ಚುನಾವಣೆ 2023 – Peepal Media

ದೇವೇಗೌಡ್ರು, ಕುಟುಂಬದ ಸಾಧನೆ ತಿಳಿಯಲು ಜಿಲ್ಲೆಯ ಪ್ರವಾಸ ಕೈಗೊಳ್ಳಲಿಶ್ರೇಯಸ್ ಪಟೇಲ್ ರಿಗೆ ಸವಾಲು ಹಾಕಿದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬದವರು ಏನು ಕೆಲಸ ಮಾಡಿದ್ದಾರೆ ಬಗ್ಗೆ ತಿಳಿಯಲು ಸಂಸದರು ಜಿಲ್ಲೆಯ ಪ್ರವಾಸ ಕೈಗೊಂಡು ಸಂಚಾರ ಮಾಡಿ ಎಲ್ಲೆಲ್ಲಿ ಏನು ಕೆಲಸ ಆಗಿದೆ ಪಟ್ಟಿ ಮಾಡಿಕೊಳ್ಳಲಿ. ಇವರು ಮಾಡಿದ ಅಭಿವೃದ್ಧಿ ಕೆಲಸವನ್ನು ಸಂಸದರಾದ ಶ್ರೇಯಸ್ ಪಟೇಲ್ ಅವರು ಕೂಡ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಒಬ್ಬ ಯುವಕನಾಗಿ, ಸೌಮ್ಯ ಸ್ವಭಾವದವನಾಗಿ, ಮುಂದಿನ ದಿನಗಳಲ್ಲಿ ದೊಡ್ಡ ಲೀಡರ್ ಆಗಿ ಹಾಸನ ಜಿಲ್ಲೆಗೆಯಲ್ಲ, ರಾಜ್ಯಕ್ಕೆ ಪರಿಚಿತರಾಗಿ ಜಿಲ್ಲೆಯ ಕೀರ್ತಿ ಹೆಚ್ಚು ಮಾಡಲಿ. ನಮಗೆ ಸಂಸದರಾದ ಶ್ರೇಯಸ್ ಪಟೇಲ್ ಬಗ್ಗೆ ಬಹಳ ಗೌರವವಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕುಟುಂಬದವರು ಏನು ಎಂದು ಕೆಲಸ ಮಾಡಿದ್ದಾರೆ ಎಂದು ಹೇಳುವುದಾದರೇ ಒಂದು ದಿನ ಬೇಕಾಗುತ್ತದೆ. ಶ್ರೇಯಸ್ ಪಟೇಲ್ ಅವರು ನಮ್ಮ ಜಿಲ್ಲೆಯ ಪ್ರವಾಸ ಕೈಗೊಂಡು ಸಂಚಾರ ಮಾಡಲಿ. ಎಲ್ಲೆಲ್ಲಿ ಏನೆನು ಕೆಲಸ ಆಗಿದೆ ಎಂಬುದನ್ನು ಪಟ್ಟಿ ಮಾಡಲಿ. ತಾತ ಹಾಗೂ ಶ್ರೀಕಂಠಯ್ಯ ಅವರ ಸಾಧನೆಯನ್ನು ಜಿಲ್ಲೆಯ ಜನ ಕಂಡಿದ್ದಾರೆ. ಹಳೇಬೀಡಿಗೆ ಯಗಚಿ ನೀರು ಹರಿಸುವುದಾಗಿ ಪುಟ್ಟಸ್ವಾಮಿಗೌಡ ಭರವಸೆ ನೀಡಿದರು ಆದರೆ ಮುಂದೆ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ಎಚ್ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ 130 ಕೋಟಿ  ಯೋಜನೆಗೆ ಚಾಲನೆ ನೀಡಲಾಯಿತು. ಯಡಿಯೂರಪ್ಪ ಅವರು ಸಹ ಹಣ ಬಿಡುಗಡೆ ಮಾಡಿದರು ಎಂದರು. ಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗೆ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಎಂಬುದನ್ನು ಗಮನಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದು, ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಿ ಆಗ ಜನರು ಬೇಷ್ ಎನ್ನುತ್ತಾರೆ ಎಂದು ಸಲಹೆ ನೀಡಿದರು. ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ಜನರು ಈಗಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಅಧಿವೇಶನ ಮಾಡಿಲ್ಲ. ದೇವೇಗೌಡರ ಕುಟುಂಬವನ್ನು ಬಯ್ಯುವುದಕ್ಕೆ ಮಾಡಿರುವ ಅಧಿವೇಶನವಾಗಿದೆ ಎನ್ನುತ್ತಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಮಾಡಿ ಕನಿಷ್ಠ ನೂರು ಕೋಟಿ ಅನುಧಾನ ಬಿಡುಗಡೆ ಮಾಡಿಸಿದ್ದರೇ ಬಹಳ ಸಂತೋಷವಾಗುತಿತ್ತು. ಒಂದು ಕಡೆ ಗ್ಯಾರಂಟಿ ತಂದು ಅರ್ಧಬರ್ಧವಾಗಿ ಎಲ್ಲಾ ಅಭಿವೃದ್ಧಿ ಶೂನ್ಯವಾಗಿ ಜನರು ಬಯ್ಯುವ ಕಾಲದಲ್ಲಿ ಅನುಧಾನ ತಂದು ಅದನ್ನಾದರೂ ಪೋಕಸ್ ಮಾಡಬಹುದಿತ್ತು ಎಂದು ಕುಟುಕಿದರು. ಎಚ್ ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿ 130 ಕೋಟಿ ರಣಘಟ ್ಟ ಯೋಜನೆಗೆ ಚಾಲನೆ ನೀಡಲಾಯಿತು ಯಡಿಯೂರಪ್ಪ ಅವರು ಸಹ ಹಣ ಬಿಡುಗಡೆ ಮಾಡಿದರು ಎಂದರು. ಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗೆ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಮಾಡಿದ್ದಾರೆ ಎಂಬುದನ್ನು ಗಮನಿಸಲಿ. ಕುಮಾರಸ್ವಾಮಿಯವರು ದೇಶದಲ್ಲಿ ನಿಂತು ಹೋಗಿದ್ದ ಅನೇಕ ಕೈಗಾರಿಕೆಗಳನ್ನು ಮರು ಸ್ಥಾಪಿಸಲು ಪ್ರಯತ್ನ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಸಾಧನೆ ಶೂನ್ಯ ಎಂದು ಹೇಳುತ್ತಿದ್ದೀರಾ, ಕಳೆದ ಆರು ತಿಂಗಳಲ್ಲಿ ದೇಶದಾಧ್ಯಂತ ತಿರುಗಿದ್ದಾರೆ. ಮುಚ್ಚಿ ಹೋಗುತ್ತಿದ್ದಂತಹ ಖಾಸಗೀಯವರು ಕಬಳಿಸುತ್ತಿದ್ದ ಆಂದ್ರದ ವಿಶಾಖಪಟ್ಟಣ, ಭದ್ರವತಿಯ ಕಬ್ಬಿಣದ ಕಾರ್ಖಾನೆ, ಹೆಚ್.ಎಂ.ಟಿ. ಕುದುರೆಮುಖ ಭೇಟಿ ಮಾಡಿ ಉಳಿಸಲು ಪುನರುಜ್ಜೀವನಗೊಳಿಸಲು 1.35 ಲಕ್ಷ ಕೋಟಿ ರೂ ವೆಚ್ಚದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದ್ದಾರೆ. ದೇವೇಗೌಡರು ಪ್ರಧಾನಿ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಂತಹ ವೇಳೆ ರೇವಣ್ಣನವರ ಶಕ್ತಿಯಿಂದ ಕೆ.ಎಂ.ಎಫ್. ಅಭಿವೃದ್ಧಿಯಾಗಿದ್ದರಿಂದ ಬಡವರು ಕೂಲಿಗೆ ಹೋಗದಂತೆ ಬದುಕುವ ಕೆಲಸ ಮಾಡಿದ್ದಾರೆ. ಇಂತಹ ಒಂದು ಕೆಲಸ ಮಾಡಿ ತೋರಿಸಿ ಪಟೇಲ್ರೆ ಎಂದು ಸವಾಲು ಹಾಕಿದರು.
ಹಾಸನಾಂಬೆ ದೇವಾಲಯದ ಜಾತ್ರೆ ವೇಳೆ ಮದುಗಿರಿ ಮತ್ತು ಅರಸೀಕೆರೆ ಕಡೆಯಿಂದ ಬಸ್ ಟಿಕೆಟ್ ಹಂಚುವಾಗೆ ವಿತರಣೆ ಮಾಡಿರುವ ಬಗ್ಗೆ ಜನರು ಮಾತನಾಡಿದ್ದಾರೆ. ಈ ವೇಳೆ ಸಂಸದರು ಏಕೆ ಪ್ರಶ್ನೆ ಮಾಡಲಿಲ್ಲ ಎಂದು ಗುಡುಗಿದರು. ಸಂಸದರಾಗಿ ಶ್ರೇಯಸ್ ಪಟೇಲ್ ಪ್ರಮುಖವಾಗಿ ಜಿಲ್ಲೆಗೆ ಅಂತರಾಷ್ಟಿçÃಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮವಹಿಸಬೇಕು. ಸಾಕ್ಷಿಗುಡ್ಡೆಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ಜೆಡಿಎಸ್ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡುವ ಶ್ರೇಯಸ್ ಪಟೇಲ್ ಅಧಿವೇಶನದಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ, ಕೇಂದ್ರ ಸಚಿವರು ಹಾಸನಕ್ಕೆ ಬಂದಾಗ ಅವರಿಗೆ ಮನವಿ ಮಾಡುವ ಬದಲಾಗಿ ಅವರ ವಿರುದ್ಧವೇ ಮಾತನಾಡುವ ಮೂಲಕ ಆಗುವ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಡಿ ಬಗ್ಗೆ ಮಾತನಾಡುವ ಸಂಸದರು ಸಿಡಿ ಬಿಡುಗಡೆ ಮಾಡಿ ಜಿಲ್ಲೆಯ ಗೌರವವನ್ನು ಬೀದಿ ಪಾಲು ಮಾಡಿದವರ ಜೊತೆಗೆ ಊಟ ಮಾಡುವ ಕೆಲಸ ಮಾಡುತ್ತಿದ್ದಾರೆ ಹಾಗಾದರೆ ಕುತಂತ್ರ ಯಾರದ್ದು ಎಂಬ ಬಗ್ಗೆ ಜನ ಯೋಚಿಸಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಕ್ಷದ ಮಾಧ್ಯಮ ವಕ್ತಾರ ಹೊಂಗೇರೆ ರಘು, ಎಚ್ ಡಿ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ ಇತರರು ಉಪಸ್ಥಿತರಿದ್ದರು.

