ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆ ; ಮಾರ್ಗಸೂಚಿ ಪಾಲಿಸಲು ಆರೋಗ್ಯ ಇಲಾಖೆ ಮನವಿ
ಲಿಂಕ್ ನಕಲಿಸಲಾಗಿದೆ ✓

ರಾಜ್ಯದಲ್ಲಿ ಕೊರೊನಾ ವೈರಸ್ಗೆ ಮೊದಲ ಸಾವಿನ ಬೆನ್ನಲ್ಲೇ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಆರೋಗ್ಯ ಇಲಾಖೆ ಕೂಡ ಇಂದು ಕೋವಿಡ್ ಗೈಡ್ ಲೈನ್ ಬಿಡುಗಡೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆ ಜೊತೆಗೇ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 47 ಕ್ಕೆ ಏರಿಕೆ ಕಂಡಿದೆ.
ಕಳೆದ 24 ಗಂಟೆಯಲ್ಲಿ ಬೆಂಗಳೂರಲ್ಲಿ 9 ಮಂದಿಗೆ ಕೊರೋನಾ ಪಾಸಿಟಿವ್ ಇದೆ ಎಂದು ದೃಢಪಟ್ಟಿದೆ. ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ RTPCR ಮೂಲಕ 96, RAT ಮೂಲಕ 8 ಮಂದಿ ಸೇರಿದಂತೆ 104 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದವರಲ್ಲಿ 9 ಮಂದಿಗೆ ಕೋವಿಡ್ ದೃಢವಾಗಿದೆ.
ರಾಜ್ಯದಲ್ಲಿ ಇದೀಗ 47 ಕೊರೋನಾ ಪಾಸಿಟಿವ್ ಕೇಸ್ ಇವೆ. 46 ಮಂದಿ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಒಬ್ಬರು ಮಾತ್ರವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರ ತಿಳಿಸಿದೆ.
P
Peepal Media Desk
Peepal Media · ಆರೋಗ್ಯ ವಿಭಾಗ
ಹಿಂದಿನ ಸುದ್ದಿ
