ಅಪರಾಧ – Peepal Media

ಡಿಜಿಪಿ ರಾಮಚಂದ್ರ ರಾವ್‌ಗೆ ಡಬಲ್ ಶಾಕ್: ‘ವೈರಲ್ ವಿಡಿಯೋ’ ಅಸಲಿ ಎಂದ FSL ವರದಿ!
ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಹರಿದಾಡಿದ್ದ ವಿಡಿಯೋಗಳು ಕೃತಕ ಬುದ್ಧಿಮತ್ತೆ (AI) ಸೃಷ್ಟಿಯಲ್ಲ, ನಿಜವಾದವುಗಳೇ ಎಂದು ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಈ ಹಿಂದೆ ವೈರಲ್ ಆದ ವಿಡಿಯೋಗಳು ತಮ್ಮ ತೇಜೋವಧೆಗೆ ಎಐ ಮೂಲಕ ಸೃಷ್ಟಿಸಲಾಗಿದೆ ಎಂದು ರಾಮಚಂದ್ರ ರಾವ್ ಆರೋಪಿಸಿದ್ದರು. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಜ್ಞರು ಸುಮಾರು 100ಕ್ಕೂ ಹೆಚ್ಚು ಪುಟಗಳ ಸಮಗ್ರ ವರದಿಯಲ್ಲಿ ವಿಡಿಯೋಗಳ ನೈಜತೆಯನ್ನು ದೃಢಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

2016-17ರಲ್ಲಿ ಬೆಳಗಾವಿ ವಲಯ ಐಜಿಪಿ ಆಗಿದ್ದ ಅವಧಿಯಲ್ಲಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಬಂಧಿತ ಸಿಬ್ಬಂದಿಯಿಂದ ಹೇಳಿಕೆಗಳನ್ನು ಕೂಡ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.

ಇದಲ್ಲದೆ, ವಿಡಿಯೋ ಬೆಳಕಿಗೆ ಬಂದ ನಂತರ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳೆಯರು ನಾಪತ್ತೆಯಾಗಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ. ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ನಡುವೆ, ಡಿಪಿಎಆರ್‌ನಿಂದ ರಾಮಚಂದ್ರ ರಾವ್ ಅವರಿಗೆ ನೋಟಿಸ್ ಜಾರಿಯಾಗಿದ್ದು, ಮೇ 31ರಂದು ನಿವೃತ್ತಿಗೆ ಸಜ್ಜಾಗಿರುವ ಅವರಿಗೆ ಕಾನೂನು ಸಂಕಷ್ಟ ಗಂಭೀರವಾಗುವ ಸಾಧ್ಯತೆ ಇದೆ.

ಉನಾ ದೌರ್ಜನ್ಯ ಪ್ರಕರಣ: 10 ವರ್ಷಗಳ ನಂತರ ತೀರ್ಪು; ಶಿಕ್ಷೆಗಿಂತ ಮೊದಲೇ ಬಿಡುಗಡೆಗೆ ಅರ್ಹರಾದ ಆರೋಪಿಗಳು!
ದೇಶವನ್ನೇ ಬೆಚ್ಚಿಬೀಳಿಸಿದ್ದ 2016ರ ಉನಾ ದಲಿತ ದೌರ್ಜನ್ಯ ಪ್ರಕರಣದಲ್ಲಿ ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ವೆರಾವಲ್ ಸೆಷನ್ಸ್ ನ್ಯಾಯಾಲಯವು 340 ಪುಟಗಳ ತೀರ್ಪನ್ನು ನೀಡಿದೆ. ಆದರೆ, ಈ ತೀರ್ಪು ಸಂತ್ರಸ್ತರಿಗೆ ನಿಜವಾದ ನ್ಯಾಯ ಒದಗಿಸಿದೆಯೇ ಅಥವಾ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗಳು ಈಗ ಕಾಡುತ್ತಿವೆ.

ಪ್ರಕರಣದ ಒಟ್ಟು 40 ಆರೋಪಿಗಳ ಪೈಕಿ 35 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನಿರ್ದೋಷಿಗಳೆಂದು ಬಿಡುಗಡೆ ಮಾಡಿರುವುದು ಸಂತ್ರಸ್ತ ಕುಟುಂಬಗಳಲ್ಲಿ ತೀವ್ರ ನಿರಾಶೆ ಮತ್ತು ಅಸುರಕ್ಷತೆಯ ಭಾವನೆಯನ್ನು ಮೂಡಿಸಿದೆ. ಬಿಡುಗಡೆಯಾದವರಲ್ಲಿ ಪೊಲೀಸರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪ್ರಭಾವಿಗಳು ಸೇರಿದ್ದಾರೆ ಎನ್ನಲಾಗುತ್ತಿರುವುದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪರೀಕ್ಷಿಸುವಂತಿದೆ.

ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ದೌರ್ಜನ್ಯ ತಡೆ ಕಾಯಿದೆಯಡಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆಯಾದರೂ, ಅವರು ಈಗಾಗಲೇ ವಿಚಾರಣಾಧೀನ ಕೈದಿಗಳಾಗಿ ಆರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಇದರಿಂದಾಗಿ ಅವರು ತಾಂತ್ರಿಕವಾಗಿ ತಕ್ಷಣವೇ ಬಿಡುಗಡೆಯಾಗಲು ಅರ್ಹರಾಗಿದ್ದಾರೆ. ಇಂತಹ ಅಮಾನುಷ ಕೃತ್ಯಕ್ಕೆ ಸಿಕ್ಕಿದ ಈ ಶಿಕ್ಷೆಯು ಅಪರಾಧದ ತೀವ್ರತೆಗೆ ತಕ್ಕುದಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆ ಎಂಬ ಮಾತು ಈ ಪ್ರಕರಣದಲ್ಲಿ ಅಕ್ಷರಶಃ ನಿಜವಾದಂತಿದೆ, ಏಕೆಂದರೆ ದಶಕದ ಕಾಲ ನಡೆದ ಈ ಕಾನೂನು ಹೋರಾಟವು ಕೊನೆಗೆ ಸಂತ್ರಸ್ತರಿಗೆ ಯಾವುದೇ ಪರಿಣಾಮಕಾರಿ ಸಾಂತ್ವನ ನೀಡುವಲ್ಲಿ ವಿಫಲವಾದಂತೆ ತೋರುತ್ತಿದೆ.

2016ರ ಜುಲೈ 11ರಂದು ಗುಜರಾತ್‌ನ ಉನಾದಲ್ಲಿ ಗೋ ರಕ್ಷಕರೆಂದು ಹೇಳಿಕೊಂಡ ಗುಂಪೊಂದು ನಾಲ್ವರು ದಲಿತ ಯುವಕರನ್ನು ಅರೆನಗ್ನಗೊಳಿಸಿ, ವಾಹನಕ್ಕೆ ಕಟ್ಟಿ ಹಾಕಿ ಗಂಟೆಗಟ್ಟಲೆ ಕಬ್ಬಿಣದ ರಾಡ್‌ಗಳಿಂದ ಹೊಡೆದಿದ್ದ ಘಟನೆಯು ಅಂದು ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ದೌರ್ಜನ್ಯದ ವಿಡಿಯೋವನ್ನು ದುಷ್ಕರ್ಮಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು, ಇದು ದೊಡ್ಡ ದಲಿತ ಹಕ್ಕುಗಳ ಚಳವಳಿಗೂ ನಾಂದಿ ಹಾಡಿತ್ತು. ಆದರೆ ಈಗ ಹೊರಬಂದಿರುವ ತೀರ್ಪು ಜಾತಿ ಆಧಾರಿತ ಹಿಂಸಾಚಾರವನ್ನು ತಡೆಯುವಲ್ಲಿ ಮತ್ತು ಇಂತಹ ಘೋರ ಕೃತ್ಯಗಳಲ್ಲಿ ತೊಡಗುವವರಿಗೆ ಕಠಿಣ ಸಂದೇಶ ರವಾನಿಸುವಲ್ಲಿ ಹಿನ್ನಡೆ ಅನುಭವಿಸಿದಂತಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಶೀಘ್ರ ವಿಚಾರಣೆ ಮತ್ತು ಅರ್ಥಪೂರ್ಣ ಶಿಕ್ಷೆಯ ಅಗತ್ಯವನ್ನು ಈ ಘಟನೆ ಮನವರಿಕೆ ಮಾಡಿಕೊಡುತ್ತಿದೆ.

ಅಮೆರಿಕ, ಇಸ್ರೇಲ್ ದಾಳಿಗೆ ನಲುಗಿದ ಇರಾನ್ – 200 ಕ್ಕೂ ಹೆಚ್ಚು ಸಾ*ವು
ಟೆಹರಾನ್ : ಮಧ್ಯಪ್ರಾಚ್ಯ (Middle east ) ರಾಷ್ಟ್ರಗಳಲ್ಲಿ ಯುದ್ಧದ (War ) ಭೀತಿ ಆವರಿಸಿದ್ದು, ಇರಾನ್ ಮೇಲೆ ಅಮೇರಿಕ (America ) ಗದಾಪ್ರಹಾರ ಮುಂದುವರಿಸಿದೆ.

