ಹೆಣ್ಣೋಟ – Peepal Media

ಅಪರಾಧಗಳಿಗಿಂತ ಭಯಬೀತಗೊಳಿಸುವ ಆದೇಶಗಳು
“..ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ ಪ್ರಯತ್ನ, ಸಿದ್ಧತೆ, ಅತ್ಯಾಚಾರ ಎಲ್ಲವೂ ನೀಡುವ ಆಘಾತ ಅಗಾಧವಾಗಿ ಕಾಡುವಂತದ್ದು. ಮಕ್ಕಳ ಎಳೆಯ ಮನಸ್ಸಿಗೆ ತನ್ನವರಲ್ಲದವರು ಮುಟ್ಟಿದರೆ, ಅಥವಾ ಘಾಸಿಯಾದರೆ ಅದರ ಪರಿಣಾಮಗಳು ಹಲವಷ್ಟು..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

“ದಿನಾ ದಿನಾ ನ್ಯೂಸ್‌ ನೋಡ್ತಿದ್ರೆ ಮಕ್ಳೇ ಮಾಡ್ಕೊಬಾರ್ದು ಅನ್ಸತ್ತೆ ಕಣೇ. ಸ್ವಂತ ತಾಯಿ ತಂದೆ, ಅಜ್ಜಿ ತಾತನ ಜೊತೆ ಕೂಡ ಸೇಫ್‌ ಅನಿಸದೇ ಇರೋ ಈ ಕಾಲದಲ್ಲಿ ಮಕ್ಕಳನ್ನ ಹೊರಗೆ ಕಳಿಸಿ ದಿನಾ ದಿನಾ ಆತಂಕದಲ್ಲಿ ಸಾಯೋದಾ ಹೇಳು” ಗೆಳತಿಯೊಬ್ಬಳು ಮಾತಾಡುವಾಗ ಸುತ್ತಲಿದ್ದ ಎಲ್ಲ ತಾಯಂದಿರಿಗೂ ಅದೇ ಆತಂಕ ಎದೆಭಾರವಾಗಿಸ್ತಾ ಇದ್ದಿದ್ದು ಸ್ಪಷ್ಟವಾಗಿತ್ತು.

“ಎಷ್ಟು ಹುಷಾರಾಗಿದ್ರೂ ಸಾಕಾಗೋದಿಲ್ಲ, ಒಂದು ನಿಮಿಷ ಮಕ್ಕಳು ಕಾಣದಿದ್ರೂ ಆತಂಕ ಆಗತ್ತೆ, ಸ್ಕೂಲಿಗೆ ಕಳಿಸಿದ್ರೂ, ಸ್ಕೂಲ್‌ ವ್ಯಾನಿಗೆ ಕಳಿಸಿದ್ರೂ, ಕೊನೆಗೆ ಪಕ್ಕದ ಮನೆಗೆ ಕಳಿಸಿದ್ರೂ ಮಗುಗೆ ಯಾರಾದ್ರೂ ಏನಾದ್ರೂ ಮಾಡಿಬಿಡ್ತಾರೆ ಅನ್ನೋ ಭಯ ಶುರುವಾಗತ್ತೆ” ಅನ್ನೋ ಮಾತುಗಳಂತೂ ಈಗ ಅಮ್ಮಂದಿರ ನಡುವೆ ಸಾಮಾನ್ಯ.

ಅಪರಾಧಗಳನ್ನು ಕೇಳಿ ನೋಡಿಯೇ ಮಹಿಳೆಯರು ಆತಂಕಗೊಳ್ಳುವಾಗ ಅದಕ್ಕಿಂತ ಭಯಾನಕವಾಗಿ ಕಾಡಲಾರಂಬಿಸಿವೆ ಕಾನೂನುಗಳು.  ಇತ್ತೀಚಿನ ದಿನಗಳಲ್ಲಿ ಅಪರಾಧದ ವಿಕೃತಿಗಿಂತ ನ್ಯಾಯಾಲಯದ ತೀರ್ಪುಗಳು, ಆದೇಶಗಳು ಹೆಚ್ಚು ಬೆಚ್ಚಿ ಬೀಳಿಸುವಂತಿರುವುದು ನಿಜಕ್ಕೂ ಆತಂಕಕಾರಿ.

ಮೈನರ್‌ ಆಗಿದ್ದರೂ ಸಹ ಎದೆಗೆ ಕೈಹಾಕುವುದು, ಪೈಜಾಮದ ಲಾಡಿಯನ್ನು ಬಿಚ್ಚುವುದು ಅತ್ಯಾಚಾರದ ಪ್ರಯತ್ನ ಎನ್ನಲಾಗುವುದಿಲ್ಲ, ಅದು ಕೇವಲ ಸಿದ್ಧತೆಯ ಹಂತ, ಬೆತ್ತಲಾಗಿಸುವ ಪ್ರಯತ್ನ ಎಂದಿದೆ ಅಲಹಾಬಾದ್‌ ನ್ಯಾಯಾಲಯ. 11 ವರ್ಷದ ಮಗುವಿನ ಮೇಲಾಗಿರುವ ಒಂದು ದೌರ್ಜನ್ಯದ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಂತರ ನಿರ್ದೇಶನ ಇದು.

ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎನ್ನುವ ನ್ಯಾಯಾಲಯಗಳು, ಪತ್ನಿಯ ಮೇಲಿನ ಅಸಹಜ ಲೈಂಗಿಕ ದೌರ್ಜನ್ಯ ಕೂಡ ತಪ್ಪಲ್ಲ ಎನ್ನುತ್ತವೆ. ಇಂದೂ ಒಂದು ಹೆಜ್ಜೆ ಮುಂದುವರೆದು ಪತ್ನಿ ಅಪ್ರಾಪ್ತೆಯಾಗಿದ್ದರೂ ಸಹ ಆಕೆಯ ಮೇಲಿನ ಅಸಹಜ ದೌರ್ಜನ್ಯಗಳು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎನ್ನುತ್ತದೆ. ಫೋಕ್ಸೋ ಒಂದು ಅತ್ಯಂತ ಪರಿಣಾಮಕಾರಿ ಕಾಯ್ದೆ ಎಂದಾಗಲೂ ಸಹ ಮಕ್ಕಳ ಮೇಲಿನ, ಅದರಲ್ಲೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ಪರಿಗಣನೆಗೆ ಸಹ ತೆಗೆದುಕೊಳ್ಳದಂತಹಾ ತೀರ್ಪುಗಳು ಸೃಷ್ಟಿಯಾಗುವುದು ಸಮಾಜದಲ್ಲಿ, ಕಾನೂನಿನಡಿಯಲ್ಲಿ ಭಯದ ವಾತಾವರಣವನ್ನೇ ಸೃಷ್ಟಿಸುತ್ತಿವೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಮಗುವಿನ ತಲೆಯನ್ನು ಗೋಡೆಗೆ ಅಪ್ಪಳಿಸಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಿದ ನಂತರ ಆಕೆಯ ಖಾಸಗಿ ಅಂಗಗಳಿಗೆ ಇಪ್ಪತ್ತ ಎಂಟು ಹೊಲಿಗೆಗಳನ್ನು ಹಾಕಲಾಗಿತ್ತು. ಅತ್ಯಾಚಾರಿಯನ್ನು ಹದಿನೇಳೂವರೆ ವರ್ಷದವನು ಎನ್ನುವ ಕಾರಣಕ್ಕೆ ಬಾಲಾಪರಾಧಿ ಎಂದು ಪರಿಗಣಿಸಲಾಗಿತ್ತು. ಅತ್ಯಾಚಾರ ಮಾಡಲು ಶಕ್ತನಿರುವ ಪುರುಷನನ್ನು ಬಾಲಾಪರಾಧಿ ಎಂದು ಪರಿಗಣಿಸುತ್ತಾ, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳ ಸಂಕಟವನ್ನು ಪರಿಗಣಿಸಲು ಹಿಂದೇಟು ಹಾಕಿ ಅದಕ್ಕೆ ಬೇರೆ ಬೇರೆ ರೀತಿಯ ಸ್ಪಷ್ಟನೆ ನೀಡುವ ಪುರುಷ ಪ್ರಧಾನ ವ್ಯವಸ್ಥೆಯ ಕ್ರೂರ ವರ್ತುಲದೊಳಗೆ ಮತ್ತೆ ಮತ್ತೆ ಸಿಲುಕುತ್ತಿದ್ದೇವೆ.

ಭಾರತದಲ್ಲಿ ಮಕ್ಕಳ ಮೇಲಿನ ಹಿಂಸೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತವೆ. Child Rights and You (CRY) ಸಮೀಕ್ಷೆಯ ಅನುಸಾರ 2021ರಲ್ಲಿ 36,381 ಅತ್ಯಾಚಾರ ಹಾಗೂ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, 2022ರಲ್ಲಿ 38,911 ಪ್ರಕರಣಗಳು ವರದಿಯಾಗಿವೆ.

ಭಾರತದಂತಹ ದೇಶದಲ್ಲಿ ಮರ್ಯಾದೆ, ಹೆಸರು, ಅಸಹಾಯಕತೆ, ಬಡತನ ಎಲ್ಲವೂ ಸೇರಿ ಅತ್ಯಾಚೃಗಳು ವರದಿಯಾಗದೇ ಉಳಿದುಹೋಗುವುದೇ ಹೆಚ್ಚು. ಇಂತಹ ಪ್ರಕರಣಗಳಲ್ಲಿ ಕಾನೂನು ವ್ಯವಸ್ಥೆ ಮಕ್ಕಳಿಗೆ ರಕ್ಷಣೆಯಾಗುವುದರ ಬದಲು ಅತ್ಯಾಚಾರಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡುವ ವ್ಯವಸ್ಥೆಯಾಗಿ ಬದಲಾಗುತ್ತಿರುವುದು ವಿಷಾದನೀಯ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿಯೊಬ್ಬಾತ ಮೂರು ವರ್ಷದ ಮಗುವಿನ ಸ್ವಭಾವವೂ ಅತ್ಯಾಚಾರವಾಗುವುದಕ್ಕೆ ಕಾರಣ ಎಂದು ಹೇಳಿಕೆ ಕೊಟ್ಟಿದ್ದರು. ಮೂರು ವರ್ಷದ ಮಗುವಿನ ನಡವಳಿಕೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎನ್ನುವ ಹೇಳಿಕೆ ಕೊಡಬೇಕಾದರೆ ಇನ್ನು ಯಾವ ರೀತಿಯ ನ್ಯಾಯವನ್ನು ತಾನೆ ಆ ಅಧಿಕಾರಿಯಿಂದ ನಿರೀಕ್ಷಿಸಲು ಸಾಧ್ಯವಿದ್ದೀತು.

ಸ್ತನಗಳನ್ನು ಎಳೆಯುವುದು ಮತ್ತು ಪೈಜಾಮವನ್ನು ಬಿಚ್ಚುವುದು ಅತ್ಯಾಚಾರದ ಪ್ರಯತ್ನವಲ್ಲ, ಕೇವಲ ಲೈಂಗಿಕ ದೌರ್ಜನ್ಯ ಎಂದು ತನ್ನ ಮಧ್ಯಂತರ ನಿರ್ದೇಶನದಲ್ಲಿ ಹೇಳಿದೆ. ಸಣ್ಣ ಮಕ್ಕಳಿಗೆ ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಪೂರ್ವ ಪ್ರಾಥಮಿಕ ತರಗತಿಯಿಂದಲೇ ತಿಳಿಸಿಕೊಡಲಾಗುತ್ತದೆ. ಯಾವುದು ತಮಗೆ ಇಷ್ಟವಾಗುವುದಿಲ್ಲ, ಅಥವಾ ಯಾವುದು ತಮಗೆ ಸುರಕ್ಷಿತವಲ್ಲ ಎಂದು ಅರಿತಿರುವ ಮಕ್ಕಳಿಗೆ ಅವರ ಮೇಲೆ ಇಂತಹ ದೌರ್ಜನ್ಯಗಳಾದಾಗ ಅದನ್ನು ಹೇಗೆ ಎದುರಿಸಬಹುದು,ಅ ದರಿಂದ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದು ಎನ್ನುವುದನ್ನು ಯೋಚಿಸಲೂ ಸಾಧ್ಯವಿಲ್ಲ.

ಜನಸಾಮಾನ್ಯರಿಗೆ ಮಧ್ಯಂತರ ನಿರ್ದೇಶನವೋ, ಹೇಳಿಕೆಯೋ, ತೀರ್ಪೋ ಮತ್ತೊಂದೋ ಎನ್ನುವುದು ತಿಳಿದಿರುವುದಿಲ್ಲ. ಆದರೆ ಒಬ್ಬ ನ್ಯಾಯಮೂರ್ತಿ ಅದನ್ನು ತನ್ನ ಎಕ್ಸ್‌ X ಖಾತೆಯಲ್ಲಿ ಹಾಕಿದ ತಕ್ಷಣವೇ ಸಮಾಜ ಅದನ್ನು ಪರಿಗಣಿಸುತ್ತದೆ. ಈಗಾಗಲೇ ಪ್ರತಿ ಇಪ್ಪತ್ತು ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿರುವ ಸಮಯದಲ್ಲಿ ಇಷ್ಟು ಸಂವೇದನಾರಹಿತ ಹೇಳಿಕೆಗಳನ್ನು ನೀಡುವುದರಿಂದ ಸಮಾಜದಲ್ಲಿ ಇನ್ಯಾವ ಮಟ್ಟಿಗೆ ಆತಂಕ ಹರಡಬಹುದು ಎನ್ನುವ ಕಿಂಚಿತ್‌ ಯೋಚನೆಯೂ ಇರದಿರುವುದು ಹೇಳಿಕೆ ನೀಡುವವರ ಮನಸ್ಥಿತಿ ಮತ್ತು ಆಳವಾಗಿ ಬೇರೂರಿರುವ ಪುರುಷ ಪ್ರಧಾನ ವ್ಯವಸ್ಥೆಗೆ ಹಿಡಿದ ಕನ್ನಡಿ.

ಈ ತೀರ್ಪಿನ ಅನುಸಾರ, ಲೈಂಗಿಕ ಕ್ರಿಯೆಗೆ ಪ್ರಯತ್ನ ಪಡುವುದು ಅತ್ಯಾಚಾರದ ಪ್ರಯತ್ನ. ಆದರೆ, ಆಕೆಯ ಉಳಿದ ಭಾಗಗಳ ಮೇಲಾಗುವ ದೌರ್ಜನ್ಯ ಅತ್ಯಾಚಾರದ ಸಿದ್ಧತೆ. ತಾಯಿ ಮತ್ತು ಮಗುವಿಗೆ ಸುರಕ್ಷಿತವೆನಿಸುವ ಇನ್ಯಾವುದೇ ವ್ಯಕ್ತಿ, ಅಥವಾ ವೈದ್ಯರು (ವೈದ್ಯಕೀಯ ಕಾರಣಗಳಾಗಿದ್ದಲ್ಲಿ) ಹೊರತಾಗಿ ಬೇರೆ ಯಾರಾದರೂ ಮಗುವಿನ ಪೈಜಾಮ ಬಿಚ್ಚಲು ಪ್ರಯತ್ನ ಪಟ್ಟಿದ್ದರೆ ಅದಕ್ಕೆ ಲೈಂಗಿಕ ದೌರ್ಜನ್ಯದ ಹೊರತಾದ ಬೇರೆ ಯಾವ ಕಾರಣ ಇರಲು ಸಾಧ್ಯ? ಅತ್ಯಾಚಾರಕ್ಕೆ ಸಿದಧತೆ ನಡೆಸುವವನಿಗೆ, ಪ್ರಯತ್ನ ಪಟ್ಟ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎನ್ನುವ ಖಾತರಿ ಏನು? ಅಷ್ಟಕ್ಕೂ ಮಗುವಿಗೆ ಪ್ರತಿಯೊಂದೂ ಆಘಾತವೇ. ಅಪ್ರಾಪ್ತ ವಯಸ್ಸಿನ ಮಗುವನ್ನು ಮುಟ್ಟುವುದು ತಪ್ಪು. ಅದು ಅತ್ಯಾಚಾರವೋ, ದೌರ್ಜನ್ಯವೋ ಅಥಾ ಇನ್ನಾವುದೋ ಹಿಂಸೆಯೋ. ಅದನ್ನು ಸರಳೀಕರಿಸಿ ಅತ್ಯಾಚಾರಿಗಳಿಗೆ ಸುಲಭವಾಗಿ ತಪ್ಪಿಸಿಕೊಳ್ಳುವ ಆಯ್ಕೆಗಳನ್ನು ನ್ಯಾಯಾಲಯಗಳ ಮೂಲಕ ಸೃಷ್ಟಿಯಾಗುತ್ತಿರುವುದು ಆಘಾತಕಾರಿ.

ಫೋಕ್ಸೋದಂತಹ ಪ್ರಕರಣಗಳಲ್ಲಿ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನದ ಜೊತೆಗೆ ಅದರ ಕುರಿತಾಗಿ ಜನ ಜಾಗೃತಿ ಮೂಡಿಸುವುದು ಬಹಳಷ್ಟು ಅವಶ್ಯಕವಿದೆ. ಮುಖ್ಯವಾಗಿ ಹದಿಹರೆಯದ ಮಕ್ಕಳಿಗೆ ಇದು ಅವರ ಶಿಕ್ಷಣದ ಜೊತೆ ಜೊತೆಗೆ ಸಾಗಬೇಕಾದ ಅರಿವು. ಅಪ್ರಾಪ್ರ ವಯಸ್ಸಿನ ಸಂಬಂಧಗಳು, ಅಪರಾಧಗಳು ಯಾವ ಹಂತಕ್ಕೆ ತಲುಪಬಹುದು ಎನ್ನುವ ಜಾಗೃತಿ ಮಕ್ಕಳಲ್ಲಿ ಮೂಡಿಸಬೇಕಾದುದು ಪ್ರಸ್ತುತ ಅಗತ್ಯ.

ಇತ್ತೀಚೆಗಷ್ಟೇ ಎರಡು ಅತ್ಯಾಚಾರ ಪ್ರಕರಣಗಳಿಂದ ಖುಲಾಸೆಗೊಂಡ ವ್ಯಕ್ತಿಯೊಬ್ಬ ಜೈಲಿನಿಂದ ಬಂದು ಮತ್ತೊಂದು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದು ಚರ್ಚೆಯಾಗಿತ್ತು.

