ಕ್ರೀಡೆ – Peepal Media

ಏಷ್ಯಾ ಕಪ್ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸುಲಭ ಜಯ
ದುಬೈ : ಏಷ್ಯಾ ಕಪ್ ನ ಆರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಸುಲಭವಾಗಿ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತಕ್ಕೆ ಕೇವಲ 128 ರನ್ ಗಳ ಸುಲಭದ ಗುರಿ ನೀಡಿತ್ತು. ಆದರೆ ಭಾರತ 3 ವಿಕೆಟ್ ಕಳೆದುಕೊಂಡು ಕೇವಲ 15.5 ಓವರುಗಳಲ್ಲಿ ಗುರಿ ಮುಟ್ಟಿತು.‌ ಇದರೊಂದಿಗೆ ಈ ಬಾರಿಯ ಏಷ್ಯಾ ಕಪ್ ನಲ್ಲಿ ಸಮಿಫೈನಲ್ ಗೇರಿದ ಮೊದಲ ತಂಡ ಎನಿಸಿಕೊಂಡಿತು.

ಸಂಘಟಿತ ಆಟದ ನೆರವಿನಿಂದ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಏಷ್ಯಾ ಕಪ್ ನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್ ಗಳಿಂದ ಪರಾಭವಗೊಳಿಸಿದೆ. ಸ್ಪಿನ್ ಬೌಲಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಅದಕ್ಕೆ ತಕ್ಕ ಬೆಲೆ ತೆರುವಂತಾಯಿತು. ಇದೀಗ ಸತತ ಎರಡು ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಸೂಪರ್ 4 ಹಂತಕ್ಕೆ ಮೊದಲ ತಂಡವಾಗಿ ಅರ್ಹತೆ ಪಡೆದಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡವು ಭಾರತದ ದಿಟ್ಟ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ 20 ಓವರ್ ಗಳಲ್ಲಿ ಕೇವಲ 9 ವಿಕೆಟ್ ಕಳೆದುಕೊಂಡು 127 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭಾರತ ತಂಡ ಕೇವಲ 15.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ವಿಶ್ವಕಪ್ ಜವಾಬ್ದಾರಿ ಹೊತ್ತ ಮಹಿಳಾ ಅಧಿಕಾರಿಗಳು, ಲಿಂಗಸಮಾನತೆಗಾಗಿ ಐತಿಹಾಸಿಕ ಹೆಜ್ಜೆ
2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ (ICC World Cup) ಮುಂಚಿತವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಒಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳೆಯರೇ ನಿರ್ವಹಿಸಲಿದ್ದಾರೆ.

ಬರ್ಮಿಂಗ್ಲಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಕಳೆದ ಎರಡು ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗಳಲ್ಲಿ ಸಂಪೂರ್ಣ ಮಹಿಳಾ ಅಧಿಕಾರಿ ಸಮಿತಿಗಳು ಈ ಹಿಂದೆ ಕಾಣಿಸಿಕೊಂಡಿದ್ದರೂ, ಮಹಿಳಾ ವಿಶ್ವಕಪ್‌ನಲ್ಲಿ ಇಂತಹ ಸಮಿತಿಯನ್ನು ನಿಯೋಜಿಸಲಾಗುತ್ತಿರುವುದು ಇದೇ ಮೊದಲು.

ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥೇಯತ್ವದಲ್ಲಿ ನಡೆಯುವ ವಿಶ್ವಕಪ್ ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ಭಾರತ–ಶ್ರೀಲಂಕಾ ನಡುವಿನ ಪಂದ್ಯದಿಂದ ಆರಂಭಗೊಳ್ಳಲಿದೆ. ಎಂಟು ತಂಡಗಳು ಭಾಗವಹಿಸುವ ಈ ಟೂರ್ನಿಯ ಫೈನಲ್ ನವೆಂಬರ್ 2ರಂದು ನಡೆಯಲಿದೆ. ಪಂದ್ಯಗಳನ್ನು ಭಾರತದ ನಾಲ್ಕು ನಗರಗಳಲ್ಲಿ ಹಾಗೂ ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿದೆ

ಇನ್ನು ಈ ಬಗ್ಗೆ ಐಸಿಸಿ ಅಧ್ಯಕ್ಷ ಜಯ್ ಶಾ, ಈ ಕ್ರಮವನ್ನು ಮಹಿಳಾ ಕ್ರಿಕೆಟ್‌ಗೆ ನಿರ್ಣಾಯಕ ಕ್ಷಣವೆಂದು ಶ್ಲಾಘಿಸಿದ್ದಾರೆ. ಹೆಚ್ಚಿನ ಮಹಿಳಾ ಭಾಗವಹಿಸುವಿಕೆಗೆ ಪ್ರೇರಣೆ ನೀಡುವ ಜೊತೆಗೆ, ಕ್ರೀಡೆಯಲ್ಲಿ ಭವಿಷ್ಯದ ಹಾದಿ ತೋರಿಸುವವರಿಗೆ ದಾರಿ ಮಾಡಿಕೊಡುವ ಸಾಮರ್ಥ್ಯ ಇದಕ್ಕಿದೆ ಎಂದರು. ಎಲ್ಲಾ ಮಹಿಳಾ ಪಂದ್ಯಾಧಿಕಾರಿಗಳ ಸಮಿತಿಯ ಸೇರ್ಪಡೆ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯನ್ನು ಮುನ್ನಡೆಸುವ ಐಸಿಸಿಯ ಅಚಲ ಬದ್ಧತೆಯ ಪ್ರಬಲ ಪ್ರತಿಬಿಂಬವಾಗಿದೆ ಎಂದು ಶಾ ತಿಳಿಸಿದರು.ಅಂಪೈರ್‌ಗಳ ಪ್ಯಾನಲ್‌ನಲ್ಲಿ ಭಾರತದ ಮಾಜಿ ಆಟಗಾರ್ತಿಯರಾದ ವೃಂದಾ ರಾಥಿ, ಎನ್. ಜನನಿ ಮತ್ತು ಗಾಯತ್ರಿ ವೇಣುಗೋಪಾಲನ್ ಸ್ಥಾನ ಪಡೆದಿದ್ದಾರೆ. ಇದೇ ವೇಳೆ, ಮೊದಲ ಮಹಿಳಾ ಮ್ಯಾಚ್ ರೆಫ್ರಿಯಾಗಿರುವ ಜಿ.ಎಸ್. ಲಕ್ಷ್ಮಿ ಸೇರಿದಂತೆ ನಾಲ್ವರು ಮಹಿಳಾ ರೆಫ್ರಿಗಳು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ.

2025 ರ ಮಹಿಳಾ ವಿಶ್ವಕಪ್ ನ ಅಧಿಕಾರಿಗಳ ಪಟ್ಟಿಯನ್ನು ವೀಕ್ಷಿಸುವುದಾದರೆ,

ಮ್ಯಾಚ್ ರೆಫ್ರಿಗಳು: ಟ್ರುಡಿ ಆ್ಯಂಡರ್ಸನ್, ಶಾಂಡ್ರೆ ಪ್ರಿಟ್ಸ್, ಜಿ.ಎಸ್.ಲಕ್ಷ್ಮಿ, ಮಿಚೆಲ್ ಪೆರೀರಾ.

