Shantha Kumari – Peepal Media

ಮೌಲ್ಯ ಮರೆತ ರಾಜಕಾರಣ
ಜಗದೀಶ್ ಶೆಟ್ಟರ್ ರವರು ತಮಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಲು ಏನು ಕಾರಣವಿದೆ ಎಂದು ಕೇಳುವಾಗ ತಾನೇನು ಸೆಕ್ಸ್ ಸ್ಕ್ಯಾಂಡಲ್ ನಲ್ಲಿದ್ದೇನಾ? ಸಿಡಿ ಹಗರಣವಿದೆಯಾ? ಸೀರೆ ಎಳೆದಿದ್ದೇನಾ? ಹಣ ಮುಳುಗಿಸಿದ್ದೇನಾ? ಅಂತ ಹೋಲಿಕೆ ಮಾಡಿಕೊಳ್ಳುತ್ತಾರೆ. ನೀಚತನದ ರಾಜಕಾರಣಿಯೊಂದಿಗೆ ಹೋಲಿಸಿಕೊಳ್ಳುತ್ತಾ ನಾನೇನು ಅಷ್ಟು ನೀಚನಲ್ಲ ಎಂದು ಸಮರ್ಥಿಸಿ ಕೊಳ್ಳುವಷ್ಟರ ಮಟ್ಟಿಗೆ ರಾಜಕಾರಣ ಹೇಸಿಗೆಯಾಗಿದೆ- ಶಾಂತಾಕುಮಾರಿ

ಅರಾಜಕತೆಯೇ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ಭಾರತದಲ್ಲಿ ಒಂದು ಗಂಭೀರ ಅಥವಾ ಸೈದ್ಧಾಂತಿಕ ರಾಜಕಾರಣವಿದೆ ಎಂದು ಅನಿಸುತ್ತಿಲ್ಲ. ಅನೈತಿಕ ರಾಜಕಾರಣ, ಸೇಡಿನ ರಾಜಕಾರಣ, ಜಾತಿಯ ರಾಜಕಾರಣ ಧರ್ಮಾಧಾರಿತ ರಾಜಕಾರಣ ಎಂದು ಹೀಗೆ ಬಗೆಬಗೆಯಾಗಿ ಅಧಃಪತನಕ್ಕೆ ಇಳಿಯುತ್ತಾ ಬಂದ ರಾಜಕಾರಣ ಈ ಚುನಾವಣಾ ಸಂದರ್ಭದಲ್ಲಿ ಇವೆಲ್ಲವನ್ನೂ ಒಳಗೊಂಡಂತೆ ಪಕ್ಷಾತೀತವಾಗಿ ಕೇವಲ  ಹಣ ಮತ್ತು ಅಧಿಕಾರದ ರಾಜಕಾರಣವಾಗಿ ಮಾರ್ಪಟ್ಟಿದೆ.  ಮೌಲ್ಯಾಧಾರಿತ ರಾಜಕಾರಣ ಎನ್ನುವುದು ಅಪಹಾಸ್ಯವಾಗುವ ಮಟ್ಟಿಗೆ ಇವತ್ತಿನ ರಾಜಕೀಯ ಸ್ಥಿತಿ ಅಧೋಗತಿಯನ್ನು ತಲುಪಿದೆ.

ರಾಜಕಾರಣ ಅಪಮೌಲ್ಯವಾಗುತ್ತಾ  ಭ್ರಷ್ಟರ ಆಡಳಿತದಲ್ಲಿ ವ್ಯವಸ್ಥೆ ತೀರಾ ಹದಗೆಟ್ಟು ಆರ್ಥಿಕ ಅಭದ್ರತೆ ಸಾಮಾಜಿಕ ಅಸಮಾನತೆಗಳಿಂದ ಸಾಮಾನ್ಯ ಜನರೂ ಸಹ ಹಣಕ್ಕಾಗಿ ಏನು ಮಾಡಲೂ ಹೇಸದಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಪ್ರಾಮಾಣಿಕತೆ ಆದರ್ಶ ಇವೆಲ್ಲ ಸೋಗಲಾಡಿತನವಾಗಿ ಆ ಬಗ್ಗೆ ಮಾತಾಡುವವರೇ ನಂಬಿಕೆ ಕಳೆದು ಕೊಳ್ಳಬಹುದಾದ ಸನ್ನಿವೇಶದಲ್ಲಿ ನಾವಿದ್ದೇವೆ. ಯಾವ ಸಮಾಜ ಕನಸುಗಳನ್ನು ಆದರ್ಶಗಳನ್ನು ಕಳೆದುಕೊಳ್ಳುತ್ತದೆಯೊ ಆ ದೇಶಕ್ಕೆ ಭವಿಷ್ಯವೆಲ್ಲಿಯದು? ಆದರ್ಶ ರಾಜ್ಯ ಎನ್ನುವುದು ಕಲ್ಪನೆಯಾದರೂ ವಾಸ್ತವಿಕ ನೆಲೆಯಲ್ಲಿ ಆ ದಿಕ್ಕಿನೆಡೆ ಸಾಗಲು ಉತ್ತೇಜಿಸುವ ಒಂದು ಮೌಲ್ಯ.  ಇಂದಿನ  ಭ್ರಷ್ಟ ರಾಜಕಾರಣಿಗಳು ಆದರ್ಶದ ಕಲ್ಪನೆಯಿಂದಲೂ ವಂಚಿತರಾಗುವ ಸಮಾಜವನ್ನು ಸೃಷ್ಟಿ ಸಾಗಿರುವುದೇ ದುರಂತ!

