸದ ಮೂಲಕ ನಾನು ಕಲಿತದ್ದೇನೆಂದರೆ  ಈ ಜಾಗತಿಕ ಗುರಿಗಳನ್ನು ಕೈಗೂಡಿಸಲು ನಾವು ಎಲ್ಲೆಡೆ, ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಅದರಲ್ಲೂ ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಮುಂದಿನ ದುರಂತದ ಪೂರ್ವ ನಿರೀಕ್ಷಣೆಯ ತಯಾರಿಯ ಪ್ರಕ್ರಿಯೆಯಲ್ಲಿ   ನಿಜವಾದ ಲಿಂಗ ಸಮಾನತೆಯನ್ನು ಸಾಧಿಸಿದರೆ ಮಾತ್ರ ಸಾಧ್ಯ.

ಮಹಿಳೆಯರೆಡೆಗೆ ವಿಶ್ವದ ಗಮನ ಸೆಳೆಯುವುದು ನನ್ನ ಆದ್ಯತೆ…

ನನ್ನ  60 ನೇ ವಯಸ್ಸಿನಲ್ಲಿ  ನಾನು ನನ್ನ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಆದ್ದರಿಂದ  ದೃಢ, ಅವಿರತ  ಪ್ರಯತ್ನದ ಕುರಿತು ಸ್ವಲ್ಪ  ತಿಳಿದಿದ್ದೇನೆ ಎನ್ನಬಹುದು.  ಹಾಗೂ  ಸಮಾಜವು ಮಹಿಳೆಯರಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಬಗ್ಗೆಯೂ  ನನಗೆ ತಿಳಿದಿದೆ. ನಾನು ಭೇಟಿಯಾದ ವಿಪತ್ತು ನಿರ್ವಹಣೆಯ  ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ವೀರ ವನಿತೆಯರ ಅನುಭವದೊಂದಿಗೆ ನನ್ನ ಅನುಭವವನ್ನು ಹೋಲಿಸಲಾಗುವುದಿಲ್ಲ ಎಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನ ವೃತ್ತಿಪರ ಜೀವನದ ಅತೀ  ಸಂತೋಷದ ಈ ಕ್ಷಣದಲ್ಲಿ ನಾನು ಮಾಡಲು ಸಾಧ್ಯವಿರುವ ಒಂದು ಕೆಲಸವೆಂದರೆ ಸಾಮಾನ್ಯವಾಗಿ ತೆರೆಮರೆಯಲ್ಲಿ ಗುರುತಿಸಲ್ಪಡದೆ, ತಮ್ಮ ಸಮುದಾಯಗಳನ್ನು ಪುನರ್ನಿರ್ಮಿಸುವ, ಮಕ್ಕಳನ್ನು ಮತ್ತು ವಯಸ್ಸಾದವರನ್ನು ನೋಡಿಕೊಳ್ಳುವ ಮತ್ತು ಸಮಯಕ್ಕೆ ಸರಿಯಾಗಿ  ಮೇಜಿನ ಮೇಲೆ ಆಹಾರ ತಂದಿರಿಸುವ ಮಹಿಳೆಯರೆಡೆಗೆ ವಿಶ್ವದ ಗಮನ ಸೆಳೆಯುವುದು. ಅವರ ಮೇಲೆ ಹೆಚ್ಚು ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಚರ್ಚೆ ನಡೆಯುತ್ತಿರುವ ಪ್ರತೀ  ಕೊಠಡಿಯಿಂದ ಅವರು ಕಾಣೆಯಾಗಿರುವುದಿಲ್ಲ  ಎಂದು ಖಚಿತ ಪಡಿಸಿಕೊಳ್ಳೋಣ.

ಮೂಲ   : ಮಿಶೆಲ್ ಯೋಹ್ ‌

ಅನುವಾದ : ರಂಜಿತಾ ಜಿ ಹೆಚ್

ಒಂದು ವರ್ಷದ ಯುದ್ಧ ಹಾಗೂ ಉಕ್ರೇನಿಯನ್ನರ ಪ್ರತಿರೋಧ
ಇದೇ ಫೆಬ್ರವರಿ ೨೪ ಕ್ಕೆ ರಷ್ಯಾ ಮತ್ತು ಉಕ್ರೇನ್‌ ಯುದ್ಧ ಶುರುವಾಗಿ ಒಂದು ವರ್ಷ ಕಳೆದಿದೆ. ಯುದ್ಧ‌ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ನಿಲ್ಲಿಸಬೇಕಾದದ್ದು ಪುಟಿನ್. ಉಕ್ರೇನ್ ಏನಾದರೂ ತನ್ನ ಹೋರಾಟವನ್ನು ನಿಲ್ಲಿಸಿದರೆ, ಉಕ್ರೇನ್ ಎಂಬ ದೇಶವೇ ಕೊನೆಯಾಗುತ್ತದೆ ಎಂದು ಬರೆಯುತ್ತಾರೆ ಫಿನ್ಲೆಂಡಿನಿಂದ ರಂಜಿತಾ ಜಿ ಎಚ್.

ಫಿನ್ಲೆಂಡಿಗೆ ನಾವು ಬಂದಾಗ ಯುಧ್ಧ ಆಗಲೇ ಶುರುವಾಗಿತ್ತು. ಫಿನ್ಲೆಂಡ್ ಹಾಗೂ ಸ್ವೀಡನ್ ಉಕ್ರೇನಿಗೆ ಬೆಂಬಲ ಘೋಷಿಸಿದ್ದುದರಿಂದ  ಪುಟಿನ್ ಈ ದೇಶಗಳಿಗೆ ಯುದ್ಧದ ಬೆದರಿಕೆ ಹಾಕಿಯೂ ಆಗಿತ್ತು. ನಮ್ಮ ಮನೆಯ ಮಾಲೀಕರು  ಯುದ್ಧದ ಸಮಯದ ಅಗತ್ಯಕ್ಕಾಗಿ ಅಪಾರ್ಟ್‌ಮೆಂಟಿನ ಕೆಳಗೆ ಬಂಕರ್ ಇರುವುದನ್ನು ತೋರಿಸಿ, “ಇಲ್ಲಿಯೂ ಯುದ್ಧ ಶುರುವಾಗಲಾರದು ಎಂದು ಅಂದುಕೊಂಡಿದ್ದೇನೆ…” ಎಂದು ತೀರಾ ಸಾಮಾನ್ಯ ವಿಷಯವೊಂದನ್ನು ಚರ್ಚಿಸುವಂತೆ ವಿವರಿಸಿದಾಗ ನನಗೆ ಏನು ಯೋಚಿಸಬೇಕು, ಮಾತಾಡಬೇಕು ಎಂದು ತಿಳಿಯದೆ ಸುಮ್ಮನಿದ್ದೆ .

ರಷ್ಯಾದ ಜೊತೆ ಹಲವು ಯುದ್ಧಗಳ ಇತಿಹಾಸ ಇರುವ ಫಿನ್ಲೆಂಡಿನಲ್ಲಿ ಅಪಾರ್ಟ್‌ಮೆಂಟ್‌ ಗಳ ಕೆಳಗೆ, ಸಾರ್ವಜನಿಕ ಕಟ್ಟಡಗಳ ಕೆಳಗೆ ಬಂಕರ್ ಗಳು ಇರುವುದು ಸಾಮಾನ್ಯ. 2008 ರ ರಷ್ಯಾ -ಜಾರ್ಜಿಯಾ ಯುದ್ಧ ಮತ್ತು 2014ಲ್ಲಿ  ಉಕ್ರೇನಿನ ಕ್ರಿಮಿಯವನ್ನು ರಷ್ಯಾ  ವಶ ಪಡಿಸಿಕೊಂಡ ಆನಂತರದಲ್ಲಿ ಕಟ್ಟಲಾದ ವಸತಿ ಸಮುಚ್ಚಯಗಳು (ಖಾಸಗಿ ಹಾಗೂ ಸರ್ಕಾರಿ ) ಬಂಕರ್ ಗಳನ್ನು ಕಡ್ಡಾಯ ಎಂಬಂತೆ ಹೊಂದಿವೆ. ಫಿನ್ಲೆಂಡಿಗರು ‘ನಮ್ಮ ಪಕ್ಕದಲ್ಲಿರುವ ಕರಡಿ [ರಷ್ಯಾ] ಯ ಬಗ್ಗೆ ನಮಗೆ  ಭ್ರಮೆಗಳೇನಿಲ್ಲ’ ಎಂದು ತಮ್ಮ ಬಂಕರ್ ಸಂಸ್ಕೃತಿಯನ್ನು ಸಮರ್ಥಿಸಿಕೊಂಡರೆ, ರಷ್ಯನ್ ಟ್ರೋಲ್‌ ಗಳು “ಇಷ್ಟು ಬಂಕರ್ ಗಳನ್ನು ಇನ್ಯಾರು ಕಟ್ಟಿದ್ದರು ಗೊತ್ತೇ?  ಹಿಟ್ಲರ್ ! ಫಿನ್ಲೆಂಡ್ ನಿಜಕ್ಕೂ ತನ್ನ ಹಳೆಯ ನಾಝಿತನವನ್ನು ಬಿಡಬೇಕು“ ಎಂದು ವ್ಯಂಗ್ಯವಾಡುತ್ತಾರೆ

2013ರಲ್ಲಿ  ಉಕ್ರೇನಿನ ಸಂಸತ್ತು, ಯುರೋಪಿಯನ್ ಒಕ್ಕೂಟದೊಂದಿಗೆ ರಾಜಕೀಯ ಸಹಕಾರ ಹಾಗೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಬಹುಮತದ ಒಪ್ಪಿಗೆ ಸೂಚಿಸಿತ್ತು. ಆದರೆ ಆನಂತರ ರಷ್ಯಾದ ಒತ್ತಡ, ಬೆದರಿಕೆಗಳಿಗೆ ಮಣಿದ ಅಂದಿನ ಉಕ್ರೇನ್ ಅಧ್ಯಕ್ಷ ಯಾನುಕೋವಿಚ್ ಈ ಒಪ್ಪಂದದಿಂದ ಹಿಂದೆ ಸರಿದು ರಷ್ಯಾದೊಂದಿಗೆ ನಿಕಟ ಸಂಬಂಧ ಸಾಧಿಸುವುದನ್ನು ಆಯ್ಕೆ ಮಾಡಿಕೊಂಡರು. ಇದನ್ನು ವಿರೋಧಿಸಿ ನವೆಂಬರ್‌ ನಲ್ಲಿ ಶುರುವಾದ ಯೂರೊಮೈದಾನ್  ದಂಗೆ  ಅಥವಾ ‘ಘನತೆಯ ಕ್ರಾಂತಿ’(  Revolution Of Dignity) ಯಲ್ಲಿ ನೂರಾರು ಪ್ರತಿಭಟನಾಕಾರರು, ಪೊಲೀಸರು ಸತ್ತರು. ದಂಗೆ, ಭ್ರಷ್ಟಾಚಾರದ ಆರೋಪಗಳು, ಮಾನವ ಹಕ್ಕು ಉಲ್ಲಂಘನೆಯ ಆರೋಪಗಳಿಂದಾಗಿ ಅಧ್ಯಕ್ಷರು ರಾಜೀನಾಮೆ ಕೊಡಬೇಕಾಯಿತು. ಈ ದಂಗೆಗಳಿಗೆ ಪ್ರತಿಯಾಗಿ ರಷ್ಯನ್ ಭಾಷಿಕರು ಹೆಚ್ಚಾಗಿರುವ ಪೂರ್ವ ಉಕ್ರೇನ್ ನಲ್ಲಿ ರಷ್ಯಾದಿಂದ ಪ್ರೇರಿತ ದಂಗೆಗಳು ಶುರುವಾಗಿ ರಷ್ಯಾವು ಕ್ರಿಮಿಯವನ್ನು  ವಶಪಡಿಸಿಕೊಂಡಿತು ಹಾಗೂ ಪೂರ್ವ ಉಕ್ರೇನಿನ ಹಲವು ಪ್ರಾಂತ್ಯಗಳು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಗುಂಪುಗಳ ಪ್ರಭಾವಕ್ಕೊಳಗಾದವು.