ಚುನಾವಣಾ ಬಾಂಡ್‌ನಿಂದ ಬಿಜೆಪಿಯ 8000 ಕೋಟಿ ರೂ.ಲೂಟಿ ಬಯಲು: ಉದ್ಧವ್‌ ಠಾಕ್ರೆ
ಮುಂಬೈ: ಎಸ್‌ಬಿಐನ ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ 8000 ರೂ. ಭ್ರಷ್ಟಾಚಾರದ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ದಕ್ಷಿಣ ಮುಂಬೈನ ಕೋಲಾಬಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿಯು ಚುನಾವಣಾ ಬಾಂಡ್‌ ಯೋಜನೆಯಿಂದಾಗಿ ₹8,000 ಕೋಟಿ ಲೂಟಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮೀರಿಸಿದೆ ಎಂದು ದೂರಿದರು.

ಬಿಜೆಪಿ ವಿಕಸಿತ ಭಾರತದ ಕನಸು ತೋರಿಸುತ್ತಿದೆ. ಇವರ ಕನಸು ಬಿಸಿಲುಗುದುರೆಯಿದ್ದಂತೆ. ಈ ಮೂಲಕ ಬಿಜೆಪಿಯು ಇನ್ನಷ್ಟು ಲೂಟಿ ಮಾಡಲು ಇನ್ನೂ ಐದು ವರ್ಷಗಳ ಕಾಲ  ಅಧಿಕಾರದಲ್ಲಿರುವುದಕ್ಕೆ ಬಯಸುತ್ತದೆ. ಮತದಾರರಾದ ನೀವು ಈ ದೇಶವನ್ನು ಮತ್ತೆ ಲೂಟಿಕೋರರ ಕೈಗೆ ಕೊಡುತ್ತಿರೋ ಬಿಡುತ್ತಿರೋ ನಿಮಗೆ ಬಿಟ್ಟದ್ದು ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಪಡೆದಿವೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತದೆ. ದೇಣಿಗೆ ನೀಡದಿದ್ದರೆ ಕಂಪನಿಗಳ ಕೆಲಸ ಆಗುವುದಿಲ್ಲ. ಹೀಗಾಗಿ ಕಂಪನಿಗಳು ಹೆದರಿಕೊಂಡು ದೇಣಿಗೆ ನೀಡಿವೆ ಎಂದು ಅವರು ಆರೋಪಿಸಿದರು.

ನಾನು ಗುಜರಾತ್‌ ವಿರೋಧಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳ ವಿರುದ್ಧ ಎತ್ತಿ ಕಟ್ಟುವುದನ್ನು ಬಿಡಬೇಕು.. ಮಹಾರಾಷ್ಟ್ರಕ್ಕೆ ಬರುವ ಎಲ್ಲ ಯೋಜನೆಗಳನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಚುನಾವಣಾ ಬಾಂಡ್‍ ಮೂಲಕ ಬಿಜೆಪಿ ಭ್ರಷ್ಟಾಚಾರಗಳು ಬಯಲಾಗುತ್ತಿವೆ: ಜೈರಾಮ್‌ ರಮೇಶ್‌
ನವದೆಹಲಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಯ ಹಲವಾರು ಬಗೆಯ ಭ್ರಷ್ಟಾಚಾರಗಳು ಬಯಲಿಗೆ ಬರುತ್ತಿವೆ. ನಿಮ್ಮ ಕಂಪನಿಗೆ ಸರ್ಕಾರದ ರಕ್ಷಣೆ ಬೇಕೆಂದರೆ ದೇಣಿಗೆ ಕೊಡಿ ಎಂದು ಕೇಳುವುದು, ಕಿಕ್‍ಬ್ಯಾಕ್ ಪಡೆಯುವುದು ಮತ್ತು ಶೆಲ್ ಕಂಪನಿಗಳ ಮೂಲಕ ಹಣ ದುರುಪಯೋಗ ಮಾಡುವುದು ಸೇರಿದಂತೆ  ನಾಲ್ಕು ಬಿಜೆಪಿಯ ಭ್ರಷ್ಟ ತಂತ್ರಗಾರಿಕೆಗಳು ಬಯಲುಗೊಗೊಂಡಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ವಿಶಿಷ್ಟ ಬಾಂಡ್ ಐಡಿ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ. ಇದರಿಂದ ಯಾವ ದಾನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುವುದು ಕೂಡಾ ತಿಳಿಯುತ್ತದೆ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ  ಆಗ್ರಹಿಸಿದ್ದಾರೆ.

ಚುನಾವಣೆ ಮುಗಿಯುವವರೆಗೂ ವಿವರ ಬಹಿರಂಗಪಡಿಸುವುದನ್ನು ಮುಂದೂಡುವ ಸತತ ಪ್ರಯತ್ನ ಎಸ್‌ಬಿಐ ಮತ್ತು ಬಿಜೆಪಿ ಮಾಡಿದವು. ಈಗ ಸುಪ್ರೀಂಕೋರ್ಟ್ ಒತ್ತಡದ ನಿರ್ದೇಶನದಂತೆ ಎಸ್‍ಬಿಐ ಒಂದಿಷ್ಟು ವಿವರಗಳನ್ನು ಬಹಿರಂಗಪಡಿಸಿದೆ. 1300ಕ್ಕೂ ಅಧಿಕ ಕಂಪನಿಗಳು ಮತ್ತು ವ್ಯಕ್ತಿಗಳು ಚುನಾವಣಾ ಬಾಂಡ್‍ಗಳ ಮೂಲಕ ದೇಣಿಗೆ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಬಿಜೆಪಿ 2019ರ ಬಳಿಕ 6000 ಕೋಟಿಗೂ ಅಧಿಕ ಮೊತ್ತದ ದೇಣಿಗೆ ಸ್ವೀಕರಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳು ಸದ್ಯಕ್ಕೆ ಬಿಜೆಪಿಯ ನಾಲ್ಕು ತಂತ್ರಗಳನ್ನು ಬಯಲುಗೊಳಿಸಿವೆ. ಇನ್ನೆಷ್ಟು ತಂತ್ರಗಳಿವೆಯೋ ಎಂದು ಅವರು ಆರೋಪಿಸಿದ್ದಾರೆ.

ಮೇಘಾ ಎಂಜಿನಿಯರಿಂಗ್ ಎಂಬ ಕಂಪನಿಯು 2023ರ ಏಪ್ರಿಲ್‍ನಲ್ಲಿ 800 ಕೋಟಿಗೂ ಅಧಿಕ ಮೊತ್ತವನ್ನು ಬಾಂಡ್ ಖರೀದಿಗೆ ವ್ಯಯಿಸಿದೆ. ಇದಕ್ಕೂ ಒಂದು ತಿಂಗಳ ಮುನ್ನ ಕಂಪನಿಗೆ 14400 ಕೋಟಿ ರೂಪಾಯಿ ಮೊತ್ತದ ಥಾಣೆ- ಬೊರಿವಿಲಿ ಅವಳಿ ಸುರಂಗ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಹೀಗೆ ಕಂಪನಿಗಳ ಜೊತೆ ಕೊಡುವ ಮತ್ತು ತೆಗೆದುಕೊಳ್ಳುವ ಭ್ರಷ್ಟಾಚಾರವನ್ನು ಬಿಜೆಪಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿ ಬಿಟ್ಟುಕೊಡದ ಎಸ್‌ಬಿಐ: ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ
ನವದೆಹಲಿ:  ಎಸ್‌ಬಿಐ ಬ್ಯಾಂಕ್‌  ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳದ್ದರಿಂದ ಸುಪ್ರೀಂ ಕೋರ್ಟ್ ಇಂದು ಮತ್ತೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 5 ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಬ್ಯಾಂಕ್‌ಗೆ ಸುಪ್ರೀಂ ನಿರ್ದೇಶಿಸಿದೆ.

