ಕೃಷಿ ನೋಟ – Peepal Media

ಚನ್ನರಾಯಪಟ್ಟಣ ಭೂ ವಿವಾದ : ನೆಲ ಜನ ಸಂಸ್ಕೃತಿ ಉಳಿಸುವ ಹೋರಾಟವಿದು : ಇಂದೂಧರ ಹೊನ್ನಾಪುರ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತ ಹೋರಾಟದಲ್ಲ ಚಿಂತಕರಾದ ಇಂದೂಧರ ಹೊನ್ನಾಪುರ ಅವರು ಸರ್ಕಾರಕ್ಕೆ ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಕೊಡಿ ಎಂದು ಆಗ್ರಹಿಸಿದರು. ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತರಪರ ಹೋರಾಟ ನಡೀತಿದೆ. ಈ ಸಮಸ್ಯೆ ಹುಟ್ಟುಹಾಕಿರುವ ಸರ್ಕಾರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ದಾರೆ. ಇವತ್ತು ರೈತರ ವಿರುದ್ಧ ನಿಂತಿರುವ ಅದೇ ಸಿದ್ದರಾಮಯ್ಯ ಅವರು ಅವತ್ತು ರೈತರ ಪರ ಮಾತಾಡಿದ್ರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀನಿ ಅಂತಾ ಹೇಳ್ತಿದ್ದೀರಿ, ಈ ಮಾತನ್ನು ಉಳಿಸಿಕೊಳ್ಳಿ ಕಾರ್ಪೊರೇಟ್ ಗಳ ಪರ ನಿಂತು, ಸಾವಿರಾರು ಎಕರೆ ರೈತ ಭೂಮಿಯನ್ನ ಲಾಭಕೋರರಿಗೆ ಕೊಡಬೇಡಿ. ನೀವು ಜನಪರವಾಗಿಯೇ ಇರಿ ಎಂದು ಆಗ್ರಹಿಸಿದ್ದಾರೆ.

“ಈ ಕಾರ್ಪೊರೇಟ್ ಸೆಕ್ಟರ್ ಎಲ್ಲಾ ನೊಂದವರನ್ನ ಬಳಸಿಕೊಳ್ತಿದೆ. ಅಭಿವೃದ್ಧಿ ಅಂದ್ರೆ ಬರೀ ಕಾರ್ಖಾನೆಗಳನ್ನ ಕಟ್ಟೊದಲ್ಲ, ಎಲ್ಲ ಜನರ ನೆಮ್ಮದಿ..ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಬೇಕು. ಅದು ಬಿಟ್ಟು ಸರ್ಕಾರ ಯಾಕೆ ಈ ದುಷ್ಟಕೂಟದ ಭಾಗವಾಗುತ್ತಿದೆ ಎಂದು ರೈತರ ಪರವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

“ಎಂ.ಬಿ ಪಾಟೀಲ್ ಗೆ ಹೇಳ್ತಿದ್ದಾರೆ ಕಾರ್ಪೊರೇಟ್ ಕಂಪನಿಗಳು ಒಳ್ಳೆ ಭೂಮಿಯನ್ನ ಕೇಳ್ತಾರೆ. ಅವರಿಗೆ ಅವರು ಕೇಳಿದ ಭೂಮಿ ಕೊಡಬೇಕು ಅಂತಾ ಅವರಿಗೆ ನಾನು ಕೇಳ್ತೀನಿ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದ್ರೆ ಕೊಡ್ತೀರಾ,  ಯಾಕೆ ಮೂರ್ಖ ಹೇಳಿಕೆಗಳನ್ನ ಕೊಡ್ತಿದ್ದೀರಿ. ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಾ..ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿಂತೀರಾ” ಎಂದು ಖಾರವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಮ್ಮನ್ನ ಉಳ್ಳವರ ಮನೆಗೆ ಜೀತಗಾರರನ್ನಾಗಿಸಬೇಡಿ, ಅವರ ಬಾಗಿಲು ಕಾಯುವ ಹಾಳುಗಳನ್ನಾಗಿಸಬೇಡಿ. ನಿಮಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ರೆ ಇದನ್ನ ಕೈ ಬಿಡಿ. ಅಭಿವೃದ್ಧಿ ಅಂದ್ರೆ ಎಲ್ಲಾ ಜನರ ಪರವಾಗಿರೋದು, ಕಾರ್ಖಾನೆಗಳ ಮಾಲೀಕರು ಯಾರಿಗೊ ಒಪ್ಪತ್ತಿನ ಅನ್ನ ಹಾಕಿದ್ದನ್ನ ನೋಡಿಲ್ಲ, ನೀವು ಈ ದುಷ್ಟಕೂಟದ ಭಾಗ ಆಗ್ಬೇಡಿ. ಸಿದ್ದರಾಮಯ್ಯ ಅವರೇ ನೀವೆಲ್ಲರು ವಿವೇಚನೆ ಇರೋರು ಅಂತಾ ನಾವು ನಂಬಿದ್ದೇವೆ..ನೀವು ಎಲ್ಲರ ಒಳಿತು. ಈ ನೆಲ, ಜಲವನ್ನ ಉಳಿಸೋದು ಅನಿವಾರ್ಯ. ನಿಮಗೆ ಒತ್ತಡ ಇದೆ ಅಂತಾ ಗೊತ್ತು, ನೀವು ನಿಮ್ಮ ಬದ್ಧತೆಯನ್ನು ಈ ಮೂಲಕ ತೋರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಿದ್ದಾರೆ.

ಈ ಹೋರಾಟದ ಮೂಲಕ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲಾ ಚಳವಳಿಗಳಿಗೂ ಪುನಃಚ್ಛೇತನ ಆಗುವಂತ ಹೋರಾಟಗಳ ಮೊಳಕೆ ಇವತ್ತು ಇಲ್ಲಿ ಚಿಗುರೊಡೆಯುತ್ತಿದೆ. ನಿಮ್ಮೆಲ್ಲರನ್ನು ಕಿತ್ತು ಎಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ. ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ಇಲ್ಲಿ ಮೊಳಕೆ ಹೊಡೆಯುತ್ತಿವೆ. ಕರ್ನಾಟಕದ ಎಲ್ಲಾ ಚಳವಳಿಗಳು, ಕಾರ್ಮಿಕರು, ರೈತರು ಎಲ್ಲರೂ ಕರ್ನಾಟಕದ ಮೂಲೆ ಮೂಲೆಯಲ್ಲು ಈ ಹೋರಾಟಕ್ಕೆ ಜೊತೆಯಾಗ್ತಿದ್ದಾರೆ..ಇದು ಎಚ್ಚರಿಕೆ ಈ ವಿಚಾರದಲ್ಲಿ ನೀವು ರೈತಪರ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಒಳ್ಳೆ ತೀರ್ಮಾನವನ್ನು ತೆಗೆದುಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಿ ಎಂದು ಚಿಂತಕರಾದ ಇಂದೂಧರ ಹೊನ್ನಾಪುರ ಅವರು ಆಗ್ರಹಿಸಿದ್ದಾರೆ.