ಚುನಾವಣೆಯನ್ನು ಎದುರಿಸುವ ವ್ಯಕ್ತಿ ಒಂದಷ್ಟು ಮೌಲ್ಯಗಳನ್ನು ಹೊಂದಿರಬೇಕು ಎಂದು ಭಾವಿಸುವುದಕ್ಕಿಂತ  ನೀಚತನದ ರಾಜಕಾರಣಿಯೊಂದಿಗೆ ಹೋಲಿಸಿಕೊಳ್ಳುತ್ತಾ ನಾನೇನು ಅಷ್ಟು ನೀಚನಲ್ಲ ಎಂದು ಸಮರ್ಥಿಸಿಕೊಳ್ಳುವಷ್ಟರ ಮಟ್ಟಿಗೆ ರಾಜಕಾರಣ ಹೇಸಿಗೆಯಾಗಿದೆ. ಜಗದೀಶ್ ಶೆಟ್ಟರ್ ರವರು ತಮಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಲು ಏನು ಕಾರಣವಿದೆ ಎಂದು ಕೇಳುವಾಗ ತಾವೇನು ಸೆಕ್ಸ್ ಸ್ಕ್ಯಾಂಡಲ್ ನಲ್ಲಿದ್ದೇನಾ? ಸಿಡಿ ಹಗರಣವಿದೆಯಾ? ಸೀರೆ ಎಳೆದಿದ್ದೇನಾ? ಹಣ ಮುಳುಗಿಸಿದ್ದೇನಾ? ಅಂತ ಹೋಲಿಕೆ ಮಾಡಿಕೊಳ್ಳುತ್ತಾರೆ ಅಂದರೆ, ಇವತ್ತು ನೈತಿಕತೆ/ ಅನೈತಿಕತೆಯ ಮಾನದಂಡ ಎಂತಹುದು?

ಮೂವತ್ತೈದು ವರ್ಷಗಳಿಂದ ಒಂದು ಸಿದ್ಧಾಂತದ ಪರವಾಗಿ ಕೆಲಸ ಮಾಡಿ ಅಧಿಕಾರ ಅನುಭವಿಸಿ ಕೇವಲ ವೈಯಕ್ತಿಕ ಪ್ರತಿಷ್ಠೆಗಾಗಿ ತೀರಾ ವ್ಯತಿರಿಕ್ತ ಸಿದ್ಧಾಂತದ ಪಕ್ಷಕ್ಕೆ ಸೇರಲು ತಯಾರಾದರೆ ಇಡೀ ಜೀವನಪೂರ್ತಿ ನಂಬಿದ ಮೌಲ್ಯದ ಕತೆ ಏನು? ಸಾರಾಸಗಟಾಗಿ ಎನ್. ಮಹೇಶ್ ರವರು, ಬಿಎಸ್ಪಿಯಿಂದ ಬಿಜೆಪಿಗೆ ಸೇರುವಾಗ ” ಹೋರಾಟದ ರಾಜಕಾರಣವೇ ಬೇರೆ ಅಧಿಕಾರದ ರಾಜಕಾರಣವೇ ಬೇರೆ” ಎಂದು ಸಮರ್ಥಿಸಿಕೊಂಡರು! ಅಲ್ಲಿಗೆ ನಡೆನುಡಿ ಒಂದೇ ಆಗಬೇಕಿಲ್ಲ ಎನ್ನುವುದು ವೇದ್ಯ.

ಇವತ್ತು ರಾಜಕೀಯದಲ್ಲುಳಿಯಲು ಅಧಿಕಾರ ಅನಿವಾರ್ಯ. ಮತ್ತು ಆ ಅಧಿಕಾರಕ್ಕಾಗಿ ಹಣ ಚೆಲ್ಲುವುದು, ಎಂತದ್ದೇ ದುಷ್ಟ ಮಾರ್ಗವನ್ನು ಅನುಸರಿಸುವುದು ಅನಿವಾರ್ಯ ಎನ್ನುವಂತಹ ಸ್ಥಿತಿಯನ್ನು ಸ್ವತಃ ರಾಜಕಾರಣಿಗಳು ತಂದುಕೊಂಡಿದ್ದಾರೆ.

