ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

“ಮಾತನಾಡಲೇಬೇಕಿತ್ತು, ಮಾತಾಡಿದ್ದೇನೆ” ; ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ನಾದವ್ ಲ್ಯಾಪಿಡ್

P

Peepal Media Desk • ಬ್ರೇಕಿಂಗ್ ಸುದ್ದಿ

• 2 ನಿಮಿಷದ ಓದು

“ಮಾತನಾಡಲೇಬೇಕಿತ್ತು, ಮಾತಾಡಿದ್ದೇನೆ” ; ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡ ನಾದವ್ ಲ್ಯಾಪಿಡ್

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ತಾನು ಆಡಿದ ಮಾತನ್ನು ನಾದವ್ ಲ್ಯಾಪಿಡ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಇಂತಹದ್ದೊಂದು ತೀರ್ಪು ಕೊಡಲೇಬೇಕಿತ್ತು. ಕೊಟ್ಟಿದ್ದೇನೆ ಎಂದು ಮತ್ತೊಮ್ಮೆ ಖಡಕ್ಕಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನೆಮಾವನ್ನು ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಸಭ್ಯತೆಯ ಚಿತ್ರ ಎಂದು ತೀರ್ಪುಗಾರ ಸಮಿತಿ ಮುಖ್ಯಸ್ಥರಾಗಿದ್ದ ನಾದವ್ ಲ್ಯಾಪಿಡ್ ಹೇಳಿದ ನಂತರ ಸಿನಿಮಾದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸೇರಿದಂತೆ ಭಾರತದ ಬಲಪಂಥೀಯ ಹಿನ್ನೆಲೆಯ ವ್ಯಕ್ತಿಗಳು ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಈ ಬಗ್ಗೆ ಭಾರತದಾದ್ಯಂತ ಸಧ್ಯ ಬಿಸಿಬಿಸಿ ಚರ್ಚೆಯ ನಡುವೆ ಇಸ್ರೇಲ್ ದೇಶದ ಹೆಸರಾಂತ ಸಿನಿಮಾ ನಿರ್ದೇಶಕ ನಾದವ್ ಲ್ಯಾಪಿಡ್ ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಇಸ್ರೇಲ್ ಸುದ್ದಿ ವೆಬ್ಸೈಟ್ ynet ನೊಂದಿಗೆ ಹಿಬ್ರೂ ಭಾಷೆಯಲ್ಲಿ ಮಾತನಾಡಿದ ನಾದವ್ ಲ್ಯಾಪಿಡ್, “ಇಲ್ಲಿ ಎಲ್ಲವೂ ವಿಚಿತ್ರವಾಗಿದೆ. ಈ ಸಿನಿಮಾವನ್ನು ಭಾರತ ಸರ್ಕಾರ ಮಾಡದೇ ಇದ್ದರೂ ತಾನೇ ಮಾಡಿದ ಸಿನಿಮಾ ಎಂಬಂತೆ ಪ್ರೋತ್ಸಾಹಿಸಿದೆ. ಕಾಶ್ಮೀರದ ಕುರಿತು ಸರ್ಕಾರದ ನಿಲುವು ಏನಿದೆಯೋ ಅದನ್ನಷ್ಟೇ ಈ ಸಿನಿಮಾ ಸಮರ್ಥಿಸುತ್ತಿದೆಯಲ್ಲದೆ ಅದರಲ್ಲಿ ಫ್ಯಾಸಿಸ್ಟ್‌ ಲಕ್ಷಣಗಳಿವೆ” ಎಂದು ಹೇಳಿದ್ದಾರೆ.

“ದೇಶದ ಹೊರಗಿನ ಶತ್ರುವಿನ ಜೊತೆಗೆ ದೇಶದ ಒಳಗಿನ ವಿದ್ರೋಹಿಗಳು ಇರುತ್ತಾರೆ” ಎಂದು ಹೇಳುವ ವಿಧಾನ ಸರ್ವೇಸಾಮಾನ್ಯವಾದದ್ದು” ಎಂದವರು ತಿಳಿಸಿದ್ದಾರೆ.