ಶುಂಠಿ ಬೆಲೆ ಕುಸಿತ, ಕ್ವಿಂಟಾಲ್ ಗೆ 7000ರೂ ನಿಗಧಿ ಮಾಡುವಂತೆ ಸರ್ಕಾರಕ್ಕೆ ಮನವಿ
ಹಾಸನ : ಶುಂಠಿಯ ಮಾರುಕಟ್ಟೆ ದರ ತೀರಾ ಕುಸಿತವಾಗಿರುವುದರಿಂದ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕ್ವಿಂಟಾಲ್ ಗೆ 7000ರೂ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿ ರೈತರನ್ನ ಆರ್ಥಿಕ ಸಂಕಷ್ಟದಿAದ ಪಾರುಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಶುಂಠಿ ಬೆಳೆಗಾರರ ಸಂಘದಿಂದ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ಇದೆ ವೇಳೆ ರಾಜ್ಯ ಶುಂಠಿ ಬೆಳೆಗಾರರ ಸಂಘದ ಭೋಮೇಶ್ ಮತ್ತು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶುಂಠಿ ಬೆಳೆಗಾರರು ಎದುರಿಸುತ್ತಿರುವ ಬೆಲೆಕುಸಿತದ ಸಮಸ್ಯೆ ಬಗ್ಗೆ ವರದಿ ನೀಡಿ ನಮ್ಮ ಜಿಲ್ಲೆಯ ಶುಂಠಿ ಬೆಳೆಗಾರರ ನೆರವಿಗೆ ತಕ್ಷಣ ಧಾವಿಸುವಂತೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ.

ಇತ್ತೀಚಿನ ದಿನಗಳಲ್ಲಿ ಶುಂಠಿಯ ಮಾರುಕಟ್ಟೆ ದರದಲ್ಲಿ ಗಣನೀಯ ವ್ಯತ್ಯಾಸವಾಗಿ, ಬೆಲೆ ಕುಸಿತವಾಗಿದ್ದು, ಮಾರುಕಟ್ಟೆಯಲ್ಲಿ ಪ್ರಸ್ತುತ ಶುಂಠಿಯ ಬೆಲೆ ಪ್ರತಿ ಕ್ವಿಂಟಲ್ ಗೆ 1500-2000ರೂ ಗಳಿಗೆ ತಲುಪಿ ಉತ್ಪಾದನಾ ವೆಚ್ಚವು ಕೈ ಸೇರದಂತಾಗಿದೆ. ಇಂತಹ ಸಂದೀಗ ಪರಿಸ್ಥಿತಿಗಳಲ್ಲಿ ಉತ್ಪಾದಕ ರೈತನನ್ನು ಆರ್ಥಿಕ ಸಂಕಷ್ಟಗಳಿಂದ ಪಾರು ಮಾಡುವ ಸಲುವಾಗಿ ಹಲವಾರು ಯೋಜನೆಗಳಿದ್ದು, ಅವುಗಳಲ್ಲಿ ಒಂದಾದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ನೇರವಾಗಿ ಉತ್ಪನ್ನವನ್ನು ಖರೀದಿಸುವ ಯೋಜನೆ ಇದಾಗಿದೆ ಎಂದರು.

ಇತಿಹಾಸವನ್ನು ಗಮನಿಸಿದರೆ 2012. ಮತ್ತು 2023 ರಲ್ಲಿ ಗಮನಿಸಿದರೆ ಅರಿಶಿಣಕ್ಕೆ ಬೆಲೆ ಕುಸಿತವಾದಾಗ OIS ಯೋಜನೆಯನ್ನು ಜಾರಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಅಲ್ಲದೆ 2016-17 ರಲ್ಲಿ ಬೆಲೆ ಕುಸಿತವಾದಾಗ ಅರುಣಾಚಲ ಪ್ರದೇಶದಲ್ಲಿ ಶುಂಠಿಯನ್ನು ಎಂಐಎಸ್ ಯೋಜನೆಯಡಿ ಖರೀದಿ ಮಾಡಲಾಗಿದೆ, ಅಲ್ಲದೆ ಮಿಜೋರಂ ನಲ್ಲಿ ಕನಿಷ್ಠ ಬೆಂಬಲ ಬೆಲೆಯಾಗಿ 2024 ರಲ್ಲಿ 5000ರೂ ಗಳನ್ನು ಪ್ರತಿ ಕ್ವಿಂಟಾಲ್ ಗೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ಶುಂಠಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವುಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜೊತೆ ತ್ವರಿತವಾಗಿ ವ್ಯವಹರಿಸಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ಶೀಘ್ರದಲ್ಲೇ ಜಾರಿಯಾಗುವಂತೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸಹಕರಿಸುವಂತೆ ಕೋರಿದರು.ಇದೆ ವೇಳೆ ಜಿಲ್ಲಾಧ್ಯಕ್ಷ ಪ್ರವೀಣ್, ರುಕ್ಮಾನಂದ್, ಪ್ರಕಾಶ್, ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಿರಿಧಾನ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿ – ಶಾಸಕ ಸ್ವರೂಪ್
ಹಾಸನ: ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಬಗ್ಗೆ ಹೆಚ್ಚೆಚ್ಚು ಪ್ರಚಾರದ ಅಗತ್ಯತೆ ಇದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರರು ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ಕಾಲೇಜು ಕಾರೆಕೆರೆ ಹಾಗೂ ಹಾಸನ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಕುರಿತು ಅರಿವು ಮೂಡಿಸುವ ಜಾಥವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧುನಿಕತೆಯ ಬದುಕಿನಲ್ಲಿ ಪೋಷಕ ಭರಿತ ಆಹಾರಗಳು ಸಿರಿ ಧಾನ್ಯಗಳು ಕಣ್ಮರೆಯಾಗುತ್ತಿರುವುದು ಕಂಡು ಬಂದಿರುತ್ತಿದೆ.

