ಕರ್ನಾಟಕ ಚುನಾವಣೆ – 2023 – Peepal Media

ಚುನಾವಣಾ ಬಾಂಡ್‌ನಿಂದ ಬಿಜೆಪಿಯ 8000 ಕೋಟಿ ರೂ.ಲೂಟಿ ಬಯಲು: ಉದ್ಧವ್‌ ಠಾಕ್ರೆ
ಮುಂಬೈ: ಎಸ್‌ಬಿಐನ ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ 8000 ರೂ. ಭ್ರಷ್ಟಾಚಾರದ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ದಕ್ಷಿಣ ಮುಂಬೈನ ಕೋಲಾಬಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿಯು ಚುನಾವಣಾ ಬಾಂಡ್‌ ಯೋಜನೆಯಿಂದಾಗಿ ₹8,000 ಕೋಟಿ ಲೂಟಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮೀರಿಸಿದೆ ಎಂದು ದೂರಿದರು.

ಬಿಜೆಪಿ ವಿಕಸಿತ ಭಾರತದ ಕನಸು ತೋರಿಸುತ್ತಿದೆ. ಇವರ ಕನಸು ಬಿಸಿಲುಗುದುರೆಯಿದ್ದಂತೆ. ಈ ಮೂಲಕ ಬಿಜೆಪಿಯು ಇನ್ನಷ್ಟು ಲೂಟಿ ಮಾಡಲು ಇನ್ನೂ ಐದು ವರ್ಷಗಳ ಕಾಲ  ಅಧಿಕಾರದಲ್ಲಿರುವುದಕ್ಕೆ ಬಯಸುತ್ತದೆ. ಮತದಾರರಾದ ನೀವು ಈ ದೇಶವನ್ನು ಮತ್ತೆ ಲೂಟಿಕೋರರ ಕೈಗೆ ಕೊಡುತ್ತಿರೋ ಬಿಡುತ್ತಿರೋ ನಿಮಗೆ ಬಿಟ್ಟದ್ದು ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಪಡೆದಿವೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತದೆ. ದೇಣಿಗೆ ನೀಡದಿದ್ದರೆ ಕಂಪನಿಗಳ ಕೆಲಸ ಆಗುವುದಿಲ್ಲ. ಹೀಗಾಗಿ ಕಂಪನಿಗಳು ಹೆದರಿಕೊಂಡು ದೇಣಿಗೆ ನೀಡಿವೆ ಎಂದು ಅವರು ಆರೋಪಿಸಿದರು.

ನಾನು ಗುಜರಾತ್‌ ವಿರೋಧಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳ ವಿರುದ್ಧ ಎತ್ತಿ ಕಟ್ಟುವುದನ್ನು ಬಿಡಬೇಕು.. ಮಹಾರಾಷ್ಟ್ರಕ್ಕೆ ಬರುವ ಎಲ್ಲ ಯೋಜನೆಗಳನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಚುನಾವಣಾ ಬಾಂಡ್‍ ಮೂಲಕ ಬಿಜೆಪಿ ಭ್ರಷ್ಟಾಚಾರಗಳು ಬಯಲಾಗುತ್ತಿವೆ: ಜೈರಾಮ್‌ ರಮೇಶ್‌
ನವದೆಹಲಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಯ ಹಲವಾರು ಬಗೆಯ ಭ್ರಷ್ಟಾಚಾರಗಳು ಬಯಲಿಗೆ ಬರುತ್ತಿವೆ. ನಿಮ್ಮ ಕಂಪನಿಗೆ ಸರ್ಕಾರದ ರಕ್ಷಣೆ ಬೇಕೆಂದರೆ ದೇಣಿಗೆ ಕೊಡಿ ಎಂದು ಕೇಳುವುದು, ಕಿಕ್‍ಬ್ಯಾಕ್ ಪಡೆಯುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ದುರುಪಯೋಗ ಮಾಡುವುದು ಸೇರಿದಂತೆ  ನಾಲ್ಕು ಬಿಜೆಪಿಯ ಭ್ರಷ್ಟ ತಂತ್ರಗಾರಿಕೆಗಳು ಬಯಲುಗೊಗೊಂಡಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ವಿಶಿಷ್ಟ ಬಾಂಡ್ ಐಡಿ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ಇದರಿಂದ ಯಾವ ದಾನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವುದು ಕೂಡಾ ತಿಳಿಯುತ್ತದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ  ಆಗ್ರಹಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ವಿವರ ಬಹಿರಂಗಪಡಿಸುವುದನ್ನು ಮುಂದೂಡುವ ಸತತ ಪ್ರಯತ್ನ ಎಸ್‌ಬಿಐ ಮತ್ತು ಬಿಜೆಪಿ ಮಾಡಿದವು. ಈಗ ಸುಪ್ರೀಂಕೋರ್ಟ್ ಒತ್ತಡದ ನಿರ್ದೇಶನದಂತೆ ಎಸ್‍ಬಿಐ ಒಂದಿಷ್ಟು ವಿವರಗಳನ್ನು ಬಹಿರಂಗಪಡಿಸಿದೆ. 1300ಕ್ಕೂ ಅಧಿಕ ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‍ಗಳ ಮೂಲಕ ದೇಣಿಗೆ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಬಿಜೆಪಿ 2019ರ ಬಳಿಕ 6000 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳು ಸದ್ಯಕ್ಕೆ ಬಿಜೆಪಿಯ ನಾಲ್ಕು ತಂತ್ರಗಳನ್ನು ಬಯಲುಗೊಳಿಸಿವೆ. ಇನ್ನೆಷ್ಟು ತಂತ್ರಗಳಿವೆಯೋ ಎಂದು ಅವರು ಆರೋಪಿಸಿದ್ದಾರೆ.

ಮೇಘಾ ಎಂಜಿನಿಯರಿಂಗ್ ಎಂಬ ಕಂಪನಿಯು 2023ರ ಏಪ್ರಿಲ್‍ನಲ್ಲಿ 800 ಕೋಟಿಗೂ ಅಧಿಕ ಮೊತ್ತವನ್ನು ಬಾಂಡ್ ಖರೀದಿಗೆ ವ್ಯಯಿಸಿದೆ. ಇದಕ್ಕೂ ಒಂದು ತಿಂಗಳ ಮುನ್ನ ಕಂಪನಿಗೆ 14400 ಕೋಟಿ ರೂಪಾಯಿ ಮೊತ್ತದ ಥಾಣೆ- ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಹೀಗೆ ಕಂಪನಿಗಳ ಜೊತೆ ಕೊಡುವ ಮತ್ತು ತೆಗೆದುಕೊಳ್ಳುವ ಭ್ರಷ್ಟಾಚಾರವನ್ನು ಬಿಜೆಪಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಒಂದು ದೇಶ ಒಂದು ಚುನಾವಣೆ ಕುರಿತು ರಾಷ್ಟ್ರಪತಿಗೆ ಪ್ರಸ್ತಾವನೆ ಸಲ್ಲಿಕೆ
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು.

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ.

ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿನ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್.‌ ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್‌ ಕೆ ಸಿಂಗ್‌, ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್‌ ಕಶ್ಯಪ್‌ ಮತ್ತು ಹಿರಿಯ ವಕೀಲ ಹರೀಶ್‌ ಸಾಳ್ವೆ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದ ಈ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ. ರಾಷ್ಟ್ರಪತಿಯ ಅಂಕಿತ ಬಿದ್ದೊಡನೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾನೂನು ಜಾರಿಯಾದರೆ ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಬಹುದು ಎನ್ನುವ ಆರೋಪಗಳು ಕೇಳಿ ಬಂದಿವೆ.

CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ
ನವದೆಹಲಿ:  ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ ‘ಸಿಎಎ ಅಸಾಂವಿಧಾನಿಕ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ’ ಎಂದು ಶಾ ಹೇಳಿದರು.

2024ರಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.

ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.

ಈ ಕಾನೂನು ‘ಮುಸ್ಲಿಂ ವಿರೋಧಿ  ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ  ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

ಸರ್ಕಾರದ ಗ್ಯಾರೆಂಟಿಗಳು ಉಚಿತವೂ ಅಲ್ಲ, ಆತ್ಮಗೌರವಕ್ಕೆ ಧಕ್ಕೆ ತರುವಂತವೂ ಅಲ್ಲ!
ನಿಜವಾದ ಫಲಾನುಭವಿಗಳಾದ ಬಡವರ್ಗದ ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸಲು ಮಧ್ಯಮ ಮತ್ತು ಮೇಲ್ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಅನುಕೂಲಗಳನ್ನು ಬಿಟ್ಟುಕೊಡುವುದರಿಂದ ತಮ್ಮ ನೈತಿಕ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳಬಹುದು-ಡಾ. ಸುಶಿ ಕಾಡನಕುಪ್ಪೆ, ದಂತ ವೈದ್ಯರು

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮತ್ತು ಉಚಿತ ಬಸ್ ಪ್ರಯಾಣದಂತಹ ವ್ಯವಸ್ಥೆಗಳು ಒಂದು ಅಭಿವೃದ್ಧಿಶೀಲ ಸಮಾಜದ ಏಳಿಗೆಗೆ ಅತ್ಯಗತ್ಯವಾಗಿ ಬೇಕಾಗಿರುವ ಸಾಮಾಜಿಕ ಪಾಲಿಸಿ ಕ್ರಮಗಳಾಗಿವೆ. ಬಡತನ ರೇಖೆಯ ಕೆಳಗಿರುವ ಪ್ರಜೆಗಳಿಗೆ ಅವರ ತೆರಿಗೆ ಹಣದ ಸಂಗ್ರಹದಿಂದ ಒದಗಿಸುವ ಸಾಮೂಹಿಕ ಸೌಕರ್ಯಗಳಾದ ರಸ್ತೆ, ಅಣೆಕಟ್ಟು, ಸೇತುವೆ ಮುಂತಾದವುಗಳಷ್ಟೆ ಅಲ್ಲದೆ, ಅವರ ಏಳಿಗೆಗೆ ಬೇಕಾಗುವ ಕೌಟುಂಬಿಕ ಕ್ಷಮತೆಯ ಪರಿಸರವನ್ನು ರೂಪಿಸುವುದೂ ಸರ್ಕಾರದ ಕರ್ತವ್ಯವಾಗಿರುತ್ತದೆ.

ಕೆಳ ಮಧ್ಯಮ ಆದಾಯದ ವರ್ಗಕ್ಕೆ ಸೇರುವ ನಮ್ಮಂತಹ ದೇಶಗಳಲ್ಲಿ ಪ್ರಜೆಗಳ ಕಿಸೆಗೆ ನೇರ ಹಣ ವರ್ಗಾವಣೆ ಮಾಡುವ ಕ್ರಮವನ್ನು ಪ್ರಯೋಗಿಸಿದ ಹಲವು ಸಮುದಾಯ ಆರೋಗ್ಯ ವಿಜ್ಞಾನದ ಅಧ್ಯಯನಗಳಿವೆ. ನಿಕಾರಾಗುವ, ಮಲಾವಿ, ಫಿಲಿಫೈನ್ಸ್, ಆಫ್ಘಾನಿಸ್ತಾನ ಮತ್ತು ಕೆನ್ಯಾದಲ್ಲಿ ನಡೆಸಿದ ಅಧ್ಯಯನಗಳು ಸ್ವಲ್ಪ ಪ್ರಮಾಣದ ನೇರ ಹಣ ಸಂದಾಯದ ಉಪಯೋಗಗಳನ್ನು ದಾಖಲಿಸಿವೆ. ಈ ಅಧ್ಯಯನಗಳ ಆಧಾರದ ಮೇಲೆ ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನೇರ ಹಣ ಸಂದಾಯದ ಕ್ರಮಗಳನ್ನು ಕೆಳ ಮತ್ತು ಕೆಳ-ಮಧ್ಯಮ ವರ್ಗದ ದೇಶಗಳಲ್ಲಿನ ಬಡತನ ನಿರ್ಮೂಲನೆಯ ಒಂದು ಕ್ರಮವನ್ನಾಗಿ ಗುರುತಿಸಿವೆ. ಈ ರೀತಿಯ ನಿರಂತರ ಅಧ್ಯಯನಗಳ ಫಲಿತಾಂಶಗಳು ಈ ಕ್ರಮಗಳ ಬಗ್ಗೆ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಟೀಕೆಗಳನ್ನು (‘ಬಿಟ್ಟಿ ಭಾಗ್ಯ’, ‘ಜನ ಸೋಮಾರಿಗಳಾಗುತ್ತಾರೆ’ ಇತ್ಯಾದಿ) ಸುಳ್ಳಾಗಿಸಿದವು. ಉದ್ಯೋಗ ಖಾತ್ರಿ, ವಿಮೆ, ಇತರ ಸರ್ಕಾರದ ನೇರವಾಗಿ ಹಣದ ರೂಪದಲ್ಲಿ ಸಂದಾಯವಾಗದ ಯೋಜನೆಗಳ ಜೊತೆಗೆ ಹಣ ಸಂದಾಯದ ಕ್ರಮವು ಹೆಚ್ಚು ಪರಿಣಾಮಕಾರಿಯಾಗಿದ್ದವು ಎಂಬುದನ್ನು ತಿಳಿಸುತ್ತವೆ. ಅದರಲ್ಲೂ ಮನೆಯನ್ನು ನಡೆಸುವ ಹೆಣ್ಣು ಮಕ್ಕಳಿಗೆ ನೇರ ಹಣ ಸಂದಾಯದಿಂದ ಅತಿ ಹೆಚ್ಚು ಅನುಕೂಲವಾಗಿರುವುದು ಸಾಬೀತಾಗಿದೆ. ಇದರಿಂದ ಕುಟುಂಬಕ್ಕೆ ತಕ್ಷಣದ, ಮಧ್ಯಂತರ ಕಾಲದ ಮತ್ತು ದೀರ್ಘಕಾಲದ ಅನುಕೂಲಗಳಾಗುತ್ತವೆ ಎಂದು ಸಮುದಾಯ ಆರೋಗ್ಯ ವಿಜ್ಞಾನದ ಅಧ್ಯಯನಗಳು ತಿಳಿಸುತ್ತವೆ. ಮುಖ್ಯವಾಗಿ ಬಡತನ ಸ್ವಲ್ಪಮಟ್ಟಿಗಾದರೂ ಸುಧಾರಿಸುವುದು, ಮಕ್ಕಳ ಶಾಲಾ ಹಾಜರಾತಿ ಮತ್ತು ದಾಖಲಾತಿಯಲ್ಲಿ ಸುಧಾರಣೆ, ಬಾಲ ಕಾರ್ಮಿಕ ಪದ್ಧತಿಯ ಇಳಿಕೆ, ಮಕ್ಕಳ ಅಪೌಷ್ಟಿಕತೆಯ ನಿವಾರಣೆ ಮತ್ತು ಕುಟುಂಬದ ಸಮತೋಲಿತ ಆಹಾರ ಸೇವನೆಯ ಹೆಚ್ಚಳಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ಆ ಸಮುದಾಯದ, ಅದರ ಮೂಲಕ ಆ ಸಮಾಜದ ಅಭಿವೃದ್ಧಿಯಲ್ಲಿ ಗಣನೀಯ ಸುಧಾರಣೆಯನ್ನು ಕಾಣಬಹುದು.