ಅಷ್ಟಕ್ಕೂ ಒಂದು ಮಗುವಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಪ್ರಯತ್ನ, ಅತ್ಯಾಚಾರದ ಪ್ರಯತ್ನ, ಸಿದ್ಧತೆ, ಅತ್ಯಾಚಾರ ಎಲ್ಲವೂ ನೀಡುವ ಆಘಾತ ಅಗಾಧವಾಗಿ ಕಾಡುವಂತದ್ದು. ಮಕ್ಕಳ ಎಳೆಯ ಮನಸ್ಸಿಗೆ ತನ್ನವರಲ್ಲದವರು ಮುಟ್ಟಿದರೆ, ಅಥವಾ ಘಾಸಿಯಾದರೆ ಅದರ ಪರಿಣಾಮಗಳು ಹಲವಷ್ಟು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಅತ್ಯಾಚಾರವಾಗಲೀ ದೌರ್ಜನ್ಯವಾಗಲೀ ಆದಾಗ ಅದರಿಂದ ಚೇತರಿಸಿಕೊಳ್ಳುವುದು ಬಹಳಷ್ಟು ಸಮಯ ಹಿಡಿಯುತ್ತದೆ. ಸೂಕ್ತ ವೈದ್ಯಕೀಯ, ಕೌಟುಂಬಿಕ, ಆಪ್ತ ಸಮಾಲೋಚನಾ ನೆರವಿಲ್ಲದಿದ್ದರೆ ಮಕ್ಕಳು ಬದುಕೆಲ್ಲಾ ನರಕ ಅನುಭವಿಸಬೇಕಾದ ಅನಿವಾರ್ಯತೆ, ಅಸಹಾಯಕತೆ ಉಂಟಾಗುತ್ತದೆ.  ಇಷ್ಟು ಆಳವಾದ ಸಂವೇದನೆಗಳನ್ನು ಪರಿಗಣನೆಗೇ ತೆಗೆದುಕೊಳ್ಳದೇ ಇಷ್ಟು ಉಡಾಫೆಯ ಆದೇಶಗಳು ಹೊರಬರುತ್ತಿರುವುದು ಇನ್ನಷ್ಟು ಅಸುರಕ್ಷಿತ ಸಮಾಜದಲ್ಲಿ ಇದ್ಧೇವೆ ಎಂದು ಆತಂಕ ಹುಟ್ಟಿಸುತ್ತದೆ.

ಮತ್ತೊಂದು ಅಂತರಾಷ್ಟ್ರೀಯ ಮಹಿಳಾ ದಿನ: ಮತ್ತದೇ ಸಮಸ್ಯೆ ಸವಾಲುಗಳು..‌
“..ಪತ್ನಿಯಾದವಳು ಮಂಗಳಸೂತ್ರ, ಬೊಟ್ಟು ಧರಿಸದಿದ್ದರೆ ಗಂಡನಿಗೆ ಅವಳ ಮೇಲಿನ ಆಸಕ್ತಿ ಎಲ್ಲಿರುತ್ತದೆ ಎಂದು ಒಂದು ನ್ಯಾಯಾಲಯ ಹೇಳಿದರೆ, ಮೂರೂವರೆ ವರ್ಷ ಮಗುವಿನ ವರ್ತನೆ ಅದರ ಮೇಲಾದ ಅತ್ಯಾಚಾರಕ್ಕೆ ಕಾರಣ ಎಂದು ಅಧಿಕಾರಿಯೊಬ್ಬ ಮಾತನಾಡುತ್ತಾನೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಕ್ರಿಯಾಶೀಲತೆಯ ವೇಗ ಹೆಚ್ಚಿಸೋಣ ಎನ್ನುತ್ತದೆ ಈ ವರ್ಷದ ಮಹಿಳಾ ದಿನದ ಥೀಮ್. ವರ್ಷ ವರ್ಷವೂ ಮಹಿಳಾ‌ ದಿನಗಳನ್ನು ಆಚರಿಸುತ್ತಲೇ ಬಂದಿದ್ದೇವೆ. ಮಹಿಳಾ ದಿನದ ಅಂಗವಾಗಿ ಏನೆಲ್ಲ ಆಚರಣೆಗಳು, ಸೆಮಿನಾರ್ ಗಳು, ಕಾರ್ಯಕ್ರಮಗಳು, ಸನ್ಮಾನಗಳು‌‌ ನಡೆಯುತ್ತಲೇ ಇರುತ್ತದೆ. ಹಲವಾರು ಕ್ಷೇತ್ರಗಳಲ್ಲಿ ಮುನ್ನಡೆ ಇಟ್ಟಿದ್ದೇವೆ. ಅಸ್ಮಿತೆ ದಾಖಲಾಗುತ್ತಿದೆ.‌ ಆ‌ದರೆ ಹಿಂತಿರುಗಿ ನೋಡಿದಾಗ ನಾವು ಬಂದ ಹಾದಿಗಿಂತ‌ಲೂ ಹೆಚ್ಚಾಗಿ ಇನ್ನಷ್ಟು ಮತ್ತಷ್ಟು ಸವಾಲುಗಳು ಹೆಚ್ಚುತ್ತಲೇ‌ ಇವೆ.

ಒಂದಿಷ್ಟು ಕ್ಷೇತ್ರಗಳಲ್ಲಿ ಹಕ್ಕುಗಳು, ಅವಕಾಶಗಳು ದೊರೆತಿವೆ ಎನ್ನುವುದನ್ನು ಹೊರತುಪಡಿಸಿ ಭಾರತದಲ್ಲಿ ಮಹಿಳಾ ಸಬಲೀಕರಣದ ಹಾದಿ ಬಹಳಷ್ಟು ದೂರವಿದೆ. ಎಲ್ಲೋ ಇರುವ ಸುನೀತಾ ವಿಲಿಯಮ್ಸ್ ನಮ್ಮವಳು ಎಂದು ಮಾತಾಡುವ ನಾವು ನಮ್ಮಲ್ಲಿ ದಿನಾ ಪತ್ರಿಕೆಗಳಲ್ಲಿ ಇನ್ನೂ ಹೆಣ್ಣು ಭ್ರೂಣಹತ್ಯೆ, ಬಾಣಂತಿ ಸಾವು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎನ್ನುವ ಅಸುರಕ್ಷಿತ ಹಂತದಲ್ಲೇ ಇದ್ದೇವೆ. ಸಾಮಾಜಿಕ, ಆರ್ಥಿಕ, ಲಿಂಗಾಧಾರಿತ ತಾರತಮ್ಯ, ಹಿಂಸೆ, ದೌರ್ಜನ್ಯ ಇನ್ನಿತರ ಸಮಸ್ಯೆಗಳು ಸಬಲೀಕರಣಕ್ಕೆ ಸವಾಲಾಗಿ‌ ಕಾಡುತ್ತಲೇ ಇವೆ.

ಮಹಿಳೆಯರ ಸುರಕ್ಷತೆಗೆ, ಲಿಂಗ ಸಮಾನತೆಗೆ, ಸಬಲೀಕರಣದೆಡೆಗಿನ ಕ್ರಿಯಾಶೀಲತೆಯ ವೇಗವನ್ನು ಹೆಚ್ಚಿಸಬೇಕೆನ್ನುವ ಕರೆಯ ಜೊತೆ ಜೊತೆಗೆ ಹೆಣ್ಣಿನ ಮೇಲಾಗುತ್ತಿರುವ ಹಿಂಸೆಯ ಕುರಿತ ಅಂಕಿ ಅಂಶಗಳು ನಾವು ಮತ್ತೆ ನೂರಾರು ವರ್ಷ ಹಿಂದೆ ಹೋಗಿದ್ದೇವೇನೋ ಎನಿಸುವ ಹಾಗೆ ಮಾಡುತ್ತವೆ. ಹಲವಾರು ಕ್ಷೇತ್ರದಲ್ಲಿ ಸಾಧಿಸಿದರೂ ಇನ್ನೂ ಲಕ್ಷಾಂತರ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಸ್ಥಾಪಿಸಿಕೊಳ್ಳಲು ಸಹ ಸಾಧ್ಯವಾಗಿಲ್ಲ ಅನ್ನುವುದು ಸಹ ಅಷ್ಟೇ ಸತ್ಯ.

ಭಾರತದಲ್ಲಿ ಮಹಿಳಾ‌ ಸಬಲೀಕರಣಕ್ಕೆ ಉಂಟಾಗುತ್ತಿರುವ ದೊಡ್ಡ ಸವಾಲೆಂದರೆ ಅದು‌ ಮಹಿಳೆಯರ ಮೇಲಾಗುತ್ತಿರುವ ಹಿಂಸೆ.‌ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಅನುಸಾರ, 2022 ರಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯದ 4,28,278 ಅಪರಾಧಗಳು ವರದಿಯಾಗಿದ್ದವು. ಇದು 2011 ರಲ್ಲಿ‌ನಡೆದ ಗಣತಿಗಿಂತ 87% ಹೆಚ್ಚಳ ಎನ್ನುವುದು ಆಘಾತಕಾರಿ ವಿಷಯ. ಇವುಗಳಲ್ಲಿ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಹೆಣ್ಣುಮಕ್ಕಳ‌ ಮಾರಾಟ ಎಲ್ಲವೂ ಸೇರಿದ್ದವು.

ಕೇವಲ 2022 ಒಂದೇ ವರ್ಷದಲ್ಲಿ 31,677 ಅತ್ಯಾಚಾರಗಳು ನಡೆದಿದ್ದವು.‌ ಅಂದರೆ ಪ್ರತಿ ದಿನಕ್ಕೆ 86 ಅಥವಾ ಪ್ರತಿ ಗಂಟೆಗೆ ಮೂರಕ್ಕೂ ಹೆಚ್ಚು ಅತ್ಯಾಚಾರ. ಭಾರತದಲ್ಲಿ ಪ್ರತಿ ಇಪ್ಪತ್ತೇಳು ನಿಮಿಷಕ್ಕೆ ‌ಒಂದು ಅತ್ಯಾಚಾರ ನಡೆಯುತ್ತದೆ ಎನ್ನುತ್ತವೆ ವರದಿಗಳು.

2022 ರಲ್ಲಿ 11,000 ಕ್ಕೂ ಹೆಚ್ಚು ವೈವಾಹಿಕ‌ ಅತ್ಯಾಚಾರದ ಪ್ರಕರಣಗಳು ವರದಿಯಾಗಿದ್ದವು‌‌. ಪ್ರತಿ ಮೂವರಲ್ಲಿ ಒಬ್ಬ ಮಹಿಳೆ‌ ತನ್ನ ಸಂಗಾತಿಯಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾಳೆ ಎನ್ನುತ್ತದೆ ಯುನಿಸೆಫ್ ನ ವರದಿ. ಇತ್ತೀಚಿನ‌ NCRB ಅಂಕಿ ಅಂಶಗಳ ಅನುಸಾರ, ಅತ್ಯಾಚಾರ ಪ್ರಕರಣಗಳಲ್ಲಿ ಕೇವಲ‌ 28% ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ.

ಲೈಂಗಿಕ ದೌರ್ಜನ್ಯಗಳ ಸಮಸ್ಯೆಗಳು ಒಂದೆಡೆಯಾದರೆ ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶುಹತ್ಯೆಗಳಂತಹ ಸಮಸ್ಯೆಗಳು ಇನ್ನೂ ಚಾಲ್ತಿಯಲ್ಲಿವೆ.‌ ದೇಶದ ಎಷ್ಟೋ ಕಡೆ ಇನ್ನೂ ಭ್ರೂಣದ ಲಿಂಗವನ್ನು ಅಕ್ರಮವಾಗಿ ಪತ್ತೆ ಹಚ್ಚುವುದರ ಮೂಲಕ‌ ಹುಟ್ಟುವ ಮೊದಲೇ ಹೆಣ್ಣು ‌ಶಿಶುವನ್ನು ಕೊಲ್ಲಲಾಗುತ್ತದೆ.‌ ಕಳೆದ ಒಂದು ದಶಕದಲ್ಲಿ ಸುಮಾರು 12 ಮಿಲಿಯನ್ ಹೆಣ್ಣು ಭ್ರೂಣಹತ್ಯೆಗಳು ದೇಶದ ಹಲವಾರು ರಾಜ್ಯಗಳಲ್ಲಿ ನಡೆದಿವೆ ಎನ್ನುತ್ತವೆ ಅಧ್ಯಯನಗಳು.‌

ಪ್ರತಿದಿನವೂ ಪತ್ರಿಕೆಗಳಲ್ಲಿ ಮಹಿಳೆಯರ ಸಾಧನೆ, ಅವಕಾಶ ಅಥವಾ ಮಹಿಳಾ ಸಬಲೀಕರಣದ ಕುರಿತ ಸುದ್ದಿಗಳನ್ನು ಓದಬೇಕಿರುವ ನಾವು ಇಂದು ಮಹಿಳೆಯರ ಮೇಲಿನ ಅಪರಾಧಗಳ ಕುರಿತೇ ಓದುತ್ತಿದ್ದೇವೆ. ನಿರ್ಭಯಾ ಎನ್ನುವ ಬೆಚ್ಚಿಬೀಳಿಸುವ ಪ್ರಕರಣವನ್ನೇ ಹಿಂದಟ್ಟುವಂತೆ ಮೇಲಿಂದ ಮೇಲೆ ಅತ್ಯಾಚಾರ ಪ್ರಕರಣಗಳಾಗುತ್ತಿವೆ. ಜಾತಿಯ ಕಾರಣಕ್ಕೆ ಹೆಣ್ಣುಮಕ್ಕಳನ್ನು ಹೆತ್ತವರೇ ಕೊಲ್ಲುತ್ತಿದ್ದಾರೆ. ಇಲ್ಲೇ ಪಕ್ಕದ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆಯ ದೊಡ್ಡ ವಿಷ ವರ್ತುಲ ಬೆಚ್ಚಿ ಬೀಳಿಸುವಂತಿತ್ತು. ಬಳ್ಳಾರಿ, ಕಲಬುರಗಿ ಜಿಲ್ಲೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಬಾಣಂತಿಯರು ಸಾವಿಗೀಡಾದರು‌.

ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲದೆಡೆ ಮಾಧ್ಯಮಗಳು ಮಹಿಳೆಯೊಬ್ಬಳು ಪುರುಷನ ರೀತಿ ಮೂತ್ರ ವಿಸರ್ಜಿಸಿದ್ದು ಸರಿಯೇ ಎಂದು ಚರ್ಚೆ ಮಾಡುತ್ತವೆ. ಹತ್ತು ಹನ್ನೆರಡು ವರ್ಷಗಳಾದರೂ ನಡುಬೀದಿಯಲ್ಲಿ ಶವವಾಗುವ ಹೆಣ್ಣುಮಕ್ಕಳಿಗೆ ದೊರೆಯಬೇಕಾದ ನ್ಯಾಯ ಕಣ್ಣು ಮುಚ್ಚಿ ಕುಳಿತಿರುತ್ತದೆ.

ಪತ್ನಿ ಅಪ್ರಾಪ್ತೆಯಾಗಿದ್ದರೂ ಅವಳ‌‌ ಮೇಲೆ ನಡೆಸುವ ಯಾವುದೇ ದೈಹಿಕ, ಲೈಂಗಿಕ ಕ್ರಿಯೆಯನ್ನು ಅದು ಅಸಹಜವಾಗಿದ್ದರೂ ಅದು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಒಂದು ಹೈಕೋರ್ಟ್ ತೀರ್ಪು ಕೊಟ್ಟರೆ, ವೈವಾಹಿಕ ಅತ್ಯಾಚಾರ ಅಪರಾಧವೇ ಅಲ್ಲ ಎಂದು ಇನ್ನೊಂದು ನ್ಯಾಯಾಲಯ ಹೇಳುತ್ತದೆ. ಪತ್ನಿಯಾದವಳು ಮಂಗಳಸೂತ್ರ, ಬೊಟ್ಟು ಧರಿಸದಿದ್ದರೆ ಗಂಡನಿಗೆ ಅವಳ ಮೇಲಿನ ಆಸಕ್ತಿ ಎಲ್ಲಿರುತ್ತದೆ ಎಂದು ಒಂದು ನ್ಯಾಯಾಲಯ ಹೇಳಿದರೆ, ಮೂರೂವರೆ ವರ್ಷ ಮಗುವಿನ ವರ್ತನೆ ಅದರ ಮೇಲಾದ ಅತ್ಯಾಚಾರಕ್ಕೆ ಕಾರಣ ಎಂದು ಅಧಿಕಾರಿಯೊಬ್ಬ ಮಾತನಾಡುತ್ತಾನೆ.

ಮೂಲಭೂತ ಸೌಕರ್ಯಗಳು, ಹಕ್ಕುಗಳು, ಸುರಕ್ಷತೆ ಎಲ್ಲವೂ ದೊರೆತು ಸುಭದ್ರ ವ್ಯವಸ್ಥೆಯ ನಡುವೆ ಹೆಣ್ಣು ಗಂಡು ಸಮಾನವಾಗಿ, ಸಮತೆಯ ಸಮಾಜ ಕಟ್ಟಬೇಕಾದ ಹೊತ್ತಲ್ಲಿ ನಾವು ಹೆಣ್ಣು ಮಗು ಹೆರುವಷ್ಟು, ಬೆಳೆಸುವಷ್ಟು ಸುರಕ್ಷತೆ ಈಗೆಲ್ಲಿದೆ ಎನ್ನುವಷ್ಟು ಹಿಂದೆ ಹೋಗಿದ್ದೇವೆ.

ಮತ್ತೆ ಮನುವಾದಿ, ಪುರುಷ ಪ್ರಧಾನ ಮನಸ್ಥಿತಿಗಳು ಎಳೆ ಕೂಸುಗಳನ್ನೂ ಬಿಡದೆ ಹಿಂಸಿಸುತ್ತಿದೆ.
ಇದೆಲ್ಲದರ ನಡುವೆ ನಾವು ಮಹಿಳಾ ಅಸ್ಮಿತೆ ಕಂಡುಕೊಳ್ಳುವಿಕೆಯ ಕುರಿತು ಮಾತನಾಡುತ್ತಿರುತ್ತೇವೆ. ನಾವು ಸುರಕ್ಷಿತವಾಗಿ ಕೂತು ಮಾತಾಡುವ ಹೊತ್ತಲ್ಲೇ ಇನ್ನೆಲ್ಲೋ ಒಬ್ಬ ಹೆಣ್ಣುಮಗಳು ಅಸಹಾಯಕತೆಯಿಂದ ನರಳುತ್ತಿರುತ್ತಾಳೆ.