ಅಂಪೈರ್ಸ್‌: ಲಾರೆನ್ ಅಜೆನ್‌ಬಗ್, ಕ್ಯಾಂಡೇಸ್ ಲಾ ಬೋರ್ಡೆ, ಕಿಮ್ ಕಾಟನ್, ಸಾರಾ ದಂಬನೆವನ, ಶಾತಿರಾ ಜಾಖರ್ ಜೆಸಿ, ಕೆರಿನ್ ಕ್ಲಾಸ್ಟ್, ಜನನಿ ಎನ್., ನಿಮಲಿ ಪೆರೀರಾ, ಕ್ಷೇರ್ ಪೊಲೊಸಾಕ್, ವೃಂದಾ ರಾಥಿ, ನ್ಯೂ ರೆಡ್‌ಫೆರ್ನ್, ಎಲೊಯಿಸ್ ಶೆರಿದನ್, ಗಾಯತ್ರಿ ವೇಣುಗೋಪಾಲನ್, ಜಾಕ್ವೆಲಿನ್ ವಿಲಿಯಮ್ಸ್

ಮತ್ತೆ ಅಖಾಡಕ್ಕಿಳಿಯುವ ಮುನ್ಸೂಚನೆ; ದುರ್ಘಟನೆಯ ಮೂರು ತಿಂಗಳ ಬಳಿಕ ಶ್ರದ್ಧಾಂಜಲಿ ಪೋಸ್ಟ್, ಅಭಿಮಾನಿಗಳ ಅಂಗಲಾಚಿದ ಆರ್‌ಸಿಬಿ
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಿಂಗಳ ಬಳಿಕ ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ತಂಡ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಕೆಯ ಪೋಸ್ಟ್ ಹಾಕಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ಧವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ ಎಂದು X ಮೂಲಕ ಪೋಸ್ಟ್ ಹಾಕಿದೆ.

ಯಾವುದೇ ಪೂರ್ವಾನುಮತಿ ಇಲ್ಲದೆ ಆರ್‌ಸಿಬಿ ಫ್ರಾಂಚೈಸಿ ಸಂಭ್ರಮಾಚರಣೆಯ ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಗೆಲುವಿನ ಸಂಭ್ರಮಕ್ಕೆ ಬರಲು ಆಹ್ವಾನಿಸಿತ್ತು. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭೀಕರ ಕಾಲ್ತುಳಿತದಲ್ಲಿ ಹಲವು ಮಂದಿ ಮೃತಪಟ್ಟಿದ್ದರು. ಈ ಬೆಳವಣಿಗೆ ಐಪಿಎಲ್ ಇತಿಹಾಸದ ಕರಾಳ ದಿನಗಳಾಗಿ ಉಳಿಯಿತು. ಸಧ್ಯ ಮುಂದಿನ ದಿನಗಳಲ್ಲಿ ಐಪಿಎಲ್ ಶುರುವಾಗುವ ಈ ಹಂತದಲ್ಲಿ ಬೆಂಬಲಕ್ಕಾ ಮತ್ತೆ ಅಭಿಮಾನಿಗಳ ಬಳಿ ಅಂಗಲಾಚಿರುವ ಪೋಸ್ಟ್ ಮುಂದಿನ ದಿನಗಳಲ್ಲಿ ಬೆಂಬಲ ಕೋರಿದ ಪೀಠಿಕೆ ಎಂಬಂತೆ ಕಂಡಿದೆ. ಅಷ್ಟೇ ಅಲ್ಲದೆ ದುರ್ಘಟನೆ ಸಂಭವಿಸಿ, ಮೂರು ತಿಂಗಳ ಬಳಿಕ ಈ ಪೋಸ್ಟ್ ಹರಿದಾಡಿದ್ದು ಆರ್‌ಸಿಬಿ ಮತ್ತೆ ಅಖಾಡಕ್ಕೆ ಬರುವ ಮುನ್ಸೂಚನೆ ನೀಡಿದೆ.

ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒ೦ದು ಯೋಜನೆ.ಇ೦ದು ನಾವು ಮರಳಿದ್ದೇವೆ; ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮು೦ದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ.ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ” ಎಂಬಂತೆ X ಮೂಲಕ ಪೋಸ್ಟ್ ಹಾಕಿದೆ.

Dear 12th Man Army, this is our heartfelt letter to you!

𝗜𝘁’𝘀 𝗯𝗲𝗲𝗻 𝗰𝗹𝗼𝘀𝗲 𝘁𝗼 𝘁𝗵𝗿𝗲𝗲 𝗺𝗼𝗻𝘁𝗵𝘀 𝘀𝗶𝗻𝗰𝗲 𝘄𝗲 𝗹𝗮𝘀𝘁 𝗽𝗼𝘀𝘁𝗲𝗱 𝗵𝗲𝗿𝗲.

The Silence wasn’t Absence. It was Grief.

This space was once filled with energy, memories and moments that you… pic.twitter.com/g0lOXAuYbd
— Royal Challengers Bengaluru (@RCBTweets) August 28, 2025

ಅರ್ಷದ್ ನದೀಮ್ ನನ್ನ ಆತ್ಮೀಯ ಸ್ನೇಹಿತನಲ್ಲ: ನೀರಜ್ ಚೋಪ್ರಾ
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಜೊತೆ ಆತ್ಮೀಯ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾವಿಬ್ಬರೂ ಎಂದಿಗೂ ಆಪ್ತ ಸ್ನೇಹಿತರಾಗಿರಲಿಲ್ಲ ಎಂದು ಅವರು ಹೇಳಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನೀರಜ್ ಚೋಪ್ರಾ (ಎನ್‌ಸಿ) ಕ್ಲಾಸಿಕ್ ಜಾವೆಲಿನ್ ಟೂರ್ನಮೆಂಟನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಪಂದ್ಯಾವಳಿಗೆ ಅರ್ಷದ್ ನದೀಮ್ ಅವರನ್ನು ಆಹ್ವಾನಿಸಿದ್ದರ ಬಗ್ಗೆ ವಿವಾದವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಎರಡು ದಿನಗಳ ಮೊದಲು ನದೀಮ್‌ಗೆ ಆಹ್ವಾನ ಕಳುಹಿಸಿದ್ದೆ ಎಂದು ಚೋಪ್ರಾ ಈಗಾಗಲೇ ವಿವರಿಸಿದ್ದಾರೆ, ಆದರೆ ಪ್ರಸ್ತುತ ಸಂದರ್ಭಗಳಲ್ಲಿ ಅವರು ಸ್ಪರ್ಧಿಸುವ ಯಾವುದೇ ಅವಕಾಶವಿಲ್ಲ. ಮೇ 16 ರಂದು ದೋಹಾ ಡೈಮಂಡ್ ಲೀಗ್ ಆರಂಭವಾಗುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀರಜ್ ಮಾತನಾಡುತ್ತಿದ್ದರು. ಅರ್ಷದ್ ಜೊತೆಗಿನ ಸ್ನೇಹದ ಬಗ್ಗೆ ವರದಿಗಾರರು ಚೋಪ್ರಾ ಅವರನ್ನು ಕೇಳಿದಾಗ, ಅವರು ಈ ರೀತಿ ಉತ್ತರಿಸಿದರು.