2014ರಲ್ಲಿ ಕ್ರಿಮಿಯಾ ಅತಿಕ್ರಮಣದ  ನಂತರವೂ ರಷ್ಯಾದೊಂದಿಗೆ ವ್ಯಾವಹಾರಿಕ ಸಂಬಂಧ ಹೆಚ್ಚಿಸಿಕೊಂಡೇ ಇದ್ದ ಯುರೋಪಿನ ದೇಶಗಳಿಗೆ ಈ ಬಾರಿಯ ಆಕ್ರಮಣದಲ್ಲಿ ಉಕ್ರೇನ್ ಪರವಾಗಿ ನಿಲ್ಲಲೇಬೇಕಾದ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿರಲಿಲ್ಲ. ‘ಉಕ್ರೇನ್ ನಾಝಿ ಪ್ರಭಾವಕ್ಕೆ ಒಳಗಾಗಿದೆ’ ಎಂದು ರಷ್ಯಾ ಆರೋಪಿಸಿದರೂ  ಜರ್ಮನಿಯೊಂದಿಗೆ ರಷ್ಯಾದ  ವ್ಯಾಪಾರ ಬಹಳ ಉತ್ತಮವಾಗೇ ನಡೆಯುತ್ತಿತ್ತು. ಕೋವಿಡ್ ನಂತರದ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಂಡರೆ ಸಾಕೆನಿಸುವಂಥ ಸ್ಥಿತಿಯಲ್ಲಿರುವ ದೇಶಗಳಿಗೆ ಯುದ್ಧ ಬೇಕಿರಲಿಲ್ಲ.

ಭ್ರಷ್ಟಾಚಾರ ನಿರ್ಮೂಲನೆಯ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಝೆಲೆನ್ಸ್ಕಿ ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಏದುಸಿರು ಬಿಡುತ್ತಿರುವಾಗಲೇ ಪುಟಿನ್ ರ  ‘ವಿಶೇಷ ಮಿಲಿಟರಿ ಕಾರ್ಯಾಚರಣೆ’  ಶುರುವಾಯಿತು. ಆಕ್ರಮಣದ  ಆರಂಭದ ದಿನಗಳಲ್ಲಿ ಗೊಂದಲ, ಆಘಾತಕ್ಕೆ ಒಳಗಾದಂತೆ ಕಂಡುಬಂದ ಉಕ್ರೇನ್  ಅಧ್ಯಕ್ಷರಿಗೆ ಈ ಬಾರಿ ಬಹುಶ: ಜನರೇ ತಮ್ಮ  ಆಯ್ಕೆ ಸ್ಪಷ್ಟ ಪಡಿಸಿದರು. ಒಂದು ದಶಕದಲ್ಲಿ ಎರಡನೇ ಬಾರಿ ಸೋಲೊಪ್ಪಲು ತಯಾರಿರದೆ ಈ ಬಾರಿ ಉಕ್ರೇನಿಯನ್ನರು ಹೋರಾಡಲೇ ಬೇಕೆಂದು ನಿರ್ಧರಿಸಿದರು.

ಅಧ್ಯಕ್ಷ ಝೆಲೆನ್ಸ್ಕಿ ತನಗೆ ಸಿಕ್ಕ ಯಾವ  ಸಾರ್ವಜನಿಕ ವೇದಿಕೆಯನ್ನೂ ಬಿಡದೆ ಉಕ್ರೇನ್ ಬಗ್ಗೆ ಚರ್ಚೆ ಜಾರಿ ಇಟ್ಟರು; ಸಾಮಾಜಿಕ ಮಾಧ್ಯಮದ ಮುಖಾಂತರ ಜನರೊಂದಿಗೆ ನಿರಂತರ ಸಂವಹನ ನಡೆಸಿದರು. ದೇಶ ಬಿಟ್ಟು ಹೊರ ಹೋಗಲಾಗದ ಪತಿಯ ಪರವಾಗಿ ಒಲೆನ ಝೆಲೆಂಕ್ಸ ಹಲವು ದೇಶಗಳ ನಾಯಕರನ್ನು  ಭೇಟಿಯಾಗಿ ಸಹಾಯ ಕೋರಿದರು. ಆರಂಭದ ತಿಂಗಳುಗಳಲ್ಲಿ, ಯುರೋಪ್ ಮತ್ತು ನ್ಯಾಟೋದ  ನಾಯಕರು ಖಾಸಗಿ ಚರ್ಚೆಗಳಲ್ಲಿ ಅನುಕಂಪ, ಸಹಾಯದ  ಮಾತಾಡಿದರೂ, ಶಸ್ತ್ರಗಳ ಪೂರೈಕೆಯ ಭರವಸೆ ನೀಡುವಲ್ಲಿ ಬಹಿರಂಗವಾಗಿ ಹಿಂಜರಿದರು. ಆದರೆ  ಸಹಾಯದ ಭರವಸೆಯ ಹಲವು ಖಾಸಗಿ ಸಂಭಾಷಣೆಗಳು ಕೆಲವೇ ಗಂಟೆಗಳಲ್ಲಿ ಮಾಧ್ಯಮದ ಮುಂದೆ “ಅದ್ಯಾವ ರೀತಿಯಲ್ಲೋ “ ಬಯಲಾಗಿ ನ್ಯಾಟೋ ನಾಯಕರನ್ನು ಪೇಚಿಗೆ ಸಿಲುಕಿಸಿ ಶಸ್ತ್ರಗಳು, ಧನ ಸಹಾಯವನ್ನು ನಿಜಕ್ಕೂ ಶೀಘ್ರವಾಗಿ ಬಿಡುಗಡೆ ಮಾಡಬೇಕಾದಂಥ ಒತ್ತಡದ ಪರಿಸ್ಥಿತಿ ನಿರ್ಮಾಣವಾಯಿತು! ಆನಂತರ ಉಕ್ರೇನಿನ ಸೈನ್ಯ ಹಲವು ಆಕ್ರಮಿತ ಪ್ರದೇಶಗಳನ್ನು ಮರು ವಶಪಡಿಸಿಕೊಂಡದ್ದು, ವಾರದಲ್ಲಿ ಮುಗಿಯಬಹುದಾದ ಮಿಲಿಟರಿ ಕಾರ್ಯಚರಣೆಯಿದು ಎಂದು ನುಗ್ಗಿದ ರಷ್ಯಾ ಸೈನ್ಯವನ್ನು ತಿಂಗಳುಗಳ ಕಾಲ ತಡೆದು ಹಿಡಿದದ್ದು ನ್ಯಾಟೋ ಹಾಗೂ ಯೂರೋಪಿಯನ್ ಒಕ್ಕೂಟದ ನಾಯಕರಿಗೂ ಒಂದು ಅಚ್ಚರಿಯ ವಿಷಯ.

ಹಲವು ಗೆಲವುಗಳ ನಂತರವೇ ಸಹಾಯ ಮಾಡಿದ ದೇಶಗಳ ನಾಯಕರನ್ನು ಖುದ್ದು  ಭೇಟಿಯಾಗಲು  ಉಕ್ರೇನ್ ಬಿಟ್ಟು ಹೋದ  ಝೆಲೆನ್ಸ್ಕಿ ಎಲ್ಲೆಲ್ಲೂ  ತನ್ನ ದೇಶದ ಸೈನಿಕರನ್ನು ಹೋಲುವ ವಸ್ತ್ರಗಳನ್ನು ಧರಿಸಿ ತಾನೊಂದು ಯುದ್ಧ ನಿರತ, ಬೆಂಬಲದ ಅಗತ್ಯವಿರುವ ದೇಶದ ಅಧ್ಯಕ್ಷ ಎಂಬುದನ್ನು ಮಿತ್ರರಿಗೆ ಸದಾ ನೆನಪಿಸುತ್ತಾ, ಗೋಚರತೆಯ ಸಾಧನಗಳನ್ನು ಬಳಸುವಲ್ಲಿನ ಅವರ ಚಾಣಾಕ್ಷತೆಯನ್ನು ಸಾಬೀತುಪಡಿಸಿದ್ದಾರೆ.

ರಷ್ಯಾದ ನಿರಂತರ ಪ್ರಚಾರ (ಪ್ರೊಪಗಾಂಡಾ)ಕ್ಕೆ ಕಿವಿಯಾಗಿರುವ ಭಾರತದ ಹಾಗೂ ಪ್ರಪಂಚದ ತೀವ್ರ ಎಡ ಪಂಥದವರ ಸಮಸ್ಯೆ ಏನೆಂದರೆ ನ್ಯಾಟೋ ವಿರೋಧಿಸುವ ಭರದಲ್ಲಿ,  ನಾಝಿ ಜರ್ಮನಿಯ ವಿರುದ್ಧದ  ಸ್ಟಾಲಿನ್ ಹೋರಾಟದ ರಮ್ಯ ನೆನಪುಗಳನ್ನು ಮೆಲುಕು ಹಾಕುತ್ತಾ, ಅದಕ್ಕೂ ವರ್ಷಗಳ ಮುಂಚೆಯೇ  ಒಂದು ಪೂರ್ತಿ (ಸೋವಿಯತ್ ಉಕ್ರೇನ್) ರಾಜ್ಯದ ಜನರನ್ನು ಹಸಿವಿನಿಂದ ಸಾಮೂಹಿಕವಾಗಿ ಸಾಯುವಂತೆ ಮಾಡಿದ ಸ್ಟಾಲಿನ್ ಸರ್ಕಾರದ ನೀತಿಗಳನ್ನು ಅವರು ಮರೆಯುತ್ತಾರೆ. ಅಮೆರಿಕದ ಹಾಗೂ ಯೂರೋಪಿನ  ಕೆಲವು ಇತಿಹಾಸಜ್ಞರು 2014ರ ಅತಿಕ್ರಮಣದ ಆನಂತರ ಉಕ್ರೇನ್ ಬಗ್ಗೆ ಹೆಚ್ಚು ಹೆಚ್ಚು ಬರೆಯಲಾರಂಭಿಸಿದ್ದನ್ನು ಅವರು ಉದಾಹರಿಸಿ ಇದು ನ್ಯಾಟೋ ಪಿತೂರಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಇದೇ ಸಮಯದಲ್ಲಿ ಅವರು ಕೆಲವಾದರೂ ಉಕ್ರೇನಿಯನ್ ಸಾಹಿತಿ /ಇತಿಹಾಸಜ್ಞರ ಬರಹಗಳನ್ನು ಹಂಚಿ ಅವರ ಅಭಿಪ್ರಾಯ  ಓದಿದ ಉದಾಹರಣೆ ಕೊಡುವುದಿಲ್ಲ.