ಪ್ರಜಾಪ್ರಭುತ್ವದ ಆಶಯಗಳನ್ನು ಪೋಷಿಸುವ ಜಾಗದಲ್ಲಿಯೇ ಸಮಾನತೆ ಇಲ್ಲವಾಗಿದೆ-ಪೂಜಾ ಸಿಂಗೆ
‘ಶತಮಾನಗಳಿಂದ ಜಾತಿಯಿಂದ, ಹೆಣ್ಣು ಎಂಬ ಕಾರಣದಿಂದ ಇವತ್ತಿನವರೆಗೂ ಅವಳು ದ್ವಿತೀಯ ದರ್ಜೆಯ ಪ್ರಜೆಯೆ ಹೊರತು ಈ ಸಮಾಜದಲ್ಲಿ ಮಹಿಳೆಯು ಪ್ರಮುಖಳಾಗಿ ಕಾಣಿಸಿಕೊಳ್ಳುವುದೇ ಇಲ್ಲ’

ನಾಯಕತ್ವ ಪದದಲ್ಲಿ ನಾಯಕ‌ ಮಾತ್ರವಿದ್ದು,  ನಾಯಕಿ ಕಾಣೆಯಾಗಿದ್ದಾಳೆ. ಆದರೂ, ಹೆಣ್ಣೊಬ್ಬಳ ಕಾಳಜಿ ನಾಯಕತ್ವದಲ್ಲಿಯೇ ಉಳಿದಿದೆ. ಪಿತೃಪ್ರಧಾನವಾದ ಸಮಾಜದಲ್ಲಿ ಹೆಣ್ಣು ಗಂಡಿನ ನಡುವೆ ಲಿಂಗ ತಾರತಮ್ಯ ಯತಾವತ್ತಾಗಿ ಪಾಲಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂಬುದಕ್ಕೆ ವಿಧಾನ ಸೌಧದ ಆವರಣದಲ್ಲಿ ಫೆಬ್ರುವರಿ 28 ರ ಮಧ್ಯಾಹ್ನ ಏರ್ಪಡಿಸಿದ್ದ, ‘ನಾಯಕತ್ವ ಇಂದು ಮತ್ತು ನಾಳೆʼ ಅನ್ನುವ ವಿಚಾರ ಸಂಕಿರಣದಲ್ಲಿ ಸಾಬೀತಾಗಿದ್ದೇ ಶೋಚನೀಯ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುನಿತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಚೆನ್ನ ಭೈರಾದೇವಿ, ಬೆಳವಾಡಿ ಮಲ್ಲಮ್ಮ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಇಂದಿನ ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮು, ಮಮತಾ ಬ್ಯಾನರ್ಜಿ, ಪಿ. ಟಿ. ಉಷಾ, ಪಿ.ವಿ. ಸಿಂಧು, ಮಾಯಾವತಿ ಹೀಗೆ ಅನೇಕ ನಾಯಕಿರಿಯರಿದ್ದರೂ ಸಹ ವೇದಿಕೆಯ ಮೇಲಿದ್ದ ಸಂಪನ್ಮೂಲ ನಾಯಕರ ನಾಲಿಗೆ ಮೇಲೆ ಮಹಿಳಾ ಮಣಿಯರ ಮುಂದಾಳತ್ವದ ಬಗ್ಗೆ ತಪ್ಪಿಯೂ ಹೊರಳಲೇ ಇಲ್ಲ.

ಈ ಗೋಷ್ಠಿಯುದ್ದಕ್ಕೂ, ಪುರುಷರಿಂದ-ಪುರುಷರಿಗಾಗಿ, ಪುರುಷರೇ ನಡೆಸಿದ ಮಾತಿನ ಚಾವಡಿಯಂತೆ ಕಾಣಿಸಿತು. ಪಕ್ಕದಲ್ಲಿಯೇ ಉತ್ಸವಮೂರ್ತಿಯಂತೆ ಮಹಿಳೆಯೊಬ್ಬರು ಕುಳಿತುಕೊಂಡಿದ್ದರು. ಇಡೀ ಗೋಷ್ಠಿ ಬರೀ ಪುರುಷ ನಾಯಕತ್ವದ ಬಗ್ಗೆಯೇ. ‘ನಾಯಕನಾದವನಿಗೆ ಸ್ವಾಭಿಮಾನವಿರಬೇಕು, ಸ್ವಾರ್ಥವಿರಬಾರದು, ಎದೆ ಗುಂದಬಾರದು, ಸಮಾಜದ ಮೇಲೆ ಕಳಕಳಿ ಇರಬೇಕು’ ಎನ್ನುವುದರ ಮೂಲಕ ಕುವೆಂಪು, ಕೊಲಂಬಸ್, ಗಾಂಧಿ, ನಂಜುಂಡಸ್ವಾಮಿ ಹೀಗೆ ಪುರುಷರದ್ದೇ ಉದಾಹರಣೆಗಳು ನೀಡಿದ್ದು ಬೇಸರ ತರಿಸಿತು.

ಮಾತುಗಳು ಮುಗಿದ ನಂತರ ಸಂವಾದ ಏರ್ಪಡಿಸಿದ್ದರು, ಮಹಿಳಾ ನಾಯಕಿಯರ ಪರವಾಗಿ ಮಾತನಾಡುವರು ಯಾರು ಇಲ್ಲವೆಂಬ ಪ್ರಶ್ನೆಗೆ ಥಟ್ಟಂತ ಉತ್ತರ ಬಂದಿದ್ದು, ಇಷ್ಟೆಲ್ಲ ಅಚ್ಚಕಟ್ಟಾಗಿ ಕಾರ್ಯಕ್ರಮ ನಿರ್ವಹಿಸುತ್ತಿರುವವರು ಮಹಿಳೆಯರೆ ಅವರೆ ನಿಮ್ಮ ಮಾತಿಗೆ ಉತ್ತರಿಸುತ್ತಾರೆ ಎಂದು ಮೈಕ್ ಅವರಿಗೆ ಕೊಟ್ಟರು. ಅವರು ಬೇರೇನೊ ಉತ್ತರ ನೀಡುವವರು ಎಂಬ ನಿರೀಕ್ಷೆ ಇತ್ತು. ಆದರೆ, ಹುಸಿಯಾಯಿತು.

‘ನಾಯಕತ್ವ ಎನ್ನುವ ಪದದಲ್ಲಿಯೇ ನಾಯಕಿ ಇದ್ದಾಳೆ. ನೀವು ಬೇರೆ ಬೇರೆಯಾಗಿ ನೋಡ್ತಾ ಇದಿರಾ. ಗಂಡು – ಹೆಣ್ಣು ಸಮಾನರು ಆದರೆ, ಇವತ್ತಿನ ಶಾಲಾ, ಕಾಲೇಜುಗಳಲ್ಲಿ ಜಂಡರ್ ಬಗ್ಗೆ ತಪ್ಪಾಗಿ ಅರ್ಥೈಸುತ್ತಿದ್ದಾರೆ. ನನ್ನ ಅನುಭವದಲ್ಲಿ ಹೇಳಬೇಕೆಂದರೆ ಯಾವುದೇ ಅಸಮಾನತೆ ಇಲ್ಲ’ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯವರ ಮಾತು ತುಂಬ ಚಿಂತೆಗೀಡು ಮಾಡಿತು. ಬೇರೆ ಕಡೆಗಳೆಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣಿಸುವುದೇ ಇಲ್ಲ.

ಆದರೆ, ಅವರಿಗೆಲ್ಲ ಅದು ಗಂಭೀರದ ವಿಷಯವೇ ಅಲ್ಲ. ಅಷ್ಟು ನಿರ್ಲಕ್ಷ್ಯಕ್ಕೊಳಗಾಗಿದ್ದಾಳೆ. ಆದರೆ, ವಿಧಾನಸೌಧ ಎಂಬುದು ಸಮಾನತೆಯ ಜಾಗ, ಇಲ್ಲಿ ಮಹಿಳಾ ನಾಯಕಿಯರೂ ಇದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಪೋಷಿಸುವ ಜಾಗದಲ್ಲಿಯೇ ಮಹಿಳಾ ಮುಂದಾಳತ್ವದ ಕುರಿತು ಮಾತನಾಡಲು ಪ್ರತಿನಿಧಿಯಾಗಿ ಯಾರು ಇರಲ್ಲಿಲ್ಲ.

ಕಾರ್ಯಕ್ರಮಕ್ಕೆ ಬರುವ ಮುಂಚಿತವಾಗಿ, ಆಮಂತ್ರಣ ಪತ್ರಿಕೆ ನೋಡಿದ ಮೇಲಾದರು ಸಂಪನ್ಮೂಲ ವ್ಯಕ್ತಿಗಳಲ್ಲಿ ಸಣ್ಣ ಪ್ರಶ್ನೆ ಮೂಡಬೇಕಾಗಿತ್ತು. ಮಹಿಳೆಯರ ಪ್ರಾತಿನಿಧ್ಯವಿಲ್ಲದ ಕಾರ್ಯಕ್ರಮಕ್ಕೆ ನಾವು ಹೋಗುವುದರ ಕುರಿತು ಯೋಚಿಸಬೇಕಿತ್ತು.

ಈ ಸಮಾಜ ಎಷ್ಟು ಟ್ರೈನ್ ಮಾಡಿದೆ ಎಂದರೆ ಹೆಣ್ಣೊಬ್ಬಳು ತನ್ನ ವಿರುದ್ಧವಾಗಿ ತಾನೇ ಮಾತಾಡಿಕೊಂಡರು ಅದು ತಪ್ಪು ಅಂತ ಕಾಣಿಸುವುದಿಲ್ಲ. ಯಾಕೆಂದರೆ, ಬೆಟ್ಟದ ಮೇಲೆ ನಿಂತು ಕೆಳಗಡೆ ನೋಡಿದಾಗ ಕಾಣುವುದು ಸಪಾಟಾಗಿಯೇ; ಬೆಟ್ಟದ ಕೆಳಗಿಳಿದು ಬಂದು ನೋಡಿದಾಗ ಇಲ್ಲಿರುವ ಅಸಮಾನತೆ ಕಾಣುತ್ತೆ.

ಆದರೂ, ಶತಮಾನಗಳಿಂದ ಜಾತಿಯಿಂದ, ಹೆಣ್ಣು ಎಂಬ ಕಾರಣದಿಂದ ಇವತ್ತಿನವರೆಗೂ ಅವಳು ದ್ವಿತೀಯ ದರ್ಜೆಯ ಪ್ರಜೆಯೆ ಹೊರತು ಈ ಸಮಾಜದಲ್ಲಿ ಮಹಿಳೆಯು ಪ್ರಮುಖಳಾಗಿ ಕಾಣಿಸಿಕೊಳ್ಳುವುದೇ ಇಲ್ಲ.

ಬಹುತೇಕ ಮಹಿಳೆಯರು ಕೇವಲ ಪ್ರಾರ್ಥನಾ ಗೀತೆ, ಸ್ವಾಗತ ಗೀತೆ, ನಿರೂಪಣೆ, ಬೊಕ್ಕೆ ಕೊಡುವುದು ಇಂತಹವುಗಳಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಆದರೆ, ವೇದಿಕೆಗಳ ಮೇಲೆ ಕಾಣಿಸಿಕೊಳ್ಳುವುದು ವಿರಳ. ಒಂದು ವೇಳೆ ಕಾಣಿಸಿಕೊಂಡರೂ ಉತ್ಸವ ಮೂರ್ತಿಗಳಾಗಿರುತ್ತಾರೆ.

ಪೂಜಾ ಸಿಂಗೆ, ಕಲಬುರಗಿ

ಚಂದದ ಕಣ್ಣಿನ ಹುಡುಗಿಯೂ, ಜಾಣ ಕುರುಡಾದ ಸಮಾಜವೂ..
“…ಒಂದು ಹೆಣ್ಣಿನ ಅಂದ ಶೇರ್‌ ಆಗುವಷ್ಟು ಜಾಸ್ತಿ,ಒಂದು ಹೆಣ್ಣಿನ ಮೇಲಾದ ದೌರ್ಜನ್ಯ ಎಲ್ಲಿಯೂ ಮಾತುಕತೆಗೆ ಬರುವುದೇ ಇಲ್ಲ. ಪ್ರತಿದಿನ ನಡೆಯುತ್ತಿರುವ ಅಪರಾಧಗಳನ್ನು ನೋಡುತ್ತಾ ನೋಡುತ್ತಾ ನಾವು ಮರಗಟ್ಟಿ ಹೋಗಿದ್ದೇವೆ. ವಿಕೃತತೆಯಿಲ್ಲದ ಸುದ್ದಿಗಳು ಮುನ್ನೆಲೆಗೆ ಬರುವುದೂ ಇಲ್ಲ, ಚರ್ಚೆಯಾಗುವುದೂ ಇಲ್ಲ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಕುಂಭಮೇಳದಲ್ಲಿ ಕಂಡ ಚಂದದ ಕಣ್ಣಿನ ಹುಡುಗಿ ಮೊನಾಲಿಸಾ ದೇಶಾದ್ಯಂತ ಸುದ್ದಿಯಾಗಿದ್ದಾಳೆ. ಆಧ್ಯಾತ್ಮ ಸಾಧನೆಗೆ ಹೋದವರು, ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ಹೋದವರು, ನಾಗಾ ಸಾಧುಗಳ ಸಾಲು ಸಾಲನ್ನು ಬೈದವರು, ಹೊಗಳಿದವರು, ಅನಾಗರೀಕವೆಂದವರು ಪ್ರತಿಯೊಬ್ಬರೂ ಈ ಹುಡುಗಿಯ ಕಣ್ಣಿನ ಕುರಿತು ಒಂದಲ್ಲಾ ಒಂದು ರೀತಿ ಮೆಚ್ಚಿಕೊಂಡವರೇ. ಸಹಜವೆಂಬಂತೆ ಯಾರಿಗೂ ಆ ಹುಡುಗಿ ಚುರುಕು, ಆಕೆಯ ವಯಸ್ಸೆಷ್ಟಿರಬಹುದು, ಓದುತ್ತಿದ್ದಾಳಾ, ನನ್ನ ಅಕ್ಕ -ತಂಗಿಯ ಥರ ಇದ್ದಾಳಲ್ಲ, ನನ್ನ ಮಗಳ ವಯಸ್ಸಿನವಳಲ್ಲವಾ ಎಂದು ಅನ್ನಿಸಲೇ ಇಲ್ಲ. ಅಲ್ಲಿರುವ ಜನರು ಆಕೆಯನ್ನು ಮುತ್ತಿ ಆಕೆ ಅಲ್ಲಿಂದ ಮತ್ತೆ ಊರಿಗೆ ಮರಳುವಾ ಹಾಗೆ ಮಾಡಿದರೆ, ಸುಶಿಕ್ಷಿತರು ಎನ್ನುವ ನೆಟ್ಟಿಗರು ಮಾಡಿದ್ದು ಸಹ ಅದನ್ನೇ. ಕಂಡಕಂಡಲ್ಲಿ ಆಕೆಯ ಫೋಟೋವನ್ನು ಶೇರ್‌ ಮಾಡ್ತಾ ಹೋಗಿದ್ದು.

ಒಬ್ಬ ಹೆಣ್ಣುಮಗಳ ಮೇಲೆ ಈ ರೀತಿಯಾಗಿ ಜನ ಮೇಲೆ ಬೀಳುವುದು ಇದೇ ಹೊಸತಲ್ಲ. ಮತ್ತು ಈ ರೀತಿಯಾಗಿ ಸೆಲೆಕ್ಟಿವ್‌ ಆಗಿ ಪ್ರತಿಕ್ರಿಯಿಸುವುದು ಸಹ ಹೊಸತಲ್ಲ. ಒಬ್ಬ ವೇಶ್ಯೆಯನ್ನು ಸಹ ಆಕೆ ಒಬ್ಬ ಪುರುಷನ ಜೊತೆಯಲ್ಲಿದ್ದಾಗ ವಿಡಿಯೋ ಮಾಡಿ ಹರಿಬಿಟ್ಟು ಟ್ರೋಲ್‌ ಮಾಡಿದಂತಹ ಸಮಾಜ ನಮ್ಮದು. ಬಡವರ, ದಮನಿತರ, ಮಹಿಳೆಯರ ಬದುಕುಗಳು ನಮ್ಮ ಚೆಲ್ಲಾಟಕ್ಕೆ ಎಂತಹಾ ಸಂಕಟಕ್ಕೆ ಬಲಿಯಾಗುತ್ತದೆ ಎನ್ನುವ ಸಣ್ಣ ಅರಿವೂ ಇಲ್ಲದೇ, ಅರಿಯುವ ಸೂಕ್ಷ್ಮತೆಯನ್ನೂ ಕಳೆದುಕೊಂಡು ಇನ್ನೊಬ್ಬ ಮನುಷ್ಯನನ್ನು ವಸ್ತುವಾಗಿ ನೋಡುವುದು ದಿನ ದಿನಕ್ಕೆ ಹೆಚ್ಚುತ್ತಲೇ ಹೋಗಿದೆ.

ರಾತ್ರೋ ರಾತ್ರಿ ಸಿನಿಮೀಯವಾಗಿ ಜನಪ್ರಿಯವಾಗುವವರು ಅಷ್ಟೇ ಬೇಗ ಅಧಪತನಕ್ಕಿಳಿಯುತ್ತಾರೆ ಎನ್ನುವುದಕ್ಕೆ ರಾನು ಮಂಡಲ್‌ ಒಂದು ಉದಾಹರಣೆ. ಒಂದೇ ದಿನದಲ್ಲಿ ಆಕೆಯ ಹಾಡು ವೈರಲ್‌ ಆಗಿದ್ದೂ ಆಯಿತು, ಆಕೆಯನ್ನು ಯಾವುದೋ ಸಿನೆಮಾಗೆ ಹಾಡಿಸ್ತಾ ಇದಾರೆ ಅಂತ ಸುದ್ದಿಯಾದ ಕೂಡಲೇ ಆಕೆ ಬ್ಯೂಟಿ ಪಾರ್ಲರ್‌, ಮೇಕಪ್‌ ಎಂದು ಸಂಪೂರ್ಣವಾಗಿ ಬದಲಾಗಿ ನಗೆಪಾಟಲಿಗೀಡಾಗಿದ್ದೂ ಆಯಿತು. ಇದ್ದಕ್ಕಿದ್ದ ಹಾಗೆ ತಮ್ಮದಲ್ಲದ ಜಗತ್ತನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹೋಗಿ ಅದಕ್ಕೆ ಹೊಂದಿಕೊಳ್ಳಲು ಆಗದೇ ಇದ್ದಾಗ ಎಷ್ಟೋ ಜನರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೂ ಇದೆ. ಯಾವುದೋ ರಿಯಾಲಿಟಿ ಶೋದ ಹುಡುಗ, ರಸ್ತೆಬದಿ ಹಾಡಿ ಇದ್ದಕ್ಕಿಂದಂತೆ ಜನಪ್ರಿಯವಾಗುವವರು ಎಲ್ಲರದ್ದೂ ಇದೇ ಕತೆ.