ಒಂದು ಕಾಲದಲ್ಲಿ ನಕ್ಸಲೈಟರು, ಪ್ರಗತಿಪರರು, ರೈತರು, ದಲಿತರು ಒಂದಷ್ಟು ಚಳುವಳಿ ಹೋರಾಟ ಅಂತಲಾದರೂ ವ್ಯವಸ್ಥೆಯ ವಿರುದ್ಧ ದನಿ ಎತ್ತುತ್ತಿದ್ದರು. ಇವತ್ತು ಅಂತಹ ದನಿಗಳಿಗೇ ಲಕ್ವ ಬಡಿದಿದೆ. ಶ್ರೀಮಂತರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮೌನವಾಗಿದ್ದರೆ ಮಧ್ಯಮವರ್ಗದವರು ತಮ್ಮಬದುಕಿನ ಅಸ್ತಿತ್ವಕ್ಕಾಗಿ ಮೌನದ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಳವರ್ಗದವರ ಪ್ರಾಣಕ್ಕೇ ಬೆಲೆ ಇಲ್ಲದಿರುವಾಗ ದನಿ ಎತ್ತುವ ಮಾತೇ ಇಲ್ಲ.  ದನಿ ಅಡಗಿಸುವ ಅಸ್ತ್ರಗಳು ಇಂದಿನ ಪ್ರಭುತ್ವದಲ್ಲಿ ಎಲ್ಲರನ್ನೂ ದುರ್ಬಲಗೊಳಿಸಿವೆ. ಆರ್ಥಿಕ ನೀತಿಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಾ ಉಳಿದವರನ್ನು ಅಸಹಾಯಕರನ್ನಾಗಿ ಮಾಡುತ್ತಿವೆ.  ಸರ್ಕಾರಿ ಸಂಸ್ಥೆಗಳೆಲ್ಲ ಕಾರ್ಪೋರೇಟ್ ಉದ್ಯಮವಾಗಿ ಬದಲಾಗುತ್ತಿವೆ. ಕಾರ್ಪೋರೇಟ್ ಜಗತ್ತು ಎನ್ನುವುದು ಮುಖವಿಲ್ಲದವರು ನಿಷ್ಕಾರುಣ್ಯವಾಗಿ ಒಮ್ಮುಖವಾಗಿ ದುಡಿಸುತ್ತಲೇ ಇರುವವರದು. ಇಲ್ಲಿ ಆದೇಶಗಳಿಗೆ ಕಿವಿಯಾಗುವವರು ಬೇಕು. ಪ್ರಶ್ನೆಯಾಗುವ ಬಾಯಿಗೆ ಇಲ್ಲಿ ಕೆಲಸವಿಲ್ಲ!

ಇದನ್ನೂ ಓದಿ-http://ಪುಲ್ವಾಮಾ | ಆ ನಲವತ್ತು ಧೀರ ಯೋಧರ ಸಾವಿಗೆ ಯಾರು ಹೊಣೆ?

ಜನಸಮುದಾಯದ ಹಕ್ಕುಬಾಧ್ಯತೆಗಳ ನಿಟ್ಟಿನಲ್ಲಿ ದುಡಿಯುವ ರಟ್ಟೆಗಳನ್ನು ಗಟ್ಟಿಗೊಳಿಸುವಲ್ಲಿ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಕ್ರಿಯಾತ್ಮಕ ರಾಜಕೀಯ  ನಿಭಾಯಿಸಬಹುದಾದ ಜವಾಬ್ದಾರಿಗಳ ಬಗ್ಗೆ ಮಾತನಾಡುವವರೇ ಅಪರೂಪವಾಗಿದ್ದಾರೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಡಬಲ ಸಿದ್ಧಾಂತಗಳ ಹೆಸರಿನಲ್ಲಿ ವೈಯಕ್ತಿಕ ನಿಂದನೆಗಳಲ್ಲಿ ತೊಡಗಿ ಸಮಾಜದ ಅಸಹನೆ ಅಶಾಂತಿಗೆ ಕಾರಣವಾಗುತ್ತಿವೆ.  ಇವೆಲ್ಲವುಗಳನ್ನೂ ಪೋಷಿಸುವಲ್ಲಿ ರಾಜಕಾರಣಿಗಳು ಗೆದ್ದಿದ್ದಾರೆ.

ಇಂತಹ ಉಸಿರುಗಟ್ಟುವ ವಾತಾವರಣದಲ್ಲೂ ಸಿಕ್ಕ ಒಂದಿಷ್ಟು ಆರ್ಥಿಕ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯದ ಕಾರಣದಿಂದ ಮಹಿಳೆಯರು ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತಾಡುತ್ತಿದ್ದಾರೆ. ರಾಜಕೀಯದಲ್ಲಿ ಮೂವತ್ತ ಮೂರು ಪರ್ಸೆಂಟ್ ಸಿಗದೇ ಇದ್ದರೂ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಚಿಂತಿಸುವ ಪ್ರಾಜ್ಞರು ಮುಂದೆ ಬರುತ್ತಿದ್ದಾರೆ.  ಆದರೆ ಇವರೂ ಪುರುಷ ರಾಜಕಾರಣದ ಪ್ರತಿಬಿಂಬವೇ ಆಗುವುದನ್ನು ತಪ್ಪಿಸಿಕೊಳ್ಳುವ ಜರೂರತ್ತು ಇದೆ.

