Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸುಳ್ಳು ಮಾಹಿತಿ ಹಂಚಿ ಪೇಚಿಗೆ ಸಿಲುಕಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

ಸುಳ್ಳು ಮಾಹಿತಿ ಹಂಚಿ ಪೇಚಿಗೆ ಸಿಲುಕಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

0

2019 ರ ಹಳೆಯ ವಿಡಿಯೋ ಒಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಪೇಚಿಗೆ ಸಿಲುಕಿದ್ದಾರೆ ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ್ ಮಾಳವೀಯ.

ಕೆಲವು ಯೋಜನೆಗಳ ಲೋಕಾರ್ಪಣೆ ಮತ್ತು ಫಲಾನುಭವಿಗಳ ಸಮಾವೇಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದ ದಿನ ಮಂಗಳೂರಿಗೆ ಆಗಮಿಸಿದ್ದರು. ಮೋದಿ ಎದುರು ಜನ ಸೇರಿಸಲು ರಾಜ್ಯ ಸರ್ಕಾರ ತನ್ನೆಲ್ಲಾ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಿ ಅಧಿಕಾರಿಗಳನ್ನೆಲ್ಲಾ ಜನ ಕರೆತರುವ ಕಾರ್ಯಕರ್ತರ ಕೆಲಸಕ್ಕೆ ನಿಯೋಜಿಸಿತ್ತು.

ಮಾಹಿತಿಯ ಪ್ರಕಾರ ಕೆಲವು ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಮೇಲಾಗಿ ಗೋಲ್ಡ್ ಫಿಂಚ್ ಮೈದಾನ ಕೇವಲ ಒಂದು ಲಕ್ಷ ಮಂದಿ ಅಷ್ಟೆ ಸೇರಬಹುದಾದ ಜಾಗವಾಗಿದ್ದು ಬಿಜೆಪಿ ಪಕ್ಷದ ಕಾರ್ಯಕರ್ತರು ಎರಡು ಮೂರು ಲಕ್ಷ ಜನ ಸೇರಿದ್ದಾರೆ ಎಂದು ತಮ್ಮ ಜಾಲತಾಣಗಳಲ್ಲಿ ದಾಖಲಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಅಮಿತ್ ಮಾಳವೀಯ 2019 ರಲ್ಲಿ ನಡೆದ ಕೋಲ್ಕತ್ತಾ ಸಮಾವೇಶದ ವಿಡಿಯೋ ಒಂದನ್ನು ಹಂಚಿಕೊಂಡು ಇದು ಮಂಗಳೂರಿನಲ್ಲಿ ಸೇರಿದ ಜನಸ್ತೋಮ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಧ್ಯ ಈ ಸುಳ್ಳು ಮಾಹಿತಿಯನ್ನು ಕೆಲವು ಫ್ಯಾಕ್ಟ್ ಚೆಕ್ ವೆಬ್ಸೈಟ್ ಗಳು ಬಯಲು ಮಾಡಿದ ನಂತರ ಆ ಟ್ವಿಟ್ ನ್ನು ಅಳಿಸಿ ಹಾಕಿದ್ದಾರೆ.

ಅಮಿತ್ ಮಾಳವೀಯ ಅವರ ಟ್ವಿಟ್ಟರ್ ಖಾತೆಯನ್ನು ಸುಮಾರು 6 ಲಕ್ಷಕ್ಕೂ ಹೆಚ್ಚು ಮಂದಿ ಅನುಸರಿಸುತ್ತಿದ್ದು ಬಹುತೇಕರು ಈ ವಿಡಿಯೋವನ್ನೇ ಸತ್ಯ ಎಂದು ಈಗಲೂ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ. ತಮಾಷೆ ವಿಷಯ ಎಂದರೆ ಇದೇ ವಿಡಿಯೋವನ್ನು ಅಮಿತ್ ಮಾಳವೀಯ #DeshKeLiyeModi ಎಂಬ ಹ್ಯಾಶ್ ಟಾಗ್ ನ ಅಡಿಯಲ್ಲಿ 2019 ರಲ್ಲೂ ಟ್ವಿಟ್ ಮಾಡಿದ್ದು ಕಾಣಬಹುದು.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರವಾಗುತ್ತಿದ್ದು ಬಿಜೆಪಿ ಫೇಕ್ ಫ್ಯಾಕ್ಟರಿ ವಿರುದ್ಧ ನೆಟ್ಟಿಗರು ಟ್ರೋಲ್ ಶುರು ಮಾಡಿದ್ದಾರೆ. ಇಂತಹ ಹಲವಷ್ಟು ಅಂಶಗಳನ್ನು ಈ ಹಿಂದೆ ಅಮಿತ್ ಮಾಳವೀಯ ಹಂಚಿಕೊಂಡು ಸತ್ಯ ಬಯಲಾದ ನಂತರ ಅಳಿಸಿ ಹಾಕಿದ್ದು ಇತಿಹಾಸ. ದುರಂತ ಎಂದರೆ ಅವರು ಅಳಿಸಿ ಹಾಕಿದ್ದನ್ನೂ ಗಣನೆಗೆ ತಗೆದುಕೊಳ್ಳದೆ ಎಷ್ಟೋ ಮಂದಿ ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಮಾಜಕ್ಕೆ ತಪ್ಪು ಸಂದೇಶ ಕೊಟ್ಟಂತಾಗುತ್ತಿದೆ.

You cannot copy content of this page

Exit mobile version