ಚುನಾವಣಾ ಆಯೋಗದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಎಸ್‌ಬಿಐ ನೀಡಿರುವ ಅಂಕಿಅಂಶಗಳು ಅಪೂರ್ಣವಾಗಿವೆ.  ದಾನಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗಿನ ಸಂಬಂಧವನ್ನು ಹೇಳಿಕೆಯನ್ನು ಬಹಿರಂಗಪಡಿಸಿಲ್ಲ ಎಂದು ಛಿಮಾರಿ ಹಾಕಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿತು.  ಎಸ್‌ಬಿಐ ಈಗಾಗಲೇ ಹಂಚಿಕೊಂಡಿರುವ ವಿವರಗಳ ಜೊತೆಗೆ ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸಬೇಕು ಎಂದು ಆದೇಶ ನೀಡಿತು.

“ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಯಾರು ಹಾಜರಾಗುತ್ತಿದ್ದಾರೆ? ಅವರು ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ. ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಬೇಕು” ಎಂದು ವಿಚಾರಣೆಯ ಆರಂಭದಲ್ಲಿಯೇ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು. ಆದರೆ, ಎಸ್‌ಬಿಐ ಅಧಿಕಾರಿಗಳು ಉತ್ತರಿಸಲು ತಡವರಿಸಿದರು. ಮಾರ್ಚ್ 18 ರಂದು ನಡೆಯಲಿರುವ ಮುಂದಿನ ವಿಚಾರಣೆಯ ಸಮಯದಲ್ಲಿ ಲೋಪವನ್ನು ವಿವರಿಸಲು ಬ್ಯಾಂಕ್‌ಗೆ ನಿರ್ದೇಶಿಸಿದೆ.

ಈ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಹಣವನ್ನು ಘೋಷಿಸದೆ ದೇಣಿಗೆ ನೀಡಲು ವ್ಯಕ್ತಿಗಳಿಗೆ ಮತ್ತು ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಿತ್ತು. 2018 ರಲ್ಲಿ ಬಿಜೆಪಿ ಸರ್ಕಾರವು ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ ಅನ್ನು ಪರಿಚಯಿಸಿತ್ತು. ಸುಪ್ರೀಂ ಕೋರ್ಟ್ ಕಳೆದ ತಿಂಗಳು ಈ ಯೋಜನೆಯನ್ನು ರದ್ದುಗೊಳಿಸಿದ್ದು, ಇದು ಅಸಂವಿಧಾನಿಕ ಎಂದು ತೀರ್ಪು ನೀಡಿತ್ತು.

ಒಂದು ದೇಶ ಒಂದು ಚುನಾವಣೆ ಕುರಿತು ರಾಷ್ಟ್ರಪತಿಗೆ ಪ್ರಸ್ತಾವನೆ ಸಲ್ಲಿಕೆ
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು.

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ.

ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿನ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್.‌ ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್‌ ಕೆ ಸಿಂಗ್‌, ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್‌ ಕಶ್ಯಪ್‌ ಮತ್ತು ಹಿರಿಯ ವಕೀಲ ಹರೀಶ್‌ ಸಾಳ್ವೆ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದ ಈ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ. ರಾಷ್ಟ್ರಪತಿಯ ಅಂಕಿತ ಬಿದ್ದೊಡನೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾನೂನು ಜಾರಿಯಾದರೆ ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಬಹುದು ಎನ್ನುವ ಆರೋಪಗಳು ಕೇಳಿ ಬಂದಿವೆ.

CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ
ನವದೆಹಲಿ:  ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ ‘ಸಿಎಎ ಅಸಾಂವಿಧಾನಿಕ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ’ ಎಂದು ಶಾ ಹೇಳಿದರು.

2024ರಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.

ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.

ಈ ಕಾನೂನು ‘ಮುಸ್ಲಿಂ ವಿರೋಧಿ  ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ  ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

ಮಧ್ಯಪ್ರದೇಶದ 230 ಹೊಸ ಎಂಪಿಗಳಲ್ಲಿ 205 ಮಂದಿ ಕೋಟ್ಯಾಧಿಪಗಳು…ಬಿಜೆಪಿ ಶಾಸಕ ಟಾಪರ್!- ಎಡಿಆರ್ ವರದಿ
ಮಧ್ಯಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾಗಿರುವ 230 ಶಾಸಕರಲ್ಲಿ 205 ಮಂದಿ ಕೋಟ್ಯಾಧಿಪತಿಗಳಾಗಿದ್ದು, 134 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಮೂವರು ಶ್ರೀಮಂತ ಶಾಸಕರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಕೂಡಾ ಇದ್ದಾರೆ. ಎಲ್ಲಾ ಶಾಸಕರ ಸರಾಸರಿ ಆಸ್ತಿ 11.77 ಕೋಟಿ ರುಪಾಯಿ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್  (Association for Democratic Reforms – ADR) ವರದಿ ಪ್ರಕಾರ, ರತ್ಲಾಮ್ ಸಿಟಿಯಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ 296 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅವರ ಪಕ್ಷದ ಸಹೋದ್ಯೋಗಿ ಸಂಜಯ್ ಸತ್ಯೇಂದ್ರ ಪಾಠಕ್ (ವಿಜಯರಾಘವಗಢ) 242 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

1 ಕೋಟಿ ರುಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಶಾಸಕರ ಸಂಖ್ಯೆ 2018 ರಲ್ಲಿ 187 ಇತ್ತು, ಈಗ 2023 ರಲ್ಲಿ ಈ ಸಂಖ್ಯೆ 205 ಕ್ಕೆ ಏರಿದೆ ಎಂದು ಎಡಿಆರ್‌ ವರದಿ ತಿಳಿಸಿದೆ. ಈ ಕೋಟ್ಯಾಧಿಪತಿ ಶಾಸಕರಲ್ಲಿ 144 ಬಿಜೆಪಿ ಮತ್ತು 61 ಕಾಂಗ್ರೆಸ್‌ನವರು.

ಬಿಜೆಪಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 163 ಸ್ಥಾನಗಳನ್ನು ಗೆದ್ದಿದೆ. 2018 ರಲ್ಲಿ ಇದ್ದ 109 ಸ್ಥಾನಗಳ  ಸಂಖ್ಯೆಯನ್ನು ಈ ಬಾರಿ ಹೆಚ್ಚಿಸಿಕೊಂಡಿದೆ. ರಾಜ್ಯದಲ್ಲಿ 2018 ರಲ್ಲಿ 114 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 66 ಸ್ಥಾನಗಳಿಗೆ ಇಳಿದಿದೆ. ಮಧ್ಯಪ್ರದೇಶದ ರಾಜಕೀಯಕ್ಕೆ ಹೊಸದಾದ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಭಾರತ್ ಆದಿವಾಸಿ ಪಕ್ಷದಿಂದ ಗೆದ್ದಿರುವ ಅಭ್ಯರ್ಥಿ ಕಮಲೇಶ್ ದೊಡಿಯಾರ್ ಅವರು ಕಡಿಮೆ ಆಸ್ತಿಯನ್ನು ಹೊಂದಿದ್ದು, 18 ಲಕ್ಷ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಕಡಿಮೆ ಆಸ್ತಿ ಹೊಂದಿರುವ ಇತರ ಇಬ್ಬರು ಅಭ್ಯರ್ಥಿಗಳಲ್ಲಿ ಬಿಜೆಪಿಯ ಸಂತೋಷ್ ವರ್ಕಡೆ (ಸಿಹೋರಾ) 25 ಲಕ್ಷ ಮೌಲ್ಯದ ಆಸ್ತಿ ಮತ್ತು ಅವರ ಬಿಜೆಪಿಯ ಕಾಂಚನ್ ಮುಖೇಶ್ ತನ್ವೆ (ಖಾಂಡ್ವಾ) ಒಟ್ಟು 26 ಲಕ್ಷ ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಅತಿ ಹೆಚ್ಚು ಲಯೇಬಿಲಿಟಿ ಹೊಂದಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿಯ ಮಾಜಿ ಸಚಿವ ಸುರೇಂದ್ರ ಪಟ್ವಾ (ಭೋಜ್‌ಪುರ್) 57 ಕೋಟಿ ರುಪಾಯಿ ಸಾಲವನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ ದಿನೇಶ್ ಜೈನ್ (ಮಹಿದ್‌ಪುರ) 30 ಕೋಟಿ  ರುಪಾಯಿ ಸಾಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು  23  ಕೋಟಿ ರುಪಾಯಿ ಸಾಲದೊಂದಿಗೆ ಬಿಜೆಪಿಯ ಭೂಪೇಂದ್ರ ಸಿಂಗ್ (ಖುರೈ) ಮೂರನೇ ಸ್ಥಾನದಲ್ಲಿದ್ದಾರೆ.

205 ಕೋಟ್ಯಾಧಿಪತಿಗಳ ಪೈಕಿ 102 ಶಾಸಕರು 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಸುಮಾರು 71 ಶಾಸಕರು 2 ಕೋಟಿಯಿಂದ 5 ಕೋಟಿ ರುಪಾಯಿಯವರೆಗೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಅಲ್ಲದೆ, 48 ಶಾಸಕರು 50 ಲಕ್ಷದಿಂದ 2 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರೆ, ಒಂಬತ್ತು ಚುನಾಯಿತ ಶಾಸಕರು 50 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ.

ಹೊಸದಾಗಿ ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 10.17 ಕೋಟಿಯಿಂದ  ಈ ವರ್ಷಕ್ಕೆ 11.77 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಎಡಿಆರ್ ವರದಿ ತಿಳಿಸಿದೆ.