ಯಾವುದೇ ಪಾಲಿಸಿ ಕ್ರಮಗಳ ಯಶಸ್ಸು ಅವುಗಳ ಅನುಷ್ಟಾನದ ಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ನಾವು ಇಂತಹ ಅತ್ಯಗತ್ಯವಾದ ಕ್ರಮಗಳ ಬಗ್ಗೆ ನಮ್ಮ ಅಜ್ಞಾನವನ್ನು ಪ್ರದರ್ಶನ ಮಾಡದೆ, ಕುಹಕ ನುಡಿಗಳನ್ನು ಬದಿಗಿರಿಸಿ, ಸರ್ಕಾರವು ಇದರ ಅನುಷ್ಟಾನವನ್ನು ಸಮರ್ಪಕವಾಗಿ ಮಾಡುತ್ತಿದೆಯೇ ಎಂದು ಹದ್ದಿನ ಕಣ್ಣಿಡೋಣ. ನಿಜವಾದ ಫಲಾನುಭವಿಗಳಾದ ಬಡವರ್ಗದ ಜನರಿಗೆ ಈ ಯೋಜನೆಗಳನ್ನು ತಲುಪಿಸಲು ಮಧ್ಯಮ ಮತ್ತು ಮೇಲ್ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಅನುಕೂಲಗಳನ್ನು ಬಿಟ್ಟುಕೊಡುವುದರಿಂದ ತಮ್ಮ ನೈತಿಕ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳಬಹುದು.

ಡಾ. ಸುಶಿ ಕಾಡನಕುಪ್ಪೆ, MDS

ಬೆಂಗಳೂರಿನ ವಿ.ಎಸ್.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ವಿಭಾಗದಲ್ಲಿ  ಸಹ ಪ್ರಾಧ್ಯಾಪಕಿಯಾಗಿದ್ದಾರೆ.

ಮೊ.9535205012

ಇದನ್ನೂ ಓದಿ-ಆ ಅಪಪ್ರಚಾರಗಳಿಗೆ ಆಘಾತಗೊಳ್ಳುವ ಮುನ್ನ..

ಆ ಅಪಪ್ರಚಾರಗಳಿಗೆ ಆಘಾತಗೊಳ್ಳುವ ಮುನ್ನ..
ಬಿಜೆಪಿ ಮೈಂಡ್‌ಸೆಟ್ಟಿನ ಫಲಾನುಭವಿಗಳ ವೀಡಿಯೊಗಳಿಂದ ನಾವು ಹೆಚ್ಚು ಭ್ರಮನಿರಸನಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. Its all in the game!!  ನಾಳೆ ಅನ್ನಭಾಗ್ಯದ ಅಕ್ಕಿಯಲ್ಲಿ ಕಲ್ಲನ್ನೋ, ಮಣ್ಣನ್ನೋ, ಕಳಪೆ ಗುಣಮಟ್ಟವನ್ನೋ ಹುಡುಕುತ್ತಾರೆ; ಉಚಿತ ಕರೆಂಟ್ ಯೋಜನೆಯಲ್ಲಿ ಲೋಡ್‌ಶೆಡ್ಡಿಂಗ್, ಲೋ-ಓಲ್ಟೇಜ್‌ನ ಅನಾನುಕೂಲ ಕಾಣುತ್ತಾರೆ…ಗಿರೀಶ್ ತಾಳಿಕಟ್ಟೆ, ಪತ್ರಕರ್ತರು

ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿ ಆಶ್ವಾಸನೆಗಳ ಪೈಕಿ ಈಗಾಗಲೇ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ನೂಕುನುಗ್ಗಲಾಗುತ್ತಿರುವುದನ್ನೇ ಕೆಲವರು ಈ ಯೋಜನೆಯ ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ಲೇವಡಿ ಮಾಡುತ್ತಿದ್ದಾರೆ. ಅದು ಅವರ ಉದರ ಸಂಕಟಕ್ಕೆ ತಾವೇ ಕಂಡುಕೊಂಡ ತಾತ್ಕಾಲಿಕ ಕೈಮದ್ದು ಅಷ್ಟೇ! ಹೊಸದಾಗಿ ಬಿಡುಗಡೆಯಾದ ಸಿನಿಮಾದ ಥಿಯೇಟರ್ ಮುಂದೆ ಜನಜಂಗುಳಿ ಏರ್ಪಟ್ಟು, ನೂಕುನುಗ್ಗುಲಾದರೆ ಅದನ್ನು ಆ ಸಿನಿಮಾದ ಯಶಸ್ಸು ಅಂತ ಪರಿಗಣಿಸುತ್ತೇವೆಯೇ ವಿನಾ ಸೋಲೆಂದು ಯಾರೂ ವ್ಯಾಖ್ಯಾನಿಸುವುದಿಲ್ಲ. ಈ ಅರ್ಥದಲ್ಲಿ ಶಕ್ತಿ ಯೋಜನೆ ಅಭೂತಪೂರ್ವ ಯಶಸ್ಸು ಗಳಿಸಿದೆ. ಆ ಯಶಸ್ಸಿನ ಬೇನೆ ತಾಳದವರು ಮೊಸರಲ್ಲಿ ಕಲ್ಲು ಹುಡುಕಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಇಂತಹ ಲೇವಡಿಶೂರರು, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಫಲಾನುಭವಿ ಮಹಿಳೆಯರೇ ತಮಗೆ ಸೀಟು ಸಿಗದಿದ್ದಕ್ಕೋ, ಬಸ್‌ನಲ್ಲಿ ಜಾಗ ಸಿಗದಿದ್ದಕ್ಕೋ, ಅಥವಾ ಏನೋ ಒಂದು ಅನ್‌ಕಂಫರ್ಟಬಲಿಟಿಯ ಸಲುವಾಗಿಯೋ (ಪಕ್ಕದವರ ಬೆವರು ವಾಸನೆ ಸಹಿಸಿಕೊಳ್ಳದೆಯೂ!!) ಅಥವಾ ದುರುದ್ದೇಶದ ಪ್ರಚೋದನೆಗಳಿಗೆ ಒಳಗಾಗಿಯೋ  ಕಾಂಗ್ರೆಸ್ ಸರ್ಕಾರವನ್ನು ಅಥವಾ ಸಿಎಂ ಸಿದ್ದರಾಮಯ್ಯನವರನ್ನು ಟೀಕಿಸುತ್ತಿರುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಅದು ದೊಡ್ಡ ಮುಖಭಂಗ ಎನ್ನುವಂತೆ ಒಕ್ಕಣೆ ಬರೆಯುತ್ತಿದ್ದಾರೆ. ಅದನ್ನು ನೋಡಿದ ಕೆಲವು ಜಾತ್ಯತೀತ, ಪ್ರಗತಿಪರ, ಕೋಮುವಾದ ವಿರೋಧಿ ಒಡನಾಡಿಗಳು “ಈ ಜನಕ್ಕೆ ಸರಿ ಯಾವ್ದು ತಪ್ಪು ಯಾವ್ದು ಅಂತ ಗೊತ್ತಾಗ್ತಾ ಇಲ್ಲವಾ? ಮನೆಹಾಳರ ಪ್ರಚೋದನೆಗೆ ಬಲಿಯಾಗಿ ಉಪಕಾರ ಮಾಡಿದವರನ್ನೇ ನಿಂದಿಸುತ್ತಾರಲ್ಲ,” ಎಂದು ಭ್ರಮನಿರಸನಕ್ಕೆ ಒಳಗಾಗುತ್ತಿದ್ದಾರೆ.

ವಾಸ್ತವದಲ್ಲಿ ಫಲಾನುಭವಿಗಳೆನಿಸಿಕೊಂಡವರಿಂದ ಬರುವ ಇಂತಹ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಜರೂರತ್ತಿಲ್ಲ. ಒಂದು ಸಣ್ಣ ಅಂಕಿಅಂಶದ ಲೆಕ್ಕಾಚಾರ ಗಮನಿಸೋಣ. ಈ ಸಲದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಕಾಂಗ್ರೆಸ್ 1 ಕೋಟಿ 60 ಲಕ್ಷ ಮತ ಗಳಿಸಿದ್ದರೆ, ಬಿಜೆಪಿ 1 ಕೋಟಿ 40 ಲಕ್ಷ ಮತ ಗಳಿಸಿದೆ. ಅಷ್ಟೆಲ್ಲಾ ಭ್ರಷ್ಟಾಚಾರ, ದುರಾಡಳಿತ, ಅವ್ಯವಸ್ಥೆ, ಅರಾಜಕತೆಯ ಹೊರತಾಗಿಯೂ ಬಿಜೆಪಿಗೆ ಮತ ಹಾಕಿದ 1 ಕೋಟಿ 40 ಲಕ್ಷ ಮತದಾರರಿದ್ದಾರಲ್ಲ ಅವರು ಬಿಜೆಪಿಗೆ ಕೇವಲ ತಮ್ಮ ಮತ ಹಾಕಿಲ್ಲ, ಆ ಪಕ್ಷದ ಸಿದ್ಧಾಂತದೊಟ್ಟಿಗೂ ತಮ್ಮ ಮನಸ್ಥಿತಿಯನ್ನು ಸಮೀಕರಿಸಿಕೊಂಡೇ ಓಟು ಮಾಡಿದಂತವರು (ಪ್ರೇರಣೆ ಬೇರೆಬೇರೆ ಇರಬಹುದು). ಇಂತವರು ತಾವು ಹಾಕಿದ ಮತವನ್ನು ಸಮರ್ಥಿಸಿಕೊಳ್ಳಲಿಕ್ಕಾದರೂ ಕಾಂಗ್ರೆಸ್ ಅನ್ನು ವಿರೋಧಿಸುತ್ತಾರೆ, ಅದು ಜಾರಿಗೆ ತರುವ ಯೋಜನೆಗಳನ್ನು ಬಿಜೆಪಿಯ ನಾಯಕರ ನೋಟದ ಮೂಲಕವೇ ಸ್ವೀಕರಿಸುತ್ತಾರೆ. ಅಂತಹ ನೋಟವನ್ನು ಅವರ ತಲೆಗೆ ತುಂಬಲು ಹೇಗೂ ನಮ್ಮ ಮೀಡಿಯಾಗಳು, ಸೋಶಿಯಲ್ ಮೀಡಿಯಾ ಅಣಿಯಾಗಿ ಕೂತಿದೆ. ಅಂತವರು ಸಹಜವಾಗಿಯೇ ಫಲಾನುಭವಿಗಳ ಸೋಗಿನಲ್ಲಿ, ಕಾಂಗ್ರೆಸ್ ಅನ್ನು ಅಥವಾ ಸಿಎಂ ಸಿದ್ದರಾಮಯ್ಯನವರನ್ನು ಅಥವಾ ರಾಹುಲ್, ಡಿಕೇಶಿ, ಖರ್ಗೆಯವರನ್ನೂ ಟೀಕಿಸುತ್ತಾರೆ. ಅಷ್ಟೆ!

ಅದರಾಚೆಗೆ, ಅಂತಹ ಬಿಜೆಪಿ ಮೈಂಡ್‌ಸೆಟ್ಟಿನ ಫಲಾನುಭವಿಗಳ ವೀಡಿಯೊಗಳಿಂದ ನಾವು ಹೆಚ್ಚು ಭ್ರಮನಿರಸನಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. Its all in the game!!  ನಾಳೆ ಅನ್ನಭಾಗ್ಯದ ಅಕ್ಕಿಯಲ್ಲಿ ಕಲ್ಲನ್ನೋ, ಮಣ್ಣನ್ನೋ, ಕಳಪೆ ಗುಣಮಟ್ಟವನ್ನೋ ಹುಡುಕುತ್ತಾರೆ; ಉಚಿತ ಕರೆಂಟ್ ಯೋಜನೆಯಲ್ಲಿ ಲೋಡ್‌ಶೆಡ್ಡಿಂಗ್, ಲೋ-ಓಲ್ಟೇಜ್‌ನ ಅನಾನುಕೂಲ ಕಾಣುತ್ತಾರೆ… ಹೀಗೆ ಸಾಗುತ್ತಲೇ ಇರುತ್ತದೆ.

ಅಂದಹಾಗೆ, ಹೀಗೆ ಟೀಕಿಸುವವರಾರೂ ‘ನಮಗೆ ಈ ಯೋಜನೆಗಳು ಬೇಡ’ ಅಂತ ತಿರಸ್ಕರಿಸುವುದಿಲ್ಲ, they will be the first line benefeciaries!

ಅದಕ್ಕೂ ಅವರು ಕೊಡುವ ಸಮಜಾಯಿಷಿ ಹೇಗಿರುತ್ತೆ ಗೊತ್ತಾ? “ಸಿದ್ರಾಮಯ್ಯ ಏನು ಅವನ ಮನೆಯಿಂದ ತಂದು ಕೊಡ್ತಾನಾ, ಇದು ನಮ್ಮದೇ ತೆರಿಗೆ ದುಡ್ಡು, ನಾವ್ಯಾಕೆ ಬೇಡ ಅನ್ನಬೇಕು!!”

ನಮ್ಮ ಜನ ಅಂದ್ರೆ ಸುಮ್ನೇನಾ….

ಹಾಗೊಂದು ವೇಳೆ ನಾವು ಆಘಾತಗೊಳ್ಳಲೇಬೇಕಿದ್ದರೆ, ಅದು ಇಂಥಾ ವಿಚಾರಗಳಿಗಲ್ಲ, ಬದಲಿಗೆ ಈಗ ಸ್ಪೀಕರ್ ಯು.ಟಿ. ಖಾದರ್  ಮಾಡಿಕೊಂಡಿರುವ ಯಡವಟ್ಟುಗಳಂತಹ ವಿಚಾರಗಳಿಗೆ…..