ದುರಾಡಳಿತ, ಸರ್ವಾಧಿಕಾರ, ವ್ಯವಸ್ಥೆಯಲ್ಲಿನ ಅಸಮತೋಲನ ಇವೆಲ್ಲ ದಂಗೆಗೆ ಕಾರಣವಾದ ಇತಿಹಾಸ ನಮ್ಮ ಮುಂದಿದೆ. ಆದರೆ ಇಂದಿನ ರಾಜಕಾರಣ ಅಂತಹ ದಂಗೆಯ ಮನಸ್ಥಿತಿಯನ್ನೂ ನಿರ್ವೀರ್ಯವಾಗಿಸಿ  ಸ್ವಾರ್ಥಪ್ರಲೋಭನೆಯ ಅಸ್ವಸ್ಥ ಸಮಾಜದೆಡೆ ಸಾಗಿದೆ.  ಅಭಿವೃದ್ಧಿ ರಾಜಕಾರಣದ ಮಾತೇ ಇಲ್ಲದೆ ಭಾವಪ್ರಧಾನತೆಯ ಮಂತ್ರವನ್ನು ಜಪಿಸುತ್ತಿದೆ. ಜನತೆಗೆ ಉದ್ಯೋಗ ಕೊಡುವ ಯೋಜನೆಗಳಿಗಿಂತ ದೇವಾಲಯ ಪುರಾಣ ವ್ಯಕ್ತಿಗಳ ಪ್ರತಿಮೆಗಳ ಸ್ಥಾಪನೆಗಳಿಂದ  ಜನರನ್ನು ಭಾವಗಡಲಲ್ಲಿ ತೇಲಿಸುತ್ತಾ ಭ್ರಮಾತ್ಮಕ ಸುಖಸಮಾಜವನ್ನು ಮಾದರಿಯಾಗಿಸುತ್ತಿದೆ.  ಪ್ರಾಚೀನ ಭಾರತದ ಶ್ರೇಷ್ಠತೆಯನ್ನು ಮತ್ತೆ ಮರಳಿಸುವ ಮಾತಾಡುತ್ತಾ ಡಿಜಿಟಲ್ ಇಂಡಿಯಾದ ಕಾನ್ಸೆಪ್ಟ್ ಜನರ ಮುಂದಿರಿಸುತ್ತದೆ. ಭಾವಕ್ಕೂ ವಾಸ್ತವಿಕತೆಗೂ ದೊಡ್ಡ ಕಂದಕ ನಿರ್ಮಾಣ ಮಾಡುತ್ತಾ ಜನರನ್ನು ಗೊಂದಲಕ್ಕೊಳಪಡಿಸಿ ನಾವು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂದರಿಯದಾಗಿದ್ದೇವೆ.

ಇವತ್ತಿನ ಚುನಾವಣಾ ರಾಜಕೀಯ ಈ ನಿಟ್ಟಿನಲ್ಲಿ ಜನರ ಕಣ್ತೆರೆಸುವಂತಿದೆ. ಜನರು ಎಚ್ಚೆತ್ತುಕೊಳ್ಳಲೇಬೇಕಾದ ಜರೂರತ್ತು, ಅರ್ಥವಾಗುವ ನಿರೀಕ್ಷೆ ಈ ಚುನಾವಣಾ  ಸಮಯದ ನಡೆಗಳಲ್ಲಿ ಅಡಗಿದೆ.  ರಾಜಕೀಯ ಮರುಮೌಲ್ಯಕ್ಕೆ  ಇದು ಸಕಾಲವಾಗಿದೆ.

ಶಾಂತಾಕುಮಾರಿ

ಲೇಖಕಿ, ಉದ್ಯಮಿ, ಆಪ್ತಸಮಾಲೋಚಕಿ

ಇದನ್ನೂ ಓದಿ–http://ತಿಪಟೂರು | ಶಿಕ್ಷಣ ಸಚಿವರಿಗೆ ಯಡಿಯೂರಪ್ಪನವರ ಕಣ್ಣೀರು ಮುಳುವಾಗುತ್ತಾ?

ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!
ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ

“ಮನುಷ್ಯರನ್ನು ಒಂದುಗೂಡಿಸುವುದು ಧರ್ಮವಲ್ಲ, ಒಂದು ಜನಾಂಗವಲ್ಲ, ಭಾಷೆಯಲ್ಲ, ಒಂದೇ ಆರ್ಥಿಕ ವ್ಯವಸ್ಥೆಯ ಬದ್ಧತೆಯೂ ಅಲ್ಲ, ಬದಲಾಗಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದು. ಆಂತರಿಕ ಸಮಸ್ಯೆಗಳನ್ನು ರಾಜನೀತಿಯ ಮೂಲಕ ಬಗೆಹರಿಸಲು ಪ್ರಜ್ಞಾಪೂರ್ವಕವಾಗಿ ನಿರಂತರವಾಗಿ ಶ್ರಮಿಸುವುದು ಮಾತ್ರ ಮನುಷ್ಯರನ್ನು ಒಂದುಗೂಡಿಸಲು ಸಹಕರಿಸುತ್ತದೆ” ಭಾರತೀಯತೆ ಎನ್ನುವುದು ನಮ್ಮೆಲ್ಲ ಪಾರಂಪರಿಕ, ಧಾರ್ಮಿಕ, ಭಾಷಾ ಭಿನ್ನತೆಯನ್ನೂ ಮೀರಿ ಒಂದು ಗೂಡಿಸುತ್ತದೆ. ( ಇಂದಿರಾಗಾಂಧಿ- 1972 ಅಕ್ಟೋಬರ್ ನಲ್ಲಿ ಫಾರಿನ್ ಅಫೇರ್ಸ್ ಮ್ಯಾಗಝಿನ್ ನಲ್ಲಿ ಪ್ರಕಟಿತ ಲೇಖನದಲ್ಲಿ ಉಲ್ಲೇಖ)

ಅಜ್ಜಿಯ ಈ ಅರ್ಥಪೂರ್ಣ ಮಾತುಗಳನ್ನು ಮೊಮ್ಮಗ ರಾಹುಲ್ ಗಾಂಧಿ ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡಂತಿದೆ. ದೇಶದ ನಾಯಕನಾಗಲು ಎಲ್ಲೋ ಪಟ್ಟದಲ್ಲಿ ಕುಳಿತು ಐಷಾರಾಮ ಜೀವನ ನಡೆಸುತ್ತಾ  ರಾಜತಾಂತ್ರಿಕ ಹುನ್ನಾರಗಳನ್ನು ನಡೆಸುವುದಲ್ಲ,  ದೇಶದ ಜನರ ಭಾವದೊಂದಿಗೆ ಮಿಳಿತವಾಗುವುದು ಎಂದು ಭಾವಿಸಿ ‘ಕೈ’ ಗೊಂಡ ರಾಹುಲ್ ಗಾಂಧಿಯ ಭಾವೈಕ್ಯತಾ ನಡೆ ಇವತ್ತಿನ ಜರೂರತ್ತು ಕೇವಲ ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದಷ್ಟೇ ಅಲ್ಲ. ದೇಶದ ದೃಷ್ಟಿಯಿಂದ ಕೂಡಾ.

ಸೋನಿಯಾ ಗಾಂಧಿ ಕಣ್ಣೆದುರಿನಲ್ಲಿಯೇ ಎರಡೆರಡು ಜೀವಗಳು ಹತ್ಯೆಯಾಗಿದ್ದನ್ನು ನೋಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಒಂದಷ್ಟು ಕಾಲ ದೇಶದಿಂದ ದೂರವೇ ಇಟ್ಟು ಕಾಪಾಡಿಕೊಳ್ಳುವುದು ಅವರಿಗೆ ಅನಿವಾರ್ಯವೇ ಆಗಿತ್ತು. ಭಾರತದ ನೆಲ, ಜಲ. ಪರಂಪರೆ ಇತಿಹಾಸ ಸಂಕಷ್ಟ ಸಮಸ್ಯೆ ಇವೆಲ್ಲವುಗಳಿಂದ ದೂರವೇ ಉಳಿದು ಬೆಳೆದ ರಾಹುಲ್ ಗಾಂಧಿಗೆ ಈ ನೆಲದ ರಾಜಕೀಯಕ್ಕೆ ತನ್ನನ್ನು ಒಗ್ಗಿಸಿಕೊಳ್ಳುವುದು ಸಾಹಸವೇ ಆಗಿತ್ತು. ಈ ಹಂತದಲ್ಲಿ ಆತ ರಾಜಕೀಯಕ್ಕೆ ಬಂದಾಗ ಕೆಲವೊಮ್ಮೆ ಅಸಂಬದ್ಧವಾಗಿ ಪ್ರಶ್ನಿಸಿ ಅಥವಾ ಮಾತನಾಡಿ ಮುಜುಗರಕ್ಕೊಳಗಾಗಿದ್ದು ಇದೆ. ಆದರೆ ವಿರೋಧ ಪಕ್ಷಗಳು ಅದನ್ನೇ ದೊಡ್ಡ ಅಸ್ತ್ರವಾಗಿಸಿಕೊಂಡು ಅವರನ್ನು ʼಪಪ್ಪುʼ ಎಂದು ಕರೆಯುತ್ತಾ ಪೆದ್ದನೆಂಬಂತೆ ಬಿಂಬಿಸಿ ಕಾಲೆಳೆಯಲು ಪ್ರಾರಂಭಿಸಿದವು. ಬಹುಶಃ ರಾಗಾರವರಷ್ಟು ಟ್ರೋಲ್ ಗೆ ಒಳಗಾದ ಮತ್ತೊಬ್ಬ ರಾಜಕೀಯ ವ್ಯಕ್ತಿ ಇಲ್ಲ ಅಂದರೂ ತಪ್ಪಾಗಲಾರದು. ಆದರೆ ನೆಹರೂ, ಇಂದಿರಾ, ರಾಜೀವ್ ಗಾಂಧಿಯಂತಹ ಧೀಮಂತ ವ್ಯಕ್ತಿತ್ವಗಳ ಜೀನ್ಸ್ ಅವರಲ್ಲಿ ಹರಿದು ಬಂದಿದೆ. ಅವರಿಗೆ ಸೋನಿಯಾರವರಂತಹ ದಿಟ್ಟ ಮತ್ತು ಸ್ಥಿರ ವ್ಯಕ್ತಿತ್ವ ಹೊಂದಿದ ತಾಯಿಯ ಮಾರ್ಗದರ್ಶನವಿದೆ. ಎಂದೇ ಅವರು ಸಂಯಮಗೆಡಲಿಲ್ಲ. ಹತಾಶರಾಗಲಿಲ್ಲ. ಮತ್ತೆ ಮತ್ತೆ ಮಾತಾಡಿದರು..ಈ ದೇಶದ ಸಂಸ್ಕೃತಿ ಮತ್ತು ಸಮಸ್ಯೆ ಅರಿಯಲು ಪ್ರಾಮಾಣಿಕ ಪ್ರಯತ್ನ ನಡೆಸಿದರು… ಪಪ್ಪು ಅಂದವರ ಮುಂದೆಯೇ” ಯುಗಪುರುಷನ ಯುಗಾರಂಭ” ಎನ್ನುವ ಹೃದಯಗೆದ್ದ ಮಾತುಗಳು ಕೇಳಿಬರುತ್ತಿವೆ ಈ ದಿನ.