ಉಕ್ರೇನಿಯನ್ನರ ಮೇಲೆ ಇರುವ ಇನ್ನೊಂದು ಅಪವಾದ ಅವರು ಅತೀ ರಾಷ್ಟ್ರವಾದಿಗಳು ಎಂಬುದು. ಉಕ್ರೇನಿಯನ್ ಭಾಷೆ- ಸಂಸ್ಕೃತಿಯ ಮೇಲೆ ರಷ್ಯನ್ ಸಂಸ್ಕೃತಿಯ ಹೇರಿಕೆ  ಹಾಗೂ ಅದರ ವಿರುದ್ಧ ಉಕ್ರೇನಿಯನ್ನರ ಹೋರಾಟ  ತ್ಸಾರ್ ದೊರೆಗಳ ಆಡಳಿತ ಕಾಲದಿಂದ ನಡೆದು ಬಂದ ಇತಿಹಾಸವಿದೆ. ಈ ಯುದ್ಧವು ರಷ್ಯನ್ ವಸಾಹುತುಶಾಹಿ ವಿರುದ್ಧದ ಯುದ್ಧವೂ ಆಗಿದೆ. ಒಂದು ದಶಕದಲ್ಲಿ ಎರೆಡೆರಡು ಬಾರಿ ಅತಿಕ್ರಮಣ ಅನುಭವಿಸಿದ ದೇಶದ ಜನರು ಅತಿಯಾದ ರಾಷ್ಟ್ರೀಯವಾದಿಗಳಾಗುವುದು ಬಹುಶ: ಸಹಜವೇನೋ. ಇಲ್ಲದಿದ್ದರೆ ಅವರಿಗಿರುವ ದಾರಿಯೆಂದರೆ ಸ್ವಾತಂತ್ರ್ಯ ಕಳೆದುಕೊಂಡು  ಬೆಲಾರಸ್ ನಂತೆ ರಷ್ಯಾದ ಆಜ್ಞೆಗಳನ್ನು ಪಾಲಿಸುವುದು.

ರಷ್ಯಾದಲ್ಲಿ ಯುದ್ಧ ಶುರುವಾದ ಮೊದಲ ತಿಂಗಳುಗಳಲ್ಲಿ ನಡೆದ ಯುದ್ಧ ವಿರೋಧಿ ಪ್ರತಿಭಟನೆಗಳನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ. ಎಲ್ಲಾ ಸರ್ವಾಧಿಕಾರಿಗಳ ಸಾಮಾನ್ಯ ನಡೆಯಂತೆ ಭಿನ್ನ ಧ್ವನಿಯ ಮಾಧ್ಯಮಗಳನ್ನು ಹತ್ತಿಕ್ಕಿ ಕೇವಲ ಸರ್ಕಾರೀ ಮಾಧ್ಯಮದ ಮೂಲಕ ಉಕ್ರೇನ್ ನಲ್ಲಿ ನ್ಯಾಟೋ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ನಿರೂಪಣೆಯನ್ನೇ ಬಿತ್ತರಿಸಲಾಗುತ್ತಿದೆ. ಇನ್ನೂ ಕೆಲವು ರಷ್ಯನ್ನರಿಗೆ ಉಕ್ರೇನಿಯನ್ನರ ಮೇಲೆ ಅನುಕಂಪ ಇದ್ದರೂ ನ್ಯಾಟೋ ಮೇಲಿನ ಕೋಪ ಅದಕ್ಕಿಂತಲೂ ಮಿಗಿಲಾದುದು.

ಡಿಸೆಂಬರ್ ನಲ್ಲಿ  ನಿಪ್ರೋ ದ  ಅವಳಿ ಬಹುಮಹಡಿ  ಕಟ್ಟಡಗಳ ಮೇಲೆ ನಡೆದ ಭೀಕರ ದಾಳಿಯ ನಂತರ  ಮತ್ತೆ ಪ್ರತಿಭಟನೆಯ ಧ್ವನಿಗಳು  ಕೇಳಿ ಬಂದವು. ಆದರೆ  ತೀವ್ರತೆಯು ಮೊದಲಿನಂತಿರಲಿಲ್ಲ.  ಏಕೆಂದರೆ ಯುದ್ಧ ವಿರೋಧಿಸಿದ ಕೆಲವು ಸಾವಿರ ರಷ್ಯನ್ನರು ಸೆರೆಮನೆಯಲ್ಲಿದ್ದರೆ, ಇನ್ನೂ ಸಾವಿರಾರು ಜನ  ದೇಶ ತೊರೆದಿದ್ದಾರೆ. ರಷ್ಯಾ ತೊರೆದು ಉಕ್ರೇನ್ ಪರವಾಗಿ ಅಂತಾರಾಷ್ಟ್ರೀಯ ಸೇನೆ ಸೇರಿ ತಮ್ಮ ದೇಶದ  ವಿರುದ್ಧವೇ ಶಸ್ತ್ರ ಹಿಡಿದಿರುವವರ  ಉದಾಹರಣೆಗಳೂ ಇವೆ.

ಸಂಘರ್ಷದ ಆರಂಭದಲ್ಲಿ ಉಕ್ರೇನ್  ಕಡೆಯಿಂದಲೂ  ಕೆಲವು ತಪ್ಪುಗಳನ್ನು ನಿಸ್ಸಂಶಯವಾಗಿ ಮಾಡಲಾಗಿದೆ.  ಆದರೆ ರಷ್ಯನ್ ಸೇನೆ ನಡೆಸಿದ  ಬುಚಾ ಹತ್ಯಾಕಾಂಡದ ನಂತರ, ಉಕ್ರೇನಿಯನ್ ಸಾರ್ವಜನಿಕ ಅಭಿಪ್ರಾಯವು ತನ್ನ ಸರ್ಕಾರದ ಹಿಂದೆ ಬಲವಾಗಿ  ಒಗ್ಗೂಡಿ ನಿಂತಿದೆ. ಪೂರ್ವ ಉಕ್ರೇನ್ ನ ರಷ್ಯನ್ ಭಾಷಿಕರನ್ನು ಸ್ವತಂತ್ರಗೊಳಿಸಲು ಈ ಕಾರ್ಯಾಚರಣೆ ಎಂದು ಯುದ್ಧ ಆರಂಭಿಸಿ ಕೈವ್ ಹಾಗೂ ಉಕ್ರೇನ್‌ನ ತೀವ್ರ ಪಶ್ಚಿಮದಲ್ಲಿರುವ ಎಲ್ವಿವ್‌ನಂತಹ ನಗರಗಳ ಮೇಲೆಯೂ ಪುಟಿನ್  ಬಾಂಬ್ ದಾಳಿ ಮಾಡಿದ್ದಾರೆ. ಯೂರೋಪಿನ ಇನ್ನಿತರ ದೇಶದ ನಾಯಕರ ಜೊತೆಗಿನ  ಸಂಧಾನದ ಮಾತುಕತೆಗಳಲ್ಲಿ ಹಲವು ಬಾರಿ ತಮ್ಮ ಮಾತು ಬದಲಾಯಿಸಿದ್ದಾರೆ. ಆದ್ದರಿಂದ ಪಶ್ಚಿಮದ ಹಾಗೂ ಯುರೋಪಿನ ನಾಯಕರಿಗೆ ಪುಟಿನ್  ಮಾತುಗಳಲ್ಲಿ ನಂಬಿಕೆ ಉಳಿದಿಲ್ಲ.

ಸುಮಾರು 300 ಪ್ರಯಾಣಿಕರ ಸಾವಿಗೆ ಕಾರಣವಾದ 2014 ರ  MH 17 ವಿಮಾನ ಅಪಘಾತದಲ್ಲಿ ಪುಟಿನ್ ರ ನೇರ ಭಾಗೀದಾರಿಕೆ ಯೂರೋಪಿಯನ್ ಒಕ್ಕೂಟದ ಮಾನವ ಹಕ್ಕುಗಳ ನ್ಯಾಯಾಲಯದಲ್ಲಿ (ಹೇಗ್ ,ನೆಡೆರ್ಲ್ಯಾಂಡ್ ) ಸಾಬೀತಾಗಿದೆ.  ಉಕ್ರೇನ್ ನಲ್ಲಿ ರಷ್ಯಾ ಸೇನೆ ನಡೆಸಿದ ಅತ್ಯಾಚಾರಗಳು, ಅಪಹರಣಗಳ ಪಟ್ಟಿ ಬೆಳೆಯುತ್ತಲೇ ಇದ್ದರೂ ಭದ್ರತಾ ಸಮಿತಿಯಲ್ಲಿ ರಷ್ಯಾ -ಚೀನಾಕ್ಕೆ  ವೀಟೋ ಅಧಿಕಾರ ಇರುವುದರಿಂದಾಗಿ  ವಿಶ್ವ ಸಂಸ್ಥೆ ಕೂಡ ಉಕ್ರೇನ್ ಗೆ ಹೆಚ್ಚಿನ ಸಹಾಯ ಮಾಡದಂಥ ಸ್ಥಿತಿಯಲ್ಲಿದೆ.

ಒಂದು ವರ್ಷದ ಯುದ್ಧ ಚೀನಾ -ಯೂರೋಪ್ ನಡುವಿನ ವ್ಯವಹಾರ -ರಾಜಕೀಯ ಸಂಬಂಧಗಳ ಮೇಲೂ ನಕಾರಾತ್ಮಕ ಪ್ರಭಾವ ಬೀರಿದೆ. ಅಮೆರಿಕಾದ ಜೊತೆಯಂತೂ ಚೀನಾ ನೇರ ಸಂಘರ್ಷಕ್ಕೆ ಇಳಿದಿರುವಂತೆ ಕಾಣುತ್ತಿರುವ ಈ ದಿನಗಳಲ್ಲಿ  ಸದ್ಯ ಯೂರೋಪಿಯನ್ ಒಕ್ಕೂಟದ ಜೊತೆ ವ್ಯಾವಹಾರಿಕ ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವು ದಿನಗಳ ಹಿಂದೆ  12 ಅಂಶಗಳ ಶಾಂತಿ ಯೋಜನೆಯನ್ನು ಚೀನಾ ಪ್ರಸ್ತಾಪಿಸಿದೆ.

ಆದರೆ  ಸಿನೋ-ರಷ್ಯನ್ ಅಧ್ಯಯನಗಳ ಪ್ರಾಧ್ಯಾಪಕ, ನ್ಯೂ ಸೌತ್ ವೇಲ್ಸ್ ನ  ಡಾ ಕೊರೊಲೆವ್ ಹೇಳಿದಂತೆ “ನಾಯಕತ್ವವನ್ನು ಪ್ರದರ್ಶಿಸಲು ಚೀನಾಕ್ಕೆ ಸಾಕಷ್ಟು ಅವಕಾಶಗಳಿತ್ತು. ಯುದ್ಧವನ್ನು ಕೊನೆಗೊಳಿಸಲು ಕೊಡುಗೆ ನೀಡಲು ಅದನ್ನು ಮೊದಲೇ ಆಹ್ವಾನಿಸಲಾಗಿತ್ತು … ಜಾಗತಿಕ ನಾಯಕನ ಚಿತ್ರವನ್ನು ನಿಜವಾಗಿಯೂ ಪ್ರದರ್ಶಿಸುವುದು [ಚೀನಾದ] ಗುರಿಯಾಗಿದ್ದರೆ,  ಒಂದು ವರ್ಷ ಬೇಲಿಯ ಮೇಲೆ ಕುಳಿತು ರಾಜತಾಂತ್ರಿಕ ನೃತ್ಯ ಮಾಡುವ ಅಗತ್ಯವಿರಲಿಲ್ಲ“. ಸದ್ಯ ಭಾರತದ ಕುರಿತೂ ಬಹಿರಂಗಗೊಳ್ಳದ ಇದೇ ರೀತಿಯ ಅಸಮಾಧಾನ ಯೂರೋಪ್ ಹಾಗೂ ಪಶ್ಚಿಮದ ದೇಶಗಳ ನಾಯಕರಲ್ಲಿ ಮನೆ ಮಾಡಿದೆ.  ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ ಜರ್ಮನಿಯ ಛಾನ್ಸಲರ್ ಹಾಗೂ ಇತರೆ ಜಿ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಶಾಂತಿ ಸಂಧಾನ ಹಾಗೂ ಯುರೋಪಿಯನ್ ಒಕ್ಕೂಟದ ಜೊತೆ ಉಕ್ರೇನ್ ಬೆಂಬಲಕ್ಕೆ ನಿಲ್ಲಲು ಭಾರತವನ್ನು ಮತ್ತೆ  “ಒತ್ತಾಯ ಪೂರ್ವಕವಾಗಿ “ ಆಹ್ವಾನಿಸಿದರು. ವಿಶ್ವ ಸಂಸ್ಥೆಯಲ್ಲಿ  ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿರುವ ಚೀನಾ  ಹಾಗೂ ರಷ್ಯಾದ ಮುಂದೆ ಭಾರತಕ್ಕೆ ಹೆಚ್ಚಿನ ಅಧಿಕಾರ ಇಲ್ಲ, ಆದರೆ ಸರದಿ ಪ್ರಕಾರ ಬಂದ ಜಿ20 ಅಧ್ಯಕ್ಷತೆಯನ್ನು ಕೂಡ ತನ್ನ ವ್ಯಾಪಕ ಪ್ರಚಾರಕ್ಕೆ ಬಳಸಿಕೊಂಡ ಭಾರತ ಸರ್ಕಾರ ತನ್ನದೇ ಅಧ್ಯಕ್ಷತೆಯಲ್ಲಿ ನಡೆದ ಸಭೆಯ  ಜಂಟಿ ಹೇಳಿಕೆಯನ್ನು ಕೂಡ  ಚೀನಾ ನಿರ್ದೇಶಿಸಲು -ನಿರ್ಬಂಧಿಸಲು ಬಿಟ್ಟಿದೆ.