ʼತೆಲಂಗಾಣದ ಇತಿಹಾಸವನ್ನು ತಿದ್ದುತ್ತೇವೆʼ: ಬಿಜೆಪಿಯ ಮತೀಯವಾದಿ ಪ್ರಣಾಳಿಕೆ ಎಂಬ ಆರೋಪ!
ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿದ್ದಂತೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿ “ತೆಲಂಗಾಣದ ಇತಿಹಾಸವನ್ನು ಮರುನಿರೂಪಿಸುತ್ತೇವೆ – resetting the narrative of Telangana’s history” ಎಂದು ಹೇಳಿ, ಅದನ್ನು ತನ್ನ ಪ್ರಮುಖ ಅಜೆಂಡಾಗಳಲ್ಲಿ ಒಂದನ್ನಾಗಿ ಸೇರಿಸಿದೆ. ಬಿಜೆಪಿಯ ಈ ಪ್ರಣಾಳಿಕೆಯಲ್ಲಿ ಬೈರನಪಲ್ಲಿ ಹತ್ಯಾಕಾಂಡ ನಡೆದ ಆಗಸ್ಟ್ 27 ಅನ್ನು ಅಧಿಕೃತವಾಗಿ ʼರಜಾಕರ ಭಯಾನಕ ಹಿಂಸೆಯ ನೆನಪಿನ ದಿನʼವೆಂದು (Razakar Horrors Remembrance Day) ಎಂದು  ಗುರುತಿಸಲಾಗುವುದಾಗಿ ಹೇಳಿದೆ.

ಈ ಮೂಲಕ ಬಿಜಪಿ ತನ್ನ ಪ್ರಮುಖ ಅಜೆಂಡಾಗಳಲ್ಲಿ ʼಮತೀಯವಾದದʼ ಅಂಶಗಳನ್ನೂ ಸೇರಿಸಿದೆ.  ಬಿಜೆಪಿಯ ಈ ಪ್ರಣಾಳಿಕೆಯನ್ನು ಇಲ್ಲಿ ಓದಿ: ಚುನಾವಣಾ ಪ್ರಣಾಳಿಕೆ – ತೆಲಂಗಾಣ ಬಿಜೆಪಿ

1948 ರಲ್ಲಿ ಹೈದರಬಾದ್ ನಿಜಾಮನ ಖಾಸಗಿ ಸೇನಾಪಡೆಯಾದ ರಜಾಕಾರರು ನಡೆಸಿದ ಹಿಂಸಾತ್ಮಕ ಹತ್ಯಾಕಾಂಡದಲ್ಲಿ ಸುಮಾರು 100 ಜನರು ಕೊಲ್ಲಲ್ಪಟ್ಟಿದ್ದರು. ನಿಜಾಮನ ಆಳ್ವಿಕೆಯಲ್ಲಿ ಮೇಲ್ವರ್ಗದ ಭೂಮಾಲೀಕರ ದಬ್ಬಾಳಿಕೆ ವಿರುದ್ಧ ರೈತರು ನಡೆಸಿದ ತೆಲಂಗಾಣ ಸಶಸ್ತ್ರ ಹೋರಾಟದ ನಡುವೆ ರಜಾಕರ ಹಿಂಸಾಚಾರ ನಡೆದಿತ್ತು.

ನವೆಂಬರ್ 18, 2023 ಶನಿವಾರ ಹೈದರಾಬಾದ್‌ನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಮಿತ್ ಶಾ, ಹೈದರಾಬಾದ್ ರಾಜ್ಯದ ವಿಲೀನ ದಿನ ಸೆಪ್ಟೆಂಬರ್ 17 ಅನ್ನು ಹೈದರಾಬಾದ್ ವಿಮೋಚನಾ ದಿನವೆಂದು ಆಚರಿಸಿ, “ನಿಜಾಮನ ಕ್ರೂರ ಹಿಡಿತದಿಂದ ರಾಜ್ಯ ವಿಮೋಚನೆಗೊಂಡದ್ದನ್ನು ಯುವ ಪೀಳಿಗೆಗೆ ನೆನಪಿಸಲಾಗುವುದು,” ಎಂದು ಹೇಳಿದ್ದಾರೆ.

The BJP under the leadership of Modi Ji is determined to make Telangana free from the clutches of corrupt and dynastic politics. Launched the BJP Telangana's Sankalp Patra in Hyderabad today.
అవినీతి, కుటుంబ రాజకీయాల బారి నుంచి తెలంగాణను తీర్చిదిద్దేందుకు మోదీ నాయకత్వంలోని బీజేపీ… pic.twitter.com/fdfaYuiVFs
— Amit Shah (@AmitShah) November 18, 2023

“ರಜಾಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ತೆಲಂಗಾಣ ಜನರನ್ನು ಗೌರವಿಸಲು ಆಗಸ್ಟ್ 27 ರಂದು ರಜಾಕಾರ್ ವಿಭಿಷಿಕ ಸ್ಮೃತಿ ದಿನವನ್ನು ಆಚರಿಸುತ್ತೇವೆ. ನಿಜಾಮ, ರಜಾಕರ ವಿರುದ್ಧದ ತೆಲಂಗಾಣ ಜನರ ಹೋರಾಟವನ್ನು ದಾಖಲಿಸಿ,” ವಸ್ತುಸಂಗ್ರಹಾಲಯ ಮತ್ತು ಸ್ಮಾರಕವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ.

ಈ ಬೆನ್ನಲ್ಲೇ, ಇಂದಿನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ಭಾರತ್ ರಾಷ್ಟ್ರ ಸಮಿತಿಯನ್ನು ನಿಜಾಮ ಮತ್ತು ರಜಾಕರಿಗೆ ಹೋಲಿಸಿ, ತೆಲಂಗಾಣ ಸಶಸ್ತ್ರ ಹೋರಾಟವನ್ನು ಕೋಮು ಸಂಘರ್ಷ ಎಂಬಂತೆ ಬಿಂಬಿಸುವ ಮೂಲಕ ತೆಲಂಗಾಣದ ಇತಿಹಾಸವನ್ನು ಕೋಮುದ್ವೇಷದ ಮೂಲಕ ಕಟ್ಟಲು ಬಿಜೆಪಿ ಹೊರಟಿದೆ ಎಂಬ ಆರೋಪ ಕೇಳಿಬರುತ್ತಿದೆ.

ರೊಹಿಂಗ್ಯಾಗಳು ಮತ್ತು ಇತರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ, ಆಧಾರ್ ಹಾಗೂ ಪಾಸ್‌ಪೋರ್ಟ್‌ಗಳ ದುರುಪಯೋಗವನ್ನು ತಡೆಯುವ ಭರವಸೆ ನೀಡಿರುವ ಬಿಜೆಪಿ, “ಸಂಭಾವ್ಯ ಬೆದರಿಕೆಗಳನ್ನು, ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕಲು anti-radicalisation cell,” ಸ್ಥಾಪಿಸುವ ಬಗ್ಗೆ ಹೇಳಿದೆ. “ಈ ಹಿಂದೆಯೇ radicalization ಆಗಿರುವ ಪೊಲೀಸ್ ಠಾಣೆಗಳನ್ನು ವಿಶೇಷ ತರಬೇತಿ ಪಡೆದ ಸಿಬ್ಬಂದಿ ನಿರ್ವಹಿಸುತ್ತಾರೆ” ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಕರ್ನಾಟಕದಲ್ಲಿಯೂ ಬಿಜೆಪಿ, ತನ್ನ 2023 ರ ಚುನಾವಣಾ ಪ್ರಣಾಳಿಕೆಯಲ್ಲಿ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆ ವಿರುದ್ಧ ಕರ್ನಾಟಕ ರಾಜ್ಯ ವಿಭಾಗ ಅಥವಾ Karnataka State Wing against Religious Fundamentalism and Terror (K-SWIFT) ಎಂಬ ವಿಶೇಷ ಪೊಲೀಸ್ ವಿಭಾಗವನ್ನು ಆರಂಭಿಸುವ ಭರವಸೆ ನೀಡಿತ್ತು. “ರಾಜ್ಯದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಶೀಘ್ರವಾಗಿ ಗಡೀಪಾರು ಮಾಡಲು” ಕರ್ನಾಟಕದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ( National Register of Citizens) ತರುವ  ಭರವಸೆ ನೀಡಿತ್ತು.

ತೆಲಂಗಾಣ ಬಿಜೆಪಿಯ ಪ್ರಣಾಳಿಕೆಯಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಭರವಸೆಯನ್ನು ನೀಡಲಾಗಿದ್ದು, ವಿವಾದಾತ್ಮಕ ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ Karnataka Prevention of Slaughter and Preservation of Cattle Act, 2020 ರಂತಹ ಕಾನೂನು ಜಾರಿಗೊಳಿಸುವ ಪ್ರಸ್ತಾಪವನ್ನೂ ಮಾಡಲಾಗಿದೆ. ಈ ಕಾಯಿದೆಯಲ್ಲಿ ಅಪರಾಧಿಗಳಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರಿಂದ 5 ಲಕ್ಷ ರುಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ. ಕರ್ನಾಟಕದ ಗೋಹತ್ಯಾ ನಿಷೇಧ ಕಾಯ್ದೆ ಅನೇಕ ಸಣ್ಣ ರೈತರು, ಚಮ್ಮಾರರು ಮತ್ತು ಮಾಂಸ ರಫ್ತು ಉದ್ಯಮಗಳಲ್ಲಿ ಕೆಲಸ ಮಾಡುವ ಜನರ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ದನದ ವ್ಯಾಪಾರ ಮಾಡುವವರಿಗೆ ಕಿರುಕುಳ ನೀಡಲು ಗೋರಕ್ಷಕರಿಗೆ ಅನುವು ಮಾಡಿಕೊಟ್ಟಿದೆ ಎಂದು ಟೀಕೆಗೆ ಒಳಗಾಗಿತ್ತು.