ಈಗ ಮೊನಾಲಿಸಾ ಕೂಡ ಸಿನಿಮಾಗೆ ಬರ್ತಾಳಂತೆ ಎನ್ನುವ ಸುದ್ದಿಗಳೂ ಶುರುವಾಗಿವೆ. ಆಕೆಯ ಮೇಕಪ್‌ ಇಲ್ಲದ ಲುಕ್‌ ನೋಡಿ ಜನರು ಟೀಕಿಸಲು ಶುರು ಮಾಡಿದ್ದಾರೆ, ಮೇಕಪ್‌ ಹಾಕಿದ್ದನ್ನು ನೋಡಿ ಕೂಡ ಟೀಕಿಸಲು ಶುರು ಮಾಡಿದ್ದಾರೆ. ತಮ್ಮ ಶ್ರಮ, ಕಲೆಯ ಹೊರತಾಗಿ ಬಂದವರಿಗೆ ಜಾಸ್ತಿ ದಿನ ಗೆಲುವಿರೋದಿಲ್ಲ ಎನ್ನುವುದನ್ನು ಮರೆತು ಬಣ್ಣದ ಲೋಕಕ್ಕೆ ಬಲಿಯಾಗುವ ಪಟ್ಟಿಗೆ ಇನ್ನೊಂದು ಹೆಸರು ಸೇರಿಕೊಳ್ಳುತ್ತದೆ ಅಷ್ಟೇ,

ಒಂದು ಹೆಣ್ಣಿನ ಅಂದ ಶೇರ್‌ ಆಗುವಷ್ಟು ಜಾಸ್ತಿ,ಒಂದು ಹೆಣ್ಣಿನ ಮೇಲಾದ ದೌರ್ಜನ್ಯ ಎಲ್ಲಿಯೂ ಮಾತುಕತೆಗೆ ಬರುವುದೇ ಇಲ್ಲ. ಪ್ರತಿದಿನ ನಡೆಯುತ್ತಿರುವ ಅಪರಾಧಗಳನ್ನು ನೋಡುತ್ತಾ ನೋಡುತ್ತಾ ನಾವು ಮರಗಟ್ಟಿ ಹೋಗಿದ್ದೇವೆ. ವಿಕೃತತೆಯಿಲ್ಲದ ಸುದ್ದಿಗಳು ಮುನ್ನೆಲೆಗೆ ಬರುವುದೂ ಇಲ್ಲ, ಚರ್ಚೆಯಾಗುವುದೂ ಇಲ್ಲ. ಪ್ರತಿ ದಿನವೂ ಅತ್ಯಾಚಾರ, ಕೊಲೆಯ ಸುದ್ದಿಗಳಾದಗಲೂ ವಿಕೃತತೆಯ ಕಾರಣದಿಂದಾಗಿ ನಿರ್ಭಯಾ ಸುದ್ದಿಯಾದಳು. ಅದಾಧ ನಂತರ ಆ ಮಟ್ಟಿಗಿನ ವಿಕೃತಿ ಸಹಜ ಎಂಬಂತೆ ಜನ ಪ್ರತಿಕ್ರಿಯಿಸಲು ಆರಂಭಿಸಿದರು. ಇತ್ತೀಚಿಗಿನ ಕೊಲ್ಕತಾ ಡಾಕ್ಟರ್‌ ಅತ್ಯಾಚಾರ ಸುದ್ದಿಯಾಗಿದ್ದು ಸಹ ಆಕೆಯ ಮೇಲಾದ ಕ್ರೂರತೆಯಿಂದಾಗಿ. ರಾಜಕಾರಣಿಗಳಿಂದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಹಾಗಾದರೆ ಉಳಿದ ಅತ್ಯಾಚಾರ, ಕೊಲೆ, ದೌರ್ಜನ್ಯಗಳು ಮಾತನಾಡುವ ವಿಷಯವೇ ಅಲ್ಲ ಅನ್ನುವ ಹಾಗಾಗಿದ್ದು ಹೇಗೆ ಎನ್ನುವುದು ಸದಾ ಕಾಡುವ ಪ್ರಶ್ನೆ. ಅಷ್ಟಕ್ಕೂ ಅಂಥಾ ಕ್ರೂರವಾಗಿ ನಡೆದ ಅತ್ಯಾಚಾರವನ್ನು ಯಾರೋ ವಿಡಿಯೋ ಮಾಡಿದ್ದರಂತೆ ಎಂದರೆ ಹೆಚ್ಚಿನ ಜನರು ಮೊದಲು ಮಾಡುವ ಕೆಲಸ ಆ ವಿಡಿಯೋ ಎಲ್ಲಿದೆ ಎಂದು ಹುಡುಕುವುದು, ಅಥವಾ ನಿಮ್ಮ ಹತ್ರ ಇದ್ದರೆ ನಮಗೆ ಕಳಿಸಿ ಎಂದು ಮರ್ಯಾದೆಯ ಜೊತೆಗೆ ಮಾನವೀಯತೆಯನ್ನೂ ಬಿಟ್ಟು ಕೇಳುವುದು.

ಕಛೇರಿಯಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುತ್ತಲೇ ತಾಯಿಗೆ ನರ್ಸರಿಗೆ ಹೋಗುವ ಹೆಣ್ಣುಮಗು ಹುಷಾರಾಗಿ ಮನೆ ತಲುಪಿದರೆ ಸಾಕು ಎನ್ನುವ ಆತಂಕ ಕಾಡಿರುತ್ತದೆ. ಹೋಗಿ ಬರುವ ಅವಧಿಯಲ್ಲಿ ಮಗುವನ್ನು ಯಾರು ಮುಟ್ಟಿದರೋ ಎನ್ನುವ ಆತಂಕ ಕಾಡಿರುತ್ತದೆ. ಮೊನ್ನೆ ಮೊನ್ನೆಯಷ್ಟೇ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಇನ್ನೆಲ್ಲೋ ಎಳೆ ಕೂಸನ್ನು ಅತ್ಯಾಚಾರ ಮಾಡಿ ಕೊಂದ ಆರೋಪಿ ಹೆದರಿ ನೇಣು ಹಾಕಿಕೊಂಡರೆ ಅವನನ್ನು ಮಾಧ್ಯಮಗಳು ದುರ್ದೈವಿ ಎಂದು ಬಣ್ಣಿಸುತ್ತವೆ.

ದೇಶಭಕ್ತಿಯ ಪ್ರತೀಕವೇ ಆಗಿರುವ ಮಾಜಿ ಸೈನಿಕನೊಬ್ಬ ಗರ್ಭಿಣಿ ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ, ಕುಕ್ಕರಿನಲ್ಲಿ ಬೇಯಿಸಿ ಒಣಗಿಸಿ ಎಸೆದ ಸುದ್ದಿ ಕುಕ್ಕರಿನ ವಿಷಲ್‌ ನಷ್ಟು ಸಹ ಜೋರಾಗಿ ಸದ್ದಾಗಿಲ್ಲ. ಈ ದೇಶದಲ್ಲಿ ಗಂಡನಿಂದ ಹೆಂಡತಿ ಕೊಲೆಯಾಗುವುದು ಸುದ್ದಿಯೇ ಆಗುವುದಿಲ್ಲ. ಚರ್ಚೆಗಳಲ್ಲಿ ಆಕೆನೇ ಸರಿ ಇರಲಿಲ್ಲ, ಆಕೆಯ ಬಾಯಿ ಜೋರು ಹಾಗಾಗಿ ಗಂಡ ಸರಿಯಾಗಿನೇ ಮಾಡಿದಾರೆ ಎಂದು ತಮ್ಮಲ್ಲಿ ತಾವೇ ಮಾತಾಡಿಕೊಂಡು ವಿಷಯ ಮುಚ್ಚಿಸುತ್ತಾರೆ.

ಯಾರದೋ ಕಣ್ಣು ಚಂದ ಎಂದು ಮೈಮರೆತು ಹೊಗಳುವ ಭರದಲ್ಲಿ, ಇನ್ಯಾರನ್ನೋ ಶೌಚಾಲಯದ ಒಳಗೂ ಬಿಡದೇ ಚಿತ್ರೀಕರಿಸುವ ಭರದಲ್ಲಿ ಅನ್ನಕ್ಕೇ ಕಲ್ಲು ಹಾಕುವ ಜನರು ಸ್ವಲ್ಪ ಸೂಕ್ಷ್ಮತೆ, ಸಂವೇದನೆಯಿಂದ ಯೋಚಿಸುವುದನ್ನು ಕಲಿಯಬೇಕಿದೆ. ಎಳೆ ಕೂಸಿನಿಂದ ಹಿಡಿದು, ಗರ್ಭಿಣಿ ಪತ್ನಿಯನ್ನೂ ಬಿಡದೆ ಕೊಂದು ಹಾಕುವ ಸಮಾಜದಲ್ಲಿ ಕನಿಷ್ಟ ಸಂವೇದನೆ ಹೊಂದಿದವರು ಎನ್ನುವವರು ಸಹ ಇನ್ನೊಮ್ಮೆ ಕನ್ನಡಿಯೆದುರು ನಿಲ್ಲಬೇಕಿದೆ. ಜಾಣ ಕುರುಡಿನಿಂದ ಹೊರಬಂದು ಸುತ್ತಲಿನ ದೌರ್ಜನ್ಯ, ಅಪರಾಧಗಳತ್ತ ಕಣ್ಣು ಹಾಯಿಸಬೇಕಿದೆ.

ಬಂಧ – ಬಂಧನವಾದಾಗ
“..ಸಂಸಾರದಲ್ಲಿ ಏನೇ ಬಂದರೂ ಗುಟ್ಟಾಗಿಡಬೇಕು, ಸರಿದೂಗಿಸಿಕೊಂಡು ಹೋಗಬೇಕು, ಅದರಲ್ಲೂ ಪತಿ ಪತ್ನಿ ನಡುವಿನ ದೈಹಿಕ ಸಂಬಂಧದ ಕುರಿತಾದರೆ ಅದರ ಕುರಿತು ಮಾತೇ ಆಡಬಾರದು ಎನ್ನುವುದನ್ನು ಮಹಿಳೆಯರ ಮೇಲೆ ಅಯಾಚಿತವಾಗಿ ಹೇರಲಾಗುತ್ತದೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ..

ಪತ್ನಿಗೆ ಒಪ್ಪಿಗೆ ಇಲ್ಲದಿದ್ದರೂ, ಆಕೆಯೊಂದಿಗಿನ ಅಸಹಜ ಲೈಂಗಿಕ ಕ್ರಿಯೆಯು ಅಪರಾಧವಲ್ಲ ಎಂದು ಛತ್ತೀಸ್‌ ಗಢ್‌ ಹೈಕೋರ್ಟ್‌ ತೀರ್ಪು ನೀಡಿದೆ. 2017 ಡಿಸೆಂಬರ್‌ 11 ರಂದು ಛತ್ತೀಸ್‌ ಗಡದಲ್ಲಿ ಪುರುಷನೊಬ್ಬ ತನ್ನ ಪತ್ನಿಯ ಜೊತೆಗೆ ಅನೈಸರ್ಗಿಕ ಮತ್ತು ಒಪ್ಪಿತವಲ್ಲದ ಲೈಂಗಿಕ ಕ್ರಿಯೆ ನಡೆಸಿದ್ದು, ಪರಿಣಾಮವಾಗಿ ನೋವಿನಿಂದ ಆಸ್ಪತ್ರೆಗೆ ದಾಖಲಾದ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪೆರಿಟೋನಿಟಿಸ್‌ (ಪೆರಿಟೋನಿಯಂ ನ ಉರಿಯೂತ, ಸಾಮಾನ್ಯವಾಗಿ ರಕ್ತದ ಮೂಲಕ ಅಥವಾ ಕಿಬ್ಬೊಟ್ಟೆಯ ಅಂಗದ ಛಿದ್ರದ ನಂತರ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ) ಮತ್ತು ಗುದನಾಳದಲ್ಲಿ ರಂಧ್ರವುಂಟಾದುದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಪೋಸ್ಟ್‌ ಮಾರ್ಟಮ್‌ ವರದಿ ತಿಳಿಸುತ್ತದೆ.

ಸಾಯುವ ಮುನ್ನ ಆಕೆ ತನ್ನ ಪತಿ ಅಸ್ವಾಭಾವಿಕವಾದ ಲೈಂಗಿಕ ಕ್ರಿಯೆ ನಡೆಸಿದ್ದು, ಇದರಿಂದಾಗಿ ತನ್ನ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದಳು. ಆದರೆ, ಸಾಕ್ಷಿಗಳ ಹೇಳಿಕೆಯಲ್ಲಿ ಆಕೆಗೆ ಮೊದಲೇ ಮೂಲವ್ಯಾಧಿ ಇತ್ತು, ಪತಿಯ ಅಸ್ವಾಭಾವಿಕ ದೌರ್ಜನ್ಯ ಅದಕ್ಕೆ ಕಾರಣವಲ್ಲ ಎಂಬ ಹೇಳಿ ಬದಲಾವಣೆಯಿಂದಾಗಿ ಛತ್ತೀಸ್‌ ಗಡ ಹೈಕೋರ್ಟ್‌ ಪತಿಯನ್ನು ನಿರ್ದೋಷಿ ಎಂದಿರುವುದಲ್ಲದೇ, 15 ವರ್ಷ ಮೇಲ್ಪಟ್ಟ ಪತ್ನಿಯ ಜೊತೆಯಲ್ಲಿ ಒಪ್ಪಿತವಲ್ಲದ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಹೇಳಿದೆ.

ಪತಿ ಗೋರಕ್‌ ನಾಥ್‌ ಮೇಲೆ ಐಪಿಸಿ ಸೆಕ್ಷನ್‌ 375ರ ಅಡಿಯಲ್ಲಿ ಅತ್ಯಾಚಾರ, ಸೆಕ್ಷನ್‌ 377 ಅಡಿಯಲ್ಲಿ ಅಸ್ವಾಭಾವಿಕ ಅಪರಾಧ, ಮತ್ತು ಸೆಕ್ಷನ್‌ 304 ಅಡಿಯಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಕುರಿತು ಕೇಸ್‌ ದಾಖಲಾಗಿತ್ತು.

ಈ ಕುರಿತು ಪರಿಶೀಲಿಸಿದ ಹೈಕೋರ್ಟ್‌ ಪತ್ನಿಗೆ 15 ವರ್ಷ ಮೀರಿದ್ದರೆ, ಆಕೆಯ ಜೊತೆ ನಡೆಯುವ ಯಾವುದೇ ರೀತಿಯ ಲೈಂಗಿಕ ಕ್ರಿಯೆಯು ಅತ್ಯಾಚಾರಕ್ಕೆ ಒಳಪಡುವುದಿಲ್ಲ, ಅದು ಒಪ್ಪಿತವಲ್ಲದಿದ್ದರೂ ಅತ್ಯಾಚಾರವೆನಿಸಿಕೊಳ್ಳುವುದಿಲ್ಲ ಎಂದು ಹೇಳಿದೆ. ಸಾವಿಗೆ ಮುನ್ನ ಪತ್ನಿ ನೀಡಿದ ಹೇಳಿಕೆ ಒಂದನ್ನೇ ಪರಿಗಣಿಸಲಾಗದು ಎಂದು ಸಹ ಈ ಸಂದರ್ಭದಲ್ಲಿ ಹೈಕೋರ್ಟ್‌ ಹೇಳಿದೆ.

ಪದೇ ಪದೇ ವೈವಾಹಿಕ ಅತ್ಯಾಚಾರದಂತಹ ವಿಷಯಗಳು ಚರ್ಚೆಗೆ ಒಳಗಾಗುತ್ತಿರುವಾಗ ಈ ಘಟನೆ ಇನ್ನಷ್ಟು ಗೊಂದಲ, ಆತಂಕ ಮತ್ತು ನಿರಾಸೆ ಮೂಡಿಸಿರುವುದಂತೂ ನಿಜ. UN ವರದಿಯ ಅನುಸಾರ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಸಂಗಾತಿಯಿಂದಲೇ ದೈಹಿಕ / ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಪತ್ನಿ ಮೊದಲೇ ಮೂಲವ್ಯಾಧಿಯಿಂದ ಬಳಲುತ್ತಿದ್ದಳು, ಹಾಗಾಗಿ ಆಕೆಯ ಸಾವಿಗೆ ಪತಿಯ ಅಸ್ವಾಭಾವಿಕ ಕ್ರಿಯೆ ಕಾರಣವಲ್ಲ ಎಂದು ಹೇಗೋ ಮುಚ್ಚಿಹಾಕಬಹುದು. ಆದರೆ ಮೂಲವ್ಯಾಧಿಯಿಂದ ನರಳುತ್ತಿರುವ ಪತ್ನಿಯ ಮೇಲೆ ಆಕೆಯ ಒಪ್ಪಿಗೆಯಿಲ್ಲದೇ ದೌರ್ಜನ್ಯ ನಡೆಸುವುದು ಎಂತಹಾ ಕ್ರೌರ್ಯ. ಆಕೆ ಅನುಭವಿಸಿರಬಹುದಾದ ನೋವನ್ನು ಮಾನವೀಯ ನೆಲೆಯಲ್ಲಿ ಸಹ ಪರಿಗಣಿಸದೇ, ಆಕೆಯ ಸಾವನ್ನು ತೀರಾ ಸಾಮಾನ್ಯ ಎನ್ನುವಂತೆ ಪರಿಗಣಿಸಿರುವುದು ವಿಷಾದನೀಯ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನುಸಾರ 18ರಿಂದ 49ರ ವಯೋಮಾನದ ಸುಮಾರು 29.3% ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. 6.5% ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ವರದಿಯಾಗಿದ್ದು, ಕಾನೂನು ನೆರವು ಅಥವಾ ಕೌಟುಂಬಿಕ ಬೆಂಬಲದ ಕೊರತೆಯಿಂದ ಕಾನೂನು ಹೋರಾಟ ಮಾಡಲು ಅಥವಾ ದೂರು ನೀಡಲು ಹಿಂಜರಿಯುತ್ತಾರೆ.

