Sihaana B M – Peepal Media

ಗೋಡೆಯಲೊಂದು ಬಿಕ್ಕಳಿಕೆ
ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಹಾದಿಬೀದಿ ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಈ ವಾಸನೆ ಹರಡಿದೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ…ಮುಂದೆ ಓದಿ ಲೇಖಕಿ ಸಿಹಾನ ಬಿ. ಎಂ ಅವರ ಮೈಂಡ್‌ ಬ್ಲಾಕ್‌ ಅಂಕಣ

ಹಾಡುಹಗಲಿನಲ್ಲಿ, ಉರಿಬಿಸಿಲಿನಲ್ಲಿ ಹಸಿ ಹಸಿ ಹಾದಿಯಲ್ಲಿ ಬದುಕಿನ ಓಘದಲ್ಲಿ ಮುಟ್ಟಿಸಿ ಕೊಳ್ಳಲಾಗದ ಅಂಟುಜಾಡ್ಯದ ಬೇರನ್ನು ಕಿತ್ತೆಸೆಯದಿದ್ದರೆ ಅದು ತಂದಿಡುವ ವಿಹ್ವಲತೆಗಳಿಗೆ ಇಲ್ಲಿ ಪ್ರತಿಯೊಬ್ಬರು ಸಾಕ್ಷಿಗಳಾಗುವರು. ಪ್ರತಿ ಬೆಳಗು ರಾತ್ರಿಗಳಲ್ಲಿ ಕಿತ್ತು ತಿನ್ನುವ ಹಸಿವು, ಬಡತನ, ನಿರುದ್ಯೋಗ, ಪೌಷ್ಟಿಕ ಆಹಾರಗಳ ಕೊರತೆ, ಗುಣಮಟ್ಟದ ಶಿಕ್ಷಣ ಎಟುಕದ ಸಮಸ್ಯೆಗಳು ಆಳೆತ್ತರ ಬೆಳೆದು ನಿಂತಿದ್ದರೂ ಮನುಷ್ಯ ತನ್ನವನನ್ನೇ ಕಿತ್ತು ತಿನ್ನಲು ಹೊರಟಿರುವನು. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರರ ನಡುವಿನ ಕಚ್ಚಾಟದಲ್ಲಿ ಉಳಿದವೆಲ್ಲವು ಗೌಣವಾಗುತ್ತಿವೆ. ಕೆಲ ವರುಷಗಳ ಹಿಂದೆ ಈ ಅಂಟುರೋಗ ಇಷ್ಟು ತೀವ್ರವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದನ್ನೇ ಕಾರಣವಾಗಿಟ್ಟು ಗದ್ದುಗೆಯನ್ನೇರುವ, ಉಳಿಸುವ ಹುನ್ನಾರ ನಡೆಯುತ್ತಿದೆ. ಈ ಗಾಳಿ  ಅಷ್ಟೇನು ಹಬ್ಬಿಲ್ಲದ ಕರಾವಳಿಯಲ್ಲೂ ಇಂದು ಇದು ಎದ್ದು ಕಾಣುತ್ತಿದೆ. ಹಿಂದೆ, ಮುಟ್ಟಿಸಿ ಕೊಳ್ಳದಿದ್ದರೂ, ಜೀತದಾಳುಗಳಾಗಿ ದುಡಿಸುತ್ತಿದ್ದರೂ, ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯು ಪರಾಕಾಷ್ಠೆಗೆ ತಲುಪಿರಲಿಲ್ಲ.

ಮಂಗಳೂರಿನ ಬಂದರಿನ ದಕ್ಕೆಯಲ್ಲಿ ವಲಸೆ ಕಾರ್ಮಿಕರಾಗಿ ಬಂದವರಲ್ಲಿ ಬಹುತೇಕ ಅಂತವರು ತುಂಬಿರುವರು. ಬಹುಕಷ್ಟದ ಹೊರುವ, ಶುಚಿತ್ವದ ಕೆಲಸಗಳಲ್ಲಿ, ದೊಡ್ಡ ದೊಡ್ಡ ಫ್ಯಾಕ್ಟರಿಯ ಒಳಗಡೆ ಕೊಳೆತು ಹೋಗುವಷ್ಟು ಕಾಲದ ದುಡಿಮೆಗಳಲ್ಲಿ, ಭದ್ರತೆಯ ಕೊರತೆಗಳಿರುವ ಕಂಪೆನಿಗಳಲ್ಲಿ ನಿರಂತರವಾಗಿ ವಲಸೆ ಕಾರ್ಮಿಕರನ್ನು ಗುರುತಿಸಬಹುದು. ಅಲ್ಲೂ ಇವರು ಜೀತದಾಳುಗಳ ರೀತಿಯಲ್ಲಿ ಕೂಡಿ ಹಾಕಿ ಮಾಲಕರ ಆಜ್ಞೆಗಳನ್ನು ಹಗಲು ರಾತ್ರಿಯೆನ್ನದೆ ಪಾಲಿಸುವಂತಹ ನಿಯಮಗಳಿಗೆ ಬದ್ಧರಾಗಿ ಇರುವರು.  ಅಭದ್ರತೆಯ ವ್ಯವಸ್ಥೆಗಳ ಕಾರಣದಿಂದ ಸಾವಿಗೀಡಾದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅಂತಹ ಹಲವಾರು ಸಾವುಗಳು ಸುದ್ದಿಯಾಗುವುದೇ ಇಲ್ಲ. ಅಸ್ಸಾಂ, ಜಾರ್ಖಂಡ್, ಬಂಗಾಳ, ಉತ್ತರ ಪ್ರದೇಶದಿಂದ ವಲಸೆ ಬಂದವರ ಸಂಖ್ಯೆ ಹೇರಳವಾಗಿದೆ. ಹಾಗೆ ಬಂದವರಲ್ಲಿ ಹಲವು ಜಾತಿ, ಧರ್ಮದವರೂ ಇದ್ದಾರೆ. ರೈಲುಗಳಲ್ಲಿ, ಬಸ್ಸುಗಳಲ್ಲಿ ಲೆಕ್ಕವಿಲ್ಲದಷ್ಟು ಯಾತ್ರಿಕರ ನಡುವೆ ಪ್ರಯಾಣಿಸುವಾಗಲೂ ಪಥಭ್ರಾಂತರು, ಜಾತಿಪಂಥ ಹೊತ್ತು ನಡೆಯುವವರು, ಸಿಡಿದೆದ್ದು ಬೀಳುವವರು, ಉರಿದುರಿದು ಬೀಳುವವರು ಇವರನ್ನು ಮುಟ್ಟಿಸಿಕೊಳ್ಳಬಾರದೆಂದು ಅಂತರ ಕಾಯ್ದುಕೊಂಡು ಪ್ರಯಾಣಿಸುವರೆಂಬ ಮಾತು ಹಿಂದೊಮ್ಮೆ ಕೇಳಿಸಿಕೊಂಡಿದ್ದೆ. ಅದೇ ವರ್ತನೆಯನ್ನು ಜೊತೆಯಾಗಿ ಕೆಲಸ ಮಾಡುವಾಗಲೂ ತೋರಿಸುತ್ತಿರುವುದು ಹಲವರ ಕಣ್ಣಿಗೂ ಬಿದ್ದಿದೆ. ಆದರೆ ಆ ಒಂದು ಮುಟ್ಟಬಾರದ, ಮುಟ್ಟಿಸಿಕೊಳ್ಳಲಾಗದ “ಅಂಟುಜಾಡ್ಯ”ಕ್ಕೆ ತಾವು ಅರ್ಹರೆಂಬ ಭಾವವನ್ನು ಇವರು ಇವರೊಳಗೆ ತುಂಬಿಸಿಕೊಂಡಿರುವುದು ವಿಪರ್ಯಾಸ!

ಬೇಕಾಬಿಟ್ಟಿ ಬೆಳೆದ ಈ ಗೋಡೆಯನ್ನು ನೋವುಂಡವರ ಗುಂಪು ಜೊತೆಯಾಗಿ ಹೊಡೆದುರುಳಿಸಿದರೆ ಗೋಡೆ ಕಟ್ಟಿದವರ ಗತ್ತು, ಗರ್ವ, ಅಹಂಕಾರ ನೆಲಕ್ಕಪ್ಪುವುದರಲ್ಲಿ ಸಂಶಯವಿಲ್ಲ. ಆದರೆ ಒಗ್ಗಟ್ಟಿನ ಕೊರತೆಯೇ ಬಹುದೊಡ್ಡ ಸವಾಲು. ಬೆಕ್ಕಿಗೆ ಗಂಟೆ ಕಟ್ಟುವವರ ಸಂಖ್ಯೆ ವಿರಳವಾಗಿರುವುದರಿಂದ ಗೋಡೆಯ ಮೇಲಿನ ಅಟ್ಟಹಾಸ, ದಬ್ಬಾಳಿಕೆ ಇನ್ನಷ್ಟು ಎತ್ತರಕ್ಕೇರಿದೆ. ಸುತ್ತಲು ಗಬ್ಬುವಾಸನೆ, ಮಬ್ಬುಗತ್ತಲು, ಬಟಾಬಯಲ ಬೆತ್ತಲು. ಕುಹಕ ಮಾತಿಗೆ, ವ್ಯಂಗ್ಯ ನೋಟಕ್ಕೆ, ಕುಟುಕು ನಡೆಗೆ ಜನ ಬೇಸತ್ತು ಹೋಗಿರುವರು. ಜಾತಿಯ ಕಾರಣದಿಂದ ಇವರೊಂದಿಗೆ ವ್ಯವಹರಿಸುವಂತಿಲ್ಲ. ಅವರ ಭೂಮಿಯನ್ನು ಖರೀದಿಸುವಂತಿಲ್ಲ. ಬಾಡಿಗೆಗೆ ಮನೆ ಕೊಡುವಂತಿಲ್ಲ. ಮದುವೆ, ಸಮಾರಂಭಗಳಿಗೆ ಆಮಂತ್ರಿಸುವಂತಿಲ್ಲ. ಈ ಮೌಢ್ಯದ ಗಾಳಿ ಉಳಿದವರಲ್ಲಿ ಹಾಸು ಹೊಕ್ಕಿರುವುದು ಬಲು ಖೇದಕರ. ಈ ಮಣ್ಣಿನ ಗುಣ ಅದಲ್ಲವಾದರೂ ಈ ಮಣ್ಣಿನವರೊಂದಿಗೆ ಜೊತೆಯಾಗಿ ಮೇಲು ಕೀಳೆಂಬ ಭಾವ ಅರಿತೋ ಅರಿಯದೆಯೋ ಹರಡಿರುವುದು ಸುತ್ತಮುತ್ತಲು ಕಾಣಬಹುದು. ಪರಕೀಯತೆ, ಅನಾಥ ಭಾವದೊಂದಿಗೆ ಬದುಕುತ್ತಿರುವ ಅವರಾದರೋ ಪ್ರೀತಿಗಾಗಿ ಹಂಬಲಿಸುವವರು. ಸಾಂತ್ವನದ ನುಡಿಗಳಿಗಾಗಿ ತವಕಿಸುವವರು. ಹಾಗೆ ಪ್ರೀತಿ ಎಲ್ಲಾದರು ಸಿಕ್ಕಿದೊಡನೆ ಅವರ ಖಾಲಿ ಕಣ್ಣುಗಳಲ್ಲಿ ಹೊಳಪು ತುಂಬುವುದು. ಅವರ ಆ ಹೊಳೆಯುವ ಕಂಗಳು ಈಗಲೂ ನನ್ನ ನೆನಪಿನಂಗಳದಲ್ಲಿದೆ.