ಪರಮಾಣು ಒಪ್ಪಂದದ ಮಾತುಕತೆಗೆ ಸ್ಪಂದಿಸದ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದೆ. ಇಸ್ರೇಲ್ ರಾಜಧಾನಿ ಮತ್ತು ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ವಾಯನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದು ಮೊಳಗಿದ್ದು, ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಜನರು ಪ್ರಾಣಭಯದಿಂದ ಸುರಕ್ಷಿತ ಸ್ಥಳಗಳತ್ತ ಓಡುತ್ತಿರುವುದು ಕಂಡುಬಂದಿದೆ. ಈ ದಾಳಿಯಲ್ಲಿ ಕೇವಲ ಸೇನಾ ನೆಲೆಗಳು ಮಾತ್ರವಲ್ಲದೆನಾಗರಿಕ ಪ್ರದೇಶಗಳಿಗೂ ಹಾನಿಯಾಗಿದೆ. .

ಇರಾನ್‌ನ 30ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಟೆಹರಾನ್‌ನ ಜಮ್ಮೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶ, ಅಣುಶಕ್ತಿ ಸಂಶೋಧನಾ ಕೇಂದ್ರವಿರುವ ಇಸ್ಪೃಹಾನ್ ಮತ್ತು ನಟಾಂಜ್, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಮುಖ ನೆಲೆಗಳು ಬಂದರು ನಗರಿ ಬುಶೆಹರ್ ಸೇರಿದಂತೆ ಪ್ರಮುಖ ನಗರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.

ಇನ್ನು, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಅನ್ನು ಗುರಿಯಾಗಿಸಿಕೊಂಡು ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲದೇ ‘ಆಪರೇಷನ್ ಟ್ರ ಪ್ರಾಮಿಸ್ 4’ ಹೆಸರಿನಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೂಲಸೌಕರ್ಯ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ.

ಅಜಿತ್ ಪವಾರ್ ವಿಮಾನ ಅಪಘಾತದ ಹಿಂದೆ ಪ್ರಭಾವಿ ವ್ಯಕ್ತಿಯ ಕೈವಾಡವಿದೆ: ಶಾಸಕ ರೋಹಿತ್ ಪವಾರ್ ಸ್ಫೋಟಕ ಹೇಳಿಕೆ
ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಕುರಿತು ಎನ್‌ಸಿಪಿ (NCP) ಶಾಸಕ ರೋಹಿತ್ ಪವಾರ್ ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ. “ಈ ಅಪಘಾತದ ಹಿಂದೆ ಖಂಡಿತವಾಗಿಯೂ ಯಾರೋ ಒಬ್ಬ ಪ್ರಭಾವಿ ವ್ಯಕ್ತಿಯ ಕೈವಾಡವಿದೆ” ಎಂದು ಅವರು ಆರೋಪಿಸಿದ್ದಾರೆ.

ಕರ್ಜತ್-ಜಾಮಖೇಡ್ ಕ್ಷೇತ್ರದ ಶಾಸಕರಾದ ರೋಹಿತ್ ಪವಾರ್, ಈ ವಿಮಾನ ಅಪಘಾತವನ್ನು ಕೇವಲ ತಾಂತ್ರಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಕ್ರಿಮಿನಲ್ ಆಯಾಮದಿಂದಲೂ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮಂಗಳವಾರ ಮುಂಬೈನ ಮರೈನ್ ಡ್ರೈವ್ ಪೊಲೀಸರು ಡಿಜಿಸಿಎ (DGCA) ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ನಂತರ, ರೋಹಿತ್ ಪವಾರ್ ಅವರು ಬಾರಾಮತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಯಾರೀ ಪ್ರಭಾವಿ ವ್ಯಕ್ತಿ?:

ಘಟನೆಯ ಹಿಂದೆ ದೊಡ್ಡ ಶಕ್ತಿಯಿದೆ ಎಂದು ಹೇಳುವ ಮೂಲಕ ರೋಹಿತ್ ಪವಾರ್ ಅವರು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದಾರೆ.