ಬಿಜೆಪಿಗರಲ್ಲಿ ಭಾರತ್ ಜೋಡೊ ಯಾತ್ರೆ ನಡುಕ ಹುಟ್ಟಿಸಿದೆ ಎನ್ನುವುದನ್ನು ಅವರು ಟ್ವಿಟರ್ಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಅವರ ವಿಚಲಿತ ಆರೋಪಗಳು ಹೇಳುತ್ತಿವೆ.  ಸರ್ದಾರ್ ಪಟೇಲರೇ ಭಾರತವನ್ನು ಜೋಡಿಸಿದ್ದಾರೆ, ಈಗ ನೀವೇನು ಹೊಸದಾಗಿ ಜೋಡಿಸುವುದು ಎನ್ನುವ ಹಾಸ್ಯಾಸ್ಪದ ಹೇಳಿಕೆಗಳು ಅವರಿಂದ ಬರುತ್ತಿವೆ. ಆಗ ಸರ್ದಾರ್ ಪಟೇಲರು ಮಾಡಿದ್ದು ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡಣೆ… ಅದು ಭೌತಿಕವಾದ ವಿಂಗಡಣೆ ಮತ್ತು ಜೋಡಣೆ!!! ಈಗ ಯಾತ್ರೆಯ ಉದ್ದೇಶ  ಮಾನಸಿಕ ಜೋಡಣೆ.

ಧರ್ಮ ಜಾತಿ ಹಾಗೂ ಭಾಷೆಗಳ ಮೂಲಕ ಜನರನ್ನು ಒಡೆದು ಆಳುತ್ತಿರುವ ಇಂದಿನ ರೀತಿಯಿಂದ ಜನರ ಮನಸ್ಸು ಛಿದ್ರಛಿದ್ರವಾಗಿದೆ. ಆತಂಕಗೊಂಡಿದೆ. ಈ ಎಲ್ಲಾ ವಿಭಜಿತ ಮನಸುಗಳ ಮಾನಸಿಕ ಹಾಗೂ ಸಾಮಾಜಿಕ ಜೋಡಣೆ, ಭೀತಿಯಲ್ಲಿ ಬದುಕುತ್ತಿರುವ ಜನರಿಗೊಂದು ಆಶ್ವಾಸನೆ ಇವುಗಳು ಇಂದಿನ ತುರ್ತು.

ರಾಹುಲ್ ಗಾಂಧಿಯವರ ಈ ನಡೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತಾ ಎನ್ನುವವರ ಪ್ರಶ್ನೆಗೆ ಇವತ್ತಿನ ಮಾಧ್ಯಮಗಳನ್ನು ಖರೀದಿಸಿ ಆಡಳಿತ ಪಕ್ಷ ನಡೆಸುವ ಚುನಾವಣಾ ಹುನ್ನಾರಗಳಲ್ಲಿ ಇತಿಹಾಸವನ್ನೇ ತಿರುಚಿ ಜನರನ್ನು ಭ್ರಮೆಗೊಳಪಡಿಸುತ್ತಿರುವ ಈ ಹೊತ್ತಿನಲ್ಲಿ ಗೆಲುವು ಸವಾಲಿನದು.. ಆದರೆ ಅಸಾಧ್ಯವಲ್ಲ!!