ಸಂಸಾರದಲ್ಲಿ ಏನೇ ಬಂದರೂ ಗುಟ್ಟಾಗಿಡಬೇಕು, ಸರಿದೂಗಿಸಿಕೊಂಡು ಹೋಗಬೇಕು, ಅದರಲ್ಲೂ ಪತಿ ಪತ್ನಿ ನಡುವಿನ ದೈಹಿಕ ಸಂಬಂಧದ ಕುರಿತಾದರೆ ಅದರ ಕುರಿತು ಮಾತೇ ಆಡಬಾರದು ಎನ್ನುವುದನ್ನು ಮಹಿಳೆಯರ ಮೇಲೆ ಅಯಾಚಿತವಾಗಿ ಹೇರಲಾಗುತ್ತದೆ. ಹೆಣ್ಣುಮಕ್ಕಳಿಗೆ ಮದುವೆಯಾಗಿ ವರ್ಷದೊಳಗೆ ಮಕ್ಕಳಾಗದಿದ್ದರೆ ಆಕೆಯನ್ನು ಬಂಜೆ ಎನ್ನುವುದು, ಗಂಡು ಹೆರದಿದ್ದರೆ ಆಕೆಗೆ ತೊಂದರೆ ನೀಡುವುದು ಎಲ್ಲವೂ ದೌರ್ಜನ್ಯದ ಭಾಗವೇ. ಗಂಡ ತಾನು ಮದುವೆಯಾಗಿದ್ದೇನೆ ಎನ್ನುವ ಒಂದೇ ಕಾರಣಕ್ಕೆ ಆಕೆಯ ದೈಹಿಕ ಮಾನಸಿಕ ಸ್ಥಿತಿಯನ್ನೂ ಗಮನಿಸದೇ ತನ್ನಿಷ್ಟ ಬಂದ ಹಾಗೆ ನಡೆದುಕೊಳ್ಳುವುದು ಕ್ರೌರ್ಯ ಮತ್ತು ಅದನ್ನು ಮುಚ್ಚಿಡಬೇಕಾಗಿ ಬರುವ ಅನಿವಾರ್ಯತೆ ಉಂಟಾಗುವುದು ಅದಕ್ಕಿಂತಲೂ ಹೀನಾಯ ಸ್ಥಿತಿ.

ಕೇವಲ ಅನಕ್ಷರಸ್ಥರು, ಗ್ರಾಮೀಣ ಮಹಿಳೆಯರು ಮಾತ್ರವಲ್ಲ, ನಗರ ಪ್ರದೇಶದ, ಅಕ್ಷರಸ್ಥ ಮಹಿಳೆಯರು ಸಹ ತಮ್ಮ ಸಂಗಾತಿಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಷ್ಟೋ ಕಡೆಗಳಲ್ಲಿ ಸಮಾಜ, ಕುಟುಂಬ, ಮಕ್ಕಳು ಮುಂತಾದ ಅಸಹಾಯಕತೆಗೆ ಒಳಗಾಗಿ ಯಾರಲ್ಲೂ ಹೇಳಿಕೊಳ್ಳಲಾಗದೇ ನರಕ ಅನುಭವಿಸುತ್ತಾರೆ. ಇನ್ನಷ್ಟು ಕಡೆಗಳಲ್ಲಿ ಸ್ವಂತ ತಾಯಿ ತಂದೆಯರ ಜೊತೆ ಹಂಚಿಕೊಂಡಾಗಲೂ ಮನೆ ಮರ್ಯಾದೆ, ಅಥವಾ ತವರು ಮನೆಗೆ ವಾಪಸ್‌ ಬಾರದಿರಲಿ ಎನ್ನುವ ಉದ್ದೇಶದಿಂದ ಹೊಂದಿಕೊಂಡು ಹೋಗು ಎನ್ನುವ ಕ್ರೌರ್ಯವೂ ನಡೆಯುತ್ತಲೇ ಬಂದಿದೆ.

ಅಷ್ಟಕ್ಕೂ ಒಬ್ಬ ವಿವಾಹಿತ ಮಹಿಳೆಯ ಸಾವು ಸಮಾಜಕ್ಕೆ ಮುಖ್ಯವಾಗುವುದೇ ಇಲ್ಲ. ಆಕೆಗೆ ಯಾರದೋ ಜೊತೆ ಅನೈತಿಕ ಸಂಬಂಧವಿತ್ತು, ಆಕೆಯನ್ನು ಯಾರೋ ಬಂದು ಭೀಕರವಾಗಿ ಕೊಲೆ ಮಾಡಿದರು, ಮೊದಲನೆಯ ಹೆಂಡತಿ ಎರಡನೆಯ ಹೆಂಡತಿಯ ಜೊತೆ ಜುಟ್ಟು ಹಿಡಿದು ಜಗಳವಾಡಿದಳು, ಅವಿವಾಹಿತ ಹುಡುಗಿಯ ಮೇಲೆ ಈ ಮೊದಲು ಕೇಳಿದ ಘಟನೆಗಿಂತ ಭಯಾನಕವಾಗಿ ಅತ್ಯಾಚಾರವಾಗಿ ಕೊಲೆ ಮಾಡಿದರು ಎನ್ನುವ ಬರ್ಬರ ವಿಷಯಗಳಷ್ಟೇ ಮಾಧ್ಯಮಕ್ಕಾಗಲೀ, ಜನಗಳಿಗಾಗಲೀ ಬೇಕಾಗುವುದು. ಒಬ್ಬ ವಿವಾಹಿತ ಮಹಿಳೆ ಹೇಗೆ ಸತ್ತರೂ ಅದು ಆಕೆಯ ಮಕ್ಕಳಿಗೋ, ಗಂಡನಿಗೋ ಸಂಬಂಧಿಸಿದ ವಿಷಯ ಎಂದು ಜಾಣ ಕುರುಡಾಗಿಬಿಡುತ್ತದೆ ಸಮಾಜ.

ಮದುವೆಯಾದ ಒಂದೇ ಕಾರಣಕ್ಕೆ ದೈಹಿಕವಾಗಿ ಹಿಂಸೆಗೊಳಗಾಗುವುದು ಕೊನೆಗೆ ಒಂದು ಗೌರವಯುತವಾದ ಸಾವು ಕೂಡ ದಕ್ಕದೇ ಹೋಗುವುದು, ಇದೆಲ್ಲದಕ್ಕೂ ಕಾನೂನು ಕುರುಡಾಗಿಬಿಡುವುದು ಬಹಳ ಆತಂಕಕಾರಿ. ಮದುವೆಯಾದ ಒಂದೇ ಕಾರಣಕ್ಕೆ ಹೆಣ್ಣನ್ನು ಒಂದು ಜೀವಿ ಎಂದು ಕೂಡ ಪರಿಗಣಿಸದೇ ಗಂಡನ ಆಸ್ತಿ, ಅವನು ಆಕೆಯ ಜೊತೆ ಏನು ಬೇಕಾದರೂ ಮಾಡಬಹುದು, ಆಕೆ ಪತ್ನಿ ಎನ್ನುವ ಕಾರಣಕ್ಕೆ ಎಂತಹ ನೋವು, ಮುಜುಗರ, ಅವಮಾನ, ದೌರ್ಜನ್ಯ, ಅತ್ಯಾಚಾರಗಳನ್ನು ಬೇಕಾದರೂ ಸಹಿಸಿಕೊಳ್ಳಬೇಕು ಎನ್ನುವುದು ಮದುವೆ ಎನ್ನುವ ಚೌಕಟ್ಟನ್ನೇ ಪ್ರಶ್ನಿಸುವ ಅನಿವಾರ್ಯತೆ ತರುತ್ತದೆ.

ಹೆಂಡತಿಯ ಮುಖ ನೋಡುತ್ತಾ ಕುಳಿತು…
“..ಮನೆಯಲ್ಲಿ ಹೆಂಡತಿಯ ಜೊತೆ ಕಾಲ ಕಳೆಯುವುದು ಎನ್ನುವುದನ್ನು ಅನ್‌ ಪ್ರೊಡಕ್ಟಿವ್‌ ಎನ್ನುವುದಾದರೆ, ಮಹಿಳೆಯ ಪಾತ್ರ ಮನೆಯಲ್ಲಾಗಲೀ, ಬದುಕಲ್ಲಾಗಲೀ ಏನೂ ಇಲ್ಲ, ಆಕೆ ಕೇವಲ ಮನೆಯ ಚಾಕರಿಗಳು ಮಾಡಿ, ಮಕ್ಕಳನ್ನು ಹಡೆಯುವ ಯಂತ್ರವಾಗಿರುತ್ತಾಳೆ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಮನೆಯಲ್ಲಿ ಕುಳಿತು ಎಷ್ಟು ಹೊತ್ತು ಹೆಂಡತಿಯ ಮುಖ ನೋಡಿಕೊಂಡು ಇರುತ್ತೀರಿ; ವಾರದಲ್ಲಿ 90 ಗಂಟೆ ಕೆಲಸ ಮಾಡಬೇಕು ಎಂದು ಎಲ್‌ ಆಂಡ್‌ ಟಿ ಅಧ್ಯಕ್ಷರು ಹೇಳಿಕೆ ಕೊಟ್ಟಿರುವುದು ಸುದ್ದಿಯಾಗಿದೆ. ಈ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡಲು ಮಾನಸಿಕ ಆರೋಗ್ಯವೂ ಮುಖ್ಯ ಎಂದು ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿರುವುದು ಸ್ವಾಗತಾರ್ಹ.

ಹೆಂಡತಿಯ ಮುಖ ನೋಡಿಕೊಂಡು ಇರುವುದು ಎನ್ನುವ ಒಂದು ವಾಕ್ಯವೇ ಪುರುಷ ಪ್ರಧಾನ ವ್ಯವಸ್ಥೆಯ ಬೇರುಗಳು ಎಷ್ಟು ಆಳಕ್ಕೆ ಹಬ್ಬಿವೆ ಎನ್ನುವುದನ್ನು ತೋರಿಸುತ್ತವೆ. ಎಷ್ಟು ಹೊತ್ತು ತಾನೇ ಹೆಂಡತಿಯನ್ನು ನೋಡಿಕೊಂಡು ಇರುತ್ತೀರಿ, ಬಂದು ಕೆಲಸ ಮಾಡಿ ಎನ್ನುವುದು ಕೆಲಸ ಮತ್ತು ವೈಯಕ್ತಿಕ ಬದುಕಿನ ಹೊಂದಾಣಿಕೆಯನ್ನು ಪ್ರಶ್ನಿಸುವುದಲ್ಲದೆ, ಪುರುಷ ಪ್ರಧಾನ ವ್ಯವಸ್ಥೆ ಗಂಡಿನ ಮತ್ತು ಹೆಣ್ಣಿನ ಮೇಲೆ ಹೇರಿರುವ ಅಭಿಪ್ರಾಯಗಳನ್ನೂ ಸೂಚಿಸುತ್ತದೆ. ಗಂಡು ಮಾತ್ರವೇ ದುಡಿಯುವುದು ಎನ್ನುವುದರ ಜೊತೆಗೆ ಹೆಣ್ಣಿನ ಕೊಡುಗೆ ಏನೂ ಇಲ್ಲ ಎನ್ನುವ ಭಾವನೆಯನ್ನು ಹೇರುವ ಜೊತೆಗೆ ಗಂಡಿಗೆ ದುಡಿಯುವುದರ ಹೊರತಾಗಿ ಬೇರೆ ಬದುಕೇ ಇಲ್ಲ ಎನ್ನುವುದನ್ನೂ ಹೇರುತ್ತದೆ. ಮನೆ, ಮನೆಯವರ ಜೊತೆ ಸಂತೋಷವಾಗಿ ಸಮಯ ಕಳೆದಷ್ಟೂ, ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ, ಮಾನಸಿಕವಾಗಿ ಆರೋಗ್ಯವಂತನಾಗಿರುವ ವ್ಯಕ್ತಿ ಕೆಲಸದ ಸ್ಥಳದಲ್ಲಿ ಇನ್ನಷ್ಟು ಕೊಡುಗೆ ನೀಡಬಲ್ಲ ಎನ್ನುವುದು ಹಿಂದಿನಿಂದಲೂ ಬಂದ ಅರಿವು.

ಮನೆಯಲ್ಲಿ ಹೆಂಡತಿಯ ಜೊತೆ ಕಾಲ ಕಳೆಯುವುದು ಎನ್ನುವುದನ್ನು ಅನ್‌ ಪ್ರೊಡಕ್ಟಿವ್‌ ಎನ್ನುವುದಾದರೆ, ಮಹಿಳೆಯ ಪಾತ್ರ ಮನೆಯಲ್ಲಾಗಲೀ, ಬದುಕಲ್ಲಾಗಲೀ ಏನೂ ಇಲ್ಲ, ಆಕೆ ಕೇವಲ ಮನೆಯ ಚಾಕರಿಗಳು ಮಾಡಿ, ಮಕ್ಕಳನ್ನು ಹಡೆಯುವ ಯಂತ್ರವಾಗಿರುತ್ತಾಳೆ. ಒಬ್ಬ ಗಂಡಿನ ಬದುಕಿನಲ್ಲಿನ ಭಾವನಾತ್ಮಕ, ವೈಚಾರಿಕ ಸಾಂಗತ್ಯಕ್ಕೆ ಹೆಣ್ಣು ನೀಡುವ ಕೊಡುಗೆಯನ್ನು ಸಂಪೂರ್ಣವಾಗಿ ಅಲಕ್ಷಿಸುವ ಮನಸ್ಥಿತಿಗಳಿಗೆ ಹೆಣ್ಣು ಭೋಗದ ವಸ್ತುವೂ ಅಲ್ಲ, ಶೋಕೇಸಿನ ಗೊಂಬೆಯೂ ಅಲ್ಲ, ಜೊತೆಗೆ ಹೆಂಡತಿಯ ಜೊತೆ ಸಮಯ ಕಳೆಯುವುದು ನಾಚಿಕೆಗೇಡಿನ ವಿಷಯವೂ ಅಲ್ಲ ಎನ್ನುವುದನ್ನು ತಿಳಿಸಬೇಕಿದೆ.

ಮನೆಯಲ್ಲಿರುವುದರ ಅರ್ಥ ಹೆಂಡತಿಯ ಮುಖವನ್ನೇ ನೋಡುತ್ತಿರುವುದು ಎನ್ನುವುದಾದರೆ ಹೆಣ್ಣು ಕೇವಲ ವಸ್ತುವಷ್ಟೇ. ಅಥವಾ ಹೆಣ್ಣು ಕೇವಲ ಗಂಡ ತನ್ನನ್ನು ನೋಡುತ್ತಾ ಇರಲಿ ಎಂದಷ್ಟೇ ಬಯಸುತ್ತಾಳೆ ಎನ್ನುವುದು ಕೂಡ ಒಂದು ಅಭಿಪ್ರಾಯ ಹೇರಿಕೆಯೇ. ಹೆಣ್ಣು ಸಬಲಳಾಗಿ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುತ್ತಿರುವಾಗ, ಗಂಡು ಮಾತ್ರ ದುಡಿಯುವುದು, ಮತ್ತು ಹೆಣ್ಣು ಮನೆಯಲ್ಲಿ ಗಂಡ ಬಂದು ತನ್ನ ಮುಖ ನೋಡುತ್ತಾ ಕೂತಿರುತ್ತಾನೆ ಎಂದಷ್ಟೇ ಬದುಕುವುದು ಎನ್ನುವ ಚಿತ್ರಣವೇ ಹಾಸ್ಯಾಸ್ಪದ.

ಆ ಹೇಳಿಕೆಯು ಮಹಿಳೆಯರ ಕುರುತಾಗಿ ಅವಮಾನಕಾರಿಯಾಗಿದೆ ಎನ್ನುವುದರ ಜೊತೆ ಜೊತೆಗೆ ಪುರುಷ ಪ್ರಧಾನ ವ್ಯವಸ್ಥೆಯು ಪುರುಷರ ಮೇಲೂ ಎಷ್ಟು ಒತ್ತಡ ಹೇರುತ್ತಿದೆ ಎನ್ನುವುದನ್ನು ಗಮನಿಸಬೇಕಾಗಿದೆ. ಮನೆಯಲ್ಲಿ ಒಬ್ಬ ಪುರುಷ ಕಳೆಯುವ ಸಮಯ ಅವನ ಸಂಗಾತಿಯ ಜೊತೆಯೇ ಆಗಿರಬಹುದು, ತಂದೆ ತಾಯಿಯ ಜೊತೆಯೇ ಆಗಿರಬಹುದು, ಮಕ್ಕಳ ಜೊತೆಯೇ ಆಗಿರಬಹುದು, ಸ್ನೇಹಿತರ ಜೊತೆಯೇ ಆಗಿರಬಹುದು ಅಥವಾ ತನಗಾಗಿಯೇ ಸಮಯ ಕಳೆಯಬಹುದು. ಅದೆಲ್ಲವನ್ನೂ ಹೊರತುಪಡಿಸಿ ಒಬ್ಬ ಪುರುಷನಿಗೆ ದುಡಿಮೆ ಬಿಟ್ಟರೆ ಬೇರೇನೂ ಇಲ್ಲ ಎನ್ನುವುದನ್ನು ಹೇರುವುದು ಅಮಾನವೀಯ.

ವಿಶ್ವ ಸಂತೋಷದ ವರದಿ 2024ರ ಅನುಸಾರ (World Happiness Report) 143 ದೇಶಗಳಲ್ಲಿ ಭಾರತ 126ನೇ ಸ್ಥಾನದಲ್ಲಿದೆ. ಕುಟುಂಬದ ಜೊತೆಯೋ ಅಥವಾ ಬೇರೇನೇ ಕಾರಣಕ್ಕೂ ಸಮಯ ಕಳೆಯದೇ ಸದಾ ಕೆಲಸ ಮಾಡುವವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಹೋದಲ್ಲಿ ಕೊನೆಯ ಸ್ಥಾನಕ್ಕೂ ತಲುಪುವ ಸಾಧ್ಯತೆಯಿದೆ. ಮನೆ, ಕುಟುಂಬದ ಜೊತೆ ಸಮಯ ಕಳೆಯುವುದು ಅವಮಾನಕಾರಿ ವಿಷಯ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟಾಗ ಅದು ಬಹಳಷ್ಟು ಅನಾರೋಗ್ಯಕರ ಸಂಸ್ಕೃತಿಗಳನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಮನೆಯಲ್ಲಿನ, ಮನೆಯವರ ಶ್ರಮವನ್ನು ಕಡೆಗಣಿಸುವ, ತಿರಸ್ಕರಿಸುವ, ಅಲ್ಲಗಳೆಯುವ ಮಾದರಿಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ.