“ನದೀಮ್ ಜೊತೆ ನನಗೆ ಯಾವುದೇ ರೀತಿಯ ಆತ್ಮೀಯವಾದ ಸಂಬಂಧವಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಎಂದೂ ಆತ್ಮೀಯ ಸ್ನೇಹಿತರಾಗಿರಲಿಲ್ಲ. ಹಾಗೆಂದು ನಾವು ಮಾತನಾಡುವುದಿಲ್ಲ ಎಂದಲ್ಲ. ಕ್ರೀಡಾಪಟುಗಳಾಗಿ ಮಾತನಾಡುತ್ತೇವೆ. ನನಗೆ ಪ್ರಪಂಚದಾದ್ಯಂತದ ಅಥ್ಲೆಟಿಕ್ಸ್ ಸಮುದಾಯದಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ.

ಯಾರಾದರೂ ನನ್ನೊಂದಿಗೆ ಸೌಜನ್ಯದಿಂದ ಮಾತನಾಡಿದರೆ, ನಾನು ಅವರೊಂದಿಗೆ ಗೌರವದಿಂದ ಮಾತನಾಡಲು ಇಷ್ಟಪಡುತ್ತೇನೆ. ಈ ರೀತಿ ಸ್ನೇಹಪರವಾಗಿರುವುದು ಎಲ್ಲಾ ಜಾವೆಲಿನ್ ಎಸೆತಗಾರರಿಗೆ ಒಳ್ಳೆಯದು. ಏಕೆಂದರೆ ನಾವು ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದೇವೆ. ಪ್ರತಿಯೊಬ್ಬರೂ ತಮ್ಮ ದೇಶಕ್ಕಾಗಿ ಸ್ಪರ್ಧಿಸಿ ಶ್ರೇಷ್ಠತೆಯನ್ನು ಸಾಧಿಸಲು ಬಯಸುತ್ತಾರೆ” ಎಂದು ನೀರಜ್ ಹೇಳಿದರು.

ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ ನದೀಮ್ ಚಿನ್ನ ಗೆದ್ದರೆ, ನೀರಜ್ ಬೆಳ್ಳಿ ಗೆದ್ದರು.

VIRAT KOHLI : ಟೆಸ್ಟ್‌ ಕ್ರಿಕೆಟ್‌ ನಿಂದ ವಿರಾಟ್‌ ಕೋಹ್ಲಿ ನಿವೃತ್ತಿ ಘೋಷಣೆ
ನವದೆಹಲಿ : ಟೆಸ್ಟ್‌ ಕ್ರಿಕೆಟ್‌ ನಿಂದ ನಿವೃತ್ತಿ  ಹೊಂದುವುದಾಗಿ ಭಾರತದ ಕ್ರಿಕೆಟ್‌ ಆಟಗಾರ ವಿರಾಟ್‌ ಕೋಹ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಬಿಸಿಸಿಐ ಸುಳಿವು ನೀಡಿತ್ತು.

14 ವರ್ಷದ ಹಿಂದೆ ನಾನು ಟೆಸ್ಟ್‌ ಕ್ರಿಕೆಟ್‌ ನಲ್ಲಿ ಆಡಲು ಶುರುಮಾಡಿದೆ. ಈ ಪಯಣ ಇಲ್ಲಿಯವರೆಗೂ ಕರೆತರುವುದೆಂದು ನಾನೆಂದೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು. ರೂಪಿಸಿತು. ಹಾಗೂ ನನ್ನ ಜೀವನವಿಡೀ ನೆನಪಿಡಬಹುದಾದ ಪಾಠ ಕಲಿಸಿತು.

https://www.instagram.com/p/DJiwQm0RbiM/?utm_source=ig_embed&ig_rid=b6a913e6-43d2-4f06-8862-debf053d191e

ಬಿಳಿಯ ವಸ್ತ್ರದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುವುದು ನನಗಂತೂ ತೀರಾ ವೈಯಕ್ತಿಕ, ಭಾವನಾತ್ಮಕ ಸಂಗತಿ. ಖಾಲಿ ಸ್ಟೇಡಿಯಂ. ಹಲವು ದಿಗನಳ ಆಟ, ಯಾರೂ ನೆನೆಪಿಟ್ಟುಕೊಳ್ಳದ ಸಣ್ಣ ಸಂಗತಿಗಳು. ಆದರೆ ನಾನೆಂದಿಗೂ ನಿಮ್ಮ ಜೊತೆ ಇರುವೆ ಎಂದು ವಿರಾಟ್‌ ಕೋಹ್ಲಿ ಟ್ವೀಟ್‌ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ರೋಹಿತ್ ಶರ್ಮಾ
ಕ್ರಿಕೆಟ್ ಜಗತ್ತಿನ ಹಿಟ್‌ಮ್ಯಾನ್ ಎಂದೇ ಜನಪ್ರಿಯರಾಗಿರುವ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಇನಿಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುವ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಕೆಲ ದಿನಗಳಿಂದ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ರೋಹಿತ್ ಶರ್ಮಾ ಬರೀ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ತಂಡದ ಪರ ಕಣಕ್ಕೆ ಇಳಿಯುವುದನ್ನು ಕಾಣಬಹುದಾಗಿದೆ. ಭಾರತದಲ್ಲಿ ನಡೆದಿದ್ದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದಾರೆ.

ರೋಹಿತ್‌ ಶರ್ಮಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-3ರಿಂದ ಸೋಲು ಕಂಡಿತ್ತು. ಅಲ್ಲದೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಇನ್ನು ರೋಹಿತ್ ಶರ್ಮಾ ನಾಯಕರಾಗಿ ಮುಂದುವರೆಯುವ ಬಗ್ಗೆ ಹಲವು ಪ್ರಶ್ನೆಗಳು ಇದ್ದವು. ಈ ಬಗ್ಗೆ ಅವರಿಗೆ ಹಲವು ಬಾರಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಐಪಿಎಲ್‌ ಮಧ್ಯದಲ್ಲೇ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್‌ ಬಳಿಕ ಭಾರತ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ರೋಹಿತ್ ಶರ್ಮಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ
ನವದೆಹಲಿ : 2024ರಲ್ಲಿ ಅಮೋಘ ಲಯದಲ್ಲಿದ್ದ ಭಾರತ ತಂಡದ ಅಗ್ರಮಾನ್ಯ ವೇಗದ ಬೌಲರ್ ಜಸ್‌ಪ್ರೀತ್‌ ಬೂಮ್ರಾ ಅವರು ಐಸಿಸಿ ಪುರುಷರ, ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಸೋಮವಾರ ಘೋಷಿಸಿದೆ.