ಗಿರೀಶ್ ತಾಳಿಕಟ್ಟೆ

ಪತ್ರಕರ್ತರು

ಇದನ್ನೂ ಓದಿ ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ
ಉನ್ನತ ಶಿಕ್ಷಣ, ಉತ್ತಮ ನೌಕರಿ, ಉತ್ತಮ ಆರೋಗ್ಯ ಸೇವೆ, ಉತ್ತಮ ಸಾರಿಗೆ ಸೌಕರ್ಯ ಎಲ್ಲವನ್ನೂ ಪಡೆಯುವ ತೆರಿಗೆದಾರರಿಗೆ, ಇದರಲ್ಲೂ ಬಡವರು ಕಟ್ಟಿರುವ ತೆರಿಗೆ ಮತ್ತು ಅವರ ಶ್ರಮಕ್ಕೆ ನೀಡದ ವೇತನದ ವಂಚನೆಯೂ ಸೇರಿರುತ್ತದೆ ಎಂಬುದು ಅರಿವಾಗಬೇಕು. ಆಗ ಇವೆಲ್ಲಾ ಬಿಟ್ಟಿ ಭಾಗ್ಯಗಳಲ್ಲ, ಇವು ನಿಜದಲ್ಲಿ ಜನರ ಪರವಾಗಿ ಜನರಿಗೆ ನೀಡುವ ಕಾಂಪನ್ಸೇಷನ್ ಎಂದು ಅರ್ಥವಾಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿ ಸರ್ಕಾರದ ಜವಾಬ್ದಾರಿಯೇ ಆಗಿದೆ. – ಪ್ರೊ. ಆರ್‌ ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು

ಹತ್ತು ವರ್ಷಗಳ ಹಿಂದಿನ ಮಾತು. ಆಗ ಭಾಗ್ಯಗಳಿಗಿಂತ ಸಬ್ಸಿಡಿಗಳ ಬಗ್ಗೆ ಅಪಪ್ರಚಾರ ನಡೆಯುತ್ತಿತ್ತು. ರೈತರಿಗೆ ನೀಡುವ ರಿಯಾಯತಿಗಳಿಂದ ದೇಶದ ಆರ್ಥಿಕತೆಗೆ ನಷ್ಟವಾಗುತ್ತದೆ. ಹೀಗೆ ಮಾಡುವುದು ದೇಶದ ಅಭಿವೃದ್ಧಿಗೆ ಮಾರಕ ಎಂಬುದು ಯುವ ಎಂ.ಬಿ.ಎ. ವಿದ್ಯಾರ್ಥಿಗಳ ವಾದವಾಗಿತ್ತು. ಅಂದು ಮಹಿಳಾ ಅಭಿವೃದ್ಧಿಯ ಸವಾಲುಗಳು ವಿಷಯ ಮಂಡನೆಗೆ ಹೋಗಿದ್ದೆ. ವಿದ್ಯಾರ್ಥಿಗಳಿಗೆ ಭಾಷಣಕಾರರು ಏನೇ ಉತ್ತರ ಕೊಟ್ಟರೂ ಅವರ ವಾದ ಒಂದೇ ಆಗಿತ್ತು. ರಿಯಾಯತಿಗಳು ನಿಲ್ಲದೆ ಈ ದೇಶದ ಉದ್ಧಾರವಿಲ್ಲ ಎಂಬುದಾಗಿತ್ತು. ಆಗ ನಾನು ಮಕ್ಕಳಿಗೆ ಒಂದು ಪ್ರಶ್ನೆಯನ್ನು ಹಾಕಿದೆ. ಐ.ಐ.ಟಿ.ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಿಯಾಯತಿಯಲ್ಲಿ ಓದುತ್ತಿದ್ದಾರೆಯೇ? ಹೌದು ಎಂದರು. ಹಾಗಾದರೆ ಅವರೆಲ್ಲ ಈಗ ಎಲ್ಲಿದ್ದಾರೆ. ಅಮೇರಿಕಾದಲ್ಲಿ ಒಳ್ಳೆ ಉದ್ಯೋಗದಲ್ಲಿ. ಈ ದೇಶದ ರಿಯಾಯತಿಯಲ್ಲಿ ಓದಿದವರು ಬೇರೆ ದೇಶಕ್ಕೆ ದುಡಿಯುವುದರಿಂದ ದೇಶದ ಅಭಿವೃದ್ಧಿ ಹಿಂದಕ್ಕೆ ಹೋಗುತ್ತಿಲ್ಲವೇ?

ಆನಂತರದಲ್ಲಿ ಮತ್ತೊಂದು ಪ್ರಶ್ನೆ ಕೇಳಿದೆ. ನಿಮ್ಮ ಮನೆಗೆ ಬರುವ ಕೆಲಸದಾಕೆಗೆ ಒಂದು ಗಂಟೆಗೆ ಎಷ್ಟು ವೇತನ ನೀಡುತ್ತೀರಿ? ಒಂದು ಕೆ.ಜಿ. ಆಲೂಗಡ್ಡೆ ಬೆಳೆಯಲು ಎಷ್ಟು ಖರ್ಚಾಗುತ್ತದೆ. ರೈತನ ದಿನನಿತ್ಯದ ಕೂಲಿ ಸೇರಿಸಿ ಲೆಕ್ಕ ಹಾಕಿ ಹೇಳಿ. ಆಲೂಗಡ್ಡೆ ಎಷ್ಟು ತಿಂಗಳ ಬೆಳೆ? ವಿದ್ಯಾರ್ಥಿಗಳು ಮೌನವಾದರು. ರೈತರ ಕೂಲಿ, ನೀರು, ವಿದ್ಯುತ್, ಅವರ ಪ್ರತಿದಿನದ ಶ್ರಮ, ಬಂಡವಾಳ ಎಲ್ಲವೂ ಲೆಕ್ಕಹಾಕಲು ಅರ್ಧಗಂಟೆ ಸಮಯ ನೀಡಲಾಯಿತು. ಒಂದು ಎಕರೆ ಆಲೂಗಡ್ಡೆ ಇಳುವರಿ ಪಡೆದು ಎಂ.ಬಿ.ಎ. ಮಕ್ಕಳು ಲೆಕ್ಕಹಾಕಿ ಒಂದು ಕೆ.ಜಿ. ಆಲೂಗಡ್ಡೆಗೆ ಕಾರ್ಪೊರೇಟ್ ವಿಧದಲ್ಲಿ ದರ ನಿಗದಿ ಪಡಿಸಿದರು. ಕೆ.ಜಿ.ಗೆ 40/- ರೂಪಾಯಿಗಳು ಆಗುತ್ತದೆ ಎಂದರು. ಆಗ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 10/- ರೂಪಾಯಿಗಳಿತ್ತು. ಇನ್ನು ರೈತರಿಗೆ ನೀಡುವ ಗೊಬ್ಬರ ಸಬ್ಸಿಡಿ, ನೀರು, ವಿದ್ಯುತ್ ಎಲ್ಲವೂ ಫ್ರೀ ಆಗಿ ನೀಡದಿದ್ದರೆ ಆಲೂಗಡ್ಡೆಗೆ ಜನಸಾಮಾನ್ಯರು 30/- ರೂಪಾಯಿಗಳನ್ನು ಹೆಚ್ಚಾಗಿ ನೀಡಬೇಕು. ನೀವು ನೀಡುವ ಹಣವನ್ನು ತಪ್ಪಿಸಿ ಸರ್ಕಾರ ನಿಮಗಾಗಿ ಅವರಿಗೆ ಕಾಂಪನ್ಸೇಟ್ ಮಾಡುತ್ತಿದೆ. ಅದು ರೈತರಿಗೆ ನೀಡುವ ರಿಯಾಯತಿಯಲ್ಲ. ಅದು ಉಣ್ಣುವವರಿಗೆಲ್ಲಾ ನೀಡುವ ರಿಯಾಯತಿ ಎಂದು ಮನವರಿಕೆ ಮಾಡಿಕೊಡಲಾಯಿತು.

ಇಂದು ಸರ್ಕಾರ ನೀಡುತ್ತಿರುವ ಈ ಭಾಗ್ಯಗಳು ಕೂಡ ಜನರ ದುಡಿಮೆಯನ್ನು ಚೀಪ್ ಆಗಿ ಉಪಯೋಗಿಸಿ  ವಂಚಿಸುತ್ತಿರುವುದರಿಂದ ಅವರ ಶ್ರಮ ಮತ್ತು ಜೀವನ ಭದ್ರತೆಗೆ ಕೊಡುಗೆಗಳನ್ನು  ನೀಡುವ ಮೂಲಕ ಕಾಂಪನ್ಸೇಟ್ ಮಾಡಲಾಗಿದೆ. ಸಫಾಯಿ ಕರ್ಮಚಾರರು, ಮನೆಗೆಲಸದವರು, ಗಾರ್ಮೆಂಟ್ ಕಾರ್ಮಿಕರು, ರೈತರು, ಬಡಗಿ, ಕುಂಬಾರ, ಕಮ್ಮಾರ, ಗಾರೆಕೆಲಸದವರು, ಚಿಂದಿ ಆಯುವವರು ಹೀಗೆ ಹತ್ತಾರು ರೀತಿಯ ಕಾರ್ಮಿಕರಿಗೆ ಅವರು ದುಡಿಯುತ್ತಿರುವ ಶ್ರಮಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ. ಆದರೆ ಅವರ ದುಡಿಮೆಯ ಶ್ರಮವನ್ನು ಚೀಪ್ ಆಗಿ ಬಳಸುತ್ತಿರುವವರು ತೆರಿಗೆ ನೀಡುವವರು ಮತ್ತು ಮೇಲು ಮಧ್ಯಮ ವರ್ಗದವರು. ಅದಕ್ಕಾಗಿ ಸರ್ಕಾರಗಳು ನೀವು ವಂಚಿಸುವ ಶ್ರಮದ ಫಲವನ್ನು ಅವರಿಗೆ ಸ್ವಲ್ಪವಾದರೂ ನೀಡಲೇಬೇಕಾಗಿದೆ. ಅವರಿಗೆ ಫ್ರೀ ಆಗಿ ಆರೋಗ್ಯ, ಶಿಕ್ಷಣ, ಪ್ರಯಾಣ ಉಚಿತವಾಗಿ ದೊರೆತರೆ ಮಾತ್ರ ಅವರು ನಿಮಗೆ ಸೇವೆ ನೀಡಲು ಸಾಧ್ಯ. ತೆರಿಗೆದಾರರಿಗೆ ಸರ್ಕಾರ ಆರೋಗ್ಯ, ಶಿಕ್ಷಣ ಸೇವೆ ಫ್ರೀ ಆಗಿ ನೀಡುತ್ತಿದೆ. ಇಲ್ಲದಿದ್ದರೆ ತೆರಿಗೆದಾತರ ಮಕ್ಕಳು ವೈದ್ಯ, ಇಂಜಿನಿಯರಿಂಗ್, ಎಂ.ಬಿ.ಎ. ಶಿಕ್ಷಣ ಪಡೆಯಲು ಸಾಧ್ಯವಾಗದು. ಇದೆಲ್ಲಾ ಫ್ರೀ ಆಗಿ ಪಡೆಯುತ್ತಿರುವವರು ಬಡವರು ಮತ್ತು ಎಲ್ಲ ವರ್ಗದವರು. ಅದು ಇವರು ನೀಡುವುದಕ್ಕಿಂತ ದುಪ್ಪಟ್ಟು. ಬಡಕುಟುಂಬವು ತಿಂಗಳಿಗೆ 2000+800+800+400+1000=5000/- ರೂಪಾಯಿಗಳಷ್ಟು ಸವಲತ್ತು ಪಡೆದರೆ ದು:ಖಪಡುವುದಾದರೆ, ಉನ್ನತ ಶಿಕ್ಷಣಕ್ಕಾಗಿ ಕೆಲವರಿಗೆ ಸರ್ಕಾರ ಭರಿಸುವ ಸಾವಿರಾರು ಕೋಟಿಗಳ ವಿನಿಯೋಗ ಅವರ ಹಕ್ಕು ಹೇಗೆ ಆಗುತ್ತದೆ? ಉನ್ನತ ಶಿಕ್ಷಣ, ಉತ್ತಮ ನೌಕರಿ, ಉತ್ತಮ ಆರೋಗ್ಯ ಸೇವೆ, ಉತ್ತಮ ಸಾರಿಗೆ ಸೌಕರ್ಯ ಎಲ್ಲವನ್ನೂ ಪಡೆಯುವ ತೆರಿಗೆದಾರರಿಗೆ, ಇದಕ್ಕೂ ಬಡವರು ಕಟ್ಟಿರುವ ತೆರಿಗೆ ಮತ್ತು ಅವರ ಶ್ರಮಕ್ಕೆ ನೀಡದ ವೇತನದ ವಂಚನೆಯೂ ಸೇರಿರುತ್ತದೆ ಎಂಬುದು ಅರಿವಾಗಬೇಕು. ಕರ್ಮಸಿದ್ಧಾಂತದ ಮೂಲಕ ಜನರ ಸೌಕರ್ಯವನ್ನು ನೋಡುವವರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ. ಇದು ಅರ್ಥ ಆಗಲು ಅದರಿಂದ ಹೊರಬರಬೇಕು ಮತ್ತು ಸರ್ಕಾರಿ ಸಂಬಳ ತಮ್ಮ ಹಕ್ಕೆಂದು ತಿಳಿದು ವೇತನಕ್ಕೆ ತಕ್ಕ ದುಡಿಮೆ ಮಾಡದೆ ವಂಚಿಸುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ  ಕಲಿಯಬೇಕು. ಆಗ ಇವೆಲ್ಲಾ ಬಿಟ್ಟಿ ಭಾಗ್ಯಗಳಲ್ಲ, ಇವು ನಿಜದಲ್ಲಿ ಜನರ ಪರವಾಗಿ ಜನರಿಗೆ ನೀಡುವ ಕಾಂಪನ್ಸೇಷನ್ ಎಂದು ಅರ್ಥವಾಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿ ಸರ್ಕಾರದ ಜವಾಬ್ದಾರಿ. ಅದಕ್ಕೆ ಕುವೆಂಪು ಅವರು ಹೇಳಿದ್ದು ಮಠ, ಮಂದಿರ, ಚರ್ಚು, ಮಸೀದಿ ಬಿಟ್ಟು ಹೊರಗೆ ಬನ್ನಿ ಎಂದು. ಆಗ ಕರ್ಮಸಿದ್ಧಾಂತದಿಂದ ಮುಕ್ತರಾಗಿ ಜನಪರವಾಗಿ  ಚಿಂತಿಸಲು ಸಾಧ್ಯವೆಂದು. ಉಣ್ಣುವ, ಉಡುವ ಎಲ್ಲದಕ್ಕೂ ತೊಡರು ಮಾಡುವ ಮಂದಿಯಿಂದ ಮುಕ್ತರಾಗಲು ಸಾಧ್ಯ.

ಪ್ರೊ.ಆರ್.ಸುನಂದಮ್ಮ

ನಿವೃತ್ತ ಪ್ರಾಧ್ಯಾಪಕರು.

ಓದಿ- ‘ಶಕ್ತಿ ಯೋಜನೆ’ ಯ ಸಾರಥಿ..ರೈಟ್…ರೈಟ್..!

ಬಡ ಜನರಿಗೆ ಅಕ್ಕಿ ನಿರಾಕರಿಸುವುದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ
ಅಕ್ಕಿ ನಿರಾಕರಿಸಿದರೆ ಕಾಂಗ್ರೆಸ್ ಪಕ್ಷದ ಒಂದು ಗ್ಯಾರಂಟಿಯನ್ನು ಈಡೇರಿಸುವುದು ಕಷ್ಟವಾಗುತ್ತದೆ. ಆವಾಗ ಕಾಂಗ್ರೆಸ್ ಪಕ್ಷ ಮತದಾರರಿಗೆ 10 ಕೆಜಿ ಅಕ್ಕಿ ಭರವಸೆ ಕೊಟ್ಟು ಮೋಸ ಮಾಡಿದೆ ಎಂದು ಪ್ರಚಾರ ಮಾಡಬಹುದು. ಜನರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಕಳೆದುಕೊಂಡು ಬಿಜೆಪಿಯತ್ತ ಬರಬಹುದೆನ್ನುವ ಒಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಇಲ್ಲಿ ಸಾಧ್ಯ– ಎಂ.ಚಂದ್ರ ಪೂಜಾರಿ, ಅಭಿವೃದ್ಧಿ ಚಿಂತಕರು.