ಕೆಲವಷ್ಟು ಕಛೇರಿಗಳಲ್ಲಿ ಉದ್ಯೋಗಿಯ ಮನೆಯವರನ್ನೂ ಕರೆದು ಸನ್ಮಾನಿಸುವ ಪದ್ಧತಿಯಿದೆ. ಒಬ್ಬ ಉದ್ಯೋಗಿಯ ಸಾಧನೆಗೆ ಅವರ ಮನೆಯವರು ನೀಡುವ ಬೆಂಬಲ ಕೂಡ ಕಾರಣ ಎಂದು ಗೌರವಿಸುವುದೂ ಇದೆ. ಇಳಿಸಂಜೆಯಲ್ಲಿ ಅಜ್ಜ ಅಜ್ಜಿ ಕೈಹಿಡಿದು ನಡೆಯುವುದನ್ನು ನೋಡುವಾಗ ಆಗುವ ಸಂತೋಷ, ದಿನದ ಅಂತ್ಯದಲ್ಲಿ ದುಡಿದು ಬಂದ ಗಂಡ ಹೆಂಡತಿ ಮೆಟ್ಟಿಲಲ್ಲಿ ಕೈಹಿಡಿದು ಕೂತು ಭವಿಷ್ಯದ ಕನಸು ಕಾಣುವುದನ್ನು ನೋಡುವ ಸಂತೋಷ, ಮನೆಮಂದಿಯೆಲ್ಲಾ ಕೂತು ಮನೆಯ ಮಕ್ಕಳು ಆಡುವುದನ್ನು ನೋಡುವ ಖುಷಿ, ಇದೆಲ್ಲ ಯಾವ ಬೆಲೆಗೂ ಅಳತೆಗೂ ನಿಲುಕದ್ದು. ನಮ್ಮಲ್ಲಿ ಎಷ್ಟೋ ಮಂದಿ ವಾರ ಪೂರ್ತಿ ದುಡಿಯುವುದೇ ವಾರದಲ್ಲಿ ಒಂದು ದಿನ ಮಕ್ಕಳ, ಹೆಂಡತಿಯ, ಗಂಡನ, ಅಪ್ಪ ಅಮ್ಮಂದಿರ ಜೊತೆ ಕೂತು ಕಳೆಯುವುದಕ್ಕೆ. ಅದನ್ನು ಅವಮಾನ ಎಂದು ಭಾವಿಸಿ ದುಡಿಯುವುದು ಅರ್ಥಹೀನ ಮತ್ತು ಅಷ್ಟು ಪ್ರೋತ್ಸಾಹಿಸುವ ಜೀವಗಳಿಗೆ ಮಾಡುವ ಅವಮಾನ.

ಬದುಕಿನಲ್ಲಿ, ಕಾರ್ಯಕ್ಷೇತ್ರಗಳಲ್ಲಿ, ಮಹಿಳೆಯರ ಕೊಡುಗೆಯ ಕುರಿತಾಗಿ ಗೌರವ ಇಲ್ಲದಾಗಲೇ ಗಂಡು ಮಾತ್ರವೇ ಹೊರಹೋಗಿ ದುಡಿಯುವುದು, ಅವನಿಗೆ ದುಡಿಮೆಯ ಹೊರತಾದ ಬದುಕಿರಬಾರದು, ಹೆಣ್ಣು ಭೋಗದ ವಸ್ತುವಷ್ಟೇ, ಅವಳಿಗೆ ಗಂಡ ಬಂದಾಗ ಆದರಿಸುವುದರ ಹೊರತಾದ ಬದುಕಿಲ್ಲ ಎಂಬರ್ಥದ ಉಡಾಫೆಯ ಹೇಳಿಕೆಗಳು ಹೊರಬರುವುದು.

ಎಲ್‌ ಆಂಡ್‌ ಟಿ ಸಂಸ್ಥೆಯ 49000ಕ್ಕೂ ಹೆಚ್ಚಿನ ಪರ್ಮನೆಂಟ್‌ ಉದ್ಯೋಗಿಗಳಲ್ಲಿ ಕೇವಲ 2900ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ ಎಂದು ಕಂಪೆನಿಯ ವಾರ್ಷಿಕ ವರದಿ ಹೇಳುತ್ತದೆ. ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಾಗಲೀ, ಲೀಡರ್‌ ಶಿಪ್‌ ಸಮಿತಿಯಲ್ಲಾಗಲೀ ಒಬ್ಬರೂ ಮಹಿಳಾ ಉದ್ಯೋಗಿಗಳು ಇಲ್ಲದೇ ಇಲ್ಲದಿರುವುದು ವಿಷಾದನೀಯ. ಶೇಕಡಾ 10ರಷ್ಟೂ ಮಹಿಳಾ ಉದ್ಯೋಗಿಗಳಿಲ್ಲದ ಸಂಸ್ಥೆಯ ಅಧ್ಯಕ್ಷರೊಬ್ಬರು ಈ ರೀತಿ ಹೇಳಿಕೆ ಕೊಡುವುದು ವಿಷಾದನೀಯ.

ಉನ್ನತ ಹುದ್ದೆಗಳಲ್ಲಿನ ವ್ಯಕ್ತಿಗಳು, ಸೂಕ್ಷ್ಮತೆಗಳನ್ನು ಹೊಂದಿ ಸಂವೇದನಾಶೀಲವಾಗಿ ಆಲೋಚಿಸಲು ಮತ್ತು ನಡೆದುಕೊಳ್ಳಳು ಸಾಧ್ಯವಾದಾಗ ಸಮಾಜದಲ್ಲಿ ಒಂದಷ್ಟು ಬದಲಾವಣೆ ತರಲು ಸಾಧ್ಯ. ತಾವೇ ಅಸೂಕ್ಷ್ಮವಾಗಿ, ಅಮಾನವೀಯವಾಗಿ ಮಾತನಾಡಿದಾಗ ಅದರ ಮುಂದಿನ ಬೆಳವಣಿಗೆಗಳು ಏನಾಗಬಹುದು ಎನ್ನುವುದನ್ನು ಅವರು ಯೋಚಿಸಬೇಕಿದೆ.

ವಿದ್ಯಾರ್ಥಿನಿಯರ ಘನತೆಯ ಬದುಕಿಗೆ ಎಲ್ಲರು ಪಣತೊಡಬೇಕಿದೆ – ಹೋರಾಟಗಾರ್ತಿ ಸೌಮ್ಯ
ಸಕಲೇಶಪುರ : ಹಾಸನದ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪೋಸ್ಟ್‌ ಮೆಟ್ರಿಕ್‌ ಹಾಸೆಲ್‌ ನಲ್ಲಿ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನದ ಅಂಗವಾಗಿ ಎಸ್.ಎಫ್.ಐ ಸಂಘಟನೆಯ ವತಿಯಿಂದ  ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ಥಾವಿಕವಾಗಿ ಮಾತನಾಡಿದ ಮಹಿಳಾ ಸಂಘಟನೆಯ ಸೌಮ್ಯಾರಬರು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿಬಾಪುಲೆ ರವರು ಮಹಿಳಾ಼ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟಿಟರುವುದಿಲ್ಲ, ನೂರಾರು ವರ್ಷಗಳ ಹಿಂದೆಯೆ ಅವರು ಈ ವೈದಿಕಶಾಹಿ ಪರಂಪರೆ ಮಹಿಳೆಯನ್ನು ಅಸೃಷ್ಯಳಾಗಿ ನೋಡುವಪದ್ದತಿಗಳ ವಿರುದ್ಧ ಹೋರಾಟ ಮಾಡಿ ಬಂದ ಕಾರಂ ಇಂದು ಮಹಿಳೆಯರಿಗೆ ಸಮಾನವಾದ ಶಿಕ್ಷಣ ಸಿಗುತ್ತಿದೆ. ಸಾವಿತ್ರಿ ಬಾಯಿಪುಲೆ ರವರು ಮಾಡಿರುವುದು ಶಿಕ್ಷಣ ಕ್ರಾಂತಿ ‘‘ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು. ಅಂಥ ಯಾರನ್ನಾಗಲೀ ನೋಡಿದರೆ ಅಲ್ಲೇ ತಿನ್ನಲು ಕೊಡುತ್ತಿದ್ದರು ಅಥವಾ ಅಡಿಗೆಯಾ ಗಿದ್ದರೆ ಊಟ ಕೊಡುತ್ತಿದ್ದರು. ಹರಿದ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮದೇ ಒಂದು ಸೀರೆ ಮನೆಯಿಂದ ತಂದು ಕೊಟ್ಟು ಬಿಡುತ್ತಿದ್ದರು. ಇದರಿಂದ ಮನೆ ಖರ್ಚು ಹೆಚ್ಚುತ್ತ ಹೋಯಿತು. ತಾತ್ಯಾ ಒಮ್ಮೊಮ್ಮೆ ಹೇಳುತ್ತಿದ್ದರು,

‘‘ಇಷ್ಟು ಖರ್ಚು ಮಾಡಿದರೆ ಹೇಗೆ?’’ ಎಂದು. ಅದಕ್ಕೆ ಸಾವಿತ್ರಿಬಾಯಿ ನಸುನಗುತ್ತ, ‘‘ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?’’ ಎಂದು ಕೇಳುತ್ತಿದ್ದರು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಅಚಲ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು; ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯ ಎಂದು ಮಾತನಾಡಿದರು.

ಸಮಾಜ ಕಲ್ಯಾಣ ಅಧಿಕಾರಿಗಳಾದ ಆಶಾರವರು ಮಾತನಾಡಿ ಫುಲೆ ದಂಪತಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಮಹಿಳೆಯರಿಗೆ ಶಿಕ್ಷಣ ಸಿಗಬೇಕು ಅವರಿಗು ಘನೆತೆಯ ಬದುಕಿದೆ ಎಂಬುದನ್ನು ಒತ್ತಿ ಹೇಳಿದರು ಅಂದಿನ ಕಾಲದಲ್ಲಿ ಅವರು ಅಷ್ಟು ಕೆಲಸ ಮಾಡದೆ ಹೋಗಿದ್ದರೆ ಇಂದು ನಾವು ನೆಮ್ಮದಿಯಾಗಿ ಇಲ್ಲಿ ಕೂರಲು ಕೂಡ ಸಾದ್ಯವ ಆಗುತ್ತಿರಲಿಲ್ಲ ಹಾಗಾಗಿ ಅವರು ನಮಗೆ ಆದರ್ಶ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿಚಾರ ಸಂಕೀರ್ಣದಲ್ಲಿ  ಜಿಲ್ಲಾ ಕಾರ್ಯದರ್ಶಿ ರಮೇಶ್‌, ಚಾಂದಿನ, ರೂಪ ಇನ್ನಿತರು ಉಪಸ್ಥಿತರಿದ್ದರು.

ಮಹಿಳಾ ಶಿಕ್ಷಣಕ್ಕೆಹೆಚ್ಚಿನ ಆದ್ಯತೆ ನೀಡಬೇಕಿದೆ – ರಮೇಶ ಹಾಸನ್‌
ಹಾಸನದ ಹೊಳೆನರಸಿಪುರ ತಾಲ್ಲೂಕಿನ ಪೋಸ್ಟ್‌ ಮೆಟ್ರಿಕ್‌ ಹಾಸೆಲ್‌ ನಲ್ಲಿ ಸಾವಿತ್ರಿ ಬಾಯಿಪುಲೆ ರವರ ಜನ್ಮ ದಿನದ ಅಂಗವಾಗಿ ಎಸ್.ಎಫ್.ಐ ಸಂಘಟನೆಯ ವತಿಯಿಂದ  ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಸ್ಥಾವಿಕವಾಗಿ ಮಾತನಾಡಿದ ಎಸ್.ಎಫ್.ಐ ನ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಹಾಸನ್‌ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಏಕೆಂದರೆ ಶತಮಾನಗಳಿಂದ ಶೋಷಣೆಗೆ ಒಳ ಪಟ್ಟು ಮಹಿಳಾ ಸಮುದಾಯ ಇಂದಿಗೂ ಅದೆ ಸಮಸ್ಯೆ ಎದುರಿಸುತ್ತಿದೆ, ಸಾವಿತ್ರಿಬಾಪುಲೆ ರವರು ಮಹಿಳಾ಼ ಶಿಕ್ಷಣಕ್ಕೆ ಒತ್ತು ಕೊಟ್ಟಷ್ಟು ಯಾರು ಕೊಟಿಟರುವುದಿಲ್ಲ, ನೂರಾರು ವರ್ಷಗಳ ಹಿಂದೆಯೆ ಅವರು ಈ ವೈದಿಕಶಾಹಿ ಪರಂಪರೆ ಮಹಿಳೆಯನ್ನು ಅಸೃಷ್ಯಳಾಗಿ ನೋಡುವಪದ್ದತಿಗಳ ವಿರುದ್ಧ ಹೋರಾಟ ಮಾಡಿ ಬಂದ ಕಾರಂ ಇಂದು ಮಹಿಳೆಯರಿಗೆ ಸಮಾನವಾದ ಶಿಕ್ಷಣ ಸಿಗುತ್ತಿದೆ. ಸಾವಿತ್ರಿ ಬಾಯಿಪುಲೆ ರವರು ಮಾಡಿರುವುದು ಶಿಕ್ಷಣ ಕ್ರಾಂತಿ ‘‘ಸಾವಿತ್ರಿ ಬಾಯಿ ತುಂಬ ಉದಾರಿಯಾಗಿದ್ದರು. ಅವರ ಹೃದಯ ಕರುಣಾಭರಿತವಾಗಿತ್ತು. ಬಡವರು, ಅಸಹಾಯಕರ ಕುರಿತು ಬಹಳ ಅನುಭೂತಿ ಹೊಂದಿದ್ದರು. ಅಂಥ ಯಾರನ್ನಾಗಲೀ ನೋಡಿದರೆ ಅಲ್ಲೇ ತಿನ್ನಲು ಕೊಡುತ್ತಿದ್ದರು ಅಥವಾ ಅಡಿಗೆಯಾ ಗಿದ್ದರೆ ಊಟ ಕೊಡುತ್ತಿದ್ದರು. ಹರಿದ ಸೀರೆಯುಟ್ಟ ಹೆಣ್ಣುಮಕ್ಕಳನ್ನು ನೋಡಿದರೆ ತಮ್ಮದೇ ಒಂದು ಸೀರೆ ಮನೆಯಿಂದ ತಂದು ಕೊಟ್ಟು ಬಿಡುತ್ತಿದ್ದರು. ಇದರಿಂದ ಮನೆ ಖರ್ಚು ಹೆಚ್ಚುತ್ತ ಹೋಯಿತು. ತಾತ್ಯಾ ಒಮ್ಮೊಮ್ಮೆ ಹೇಳುತ್ತಿದ್ದರು, ‘‘ಇಷ್ಟು ಖರ್ಚು ಮಾಡಿದರೆ ಹೇಗೆ?’’ ಎಂದು. ಅದಕ್ಕೆ ಸಾವಿತ್ರಿಬಾಯಿ ನಸುನಗುತ್ತ, ‘‘ನಾವು ಸತ್ತು ಹೋಗುವಾಗ ಏನನ್ನಾದರೂ ಜೊತೆಗೆ ಒಯ್ಯುತ್ತೇವೆಯೇ?’’ ಎಂದು ಕೇಳುತ್ತಿದ್ದರು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ತುಂಬ ಸಂತೋಷ, ತಾವೇ ಅಡಿಗೆ ಮಾಡಿ ಬಡಿಸುತ್ತಾರೆ. ಅವರು ಸದಾ ಮಹಿಳೆಯರ ಶಿಕ್ಷಣ ಮತ್ತು ಉನ್ನತಿಯ ಬಗ್ಗೆಯೇ ಯೋಚಿಸುತ್ತಾರೆ. ಸೌಂದರ್ಯ, ಸಿರಿಸಂಪತ್ತು ಕುರಿತಾದ ನಿಗ್ರಹವನ್ನು ಎಳೆಯ ವಯಸ್ಸಿನಲ್ಲೇ ದಕ್ಕಿಸಿಕೊಂಡ ಕಾರಣ ಹಾಗೂ ತಾನು ಮಾಡುವ ಕೆಲಸದಲ್ಲಿ ಅಚಲ ಶ್ರದ್ಧೆ ಬೆಳೆಸಿಕೊಂಡ ಕಾರಣ ಸಾವಿತ್ರಿ ತನ್ನ ಕಾಲದ ಉಳಿದ ಮಹಿಳೆಯರಿಗಿಂತ ತೀರಾ ಭಿನ್ನವಾಗಿ ಯೋಚಿಸಲು; ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು. ಇಂತಹ ಮನೋಭಾವವೇ ಎಲ್ಲ ಮಕ್ಕಳನ್ನೂ ತನ್ನವೇ ಎಂದುಕೊಂಡು ಅವರಿಗೆ ಅಕ್ಷರದ ಅನ್ನ ಉಣಬಡಿಸಲು, ಎಲ್ಲರಿಗೂ ತಾಯಿಯಾಗಲು ಸಾಧ್ಯ ಎಂದು ಮಾತನಾಡಿದರು.