ಅಲ್ಲದೇ, ತೆಲಂಗಾಣ ಬಿಜೆಪಿಯ ಈ ಪ್ರಣಾಳಿಕೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚಿಸುವುದಾಗಿ ಭರವಸೆ ನೀಡಲಾಗಿದೆ. ತೆಲಂಗಾಣದಲ್ಲಿ ಪಕ್ಷ ಗೆದ್ದರೆ ಅಯೋಧ್ಯೆ ರಾಮಮಂದಿರಕ್ಕೆ ಉಚಿತವಾಗಿ ಯಾತ್ರೆ ಹೋಗುವ ಅವಕಾಶ ನೀಡಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ. ಗದ್ವಾಲ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅಮೀತ್‌ ಶಾ ವೃದ್ಧರಿಗೆ ಅಯೋಧ್ಯೆ ಮತ್ತು ವಾರಣಾಸಿಗೆ ಉಚಿತ ತೀರ್ಥಯಾತ್ರೆಯನ್ನು ಭರವಸೆ ನೀಡಿದ್ದಾರೆ.

25 ಖಾತರಿಗಳನ್ನು ಪಟ್ಟಿ ಇರುವ ಬಿಜೆಪಿ ಪ್ರಣಾಳಿಕೆಯಲ್ಲಿ, ತೆಲಂಗಾಣ ಸರ್ಕಾರ ನೀಡಿರುವ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮುಸ್ಲಿಮರಿಗೆ ಇರುವ 4% ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಹೇಳಿದೆ. ಧರ್ಮಾಧಾರಿತ ಮೀಸಲಾತಿಯನ್ನು ‘ಅಸಂವಿಧಾನಿಕ’ ಎಂದು ಕರೆದು, ಮೀಸಲಾತಿಗಳನ್ನು ಒಬಿಸಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗುವುದು ಎಂದು ಪ್ರಣಾಳಿಕೆ ಹೇಳಲಾಗಿದೆ.

ಬರಹ ಮಾಡುವವರು ಮತ್ತು ಸಾಮಾಜಿಕ‌ ಧೋರಣೆ
ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ  – ಅರುಣ್ ಜೋಳದಕೂಡ್ಲಿಗಿ, ಸಂಶೋಧಕರು

ಈಚೆಗೆ ನಂದಿನಿ ವಿಶ್ವನಾಥ (ನಂದಿನಿ ಹೆದ್ದುರ್ಗ) ಎನ್ನುವ ಕವಯಿತ್ರಿ ತಮ್ಮ ಫೇಸ್ ಬುಕ್ ಪೇಜಲ್ಲಿ (19.06.2023) ಉಚಿತ ಬಸ್ ಫಲಾನುಭವಿ ಬಳ್ಳಾರಿ ಭಾಗದ ಹಿರಿಯ ಮಹಿಳೆಯ ನಡೆ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದರು. ವಾರಗಟ್ಟಲೆ ಪ್ರಯಾಣ ಮಾಡಿ ಅಶುಚಿಯಾಗಿದ್ದರು ಎಂದು ಹೇಳುವ ಭರದಲ್ಲಿ  ಆ ಮಹಿಳೆಯ ಬಗೆಗೆ ತಿರಸ್ಕಾರ ಮತ್ತು ಅಸಹ್ಯ ಪಟ್ಟುಕೊಳ್ಳುವ ಧ್ವನಿ ಆ ಟಿಪ್ಪಣಿಯಲ್ಲಿತ್ತು. ಇದು ಆ ಮಹಿಳೆಯ ಬಗೆಗೆ ತೋರಿದ ಅಗೌರವ ಮಾತ್ರವಲ್ಲದೆ ಮಧ್ಯಮ ವರ್ಗದ ಅಹಂ ಮತ್ತು ಸಾಮಾಜಿಕ ತಿಳಿವಿನ ಅಜ್ಞಾನವನ್ನು ಸೂಚಿಸುತ್ತಿತ್ತು. ಈ ಮಹಿಳೆಯ ಧೋರಣೆಯನ್ನು ವಿರೋಧಿಸಿ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಾನು ‘ನೀವೊಬ್ಬ ಸೂಕ್ಷ್ಮ ಕವಯಿತ್ರಿಯಾಗಿ ನಿಮ್ಮಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದೆ. ಕಾರಣ ಹೀಗೆ ಬರೆದ ಮಹಿಳೆ ಕವಯಿತ್ರಿಯೂ ಆಗಿದ್ದುದು.

ಬಹುತೇಕರು ಈ ಧೋರಣೆಯನ್ನು ವಿರೋಧಿಸಿದ್ದರು. ಆನಂತರ ಹೆಣ್ಣಿನ ಪ್ರತಿಕ್ರಿಯೆ ಎನ್ನುವ ಕಾರಣಕ್ಕೆ ಗಂಡಸರು ಮುಗಿಬಿದ್ದರು ಎನ್ನುವ ಅಸೂಕ್ಷ್ಮ ಸ್ತ್ರೀವಾದಿಗಳ ಬೆಂಬಲವೂ ವ್ಯಕ್ತವಾಯಿತು. ನಂತರ ನಂದಿನಿ ಅವರು ತಮ್ಮ ಪೋಸ್ಟ್‌ ನ್ನು ಡಿಲೀಟ್ ಮಾಡಿ ಇದನ್ನು  ಮತ್ತಷ್ಟು ವಿಸ್ತರಿಸಿ ಸಮರ್ಥನೆ ಮಾಡಿಕೊಂಡರು.

ಇದು ನಂದಿನಿ ವಿಶ್ವನಾಥ ಅವರ ಸಮಸ್ಯೆ ಮಾತ್ರವಲ್ಲ ಪ್ರಧಾನವಾಗಿ ಸಾಮಾಜಿಕ ಜಾಲತಾಣಗಳಿಂದಲೆ ಮುನ್ನಲೆಗೆ ಬಂದ ಅಥವಾ ಸಾಮಾಜಿಕ ಜಾಲತಾಣವನ್ನು ಬರಹ ಮಾಧ್ಯಮದ ಪ್ರಧಾನ ಅಭಿವ್ಯಕ್ತಿಯಾಗಿ ಬಳಸುವ/ ಹೊಸ ತಲೆಮಾರಿನ ಬಹುತೇಕ ಬರಹಗಾರ್ತಿ/ಗಾರರ ಸಮಸ್ಯೆ ಇದು. ಅಂತೆಯೇ ಎಷ್ಟೇ ದೊಡ್ಡ ಲೇಖಕಿ/ಲೇಖಕರಾದರೂ ಆಳದಲ್ಲಿ ಮೇಲ್ಜಾತಿಯ/ಮೇಲ್ವರ್ಗದ ಮೇಲರಿಮೆಯನ್ನು ಮೀರಲು ಸಾಧ್ಯವಾಗದಿದ್ದರೆ/ಮಧ್ಯಮವರ್ಗದ ಸಿನಿಕತನ/ಅಹಂನ್ನು ಮೀರಲಾಗದಿದ್ದರೆ/ಗಂಡಿನ ಅಹಮಿಕೆಯಿಂದ ಹೊರಬರಲಾಗದಿದ್ದರೆ ಈ  ತರಹದ  ಟೀಕೆಗಳು/ತಮ್ಮ ಅಜ್ಞಾನದ ಬಗೆಗೆ ಕೆಟ್ಟದಾದ ಸಮರ್ಥನೆಗಳು ಶುರುವಾಗುತ್ತವೆ.