ತಮ್ಮ ತಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ಸಿರಿದಾನ್ಯದ ಬಗ್ಗೆ ಇನು ಹೆಚ್ಚಿನ ಪ್ರಚಾರವು ಆಗಬೇಕಾಗಿದ್ದು, ಈಗಾಗಲೇ ಸಾವಯವದ ಸಂತೆ ಕೂಡ ವಾರಕ್ಕೊಮ್ಮೆ ನಗರದಲ್ಲಿ ನಡೆಯುತ್ತಿದೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿನಿತ್ಯ ಪ್ರಚಾರವಾಗಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಇದೆ ತಿಂಗಳು 23 ರಿಂದ 25ರ ವರೆಗೂ ಅಂತರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಪ್ರಸ್ತೂತದಲ್ಲಿ ಯುವಜನರಿಗೆ ಸಿರಿಧಾನ್ಯ ತಿನ್ನುವದೇ ಫ್ಯಾಷನ್ ಟ್ರ‍್ರೆಂಡ್. ಆಗಿದೆ. ತಾತ ಮುತ್ತಾತನ ಕಾಲದಿಂದಲೂ ತಿನ್ನಲಾಗುತಿತ್ತು. ಸಾವಯವ ಆರ್ಗ್ಯೆನಿಕ ಎನ್ನುವುದೇ ಒಂದು ಟ್ರೆಂಡ್ ಆಗಿದ್ದು, ಸಲ್ಪ ಧರದಲ್ಲಿ ಹೆಚ್ಚು ಇರುತ್ತದೆ ಎಂದರು. ಸಿರಿಧಾನ್ಯವನ್ನು ಕಡಿಮೆ ಮಳೆಯಲ್ಲಿ, ಕಡಿಮೆ ನೀರಿನಲ್ಲಿ ಬೆಳೆಯಬಹುದು.

ಈ ಬೆಳೆಗಳು ಹೆಚ್ಚು ಲಾಭದಾಯಕವಾಗಿದೆ. ರೈತ ಸಮಿತ್ರರು ಹೆಚ್ಚು ಸಿರಿಧಾನ್ಯವನ್ನು ಬೆಳೆಯಬೇಕು. ಆಗೇ ನಾವುಗಳು ಕೂಡ ಅದನ್ನೆ ಬಳಕೆ ಮಾಡೋಣ ಎಂದು ಕಿವಿಮಾತು ಹೇಳಿದರು. ಗೋಧಿ ಮತ್ತು ಅನ್ನ ಸಿರಿಧಾನ್ಯವಲ್ಲ. ಇದರಿಂದ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಾನು ಕೂಡ ಪ್ರಾಕ್ಟಿಕಲ್ ಆಗಿ ಸಿರಿಧಾನ್ಯ ಬಳಕೆ ಮಾಡುತ್ತಿದ್ದೇವೆ. ಒಳ್ಳೆಯ ಆಹಾರ ತಿಂದರೇ ಖಾಯಿಲೆ ಹತ್ತಿರ ಸುಳಿಯುವುದಿಲ್ಲ. ಸಿರಿಧಾನ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ಅಂತರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಹಾಗೂ ಎಲ್ಲಾರೂ ಕೂಡ ಸಿರಿಧಾನ್ಯವನ್ನು ಉಪಯೋಗಿಸಬೇಕು ಎನ್ನುವ ಮಾಹಿತಿ ಕೊಡುವ ನಿಟ್ಟಿನಲ್ಲಿ ಜಾಗೃತಿಗಾಗಿ ಜಾಥಾ ಮಾಡಲಾಗುತ್ತಿದೆ. ನಾನು ಕಳೆದ ನಾಲ್ಕು ವರ್ಷಗಳಿಂದಲೂ ಸಿರಿಧಾನ್ಯವನ್ನು ಉಪಯೋಗಿಸುತ್ತಿದ್ದು, ಅದರ ಪ್ರಯೋಜನವನ್ನು ನಾನು ತಿಳಿದಿದ್ದೇನೆ ಎಂದರು. ರಕ್ತದ ಪ್ರಮಾಣದಲ್ಲಿ ಸಕ್ಕರೆ ನಿಯಂತ್ರಣಕ್ಕೆ ತುಂಬ ಅನುಕೂಲವಾಗುತ್ತದೆ.

ಇನ್ನು ನಮ್ಮ ತೂಕದ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಯಾವುದೇ ರಸಾಯನಿಕ ಇಲ್ಲದೇ ಬೆಳೆಯುವಂತಹ ಬೆಳೆಗಳು ಇದಾಗಿದೆ ಎಂದು ಕಿವಿಮಾತು ಹೇಳಿದರು. ರಿದಾನ್ಯಗಳು ಪೋಷಕಾಂಶಗಳ ಇವುಗಳನ್ನು ದಿನನಿತ್ಯ ಬಳಸುವುದರಿಂದ ಹಲವಾರು ರೋಗಗಳಾದ ರಕ್ತದ ಒತ್ತಡ, ಮಧುಮೇಹವನ್ನು ತಡೆಗಟ್ಟಬಹುದು ಜೊತೆಗೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು. ಒಂದು ತಲೆ ಮಾರಿನ ಹಿಂದೆ ಅನ್ನದ ಬದಲು ನವಾಣೆ ಉಪಯೋಗಿಸುತ್ತಿದ್ರು. ಪ್ರಸ್ತೂತದಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಥವನ್ನು ಏರ್ಪಡಿಸಿರುವುದಾಗಿ ಹೇಳಿದರು.

ಸಿರಿಧಾನ್ಯಗಳ ಮತ್ತು ಸಾವಯವಗಳ ಜಾಗೃತಿ ಜಾಥವು ಜಿಲ್ಲಾ ಕ್ರೀಡಾಂಗಣದಿAದ ಹೊರಟು ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆ ಮುಂಬಾಗ ಮಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ತಮ್ಲಾಪುರ ಕೃಷ್ಣೇಗೌಡ, ತೋಟಗಾರಿಕೆ ಇಲಾಖೆ ಉಪಾನಿರ್ದೇಶಕಿ ಮಂಗಳಾ, ಹಿರಿಯ ಸಹಾಯಕ ನಿರ್ದೇಶಕ ಹರ್ಷಿ ತಬ್ಸಂ, ಸಹಾಯಕ ನಿರ್ದೇಶಕ ತೇಜುಕುಮಾರ್, ಕೋಕಿಲಾ, ಲೀಡ್ ಬ್ಯಾಂಕಿನ ಲತಾಸರಸ್ವತಿ ಇತರರು ಉಪಸ್ಥಿತರಿದ್ದರು. ರಮೇಶ್ ಕುಮಾರ್ ಸ್ವಾಗತಿಸಿದರು.

Edit

ಕಡಲೆ ಹಾಗೂ ಜೋಳದಲ್ಲಿ ಕೀಟ ಹಾಗೂ ರೋಗಗಳ ಬಾಧೆಯ ತಡೆಗಟ್ಟಲು ನಿರ್ವಹಣೆ ಕ್ರಮಗಳು
ಧಾರವಾಡ ಡಿಸೆಂಬರ 05: ಧಾರವಾಡ ಜಿಲ್ಲೆಯಾದ್ಯಂತ ಹಿಂಗಾರು ಹಂಗಾಮಿನಲ್ಲಿ 1,81,595 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮುಖ್ಯ ಹಿಂಗಾರು ಬೆಳೆಗಾಳಾದ ಕಡಲೆ ಹಾಗೂ ಜೋಳದಲ್ಲಿ ಅಲ್ಲಲ್ಲಿ ಕೀಟ ಹಾಗೂ ರೋಗಗಳ ಬಾಧೆ ಕಂಡು ಬರುತ್ತಿದ್ದು ರೈತರು ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು.