ಉದ್ದೇಶಪೂರ್ವಕ ನಿರ್ಲಕ್ಷ್ಯ:

“ವಿಎಸ್ಆರ್ (VSR) ಕಂಪನಿಯ ವಿಮಾನಗಳಲ್ಲಿ ದೋಷವಿರುವುದು ಡಿಜಿಸಿಎ ವರದಿಯಲ್ಲಿ ಸಾಬೀತಾಗಿದೆ. ಆ ಕಂಪನಿಯ ಐದು ವಿಮಾನಗಳನ್ನು ಈಗಾಗಲೇ ನಿಷೇಧಿಸಲಾಗಿದೆ (grounded). ದೋಷಪೂರಿತ ವಿಮಾನವನ್ನು ಅಜಿತ್ ಪವಾರ್ ಅವರಿಗೆ ಅಚಾನಕ್ಕಾಗಿ ನೀಡಲಾಗಿದೆಯೇ ಅಥವಾ ಬೇಕಂತಲೇ ನೀಡಲಾಗಿದೆಯೇ? ಎಂಬುದು ತನಿಖೆಯಾಗಬೇಕು,” ಎಂದು ರೋಹಿತ್ ಪವಾರ್ ಪ್ರಶ್ನಿಸಿದ್ದಾರೆ.

ಪೊಲೀಸರ ವರ್ತನೆ:

ಆಡಳಿತ ಮತ್ತು ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳು ಒತ್ತಾಯಿಸಿದರೂ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದು ಮಹಾರಾಷ್ಟ್ರಕ್ಕೆ ದುರದೃಷ್ಟಕರ ಎಂದು ಅವರು ಎಕ್ಸ್ (X) ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಯುಯಾನ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಡಿಜಿಸಿಎ ಫೆಬ್ರವರಿ 24 ರಂದು ವಿಎಸ್ಆರ್ ವೆಂಚರ್ಸ್ ಕಂಪನಿಯ ನಾಲ್ಕು ವಿಮಾನಗಳನ್ನು ಹಾರಾಟ ನಡೆಸದಂತೆ ತಡೆಹಿಡಿದಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಭೀಕರ ಅಪಘಾತದ ಪ್ರಾಥಮಿಕ ವರದಿಯನ್ನು ಇನ್ನೂ ನೀಡಬೇಕಿದೆ. ಮತ್ತೊಂದೆಡೆ, ಅಜಿತ್ ಪವಾರ್ ಅವರ ಪುತ್ರ ಪಾರ್ಥ ಪವಾರ್ ಕೂಡ ಬ್ಲ್ಯಾಕ್ ಬಾಕ್ಸ್ ಅಷ್ಟು ಸುಲಭವಾಗಿ ನಾಶವಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತನಿಖೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಪ್ರಕರಣ
ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75(2) ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಶಹಾಪುರ ಸಿಡಿಪಿಒ ಮಲ್ಲಣ್ಣ ಉಮಾಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಪ್ರಾಪ್ತೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ದೃಶ್ಯಗಳು ಕಾಣಿಸುತ್ತವೆ ಎನ್ನಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ನೈಜತೆ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದೇ ವೇಳೆ, ಶಹಾಪುರ ತಾಲೂಕಿನ ಮಹಲ್ ರೋಜಾದ ಸ್ವಘೋಷಿತ ದೇವಮಾನವನೆಂದು ಪರಿಚಿತನಾಗಿರುವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ವೈರಲ್ ವಿಡಿಯೋ ಪರಿಶೀಲಿಸಿ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಪ್ರಕರಣದ ತನಿಖೆ ಮುಂದುವರೆದಿದ್ದು, ಸಂಬಂಧಿತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಮುಂದಿನ ಬೆಳವಣಿಗೆಗಳಿಗಾಗಿ ಕಾದು ನೋಡಲಾಗುತ್ತಿದೆ.

ಶಿವಮೊಗ್ಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ: ಏಳು ಮಂದಿ ವಶಕ್ಕೆ; ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರದ ಘೋಷಣೆ
ಶಿವಮೊಗ್ಗ, ಫೆ. 25: ಶಿವಮೊಗ್ಗದ ಸುಲೇಬೈಲು ಸರ್ಕಾರಿ ಶಾಲೆಯ ಹೊರಗೆ 16 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ನಗರದಲ್ಲಿ ತೀವ್ರ ಉದ್ವಿಗ್ನತೆ ಉಂಟುಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮೃತ ಬಾಲಕ ಸಂಕೇತ್ (16) ಉರಗದೂರಿನ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಮುನ್ನ ನಡೆದ ವಿಶೇಷ ತರಗತಿಗೆ ಹಾಜರಾಗಿದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳೇ ಸೇರಿಕೊಂಡು ಸಂಕೇತ್ ಮೇಲೆ ಹಲ್ಲೆ ನಡೆಸಿದರೆಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಕ್ರಿಕೆಟ್ ಪಂದ್ಯ ವಾಗ್ವಾದವೇ ಕಾರಣ?
ಶಿವಮೊಗ್ಗ ಎಸ್‌.ಪಿ. ನಿಖಿಲ್ ಪ್ರತಿಕ್ರಿಯಿಸಿ, ಎರಡು ದಿನಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯ ವೇಳೆ ಉಂಟಾದ ವಾಗ್ವಾದವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದರು. “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳನ್ನು ಗಾಂಜಾ ಪರೀಕ್ಷೆಗೆ ಒಳಪಡಿಸಲಾಗುವುದು. ಗಾಂಜಾ ಹಾವಳಿ ಕುರಿತೂ ಸಮಗ್ರ ತನಿಖೆ ನಡೆಸುತ್ತೇವೆ,” ಎಂದು ತಿಳಿಸಿದ್ದಾರೆ.

