ಚುನಾವಣೆ 2023- ಪರಿಣಾಮ – Peepal Media

ಚುನಾವಣಾ ಬಾಂಡ್‌ನಿಂದ ಬಿಜೆಪಿಯ 8000 ಕೋಟಿ ರೂ.ಲೂಟಿ ಬಯಲು: ಉದ್ಧವ್‌ ಠಾಕ್ರೆ
ಮುಂಬೈ: ಎಸ್‌ಬಿಐನ ಚುನಾವಣಾ ಬಾಂಡ್‌ಗಳಿಂದಾಗಿ ಬಿಜೆಪಿಯ 8000 ರೂ. ಭ್ರಷ್ಟಾಚಾರದ ಲೂಟಿ ಬಯಲಾಗಿದೆ ಎಂದು ಶೀವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ದಕ್ಷಿಣ ಮುಂಬೈನ ಕೋಲಾಬಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಬಿಜೆಪಿಯು ಚುನಾವಣಾ ಬಾಂಡ್‌ ಯೋಜನೆಯಿಂದಾಗಿ ₹8,000 ಕೋಟಿ ಲೂಟಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮೀರಿಸಿದೆ ಎಂದು ದೂರಿದರು.

ಬಿಜೆಪಿ ವಿಕಸಿತ ಭಾರತದ ಕನಸು ತೋರಿಸುತ್ತಿದೆ. ಇವರ ಕನಸು ಬಿಸಿಲುಗುದುರೆಯಿದ್ದಂತೆ. ಈ ಮೂಲಕ ಬಿಜೆಪಿಯು ಇನ್ನಷ್ಟು ಲೂಟಿ ಮಾಡಲು ಇನ್ನೂ ಐದು ವರ್ಷಗಳ ಕಾಲ  ಅಧಿಕಾರದಲ್ಲಿರುವುದಕ್ಕೆ ಬಯಸುತ್ತದೆ. ಮತದಾರರಾದ ನೀವು ಈ ದೇಶವನ್ನು ಮತ್ತೆ ಲೂಟಿಕೋರರ ಕೈಗೆ ಕೊಡುತ್ತಿರೋ ಬಿಡುತ್ತಿರೋ ನಿಮಗೆ ಬಿಟ್ಟದ್ದು ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಕಂಪನಿಗಳು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆ ಪಡೆದಿವೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಬಿಜೆಪಿಗೆ ದೇಣಿಗೆ ನೀಡುವಂತೆ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುತ್ತದೆ. ದೇಣಿಗೆ ನೀಡದಿದ್ದರೆ ಕಂಪನಿಗಳ ಕೆಲಸ ಆಗುವುದಿಲ್ಲ. ಹೀಗಾಗಿ ಕಂಪನಿಗಳು ಹೆದರಿಕೊಂಡು ದೇಣಿಗೆ ನೀಡಿವೆ ಎಂದು ಅವರು ಆರೋಪಿಸಿದರು.

ನಾನು ಗುಜರಾತ್‌ ವಿರೋಧಿಯಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಆ ರಾಜ್ಯವನ್ನು ದೇಶದ ಇತರ ರಾಜ್ಯಗಳ ವಿರುದ್ಧ ಎತ್ತಿ ಕಟ್ಟುವುದನ್ನು ಬಿಡಬೇಕು.. ಮಹಾರಾಷ್ಟ್ರಕ್ಕೆ ಬರುವ ಎಲ್ಲ ಯೋಜನೆಗಳನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಒಂದು ದೇಶ ಒಂದು ಚುನಾವಣೆ ಕುರಿತು ರಾಷ್ಟ್ರಪತಿಗೆ ಪ್ರಸ್ತಾವನೆ ಸಲ್ಲಿಕೆ
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು.

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ.

ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿನ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್.‌ ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್‌ ಕೆ ಸಿಂಗ್‌, ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್‌ ಕಶ್ಯಪ್‌ ಮತ್ತು ಹಿರಿಯ ವಕೀಲ ಹರೀಶ್‌ ಸಾಳ್ವೆ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದ ಈ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ. ರಾಷ್ಟ್ರಪತಿಯ ಅಂಕಿತ ಬಿದ್ದೊಡನೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾನೂನು ಜಾರಿಯಾದರೆ ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಬಹುದು ಎನ್ನುವ ಆರೋಪಗಳು ಕೇಳಿ ಬಂದಿವೆ.

CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ
ನವದೆಹಲಿ:  ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.

ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ ‘ಸಿಎಎ ಅಸಾಂವಿಧಾನಿಕ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.

ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ. ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ’ ಎಂದು ಶಾ ಹೇಳಿದರು.

2024ರಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ, ಸಿಎಎ ರದ್ದುಗೊಳಿಸುವುದಾಗಿ ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.

ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.

ಈ ಕಾನೂನು ‘ಮುಸ್ಲಿಂ ವಿರೋಧಿ  ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ  ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಹೇಳಿದರು.

ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ
ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.

ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.

ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ.  ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ.  ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ.  ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.

ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ  ಯಾರು ಉದ್ಯೋಗ ಕೊಡುತ್ತಾರೆ?  ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ  ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ  ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ.  ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ.  ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.

ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು.  ಜನರಿಗೆ ಉದ್ಯೋಗ ನೀಡುತ್ತಿದ್ದರು.  ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ.  ಅವರು ಹೊಸ ಕಾರ್ಖಾನೆಗಳನ್ನು ಮತ್ತು  ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.

2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ.  ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ.  ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಉಚಿತ `ಭಾಗ್ಯ’
ಅರ್ಥಶಾಸ್ತ್ರ ಹೇಳುವಂತೆ ಹಣವಂತರು ತಿಜೋರಿಗಳಲ್ಲಿ ಬಂಗಾರದ ಗಟ್ಟಿ, ನೋಟಿನ ಕಂತೆ ಕೂಡಿಟ್ಟರೆ, ಸಿಕ್ಕಸಿಕ್ಕಲ್ಲಿ ಸೈಟು ಕೊಂಡು ಬೇಲಿ ಹಾಕಿಸಿಟ್ಟರೆ ಆರ್ಥಿಕತೆ ಕುಸಿಯುತ್ತದೆ. ಆರ್ಥಿಕತೆಯನ್ನು `ಬೂಸ್ಟ್’ ಮಾಡಲು ಜನ ಖರ್ಚು ಮಾಡುವಂತಾಗಬೇಕು. ಈ `ಭಾಗ್ಯ’ಗಳ ಮೂಲಕ ಖರ್ಚು ಮಾಡಲು ಜನರ ಕೈಯಲ್ಲಿ ಕಾಸಿರಲಿದೆ ಎಂದಾದರೆ, ಮತ್ತು ಆ ಹಣ ಕೂಡಿಡುವುದಕ್ಕಲ್ಲದೆ ದಿನನಿತ್ಯದ ಉಪಯೋಗಗಳಿಗೆ ಚಲಾವಣೆಯಾಗುವುದಾದರೆ ಅದರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದೇ ಆಗಲಿದೆ – ಡಾ. ಎಚ್ ಎಸ್‌ ಅನುಪಮಾ

ಕಾಂಗ್ರೆಸ್ ಸರಕಾರ ಕೊಡುತ್ತಿರುವ ಐದು `ಭಾಗ್ಯ’ಗಳು ಉಚಿತವಾದವು. ಉಚಿತ ಎಂಬ ಪದದ ಅರ್ಥ ಪುಕ್ಕಟೆ ಅಲ್ಲ, `ಸೂಕ್ತ’ ಎಂದು. ಎಂದರೆ ಈ ಐದೂ ಕೊಡಲೇಬೇಕಾದ ಜವಾಬ್ದಾರಿಗಳು. ಕೊಡದಿರುವುದು ಅನುಚಿತ. ಬಡತನದ ಬಿಕ್ಕಟ್ಟುಗಳ ಅರಿವಿಲ್ಲದ, ಆರ್ಥಿಕತೆಯ ಗಂಧಗಾಳಿ ಇಲ್ಲದ `ಟ್ಯಾಕ್ಸ್‌ಪೇಯರ್’ಗಳು, ಯಾವುದನ್ನು ಹೇಗೆ ವಿರೋಧಿಸಬೇಕೆಂದರಿಯದ ವಿರೋಧಪಕ್ಷಗಳು ಭಾಗ್ಯಗಳ ಬಗೆಗೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈಗಾಗಲೇ ಜಾರಿಯಾಗಿರುವ, ಮಹಿಳೆಯರಿಗೆ ಶುಲ್ಕರಹಿತ ಬಸ್ ಪ್ರಯಾಣ `ಶಕ್ತಿ’ಯ ಬಗೆಗಂತೂ ವಿಪರೀತದ ಕುಹಕ ಕೇಳಿಬರುತ್ತಿದೆ. ಏನಚ್ಚರಿ? ಮಹಿಳೆಯರ ದುಡಿಮೆ, ವಿರಾಮ, ಮನರಂಜನೆಯ ಬಗೆಗೆ ಸಮಾಜ ಹೊಂದಿರುವ ಅಸಡ್ಡೆ ಈ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಮುಂದುವರಿದು ಬರಿಯ ಒಂಭತ್ತು ಮಹಿಳೆಯರಷ್ಟೇ ಶಾಸನ ಸಭೆಗೆ ಆಯ್ಕೆಯಾಗಿರುವ, ನಾಲ್ವರು ಶಾಸಕಿಯರಲ್ಲಿ ಒಬ್ಬರಷ್ಟೇ ಮಂತ್ರಿಯಾಗುವತನಕ ಮುಂದುವರೆದಿದೆ.