ಕಡಲೆಯಲ್ಲಿ ಕಾಯಿ ಕೊರಕ (ಹೆಲಿಕೋವರ್ಪಾ) ನಿರ್ವಹಣೆ: ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ,ಮಂಡ್ಯಾಳ) ಹೊಲದ ತುಂಬೆಲ್ಲಾ ಚೆಲ್ಲಬೇಕು, ಇದ್ದರಿಂದ ಪಕ್ಷಿಗಳು ಆರ್ಕಷಿತಗೊಂಡು ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ.

2 ಮಿ.ಲೀ. ಕ್ಲೋರಫೆನಾಪೈರ್ ಶೇ. 24 ಎಸ್.ಸಿ. ಅಥವಾ 0.075 ಮಿ.ಲೀ ಫ್ಲೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾಲಿಪ್ರೋಲ 18.5 ಎಸ್.ಸಿ., 0.15 ಮಿ. ಲೀ. ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ 5 ಎಸ್.ಜಿ. ಅಥವಾ 0.1 ಮಿ.ಲೀ. ಸ್ಪೈನೊಸ್ಯಾಡ್ 45 ಎಸ್.ಸಿ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.

ಜೋಳದಲ್ಲಿ ಫಾಲ್ ಸೈನಿಕಹುಳು ನಿರ್ವಹಣೆ: ಕೀಡೆಯ ನಿಯಂತ್ರಣಕ್ಕೆ ನೊಮೊರಿಯಾ ರಿಲೈಯೆ, ಮೆಟಾರೆಜಿಯಂ ಅನಿಸೋಪ್ಲೇ ಹಾಗೂ ಬ್ಯಾಸಿಲೆಸ್ ಥುರಿಂಜಿಯಸ್ಸಿಸ್ ನಂತಹ ಜೀವಾಣುಗಳನ್ನು ಬಳಸಿ ಯಶಸ್ವಿ ಹತೋಟಿಯನ್ನು ಮಾಡಬಹುದು.

ಬಿತ್ತನೆಗೆ ಮೊದಲು ಪ್ರತಿ ಕಿ.ಗ್ರಾಂ. ಬೀಜಕ್ಕೆ 5 ಮೀ. ಲೀ ಸೈಯಾಂಟ್ರಾನಿಲಿಪ್ರೋಲ್ ಶೇ. 19.8 + ಥೈಯೋಮಿಥಾಕ್ಸಾಮ್ 19.8 ಡಬ್ಲೂ.ಡಬ್ಲೂ.ಎಫ್.ಎಸ್ ಸಂಯುಕ್ತ ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ತದನಂತರ ಬೆಳೆ 30 ದಿನಗಳಿದ್ದಾಗ ಕ್ಲೋರ್ಯಾಂಟ್ರನಿಲಿಪ್ರೋಲ್ @ 0.30 ಮೀಲೀ ಅಥವಾ ಸ್ಪೈನೊಟೆರ್ಯಾಮ್ 11.7%ಎಸ್.ಸಿ @ 0.50 ಮೀಲೀ ಕೀಟನಾಶಕವನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಬೆಳೆಯ ಸುಳಿಯ ಮೇಲೆ ಬೀಳುವಂತೆ ಸಿಂಪಡಿಸಬೇಕು. ಪುನಃ ಅವಶ್ಯವಿದ್ದಲ್ಲಿ 15 ದಿನಗಳ ಅಂತರದಲ್ಲಿ ಕೀಟನಾಶಕಗಳ ಮರುಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ ಮೇಲೆ ಬಿದ್ದ WHO ಕರಿನೆರಳು ; ಉತ್ಪಾದನೆ ನಿಲ್ಲಿಸದಿದ್ದರೆ ಕ್ಯಾನ್ಸರ್ ಹೆಚ್ಚುವ ಬಗ್ಗೆ ವರದಿಯಲ್ಲಿ ಉಲ್ಲೇಖ
ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಬರುವ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಅಡಿಕೆಯ ಕುರಿತು ಮತ್ತೆ ಮಹತ್ವದ ವರದಿ ಸಲ್ಲಿಸಲಾಗಿದ್ದು, ಅಡಕೆ ಕ್ಯಾನ್ಸರ್ ಕಾರಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಹೊರಬಂದ ಹಿನ್ನೆಲೆಯಲ್ಲಿ ಅಡಿಕೆ ಮೇಲೆ ಮತ್ತೆ ಕಪ್ಪು ಛಾಯೆ ಮೂಡಿದ್ದು ಬೆಳೆಗಾರರು ಆತಂಕ ಪಡುವಂತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂಗಸಂಸ್ಥೆ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದೆ. ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ.

ಕರ್ನಾಟಕ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಪ್ರತೀ ವರ್ಷ ಒಂದಿಲ್ಲೊಂದು ಕಂಟಕ ತಲೆದೋರುತ್ತಿದೆ. ಈ ಬಾರಿ ನೇರವಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಕಡೆಯಿಂದಲೇ ಬಂದ ವರದಿ ಹಿನ್ನೆಲೆಯಲ್ಲಿ ತಂಬಾಕು ಮಾದರಿಯಲ್ಲಿ ಅಡಿಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಿಕೆ ಬೆಳೆಗಾರರಲ್ಲಿ ಮೂಡಿದೆ. ಇದರಿಂದ ಬೆಳೆಗಾರರು ತೀವ್ರ ಆತಂಕ ಪಡುವಂತಾಗಿದೆ.

ಅಡಕೆ ಕ್ಯಾನ್ಸರ್ ಕಾರಕ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಕಾನೂನು ಸಮರ ನಡೆಯುತ್ತಿದ್ದು, ಅಡಕೆಯು ಆರೋಗ್ಯದಾಯಕ ಎಂದು ಸಾಬೀತುಪಡಿಸಲಾಗಿದೆ. ಇದರ ನಡುವೆ ಇಂತಹುದೊಂದು ವರದಿ ಸಲ್ಲಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಘ ಸಂಸ್ಥೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ 2024ರ ಅಕ್ಟೋಬರ್ 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಹೇಳಲಾಗಿದೆ. ಈ ವರದಿ ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತರಾಷ್ಟ್ರೀಯ ಜರ್ನಲ್ ನಲ್ಲಿ ಈ ವರದಿ ಪ್ರಕಟವಾಗಿದೆ.

ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಅರ್ಹ ರೈತರಿಂದ ಆಹ್ವಾನ
ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‍ವೈ) ಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತುಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆ. ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೆ.75ರ ಸಹಾಯಧನ ನೀಡಲಾಗುವುದು. ಹಾಗೂ 2 ಹೆ. ರಿಂದ 5ಹೆ. ಪ್ರದೇಶದವರೆಗೆ ಶೇ. 45 ರ ಸಹಾಯಧನ ನೀಡಲಾಗುವುದು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ತಾಳೆ ಬೆಳೆಯನ್ನು ಇಲಾಖಾ ಪಾಲುದಾರಿಕೆ ಕಂಪನಿಯಾದ ರುಚಿ ಸೋಯಾ ಇಂಡ್ಸ್‍ಸ್ಟ್ರೀಸ್ಸ್ ಅವರೊಂದಿಗೆ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಳೆ ಹೊಸ ಪ್ರದೇಶ ವಿಸ್ತರಣೆಗೆ ರೂ.20 ಸಾವಿರ ಸಹಾಯಧನ ಹಾಗೂ ಮೊದಲ ನಾಲ್ಕು ವರ್ಷದ ಪಾಲನೆಗಾಗಿ 5500 ರಂತೆ ಪ್ರತಿ ಹೇಕ್ಟರ್‍ಗೆ ನೀಡಲಾಗುವುದು. ಇದರ ಜೊತೆಗೆ ತಾಳೆಯಲ್ಲಿ ಡಿಸೇಲ್ ಪಂಪ್ ಸೆಟ್ ಖರೀದಿಗೆ, ಕಟಾವು ಯಂತ್ರ ಖರೀದಿಗೆ ಹಾಗೂ ಅಂತರ ಬೇಸಾಯ ಕೈಗೊಂಡಿದ್ದಲ್ಲಿ ಹೆಕ್ಟೇರ್‍ಗೆ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ಪ್ರದೇಶ ವಿಸ್ತರಣೆ, ಕಿತ್ತಳೆ ಮತ್ತು ಕಾಳು ಮೆಣಸು ಪುನಶ್ಚೇತನ ಕಾರ್ಯಕ್ರಮ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಪ್ರಾಥಮಿಕ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಎಸ್‍ಎಂಎಎಂ ಯಾಂತ್ರೀಕರಣ ಯೋಜನೆಯಡಿ ಇಲಾಖಾ ಮಾರ್ಗಸೂಚಿಯಂತೆ ಅನುಮೋದಿತ ಸಂಸ್ಥೆಯಿಂದ ಖರೀದಿಸಿದ ಮರ ಕತ್ತರಿಸುವ ಯಂತ್ರ, ಪವರ್ ಸ್ಟೇಯರ್, ಕಳೆಕೊಚ್ಚುವ ಯಂತ್ರ, ಏಣಿ, ತಳ್ಳುವ ಗಾಡಿ ಮುಂತಾದ ಯಂತ್ರೋಪಕರಣಗಳಿಗೆ ಶೇ.40/50 ರ ಸಹಾಯಧನ ನೀಡಲಾಗುತ್ತದೆ.

ಈ ಸೌಲಭ್ಯ ಪಡೆಯಲು ಇಚ್ಚಿಸುವ ರೈತರು ನಿಗಧಿತ ಅರ್ಜಿ ನಮೂನೆ, ಆರ್‍ಟಿಸಿ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳೊಂದಿಗೆ ಸಮೀಪದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಡಿ.31 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ ಹಾಗೂ ಸಹಾಯಧನವನ್ನು ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಜೇಷ್ಠತಾ ಪಟ್ಟಿ ಆಧಾರದ ಮೇಲೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರಿಗೆ ಆದ್ಯತೆಯನ್ನು ನೀಡಲಾಗುವುದು.

ಕಾಳುಮೆಣಸಿನ ಸೊರಗು (ಹಳದಿ ಎಲೆ) ರೋಗಕ್ಕೆ ಇಲ್ಲಿದೆ ಸುಲಭ ಪರಿಹಾರ; ತಪ್ಪದೇ ಓದಿ
ಕಪ್ಪು ಚಿನ್ನ ಎಂದೇ ಕರೆಯಲ್ಪಡುವ ಕಾಳುಮೆಣಸು, ಅಡಿಕೆ ಧಾರಣೆ ಕುಸಿತ ಕಂಡಾಗ ರೈತರ ಕೈಹಿಡಿದು ಮೇಲೆತ್ತಿದ ಆಪತ್ಬಾಂಧವ ಬೆಳೆ. ಅಡಕೆ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ರೈತರಿಗೆ ನೆರವಾಗುತ್ತಿದ್ದದ್ದೇ ಈ ಕಪ್ಪುಚಿನ್ನ ಕಾಳುಮೆಣಸು. ಅಡಕೆ ಮರ, ತೆಂಗಿನ ಮರಕ್ಕೆ ಕಾಳುಮೆಣಸಿನ ಬಳ್ಳಿಗಳು ಹಬ್ಬಿಕೊಂಡು ಹೇರಳ ಫಸಲು ನೀಡುತ್ತಿದ್ದ ಪರಿಣಾಮ, ಬೆಳೆಗಾರನೂ ಚೇತರಿಸಿಕೊಳ್ಳುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ಕಾಳುಮೆಣಸು ಸಹ ರೈತರ ಕೈ ಕಚ್ಚುವ ಮಟ್ಟಕ್ಕೆ ರೋಗಕ್ಕೆ ತುತ್ತಾಗುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮತ್ತು ಅಂಟುರೋಗದಂತೆ ಬಂದೆರಗಿರುವ ಹಳದಿ ಎಲೆ (ಸೊರಗು) ರೋಗ ಈಗ ಕಾಳುಮೆಣಸನ್ನೇ ನಂಬಿದ ರೈತರ ನಿದ್ದೆಗೆಡಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಭಾಗದ ರೈತರು ಪರ್ಯಾಯ ಬೆಳೆಯನ್ನಾಗಿ ಕಾಳುಮೆಣಸಿನ ಕೃಷಿಗೆ ಅವಲಂಬಿತರಾಗಿರುವ ಈ ಸಂದರ್ಭದಲ್ಲಿ ಇಂತಹ ಮಾರಣಾಂತಿಕ ರೋಗ ಮತ್ತೆ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಸೊರಗು (ಹಳದಿ ಎಲೆ) ರೋಗದ ಲಕ್ಷಣಗಳು :
ಸೊರಗು ರೋಗ ತಗುಲಿದರೆ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ನಿಧಾನವಾಗಿ ಸಾಯುತ್ತದೆ. ಬಳ್ಳಿಯಲ್ಲಿರುವ ಕಾಳುಮೆಣಸು ಒಣಗಿ ಉದುರುತ್ತದೆ. ರೋಗ ಬಾಧಿಸಿದ ಬಳ್ಳಿಯನ್ನು ಕಿತ್ತು ಬುಡದಲ್ಲಿ ಹೊಸದಾಗಿ ಬಳ್ಳಿ ನೆಟ್ಟು ಗೊಬ್ಬರ ಹಾಕಿದರೂ ಪ್ರಯೋಜನವಿಲ್ಲ. ಫೈಟೋಫೋರಾ ಕ್ಯಾಪ್ಸಿಸಿ ಎಂಬ ಶಿಲೀಂಧ್ರವೇ ಈ ರೋಗ ಹರಡಲು ಕಾರಣವಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮಳೆಗಾಲದಲ್ಲಿ ಬಳ್ಳಿ ಹಾಗೂ ಎಲೆಗಳಲ್ಲಿರುವ ಶಿಲೀಂಧ್ರದ ಬೀಜಾಣುಗಳು ಸುಲಭವಾಗಿ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತವೆ. ಮೊದಲು ಕಾಳುಮೆಣಸಿನ ಬಳ್ಳಿಯ ಬೇರುಗಳನ್ನು ಆಕ್ರಮಿಸುವುದರಿಂದ ಬೇರುಗಳು ಸಾಯುತ್ತದೆ.ನಂತರ ಬಳ್ಳಿ ಹಾಗೂ ಎಲೆಗಳನ್ನು ಆಕ್ರಮಿಸುತ್ತದೆ. ‘ಮೆಲೋಯ್ಡೋಗೈನ್‌ ಇಂಕಾಗ್ನಿಟ’ ಎಂಬ ಜಂತು ಹುಳದಿಂದಲೂ ಸೊರಗು ರೋಗ ಹರಡುತ್ತದೆ ಎಂದು ಇತ್ತೀಚಿನ ವರದಿಗಳಿಂದ ತಿಳಿದು ಬಂದಿದೆ.