ಸ್ಥಳೀಯರು ಮಾದಕ ವಸ್ತುಗಳ ಹಾವಳಿಯೇ ಈ ಘಟನೆಯ ಮೂಲ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಊರುಗಡೂರಿನಲ್ಲಿ ಪೊಲೀಸ್ ಉಪ ಠಾಣೆ ತೆರೆಯಲು ಕ್ರಮ ಕೈಗೊಳ್ಳುವುದಾಗಿ ಎಸ್‌.ಪಿ. ತಿಳಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್
ಘಟನೆಯ ಹಿನ್ನಲೆಯಲ್ಲಿ ಶಿವಮೊಗ್ಗ ನಗರ ಸೇರಿದಂತೆ ಊರುಗಡೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅನಾಹುತ ತಪ್ಪಿಸಲು ಕಟ್ಟೆಚ್ಚರ ವಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂಕೇತ್ ಜೊತೆಗೆ ಗಾಯಗೊಂಡಿರುವ ಗಿರೀಶ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಿಗೆ ಸಹ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

15 ಲಕ್ಷ ಪರಿಹಾರ ಘೋಷಣೆ
ಮೃತ ಸಂಕೇತ್ ಕುಟುಂಬಕ್ಕೆ ರಾಜ್ಯ ಸರ್ಕಾರ ಒಟ್ಟಾರೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 10 ಲಕ್ಷ ರೂ. ಮತ್ತು ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂ. ನೀಡಲಾಗುತ್ತದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸರ್ಕಾರದ ಪರವಾಗಿ ಪರಿಹಾರ ಘೋಷಣೆ ಮಾಡಿದ್ದಾರೆ.

ಸಿಎಂ ಮತ್ತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಪರಿಹಾರ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಜಿಲ್ಲಾಡಳಿತವು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ.

ಸರ್ಕಾರಿ ಅಧಿಕಾರಿಗಳ ಎಂದು ಎಂಟ್ರಿ ಕೊಟ್ಟು 24 ಲಕ್ಷದೊಂದಿಗೆ ಎಸ್ಕೇಪ್
ಬೆಂಗಳೂರು‌ : ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ (ACB) ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟ ಖದೀಮರು 24 ಲಕ್ಷ ರೂ. ಹಣವನ್ನ (Money) ದೋಚಿ (Robbery) ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 12 ಮಂದಿಯ ಪೈಕಿ 9 ಮಂದಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ, ಲತೀಪ್ ಎಂದು ಗುರುತಿಸಲಾಗಿದೆ. ಇವರಿಂದ ಹಣವನ್ನು ಜಪ್ತಿ ಮಾಡಲಾಗಿದೆ.

ಘಟನೆ ವಿವರ: ಶಂಕರಪ್ಪ ಎಂಬವರಿಗೆ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ ಎ1 ಆರೋಪಿ ಕೃಷ್ಣ ಕುಮಾರ್​​​ ಫೋನ್​ ಮಾಡಿ ಕರೆಸಿಕೊಂಡಿದ್ದಾನೆ. ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಪ್ಲ್ಯಾನ್​​ನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಹೆಸರಿನಲ್ಲಿ ಖಾಸಗಿ‌ ಕಾರ್​​ಗೆ ಬೋರ್ಡ್ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಹಣ ಎಗರಿಸಿದ ನಂತರ ಎ1 ಆರೋಪಿ ಕೃಷ್ಣಕುಮಾರ್​​ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು‌ ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆಯ ಪೊಲೀಸರು 12 ಮಂದಿಯಲ್ಲಿ 9 ಆರೋಪಿಗಳನ್ನ ಬಂಧಿಸಿದ್ದಾರೆ.