ಆದಾಯ ತೆರಿಗೆ ಕಟ್ಟುವ `ಟ್ಯಾಕ್ಸ್‌ಪೇಯರ್’ಗಳು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಿದ್ದಾರೆ. ಬಹುಶಃ ಅವರು ತಾವಷ್ಟೇ ತೆರಿಗೆ ಕಟ್ಟುವವರೆಂದು ಭಾವಿಸಿದಂತಿದೆ. ಹಾಗೆ ನೋಡಿದರೆ ಪ್ರತಿಯೊಬ್ಬ ನಾಗರಿಕರೂ ತೆರಿಗೆ ಕೊಡುವವರೇ. ತಾವು ಕೊಳ್ಳುವ ಊದುಬತ್ತಿ, ಪೆನ್ನು, ನೋಟ್‍ಬುಕ್, ಮೊಬೈಲು, ಗುಟ್ಕಾ, ಬಿಸ್ಕೀಟು, ಹಾಲು, ಅಕ್ಕಿ, ಬಳೆ, ಟಿಕ್ಲಿ, ಹೆಂಡ, ಬಟ್ಟೆ, ಬೀಡಿ, ಬೆಂಕಿಪೊಟ್ಣ ಮುಂತಾಗಿ ಪ್ರತಿಯೊಂದು ವಸ್ತುವಿನ ಮೇಲೂ ವಿಧಿಸಲ್ಪಟ್ಟ ಜಿಎಸ್ಟಿ ತೆರಿಗೆ ತೆತ್ತು ಅವರು ವಸ್ತುಗಳನ್ನು ಕೊಂಡಿರುತ್ತಾರೆ. ವಿದ್ಯುತ್, ನೀರು, ಗ್ಯಾಸ್, ವಸತಿಗಳಿಗೆ ಬಿಲ್ ಜೊತೆಗೆ ತೆರಿಗೆ ಕಟ್ಟುತ್ತಾರೆ. ಬಡವರ ಸೀಮಿತ ಆದಾಯಕ್ಕೆ ಹೋಲಿಸಿದರೆ ಅವರು ಕೊಡುವ ವಸ್ತುಗಳ ಮೇಲಿನ ತೆರಿಗೆ ತುಂಬ ಹೆಚ್ಚು. ಸರ್ಕಾರದ ಬೊಕ್ಕಸಕ್ಕೆ ಆದಾಯ ತೆರಿಗೆಯಿಂದ ಬರುವ ಹಣಕ್ಕಿಂತ ಇಂತಹ ಪರೋಕ್ಷ ತೆರಿಗೆಗಳಿಂದ ಬರುವ ಆದಾಯವೇ ಹೆಚ್ಚು. ಇದೇ ಬಡವರ ಇದೇ ತೆರಿಗೆ ಹಣ ಬಳಸಿ ಅವರೆಂದೂ ಬಳಸದ ಏರ್‌ಪೋರ್ಟ್, ಫ್ಲೈ ಓವರ್, ಸಂಸತ್ ಭವನ, ವಿಶ್ವವಿದ್ಯಾಲಯ, ಸಂಸ್ಥೆಗಳನ್ನು ಕಟ್ಟಿದೆವು. ಭಾರೀ ಮೂರ್ತಿ, ಸ್ಮಾರಕಗಳ ನಿಲ್ಲಿಸಿದೆವು. ಕಟ್ಟುವಾಗ ನಾಲ್ಕು ಜನರಿಗೆ ಸಿಕ್ಕ ಕೂಲಿಯ ಕೆಲಸದ ಹೊರತು ಬಡವರಿಗೆ ಅವುಗಳಿಂದ ಏನೂ ಉಪಯೋಗವಿಲ್ಲ. ಬಡವರ ತೆರಿಗೆ ಹಣವನ್ನು ಉಳ್ಳವರು ಕಸಿಯುತ್ತಿರುವುದರ ಪರಿಜ್ಞಾನವಿಲ್ಲದೆ `ಭಾಗ್ಯ’ಗಳ ಬಗೆಗೆ ವಿಪರೀತ ಅಪಪ್ರಚಾರ ನಡೆಯುತ್ತಿದೆ.

ಭಾಗ್ಯಗಳಲ್ಲಿ ಒಂದಾದ, ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಶುಲ್ಕರಹಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯ ಬಗೆಗೆ ಮೆಚ್ಚಿಗೆ, ಧನ್ಯತಾಭಾವಗಳಷ್ಟೇ ಟೀಕೆ, ವಿರೋಧಗಳೂ ವ್ಯಕ್ತವಾಗುತ್ತಿವೆ. ಭಾರತದ ಅರ್ಧಕ್ಕರ್ಧ ಕುಟುಂಬಗಳ ತಿಂಗಳ ಆದಾಯ 10 ಸಾವಿರದ ಆಸುಪಾಸು. ಎಂದೇ ದುಡಿಯುವ ಮಹಿಳೆಯರಲ್ಲಿ 92% ಕುಟುಂಬ ನಡೆಸಲು ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಿಕ್ಕಷ್ಟು ಸಿಗಲಿ ಎಂದು ಕಡಿಮೆ ವೇತನಕ್ಕೆ ದುಡಿಯುವವರೇ ಆಗಿದ್ದಾರೆ. ಬೆಂಗಳೂರು ಒಂದರಲ್ಲೇ 3 ಲಕ್ಷದಷ್ಟು ಮಹಿಳೆಯರು ಗಾರ್ಮೆಂಟ್ ಉದ್ದಿಮೆಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿನಿತ್ಯ ಕನಿಷ್ಟ 8 ಗಂಟೆ ದುಡಿದು, ತಿಂಗಳಿಗೆ 8ರಿಂದ 10 ಸಾವಿರ ರೂಪಾಯಿ ವೇತನ ಪಡೆಯುವ ಅವರು ದುಬಾರಿ ಬಾಡಿಗೆ ಕೊಟ್ಟು ನಗರದಲ್ಲಿ ವಾಸಿಸಲಾರರು. ಬಹುತೇಕರು ಅಕ್ಕಪಕ್ಕದ ಊರುಗಳಿಂದ ಅಥವಾ ನಗರದ ಹೊರವಲಯದ ಬಡಾವಣೆಗಳಿಂದ ಕೆಲಸದ ಸ್ಥಳಗಳಿಗೆ ಪಯಣಿಸುತ್ತಾರೆ. ಗಾರ್ಮೆಂಟ್ ಅಷ್ಟೇ ಅಲ್ಲ, ಬೆಂಗಳೂರಿನಲ್ಲೇ ಒಂದುಕಡೆಯಿಂದ ಇನ್ನೊಂದೆಡೆಗೆ ಪ್ರತಿನಿತ್ಯ ಪಯಣಿಸುವ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಅವರು ಪ್ರಯಾಣಕ್ಕಾಗಿಯೇ ಸಂಬಳದ ಒಂದು ಪಾಲನ್ನು ಎತ್ತಿಡಬೇಕು. ಅಂಥವರಿಗೆ ಶುಲ್ಕರಹಿತ ಬಸ್ ಪ್ರಯಾಣ ವರದಾನವಾಗಿದೆ.

ಇನ್ನು ಒಂದೂರಿನಿಂದ ಬೇರೆ ಊರಿಗೆ ಗುಳೆಬಂದು ಕಟ್ಟಡ ನಿರ್ಮಾಣ, ರಸ್ತೆ ಕೆಲಸ, ಜಂಗಲ್ ಕಟಿಂಗ್, ಮರಳು ಸಾಗಣೆ, ಮನೆಗೆಲಸ, ಕೂಲಿ ಕೆಲಸಗಳಲ್ಲಿ ತೊಡಗಿಕೊಂಡ ಲಕ್ಷಾಂತರ ವಲಸಿಗರಿದ್ದಾರೆ. ಅಂಥವರು ದೂರದ ತಮ್ಮೂರಿಗೆ ಹೋಗಿ ಬರುವುದೆಂದರೆ ಒಂದು ವಾರದ ದುಡಿಮೆಯನ್ನು ಬಸ್‌ಚಾರ್ಜ್‌ಗೇ ತೆಗೆದಿಡಬೇಕಾಗುತ್ತದೆ. ಎಂದೇ ಊರಿಗೆ ಹೋಗುವ ಬಯಕೆಯಿದ್ದರೂ ಹೋಗದೇ ಯಂತ್ರಗಳಂತೆ ದುಡಿಯುತ್ತಾರೆ. ಅಂಥವರಿಗೆ ಮಹಿಳೆಯರಿಗೆ ಟಿಕೆಟ್ ಇಲ್ಲವೆಂದರೆ ಅರ್ಧ ಖರ್ಚಿನಲ್ಲಿ ಊರಿಗೆ ಹೋಗಿಬರಲು ಅನುಕೂಲವಾಗುತ್ತದೆ.

ಶಾಲೆಕಾಲೇಜಿಗೆ ಹೋಗಿಬರಲು ಪಾಸ್ ಮಾಡಿಸಲೂ ಸಾಧ್ಯವಾಗದೇ ಎಷ್ಟೋ ಬಡ ಮನೆತನಗಳ ಹೆಣ್ಣುಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿ ಕೂತಿರುವುದನ್ನು ಪ್ರತಿನಿತ್ಯ ಕಾಣುತ್ತಿದ್ದೇವೆ. ಇಂಥವರಿಗೆಲ್ಲ ಶಕ್ತಿ ಯೋಜನೆ ಸಹಾಯವಾಗುತ್ತದೆ. ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರವು ಅವರ ಶೈಕ್ಷಣಿಕ ಅವಕಾಶ, ದುಡಿಮೆಯ ಶಕ್ತಿ, ಗಳಿಕೆಯನ್ನು ಹೆಚ್ಚು ಮಾಡಿದಂತಾಗುತ್ತದೆ. ಅದರ ಜೊತೆಗೆ ಪ್ರತಿ ಮನೆಯೊಡತಿಗೆ ಎರಡು ಸಾವಿರ ರೂಪಾಯಿಯೂ ಬಂದರೆ, ನಿರುದ್ಯೋಗಿ ಪದವೀಧರ ಯುವಜನರಿಗೆ ಭತ್ಯೆಯೂ ದೊರೆತರೆ ಕುಟುಂಬಗಳ ಆರ್ಥಿಕ ಸ್ಥಿತಿ ಕೊಂಚ ಸುಧಾರಿಸುತ್ತದೆ. ಪ್ರತಿ ತಿಂಗಳು 10 ಸಾವಿರದಲ್ಲಿ ಬದುಕಿನ ಬಂಡಿ ತೂಗಿಸಬೇಕಾದವರಿಗೆ ನಾನಾ ಯೋಜನೆಗಳಿಂದ 5,000 ರೂ. ದೊರೆಯುವಂತಾದರೆ ಅವರ ಆರೋಗ್ಯ, ಆರ್ಥಿಕ ಪರಿಸ್ಥಿತಿ ಸುಧಾರಿಸುವುದಲ್ಲವೆ?

ಹೀಗೆ ಬಸ್‌ ಚಾರ್ಜ್‌ ಇಲ್ಲದೆ ಉಳಿಸಿದ, `ಭಾಗ್ಯ’ದಿಂದ ದೊರಕಿದ ಹೆಚ್ಚುವರಿ ಹಣವನ್ನು ಮಹಿಳೆಯರು ಏನು ಮಾಡಿಯಾರು? ತರಕಾರಿ, ಹಣ್ಣು, ಮಾಂಸ, ಹಾಲು, ಬಟ್ಟೆ ಕೊಂಡಾರು. ಸಾಲ ತೀರಿಸಿಯಾರು. ಮುಂದೇನಕ್ಕೋ ಬೇಕೆಂದು ತೆಗೆದಿಟ್ಟುಕೊಂಡಾರು. ಔಷಧೋಪಚಾರ, ಆಸ್ಪತ್ರೆಗೆ ಹೋಗಿ ಬಂದಾರು. ಕೈಸಾಲ, ಬ್ಯಾಂಕಿನ ಸಾಲ ತೀರಿಸಿಯಾರು. ಕೈಯಲ್ಲಿ ನಾಕು ಕಾಸು ಇಟ್ಟುಕೊಂಡಾರು. ಅಡವಿಟ್ಟ ಚೂರು ಬಂಗಾರ ಬಿಡಿಸಿಕೊಂಡಾರು. ಬಾಕಿಯಿರುವ ಹರಕೆ, ಮನದಾಸೆ ತೀರಿಸಿಕೊಳ್ಳಲು ತೀರ್ಥಕ್ಷೇತ್ರಗಳಿಗೆ ಹೋದಾರು. ಎಲ್ಲೋ ಕೆಲವರು ಟೂರಿಗೂ ಹೋಗಬಹುದು. ತಮಗಿಷ್ಟದ ಬಟ್ಟೆ, ಬಳೆ ಕೊಳ್ಳಬಹುದು. ಅವರು ಹಾಗೆ ಮಾಡುವುದರಿಂದ ಅಂಗಡಿಗಳಿಗೆ ವ್ಯಾಪಾರವಾಗುತ್ತದೆ. ಬ್ಯಾಂಕುಗಳ ಸಾಲ ಮರುಪಾವತಿಯಾಗುತ್ತದೆ. ತೀರ್ಥಕ್ಷೇತ್ರಗಳಲ್ಲಿ ಪೂಜೆ ಮಾಡುವ ಪುರೋಹಿತವರ್ಗದಿಂದ ಹಿಡಿದು ಚಿಕ್ಕಿ, ಬಲೂನು, ಪ್ರಸಾದ, ಬಳೆ ಟಿಕ್ಲಿ ಮಾರುವವರವರೆಗೆ, ಹೋಟೆಲು, ರಿಕ್ಷಾ, ಲಾಡ್ಜುಗಳವರೆಗೆ ಎಲ್ಲರ ವ್ಯಾಪಾರ ವೃದ್ಧಿಸುತ್ತದೆ.