“ಯುದ್ಧವು  ತನ್ನ  ವ್ಯಾಪ್ತಿಯಲ್ಲಿ ಪ್ರಜ್ಞಾಶೂನ್ಯವಾಗಿದೆ, ಅದರ ಆಯಾಮಗಳಲ್ಲಿ ನಿರ್ದಯವಾಗಿದೆ ಮತ್ತು ಜಾಗತಿಕವಾಗಿ ಹಾನಿ ಮಾಡುವ  ಅದರ  ಸಾಮರ್ಥ್ಯಕ್ಕೆ  ಮಿತಿಯೇ ಇಲ್ಲ. “ದೇಶಗಳು  ಒಗ್ಗೂಡಿ, ಈ ಯುದ್ಧವನ್ನು  ಕೊನೆಗೊಳಿಸಲು ಇದು ಸುಸಮಯವಾಗಿದೆ” ಎಂಬ  ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಮನವಿ ಕೂಡ ವಿಶ್ವಗುರುಗಳಾಗಲು ಆಶಿಸುವ ಯಾವ ದೇಶದ ಮನಸ್ಸಿಗೂ ತಾಕದೇ ಕೇವಲ ಭಾಷಣವಾಗಿ ಉಳಿದಿದೆ. ನ್ಯಾಟೋ, ಯುರೋಪಿಯನ್ ಒಕ್ಕೂಟ ಹಾಗೂ ಪುಟಿನ್ ನಡುವೆ ಸದ್ಯ ಯಾವುದೇ ಸಂಧಾನದ ಸಾಧ್ಯತೆಯೂ ಕಂಡುಬರುತ್ತಿಲ್ಲ. ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂಬ ಯುದ್ಧ ಆರಂಭಿಸಿದ ಪುಟಿನ್ ಆಕ್ರಮಣವನ್ನು ಪ್ರತಿರೋಧಿಸುವ ಆಯ್ಕೆ ಮಾಡಿಕೊಂಡಿದ್ದು  ಉಕ್ರೇನಿಯನ್ನರು. ಯುದ್ಧ ನಿಲ್ಲಿಸಬೇಕಾದದ್ದು ಕೂಡ ಪುಟಿನ್. ಏಕೆಂದರೆ  ಪುಟಿನ್ ಸೈನ್ಯ  ಯುದ್ಧವನ್ನು ನಿಲ್ಲಿಸಿದರೆ ಮತ್ತು ಉಕ್ರೇನ್ ತೊರೆದರೆ, ಯುದ್ಧವು ಕೊನೆಗೊಳ್ಳುತ್ತದೆ. ಆದರೆ ಉಕ್ರೇನ್ ತನ್ನ ಹೋರಾಟವನ್ನು ನಿಲ್ಲಿಸಿದರೆ, ಉಕ್ರೇನ್ ಎಂಬ ದೇಶವೇ ಕೊನೆಯಾಗುತ್ತದೆ.

ರಂಜಿತಾ ಜಿ ಎಚ್‌

ಲೇಖಕರು, ಫಿನ್ಲೆಂಡ್

ಟರ್ಕಿ: ಹತಾಶೆ ಮತ್ತು ಭರವಸೆಯ ನಡುವಿನ ಕ್ಷಣಗಳು
‌ಭೂಕಂಪದ ಪರಿಣಾಮವಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಘಟನೆಯ ವರದಿಗಾಗಿ ತೆರಳಿದ ಟೆರ್ರಿ ಶುಲ್ಟ್ಜ್  (ಡಿ ಡಬ್ಲ್ಯೂ ನ್ಯೂಸ್) ಅಲ್ಲಿ ತಾನು ಕಂಡದ್ದನ್ನು ಎದೆಯಾಳದಿಂದ ಬರೆದಿದ್ದಾರೆ. ರಂಜಿತಾ ಎಸ್‌ ಇದರ ಕನ್ನಡಾನುವಾದವನ್ನು ಮಾಡಿದ್ದಾರೆ. ಮನ ಕಲಕುವ, ಹೃದಯಸ್ಪರ್ಶಿಯಾದ ಕೆಲ ಕ್ಷಣಗಳನ್ನು ಓದಿ.

ಕುಕುರೊವಾದಲ್ಲಿ ಎಲ್ಲರೂ ಒಂದು  ಪವಾಡಕ್ಕಾಗಿ ಕಾಯುತ್ತಿದ್ದರು. ಅದಾನಾ ಜಿಲ್ಲೆಯಲ್ಲಿ ಮೊದಲ ಬಾರಿಯ ಭೂಕಂಪನದಿಂದ ಕುಸಿತ ಸಂಭವಿಸಿದಾಗ,  ಈ  ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡದ ಹೆಚ್ಚಿನ ನಿವಾಸಿಗಳು  ಸಾವನ್ನಪ್ಪಿದರು. ಆದರೆ 36 ಗಂಟೆಗಳ ನಂತರ, ಕುಸಿದುಬಿದ್ದ  ಕಾಂಕ್ರೀಟ್‌ನ ಬೃಹತ್ ರಾಶಿಯಿಂದ ವಾಟ್ಸಾಪ್ ಮೂಲಕ  ಒಂದು SOS ಮೆಸೇಜು  (ರಕ್ಷಣೆ ಕೋರಿ ಕಳಿಸುವ ಸಂದೇಶ ) ಬಂದಿತು. ಅಲ್ಲಿ ಯಾರೋ ಇನ್ನೂ ಜೀವಂತವಾಗಿದ್ದರು.

ಯಾರಾದರೂ ಬದುಕುಳಿದಿರಬಹುದೆಂದು  ಯೋಚಿಸಲು ಆಸಾಧ್ಯವಾದುದೇನೂ ಆಗಿರಲಿಲ್ಲ. ಏಕೆಂದರೆ ಮಂಗಳವಾರ

ಅವಶೇಷಗಳಡಿ ಬದುಕಿದ್ದ ಒಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು . ಆದ್ದರಿಂದ ಟರ್ಕಿಯ ರಕ್ಷಣಾ  ತಂಡಗಳು ಅದಾನಕ್ಕೆ ಆಗಮಿಸಿದ ಮೊದಲ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಬಲ್ಗೇರಿಯನ್ ರೆಡ್‌ಕ್ರಾಸ್ ಮತ್ತು ಅವರ ರಕ್ಷಣಾ ಕಾರ್ಯದಲ್ಲಿ ಪಳಗಿದ್ದ ನಾಯಿಗಳ ಸಹಾಯ ಕೋರಿದರು. ಸಾಮಾನ್ಯವಾಗಿ  ಶವಗಳ ಬಗ್ಗೆ ಸಂಕೇತ ನೀಡದ, ಜೀವಂತ ವ್ಯಕ್ತಿಗಳನ್ನು ಕಂಡರೆ ಮಾತ್ರ ಪ್ರತಿಕ್ರಿಯಿಸುವ ಈ ನಾಯಿಗಳು ಕೂಡ ಅವಶೇಷಗಳ ಸುತ್ತ ಮೂಸಿ ಅಲ್ಲಿ ಒಬ್ಬ ವ್ಯಕ್ತಿಯು ಇನ್ನೂ ಜೀವಂತವಾಗಿರಬಹುದು ಎಂಬ ಸಂದೇಹವನ್ನು ದೃಢಪಡಿಸಿದವು. ಆ ಸರಿ ರಾತ್ರಿಯಲ್ಲೇ ಉತ್ಖನನದ ಪ್ರಯತ್ನಗಳು ದ್ವಿಗುಣಗೊಂಡವು.  ಯಂತ್ರಗಳು, ತರಬೇತಿ ಪಡೆದ ತಜ್ಞರು ಮತ್ತು ಸಾಮಾನ್ಯ ನಾಗರಿಕರು ಕೂಡ,  ಪ್ಲಾಸ್ಟಿಕ್ ಪಾತ್ರೆಗಳಿಂದಲೂ, ಅವರ ಕೈಗಳಿಂದಲೂ  ಅಗೆಯಲು ಶುರು ಮಾಡಿದರು.

ಅಕ್ಕಪಕ್ಕದಲ್ಲಿ ಸುದ್ದಿ ಹರಡಿ, ನೋಡಲು ಜನ ಜಮಾಯಿಸಿದ್ದರು. ಈಗ ಅದಾನದ ಬೀದಿಗಳಲ್ಲಿ ವಾಸಿಸುತ್ತಿರುವ – ಕುಸಿಯಬಹುದಾದ ಕಟ್ಟಡಗಳಿಂದ ದೂರವಿರಲು ಮತ್ತು  ಅತಿ ಶೀತದಿಂದ ಪಾರಾಗಲು ಬೆಂಕಿಯ ಮೊರೆ ಹೋಗಿರುವ ಸಾವಿರಾರು ಜನರು  ಯಾವುದಾದರೊಂದು  ಸುದ್ದಿಯನ್ನು  ಸ್ವಾಗತಿಸಲು ಕಾಯುತ್ತಿದ್ದರು .

ಭೂಕಂಪನದ ಕೇಂದ್ರ ಬಿಂದುವಿನಿಂದ 200 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ನಗರದಲ್ಲಿಯೂ ಸಹ, ಹಲವಾರು ದೊಡ್ಡ ಕಟ್ಟಡಗಳು ನಾಶವಾಗಿ  ಸಾಕಷ್ಟು ಸಾವು-ನೋವು  ಮತ್ತು ಸ್ಥಳಾಂತರಕ್ಕೆ ಕಾರಣವಾಯಿತು. ಆನಂತರ ಬುಧವಾರ ಬೆಳಿಗ್ಗೆ ಒಂದು ಮೃತದೇಹ ಪತ್ತೆಯಾಯಿತು. ಹೀಗಾದಾಗಲೆಲ್ಲಾ ಜನರಿಗೆ  ಘಟನೆಯ ಗಂಭೀರತೆಯನ್ನು ತಿಳಿಸಲು ಮತ್ತು ಮೃತದೇಹವನ್ನು  ಗೌರವಯುತವಾಗಿ ಸುತ್ತಲು ಬಟ್ಟೆಯೊಂದನ್ನು ರಕ್ಷಣಾ ತಂಡಗಳು ಗಾಳಿಯಲ್ಲಿ  ಹಿಡಿಯುತ್ತವೆ.  ಅವಶೇಷಗಳಡಿಯಿಂದ ದೇಹವನ್ನು  ಹೊರತೆಗೆಯುವಾಗ ಒಂದು ಕ್ಷಣ ಜನ ಸಮೂಹ  ಮೌನವಾಯಿತು. ಆನಂತರ ದೇಹವನ್ನು ಕೊಂಡೊಯ್ಯುವಾಗ “ಅಲ್ಲಾಹು ಅಕ್ಬರ್” ಎಂದು ಜನರು ಪಠಿಸುತ್ತಾ ಪ್ರಾರ್ಥಿಸಿದರು.