ಕೆನರಾ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನ: ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪ್ರತಿಷ್ಠಿತ ಕೆನರಾ ಬ್ಯಾಂಕ್​​ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಸೈರನ್ ಆಗುತ್ತಿದ್ದಂತೆ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಾತ್ರಿ ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಒಳ ನುಗ್ಗಿರುವ ಕಳ್ಳ, ಪೂರ್ತಿ ಬ್ಯಾಂಕ್ ಸರ್ಚ್ ಮಾಡಿದ್ದಾನೆ. ಸ್ಟ್ರಾಂಗ್ ರೂಮ್ ಹತ್ತಿರ ಹೋಗಿ ವೈರ್ ಕಟ್ ಮಾಡಿದ್ದು, ವೈರ್ ಕಟ್ ಮಾಡುತ್ತಿದಂತೆ ಸೈರನ್ ಆನ್ ಆಗಿದೆ. ಬಳಿಕ ಅಲ್ಲಿಂದ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಮ್ಯಾಟ್ರಿಮೋನಿಯಲ್ ದೋಖ ಬರೋಬ್ಬರಿ – 21 ಲಕ್ಷ ವಂಚಸಿದ ಸುಂದರಿ
ಬೆಂಗಳೂರು : ಮ್ಯಾಟ್ರಿಮೊನಿ (Matrimony) ವೆಬ್ ಸೈಟ್ (Website ) ಹೆಸರಲ್ಲಿ ವಂಚನೆ ಕೇಸ್ ಗಳು ಹೆಚ್ಚುತ್ತಿದ್ದು, ಖತರ್ನಾಕ್ ಯುವತಿಯೊಬ್ಬಳು (Girl ) ಹುಡುಗನಿಗೆ ಬರೋಬ್ಬರಿ 21 ಲಕ್ಷ ವಂಚನೆ ಮಾಡಿರೋ ಬಗ್ಗೆ ವರದಿಯಾಗಿದೆ.

ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿಕ್ರಿಪ್ಟೋ ಕರೆನ್ಸಿ ಯಲ್ಲಿ ಹೂಡಿಕೆ ಮಾಡಿಸಿ ಬರೋಬ್ಬರಿ 21.22 ಲಕ್ಷ ರೂ. ವಂಚಿಸಿದ್ದಾಳೆ.

ಟಿ. ದಾಸರಹಳ್ಳಿಯ ರಾಕೇಶ್ ಎಂಬಾತನಿಗೆ ಟೋಪಿ ಹಾಕಿದ ಕಿರಾತಕಿ ಈಗ ಎಸ್ಕೇಪ್ ಆಗಿದ್ದಾಳೆ. ಮ್ಯಾಟ್ರಿಮೋನಿ ಸೈಟ್ನಲ್ಲಿ ವಧು ಹುಡುಕುತ್ತಿದ್ದ ರಾಕೇಶ್ ಅವರಿಗೆ ಶಿರೀಷ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರೂ ಫೋನ್ ಮೂಲಕ ಸ್ನೇಹ ಬೆಳೆಸಿದ್ದರು.ಸ್ನೇಹ ಬೆಳೆದಂತೆಲ್ಲಾ ಶಿರೀಷ ಮದುವೆಯಾಗುವ ಆಸೆ ತೋರಿಸಿದ್ದಾಳೆ. ಅದರ ಜೊತೆಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದಾಳೆ. ಇದನ್ನೇ ನಂಬಿದ ರಾಜೇಶ್ ಹೂಡಿಕೆ ಮಾಡಿ ಇದೀಗ ಹಣ ಕಳೆದುಕೊಂಡಿದ್ದಾರೆ.

ಸದ್ಯ ಸ್ಥಳೀಯ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಬೆಂಗಳೂರು : ಮ್ಯಾಟ್ರಿಮೊನಿ (Matrimony) ವೆಬ್ ಸೈಟ್ (Website ) ಹೆಸರಲ್ಲಿ ವಂಚನೆ ಕೇಸ್ ಗಳು ಹೆಚ್ಚುತ್ತಿದ್ದು, ಖತರ್ನಾಕ್ ಯುವತಿಯೊಬ್ಬಳು (Girl ) ಹುಡುಗನಿಗೆ ಬರೋಬ್ಬರಿ 21 ಲಕ್ಷ ವಂಚನೆ ಮಾಡಿರೋ ಬಗ್ಗೆ ವರದಿಯಾಗಿದೆ.

ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿಕ್ರಿಪ್ಟೋ ಕರೆನ್ಸಿ ಯಲ್ಲಿ ಹೂಡಿಕೆ ಮಾಡಿಸಿ ಬರೋಬ್ಬರಿ 21.22 ಲಕ್ಷ ರೂ. ವಂಚಿಸಿದ್ದಾಳೆ.

