Rupa Hassan – Peepal Media

ಮಹಿಳೆ | ಮತದಾನಕ್ಕೆ ಬೇಕೇಬೇಕು; ಅಧಿಕಾರಕ್ಕೆ ಬೇಕೆಂದಿಲ್ಲ!
ಪುರುಷಾಳ್ವಿಕೆಯ ಈ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಚುನಾವಣಾ ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸುವ ಎಲ್ಲ ಅರ್ಹತೆಯುಳ್ಳ ಮಹಿಳೆ ಕೂಡ ಅನೇಕ ಬಾರಿ, ಪ್ರಬಲ ರಾಜಕೀಯ ಶಕ್ತಿಗಳ ಕಾಲಿಗೆ ಸಿಕ್ಕುವ ಫುಟ್ಬಾಲ್ ಆಗಿರುತ್ತಾಳೆ! ಅವಳನ್ನು ಗೋಲು ಬಾರಿಸಲು ಬಳಸಿಕೊಳ್ಳುವುದೂ, ಬೇಕೆಂದ ಕಡೆಗೆ ಒದೆಯುವುದು, ಬೇಡವಾದರೆ ದೂರಕ್ಕೆ ನೂಕುವುದೂ….. ಎಲ್ಲವೂ ಸಮಯ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದಷ್ಟೇ.  – ರೂಪ ಹಾಸನ

ಕರ್ನಾಟಕದಲ್ಲೀಗ ಮತ್ತೊಂದು ವಿಧಾನಸಭಾ ಚುನಾವಣೆಯ ಹಣಾಹಣಿ! ಜನನಾಯಕರ ದ್ವೇಷ, ಮತ್ಸರ, ಆಕ್ರೋಶದ ಪರಸ್ಪರ ಕೆಸರೆರಚಾಟದ ಮಾತುಗಳು, ಎಗ್ಗುಸಿಗ್ಗಿಲ್ಲದ ಪಕ್ಷಾಂತರಗಳು, ಅಪವಿತ್ರ ಮೈತ್ರಿಗಳು, ಮತದಾರರಿಗೆ ಕಂಡುಕೇಳರಿಯದಷ್ಟು ಭ್ರಷ್ಟಹಣ, ಉಡುಗೊರೆಗಳ ಹಂಚಿಕೆ… ಇದು ಅಸಹ್ಯದ ಪರಮಾವಧಿ ತಲುಪಿರುವ ಚುನಾವಣಾ ರಾಜಕಾರಣದ ಹಲವು ಮುಖಗಳು. ಇವೆಲ್ಲವನ್ನು ಅಸಹಾಯಕತೆಯಿಂದ ನೋಡುತ್ತಾ ಮತ್ತೆ ಮತ್ತೆ ಸಾಲು ಸಾಲು ಪ್ರಶ್ನೆಗಳು ಧುತ್ತೆಂದು ಎದುರು ನಿಲ್ಲುತ್ತವೆ. ಈ ಚುನಾವಣೆಯಲ್ಲಿ ಮಹಿಳೆಯ ಪಾತ್ರ ಏನು? ಚುನಾವಣಾ ಸಂಬಂಧದ ಪ್ರಮುಖ ನಿರ್ಧಾರ, ನಿರ್ಣಯಗಳನ್ನು ತೆಗೆದುಕೊಳ್ಳಲು ಪಕ್ಷಗಳು ಮಹಿಳೆಯರನ್ನು ಒಳಗೊಂಡಿದ್ದೆಷ್ಟು? ಎಲ್ಲ ಪಕ್ಷಗಳೂ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್‍ಗಳನ್ನು ನೀಡಿದ್ದೆಷ್ಟು? ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಸಮಸ್ಯೆಗಳ ಪರಿಹಾರಕ್ಕೆ ಎಷ್ಟು ಆದ್ಯತೆ ನೀಡಲಾಗಿದೆ? ಎಷ್ಟು ಮಂದಿ ಮಹಿಳೆಯರು ಗೆದ್ದು ಶಾಸಕಿಯರಾಗುತ್ತಾರೆ? ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಎಷ್ಟು ಮಂದಿ ಮಹಿಳೆಯರಿಗೆ ನೀಡಲಾಗುತ್ತದೆ? ನೀಡಿದರೂ ಯಾವೆಲ್ಲ ಖಾತೆ?… ಹೀಗೇ. ಆದರೆ ಕರ್ನಾಟಕ ರಾಜಕೀಯ ಇತಿಹಾಸವನ್ನು ಕೊಂಚವಾದರೂ ಬಲ್ಲ ಪ್ರಜ್ಞಾವಂತರಿಗೆಲ್ಲಾ ಬಹುಶಃ ಉತ್ತರ ಗೊತ್ತೇ ಇದೆ! ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿ, ಹೆಚ್ಚೆಚ್ಚು ಆಯ್ಕೆಯಾಗಲಿ, ಮಹಿಳೆಯರ ನಾಯಕತ್ವ ಹೆಚ್ಚಿ ಈ ಕ್ಷುದ್ರ ರಾಜಕೀಯ ವಾತಾವರಣ ಬದಲಾಗುವಂತಾಗಲಿ… ಎಂಬುದು ಉಳಿದ ಆಶಾವಾದ.

ಚುನಾವಣೆಗಳ ಸ್ಪರ್ಧೆಯಲ್ಲಿ ಎಲ್ಲಿದ್ದೇವೆ?