‘ತಾನೂ ಮಾಡುವುದಿಲ್ಲ ಮತ್ತೊಬ್ಬರನ್ನು ಮಾಡಲೂ ಬಿಡುವುದಿಲ್ಲ’ ಎನ್ನುವ ನಿಲುವು ರಾಜ್ಯಕ್ಕೆ ಅಕ್ಕಿ ನಿರಾಕರಿಸುವ ಕೇಂದ್ರ ಸರಕಾರದ ಕ್ರಮದಲ್ಲಿ ಎದ್ದು ತೋರುತ್ತಿದೆ. ಇದು ಕೇವಲ ಅಕ್ಕಿ ನೀಡುವ ವಿಚಾರದಲ್ಲಿ ಮಾತ್ರವಲ್ಲ, ಬಡತನ ನಿವಾರಣೆ ವಿಚಾರದಲ್ಲೇ ಬಿಜೆಪಿಯ ಟ್ರಾಕ್ ರೆಕಾರ್ಡ್ ಅಷ್ಟೇನು ಉತ್ತಮವಾಗಿಲ್ಲ. ಬಿಜೆಪಿ ಸರಕಾರ ನೇಮಕ ಮಾಡಿದ ಶಾಂತ ಕುಮಾರ್ ಸಮಿತಿ ಶೇ.67ರಷ್ಟು ಜನರಿಗೆ ಅನ್ವಯವಾಗಬೇಕಾದ ಆಹಾರ ಭದ್ರತೆ ಕಾಯಿದೆಯನ್ನು ತಿದ್ದುಪಡಿ ಮಾಡಿ ಶೇ.40ಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಉದ್ಯೋಗ ಖಾತರಿ ಯೋಜನೆಗೆ ಪ್ರತಿ ವರ್ಷ ಬಜೆಟ್‍ಲ್ಲಿ ಬೇಡಿಕೆಗಿಂತ ಕಡಿಮೆ ಮೊತ್ತ ತೆಗೆದಿರಿಸುವುದು, ಇದರಿಂದಾಗಿ ಬಡವರು ಸಂಬಳವಿಲ್ಲದೆ  ಒಂದೆರಡು ತಿಂಗಳು ಪರದಾಡುವುದು, ಏನೇನೂ ಉಳಿತಾಯ ಇಲ್ಲದ ಬಡವರ ಬದುಕನ್ನು ಅರ್ಥಮಾಡಿಕೊಳ್ಳದೆ, ವಲಸೆ ಕಾರ್ಮಿಕರಿಗೆ ವಾಪಸ್ ಹೋಗಲು ಅವಕಾಶ ನೀಡದೆ ಲಾಕ್‍ಡೌನ್  ಘೋಷಿಸಿದ್ದು, ಕೋವಿಡ್ ಲಸಿಕೆಯನ್ನು ಉಚಿತ ನೀಡಲು ನಿರಾಕರಿಸಿದ್ದು, ಉಜ್ವಲ್ ಯೋಜನೆಯಲ್ಲಿ ಸಿಲಿಂಡರ್ ರಿಫಿಲ್ ಮಾಡಿಸಲು ಬಡ ಕುಟುಂಬಗಳು ಪರದಾಡಿದ್ದು, ಜೀರೋ ಬ್ಯಾಲೆನ್ಸ್‌ ನ ಜನ್‍ಧನ್ ಯೋಜನೆಯಲ್ಲಿ ಜೀರೋ ಸವಲತ್ತು ಇರುವುದು ಇತ್ಯಾದಿಗಳೆಲ್ಲ ಕೇಂದ್ರ ಸರಕಾರದ ಬಡತನ ನಿವಾರಣೆಯ ಕೆಲವು ಸ್ಯಾಂಪಲ್‍ಗಳು.

ಬಡತನ ನಿವಾರಣೆ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರಕಾರ ಕೇಂದ್ರಕ್ಕಿಂತ ಭಿನ್ನವಾಗಿ ವ್ಯವಹರಿಸಿಲ್ಲ. ಹಿಂದಿನ ಸರಕಾರದ ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಲುಸಾಲು ಸವಲತ್ತುಗಳನ್ನು ಘೋಷಿಸುವಾಗ ಬಿಜೆಪಿ ಅರ್ಧ ಲೀಟರ್ ಹಾಲು, ಒಂದು ಸಿಲಿಂಡರ್ ಉಚಿತ ಘೋಷಿಸಿದೆ. ಚುನಾವಣೆ ಗೆಲ್ಲಲು ಸವಲತ್ತುಗಳ ಬದಲು ಹಿಜಾಬ್, ಅಜಾನ್, ಹಲಾಲ್, ಟಿಪ್ಪು ಸುಲ್ತಾನ್ ಇವನ್ನೇ ನಂಬಿತ್ತು. ಸೋತ ನಂತರ  ಏಕೆ ಇನ್ನೂ ಕೂಡ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ? ಗ್ಯಾರಂಟಿಗಳನ್ನು ನೀಡುವಾಗ ಶರತ್ತುಗಳು ಏಕೆ? ಎಲ್ಲರಿಗೂ ಏಕೆ ಸವಲತ್ತುಗಳನ್ನು ನೀಡುತ್ತಿಲ್ಲ? ಇವಕ್ಕೆಲ್ಲ ಎಲ್ಲಿಂದ ಸಂಪನ್ಮೂಲ ತರುತ್ತೀರಾ? ರಾಜ್ಯ ದಿವಾಳಿ ಮಾಡಲು ಹೊರಟಿದ್ದೀರಾ? ಇವೆಲ್ಲ ರಾಜ್ಯದ ಬಿಜೆಪಿ ನಾಯಕರು ಕೇಳುವ ಪ್ರಶ್ನೆಗಳು. ಈಗ ಅವರದ್ದೇ ಪಕ್ಷದ ಕೇಂದ್ರ ಸರಕಾರ ಅಕ್ಕಿ ನೀಡಲು ನಿರಾಕರಿಸುತ್ತಿದೆ. ಮೇಲಿನ ಪ್ರಶ್ನೆಗಳನ್ನು ಕೇಳುವಾಗ ಬಿಜೆಪಿ ನಾಯಕರಿಗೆ ರಾಜ್ಯದ ಬಡಜನರ ಹಿತ ಮುಖ್ಯವಾಗಿತ್ತೆಂದು ರಾಜ್ಯದ ಜನ ನಂಬಬೇಕಾದರೆ ಅಕ್ಕಿ ನಿರಾಕರಿಸುವ ಕೇಂದ್ರದ ಕ್ರಮವನ್ನು ಬಿಜೆಪಿ ಎಂಪಿಗಳು ಮತ್ತು ರಾಜ್ಯದ ನಾಯಕರು ಪ್ರಶ್ನಿಸಬೇಕಾಗುತ್ತದೆ. ಇಲ್ಲವಾದರೆ ರಾಜ್ಯ ಮತ್ತು ರಾಜ್ಯದ ಜನರ ಹಿತಕ್ಕಿಂತ ಇವರಿಗೆ ತಮ್ಮ ಪಕ್ಷದ ಆಸಕ್ತಿ ಮುಖ್ಯ ಎಂದಾಗುತ್ತದೆ. ಮತ್ತು ತಮ್ಮ ಪಕ್ಷದ ಆಸಕ್ತಿಯನ್ನು ಸಾಧಿಸಲು ರಾಜ್ಯದ ಬಡಜನರ ಹಿತವನ್ನೂ ಬಲಿಕೊಡಲು ಸಿದ್ಧರಿದ್ದಾರೆಂದಾಗುತ್ತದೆ.

ಏಕೆಂದರೆ ರಾಜ್ಯ ಸರಕಾರ ನೀಡಲಿಚ್ಚಿಸುವ ತಿಂಗಳಿಗೆ ತಲಾ 10 ಕೆಜಿ ಅಕ್ಕಿಗೆ ಮಾಧ್ಯಮಗಳಲ್ಲಿ ಬರುತ್ತಿರುವ ವಿರೋಧವನ್ನು ನಂಬುವ ಜನರಿಗೆ ದೊಡ್ಡ ಪ್ರಮಾಣ ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಇದು ದೊಡ್ಡ ಪ್ರಮಾಣದ ಪೂರೈಕೆಯೇ ಅಲ್ಲ. ಮೂರನೇ ಎರಡರಷ್ಟು ಜನರಿಗೆ ತಿಂಗಳಿಗೆ ತಲಾ 5 ಕೆಜಿ ಆಹಾರ ಪದಾರ್ಥವನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಕೆ ಮಾಡಬೇಕೆಂದು ದೇಶದ ಆಹಾರ ಭದ್ರತೆ ಕಾಯಿದೆ ಹೇಳುತ್ತಿದೆ. ಕೇಂದ್ರದ ಎಲ್ಲ ಯೋಜನೆಗಳಂತೆ ಇಲ್ಲೂ ರಾಜ್ಯಗಳು ಈ 5 ಕೆಜಿ ಜೊತೆಗೆ ತಮ್ಮ ಸಂಪನ್ಮೂಲ ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ಸರಕಾರ ಕೇಂದ್ರದ 5 ಕೆಜಿ ಜೊತೆಗೆ ತನ್ನ 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಕೊಡಲು ನಿರ್ಧರಿಸಿದೆ. 10 ಕೆಜಿ ಏಕೆಂದು ಅರ್ಥವಾಗಬೇಕಾದರೆ ಈ ಕೆಳಗಿನ ಲೆಕ್ಕಚಾರವನ್ನು ನೋಡಬೇಕು.

ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಅಂದರೆ ತಲಾ 10,000 ಗ್ರಾಂ ಅಕ್ಕಿ. 10,000 ಗ್ರಾಂ ಅಕ್ಕಿಯನ್ನು 30 ದಿನಗಳಿಂದ ಭಾಗಿಸಿದರೆ ದಿನಾ ಒಬ್ಬರಿಗೆ 333 ಗ್ರಾಂ ಅಕ್ಕಿ ಲಭ್ಯವಾಗುತ್ತದೆ. ಕೆಲವು ಅಧ್ಯಯನಗಳು 100 ಗ್ರಾಂ ಅಕ್ಕಿ 130 ಕ್ಯಾಲರಿ ಶಕ್ತಿ (ಏನರ್ಜಿ) ಉತ್ಪಾದಿಸುತ್ತದೆ  ಎನ್ನುತ್ತವೆ. ಅಂದರೆ 1 ಗ್ರಾಂ ಅಕ್ಕಿ 1.3 ಕ್ಯಾಲರಿಯಷ್ಟು ಶಕ್ತಿ ಉತ್ಪಾದಿಸುತ್ತದೆ ಅಥವಾ 333 ಗ್ರಾಂ ಅಕ್ಕಿ 432 ಕ್ಯಾಲರಿ ಶಕ್ತಿ ಉತ್ಪಾದಿಸುತ್ತದೆ. ಸರಕಾರಿ ಲೆಕ್ಕಚಾರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದುಡಿದು ಗಳಿಸುವಷ್ಟು ಶಕ್ತಿ ಪಡೆಯಬೇಕಾದರೆ ದಿನವೊಂದಕ್ಕೆ ಕನಿಷ್ಠ 2,400 ಕ್ಯಾಲರಿ ಶಕ್ತಿ ಗಳಿಸುವಷ್ಟು ಆಹಾರ ಸೇವಿಸಬೇಕು. 2400 ಕ್ಯಾಲರಿ ಎಲ್ಲಿ? 432 ಕ್ಯಾಲರಿ ಎಲ್ಲಿ?  ಬಡ ಜನರಿಗೆ  ನೀಡುವ ಇಷ್ಟೊಂದು ಸಣ್ಣ ಪ್ರಮಾಣದ ಸವಲತ್ತಿಗೂ ಇಷ್ಟೊಂದು ಅಸಹನೆ ಏಕೆ?

ಅಸಹನೆ ಏಕೆನ್ನುವ ಪ್ರಶ್ನೆಗೆ ಎರಡು ಮೂರು ಉತ್ತರಗಳು ಸಾಧ್ಯ. ಒಂದು, ಗ್ಯಾರಂಟಿಗಳ ದಿಶೆಯಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ. ಗ್ಯಾರಂಟಿಗಳನ್ನು ಈಡೇರಿಸಲು ಬಿಟ್ಟರೆ ತಾನೇ ಕಾಂಗ್ರೆಸ್ ತನ್ನ ಮಾತು ಉಳಿಸಿಕೊಳ್ಳಲು ಸಾಧ್ಯ. ಅಕ್ಕಿ ನಿರಾಕರಿಸಿದರೆ ಕಾಂಗ್ರೆಸ್ ಪಕ್ಷದ ಒಂದು ಗ್ಯಾರಂಟಿಯನ್ನು ಈಡೇರಿಸುವುದು ಕಷ್ಟವಾಗುತ್ತದೆ. ಆವಾಗ ಕಾಂಗ್ರೆಸ್ ಪಕ್ಷ ಮತದಾರರಿಗೆ 10 ಕೆಜಿ ಅಕ್ಕಿ ಭರವಸೆ ಕೊಟ್ಟು ಮೋಸ ಮಾಡಿದೆ ಎಂದು ಪ್ರಚಾರ ಮಾಡಬಹುದು. ಜನರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಕಳೆದುಕೊಂಡು ಬಿಜೆಪಿಯತ್ತ ಬರಬಹುದೆನ್ನುವ ಒಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಸಾಧ್ಯ. ಇದೊಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಏಕೆಂದರೆ ಒಂದು ವೇಳೆ ಕಾಂಗ್ರೆಸ್ ಪಕ್ಷ ಕೇಂದ್ರದ ಹುನ್ನಾರದಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿದರೆ ಕೇಂದ್ರದ ಲೆಕ್ಕಚಾರವೆಲ್ಲ ಬುಡಮೇಲಾಗಬಹುದು. ಇನ್ನೊಂದು ದೃಷ್ಟಿಯಿಂದಲೂ ಇದೊಂದು ಸಮೀಪ ದೃಷ್ಟಿಯ ರಾಜಕೀಯ ಏಕೆಂದರೆ ಇದೊಂದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ. ಇದನ್ನೂ  ಮಾಸ್ಟರ್ ಸ್ಟ್ರೋಕ್ ಎನ್ನುವವರಿದ್ದರೆ ಅವರಲ್ಲಿ ಮನುಷ್ಯತ್ವ ಸಂಪೂರ್ಣ ಸತ್ತು ಹೋಗಿದೆಯೆಂದು ತೀರ್ಮಾನಿಸಬಹುದು.

ಎರಡು, ಬಲಪಂಥೀಯ ಪಕ್ಷಗಳ ಇತಿಹಾಸದಲ್ಲಿ ಅವು ಬಡವರ ಪರ ನಿಂತ ಉದಾಹರಣೆಗಳು ತುಂಬಾ ಕಡಿಮೆ. ಪ್ರಪಂಚದ ಯಾವುದೇ ದೇಶದಲ್ಲೂ ಫ್ಯಾಸಿಸ್ಟ್ (ಬಲಪಂಥೀಯ) ಪಕ್ಷಗಳು ಬಡವರ, ತಳಸ್ತರದ ಜನರ, ಕಾರ್ಮಿಕರ, ಮಹಿಳೆಯರ, ಅಲ್ಪಸಂಖ್ಯಾತರ, ದುಡಿಯುವ ವರ್ಗದ ಪರ ನಿಂತ ಉದಾಹರಣೆ ಇಲ್ಲ. ಜರ್ಮನಿ, ಗ್ರೀಸ್, ಪೋರ್ಚುಗಲ್, ಬ್ರೆಜಿಲ್, ಚೈನಾ, ಹಂಗೇರಿ, ಫ್ರಾನ್ಸ್ ಇವೆಲ್ಲ ಹಿಂದೆ ಫ್ಯಾಸಿಸ್ಟ್ ಪಕ್ಷಗಳ ಆಳ್ವಿಕೆ ಕಂಡ ದೇಶಗಳು. ಇಲ್ಲೆಲ್ಲ ಫ್ಯಾಸಿಸ್ಟ್ ಪಕ್ಷಗಳು ಒಂದೋ ಭೂಮಾಲೀಕರ ಪರ ಅಥವಾ ಬಂಡವಾಳಿಗರ ಪರ ಕೆಲಸ ಮಾಡಿವೆ. ಎಲ್ಲ ಕಡೆ ದುಡಿಯುವ ವರ್ಗ ಮತ್ತು ಅವರ ಪಕ್ಷಗಳು ಫ್ಯಾಸಿಸ್ಟ್ ಪಕ್ಷಕ್ಕೆ ಬಹುದೊಡ್ಡ ಶತ್ರುಗಳು. ದುಡಿಯುವ ವರ್ಗವನ್ನು ಮತ್ತು ಅವರ ಪಕ್ಷಗಳನ್ನು ನಿರ್ನಾಮ ಮಾಡುವುದು ಫ್ಯಾಸಿಸ್ಟ್ ಪಕ್ಷದ ಪರಮ ಗುರಿ. ನಮ್ಮಲ್ಲೂ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು ಇವರ ಬಹುದೊಡ್ಡ ಶತ್ರುಗಳು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಮತ್ತು ನಂತರ ಬಡತನದ ಬಗ್ಗೆ, ಬಡವರ ಬಗ್ಗೆ, ಅಸಮಾನತೆ ಬಗ್ಗೆ, ನಿರುದ್ಯೋಗದ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದನ್ನು ನೋಡಲು ಸಾಧ್ಯವಾಗಿಲ್ಲ. ಆರ್ಟಿಕಲ್ 370 ರದ್ದುಗೊಳಿಸುವುದು, ರಾಮ ಜನ್ಮ ಭೂಮಿ, ಆಯೋಧ್ಯೆಯಲ್ಲಿ ಮಂದಿರ ನಿರ್ಮಿಸುವುದು, ಗೋಹತ್ಯೆ ನಿಷೇಧ, ಚರಿತ್ರೆ ಪುನರ್ ರಚಿಸುವುದು ಇತ್ಯಾದಿಗಳು ಅವರಿಗೆ ಮುಖ್ಯವಾದಷ್ಟು ಬಡತನ, ಅಸಮಾನತೆಗಳು ಮುಖ್ಯವಾಗಿಲ್ಲ.