ನೋವಿನಿಂದ  ಇದನ್ನು ನೋಡುತ್ತಾ  ನಿಂತಿದ್ದ  ನನಗೆ, ‘ವಾಟ್ಸಾಪ್ ಸಂದೇಶವನ್ನು ಕಳುಹಿಸಿದವರು  ಇವರೇ? ಹಾಗಿದ್ದಲ್ಲಿ ಯಾರಾದರೂ ಬದುಕಿರಬಹುದೆಂಬ ಭರವಸೆಯನ್ನು ನಾವು ಕೈ ಬಿಡಬೇಕೇ?’ ಎಂಬುದನ್ನು ಖಚಿತ ಮಾಡಿಕೊಳ್ಳಬೇಕಿತ್ತು. ಯಾರಾದರೂ ಇಂಗ್ಲಿಷ್ ಮಾತನಾಡುತ್ತಾರೆಯೇ ಎಂದು ನಾನು ಅಗೆಯುವವರ ಸುತ್ತಲೂ ಓಡಾಡಿದೆ  ಮತ್ತು ಬಲ್ಗೇರಿಯನ್ ರೆಡ್ ಕ್ರಾಸ್ ತಂಡದ ಟೆರ್ವೆಲ್ ಟೊಟೆವ್ ಅವರನ್ನು ಭೇಟಿಯಾದೆ.

“ನಾವು ರಕ್ಷಣಾ ಪ್ರಯತ್ನ ನಿಲ್ಲಿಸುವುದಿಲ್ಲ. ಮೆಸೇಜು ಬರುವ ಮುಂಚೆಯೇ ಈ ದೇಹದ ಬಗ್ಗೆ  ತಿಳಿದಿತ್ತು. ಕೈಗಳು ಬಹಳ ಸಮಯದಿಂದ ನಿಶ್ಚೇತವಾಗಿ ಬಿದ್ದಿದ್ದವು” ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಯ ನಂತರ ನಾಯಿಗಳು ಮತ್ತೆ ಹುಡುಕಾಡಲು ಹಿಂತಿರುಗಿದವು.

ಜನ ಸಮೂಹವು ಸಂಪೂರ್ಣ ಮೌನವಾಗಿತ್ತು.  ನಾಯಿಗಳು ಅವಶೇಷಗಳ ಸುತ್ತಲೂ ಕೆದಕಿ ಹುಡುಕುವಾಗ  ಬೊಗಳಿದರೆ ಎಲ್ಲರೂ ಕೇಳಿ ಸಹಾಯಕ್ಕೆ ಧಾವಿಸಬಹುದು ಎಂದು. ಮತ್ತೊಮ್ಮೆ ನಾಯಿಗಳು  ಹುಡುಕಾಟದಲ್ಲಿ ಮಗ್ನವಾಗಿರುವುದನ್ನು ಕಂಡು ಮೊದಲ ಭೂಕಂಪದ  48 ಗಂಟೆಗಳ ಬಳಿಕವೂ ಇದು ‘ಮೃತ ದೇಹಗಳನ್ನು ಹೊರತೆಗೆಯುವ  ಕಾರ್ಯವಾಗದೆ  ಬದುಕಿದ್ದವರನ್ನು ‘ರಕ್ಷಿಸುವ’ ಕಾರ್ಯಾಚರಣೆ ಎಂಬ ಭರವಸೆಗೆ ಅಂಟಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಿತು.

ಕುಕುರೊವಾ ನಿವಾಸಿಗಳು ಸಾಮೂಹಿಕವಾಗಿ ರಕ್ಷಣಾ ಕಾರ್ಯದಲ್ಲಿ ಮುಂದುವರಿದರು. ಅವರಲ್ಲಿ ಅನೇಕರು ತಮ್ಮ ನಡುವೆ  ಹಾಗೂ ಹೆಚ್ಚುತ್ತಿರುವ ಪತ್ರಕರ್ತರ ಗುಂಪಿನೊಂದಿಗೆ ನೀರು, ಆಹಾರ, ಚಹಾ ಹಾಗೂ ಚಳಿಗಾಲದ  ಕೈಗವಸುಗಳನ್ನು ಹಂಚಿಕೊಂಡರು. ಕಾರಿನಲ್ಲಿ ನನ್ನ ಕೈಗವಸುಗಳನ್ನು  ಮರೆತು ನಡುಗುವ ಕೈ ಗಳಿಂದ ಮೈಕ್ ಹಿಡಿದಿದ್ದ ನನಗೂ ಒಂದು ಜೊತೆ ಕೈಗವಸುಗಳನ್ನು ಒತ್ತಾಯ ಪೂರ್ವಕವಾಗಿ ಕೊಟ್ಟು “ನಿಮಗೆ ಇನ್ನೇನಾದರೂ  ಬೇಕೇ?” ಎಂದು  ಕೇಳಿದರು. ಮತ್ತು “ಇಲ್ಲಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು. ನಮಗೆ ಸಹಾಯ ಬೇಕು ಎಂದು ಜಗತ್ತಿಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದರು.

ಭಾರೀ ಸರಪಳಿ ಮತ್ತು ಕ್ರೇನ್ ನ್ನು ಒಳಗೊಂಡ ದೊಡ್ಡ ಹಾಗೂ ಸೂಕ್ಷ್ಮವಾದ ಕಾರ್ಯಾಚರಣೆಯಲ್ಲಿ ಕಾಂಕ್ರೀಟ್ ರಾಶಿಯ ಮೇಲಿಂದ ಬೃಹತ್ ಕಾಂಕ್ರೀಟ್ ತುಂಡನ್ನು ಎತ್ತಲಾಯಿತು. ತಂಡಗಳು ‘ನಿರ್ಣಾಯಕ ಪ್ರದೇಶ’ವೆಂದು ನಂಬಲಾದ ಸ್ಥಳಕ್ಕೆ ಈಗ ಹೋಗಬಹುದಾದ್ದರಿಂದ ಉತ್ಸಾಹ ಅಲ್ಲಿ ಹೆಚ್ಚಾಯಿತು.

ಆದರೆ ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿರುವಾಗ ʼಇಲ್ಲ, ಇಲ್ಲಿ ಯಾರೂ ಇಲ್ಲ. ಹಾಗಾಗಿ ರಕ್ಷಣಾ ಕಾರ್ಯ ಮುಂದುವರಿಯುವುದಿಲ್ಲʼ ಎಂಬುದನ್ನು ತಂಡವು ಬಟ್ಟೆಯನ್ನು  ಗಾಳಿಯಲ್ಲಿ ಎತ್ತಿ ಹಿಡಿದು ಸೂಚಿಸಿತು .

ಈ ಹತಾಶೆ  ವೈಯಕ್ತಿಕ ಅನಿಸಿತು. ಇಲ್ಲ, ಇದು ನಿಜವಾಗಿಯೂ ಸಂದೇಶ ಕಳುಹಿಸಿದ್ದ ವ್ಯಕ್ತಿಗೆ ನ್ಯಾಯ ಸಲ್ಲಿಸಿದಂತಾಗಲಿಲ್ಲ ಎಂದು ನನಗನ್ನಿಸಿತು. ಆದರೆ ಇದು ಕೇವಲ ನನ್ನೊಬ್ಬಳ  ಭಾವನೆಯಲ್ಲ ಎಂದೂ ನನಗೆ  ಸ್ಪಷ್ಟವಾಗಿತ್ತು. ಪ್ರತಿ ಗಂಟೆಗೂ ಸಾವಿನ ಸಂಖ್ಯೆ ಸಾವಿರಗಳಲ್ಲಿ  ಹೆಚ್ಚಾಗುತ್ತಿರುವಾಗ, ಸ್ಥಳೀಯರು ಮತ್ತು ವಿದೇಶೀಯರು  ಒಂದು ಸಂತೋಷದ ಫಲಿತಾಂಶಕ್ಕಾಗಿ ಅಲ್ಲಿ ಹತಾಶರಾಗಿ  ಕಾಯುತ್ತಿದ್ದರು. ನಾನು ಸಾಧ್ಯವಾದಾಗಲೆಲ್ಲಾ  ಟರ್ಕಿಯ  ಟೆಲಿವಿಷನ್‌ ವೀಕ್ಷಿಸಿ, ಇತರ ನಗರಗಳಲ್ಲಿ ಜನರನ್ನು ಇನ್ನೂ ಉಳಿಸಲಾಗುತ್ತಿದೆ ಎಂಬುದನ್ನು ಕೇಳಿ ನನ್ನ ಹತಾಶೆಯನ್ನು ಕಡಿಮೆಮಾಡಿಕೊಂಡೆ.

ಬದುಕುಳಿದವರೊಂದಿಗೆ ಮಾತನಾಡುವುದು ಸ್ವಲ್ಪ ಸಮಾಧಾನಕರವಾಗಿತ್ತು. ಕೆಲವು ಬ್ಲಾಕ್‌ಗಳ ದೂರದಲ್ಲಿ 400 ಟೆಂಟ್ ಗಳಲ್ಲಿ  ವಸತಿಹೀನರಾದ ಸುಮಾರು 1,200 ಜನರು ನೆಲೆಸಿದ್ದರು. ಅಲ್ಲಿದ್ದ ಕುಕುರೊವಾದ  ಮೇಯರ್ ಸೋನರ್ ಸೆಟಿನ್,  ಇನ್ನೂ ಸಾವಿರಾರು ಜನರಿಗೆ ತುರ್ತಾಗಿ ಆಶ್ರಯ ಬೇಕಾಗಿದೆ, ಆದರೆ ಕಂಪನದ  ಆಘಾತಗಳು( Aftershocks ) ನಿಂತ ಆನಂತರ ಅವರಲ್ಲಿ ಕೆಲವರಾದರೂ  ಸುರಕ್ಷಿತವಾಗಿರುವ ಕಟ್ಟಡಗಳಿಗೆ ಮರಳಬಹುದೇ ಎಂದು ನೋಡಲು ಅಧಿಕಾರಿಗಳು ಕಟ್ಟಡಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

ಸ್ಥಳಕ್ಕೆ ಸಹಾಯ  ಬಂದದ್ದು ನಿಧಾನವಾಗಿದ್ದಕ್ಕೆ ಟರ್ಕಿಯ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ಬಗೆಗಿನ ಟೀಕೆಯ ಕುರಿತ ನನ್ನ ಪ್ರಶ್ನೆಗಳಿಗೆ ಸೆಟಿನ್ ಉತ್ತರಿಸಲಿಲ್ಲ. 4,00,000 ಜನಸಂಖ್ಯೆಯ ಸಮುದಾಯದಲ್ಲಿ ಸುಮಾರು 400 ಜನ ಮೃತ ಪಟ್ಟಿದ್ದು  ಆಹಾರ ಪೂರೈಕೆಯ ವಿಷಯದಲ್ಲಿ ತುಲನಾತ್ಮಕವಾಗಿ ಉತ್ತಮ ಕಾರ್ಯ ನಡೆಯುತ್ತಿದೆ, ಆದರೆ ಬೆಚ್ಚಗಿನ ಕಂಬಳಿಗಳ ಅವಶ್ಯಕತೆ ಇನ್ನೂ ಇದೆ ಎಂದು ಅವರು ಹೇಳಿದರು.

ಶಿಬಿರದಲ್ಲಿ ಜನರು ತಮ್ಮ ದಾಸ್ತಾನುಗಳಿಂದ ನನಗೆ ಏನಾದರೂ ಬೇಕೇ ಎಂದು ಮತ್ತೆ ಮತ್ತೆ ಕೇಳುತ್ತಿದ್ದರು. “ನಿಮಗೆ ಸೂಪ್ ಬೇಕೇ? ಚಹಾ? ಜ್ಯೂಸ್? ಹೀಗೆ…ಆದರೆ ನಾನು ಟರ್ಕಿಗೆ ಬಂದ ನಂತರ, ಮೊದಲ ಬಾರಿಗೆ ನನ್ನಿಂದಲೂ  ಏನನ್ನೋ ಕೇಳಲಾಯಿತು.

