ಕಲೆ – ಸಾಹಿತ್ಯ – Peepal Media

ಪ್ಯಾಲೆಸ್ಟೈನ್ ಬೂಟು!
“..ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…” ಲೇಖಕ ವಿ ಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ಇಲ್ಲಿ, ಅಂದರೆ ನಾನೀಗ ಬಂದಿರುವ ಜಾಗಲ್ಲಿ ಕೇಳಿದರು,
ನೀನ್ಯಾರು?
ಅದಕ್ಕೆ ಪುರಾವೆಯೇನು?

ನಾನು ನರಕದಿಂದ ಬಂದವರಿಗೆ
ನನ್ನ ಸ್ವರ್ಗದಂಥ ನೆಲವ ಕೊಟ್ಟವಳು

ಓಹೋ ನೀನೊಂದು ಹೆಣ್ಣು…
ನೆಲ ಹೇಗೆ ನಿನ್ನದಾಗುತ್ತದೆ?

ಹೌದು, ನೆಲ ಮತ್ತು ನೆಲೆ ನನ್ನದಾದರೂ
ನನ್ನದೆಂಬ ಅಹಂ ಬಿಟ್ಟವಳು ನಾ…

ತ್ಯಾಗದ ಮಾತು ಬೇಡ
ನಿನ್ನ ಅಸ್ಮಿತೆಯ ಕುರುಹ ರುಜುವಾತು ಮಾಡು
ಈಗಲೇ…

ಅಗೋ, ಆ ಕಡೆಯ, ಒಂದೆಜ್ಜೆ ಊರುವ
ನೆಲದಿಂದ ಪುಟಿದೆದ್ದ ಕೂಸು ನಾನು
ನನ್ನಪ್ಪ ಯಹೂದಿಗಳು ಉಸಿರಾಡಲು
ತನ್ನ ಸಂಪದ್ಭರಿತ ತೋಟ ಕೊಟ್ಟವನು!

ಓಹೋ ನೀನು ಫ್ಯೂಡಲ್ಲಾ?
ಭೂಮಿಯನ್ನೇ ಉಳುವೆನೆಂಬ
ಜಂಭ ಉಳಿಸಿಕೊಂಡ
ಬೆಳಗಿನ ಜಾವದ ಕೋಳಿಯ?

ಬರ್ಲಿನ್, ಮ್ಯೂನಿಚ್, ಕ್ರೊಯೇಷಿಯಾ,
ಗ್ರೀಸಿನ ಅಥೆನ್ಸ್ ದಾಟಿ, ಮೆಡಿಟರೇನಿಯನ್ ಸಮುದ್ರದಲ್ಲಿ
ಮುಳುಗುತ್ತಿದ್ದ ಜನರಿಗೆ ನಿರಾಳ ಗಾಳಿ ಕೊಟ್ಟದ್ದು
ನನ್ನಪ್ಪ, ಅವನಂತ ಸಾವಿರಾರು ಜನ

ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಕೂಡದು
ಅಂತ ನೀತಿಶಾಸ್ತ್ರ ಹೇಳುತ್ತದೆ.‌‌..
ದಿಟ ಹೇಳು, ನೀತಿಶಾಸ್ತ್ರದ ಪ್ರಕಾರ
ನಿನ್ನ ಗುರುತೇನು?

ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…

ಈಗ ಸತ್ಯ ಹೇಳಿದೆ ನೋಡು…
ಮೊದಲೇ ನಾನೊಬ್ಬಳು ಪ್ಯಾಲೆಸ್ತೇನಿಯಳು
ಅಂದಿದ್ದರೆ ನಿನ್ನ ಗಂಟೇನು ಕರಗುತ್ತಿತ್ತು?

-ವಿ.ಆರ್.ಕಾರ್ಪೆಂಟರ್

ಆ ಮರ ಬಿಟ್ಟ ಕಾಯಿ ನಾನು
ಖ್ಯಾತ ಮಲಯಾಳಂ ಕವಿ ಸಚ್ಚಿದಾನಂದ ಪಿಳ್ಳೈ ಅವರ ಮೂಲ ಬರಹದ, ಕನ್ನಡದ ವೈಚಾರಿಕ ಸಾಕ್ಷಿಪ್ರಜ್ಞೆ ಪಿ ಲಂಕೇಶ್ ಅವರ ಅನುವಾದದಲ್ಲಿ

ನನ್ನ ಅಜ್ಜಿಗೆ ಹುಚ್ಚು ಹಿಡಿಯಿತು,
ಅವಳನ್ನು ಮೂಲೆಯಲ್ಲಿ ಮಲಗಿಸಿದರು,
ಅಲೇ ಮುದುಕಿ
ಸತ್ತುಹೋಯಿತು.
ಅವಳ ಮೇಲೆ ಹುಲ್ಲು,
ಮಣ್ಣು ಮುಚ್ಚಿದರು.
ಅಲ್ಲಿಂದ ಒಂದು ಕುಡಿ ಹೊರಟು
ಮರವಾಯಿತು.
ಆ ಮರ ಬಿಟ್ಟ
ಕಾಯಿ ನಾನು.