ಆದರೆ ನಾವು ಜನಸಂಖ್ಯೆಯ ಅಂದಾಜು ಅರ್ಧದಷ್ಟಿರುವ ಮಹಿಳೆಯರು ಶಾಸನ ಸಭೆಯ ಚುನಾವಣೆಗಳ ಸ್ಪರ್ಧೆಯಲ್ಲಿ ಎಲ್ಲಿದ್ದೇವೆ ಎಂದು ದುರ್ಬಿನು ಹಾಕಿ ಹುಡುಕಬೇಕಿದೆ. ಚುನಾವಣೆಯಿಂದ ಚುನಾವಣೆಗೆ ಮಹಿಳೆಯರ ಪಾತ್ರದಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲವೆಂಬುದೂ ನಿರಾಸೆಯನ್ನುಂಟುಮಾಡುತ್ತದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಅಂದಾಜು 45 ವರ್ಷಗಳ ಇತಿಹಾಸದಲ್ಲಿ ಎಷ್ಟು ಮಹಿಳೆಯರು ಸ್ಪರ್ಧಿಸಿದ್ದರು, ಅದರಲ್ಲಿ ಗೆದ್ದವರೆಷ್ಟು ಎಂದು ಅವಲೋಕನ ಮಾಡಿದರೆ-1978ರಲ್ಲಿ 30 ಅಭ್ಯರ್ಥಿಗಳಲ್ಲಿ 8 ವಿಜೇತರು, 1983ರಲ್ಲಿ 34 ಅಭ್ಯರ್ಥಿಗಳಲ್ಲಿ ಒಬ್ಬರು ವಿಜೇತರು, 1985ರಲ್ಲಿ 108 ಅಭ್ಯರ್ಥಿಗಳಲ್ಲಿ 8 ವಿಜೇತರು, 1989ರಲ್ಲಿ 78 ಅಭ್ಯರ್ಥಿಗಳಲ್ಲಿ 10 ವಿಜೇತರು, 1994ರಲ್ಲಿ 117 ಅಭ್ಯರ್ಥಿಗಳಲ್ಲಿ 7 ವಿಜೇತರು, 1999ರಲ್ಲಿ 62 ಅಭ್ಯರ್ಥಿಗಳಲ್ಲಿ 6 ವಿಜೇತರು, 2004ರಲ್ಲಿ 101 ಅಭ್ಯರ್ಥಿಗಳಲ್ಲಿ 6 ವಿಜೇತರು 2008ರಲ್ಲಿ 107 ಅಭ್ಯರ್ಥಿಗಳಲ್ಲಿ 3 ವಿಜೇತರು, 2013ರಲ್ಲಿ 175 ಅಭ್ಯರ್ಥಿಗಳಲ್ಲಿ 6 ವಿಜೇತರು, 2018ರಲ್ಲಿ 219 ಅಭ್ಯರ್ಥಿಗಳಲ್ಲಿ 7 ವಿಜೇತರು… ಒಟ್ಟು ಇದುವರೆಗೆ 1,114 ಮಹಿಳಾ ಸ್ಪರ್ಧಿಗಳ ಪೈಕಿ 102 ಮಹಿಳಾ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿ ಗೆದ್ದಿದ್ದಾರೆ!

ರಾಜಕೀಯ ತಂತ್ರಗಾರಿಕೆಗಳು ಲೆಕ್ಕಾಚಾರಗಳು..

ಹಾಗೆ ಪ್ರತಿ ಪಕ್ಷದ ಟಿಕೇಟ್ ಹಂಚಿಕೆಯಲ್ಲೂ ಹಲವು ಬಗೆಯ ರಾಜಕೀಯ ತಂತ್ರಗಾರಿಕೆಗಳೂ, ಲೆಕ್ಕಾಚಾರಗಳೂ ಕೆಲಸ ಮಾಡುತ್ತವೆ. ಜಾತಿ/ಧಾರ್ಮಿಕ ಸಮುದಾಯಗಳ ಪ್ರಾಬಲ್ಯ, ಗೆಲುವಿನ ಸಾಧ್ಯತೆ, ಹಣಬಲ, ತೋಳ್ಬಲದ ಸಾಮರ್ಥ್ಯ ರಾಜಕೀಯ ಅನುಭವ, ಜನಬೆಂಬಲ, ಅಭ್ಯರ್ಥಿಗಳ ಸ್ಥಳೀಯ ಸಮೀಕರಣ… ಮುಂತಾದುವುಕ್ಕೆ ಆದ್ಯತೆ ನೀಡಲಾಗುತ್ತದೆ. ಲಿಂಗಸಮಾನತೆಯ ಅಂಶ ಅಲ್ಲಿ ಚರ್ಚೆಗೂ ಬರುವುದಿಲ್ಲ! ಪುರುಷಾಳ್ವಿಕೆಯ ಈ ವ್ಯವಸ್ಥೆಯಲ್ಲಿ ಅಧಿಕೃತವಾಗಿ ಚುನಾವಣಾ ರಾಜಕೀಯ ಕ್ಷೇತ್ರ ಪ್ರವೇಶಿಸಲು ಬಯಸುವ ಎಲ್ಲ ಅರ್ಹತೆಯುಳ್ಳ ಮಹಿಳೆ ಕೂಡ ಅನೇಕ ಬಾರಿ, ಪ್ರಬಲ ರಾಜಕೀಯ ಶಕ್ತಿಗಳ ಕಾಲಿಗೆ ಸಿಕ್ಕುವ ಫುಟ್ಬಾಲ್ ಆಗಿರುತ್ತಾಳೆ! ಅವಳನ್ನು ಗೋಲು ಬಾರಿಸಲು ಬಳಸಿಕೊಳ್ಳುವುದೂ, ಬೇಕೆಂದ ಕಡೆಗೆ ಒದೆಯುವುದು, ಬೇಡವಾದರೆ ದೂರಕ್ಕೆ ನೂಕುವುದೂ….. ಎಲ್ಲವೂ ಸಮಯ, ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದಷ್ಟೇ ಎಂಬುದು ತಕ್ಷಣಕ್ಕೆ ಕಣ್ಣಿಗೆ ಗೋಚರಿಸುವ ಸತ್ಯ. ಹಾಗೇ ಎಲ್ಲಾ ಪಕ್ಷಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಮಹಿಳೆಗೆ ಟಿಕೇಟ್ ನೀಡುವ ಪ್ರಮಾಣ ಕೂಡ ಅತ್ಯಂತ ಕಡಿಮೆಯೇ! ದನಿ ಎತ್ತಿ ಲೋಪಗಳನ್ನು ಪ್ರಶ್ನಿಸುವ, ಹಕ್ಕುಗಳನ್ನು ಕೇಳುವ, ನಿಷ್ಠುರವಾದಿ, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ಹೆಣ್ಮಕ್ಕಳು ಎಲ್ಲೆಡೆಯೂ ವರ್ಜ್ಯ! ರಾಜಕೀಯ-ರಾಜಕಾರಣದ ಚುನಾವಣಾ ತಂತ್ರಗಾರಿಕೆಗಳು ಹೆಚ್ಚಾಗಿ ಗಂಡು ಪಾಳೇಗಾರಿಕೆಯ ಕ್ಷೇತ್ರವೇ ಆಗಿರುವಾಗ, ಪುರುಷರಿಗೆ ಅಸ್ತಿತ್ವದ ಭಯ ಕಾಡುತ್ತದೆ. ಹೀಗಾಗಿ ಒಂದೋ ರಾಜಕಾರಣಿ ಸತ್ತಿದ್ದು, ಅನುಕಂಪಗಿಟ್ಟಿಸಲು ಅವನ ಪತ್ನಿಗೆ, ಕುಟುಂಬದ ರಾಜಕೀಯ ಪುರುಷರ ಬೆಂಬಲವಿರುವವರಿಗೆ ಅಥವಾ ಸೋಲು ಖಚಿತವಾದ ಸ್ಥಳದಲ್ಲಿ ಮಾತ್ರ ಮಹಿಳೆಗೆ ಟಿಕೆಟ್ ನೀಡುವುದನ್ನು ಹೆಚ್ಚಾಗಿ ಕಾಣುತ್ತಾ ಬಂದಿದ್ದೇವೆ! ಜೊತೆಗೆ ಇತ್ತೀಚೆಗೆ ಸಿನಿಮಾ ಕ್ಷೇತ್ರದ ಮಹಿಳೆಯರನ್ನು ಕೇವಲ ಅವರ ತಾರಾಮೌಲ್ಯವನ್ನು ಪರಿಗಣಿಸಿ, ಮತ್ಯಾವ ರಾಜಕೀಯ ಅರ್ಹತೆ ಇಲ್ಲದಿದ್ದಾಗಲೂ ರಾಜಕೀಯಕ್ಕೆ ಕರೆ ತರುವ ಕೆಟ್ಟ ಪದ್ಧತಿಯೂ ಚಾಲ್ತಿಗೆ ಬಂದಿದೆ.