ಇದು ಕೇವಲ ಹೊಸದಾಗಿ ಬರಹ ಮಾಡುವ ಅಥವಾ ಹೊಸ ತಲೆಮಾರಿನ ಸಮಸ್ಯೆ ಮಾತ್ರವಲ್ಲ. ಕೆಲ ಹಿರಿಯರೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ ಬಹಳ ಪೂರ್ವಾಗ್ರಹ ಪೀಡಿತರಾಗಿಯೂ ಮೇಲ್ಜಾತಿ/ಮೇಲ್ವರ್ಗದ ಪ್ರತಿನಿಧಿಗಳಾಗಿಯೂ ಪ್ರತಿನಿಧಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಬಹಳ ಹಿಂದೆ ಹಿರಿಯ ವಿಮರ್ಶಕರಾದ ಸಿ‌.ಎನ್.ರಾಮಚಂದ್ರನ್ ಅವರು ಪ್ರಜಾವಾಣಿ ಕಥಾ ಸ್ಪರ್ಧೆಯ ತೀರ್ಪುಗಾರರ ಮಾತು‌ ಬರೆಯುತ್ತ ಕತೆಗಳೆಲ್ಲಾ ಹಳ್ಳಿಗಳತ್ತಲೇ ಗಿರಿಕಿ ಹೊಡೆಯುತ್ತವೆ ಎಂದಿದ್ದರು. ಇದು ನಗರದ ಅನುಭವವೂ ಕತೆಗಳಾಗಬೇಕು ಎನ್ನುವ ನೋಟವಾಗಿರದೆ ಒಂದು ಬಗೆಯ ಹಳ್ಳಿಗಳ ಬಗೆಗಿನ  ತಿರಸ್ಕಾರದ ಧ್ವನಿ ಇಲ್ಲಿತ್ತು. ಇದಕ್ಕೆ ಕತೆಗಾರ ಅಮರೇಶ ನುಗಡೋಣಿ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಲೇಖಕಿ ವೈದೇಹಿ ಅವರು ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಚರ್ಚೆ ನಡೆದಾಗ ಮಡೆ ಸ್ನಾನಕ್ಕೆ ಒಳಗಾಗುವ ಕೊರಗರು ಅವರಿಗೆ ಅವಮಾನವಾಗಿದ್ದರೆ ಅವರು ಮಾತಾಡಬೇಕು ವಿನಃ ನಾವು ನೀವಲ್ಲ ಎಂದಿದ್ದರು. ಎಷ್ಟೊಂದು ಶೋಷಿತ ಹೆಣ್ಣಿನ ಧ್ವನಿಯಾಗಿ ಕತೆಗಳನ್ನು ಬರೆದ ವೈದೇಹಿಯ ಈ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸಿತ್ತು. ವೈದೇಹಿಯವರೇ ಈಚೆಗೆ ಸರಕಾರದ ಉಚಿತ ಕೊಡುಗೆಗಳು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದರು. ಹಿಂದೊಮ್ಮೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯೊಬ್ಬರ ಸಾವಿನ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಬಹಿರಂಗವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಬೆಂಬಲಿಸಿದ್ದರು.

ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಸಹಮನುಷ್ಯರ ನೋವು ಸಂಕಟಗಳು ಬರಹ ಮಾಡುವವರನ್ನು ಕಂಗೆಡಿಸದಿದ್ದರೆ, ಒಳಗೆ ಒಂದು ಬಗೆಯ ವೇದನೆಯನ್ನೋ ತಳಮಳವನ್ನೋ/ ಇದಕ್ಕೆ ಕಾರಣವಾದ ವ್ಯವಸ್ಥೆಯ ಬಗೆಗೆ ಸಿಟ್ಟನ್ನೋ ಹುಟ್ಟಿಸದಿದ್ದರೆ ಸಾಮಾಜಿಕ ವಿದ್ಯಮಾನಗಳ ಬಗೆಗೆ ಬರಹ‌ ಮಾಡುವವರು ಕುರುಡಾಗುತ್ತಾರೆ. ಇದು ಹೆಚ್ಚಾದರೆ ಸಿನಿಕರಾಗಿ ಬಡಬಡಿಸುತ್ತಾರೆ.

ಬರಹ ಮಾಡುವ ಸಮುದಾಯ ಕತೆ ಕವಿತೆ ಪ್ರಬಂಧ ಬರೆದಾಗಲೂ, ಸಂಶೋಧನೆ ವಿಮರ್ಶೆ ಬರೆದಾಗಲೂ  ಅವರ ಸಾಮಾಜಿಕ ಧೋರಣೆ ವ್ಯಕ್ತವಾಗುವುದಕ್ಕೂ, ಸಾಮಾಜಿಕ‌ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ/ಪ್ರತಿಕ್ರಿಯಿಸುವಾಗ ಅವರುಗಳು ತಾಳುವ ನೆಲೆ ನಿಲುವುಗಳಿಗೆ ಬಹಳ ಸಲ ತಾಳೆಯಾಗುವುದಿಲ್ಲ. ಬರಹದಲ್ಲಿ ಮಾನವತಾವಾದಿಗಳಾಗಿದ್ದವರು ಸಾಮಾಜಿಕ ವಿದ್ಯಮಾನವೊಂದಕ್ಕೆ ಪ್ರತಿಕ್ರಿಯಿಸುವಾಗ ಜಾತಿವಾದಿಯಾಗಿಯೂ, ಮೆಲ್ವರ್ಗ-ಮೇಲ್ಜಾತಿ ಪ್ರತಿನಿಧಿಯಾಗಿಯೂ/ಗಂಡಿನ ಅಹಮಿಕೆಯಿಂದಲೂ/ಬಡವರ ಬಗೆಗೆ ಅಸಹನೆಯಿಂದಲೂ ಕುಬ್ಜರಾಗಿ ಕಾಣುತ್ತಾರೆ.  ಇದಕ್ಕೆ ಆಳವಾದ ಓದು ಅಧ್ಯಯನ ಇರಬೇಕಂತಿಲ್ಲ ಕನಿಷ್ಟ ಮನುಷ್ಯತ್ವದ ಗುಣಗಳಿದ್ದರೂ ಸಾಕು.‌ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ತಿದ್ದುವಂತಹ ಒಂದಷ್ಟು ಆರೋಗ್ಯಕರವಾದ ಓದು, ಚರ್ಚೆ ಸಂವಾದಗಳು ಬೇಕಾಗುತ್ತವೆ. ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೂ ಒಂದಷ್ಟು ಸಮತೆಯ ಕಣ್ಣೋಟ ಸಾಧ್ಯವಾಗುತ್ತದೆ.

ಯಾವುದೇ ಸರಕಾರವು ಅಧಿಕಾರ ರಹಿತ/ತಳವರ್ಗದ ಬಡ ಜನರಿಗಾಗಿ ನೆರವಾಗುವ  ಯೋಜನೆಗಳನ್ನು ಮಾಡಿದಾಗ ಮೊದಲಿಗೆ ಅದನ್ನು ಮಾನವೀಯತೆಯ ಕಣ್ಣೋಟದಲ್ಲಿ ನೋಡಬೇಕು. ಈ ಯೋಜನೆ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆಯೋ ಅಥವಾ ದುರ್ಬಲಗೊಳಿಸುತ್ತದೆಯೋ ಎನ್ನುವುದನ್ನು ಪರೀಕ್ಷಿಸಬೇಕು. ಬಹುಸಂಖ್ಯಾತರನ್ನು ಒಳಗೊಳ್ಳುವ ಯಾವುದೇ ಜನಪರ ಯೋಜನೆಯೂ ಆರಂಭಕ್ಕೆ ಒಂದಷ್ಟು ಅಸ್ತವ್ಯಸ್ತತೆಯನ್ನು ಹುಟ್ಟಿಸುತ್ತದೆ. ಇಂತಹ ಯೋಜನೆಗಳು ಆರಂಭವಾದಾಗಲೇ ಅದರ ನಿಜದ ಸಮಸ್ಯೆಗಳು/ಸಂಕೀರ್ಣತೆ ಅರ್ಥವಾಗುವುದು. ಕೆಲವು ಸಮಸ್ಯೆಗಳನ್ನು ಊಹೆ ಮಾಡಿ ಮುಂಜಾಗರೂಕತೆ ತೆಗೆದುಕೊಳ್ಳಲು ಆಗದು. ಯಾವುದೇ ಪಕ್ಷದ  ಯಾವುದೇ ಯೋಜನೆಯ ಆರಂಭದ ಒಂದಷ್ಟು ತಿಂಗಳಾದರೂ ಕಾಯಬೇಕು. ನಂತರವಷ್ಟೇ ಅದರ ಮಿತಿಗಳ ಬಗ್ಗೆ, ಯೋಜನೆಯ ತಪ್ಪುಗಳ ಬಗ್ಗೆ, ಸರಿಪಡಿಸಬೇಕಾದ ಮಾರ್ಗಗಳ ಬಗ್ಗೆ ಆರೋಗ್ಯಕರ ಚರ್ಚೆ ಟೀಕೆ ವಿಮರ್ಶೆ ನಡೆಯಬೇಕು. ಆ ಚರ್ಚೆ ಸಂವಾದ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿರಬೇಕು. ಹಾಗಾಗಿ ಕಾಂಗ್ರೇಸ್ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಒಂದಷ್ಟು ತಾಳಿಕೆಯಿಂದ ಪ್ರತಿಕ್ರಿಯಿಸಬೇಕಾಗಿದೆ.

ಯಾವುದೇ ಟೀಕೆ-ವಿಮರ್ಶೆ-ಮನುಷ್ಯ ಘನತೆಯನ್ನು ಹೆಚ್ಚಿಸುವುದರ ಕಡೆ ಮಾನವೀಯವಾಗಿರಬೇಕೆ ವಿನಃ ಮನುಷ್ಯ ಘನತೆಗೆ ಕುಂದುಂಟಾಗಬಾರದು.