ಅಂದರೆ ಸರ್ಕಾರದಿಂದ ಜನರ ಕೈಗೆ ಬಿದ್ದ ಕಾಸು ಊರಿಡೀ ಓಡಾಡುತ್ತದೆ. ಸರ್ಕಾರ ಅವರ ಪ್ರಯಾಣದ ರಖಮನ್ನು ಸಾರಿಗೆ ಸಂಸ್ಥೆಗಳಿಗೆ ಪಾವತಿಸುವುದರಿಂದ ಅವೂ ನಷ್ಟವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಮಹಿಳೆಯರ ಜೊತೆಗೆ ಗಂಡಸರು, ಮಕ್ಕಳೂ ಬಸ್ ಹತ್ತಿ ಟಿಕೆಟ್ ಪಡೆಯುವುದರಿಂದ ಒಟ್ಟು ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಶಕ್ತಿ ಯೋಜನೆ ಆರಂಭಕ್ಕಿಂತ ಮೊದಲು ನಿತ್ಯ 84.14 ಲಕ್ಷ ಜನ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಮೊದಲ 6 ದಿನಗಳಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಯು 84 ಲಕ್ಷದಿಂದ 1.16 ಕೋಟಿಗೇರಿತು. ಮಹಿಳಾ ಪ್ರಯಾಣಿಕರ ಸಂಖ್ಯೆಯೂ 41.34 ಲಕ್ಷದಿಂದ 55.09 ಲಕ್ಷಕ್ಕೇರಿತು. ದಿನನಿತ್ಯ 50% ಆಸನಗಳಲ್ಲಿ ಪುರುಷರೂ ಪ್ರಯಾಣಿಸುವುದರಿಂದ ಒಟ್ಟಾರೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾರಿಗೆ ನಿಗಮಗಳಿಗೆ ತಿಂಗಳಿಗೆ 337 ಕೋಟಿ ರೂಪಾಯಿ, ವರ್ಷಕ್ಕೆ 4051 ಕೋಟಿ ರೂಪಾಯಿ ಆದಾಯ ಜನರಿಂದ ಬರದಿದ್ದರೂ ಸರ್ಕಾರದಿಂದ ಪಾವತಿಯಾಗಲಿದೆ.

ಇದರಿಂದ ಇನ್ನೂ ಹಲವು ಅನುಕೂಲಗಳಿವೆ. ಎಲ್ಲ `ಅಭಿವೃದ್ಧಿ’ ಮಾದರಿಗಳಲ್ಲಿ ಹೆಣ್ಣು ಹೊರಗೇ ಉಳಿದಿರುತ್ತಾಳೆ. ಈ ಮೂಲಕ ಅವಳನ್ನು ಒಳಗೊಳ್ಳಲು ಸಾಧ್ಯವಾಗಬಹುದು. ಮಹಿಳೆಯರು ಹೆಚ್ಚೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಹುದು. ಹೆಚ್ಚೆಚ್ಚು ಸಾರ್ವಜನಿಕ ಸಾರಿಗೆ ಬಳಸಬಹುದು. ಕಾರು, ಬೈಕು, ರಿಕ್ಷಾ ಹತ್ತದೆ ಸರ್ಕಾರಿ ಬಸ್ಸನ್ನೇರಿದರೆ ಟ್ರಾಫಿಕ್ ಸಮಸ್ಯೆಯೂ ಕಡಿಮೆಯಾಗಬಹುದು. ಸಾರ್ವಜನಿಕ ಸಾರಿಗೆ ಶುಲ್ಕರಹಿತವಾದ ದೇಶಗಳಲ್ಲೆಲ್ಲ ಆರ್ಥಿಕತೆ, ವಾಹನ ದಟ್ಟಣೆ, ವಾಯುಮಾಲಿನ್ಯ ಸುಧಾರಿಸಿದ ಉದಾಹರಣೆಗಳಿವೆ.

ಪದವೀಧರರ ಭತ್ಯೆಯಿಂದ, ಗೃಹಿಣಿಗೆ ಕೊಡುವ `ಭಾಗ್ಯ’ದಿಂದಲೂ ಇಂತಹುದೇ ಪರಿಣಾಮಗಳಾಗಲಿವೆ. ಸಮಾಜದ ಎಲ್ಲ ಬಡವರಿಗೂ, ಮಹಿಳೆಯರಿಗೂ, ನಿರುದ್ಯೋಗಿ ಯುವಜನರಿಗೂ ಉಪಯೋಗವಾಗುವ ಇಂತಹ `ಭಾಗ್ಯ’ಗಳು ಹಲವು ದೇಶಗಳಲ್ಲಿ ಜಾರಿಯಲ್ಲಿದ್ದು ಯಶಸ್ವಿಯಾಗಿವೆ. ಭಾರತದಲ್ಲೂ ದೆಹಲಿ, ತಮಿಳುನಾಡು ಮತ್ತಿತರ ರಾಜ್ಯಗಳು ಭಾಗ್ಯಗಳನ್ನು ಯಶಸ್ವಿಗೊಳಿಸಿವೆ. ಕರ್ನಾಟಕವೂ ಮೊದಲು ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದೆ. ಈಗ ಇವನ್ನೂ ಯಶಸ್ವಿಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಲ್ಲ, ಎಲ್ಲರ ಮೇಲಿದೆ.

ಅರ್ಥಶಾಸ್ತ್ರ ಹೇಳುವಂತೆ ಹಣವಂತರು ತಿಜೋರಿಗಳಲ್ಲಿ ಬಂಗಾರದ ಗಟ್ಟಿ, ನೋಟಿನ ಕಂತೆ ಕೂಡಿಟ್ಟರೆ, ಸಿಕ್ಕಸಿಕ್ಕಲ್ಲಿ ಸೈಟು ಕೊಂಡು ಬೇಲಿ ಹಾಕಿಸಿಟ್ಟರೆ ಆರ್ಥಿಕತೆ ಕುಸಿಯುತ್ತದೆ. ಆರ್ಥಿಕ ವ್ಯವಸ್ಥೆ ಆರೋಗ್ಯಕರವಾಗಿರಲು ಹಣ ಚಲಾವಣೆಯಾಗಬೇಕು. ಆರ್ಥಿಕತೆಯನ್ನು `ಬೂಸ್ಟ್’ ಮಾಡಲು ಜನ ಖರ್ಚು ಮಾಡುವಂತಾಗಬೇಕು. ಅಂದರೆ ಹಣವಿಲ್ಲದವರ ಬಳಿಗೆ ನಗದು ಹರಿಯಬೇಕು. ಈ `ಭಾಗ್ಯ’ಗಳ ಮೂಲಕ ಖರ್ಚು ಮಾಡಲು ಜನರ ಕೈಯಲ್ಲಿ ಕಾಸಿರಲಿದೆ ಎಂದಾದರೆ, ಮತ್ತು ಆ ಹಣ ಕೂಡಿಡುವುದಕ್ಕಲ್ಲದೆ ದಿನನಿತ್ಯದ ಉಪಯೋಗಗಳಿಗೆ ಚಲಾವಣೆಯಾಗುವುದಾದರೆ ಅದರಿಂದ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದೇ ಆಗಲಿದೆ.

ಇಷ್ಟಾದಮೇಲೂ ಬೊಕ್ಕಸಕ್ಕೆ ನಷ್ಟ ಎನ್ನುವವರು ಟಿಕೆಟ್ ಪಡೆದು ಬಸ್ಸಿನಲ್ಲಿ ಪಯಣಿಸಲಿ. ರಶ್ ಇರುವ ಬಸ್ಸಿನಲ್ಲಿ ಬೆವರ ವಾಸನೆಯವರು ಪರಪರ ಕೆರೆಯುತ್ತ ಪಕ್ಕ ಕೂತು ತಮಗೆ ಅಸಹ್ಯವಾಗುವುದೆನ್ನುವವರು `ಭಾಗ್ಯ’ ಬೇಡವೆಂದು ತಮ್ಮ ಕಾರಿನಲ್ಲೇ ಪಯಣಿಸಲಿ. ಆ ಮೂಲಕ ಸರ್ಕಾರದ ಹೊರೆಯನ್ನು ಇಳಿಸಲಿ.

ಹಲವು ಭಾಗ್ಯಗಳನ್ನು ಲಾಗಾಯ್ತಿನಿಂದ ಕೊಡುತ್ತ ಬಂದಿರುವ ದಕ್ಷಿಣದ ಐದು ರಾಜ್ಯಗಳು ದೇಶದ ಜಿಡಿಪಿಗೆ 30% ಸಂದಾಯ ಮಾಡುವಷ್ಟು ಮುಂದುವರೆದಿರುವುದು ಹೇಗೆ ಎಂದು ಮುಂದುವರಿದವರು ಇನ್ನಾದರೂ ಯೋಚಿಸಲಿ.