ಇದು ಬದಲಾಗಬೇಕು..

ರಾಜಕಾರಣದಲ್ಲಿ ಅಪರಾಧ, ಅಪ್ರಮಾಣಿಕತೆ ಮತ್ತು ಭ್ರಷ್ಟತೆ ಮಿತಿಮೀರಿರುವುದು ಮಹಿಳೆ ರಾಜಕೀಯದಿಂದ ದೂರ ಉಳಿಯಲು ಇನ್ನೊಂದು ಕಾರಣ. ರಾಜಕಾರಣದ ಉದ್ದೇಶಕ್ಕಾಗಿ ಅದರ ಹೆಸರಲ್ಲಿ ನಡೆಯುತ್ತಿರುವ ದೊಂಬಿ, ಗಲಭೆ, ಹಿಂಸಾಚಾರ, ಪುರುಷ ದರ್ಪದ ಅಸಹ್ಯ, ಅಸಭ್ಯ ಪ್ರಕರಣಗಳನ್ನು ಗಮನಿಸುವಾಗ ಮಹಿಳೆ- ತಾನು ಯಾಕಾದರೂ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂದು ಭೀತಿಗೊಳಗಾಗುತ್ತಾಳೆ. ಈ ರಾಜಕೀಯ ಕೆಸರೆರಚಾಟದಲ್ಲಿ ಗಂಡಸರಿಗದೆಷ್ಟೇ ಖುಷಿಯಾದರೂ, ಸಭ್ಯತೆಯ ಗಡಿ ಮೀರುವ ವರ್ತನೆ, ದ್ವೇಷ, ಸೇಡು ಸಮರ್ಥನೀಯವೆನಿಸಿದರೂ ಟಿವಿಗಳಲ್ಲಿ, ಪತ್ರಿಕೆಯಲ್ಲಿ ಇದರ ಆಟಾಟೋಪ, ಸಮರ್ಥನೆ, ರಾಜಕಾರಣಿಗಳ ನುಡಿಮುತ್ತುಗಳನ್ನು ಕೇಳುವ ಮಹಿಳೆಯರು ಅಸಹ್ಯ ಪಟ್ಟುಕೊಳ್ಳುವುದೇ ವಾಸ್ತವ! ಇಂತಹ ಅವಲಕ್ಷಣದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವ ಗುಣ, ಸಂಘಟನಾ ಚಾತುರ್ಯವಿರುವ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಲು ಬಯಸುವುದು ಕಡಿಮೆಯೆ. ಇದು ರಾಜಕೀಯ- ಮಹಿಳೆಯನ್ನು ಒಳಗೊಳ್ಳಲಾಗದ ಸ್ಥಿತಿ ತಲುಪಿರುವ ನಾಚಿಕೆಗೇಡಿನ ಹಂತ. ಇದೂ ಬದಲಾಗಬೇಕು.

ಪಿತೃಪ್ರಾಧಾನ್ಯದ ಪೂರ್ವಾಗ್ರಹ..

ಇನ್ನು ಚುನಾವಣೆ ಗೆದ್ದ ಮಹಿಳೆಯರಲ್ಲಿ ಸಚಿವ ಸ್ಥಾನ ದಕ್ಕಿದ್ದೆಷ್ಟು ಮಂದಿಗೆ ಎಂದು ನೋಡಿದರೆ- 1952ರಲ್ಲಿ ರಾಜ್ಯ ಮೊದಲ ಶಾಸಕಾಂಗ ಸಭೆ ಅಸ್ತಿತ್ವಕ್ಕೆ ಬಂದ ನಂತರದಿಂದ ಇದುವರೆಗೆ ಕೇವಲ 31 ಮಹಿಳೆಯರು ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ಅದರಲ್ಲಿ ಹೆಚ್ಚಿನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ‘ಮಹಿಳೆಯರು ಮುಖ್ಯವಾಗಿ ಕುಟುಂಬ ಪಾಲಕರು ಮತ್ತು ಸಂಸ್ಕೃತಿ ರಕ್ಷಕರು ಆದ್ದರಿಂದ ಅವರಿಗೆ ಈ ಹುದ್ದೆಗಳೇ ಅರ್ಹ’ ಎಂಬ ಪಿತೃಪ್ರಾಧಾನ್ಯದ ಪೂರ್ವಾಗ್ರಹವೇ ಈ ಹಂಚಿಕೆಯ ಹಿಂದಿರುವ ಲೆಕ್ಕಾಚಾರವೆಂಬುದು ಯಾರೂ ಊಹಿಸಬಹುದಾದ ಸತ್ಯ. ಇದಕ್ಕೆ ಅಪವಾದವೆಂಬಂತೆ ಒಂದೆರಡು ಬಾರಿ ಮಾತ್ರ ವೈದ್ಯಕೀಯ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ವಿದ್ಯುತ್ ಖಾತೆಗಳ ಸಚಿವ ಸ್ಥಾನ ಮಹಿಳೆಯರಿಗೆ ದೊರಕಿದೆಯಷ್ಟೇ. ಇನ್ನು ಮುಖ್ಯಮಂತ್ರಿ ಇರಲಿ, ಉಪಮುಖ್ಯಮಂತ್ರಿಯ ಸ್ಥಾನವೂ ಕನಸಾಗಿಯೇ ಉಳಿದಿದೆ! ಹೀಗಾಗಿ ಸರ್ಕಾರ ಎಂದರೆ- ಹೆಚ್ಚಿನ ಬಾರಿ ಪುರುಷ ಕೇಂದ್ರಿತ, ಪುರುಷರಿಗಾಗಿ, ಪುರುಷರಿಗೋಸ್ಕರ ಮಾತ್ರ ಎಂಬಂತಾಗಿ ಎಲ್ಲ ಪ್ರಮುಖ ಪಕ್ಷದಲ್ಲಿರುವ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವ ಭರವಸೆಯನ್ನು ಕಳೆದುಕೊಂಡಿದ್ದಾರೆ.