ಅರುಣ್ ಜೋಳದಕೂಡ್ಲಿಗಿ

ಸಂಶೋಧಕರು

ಇದನ್ನೂ ಓದಿ-ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು: ಕುಸಿದ ಮಾಧ್ಯಮ ನೈತಿಕತೆ

ವೈದಿಕರ ವಂಚನೆಗೆ ಮತ್ತೆ ಮತ್ತೆ ಸಿಲುಕಬೇಡಿ
ವೈದಿಕ ವೈರಸ್ಸಿನ ಮಹಾರೋಗದ ಸೂಕ್ಷ್ಮವನ್ನು ನಾವು ನಮ್ಮ ಜನರಿಗೆ ತಿಳಿಸಬೇಕಾಗಿದೆ. ಅದು ಸದ್ದಿಲ್ಲದಂತೆ ಹರಡಿ ಈ ದೇಶದ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಮಾತುಗಳು ಪುನರಾವರ್ತನೆಯಾದಂತೆ ಕಂಡರೂ ಪರವಾಗಿಲ್ಲ. ಇದನ್ನು ಮತ್ತೆ ಮತ್ತೆ ನಾವು ಹೊಸ ಕಾಲದ ಶೂದ್ರ ತರುಣ ತರುಣಿಯರ ಕಿವಿ ಮುಟ್ಟುವಂತೆ, ಮನ ಮುಟ್ಟುವಂತೆ ಸಾರಿ ಸಾರಿ ಹೇಳಬೇಕಾಗುತ್ತದೆ – ಎಲ್‌ ಎನ್‌ ಮುಕುಂದ್‌ ರಾಜ್

ಅಂತೂ ಚುನಾವಣೆ ಮುಗಿಯಿತು. ಕರ್ನಾಟಕದ  ಮಹಾಜನತೆ ನಾವು ನಿರೀಕ್ಷಿಸಿದಂತೆಯೆ ಫಲಿತಾಂಶ ಕೊಟ್ಟರು. ಹಾಗೆಂದು ನಿರಂಬಳವಾಗಿ ಕೈಕಟ್ಟಿ ಕೂರುವಂತಿಲ್ಲ. 2024ರ ಪಾರ್ಲಿಮೆಂಟ್ ಚುನಾವಣೆಯವರೆಗೂ ನಾವು ಎಲ್ಲ ಕಡೆ ತಿರುಗಾಡಬೇಕು. ಮತ್ತೆ ಮಲಗಬಹುದಾದ ಪ್ರಜ್ಞಾವಂತ ಮತದಾರರನ್ನು ಎಚ್ಚರಿಸುತ್ತಲೇ ಇರಬೇಕು.

ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ವೈದಿಕ ಪುರೋಹಿತಶಾಹಿ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಬರೆಯುತ್ತಿದ್ದೇನೆ. ನಾನು ಬರೆದ ಪದ್ಯಗಳಲ್ಲಿ, ನಾಟಕಗಳಲ್ಲಿ ಈ ಸಂಗತಿಗಳು ಮೇಲಿಂದ ಮೇಲೆ ಪ್ರಸ್ತಾಪವಾಗುತ್ತಿದ್ದವು. ನಾನು ಮಾತ್ರವಲ್ಲ ಪಂಪನಿಂದ ಮೊದಲ್ಗೊಂಡು ಕುವೆಂಪು ಅವರ ತನಕ, ತೀರ ಈಚೆಗೆ ಬರೆಯುತ್ತಿರುವ ಯುವ ಲೇಖಕರು ಸೇರಿದಂತೆ ಯಾರ ಸಾಹಿತ್ಯವನ್ನಾದರೂ ಗಂಭೀರವಾಗಿ ಓದಿದರೆ ಪುರೋಹಿತಶಾಹಿಗಳ ಉಪಟಳವನ್ನು ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಕನ್ನಡ ಲೇಖಕರು ಪುರೋಹಿತ ಶಾಹಿಯ ದುಷ್ಟತನದ ಮೇಲೆ ಬೆಳಕು ಚೆಲ್ಲಿದ್ದಾರೆ. 12ನೇ ಶತಮಾನದ ಶಿವಶರಣರಂತು ಅವರ ವಿರುದ್ಧ ಬಹುದೊಡ್ಡ ಪ್ರತಿಭಟನೆ ರೂಪಿಸಿದ್ದರು. ಕಳೆದ 25 ವರ್ಷಗಳಿಂದ ಇದನ್ನೆಲ್ಲ ಸ್ಪಷ್ಟವಾಗಿ ಬಿಡಿಸಿ ಬಿಡಿಸಿ ಹೇಳುತ್ತಿದ್ದೇನೆ. ‌

ಕಳೆದ 70 ವರ್ಷಗಳಿಂದ ಈ ದೇಶದ ದಲಿತ, ಶೂದ್ರ ಹಾಗೂ ಮಹಿಳಾ ಸಮೂಹಗಳು ಸ್ವಾತಂತ್ರ್ಯ ಹಾಗೂ ಸಮಾನತೆ ಪಡೆದು, ನೆಮ್ಮದಿಯ ಬದುಕು ಕಟ್ಟಿಕೊಂಡವು. ಸಾವಿರಾರು ವರ್ಷಗಳಿಂದ ಅನುಭವಿಸಿದ್ದ ನರಕ ಯಾತನೆ ಕೊನೆಗೊಂಡಿತ್ತು. ವಿದ್ಯೆ, ಉದ್ಯೋಗ, ಅಲಂಕಾರಗಳನ್ನು ಶೋಷಿತ ಸಮುದಾಯಗಳಿಗೆ ಸೇರಿದ ಜನ ಪಡೆದರು. ಶ್ರಮ ಜೀವಿಗಳಿಗೆ ಸುಖ, ಸಂತೋಷ, ಸ್ವಾತಂತ್ರ್ಯ ಸಿಕ್ಕರೆ; ಪ್ರಜೆಗಳೆಲ್ಲ ನೆಮ್ಮದಿಯಾಗಿದ್ದರೆ ಮೇಲ್ಜಾತಿಯ ವೈದಿಕರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಸಂಕಟ ಉಂಟಾಗುತ್ತದೆ. ತಾವು ಮಾತ್ರ ಸುಖವಾಗಿರಬೇಕು. ಇತರರು ಸದಾ ಕಾಲವೂ ಕಡು ಕಷ್ಟದಲ್ಲಿಯೇ ಇರಬೇಕೆಂಬುದೇ ಪುರೋಹಿತ ಶಾಹಿಗಳ ಅಂತರಂಗದ ಆಸೆ. ನೆಮ್ಮದಿಯಾಗಿದ್ದ ದೇಶದ ಪ್ರಜೆಗಳ ನಡುವೆ ದ್ವೇಷ ಭಾವನೆಯನ್ನು ಸೃಷ್ಟಿಸಿದರು. ಕೆಳ ಜಾತಿಗೆ ಸೇರಿದ ತರುಣರ ಎದೆಯಲ್ಲಿ ಹಿಂದುತ್ವದ ಭ್ರಮೆಯನ್ನು ಹುಟ್ಟು ಹಾಕಿದರು. ಮುಸಲ್ಮಾನ ಎನ್ನುವ ಬೆದರು ಬೊಂಬೆಯನ್ನು ಎದುರಿಗೆ ಇಟ್ಟು ಈ ಹುಡುಗರ ತಲೆಕೆಡಿಸಿದರು. ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಶೂದ್ರ, ಮುಸಲ್ಮಾನ ಹಾಗೂ ದಲಿತ ತರುಣರ ಕಗ್ಗೊಲೆಗಳಾದವು. ದೇಶದಲ್ಲಿ ಕೋಮು ದ್ವೇಷವನ್ನು ಸೃಷ್ಟಿಸುವ ಮೂಲಕ ವೈದಿಕರು ಅಧಿಕಾರದ ಗದ್ದುಗೆಗಳಲ್ಲಿ ವಿರಾಜಮಾನರಾದರು.

ಬ್ರಾಹ್ಮಣರಿಗೆ ಅಧಿಕಾರ ತಂದು ಕೊಡುವಲ್ಲಿ ತಮ್ಮ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇದ ಶೂದ್ರ ನಾಯಕರನ್ನು ಬದಿಗೊತ್ತುತ್ತಾ ಹೋದರು. ಕೇಂದ್ರದಲ್ಲಿ ಅಡ್ವಾನಿ, ಉಮಾ ಭಾರತಿ ಮುಂತಾದ ಹಿರಿಯ ನಾಯಕರನ್ನು ಮನೆಯಲ್ಲಿಯೇ ಕೂಡಿ ಹಾಕಿದರು. ಕರ್ನಾಟಕದಲ್ಲಿ ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸೋಮಣ್ಣ ಮುಂತಾದ ನಾಯಕರನ್ನು ದಿಗ್ಬಂಧನದಲ್ಲಿ ಇಟ್ಟಂತೆ ಕಟ್ಟಿ ಹಾಕಿದರು. ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬಲಿಷ್ಠ ವ್ಯಕ್ತಿಗಳಂತೆ ಕಾಣುತ್ತಿರುವ ನರೇಂದ್ರ ಮೋದಿ ಹಾಗೂ ಅಮಿತ್ ಶಾ; ರಾಜ್ಯದಲ್ಲಿ ಶ್ರೀನಿವಾಸಪ್ರಸಾದ್, ಚಲವಾದಿ ನಾರಾಯಣ ಸ್ವಾಮಿ, ಅಶೋಕ್, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಮುಂತಾದ ಶೂದ್ರ ಮುಂದಾಳುಗಳ ಕಥೆ ಇದಕ್ಕಿಂತ ಭಿನ್ನವಾಗಿ ಏನು ಇರುವುದಿಲ್ಲ. ಹುಸಿ ದೇಶಪ್ರೇಮ ಹಾಗೂ ತನ್ನದಲ್ಲದ ಧರ್ಮದ ವ್ಯಾಮೋಹಕ್ಕೆ ಬಲಿಯಾದ ನಮ್ಮ ಶೂದ್ರರು ಬ್ರಾಹ್ಮಣರ ಅಧಿಕಾರಕ್ಕೆ ಮೆಟ್ಟಿಲುಗಳಾದರು. ಇದು ವಿಪರ್ಯಾಸ.