ಮುರಿದ ನಂಬಿಕೆ ಪ್ರೀತಿ ವಿಶ್ವಾಸವನ್ನು ಮರಳಿ ಜೋಡಿಸುವ ಈ ಯಾತ್ರೆ ಕಾಂಗ್ರೆಸ್ ಬಗ್ಗೆ ಜನ ಕಳೆದುಕೊಂಡ ವಿಶ್ವಾಸವನ್ನು ಮರಳಿ ಪಡೆಯುವ ಜಾತ್ರೆಯೂ ಆಗಬಹುದು.  ಅದಕ್ಕೆ ಯಾತ್ರೆಯುದ್ದಕ್ಕೂ ಎಲ್ಲೆಲ್ಲೂ ಕೇಳಿಬರುತ್ತಿರುವ ʼಬಿಜೆಪಿ ಹಠಾವೊ, ದೇಶ್ ಬಚಾವೊʼ ಎಂಬ ಕೂಗು ಸಾಕ್ಷಿಯಾಗಿದೆ. ಪ್ರಧಾನಿ ಅಭ್ಯರ್ಥಿ ಎನ್ನುವುದನ್ನು ಜನರು ಮನಗಾಣತೊಡಗಿದ್ದಾರೆ ಎನ್ನುವುದು ಸತ್ಯ.

ದೇಶ ಸುತ್ತು ಕೋಶ ಓದು ಎನ್ನುವಂತೆ ಇವತ್ತು ರಾಹುಲ್ ರವರ ಈ ನಡೆ ಗಾಂಧೀಜಿಯವರ ದಂಡಿಯಾತ್ರೆಯನ್ನು ನೆನಪಿಸುತ್ತದೆ. ದಿನಕ್ಕೆ ಇಪ್ಪತೈದು ಕಿ.ಮಿ. ನಡೆಯುವ ರಾಹುಲ್ ರವರ ಮುಖದಲ್ಲಿ ಒಂದಿಷ್ಟೂ ದಣಿವಿಲ್ಲ. ಮಗುವಿನಂತಹ ಪರಿಶುದ್ಧ ನಗು! ಬಿದಿರಿನ ಬುಟ್ಟಿ ಹೆಣೆಯುವವರೊಂದಿಗೆ ಇದನ್ನು ಹೇಗೆ ಮಾಡುತ್ತೀರಿ ಎಂಬ ಬೆರಗು ಮಿಶ್ರಿತ ಪ್ರಾಮಾಣಿಕ ಪ್ರಶ್ನೆ. ಆಟೊ ಚಾಲಕರೊಂದಿಗೆ ನಡಿಗೆ… ಪುಟ್ಟ ಮಕ್ಕಳನ್ನು ಹಿಡಿದೆತ್ತಿ ಮುದ್ದು ಮಾಡಿ… ರೈತರೊಂದಿಗೆ ಊಟ ಮಾಡಿ ಕಬ್ಬು ಕಚ್ಚಿ ತಿಂದು ಎಲ್ಲವೂ ಸರಳ ಸಹಜ ಬೆರಗಿನೊಂದಿಗೆ! ಯಾವುದೋ ಯುವತಿ ಓಡಿಬಂದು ಆತನ ಕೈಹಿಡಿದು ಸಂತಸ ವ್ಯಕ್ತಪಡಿಸಬಲ್ಲಳು… ಮುಗ್ಧ ಮಗುವೊಂದು ಅಪ್ಪಿ ಹಿಡಿಯಬಲ್ಲದು… ಈ ನಡೆ ಧೀರ ನಡೆ… ಎರಡು ಹತ್ಯೆ ಕಂಡು ಆಘಾತವಾದ ಕುಟುಂಬದ ಯುವಕನೊಬ್ಬ ಇಷ್ಟು ಆರಾಮದಲ್ಲಿ ಕೇವಲ ಟೀಶರ್ಟ್ ಧರಿಸಿ (ಬುಲೆಟ್ ಪ್ರೂಫ್ ಅಲ್ಲ) ನಡೆಯಬಲ್ಲನಾದರೆ ಅದು ಧೀರ ನಡೆಯೇ… ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೊಂದು ಐತಿಹಾಸಿಕ ನಡೆ..ಲ್ಯಾಂಡ್ ಮಾರ್ಕ್ ಆಗಬಹುದಾದ ಘಟನೆ. ಪ್ರತಿಯೊಬ್ಬರ ಬಾಯಲ್ಲೂ ಬರುತ್ತಿರುವ ಮಾತು ರಾಗಾ ಅಂದರೆ ಹಂಬಲ್, ಜಿನ್ಯೂನ್, ಡೌನ್ ಟು ಅರ್ಥ್, ಕಂಪ್ಯಾಶನೇಟ್, ಇನ್ ಸೈಟ್ ಫುಲ್ ಲೀಡರ್!!!. ಒಬ್ಬ ನಾಯಕನಾಗಲು ಜನರ ಇಂಥ ಅದ್ಭುತ ಭಾವಗಳು ಹೃದಯ ತುಂಬಿ ಬಂದ ಆಶೀರ್ವಾದ ಸಾಕಲ್ಲವೇ? ಈತ ಈಗ ಜನನಾಯಕನಾಗಿ ಬಿಂಬಿತವಾಗುತ್ತಿದ್ದಾರೆ. ಒಬ್ಬ ದೇಶದ ನಾಯಕನಾಗಿ ಚುನಾಯಿತನಾಗಲು ಚುನಾವಣಾ ತಂತ್ರಗಳಷ್ಟೇ ಜನರ ಎಮೋಷನ್ಸ್ ಗಳೂ ಮುಖ್ಯ. ಇವ ನಮ್ಮವ ಇವ ನಮ್ಮವ ಎನ್ನುವ ಭಾವ ಮುಖ್ಯ. ಕರ್ನಾಟಕದಲ್ಲಿ ದೇವನೂರು ಮಹಾದೇವ ಅವರು ರಾಹುಲರನ್ನು ಬರಮಾಡಿಕೊಂಡ ರೀತಿ ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅನಿಸದೆ ಇದೊಂದು ಸಮಾನ ಮನಸ್ಕರ ಯಾತ್ರೆ ಅನಿಸುವಂತೆ ಮಾಡಿತು.