ಮಹಿಳಾ ಪ್ರಾತಿನಿಧ್ಯ ಕೇವಲ ಶೇಕಡ 7ರಷ್ಟು ಮಾತ್ರ!

ಹಾಗೆ ಈ ಬಾರಿಯ ಚುನಾವಣೆಯ ಚಿತ್ರಣದಲ್ಲೇನೂ ಮಹಿಳಾ ಪ್ರಾತಿನಿಧ್ಯದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಈ ಬಾರಿ ಸ್ಪರ್ಧಿಸಿರುವ 2613 ಅಭ್ಯರ್ಥಿಗಳಲ್ಲಿ, 185 ಮಂದಿ ಮಾತ್ರ ಮಹಿಳೆಯರು ಕಣದಲ್ಲಿದ್ದಾರೆ. ಕಳೆದ ಬಾರಿ 219 ಇದ್ದ ಸಂಖ್ಯೆ ಈ ಬಾರಿ ಏರಿಕೆಯ ಬದಲು, ಮತ್ತಷ್ಟು ಕುಸಿತ ಕಂಡಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜನತಾದಳ ಈ ಬಾರಿ ಶೇಕಡ 5ರಷ್ಟೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲವೆಂಬುದು ವಿಪರ್ಯಾಸ. ಹಾಗೆ ಎಡ ಹಾಗೂ ಪ್ರಗತಿಪರ ಚಿಂತನೆಯ ಪಕ್ಷಗಳಲ್ಲಿ ಮಹಿಳಾ ಸ್ಪರ್ಧೆ ಗೌಣ, ಇಲ್ಲವೇ ಬೆರಳೆಣಿಕೆಯಷ್ಟು ಮಾತ್ರ ಇರುವುದು ದುರಂತ. ಪ್ರಾಯೋಗಿಕವಾಗಿ ಸ್ಪರ್ಧಿಸುತ್ತಿರುವ ಕೆಲ ಹೊಸ ಪಕ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಚುನಾವಣಾ ಕಣಕ್ಕಳಿದಿರುವುದು ಸ್ವಾಗತಾರ್ಹ. ಒಟ್ಟಾರೆ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಶೇಕಡ 7ರಷ್ಟು ಮಾತ್ರ!

ಈ ಬಾರಿ 2.63 ಕೋಟಿ ಮಹಿಳಾ ಮತದಾರರು!

ಆದರೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಲು ಮಹಿಳೆಯರನ್ನು ಒಳಗೊಳ್ಳುವುದು ಅತ್ಯಲ್ಪವಾದರೂ, ರಾಜಕೀಯ ಪಕ್ಷಗಳ ಗೆಲುವಿಗೆ ಮಹಿಳಾ ಮತದಾರರೇ ನಿರ್ಣಾಯಕರು! ಮಹಿಳಾ ಮತದಾರರ ಸಂಖ್ಯೆ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 2.63 ಕೋಟಿ ಮಹಿಳಾ ಮತದಾರರಿದ್ದಾರೆ. ಅದರಲ್ಲೂ ಕರ್ನಾಟಕದ ಅರ್ಧದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ! ಹೀಗಾಗಿ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಮಹಿಳೆ ಹೆಚ್ಚಾಗಿ ಓಟ್ ಬ್ಯಾಂಕ್ ಆಗಿ ಮಾತ್ರ ಗೋಚರಿಸುತ್ತಿದ್ದಾಳೆ. ಮಹಿಳಾ ಮತದಾರರನ್ನು ಸೆಳೆಯುವ ಹಲವು ಬಗೆಯ ಹುನ್ನಾರಗಳು ಎಲ್ಲ ಪಕ್ಷಗಳಿಂದಲೂ ಢಾಳಾಗಿಯೇ ಕಾಣುತ್ತಿದೆ. ಸ್ತ್ರೀಶಕ್ತಿ ಸಂಘಗಳು, ಹಲವು ಮಹಿಳಾ ಸಂಘಟನೆಗಳಿಗೆ ಆಮಿಷ ಒಡ್ಡಿ ರಾಜಕೀಯ ಜಾಥಾ, ಮೆರವಣಿಗೆ, ಸಭೆ, ಸಮಾವೇಶಗಳಿಗೆ ಕರೆದೊಯ್ಯಲಾಗುತ್ತದೆ. ಜೈಕಾರ ಹಾಕಲೂ, ಮತ ಚಲಾಯಿಸಲು ಮನ ಒಲಿಸಲೂ ಹಣ, ವಿವಿಧ ಉಡುಗೊರೆಗಳನ್ನೂ ನೀಡಲಾಗುತ್ತದೆ. ಎಲ್ಲ ಪಕ್ಷಗಳ ಪ್ರಣಾಳಿಕೆಗಳಲ್ಲೂ ಮಹಿಳೆಯರನ್ನು ಕೇಂದ್ರೀಕರಿಸಿ ಕೆಲ ಉಚಿತ ಕೊಡುಗೆಗಳನ್ನು ಘೋಷಿಸಲಾಗಿದೆ. ಆದರೆ ಇಷ್ಟು ಸಾಕೆ?

ಯಾರಿಗೂ ಇಚ್ಛಾಶಕ್ತಿ ಇಲ್ಲ.