ಇವರ ನೋವಿನ ಕತೆಗಳು ಅಲ್ಲಿ ಇಲ್ಲಿ ಕೇಳಿದರೂ ನಮ್ಮ ಸುತ್ತಮುತ್ತಲು ನಡೆದ ಕತೆಗಳಿಗೆ ತೂಕ ಹೆಚ್ಚು. ಜೊತೆಯಾಗಿ ಊಟಕ್ಕೆ ಕೂರಿಸಲೆತ್ನಿಸಿದರೆ ಕೂರದೆ ದೂರ ಓಡುವ ಇವರನ್ನು ಮತ್ತೊಮ್ಮೆ ಕೂರಿಸಿ ಜೊತೆಯಾಗಿಸಿದಾಗ ಪ್ರೀತಿಯ ಕಂಗಳಲ್ಲಿ ಭೀತಿಯನ್ನು ನೋಡಿದ್ದೇನೆ. ಎಲ್ಲಾದರು ಯಾರಾದರು ನೋಡಿ ಕೆಕ್ಕರಿಸುವರೇನೋ ಎಂಬ ಇವರ ಅಂಜಿಕೆಯ ನೋಟದ ಆಳವನ್ನು ಮರೆಯುವಂತಿಲ್ಲ. ” ಇಲ್ಲಣ್ಣಾ…ನಿಮ್ಜೊತೆ ಕೂತದ್ದನ್ನು ಯಾರಾದರು ನೋಡಿದರೆ ಮತ್ತೆ ನಮ್ಮೊಂದಿಗೆ ಸೇಡು ತೀರಿಸುವ ಅವರ ವರ್ತನೆ ನಿಮಗೆ ಗೊತ್ತಿಲ್ಲಣ್ಣಾ…” ಎಂದು ಅವರಾಗಿಯೇ ನಿರಾಕರಿಸಿದಾಗ ನೋವಾಗಿದ್ದೂ ಇದೆ. ಅಷ್ಟಕ್ಕೂ ಈ ವ್ಯವಸ್ಥೆಯನ್ನು ಹುಟ್ಟು ಹಾಕಿದ ಧರ್ಮವಾದರೂ ಯಾವುದು? ಈ ಜಾತಿ, ಧರ್ಮವನ್ನು ದೇವರು ಸೃಷ್ಟಿಸಿದರೇ? ಸಮಾನತೆಯನ್ನು ಪ್ರತಿಪಾದಿಸದ ಧರ್ಮ ಈ ಭೂಮಿಯ ಮೇಲೆ ಯಾಕಿರಬೇಕು? ಮನುಷ್ಯರನ್ನೆಲ್ಲರನ್ನು ಒಂದೇ ಎಂದು ನೋಡದ ಧರ್ಮವನ್ನು ಅಂಗೀಕರಿಸುವುದಾದರೂ ಯಾತಕೆ? ಮಾನವತೆಯಿಲ್ಲದ ಧರ್ಮ ಹುಟ್ಟಿ ಬೆಳೆದು ಮನುಷ್ಯನನ್ನು ನುಂಗುವ ಈ ಪರಿಗೆ ಮೇಲು ಕೀಳೆಂಬ ಪಟ್ಟಗಳನ್ನು ಇಟ್ಟವರ್ಯಾರು? ಧರ್ಮ, ಜಾತಿ, ವರ್ಣ, ಲಿಂಗದ ಕಾರಣವನ್ನು ಮುಂದಿಟ್ಟು ನಡೆಯುವ ಕ್ರೌರ್ಯಗಳನ್ನು ಇನ್ನೆಷ್ಟು ಕಾಲಗಳವರೆಗೆ ಸಹಿಸಿಕೊಳ್ಳಬೇಕು ?

ಬಾಲ್ಯಕಾಲದಲ್ಲಿ ನಮ್ಮನೆಗೆ ಬರುತ್ತಿದ್ದ ಮಾಧವಣ್ಣ, ಕುಂಡಣ್ಣ, ಅಕ್ಕು, ತನಿಯ, ಚೋಮ ಇವರೆಲ್ಲರು ಇದೀಗ ನೆನಪಾಗುತ್ತಿದ್ದಾರೆ. ಜಾತಿಗೂ, ವರ್ಣಕ್ಕೂ ತುಲನೆ ಮಾಡುತ್ತಾ ಹೀಯಾಳಿಸುವವರ ನಡುವೆ ಆಧರಿಸುವವರ ಕರೆ ಕೇಳಿದೊಡನೆ ಓಡೋಡಿ ಬರುವ ಇವರ ನಡಿಗೆಯ ವೇಗವನ್ನು ಆ ದಿನಗಳಲ್ಲಿ ಗಮನಿಸಿದ್ದೇನೆ. ನನಗಿನ್ನೂ ಈ ಅಂಟುಜಾಡ್ಯದ ಅರಿವಿಲ್ಲದ ಕಾಲವದು. ಈಗಿನಷ್ಟು ಸುದ್ದಿಗಳು ಆಗ ನನ್ನ ತಮಟೆಗೆ ಬಡಿದಿರಲಿಲ್ಲ. ಹಿತ್ತಲ ಕೆಲಸಕ್ಕೆ ಕುಂಡಣ್ಣನಾದರೆ, ಮರ ಹತ್ತಿ ಕಾಯಿ ಕೀಳಲು ಮಾದಣ್ಣನೇ ಬೇಕು. ಬೇರೆ ಯಾರಿಂದಲಾದರು ಆ ಕೆಲಸ ಮಾಡಿಸಿದರೆ ಅಮ್ಮನಿಗೆ ತೃಪ್ತಿಯಾಗದು. ಅವರ ಶುಚಿತ್ವ, ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಠೆ ಮೆಚ್ಚುವಂತಹದು. ಕುಂಡಣ್ಣನ ಕೆಲಸದಲ್ಲಿ ವೇಗ ಕಮ್ಮಿಯಿದ್ದರೂ ಶುಚಿತ್ವ, ಅಚ್ಚುಕಟ್ಟುತನದಲ್ಲಿ ಉಳಿದವರನ್ನು ಮೀರಿಸುವ ಗುಣವಿತ್ತು. ಮಾಧವಣ್ಣ ತೆಂಗಿನ ಮರಕ್ಕೆ ಹತ್ತಿದನೆಂದರೆ  ಆ ತೆಂಗಿನಮರವೂ ಮಾಧವಣ್ಣನನ್ನು ಪ್ರೀತಿಸುವಂತಿತ್ತು ಗರಿಗಳ ವಾಲಾಟ. ಅಕ್ಕು ಅಮ್ಮನಿಗೆ ಆತ್ಮೀಯರಾಗಿದ್ದರು. ಮನೆಯಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಿದರೆ ಅಕ್ಕುವಿಗೆ ಮತ್ತು ಆಕೆಯ ಮಕ್ಕಳಿಗೆ ತೆಗೆದಿರಿಸುವ ಅಮ್ಮನ ಪ್ರೀತಿಯನ್ನು ಹತ್ತಿರದಿಂದ ನೋಡಿದ್ದೇನೆ. ಅಮ್ಮ, ಅಪ್ಪನಲ್ಲಿ ಅವರ ಅಳಲು, ನೋವು, ಕಷ್ಟಗಳನ್ನು ಹೇಳಿ ಮನಸ್ಸು ಹಗುರಾಗಿಸುವ, ಅವರಿಗೆ ಹೆಗಲಾಗುತ್ತಿರುವ ಆ ಕ್ಷಣಗಳು ಅದೆಷ್ಟು ಸುಂದರ! ಜೀತದಾಳುವಿನಂತೆ ದುಡಿಯುವ ಅವರ ದುಡಿಮೆಯನ್ನು ನೋಡಿ ಅಮ್ಮ ಅಪ್ಪ ಮರುಗಿದ್ದೂ ಇದೆ. ಸಾಲ, ಬಡ್ಡಿಯ ಹೆಸರಿನಲ್ಲಿ ಮಕ್ಕಳಿಗೂ ಹಂಚಿ ಹೋಗುವ ಈ ಜೀತ ಅವರ ನಿತ್ಯ ಪಾಡಾದರೆ ನಮ್ಮ ಹೃದಯಕ್ಕೆ ಅದು ನೋವಿನ ಹಾಡು. ಕುಡಿತ, ದುಡಿಮೆ ಇದರಿಂದ ಒಂದಿಂಚು ಸುಧಾರಿಸದ ಇವರನ್ನು ನೋಡಿ ಹಲವಾರು ಬಾರಿ ತಿದ್ದಲು ನಡೆಸಿದ ಪ್ರಯತ್ನ ಈಗಲೂ ಕಣ್ಣ ಮುಂದಿದೆ. ಜೀತದಾಳಿಗೆ ಬಗ್ಗದ ಕುಂಡಣ್ಣ ಮತ್ತು ಮಾಧವಣ್ಣನ ಮೇಲೆ ಅಭಿಮಾನವಿದ್ದರೂ ಅವರ ಕುಡಿತದ ಮೇಲೆ ಅಸಮಾಧಾನವಿತ್ತು.

ಗವ್ವೆನ್ನುವ ಒಂಟಿತನದ ಪರಕೀಯ ಭಾವವನ್ನು ಕಳಚಿಕೊಳ್ಳಲು ವಿದ್ಯೆಯ ದಾರಿ ಅತೀ ಅಗತ್ಯ. ವಿದ್ಯೆಯ ಕೊರತೆ ಪ್ರತಿರೋಧದ ಶಕ್ತಿಯನ್ನು ಬೆಳೆಸುವುದಿಲ್ಲ. ಸ್ವಾವಲಂಬನೆ, ಸಬಲೀಕರಣದ ಪುಟಗಳೊಂದಿಗೆ ಸೇರಿಕೊಳ್ಳುವುದಿಲ್ಲ. ಬದಲಾವಣೆಯ ದಾರಿಗೆ ವಿವೇಚನೆಯನ್ನು ಬೆಳೆಸಲು ವಿದ್ಯೆ ಮುಖ್ಯ. ತರಗತಿಯ ಹೊರಗಿದ್ದು ಕಲಿತ ಅಂಬೇಡ್ಕರರು ಸಂವಿಧಾನ ಶಿಲ್ಪಿಯಾಗಿ ಬೆಳೆದ ಚರಿತ್ರೆ ಪ್ರತಿಯೊಬ್ಬರ ಎದೆಗಿಳಿಯುತ್ತಿದ್ದರೆ ಬದಲಾವಣೆಯ ದಾರಿ ಸುಗಮವಾಗುತ್ತಿತ್ತೇನೋ… ಮಡಿವಂತಿಕೆ, ಮೌಢ್ಯ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಾ ಹೊಂದಿಕೊಳ್ಳುವ ಮನಸ್ಥಿತಿಗೆ ವಿಷಾದವೂ ಇದೆ. ಪ್ರತಿರೋಧದ ಯುಕ್ತಿ, ಶಕ್ತಿಗಳಿಲ್ಲದೆ ಅಲ್ಲೇ ಹುದುಗಿ ಹೋಗುವವರ ವ್ಯಥೆಯೂ ಕಣ್ಣ ಮುಂದಿದೆ. ಎಷ್ಟರವರೆಗೆ  ತುಳಿತಕ್ಕೊಳಪಡುವರೋ ಅಷ್ಟರವರೆಗೆ ತುಳಿಯುತ್ತಲೇ ಇರುವರು. ಎದ್ದೇಳದಿದ್ದರೆ, ಎದ್ದು ನಡೆಯದಿದ್ದರೆ ನೀರಿನ ಕಾರಣಕ್ಕೋ, ಅಂಗಳಕ್ಕೆ ಕಾಲಿಟ್ಟ ಕಾರಣಕ್ಕೋ, ವ್ಯಾಪಾರ, ಶಿಕ್ಷಣದ ಹೆಸರಿನಲ್ಲಿ ಮರ್ದನಕ್ಕೆ ಗುರಿಯಾಗುತ್ತಲೇ ಇರುವರು. ದೇವಾಲಯದ ಕೋಲು ಮುಟ್ಟಿದನೆಂದು, ನೀರು ಕುಡಿದನೆಂದು, ತೋಟದೊಳಗೆ ಬಂದನೆಂಬ ಕಾರಣಕ್ಕೆ ಹಲ್ಲೆಗೊಳಗಾದವರ ಕಣ್ಣೀರು ಇನ್ನೂ ಆರಿಲ್ಲ.

ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಬೀದಿಬೀದಿಯಲ್ಲೆಲ್ಲ ಈ ವಾಸನೆ ಹರಡಿದೆ. ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಇದು ಹಬ್ಬಿದೆ. ಪರಿಚಿತರು ಅಪರಿಚಿತರಾಗುತ್ತಿದ್ದಾರೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ. ಒಗ್ಗೂಡುವಿಕೆಯ ನೀರಿನ ಕೊರತೆಯು ಬೆಂಕಿಯನ್ನು ಆರಿಸುವುದಿಲ್ಲ. ಪರಸ್ಪರರ ಮೇಲೆ ಆರೋಪ, ಪ್ರತ್ಯಾರೋಪಗಳು ಹೆಚ್ಚುತ್ತಿರುವುದು ಒಗ್ಗಟ್ಟಿಗೆ ಮಾರಕ. ಅವರಿಗದುವೇ ಬೇಕಾಗಿರುವುದು.

ಹಿಂದಿನಿಂದಲೂ ಹೀಗೆ. ತುಳಿಯುವುದಕ್ಕೆ, ಉಸಿರುಗಟ್ಟಿಸುವುದಕ್ಕೆ, ಹೊಡೆಯುವುದಕ್ಕೆ, ರಕ್ತ ಕುಡಿಯುವುದಕ್ಕೆ, ಕತ್ತು ಹಿಸುಕುವುದಕ್ಕೆ, ಸುಟ್ಟು ಬಿಡುವುದಕ್ಕೆ, ಜೀವ ಕೊಲ್ಲುವುದಕ್ಕೆ ಜಾತಿ, ಧರ್ಮ ಬೇಕಿತ್ತು. ಅದೀಗ ಸರಾಗವಾಗಿ ನಡೆಯುತ್ತಿದೆ. ಹಸಿರು, ಉಸಿರು ಕಳೆದ ಈ ನೆಲದ ಸೊಬಗನ್ನು ಸಂಪೂರ್ಣವಾಗಿ ಕೆಸರುಮಯ ಮಾಡುವ ಪರಿಯಿದು. ಹಸಿರು ಬಯಲನ್ನು ಮರುಭೂಮಿಯಾಗಿಸುವ ಸೃಷ್ಟಿಯಿದು. ಯಾರದೋ ಸುಖದ ಪರಿಕಲ್ಪನೆಗೆ ಕಟ್ಟಿದ ಈ ಗೋಡೆಯನ್ನು ಉರುಳಿಸುವವರೆಗೆ ಈ ಬಿಕ್ಕಳಿಕೆಗೆ ಕೊನೆಯಿಲ್ಲ. ಅದು ಸ್ವಸ್ಥ ಸಮಾಜದ ಶಾಂತಿಯನ್ನು ನುಂಗುವ ಬಿಕ್ಕಳಿಕೆಯೆಂಬುದನ್ನು ಮರೆಯದಿರಿ.

ಸಿಹಾನ ಬಿ.ಎಂ

ಉದಯೋನ್ಮುಖ ಲೇಖಕಿ, ಕವಯಿತ್ರಿ

ಇರಾನ್ ಮತ್ತು ಭಾರತ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಪವಾದವೇ?
ಇಲ್ಲಿ ಸಮವಸ್ತ್ರದ ಶಾಲನ್ನು ತಲೆಗೇರಿಸುವುದನ್ನು ವಿರೋಧಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಿದರೆ, ಇರಾನ್ ತಲೆಯಲ್ಲಿದ್ದ ವಸ್ತ್ರವು ಪೂರ್ಣವಾಗಿ ಕೂದಲನ್ನು ಮರೆಮಾಚಿಲ್ಲವೆಂಬ ಕಾರಣಕ್ಕೆ ಕ್ರೌರ್ಯವನ್ನು ಪ್ರದರ್ಶಿಸಿದೆ. ಹಾಗಾದರೆ ಹೆಣ್ಣಿಗೆ ತನ್ನ ಸ್ವಾತಂತ್ರ್ಯವನ್ನು ನಿರ್ಧರಿಸುವ ಹಕ್ಕಿಲ್ಲವೇ? ಎಂದು ಪ್ರಶ್ನಿಸುತ್ತಾರೆ ನಮ್ಮ ನಡುವಿನ ಸಂವೇದನಾಶೀಲ ಲೇಖಕಿ ಸಿಹಾನ ಬಿ ಎಂ.

ಮುಸ್ಲಿಮ್ ಹೆಣ್ಣುಮಕ್ಕಳ ವಸ್ತ್ರವನ್ನು ಸಾರ್ವಜನಿಕ ಚರ್ಚೆಯಲ್ಲಿರಿಸುವುದು, ಅದರ ವಿರುದ್ಧ ಪರ ವಿರೋಧ ಮಾತುಗಳು ಹರಡುತ್ತಿರುವುದು ಇದೇ ಮೊದಲಲ್ಲ. ಇದು ಕೊನೆಯೂ ಅಲ್ಲ.  ಹಿಂದಿನಿಂದಲೂ ಇಂದಿನವರೆಗೂ ಇದು ಮುಂದುವರಿಯುತ್ತಲೇ ಇದೆ. ಹೆಣ್ಣಿಗೆ ಇಲ್ಲಿ ಇನ್ನೂ ಸಂಪೂರ್ಣವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಕಟ್ಟುಪಾಡಿನೊಂದಿಗೆ, ಹೇರಿಕೆ – ವಿರೋಧದೊಂದಿಗೆ ಆಕೆ ಉಸಿರಾಡುತ್ತಿದ್ದಾಳೆ. ಅನೇಕ ಬಾರಿ ಹೆಣ್ಣಾದ ನಾನು ನನ್ನಲ್ಲೇ ನನ್ನಷ್ಟಕ್ಕೆ ಪ್ರಶ್ನಿಸುತ್ತಲೇ ಇರುತ್ತೇನೆ…ಇದಕ್ಕೆ ಕೊನೆಯೆಂದೋ..?

ಬೆಂಕಿ ಹೊತ್ತಿಕೊಂಡಿದೆ..

ಹೌದು…ಇದು ಮುಗಿಯುವಂತಹುದಲ್ಲ. ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳಿವು. ನಿತ್ಯ ಜೀವನದಲ್ಲಿ ನಮ್ಮನ್ನು  ಅತಿಯಾಗಿ ಪ್ರಭಾವಿಸಿರುವುದು ಧರ್ಮಗಳೇ. ಧರ್ಮವು ವ್ಯಕ್ತಿಗಳ ನೈತಿಕ ದಿಕ್ಸೂಚಿಯಾಗಿ ಮನುಷ್ಯನನ್ನು ಉನ್ನತಿಯೆಡೆಗೆ ಪ್ರೇರೇಪಿಸುತ್ತದೆ ನಿಜ. ಆದರೆ ಅದೇ ವೇಳೆಯಲ್ಲಿ ಹೇರಿಕೆ, ವಿರೋಧಗಳೆಲ್ಲ ಅತಿಯಾದಾಗ ಒಮ್ಮೆಲೆ ಜ್ವಾಲಾಮುಖಿಯೇಳುವುದು ಸಹಜ. ಅಂತಹದೇ ಒಂದು ಜ್ವಾಲಾಮುಖಿ ಇರಾನಿನಲ್ಲಿ ಈಗಾಗಲೇ ಹೊತ್ತಿಕೊಂಡಿದೆ. ನಮ್ಮ ದೇಶವು ಇಂತಹ ಜ್ವಾಲೆಯನ್ನು ಹರಡುವುದರಲ್ಲಿ ಕಡಿಮೆಯೇನಿಲ್ಲ. ಹೊತ್ತಿಸಿದ ಬೆಂಕಿಯನ್ನು ಆರಿಸುವ ಸಮಯ ಇನ್ನೂ ಬಂದಿಲ್ಲ.

ಇಲ್ಲಿ ಸಮವಸ್ತ್ರದ ಶಾಲನ್ನು ತಲೆಗೇರಿಸುವುದನ್ನು ವಿರೋಧಿಸಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದರೆ, ಅಲ್ಲಿ ತಲೆಯಲ್ಲಿದ್ದ ವಸ್ತ್ರ ಪೂರ್ಣವಾಗಿ ಕೂದಲನ್ನು ಮರೆಮಾಚಿಲ್ಲವೆಂಬ ಕಾರಣಕ್ಕೆ ಕ್ರೌರ್ಯವನ್ನು ಪ್ರದರ್ಶಿಸಿದೆ. ಹಾಗಾದರೆ ಹೆಣ್ಣಿಗೆ ತನ್ನ ಸ್ವಾತಂತ್ರ್ಯವನ್ನು ನಿರ್ಧರಿಸುವ ಹಕ್ಕಿಲ್ಲವೇ? ಶೋಷಣೆಗೊಳಗಾಗುವ ಮತ್ತು ಶೋಷಿಸಲ್ಪಡುವ ಅಸ್ತ್ರವಾಗಿಯೇ ಆಕೆ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೇ?

ಬಾಬಾ ಸಾಹೇಬ್ ಅಂಬೇಡ್ಕರ್ ಸಮರ್ಪಿಸಿದ ಸಂವಿಧಾನದ ಆಶಯಗಳಿಂದ ಕೂಡಿದ ಮುತ್ತಿನಹಾರದಿಂದ ಹೆಕ್ಕಿ ತೆಗೆದ ಮುತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ಆ ಮುತ್ತನ್ನು ಬಲು ಆರ್ತಿಯಿಂದ ಎದೆಗೇರಿಸಿ ಹೃದಯದೊಳಗಿಳಿಸಿ ಇಲ್ಲಿ ನಾವು ಹೆಣ್ಣಿನ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದೇವೆ. ವಿರೋಧಿಗಳಿಗೆ ಸೆಡ್ಡು ಹೊಡೆಯುವ ಬಾಣದ ಪ್ರಹಾರ ನಡೆಸಿದರೂ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ತುಂಡುಬಟ್ಟೆಯ ಕಾರಣದಿಂದ ತಮ್ಮ ಹಕ್ಕುಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ. ಇಲ್ಲಿ ಹೆಣ್ಣಿನ ಮೇಲೆ ಶೋಷಣೆ ಬರೀ ಶಿಕ್ಷಣದಲ್ಲಿ ಮಾತ್ರ ನಡೆಯುತ್ತಿಲ್ಲ. ಅದು ಹಲವಾರು ಕಡೆ ತನ್ನ ಕೋರೆಹಲ್ಲನ್ನು ಚಾಚುತ್ತಲೇ ಇದೆ. ಕಟ್ಟುಪಾಡುಗಳನ್ನು ಹೇರುತ್ತಾ ಆಕೆಯನ್ನು ದ್ವಿತೀಯ ದರ್ಜೆಯವಳನ್ನಾಗಿಸಿ ಅವಕಾಶಗಳನ್ನು ಕೊಡದೆ ಮಾಡಿದ ದ್ರೋಹ ಮಾನವೀಯತೆಗೆ ಬಗೆದ ವಿದ್ರೋಹವಾಗಿದೆ.

