ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

9 ವರ್ಷಗಳ ಬಳಿಕ ಮೊದಲ ಸಂದರ್ಶನದಲ್ಲಿ ವಿಜಯ್ ಮಲ್ಯ ಹೇಳಿದ್ದೇನು.? ಭಾರತಕ್ಕೆ ಮರಳುವ ಬಗ್ಗೆ ಮಲ್ಯ ಹೇಳಿದ್ದೇನು?

P
9 ವರ್ಷಗಳ ಬಳಿಕ ಮೊದಲ ಸಂದರ್ಶನದಲ್ಲಿ ವಿಜಯ್ ಮಲ್ಯ ಹೇಳಿದ್ದೇನು.? ಭಾರತಕ್ಕೆ ಮರಳುವ ಬಗ್ಗೆ ಮಲ್ಯ ಹೇಳಿದ್ದೇನು?

₹9,000 ಕೋಟಿಗೂ ಹೆಚ್ಚು ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಉದ್ಯಮಿ ವಿಜಯ್ ಮಲ್ಯ, ಉದ್ಯಮಿ ರಾಜ್ ಶಮಾನಿ ಅವರೊಂದಿಗೆ ನಾಲ್ಕು ಗಂಟೆಗಳ ಪಾಡ್‌ಕ್ಯಾಸ್ಟ್ ಸಂಭಾಷಣೆಯಲ್ಲಿ ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಮಾತನಾಡಿದರು. ವಿಶೇಷವಾಗಿ ತನ್ನ ಮೇಲಿರುವ ಆರೋಪಗಳು ಕಲ್ಪಿತ ಮತ್ತು ಉದ್ದೇಶಪೂರ್ವಕ ಹಗೆ ಇದೆ ಎಂಬುದನ್ನು ವಿಜಯ್ ಮಲ್ಯ ಹೇಳಿದ್ದಾರೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ, ಭಾರತದಿಂದ ತಮ್ಮ ವಿವಾದಾತ್ಮಕ ನಿರ್ಗಮನ, ಕಾನೂನು ಹೋರಾಟಗಳು, ತಮ್ಮ ವಿಮಾನಯಾನ ಸಂಸ್ಥೆಯ ಪತನ ಮತ್ತು ‘ಕಳ್ಳ’ ಎಂದು ಕರೆಯಲ್ಪಟ್ಟಿರುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದರು.

2016 ರ ಮಾರ್ಚ್ ತಿಂಗಳ ನಂತರ ನಾನು ಭಾರತಕ್ಕೆ ಹಿಂತಿರುಗದಿದ್ದಕ್ಕಾಗಿ ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಿರಿ. ಆದರೆ ನಾನೆಲ್ಲೂ ಓಡಿ ಹೋಗಿಲ್ಲ. ಪೂರ್ವನಿಗದಿತ ಭೇಟಿಗಾಗಿ ಭಾರತದಿಂದ ಹೊರಟೆ. ಸರಿ, ನಾನು ಮಾನ್ಯವೆಂದು ಪರಿಗಣಿಸುವ ಕಾರಣಗಳಿಗಾಗಿ ಹಿಂತಿರುಗಲಿಲ್ಲ, ಆದ್ದರಿಂದ ನೀವು ನನ್ನನ್ನು ಪರಾರಿಯಾಗಿದ್ದಾನೆ ಎಂದು ಕರೆಯಲು ಬಯಸಿದರೆ, ಮುಂದುವರಿಯಿರಿ, ಆದರೆ ‘ಕಳ್ಳ’ ಎಂಬ ಪದ ಎಲ್ಲಿಂದ ಬರುತ್ತಿದೆ. ‘ಚೋರಿ’ ಎಲ್ಲಿಂದ?” ಎಂದು ಪ್ರಶ್ನೆ ಮಾಡಿದ್ದಾರೆ.

ನ್ಯಾಯಯುತ ತನಿಖೆ, ಗೌರವಯುತ ನಡೆಯ ಭರವಸೆ ನೀಡಿದರೆ ಭಾರತಕ್ಕೆ ಹಿಂತಿರುಗುತ್ತೀರಾ ಎಂದು ಉದ್ಯಮಿ ರಾಜ್ ಶಮಾನಿ ನೇರವಾಗಿ ಪ್ರಶ್ನೆ ಕೇಳಿದಾಗ , ಮಲ್ಯ, “ನನಗೆ ಖಚಿತವಾದರೆ, ನಾನು ಅದರ ಬಗ್ಗೆ ಗಂಭೀರವಾಗಿ ಯೋಚಿಸುತ್ತೇನೆ” ಎಂದು ಉತ್ತರಿಸಿದರು.

ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪತನವನ್ನು ಪುನರ್ವಿಮರ್ಶಿಸಿದ ಮಲ್ಯ, 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಒಂದು ಪ್ರಮುಖ ಪ್ರಚೋದಕ ಎಂದು ಹೇಳಿದರು. “ನೀವು ಎಂದಾದರೂ ಲೆಹ್ಮನ್ ಬ್ರದರ್ಸ್ ಬಗ್ಗೆ ಕೇಳಿದ್ದೀರಾ? ನೀವು ಎಂದಾದರೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕೇಳಿದ್ದೀರಾ? ಅದು ಭಾರತದ ಮೇಲೆ ಪರಿಣಾಮ ಬೀರಲಿಲ್ಲವೇ? ಖಂಡಿತಾ ಅದು ಭಾರತದ ಆರ್ಥಿಕ ವ್ಯವಸ್ಥೆಗೂ ತೀವ್ರ ಸಮಸ್ಯೆ ಆಗಿದೆ,” ಎಂದು ಅವರು ರಾಜ್ ಶಮಾನಿಯೊಂದಿಗೆ ಹೇಳಿದರು. “ಪ್ರತಿಯೊಂದು ವಲಯಕ್ಕೂ ಹೊಡೆತ ಬಿದ್ದಿತು. ಹಣ ನಿಂತುಹೋಯಿತು. ಹಣದ ಹರಿವು ನಿಂತು ಹೋಯಿತು. ಭಾರತೀಯ ರೂಪಾಯಿಯ ಮೌಲ್ಯಕ್ಕೂ ಸಹ ಹೊಡೆತ ಬಿದ್ದಿತು. ಆ ಸಂದರ್ಭದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸಂಪೂರ್ಣ ನಷ್ಟಕ್ಕೆ ತುತ್ತಾಗಿತ್ತು, ಎಂದು ವಿಜಯ್ ಮಲ್ಯ ಹೇಳಿದರು.

ಬರೋಬ್ಬರಿ 4 ಗಂಟೆಗೂ ಹೆಚ್ಚು ಸಮಯದ ಪಾಡ್ ಕಾಸ್ಟ್ ನಲ್ಲಿ ವಿಜಯ್ ಮಲ್ಯ ಭಾರತೀಯ ಮಾಧ್ಯಮಗಳು ಅತಿರೇಕದ ವರ್ತನೆ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳ ಹೊಣೆಗೇಡಿತನದ ಬಗ್ಗೆ ಮಾತನಾಡುತ್ತಾ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹೆಸರನ್ನೂ ಪ್ರಸ್ತಾಪಿಸದೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಲ್ಯ ನನ್ನನ್ನು ಪರಾರಿಯಾದವ ಎಂದರೂ ಪರವಾಗಿಲ್ಲ, ಆದರೆ ನೇರವಾಗಿ ಕಳ್ಳ, ಚೋರ್ ಎಂಬ ಪದ ಬಳಸಿದ್ದಾರೆ.. ಈ ಬಗ್ಗೆ ನನಗೆ ತಕರಾರಿದೆ ಎಂದು ಮಲ್ಯ ಹೇಳಿದ್ದಾರೆ.

ಭಾರತದ ಇಂದಿನ ಆರ್ಥಿಕ ಸ್ಥಿತಿ ಮತ್ತು ಅಂದು ತಾನೆಂತಾ ಒತ್ತಡಕ್ಕೆ ಸಿಕ್ಕಿದ್ದು ಎಂಬ ಬಗ್ಗೆಯೂ ಪ್ರಸ್ತಾಪಿಸಿದ ಮಲ್ಯ ತನ್ನನ್ನು ವ್ಯವಸ್ಥಿತವಾಗಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ.

ಸಂದರ್ಶನದ ವೇಳೆ ಮಲ್ಯ ಮಾಡಿದ ಹೇಳಿಕೆಗಳಿಗೆ ಭಾರತ ಸರ್ಕಾರ ಇನ್ನೂ ಸಹ ಪ್ರತಿಕ್ರಿಯಿಸಿಲ್ಲ.

P

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version