ಸರ್ಕಾರಿ ಉದ್ಯೋಗ, ಬ್ಯಾಂಕ್, ಸೇನೆ, ಕಾರ್ಪೊರೇಷನ್ನುಗಳ ಎಷ್ಟೋ ನೌಕರರು ನಿವೃತ್ತರಾದ ಬಳಿಕ ಪಿಂಚಣಿ ಪಡೆಯುತ್ತಿದ್ದಾರೆ. ಕೆಲವರು ಎಷ್ಟು ವರ್ಷ ಸೇವೆ ಮಾಡಿದರೋ ಅಷ್ಟೇ ವರ್ಷ ಪಿಂಚಣಿ ಪಡೆದಿದ್ದಾರೆ. ಅವರ ಬಳಿಕ ಅವರ ಸಂಗಾತಿಯೂ ಪಡೆದಿದ್ದಾರೆ. ಐದಂಕಿ ಸಂಬಳ ಎಣಿಸುವ ಮೇಲ್ವರ್ಗದ ಅಧಿಕಾರಿಗಳೂ ದಿನಭತ್ಯೆ, ಪ್ರಯಾಣ ಭತ್ಯೆ ಎಂದು ಸುಳ್ಳು ಬಿಲ್ಲುಗಳ ಸೃಷ್ಟಿಸಿ ಕ್ಲೇಮ್ ಮಾಡುತ್ತಾರೆ. ಸಂಬಳದ ನೂರುಪಟ್ಟು ಗಿಂಬಳ ಪಡೆಯುತ್ತಾರೆ. `ಹಿರಿಯ ನಾಗರಿಕರ’ ರಿಯಾಯ್ತಿಯನ್ನು ಉಳ್ಳವರೂ ಸಂಕೋಚವಿಲ್ಲದೆ ಪಡೆಯುತ್ತಾರೆ. ಅದಷ್ಟೇ ಅಲ್ಲ, ಮತ್ಯಾವುದೇ ವಿನಾಯ್ತಿ, ರಿಯಾಯ್ತಿ ಇದೆಯೆಂದು ತಿಳಿದರೂ ತಕ್ಷಣ ಅದಕ್ಕೆ ಮುಗಿಬೀಳುತ್ತಾರೆ. ಬಡಜನರ ಸಮಾನ ಸಂಪನ್ಮೂಲದ ಪಾಲಿನಿಂದ, ರೈತರ ಬೆವರಿನಿಂದ, ಪ್ರತಿ ನಾಗರಿಕರಿಗೆ ವಿಧಿಸುವ ಆದಾಯ ತೆರಿಗೆ, ವಸ್ತು ತೆರಿಗೆಯ ಹಣದಿಂದ ಅವರಿಗೆ ಈ `ಭಾಗ್ಯ’ಗಳನ್ನು ಸರ್ಕಾರ ಕೊಟ್ಟಿದೆ. ಆಗಲಿ, ಅವರಿಗೆ ಕೊಡಲೆಂದೇ ಮಾಡಿರುವುದನ್ನು ಪಡೆಯಲಿ. ಆದರೆ ತಾವು ಪಡೆಯುವಾಗ ಚಕಾರ ಎತ್ತದ ವರ್ಗವೇ ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟರೆ ಅವರು ಕುಳಿತುಂಡು ಸೋಮಾರಿಗಳಾಗುತ್ತಾರೆ; ಪುಕ್ಕಟೆ ಪ್ರಯಾಣ ಮಾಡಲು ಅವಕಾಶ ಕೊಟ್ಟರೆ ಹೆಂಗಸರು ಮನಬಂದಂತೆ ತಿರುಗುತ್ತಾರೆ; ಮನೆಯೊಡತಿಗೆ 2000 ರೂ. ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂಬ ಅಸಹ್ಯ ವಾದ ಮಂಡಿಸುತ್ತಿರುವುದು ವಿಚಿತ್ರವಾಗಿದೆ. ಮಹಿಳೆಯರು ಕಿತ್ತಾಡುವ ಯಾವ್ಯಾವುದೋ ಹಳೆಯ ವೀಡಿಯೋ, ಫೋಟೋಗಳನ್ನು ನಿನ್ನೆಮೊನ್ನೆಯದೆಂಬಂತೆ ಸೃಷ್ಟಿಸಿ ಫಾರ್ವರ್ಡ್ ಮಾಡಲಾಗುತ್ತಿದೆ. ಫೇಕ್‍ನ್ಯೂಸ್ ಫ್ಯಾಕ್ಟರಿಗೆ ಪುರುಸೊತ್ತೇ ಇಲ್ಲದಾಗಿದೆ.

ಭಾರೀ ಬಂಡವಾಳಶಾಹಿ ಕುಳಗಳು ಲಕ್ಷಕೋಟಿ ಸಾಲ ಮಾಡಿ, ಅಸಲುಬಡ್ಡಿ ಕಟ್ಟದೇ ಬ್ಯಾಂಕುಗಳನ್ನು ಮುಳುಗಿಸಬಹುದು; ಬಳಿಕ ದಿವಾಳಿ ಎಂದು ಘೋಷಿಸಿಕೊಂಡು ಫಾರಿನ್ನಿಗೆ ಓಡಬಹುದು. ಮತ್ಯಾವುದೋ ಬಿಂಬಾನಿ ಕಂಪನಿಯ 17 ಲಕ್ಷಕೋಟಿ ರೂಪಾಯಿ ಸಾಲವನ್ನು ಕಟ್ಟಲಾಗದ ಸಾಲವೆಂದು ಪರಿಗಣಿಸಿ ಸರ್ಕಾರವೇ ಮುಚ್ಚುಮರೆಯಲ್ಲಿ ಮನ್ನಾ ಮಾಡಬಹುದು. ಭವನ-ಮೂರ್ತಿ-ಸ್ಮಾರಕ-ಮಂದಿರ ನಿರ್ಮಾಣಗಳಿಗೆ ಸಾವಿರ ಕೋಟಿ ಖರ್ಚು ಮಾಡಬಹುದು. ದೇವರು, ಧರ್ಮ, ದನದ ಹೆಸರ ರಾಜಕೀಯಕ್ಕೆ ರಕ್ತ ಹರಿಸಬಹುದು. ಇದರ ಬಗೆಗೆ ದೇಶಭಕ್ತರಾರೂ ಸೊಲ್ಲೆತ್ತಲಾರರು. ಆದರೆ ಬಡವರಿಗೆ/ನಿರುದ್ಯೋಗಿ ಪದವೀಧರರಿಗೆ ಕಾಸು ಕೊಟ್ಟರೆ, ಕಡಿಮೆ ಬೆಲೆಗೆ ಹೊಟ್ಟೆ ತುಂಬ ಅನ್ನ ಉಣ್ಣಲು ಕ್ಯಾಂಟೀನುಗಳ ತೆರೆದರೆ, ಮನೆಯೊಡತಿಗೆ ಮತ್ತೆರೆಡು ಸಾವಿರ ಕೊಟ್ಟು ಸ್ವಾಯತ್ತವಾಗಲು ಉಚಿತ ಪ್ರಯಾಣ ಒದಗಿಸಿದರೆ – ಓಹೋಹೋ, ಆರ್ಥಿಕತೆ ಕುಸಿದೇ ಹೋಯಿತೆಂದು ದೊಡ್ಡ ಬೊಬ್ಬೆಯೇಳುತ್ತದೆ. ಅದೂ ಮಹಿಳೆಯರಿಗೆ ಕೊಡುವುದೆಂದರೆ ಮುಗಿದೇ ಹೋಯಿತು. ಮೇಲೆನಿಸಿಕೊಂಡ ವರ್ಗ-ಜಾತಿಗಳ ಮಹಿಳೆಯರು ತಾವು ಸವಲತ್ತು ಬಳಸಿಕೊಂಡ ಮೇಲೂ ಬಡ ಹೆಣುಮಕ್ಕಳಿಗೆ ಕೊಡುವುದರ ಬಗೆಗೆ ಅಸಡ್ಡೆಯ ಮಾತನಾಡುತ್ತಾರೆ. ಇದೆಂಥ ಆಷಾಢಭೂತಿತನ!

ಭಾರತದಲ್ಲಿ ಮೌಲ್ಯವ್ಯವಸ್ಥೆ ಬಲು ದ್ವಂದ್ವಮಯವಾಗಿದೆ. ಉದಾತ್ತತೆ, ನ್ಯಾಯಪ್ರಜ್ಞೆಗಳನ್ನು ಸ್ವಮತಧರ್ಮದ ಮೋಹ, ಸ್ವಜಾತಿ ಪ್ರೇಮಗಳು ನುಂಗಿ ಹಾಕಿವೆ. ಹಣ, ವಸ್ತುಗಳೇ ಮುಖ್ಯವಾಗಿರುವ ಕಾಲಮಾನದಲ್ಲಿ ಬರುವ ತಲೆಮಾರಿಗಾದರೂ ಜಾತಿ, ಧರ್ಮ, ಲಿಂಗತ್ವ ಮೀರಿದ ಮನುಷ್ಯಪ್ರೇಮವನ್ನು ಅರ್ಥಮಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಡಾ. ಎಚ್. ಎಸ್. ಅನುಪಮಾ

ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯರಾಗಿರುವ ಇವರು ತನ್ನ ವೃತ್ತಿಯಂತೆಯೇ ಸಾಹಿತ್ಯವನ್ನೂ ಎದೆಗಾನಿಸಿಕೊಂಡು ಬಹು ಅಮೂಲ್ಯ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಟ್ಟಿದ್ದಾರೆ. ವಿಚಾರವಾದಿ, ಚಿಂತಕಿ, ವಾಗ್ಮಿ, ದಲಿತ-ಮಹಿಳಾಪರ ಆಂದೋಲನಗಳ  ಕಾರ್ಯಕರ್ತೆ, ಸಂಘಟಕಿ, ಕವಿ, ಪ್ರಕಾಶಕಿ ಹೀಗೆ ಜನಪರ ಕಾಳಜಿಗಳನ್ನೇ ಉಸಿರಾಡುತ್ತಿರುವವರು.

ಇದನ್ನೂ ಓದಿ-ಬಿಟ್ಟಿ ಭಾಗ್ಯಗಳಲ್ಲ.. ಜನಸಾಮಾನ್ಯರ ಶ್ರಮ ನುಂಗಿದ್ದಕ್ಕೆ ಪರಿಹಾರ

ನಮ್ಮ ಸಂಸ್ಕೃತಿಯ ಇಬ್ಬಂದಿತನ | ಬಡವರಿಗೆ ನೀಡಿದರೆ ಉಚಿತ, ಕೋಟ್ಯಧೀಶರಿಗೆ ನೀಡಿದರೆ ಪ್ರೋತ್ಸಾಹ
ತಳಸ್ತರದ ಜನರು ಕಟ್ಟುವ ಪರೋಕ್ಷ ತೆರಿಗೆಗಳು, ಇದೇ ಜನರು ಅತ್ಯಂತ ಕಡಿಮೆ ಸಂಬಳಕ್ಕೆ ಮಾರುವ ಶ್ರಮ, ತಮ್ಮ ಸ್ವಂತ ದುಡಿಮೆಯಿಂದ ಖರೀದಿಸುವ ಶಿಕ್ಷಣ, ಆರೋಗ್ಯಗಳು, ತಮ್ಮ ತೆರಿಗೆ ಹಣ ಹಾಗು ಗ್ರಾಹಕ ಶುಲ್ಕ ನೀಡಿ ಬ್ಯಾಂಕ್‍ಗಳು ದಿವಾಳಿ ಆಗುವುದನ್ನು ತಪ್ಪಿಸುವುದು ಇತ್ಯಾದಿ ಮಾರ್ಗಗಳ ಮೂಲಕ ತಳಸ್ತರದ ಜನರು ನಮ್ಮ ಅರ್ಥಿಕತೆ ದಿವಾಳಿ ಆಗುವುದನ್ನು ತಪ್ಪಿಸುತ್ತಿದ್ದಾರೆ -ಎಂ.ಚಂದ್ರ ಪೂಜಾರಿ