ಟಿ20 ವಿಶ್ವಕಪ್‌ನಲ್ಲೂ ಬೂಮ್ರಾ ಅವರ ಅಮೋಘ ಬೌಲಿಂಗ್‌ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಅಮೆರಿಕ–ವೆಸ್ಟ್‌ ಇಂಡೀಸ್‌ನಲ್ಲಿ ಈ ವರ್ಷದ ಮಧ್ಯದಲ್ಲಿ ನಡೆದ ಆ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿದ್ದರು.

ಬೆನ್ನಿನ ಗಾಯದಿಂದ ಚೇತರಿಸಿಕೊಂಡು 2023ರಲ್ಲಿ ತಂಡಕ್ಕೆ ಬೂಮ್ರಾ ವಾಪಸ್‌ ಆಗಿದ್ದರು. ಬೂಮ್ರಾ ಅವರು ಈ ವರ್ಷ ಆಡಿರುವ 13 ಟೆಸ್ಟ್‌ ಪಂದ್ಯಗಳಲ್ಲಿ 14.92 ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಈ ವರ್ಷ ಬೌಲರ್‌ ಒಬ್ಬರ ಅತ್ಯುತ್ತಮ ಸಾಧನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಅವರು 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕೋಂಟಸ್‌ನಂಥ ಎಳಸಿಗೆ ಕೋಹ್ಲಿ ಮಾಡಿದ್ದು ಕಾಸ್ಟ್ಲೀ ಕ್ಯಾಂಪೇನ್!
“..ಟೀಮ್‌ ಇಂಡಿಯಾ ಮುಂದಿನ ಟೆಸ್ಟ್‌ ಮ್ಯಾಚ್ ಆಡಲು ಬರೋಬ್ಬರಿ ಏಳೆಂಟು ತಿಂಗಳು ಕಾಯಬೇಕು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರೋಹಿತ್‌ ಶರ್ಮಾ, ವಿರಾಟ್‌ ಕೋಹ್ಲಿ, ಜಡೇಜಾ ರಿಟೈರ್‌ಮೆಂಟ್‌ ಘೋಷಿಸಿ, ಹೊಸ ಆಟಗಾರರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು..”

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಇಂಡಿಯಾ ಕೈಯಿಂದ ಆಸೀಸ್‌ಗಳ ಕೈಗೆ ಹೋಗಿಯಾಗಿದೆ! ಬರೋಬ್ಬರಿ ಹತ್ತು ವರ್ಷಗಳ ನಂತರ ಆಸ್ಟ್ರೇಲಿಯಾ ಈ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿಬಿಟ್ಟಿದೆ. ಅಸಲಿಗೆ ಈ ಟ್ರೋಫಿ ಇನ್ನೂ ಇಂಡಿಯಾದಲ್ಲೇ ಇರುವ ವಿಫುಲ ಅವಕಾಶಗಳು ಇದ್ದಾಗ್ಯೂ ಆಟಗಾರರ ಮೈಮರೆತು, ಅನಾಮತ್ತಾಗಿ ಟ್ರೋಫಿಯನ್ನು ಎತ್ತಿ ಗಿಫ್ಟ್‌ ರೂಪದಲ್ಲಿ ಕೊಟ್ಟುಬಿಟ್ಟರು!

ಹೌದು, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಡಿಯಾ ಭರ್ಜರಿಯಾಗಿ ಅಂದರೆ ತುಂಬಾ ಸುಲಭವಾಗಿ ಗೆದ್ದು ಸಂಭ್ರಮಿಸಿತು! ಆ ಗೆಲುವೇ ಟೀಮ್‌ ಇಂಡಿಯಾದ ಸೋಲಿಗೆ ಮುನ್ನುಡಿ ಬರೆಯಿತೆಂದರೆ ತಪ್ಪಾಗಲಾರದು. 2019ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 318 ರನ್‌ಗಳ ಗೆಲುವು ಬಿಟ್ಟರೆ, ಈ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಪರ್ತ್‌ ಟೆಸ್ಟ್‌ನ ಮೊದಲ ಪಂದ್ಯದಲ್ಲಿ ಗೆದ್ದ 295 ರನ್‌ಗಳ ಭರ್ಜರಿ ಗೆಲುವೇ ಏಷಿಯಾ ಪಿಚ್‌ನಿಂದಾಚೆಗೆ ಇಂಡಿಯಾ ದಾಖಲಿಸಿದ ಅತಿ ದೊಡ್ಡ ಗೆಲುವು. ಆ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಆಡದಿದ್ದರೂ, ಸ್ಟಾರ್‌ ಬೌಲರ್‌ ಜಸ್ಪ್ರೀತ್‌ ಬೂಮ್ರಾ ಕಮಾಲ್‌ ತಮ್ಮ ಬೌಲಿಂಗ್‌ ಮೂಲಕ ಕಮಾಲ್‌ ಮಾಡಿ ಆ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾದ ಮೇನ್‌ ಸ್ಟ್ರೀಮ್‌ ಮಾಧ್ಯಮಗಳು ಟೀಮ್‌ ಇಂಡಿಯಾದ ಈ ಸಾಧನೆಯನ್ನು ಕೊಂಡಾಡಿದವು. ಬೂಮ್ರಾ ಆಟವಷ್ಟೇ ಅಲ್ಲದೇ, ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿಯ ಸೆಂಚುರಿ ಗೇಮ್‌ ಅನ್ನು ಹಾಡಿ ಕೊಂಡಾಡಿದವು.

ಆ ಮೊದಲ ಗೆಲುವಿನ ನಂತರ ಟೀಮ್‌ ಇಂಡಿಯಾಗೆ ಬರೋಬ್ಬರಿ 10 ದಿನಗಳ ರೆಸ್ಟ್‌ ಸಿಕ್ಕಿಬಿಟ್ಟಿತು. ಮೊದಲೇ ಗೆಲುವಿನ ಜೋಶ್‌ನಲ್ಲಿದ್ದ ಆಟಗಾರರು ಜಾಲಿ ಜಾಲಿ ಅಂತ ಪಾರ್ಟಿ ಮೋಡ್‌ಗೆ ಜಾರಿಬಿಟ್ಟರು. ಆಮೇಲೆ ಬಂದದ್ದೇ ಪಿಂಕ್‌ ಟೆಸ್ಟ್‌ ಭೂತ! ಇದುವರೆಗೂ ಒಂದುಬಾರಿಯೂ ಪಿಂಕ್‌ ಬಾಲ್ ಟೆಸ್ಟ್‌ ಆಡದ ಟೀಮ್‌ ಇಂಡಿಯಾ ಪಿಂಕ್‌ ಟೆಸ್ಟ್‌ ಅನ್ನು ಅಕ್ಷರಶಃ ಕೇರ್‌ಲೆಸ್‌ ಮಾಡಿಬಿಟ್ಟಿತು! ಈ ಪಿಂಕ್‌ ಬಾಲ್ ಟೆಸ್ಟ್‌ ಶುರುವಾಗಲು ಕಾರಣವೇನು ಎಂದು ತಿಳಿದು ಅಸಲಿ ಟಾಪಿಕ್‌ ಮುಂದುವರೆಸೋಣ.