ವಸ್ತ್ರದ ಸುತ್ತ ಸುತ್ತಿಕೊಂಡ ಕೂಗು..

ಇರಾನ್ ಈಗ ಹೆಣ್ಣಿನ ವಸ್ತ್ರದ ವಿಷಯವಾಗಿ ಕ್ರೌರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅತೀ ದೊಡ್ಡ ಕ್ರಾಂತಿ ಮಾಡಿದ ದೇಶ ಇರಾನ್. ಅಲ್ಲಿಯೂ ಹೆಣ್ಣುಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿಯ ಹೆಣ್ಣುಮಕ್ಕಳ ಕೂಗು ಮತ್ತು ಅಲ್ಲಿಯ ಹೆಣ್ಣುಮಕ್ಕಳ ಕೂಗು ಭಿನ್ನವಾದರೂ ಅದು ವಸ್ತ್ರದ ಸುತ್ತ ಸುತ್ತಿಕೊಂಡಿದೆ. ಚಿಂತಕರ, ಹೋರಾಟಗಾರರ, ಸಾಧಕರ ಪಟ್ಟಿಯಲ್ಲಿ ಇರಾನ್ ತನ್ನನ್ನು ಗುರುತಿಸಿಕೊಳ್ಳುತ್ತಲೇ ಬಂದಿದೆ. ಇಸ್ಲಾಮೀ ರಾಷ್ಟ್ರವನ್ನಾಗಿಸುತ್ತಾ ಇಸ್ಲಾಮೀ ನಿಯಮಗಳನ್ನು ನಿರ್ದೇಶಿಸಿ, ಕಠಿಣವಾಗಿ ಅದನ್ನು ಪಾಲಿಸುವಂತೆ ಆದೇಶಿಸುತ್ತದೆ ಇರಾನ್. ಹೀಗೆ ಬಲವಂತದಿಂದ ಹೇರುವುದರ ಪರಿಣಾಮವಾಗಿ ಇಂದು 22 ವರ್ಷದ ಮಹ್ಸಾ ಅಮಿನಿ ಎಂಬ ಹೆಣ್ಣುಮಗಳ ಹತ್ಯೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಸುದ್ದಿಯಲ್ಲಿದೆ. ಪ್ರತೀ ದೇಶಕ್ಕೂ ಅದರದೇ ಆದ ನಿಯಮ ನಿರ್ದೇಶನಗಳಿವೆ. ಆದರೆ ಆ ನಿಯಮ ನಿರ್ದೇಶನಗಳು ಕ್ರೌರ್ಯಕ್ಕೆ ದಾರಿ ಮಾಡಿ ಕೊಡುವಂತಾಗಬಾರದು. ಬಲಿಷ್ಟವಾಗಿ ಪಹರೆ ಕಾಯುವ, ಬಲು ಕಟ್ಟೆಚ್ಚರದಲ್ಲಿದ್ದು ಅದನ್ನು ಪ್ರಜೆಗಳ ಮೇಲೆ ಹೇರುವಾಗ ಸಾಮಾನ್ಯವಾಗಿ ಅಲ್ಲಿಯ ಪ್ರಜೆಗಳಿಗೂ ಸರಕಾರದ ಮೇಲೆ ಅಸಹನೆ ಹುಟ್ಟಿಕೊಳ್ಳುವುದು ಸಹಜವೇ. ಹತ್ಯೆಗೊಳಗಾದ ಆ ಹೆಣ್ಣುಮಗಳು ಹಿಜಾಬ್ ಧರಿಸಿದ್ದಳು. ಹಿಜಾಬನ್ನು ತಿರಸ್ಕರಿಸಿ ತಲೆಗೂದಲನ್ನು ಸಂಪೂರ್ಣವಾಗಿ ತೆರೆದು ನಡೆದವಳಲ್ಲ. ಹಿಜಾಬಿನೆಡೆಯಿಂದ ಒಂದಷ್ಟು ತಲೆಗೂದಲು ಹೊರ ಕಾಣುತ್ತಿದೆಯೆಂಬ ಕಾರಣಕ್ಕೆ ಹತ್ಯೆಗೀಡಾದಳು. ಇಸ್ಲಾಮಿನ ಹೆಸರಿನಲ್ಲಿ ಹೀಗೆ ಕೊಲೆಗೈಯ್ಯುವಂತೆ ಇಸ್ಲಾಮ್ ಎಲ್ಲಾದರು ಹೇಳಿದೆಯೇ? ಹೆಣ್ಣಿಗೆ ವಸ್ತ್ರಸಂಹಿತೆಯನ್ನು ನಿರ್ದೇಶಿಸಿ ಅದನ್ನು ಕಡ್ಡಾಯಗೊಳಿಸಿದರೂ ಬಲವಂತವಾಗಿ ಹೇರುವಂತೆಯೂ ಅದು ಹೇಳಿಲ್ಲ. ಇಸ್ಲಾಂ ಅವಳಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟಿದೆ. ಹೆಣ್ಣು ಏನನ್ನು ತೊಡಬೇಕು, ಏನನ್ನು ತೊಡಬಾರದೆಂಬ ಪೂರ್ಣ ಸ್ವಾತಂತ್ರ್ಯ ಆಕೆಗಿದೆ. ಧರ್ಮದಲ್ಲಿ ಬಲವಂತವಿಲ್ಲವೆಂದೇ ಇಸ್ಲಾಮ್ ಹೇಳಿದೆ. ಹೀಗಿರುವಾಗ, ಕಟ್ಟುನಿಟ್ಟಾದ ಕಠೋರವಾದ ರೀತಿಯಲ್ಲಿ ಕಟ್ಟುಪಾಡುಗಳನ್ನು ಹೇರಿ, ಮಾನವ ಘನತೆಗೆ ಎಳ್ಳು ಕಾಳಿನಷ್ಟು ಬೆಲೆ ಕೊಡದೆ, ಇಸ್ಲಾಮ್ ನಿಷೇಧಿಸಿದ ಅನ್ಯಾಯವಾಗಿ‌ ಒಂದು ಮಾನವ ಜೀವದ ಹತ್ಯೆಗೆ ತೊಡಗಿಸಿಕೊಂಡಿರುವುದು ಖಂಡನೀಯ.

ಇದು ಇಸ್ಲಾಮ್ ಬೋಧಿಸಿದ ಮಾರ್ಗ..

ಇಸ್ಲಾಮೀ ರಾಷ್ಟ್ರವಾದ ಇರಾನಿನೊಂದಿಗೆ ಇಸ್ಲಾಮಿನ ಭಾಷೆಯೊಂದಿಗೆ ಪ್ರಶ್ನಿಸಬೇಕಾಗಿದೆ. ನಮ್ಮ ದೇಶದ ಸಂವಿಧಾನವನ್ನು ಹಿಡಿದು ಅಲ್ಲಿಯವರನ್ನು ಪ್ರಶ್ನಿಸುವಂತಿಲ್ಲ. ಅಲ್ಲಿಯ ನಿಯಮಗಳು ಬೇರೆ. ಇಲ್ಲಿಯ ನಿಯಮಗಳು ಬೇರೆ‌. ಪ್ರತಿಯೊಂದು ದೇಶವು ಅದರದೇ ಆದ ಶಾಸನಗಳನ್ನು ರೂಪಿಸಿಕೊಂಡಿದೆ. ಇನ್ನು ಇಸ್ಲಾಮೀ ದೃಷ್ಟಿಕೋನದಲ್ಲಿ ನೋಡುವುದಾದರೆ ಬಲವಂತದ ಹೇರಿಕೆಯಿಂದ ಪ್ರವಾದಿ ಮುಹಮ್ಮದ್(ಸ)ರು ಅಜ್ಞಾನದಲ್ಲಿದ್ದ ಅರಬರನ್ನು ಬದಲಾವಣೆಯತ್ತ ತೆರೆದುಕೊಳ್ಳುವಂತೆ ಮಾಡಿದರೇ? ಹೆಣ್ಣು, ಜೂಜು, ಮದ್ಯ, ಯುದ್ಧಗಳಲ್ಲಿಯೇ ಮುಳುಗಿದ್ದ ಅರಬ್ ದೇಶದಲ್ಲಿ ಮಹತ್ತಾದ ಕ್ರಾಂತಿಯನ್ನು ಹೇರಿಕೆಯಿಂದ ಮಾಡಿದ್ದಾರೆಯೇ? ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಆಡಳಿತಗಾರರಾಗಿದ್ದರು. ಉತ್ತಮ ನಾಯಕರೂ ಆಗಿದ್ದರು. ಅವರ ಇತಿಹಾಸದಲ್ಲಿ ಹೇರಿಕೆಯಿಂದ ಬದಲಾಯಿಸಿದ ಒಂದೇ ಒಂದು ಘಟನೆ ನಡೆದಿದೆಯೇ? ಎಲ್ಲಾ ಕ್ಷೇತ್ರಗಳಲ್ಲಿ ಮಾತನಾಡಿದ ಕುರ್ ಆನ್, ಕೆಡುಕುಗಳ ನಿರ್ಮೂಲನವನ್ನು ಸಹ ಬಲವಂತದಿಂದ ಒಮ್ಮೆಲೆ ನಡೆಸುವಂತೆ ಆದೇಶಿಸಿಲ್ಲ. ಹಂತ ಹಂತವಾಗಿಯೇ ಒಂದೊಂದೇ ಕೆಡುಕನ್ನು ನಿರ್ಮೂಲನ ಮಾಡುವಂತಹ ಸುಂದರ ವಿಧಾನವನ್ನು ಇಸ್ಲಾಮ್ ಕಲಿಸಿದೆ. ಮದ್ಯ ನಿಷೇಧದ ಹಿನ್ನೆಲೆಯನ್ನು ಗಮನಿಸಿದರೆ ಎಷ್ಟು ಹಂತಗಳಲ್ಲಿ ಅದು ಆಜ್ಞಾಪಿಸುತ್ತಾ ಬಂದಿದೆಯೆಂದು ಅರ್ಥಮಾಡಬಹುದು. ಪ್ರತಿಯೊಂದನ್ನು ಕೂಡ ಸರಳವಾಗಿಯೇ ಆದೇಶಿಸುತ್ತಾ ಬಂದಿದೆ. ಸರಳವಾದ ಇಸ್ಲಾಮನ್ನು ಕಠಿಣವಾಗಿ ತೋರಿಸುವುದೇ ಇಂದು ಈ ಎಲ್ಲಾ ಅನಾಹುತಗಳಿಗೆ ಕಾರಣ. ಅದೇನೇ ಇರಲಿ. ಧರ್ಮದ ಉಳಿವಿಗಾಗಿ, ನಿಯಮಗಳನ್ನು ಹೇರುವಾಗ ಇಸ್ಲಾಮ್ ಬೋಧಿಸಿದ ಮಾರ್ಗವನ್ನು ಸಹ ಅರಿಯಬೇಕಾಗಿದೆ.