ಹೆಚ್ಚಾಗಿ ಮಳೆಯ ಪರಿಣಾಮ ತೋಟಗಳಲ್ಲಿ ಈ ರೋಗ ಉಲ್ಬಣವಾಗುತ್ತದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಹೆಚ್ಚು ತೇವಾಂಶ ಕೂಡ ಸೊರಗು ರೋಗದ ಉಲ್ಬಣಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಕಾಳುಮೆಣಸಿಗೆ ಗುಡ್ಡ, ಕಡಿದಾದ ಪ್ರದೇಶದಲ್ಲಿ ರೋಗ ತಗುಲುವುದು ಕಡಿಮೆ.

ಸೊರಗು ರೋಗಕ್ಕೆ ಫರ್ಟಿಲೈಜರ್ ಕಂಪನಿಗಳು ನಾನಾ ರೀತಿಯ ಔಷಧಿಗಳನ್ನು ಮಾರುಕಟ್ಟೆಗೆ ತಂದಿದ್ದರೂ ಅದು ಪರೋಕ್ಷವಾಗಿ ತೋಟಗಳಿಗೆ ಹಾನಿ ಆಗುವುದೇ ಆಗಿದೆ. ಹೀಗಿರುವಾಗ ಬೋರ್ಡೋ ದ್ರಾವಣವೇ ಸೊರಗು ರೋಗಕ್ಕಿರುವ ಏಕೈಕ ಪರಿಹಾರ ಎನ್ನಲಾಗಿದೆ. ಈಗಾಗಲೇ ಶೇ 90 ರಷ್ಟು ಬೋರ್ಡೋ ದ್ರಾವಣ ಸಿಂಪಡಣೆ ನಂತರ ಸೊರಗು ರೋಗ ಪರಿಣಾಮಕಾರಿಯಾಗಿ ಕಡಿಮೆ ಆಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

10 ಲೀ. ನೀರಿರುವ ಪ್ಲಾಸ್ಟಿಕ್‌ ಬಕೆಟ್‌ನಲ್ಲಿಒಂದು ಕೆಜಿ ಮೈಲುತುತ್ತು ಹಾಗೂ ಇನ್ನೊಂದು 10 ಲೀ. ಬಕೆಟ್‌ ನೀರಿನಲ್ಲಿ1 ಕೆಜಿ ಶುದ್ಧ ಸುಣ್ಣವನ್ನು ಸಂಪೂರ್ಣ ಕರಗಿಸಬೇಕು. ಕರಗಿದ 10 ಲೀ. ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್‌ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್‌ ಮೈಲುತುತ್ತು ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ಶೇ.1ರ ಬೋರ್ಡೊ ದ್ರಾವಣ ಮಿಶ್ರಣ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ದ್ರಾವಣ ತಯಾರಿಗೆ ಮಣ್ಣು ಅಥವಾ ಪ್ಲಾಸ್ಟಿಕ್‌ ಪಾತ್ರೆಗಳನ್ನು ಉಪಯೋಗಿಸುವುದು ಸೂಕ್ತ. ದ್ರಾವಣವನ್ನು ಬಟ್ಟೆಯಲ್ಲಿಶೋಧಿಸಿ ಉಪಯೋಗಿಸಬೇಕು. ಬಹಳ ಹೊತ್ತು ಗಾಳಿಗೆ ತೆರೆದಿಟ್ಟಾಗ ತನ್ನ ಪರಿಣಾಮ ಕಳೆದುಕೊಳ್ಳುವುದರಿಂದ ತಯಾರಿಸಿದ ಕೂಡಲೇ ಉಪಯೋಗಿಸಬೇಕು. ದಿನ ಬಿಟ್ಟು ಉಪಯೋಗಿಸುವುದಿದ್ದಲ್ಲಿ250 ಗ್ರಾಂ ಬೆಲ್ಲವನ್ನು 100 ಲೀ. ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು. ಸುಣ್ಣದ ಪ್ರಮಾಣ ಹೆಚ್ಚಿದಲ್ಲಿದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7ಕ್ಕಿಂತ ಹೆಚ್ಚಾಗುವುದು. ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂಧ್ರ ನಾಶಕ ಗುಣ ಕಡಿಮೆಯಾಗುವುದು.