ಬಿಜೆಪಿ ಪಕ್ಷದ ಹಲವಾರು ಮುಖಂಡರು ಅತ್ಯಂತ ಆಸಕ್ತಿಯಿಂದ ಉತ್ತೇಜನ ನೀಡಿದ್ದ ʼಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಸಾಕಷ್ಟು ಚರ್ಚೆಗಳು ದೇಶದಲ್ಲಿ ನಡೆದಿವೆ. ಕೆಲವು ವಾಸ್ತವಿಕ ಸಂಗತಿಗಳ ಅರ್ಧ ಸತ್ಯದ ಜೊತೆಗೆ ಅನೇಕ ಅವಾಸ್ತವಿಕ ಮತ್ತು ಉತ್ಪ್ರೇಕ್ಷಿತ ಅಂಶಗಳನ್ನೂ ಸೇರಿಸಿ ಭಾವನಾತ್ಮಕ ಪ್ರಚಾರ ಸಿನಿಮಾವಾಗಿ ಮಾಡಲಾಗಿದೆ ಎಂಬ ಆರೋಪಗಳು ಈ ಸಿನಿಮಾದ ಕುರಿತು ಕೇಳಿಬಂದಿದ್ದವು. ಈಗ ಇಸ್ರೇಲಿನ ಸಿನಿಮಾ ನಿರ್ದೇಶಕರೊಬ್ಬರು ಬಂದು ಸಿನಿಮಾದ ಕುರಿತು ಅಪ್ರಿಯ ನುಡಿಗಳನ್ನಾಡಿರುವುದು ಸಿನಿಮಾ ಪರವಾಗಿ ಪ್ರಚಾರ ಮಾಡಿದ್ದವರಿಗೆ ಮುಜುಗರ ಉಂಟುಮಾಡಿದೆ ಮಾತ್ರವಲ್ಲದೇ ಸ್ವತಃ ಇಸ್ರೇಲಿನ ಅಧಿಕಾರಿಗಳೂ ಕಸಿವಿಸಿಕೊಂಡಿದ್ದಾರೆ. ಇಸ್ರೇಲಿನ ರಾಯಭಾರಿಗಳು ನಡಾವ್‌ ಲ್ಯಾಪಿಡ್‌ ಅವರ ಅಭಿಪ್ರಾಯವನ್ನು ಖಂಡಿಸಿ ಹೇಳಿಕೆಯನ್ನೂ ನೀಡಿದ್ದರು. ಆದರೆ ಇದ್ಯಾವುದಕ್ಕೂ ನಡಾವ್‌ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

ಸಿನಿಮಾ ವೀಕ್ಷಣೆಯ ನಂತರ ನಡೆದ ತಮ್ಮ ಸಂದರ್ಶನದಲ್ಲಿ ಲ್ಯಾಪಿಡ್‌ ಅವರು, ಸಿನಿಮಾ ನೋಡಿದಾಗ ಅದರಲ್ಲಿ ಪ್ರೊಪಗಾಂಡಾ ಮತ್ತು ಫ್ಯಾಸಿಸಂ ಅಂಶಗಳನ್ನು ಹಾಗೂ ಅಸಭ್ಯತೆಗಳನ್ನು (vulgarity) ಕಂಡು ತಮಗೆ ಆಘಾತವಾಯಿತು ಎಂದಿದ್ದರು. ಇದೇ ತರದ ಇಸ್ರೇಲಿ ಸಿನಿಮಾವೊಂದು ಒಂದೆರಡು ವರ್ಷಗಳಲ್ಲಿ ಬರಬಹುದೇನೋ ಎಂದು ಕಲ್ಪಿಸಿಕೊಂಡಿದ್ದಾಗಿ ಹೇಳಿದರು.