ಒಂದು ದೇಶ- ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಮಾರುಕಟ್ಟೆ, ಒಂದು ತೆರಿಗೆ ಹೀಗೆ ಎಲ್ಲದವುಗಳಲ್ಲಿ ಒಂದನ್ನು ಕಾಣುವ ಪಕ್ಷ ಯಾವುತ್ತೂ ಒಂದು ದೇಶ – ಒಂದು ಶಿಕ್ಷಣ, ಒಂದು ಆರೋಗ್ಯ, ಒಂದು ಕನಿಷ್ಟ ವೇತನ, ಒಂದು ಉದ್ಯೋಗದ ಬಗ್ಗೆ ಮಾತಾಡುವುದಿಲ್ಲ.  ಭಾಷೆ, ಧರ್ಮ, ಗಡಿ, ಧ್ವಜ ಇತ್ಯಾದಿ ನಿರ್ಜೀವ ವಸ್ತುಗಳಲ್ಲಿ ದೇಶಪ್ರೇಮವನ್ನು ನೋಡುವ ಮತ್ತು ಬೆಳೆಸಲು ಪ್ರಯತ್ನಿಸುವ ಪಕ್ಷಕ್ಕೆ ಜನರಲ್ಲಿ ದೇಶವನ್ನು  ಮತ್ತು ಪರಸ್ಪರ ಪ್ರೀತಿಸುವ ಜನರಲ್ಲಿ ದೇಶಪ್ರೇಮವನ್ನು ನೋಡಲು ಸಾಧ್ಯವಾಗಿಲ್ಲ. ಜನರೇ ದೇಶ, ದೇಶ ಮತ್ತು ರಾಜ್ಯಕ್ಕೆ ಸೇರಿದ ನಾವೆಲ್ಲ ಒಂದೇ ಎನ್ನುವ ಭಾವನೆ ದೇಶಪ್ರೇಮ. ಪ್ರಪಂಚದಲ್ಲಿ ಇಂದು ಮುಂಚೂಣಿಯಲ್ಲಿರುವ ದೇಶಗಳೆಲ್ಲ ಇದೇ ಮಾದರಿಯಲ್ಲಿ ದೇಶ ಮತ್ತು ದೇಶಪ್ರೇಮವನ್ನು ಕಟ್ಟಿಕೊಂಡಿರುವುದು. ಈ ಬಗೆಯ ದೇಶಪ್ರೇಮದಲ್ಲಿ ಮಾತ್ರ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿಗಾಗುವ ಅನ್ಯಾಯ, ಅಸಮಾನತೆ ತನಗೇ ಆದ ಅನುಭವ ಆಗಲು ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಗಡಿ, ಧ್ವಜಗಳಲ್ಲಿ ಮಾತ್ರ ದೇಶ ಮತ್ತು ದೇಶಪ್ರೇಮ ಕಾಣುವವರಿಗೆ ಜೀವಂತ ಜನರನ್ನು ಜಾತಿ, ಧರ್ಮದ ಹೆಸರಲ್ಲಿ ವಿಭಜಿಸುವುದು ಮತ್ತು ಜನರ ನಡುವೆ ಕೋಮು ವೈಷಮ್ಯವನ್ನು ಹುಟ್ಟು ಹಾಕುವುದು ಅಸಹಜವಾಗುವುದಿಲ್ಲ. ವಾಸ್ತವ ಹೀಗಿರುವಾಗ ಬಡಜನರಿಗೆ ಅಕ್ಕಿ ನಿರಾಕರಿಸುವುದು ವಿಶೇಷ ಅನ್ನಿಸುವುದಿಲ್ಲ.

ಮೂರು, ಕಾಂಗ್ರೆಸ್ ಪಕ್ಷ ನೀಡಲಿಚ್ಚಿಸುವ ಸವಲತ್ತುಗಳು ಬಿಜೆಪಿ ಅಭಿವೃದ್ಧಿ ಕಲ್ಪನೆಯಲ್ಲಿ ಫ್ರೀಬೀಸ್ ಎಂದು ಬ್ರಾಂಡ್ ಆಗಿವೆ. ಫ್ರೀಬೀಸ್ ಎಂದರೆ ಉಚಿತ ಎನ್ನುವ ಅರ್ಥದ ಜೊತೆಗೆ ಅಭಿವೃದ್ಧಿಗೆ ಏನೇನೂ ಕೊಡುಗೆ ಇಲ್ಲದ  ಸವಲತ್ತುಗಳೆನ್ನುವ ಅರ್ಥ ಇದೆ. ದೇಶದ ಪ್ರಧಾನಿಯವರ ಪ್ರಕಾರ ಇಂತಹ ಸವಲತ್ತುಗಳ ಬದಲು ಸಿಕ್ಸ್ ಲೇನ್ ಹೈವೇಸ್, ಬುಲೆಟ್ ಟ್ರೈನ್‍ಗಳು, ಏರ್‌ಪೋರ್ಟುಗಳು, ಬಂದರುಗಳು ಇವುಗಳ ಮೇಲೆ ಮಾಡುವ ವಿನಿಯೋಜನೆಗಳು ಅಭಿವೃದ್ಧಿ ಪೂರಕ. ಪ್ರಧಾನಿಗಳು ಉದ್ದಿಮೆದಾರರಲ್ಲಿ ಉತ್ಪಾದಕರನ್ನು ನೋಡುತ್ತಾರೆ ಹೊರತು ಸಣ್ಣಪುಟ್ಟ ಕಾರ್ಮಿಕರಲ್ಲಿ ಉತ್ಪಾದಕರನ್ನು ನೋಡುವುದಿಲ್ಲ. ದೊಡ್ಡ ಉದ್ದಿಮೆಗಳಿಗೆ ಕಡಿಮೆ ಬಡ್ಡಿಗೆ ಸಾಲ ಕೊಡುವುದು, ಸಾಲ ಕಟ್ಟದಿದ್ದರೆ ಸಾಲ ಮನ್ನಾ ಮಾಡುವುದು, ಕಡಿಮೆ ಬೆಲೆಗೆ ಭೂಮಿ ಕೊಡುವುದು, ಕಡಿಮೆ ಬೆಲೆಗೆ ಪ್ರಾಕೃತಿಕ ಸಂಪನ್ಮೂಲ ಕೊಡುವುದು, ಪರಿಸರ ಮಾಲಿನ್ಯ ಕಾಯಿದೆಯನ್ನು ಸಡಿಲಗೊಳಿಸುವುದು, ಭೂಸ್ವಾಧೀನ ಮಸೂದೆಯನ್ನು ಸಡಿಲಗೊಳಿಸುವುದು ಇತ್ಯಾದಿಗಳೆಲ್ಲ ಉತ್ಪಾದಕರನ್ನು ಬೆಂಬಲಿಸುವ ಬಿಜೆಪಿ ಸರಕಾರದ ಕ್ರಮಗಳು. ಈ ಉದ್ದಿಮೆಗಳು ಉತ್ಪಾದಿಸುವ ಸರಕುಸೇವೆಗಳನ್ನು ಖರೀದಿಸಿ ಅನುಭವಿಸುವ ತಳಸ್ತರದ ಜನರ ಸ್ವಾಧೀನ ಅಲ್ಪಸ್ವಲ್ಪ ಖರೀದಿಸುವ ಶಕ್ತಿ ತುಂಬುವುದನ್ನು ಕೇಂದ್ರ ಸರಕಾರ ಪ್ರೊಡಕ್ಟಿವ್ ಎಂದು ಪರಿಗಣಿಸಿಲ್ಲ.

ಇದನ್ನು ಓದಿದ್ದೀರಾ?ಅಂದಿನ ಅನ್ನಭಾಗ್ಯ ಇಂದಿನ ಗ್ಯಾರಂಟಿ

ಕೇಂದ್ರ ಸರಕಾರ ಅಕ್ಕಿ ನಿರಾಕರಿಸಿದ ಕೂಡಲೇ ಯೋಜನೆ ನಿಲ್ಲುವುದಿಲ್ಲ. ಯೋಜನೆಯನ್ನು ಜಾರಿ ಮಾಡಲು ಹಲವು ದಾರಿಗಳಿವೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವುದು, ಅಕ್ಕಿ ಪೂರೈಕೆ ಮಾಡುತ್ತೇನೆಂದು ಒಪ್ಪಿಕೊಂಡ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾವನ್ನು  ಪ್ರಶ್ನಿಸುವುದು, ಕೇಂದ್ರದ ಮೇಲೆ ಒತ್ತಡ ಹೇರುವುದು ಹೀಗೆ ಹಲವು ದಾರಿಗಳಿವೆ. ಇವೆಲ್ಲವುಗಳ ಜೊತೆಗೆ ರಾಜ್ಯ ಸರಕಾರ ಪೂರೈಕೆ ಮಾಡಲು ನಿರ್ಧರಿಸಿರುವ 10 ಕೆಜಿ ಅಕ್ಕಿಯ ಬೆಲೆಯನ್ನು (ರೂ.365ನ್ನು) ನೇರವಾಗಿ ಫಲಾನುಭವಿಗಳಿಗೆ ನೀಡುವುದು  ಹೆಚ್ಚು ಉಪಯುಕ್ತ. ಈ ಪರಿಹಾರದಲ್ಲಿ ಎರಡು ಉತ್ತರಗಳಿವೆ. 10 ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಎನ್ನುವ ಭರವಸೆಯನ್ನು ಸಾಧಿಸುವುದರ ಜೊತೆಗೆ ಅಕ್ಕಿ ಬದಲು ಕ್ಯಾಶ್ ಏಕೆ ನೀಡಲಾಗಿದೆ ಎನ್ನುವುದನ್ನು ರಾಜ್ಯದ ಜನರಿಗೆ ತಿಳಿಸಿದಂತಾಗುತ್ತದೆ.  ಅಕ್ಕಿ ಬದಲು ಕ್ಯಾಶ್ ಏಕೆ ನೀಡಲಾಗಿದೆ ಎನ್ನುವ ಮಾಹಿತಿ ತುಂಬಾ ಅಗತ್ಯ. ನೆಮ್ಮದಿಯ ಬದುಕಿಗಾಗಿ ಈ ದೇಶದ ಜನರೆಲ್ಲ ಸೇರಿ ಸಂವಿಧಾನ ರಚಿಸಿಕೊಂಡಿದ್ದೇವೆ. 5 ವರ್ಷಕ್ಕೊಮ್ಮೆ ಪಕ್ಷವೊಂದನ್ನು ಚುನಾಯಿಸಿ ಸಂವಿಧಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನೀಡುತ್ತೇವೆ. ಅಧಿಕಾರಕ್ಕೇರಿದ ಪಕ್ಷ ದೇಶದ ಸಂವಿಧಾನವನ್ನು ಅನುಷ್ಠಾನಗೊಳಿಸುವುದಕ್ಕಿಂತ ಹೆಚ್ಚು ಮಹತ್ವವನ್ನು ತನ್ನ ಪಕ್ಷದ ಸಂವಿಧಾನ ಅನುಷ್ಠಾನಗೊಳಿಸಲು ನೀಡಿದರೆ ಅದು ಜನದ್ರೋಹವಾಗುತ್ತದೆ; ದೇಶದ್ರೋಹವಾಗುತ್ತದೆ.  ಇಂತಹ ಗಂಭೀರ  ಸಮಸ್ಯೆಗೆ ಜನರು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

ಪ್ರೊ. ಎಂ ಚಂದ್ರ ಪೂಜಾರಿ

ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು

ಇದನ್ನು ಓದಿದ್ದೀರಾ? ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

ಗ್ಯಾರಂಟಿ ಯೋಜನೆಗಳು | ಮಹಿಳಾ ಸಬಲೀಕರಣದತ್ತ ಗಟ್ಟಿ ಹೆಜ್ಜೆಗಳು
ಬೆಲೆ ಏರಿಕೆಯ ಮೇಲೆ ನಿಯಂತ್ರಣ ಸಾಧಿಸುತ್ತಲೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಪುಷ್ಟಿ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರತಿ ಸರ್ಕಾರಗಳ ನೈತಿಕ ಜವಾಬ್ದಾರಿಯಾಗುತ್ತದೆ. ಮತ್ತು ಇಂತಹ ಕಾರ್ಯಕ್ರಮಗಳನ್ನು ಸ್ವಾಗತಿಸಲು ಸಹ ಆ ನಾಡಿನ ಹೊಟ್ಟೆ ತುಂಬಿದ ವರ್ಗಗಳಿಗೆ ಉದಾರ ಮನಸ್ಸಿರಬೇಕಾಗುತ್ತದೆ. ನಮ್ಮಲ್ಲಿ ಅದು ಕಾಣೆಯಾಗಿದ್ದು ದುರಂತವೇ ಸರಿ – ಸೌಮ್ಯ ಡಿ, ಸಹಾಯಕ ಪ್ರಾಧ್ಯಾಪಕರು