ಪಿಂಕ್‌ ಟೆಸ್ಟ್‌ ಅನ್ನು ಶುರು ಮಾಡಿದ್ದು ಆಸ್ಟ್ರೇಲಿಯಾದ ದಿಗ್ಗಜ ಬೌಲರ್‌ ಗ್ಲೆನ್‌ ಮೆಗ್ರಾತ್.‌ ಅವರ ಪತ್ನಿ ಬ್ರೆಸ್ಟ್‌ ಕ್ಯಾನ್ಸರ್‌ನಿಂದ ತೀರಿಕೊಳ್ಳುತ್ತಾರೆ. ಅವರ ಸ್ಮರಣಾರ್ಥವಾಗಿ ಮೆಗ್ರಾಥ್‌ ʻಮೆಗ್ರಾಥ್‌ ಫೌಂಡೇಶನ್‌ʼ ಸ್ಥಾಪಿಸಿ, ಪ್ರತಿ ವರ್ಷ ಒಂದೆರಡು ಪಿಂಕ್‌ ಟೆಸ್‌ ಮ್ಯಾಚ್‌ ಆಡಿಸಿ, ಅದರ ಮೂಲಕ ಬರುವ ಹಣವನ್ನು ಜಗತ್ತಿನಾದ್ಯಂತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹೆಣ್ಣುಮಕ್ಕಳ ಚಿಕಿತ್ಸೆಗೆ ನೆರವಾಗುವ ಉದ್ದೇಶವನ್ನು ಈ ಪಿಂಕ್‌ ಟೆಸ್ಟ್‌ ಹೊಂದಿದೆ. ಮ್ಯಾಚ್ ನೋಡಲು ಬರುವ ಪ್ರೇಕ್ಷಕರು ಸ್ವ ಇಚ್ಛೆಯಿಂದ ಟಿಕೆಟ್‌ ರೇಟ್‌ ಮೇಲೆ ಹೆಚ್ಚುವರಿಯಾಗಿ 20 ಡಾಲರ್‌ ನೀಡುತ್ತಾರೆ. ಆ ಹಣ ನೇರವಾಗಿ ಮೆಗ್ರಾಥ್‌ ಪೌಂಡೇಶನ್‌ಗೆ ಹೋಗುತ್ತದೆ. ಇದು ಆಟವನ್ನು ಮತ್ತಷ್ಟು ಮಾನವೀಯವಾಗಿಸುವ ಪ್ರಕ್ರಿಯೆ ಅಲ್ಲವ?

ಈಗ ಇವತ್ತಿನ ಟಾಪಿಕ್‌ಗೆ ಬರೋದಾದರೆ, ಡೇ ಅಂಡ್‌ ನೈಟ್‌ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಟೀಮ್‌ ಇಂಡಿಯಾ ಮುಗ್ಗರಿಸಿ ಬಿತ್ತು! ಆಟದ ಲಯದಲ್ಲಿ ಮೈಮರೆತ ಯಶಸ್ವಿ ಜೈಸ್ವಾಲ್‌ ಮೊದಲ ಟೆಸ್ಟ್‌ನಲ್ಲಿ ಡೇಂಜರ್‌ ಬೌಲರ್‌ ಮಿಚಲ್‌ ಸ್ಟಾರ್ಕ್‌ ಅವರ ಬೌಲಿಂಗ್‌ ಅನ್ನು ʻಇಟ್ಸ್‌ ಕಮ್‌ ಟೂ ಸ್ಲೋʼ ಎಂದು ಆಡಿಕೊಂಡಿದ್ದರು. ಅವರ ಹೇಳಿಕಗೆ ಕಿರುನಗೆ ಚೆಲ್ಲಿದ್ದ ಸ್ಟಾರ್ಕ್‌ ಎರಡನೇ ಪಂದ್ಯ ಮೊದಲ ಎಸೆತದ ಪಿಂಕ್‌ ಬಾಲ್‌ ಅನ್ನು ನೇರ ಜೈಸ್ವಾಲ್‌ ಕಾಲಿಗೆ ಎಸೆದು ಪೆವಿಲಿಯನ್‌ ಹಾದಿ ತೋರಿಸಿ, ತಾನು ಎಂಥ ಆಟಗಾರ ಎಂಬುದನ್ನು ತೋರಿಸಿದರು. ಆ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಸ್ಟಾರ್ಕ್‌ ಒಟ್ಟು 8 ವಿಕೆಟ್ ಪಡೆದು ಸಂಭ್ರಮಿಸಿದರು. ನಾಲ್ಕನೇ ಇನ್ನಿಂಗ್ಸ್‌ ಬ್ಯಾಟಿಂಗ್‌ ಶುರು ಮಾಡಿದ ಆಸ್ಟ್ರೇಲಿಯಾಗೆ ಗೆಲ್ಲಲು ಬೇಕಾಗಿದ್ದ ರನ್‌ ಕೇವಲ 19…! ಹತ್ತು ವಿಕೆಟ್‌ ಗಳ ಭರ್ಜರಿ ಗೆಲುವಿನ ಮೂಲಕ ಆಸ್ಟ್ರೇಲಿಯಾ ಪರ್ತ್‌ ಟೆಸ್ಟ್‌ನ ಹೀನಾಯ ಸೋಲಿನ ಅವಮಾನದಿಂದ ಹೊರಗೆ ಬಂತು. ಅಲ್ಲಿಂದ ಶುರುವಾಯಿತು ಟೀಮ್‌ ಇಂಡಿಯಾದ ಸೋಲಿನ ನಾಗಾಲೋಟ.

ಪಿಂಕ್‌ ಬಾಲ್‌ ಟೆಸ್ಟ್‌ ಗೆಲುವಿನ ಲಯದಲ್ಲಿದ್ದ ಆಸ್ಟ್ರೇಲಿಯಾ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ 445 ರನ್‌ ಕಲೆಹಾಕಿತು. ನೆನಪಿರಲಿ ಇಂಡಿಯಾದ ಸ್ಟಾರ್‌ ಬೌಲರ್‌ ಬೂಮ್ರಾ ಈ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದರೂ ಇಷ್ಟೊಂದು ರನ್‌ ಕಲೆಹಾಕಿ, ಟೀಮ್‌ ಇಂಡಿಯಾಗೆ ಸವಾಲು ಹಾಕಿತ್ತು. ಮೊದಲ ಇನ್ನಿಂಗ್ಸ್‌ ಆಟ ಶುರು ಮಾಡಿದ ಟೀಮ್‌ ಇಂಡಿಯಾದ ಓಪನರ್‌ ಜೈಸ್ವಾಲ್‌ಗೆ ಮತ್ತೊಮ್ಮೆ ಸಿಂಹ ಸ್ವಪ್ನವಾಗಿ ಕಾಡಿದ್ದು ಮಿಷಲ್‌ ಸ್ಟಾರ್ಕ್!‌ ಮೊದಲ ಬಾಲಿಗೆ ಬೌಂಡರಿ ಸಿಡಿಸಿದ ಸಂಭ್ರಮದಲ್ಲಿದ್ದ ಜೈಸ್ವಾಲ್‌ ಅನ್ನು ಎರಡನೇ ಎಸೆತದಲ್ಲಿ ಪೆವಿಲಿಯನ್‌ ಹಾದಿ ತೋರಿಸಿದರು! ಮಳೆ ಬಾರದಿದ್ದರೆ ಬ್ರಿಸ್ಬೇನ್‌ ಟೆಸ್ಟ್‌ ರೋಚಕವಾಗುತ್ತಿತ್ತು. ಆ ಮಟ್ಟಿಗೆ ಇಂಡಿಯಾ ಮೂರನೇ ಟೆಸ್ಟ್‌ನಲ್ಲಿ ಫೈಟ್‌ಬ್ಯಾಕ್‌ ನೀಡಿದ್ದು ಸುಳ್ಳಲ್ಲ.