ಮಡಿವಂತ ಪ್ರಧಾನಿಯ ಬಗ್ಗೆ
ಬಟ್ರೋಲ್ಟ್ ಬ್ರೆಕ್ಟ್ ಅವರ ಮೂಲ ಬರಹದಲ್ಲಿ, ಕನ್ನಡ ಅನುವಾದ ಶಾ. ಬಾಲೂರಾವ್ ಅವರಿಂದ, ವಿಶ್ವ ಅನುವಾದ ದಿನದ ವಿಶೇಷವಾಗಿ

ಕೇಳಿದ್ದೇನೆ; ಆ ಪ್ರಧಾನಿ ಕುಡಿಯುವುದಿಲ್ಲವಂತೆ
ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು – ಚುಟ್ಟ ಸೇದುವುದಿಲ್ಲವಂತೆ
ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.
ಮತ್ತೆ ಇದನ್ನೂ ಕೇಳಿದ್ದೇನೆ; ಆ ದೇಶದ ಬಡಜನ
ಹೊಟ್ಟೆಗಿಲ್ಲದೆ ಪಾಡುಪಡುತ್ತಿದ್ದಾರಂತೆ.

ಅದರ ಬದಲು ಹೀಗೆ ಕೇಳುವುದು ಎಷ್ಟು ಮೇಲಾಗಿರುತ್ತಿತ್ತು:
ಪ್ರಧಾನಿ ಕ್ಯಾಬಿನೆಟ್ ಮೀಟಿಂಗ್’ಗಳಲ್ಲೂ ಕುಡಿದು ಕೂತಿರುತ್ತಾನೆ
ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನು ಬದಲಾಯಿಸುತ್ತಿರುತ್ತಾರೆ
ಅವನು ಅವರ ಪೈಪಿಂದೇಳುವ ಹೊಗೆಯನ್ನೆ ನೋಡುತ್ತಿರುತ್ತಾನೆ
ಆ ದೇಶದಲ್ಲಿ ಬಡಜನರೇ ಇಲ್ಲ!

“ನನ್ನನ್ನು ಸುಡಿ”
ವಿಶ್ವ ಅನುವಾದ ದಿನದ ವಿಶೇಷವಾಗಿ ಬ್ರೆಕ್ಟ್ ಮೂಲ ಬರಹದ ಅನುವಾದ. ಕನ್ನಡಕ್ಕೆ ಶಾ ಬಾಲೂರಾವ್

ಹಾನಿಕಾರಕ ಪುಸ್ತಕಗಳನ್ನು
ಸಾರ್ವಜನಿಕವಾಗಿ ಸುಡಬೇಕೆಂದು
ಸರಕಾರ ಸುಗ್ರೀವಾಜ್ಞೆ ಹೊರಡಿಸಿತ್ತು
ಎಲ್ಲೆಲ್ಲೂ ಪುಸ್ತಕಗಳನ್ನು
ಎತ್ತಿನಗಾಡಿಗಳಲ್ಲಿ ಹೇರಿ
ಸುಡುಕೊಂಡಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು

ಆಗ ಒಬ್ಬ ಬಹಿಷ್ಕೃತ ಸಾಹಿತಿ,
ಶ್ರೇಷ್ಠರಲ್ಲೊಬ್ಬ,
ಸುಡಲಿರುವ ಪುಸ್ತಕಗಳ ಪಟ್ಟಿಯಲ್ಲಿ
ತನ್ನ ಕೃತಿಗಳ ಹೆಸರಿಲ್ಲದ್ದನ್ನು ನೋಡಿ ಹೌಹಾರಿದ
ತಕ್ಷಣ ಕೋಪದ ಭರದಲ್ಲಿ ಮೇಜಿಗೆ ಧಾವಿಸಿ,
ಪತ್ರ ಗೀಚಿದ: ಸುಡಿ, ನನ್ನನ್ನು ಸುಡಿ!
ಲೇಖನಿ ಹಕ್ಕಿವೇಗದಲ್ಲಿ ಹಾರಿತ್ತು ನನ್ನನ್ನು ಸುಡಿ!

ನನಗೇನೂ ಪರವಾಗಿಲ್ಲ!,
ನನ್ನನ್ನು ಬಿಡಬೇಡಿ!
ನನ್ನ ಪುಸ್ತಕಗಳು
ಯಾವಾಗಲೂ ಸತ್ಯವನ್ನೇ ಸಾರಿಲ್ಲವೇ?
ಈಗ ನಿಮ್ಮಿಂದ ನಾನು ಸುಳ್ಳನ್ನೆನಿಸಿಕೊಳ್ಳಬೇಕೇನು? ಇದು ನನ್ನ ಆಜ್ಞೆ, ನನ್ನನ್ನು ಸುಡಿ!