ಪ್ರಪಂಚದ ಅನೇಕ ಆರ್ಥಿಕ ತಜ್ಞರ ಅಭಿವೃದ್ಧಿಯ ಮಾನದಂಡಗಳ ವ್ಯಾಖ್ಯಾನಗಳು ಬಂಡವಾಳ, ಉತ್ಪಾದನೆ, ಶ್ರಮ ಹೀಗೆ ವಿವಿಧ ಅಂಶಗಳನ್ನು ಆಧರಿಸಿವೆ. ಆದರೆ I measure the progress of a community by the degree of progress which women have achieved ಅಂದರೆ ನಾನು ಒಂದು ಸಮುದಾಯದ ಅಭಿವೃದ್ಧಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿದ ಅಭಿವೃದ್ಧಿಯ ಮೂಲಕ ಅಳೆಯುತ್ತೇನೆ ಎನ್ನುವ ವಿಶಿಷ್ಟ ಮಾನದಂಡದ ಮುಖೇನ ಅಭಿವೃದ್ಧಿಯ ವ್ಯಾಖ್ಯಾನ ಹಾಗೂ ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 49.13 ರಷ್ಟು ಮಹಿಳೆಯರಿದ್ದಾರೆ. ಇದರಲ್ಲಿ ಶೇ. 68.08ರಷ್ಟು ಮಹಿಳೆಯರು ಅಕ್ಷರಸ್ಥರು ಎಂದು 2011ರ ಜನಗಣತಿ ಹೇಳುತ್ತದೆ. ಇದರರ್ಥ ಅಕ್ಷರಸ್ಥರಾದವರೆಲ್ಲ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆಂದಲ್ಲ. ಇದರಲ್ಲಿ ಬಹುತೇಕರು ಖಾಸಗಿ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಾದರೂ ಅತಿಹೆಚ್ಚಿನ ಸಂಬಳ ಗಿಟ್ಟಿಸುವ ಮಹಿಳೆಯರ ಪ್ರಮಾಣವನ್ನು ಗಮನಿಸಿದರೆ ಬಹುಶಃ ಅದು ನಿರಾಶದಾಯಕವೇ ಆಗಿರುತ್ತದೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುವುದೇ ಫ್ಯಾಕ್ಟರಿ, ಗಾರ್ಮೆಂಟ್ಸ್ ಗಳಂತಹ ಸ್ಥಳಗಳಲ್ಲಿ. ಇವರನ್ನು ಸಂಘಟಿತ ಅಸಂಘಟಿತ ಎಂದು ಏನೇ ಹೆಸರಿಸಿದರೂ ಅವರ ದುಡಿಮೆಗೆ ದಕ್ಕುವ ಪ್ರತಿಫಲ ತಿಂಗಳಿಗೆ ಸರಾಸರಿ 15,000 ರೂಪಾಯಿಗಳು ಎಂದು ಊಹಿಸಬಹುದು. ಇನ್ನು ದಿನಗೂಲಿ ಮಹಿಳಾ ನೌಕರರ ಪಾಡಂತೂ ಹೇಳತೀರದು. ಹೆಣ್ಣಾಳು ಗಂಡಾಳುಗಳಿಗೆ ನೀಡುವ ದಿನಗೂಲಿಯಲ್ಲಿರುವ ಪಕ್ಷಪಾತವನ್ನು ಪ್ರಶ್ನಿಸುವುದಾದರೂ ಯಾರ ಬಳಿ?

ಪರಿಸ್ಥಿತಿ ಹೀಗಿರುವಾಗ ಕಳೆದ ಒಂದು ತಿಂಗಳಿನಿಂದ ಬಹಳ ಚರ್ಚೆಯಲ್ಲಿರುವ ‘ಬಿಟ್ಟಿ ಭಾಗ್ಯ’ಗಳೆಂದೇ ಅವಹೇಳನಕ್ಕೆ, ಟೀಕೆಗೆ ಒಳಗಾಗುತ್ತಿರುವ ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ ಯೋಜನೆ’ಗಳು ಮಹಿಳಾ ಸಬಲೀಕರಣಕ್ಕೆ ಹೇಗೆ ಪೂರಕವಾಗಲಿವೆ ಎನ್ನುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

‘ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ’ ಎನ್ನುವಂತೆ ಕಳೆದ ಕೆಲವು ವರ್ಷಗಳಲ್ಲಿ ಅಗತ್ಯ ವಸ್ತುಗಳ, ಆಹಾರ ಧಾನ್ಯಗಳ ಅನಿಶ್ಚಿತ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗಗಳ ಹಾಗೂ ಕೆಳಮಧ್ಯಮ ವರ್ಗಗಳ ಬದುಕು ಏರುಪೇರಾಗುತ್ತಲೆ ಇದೆ. ಹೊಟ್ಟೆಗೆ ಹೊಂದಿಸಿದರೆ ಬಟ್ಟೆಗೆ, ಬಟ್ಟೆಗೆ ಹೊಂದಿಸಿದರೆ ಬಾಡಿಗೆಗೆ, ಶಿಕ್ಷಣಕ್ಕೆ, ಆರೋಗ್ಯಕ್ಕೆ…. ಹೀಗೆ ಒಂದಕ್ಕೊಂದು ತಾಳ ಮೇಳವೇ ಇಲ್ಲದೆ ಬದುಕಿನ ಲಯ ತಪ್ಪಿದೆ. ಇಂತಹ ಸಂದರ್ಭದಲ್ಲಿ ಯಾರಿಗೆ ಸಾಲತ್ತೆ ಸಂಬಳ? ಎನ್ನುವುದು ಆರ್ಥಿಕವಾಗಿ ದುರ್ಬಲರಾದವರ ದಿನನಿತ್ಯದ ಗೋಳು. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ಜಾರಿಗೆ ತರುವ ಆಹಾರ ಭದ್ರತೆ, ನಿರುದ್ಯೋಗ ಭತ್ಯೆಯಂತಹ ಅಲ್ಪ ಪ್ರಮಾಣದ ಪ್ರೋತ್ಸಾಹವೇ ಇತ್ತ ಮುಳುಗಲೂ ಆಗದ, ಅತ್ತ ತೇಲಲೂ ಆಗದ ಕುಟುಂಬಗಳ ಬದುಕಿಗೆ ಹುಲ್ಲು ಕಡ್ಡಿಯ ಆಸರೆಯನ್ನಾದರು ನೀಡುತ್ತದೆ. ಬೆಲೆ ಏರಿಕೆಯ ಮೇಲೆ ನಿಯಂತ್ರಣ ಸಾಧಿಸುತ್ತಲೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಪುಷ್ಟಿ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರತಿ ಸರ್ಕಾರಗಳ ನೈತಿಕ ಜವಾಬ್ದಾರಿಯಾಗುತ್ತದೆ. ಮತ್ತು ಇಂತಹ ಕಾರ್ಯಕ್ರಮಗಳನ್ನು ಸ್ವಾಗತಿಸಲು ಸಹ ಆ ನಾಡಿನ ಹೊಟ್ಟೆ ತುಂಬಿದ ವರ್ಗಗಳಿಗೆ ಉದಾರ ಮನಸ್ಸಿರಬೇಕಾಗುತ್ತದೆ. ನಮ್ಮಲ್ಲಿ ಅದು ಕಾಣೆಯಾಗಿದ್ದು ದುರಂತವೇ ಸರಿ.

ಅಭಿವೃದ್ಧಿ ಎನ್ನುವುದು ಶ್ರೀಮಂತರ ಸ್ವತ್ತಲ್ಲ. ಅಭಿವೃದ್ಧಿಯ ನಿಜ ಅರ್ಥವೇ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರನ್ನು ಈ ಎಲ್ಲಾ ವಲಯಗಳಲ್ಲಿ ಮೇಲೆತ್ತುವುದಾಗಿದೆ. ದೊಡ್ಡ ಪ್ರಮಾಣದ ತೆರಿಗೆ ಕಟ್ಟುವವರು ಅಲ್ಪ ಸಂಖ್ಯೆಯಲ್ಲಿಯೂ, ಅಲ್ಪ ಪ್ರಮಾಣದಲ್ಲಿ ತೆರಿಗೆ ಕಟ್ಟುವವರ ಅತಿ ದೊಡ್ಡ ಸಂಖ್ಯೆಯು ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದು ನಮ್ಮ ದೇಶವನ್ನೂ ಒಳಗೊಂಡಂತೆ ಬಹುತೇಕ ದೇಶಗಳ ಅರ್ಥ ವ್ಯವಸ್ಥೆಯ ಅತಿದೊಡ್ಡ ವೈರುಧ್ಯವಾಗಿದೆ. ಭಾರತದಲ್ಲಿ ಜಿ.ಎಸ್‌.ಟಿ ಜಾರಿಯಾದ ಮೇಲಂತೂ ತೆರಿಗೆಯಿಂದ ಹೊರತಾದ ಯಾವ ವಸ್ತುವೂ, ತೆರಿಗೆ ಕಟ್ಟದಿರುವ ಯಾವೊಬ್ಬ ವ್ಯಕ್ತಿಯೂ ಇಲ್ಲವಾದಂತಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಪಾವತಿದಾರರೇ ಆಗಿದ್ದಾರೆ. ಹೀಗಿರುವಾಗ ಕಡಿಮೆ ಆದಾಯ ಹೊಂದಿರುವ ವರ್ಗಗಳನ್ನು ತೆರಿಗೆ ಕಟ್ಟದೇ ಉಳ್ಳವರಿಂದ ಕೊಟ್ಟು ತಿನ್ನುವ ವಂಚಕರು ಎಂದರೆ ಮೂರ್ಖತನವಾದೀತು. ಇಂತಹ ವರ್ಗಗಳಿಗೆ ಜೀವನಾವಶ್ಯಕ ಆಹಾರದ ಭದ್ರತೆಯನ್ನು ಒದಗಿಸಿದ ಮಾತ್ರಕ್ಕೆ ಅವರನ್ನು ಸೋಂಬೇರಿಗಳನ್ನಾಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಸಮಯದಲ್ಲಿ ತಾನು ನೀಡಿದ್ದ ಭರವಸೆಗಳಾದ ‘ಐದು ಗ್ಯಾರಂಟಿ’ಗಳನ್ನು ಅದರ ಸಾಧ್ಯಾಸಾಧ್ಯತೆಗಳನ್ನು ಕೂಲಂಕಶವಾಗಿ ಅವಲೋಕಿಸಿಯೇ ಜಾರಿಗೆ ತರುವ ಪ್ರಯತ್ನದಲ್ಲಿದೆ. ಈಗಾಗಲೇ ಕೆಲವನ್ನು ಜಾರಿಗೊಳಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಆರು ತಿಂಗಳಿನಿಂದ ಆರು ವರ್ಷಗಳವರೆಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಆರು ಲಕ್ಷಕ್ಕೂ ಅಧಿಕ. ಇನ್ನು ಅಪೌಷ್ಟಿಕತೆ ರಕ್ತ ಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಯಾದಗಿರಿಯಂತಹ ಜಿಲ್ಲೆಗಳಲ್ಲಿ ಶೇ.26ರಷ್ಟಿದೆ. ವರದಿಗಳ ವ್ಯಾಪ್ತಿಗೆ ಸಿಕ್ಕವು ಇಷ್ಟು. ಸಿಕ್ಕದೆ ಉಳಿದವು ಇನ್ನೆಷ್ಟೋ ! ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 49.13 ರಷ್ಟಿರುವ ಮಹಿಳೆಯರ ಓಟನ್ನು ಗಿಟ್ಟಿಸಿಕೊಳ್ಳಲು ಉಚಿತ ಭಾಗ್ಯಗಳನ್ನು ನೀಡಲಾಗಿದೆ ಎನ್ನುವವರಿಗಾಗಿ ಈ ಅಂಕಿಅಂಶ. ಬೆಚ್ಚನೆಯ ಮನೆ ಇರುವ, ವೆಚ್ಚಕ್ಕೆ ಹೊನ್ನಿರುವ, ಇಚ್ಛೆ ಅರಿವ ಪತಿ/ಸತಿಯಿರುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಅಪೌಷ್ಟಿಕತೆ, ರಕ್ತ ಹೀನತೆಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುವ ಕನಿಷ್ಠ ತಿಳುವಳಿಕೆಯಾದರೂ ಹೀಗೆ ಟೀಕಿಸುವವರಿಗಿದೆ ಎಂಬ ಭರವಸೆಯೊಂದಿಗೆ ಮತ್ತೆ ಚರ್ಚೆಗೆ ಮುಂದಾಗುತ್ತೇನೆ. ಹೀಗಿರುವಾಗ ಪ್ರಸ್ತುತ ಸರ್ಕಾರವು ತಂದಿರುವ ಅನ್ನಭಾಗ್ಯ, ಗೃಹಲಕ್ಷ್ಮಿ, ಭಾಗ್ಯಜ್ಯೋತಿ, ಶಕ್ತಿ ಯೋಜನೆ, ಹಾಗೂ ಯುವನಿಧಿಯಂತಹ ಯೋಜನೆಗಳು ಮಧ್ಯಮ, ಕೆಳಮಧ್ಯಮ ಹಾಗೂ ಬಡ ಕುಟುಂಬಗಳ ಅಸಂಘಟಿತ ಮಹಿಳಾ ಕಾರ್ಮಿಕರ ಪಾಲಿಗೆ ಚೈತನ್ಯ ತುಂಬುತ್ತವೆ ಎನ್ನುವುದಾದಲ್ಲಿ ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದು ಮಾನವೀಯತೆ ಎನ್ನಿಸಿಕೊಳ್ಳುತ್ತದೆ.

ಅನ್ನಭಾಗ್ಯದ ಹೆಸರಿನಲ್ಲಿ ತಲಾ ಹತ್ತು ಕೆಜಿ ಅಕ್ಕಿ ನೀಡುವ ಈ ಯೋಜನೆಯು ಪ್ರತಿಯೊಂದು ಸರ್ಕಾರವು ತನ್ನ ಪ್ರಜೆಗಳಿಗೆ ಒದಗಿಸಬೇಕಾದ ಆಹಾರ ಭದ್ರತೆಯ ಅಡಿಯಲ್ಲೇ ಬರುತ್ತದೆ. ಹಾಗಾಗಿ ಇಲ್ಲಿ ಯಾರೂ ಇದನ್ನು ಬಿಟ್ಟಿಯಾಗಿ ನೀಡುವ ಅಥವಾ ತೆಗೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಅನ್ನಭಾಗ್ಯದಿಂದಾಗಿ ಕುಟುಂಬವೊಂದು ಅಕ್ಕಿಗಾಗಿ ಒಂದು ತಿಂಗಳಿಗೆ ವ್ಯಯಿಸಬೇಕಿದ್ದ ಸುಮಾರು ಒಂದರಿಂದ ಒಂದೂವರೆ ಸಾವಿರ ರೂಪಾಯಿಗಳು ಇದರಿಂದ ಉಳಿತಾಯವಾದಂತಾಗುತ್ತದೆ.

ಗೃಹಜ್ಯೋತಿ ಯಿಂದಾಗಿ ಉಳಿತಾಯವಾಗುವ ಹಣವೂ ಇಂತಹ ಕುಟುಂಬಗಳಿಗೆ ನಿಜಕ್ಕೂ ದೊಡ್ಡ ಮೊತ್ತವೇ. ಅಕ್ಕಿಯಿಂದಾಗಿ, ವಿದ್ಯುತ್ ಮಿತ ಬಳಕೆಯಿಂದಾಗಿ ಉಳಿತಾಯವಾಗುವ ಹಣ ಕುಟುಂಬಕ್ಕೆ ಅಗತ್ಯವಾದ ಇತರೆ ದಿನಸಿ ಪದಾರ್ಥಗಳಿಗೋ, ಹಾಲು, ಮೊಟ್ಟೆ, ಮೊಸರು, ತರಕಾರಿ, ಹಣ್ಣಿನಂತಹ ಪೌಷ್ಟಿಕ ಆಹಾರಗಳನ್ನು ಕೊಳ್ಳಲೋ ಸಹಾಯವಾಗುತ್ತದೆ. ಇದರಿಂದ ಇಂತಹ ಕುಟುಂಬಗಳ ಕೊಳ್ಳುವ ಸಾಮರ್ಥ್ಯವು ತಮ್ಮ ಮೊದಲಿದ್ದ ಸ್ಥಿತಿಗಿಂತ ಕೊಂಚವಾದರೂ ಹೆಚ್ಚುತ್ತದೆ. ಈ ಕೊಂಚ ಪ್ರಮಾಣದ ಕೊಳ್ಳುವಿಕೆಯೇ ಆರ್ಥಿಕ ಚಟುವಟಿಕೆಯನ್ನು ಸಹ ಚುರುಕುಗೊಳಿಸುತ್ತದೆ.