ನನ್ನ ಕ್ಯಾಮೆರಾಮನ್ ಮತ್ತು ನಾನು ಟೆಂಟ್ ಗಳನ್ನು ಸಮೀಪಿಸಿದಾಗ, ಮೂರು ಮತ್ತು ಎಂಟು ವರ್ಷ ವಯಸ್ಸಿನ ಇಬ್ಬರು ಮುದ್ದಾದ  ಹುಡುಗಿಯರು ಬೆಂಕಿಯ ಬಳಿ ಕೂತಿದ್ದ ತಮ್ಮ ಹೆತ್ತವರ ಬಳಿಯಿಂದ ನಮ್ಮೆಡೆಗೆ ಓಡಿ ಬಂದರು. ಅವರಿಗೆ ಏನು ಬೇಕು ಎಂದು ಕೇಳಿದೆ. ಅವರು ನನ್ನ  ಮುಖದೆಡೆ ಬೆರಳು ಮಾಡಿ, ತಮ್ಮ  ಮುಖ, ತುಟಿಗಳನ್ನು ತೋರಿಸುತ್ತಾ ಸನ್ನೆ ಮಾಡಿದರು.

ಲಿಪ್ ಸ್ಟಿಕ್ ! ನಿಜವಾಗಿಯೂ?! ನಾನು ನನ್ನ ಜೇಬಿನಿಂದ ಲಿಪ್ ಸ್ಟಿಕ್ಕನ್ನು ಹೊರತೆಗೆದು ಅವರ ತುಟಿಗಳಿಗೆ ಹಚ್ಚಿದೆ ಮತ್ತು ಅದನ್ನು ಅವರಿಗೆ ಕೊಟ್ಟೆ, ಅವರು ಸಂತೋಷದಿಂದ ಅವರ ಹೆತ್ತವರಿಗೆ ತೋರಿಸಲು  ಹಿಂತಿರುಗಿ ಓಡಿಹೋದರು.

ಅವರ ಬಳಿ ಈಗ  ಕೆಲವೇ  ಬಟ್ಟೆಗಳು ಮತ್ತು ಆಟಿಕೆಗಳು ಉಳಿದಿರಬಹುದು. ಮುಂದಿನ ಕೆಲವು ದಿನಗಳು ಅವರಿಗೆ ಅತ್ಯಂತ ಕಷ್ಟದ ದಿನಗಳಾಗಬಹುದು. ಆದರೆ ಅವರ ಗಮನ ಬೇರೆಡೆ ಹರಿಯಲು ಸದ್ಯ ಅವರ ಬಳಿ ಕನಿಷ್ಠ ಅವರಿಗಿಷ್ಟವಾದ ಒಂದು ಸಣ್ಣ ಆಕರ್ಷಣೆಯ ವಸ್ತು ಇದೆ. ಅವರು ಸಂತೋಷದಿಂದ ನನ್ನ ಕೆನ್ನೆಗಳ ಮೇಲೆ ಬಿಟ್ಟ ಗುಲಾಬಿ ಬಣ್ಣದ ಮುತ್ತುಗಳು  ನನ್ನ ಕಣ್ಣುಗಳಲ್ಲಿ ಕಣ್ಣೀರನ್ನು ತಂದವು. ಮತ್ತು ಅವರ ಮನೆಗಳು, ನಗರಗಳು ಮತ್ತು ಭವಿಷ್ಯವನ್ನು ಪುನರ್ನಿರ್ಮಿಸಬಹುದೆಂದು ನನ್ನ ಹೃದಯಕ್ಕೆ ಅವು ಭರವಸೆ ನೀಡಿದವು .

ಟೆರ್ರಿ ಶುಲ್ಟ್ಜ್  (ಡಿ ಡಬ್ಲ್ಯೂ ನ್ಯೂಸ್)

ಕನ್ನಡಕ್ಕೆ: ರಂಜಿತಾ ಜಿ ಎಚ್

ಸರ್ಕಾರದಿಂದ ‘ಸರಿಪಡಿಸಲಾದ’ ಇತಿಹಾಸದ ಓದು : ಭಾರತದ ಆರ್ವೆಲಿಯನ್ ದಿನಗಳು
ಯಾರು ಭೂತಕಾಲವನ್ನು ನಿಯಂತ್ರಿಸುತ್ತಾರೋ ಅವರು ಭವಿಷ್ಯವನ್ನು ನಿಯಂತ್ರಿಸುತ್ತಾರೆ. ವರ್ತಮಾನವನ್ನು ನಿಯಂತ್ರಿಸುವವರು ಭೂತವನ್ನು ನಿಯಂತ್ರಿಸುತ್ತಾರೆ" ಎನ್ನುತ್ತಾನೆ ಕಾದಂಬರಿಕಾರ ಜಾರ್ಜ್ ಆರ್ವೆಲ್, ತನ್ನ ಒಂದು ಪ್ರಸಿದ್ಧ ಕಾದಂಬರಿಯಲ್ಲಿ. ಫ್ಯಾಸಿಸ್ಟ್ ಮನೋಭಾವದ ಪ್ರತಿಯೊಂದು ಸರಕಾರವೂ ಭೂತಕಾಲದ ದಾಖಲೆಗಳೆಲ್ಲವನ್ನೂ ತನ್ನ ನಿರೂಪಣೆಗೆ ಅನುಗುಣವಾಗಿ ತಿರುಚುತ್ತಲೇ ಇರುತ್ತದೆ ಅಥವಾ ನಾಶ ಪಡಿಸುತ್ತಿರುತ್ತದೆ. ತನ್ನನ್ನು ವಿರೋಧಿಸ ಬಹುದಾದ ಬುದ್ಧಿಜೀವಿಗಳನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಜೈಲಿನಲ್ಲಿಡುತ್ತದೆ. ವರ್ತಮಾನ ಕಾಲದಲ್ಲಿ ನಿತ್ಯವೂ ಇಂತಹ ನೂರೆಂಟು ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದನ್ನು ನೆನಪಿಸಿಕೊಡುತ್ತ ಲೇಖಕಿ ರಂಜಿತಾ ಅವರು ನಮ್ಮ ಜನತಂತ್ರ ವ್ಯವಸ್ಥೆ ಎದುರಿಸುತ್ತಿರುವ ಅಪಾಯವನ್ನು ಮಾರ್ಮಿಕವಾಗಿ ವಿವರಿಸುತ್ತಾರೆ.

ಸಿಎನ್ಎನ್ (CNN ) ವರದಿಯ ಪ್ರಕಾರ ಈ ವರ್ಷ ಯುದ್ಧ ನಿರತ ರಷ್ಯಾದ ಜನರು  ಅತ್ಯಧಿಕ ಸಂಖ್ಯೆಯಲ್ಲಿ ಓದಿದ ಪುಸ್ತಕವೆಂದರೆ ಜಾರ್ಜ್ ಆರ್ವೆಲ್ ನ  ಸರ್ವಾಧಿಕಾರದ ದಿನಗಳ ಕುರಿತ  ಕಾದಂಬರಿ ‘1984’.  ೧949ರಲ್ಲಿ  ಪ್ರಕಟಿಸಲ್ಪಟ್ಟ ಈ ಕಾದಂಬರಿ 1988 ರವರೆಗೂ ರಷ್ಯಾದಲ್ಲಿ ನಿಷೇಧಿಸಲ್ಪಟ್ಟಿತ್ತು. ಏಕೆಂದರೆ ಸ್ವತಃ ಸಮಾಜವಾದಿಯಾಗಿದ್ದ ಜಾರ್ಜ್ ಆರ್ವೆಲ್  ತನ್ನ ಕಾದಂಬರಿಯ “ಬಿಗ್ ಬ್ರದರ್“ ಪಾತ್ರದ ಮೂಲಕ “ಸ್ಟಾಲಿನಿಸಂ” (Stalinism)  ವಿರುದ್ಧ ಎಚ್ಚರಿಸಿದ್ದರು. ಈ ಪುಸ್ತಕವನ್ನು ರಷ್ಯಾ ಸರ್ಕಾರ  ಈಗ ಜನರಿಗೆ ಓದಲು ಬಿಟ್ಟಿದೆಯೆಂದರೆ ರಷ್ಯನ್ ಭಾಷಾ ಆವೃತ್ತಿಯು ಪಶ್ಚಿಮದ ಸಮಾಜವಾದನ್ನು ಟೀಕೆಗೆ ಗುರಿ ಮಾಡಿರುವ ಸಾಧ್ಯತೆಗಳಿವೆ .

ಪುಸ್ತಕದ ಮುಖ್ಯ ಪಾತ್ರಗಳ ಸಂಭಾಷಣೆಯ ಮೂಲಕ  ಆರ್ವೆಲ್ “ಯಾರು ಭೂತಕಾಲವನ್ನು ನಿಯಂತ್ರಿಸುವರೋ ಅವರು ಭವಿಷ್ಯವನ್ನು ನಿಯಂತ್ರಿಸುತ್ತಾರೆ. ವರ್ತಮಾನವನ್ನು ನಿಯಂತ್ರಿಸುವವರು ಭೂತವನ್ನು ನಿಯಂತ್ರಿಸುತ್ತಾರೆ” ಎಂಬ ಭವಿಷ್ಯ ವಾಣಿಯನ್ನು ಓದುಗರ ಮುಂದಿಡುತ್ತಾರೆ. ಪುಸ್ತಕದಲ್ಲಿ  ಬಿಗ್ ಬ್ರದರ್‌ ನ  ಸರ್ಕಾರ ಭೂತ ಕಾಲದ ದಾಖಲೆಗಳೆಲ್ಲವನ್ನೂ ತನ್ನ ನಿರೂಪಣೆಗನುಗುಣವಾಗಿ ತಿರುಚುತ್ತದೆ ಅಥವಾ ನಾಶ ಮಾಡುತ್ತದೆ ಹಾಗೂ ಪ್ರಜೆಗಳ ಮೇಲೆ ಯಂತ್ರದ ಮೂಲಕ ಸದಾ ಕಾಲ ನಿಗಾ ವಹಿಸುತ್ತಿರುತ್ತದೆ. ತನ್ನನ್ನು ವಿರೋಧಿಸಬಹುದಾದ ಬುದ್ಧಿ ಜೀವಿಗಳನ್ನು ಸುಳ್ಳು ಸಾಕ್ಷ್ಯ ಸೃಷ್ಟಿಸಿ ಬಂಧಿಸುತ್ತದೆ.