-ಬ್ರೆಕ್ಟ್
ಅನುವಾದ: ಶಾ ಬಾಲೂರಾವ್‌

ಬುದ್ಧನ ಕೊಲೆ
ಲಂಕಾ ದಹನದ ಕರಾಳ ಇತಿಹಾಸ

ಜೂನ್ 1, 1981ರಲ್ಲಿ, ಶ್ರೀಲಂಕಾದ ತಮಿಳು ಪ್ರಾಬಲ್ಯದ ಜಾಫ್ನಾದಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಿತ್ತು. ಸಿಂಹಳ ಪೊಲೀಸರು ಮಫ್ತಿಯಲ್ಲಿ ಜಾಫ್ನಾದ ಪಬ್ಲಿಕ್ ಲೈಬ್ರರಿಯನ್ನು ಸುಟ್ಟುಹಾಕಿದರು. ಅಂದು ನಡೆದ ಹಿಂಸಾಚಾರದಲ್ಲಿ ತಮಿಳರ ಜೀವಗಳೂ ಬಲಿಯಾದವು. 1930ರಲ್ಲಿ ಸ್ಥಾಪಿಸಲಾದ ಆ ಲೈಬ್ರರಿಯಲ್ಲಿ ಲಕ್ಷಕ್ಕಿಂತ ಹೆಚ್ಚು ತಮಿಳು ಪುಸ್ತಕಗಳಿದ್ದವು. ಅಪರೂಪದ ಓಲೆಗರಿ ಹಸ್ತಪ್ರತಿಗಳಿದ್ದವು. ಜೀವನಾಶವಷ್ಟೇ ಅಲ್ಲ, ಗ್ರಂಥಾಲಯ ಸುಡುವಿಕೆ ತಮ್ಮ ಬೌದ್ಧಿಕ ಅಸ್ಮಿತೆಯ ನಾಶ ಎಂದೇ ಶ್ರೀಲಂಕಾದ ತಮಿಳರ ಮನದಲ್ಲಿ ದಾಖಲಾಗಿ ಜನಾಂಗೀಯ ಕಲಹ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಯಿತು. ಆ ನಂತರದ್ದು ತಮಿಳರ ಪತನದ ಇತಿಹಾಸ. ಎಲ್‌ಟಿ‌ಟಿಇ ಅಲ್ಲದವರನ್ನೂ ಕೇವಲ ತಮಿಳಿನ ಕಾರಣಕ್ಕೆ ಕೊಲ್ಲಲಾಗುತ್ತಿತ್ತು; ಅತ್ಯಾಚಾರ ಮಾಡಲಾಗುತ್ತಿತ್ತು…

ಈ ಘಟನೆ ಕುರಿತು ಖ್ಯಾತ ಶ್ರೀಲಂಕಾದ ತಮಿಳು ಕವಿ ಎಂ. ಎ. ನುಹ್ಮನ್ ಬರೆದ ಪ್ರಸಿದ್ಧ ಕವಿತೆ ಇಲ್ಲಿದೆ.

ಬುದ್ಧನ ಕೊಲೆ

ಕಳೆದ ರಾತ್ರಿ, ನನ್ನ ಕನಸಲ್ಲಿ
ಬುದ್ಧಗುರುವನ್ನು ಕೊಲ್ಲಲಾಯಿತು
ಮಫ್ತಿಯ ಪೊಲೀಸರು
ಬುದ್ಧನನು ಗುಂಡಿಟ್ಟು ಕೊಂದರು.
ಜಾಫ್ನಾ ಲೈಬ್ರರಿಯ ಮೆಟ್ಟಿಲುಗಳ ಮೇಲೆ
ರಕ್ತಮಡುವಿನಲ್ಲಿ ಮುಳುಗಿ
ಅಂಗಾತ ಬಿದ್ದ ಬುದ್ಧನ ದೇಹ..

ರಾತ್ರಿಯ ಕಗ್ಗತ್ತಲಿನಲ್ಲೇ
ಓಡೋಡಿ ಬಂದ ಮಂತ್ರಿ ಕೆಂಡಾಮಂಡಲ,
‘ಅವನ ಹೆಸರು ನಮ್ಮ ಯಾದಿಯಲ್ಲಿರಲಿಲ್ಲ,
ಕೊಂದಿದ್ದು ಏಕೆ?’

‘ಇಲ್ಲ, ಇಲ್ಲ,’ ಪೊಲೀಸರೆಂದರು,
‘ಏನೂ ಪ್ರಮಾದವಾಗಿಲ್ಲ.
ಅವನ ಕೊಲ್ಲದೇ ಹೋಗಿದ್ದರೆ
ಒಂದೇ ಒಂದು ನೊಣವನ್ನೂ
ಕೊಲ್ಲಲಾಗುತ್ತಿರಲಿಲ್ಲ.
ಎಂದೇ..’

‘ಆಯಿತು, ಆಯಿತು.
ಕೂಡಲೇ ಶವ ವಿಲೇವಾರಿ ಮಾಡಿಬಿಡಿ’,
ಕರಗಿಹೋದರು ಗುಡುಗಿದ ಮಂತ್ರಿ..

ಮಫ್ತಿಯ ಪೊಲೀಸರು
ಶವವನ್ನು ಒಳಗೆಳೆದು
ಬುದ್ಧನ ದೇಹವನ್ನು
ತೊಂಭತ್ತು ಸಾವಿರ ಪುಸ್ತಕಗಳಿಂದ ಮುಚ್ಚಿದರು.
ಸಿಕಲೋಕವಾದ ಸುತ್ತದಿಂದ ಬೆಂಕಿಯಿಟ್ಟರು

ಬುದ್ಧಗುರುವಿನ ದೇಹ ಬೂದಿಯಾಯ್ತು
ಅಂತೆಯೇ ಧಮ್ಮಪದವೂ..

ಅನುವಾದ: ಡಾ. ಎಚ್.ಎಸ್.ಅನುಪಮಾ

ಲೊಕೇಶನ್
ವಿಶ್ವ ಅನುವಾದ ದಿನದ ವಿಶೇಷವಾಗಿ ಮನೋಜ್ ಕರ್ನೂರು ಅವರ ಮಲಯಾಳಂ ಪದ್ಯ, ಕನ್ನಡಕ್ಕೆ ಅನುವಾದ ವಿ.ಆರ್.ಕಾರ್ಪೆಂಟರ್