ಮಳೆ ಬೆಳೆ ಸಮೃದ್ಧವಾಗಿ ಆಗಿ, ದೇಶವೆಲ್ಲ ಸುಭಿಕ್ಷವಾಗಿ, ಪ್ರಜೆಗಳು ನೆಮ್ಮದಿಯಾಗಿದ್ದಾಗ ಪುರೋಹಿತರ ನೆಮ್ಮದಿ ಕೆಡುತ್ತದೆ. ಕವಿ ಮಿತ್ರನೊಬ್ಬ ಎಲ್ಲೋ ಪ್ರಸ್ತಾಪಿಸಿದ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿನ ಎರಡು ಪ್ರಸಂಗಗಳನ್ನು ನೆನಪಿಸುತ್ತೇನೆ. ಹದಿನಾಲ್ಕು ವರ್ಷ ವನವಾಸ ಪೂರೈಸಿ, ದುಷ್ಟ ರಾಕ್ಷಸರನ್ನೆಲ್ಲಾ ಸಂಹಾರ ಮಾಡಿ, ಅಯೋಧ್ಯೆಗೆ ಹಿಂದಿರುಗಿದ ಶ್ರೀರಾಮಚಂದ್ರ ದೊರೆಯಾಗಿ ಸಿಂಹಾಸನ ಏರುತ್ತಾನೆ. ಎಷ್ಟೇ ಆಗಲಿ ರಾಮರಾಜ್ಯ. ಮಳೆ ಬೆಳೆ ಎಲ್ಲಾ ಆಗಿ, ಪ್ರಜೆಗಳು ಕ್ಷೇಮದಿಂದ ಇರುತ್ತಾರೆ. ದೇಶದ ಸುಭಿಕ್ಷ ವಾತಾವರಣವನ್ನು ಕಂಡು ಅಯೋಧ್ಯೆಯ ಪುರೋಹಿತರಿಗೆ ಸುಮ್ಮನೇ ಇರಲು ಸಾಧ್ಯವಾಗುವುದಿಲ್ಲ. ಎಲ್ಲರೂ ಸುಖವಾಗಿ ಇದ್ದುಬಿಟ್ಟರೆ ತಮ್ಮ ಹೊಟ್ಟೆಪಾಡು ನಡೆಯುವುದಿಲ್ಲ ಎಂದು ಭಾವಿಸಿದ ಆ ಪುರೋಹಿತ ವರ್ಗ, ರಾಮನ ಬಳಿಗೆ ಧಾವಿಸಿ ಬರುತ್ತದೆ. “ರಾಮಚಂದ್ರ  ಪ್ರಭುಗಳೇ ತಾವು ದೇಶದ ಹಿತಕ್ಕಾಗಿ ಈ ಕೂಡಲೇ ಅಶ್ವಮೇಧ ಯಾಗವನ್ನು ಮಾಡಬೇಕು” ಎಂದು ರಾಜಾ ರಾಮನ ಕಿವಿ ಚುಚ್ಚುತ್ತಾರೆ. ಎಷ್ಟೇ ಆಗಲಿ ಪುರೋಹಿತರು, ಅವರ ಮಾತನ್ನು ತೆಗೆದು ಹಾಕಲು ಸಾಧ್ಯವೇ! ಶ್ರೀರಾಮ ಅವರ ಮಾತಿನಂತೆ ಅಶ್ವಮೇಧ ಯಾಗ ಮಾಡುತ್ತಾನೆ. ಅದರಿಂದ ಆದ ಸಾವು ನೋವುಗಳಿಗೆ ಲೆಕ್ಕವೇ ಇಲ್ಲ.

ಜೈಮಿನಿ ಭಾರತದಲ್ಲಿ ಉಲ್ಲೇಖಿಸಲಾದ ಮಹಾಭಾರತದಲ್ಲೂ ಇದೇ ಮಾದರಿಯ ಡಿಟೋ ಡಿಟೋ ಕಥೆ ಇದೆ. ಕೌರವ ಪಕ್ಷವೆಲ್ಲ ಸೋತು ಹೋಗಿದೆ. ಧರ್ಮರಾಯನ ಧರ್ಮರಾಜ್ಯ ಪ್ರಾರಂಭವಾಗಿದೆ. ಧರ್ಮರಾಯನ ಆಡಳಿತದಲ್ಲಿ ಎಲ್ಲಾ ಪ್ರಜೆಗಳು ಸುಕ್ಷೇಮವಾಗಿ ಇರುತ್ತಾರೆ. ಮಳೆ ಬೆಳೆಗೂ ಕೊರತೆ ಇರುವುದಿಲ್ಲ. ನ್ಯಾಯ ನೀತಿಯು ಇರುತ್ತದೆ. ಜನರ ನೆಮ್ಮದಿಯ ವಾತಾವರಣವನ್ನು ಕಂಡ ಪುರೋಹಿತರಿಗೆ ತಲ್ಲಣ ಉಂಟಾಗುತ್ತದೆ. ಏನಾದರೂ ಮಾಡಿ ನೆಮ್ಮದಿಯನ್ನು ಕೆಡಿಸಬೇಕು ಎನ್ನುವ ಉದ್ದೇಶದಿಂದ ಪುರೋಹಿತರೆಲ್ಲ ಒಟ್ಟಾಗಿ ಹೋಗಿ ಧರ್ಮರಾಯನಿಗೆ ಅಶ್ವಮೇಧ ಯಾಗ ಮಾಡುವಂತೆ ಉಪದೇಶ ನೀಡುತ್ತಾರೆ. ಅಶ್ವಮೇಧ ಯಜ್ಞ ಮಾಡದಿದ್ದರೆ ಇಡೀ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಬೆದರಿಕೆ ಒಡ್ಡುತ್ತಾರೆ. ಈ ಮಾತು ಕೇಳಿ ಬೆಚ್ಚಿದ ಧರ್ಮರಾಯ ಕೂಡ ಅಶ್ವಮೇಧ ಮಾಡುತ್ತಾನೆ. ಇದರ ಕೆಟ್ಟ ಪರಿಣಾಮದಿಂದಾಗಿ ಸಾವಿರಾರು ಜನ, ತಮ್ಮ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ಎರಡು ಪ್ರಸಂಗಗಳ ಒಟ್ಟು ಸಾರಾಂಶವೇನೆಂದರೆ ನಾನು ಮೊದಲಿಗೆ ಹೇಳಿದಂತೆ, ದೇಶ ಹಾಗೂ ದೇಶದ ಪ್ರಜೆಗಳು ನೆಮ್ಮದಿಯಿಂದ ಇದ್ದರೆ ಪುರೋಹಿತರ ನಿದ್ದೆ ಕೆಡುತ್ತದೆ. ದೇಶವನ್ನು ಹಾಳು ಮಾಡಲು ಅವರು ಯಾವುದಾದರೂ ಕುತಂತ್ರ ರೂಪಿಸುತ್ತಾರೆ. ಈಗ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಇದೇ ಮಾದರಿಯ ಬ್ರಹ್ಮಪುತ್ರರ ಕುತಂತ್ರದ ರಾಜಕಾರಣ. ಅಧಿಕಾರ ಲಾಲಸೆಯ ತಮ್ಮ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳಲು ಇಸ್ಲಾಂ ಧರ್ಮದ ಬೆದರು ಗೊಂಬೆಯನ್ನು ಮುಗ್ಧ ಹಿಂದುಗಳ ಎದುರು ಇಟ್ಟು, ಇಡೀ ದೇಶವನ್ನೇ ನಾಶ ಮಾಡಲು ಹೊರಟಿದ್ದಾರೆ.

ಈ ವೈದಿಕ ವೈರಸ್ಸಿನ ಮಹಾರೋಗದ ಸೂಕ್ಷ್ಮವನ್ನು ನಾವು ನಮ್ಮ ಜನರಿಗೆ ತಿಳಿಸಬೇಕಾಗಿದೆ. ಅದು ಸದ್ದಿಲ್ಲದಂತೆ ಹರಡಿ ಈ ದೇಶದ ತಳ ಸಮುದಾಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿದೆ. ಈ ಮಾತುಗಳು ಪುನರಾವರ್ತನೆಯಾದಂತೆ ಕಂಡರೂ ಪರವಾಗಿಲ್ಲ. ಇದನ್ನು ಮತ್ತೆ ಮತ್ತೆ ನಾವು ಹೊಸ ಕಾಲದ ಶೂದ್ರ ತರುಣ ತರುಣಿಯರ ಕಿವಿ ಮುಟ್ಟುವಂತೆ, ಮನ ಮುಟ್ಟುವಂತೆ ಸಾರಿ ಸಾರಿ ಹೇಳಬೇಕಾಗುತ್ತದೆ.

ಎಲ್.ಎನ್. ಮುಕುಂದರಾಜ್

ಹಿರಿಯ ಲೇಖಕರು

ಇದನ್ನೂ ಓದಿ-https://peepalmedia.com/if-bjp-wins-karnataka-will-fall-under-rsss-arms/  ಬಿಜೆಪಿ ಗೆದ್ದರೆ ಆರ್‌ ಎಸ್‌ ಎಸ್‌ ತೆಕ್ಕೆಗೆ

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಾಶ : ಜೆ ಎನ್‌ ಯುವಿನ ಉದಾಹರಣೆ