ಇಷ್ಟೆಲ್ಲ ಬೋಧಿಸಿದ ಇಸ್ಲಾಮ್ ಹೇರಿಕೆಯಿಂದ ನಿಯಮವನ್ನು ಜಾರಿಗೊಳಿಸಿಯೆಂದು ಎಲ್ಲೂ ಹೇಳಿಲ್ಲ. ಶಾಂತಿಯ ಧರ್ಮವಾದ ಇಸ್ಲಾಮ್ ಕ್ರೌರ್ಯದಿಂದ ಶಾಂತಿ ಸಂಸ್ಥಾಪಿಸಿಯೆಂದೂ ಹೇಳಿಲ್ಲ. ಒಬ್ಬ ಮಾನವನನ್ನು ಕೊಂದರೆ ಇಡೀ ಮನುಕುಲವನ್ನು ಕೊಂದಂತೆಯೇ ಎಂದು ಅನ್ಯಾಯವಾಗಿ ಕೊಲ್ಲುವ ಹತ್ಯೆಯನ್ನು ಖಂಡಿಸಿದೆ. ಇಸ್ಲಾಮಿನ ಹೆಸರಿನಲ್ಲಿ ಕ್ರೌರ್ಯ ನಡೆಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ. ವಸ್ತ್ರಸಂಹಿತೆಯನ್ನು ಸ್ತ್ರೀ ಪುರುಷರಿಬ್ಬರಿಗೂ ಕಡ್ಡಾಯಗೊಳಿಸಿದರೂ ಅವರವರ ಇಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ಸಹ ಕೊಟ್ಟಿದೆ. “ನಿಮಗೆ ಎರಡು ಮಾರ್ಗಗಳನ್ನು ತೋರಿಸಿದ್ದೇವೆ. ನಿಮಗಿಷ್ಟ ಬಂದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ” ಎಂದು ಧಾರಾಳವಾಗಿ ಆಯ್ಕೆಯ ಸ್ವಾತಂತ್ರ್ಯವನ್ನು ಕೊಟ್ಟ ಇಸ್ಲಾಮನ್ನು ಮುಂದಿಟ್ಟು ಅದ್ಯಾವ ಧರ್ಮರಕ್ಷಣೆಯನ್ನು ಇರಾನ್ ನಡೆಸುತ್ತಿದೆ?

ಧಾರ್ಮಿಕ ನಿಯಮದ ಹೇರುವಿಕೆ ತಪ್ಪು..

ಧರ್ಮಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಚಿಂತನಾಕ್ರಮಗಳನ್ನು ರೂಪಿಸುತ್ತದೆ ಎಂದು ಹೇಳುವುದಾದರೂ ಇಂತಹ ಅತಿರೇಕದ ಪೈಶಾಚಿಕತೆಯತ್ತ ಅವರನ್ನು ದೂಡುವಂತೆ ಪ್ರೇರೇಪಿಸಿದ ಧರ್ಮವಾದರೂ ಯಾವುದು? ಹೆಣ್ಣಿನ ವಸ್ತ್ರದ ವಿಷಯದಲ್ಲಿ ಹೆಣ್ಣಿಗೆ ಪೂರ್ಣ ಸ್ವಾತಂತ್ರ್ಯವಿದೆ. ಆಕೆಗೆ ಇಷ್ಟವಿದ್ದರೆ ಧರಿಸುವ, ಇಷ್ಟವಿಲ್ಲದಿದ್ದರೆ ತಿರಸ್ಕರಿಸುವ ಹಕ್ಕೂ ಆಕೆಗಿದೆ. ಅದವಳ ವೈಯಕ್ತಿಕ ಆಯ್ಕೆ ಮತ್ತು ಹಕ್ಕು. ವಸ್ತ್ರ ಮಾತ್ರವಲ್ಲ ಅವಳ ಬದುಕನ್ನು ಕೂಡ ಅವಳಿಷ್ಟದಂತೆ ಆಕೆ ನಡೆಸಬಹುದು. ಅವಳಿಗೂ ಭಾವನೆಗಳಿವೆ, ಅವಳಿಗೂ ಬದುಕಿದೆ. ಅವಳನ್ನು ಬಂಧನದಲ್ಲಿಟ್ಟು, ಕಟ್ಟಿ ಹಾಕಿ ಕೈಗೊಂಬೆಯಾಗಿಸುವ ಅಧಿಕಾರ ಯಾರಿಗೂ ಇಲ್ಲ.

ಬಾಹ್ಯ ನೋಟಕ್ಕೆ ಇರಾನಿನ ಈ ಕಿಚ್ಚು ಹಿಜಾಬಿನ ವಿರುದ್ಧವೆಂದು ಕಂಡರೂ ಅದು ಸಂಪೂರ್ಣವಾಗಿ ಹಿಜಾಬಿನ ವಿರುದ್ಧವಲ್ಲ. ಅಲ್ಲಿಯ ಅನೈತಿಕ ಪೊಲೀಸ್ ಗಿರಿಯ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಆ ಆಕ್ರೋಶವನ್ನು ಅವರು ಹಿಜಾಬನ್ನು ಸುಡುವುದರ ಮೂಲಕ, ಕೂದಲು ಕತ್ತರಿಸುವುದರ ಮೂಲಕ ಹೊರ ಹಾಕುತ್ತಿದ್ದಾರೆ. ಅಲ್ಲಿರುವುದು ಬರೀ ಮುಸ್ಲಿಮರು ಮಾತ್ರವಲ್ಲ. ಇತರ ಜನರೂ ಇದ್ದಾರೆ. ಹಾಗಾಗಿ ಒಂದು ಧರ್ಮದ ನಿಯಮವನ್ನು ಹೇರುವಾಗ ಅದು ಇತರ ಧರ್ಮೀಯರಿಗೂ ತೊಂದರೆಯಾಗಬಾರದು. ಹೇರುವುದೇ ತಪ್ಪು. ಅಂತಹದರಲ್ಲಿ ಕೂದಲು ಹೊರ ಕಾಣುತ್ತದೆಯೆಂದು ಕೊಲ್ಲುವುದು ಮಹಾಪರಾಧ. ಅಲ್ಲದೆ ಪ್ರತಿಭಟನೆಯಲ್ಲಿ ಬಹುಪಾಲು ಮಹಿಳೆಯರು ಹಿಜಾಬ್ ಧರಿಸಿದ್ದಾರೆ. ಅದರಲ್ಲಿ ಹಿಜಾಬ್, ಬುರ್ಖಾ ಧರಿಸಿದವರೂ ಇದ್ದಾರೆ. ಧರಿಸದವರೂ ಇದ್ದಾರೆ. ಇದೂ ಸಹ ಗಮನಾರ್ಹ ಅಂಶವೇ. ಅವಳಿಗಿಷ್ಟವಿರುವುದನ್ನು ಅವಳು ಧರಿಸಬಹುದೆಂದು ಇದರಲ್ಲೇ ವ್ಯಕ್ತವಾಗುತ್ತದೆ‌. ಹಿಜಾಬ್ ಧರಿಸಿರುವುದು ಸರಿಯಾಗಿಲ್ಲವೆಂಬ ಕಾರಣವು ಕ್ರೌರ್ಯಕ್ಕೆ ತೊಡಗಿಸಿಕೊಳ್ಳುವಷ್ಟು ಮುಂದುವರಿಯಬಾರದು.

ಎದ್ದು ನಿಂತಿವೆ ಮತಾಂಧ ಶಕ್ತಿಗಳು!

ಇನ್ನೊಂದು ತಮಾಷೆಯೇನೆಂದರೆ ಅಲ್ಲಿ ಹಿಜಾಬ್ ವಿರೋಧ ಕಂಡಾಕ್ಷಣ ಇಲ್ಲಿಯ ಮತಾಂಧ ಶಕ್ತಿಗಳು ಮತ್ತೊಮ್ಮೆ ಎದ್ದು ನಿಂತಿವೆ. ಇದು ಹಾಸ್ಯಾಸ್ಪದವಾಗಿದೆ. ಮೊದಲು ಸೋರುವ ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮದಿಷ್ಟು ಗಬ್ಬುನಾತ ಹೊಡೆಯುತ್ತಿರುವಾಗ ಪರರ ಹೊಲಸಿನೆಡೆಗೇಕೆ ಚಿಂತೆ ಇವರಿಗೆ? ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಎಂಬಂತೆ ಇಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿರುವಾಗ ಅವರಿಗೆ ಅದ್ಯಾವುದೂ ಸಮಸ್ಯೆಯಲ್ಲ. ಮುಸ್ಲಿಮ್ ಹೆಣ್ಣುಮಕ್ಕಳ ಸಂಪೂರ್ಣ ಮೈ ಮುಚ್ಚುವ ಬಟ್ಟೆ ಇವರಿಗೆ ಸಮಸ್ಯೆಯಾಗಿರುವುದು! ಇರಾನನ್ನು ತೋರಿಸಿ ಇಲ್ಲಿಯೂ ಹಾಗೆ ಮಾಡಬೇಕೆಂದು ಹೇಳುವುದಾದರೆ ನಾಳೆ ಅವರಿಗೂ ಅದರಿಂದ ಹೊಡೆತ ಬೀಳಲಾರದೆಂಬ ಗ್ಯಾರಂಟಿಯೇನಿದೆ? ಇವರು ಧಾರ್ಮಿಕ ಕಟ್ಟುಪಾಡಿಗೆ ಬದ್ಧರಾಗಿ ನಡೆದರೆ ತಪ್ಪಲ್ಲ. ಆದರೆ ಮುಸ್ಲಿಮ್ ಹುಡುಗಿಯರು ತಲೆಗೆ ಶಾಲು ಹಾಕಬಾರದು. ಎಂತಹ ವಿಪರ್ಯಾಸ !

ಧರ್ಮ ಎಂದರೆ ಶಾಂತಿ, ಸಹಬಾಳ್ವೆ..

ಮನೋವ್ಯಾಧಿಗಳ ಈ ರೋಗ ಆಗಾಗ ಉಲ್ಬಣವಾಗುತ್ತಲೇ ಇರುತ್ತದೆ. ಪ್ರತೀ ಬಾರಿ ಜಾತಿ, ಧರ್ಮದ ಹೆಸರಿನಲ್ಲಿ ಕ್ಷುಲ್ಲಕ ಕಾರಣವನ್ನಿಟ್ಟು ಅಕ್ರಮ, ಅನ್ಯಾಯಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಬಂದಿದ್ದಾರೆ. ಇಲ್ಲಿ  ಧರ್ಮದೊಂದಿಗೆ ಬದುಕುವವರೂ ಇದ್ದಾರೆ. ಧರ್ಮವಿಲ್ಲದೆ ಬದುಕುವವರೂ ಇದ್ದಾರೆ. ಎಲ್ಲರೂ ಜೊತೆಯಾಗಿ ಬಾಳುವ ದೇಶವೇ ನಮ್ಮ ಭಾರತ. ಅದಿಲ್ಲದಿದ್ದರೆ ಭಾರತ ಭಾರತವಾಗುವುದಿಲ್ಲ. ಕೊನೆಗೆ ಧರ್ಮ ಅಂದರೆ ಮಾನವೀಯತೆ. ಧರ್ಮ ಅಂದರೆ ಇನ್ನೊಬ್ಬರಿಗೆ ತೊಂದರೆ ಕೊಡದೆ ಬದುಕುವುದು. ಧರ್ಮ ಅಂದರೆ ಶಾಂತಿ, ಸಮಾಧಾನ, ಸಹಬಾಳ್ವೆ. ಇದಿಷ್ಟನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡರೆ ಸಾಕು.