ಸಮಾಜ ಕಲ್ಯಾಣ ಅಧಿಕಾರಿಗಳಾದ ಮಂಜುನಾಥ್‌ ರವರು ಮಾತನಾಡಿ ಫುಲೆ ದಂಪತಿಗಳ ಕೊಡುಗೆಯನ್ನು ನಾವು ಸ್ಮರಿಸಬೇಕು ಮಹಿಳೆಯರಿಗೆ ಶಿಕ್ಷಣ ಸಿಗಬೇಕು ಅವರಿಗು ಘನೆತೆಯ ಬದುಕಿದೆ ಎಂಬುದನ್ನು ಒತ್ತಿ ಹೇಳಿದರು ಅಂದಿನ ಕಾಲದಲ್ಲಿ ಅವರು ಅಷ್ಟು ಕೆಲಸ ಮಾಡದೆ ಹೋಗಿದ್ದರೆ ಇಂದು ನಾವು ನೆಮ್ಮದಿಯಾಗಿ ಇಲ್ಲಿ ಕೂರಲು ಕೂಡ ಸಾದ್ಯವ ಆಗುತ್ತಿರಲಿಲ್ಲ ಹಾಗಾಗಿ ಅವರು ನಮಗೆ ಆದರ್ಶ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ವಿಚಾರ ಸಂಕೀರ್ಣದಲ್ಲಿ  ನಿಲಯಪಾಲಕರಾದ ಚಂದ್ರಮ್ಮ ಕಾರ್ಯದರ್ಶಿ ರಮೇಶ್‌ ಹಾಸನ್‌, ತೇಜಸ್ವಿನಿ, ಸರಿತ, ಶಾಲಿನಿ ಇನ್ನಿತರು ಉಪಸ್ಥಿತಿರಿದ್ದರು.

ಹೊಸ ವರ್ಷದ ಹೊಸಿಲಲ್ಲಿ… ಹೊಸ ವರ್ಷದ ಆಸುಪಾಸಿನಲ್ಲಿ ಕಣ್ಣಿಗೆ ಬಿದ್ದಿದ್ದು, ಕಾಡಿದ್ದು ಒಂದಿಷ್ಟು ಸುದ್ದಿಗಳು
“..ಪುರುಷ ಪ್ರಧಾನ ವ್ಯವಸ್ಥೆಯ ಅನುಸಾರ ಮಹಿಳೆ ಮದ್ಯ ಸೇವಿಸುತ್ತಾಳೆ ಎನ್ನುವುದು ಸಮಾಜದ ದೃಷ್ಟಿಯಲ್ಲಿ ಒಂದು ನೈತಿಕ ಅಧ:ಪತನದ ಸ್ಥಿತಿ. ಇಂತಹ ಚಿತ್ರಗಳ ಪ್ರಸಾರದ ಮೂಲಕ ಹೆಣ್ಣಿಗೆ ಸಭ್ಯತೆ, ಶೀಲ ಮುಂತಾದ ಮಾನದಂಡಗಳನ್ನು ಹೇರಲಾಗುತ್ತದೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹೆಣ್ಣು ಮಕ್ಕಳು ಕುಡಿದು ತೂರಾಡಿದ್ದು ಮಾಧ್ಯಮಗಳಿಗೆ ಜಗಿದು ಚಪ್ಪರಿಸುವ ಕವಳವಾಗಿತ್ತು. ಕುಡಿದ ಮತ್ತಿನಲ್ಲಿನ ಹೆಣ್ಣುಮಕ್ಕಳು ತೂರಾಡಿದ್ದು, ಮಾತಾಡಿದ್ದನ್ನು ಚಿತ್ರೀಕರಿಸಿದಲ್ಲದೇ ಪದೇ ಪದೇ ಬಿತ್ತರಿಸುವ ಮೂಲಕ ಮಾಧ್ಯಮಗಳು ಮತ್ತೊಮ್ಮೆ ತಮ್ಮನ್ನು ತಾವು ರಣಹದ್ದುಗಳು ಎಂದು ಸಾಬೀತುಪಡಿಸಿಕೊಂಡಿವೆ. ಮತ್ತೊಬ್ಬರ ಬದುಕನ್ನು ತಮಗಿಷ್ಟ ಬಂದ ಹಾಗೆ ರೆಕಾರ್ಡ್‌ ಮಾಡಿ ಜಗಜ್ಜಾಹೀರು ಮಾಡಬಾರದು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೇ, ಮುಂದೆ ಆ ಹೆಣ್ಣುಮಗಳಿಗೆ ಅದು ಎಷ್ಟರ ಮಟ್ಟಿಗಿನ ಮುಜುಗರ, ಅಪಾಯ ತಂದೊಡ್ಡಬಹುದು ಎನ್ನುವ ಕಾಳಜಿಯೂ ಇಲ್ಲದೇ ಜಗತ್ತಿನ ಅತಿ ಮುಖ್ಯ ಸುದ್ದಿ ಇದು ಎನ್ನುವಂತೆ ಬಿತ್ತರಿಸಿ ಇನ್ನಷ್ಟು ಕೀಳುಮಟ್ಟಕ್ಕಿಳಿದಿವೆ.

ಇಲ್ಲಿ ಮಾಧ್ಯಮಗಳ ನೀಚತನ ಅಷ್ಟೇ ಅಲ್ಲದೇ ಇದರ ಹಿಂದಿನ ಪುರುಷ ಪ್ರದಾನ ಚಿಂತನೆಗಳು ರಾಚುತ್ತಿವೆ. ಮಹಿಳೆ ಏನು ಮಾಡಬೇಕು, ಏನು ಮಾಡಬಾರದು, ಹೇಗಿರಬೇಕು, ಹೇಗಿರಬಾರದು ಎಲ್ಲವನ್ನೂ ನಿರ್ಧರಿಸುವ ಹಪಾಹಪಿ ಪುರುಷ ಪ್ರಧಾನ ವ್ಯವಸ್ಥೆಗಿದೆ. ಕುಡಿತ ಒಂದು ಸಾಮಾಜಿಕ ಸಮಸ್ಯೆ. ಕುಡಿತದಿಂದ ಮಹಿಳೆಗೆ ಮಾತ್ರವಲ್ಲ, ಪುರುಷನಿಗೂ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬರೀ ಹೆಣ್ಣುಮಕ್ಕಳನ್ನೇ ಯಾಕೆ ಚಿತ್ರೀಕರಿಸಿ, ಅವರನ್ನು ಜಗತ್ತಿನ ಪರಮಪಾಪಿಗಳು ಎನ್ನುವ ಹಾಗೆ ತೋರಿಸಲಾಯಿತು, ಎನ್ನುವುದಕ್ಕೆ ಪುರುಷ ಪ್ರಧಾನ ವ್ಯವಸ್ಥೆ ಉತ್ತರವಾಗಿ ನಿಲ್ಲುತ್ತದೆ.

ಇದೇ ಸಂಭ್ರಮಾಚರಣೆಗಳಲ್ಲಿ ಪುರುಷರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ಇಲ್ಲಿ ಟೀಕೆಗೆ ಒಳಗಾಗುವುದು ಮಹಿಳೆ. ತನ್ನ ದೇಹ, ಆಯ್ಕೆಗಳು ಮತ್ತು ಸಾಮಾಜಿಕ ಸ್ಥಾನ ಮಾನದ ವಿಷಯಕ್ಕೆ ಬಂದಾಗ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆ ತನಗೆ ಬೇಕಾದ ಹಾಗೆ ಆಕೆಯನ್ನು ನಿಯಂತ್ರಿಸುವ, ಟೀಕಿಸುವ ಅಧಿಕಾರವನ್ನು ತನಗೆ ತಾನೇ ತೆಗೆದುಕೊಳ್ಳುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ಅನುಸಾರ ಮಹಿಳೆ ಮದ್ಯ ಸೇವಿಸುತ್ತಾಳೆ ಎನ್ನುವುದು ಸಮಾಜದ ದೃಷ್ಟಿಯಲ್ಲಿ ಒಂದು ನೈತಿಕ ಅಧ:ಪತನದ ಸ್ಥಿತಿ. ಇಂತಹ ಚಿತ್ರಗಳ ಪ್ರಸಾರದ ಮೂಲಕ ಹೆಣ್ಣಿಗೆ ಸಭ್ಯತೆ, ಶೀಲ ಮುಂತಾದ ಮಾನದಂಡಗಳನ್ನು ಹೇರಲಾಗುತ್ತದೆ. ಟೀಕೆ ಗುರಿಪಡಿಸುವುದರ ಮೂಲಕ ಸಮಾಜ ಏನೆನ್ನುತ್ತದೆ ಎಂಬ ಭಯವಿಲ್ಲದೇ ಗಂಡು ತನಗೆ ಇಷ್ಟ ಬಂದ ರೀತಿಯಲ್ಲಿ ವರ್ತಿಸಬಹುದು, ಆದರೆ ಹೆಣ್ಣು ಮಾತ್ರ ಯಾರು ಏನೆನ್ನುತ್ತಾರೆ, ತಾನು ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ಪುರುಷ ಪ್ರಧಾನ ವ್ಯವಸ್ಥೆಯ ನಿಯಮಗಳಿಗೆ ತಕ್ಕಂತೆ ಬದುಕಬೇಕಾಗುತ್ತದೆ.

ಗಂಡು ಹೆಣ್ಣು ಜೊತೆಯಾಗಿ ಭಾಗವಹಿಸಿದ್ದರೂ ಇಲ್ಲಿ ಸಾರ್ವಜನಿಕವಾಗಿ ಅವಮಾನಕ್ಕೆ, ಮುಜುಗರಕ್ಕೊಳಗಾಗಿದ್ದು ಮಹಿಳೆ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯನ್ನು ಚಿತ್ರೀಕರಿಸಿದ್ದು, ಅದು ಎಲ್ಲೆಂದರಲ್ಲಿ ಹರಿದಾಡಿದ್ದು, ಸಾರ್ವಜನಿಕವಾಗಿ ಬಿತ್ತರಿಸಿದ್ದು ಆಕೆಗೆ ನೀಡುವ ಮಾನಸಿಕ ಒತ್ತಡದ ಜೊತೆಗೆ ಸಮಾಜದಲ್ಲಿ ಆಕೆಯ ಘನತೆಗೂ ಧಕ್ಕೆ ಉಂಟು ಮಾಡುತ್ತದೆ. ಮದ್ಯಪಾನದಿಂದಾಗಿ ಮಹಿಳೆಯನ್ನು ಚಾರಿತ್ರ್ಯಹೀನರೆಂದು ಹಣೆಪಟ್ಟಿ ಕಟ್ಟಿ ಸಮಾಜದ ಎದುರು ನಿಲ್ಲಿಸಿದಾಗ ಆಳಿಗೊಂದು ಕಲ್ಲು ಎನ್ನುವಂತೆ ಮಹಿಳೆಯ ಮೇಲಾಗುವ ಎಲ್ಲಾ ಅಪರಾಧ ದೌರ್ಜನ್ಯಗಳಿಗೂ ಮಹಿಳೆಯೇ ಕಾರಣ ಎನ್ನುವಂತೆ ಆಕೆಯನ್ನು ದೋಷಿಸಲಾಗುತ್ತದೆ. ಮದ್ಯಪಾನ ಮಾಡುವ ಮಹಿಳೆಗೆ ಸ್ವೇಚ್ಛಾಚಾರಿ, ಬೋಲ್ಡ್‌, ಎಲ್ಲದಕ್ಕೂ ಸಿದ್ಧವಿರುವವಳು, ಕರೆದರೆ ಬರುವವಳು ಹೀಗೆ ನಾನಾ ರೀತಿಯ ಹೆಸರಿಟ್ಟು ನೈತಿಕತೆಯ ಹೆಸರಲ್ಲಿ ಆಕೆಯ ಮೇಲೆ ಇನ್ನಷ್ಟು ದೌರ್ಜನ್ಯ ನಡೆಸಲಾಗುತ್ತದೆ.

ಗಂಡು ಕಣ್ಣಿಗೇ ಬೀಳಲಿಲ್ಲವೆನ್ನುವ ರೀತಿಯಲ್ಲಿ ಹೆಣ್ಣಿನ ಮೇಲೆ ಮಾಧ್ಯಮದವರ ದೌರ್ಜನ್ಯ ಒಂದು ಕಡೆಯಾದರೆ ಸಮುದಾಯದ ಉಳಿವಿಗಾಗಿ ಹೆಣ್ಣು ಮಕ್ಕಳು ಹದಿನೆಂಟಕ್ಕೇ ಮದುವೆಯಾಗಿ ಮೂರಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೆರಬೇಕೆನ್ನುವ ಕರೆ ಇನ್ನೊಂದು ಕಡೆ.

ಹೈಟೆಕ್‌ ಆದರೂ ಮಾಡರ್ನ್ ಆದರೂ, ಧಾರ್ಮಿಕವೇ ಆದರೂ ಇಲ್ಲಿ ಟಾರ್ಗೆಟ್‌ ಆಗುವವರು ಹೆಣ್ಣುಮಕ್ಕಳು. ಹೆಣ್ಣುಮಕ್ಕಳ ಮೇಲೆ ಪ್ರತಿ ದಿನ ಪ್ರತಿ ಗಂಟೆಗೆ ನೂರಾರು ದೌರ್ಜನ್ಯ, ಅಪರಾಧಗಳು ನಡೆಯುತ್ತಿದ್ದರೂ ಹೆಣ್ಣು ಮಕ್ಕಳ ಸಬಲೀಕರಣಕ್ಕಿಂದ ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಇನ್ನಷ್ಟು ಒತ್ತಡ ಹೇರುತ್ತಿರುವುದೇ ಇಷ್ಟು ವರ್ಷಗಳಾದರೂ ಪುರುಷ ಪ್ರಧಾನ ವ್ಯವಸ್ಥೆಯ ಹೇರಿಕೆಗಳಿಂದ ಬಿಡಿಸಿಕೊಳ್ಳಲಾಗಿಲ್ಲವೆನ್ನುವುದಕ್ಕೆ ಸಾಕ್ಷಿ. ಹೆಣ್ಣುಮಕ್ಕಳನ್ನು ಓದಿಸಬೇಕು, ಅವರ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಬೆಂಬಲವಾಗಿ ನಿಲ್ಲಬೇಕು ಅಥವಾ ಅವರ ಸುರಕ್ಷತೆ, ಆರೋಗ್ಯಕ್ಕೆ ಸಂಬಂಧಿಸಿದ ಕುರಿತಾಗಿಯೋ, ವಿದ್ಯಾಭ್ಯಾಸದ ಕಡೆಗೋ ಪ್ರೋತ್ಸಾಹ ನೀಡುವ ಕುರಿತು ಮಾತೇ ಆಡದೇ ಹೆಣ್ಣು ಮಕ್ಕಳು ಹದಿನೆಂಟಕ್ಕೇ ಮದುವೆ ಆಗಬೇಕು, ಮೂರಕ್ಕಿಂತ ಹೆಚ್ಚು ಮಕ್ಕಳಾದರೆ ನಾವು ನೋಡಿಕೊಳ್ಳುತ್ತೇವೆ ಎನ್ನುವುದು ಎಷ್ಟು ಅಸೂಕ್ಷ್ಮದ ಹೇಳಿಕೆ.

ಮದುವೆ, ತಾಯ್ತನ ಎನ್ನುವುದು ಹುಡುಗ ಹುಡುಗಿಯ ವೈಯಕ್ತಿಕ ಆಯ್ಕೆ. ಅದರಲ್ಲೂ ತಾಯ್ತನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಹಿಳೆಗೆ ಸ್ವಲ್ಪ ಹೆಚ್ಚಿನ ಅಧಿಕಾರವಿದೆ. ಆಕೆ ದೈಹಿಕವಾಗಿ, ಮಾನಸಿಕವಾಗಿ ಸಿದ್ಧಳಾಗದೇ ಇದ್ದಲ್ಲಿ ಅಷ್ಟು ದೊಡ್ಡ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲ. ಆಕೆಯ ಸ್ವಂತ ಆಸೆ, ಆಕಾಂಕ್ಷೆ, ಕನಸು, ಗುರಿಗಳನ್ನು ಮರೆತು ಹದಿನೆಂಟಕ್ಕೆ ಮದುವೆಯಾಗಿ ಮಕ್ಕಳನ್ನು ಹೆರುವ ಯಂತ್ರವಾಗಲು ಧಾರ್ಮಿಕ ವ್ಯಕ್ತಿಗಳು ಕರೆನೀಡುವುದು ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ ಎನ್ನುವ ಭಕ್ತಾದಿಗಳು, ಎರಡು ತರದ ಮನಸ್ಥಿತಿಯೂ ಅಪಾಯಕಾರಿ. ಮಹಿಳೆಯರ ಆರೋಗ್ಯದ ಕುರಿತು, ಸ್ವಚ್ಛತೆ, ಸುರಕ್ಷತೆ ಕುರಿತಾಗಿ ಎಷ್ಟೆಲ್ಲ ಸಮಸ್ಯೆಗಳಿದ್ದರೂ ಧಾರ್ಮಿಕ ಗುರುಗಳಿಗೆ, ಸಮುದಾಯದ ಉಳಿವಿಗೆ ಶ್ರಮಿಸುತ್ತೇವೆ ಎನ್ನುವವರಿಗೆ ಮಹಿಳೆ ಕೇವಲ ಸಮುದಾಯದ ಜನಸಂಖ್ಯೆ ಹೆಚ್ಚಿಸುವ ಯಂತ್ರವಷ್ಟೇ.

ಮೊನ್ನೆ ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಮೂವರೂ ಹೆಣ್ಣು ಮಕ್ಕಳಾದ ಕಾರಣಕ್ಕೆ ಹೆಂಡತಿಗೆ ಬೆಂಕಿ ಹಚ್ಚಿ ಕೊಂದ ಉದಾಹರಣೆಯಿದೆ. ಈ ಯಾವ ಕ್ರಿಮಿಗಳನ್ನೂ, ಕೊಲೆಗಾರರನ್ನೂ ಮಾಧ್ಯಮದವರು ಈ ಮಟ್ಟಿಗೆ ಟೀಕಿಸುವುದಿಲ್ಲ.ಈ ಸುದ್ದಿಗಳು ಎಲ್ಲೋ ಮೂಲೆಯಲ್ಲಿ ಉಳಿದುಹೋಗುತ್ತವೆ. ಆದರೆ ಯಾರೋ ಹೆಣ್ಣುಮಕ್ಕಳು ಕುಡಿದು ತೂರಾಡಿದ್ದು ರಾಷ್ಟ್ರೀಯ ಮನ್ನಣೆ ಕೊಡಬೇಕಾದ ರೀತಿಯಲ್ಲಿ ಸುದ್ದಿಯಾಗುತ್ತದೆ.