ಖಂಡಿತಾ ಈ ನಡೆ ಕಾಂಗ್ರೆಸ್ ಕಳೆದುಕೊಂಡ ತನ್ನ ವರ್ಚಸ್ಸನ್ನು ಮತ್ತೆ ಪಡೆಯಲು ಒಂದು ಮೆಟ್ಟಿಲು ಏರಿದಂತೆ.  ದೇಶ ಪರ್ಯಟನೆ ಮಾಡುತ್ತಾ ಜನರ ಬದುಕಿಗೆ ಹತ್ತಿರದಿಂದ ಸ್ಪಂದಿಸುವ ಮೂಲಕ ರಾಹುಲ್ ಗಾಂಧಿಯವರ ವ್ಯಕ್ತಿತ್ವ ತನ್ನ ಮೆರುಗನ್ನು ಸಾಣೆ ಹಿಡಿಯುವಂತಿದೆ. ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ,, ಪ್ರೀತಿ, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು… ನಿರಂತರ ಶ್ರಮಕ್ಕೆ ಸೋಲಿಲ್ಲ… ಸಹನೆಯಂತಹ ಅಸ್ತ್ರ ಮತ್ತೊಂದಿಲ್ಲ… ಈ ಕ್ಷಣಕ್ಕೆ ನರೇಂದ್ರ ಮೋದಿಯವರನ್ನು ಸೋಲಿಸುವ ಒಬ್ಬ ಸಂತನಂತೆ ಆತ ಕಾಣಿಸಿದರೆ ಆಶ್ಚರ್ಯವಿಲ್ಲ. ಭಾರತ್ ಜೋಡೊ ಪರಸ್ಪರ ಮಾನವೀಯತೆ ಪ್ರೀತಿ ಬೆಸೆಯುವ ಯಾತ್ರೆಯಾಗಿ ಹತಾಶ ಮನಸುಗಳಿಗೆ ಆಶಾಕಿರಣವಾಗಿ ಕಾಣಿಸುತ್ತಿರುವುದಂತೂ ಹೌದ

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶಾಂತಾ ಕುಮಾರಿ
ಲೇಖಕರು.

🔸 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಶೋಭಕ್ಕ, ಸಿ.ಟಿ.ರವಿಯವರೇ ಈಗೇನ್ ಹೇಳ್ತೀರಾ? || ಸೂರ್ಯ ಮುಕುಂದರಾಜ್ ಪ್ರಶ್ನೆ

2017 ರಲ್ಲಿ ನಡೆದ ಪರೇಶ್‌ ಮೇಸ್ತ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿದ ಸಿ ಬಿ ಐ ವರದಿ ನೀಡಿದೆ. ಅಂದು ಈ ಸಾವಿನ ಹೆಸರಿನಲ್ಲಿ ಲಾಭ ಮಾಡಿಕೊಂಡಿದ್ದವರು ಗಂಟಲು ಈಗ ಕಟ್ಟಿದಂತೆ ಕುಳಿತಿದ್ದಾರೆ. ನ್ಯಾಯವಾದಿ ಹಾಗೂ ಕೆಪಿಸಿಸಿಯ ವಕ್ತಾರ ಹಾಗೂ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಈ ಪ್ರಕರಣದ ಕುರಿತಂತೆ ಗಂಭೀರ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ.

PEEPAL TV
https://www.facebook.com/peepaltvkannada/videos/636037751517856

ಈ ವಿಡಿಯೋ ಯೂಟ್ಯೂಬಿನಲ್ಲಿ ನೋಡಲು 👇🏼
https://youtu.be/e8-8cyA1TBU