ಸಿಹಾನ ಬಿ.ಎಂ.
ಶಿಕ್ಷಕಿ, ಲೇಖಕಿ.

ನಮ್ಮ ನೆಲದಲ್ಲಿ, ನಮ್ಮ ಧ್ವಜದಲ್ಲಿ ನಮ್ಮ ಅಮ್ಮಂದಿರ ಹೋರಾಟದ ಕಿಚ್ಚಿದೆ
ಈ ನೆಲದಲ್ಲಿ, ನಮ್ಮ ರಾಷ್ಟ್ರಧ್ವಜದಲ್ಲಿ ನನ್ನ ಅಮ್ಮಂದಿರರ ರಕ್ತದ ಕಲೆಗಳಿವೆ. ದಿಟ್ಟ ನಿಲುವಿದೆ, ಧೈರ್ಯದ ಪಾಠಗಳಿವೆ, ಶಾಂತಿಯ ಉಸಿರಿದೆ. ಅವರನ್ನು ಮುನ್ನಡೆಸುವ ನಾಯಕರು ಅಂದು ದಾರಾಳ ಸಂಖ್ಯೆಯಲ್ಲಿದ್ದರು. ಆದರೆ ಇಂದು ಅವರಿಟ್ಟ ಹೆಜ್ಜೆಯನ್ನು ಹಿಂದೆ ಸರಿಸುವಂತಹ ಒತ್ತಡದ ಮಾತುಗಳೇ ತುಂಬಿವೆ. ಆದರೂ ನನ್ನ ಸಹೋದರಿಯರು ಹಿಂದೆ ಸರಿಯಲಿಚ್ಛಿಸಲಾರರು

ಆಗಸ್ಟ್ 15 ನನ್ನ ಪಾಲಿಗೂ ವಿಶೇಷ ದಿನ. ಅಂದು ನನಗೆ ಹಬ್ಬದ ಸಂಭ್ರಮ. ಪ್ರತಿವರ್ಷ ಈ ದಿನ ಹತ್ತಿರವಾಗುತ್ತಿದ್ದಂತೆ ಚರಿತ್ರೆಯ ಪುಟಗಳು ಕಣ್ಣಮುಂದೆ ಸುಳಿಯುತ್ತಲೇ ಇರುತ್ತದೆ. ಆವಾಗಲೆಲ್ಲ ನನ್ನೊಳಗೊಂದು ದೇಶಪ್ರೇಮದ ಕಿಡಿ ಹೊತ್ತಿ ಉರಿಯುವಂತೆ ಭಾಸವಾಗುತ್ತಿರುತ್ತದೆ. ಪ್ರತೀ ಬಾರಿ ನಾನು ಮುಸ್ಲಿಮ್ ಅನ್ನುವ ಕಾರಣಕ್ಕೆ  ಭಾರತೀಯಳು, ಕನ್ನಡಿಗಳು ಎಂಬುದನ್ನು ನಿರೂಪಿಸಿ ಪ್ರದರ್ಶಿಸುವಂತೆ ಒತ್ತಡ ಹೇರಲು ನಾನೇನು ಪ್ರದರ್ಶನಕ್ಕಿಟ್ಟ ಗೊಂಬೆಯಲ್ಲ. ರಾಷ್ಟ್ರಧ್ವಜ ಹಾರಾಡುವಾಗಲೆಲ್ಲ ನನ್ನೆದೆಯಲ್ಲಿ ಉಂಟಾಗುವ ಸಂಚಲನ ನನಗೆ ಮಾತ್ರ ಗೊತ್ತು. ಅಲ್ಲಿ ನನಗೆ ನಾಟಕೀಯದ ಪ್ರದರ್ಶನದ ಅಗತ್ಯವಿಲ್ಲ. ಸ್ವಾತಂತ್ರ್ಯ ದಿನಾಚರಣೆಯ 75ನೇ ಅಮೃತ ಮಹೋತ್ಸವವನ್ನು ಹೊಸಪರಿಯ ರಾಷ್ಟ್ರಧ್ವಜದ ಹಾರಾಟದ ಹೆಸರಿನಲ್ಲಿ ಮಾರಾಟದ ಆಟವನ್ನು ನೋಡುವಾಗ ಇಷ್ಟು ದಿನಗಳವರೆಗೆ  ನನ್ನೆದೆಯನ್ನು ಸುಡುವ ಬೆಂಕಿಯು ಜ್ವಾಲಾಮುಖಿಯಾಗಿ ಸ್ಪೋಟವಾಗುವುದೊಂದು ಬಾಕಿ.

ತ್ರಿವರ್ಣ ಧ್ವಜವನ್ನು ನಾವು ಜೊತೆಯಾಗಿಯೇ ಹಾರಾಡಿಸೋಣ. ಅದನ್ನು ವಿರೋಧಿಸಲಾರೆ. ಅದು ಈ ದೇಶದಲ್ಲಿ ನನ್ನನ್ನು ಆಸ್ಮಿತೆಯಾಗಿ ಬೆಳಗಿಸಿದ ಸಂಕೇತ. ಜಗತ್ತಿನ ಯಾವ ಮೂಲೆಗೆ ಹೋದರೂ ನನ್ನನ್ನು ಗುರುತಿಸಲು ನನ್ನೊಂದಿಗಿರುವ ಸಂಗಾತಿಯದು. ಮಕ್ಕಾದ ಕಾಬಾ ಭವನದ ಮುಂದೆಯೂ ನನ್ನ ಧ್ವಜವನ್ನು ಹಾರಾಡಿಸುವ ನನ್ನವರೂ ಇರುವರು. ಆದರೆ ನನ್ನ ಆ ಧ್ವಜ ಮಾರಾಟಕ್ಕಿರುವ ನಾಟಕದ ಬಟ್ಟೆಯಲ್ಲ. ಅವಮಾನಿಸುವ ಹಾಸ್ಯಾಸ್ಪದದ ಪ್ರಹಸನವಲ್ಲ. ವ್ಯಾಪಾರ ಕುದುರಿಸುವ ಬಣ್ಣದ ವಸ್ತ್ರವಲ್ಲ. ಈ ಮಣ್ಣಿನ ಸವಿಯನ್ನುಂಡ, ಇದರ ಮಡಿಲಲ್ಲಿ ಆಡಿ ನಲಿದ ನಮ್ಮನ್ನು ನಿರ್ಮೂಲನಗೊಳಿಸಬೇಕೆಂದು ಷಡ್ಯಂತ್ರ ಹೂಡುವ ದುಷ್ಟಶಕ್ತಿಗೆ ಉತ್ತರ ನೀಡುವ ಸುಂದರ ತ್ರಿವರ್ಣ ಧ್ವಜವದು. ಮಿಸೈಲ್ ಬಾಂಬ್ ರೀತಿಯಲ್ಲಿ ಶಿಕ್ಷಣ, ವ್ಯಾಪಾರ, ಆಹಾರದ ಹೆಸರಿನಲ್ಲಿ ಅಕ್ರಮಣ ನಡೆಸಿದಾಗಲೆಲ್ಲ ನನ್ನನ್ನು ಭಾರತೀಯಳೆಂದು ಗುರುತಿಸಲು ಜೊತೆಯಾಗಿರುವ ಜೊತೆಗಾರ್ತಿ. ಪ್ರತೀ ಹೋರಾಟದ ಸಮಯದಲ್ಲಿ ನಾನದನ್ನು ಹೊತ್ತುಕೊಂಡು ನಡೆದವಳು. ಪ್ರಜಾಪ್ರಭುತ್ವ ವ್ಯವಸ್ಥೆ ಮುಳುಗಿರುವ ಈ ಸಂದರ್ಭದಲ್ಲೂ ಸಂವಿಧಾನದ ಆಶಯವಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿ ಘನತೆಯ ಛಾಪನ್ನು ನಾವು ಮೆಟ್ಟಿದ ಶಾಲೆಯ ಮೆಟ್ಟಿಲುಗಳು ಮೂಡಿಸುತ್ತಲೇ ಬಂದಿತ್ತು. ಆದರೆ ಅದಕ್ಕಿಂದು ತಡೆಯಾಗಿಸಿದ ನೀವು ಅದ್ಯಾವ ನೈತಿಕತೆಯಿಂದ “ಹರ್ ಘರ್ ಮೆ ತಿರಂಗ” ಅಭಿಯಾನವನ್ನು ಹಮ್ಮಿಕೊಂಡಿರುವಿರಿ?

ನನ್ನ ಗೆಳತಿಯರ ಬದುಕನ್ನು ಕತ್ತಲಾಗಿಸಿದ ಕೇಸರಿ ಶಾಲು, ತ್ರಿಶೂಲದ ಕತೆಗಳು ಇನ್ನೂ ಅವರ ಮನಸ್ಸಿನ ಗಾಯವನ್ನು ಅಳಿಸಿಲ್ಲ. ರಾಷ್ಟ್ರಧ್ವಜವನ್ನು ನೆಪವಾಗಿಸಿ ಅದರ ಜೊತೆ ಈ ಕೇಸರಿ ಧ್ವಜ ಹಾರಾಡುವಾಗಲೆಲ್ಲ ದ್ವೇಷದ ಪೂರಕಗಳಾಗಿ ಸುತ್ತ ಗಿರಗಿರ ತಿರುಗುತ್ತಲೇ ಇದೆ. ಕೋಮು ರಾಜಕಾರಣದ ಪ್ರತಿಫಲನದಲ್ಲಿ, ದುರುದ್ದೇಶ ಪೂರಿತ ಕಟ್ಟಳೆಗಳಲ್ಲಿ ಅಪ್ಪಚ್ಚಿಯಾಗಿರುವುದು ನನ್ನ ಸಹೋದರಿಯರ ಬದುಕು. ಶುಭ್ರಕಣ್ಣಿನಿಂದ ನೋಡಲಾಗದ ನಿಮ್ಮ ಕಣ್ಣುಗಳಿಗೆ ತ್ರಿವರ್ಣ ಧ್ವಜದ ಸಂದೇಶವನ್ನು ಅರ್ಥೈಸುವ ಹೃದಯವಾದರೂ ಹೇಗೆ ಬಂದೀತು? ಸಂವಿಧಾನ ವಿರೋಧಿ ನಡೆ ಮತ್ತು ಅಮಾನವೀಯ ತಡೆಯಲ್ಲಿ ಸಿಲುಕಿ ನಲುಗಿದ ಹಲವಾರು ಮುಸ್ಲಿಮ್ ಹೆಣ್ಣುಮಕ್ಕಳ ನೋವಿಗೆ ಯಾವ ಉತ್ತರ ಕೊಡಬಲ್ಲಿರಿ?