ತಳಸ್ತರದ ಜನರಿಗೆ ನೀಡಿದರೆ ಫ್ರೀಬೀಸ್ (ಉಚಿತ) ಕೋಟ್ಯಧೀಶರಿಗೆ ನೀಡಿದರೆ ಸ್ಟಿಮ್ಯುಲಸ್ (ಪ್ರೋತ್ಸಾಹ). ಬಡವರಿಗೆ ನೀಡಿದರೆ ಅನ್‍ಪ್ರೊಡಕ್ಟಿವ್ ಕೋಟ್ಯಧೀಶರಿಗೆ ನೀಡಿದರೆ ಪ್ರೊಡಕ್ಟಿವ್. ಬಡವರಿಗೆ ನೀಡಿದರೆ ಅರ್ಥ ವ್ಯವಸ್ಥೆ ಹದಗೆಡುತ್ತದೆ ಕೋಟ್ಯಧೀಶರಿಗೆ ನೀಡಿದರೆ ಅರ್ಥ ವ್ಯವಸ್ಥೆ ಚೇತರಿಸುತ್ತದೆ. ಇದು ನಮ್ಮ ಸಂಸ್ಕೃತಿಯಲ್ಲಿರುವ ಇಬ್ಬಂದಿತನ. ಇದು ಉಳ್ಳವರ ಕಣ್ಣಲ್ಲಿ ಲೋಕ ನೋಡುವ ಪ್ರವೃತ್ತಿ. ಇದು ಅನುಕೂಲಸ್ಥರ ಪಾದತಳದಲ್ಲಿ ಪರಾಮರ್ಶೆಯನ್ನು ಸಮರ್ಪಿಸುವ ದಾಸ್ಯ ಮನೋಭಾವ. ಇತ್ತೀಚಿನ ಎರಡು ಬೆಳವಣಿಗೆಗಳಲ್ಲಿ ಈ ಇಬ್ಬಂದಿತನವನ್ನು ನೋಡಬಹುದು. ಕರ್ನಾಟಕ ಸರಕಾರದ 5 ಗ್ಯಾರಂಟಿಗಳು ಮತ್ತು ಅನುಕೂಲಸ್ಥರ ಸಾಲಮನ್ನಾ – ನಮ್ಮ ಸಂಸ್ಕೃತಿಯ ಇಬ್ಬಂದಿತನವನ್ನು ಎತ್ತಿ ತೋರಿಸುವ ಇತ್ತೀಚಿನ ಎರಡು ಬೆಳವಣಿಗೆಗಳು. ಈ ಎರಡು ಬೆಳವಣಿಗೆಗಳಿಗೆ ನಮ್ಮ ಮಾಧ್ಯಮ, ಅನುಕೂಲಸ್ಥ ವರ್ಗ, ರಾಜಕೀಯ ಪಕ್ಷಗಳು ತೋರಿಸಿದ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮಲ್ಲಿರುವ ಇಬ್ಬಂದಿತನ ಅರ್ಥವಾಗಬಹುದು.

ಗ್ಯಾರಂಟಿಗಳು

5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರಕಾರ ಸುಮಾರು 50 ಸಾವಿರ ಕೋಟಿ ರೂಗಳನ್ನು ವಿನಿಯೋಜಿಸಬಹುದು. ಈ 50 ಸಾವಿರ ಕೋಟಿ ರೂ.ಗಳ ವಿನಿಯೋಜನೆ ಶೇ.70ರಷ್ಟು ಜನರಿಗೆ ಒಂದಿಷ್ಟು ನೆಮ್ಮದಿಯ ಬದುಕು ನೀಡಬಹುದು.  ಇನ್ನೊಂದು ಬೆಳವಣಿಗೆ ಏನಪ್ಪಾ ಅಂದರೆ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರ ರೂ.12 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಿದೆ. ಯಾರಿಗೆ ಮನ್ನಾ ಮಾಡಿದೆ? ಮೂರು ಹೊತ್ತಿನ ಊಟಕ್ಕೆ ಪರದಾಡುವವರ ಸಾಲ ಮನ್ನಾ ಮಾಡಿಲ್ಲ. ನಮ್ಮ ದೇಶದ ಬೆರಳಣಿಕೆಯಷ್ಟಿರುವ ಅತ್ಯಂತ ಶ್ರೀಮಂತ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಿದ್ದು. ಇದು ಸಾಲದೆಂದು ಉದ್ದೇಶಪೂರಿತವಾಗಿ ಮತ್ತು ಮೋಸ ಮಾಡುವ ಉದ್ದೇಶದಿಂದ ಸಾಲಬಾಕಿ ಇಟ್ಟವರೊಂದಿಗೆ ಚರ್ಚಿಸಿ ಅವರ ಬಾಕಿಸಾಲಕ್ಕೆ ಇತಿಶ್ರೀ ಹಾಡಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜೂನ್ ತಿಂಗಳ ಸುತ್ತೋಲೆ ಬ್ಯಾಂಕ್‍ಗಳಿಗೆ ಆದೇಶಿಸಿದೆ. ಈ ಎರಡು ಬೆಳವಣಿಗೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸುವ.

ಅತ್ಯಲ್ಪ ಮೊತ್ತದಲ್ಲಿ ಅತೀ ಹೆಚ್ಚು ಜನರಿಗೆ ಅಲ್ಪಸ್ವಲ್ಪ ನೆರವು ನೀಡುವ 5 ಗ್ಯಾರಂಟಿಗಳ ಬಗ್ಗೆ ಚರ್ಚಿಸದ, ಟೀಕಿಸದ, ವ್ಯಂಗ್ಯ ಮಾಡದ ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾವನ್ನು ನೋಡಲು ಸಾಧ್ಯವಿಲ್ಲ. ಸವಲತ್ತುಗಳನ್ನು ಉಚಿತ ನೀಡುವುದು ಸರಿಯೇ? ಉಚಿತ ನೀಡುವುದರಿಂದ ನಮ್ಮ ಅರ್ಥ ವ್ಯವಸ್ಥೆ ಹದಗೆಡುವುದಿಲ್ಲವೇ?  ಈ ಸವಲತ್ತುಗಳಿಂದ ಅಭಿವೃದ್ಧಿಗೆ ಕೊಡುಗೆ ಏನು? ಸವಲತ್ತುಗಳನ್ನು ನೀಡಿ ನಮ್ಮ ಅರ್ಥ ವ್ಯವಸ್ಥೆ ಕೂಡ ಶ್ರೀಲಂಕಾ, ಪಾಕಿಸ್ತಾನ ರೀತಿಯಲ್ಲಿ ದಿವಾಳಿಯಾಗುವುದಿಲ್ಲವೇ? ಹೀಗೆ ಸಾಲುಸಾಲು ಪ್ರಶ್ನೆಗಳು. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳ ಸುತ್ತಾ ಚರ್ಚೆ ನಡೆಯುವುದು ಆರೋಗ್ಯಕರ. ಆದರೆ ಇವುಗಳಲ್ಲಿ ಬಹುತೇಕ ಚರ್ಚೆಗಳು ಒನ್ ಸೈಡೆಡ್ ಆಗಿವೆ. ಎಷ್ಟು ಒನ್ ಸೈಡೆಡ್ ಆಗಿವೆ ಎಂದರೆ ಚರ್ಚಿಸುವ ಬಹುತೇಕರಿಗೆ ಇಂತಹ ಸವಲತ್ತು ಪಡೆಯುವ ತಳಸ್ತರದ ಜನರೇ ನಮ್ಮ ಸರಕಾರಗಳ ಖಜಾನೆ ತುಂಬುವುದೆನ್ನುವ ಕನಿಷ್ಠ ಸತ್ಯದ ಅರಿವೂ ಇಲ್ಲ. ನಮ್ಮ ಅರ್ಥ, ರಾಜಕೀಯ, ಸಮಾಜ ಮತ್ತು ಸಂಸ್ಕೃತಿಗಳ ಬುನಾದಿ ಕೂಡ ಇದೇ ತಳಸ್ತರದ ಜನರೆನ್ನುವ ಕಲ್ಪನೆ ಕೂಡ ಇಲ್ಲದವರೇ ಇಂದು ಮಾಧ್ಯಮದಲ್ಲಿ ತುಂಬಿದ್ದಾರೆನ್ನುವ ಶಂಕೆ ಕಾಡುತ್ತಿದೆ. ಈ ಪರವಿರೋಧ (ವಿರೋಧವೇ ಹೆಚ್ಚು) ಚರ್ಚೆ ಚುನಾವಣೆಗೆ ಸೀಮಿತವಾಗಿಲ್ಲ; ಅನುಷ್ಠಾನಕ್ಕೂ ವಿಸ್ತರಿಸಿದೆ. ಮಹಿಳೆಯರ ಜಿರೋ ಟಿಕೇಟ್ ಬಸ್ ಪ್ರಯಾಣ ಮೊದಲು ಅನುಷ್ಠಾನಗೊಂಡ ಯೋಜನೆ. ಅನುಷ್ಠಾನಗೊಂಡ ಕೆಲವೇ ದಿನಗಳಲ್ಲಿ ಪ್ರಯಾಣಿಸಿದ ಒಟ್ಟು ಮಹಿಳೆಯರು ಮತ್ತು ಅದರಿಂದ ಕೆಎಸ್‍ಆರ್‍ಟಿಸಿಗೆ ಆದ ಹಲವು ಕೋಟಿ ರೂಗಳ ʼನಷ್ಟʼ ದ ಲೆಕ್ಕಚಾರ ಎಲ್ಲರಿಗೂ ತಲುಪಿದೆ!