ಹೀಗೆ, ಈ ಕತೆಯನ್ನು
ಏಳನೆಯ ಪೆಗ್‌ನ ನಡುವಿನ
ಒಂದು ಆಯಾಮಕ್ಕೆ ಬಿಗಿಯಲಾಗಿದೆ

ಆ ಏಳರಲ್ಲಿ ನಾನೊಬ್ಬ ಲೇಖಕ
ಅದಕ್ಕೆ ಸಾಕ್ಷಿಯಾಗಿ
ಹಸಿರು ಹೊದ್ದ ದಿಣ್ಣೆಯ ಮೇಲೆ
ಕೆಂಪುಧ್ವಜವೊಂದು ಹರಡಿಕೊಂಡಿರುವ
ದೃಶ್ಯವನ್ನು ಕಾಣಬಹುದಾಗಿದೆ

ಬೆವರ ಮಳೆಯಿಂದ ತೋಯ್ದು ಹೋಗುತ್ತಿರುವ
ನಿರ್ದೇಶಕ ಜಾನಿ
ಪಕ್ಕದ ಕೋಣೆಯಿಂದ ಹೊರಬಂದ
ಹಾಗೆಯೇ, ನಿರ್ಮಾಪಕ ಶಾಜಿ
ಸಹಜವಾಗಿ ತನ್ನ ದೇಹವ ಆ ಕೋಣೆಯಲ್ಲೇ
ಚೆಲ್ಲಿಕೊಂಡಿದ್ದ

ಎಲ್ಲಿಗೋ ಹೊರಡವ ಧಾವಂತದಲ್ಲಿದ್ದ
ಕಲಾವಿದ ವರ್ಮಾನ ಕೈಯಲ್ಲಿ
ಕುಡುಗೋಲು ಎತ್ತಿ ಹಿಡಿದ,
ಭತ್ತದ ತೆನೆಗಳ ಬಗುಲಲ್ಲಿ ಇರುಕಿಕೊಂಡ,
ಮಣ್ಣು ಮೆತ್ತಿಕೊಂಡ ಹಸಿರುಗೆಂಪು ಬಣ್ಣದ ರವಿಕೆಯ ರೈತಮಹಿಳೆಯ
ಒಂದು ಕ್ಲೋಸ್ ಅಪ್ ವರ್ಣಚಿತ್ರ

ಲೊಕೇಶನ್ ಹುಡುಕಲು ಹೊರಟ
ಅನಿಲ್ ಮತ್ತು ಸುನಿಲ್
ತಮ್ಮ ಮುಖಗಳನ್ನು ಕೈಗಳಿಂದ ಒರೆಸಿಕೊಳ್ಳುತ್ತಿದ್ದರೂ
ತುಟಿಗಳ ಮೇಲೆ ಮಾತ್ರ
ಅಸಂಗತ ನಗು

ಎಲ್ಲರ ನಂತರ, ಕಡೆಗೆಂಬಂತೆ ನಾನು
ಆ ಕೋಣೆಯ ಹೊಕ್ಕವನು
ಥಟ್ಟನೆ ಹೊರಬಂದೆ

ಚಪಾತಿ ಮತ್ತು ಕೋಳಿ ಮಾಂಸದ
ತುಂಡುಗಳನ್ನು ಹಂಚಿ ಉಣ್ಣುವ
ಸದ್ದಿನ ಹಿನ್ನೆಲೆಯಿಂದ
ಅವಳು ನಡೆದು ಬಂದಳು:

‘‌ಇಬ್ಬರೇ ಅಂತ ಹೇಳಿ
ಬೆಳಗ್ಗೆಯಿಂದ ನೀರೂ ಕೊಡದೆ…..
ನೀವು ಹುಳಾಬಿದ್ದು ಸಾಯ್ತೀರ’

ಹೊಸ್ತಿಲು ದಾಟಿ ಹೋಗುವ ಮುನ್ನ
ಅವಳೆಸೆದು ಹೋದ ನೋಟುಗಳನ್ನು
ಪ್ರೊಡಕ್ಷನ್ಸ್ ಎಕ್ಸಿಕ್ಯುಟಿವ್
ಆಯ್ದು ಎತ್ತಿಟ್ಟುಕೊಂಡ

ನಾನು ಹಾಗೆಯೇ ಮುಂದಿನ
ಕೋಣೆಗೆ ನಡೆದೆ
ಹಾಸಿಗೆಯ ಮೇಲೆ ಹಸಿರುಗೆಂಪಿನ ಹೊದಿಕೆ
ಅದರ ಮೇಲೆ ಆಳುದ್ದದ ತೇವ
ಬಹುಶಃ ಈ ಲೊಕೇಶನ್
ಆಗಬಹುದು ಎಂದು ತಮಾಷೆ ಮಾಡಿದೆ

ಕಬೋರ್ಡ್ ಒಳಗಿನ ಶೆಲ್ಫಿನ ಮೇಲೆ
ಅಡಗಿಸಲಾಗಿದ್ದ ಕ್ಯಾಮೆರಾ ನೋಡಿ
ನಿರ್ದೇಶಕ ನಕ್ಕ
‘‌ಕಟ್’

ಪ್ರಶ್ನೆಯೂ; ಕ್ರೋಧವೂ..
ಕವಯತ್ರಿ ಗೀತಾ ನಾರಾಯಣ್ ಅವರ ಒಂದು ಸುಂದರ ಕವಿತೆ

ಪ್ರಶ್ನೆಯೂ; ಕ್ರೋಧ ವೂ..

ನೆಲಕ್ಕೆ ಕಿವಿಗೊಟ್ಟು ನೋಡಿ
ಎಷ್ಟೊಂದು ಸತ್ಯಗಳು ಪಿಸುಗುಟ್ಟುತ್ತಿವೆ ಧರೆಯ ಗರ್ಭದಲ್ಲಿ..