ವರ್ಷ ಹೊಸದಾದರೂ, ಹಳೆಯದಾದರೂ ಮಹಿಳೆಯನ್ನು ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಳ್ಳುವ ರೀತಿ ಬದಲಾಗುವುದಿಲ್ಲ ಇದಕ್ಕೆ ಸೂಕ್ಷ್ಮ, ಸಮಾನ ಮನಸ್ಸಿನವರು ಸಂಕಲ್ಪ ಮಾಡಬೇಕಿದೆ. ಜವಾಬ್ದಾರಿಯುತ ಮಾಧ್ಯಮಗಳು, ಜನ ಜಾಗೃತಿ, ಕಾನೂನಿನ ಮೂಲಕ ರಕ್ಷಣೆ, ಸೂಕ್ತ ಕ್ರಮಗಳು ಎಲ್ಲವೂ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ನಮಗೆ ಸಮತಾ ಸಮಾಜದ ಅಗತ್ಯವಿದೆ, ನಾವು ಒಬ್ಬರಿಗೊಬ್ಬರು ತುಳಿದು ಬದುಕುವ ಅಗತ್ಯವಿಲ್ಲ ಎನ್ನುವುದನ್ನು ಮತ್ತೆ ಮತ್ತೆ ತಿಳಿಸಬೇಕಿದೆ.

ಮೊದಲು ಮಾನವನಾಗು
“..ಸಚಿವೆಯೊಬ್ಬರಿಗೆ ಬಳಸಿದ್ದಾರೆ ಎನ್ನಲಾದ ಪದದ ಕುರಿತು ಹಲವಷ್ಟು ಚರ್ಚೆ, ಪ್ರತಿಭಟನೆಗಳಾಗುತ್ತಿವೆ. ಉನ್ನತ ಸ್ಥಾನದಲ್ಲಿನ ಹಾಗೂ ಸಚಿವ ಸಂಪುಟದಲ್ಲಿನ ಏಕೈಕ ಮಹಿಳೆಗೆ ಒಂದು ಅಶ್ಲೀಲ ಪದ ಬಳಕೆ ಮಾಡಿದ್ದರ ವಿರುದ್ಧ ಪ್ರತಿಭಟನೆಗಳಾಗುತ್ತಿರುವುದು ಸ್ವಾಗತಾರ್ಹ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಸಚಿವೆಯೊಬ್ಬರಿಗೆ ಬಳಸಿದ್ದಾರೆ ಎನ್ನಲಾದ ಪದದ ಕುರಿತು ಹಲವಷ್ಟು ಚರ್ಚೆ, ಪ್ರತಿಭಟನೆಗಳಾಗುತ್ತಿವೆ. ಉನ್ನತ ಸ್ಥಾನದಲ್ಲಿನ ಹಾಗೂ ಸಚಿವ ಸಂಪುಟದಲ್ಲಿನ ಏಕೈಕ ಮಹಿಳೆಗೆ ಒಂದು ಅಶ್ಲೀಲ ಪದ ಬಳಕೆ ಮಾಡಿದ್ದರ ವಿರುದ್ಧ ಪ್ರತಿಭಟನೆಗಳಾಗುತ್ತಿರುವುದು ಸ್ವಾಗತಾರ್ಹ. ವ್ಯಂಗ್ಯವೆಂದರೆ, ನಮ್ಮ ನೆಲದ ಮುಕ್ಕಾಲುವಾಸಿ ಕುಟುಂಬದಲ್ಲಿ ಹೆಣ್ಣು ಇಂದು ಅದೇ ಪದಬಳಕೆಯಿಂದಲೇ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ.

ಪಿತೃಪ್ರಧಾನ ಸಮಾಜದಲ್ಲಿ ಬೆರೆತುಹೋಗಿರುವ ಬೈಗುಳಗಳಲ್ಲಿ ಹೆಚ್ಚಿನ ಪಾಲು ಮಹಿಳೆಯ ಶೋಷಣೆ ಮಾಡುವಂತಹವೇ. ಬೈಯುವುದು ಗಂಡಸಿಗೇ ಆದರೂ ಬೈಗುಳದ ಮೂಲ ಹೆಣ್ಣನ್ನೇ ಶೋಷಿಸುತ್ತದೆ. ಮೊನ್ನೆಯ ಘಟನೆಯು ವ್ಯಂಗ್ಯವಾಗಿ ಬದಲಾಗಿದ್ದು ಒಬ್ಬ ಸಚಿವೆಯನ್ನು ʼಸೂಳೆʼ ಎಂದು ಕರೆದವನನ್ನು ಜನ ರೊಚ್ಚಿಗೆದ್ದು ಸೂಳೆಮಗನೇ ಎಂದು ಕರೆದರು. ಇಲ್ಲಿ ಆತನ ಜೊತೆಗೆ ಅದೇ ಮನಸ್ಥಿತಿ ಹೊಂದಿದ ಸಾವಿರಾರು ಜನರ ಮನಸ್ಥಿತಿ ಬೆತ್ತಲಾಗಿತ್ತು. ಈ ಪದಗಳು ಕೇವಲ ಗಂಡಸರಷ್ಟೇ ಅಲ್ಲ, ಪುರುಷ ಪ್ರಧಾನ ವ್ಯವಸ್ಥೆಯ ಭಾಗವಾಗಿರುವ ಎಷ್ಟೋ ಹೆಂಗಸರು ಸಹ ಬಳಸುತ್ತಿರುವುದೇ ಆಗಿದೆ. ಗಂಡಸರನ್ನು ಬೈಯುವುದಾದರೂ ಅಲ್ಲಿ ಹೆಣ್ಣಿನ ಮೇಲೆ ಶೋಷಣೆಯಾಗಬೇಕು, ಒಬ್ಬ ಹೆಣ್ಣಿನ ಬಗ್ಗೆ ಮಾತನಾಡುವುದಾದರೂ ಅಲ್ಲಿಯೂ ಆಕೆಯ ಚಾರಿತ್ರ್ಯದ ಬಗ್ಗೆಯೇ ಟೀಕಿಸುವುದಾಗಿರುತ್ತದೆ ಅಷ್ಟೇ.

ದೂರದ ಸಂಬಂಧಿಯೊಬ್ಬರು ದುಡಿಯುವ ಆಸೆಯಿದ್ದವರು. ಮನೆ ನಡೆಸಲು ನಿಮ್ಮ ಮಗ ಮಾತ್ರವಲ್ಲ, ನಾನೂ ದುಡಿಯಬಲ್ಲೆ ಎಂದು ತಮ್ಮ ಅತ್ತೆಯ ಮುಂದೆ ಒಮ್ಮೆ ಮಾತನಾಡಿದ್ದರು. ತಕ್ಷಣವೇ ಆಕೆ, ಈಗ ಬಿಡು ಹೆಂಗಸರು ಹೇಗೆ ಬೇಕಾದರೂ ದುಡಿಯಬಹುದು, ಅದಕ್ಕೇನು ಎಂದು ವ್ಯಂಗ್ಯವಾಡಿದ್ದರು. ಮನೆಯ ಆರ್ಥಿಕತೆಯ ಬಗ್ಗೆಯಿರುವ ಯಾವುದೋ ಚರ್ಚೆಯನ್ನು ಕ್ಷಣಗಳಲ್ಲಿ ಸೊಸೆಯ ಚಾರಿತ್ರ್ಯವಧೆ ಮಾಡುವ ಮೂಲಕ ಒಂದು ಅಸಹ್ಯದ ಮೌನವನ್ನಾಗಿಸಿದ್ದರು ಆಕೆ.

ಕೆಲವೊಂದು ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರನ್ನು, ಹೆಚ್ಚಿನ ಸಾಮಾಜಿಕ ಒಳಗೊಳ್ಳುವಿಕೆ, ಜನರೊಂದಿಗೆ ಬೆರೆಯುವಿಕೆ, ಅಥವಾ ಕ್ಷೇತ್ರಭೇಟಿಗಳಿರುವ ಕೆಲಸದಲ್ಲಿರುವ ಮಹಿಳೆಯರಿಗೆ ಯಾರೋ ಒಬ್ಬರಾದರೂ ತಮ್ಮ ಚಾರಿತ್ರ್ಯದ ಕುರಿತು ಕುಟುಕಿರುತ್ತಾರೆ ಅಥವಾ ಮಾತನಾಡಬಹುದು ಎನ್ನುವ ಅಳುಕಿರುತ್ತದೆ.

ಪರಿಚಯದ ಗೆಳತಿಯೊಬ್ಬಳು ಶಾಲಾ ಶಿಕ್ಷಕಿ, ಒಂದಿಷ್ಟೇ ಮೇಕಪ್‌ ಜಾಸ್ತಿ ಮಾಡಿ ಚಂದದ ಸೀರೆಯುಟ್ಟ ಕೂಡಲೇ ಮನೆಯಲ್ಲಿ ನೀನೇನು ಪಾಠಮಾಡೋಕೆ ಹೋಗ್ತೀಯೋ, ಸೂಳೆಗಾರಿಕೆ ಮಾಡೋಕೆ ಹೋಗ್ತೀಯೋ ಎನ್ನುವ ಬೈಗುಳ ಕೇಳಿಬರುತ್ತದೆ. ಆ ವಾತಾವರಣಕ್ಕೆ ಸರಳವಾಗಿ ಹೋಗಬಹುದೇನೋ ಎನ್ನುವ ಒಂದು ಸೂಕ್ಷ್ಮ ಸಲಹೆಯನ್ನು ಎಷ್ಟು ಅಸಹ್ಯವಾಗಿ ಇಡೀ ಅಸ್ತಿತ್ವವೇ ಕುಸಿದು ಬೀಳುವಂತೆ ಮಾತನಾಡುವುದು ಈ ಬೈಗುಳಗಳ ಭಾಗ.

ಎಷ್ಟೋ ಮನೆಗಳಲ್ಲಿ ಇದು ಅಭ್ಯಾಸ. ಗಂಡ ಕುಡಿದು ಬಂದು ಹೀಗೇ ಬೈತಾನೆ, ಮತ್ತೆ ಮಾರನೆ ದಿನ ಸರಿ ಹೋಗ್ತಾನೆ ಎಂದು ನಿರ್ಲಕ್ಷಿಸುವವರಿಗೂ ಸಹ ಹೆಂಡತಿಯನ್ನು ಅತ್ಯಂತ ಗೌರವದಿಂದ ಕಾಣುವ ಗಂಡಂದಿರನ್ನು, ಮನೆಯವರನ್ನು ಕಂಡಾಗ ತಮ್ಮ ಬದುಕಿನ ವಿಷಾದ ಒಮ್ಮೆಯಾದರೂ ಹಾದು ಹೋಗುತ್ತದೆ.

ಅಷ್ಟಕ್ಕೂ ಸೂಳೆ ಎನ್ನುವುದನ್ನು ಬೈಗುಳವಾಗಿ ಬಳಸುವವರಿಗೆ ಸೆಕ್ಸ್‌ ವರ್ಕರ್‌ ಗಳ ಬದುಕಿನ ಕುರಿತು ಸಣ್ಣ ಸುಳಿವಾಗಲೀ, ತಿಳಿವಾಗಲೀ ಇರುವುದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ಆಶಯಗಳನ್ನು ಧಿಕ್ಕರಿಸುವ ಅಥವಾ ಮೀರಿ ನಿಲ್ಲುವ ಎಲ್ಲರನ್ನೂ ಹೀನಾಯವಾಗಿ ಕಾಣಬಹುದು ಎನ್ನುವವರಿಗೆ, ಬಹುಪಾಲು ಮಹಿಳೆಯರನ್ನು ಈ ಕೂಪಕ್ಕೆ ತಳ್ಳಿರುವುದು ಅದೇ ವ್ಯವಸ್ಥೆ ಎನ್ನುವ ಸೂಕ್ಷ್ಮ ಅರ್ಥವಾಗಿರುವುದಿಲ್ಲ. ಬಡತನ, ವಿದ್ಯಾಭ್ಯಾಸದ ಕೊರತೆ, ತೀರಿಸಲಾಗದಷ್ಟು ಸಾಲ, ಮನೆಯಲ್ಲಿನ ಕುಡಿತ ಮುಂತಾದ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಂಡ ಒಂದು ವರ್ಗದ ಹೆಣ್ಣುಮಕ್ಕಳು ಅನಿವಾರ್ಯವಾಗಿ ಸೆಕ್ಸ್‌ ವರ್ಕರ್‌ ಗಳಾಗಿ ಬದಲಾಗುವ ಪರಿಸ್ಥಿತಿ ನಮ್ಮಲ್ಲಿದೆ.

ಎಂದಿನಿಂದಲೋ ಚಾಲ್ತಿಯಲ್ಲಿರುವ ದೇವದಾಸಿ ಪದ್ಧತಿ ಮುಂತಾದ ಮೂಢ ನಂಬಿಕೆಗಳು, ಸಾಮಾಜಿಕ ಪಿಡುಗುಗಳಿಂದಾಗಿ ವೇಶ್ಯಾವೃತ್ತಿ ಭಾರತದಲ್ಲಿ ಶತಮಾನಗಳಿಂದಲೂ ಇದೆ. ಕಾಲಾನುಕ್ರಮೇಣ ಸಾಮಾಜಿಕ ಮತ್ತು ಆರ್ಥಿಕ ಅನಿವಾರ್ಯತೆಗಳು ಮಹಿಳೆಯರನ್ನು ವೇಶ್ಯಾವೃತ್ತಿಗೆ ದೂಡಿವೆ.

ರಾಷ್ಟ್ಟೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ (NACO) ವರದಿಯ ಅನುಸಾರ ಭಾರತದಾದ್ಯಂತ ಸುಮಾರು ಆರು ಲಕ್ಷಕ್ಕೂ ಹೆಚ್ಚು ವೇಶ್ಯೆಯರಿದ್ದಾರೆ. ಮುಂಬೈ, ಕೋಲ್ಕತ್ತಾ, ದೆಹಲಿ ಮುಂತಾದ ಮಹಾನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹಚ್ಚಾಗಿದ್ದು, ಇದರಲ್ಲಿ ಸುಮಾರು 70% ಮಹಿಳೆಯರು ಮತ್ತು 30% ಪುರುಷರು ಮತ್ತು ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ.

ಸುಪ್ರೀಂ ಕೋರ್ಟ್‌ ಲೈಂಗಿಕ ಕಾರ್ಯಕರ್ತರನ್ನು informal sector ನಡಿಯಲ್ಲಿ ಗುರುತಿಸಿ ಮೂಲಭೂತ ಹಕ್ಕುಗಳನ್ನು ಒದಗಿಸಲು ಮಾರ್ಗಸೂಚಿಗಳನ್ನು ನೀಡಿದ್ದರೂ ಸಹ ಸಮಾಜದಲ್ಲಿ ಅವರನ್ನು ನೋಡುವ. ನಡೆಸಿಕೊಳ್ಳುವ ರೀತಿ ಬಹಳಷ್ಟು ಕೀಳುಮಟ್ಟದ್ದಾಗಿದೆ. ಹಲವಾರು ಕಡೆಗಳಲ್ಲಿ ವೇಶ್ಯಾವೃತ್ತಿಗೆ ಇಳಿದವರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಸಾಮಾಜಿಕ, ಆರ್ಥಿಕ ಸಮಸ್ಯೆಯ ಜೊತೆ ಜೊತೆಗೆ ಆರೋಗ್ಯ ಸಮಸ್ಯೆಗಳಾದಲೂ ಅಗತ್ಯ ಸೌಲಭ್ಯಗಳು ದೊರೆಯದ ಅಸಹಾಯಕತೆಗೆ ಒಳಗಾಗುತ್ತಾರೆ.

ಕೆಲ ವರ್ಷಗಳ ಹಿಂದಷ್ಟೇ ಶೌಚಾಲಯದಲ್ಲಿ ಒಬ್ಬ ವೇಶ್ಯೆಯ ವಿಡಿಯೋ ಚಿತ್ರೀಕರಣ ಮಾಡಿ ಆಕೆ ಯಾಕಣ್ಣಾ ಅಂದಿದ್ದನ್ನು ವೈರಲ್‌ ಮಾಡಿ ಆಕೆಯ ಬದುಕನ್ನೇ ನಾಶ ಮಾಡಿದ ಸಮಾಜ ನಮ್ಮದು. ಆಕೆಗೆ ಒಂದು ಹೆಣ್ಣುಮಗುವಿದ್ದು, ಬದುಕು ಕಳೆದುಕೊಂಡ ಈಕೆ ಹುಚ್ಚಿಯಾಗಿದ್ದು ಈ ಸಮಾಜದ ಸಾಧನೆ. ಕೇವಲ ಎರಡು ಹೊತ್ತಿನ ಊಟ, ಮಕ್ಕಳ ಬದುಕು ಭವಿಷ್ಯಕ್ಕೋಸ್ಕರ ವೇಶ್ಯಾ ವೃತ್ತಿಗಿಳಿದಿರುವ ಎಷ್ಟೋ ಹೆಣ್ಣುಮಕ್ಕಳನ್ನು ಈ ಸಮಾಜ ಸಭ್ಯತೆಯಿಂದ ನಡೆಸಿಕೊಳ್ಳಬೇಕಿದೆ. ವ್ಯವಸ್ಥೆ ಪರ್ಯಾಯ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕಿದೆ. ಸಾಮಾಜಿಕ ಭದ್ರತೆ, ಘನತೆ ಒದಗಿಸುವತ್ತ ಹೆಜ್ಜೆಯಿಡಬೇಕಿದೆ. ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಚಟಪಡಿಸುತ್ತಿರುವ ವರ್ಗಗಳನ್ನು ಕನಿಷ್ಟ ಮಾನವೀಯವಾಗಿ ನೋಡದ ಮನುಷ್ಯರು ತಾವು ಹೆಮ್ಮೆಯಿಂದ, ಉಢಾಫೆಯಿಂದ ಬಳಸುವ ಪದಗಳಿಗಿಂದ ಎಷ್ಟೋ ಕೆಳಮಟ್ಟಕ್ಕೆ ಇಳಿದಿದ್ದಾರೆ.

ಇದರ ಜೊತೆಗೇ ಆಗಬೇಕಾದದ್ದು, ಮಹಿಳೆಯರು ತಾವು ಈ ತರಹದ ಬೈಗುಳಗಳನ್ನು ಒಪ್ಪಿಕೊಳ್ಳಬಾರದು ಎನ್ನುವುದನ್ನು ನಿರ್ಧರಿಸುವುದರ ಜೊತೆಗೆ, ಯಾವುದೇ ಬೈಗುಳವಾಗಲೀ ತಮ್ಮ ಘನತೆಗೆ ಕುಂದು ತರುವ ಶಕ್ತಿ ಹೊಂದಿಲ್ಲ ಎನ್ನುವುದನ್ನೂ ಅರಿಯಬೇಕಿದೆ.