ನಷ್ಟದ ಲೆಕ್ಕಚಾರ ಮಾತ್ರವಲ್ಲ; ಪ್ರಯಾಣಿಸುವ ಮಹಿಳೆಯರ ಬಗ್ಗೆ ಟೀಕೆಗಳು, ವ್ಯಂಗ್ಯಗಳು ಹರಿದು ಬಂದವು. ಮಹಿಳೆಯರ ನೂಕುನುಗ್ಗಲಿನಲ್ಲಿ ಮುರಿದ ಬಸ್‍ನ ಬಾಗಿಲು, ಕಿಟಕಿ ಮೂಲಕ ಬಸ್ ಏರುವ ಮಹಿಳೆಯರು, ಚಾಲಕರ ಸೀಟನ್ನೂ ಆಕ್ರಮಿಸಿದ ಮಹಿಳೆಯರು, ಮಹಿಳೆಯರಿಂದ ತುಂಬಿದ ಬಸ್ಸಲ್ಲಿ ಪುರುಷರು ಪ್ರಯಾಣಿಸಲು ಪರದಾಡುವುದು, ಮಹಿಳೆ ಸತತ ಪ್ರಯಾಣಿಸುವುದರಿಂದ ಮನೆಯಲ್ಲೂ ಪರದಾಡುವ ಪುರುಷರು, ಜೀರೋ ಟಿಕೇಟ್ ಪ್ರಯಾಣದಿಂದ ನೊಂದ ಆಟೋ ಚಾಲಕನ ಪ್ರಲಾಪ, ಜಿರೋ ಟಿಕೇಟ್ ಪ್ರಯಾಣದಿಂದ ನಷ್ಟ ಅನುಭವಿಸುವ ಖಾಸಗಿ ಬಸ್ ಮಾಲೀಕರು ಹೀಗೆ ಸಾಲು ಸಾಲು ಟೀಕೆಗಳು, ವ್ಯಂಗ್ಯಗಳು ಟಿವಿ, ಪತ್ರಿಕೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸತತ ಹರಿದಾಡುತ್ತಲೇ ಇವೆ. ಹೀಗೆ ಮಹಿಳೆಯರ ಜೀರೋ ಟಿಕೇಟ್ ಪ್ರಯಾಣ ಎಂದರೆ ಸರಕಾರಕ್ಕೆ ನಷ್ಟ, ಪುರುಷರಿಗೆ ಅನನುಕೂಲ, ಅನ್‍ಪ್ರೊಡಕ್ಟಿವ್ ಎನ್ನುವ ಚಿತ್ರಣ ಕೊಡಲು ಮೀಡಿಯಾಗಳು ಸತತ ಪ್ರಯತ್ನಿಸುತ್ತಿವೆ.

ಜುಲೈ ಮೊದಲ ವಾರದಲ್ಲಿ ಆರಂಭಿಸಬೇಕಿದ್ದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರವೇ ಅಡ್ಡಿ ಪಡಿಸುತ್ತಿದೆ. ರಾಜ್ಯದ ಅನ್ನಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಮಾಸಿಕ 2.28 ಲಕ್ಷಟನ್ ಅಕ್ಕಿ ಬೇಕಿದೆ. ಇದನ್ನು ಕೆಜಿಗೆ ರೂ.36.60 ದರದಲ್ಲಿ ಪೂರೈಸಲು  ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಫ್‍ಸಿಐ) ಒಪ್ಪಿತ್ತು. ಆದರೆ ಕೇಂದ್ರ ಸರಕಾರದ ಸೂಚನೆ ಮೇರೆಗೆ ಈಗ ಪೂರೈಸಲು ನಿರಾಕರಿಸುತ್ತಿದೆ. ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಅವರದ್ದೇ ಕೇಂದ್ರ ಸರಕಾರವನ್ನು ಅಕ್ಕಿ ಕೊಡಲು ಒತ್ತಾಯಿಸುವ ಬದಲು ಬಿಜೆಪಿ ನಾಯಕರು ರಾಜ್ಯ ಸರಕಾರವನ್ನು ಯೋಜನೆ ಅನುಷ್ಟಾನಗೊಳಿಸಲು  ಒತ್ತಾಯಿಸುತ್ತಿದ್ದಾರೆ. ಹೀಗೆ ಅನ್ನಭಾಗ್ಯ ಯೋಜನೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರ ಹೇಳಿಕೆಗಳಲ್ಲಿ ಲಾಜಿಕ್ ಹುಡುಕುವುದೇ ಕಷ್ಟವಾಗಿದೆ. ಇವೆಲ್ಲ ನಮ್ಮ ಸಮಾಜದ ಬಹುತೇಕರಿಗೆ ತಲುಪುವ ಅಲ್ಪಸ್ವಲ್ಪ ನೆರವುಗಳಿಗೆ ನಮ್ಮ ಮಾಧ್ಯಮ, ಅನುಕೂಲಸ್ಥ ವರ್ಗ, ಹಾಗು ರಾಜಕೀಯ ಪಕ್ಷಗಳು ತೋರಿಸುವ ಪ್ರತಿಕ್ರಿಯೆ.

ಸಾಲಮನ್ನಾ

ಎರಡನೇ ಬೆಳವಣಿಗೆ – ಅನುಕೂಲಸ್ಥರ ಸಾಲಮನ್ನಾದ ಬಗ್ಗೆ ಟಿವಿ, ಪತ್ರಿಕೆಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಚರ್ಚೆ ಆಗಿದೆ? ಇವುಗಳ ಬಗ್ಗೆ ಟೀಕೆಗಳು, ವಿಡಂಬನೆಗಳು ಎಷ್ಟು ಬಂದಿವೆ? ಎಷ್ಟು ಜನರಿಗೆ ಈ ಸಾಲಮನ್ನಾದ ಬಗ್ಗೆ ಕನಿಷ್ಠ ಮಾಹಿತಿ ಇದೆ? ಏನೇನೂ ಇಲ್ಲ ಎನ್ನುವಷ್ಟು ಕಡಿಮೆ ಚರ್ಚೆ ನಡೆದಿದೆ. ಆದುದರಿಂದ ಮೊದಲು ಅನುಕೂಲಸ್ಥರ ಸಾಲಮನ್ನಾದ ಮೇಲೆ ಗಮನ ಹರಿಸುವ. ಕೆಟ್ಟ ಸಾಲಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲೂ ಈ ಸಮಸ್ಯೆ ಇದೆ. ಇಂಟರ್‍ ನ್ಯಾಶನಲ್ ಮಾನಿಟರಿ ಫಂಡ್ (IMF) ರಿಪೋರ್ಟ್ 2021ರ ಪ್ರಕಾರ ಅಮೇರಿಕಾ, ಬ್ರಿಟನ್‍ಗಳಲ್ಲಿ ಒಟ್ಟು ಸಾಲದ ಶೇ.1ರಷ್ಟು ಕೆಟ್ಟ ಸಾಲ ಇತ್ತು. ನಮ್ಮ ನೆರೆಕರೆಯ ದೇಶಗಳಾದ ಮಲೇಶಿಯಾದಲ್ಲಿ ಶೇ.1.7%, ಇಂಡೊನೇಶಿಯಾದಲ್ಲಿ ಶೇ.2.6 ಮತ್ತು ಚೈನಾದಲ್ಲಿ ಶೇ.1.7%ರಷ್ಟು ಕೆಟ್ಟ ಸಾಲ ಇತ್ತು. ಅನುಕೂಲಸ್ಥ ದೇಶಗಳ ಪೈಕಿ ರಶ್ಯಾದಲ್ಲಿ ಅತೀ ಹೆಚ್ಚು (ಶೇ.8.3) ಕೆಟ್ಟ ಸಾಲ ಇತ್ತು. ಇವರೆಲ್ಲರಿಗೆ ಹೋಲಿಸಿದರೆ ಭಾರತದ ಕೆಟ್ಟ ಸಾಲದ ಪ್ರಮಾಣ 2018ರಲ್ಲಿ ಅತೀ ಹೆಚ್ಚು (ಶೇ.11.46) ಇತ್ತು. ಕೆಟ್ಟ ಸಾಲ ಇತ್ತೀಚಿನ ಸಮಸ್ಯೆಯಲ್ಲ. ಹಿಂದಿನಿಂದಲೂ ಇತ್ತು. ಹಿಂದೆ ಸಾವಿರ ಕೋಟಿಗಳಲ್ಲಿದ್ದ ಕೆಟ್ಟ ಸಾಲ ನಂತರದ ದಿನಗಳಲ್ಲಿ ಲಕ್ಷ ಕೋಟಿ ದಾಟಿದೆ. ಬಿಜೆಪಿ ಕೇಂದ್ರದಲ್ಲಿ ಆಧಿಕಾರಕ್ಕೆ ಬಂದ ವರ್ಷ ರೂ.2,63,015 ಕೋಟಿ ಇದ್ದ ಕೆಟ್ಟ ಸಾಲ 2020ರ ವೇಳೆಗೆ ಅದು ರೂ.8,96,082 ಕೋಟಿಗೆ ಏರಿದೆ.

ಅತೀ ಹೆಚ್ಚು ಕೆಟ್ಟ ಸಾಲ ಸೃಷ್ಟಿಸಿದವರು ಯಾರು? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2018ರ ಮಾಹಿತಿ ಪ್ರಕಾರ ದೇಶದ ಅತೀ ದೊಡ್ಡ 100 ಸಾಲಗಾರರು 4,46,158 ಕೋಟಿ (ಪ್ರತಿಯೊಬ್ಬರು ರೂ.4,461 ಕೋಟಿ ಮತ್ತು ಒಟ್ಟು ಸಾಲದ ಶೇ.50ರಷ್ಟು) ರೂಗಳ ಕೆಟ್ಟಸಾಲ ಸೃಷ್ಟಿಸಿದ್ದಾರೆ. 2016ರಲ್ಲಿ ಶೇ.58ರಷ್ಟು ಸಾಲ ದೊಡ್ಡ ಸಾಲಗಾರರಿಗೆ ಹೋಗಿದೆ ಮತ್ತು ಶೇ.86ರಷ್ಟು ಕೆಟ್ಟಸಾಲವನ್ನು ಇವರೇ ಸೃಷ್ಟಿಸಿದ್ದಾರೆ. ನಂತರದ ವರ್ಷಗಳಲ್ಲಿ (2018ರಲ್ಲಿ) ಇವರಿಗೆ ನೀಡಿದ ಸಾಲದ ಪ್ರಮಾಣ ಶೇ.53ಕ್ಕೆ ಇಳಿದಿದೆ. ಆದರೆ ಇವರು ಸೃಷ್ಟಿಸಿದ ಕೆಟ್ಟ ಸಾಲದ ಪ್ರಮಾಣ ಇಳಿಕೆ ಕಂಡಿಲ್ಲ; ಶೇ.82ರಷ್ಟಿತ್ತು. 2020ರ ವೇಳೆಗೆ ಇವರಿಗೆ ನೀಡಿದ ಸಾಲದ ಪ್ರಮಾಣ ಶೇ.51ಕ್ಕೆ ಇಳಿದಿತ್ತು ಮತ್ತು ಇವರು ಸೃಷ್ಟಿಸಿದ ಕೆಟ್ಟ ಸಾಲದ ಪ್ರಮಾಣ ಶೇ.74ಕ್ಕೆ ಇಳಿದಿತ್ತು. ಈ ಎಲ್ಲ ಅಂಕಿಅಂಶಗಳು ಒಂದೆರಡು ಅಂಶಗಳತ್ತ ಬೊಟ್ಟು ಮಾಡುತ್ತಿವೆ. ಒಂದು, ಸರಕಾರಿ ಬ್ಯಾಂಕ್‍ಗಳ ಸಾಲದ ಬಹುಪಾಲು ಅತೀ ಕಡಿಮೆ ಸಂಖ್ಯೆಯಲ್ಲಿರುವ ದೊಡ್ಡ ಕೃಷಿ, ವ್ಯಾಪಾರ, ಉದ್ದಿಮೆಗಳ ಪಾಲಾಗುತ್ತಿದೆ. ಎರಡು, ಇವರು ಸಾಲ ಪಡೆಯುವುದರಲ್ಲಿ ಮುಂದೆ ಇದ್ದರೂ ಸಾಲ ಕಟ್ಟುವುದರಲ್ಲಿ ಹಿಂದೆ ಇದ್ದಾರೆ. ಮೂರು, ಇದರಿಂದಾಗಿ ಅತೀ ಹೆಚ್ಚು (ಶೇ.80ರಷ್ಟು) ಕೆಟ್ಟ ಸಾಲವನ್ನು ಇವರೇ ಸೃಷ್ಟಿಸಿದ್ದಾರೆ.