ರೋಗ ಬಾಧೆಯಿಂದ ಸತ್ತು ಹೋದ ಬಳ್ಳಿಗಳನ್ನು ಬೇರು ಸಮೇತ ಕಿತ್ತು ತೋಟದಿಂದ ಹೊರಗೊಯ್ದು ನಾಶಪಡಿಸಬೇಕು. ತೋಟಗಳಲ್ಲಿಕನಿಷ್ಠ ಶೇ.20ರಿಂದ 25ರಷ್ಟು ನೆರಳಿರುವ ಹಾಗೆ ನೋಡಿಕೊಳ್ಳಬೇಕು. ಬಳ್ಳಿಯ ಸುತ್ತ ಹಸಿರು ಎಲೆ, ಒಣ ಎಲೆ, ಸೋಗೆ, ಮಡಿಲುಗಳನ್ನು ಹೊದಿಸಬೇಕು. ಇದರಿಂದ ಬಳ್ಳಿಯ ಬುಡ ಬೇಗ ಒಣಗದಂತೆ ತಡೆಗಟ್ಟಬಹುದು.

ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳು ಬಾಧೆ; ಹತೋಟಿ ಮತ್ತು ಎಚ್ಚರಿಕೆ ಕ್ರಮಗಳು
ಶಿವಮೊಗ್ಗ. ಅಕ್ಟೋಬರ್ 04 ; ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳು ಬಾಧೆ ಕಂಡುಬಂದಿರುತ್ತದೆ. ಸಾಮಾನ್ಯವಾಗಿ ಕಂದು ಜಿಗಿ ಹುಳು ಅತಿ ಶೀಘ್ರದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಭಿವೃದ್ಧಿಯಾಗಿ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ ಆದ್ದರಿಂದ ರೈತರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಕಂದು ಜಿಗಿ ಬಾಧೆಯಲ್ಲಿ ಹುಳುಗಳು ಸಸ್ಯದ ಬುಡ ಭಾಗದಲ್ಲಿ ರಸ ಹೀರಿ ಬೆಳೆಯನ್ನು ಸುಟ್ಟಂತೆ ಮಾಡಿ ಸಂಪೂರ್ಣವಾಗಿ ನಾಶಪಡಿಸುತ್ತದೆ. ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ತೆಂಡೆಗಳು ಕ್ರಮೇಣ ಒಣಗಿದಂತಾಗಿ ಭತ್ತದ ತಾಕಿನಲ್ಲಿ ಅಲ್ಲಲ್ಲಿ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತೆ ಕಾಣುತ್ತದೆ. ಸಾಮಾನ್ಯವಾಗಿ ಇದನ್ನು ಜಿಗಿ ಸುಡು ಅಥವಾ ಹಾಪರ್ ಬರ್ನ್ ಎಂದು ಕರೆಯುತ್ತಾರೆ. ದಿನಗಳೆದಂತೆ ಮರಿಹುಳುಗಳಿಗೆ ರೆಕ್ಕೆಗಳು ಬಂದು ಮುಂದಿನ ತಾಕುಗಳಿಗೆ ಜಿಗಿದು ಆ ಬೆಳೆಯನ್ನೂ ಸಹ ನಾಶಪಡಿಸುತ್ತದೆ.
ಹತೋಟಿ ಕ್ರಮಗಳು :
ಹುಳುವಿನ ಹತೋಟಿಗೆ ಮಾನೋಕ್ರೋಟೋಫಾಸ್ 36 ಎಸ್ ಎಲ್ ಪ್ರತಿ ಲೀಟರ್ ನೀರಿಗೆ 2 ಮಿಲಿ ಅಥವಾ ಕ್ಲೋರೋಪೈರಿಫಾಸ್ 20 ಇಸಿ ಪ್ರತಿ ಲೀಟರ್ ನೀರಿಗೆ 2ಮಿಲಿ ಅಥವಾ ಇಮಿಡಾ ಕ್ಲೋಪ್ರಿಡ್ 17.8 ಎಸ್ ಎಲ್ 0.6 ಮಿಲಿ ಪ್ರತಿ ಲೀಟರ್ ನೀರಿಗೆ ಅಥವಾ ಬುಫ್ರೋಫೆಜಿನ್ ಪ್ರತಿ ಲೀಟರ್ ನೀರಿಗೆ 2 ಮಿಲಿ ಬೆರಸಿ ಗಿಡದ ಬುಡಭಾಗ ನೆನೆಯುವಂತೆ ಸಿಂಪಡಿಸಬೇಕು. ಎಕರೆಗೆ 300 ರಿಂದ 350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ತೆನೆ ಬರುವ ಮೊದಲು ಇದರ ಬಾಧೆ ಕಂಡು ಬಂದಲ್ಲಿ ಎಕರೆಗೆ 5 ಕೆಜಿ ಫೋರೇಟ್ ಅಥವಾ 8 ಕೆಜಿ ಕಾರ್ಬೋಫ್ಯೂರಾನ್ ಹರಳನ್ನು ಬಳಸಿ ತಡೆಯಬಹುದಾಗಿದೆ.
ಎಚ್ಚರಿಕೆ ಕ್ರಮಗಳು : ಸಿಂಪರಣೆ ಮಾಡುವಾಗ ಗದ್ದೆಯಲ್ಲಿನ ನೀರನ್ನು ಸಂಪೂರ್ಣವಾಗಿ ಬಸಿದು ಹೊರ ತೆಗೆಯಬೇಕು. ಗದ್ದೆಯಿಂದ ಗದ್ದೆಗೆ ನೀರು ಹಾಯಿಸಬಾರದು ಮತ್ತು ಯೂರಿಯಾ ರಸಗೊಬ್ಬರ ಬಳಸಬಾರದು. ಯಾವುದೇ ಕಾರಣಕ್ಕೂ ಬಾಧೆಗೊಳಗಾದ ಭತ್ತದ ಬೆಳೆಗೆ ಮಿಥೈಲ್ ಪ್ಯಾರಾಥಿಯಾನ್ ಅಥವಾ ಸಿಂಥೆಟಿಕ್ ಪೈರಿಥ್ರಾಯ್ಡ್ ರಾಸಾಯನಿಕಗಳನ್ನು ಬಳಸಬಾರದು. ಪ್ರತಿ 10 ಸಾಲಿಗೆ (8 ರಿಂದ 10 ಅಡಿ) ಪೂರ್ವ – ಪಶ್ಚಿಮವಾಗಿ ಪಾತಿ ಮಾಡಿ (ಇಕ್ಕಲು ತೆಗೆದು) ಗಾಳಿಯಾಡುವಿಕೆ ಉತ್ತಮಗೊಳಿಸಿ ಗಿಡದ ಬುಡಕ್ಕೆ ಸಿಂಪರಣೆ ಮಾಡುವುದು. ದಿನನಿತ್ಯ ಗದ್ದೆಯ ಪರಿವೀಕ್ಷಣೆ ಅತಿ ಮುಖ್ಯ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಕಿರಣ್ ಕುಮಾರ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರೇ ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಸಿನಸ್) ಕೀಟ ಕಂಡುಬಂದಲ್ಲಿ ಈ ಕ್ರಮಗಳನ್ನು ಅನುಸರಿಸಿ
ಪ್ರಸಕ್ತ ವರ್ಷದಲ್ಲಿ ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲಿ 26 ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದ್ದು, ಕಳೆದ ವರ್ಷ ಮೆಣಸಿನಕಾಯಿ ಬೆಳೆಯನ್ನು ಬಾಧಿಸಿದ್ದ ಹೊಸ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಪಿನಸ್) ಕೀಟವು ಈ ಬಾರಿಯೂ ಕಾಣಿಸುವ ಸಂಭವವಿದ್ದು, ಕೀಟದ ನಿರ್ವಹಣೆಗೆ ರೈತರು ಸೂಕ್ತ ಕ್ರಮ ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತವೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎಲೆಗಳ ಅಂಚುಗಳು ಮೇಲ್ಮುಖವಾಗಿ ಮುದುಡುವುದು, ಹೂಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂಬಿಡದೆ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಹಾನಿಯ ಲಕ್ಷಣಗಳಾಗಿವೆ. ಕಾಲ ಕ್ರಮೇಣ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ.