ಆರ್ವೆಲ್ ನ ಪುಸ್ತಕ ಓದದೆಯೂ ಇತಿಹಾಸದ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರಗಳ ಪ್ರಯತ್ನಗಳು, ಅದರ ಪರಿಣಾಮದ ಕುರಿತು ಭಾರತೀಯರಿಗೆ ಕಳೆದ ಕೆಲವು ವರ್ಷಗಳಲ್ಲಿ  ಅನುಭವಕ್ಕೆ ಬಂದಿರಬಹುದು. EWS ಮೀಸಲಾತಿಯ ಕುರಿತು ಅಸಮ್ಮತಿ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ಕೂಡ ಭಾರತ ಆರ್ವೆಲ್ ಭವಿಷ್ಯವಾಣಿಯ ದಿನಗಳತ್ತ ಸಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ (“ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗಳನ್ನು ಹೊರಗಿಟ್ಟಿರುವುದರ ಒಟ್ಟು ಪರಿಣಾಮವು ಆರ್ವೆಲ್ಲಿಯನ್ ಆಗಿದೆ, ಅಂದರೆ  ಜಾತಿ ಅಥವಾ ವರ್ಗವನ್ನು ಲೆಕ್ಕಿಸದೆ ಎಲ್ಲಾ ಬಡವರು ಪರಿಗಣನೆಗೆ ಅರ್ಹರಾಗಿದ್ದಾರೆ, ಆದರೂ ಮೇಲ್ವರ್ಗ/ಜಾತಿಗಳಿಗೆ ಸೇರಿದವರನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತಿದೆ ” -ರವೀಂದ್ರ ಭಟ್, ನ್ಯಾಯಮೂರ್ತಿ )

ಅಮೇರಿಕನ್ ಫೋರೆನ್ಸಿಕ್ ಸಂಸ್ಥೆಯ ವರದಿಯು  2020 ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರದಲ್ಲಿ ಭಾಗಿಯಾದ  ಆರೋಪದ ಮೇಲೆ ಬಂಧಿಸಲ್ಪಟ್ಟ ಮತ್ತು ಒಂದು ವರ್ಷದ ನಂತರ ಸೆರೆಯಲ್ಲಿಯೇ  ಸಾವನ್ನಪ್ಪಿದ 83 ವರ್ಷದ ಕಾರ್ಯಕರ್ತ ಫಾದರ್ ಸ್ಟೇನ್ ಸ್ವಾಮಿ ಅವರ ಕಂಪ್ಯೂಟರ್‌ನ್ನು ಹ್ಯಾಕ್ ಮಾಡಿ ಉದ್ದೇಶ ಪೂರ್ವಕವಾಗಿಯೇ ಅವರ ವಿರುದ್ಧದ ಸಾಕ್ಷ್ಯಗಳನ್ನು ಇಡಲಾಗಿತ್ತು  ಎಂದು ತೋರಿಸಿದ್ದನ್ನು ಇಲ್ಲಿ  ಸ್ಮರಿಸಬಹುದು. ಭಾರತ ಸರ್ಕಾರವು ಪೆಗಾಸಸ್ ಎಂಬ ಬೇಹುಗಾರಿಕಾ ತಂತ್ರಾಂಶವನ್ನು ಖರೀದಿಸಿದ್ದು  ಬಯಲಾಗಿದ್ದರೂ ಸರ್ಕಾರ ಇದನ್ನು ಅಲ್ಲಗೆಳೆಯಿತು  ಹಾಗೂ  ಈ ಕುರಿತ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ ಯಥಾ ಪ್ರಕಾರ ದೇಶದ, ವಿರೋಧ ಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲಾಯಿತು. ಲೋಕಸಭೆಯ ಐಟಿ ಸಂಸದೀಯ ಸಮಿತಿಯು ಇದರ ಕುರಿತು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿತ್ತು.  ಆದರೆ ಕೆಲವು ತಿಂಗಳ ಹಿಂದೆ ಸಂಸದೀಯ ಸಮಿತಿಯ ಮರು ರಚನೆಯಾದಾಗ ಈ ವರ್ಷದಿಂದ ಅಲ್ಲಿಯೂ ಕೂಡ ಆಡಳಿತ ಪಕ್ಷ ಪಾರಮ್ಯ ಮೆರೆದಿದೆ (ಆರು ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು – ಗೃಹ, ಐಟಿ, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ಹಣಕಾಸು ಮತ್ತು ಆರೋಗ್ಯ – ಇವೆಲ್ಲವೂ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಪಾಲಾಗಿವೆ. ಪ್ರಮುಖ ಸಂಸದೀಯ ಸಮಿತಿಗಳ ಅಧ್ಯಕ್ಷರು ವಿರೋಧ ಪಕ್ಷಕ್ಕೆ ಸೇರಿರಬೇಕೆಂಬ ಅಲಿಖಿತ ಸಂಪ್ರದಾಯವನ್ನು ಸರ್ಕಾರ ಕೊನೆಗೊಳಿಸಿದೆ). ಹಾಗಾಗಿ ಪೆಗಾಸಸ್ ಸಂಬಂಧ ಸಂಸದೀಯ ಸಮಿತಿಯ  ವರದಿಯು ಎಂದಾದರೂ ಬಹಿರಂಗಗೊಂಡಲ್ಲಿ ಅದು ಒಂದು ದುರ್ಬಲ ಕಡತವಾಗಿರುತ್ತದೆ ಅಷ್ಟೇ.  ಇನ್ನು ಇಸ್ರೋ ವಿಜ್ಞಾನಿಗಳ ಜೋಶಿಮಠ ಕುರಿತ ವರದಿ ಮೊದಲೇ ಬಹಿರಂಗಗೊಳ್ಳದೆ ಸೀದಾ ಗೃಹ ಮಂತ್ರಿಗಳ ಕಛೇರಿ ಸೇರಿದ್ದರೆ ಬಿಡುಗಡೆಯೇ ಆಗುತ್ತಿರಲಿಲ್ಲ ಎನ್ನುವ ಸತ್ಯ ಈಗಾಗಲೇ ಬಹುಶ: ಅವರ ಸಮರ್ಥಕರಿಗೂ ತಿಳಿದಿದೆ.

ಕೆಲವು ದಿನಗಳ ಹಿಂದೆಯಷ್ಟೇ ಗೃಹ ಮಂತ್ರಿಗಳು ದೆಹಲಿಯಲ್ಲಿ ಲೇಖಕರೊಬ್ಬರ ಸ್ವಾತಂತ್ರ್ಯ ಸಂಗ್ರಾಮದ ಇನ್ನಿತರ ನಾಯಕರ ಕುರಿತ ಪುಸ್ತಕವೊಂದನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಪುಸ್ತಕ ಪರಿಚಯ ಸಂಧರ್ಭದಲ್ಲಿ ಸಾವರ್ಕರ್ ಇದ್ದ ಅಂಡಮಾನಿನ ಜೈಲು, RSS ನ ಸ್ಥಾಪನೆ, INA ಸೈನಿಕರನ್ನು ಬಂಧಿಸಿಟ್ಟಿದ್ದ ಕೋಟೆಯ  ವೀಡಿಯೋಗಳನ್ನು ಪ್ರದರ್ಶಿಲಾಯಿತು. ಗೃಹ ಮಂತ್ರಿಗಳು ಇತಿಹಾಸದ ಈ ನಿರೂಪಣೆಯನ್ನು  ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು “ಒಪ್ಪಲೇಬೇಕು “ ಎಂದು ಆಗ್ರಹಿಸಿದರು.

2023 ರಲ್ಲಿ  ಭಾರತದ  ಒಂಬತ್ತು ರಾಜ್ಯಗಳಲ್ಲಿ (ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ) ಚುನಾವಣೆ ನಡೆಯಲಿದೆ. ಸರ್ಕಾರದ ಹಿಂಬಾಲಕರು ಕಟ್ಟುವ ಹೊಸ ಇತಿಹಾಸದ ನಿರೂಪಣೆಗಳು ಚುನಾವಣಾ ವರ್ಷಗಳಲ್ಲಿ ಇನ್ನೂ ವೇಗ ಪಡೆದುಕೊಳ್ಳುತ್ತವೆ. ಮುಘಲ್ ಅಥವಾ ಮುಸ್ಲಿಂ ರಾಜರೊಂದಿಗೆ ಘರ್ಷಣೆಯ ಇತಿಹಾಸವಿರುವ ನಾಯಕರ ಕುರಿತ ಆಚರಣೆಗಳಲ್ಲಿ ಸರ್ಕಾರದ ನಾಯಕರ ಹಾಜರಿ ಕಡ್ಡಾಯವಿರುತ್ತದೆ ಹಾಗೂ ವಿಜೃಂಭಣೆಯ ಆಚರಣೆಗಳಲ್ಲಿ ಇತಿಹಾಸದಲ್ಲಿ ಸದರಿ ನಾಯಕನಿಗೆ ಮುಖ್ಯ ಸ್ಥಾನ ಸಿಗದೆ ಅನ್ಯಾಯವಾಗಿದೆ ಎಂಬ ಘೋಷಣೆಗಳನ್ನು ಮರೆಯದೆ ಜನರ ಮುಂದೆ ಮಾಡಲಾಗುತ್ತದೆ. ಆಡಳಿತ ಪಕ್ಷದ ಕೋಮುವಾದವನ್ನು ಪ್ರತಿಭಟಿಸಿ ದೇಶದುದ್ದಕ್ಕೂ ಪಾದಯಾತ್ರೆ ಕೈಗೊಂಡ ವಿರೋಧ ಪಕ್ಷದ ನಾಯಕರೊಬ್ಬರ ಪ್ರಯತ್ನಗಳನ್ನು ಜನರ ಕಣ್ಣಿಗೇ ಬೀಳದಂತೆ, ಅವರ ಮನಸ್ಸಿನಲ್ಲಿ ದಾಖಲಾಗದಂತೆ ಮಾಡಲು ಮಾಧ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಅಥವಾ ನಿರ್ದೇಶಿಸಲಾಗುತ್ತದೆ. ಒಟ್ಟಿನಲ್ಲಿ ಭಾರತದ ಇತಿಹಾಸ ಕೇವಲ ಹಿಂದೂ – ಮುಸ್ಲಿಂ ಘರ್ಷಣೆಯ ಹಾಗೂ ಮುಘಲ್ ದಬ್ಬಾಳಿಕೆಯ ಆಳ್ವಿಕೆಯ ಇತಿಹಾಸ ಎಂಬ ದ್ವೇಷದ ನಿರೂಪಣೆಗಳನ್ನು, ಅಧಿಕಾರಕ್ಕೆ ಬರಲು ಹಾಗೂ ಬಂದ ನಂತರ ಅದನ್ನು ಖಾಯಂ ಮಾಡುವ ಪ್ರಯತ್ನಗಳಲ್ಲಿ  ಆಡಳಿತ ಪಕ್ಷ ಸದಾ ತೊಡಗಿರುತ್ತದೆ.

ಇದೇ ಪ್ರಯತ್ನಗಳ ಸರದಿಯಲ್ಲಿ  ಹೊಸ ಸೇರ್ಪಡೆ ಎಂದರೆ ಕೆಲವು ದಿನಗಳ  ಹಿಂದಿನ ಕೇಂದ್ರ ಶಿಕ್ಷಣ ಮಂತ್ರಿಗಳ ಹೇಳಿಕೆ. 2023 ರ ಜನವರಿಯ 26 ರ ವಸಂತ ಪಂಚಮಿಯ ದಿನದಂದು ಜಾರಿಗೆ ತರಲಾಗುವ ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯ (NEP ) ಮೂಲಕ ದೇಶದ ವಿದ್ಯಾರ್ಥಿಗಳು “ಸರಿಪಡಿಸಲಾದ“ ಇತಿಹಾಸವನ್ನು ಓದುತ್ತಾರೆ ಎಂದು ಅವರು ಹೇಳಿದರು.

ಜನವರಿ 26ರ ದಿನ  ಗಣರಾಜ್ಯೋತ್ಸವ ಎಂಬ ಮಹತ್ವದ ದಿನ ಎಂಬುದು ಬಹುಶ: ಶಿಕ್ಷಣ ಮಂತ್ರಿಗಳಿಗೆ ಮರೆತು ಹೋಗಿದೆ, ಆದರೆ ವಸಂತ ಪಂಚಮಿ ಎಂಬ ವಿಷಯ ಬಹುಶ: ಎಲ್ಲರೂ ನೆನಪಿಡಬೇಕೆಂದು ಅವರು ಬಯಸಿದ್ದಾರೆ. ಗೋವಿಜ್ಞಾನ ಹಾಗೂ ಗೋವಿನ ಉತ್ಪನ್ನ (ಗೋಮೂತ್ರ, ಗಂಜಲ)ದ ಕುರಿತ  ಬಗ್ಗೆ ರಾಷ್ಟ್ರವ್ಯಾಪಿ ಪರೀಕ್ಷೆ ನಡೆಸಲು ಹೊರಟಿರುವ ಸರ್ಕಾರದಿಂದ ಸಂವಿಧಾನದಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಮನೋಭಾವ ಉದ್ದೀಪಿಸುವ ಶಿಕ್ಷಣದ ಕುರಿತು ನಿರೀಕ್ಷೆ ಇಡುವ ಅಗತ್ಯವೇನಿಲ್ಲ ಎಂದು ತಮ್ಮ ಸತತ ನಡೆಗಳ ಮೂಲಕ ಸರ್ಕಾರ ಹಾಗೂ ಮಂತ್ರಿಗಳು  ಸ್ಪಷ್ಟ ಪಡಿಸುತ್ತಲೇ ಇದ್ದಾರೆ.