ಕೆಟ್ಟ ಸಾಲವನ್ನು ಬ್ಯಾಂಕ್ ಬ್ಯಾಲೆನ್ಸ್‌ಶೀಟ್‌ ನಿಂದ ಹೊರಗಿಡುವುದನ್ನು ಬ್ಯಾಂಕ್‍ಗಳ ಪರಿಭಾಷೆಯಲ್ಲಿ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡುವುದೆನ್ನುತ್ತಾರೆ. ಹಣಕಾಸು ಮಂತ್ರಿಗಳ ಪ್ರಕಾರ ರೈಟ್ ಆಫ್ ಅಂದರೆ ಸಾಲ ಮನ್ನಾ ಅಲ್ಲ.  ಇವು ಬ್ಯಾಂಕ್ ಬ್ಯಾಲೆನ್ಸ್‌ಶೀಟ್‍ ನಲ್ಲಿ ಇರುವುದಿಲ್ಲ ಅಷ್ಟೇ. ಆದರೆ ಬ್ಯಾಂಕ್‍ಗಳ ಲೆಕ್ಕಪುಸ್ತಕಗಳಲ್ಲಿ ಇವುಗಳ ದಾಖಲೆ ಇರುತ್ತದೆ ಮತ್ತು ಬೇರೆ ಬೇರೆ ದಾರಿಗಳ ಮೂಲಕ ರೈಟ್ ಆಫ್ ಆಗಿರುವ ಕೆಟ್ಟ ಸಾಲವನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸಲಾಗುತ್ತದೆ. ಕೆಟ್ಟ ಸಾಲದಂತೆ ಕೆಟ್ಟ ಸಾಲದ ರೈಟ್ ಆಫ್ ಕೂಡ ಹಿಂದೆ ಕೆಲವು ಸಾವಿರ ಕೋಟಿಗಳಲ್ಲಿತ್ತು – 2014ರಲ್ಲಿ ರೂ.32,595 ಕೋಟಿ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಸಾಲದ ರೈಟ್ ಆಫ್ ಕೂಡ ಹೆಚ್ಚುತ್ತಿದೆ. ಕಳೆದ 5 ವರ್ಷಗಳಲ್ಲಿ ರೂ.9,91,640 ಕೋಟಿ ಕೆಟ್ಟ ಸಾಲ ರೈಟ್ ಆಫ್ ಆಗಿದೆ. ಕೆಟ್ಟಸಾಲದ ರೈಟ್‍ಆಫ್ ಸಾಲಮನ್ನಾ ಅಲ್ಲ ಎನ್ನುವ ಸರಕಾರದ ವಾದ ಎಷ್ಟು ಸರಿ?  2014-15ರಿಂದ 2021-22ರ ಅವಧಿಯಲ್ಲಿ ಒಟ್ಟು ರೂ.66.5 ಲಕ್ಷ ಕೋಟಿ ಕೆಟ್ಟ ಸಾಲ ಸೃಷ್ಟಿಯಾಗಿದೆ. ಇದರಲ್ಲಿ ರೂ.14.5 ಲಕ್ಷ ಕೋಟಿ ಕೆಟ್ಟಸಾಲವನ್ನು ರೈಟ್ ಆಫ್ ಮಾಡಲಾಗಿದೆ. ರೈಟ್ ಆಫ್ ಆಗಿರುವ ಕೆಟ್ಟ ಸಾಲದ ಶೇ.13ರಷ್ಟು ಅಥವಾ ರೂ.2.9 ಲಕ್ಷ ಕೋಟಿ ಮಾತ್ರ ವಸೂಲಾಗಿದೆ. ಅಂದರೆ ಹೆಚ್ಚು ಕಡಿಮೆ ರೂ.12 ಲಕ್ಷ ಕೋಟಿಯಷ್ಟು ಕೆಟ್ಟ ಸಾಲ ಹಿಂದಕ್ಕೆ ಬರಲೇ ಇಲ್ಲ. ಇದು ಸಾಲ ಮನ್ನಾ ಅಲ್ಲವೇ?

ಬ್ಯಾಂಕ್ ಸುಧಾರಣೆ

ಅನುಕೂಲಸ್ಥರ ಕೆಟ್ಟ ಸಾಲದಿಂದ ಬಸವಳಿದ ಬ್ಯಾಂಕ್‍ಗಳನ್ನು ಸುಧಾರಿಸಲು ಎರಡು ದಾರಿಗಳನ್ನು ಅನುಸರಿಸಲಾಗಿದೆ. ಒಂದು, ಸರಕಾರಿ ಬ್ಯಾಂಕ್‍ಗಳಿಗೆ ಸಾಮಾನ್ಯ ಜನರು ಕಟ್ಟುವ ತೆರಿಗೆ ಹಣ ತುಂಬುವುದು. ಎರಡು, ಬ್ಯಾಂಕಿನ ಸಾಮಾನ್ಯ ಗ್ರಾಹಕರಿಂದ  ಹಲವು ವಿಧದ ಸೇವಾ ಶುಲ್ಕಗಳನ್ನು ವಸೂಲು ಮಾಡುವುದು. ಜನ ಸಾಮಾನ್ಯರ ತೆರಿಗೆ ಹಣವನ್ನು ಅನುಕೂಲಸ್ಥರು ಭರಿದು ಮಾಡಿದ ಬ್ಯಾಂಕ್ ಖಜಾನೆ ಭರ್ತಿ ಮಾಡಲು ಬಳಸಲಾಗಿದೆ. 2008-2013ರ ನಡುವೆ  ರೂ.47,734 ಕೋಟಿಯಷ್ಟು ತೆರಿಗೆ ಹಣವನ್ನು ಸರಕಾರಿ ಬ್ಯಾಂಕ್‍ಗಳಿಗೆ ತುಂಬಲಾಗಿದೆ. ಕೇಂದ್ರ ಸರಕಾರದ ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಫಿನಾನ್ಸ್ ಅವರ ಹೇಳಿಕೆ ಪ್ರಕಾರ 2016-17 ಮತ್ತು 2020-21ರ ನಡುವೆ ಸರಕಾರ ರೂ.3.10 ಲಕ್ಷ ಕೋಟಿ ಹಣವನ್ನು ಬ್ಯಾಂಕ್‍ಗಳಿಗೆ ತುಂಬಿದೆ. ಇದರಲ್ಲಿ ರೂ.34,997 ಕೋಟಿ ಬಜೆಟ್ ಎಲೊಕೇಶನ್ ಮತ್ತು ರೂ.2.76 ಲಕ್ಷ ಕೋಟಿ ರಿಕ್ಯಾಪಿಟಲೈಸೇಶನ್ ಬಾಂಡ್. ಬಾಂಡ್ ಮೂಲಕ ಬಂಡವಾಳ ತುಂಬುವುದೆಂದರೆ ಸಾಲ ಮಾಡಿ ತುಂಬುವುದೆನ್ನುವ ಅರ್ಥ. ಸರಕಾರ ನೀಡುವ ಬಾಂಡ್‍ನ ಮೊತ್ತ ಮುಂದಿನ ವರ್ಷಗಳಲ್ಲಿ ಸರಕಾರವೇ ತೆರಿಗೆ ಹಣದಿಂದ ಸಂದಾಯ ಮಾಡಬೇಕು. ಇನ್ನೊಂದು ಮೂಲದ ಅಂಕಿಅಂಶ ಪ್ರಕಾರ 2014-2020ರ ನಡುವೆ ಸರಕಾರ ರೂ.3,40,375 ಕೋಟಿ ತೆರಿಗೆ ಹಣವನ್ನು ಬ್ಯಾಂಕ್‍ಗಳಿಗೆ ಸರಕಾರ ತುಂಬಿದೆ.

ಎರಡನೇ ವಿಧಾನ, ಸಾಮಾನ್ಯ ಗ್ರಾಹಕರಿಂದ ಸೇವಾಶುಲ್ಕ ಸಂಗ್ರಹಿಸುವುದು. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಕ್ಲಿಯರೆನ್ಸ್ ಚಾರ್ಜ್ (ರೂ.150), ಡುಪ್ಲಿಕೇಟ್ ಪಾಸ್ ಬುಕ್ ಚಾರ್ಜ್ (ರೂ.50-150), ಕಾರ್ಡ್ ರಿಪ್ಲೇಸ್‍ಮೆಂಟ್ ಚಾರ್ಜ್ (ರೂ.50-100) ಹೀಗೆ ಇವತ್ತು ಬ್ಯಾಂಕ್‍ಗಳಲ್ಲಿ ಎಲ್ಲ ಸೇವೆಗಳಿಗೂ ಶುಲ್ಕ ಇದೆ. ಊಳಿತಾಯ ಖಾತೆ ಹೊಂದಿರುವ ಗಿರಾಕಿಗಳಿಗೆ ವರ್ಷಕ್ಕೆ ಅಥವಾ ಆರು ತಿಂಗಳಿಗೆ 25 ಚೆಕ್‍ಲೀಫ್‍ಗಳು ಮಾತ್ರ ಉಚಿತ. ಇದಕ್ಕಿಂತ ಹೆಚ್ಚಿನ ಚೆಕ್‍ಲೀಫ್‍ಗಳು ಬೇಕಿದ್ದರೆ ಗಿರಾಕಿಗಳು ಪ್ರತಿ ಚೆಕ್‍ಬುಕ್‍ಗೆ ರೂ.75 ಸಂದಾಯ ಮಾಡಬೇಕಾಗಿದೆ. ಡೆಬಿಟ್ ಕಾರ್ಡ್ ಹೊಂದಿದವರು ಪ್ರತಿ ವ್ಯವಹಾರಕ್ಕೂ ಸಂದೇಶ (ಎಸ್‍ಎಮ್‍ಎಸ್) ಪಡೆಯಲು  ರೂ.15 ಸಂದಾಯ ಮಾಡಬೇಕು. ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತವನ್ನು ಏರಿಸಲಾಗಿದೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಜಮೆ ಮಾಡಿರುವ ಉಳಿತಾಯ ಖಾತೆದಾರರು ರೂ.100 ದಂಡ ತೆರಬೇಕಾಗಿದೆ. ಲಾಕರ್ ಚಾರ್ಜ್‌ಗಳನ್ನು ಏರಿಸಲಾಗಿದೆ – ಸಣ್ಣ ಲಾಕರ್‌ಗಳಿಗೆ ರೂ.1,500 ಮತ್ತು ದೊಡ್ಡ ಲಾಕರ್‌ಗಳಿಗೆ ರೂ.9,000 ಬಾಡಿಗೆ ಪಾವತಿಸಬೇಕು. ಖಾತೆದಾರರು ಮೂರನೇ ವ್ಯಕ್ತಿಗೆ ರೂ.25,000ಕ್ಕಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲು ರೂ.150 ಶುಲ್ಕ ನೀಡಬೇಕು.