ಹೆಚ್ಚಿನ ರಾಷ್ಟ್ರೀಯ, ಪ್ರಾದೇಶಿಕ ಅಥವಾ ಪ್ರಗತಿಪರ ಪಕ್ಷಗಳು ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿಯ ಕುರಿತು ದಶಕಗಳಿಂದ ತುಟಿಯಂಚಿನ ಒತ್ತಾಯದ ಮಾತುಗಳನ್ನಾಡುತ್ತಲೇ ಬಂದಿವೆ. ಆದರೆ ಯಾರಿಗೂ ಇಚ್ಛಾಶಕ್ತಿ ಇಲ್ಲ. ಅವುಗಳು ಆಂತರ್ಯದಲ್ಲಿ ಈ ಮೀಸಲಾತಿಯ ವಿರೋಧವಾಗಿಯೇ ಇವೆ! ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದರೆ ರಾಜಕಾರಣದಲ್ಲಿ ಪುರುಷ ಪ್ರಾತಿನಿಧ್ಯ ಕಡಿಮೆ ಆಗುತ್ತದೆ, ಈಗಿನ ಜಾತಿ/ಧರ್ಮದ ಮೀಸಲಾತಿಯ ಚಿತ್ರಣ ಬದಲಾಗುತ್ತದೆ, ಒಟ್ಟಾರೆ ಪುರುಷರು ಅಧಿಕಾರ ವಂಚಿತರಾಗುತ್ತಾರೆ ಎನ್ನುವ ಆತಂಕ, ಅಧಿಕಾರದ ರುಚಿಯನ್ನು ಅನುಭವಿಸುತ್ತಾ ಬಂದಿರುವ ಎಲ್ಲ ಪಕ್ಷಗಳ ಹೆಚ್ಚಿನ ಪುರುಷಾಧಿಪತಿಗಳದ್ದೂ! ಹೀಗಾಗಿ ಚುನಾವಣೆಯೆಂಬ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮಹಿಳಾ ಸಮೂಹಕ್ಕೆ ವಂಚನೆಯಾಗುತ್ತಲೇ ಬಂದಿದೆ.

ಮಹಿಳಾ ಸಮೂಹ ಎಚ್ಚೆತ್ತು ಕೊಳ್ಳಬೇಕಿದೆ..

ಪ್ರಜಾತಂತ್ರದಲ್ಲಿ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿಸದೇ ಯೋಜನೆಗಳ ರಚನೆಯಲ್ಲಿ ಮತ್ತು ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಮಾನ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರ ಸಮಾನ ಒಳಗೊಳ್ಳುವಿಕೆಯಿಲ್ಲದ ಯಾವುದೇ ಕ್ಷೇತ್ರ, ಯೋಜನೆ, ವ್ಯವಸ್ಥೆ ಮತ್ತು ಯಾವುದೇ ಸಮಾಜ ಹಾಗೂ ಸರ್ಕಾರ ಖಂಡಿತವಾಗಿಯೂ ಪರಿಪೂರ್ಣವಾಗಿರಲು, ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ಅದೊಂದು ಬಗೆಯ ಮನೋ/ದೈಹಿಕ ಅಂಗವೈಕಲ್ಯತೆಯಿರುವ ಸಮಾಜವೇ ಸೈ. ಈ ಗುರುತರ ಲೋಪವನ್ನು ಸರಿಪಡಿಸದೆ ಸ್ವಾತಂತ್ರ್ಯವೆಂಬುದಕ್ಕೂ ಅರ್ಥವಿಲ್ಲ, ಸಂವಿಧಾನ, ಪ್ರಜಾಪ್ರಭುತ್ವಕ್ಕೂ ಅರ್ಥವಿಲ್ಲ! ಹೀಗಾಗಿ ಮಹಿಳಾ ಮೀಸಲಾತಿಯು ರಾಜಕೀಯವನ್ನೂ ಒಳಗೊಂಡು ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೆ ಬರಬೇಕು. ವೈಜ್ಞಾನಿಕವಾಗಿ ಶಾಸನಸಭೆಗೆ ಮಹಿಳಾ ಮೀಸಲಾತಿಯು ಜನಸಂಖ್ಯಾಧಾರಿತವಾಗಿ -ಅಂದರೆ  ಶೇ.50 ರಷ್ಟು ಮೀಸಲಾತಿಯನ್ನು ಪಡೆಯಬೇಕಿರುವುದು ಎಲ್ಲ ರೀತಿಯಲ್ಲೂ ಅಪೇಕ್ಷಣೇಯವಾದುದು. ಆದರೆ ಸಧ್ಯ, ಸರ್ಕಾರಗಳು ಒಪ್ಪಿಕೊಂಡಿರುವ 33% ಆದರೂ ತಕ್ಷಣಕ್ಕೆ ಜಾರಿಯಾಗಲೇಬೇಕು. ಆಗ ಮಾತ್ರ ನಮ್ಮ ಸಾರ್ವತ್ರಿಕ ಚುನಾವಣೆಗಳಲ್ಲಿ, ಮಹಿಳೆಯನ್ನು ಒಳಗೊಂಡ ಸರ್ಕಾರಗಳಲ್ಲಿ, ಒಟ್ಟಾರೆ ಸಮಾಜದಲ್ಲಿ ಮೂಲಮಟ್ಟದ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಾಗಬಹುದು. ಇದನ್ನು ಸಾಧ್ಯವಾಗಿಸುವತ್ತ ಎಚ್ಚೆತ್ತ ಮಹಿಳಾ ಸಮೂಹ ತುರ್ತು ಕಾರ್ಯಪ್ರವೃತ್ತವಾಗಬೇಕಿದೆ.

ರೂಪ ಹಾಸನ

ಜೀವಪರ ಕಾಳಜಿಯೊಂದಿಗೆ ಸಾಹಿತ್ಯ ಕೃಷಿ ಮಾಡುವ ಇವರು ತಮ್ಮದೇ ಆದ ʼಪ್ರೇರಣಾ ವಿಕಾಸ ವೇದಿಕೆʼಯ ಮೂಲಕ ಮಕ್ಕಳು ಹಾಗೂ ಮಹಿಳಾ ಹಕ್ಕುಗಳಿಗೆ ದನಿಯಾಗುತ್ತಿದ್ದಾರೆ.

ಇದನ್ನೂ ಓದಿ-https://peepalmedia.com/women-in-politics/ http://ರಾಜಕಾರಣದಲ್ಲಿ ಮಹಿಳೆಯರ ಮುಖಾಮುಖಿ

ಮಕ್ಕಳ ಪಾಲಿಗೆ ಅಪರಾಧಿ ಭಾರತ!
ಮಕ್ಕಳ ದಿನಾಚರಣೆ ಮಕ್ಕಳಿಗೆ ಹಬ್ಬವಾಗಬೇಕಾದರೆ ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿಯನ್ನು ಪೋಷಕರು, ವ್ಯವಸ್ಥೆ ಮತ್ತು ಸರ್ಕಾರ ಹೊರಬೇಕಿದೆ ಎನ್ನುತ್ತಾ ಮಕ್ಕಳ ದಿನಾಚರಣೆಯ ದಿನದಂದು ಮಕ್ಕಳ ಪಾಲಿಗೆ ಅಪರಾಧಿ ಸ್ಥಾನದಲ್ಲಿ ನಿಂತ ಭಾರತವನ್ನು ವಿಶ್ಲೇಷಿಸಿದ್ದಾರೆ ಲೇಖಕಿ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೂಪ ಹಾಸನ.