ಗೃಹಲಕ್ಷ್ಮಿ ಯೋಜನೆ ಅಡಿ ನೀಡಲಾಗುವ ಎರಡು ಸಾವಿರ ರೂಪಾಯಿ ಇತರ ಅಗತ್ಯಗಳಾದ ಶಿಕ್ಷಣ, ಉಳಿತಾಯ ಅಥವಾ ಸಾಲ ಮರುಪಾವತಿಯಂತಹ ಆರ್ಥಿಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಇಡೀ ಜಗತ್ತಿನ ಆರ್ಥಿಕ ವಲಯವನ್ನು ಜೀವಂತವಾಗಿಟ್ಟಿರುವ ಪ್ರಮುಖ ಶಕ್ತಿಯೇ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಗಳು ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಸರ್ಕಾರ ಕೊಡಮಾಡುವ ಇಂತಹ ಅಲ್ಪ ಪ್ರಮಾಣದ ಪ್ರೋತ್ಸಾಹ ಈ ವರ್ಗಗಳನ್ನು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ತಮ್ಮ ಪಾಲಿಗೆ ಬರುವ ಅಲ್ಪ ಪ್ರಮಾಣದ ಹಣವನ್ನು ಅಚ್ಚುಕಟ್ಟಾಗಿ ಕುಟುಂಬಕ್ಕಾಗಿಯೇ ವಿನಿಯೋಗಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಿರುವಾಗ ಸರ್ಕಾರ ತೆಗೆದುಕೊಂಡ ಇಂತಹ ಕ್ರಮಗಳು ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಹೆಚ್ಚು ಸಮರ್ಪಕವಾಗಿದೆ.

ಶಕ್ತಿ ಯೋಜನೆ ಹೆಸರೇ ಸೂಚಿಸುವಂತೆ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಆಶಾ ಕಾರ್ಯಕರ್ತೆಯರಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘ ಸಂಸ್ಥೆಗಳ ಸಂಯೋಜಕರಿಗೆ, ಗ್ರಾಮಗಳಿಂದ ತಾಲೂಕು ಕೇಂದ್ರಗಳಿಗೆ ಸಣ್ಣಪುಟ್ಟ ಗೃಹ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಓಡಾಡುವ ಮಹಿಳೆಯರಿಗೆ, ಏಜೆನ್ಸಿಗಳ ಮೂಲಕ ಹೌಸ್ ಕೀಪಿಂಗ್ ನಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ, ಹೀಗೇ……. ಲೆಕ್ಕಕ್ಕೆ ಸಿಗದ ಇಂತಹ ಅದೆಷ್ಟು ಮಹಿಳಾ ಕೂಲಿಕಾರ್ಮಿಕರ ಪಾಲಿಗೆ ಶಕ್ತಿ ಯೋಜನೆ ನಿಜಕ್ಕೂ ಶಕ್ತಿ ತುಂಬುವ ಯೋಚನೆಯಾಗಿದೆ. ಸರಾಸರಿ ಆರರಿಂದ ಏಳು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಇಂತಹ ಮಹಿಳೆಯರ ದೊಡ್ಡ ಸಂಖ್ಯೆಗೆ ಪ್ರಯಾಣಕ್ಕಾಗಿ ತೆಗೆದಿಡಬೇಕಾದ ಅಂದಾಜು ಎರಡು ಸಾವಿರ ರೂಪಾಯಿಯೇ ಉಳಿತಾಯವಾಗುವುದಾದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಖಂಡಿತಾ ನಮ್ಮ ಹೆಣ್ಣುಮಕ್ಕಳಲ್ಲಿದೆ. ಪ್ರಯಾಣ ಕೊಂಚ ಕಷ್ಟವೆನಿಸಿದರು ದೂರದೂರುಗಳಲ್ಲಿ ಅಂದರೆ ಜಿಲ್ಲಾ ಕೇಂದ್ರಗಳಲ್ಲಿ ದುಡಿಮೆಗೆ ತೊಡಗಿಸಿಕೊಳ್ಳುವ ಹುರುಪನ್ನು ಶಕ್ತಿ ಯೋಜನೆಯು ನೀಡುತ್ತದೆ. ಇದಕ್ಕೆ ತಕ್ಕಂತೆ ಸೂಕ್ತ ಸಮಯಕ್ಕೆ ಬಸ್ಸುಗಳನ್ನು ಏರ್ಪಾಟು ಮಾಡುವ ಸವಾಲೂ ಸಹ ಸರ್ಕಾರದ ಮುಂದಿದೆ.

ಬಹಳ ಮುಖ್ಯವಾಗಿ ವಿದ್ಯಾಭ್ಯಾಸಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾದ ವಿದ್ಯಾರ್ಥಿನಿಯರ ಪಾಲಿಗೆ ಈ ಯೋಜನೆ ವರದಾನವೇ ಆಗಲಿದೆ.

ಯುವನಿಧಿ ಯಿಂದ ದೊರೆಯುವ ಭತ್ಯೆ ಹೆಣ್ಣುಮಕ್ಕಳನ್ನು ಉದ್ಯೋಗ ದೊರಕಿಸಿಕೊಳ್ಳುವವರೆಗೂ ಸ್ವಾವಲಂಬಿಯಾಗಿಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೆಣ್ಣು ಮಕ್ಕಳು ಇನ್ನುಮುಂದೆ ‘ದೇಶವನ್ನೂ ಸುತ್ತಬಹುದು, ಕೋಶವನ್ನೂ ಓದಬಹುದು’. ಈ ಎರಡು ಸವಲತ್ತುಗಳು ಈ ಮೊದಲು ಗಂಡಿಗೆ ಮಾತ್ರ ಸೀಮಿತವಾದಂತಿತ್ತು. ಅದರಲ್ಲೂ ‘ಗಂಡಸು ಕೂತು ಕೆಟ್ಟ, ಹೆಂಗಸು ತಿರುಗಾಡಿ ಕೆಟ್ಟಳು’ ಎನ್ನುವ ಗಂಡಾಳಿಕೆಯ ಧೋರಣೆಯ ಗಾದೆಗಳನ್ನು ನಾವು ಮಹಿಳೆಯರು ಸುಳ್ಳು ಮಾಡಿ ತೋರಿಸಬೇಕಿದೆ. ತೊಟ್ಟಿಲು ತೂಗುವ ಕೈಗಳಿಗೆ ಕುಟುಂಬವನ್ನು ತೂಗಿಸಿಕೊಂಡು ಹೋಗಲೂ ಬರುತ್ತದೆ, ರಾಷ್ಟ್ರವನ್ನು ತೂಗಿಸಿಕೊಂಡು ಹೋಗಲೂ ಬರುತ್ತದೆ ಎನ್ನುವುದನ್ನು ನಾವೀಗ ಸಾಧಿಸಿ ತೋರಿಸಲು ಸರಿಯಾದ ಕಾಲ ಬಂದಿದೆ. ಇವುಗಳ ಅನುಷ್ಠಾನದಲ್ಲಿ ಕೆಲದಿನಗಳ ಮಟ್ಟಿಗೆ ಏರುಪೇರಾದರೂ ಸರ್ಕಾರದ ಇಂತಹ ಪ್ರಯೋಗಗಳು ದೂರದೃಷ್ಟಿಯುಳ್ಳದ್ದು ಎನ್ನುವುದಂತೂ ಅಕ್ಷರಶಃ ಸತ್ಯ.

ಮಹಿಳೆಯರ ಯಶಸ್ಸಿನ ಹಿಂದೆ ಮಹಿಳಾ ಸಬಲೀಕರಣವನ್ನು ಪೋಷಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸರ್ಕಾರಗಳ ಯಶಸ್ಸು ಸಹ ಅಡಗಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಒಂದು ಸಮುದಾಯದ ಅಭಿವೃದ್ಧಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿದ ಅಭಿವೃದ್ಧಿಯ ಮೂಲಕ ಅಳೆಯುತ್ತೇನೆ ಎನ್ನುವ ಅಂಬೇಡ್ಕರ್‌ ಮಾತಿನಂತೆಇಂತಹ ಸಮಾಜದ ಸ್ಥಾಪನೆಗೆ ಕಾರಣವಾಗುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಗಳನ್ನು ಮಹಿಳೆಯರು ಮೊದಲು ಸ್ವಾಗತಿಸಬೇಕಾಗಿದೆ.

ಸೌಮ್ಯ. ಡಿ

ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿ, ಬೆಂಗಳೂರು.

soumya.kodur@gmail.com

ಇದನ್ನೂ ಓದಿ-‘ಶಕ್ತಿ ಯೋಜನೆ’ ಯ ಸಾರಥಿ..ರೈಟ್…ರೈಟ್..!

ಅಂದಿನ ಅನ್ನಭಾಗ್ಯ ಇಂದಿನ ಗ್ಯಾರಂಟಿ
ಬಡವರು ಬೇರೆ ಧರ್ಮಕ್ಕೆ ಹೋಗುವುದು, ಜಾತಿಧರ್ಮಗಳ ಗಡಿಗಳನ್ನು ಮೀರಿ ಪ್ರೀತಿಸುವುದು, ಮದುವೆಯಾಗುವುದು, ಮಾಂಸಾಹಾರ ಸೇವಿಸುವುದು ಇತ್ಯಾದಿಗಳು ನಮ್ಮ ಸಂಸ್ಕೃತಿಯ ಹರಿಕಾರರಿಗೆ ದೊಡ್ಡ ಸಮಸ್ಯೆಗಳಾದವು. ಆದರೆ ನಮ್ಮದೇ ಸಮಾಜದ ಬಹುತೇಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯಗಳು ಇಲ್ಲದಿರುವುದು ಅವರನ್ನು ಕಾಡಲೇ ಇಲ್ಲ  – ಎಂ.ಚಂದ್ರ ಪೂಜಾರಿ

2015ರಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸುವ ಸಂದರ್ಭದಲ್ಲೂ ಇಂದಿನ ಗ್ಯಾರಂಟಿಗಳ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳು ಬಂದಿದ್ದವು. ಈ ಯೋಜನೆ ಮಾತ್ರವಲ್ಲ ಬಡವರನ್ನು ಉದ್ದೇಶಿಸಿ ಸರಕಾರಗಳು ಜಾರಿಗೆ ತರುವ ಎಲ್ಲ ಯೋಜನೆಗಳ ವಿರುದ್ಧ ನಮ್ಮಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಆ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಸಾಮಾನ್ಯ ಟೀಕೆಗಳು ಇಂತಿವೆ. ಇಂತಹ ಯೋಜನೆಗಳು ನಮ್ಮ ಸಂಪನ್ಮೂಲಗಳ ಬಹುಭಾಗವನ್ನು ತಿಂದು ಹಾಕುತ್ತಿವೆ. ಇವುಗಳ ಮೇಲೆ ಖರ್ಚು ಮಾಡುವುದು ವ್ಯರ್ಥ. ಏಕೆಂದರೆ ವ್ಯಾಪಕ ಲಂಚಗುಳಿತನ ಇರುವುದರಿಂದ ಇವೆಲ್ಲ ಬಡಜನರಿಗೆ ತಲುಪುವುದೇ ಇಲ್ಲ. ಯುಪಿಎ ಹೋಗಿ ಎನ್‍ಡಿಎ ಬಂದ ಕೂಡಲೇ ಇಂತಹ ಯೋಜನೆಗಳು ನಿಲ್ಲುತ್ತವೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಜನ ಇಂತಹ ಕಾರ್ಯಕ್ರಮಗಳನ್ನು ತಿರಸ್ಕರಿಸಿದ್ದಾರೆ. ಹೀಗೆ ಹತ್ತು ಹಲವು ಟೀಕೆಗಳು ಬಡತನ ನಿವಾರಣ ಕಾರ್ಯಕ್ರಮಗಳ ವಿರುದ್ಧ ಬರುತ್ತಲೇ ಇವೆ.

ವರ್ಲ್ಡ್ ಡೆವಲಪ್‍ಮೆಂಟ್ ರಿಪೋರ್ಟ್‍ನ ಕೆಲವು ಅಂಕಿಅಂಶಗಳನ್ನು ನೋಡಿದರೆ ಈ ಎಲ್ಲ ಟೀಕೆಗಳು ಸತ್ಯಕ್ಕೆ ಎಷ್ಟು ದೂರ ಎನ್ನುವುದು ಸುಲಭದಲ್ಲಿ ಅರ್ಥವಾಗಬಹುದು. ವರ್ಲ್ಡ್ ಡೆವಲಪ್‍ಮೆಂಟ್ ವರದಿ ಪ್ರಕಾರ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಭಾರತ ತನ್ನ ಜಿಡಿಪಿಯ ಶೇ.4.7ರಷ್ಟನ್ನು ಮಾತ್ರ ಖರ್ಚು ಮಾಡುತ್ತಿದೆ. ನಮ್ಮ ನೆರೆಕರೆಯ (ಪೂರ್ವ ಏಶ್ಯಾದ) ದೇಶಗಳು ತಮ್ಮ ಜಿಡಿಪಿಯ ಶೇ.7.2ರಷ್ಟನ್ನು, ಸಬ್‍ಸಹರಾ ಆಫ್ರಿಕಾ ಶೇ.7ರಷ್ಟನ್ನು, ಲ್ಯಾಟೀನ್ ಆಮೇರಿಕಾ ದೇಶಗಳು ಶೇ.13.3ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಖರ್ಚು ಮಾಡುತ್ತಿವೆ. ಪ್ರಪಂಚದ ಅತ್ಯಂತ ಹಿಂದುಳಿದ ದೇಶಗಳು ಕೂಡ ತಮ್ಮ ಜಿಡಿಪಿಯ ಶೇ.6.4ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯಗಳ ಮೇಲೆ ವಿನಿಯೋಜಿಸುತ್ತವೆ (ಜೀನ್ ಡ್ರೀಜ್, 2014).