ಇದನ್ನೂ ಓದಿ-ಬಡ ಜನರಿಗೆ ಅಕ್ಕಿ ನಿರಾಕರಿಸುವುದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ

ಬಿಡಿಬಿಡಿಯಾಗಿ ನೋಡಿದರೆ ಮೇಲಿನ ಶುಲ್ಕಗಳು ಸಣ್ಣ ಮೊತ್ತಗಳಾಗಿವೆ. ಆದರೆ ಬ್ಯಾಂಕ್ ಖಾತೆದಾರರ ಸಂಖ್ಯೆಯನ್ನು ನೋಡಿದರೆ ಈ ಶುಲ್ಕಗಳಿಂದ ಬ್ಯಾಂಕ್‍ಗಳು ಸಂಗ್ರಹಿಸುವ ಅಗಾಧ ಪ್ರಮಾಣದ ಸಂಪತ್ತಿನ ಅರಿವಾಗಬಹುದು. ಸೇವಾ ಶುಲ್ಕಗಳು ಕೆಲವು ನೂರು ರುಪಾಯಿಗಳಲ್ಲಿವೆ. ಆದರೆ ಹಲವು ಕೋಟಿ ಸಂಖ್ಯೆಯಲ್ಲಿರುವ ಗ್ರಾಹಕರಿಂದ ಕೆಲವು ನೂರು ರುಪಾಯಿ ಸೇವಾ ಶುಲ್ಕ ಸಂಗ್ರಹಿಸಿದರೆ ಕೆಲವು ಲಕ್ಷ ಕೋಟಿ ದಾಟಬಹುದು. ಒಬ್ಬರಿಂದ ನೂರು ರುಪಾಯಿಯಂತೆ ಸಂಗ್ರಹಿಸಿದರೂ ಒಂದು ಕೋಟಿ ಗ್ರಾಹಕರಿಂದ ಒಂದು ನೂರು ಕೋಟಿ ಸಂಗ್ರಹವಾಗುತ್ತದೆ. ಹತ್ತು ಕೋಟಿ ಗ್ರಾಹಕರಿಂದ ಒಂದು ಸಾವಿರ ಕೋಟಿ ಸಂಗ್ರಹವಾಗುತ್ತದೆ. ನೂರರ ಬದಲು ಒಬ್ಬರಿಂದ ಒಂದು ಸಾವಿರ ಸಂಗ್ರಹಿಸಿದರೆ ಹತ್ತು ಕೋಟಿ ಗ್ರಾಹಕರಿಂದ ಹತ್ತು ಸಾವಿರ ಕೋಟಿ ಸಂಗ್ರಹಿಸಬಹುದು. 2017ರ ವೇಳೆಗೆ ಕರೆಂಟ್ ಮತ್ತು ಸೇವಿಂಗ್ಸ್ ಎಕೌಂಟ್ ಸೇರಿಸಿ 122 ಕೋಟಿ ಖಾತೆಗಳಿದ್ದವು. ಇದರಿಂದ 31 ಕೋಟಿ ಜನಧನ್ ಖಾತೆಗಳನ್ನು ಮೈನಸ್ ಮಾಡಿದರೆ 91 ಕೋಟಿ ಬ್ಯಾಂಕ್ ಖಾತೆಗಳಿದ್ದವು. ಇದರಿಂದ 21 ಕೋಟಿ ಮಧ್ಯಮ ಮತ್ತು ಶ್ರೀಮಂತ ವರ್ಗದ ಖಾತೆಗಳನ್ನು ಮೈನಸ್ ಮಾಡಿದರೆ ಹೆಚ್ಚುಕಡಿಮೆ 70 ಕೋಟಿ ಸಾಮಾನ್ಯ ಗ್ರಾಹಕರ ಖಾತೆಗಳಿದ್ದವೆಂದು ಊಹಿಸಬಹುದು.

ಹತ್ತು ಕೋಟಿ ಗ್ರಾಹಕರಿಂದ ವಾರ್ಷಿಕ ಹತ್ತು ಸಾವಿರ ಕೋಟಿ ಸೇವಾ ಶುಲ್ಕ ಸಂಗ್ರಹಿಸಬಹುದಾದರೆ 70 ಕೋಟಿ ಗ್ರಾಹಕರಿಂದ 70 ಸಾವಿರ ಕೋಟಿ ಸಂಗ್ರಹಿಸಬಹುದು. ಈ ಊಹೆಯನ್ನ ಸಮರ್ಥಿಸುವ ಕೆಲವು ಅಂಕಿಅಂಶಗಳಿವೆ. 2017-18ರಲ್ಲಿ 21 ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳು ಮತ್ತು 3 ಖಾಸಗಿ ಬ್ಯಾಂಕ್‍ಗಳು ಒಂದೇ ವರ್ಷ ರೂ.5000 ಕೋಟಿಯಷ್ಟು ಮೊತ್ತವನ್ನು ಕನಿಷ್ಠ ಮೊತ್ತಕ್ಕಿಂತ ಕಡಿಮೆ ಜಮೆ ಇರುವ ಉಳಿತಾಯ ಖಾತೆದಾರರಿಂದ ಸಂಗ್ರಹಿಸಿದ್ದಾರೆ. 2015-18ರಲ್ಲಿ ಐದು ಬ್ಯಾಂಕ್‍ಗಳು ರೂ.10,391 ಕೋಟಿಯಷ್ಟು ಸೇವಾ ಶುಲ್ಕವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ರೂ. 6,246 ಕೋಟಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿರುವುದಕ್ಕೆ ಮತ್ತು ರೂ.4,145 ಕೋಟಿ ಎಟಿಎಮ್ ಸೇವಾಶುಲ್ಕ.  ಎಲ್ಲ ಸೇವಾಶುಲ್ಕಗಳನ್ನು ಸೇರಿಸಿದರೆ ಪ್ರತಿ ಬ್ಯಾಂಕ್ ಕೂಡ ಕೆಲವು ಸಾವಿರ ಕೋಟಿ ಆದಾಯವನ್ನು ಇಂತಹ ಸೇವಾ ಶುಲ್ಕದಿಂದಲೇ ಪಡೆಯುತ್ತದೆ.

ನಮ್ಮ ಸಮಾಜದ ತಳಸ್ತರಕ್ಕೆ ಸೇರಿದ ಶೇ.70ರಷ್ಟು ಜನರಿಗೆ 50 ಸಾವಿರ ಕೋಟಿ ವಿನಿಯೋಜಿಸಿ ನೀಡುವ ಗ್ಯಾರಂಟಿಗಳ ವಿರುದ್ಧ ಸತತ ಕಿರುಚಾಡುವ ಮಾಧ್ಯಮಗಳು, ಪಕ್ಷಗಳು ಬೆರಳೆಣಿಕೆಯಷ್ಟು ಕೋಟ್ಯಧೀಶ ಉದ್ಯಮಿಗಳಿಗೆ ನೀಡುವ ಲಕ್ಷ ಕೋಟಿ ಸಾಲಮನ್ನಾದ ಬಗ್ಗೆ ಚರ್ಚಿಸುವುದಿಲ್ಲ. ಇಷ್ಟೊಂದು ದೊಡ್ಡ ಮೊತ್ತದ ಸಾಲ ಮನ್ನಾ ಮತ್ತು ಇದು ನಮ್ಮ ಬ್ಯಾಂಕಿಂಗ್ ಮತ್ತು ಅರ್ಥ ವ್ಯವಸ್ಥೆ ಮಾಡುವ ಪರಿಣಾಮದ ಬಗ್ಗೆ ಚರ್ಚೆಗಳೇ ಇಲ್ಲ. ಇವರೆಲ್ಲ ಸಾಲ ಕಟ್ಟಲು ಸಾಮರ್ಥ್ಯ ಇಲ್ಲದವರಲ್ಲ; ಉದ್ದೇಶಪೂರಿತವಾಗಿಯೇ ಸಾಲ ಬಾಕಿ ಇಟ್ಟವರು. ಇದನ್ನು ಅರಿತೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವರೊಂದಿಗೆ ಚೌಕಾಶಿ ಮಾಡಿ ಏನು ಹಿಂದಕ್ಕೆ ಬರುತ್ತದೋ ಅದರಲ್ಲೇ ತೃಪ್ತಿ ಪಡಲು ಪ್ರಯತ್ನಿಸುತ್ತಿದೆ. ಇವರ ಸಾಲದಿಂದ ಬಸವಳಿದ ಬ್ಯಾಂಕ್‍ನ್ನು ಸುಧಾರಿಸಲು ನಮ್ಮ ತೆರಿಗೆ ಹಣವನ್ನು ಬಳಸಲಾಗುತ್ತಿದೆ. ಜೊತೆಗೆ ಸಾಮಾನ್ಯ ಗ್ರಾಹಕರಿಂದ ಸೇವಾಶುಲ್ಕದ ಹೆಸರಲ್ಲಿ ಕೋಟ್ಯಂತರ ರುಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಹೀಗೆ ತಳಸ್ತರದ ಜನರು ಕಟ್ಟುವ ಪರೋಕ್ಷ ತೆರಿಗೆಗಳು, ಇದೇ ಜನರು ಅತ್ಯಂತ ಕಡಿಮೆ ಸಂಬಳಕ್ಕೆ ಮಾರುವ ಶ್ರಮ, ತಮ್ಮ ಸ್ವಂತ ದುಡಿಮೆಯಿಂದ ಖರೀದಿಸುವ ಶಿಕ್ಷಣ, ಆರೋಗ್ಯಗಳು, ತಮ್ಮ ತೆರಿಗೆ ಹಣ ಹಾಗು ಗ್ರಾಹಕ ಶುಲ್ಕ ನೀಡಿ ಬ್ಯಾಂಕ್‍ಗಳು ದಿವಾಳಿ ಆಗುವುದನ್ನು ತಪ್ಪಿಸುವುದು ಇತ್ಯಾದಿ ಮಾರ್ಗಗಳ ಮೂಲಕ ತಳಸ್ತರದ ಜನರು ನಮ್ಮ ಅರ್ಥಿಕತೆ ದಿವಾಳಿ ಆಗುವುದನ್ನು ತಪ್ಪಿಸುತ್ತಿದ್ದಾರೆ.

ಎಂ.ಚಂದ್ರ ಪೂಜಾರಿ

ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು

ಇದನ್ನೂ ಓದಿ-ಅಕ್ಕಿ ನಿರಾಕರಣೆ | ಒಕ್ಕೂಟ ಸರಕಾರದ ಕುತಂತ್ರ