ಮಕ್ಕಳೊಂದಿಗೆ ಜವಾಹರಲಾಲ್‌ ನೆಹರು

ಇಂದು ಮತ್ತೊಂದು ಮಕ್ಕಳ ದಿನಾಚರಣೆ! ಆದರೆ ಇದೂ ಕೂಡ ಇತರ ದಿನಾಚರಣೆಗಳಂತೆ ಒಂದು ಕಾಟಾಚಾರದ ಆಚರಣೆಯಾಗಿಬಿಟ್ಟಿದೆ. ಅಥವಾ ಉಳ್ಳವರ ಮಕ್ಕಳಿಗಾಗಿ ನಡೆಯುವ ಅದ್ದೂರಿ ಆಡಂಬರದ ಒಂದು ದಿನದ ಆಚರಣೆ ಮಾತ್ರವಾಗಿ ಉಳಿದುಬಿಟ್ಟಿದೆ. ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಭಾರತದಲ್ಲಿ ಸದ್ಯ ಎರಡೂವರೆ ಕೋಟಿ ಅನಾಥ ಮಕ್ಕಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಪ್ರತಿ ದಿನ ಅಂದಾಜು ಮೂರು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹಾಗೂ ನೂರಕ್ಕೆ ನಲವತ್ತೈದಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂದು ‘ಯೂನಿಸೆಫ್’ ಇತ್ತೀಚೆಗೆ ವರದಿ ನೀಡಿದೆ. ಸದ್ಯ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ 6 ಕೋಟಿ ಮಕ್ಕಳಿದ್ದು, ಕರ್ನಾಟಕದಲ್ಲಿ ಅಂದಾಜು ಅಂತಹ 12 ಲಕ್ಷ ಮಕ್ಕಳಿದ್ದಾರೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ನಮ್ಮದು ಅದಿನ್ಯಾವ ಸೀಮೆ ಅಭಿವೃದ್ಧಿ? ಎಂದು ಸರ್ಕಾರಗಳನ್ನು ಗಟ್ಟಿಸಿ ಕೇಳಬೇಕಿದೆ. ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ ಸರಾಸರಿ ಮೂರು ಲಕ್ಷದಷ್ಟು ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸದಾ ಇರುತ್ತದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ, ಭವಿಷ್ಯದ ಕುಡಿಗಳ ವಿಷಯದಲ್ಲಿ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ದೇಶವೊಂದರ ಪಾಲಿಗೆ ಇದಕ್ಕಿಂತಾ ದುರಂತ ಬೇರೇನಿದೆ?

ಮಕ್ಕಳ ಪೋಷಣೆ ತೃಪ್ತಿಕರವಾಗಿಲ್ಲ…

2011ರ ಜನಗಣತಿಯಂತೆ ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 39ರಷ್ಟು ಮಕ್ಕಳು. ಇದರಲ್ಲಿ 73% ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಒಟ್ಟಾರೆ ಜಗತ್ತಿನ ಆರು ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ.

ಜಗತ್ತಿನ ಅತಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ದೇಶವೆಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಮಕ್ಕಳ ಹಕ್ಕುಗಳ ಸಂರಕ್ಷಣೆಯ ದೃಷ್ಟಿಯಿಂದ ನಮ್ಮ ಸಾಧನೆ ಅತ್ಯಂತ ಕಳಪೆ. ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲವೆಂದು ಅಂತಾರಾಷ್ಟ್ರೀಯ ಮಾನದಂಡಗಳು ನಮ್ಮನ್ನು ಅಪಹಾಸ್ಯ ಮಾಡುತ್ತಿವೆ. ಮಕ್ಕಳ ಪೋಷಣೆ ವಿಚಾರದಲ್ಲಿ 1995ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 100 ಸ್ಥಾನದಿಂದ ಮೇಲಕ್ಕೆ ಏರುತ್ತಲೇ ಹೋಗುತ್ತಿದೆಯೆಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.

ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ‘ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ’ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‍ಲ್ಯಾಂಡ್, ಬ್ರಿಟನ್ ಮತ್ತು ನಾರ್ವೆ ದೇಶಗಳಿವೆ.

ಯೋಜನೆಗಳು ಮಕ್ಕಳನ್ನು ಮುಟ್ಟುತ್ತಿವೆಯೇ?

ಮಕ್ಕಳ ಹಕ್ಕುಗಳ ನಿರ್ಲಕ್ಷ್ಯ, ಅವರು ಅನುಭವಿಸುತ್ತಿರುವ ಅವಿರತ ಶೋಷಣೆಯನ್ನು ಗಮನಿಸಿ, ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974ರ ಮಕ್ಕಳ ರಾಷ್ಟ್ರೀಯ ನೀತಿ, ಅಲ್ಲಿಂದ ಮುಂದೆ 1986ರ ರಾಷ್ಟ್ರೀಯ ಶಿಕ್ಷಣ ನೀತಿ, 1993ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013ರ ರಾಷ್ಟ್ರೀಯ ಮಕ್ಕಳ ನೀತಿ… ಎಲ್ಲವೂ ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ.

ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100ಶೇಕಡಾ ಹಾಕಿಸಬೇಕೆಂದು, ಜನನ-ಮರಣ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣ ಹತ್ಯೆಯ ಸಂಪೂರ್ಣ ನಿಷೇಧ, ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಕೆ… ಈ ಎಲ್ಲ ಕಾರಣಗಳಿಗಾಗಿ ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ಅನೇಕ ಕಾನೂನು, ನೀತಿ ನಿಯಮಗಳನ್ನೂ ಇದರೊಂದಿಗೇ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನ ರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ಸಹ ರೂಪಿಸಲಾಗಿದೆ. ಎಲ್ಲವೂ ಪ್ರತಿನಿತ್ಯ ಕಡತಗಳಲ್ಲಿ ದಾಖಲಾಗುತ್ತವೆ. ಕೋಟ್ಯಾಂತರ ರೂಪಾಯಿಗಳು ಇದಕ್ಕಾಗಿ ವ್ಯಯವಾಗುತ್ತದೆ. ಆದರೆ ಯಾವುದೂ ನಿಜವಾದ ಸಂಕಷ್ಟದಲ್ಲಿರುವ ಮಕ್ಕಳನ್ನು ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯಾಗಿಲ್ಲ.