ಬಾಕ್ಸಿಂಗ್‌ ಡೇ ಟೆಸ್ಟ್‌ ಎಂದು ಕರೆಯಲಾದ ನಾಲ್ಕನೇ ಟೆಸ್ಟ್‌ ಅನ್ನು ಕ್ರಿಕೆಟ್‌ ಫ್ಯಾನ್ಸ್‌ ಮರೆಯಲು ಸಾಧ್ಯವೇ ಇಲ್ಲ. ಅಷ್ಟೊಂದು ಡ್ರಾಮಾಗಳು ಈ ಟೆಸ್ಟ್‌ನಲ್ಲಿ ಜರುಗಿದವು! ತನ್ನ ಡೆಬ್ಯೂ ಮ್ಯಾಚ್‌ ಆಡಲು ಬಂದ ಸ್ಯಾಮ್‌ ಕೋಂಟಸ್‌ ಟೀಮ್‌ ಇಂಡಿಯಾದ ಸ್ಟಾರ್‌ ಬೌಲರ್‌ ಬೂಮ್ರಾ ಅವರ ಬೌಲಿಂಗ್‌ ಅನ್ನು ಸ್ಕೂಪ್‌ ಮಾಡಿ ಭರ್ಜರಿ ಎರಡು ಸಿಕ್ಸರ್‌ ಸಿಡಿಸಿಬಿಟ್ಟರು! ಇಡೀ ಮೈದಾನ ಅಕ್ಷರಶಃ ಹೀಟ್‌ ಆಯಿತು. ಕೋಂಟಸ್‌ನ ಆಕ್ರಮಣಕಾರಿ, ಅನ್‌ ಯೂಸುಅಲ್‌ ಆಟದಿಂದ ಬೆಚ್ಚಿ ಬಿದ್ದಂತೆ ಕಂಡ ಟೀಮ್‌ ಇಂಡಿಯಾದ ಮತ್ತೊಬ್ಬ ದಿಗ್ಗಜ ವಿರಾಟ್‌ ಕೊಹ್ಲಿ ಆ ಸಣ್ಣ ಹುಡುಗನ ಭುಜಕ್ಕೆ ಭುಜ ತಾಗಿಸಿ ಟೀಕೆಗೆ ಒಳಗಾಗಿ, ರೆಫರಿಯ ಹತ್ರ ಸ್ಸಾರಿ ಕೇಳಿ, ದಂಡವನ್ನೂ ತೆತ್ತರು. ತನ್ನ ಪಾಡಿಗೆ ತಾನು ತನ್ನಾಟವನ್ನು ಆಡುತ್ತಿದ್ದ ಕೋಂಟಾಸ್‌ ಪಂದ್ಯದ ಕೇಂದ್ರ ಬಿಂದುವನ್ನಾಗಿಸಿದ್ದು ಕಿಂಗ್‌ ಎಂಬ ಕೋಹ್ಲಿ ಎಂದರೆ ತಪ್ಪಾಗಲಾರದು. ಹಿರಿಯ ಆಟಗಾರರನ್ನು ಕೆಣಕುವ ರೀತಿ ಮಾತನಾಡಿದ ಜೈಸ್ವಾಲ್‌ನದ್ದು ಎಷ್ಟು ಪ್ರಮಾದವೋ, ಎಳೆಯ ಆಟಗಾರರನ್ನು ಕೆಣಕಿದ ಕೊಹ್ಲಿಯದ್ದು ಅಷ್ಟೇ ಪ್ರಮಾದ.‌ ಒಂದರ್ಥದಲ್ಲಿ ಹೇಳುವುದಾದರೆ, ಕೋಂಟಸ್‌ನಂಥ ಎಳಸಿಗೆ ಕೋಹ್ಲಿ ಮಾಡಿದ್ದು ಕಾಸ್ಟ್ಲೀ ಕ್ಯಾಂಪೇನ್! ಯಾಕೆಂದರೆ, ಅಲ್ಲಿಂದ ಕೊಂಟಾಸ್‌ ನ ಬಾಡಿ ಲಾಂಗ್ವೇಜ್‌ ಬದಲಾಯಿತು. ಶಾರ್ಟ್‌ ಲೆಗ್‌ನಲ್ಲಿ ಫೀಲ್ಡ್‌ ಮಾಡುವಾಗ ಚಾಟರ್‌ ಬಾಕ್ಸ್‌ನಂತೆ ಒಂದೇ ಸಮ ಮಾತನಾಡುತ್ತಾ, ಇಂಡಿಯನ್‌ ಬ್ಯಾಟರ್‌ಗಳ ಏಕಾಗ್ರತೆಗೆ ಭಂಗ ತಂದು ತನ್ನ ತಂಡವನ್ನು ಗೆಲ್ಲಿಸಿಕೊಂಡ! ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಜರುಗಿದ ಈ ಟೆಸ್ಟ್‌ ಪಂದ್ಯದಲ್ಲಿ ಇಂಡಿಯಾ ಪರ ಸಿಕ್ಕ ಒಂದೇ ಒಂದು ಸಮಾಧಾನಕ ಸಂಗತಿ ಎಂದರೆ ನಿತೀಶ್‌ ಕುಮಾರ್‌ ರೆಡ್ಡಿಯ ಆ ಅತ್ಯ ಅಮೂಲ್ಯ ಸೆಂಚುರಿ. ಫಾಲೋ ಆನ್‌ ಭೀತಿಯಲ್ಲಿದ್ದ ಟೀಮ್‌ ಇಂಡಿಯಾವನ್ನು ಆ ಭೀತಿಯಿಂದ ಪಾರು ಮಾಡಿ, ತನ್ನ ತಂದೆಯ ಉಪಸ್ಥಿತಿಯಲ್ಲಿ ಸೆಂಚುರಿ ಮಾಡಿ ಘಳಿಗೆಯನ್ನು, ಅವರ ತಂದೆಯ ಆನಂದದ ಕಣ್ಣೀರನ್ನು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ.