ಸುಮಗಳ ಹಗುರಾಗಿ ಅಪ್ಪಿಬಿಡಿ
ಹೂಗಣ್ಣೆನಲಿ ಗಂಧವಿದೆ
ಉಸಿರಾಡಿ ಮತ್ತು ಮೆಲ್ಲನೆ
ಮೆದುವಾಗಿ ನೀವೂನು

ಬಯಲ ಮೌನದಲ್ಲಿ ಆಗಸವ ಎದುರಾಗಿ;ಆಗ ಇರುಳಾಗಿರಲಿ
ಚುಕ್ಕಿಗಳ ಎದೆಬೆಳಕು ಬೆಂದ ಅದೆಷ್ಟೋ ಜನ ತಾಯಂದಿರ ಮಮತೆ

ಕಡಲ ತೆರಗಳಿಗೆ ಮೌನವೊಲಿದ ದಿನ
ತಿಂಗಳನು ಅಪ್ಪನಾಗಬಹುದು
ನೆಲದವ್ವ ಜಲದವ್ವರು ನಕ್ಕಾರು

ದಟ್ಟ ವಿಪಿನದೊಳಗೆ ನಿಂತುಬಿಡಿ; ತರುಗಳ ಕಣ್ಣೀರು ನಿಮ್ಮ ನೆತ್ತಿಯ ಒದ್ದೆಯಾಗಿಸಿದರೆ ಹಣ್ಣಾಗಿ

ಮುಖ್ಯ ರಸ್ತೆಯ ಮೇಲೆ
ಉದ್ದ ಕಾರಿನಲ್ಲಿ ಓಡಾಡುವವರ ಕಿಸೆಯಲ್ಲಿ
ಅಹಂಕಾರ ತೊಟ್ಟಿಕ್ಕಿದರೆ
ಪ್ರಶ್ನಿಸಬೇಡಿ! ಸುಮ್ಮನಿರಿ

ಕೀರ್ತಿವಂತರಿಗೆ ಆದಾಯದ ನಶೆಯಲ್ಲಿ ವಿವೇಕ ಕಾಣದು
ಅವಕಾಶ, ಲಾಭಕ್ಕಾಗಿ
ಮಾರಿಕೊಳ್ಳುವ ಯಾರೂ ಇಲ್ಲಿ ಮನುಷ್ಯರಾಗಲಾರರು..

ನದಿ,ಹಕ್ಕಿ,ಸಮೀರದ ಸದ್ದಿಗಿಂತಲೂ
ಕ್ರೋಧವೇ ಮೊದಲಾಗಿದೆ ಕೀರ್ತಿಭ್ರಮೆಯ ಜನಕೆ

ಪ್ರಶ್ನಿಸಬೇಡಿ; ಸತ್ಯವೆಂದರೆ ಅನೇಕರ ಶತ್ರು..

“ಕಡಲಮ್ಮನ ಸೆರಗಿನಲ್ಲಿ “
ಪೌರ್ಣಮಿಯ ಚಂದ್ರನೆದೆಗೆ
ಯಾರೋ ಗುರಿ ಇಟ್ಟಿರುವಾಗ!
ಮಂಗಳನ ಹಜಾರದಲ್ಲಿ ಆತಂಕ ನಡೆದಾಡಿದೆ
ನಾನಿಲ್ಲಿ ಕಡಲಮ್ಮನ ಸೆರಗಿನಲ್ಲಿ
ಪ್ರೇಮದ ತೇವಕ್ಕೆ ಬೆರಗಾದೆ
ನೂರಾರು ಹಕ್ಕಿಗಳ ಸ್ವಪ್ನಗಳಿಗೆ
ಈ ಕಡಲೇ ಹರಣವಾದುದು ಪ್ರೇಮವೇ ಅಲ್ಲವೆ!
ಬಲೆ ಎಂದರೆ ಶಿಕಾರಿಯಷ್ಷೇ ಏನು?!! ಬಲೆಯಲ್ಲೇ ಬಿಡುಗಡೆಯ ಹಾದಿ ಅರಳಲಿ…
ಜಲದಬ್ಬರಕೆ ಪ್ರೇಮದ ಪಿಸುಮಾತುಗಳ ಕಲಿಸುವ ಸಮೀರ ಅದ್ಯಾವಾಗಲೋ ಕಠಿಣಗೊಂಡು ಹಡಗು ಮುಳುಗಿರುವಾಗ ರಾಗಪ್ರಾಣಗಳು ಕಾಣುವುದಿಲ್ಲವೇ??
ಅವಳ ನೇತ್ರಗಳಿನ್ನೂ ಅವನದೇ ಬಿಂಬದಲ್ಲಿ ಜೀವಿಸುತ್ತಿವೆ…..
ಕಡಲಮ್ಮನ ಎದೆಯಲ್ಲಿ ಬಿರುಗಾಳಿ ತುಂಬಿದವರು ಪ್ರೇಮಕ್ಕೆ ಶರಣಾಗಲಿ; ಜೀವಗಳು ಬೆಳೆದಾವು ಅಲ್ಲಿ..
ಯಾರ್ಯಾರವೋ ಒಲವುಗಳಿಲ್ಲಿ ಚುಕ್ಕಿಗಳ ಎಣಿಸುವಾಗ ದೂರದಲಿ ಜಾತಿಗಳ ಆಯುಧ ಮಸೆದವರು ಹಿಂಸೆಗೆ ಶರಣಾಗಿದ್ದಾರೆ…..
ತಥಾಗತನು ಕಡಲ ದಾಟುವಾಗ
ಅಗಾಧ ಕೂರ್ಮೆಯ ಚೆಲುವಿಗೆ
ಜೀವತುಂಬಿಯೇ ಹೋದವನು
ಗಗನದಂಗಳವು ಶುಭ್ರ ಪ್ರೇಮವ ಧರಿಸಿ ಸಣ್ಣಗೆ ಹನಿಚೆಲ್ಲುವಾಗ ಪ್ರೀತಿಯ ಬನಗಳು ಧರೆಯ ಚೆಲುವಾಗಲಿ