ಟಿ. ದಾಸರಹಳ್ಳಿಯ ರಾಕೇಶ್ ಎಂಬಾತನಿಗೆ ಟೋಪಿ ಹಾಕಿದ ಕಿರಾತಕಿ ಈಗ ಎಸ್ಕೇಪ್ ಆಗಿದ್ದಾಳೆ. ಮ್ಯಾಟ್ರಿಮೋನಿ ಸೈಟ್ನಲ್ಲಿ ವಧು ಹುಡುಕುತ್ತಿದ್ದ ರಾಕೇಶ್ ಅವರಿಗೆ ಶಿರೀಷ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರೂ ಫೋನ್ ಮೂಲಕ ಸ್ನೇಹ ಬೆಳೆಸಿದ್ದರು.ಸ್ನೇಹ ಬೆಳೆದಂತೆಲ್ಲಾ ಶಿರೀಷ ಮದುವೆಯಾಗುವ ಆಸೆ ತೋರಿಸಿದ್ದಾಳೆ. ಅದರ ಜೊತೆಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದಾಳೆ. ಇದನ್ನೇ ನಂಬಿದ ರಾಜೇಶ್ ಹೂಡಿಕೆ ಮಾಡಿ ಇದೀಗ ಹಣ ಕಳೆದುಕೊಂಡಿದ್ದಾರೆ.

ಸದ್ಯ ಸ್ಥಳೀಯ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

33 ಬಾಲಕರ ಮೇಲೆ ಲೈ*ಗಿಕ ದೌರ್ಜನ್ಯ: ಉತ್ತರ ಪ್ರದೇಶದಲ್ಲಿ ದಂಪತಿಗೆ ಮರಣದಂಡನೆ
ಉತ್ತರ ಪ್ರದೇಶದಲ್ಲಿ 33 ಬಾಲಕರ ಮೇಲೆ ತೀವ್ರ ಲೈಂಗಿಕ ದೌರ್ಜನ್ಯ ಹಾಗೂ ಸಂಬಂಧಿತ ಅಪರಾಧಗಳನ್ನು ಎಸಗಿದ ಪ್ರಕರಣದಲ್ಲಿ ದೋಷಿ ದಂಪತಿಗೆ ಪೋಕ್ಸ್‌ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

Central Bureau of Investigation (ಸಿಬಿಐ) ತನಿಖೆಯ ಆಧಾರದ ಮೇಲೆ, ಉತ್ತರ ಪ್ರದೇಶದ ಬಾಂದಾ ನಗರದಲ್ಲಿನ ಪೋಕ್ಸ್‌ ವಿಚಾರಣಾ ನ್ಯಾಯಾಲಯವು ನೀರಾವರಿ ಇಲಾಖೆಯ ಮಾಜಿ ಜೂನಿಯರ್ ಎಂಜಿನಿಯರ್ ರಾಮ್‌ಭವನ್ ಮತ್ತು ಅವರ ಪತ್ನಿ ದುರ್ಗಾವತಿಯನ್ನು ವಿವಿಧ ಗಂಭೀರ ಆರೋಪಗಳಲ್ಲಿ ದೋಷಿಗಳೆಂದು ಘೋಷಿಸಿದೆ. ಭಾರತೀಯ ದಂಡ ಸಂಹಿತೆ ಹಾಗೂ Protection of Children from Sexual Offences Act (ಪೋಕ್ಸ್‌ ಕಾಯ್ದೆ) ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

“ಅಪರೂಪದಲ್ಲಿ ಅಪರೂಪದ” ಪ್ರಕರಣ: ನ್ಯಾಯಾಲಯದ ಅಭಿಪ್ರಾಯ
ವಿಚಾರಣಾ ನ್ಯಾಯಾಲಯ ಪ್ರಕರಣವನ್ನು “ಅಪರೂಪದಲ್ಲಿ ಅಪರೂಪದ”ವೆಂದು ಪರಿಗಣಿಸಿ, ಆರೋಪಿಗಳ ಕೃತ್ಯಗಳು ಅತ್ಯಂತ ಹೀನ ಹಾಗೂ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಸುಧಾರಣೆಗೆ ಅವಕಾಶವಿಲ್ಲದ ಸ್ವರೂಪದ ಅಪರಾಧಗಳಾಗಿರುವುದರಿಂದ ನ್ಯಾಯದ ಹಿತದೃಷ್ಟಿಯಿಂದ ಗರಿಷ್ಠ ಶಿಕ್ಷೆ ಅನಿವಾರ್ಯವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