ಇನ್ನು ಕಡೆಯ ಟೆಸ್ಟ್‌ ಅಂತೂ ಒಂಥರಾ ಸ್ಕ್ರಿಪ್ಟೆಡ್‌ ಡ್ರಾಮಾ ಇದ್ದಂಗೆ ಇತ್ತು. ಕಳಪೆ ಫಾರ್ಮ್‌ನಲ್ಲಿದ್ದ ರೋಹಿತ್‌ ಶರ್ಮಾ ತಾನೇ ಹೊರಗೆ ಕುಳಿತು, ಶುಭಮನ್‌ ಗಿಲ್‌ಗೆ ಅವಕಾಶ ಕೊಟ್ಟದ್ದು ಮೇಲ್ನೋಟಕ್ಕೆ ಸರಿ ಎನಿಸಿದರೂ, ಆಳಕ್ಕಿಳಿದು ನೋಡಿದಾಗ ರಾಂಗ್‌ ಡಿಸಿಶನ್‌ ಎನಿಸಿಬಿಡುತ್ತದೆ. ಫಾರ್ಮ್‌ನಲ್ಲಿ ಇಲ್ಲದ ಆಟಗಾರ ಬೆಂಚ್‌ನಲ್ಲಿ ಕೂರಬೇಕೆಂದರೆ ಆ ಜಾಗವನ್ನು ಫಾರ್ಮ್‌ನಲ್ಲಿ ಇರುವ ಆಟಗಾರ ತುಂಬಬೇಕಾಗುತ್ತದೆ. ಶುಭಮನ್‌ ಗಿಲ್‌ ಯಾವಾಗ ಫಾರ್ಮ್‌ನಲ್ಲಿ ಇದ್ದರು? ಅದ್ಯಾವ ಕಾರಣಕ್ಕೆ ಅವರನ್ನು ಆಸ್ಟ್ರೇಲಿಯಾದಂಥ ಬೌಲರ್‌ ಸ್ನೇಹಿ ಪಿಚ್‌ಗೆ ಆಯ್ಕೆ ಮಾಡಿದರೋ ಎಂಬುದನ್ನು ಸ್ವತಃ ಅಜಿತ್‌ ಅಗರ್ಕರ್‌ ಮತ್ತೊ ಕೋಚ್‌ ಗೌತಮ್‌ ಗಂಭೀರ್‌ ತಿಳಿಸಬೇಕು. ಹೊಸ ಆಟಗಾರನಿಗೆ ಅವಕಾಶ ಕೊಟ್ಟಿದ್ದರೆ ಮಾನವಾದರೂ ಉಳಿಯುತ್ತಿತ್ತು. ಉಳಿದಂತೆ ರೋಹಿತ್‌ ಅನುಪಸ್ಥಿತಿಯಲ್ಲಿ ಬೂಮ್ರಾ ಕ್ಯಾಪ್ಟನ್‌ ಕ್ಯಾಪ್‌ ಧರಿಸಿ ಬೌಲಿಂಗ್‌ ಅಟ್ಯಾಕಿಗೆ ಬಂದು ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನೇನೋ ಕಾಡಿದರು! ಆದರೆ ಗಾಯದ ನೆಪವೊಡ್ಡಿ ಪೆವಿಲಿಯನ್‌ ಸೇರಿಕೊಂಡವರು ವಾಪಸ್‌ ಫೀಲ್ಡಿಗೆ ಬರಲೇ ಇಲ್ಲ! ಅದೂ ಅಲ್ಲದೆ, ಸ್ಪಿನ್ನರ್‌ ಸ್ನೇಹಿ ಅಲ್ಲದ ಈ ಸಿಡ್ನಿ ಪಿಚ್‌ನಲ್ಲಿ ವಾಶಿಂಗ್‌ ಟನ್‌ ಸುಂದರ್‌ ಮತ್ತು ಜಡೇಜಾ ಬದಲಿಗೆ ಇನ್ನಿಬ್ಬರು ಬ್ಯಾಟರ್‌ಗಳಿಗೆ ಅವಕಾಶ ಕೊಟ್ಟಿದ್ದರೆ ಉತ್ತಮ ಸ್ಕೋರ್‌ ಮಾಡಿ, ಬಾರ್ಡರ್‌ ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಅವಕಾಶ ಟೀಮ್‌ ಇಂಡಿಯಾಗೆ ಇತ್ತು. ಆದರೆ, ಡ್ರಾಮಾದಲ್ಲಿ ಮುಳುಗಿಹೋಗಿ, ಸರಣಿಯನ್ನೇ ಕೈ ಚೆಲ್ಲಿದ ಟೀಮ್‌ ಇಂಡಿಯಾ, ಅದರ ಮ್ಯಾನೇಜ್‌ಮೆಂಟ್‌ ಹೀಗೆಲ್ಲಾ ಯೋಚಿಸಲಿಲ್ಲವಲ್ಲ ಎಂಬುದೇ ಅಚ್ಚರಿ!

ಈಗ ಸರಣಿಯನ್ನು ಹೀನಾಯವಾಗಿ ಸೋತಾಗಿದೆ. ಟೀಮ್‌ ಇಂಡಿಯಾ ಮುಂದಿನ ಟೆಸ್ಟ್‌ ಮ್ಯಾಚ್ ಆಡಲು ಬರೋಬ್ಬರಿ ಏಳೆಂಟು ತಿಂಗಳು ಕಾಯಬೇಕು. ಈ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರೋಹಿತ್‌ ಶರ್ಮಾ, ವಿರಾಟ್‌ ಕೋಹ್ಲಿ, ಜಡೇಜಾ ರಿಟೈರ್‌ಮೆಂಟ್‌ ಘೋಷಿಸಿ, ಹೊಸ ಆಟಗಾರರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಕೆ ಎಲ್‌ ರಾಹುಲ್‌ ಅವರನ್ನು ಮೇಲೆ ಕೆಳಗೆ ಆಡಿಸಿ, ಅವರ ಆಟವನ್ನು ಕೆಡಿಸದೆ ಓಪನರ್‌ ಸ್ಥಾನದಲ್ಲೇ ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಬೂಮ್ರಾ ಒಬ್ಬರನ್ನೇ ನೆಚ್ಚಿಕೊಳ್ಳದೇ ಇನ್ನಿಬ್ಬರು ವೇಗಿಗಳನ್ನು ರೆಡಿ ಮಾಡಬೇಕು. ಕಡೆಯದಾಗಿ ಕೋಂಟಸ್‌ ಥರದ ಎಳಸು ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡದೆ ತನ್ನ ಆಟ ತಾನು ಆಡಿಬಿಟ್ಟರೆ, ಟೆಸ್ಟ್‌ ಆಟದಲ್ಲಿ ಇಂಡಿಯಾದ ಹಿಡಿತವನ್ನು ತಪ್ಪಿಸಲು ಯಾವ ತಂಡಕ್ಕೂ ಸಾಧ್ಯವಾಗಲಾರದು. ನಮಸ್ಕಾರ

ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ; ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆ ಆದ ಮನು ಬಾಕರ್
“ಖೇಲ್ ರತ್ನ” ಪ್ರಶಸ್ತಿಯ ಬಗ್ಗೆ ಹಲವು ದಿನಗಳಿಂದ ಇದ್ದ ಗೊಂದಲಕ್ಕೆ ಈಗ ಅಂತಿಮ ತೆರೆ ಬಿದ್ದಿದೆ. ಅಂದಹಾಗೆ ಒಲಿಂಪಿಕ್ಸ್ ಪದಕ ವಿಜೇತೆ ಮನು ಬಾಕರ್ ಸೇರಿದಂತೆ ನಾಲ್ವರು ಕ್ರೀಡಾಳುಗಳಿಗೆ ಈ ಬಾರಿಯ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಸೇರಿದಂತೆ ನಾಲ್ವರು ಅಥ್ಲೀಟ್ಗಳಿಗೆ ಜನವರಿ 17ರಂದು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಗುರುವಾರ ತಿಳಿಸಿದೆ.

ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಮನು ಅವರ ಹೆಸರು ಆರಂಭದಲ್ಲಿ ಕಾಣೆಯಾಗಿತ್ತು. ಆ ನಂತರ ಮನು ಭಾಕರ್ ಅವರ ತಂದೆ ಕೇಂದ್ರ ಸರ್ಕಾರದ ಈ ನಡೆಯ ಬಗ್ಗೆ ಆಕ್ರೋಶ ಹೊರ ಹಾಕಿ, ಉದ್ದೇಶಪೂರ್ವಕವಾಗಿ ಮನು ಬಾಕರ್ ಅವರನ್ನು ಪ್ರಶಸ್ತಿ ಸುತ್ತಿನಲ್ಲಿ ಹೊರಗಿಡಲಾಗಿದೆ ಎಂದು ಆರೋಪಿಸಿದ್ದರು. ಸಧ್ಯ ಈಗ ಅವರ ಹೆಸರನ್ನು ಕೇಂದ್ರ ಸರ್ಕಾರ ಪಟ್ಟಿಗೆ ಸೇರಿಸಿ, ಗೊಂದಲಕ್ಕೆ ತೆರೆ ಎಳೆದಿದೆ.

ಮನು ಬಾಕರ್, ಚೆಸ್ ಚಾಂಪಿಯನ್ ಗುಕೇಶ್ ಅವರ ಜೊತೆಗೆ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಅವರು ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

“ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ಪರಿಶೀಲನೆಯ ನಂತರ, ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಸಂಸ್ಥೆಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಖೇಲ್ ರತ್ನ ಪ್ರಶಸ್ತಿ | ಪ್ರಶಸ್ತಿಗಳ ಹಿಂದೆ ಹೋಗುವುದು ನನ್ನ ಗುರಿಯಲ್ಲ ಎಂದ ಮನು ಬಾಕರ್
ಇದೇ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡು ಪದಕ ಗೆದ್ದುಕೊಟ್ಟ ಶೂಟರ್ ಮನು ಭಾಕರ್ ಖೇಲ್ ರತ್ನ ಪ್ರಶಸ್ತಿ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಗೊತ್ತೇ ಇದೆ.

ಅವರ ಕುಟುಂಬ ಸದಸ್ಯರು ಮತ್ತು ಕ್ರೀಡಾಭಿಮಾನಿಗಳು ಈಗಾಗಲೇ ಈ ವಿಷಯವಾಗಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಮನು ಬಾಕರ್ ಅವರು, ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಏನಾದರೂ ದೋಷವಿರಬಹುದು, ಅದನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಒಬ್ಬ ಕ್ರೀಡಾಪಟುವಾಗಿ ದೇಶಕ್ಕಾಗಿ ಆಡುವುದು ನನ್ನ ಜವಾಬ್ದಾರಿ. ಮನ್ನಣೆ ಮತ್ತು ಪ್ರಶಸ್ತಿಗಳು ನನಗೆ ಸ್ಫೂರ್ತಿ ನೀಡುತ್ತವೆ, ಆದರೆ ಅದೇ ನನ್ನ ಗುರಿಯಲ್ಲ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಅದಕ್ಕೂ ಮುನ್ನ ಅವರ ಕೋಚ್ ಜಸ್ಪಾಲ್ ರಾಣಾ ಪ್ರತಿಕ್ರಿಯಿಸಿದ್ದಾರೆ. ‘ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಮನು ಬಾಕರ್ ಯಾರು ಎಂಬುದು ಸಮಿತಿಗೆ ಗೊತ್ತಿಲ್ಲವೆ?’ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ದೇಶಕ್ಕೆ ಸಾಕಷ್ಟು ಕೀರ್ತಿ ತಂದ ಮನು ಅರ್ಜಿ ಹಾಕಿಲ್ಲ ಎನ್ನಲಾಗಿದೆ. ನೀವು ಅದನ್ನು ಹೇಗೆ ಹೇಳುತ್ತೀರಿ? ಅವರು ಅರ್ಜಿ ಸಲ್ಲಿಸದಿದ್ದರೂ, ಅವರ ಹೆಸರು ಪಟ್ಟಿಯಲ್ಲಿ ಖಂಡಿತವಾಗಿಯೂ ಇರಬೇಕು. ಧ್ಯಾನ್‌ಚಂದ್ ಖೇಲ್‌ ರತ್ನ ಅರ್ಜಿಯಲ್ಲಿ ಮನು ಹೆಸರು ಇಲ್ಲವೆಂದಾದರೆ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ಏನು ಮಾಡುತ್ತಿವೆ? ಇದಕ್ಕೆ ನಾನು ಅವರನ್ನು ಹೊಣೆ ಮಾಡುತ್ತೇನೆʼ ಎಂದು ಅವರು ಹೇಳಿದರು. ಕ್ರೀಡಾ ಪಟುಗಳು ನೇರವಾಗಿ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ನಿಯಮ ಇರಬಾರದು ಎಂದು ಜಸ್ಪಾಲ್‌ ರಾಣಾ ಅಭಿಪ್ರಾಯಪಟ್ಟಿದ್ದಾರೆ.

12 ಸದಸ್ಯರನ್ನೊಳಗೊಂಡ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಸಮಿತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರ ನೇತೃತ್ವದಲ್ಲಿ ರಚಿಸಲಾಗಿತ್ತು. ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಕ್ರೀಡಾಪಟುಗಳಿಗೆ ಸಚಿವಾಲಯವು ಅವಕಾಶವನ್ನು ಒದಗಿಸಿದೆ. ಆದರೆ ಮನು ಬಾಕರ್ ಈ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ವಿವಾದಕ್ಕೆ ಕಾರಣವಾಗಿದೆ. ಈ ಪ್ರಶಸ್ತಿಯ ಅಂತಿಮ ಪ್ರಸ್ತಾವನೆಗಳ ಪಟ್ಟಿ ಇನ್ನೂ ಸಿದ್ಧವಾಗಿಲ್ಲ, ಅದರಲ್ಲಿ ಅವರ ಹೆಸರನ್ನು ಸೇರಿಸಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಉನ್ನತ ಮೂಲಗಳು ಹೇಳುತ್ತಿವೆ.

”ಇನ್ನೂ ಅಂತಿಮ ಪಟ್ಟಿ ಸಿದ್ಧಪಡಿಸಿಲ್ಲ. ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪ್ರಸ್ತಾಪಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ಅವರು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಆಕೆಯ (ಮನು) ಹೆಸರು ಖಂಡಿತ ಇರುವ ಸಾಧ್ಯತೆ ಇದೆ” ಎಂದು ಮೂಲಗಳು ತಿಳಿಸಿವೆ.