ನಿರ್ವಹಣಾ ಕ್ರಮಗಳು:

ಹೊಲದ ಸುತ್ತಲೂ 2-3 ಸಾಲು ಜೋಳ, ಮೆಕ್ಕೆಜೋಳ, ಸಜ್ಜೆಯನ್ನು ಬೇಲಿ ಬೆಳೆಯಾಗಿ ಅಡವಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು. ಹೊಲ ಮತ್ತು ಬದುಗಳ ಸ್ವಚ್ಛತೆಯಿಂದ ಥ್ರಿಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿರ್ಮೂಲನೆ ಮಾಡಬಹುದು. ಸೂಕ್ತ ಅಂತರ (9030 ಸೆಂ.ಮೀ ಮತ್ತು 6045 ಸೆಂ.ಮೀ) ಕಾಪಾಡಬೇಕು.

ಚೆನ್ನಾಗಿ ಕೊಳಿತ ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂದ್ರ ಕೀಟನಾಶಕದಿಂದ (2-3 ಕೆ.ಜಿ/ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು. ಬೇವಿನ ಹಿಂಡಿ (200 ಕೆ.ಜಿ/ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆ.ಜಿ/ಎಕರೆಗೆ) ಮಣ್ಣಿನಲ್ಲಿ ಬೆರೆಸುವುದರಿಂದ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ.

ಶಿಫಾರಸ್ಸು ಪ್ರಮಾಣದ ರಸಗೊಬ್ಬರದದೊಂದಿಗೆ ಪೊಟ್ಯಾಶ್‌ನ ಬಳಕೆ ವೃದ್ಧಿಸುವುದರಿಂದ ಕೀಟ ನಿರೋಧಕ ಶಕ್ತಿ ಹೆಚ್ಚುತ್ತದೆ. ನೀಲಿ ಅಂಟಿನ ಬಲೆಗಳನ್ನು @25-30/ಎಕರೆಗೆ ಬೆಳೆಯ ಎತ್ತರಕ್ಕೆ ಅಳವಡಿಸಬೇಕು. ಆಗಿಂದಾಗೆ ಕುಂಟೆಯೊಡೆಯುವುದರಿAದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು.
ಸಾಧ್ಯವಾದಲ್ಲಿ ಕಾಲುವೆ ಮೂಲಕ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್)ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುವುದನ್ನು ತಡೆಯಬಹುದು.

ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತುಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು. ಪರಭಕ್ಷಕ/ಮಿತ್ರ ಕೀಟಗಳ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳ ಬದಲು ಪರಿಸರ ಸ್ನೇಹಿ ಕೀಟನಾಶಕಗಳಾದ ಶೇ.5 ರ ಬೇವಿನ ಬೀಜದ ಕಷಾಯ, ಬೇವಿನ ಎಣ್ಣೆ (1500 ಪಿ.ಪಿ.ಯಂ) @ 2 ಮಿ.ಲೀ/ಲೀ, ಹೊಂಗೆ ಎಣ್ಣೆ @3 ಮಿ.ಲೀ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಶಿಲೀಂಧ್ರ ಕೀಟನಾಶಕಗಳಾದ ಬಿವೇರಿಯಾ ಬಸ್ಸಿಯಾನ ಅಥವಾ ಲೆಕ್ಯಾನಿಸಿಲಿಯಂ ಲೆಕ್ಯಾನಿ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೇಯನ್ನು @4 ಗ್ರಾಂ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಅವಶ್ಯಕತೆಗನುಸಾರವಾಗಿ ಶಿಫಾರಸ್ಸು ಮಾಡಿರುವ ರಾಸಾಯನಿಕ ಕೀಟನಾಶಕಗಳಾದ 0.3 ಮಿ.ಲೀ., ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ ಥಯೋಮೆಥಾಕ್ಸಾಮ್ 25 ಡಬ್ಲ್ಯೂ.ಜಿ ಅಥವಾ 1.0 ಮಿ.ಲೀ., ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ ಡಯಾಫೆನ್ ಥಯೂರಾನ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳೆ ರೋಗದಿಂದ ಅಡಿಕೆ ಮರಗಳನ್ನು ರಕ್ಷಿಸಲು ಹೀಗೆ ಮಾಡಿ
ಪ್ರಸ್ತುತ ಹೆಚ್ಚು ಮಳೆ, ಮೋಡಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆಧ್ರತೆ (ಶೇ. 90 ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಹೆಚ್ಚಿರುವುದರಿಂದ ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು ಎಂದು ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಅವರು ಮಾಹಿತಿ ನೀಡಿರುತ್ತಾರೆ.

ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು. ಕೊಳೆಬಾಧಿತ ಬಿದ್ದಂತಹ ಕಾಯಿಗಳನ್ನು ಆರಿಸಿ ಹೊರಗಡೆ ಹಾಕಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಹಾಗೂ ತೋಟದ ಅಂಚಿನ ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು. ವೈಜ್ಞಾನಿಕವಾಗಿ ತಯಾರಿಸಿದ ರಸಸಾರ (pH) 7ರ ಶೇ.1 ರ ಬೋರ್ಡೋದ್ರಾವಣ ಅಥವಾ ಶೇ.0.2 ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ.0.2 ರ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.1 ರ ಮ್ಯಾಂಡಿಪ್ರ‍್ರೇಪಮಿಡ್ (1 ಮಿ.ಲಿ ಪ್ರತಿ ಲೀ. ನೀರಿನಲ್ಲಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆಗಳಿಗೆ ಮತ್ತು ಸುಳಿಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ.

ಹೀಗೆ ಮಾಡುವುದರಿಂದ ಕೊಳೆರೋಗದ ಜೊತೆಗೆ ಎಲೆಚುಕ್ಕೆ ರೋಗವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.