ತಥಾಗತನ ಬರುವಿಕೆಗಾಗಿ
ಸಣ್ಣಗೆ ಸುಯ್ಲಿಡುತ್ತಿರುವ ಸಮೀರ
ಅರಮನೆಯ ಮೋಜನ್ನು ಸವರಿಕೊಂಡು ಹೋಗುವಾಗ
ಸಿದ್ದಾರ್ಥನಿನ್ನು ಮಲಗಿದ್ದ
ಇಲ್ಲಿ ಎಲ್ಲವೂ ಸುಖವೇ

ಅದ್ಯಾವ ದಿಕ್ಕಿನಲ್ಲಿ ಹುಟ್ಟಿತ್ತೋ?
ಅರಮನೆಯ ಕಡೆಗೆ ಬಂದ ಗಾಳಿ ! ಬೆಳಕಿನ ಶಾಂತ ಪಿಸುಮಾತುಗಳನ್ನು ಸಿದ್ದಾರ್ಥನಿಗೆ ಹೊದಿಸಿತ್ತು

ಮೋಹದೊಳಗಿನ ಅಮಲು
ತಬ್ಬುವ ಮೊದಲೇ ಎಚ್ಚರಾದವನು ವಿರಾಗಿಯಾಗಿ
ರಾಹುಲನಿಗೆ ಮುತ್ತಿಡುವಾಗ
ಯಶೋಧರೆಯ ಪಾದಕೆರಗಿದ್ದ

ಮುಗಿಲಿಗಡರಿದ ವಾದ್ಯಗಳು
ಅರಮನೆಯಲ್ಲಿ ಬಿರುಕಾದದ್ದು
ಕಣ್ಣಲ್ಲಿ ಬಿಂಬವಾದ ಗಳಿಗೆಯಲ್ಲಿ
ನಸುಕು ನಡೆಯದೇ ನಿಂತಿತ್ತು
ಆಗಲೇ ನ್ಯಾಯದ ಬೆಳಗುಟ್ಟಿದ್ದು

ಇದೇ ಬೆಳಗಿನ ಹಾದಿಯಲ್ಲಿ
ಸುಖಗಳೆಲ್ಲ ಉರಿದು
ಬೋಧಿಯೊಳಗೆ ಲೀನವಾದ
ಚರಾಚರಗಳೆಲ್ಲ ಭೇದವಿಲ್ಲದ
ಕಾರುಣ್ಯದಲಿ ಅರಳಿದವು

ನ್ಯಾಯವೆಂಬ ನೀತಿಯು
ಕೈ ಹಿಡಿದಾಗ ಮಗ್ಗುಲಲ್ಲಿ
ನಂಜು ಹತ್ಯೆಯಾಗಿ ಕುಂತದ್ದು
ತಥಾಗತನೊಲವಲ್ಲಿ ಹಗೆಯಿಲ್ಲದ ಮೌನವಾಯಿತು

ಎಲ್ಲಕ್ಕೂ ಬೆಳಕನ್ನೇ ಸವರಿ
ಹೊರಟೇ ಹೋದ
ಈಗ ಇಲ್ಲಿ ಅವನಿಲ್ಲದೆ ಕ್ಷಾಮವಿಡಿದಿದೆ……
ಧರ್ಮ ಬಣ್ಣದಲ್ಲಿ ಬದುಕು ಮುಳುಗಿ ಮರಣಿಸಿದ ಹೊತ್ತಿಗೆ
ಮತ್ತವನೇ ಬರಲಿ ಪೊರೆಯಲು.

ಗೀತಾ ನಾರಾಯಣ್

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕ್ಷರಧಿ
ಕ್ಷರಧಿ ಎಂಬ ಹೆಸರಿನ 5 ವರ್ಷದ ಈ ಪುಟ್ಟ ಬಾಲೆಯ ಪ್ರತಿಭೆಯು 2025 ರ ಏಪ್ರಿಲ್ ತಿಂಗಳ ಸೋಮವಾರ 21 ನೇ ತಾರೀಖಿನಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು. ನಮ್ಮ ದೇಶದ ಅತ್ಯಂತ ಅದ್ಭುತ ಮತ್ತು ಶ್ರೇಷ್ಠ ಸಾಧನೆಗಳನ್ನು ದಾಖಲಿಸುವ ಒಂದು ವಾರ್ಷಿಕ ಪುಸ್ತಕದಲ್ಲಿ ಕ್ಷರಧಿಯ ಹೆಸರು ಸೇರ್ಪಡೆಯಾಗಿರುವುದು ಬಹಳ ಹೆಮ್ಮೆಯ ವಿಚಾರ. ಈ ಬಾಲಕಿಯು ತಾಯಿಯ ಉದರದಲ್ಲಿರುವಾಗಲೇ ಸಂಗೀತ ಕಲೆಯನ್ನು ವರಪ್ರಸಾದವಾಗಿ ಪಡೆದುಕೊಂಡು ಬಂದಿದ್ದಾಳೆ. ಜನ್ಮದತ್ತವಾಗಿ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಈ ಮಗುವು ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದಾಳೆ.