ಶಿಕ್ಷಣ, ಆರೋಗ್ಯಗಳ ಮೇಲೆ ಮಾತ್ರ ಭಾರತ ಅತೀ ಕನಿಷ್ಠ ಮೊತ್ತವನ್ನು ಖರ್ಚುಮಾಡುತ್ತಿರುವುದಲ್ಲ; ಸಾಮಾಜಿಕ ಭದ್ರತೆ ಮೇಲೆ ಭಾರತ ಮಾಡುವ ಖರ್ಚು ಕೂಡ ಅತ್ಯಂತ ಕಡಿಮೆ ಇದೆ. ಏಶಿಯನ್ ಡೆವಲಪ್‍ಮೆಂಟ್ ಬ್ಯಾಂಕ್ ರಿಪೋರ್ಟ್ ಪ್ರಕಾರ ಭಾರತ ತನ್ನ ಜಿಡಿಪಿಯ ಶೇ.1.7ರಷ್ಟನ್ನು ಮಾತ್ರ ಸಾಮಾಜಿಕ ಭದ್ರತೆ ಮೇಲೆ ಖರ್ಚು ಮಾಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಏಶಿಯಾದ ಕೆಲವು ಬಡದೇಶಗಳು ತಮ್ಮ ಜಿಡಿಪಿಯ ಶೇ.3.4ನ್ನು ಖರ್ಚು ಮಾಡುತ್ತಿವೆ. ಚೈನಾ ತನ್ನ ಜಿಡಿಪಿಯ ಶೇ.5.4ನ್ನು, ಜಪಾನ್ ತನ್ನ ಜಿಡಿಪಿಯ ಶೇ.19.2ನ್ನು ಮತ್ತು ಏಶಿಯಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜಿಡಿಪಿಯ ಶೇ.10ನ್ನು ಸಾಮಾಜಿಕ ಭದ್ರತೆ ಮೇಲೆ ವಿನಿಯೋಜಿಸುತ್ತಿವೆ. ಆದುದರಿಂದ ನಮ್ಮ ಸಂಪನ್ಮೂಲದ ಬಹುಭಾಗ ಬಡವರ ಉದ್ಧಾರಕ್ಕೆ ಖರ್ಚಾಗುತ್ತಿದೆ ಎನ್ನುವುದು ಆಧಾರರಹಿತ ಆರೋಪ (ಜೀನ್ ಡ್ರೀಜ್, 2014).

ಕರ್ನಾಟಕ ಸರಕಾರದ ಕಡಿಮೆ ಬೆಲೆಯ ಅಕ್ಕಿ ಯೋಜನೆಯ ವಿರುದ್ಧ ಬಂದ ಟೀಕೆಗಳನ್ನು ಗಮನಿಸೋಣ. ಕಡಿಮೆ ಬೆಲೆಗೆ ಅಕ್ಕಿ ದೊರೆಯುವುದರಿಂದ ಉಳಿತಾಯವಾಗುವ ಹಣವನ್ನು ಬಡವರು ಕುಡಿತ/ಇತರ ದುಶ್ಚಟಗಳಿಗೆ ಬಳಸಬಹುದು, ಬಡವರು ಈಗಾಗಲೇ ಸೋಮಾರಿಗಳಾಗಿದ್ದಾರೆ, ಈ ಕಾರ್ಯಕ್ರಮದಿಂದ ಇನ್ನೂ ಸೋಮಾರಿಗಳಾಗಬಹುದು, ಕೂಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗಬಹುದು, ಈಗಾಗಲೇ ಅವಸಾನದ ಅಂಚಿನಲ್ಲಿರುವ ಕೃಷಿ ಈ ಕಡಿಮೆ ಬೆಲೆ ಅಕ್ಕಿ ಯೋಜನೆಯಿಂದ ಸಂಪೂರ್ಣ ನಾಶವಾಗ ಬಹುದು ಇತ್ಯಾದಿ ಟೀಕೆಗಳಿವೆ. ಕಡಿಮೆ ಬೆಲೆಗೆ ಅಕ್ಕಿ ಕೊಡುವ ಕಾರ್ಯಕ್ರಮದಿಂದ ಬಡತನ ನಿವಾರಣೆಯಾಗುತ್ತದೆ ಎನ್ನುವ ಭ್ರಮೆ ನನಗೂ ಇಲ್ಲ. ಆದರೂ ಬಡವರ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಬಡವರಲ್ಲದವರು ಮಾಡುವ ಟೀಕೆಗಳಲ್ಲಿರುವ ಸತ್ಯಾಂಶದ ಕೊರತೆ ಎದ್ದು ಕಾಣುತ್ತಿದೆ.

ಮೊದಲಿಗೆ ಕಡಿಮೆ ಬೆಲೆಯ ಅಕ್ಕಿಯಿಂದ ಬಡವರು ಸೋಮಾರಿಗಳಾಗುತ್ತಿದ್ದಾರೆನ್ನುವ ವಾದವನ್ನು ಎತ್ತಿಕೊಳ್ಳುವ. ಈ ಯೋಜನೆಯಲ್ಲಿ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕಿಲೋಗ್ರಾಂ ಅಕ್ಕಿ ಸಿಗುತ್ತದೆ. 30 ಕಿಲೋಗ್ರಾಂನ್ನು ಗ್ರಾಂ ಆಗಿ ಪರಿವರ್ತಿಸಿದರೆ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ ಮೂವತ್ತು ಸಾವಿರ ಗ್ರಾಂ ಅಕ್ಕಿ ಸಿಗುತ್ತದೆ. ಮೂವತ್ತು ಸಾವಿರ ಗ್ರಾಂ ಅಕ್ಕಿಯನ್ನು ಐದು ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೆ ತಿಂಗಳಿಗೆ  ಆರು ಸಾವಿರ ಗ್ರಾಂ ಅಕ್ಕಿ ದೊರೆಯುತ್ತದೆ. ಆರು ಸಾವಿರ ಗ್ರಾಂನ್ನು ಮೂವತ್ತರಿಂದ ಭಾಗಿಸಿದರೆ ಪ್ರತಿಯೊಬ್ಬರಿಗೆ ದಿನಕ್ಕೆ ಇನ್ನೂರು ಗ್ರಾಂ ಅಕ್ಕಿ ಲಭ್ಯ (ರಾಮ್‍ಜೆಟ್‍ಮಲಾನಿ, 2014). ಇನ್ನೂರು ಗ್ರಾಂ ಅಕ್ಕಿಯಿಂದ ಮುನ್ನೂರು ಕ್ಯಾಲರಿ ಶಕ್ತಿ ಲಭ್ಯವಾಗುತ್ತದೆಯೆಂದು ಗ್ರಹಿಸಬಹುದು. ಸರಕಾರಿ ಲೆಕ್ಕಚಾರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದುಡಿದು ಗಳಿಸುವಷ್ಟು ಶಕ್ತಿ ಪಡೆಯಬೇಕಾದರೆ ದಿನವೊಂದಕ್ಕೆ ಕನಿಷ್ಠ 2400 ಕ್ಯಾಲರಿ ಶಕ್ತಿ ಗಳಿಸುವಷ್ಟು ಆಹಾರ ಸೇವಿಸಬೇಕು. ಅಂದರೆ ಸರಕಾರ ನೀಡುವ ಮೂವತ್ತು ಕಿಲೋಗ್ರಾಂ ಅಕ್ಕಿಯಿಂದ ಕುಟುಂಬದ ಆಹಾರದ ಎಂಟನೇ ಒಂದರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಕುಟುಂಬದ ಎಲ್ಲ ಸದಸ್ಯರಿಗೆ ಮೇಲಿನ ಕ್ಯಾಲರಿ ಅಗತ್ಯವಿಲ್ಲವೆಂದು ಊಹಿಸುವ. ಆದಾಗ್ಯೂ ಮೂವತ್ತು ಕಿಲೋಗ್ರಾಂ ಅಕ್ಕಿ ಕುಟುಂಬದ ಆಹಾರದ ಬೇಡಿಕೆಯನ್ನು ಸಂಪೂರ್ಣ ಪೂರೈಸುವುದಿಲ್ಲ ಎನ್ನುವುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ-ಗ್ಯಾರಂಟಿಗಳು: ಜನರಿಗೆ ಖುಶಿ; ಪ್ರತಿಪಕ್ಷಕ್ಕೆ ಉರಿ!

ವಾಸ್ತವ ಹೀಗಿದ್ದರೂ ಬಡವರ ಮೇಲೆ ಸರಕಾರ ಮಾಡುವ ಅತ್ಯಲ್ಪ ಖರ್ಚಿನ ಬಗ್ಗೆ ಇಷ್ಟೊಂದು ಅಸಹನೆ ಏಕೆಂದು ಆಲೋಚಿಸಿದರೆ ಎರಡು ಕಾರಣಗಳು ಎದ್ದು ಕಾಣುತ್ತಿವೆ. ಒಂದು, ನಮ್ಮ ಅಭಿವೃದ್ಧಿ ಕಲ್ಪನೆ ಮತ್ತು ಆಚರಣೆ, ಎರಡು, ನಮ್ಮ ಸಂಸ್ಕೃತಿ. ತೊಂಬತ್ತರದ ನಂತರದ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯನ್ನು ವ್ಯಕ್ತಿವಾದದ ದೃಷ್ಟಿಯಿಂದ ನೋಡುತ್ತಿವೆ. ಅಂದರೆ ಬಡತನದ ಸೃಷ್ಟಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ಇಂದಿನ ಅಭಿವೃದ್ಧಿ ಧೋರಣೆಗಳು ಒಪ್ಪಿಕೊಂಡಿವೆ. ಆದುದರಿಂದ ಇಂದಿನ ಬಡತನ ನಿವಾರಣಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಉಚಿತ ಶಿಕ್ಷಣ ಅಥವಾ ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣಾ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು. ಕರ್ನಾಟಕ ಸರಕಾರದ ಕಡಿಮೆ ಬೆಲೆ ಅಕ್ಕಿ ಯೋಜನೆ ಕೂಡ ವ್ಯಕ್ತಿವಾದದ ದೃಷ್ಟಿಯಿಂದ ಬಡತನವನ್ನು ನೋಡುವ ಮತ್ತು ಪರಿಹರಿಸುವ ಒಂದು ಕಾರ್ಯಕ್ರಮ.

ಅಭಿವೃದ್ಧಿ ಸಿದ್ಧಾಂತಗಳ ಜೊತೆಗೆ ನಮ್ಮ ಚರಿತ್ರೆಯಿಂದ ಬಂದ ಲಿಂಗ, ಜಾತಿ, ಧರ್ಮ ಬೇಧಗಳು ಕೂಡ ಬಡತನವನ್ನು ಸಹಜಗೊಳಿಸಿವೆ. ನಮ್ಮ ಸಮಾಜದ ವಿವಿಧ ಗುಂಪುಗಳನ್ನು ಗುರುತಿಸಲು ಜಾತಿ ಪದ್ಧತಿ ಸೃಷ್ಟಿಯಾಗಿದೆ. ಜಾತಿಗಳು ಒಂದು ಪಿರಮಿಡ್ ರೂಪದಲ್ಲಿ ಸಂಘಟಿಸಲ್ಪಟ್ಟಿವೆ. ಕೆಲವರು ಮೇಲೆ ಮತ್ತೆ ಕೆಲವರು ಮಧ್ಯದಲ್ಲಿ ಮತ್ತು ಹಲವರು ಪಿರಮಿಡ್ ಬುಡದಲ್ಲಿದ್ದಾರೆ. ಮೇಲಿದ್ದವರು ಹೆಚ್ಚಿನ ಅಧಿಕಾರ, ಆದಾಯ, ಸ್ಥಾನಮಾನ ಹೊಂದಿದ್ದರೆ ಮಧ್ಯದಲ್ಲಿರುವವರು ಮೇಲಿದ್ದವರಿಗಿಂತ ಕಡಿಮೆ ಮತ್ತು ಬುಡದಲ್ಲಿರುವವರು ಅತೀ ಕಡಿಮೆ ಪ್ರಮಾಣದ ಅಧಿಕಾರ, ಆದಾಯ, ಸ್ಥಾನಮಾನಗಳನ್ನು ಹೊಂದಿದ್ದಾರೆ. ಈ ಬಗೆಯ ವಿಂಗಡಣೆಯನ್ನು ಹುಟ್ಟಿನಿಂದಲೇ ನೋಡುತ್ತಿರುವುದರಿಂದ ಬಹುತೇಕರಿಗೆ ಆರ್ಥಿಕ ಅಸಮಾನತೆ ಅಥವಾ ಬಡತನ ಸಮಸ್ಯೆಯಾಗಿಲ್ಲ.

ಪರದೇಶಿ ಸಂಸ್ಕೃತಿಗಳ (ಕ್ರಿಶ್ಚಿಯನ್, ಮುಸ್ಲಿಮ್) ಸಂಪರ್ಕಕ್ಕೆ ಬಂದ ನಂತರ ನಮ್ಮಲ್ಲೂ ಜಾತಿ ಪರಿಧಿಯನ್ನು ಮೀರಿ ಬಡತನವನ್ನು ಕಲ್ಪಿಸಿಕೊಳ್ಳುವ ಪ್ರಯತ್ನಗಳು ಆರಂಭವಾದವು. ಆದರೆ ಈ ಕಾಳಜಿಯ ಹಿಂದೆ ಬಡವರ ಮೇಲಿನ ಪ್ರೀತಿಗಿಂತ ಎಲ್ಲಿ ಬಡವರು ಮತ್ತೊಂದು ಧರ್ಮದ ಪ್ರಭಾವಕ್ಕೆ ಒಳಗಾಗಿ ನಾವು (ಅನುಕೂಲಸ್ಥರು) ಅಲ್ಪಸಂಖ್ಯಾತರಾಗುತ್ತೇವೆ ಎನ್ನುವ ಭೀತಿಯ ಪಾತ್ರ ಹೆಚ್ಚಿದೆ. ಸ್ವಾತಂತ್ರ್ಯಾನಂತರದ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಮಹತ್ವ ಹೆಚ್ಚಾಯಿತು. ಇದರೊಂದಿಗೆ ನಾವೆಲ್ಲ ಒಂದೇ ಸಂಸ್ಕೃತಿಗೆ ಸೇರಿದವರು ಎನ್ನುವ ಕೂಗು ಇನ್ನೂ ಹೆಚ್ಚಾಯಿತು. ಬಡವರು ಬೇರೆ ಧರ್ಮಕ್ಕೆ ಹೋಗುವುದು, ಜಾತಿಧರ್ಮಗಳ ಗಡಿಗಳನ್ನು ಮೀರಿ ಪ್ರೀತಿಸುವುದು, ಮದುವೆಯಾಗುವುದು, ಮಾಂಸಾಹಾರ ಸೇವಿಸುವುದು ಇತ್ಯಾದಿಗಳು ನಮ್ಮ ಸಂಸ್ಕೃತಿಯ ಹರಿಕಾರರಿಗೆ ದೊಡ್ಡ ಸಮಸ್ಯೆಗಳಾದವು. ಆದರೆ ನಮ್ಮದೇ ಸಮಾಜದ ಬಹುತೇಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯಗಳು ಇಲ್ಲದಿರುವುದು ಅವರನ್ನು ಕಾಡಲೇ ಇಲ್ಲ. ಈ ಬಗೆಯ ‘ನಮ್ಮ ಸಂಸ್ಕೃತಿಯ’ ಕಲ್ಪನೆ ಬಡತನದ ಸೃಷ್ಟಿ ಮತ್ತು ಮುಂದುವರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲರನ್ನೂ ಮತ್ತು ಎಲ್ಲ ಸಂಪನ್ಮೂಲಗಳನ್ನು (ಭೌದ್ಧಿಕ ಹಾಗು ಭೌತಿಕ ಸಂಪನ್ಮೂಲಗಳನ್ನು) ಒಳಗೊಳ್ಳುವ ಸಂಸ್ಕೃತಿ ಕಲ್ಪನೆ ಮತ್ತು ಆಚರಣೆ ಮಾತ್ರ ಬಡತನಕ್ಕೆ ಶಾಶ್ವತ ಪರಿಹಾರ ಒದಗಿಸಬಹುದು.

ಎಂ.ಚಂದ್ರ ಪೂಜಾರಿ

ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು

ಇದನ್ನೂ ಓದಿ-ಉಚಿತಗಳು | ಮಹಿಳೆಯರ ಬೆವರಿನಲ್ಲಿ ಬೆಳೆಯುವ ಆರ್ಥಿಕತೆಯಲ್ಲಿ ಅವರ ಹಕ್ಕಿನ ಪಾಲು