ಲೈಂಗಿಕ ದೌರ್ಜನ್ಯದ ಆರೋಪ: ಕಾಂಗ್ರೆಸ್ ನಾಯಕ ಬಂಧನ
ಲಿಂಕ್ ನಕಲಿಸಲಾಗಿದೆ ✓

ಧಾರವಾಡ: ಲೈಂಗಿಕ ಕಿರುಕುಳ ಪ್ರಕರಣದ ಮೇಲೆ ಕರ್ನಾಟಕ ಕಾಂಗ್ರೆಸ್ ಮುಖಂಡ ಮನೋಜ್ ಕರ್ಜಗಿ ಅವರನ್ನು ಧಾರವಾಡದಲ್ಲಿ ಪೊಲೀಸರು ಬಂದಿಸಿದ್ದಾರೆ.
ಈ ಹಿನ್ನಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಎ) ಅಡಿಯಲ್ಲಿ ನಾಯಕನನ್ನು ಬಂಧಿಸಿದ್ದು, ಆತನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾರೆ.
ಸದ್ಯ ಮನೋಜ್ ಕರ್ಜಗಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ಪ್ರಕಾರ ಶನಿವಾರ, ಸೆಪ್ಟೆಂಬರ್ 17ರಂದು ಯುನಿಸೆಕ್ಸ್ ಸಲೂನ್‌ಗೆ ಬಂದಿದ್ದ ಮನೋಜ್, ಸಲೂನ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕ (19)ಅವರನ್ನು ತಬ್ಬಿಕೊಂಡು ಮುತ್ತು ಕೊಡಲು ಪ್ರಯತ್ನಿಸಿದ್ದಾನೆ ಎಂದು ಸಂತ್ರಸ್ಥೆ ದೂರಿನಲ್ಲಿ ತೀಳಿಸಿದ್ದಾರೆ.
ಘಟನೆಯಾದ ಬಳಿಕ ಆಕೆಯು ತನ್ನ ಗೆಳಯನಿಗೆ ವಿಷಯ ತಿಳಿಸಿದ್ದು, ನಂತರ ಆತನು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದು ಕಾಂಗ್ರೆಸ್ ನಾಯಕನಿಗೆ ಥಳಿಸಿದ್ದಾರೆ.
Peepal Media
Peepal Media · ಬ್ರೇಕಿಂಗ್ ಸುದ್ದಿ ವಿಭಾಗ