ʼನಿಮ್ಮ ಅಭಿಪ್ರಾಯಕ್ಕೆ ತೀವ್ರ ಟೀಕೆ ಬರುವ ಕುರಿತು ನಿಮಗೆ ನಿರೀಕ್ಷೆಯಿತ್ತೇ?ʼ ಎಂಬ ಪ್ರಶ್ನೆಗೆ ಲ್ಯಾಪಿಡ್‌ ಅವರು, ತಮ್ಮ ಅಭಿಪ್ರಾಯ ತಿಳಿಸುವಾಗ ತಾವು ʼಆತಂಕಗೊಂಡಿದ್ದಾಗಿʼ ಹೇಳಿದ್ದಾರೆ. ʼನನ್ನ ಸ್ಥಿತಿ ಅಷ್ಟು ಸುಲಭದ್ದಾಗಿರಲಿಲ್ಲ. ನಾನೊಬ್ಬ ಅತಿಥಿಯಾಗಿದ್ದೆ. ಅಲ್ಲದೇ ತೀರ್ಪುಗಾರರ ತಂಡದ ಅಧ್ಯಕ್ಷನಾಗಿದ್ದೆ. ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡಿದ್ದರು. ಹೀಗಿರುವಾಗ ನಾನು ಬಂದು ಆ ಸಿನಿಮಾ ಹಬ್ಬದಲ್ಲಿ ಟೀಕೆ ಮಾಡುವುದು ಎಂದರೆ ಸುಲಭದ್ದಾಗಿರಲಿಲ್ಲ. ಒಂದು ಬಗೆಯ ಅಳುಕು ಮತ್ತು ಅಸಮಧಾನವೂ ನನಗೆ ಉಂಟಾಗಿತ್ತುʼ ಎಂದು ಹೇಳಿದ್ದ ನಡಾವ್‌, ʼಈಗ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಾಗ ನಾನು ಖುಶಿಯಾಗಿದ್ದೇನೆ ಎಂದಷ್ಟೇ ಹೇಳಬಹುದುʼ ಎಂದಿದ್ದಾರೆ.

ಒಂದು ವೇಳೆ‌ ತನ್ನ ಇಸ್ರೇಲ್ ದೇಶದಲ್ಲಿ ವಿದೇಶಿ ತೀರ್ಪುಗಾರರ ಅಧ್ಯಕ್ಷನೊಬ್ಬ ತಮ್ಮ ದೇಶದ ಸಿನಿಮಾವೊಂದರೆ ಬಗ್ಗೆ ತೀಕ್ಷ್ಣ ವಿಮರ್ಶೆ ಮಾಡಿದರೆ ನನಗದು ಸಮಾಧಾನ ಕೊಡದಿದ್ದರೂ ʼಸಂತೋಷʼ ಎನಿಸುತ್ತದೆʼ ಎಂದು ಹೇಳಿರುವ ನದಾವ್‌ ಲ್ಯಾಪಿಡ್‌, ʼನಿಮಗನಿಸಿದ್ದನ್ನು ಮಾತನಾಡುವ ಅಥವಾ ಸತ್ಯ ಹೇಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೊಬ್ಬರು ಮಾತಾಡಲೇಬೇಕಿರುತ್ತದೆ. ಈ ಸಿನಿಮಾ ನೋಡಿದಾಗ ನಾನು ಇಂತಹುದೇ ಒಂದು ಸಿನಿಮಾ ಇಸ್ರೇಲ್‌ನಲ್ಲಿ ಬರುವುದನ್ನು ಊಹಿಸಿಕೊಳ್ಳದೇ ಇರಲು ಸಾಧ್ಯವಾಗಲೇ ಇಲ್ಲ. ಇದುವರೆಗೆ ಇಂತಹ ಸಿನಿಮಾ ಅಲ್ಲಿ ಇಲ್ಲದಿರಬಹುದು ಆದರೆ ಖಂಡಿತಾ ಮುಂದೆ ಬರಬಹುದು. ಹೀಗಾಗಿಯೇ ನಾನು ಮಾತಾಡಲೇಬೇಕಾಯ್ತು” ಎಂದರು.

P

Peepal Media Desk

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version