ಕರ್ನಾಟಕ ಸರ್ಕಾರವು ಅನರ್ಹರಿಗೆ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷತೆ ನೀಡಿ, ಪ್ರಜೆಗಳು- ಪ್ರಾಜ್ಞರ ಬಲವಾದ ವಿರೋಧದ  ನಡುವೆಯೂ ತನ್ನ ನಡೆಯನ್ನು ಸಮರ್ಥಿಸಿಕೊಂಡದ್ದು  ಬಹುಶ: ಜನರ ಮನಸಿನಿಂದ ಆಗಲೇ  ಮರೆಯಾಗಿದೆ. ಹುಬ್ಬಳ್ಳಿಯಲ್ಲಿ ಕಳೆದ ವಾರದ ಪ್ರಧಾನಿಗಳ ಕಾರ್ಯಕ್ರಮಕ್ಕೆ ಶಾಲೆಗಳಿಗೆ ರಜೆ ಘೋಷಿಸಿ (ಭದ್ರತಾ ಕಾರಣಗಳನ್ನು ನೀಡಿ !) ಪ್ರತಿ ಶಾಲೆ/ಕಾಲೇಜಿನ ಕನಿಷ್ಠ ನೂರು ಮಕ್ಕಳು  ಕಾರ್ಯಕ್ರಮಕ್ಕೆ ಹಾಜರಿರಬೇಕೆಂದು ಹೊರಡಿಸಿದ್ದ ಸೂಚನೆಯನ್ನು ವಿರೋಧದ ನಂತರ ಹಿಂಪಡೆಯಲಾಯಿತು.  ಬಿಜೆಪಿಯ ಹಾಗೂ ಮಿತ್ರ ಪಕ್ಷಗಳ  ಸಾಧ್ವಿ – ಸಾಧುಗಳು ಆಯುಧಗಳನ್ನು ಕೈಗೆತ್ತಿಕೊಳ್ಳಿ ಎಂದು ಪದೇ ಪದೇ ಕರೆ ಕೊಟ್ಟರೂ ಪೊಲೀಸ್ ವ್ಯವಸ್ಥೆ ಕಂಡೂ ಕಾಣದಂತೆ ಸುಮ್ಮನಿರುವುದು ಜನರಿಗೂ ಒಪ್ಪಿತವಾಗಿದೆ.

ಗುರು ಗೋವಿಂದ್ ಸಿಂಗ್ ರ ಮಕ್ಕಳು ಹುತಾತ್ಮರಾದ ದಿನವನ್ನು ‘ವೀರ್ ಬಾಲ ದಿವಸ್‘ ಎಂದು ಆಚರಿಸಲಾಗುವುದು ಎಂಬ ಪ್ರಧಾನಿಗಳ ಘೋಷಣೆಯನ್ನು ಸಿಖ್ ಸಂಘಟನೆಗಳು ವಿರೋಧಿಸಿದವು. ಆದರೂ ಅದನ್ನು ಕಡೆಗಣಿಸಿದ ಬಿಜೆಪಿ, ಸಿಖ್ – ಮುಸ್ಲಿಂ ಸೌಹಾರ್ದ ಕದಡುವ ತನ್ನ ಪ್ರಯತ್ನದಲ್ಲಿ ಮುಂದುವರಿಯಿತು. ಯುಜಿಸಿ ಯ ಅಧ್ಯಕ್ಷರು ಇತ್ತೀಚೆಗೆ ಖಾಪ್ ಪಂಚಾಯತ್ ಗಳೆಂಬ ಸಾಂಪ್ರದಾಯಿಕ ವ್ಯವಸ್ಥೆಗಳು ಅಳವಡಿಸಿಕೊಂಡಿದ್ದ ‘ಪ್ರಜಾಸತ್ತಾತ್ಮಕ ಮಾದರಿ’ (!?) ಯ ಬಗ್ಗೆ ಅಧ್ಯಯನ ನಡೆಸಲು ವಿಶ್ವ ವಿದ್ಯಾಲಯಗಳಿಗೆ  ಸುತ್ತೋಲೆ ಹೊರಡಿಸಿದ್ದರು. ಇಲ್ಲದ ಆದರ್ಶ ಪ್ರಜಾಪ್ರಭುತ್ವ ದ ಮಾದರಿಯನ್ನು ವಿಶ್ವ ವಿದ್ಯಾಲಯಗಳು ಎಲ್ಲೆಲ್ಲಿ ಹುಡುಕಬೇಕಾಯಿತೋ ಅಥವಾ ಸೃಷ್ಟಿಸಬೇಕಾಯಿತೋ ಸರ್ಕಾರಕ್ಕಷ್ಟೇ ಗೊತ್ತು !.

ಆಡಳಿತ ಸಿಕ್ಕ ಅವಧಿಯುದ್ದಕ್ಕೂ ಕೇಂದ್ರ ಸರ್ಕಾರ ಮಾಡಿದ ಇಂಥ ಇತಿಹಾಸ ತಿರುಚುವ ಪ್ರಯತ್ನಗಳ ಸಂಖ್ಯೆ  ಬಹು ದೊಡ್ಡದಿದೆ. ಪಟ್ಟಿ ಮಾಡುತ್ತಾ ಹೋದಂತೆ ಸರ್ಕಾರದ ವಿರುದ್ಧ ದೂರುಗಳನ್ನಷ್ಟೇ ಮುಂದಿಡುತ್ತಿದ್ದೇವೆಯೇ ಎಂದು ನಮಗೇ ಒಂದು ಕ್ಷಣ ಗೊಂದಲವಾಗುತ್ತದೆ. ಒಂದು ವರ್ಷದಲ್ಲೇ ಇಷ್ಟು ಪ್ರಯತ್ನಗಳು ನಡೆದರೆ, ಅವನ್ನು ಪರಿಶೀಲನೆ ಮಾಡುವ ಹಾಗೂ ವಿಮರ್ಶೆ ಗೊಳಪಡಿಸುವ ಅರ್ಹತೆಯಿರುವ ಕೆಲವೇ ಸಂಶೋಧಕರು, ವಿಷಯ ತಜ್ಞರು ಸಂಪನ್ಮೂಲ ಮತ್ತು ಬೆಂಬಲದ ಕೊರತೆಯಿಂದ ಧ್ವನಿ ಕಳೆದುಕೊಂಡು ಬಡವಾಗಿದ್ದಾರೆ.

ಇಂಥ ಪ್ರಯತ್ನಗಳು ಭಾರತಕ್ಕೆ ಮಾತ್ರ ಸೀಮಿತವೇನಲ್ಲ ಹಾಗೂ ಇದು ಹೊಸದೂ ಅಲ್ಲ. “ಉಕ್ರೇನ್ ಗೆ ಇತಿಹಾಸವಿಲ್ಲ“  ಎಂದು ಹೇಳಿದ್ದ  ಪುಟಿನ್ ಮತ್ತು ಅವರ ಸರ್ಕಾರ  ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ಯ ಮೂಲಕ ಉಕ್ರೇನ್ ನೊಂದಿಗೆ ಇಂಥದೇ ಪ್ರಯೋಗಗಳನ್ನು ಮಾಡುತ್ತಿದೆ. ಯುದ್ಧದಲ್ಲಿ ರಷ್ಯಾ ಸೇನೆ ವ್ಯವಸ್ಥಿತವಾಗಿ  ಉಕ್ರೇನ್ ನ ಮ್ಯೂಸಿಯಂಗಳು, ಐತಿಹಾಸಿಕ ಕಟ್ಟಡಗಳು, ಉಕ್ರೇನ್ ಪರಂಪರೆ ಬಿಂಬಿಸುವ ಸ್ಮಾರಕಗಳನ್ನು  ಗುರಿಯಾಗಿಸಿ ದಾಳಿ ಮಾಡುತ್ತಿದೆ. ಉಕ್ರೇನ್ ಸ್ಥಳಗಳನ್ನು ಮರು ವಶಪಡಿಸಿಕೊಂಡಲ್ಲಿ ನಗರಗಳನ್ನು ತೊರೆದು ಹೋಗುವ ಮುಂಚೆ ರಷ್ಯಾ ಸೇನೆ ವಸ್ತು ಸಂಗ್ರಹಾಲಯಗಳನ್ನು ಲೂಟಿ ಮಾಡಿ ನಡೆಯುತ್ತಿದೆ. ರಷ್ಯಾ ಅಧ್ಯಕ್ಷರು, ಅಖಂಡ ರಷ್ಯಾದ ಪ್ರಜೆಗಳು ಎಂದು ಘೋಷಿಸುತ್ತಲೇ ಉಕ್ರೇನಿಯನ್ನರು ಮತ್ತು ಅವರ ಭಾಷೆ-ಸಂಸ್ಕೃತಿಯ  ಮೇಲೆ ನಿರಂತರ  ಮಾರಣಾಂತಿಕ  ಪ್ರಯೋಗಗಳನ್ನು ನಡೆಸುತ್ತಿದ್ದರೆ ಭಾರತ ಸರ್ಕಾರ ತನ್ನದೇ ಪ್ರಜೆಗಳನ್ನು ಬಲಿಪಶುಗಳನ್ನಾಗಿ ಮಾಡಿದೆ.

ಅಧಿಕಾರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಪಠ್ಯಪುಸ್ತಕಗಳೊಂದಿಗೆ ತನಗೆ ಸರಿ ಕಂಡಂತೆ ಬದಲಾವಣೆ  ಮಾಡಲು ಯತ್ನಿಸುತ್ತವೆ.  ಆದರೆ ಯಾವುದೇ ಪಕ್ಷವು ಇಲ್ಲಿಯವರೆಗೆ ಜನರ ಸ್ಮರಣೆಯನ್ನು ಅಳಿಸಲು, ಇತಿಹಾಸವನ್ನು ಬದಲಾಯಿಸಲು ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ತನ್ನದೇ ಆದ ಸಂಕುಚಿತ ತಿಳುವಳಿಕೆಯನ್ನು ಜನರಿಗೆ ಉಣಿಸಲು ಈ ಪರಿಯ  ಬಲವಂತದ, ವ್ಯಾಪಕ ಪ್ರಯತ್ನಗಳನ್ನು ಮಾಡಿಲ್ಲ. ಉತ್ತಮ ಶಿಕ್ಷಣ ಪಡೆದು ವಿಶ್ವಕ್ಕೆ ಅತ್ಯುನ್ನತ ಮಾನವ ಸಂಪನ್ಮೂಲವಾಗಬಲ್ಲ ಸಾಧ್ಯತೆಯಿರುವ ಭಾರತದ ಯುವ ಜನತೆಯ ಭವಿಷ್ಯವು ನಿರಂತರವೂ  ಅರ್ಥಹೀನವೂ ಆದ  ದ್ವೇಷ ರಾಜಕಾರಣದ ಪ್ರಯೋಗಗಳಿಗೆ ಬಲಿಯಾಗುತ್ತಿದೆ.

ರಂಜಿತಾ ಜಿ ಎಚ್

ಲೇಖಕರು