ಈ ರಾಷ್ಟ್ರಧ್ವಜವನ್ನು ಹೊತ್ತು ನಡೆಯುವಾಗ ದೇಶಕ್ಕಾಗಿ ಹೋರಾಡಿ ಮಡಿದ ನಮ್ಮ ಅಮ್ಮಂದಿರನ್ನು ನೆನಪಿಸಿಕೊಳ್ಳಿ. ನನ್ನ ಸಮುದಾಯವನ್ನು ದ್ವೇಷಿಸುವ ನೀವು ದೇಶಕ್ಕಾಗಿ ತ್ಯಾಗ ಮಾಡಿದ ನನ್ನವರ ಯಶೋಗಾಥೆಯನ್ನು ಓದಿ ತಿಳಿಯಿರಿ. ಒಂದು ಕಾಲದಲ್ಲಿ ನಾಲ್ಕು ಗೋಡೆಯೊಳಗೆ ಬಂಧಿತರಾಗಿದ್ದ ನನ್ನ ಗೆಳತಿಯರನ್ನು ಶಾಲಾ- ಕಾಲೇಜಿನ ಬಾಗಿಲುಗಳು ಇತಿಹಾಸದ  ತಿರುವುವಂತೆ ಬದಲಾಯಿಸಿದೆ. ಇಲ್ಲದಿದ್ದರೆ ನಮ್ಮ ಅಮ್ಮಂದಿರರ ಶೌರ್ಯವನ್ನು ಅರಿಯಲು  ಸಾಧ್ಯವಾಗುತ್ತಿರಲಿಲ್ಲವೇನೋ…ಆ ಬಾಗಿಲುಗಳನ್ನು ನಮ್ಮ ಪಾಲಿಗೆ ಶಾಶ್ವತವಾಗಿ ಮುಚ್ಚಲು ಹೊರಟಿರುವ ನಿಮಗೆ ಉತ್ತರ ಕೊಡುವ ಕಾಲ ಖಂಡಿತವಾಗಿ ಬಂದೇ ಬರುತ್ತದೆ. ಕೇಸರಿ ಪಡೆಗೆ ಇದಿರಾಗಿ ಅಂಜದೆ, ಅಳುಕದೆ ನೆಲಕಟ್ಟಿ ನಿಂತಿರುವ ನನ್ನ ಗೆಳತಿಯರಲ್ಲಿ ಈಗಾಗಲೇ ಹೋರಾಟದ ಕಿಚ್ಚು ಮೊಳಕೆಯೊಡೆದಿದೆ. ಅವರಲ್ಲೇ ಮತ್ತೊಬ್ಬಳು ಬೇಗಮ್ ಹಜ್ರತ್ ಮಹಲ್, ಹಾಜಿರಾ ಬೇಗಮ್ ಇದ್ದರೂ ಇರಬಹುದು. ನಮಗೆ ನಮ್ಮವರಿಂದಲೇ ಮರುಸ್ವಾತಂತ್ರ್ಯ ಪಡೆಯುವ ಕಾಲವಿದು. ಅಂದು ಬ್ರಿಟಿಷರು ನಮ್ಮ ಶತ್ರುಗಳಾಗಿದ್ದರೆ ಇಂದು ನಮ್ಮವರೇ ನಮಗೆ ಶಾಪವಾಗಿ ನಿಂತಿರುವುದು ವಿಪರ್ಯಾಸ! ಎಪ್ಪತೈದರ ಈ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಾದರೂ ನೀವು ನಮ್ಮ ಅಮ್ಮಂದಿರ ವೀರ ಹೋರಾಟದ ಕಿಚ್ಚನ್ನು ಅರಿಯುವ ಪ್ರಯತ್ನವನ್ನಾದರು ಮಾಡಿ. ಅದನ್ನೇ ಇಂದು ನಿಮ್ಮ ಮುಂದೆ ತೆರೆದಿಡಲು ಹೊರಟಿದ್ದೇನೆ.

1858 ರಲ್ಲಿ ಅಶ್ಗರಿ ಬೇಗಮ್ ಬ್ರಿಟಿಷರ ವಿರುದ್ಧ ಹೋರಾಡಿದ ಸಂಧರ್ಭದಲ್ಲಿ ಅವರ ಸೆರೆಯಾಳಾಗಿ ಬಂಧಿತರಾದರು. ಆ ಸಮಯದಲ್ಲಿ ಬ್ರಿಟಿಷರು ಅವರನ್ನು ಜೀವಂತವಾಗಿ ಸುಟ್ಟರು. ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹಿಳೆ ಇವರಾಗಿದ್ದಾರೆ. ಹಬೀಬಿ ಮತ್ತು ರಹೀಮಿ ಎಂಬ ಮುಸ್ಲಿಮ್ ಮಹಿಳೆಯರು ಮುಝಫ್ಫರ್ ನಗರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆಯರು. ಅವರು ಕೂಡ ಬ್ರಿಟಿಷರ ಬಂಧನಕ್ಕೊಳಗಾಗಿ ದೇಶದ ಇತರ ಹನ್ನೊಂದು ಮಂದಿ ವೀರಮಹಿಳೆಯರ ಜೊತೆ ಗಲ್ಲಿಗೇರಿಸಲ್ಪಟ್ಟರು. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಇವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಲೇಬೇಕು.

ಬೇಗಮ್ ಹಜ್ರತ್ ಮಹಲ್ ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರ್ತಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಲ್ಪಡುವ ಹೋರಾಟಗಾರ್ತಿ. ವಾಜಿದ್ ಅಲಿ ಶಾಹರ ಪತ್ನಿಯಾಗಿದ್ದ ಇವರು ತನ್ನ ಪತಿಯು ಬ್ರಿಟಿಷರ ಬಂಧನಕ್ಕೊಳಗಾದ ಸಮಯದಲ್ಲಿ

ಆಡಳಿತದ ಚುಕ್ಕಾಣಿಯನ್ನು ಕೈಗೆತ್ತಿಕೊಂಡರು. ಇವರು ಜಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಧೀರಮಹಿಳೆ.

ಬೀಉಮ್ಮ ಎಂದು ಕರೆಯಲ್ಪಡುವ ಅಬಾದಿ ಬಾನು ಬೇಗಮರು ದೇಶಕ್ಕಾಗಿ ಸಲ್ಲಿಸಿದ ಸೇವೆ ಅಪಾರ. ಶೌಕತ್ ಅಲಿ ಮತ್ತು ಮುಹಮ್ಮದಲಿಯವರ ತಾಯಿಯಾದ ಇವರು ಅತೀ ಸಣ್ಣ ಪ್ರಾಯದಲ್ಲಿ ವಿಧವೆಯಾದರು. ಆದರೆ ಧೃತಿಗೆಡದ ಈ ಬುರ್ಖಾಧಾರಿ ಮಹಾತಾಯಿ ತನ್ನ ಮಕ್ಕಳನ್ನು ದೇಶಕ್ಕಾಗಿ ಅರ್ಪಿಸುವ ಪಣತೊಟ್ಟು ಈಗಲೂ ಅಮರರಾಗಿರುವರು. ಗಾಂಧೀಜಿಯವರ ನಿರ್ದೇಶನದನ್ವಯ ಬೀಉಮ್ಮ ಅನೇಕ ಮಹಿಳೆಯರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. “ಸ್ವದೇಶ ಚಳುವಳಿ” ಯಲ್ಲಿ ಈ ಮಹಾತಾಯಿಯ ಪಾತ್ರ ಅಮೋಘ. ಆಧುನಿಕ ಇಂಗ್ಲಿಷ್ ಕಲಿಕೆಯನ್ನು ಕಲಿಯುವಂತೆ ಪ್ರೇರೇಪಿಸಿದ ಮುಸ್ಲಿಮ್ ಮಹಿಳೆಯರಲ್ಲಿ ಇವರು ಮೊದಲಿಗರು‌. ಹಿಂದೂ, ಮುಸ್ಲಿಮರ ನಡುವೆ ಒಡಕುಂಟಾಗಿದ್ದ ಆ ಕಾಲದಲ್ಲಿ ಅವರನ್ನು ಒಗ್ಗೂಡಿಸುವ ಕಾಯಕವನ್ನು ಬೀಉಮ್ಮರವರು ಅತ್ಯಂತ ಸೂಕ್ಷ್ಮತೆಯಿಂದ ನಿಭಾಯಿಸಿದರು. ಹಿಂದೂ ಮತ್ತು ಮುಸ್ಲಿಮ್ ಈ ದೇಶದ ಎರಡು ಕಣ್ಣುಗಳೆಂದು ಕರೆದ ವೀರಮಹಿಳೆಯೇ ಈ ಬೀಉಮ್ಮರವರು.

ಬೀಬಿ ಅಮತುಸ್ಸಲಾಮ್ ಎಂಬ ಮುಸ್ಲಿಮ್ ಹೋರಾಟಗಾರ್ತಿ ಗಾಂಧೀಜಿಯವರ ದತ್ತುಪುತ್ರಿಯೆಂದೇ ಚಿರಪರಿಚಿತರಾಗಿದ್ದರು. ಪಂಜಾಬಿನಲ್ಲಿ ಜನಿಸಿದ ಇವರು ತನ್ನ ಸಹೋದರ ಮುಹಮ್ಮದ್ ರಶೀದ್ ಖಾನ್ ಜೊತೆ ಸೇರಿ ದೇಶಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ” ಖಾದಿ ಚಳುವಳಿ”ಯಲ್ಲಿ ಭಾಗವಹಿಸಿದ ಇವರು 1931ರಲ್ಲಿ ಗಾಂಧೀಜಿಯವರ ” ಸೇವಾಗ್ರಮ್ ಆಶ್ರಮ”ವನ್ನು ಸೇರಿಕೊಂಡರು. ತನ್ನ ಬದುಕಿನ ಕೊನೆವರೆಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಇವರು ಇತಿಹಾಸದ ಪುಟಗಳಲ್ಲಿ ಗುರುತಿಸಿಕೊಂಡು ಯುವಪೀಳಿಗೆಗೆ ಮಾದರಿಯಾಗಬೇಕಾದ ಮಹಿಳೆ.

ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಯಾದ ಮತ್ತೊಬ್ಬ ವೀರಮಹಿಳೆ ಹಾಜಿರಾ ಬೇಗಮ್. ಉತ್ತರಪ್ರದೇಶದವರಾದ ಇವರು ಪೊಲೀಸ್ ಅಧಿಕಾರಿಯಾಗಿದ್ದ ತನ್ನ ತಂದೆಯಿಂದ ತರಬೇತಿ ಪಡೆದು ನಂತರ ಉನ್ನತ ವ್ಯಾಸಂಗಕ್ಕಾಗಿ ಲಂಡನಿಗೆ ತೆರಳಿ ಅಲ್ಲಿ ಹಲವಾರು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ವಿದ್ಯಾಭ್ಯಾಸ ಮುಗಿದು ಸ್ವದೇಶಕ್ಕೆ ಮರಳಿದ ಇವರು 1935ರಲ್ಲಿ “ಕರಾಮತ್ ಹುಸೈನ್” ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಯನ್ನು ಅಲಂಕರಿಸಿ ಅನೇಕ ವಿದ್ಯಾರ್ಥಿನಿಯರಿಗೆ ಹೋರಾಟದ ಸಿದ್ಧತೆಗಾಗಿ ತರಬೇತಿ ನೀಡುತ್ತಿದ್ದರು. “Progressive writer association”ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇವರಿಗಿದೆ. ಇವರು 1935ರಲ್ಲಿ ಡಾ.ಝೈನುಲ್ ಆಬಿದೀನ್ ಅಹಮದರನ್ನು ವಿವಾಹವಾದರು. ಈ ದಂಪತಿಗಳಿಬ್ಬರು” Indian national congress”ನಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಿಟಿಷರ ಅತಿಯಾದ ಒತ್ತಡಗಳಿಂದ ಬೇಸತ್ತ ಇವರು ಕೆಲಸಕ್ಕೆ ರಾಜಿನಾಮೆ ನೀಡಿ ಗಾಂಧೀಜಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಸಮಯದಲ್ಲಿ ಅವರು ವಿವಿಧ ವಿಷಯಗಳಲ್ಲಿ ಅಧ್ಯಯನ ಶಿಬಿರಗಳನ್ನು ನಡೆಸಿ ಜನರನ್ನು ಒಟ್ಟುಗೂಡಿಸುವ ಕಾಯಕವನ್ನು ಮುಂದುವರಿಸಿದರು. ಸಾಮಾಜಿಕ,ರಾಜಕೀಯ,ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಇವರ ಸೇವೆಯನ್ನು ಗುರುತಿಸಿದ ಸೋವಿಯತ್ ಯೂನಿಯನ್ ಇವರಿಗೆ “ಸುಪ್ರೀಮ್ ಸೋವಿಯತ್ ಜುಬಿಲಿ” ಪ್ರಶಸ್ತಿ ನೀಡಿ ಗೌರವಿಸಿತು. ತನ್ನ ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಇವರು 2003ನೇ ಜನವರಿ 20ರಂದು ವಿಧಿವಶರಾದರು.