ಕ್ಷರಧಿಯ ಹುಟ್ಟೂರು ಬೆಂಗಳೂರು. ತಂದೆ ಶ್ರೀನಾಗ್, ತಾಯಿ ಮಾಧುರಿ. ಶ್ರೀನಾಗ್ ಮೂಲತಃ ಚಿಕ್ಕಬಳ್ಳಾಪುರದ ನಂದಿಹಳ್ಳಿಯವರು. ಮಾಧುರಿ ಬೆಂಗಳೂರಿನವರು. ಈ ದಂಪತಿಗಳು ತಮ್ಮ ಪುಟ್ಟ ಮಗಳೊಂದಿಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದಾರೆ. ಈ ಮುದ್ದು ಬಾಲಕಿ ಬಸವೇಶ್ವರ ನಗರದ ‘ಯುರೋ ಕಿಡ್ಸ್’ ಶಾಲೆಯಲ್ಲಿ
ಯು.ಕೆ.ಜಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕ್ಷರಧಿಯ ಕುಟುಂಬದ ಬಹುತೇಕ ಎಲ್ಲರೂ ಸಂಗೀತದಲ್ಲಿ ಅಭಿರುಚಿಯುಳ್ಳವರೇ ಆಗಿದ್ದಾರೆ.

ಕ್ಷರಧಿ ಬಹು ಪ್ರಬುದ್ಧ ಬಾಲಕಿ. ಹುಟ್ಟಿನಿಂದಲೇ ಸಂಗೀತವನ್ನು ರಕ್ತಗತ ಮಾಡಿಕೊಂಡಿರುವ ಬಾಲೆ. ಪುಟ್ಟ ಮಗುವಾಗಿದ್ದಾಗಲೇ ಸಂಗೀತದ ಬಗ್ಗೆ ಒಲವು ತೋರುತ್ತಿದ್ದಳು ಕ್ಷರಧಿ. ಹಾಡುಗಳನ್ನು ಆಲಿಸದೆ ಈ ಮಗುವಿಗೆ ನಿದ್ರೆ ಬರುತ್ತಿರಲಿಲ್ಲವಂತೆ. ಏಳು ತಿಂಗಳ ಮಗುವಾಗಿದ್ದಾಗಲೇ ‘ಅ’ ಕಾರ ಮತ್ತು ‘ಹ’ ಕಾರವನ್ನು ಶ್ರದ್ಧೆಯಿಂದ ಆಲಿಸಿ ಅವುಗಳನ್ನು ಪುನರುಚ್ಚರಿಸುತ್ತಿದ್ದಳಂತೆ. ಕ್ಷರಧಿ ಮೂರು ವರ್ಷ ತುಂಬಿ ಮೂರು ತಿಂಗಳ ಬಾಲೆಯಾಗಿರುವಾಗಲೇ ವಿದುಷಿ ಆಶಾ ಮಂಜುನಾಥ್ ರವರಿಂದ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದಳು. ನಾಲ್ಕು ವರ್ಷದವಳಿದ್ದಾಗಿನಿಂದ ನರಹರಿ ದೀಕ್ಷಿತ್ ರವರಿಂದ ಲಘು ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ.

ಗುರು ಹಿರಿಯರ ಆಶೀರ್ವಾದದಿಂದ ಹಾಗೂ ಅಪ್ಪ ಅಮ್ಮ ಮತ್ತು ಕುಟುಂಬದ ಸದಸ್ಯರರೆಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಕ್ಷರಧಿ ಇದುವರಿಗೂ 30 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ. “ಈ ಪುಟಾಣಿಯು 14 ನಿಮಿಷ ಮತ್ತು 13 ಸೇಕೆಂಡ್ ಗಳಲ್ಲಿ 165 ಹಾಡುಗಳ ಗುನುಗುವಿಕೆಯನ್ನು ಆಲಿಸುವ ಮೂಲಕ ಹಾಡುಗಳನ್ನು ಗುರುತಿಸಿ ಇಂಡಿಯಾ ಬುಕ್ ರೆಕಾರ್ಡ್ಸ್ ನಲ್ಲಿ ಸಾಧಕಿಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ”. ಈ ಮಗುವಿಗೆ ಸಂಗೀತದ ಮೇಲಿರುವ ಪ್ರೀತಿ ಹಾಗೂ ಶ್ರದ್ಧೆ ಇಂದು ಅವಳನ್ನು ಈ ಮಟ್ಟಕ್ಕೆ ತಲುಪಿಸಿದೆ.