ಮಕ್ಕಳ ಬದುಕು ಇಲ್ಲಿ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಲೇ ಸಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ಹೆರಿಗೆಗೆ ನಿರಾಕರಿಸಿದ್ದರಿಂದಾಗಿ, ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗದೇ, ಮನೆಯಲ್ಲಿಯೇ ಹೆರಿಗೆಯಾಗುವ ಸಂದರ್ಭದಲ್ಲಿ ತಾಯಿ ಹಾಗೂ ಅವಳಿಜವಳಿ ಹಸುಗೂಸುಗಳು ಸಾವಿಗೀಡಾದ ಹೃದಯ ವಿದ್ರಾವಕ ದಾರುಣ ಘಟನೆ ಕಣ್ಣ ಮುಂದಿದೆ.

ಹೆಣ್ಣುಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲ…

‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ, ದಾಖಲಾದ ಅತ್ಯಾಚಾರಗಳ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ ಈ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಇತ್ತೀಚೆಗಷ್ಟೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಬಾಲೆಯರ ಮೇಲೆ, ಅಲ್ಲಿನ ಪೀಠಾಧ್ಯಕ್ಷನಿಂದಲೇ ನಡೆದಿದೆ ಎನ್ನಲಾದ ನಿರಂತರ ಲೈಂಗಿಕ ಶೋಷಣೆಯ ಪ್ರಕರಣ, ಮಳವಳ್ಳಿಯಲ್ಲಿ ಟ್ಯೂಷನ್ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಆರನೆಯ ತರಗತಿಯ ವಿದ್ಯಾರ್ಥಿನಿಯ ಪ್ರಕರಣ, ಅಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿ ಬಸಿರಾದ ಬಾಲೆಯ ಪ್ರಕರಣ, ದಲಿತ ಹೆಣ್ಣು ಮಕ್ಕಳ ಮೇಲೆ ಎಗ್ಗಿಲ್ಲದಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹೆಣ್ಣುಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲವೆಂಬ ಸತ್ಯವನ್ನು ಬಿಚ್ಚಿಟ್ಟು, ಆತಂಕದಿಂದ ಬೆಚ್ಚಿಬೀಳುವಂತೆ ಮಾಡುತ್ತಿವೆ. ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಸಮರ್ಪಕ ಪುನರ್ವಸತಿ ದೊರೆಯದಿರುವುದು, ವರ್ಷಗಟ್ಟಲೆಯಾದರೂ ಪರಿಹಾರ ಧನ ವಿತರಣೆಯಾಗದಿರುವುದು, ಸಂತ್ರಸ್ತರು ತಮ್ಮ ಬದುಕನ್ನು, ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಳ್ಳುವುದಕ್ಕೆ ಸರ್ಕಾರ ಮೂಲಮಟ್ಟದಲ್ಲಿ ಸಮರ್ಪಕ ಸಹಾಯ ಹಸ್ತವನ್ನೂ ಚಾಚದಿರುವುದು, ವ್ವವಸ್ಥೆಯ ಬಗೆಗೆ ಆಕ್ರೋಶವನ್ನು ಮೂಡಿಸುತ್ತಿದೆ. ಇಲ್ಲಿ ಈ ಪುಟ್ಟ ಬಾಲೆಯರು ಬದುಕುಳಿಯುವುದಾದರೂ ಹೇಗೆ?

ಕಾಣೆಯಾಗುವ ಮಕ್ಕಳು

ಹಾಗೇ ಭಾರತದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಕೂಡ ವರ್ಷದಿಂದ ವರ್ಷಕ್ಕೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ನಾಪತ್ತೆಯಾಗಿ ಪ್ರಕರಣ ದಾಖಲಾದವರ ಪೈಕಿ ಕೆಲವರಷ್ಟೇ ಪತ್ತೆಯಾಗುತ್ತಿದ್ದಾರೆ. ಉಳಿದವರ ಶಾಶ್ವತ ಕಣ್ಮರೆ ಆತಂಕ ಮೂಡಿಸುತ್ತಿದೆ. ಪ್ರತಿದಿನ ನಮ್ಮ ರಾಜ್ಯದಲ್ಲಿಯೇ ಸುಮಾರು 18ರಿಂದ 20 ಮಕ್ಕಳು ಕಾಣೆಯಾಗುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಬ್ಯೂರೋ ದಾಖಲಿಸಿರುವ ಅಂಕಿ ಅಂಶಗಳ ಪ್ರಕಾರ 2008ರಿಂದ 2012ರವರೆಗೆ ಹದಿನೆಂಟು ವರ್ಷದೊಳಗಿನ ಒಟ್ಟು 19,724 ಗಂಡು ಮತ್ತು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ಅದರಲ್ಲಿ ಪತ್ತೆಯಾಗಿರುವುದು 9,245 ಮಕ್ಕಳು ಮಾತ್ರ! ಇನ್ನುಳಿದ 10,479 ಮಕ್ಕಳ ನಾಪತ್ತೆಯ ನಿಗೂಢತೆಯನ್ನು ನಮ್ಮ ಪೊಲೀಸರಿಂದ ಇನ್ನೂ ಭೇದಿಸಲಾಗಿಲ್ಲ. ಮಕ್ಕಳ ಕಳ್ಳಸಾಗಾಣಿಕೆ, ಮಾರಾಟ, ಅಪಹರಣ, ವೇಶ್ಯಾವಾಟಿಕೆಗೆ ತಳ್ಳುವ ಜಾಲಕ್ಕೆ, ಕಡಿವಾಣ ಬಿದ್ದಿಲ್ಲದಿರುವುದೇ ಇಷ್ಟು ದೊಡ್ಡ ಮೊತ್ತದ ಮಕ್ಕಳು ಶಾಶ್ವತವಾಗಿ ಕಾಣೆಯಾಗಿರುವುದಕ್ಕೆ ಕಾರಣ ಎಂಬುದನ್ನು ಯಾರು ಬೇಕಿದ್ದರೂ ಊಹಿಸಬಹುದಾಗಿದೆ.

ಕಟುಕರು ಯಾರು?

ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 (ದುರ್ಬಳಕೆ ಮತ್ತು ತಡೆ)ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿ ಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ‘ಪತ್ತೆ’ ಅಥವಾ ‘ಆಯ್ಕೆ’ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದು ನಿಸ್ಸಂಶಯವಾಗಿ ಹೆಣ್ಣು ಸಂಕುಲದ ಮೇಲೆ ನಡೆಸುತ್ತಿರುವ ‘ಸಾಂಸ್ಕೃತಿಕ ಅತ್ಯಾಚಾರ’ವೇ ಸರಿ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಸಾವಿರಾರು ಸಂಖ್ಯೆಯಷ್ಟು ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? – ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಕಾಣೆಯಾಗಿ ಹೋಗುತ್ತಿದ್ದಾರೆ?

ಮಕ್ಕಳ ಕುಂಠಿತ ಬೆಳವಣಿಗೆ

ದಾಖಲೆಯಂತೆ, ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ ಐದು ಮಕ್ಕಳಲ್ಲಿ ಎರಡು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿರುತ್ತದೆ. ಹೀಗಾಗಿ ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಬೆಳವಣಿಗೆ ಕುಂಠಿತಗೊಂಡ ಅತಿ ಹೆಚ್ಚು ಮಕ್ಕಳಿದ್ದಾರೆ. ವಯಸ್ಸಿಗೆ ತಕ್ಕಂತೆ ಎತ್ತರ ಬೆಳವಣಿಗೆ ಆಗದಿರುವುದು ಮತ್ತು ದೈಹಿಕ ಹಾಗೂ ಮಿದುಳು ಸಾಮರ್ಥ್ಯ ಅಭಿವೃದ್ಧಿ ಹೊಂದದಿರುವುದನ್ನು ಮಾನದಂಡವಾಗಿ ಇಟ್ಟುಕೊಂಡು ಬೆಳವಣಿಗೆ ಕುಂಠಿತಗೊಂಡಿರುವುದನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ತಾಯಂದಿರ ಬಾಲ್ಯವಿವಾಹ! ಮತ್ತೊಂದು ಕಾರಣ ಬಯಲು ಶೌಚದ ಮೂಲಕ ಹರಡುವ ರೋಗ ಮತ್ತು ಸೋಂಕು! ಆ ಮೂಲಕ ಭಾರತದಲ್ಲಿ ಪ್ರತಿ ವರ್ಷ ಅಂದಾಜು 1.4ಲಕ್ಷ ಮಕ್ಕಳು ಭೇದಿಯಿಂದಾಗಿ ಸಾಯುತ್ತಿದ್ದಾರೆ. ಶುದ್ಧ ನೀರಿನ ಕೊರತೆ, ನೈರ್ಮಲ್ಯ ಕೊರತೆಗಳೇ ಶೇಕಡಾ 50ರಷ್ಟು ಭೇದಿ ಪ್ರಕರಣಗಳಿಗೆ ಕಾರಣ. ಬೆಳವಣಿಗೆ ಕುಂಠಿತಗೊಳ್ಳುವ ಸಮಸ್ಯೆಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ.

ಮಕ್ಕಳ ಸ್ಥಿತಿ ಅಪಾಯಕಾರಿ ಹಂತವನ್ನು ತಲುಪಿದೆ!

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ 2014ರಲ್ಲಿಯೇ, “ಭಾರತದ ಕಾನೂನು ಅನುಷ್ಠಾನ ಸಂಸ್ಥೆಗಳು ಹಾಗೂ ನ್ಯಾಯಾಂಗ ಇಲಾಖೆಗಳು ಭಾರತ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ತಮ್ಮ ಜವಾಬ್ದಾರಿಯಿಂದ ವಿಫಲವಾಗಿವೆ. ದೇಶಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ವ್ಯಾಪಕವಾದ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ನಿರ್ಲಕ್ಷ್ಯ ಆಘಾತ ಹುಟ್ಟಿಸುವಂತಿದೆ” ಎಂದು ತನ್ನ ವರದಿಯಲ್ಲಿ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೆ ಇಷ್ಟು ವರ್ಷಗಳೇ ಕಳೆದು ಹೋದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಯಾವುದೇ ಪರಿಣಾಮಕಾರಿಯಾದ ರಕ್ಷಣಾ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಹೀಗೆಂದೇ ಭಾರತದಲ್ಲಿ ಮಕ್ಕಳ ಸ್ಥಿತಿ ನಿಜಕ್ಕೂ ಅಪಾಯಕಾರಿ ಹಂತವನ್ನು ತಲುಪಿದೆ.

ಪೋಷಕರು, ವ್ಯವಸ್ಥೆ ಮತ್ತು ಸರ್ಕಾರದ ಜವಾಬ್ದಾರಿ

ಸಮಾಜದ ವಿವಿಧ ಅಂಗಗಳನ್ನು ಬಗೆದು ನೋಡುತ್ತಾ ಹೋದರೆ ರಾಜಾರೋಷವಾಗಿ ಮಕ್ಕಳ ಶೋಷಣೆಯ, ನಿರ್ಲಕ್ಷ್ಯದ, ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯ ರಾಶಿ ರಾಶಿ ಪ್ರಕರಣಗಳು ಹಾಗೂ ಅಂಕಿಅಂಶಗಳು ಎಲ್ಲೆಂದರಲ್ಲಿ, ಅತ್ಯಂತ ಸಾಮಾನ್ಯವಾಗಿ ಕಾಣಸಿಗುತ್ತವೆ. ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ವ್ಯವಸ್ಥೆ ಮತ್ತು ಸರ್ಕಾರದ ಮೇಲಿದೆ. ಈ ಹೊಣೆಯನ್ನು ಪ್ರತಿಯೊಂದು ಅಂಗವೂ ಅಕ್ಕರೆಯಿಂದ ಹೊತ್ತುಕೊಳ್ಳಲು ನಿಜಕ್ಕೂ ತಯಾರಿವೆಯೆ? ಇಲ್ಲವೆಂದಾದರೆ ನಾವು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ನಡೆಸುವ ಯಾವುದೇ ಆಡಂಬರದ ಆಚರಣೆಗಳು ಆತ್ಮವಂಚನೆಯಷ್ಟೇ!

ರೂಪ ಹಾಸನ

ಜೀವಪರ ಕಾಳಜಿಯೊಂದಿಗೆ ಸಾಹಿತ್ಯ ಕೃಷಿ ಮಾಡುವ ಇವರು ತಮ್ಮದೇ ಆದ ʼಪ್ರೇರಣಾ ವಿಕಾಸ ವೇದಿಕೆʼಯ ಮೂಲಕ ಮಕ್ಕಳ ಹಕ್ಕುಗಳಿಗೆ ದನಿಯಾಗುತ್ತಿದ್ದಾರೆ.