ನಮ್ಮ ದೇಶದ ರಾಷ್ಟ್ರಧ್ವಜದ ವಿನ್ಯಾಸಕ್ಕೆ ಅಂತಿಮವಾಗಿ ಸಲಹೆ ನೀಡಿದ ಮಹಿಳೆ ಸುರಯ್ಯ ಬದ್ರುದ್ದೀನ್ ತಯ್ಯಿಬಿಯಾದರೆ ಖಾದಿಪ್ರೇಮವನ್ನು ಬದುಕಿನುದ್ದಕ್ಕೂ ಪಾಲಿಸಿದ ಕೀರ್ತಿ ಸಕೀನತುಲ್ ಫಾತಿಮಾರಿಗಿದೆ. ಜಹಾನರ ಶಹನಾಝ್ 1938ರಲ್ಲಿ ಪಂಜಾಬಿನ ” ವಿಮನ್ಸ್ ಮುಸ್ಲಿಮ್ ಲೀಗ್”ನ ಅಧ್ಯಕ್ಷರಾಗಿ ಆಯ್ಕೆಯಾದ ಮುಸ್ಲಿಮ್ ಮಹಿಳೆ. ಆತಿಯಾ, ಝೊಹರಾ ಮತ್ತು ನಾಝ್ಲೀ ಶಿಕ್ಷಣಕ್ಕಾಗಿ ಹೋರಾಡಿದ ಒಂದೇ ಮನೆಯ ಮುಸ್ಲಿಮ್ ಸಹೋದರಿಯರು. ಬಂಗಾಳದ ಶಾಯಿಸ್ತಾ ಇಕ್ರಾಮುಲ್ಲಾ 1940ರಲ್ಲಿ ಪಿಎಚ್ ಡಿ ಮಾಡಿದ ಮೊದಲ ಮುಸ್ಲಿಮ್ ಮಹಿಳೆ. ಬರಹದ ಮೂಲಕ ತನ್ನ ಹೋರಾಟದ ಕಿಚ್ಚನ್ನು ಜಗತ್ತಿಗೆ ತೋರಿಸಿದ ಧೀರ ಮಹಿಳೆ ಇವರಾಗಿದ್ದರು. ಅದೇ ರೀತಿ ಇಸ್ಮತ್ ಚುಗ್ತಾಯಿ, ರಶೀದ್ ಜಹಾನ್ ಸಹ ತಮ್ಮ ಲೇಖನಿ ಮೂಲಕ ಹೋರಾಡಿದ ಮುಸ್ಲಿಮ್ ಮಹಿಳೆಯರು.

ಇದೂ ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಇನ್ನೂ ಅನೇಕ ಮುಸ್ಲಿಮ್ ಮಹಿಳೆಯರಿದ್ದಾರೆ. ಅದರಲ್ಲಿ ಕೆಲವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವೆನು. ಅಕ್ಬರ್ ಬೇಗಮ್, ಆಮಿನಾ ಖುರೈಶಿ, ಆಮಿನಾ ತ್ವಬ್ಜಿ, ಅಮ್ಜದಿ ಬೇಗಮ್, ಆಯಿಶಾ ಅಹಮದ್, ಅಝೀಝನ್ ಬೇಗಮ್, ಖುರ್ಷಿದ್ ಖ್ವಾಜಾ, ಬೇಗಮ್ ನಿಶಾತುನ್ನಿಸಾ ಮೋಹನಿ, ಬೇಗಮ್ ರಾಣಾ ಲಿಯಾಖತ್ ಅಲಿ ಖಾನ್, ಬೇಗಮ್ ಸಕೀನಾ ಲುಕ್ಮಾನಿ, ಬೇಗಮ್ ಸುಲ್ತಾನಾ ಹಯಾತ್ ಅನ್ಸಾರಿ, ಬೇಗಮ್ ಝೀನತ್ ಮಹಾಮ್, ಡಾ.ದರ್ಖಶಾನ್ ಅಂಜುಮ್, ಫಾತಿಮಾ ಇಸ್ಮಾಯೀಲ್, ಫಾತಿಮಾ ತ್ವಯ್ಯಿಬ್ ಅಲಿ, ಫಾತಿಮಾ ಖುರೈಶಿ, ಹಾಮಿದಾ ತ್ವೇಗಮ್, ಹಾಝ್ರಾ ಬೀಬಿ ಇಸ್ಮಾಯೀಲ್, ಜಮಾಲುನ್ನಿಸಾ ಬಾಜಿ, ಕನೀಝ್ ಸಾಜಿದಾ ಬೇಗಮ್, ಖದೀಜಾ ಬೇಗಮ್, ಖುರ್ಷಿದ್ ಸಾಹಿಬಾ, ಕುಲ್ಸುಮ್ ಸಯಾನಿ, ಮಾಸೂಮಾ ಬೇಗಮ್, ರೈಬಾನ್ ತ್ವಾಬ್ಜಿ, ಡಾ. ರಶೀದ್ ಜಹಾನ್, ರಝಿಯಾ ಖಾತೂನ್, ಸದಕತ್ ಬಾನು ಕಿಚ್ಲಿವ್, ಸಫಿಯಾ ಸಾದ್ ಖಾನ್, ಶಫಾತುಲ್ ನಿಸಾ ಬೀಬಿ, ಶರೀಫ ಹಮೀದ್ ಅಲಿ, ಸುಗ್ರಾ ಖಾತೂನ್, ಸುಲ್ತಾನ ಹಯಾತ್ ಅನ್ಸಬ್ಜಿ, ಸಯ್ಯದ್ ಫಕ್ರುಲ್ ಹಾಝಿಯಾ ಹಸನ್, ಝಾಹಿದಾ ಖಾತೂನ್ ಶರ್ವಾನಿ, ಝೊಹರಾ ಅನ್ಸಾರಿ, ಝುಬೈದಾ ಬೇಗಮ್ ದಾವೂದಿ, ಝುಲೈಖಾ ಬೇಗಮ್ ಇವರೆಲ್ಲರು ದೇಶಕ್ಕಾಗಿ ಹೋರಾಡಿದ ವೀರ ಅಮ್ಮಂದಿರು. ಇವರ ಸೇವೆಗಳನ್ನು ಮತ್ತು ಇವರು ದೇಶಕ್ಕಾಗಿ ಅರ್ಪಿಸಿದ ಕೊಡುಗೆಗಳನ್ನು ಮರೆಯಲಾಗದು.

ಗಾಂಧೀಜಿಯವರ ಕೃತಿಗಳನ್ನು ಆಧಾರಿಸಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ವಿವರಿಸುವ ಪುಸ್ತಕಗಳು ಈಗಲೂ ಲಭ್ಯವಿದೆ. “Freedom Movement and Indian Muslim” ,  ಪಿ.ಎನ್. ಚೋಪ್ರಾ ಬರೆದ ” India’s struggle for freedom”, Muslims and freedom Movement in India”, ಮುಹಮ್ಮದ್ ಮುಝಫ್ಪರ್ ಇಮಾಮ್ ಬರೆದ ” Role of Muslim in the National Movement ” ಮತ್ತು ಹಸನ್ ಇಮಾಮ್ ಬರೆದ ” Indian National Movement ” ಮೊದಲಾದ ಪುಸ್ತಕಗಳಲ್ಲಿ ಮುಸ್ಲಿಮ್ ಹೋರಾಟಗಾರರ ಚರಿತ್ರೆ ಮತ್ತು ಹೋರಾಟದ ಕಿಚ್ಚನ್ನು ಕಾಣಲು ಸಾಧ್ಯ.

ಈ ಹೋರಾಟದ ಕಿಚ್ಚನ್ನು ಮತ್ತೊಮ್ಮೆ ಈ ಭೂಮಿಯಲ್ಲಿ ಜೀವಂತಗೊಳಿಸಬೇಕಾದ ಅಗತ್ಯತೆ ಎದುರಾಗಿದೆ. ಈ ನೆಲದಲ್ಲಿ, ನಮ್ಮ ರಾಷ್ಟ್ರಧ್ವಜದಲ್ಲಿ ನನ್ನ ಅಮ್ಮಂದಿರರ ರಕ್ತದ ಕಲೆಗಳಿವೆ. ದಿಟ್ಟ ನಿಲುವಿದೆ, ಧೈರ್ಯದ ಪಾಠಗಳಿವೆ, ಶಾಂತಿಯ ಉಸಿರಿದೆ. ಅವರನ್ನು ಮುನ್ನಡೆಸುವ ನಾಯಕರು ಅಂದು ದಾರಾಳ ಸಂಖ್ಯೆಯಲ್ಲಿದ್ದರು. ಆದರೆ ಇಂದು ಅವರಿಟ್ಟ ಹೆಜ್ಜೆಯನ್ನು ಹಿಂದೆ ಸರಿಸುವಂತಹ ಒತ್ತಡದ ಮಾತುಗಳೇ ತುಂಬಿವೆ. ಆದರೂ ನನ್ನ ಸಹೋದರಿಯರು ಹಿಂದೆ ಸರಿಯಲಿಚ್ಛಿಸಲಾರರು. ನಾವು ಕಳೆದುಕೊಂಡಿರುವ ಸಂವಿಧಾನದ ಆಶಯಗಳನ್ನು ಪಡೆಯಬೇಕಾದರೆ ಅವರನ್ನು ಜೊತೆ ಸೇರಿಸುವ ಹೃದಯಗಳ ಅವಶ್ಯಕತೆ ತುಂಬಾ ಇದೆ. ಎಲ್ಲರೂ ಜೊತೆಗೂಡಿ ಈ ದೇಶದ ಸ್ವಾಸ್ಥ್ಯವನ್ನು ಉಳಿಸಬೇಕಾಗಿದೆ. ಜೊತೆಗೆ ಕೋಮುವಾದ ಗರಡಿಯಲ್ಲಿ ಮುಳುಗಿದವರ ಹೃದಯ ಪರಿವರ್ತನೆಯ ಮೂಲಕ ಮುರಿದು ಬೀಳುತ್ತಿರುವ ಭಾರತವನ್ನು ಜೊತೆಯಾಗಿ ಕಟ್ಟಬೇಕಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಸಿಹಾನಾ ಬಿ ಎಂ
ಶಿಕ್ಷಕಿ ಮತ್ತು ಬರಹಗಾರ್ತಿ