2010ರಿಂದ 2020ರವರೆಗೆ ದೌರ್ಜನ್ಯ
ಸಿಬಿಐ ತಿಳಿಸಿದಂತೆ, ಆರೋಪಿಗಳು 2010ರಿಂದ 2020ರವರೆಗೆ ಉತ್ತರ ಪ್ರದೇಶದ ಬಾಂದಾ ಹಾಗೂ Chitrakoot ಪ್ರದೇಶಗಳಲ್ಲಿ ಸಕ್ರಿಯರಾಗಿದ್ದರು. ಮೂರು ವರ್ಷದ ವಯಸ್ಸಿನ ಮಕ್ಕಳೂ ಸೇರಿದಂತೆ ಸುಮಾರು 33 ಬಾಲಕರನ್ನು ವಿವಿಧ ಆಮಿಷಗಳ ಮೂಲಕ ಸೆಳೆದು ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಆನ್‌ಲೈನ್‌ ವಿಡಿಯೋ ಗೇಮ್‌ಗಳ ಆಕರ್ಷಣೆ, ಹಣ ಮತ್ತು ಉಡುಗೊರೆಗಳ ಮೂಲಕ ಮಕ್ಕಳನ್ನು ಸಂಪರ್ಕಿಸಿ ಅಪರಾಧ ಎಸಗಲಾಗುತ್ತಿತ್ತು ಎಂದು ಸಿಬಿಐ ತಿಳಿಸಿದೆ. ದೌರ್ಜನ್ಯದಿಂದ ಹಲವಾರು ಸಂತ್ರಸ್ತರಿಗೆ ಗಂಭೀರ ದೈಹಿಕ ಗಾಯಗಳಾಗಿದ್ದು, ಕೆಲವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಮಕ್ಕಳು ಮಾನಸಿಕ ಆಘಾತದಿಂದ ಬಳಲುತ್ತಿದ್ದಾರೆ.

ಡಾರ್ಕ್ ವೆಬ್ ಮೂಲಕ ಪ್ರಕರಣ ಬೆಳಕಿಗೆ
ಮಕ್ಕಳ ಅಶ್ಲೀಲ ವಿಡಿಯೋಗಳ ಮಾರಾಟ ಸಂಬಂಧ ಡಾರ್ಕ್ ವೆಬ್‌ನಲ್ಲಿ ಪತ್ತೆಯಾದ ಮಾಹಿತಿಯನ್ನು Interpol ಭಾರತದ ಸಿಬಿಐಗೆ ಹಂಚಿಕೊಂಡಿತ್ತು. ಮೊಬೈಲ್ ಸಂಖ್ಯೆಯ ಆಧಾರದಲ್ಲಿ ತನಿಖೆ ಪ್ರಾರಂಭಿಸಿದ ಸಿಬಿಐ 2020ರಲ್ಲಿ ಪ್ರಕರಣ ದಾಖಲಿಸಿ, 2021ರಲ್ಲಿ ಆರೋಪಪಟ್ಟಿ ಸಲ್ಲಿಸಿತು. ಮೇ 2023ರಲ್ಲಿ ಆರೋಪ ರೂಪಿಸಲಾಗಿತ್ತು.

ಮಕ್ಕಳನ್ನು ಅಶ್ಲೀಲ ಉದ್ದೇಶಗಳಿಗೆ ಬಳಸುವುದು, ಅಶ್ಲೀಲ ವಿಡಿಯೋಗಳ ಸಂಗ್ರಹಣೆ ಮತ್ತು ಪ್ರಸಾರ, ಪ್ರಚೋದನೆ ಹಾಗೂ ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಗಂಭೀರ ಆರೋಪಗಳು ದಂಪತಿಯ ವಿರುದ್ಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ನ್ಯಾಯಾಲಯದ ಆದೇಶ: ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲು ಸೂಚನೆ
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಅವಿಮುಕ್ತೇಶ್ವರಾನಂದ ಹಾಗೂ ಅವರ ಶಿಷ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಯಾಗರಾಜ್ ನಗರದ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯ ಶನಿವಾರ ಆದೇಶಿಸಿದೆ.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿನೋದ್ ಕುಮಾರ್ ಚೌರಾಸಿಯಾ ಅವರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಝೂಸಿ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.

ವಾರಾಣಸಿಯಲ್ಲಿ ಇರುವ ಆಶ್ರಮದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ಅಶುತೋಷ್ ಬ್ರಹ್ಮಚಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯ ವೇಳೆ ಇಬ್ಬರು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ, ಪೊಲೀಸರ ಪ್ರಾಥಮಿಕ ವರದಿಯನ್ನು ಪರಿಶೀಲಿಸಿ ತೀರ್ಪನ್ನು ಕಾಯ್ದಿರಿಸಿತ್ತು.

ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದ ಸಿಡಿ (CD) ಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದು, ಆ ದಾಖಲೆಗಳ ಆಧಾರದ ಮೇಲೂ ತನಿಖೆ ಮುಂದುವರಿಯಲಿದೆ.