ಕ್ಷರಧಿಯನ್ನು ನಾನು ಮೊದಲಬಾರಿಗೆ ನೋಡಿದ್ದು ಹಾಗೂ ಸಮ್ಮೋಹನಗೊಳಿಸುವಂತಹಾ ಈ ಪುಟಾಣಿಯ ಹಾಡನ್ನು ಆಲಿಸಿದ್ದು ನಮ್ಮ ಬೆಂಗಳೂರಿನ ಆರ್ಗ್ಯಾನಿಕ್ ಗ್ರೀನ್ ಪಾತ್ ನಲ್ಲಿ. ನನ್ನ ಸ್ನೇಹಿತೆ ಮಮತಾ ಭಾಸ್ಕರ್ ರವರ ಜೊತೆ ಒಂದು ಭಾನುವಾರ ಅಲ್ಲಿ ನೆರವೇರುವ ಸಂಗೀತ ಕಾರ್ಯಕ್ರಮವನ್ನು ನೋಡಲು ಹೋಗಿದ್ದೆ. ಈ ಬಾಲೆಯು ಅಮ್ಮ ಮಾಧುರಿಯವರ ಜೊತೆ
ಬಂದಿದ್ದಳು. ಪುಟ್ಟ ಬಾಲಕಿಯಾದ ಕಾರಣ ಸದಾ ಅಮ್ಮ ಅಪ್ಪನ ಜೊತೆಯೇ ಇರುತ್ತಿದ್ದ ಕ್ಷರಧಿ ಸ್ವಲ್ಪ ಸಂಕೋಚ ಗುಣದವಳು ಕೂಡಾ. ನಾವು ಹತ್ತಿರ ಕರೆದಾಗ ದೂರದಿಂದಲೇ ಕದ್ದು ನೋಡುತ್ತಿದ್ದಳೇ ವಿನಃ ಬರುತ್ತಿರಲಿಲ್ಲ. ಚಾಕೊಲೇಟ್ ಕೊಟ್ಟರೆ ಅಮ್ಮ ಹೇಳುವವರೆಗೂ ತೆಗೆದುಕೊಳ್ಳುತ್ತಾ ಇರಲಿಲ್ಲ.

ಕ್ಷರಧಿ ಹಾಡುತ್ತಾಳೆ ಎಂದು ನನ್ನ ಗೆಳತಿ ಮಮತಾರವರು ಹೇಳಿದಾಗ ಮೊದಲು ನನಗೆ ನಂಬಿಕೆಯೇ ಬರಲಿಲ್ಲ. ಐದು ವರ್ಷದ ಮುದ್ದು ಮಗು ಬಾಲಗೀತೆಗಳನ್ನು ಹಾಡುವ ಈ ವಯಸ್ಸಿನಲ್ಲಿ ಹಾಡುಗಳನ್ನು ಹಾಡುತ್ತಾಳೆಯೇ!!!! ಎಂದು ಅಚ್ಚರಿಯುಂಟಾಯಿತು. ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತ ಕ್ಷರಧಿಯನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಹಿನ್ನೆಲೆ ಸಂಗೀತ ಪ್ರಾರಂಭವಾಗುವುದರ ಜೊತೆಗೆ ಪುಟ್ಟ ಕ್ಷರಧಿಯ ಸುಮಧುರ ಧ್ವನಿ ಕೇಳಿಸಿತು. ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾರವರು ಹಾಡಿದ “ಸಂಪಿಗೆ ಮರದ ಹಸಿರೆಲೆ ನಡುವೆ” ಹಾಡನ್ನು ಸುಶ್ರಾವ್ಯವಾಗಿ ಹಾಡಿದಳು. ನಾವೆಲ್ಲರೂ ಮಂತ್ರಮುಗ್ಧರಾಗಿ ಕ್ಷರಧಿಯ ಹಾಡುಗಾರಿಕೆಯನ್ನು ಆಲಿಸುತ್ತಿದ್ದೆವು. ನಡುವೆ ಒಂದು ಕಡೆ ತಾಳ ತಪ್ಪುವ ಹಂತಕ್ಕೆ ಬಂದಾಗ ಸ್ವಲ್ಪವೂ ವಿಚಲಿತಳಾಗದೇ ಪುನಃ ಅತಿ ಸಮರ್ಥವಾಗಿ ತಾಳವನ್ನು ಸರಿದೂಗಿಸಿ ಹಾಡಿದಳು. ಅಂಜಿ ಹಾಡುವುದನ್ನು ನಿಲ್ಲಿಸಲಿಲ್ಲ. ಅಲ್ಲಿ ನೆರೆದಿದ್ದ ಸಂಗೀತ ಪ್ರಿಯರೆಲ್ಲರನ್ನೂ ಚಕಿತಗೊಳಿಸಿ ಮೂಕವಿಸ್ಮಿತರನ್ನಾಗಿ ಮಾಡಿದಳು ಈ ಬಾಲೆ. ಅರಿಯದೇ ನನ್ನ ಗೆಳತಿಯ ಕೊರಳಿನಿಂದ ಉದ್ಗಾರವೊಂದು ಹೊರಬಿತ್ತು…”ಈ ಮಗು ನಿಜಕ್ಕೂ ಸರಸ್ವತಿ ಪುತ್ರಿಯೇ ಸರಿ”…. ಎಂದು ಹೇಳುತ್ತಾ ಗದ್ಗದಿತರಾದರು. ಅವರ ಕಣ್ಣಿಂದ ಆನಂದಬಾಷ್ಪ ಹರಿಯಿತು.

ಕ್ಷರಧಿಯ ಹಾಡುಗಾರಿಕೆಯನ್ನು ಕೇಳಿ ನಾನು ರೋಮಾಂಚನಗೊಂಡೆ. ನನ್ನ ಗಂಟಲಿನಿಂದ ಶಬ್ದವೇ ಹೊರ ಬರಲಿಲ್ಲ. ಕ್ಷರಧಿಯ ಹಾಡನ್ನು ಕೇಳಿದ ಎಲ್ಲರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೀಗೆ ಅನೇಕ ಬಾರಿ ಕ್ಷರಧಿಯ ಹಾಡನ್ನು ಕೇಳಿ ಮೂಕವಿಸ್ಮಿತಳಾಗಿದ್ದೇನೆ. ತನಗಿಂತ ಹಿರಿಯರು ಹಾಡುವಾಗಲೂ ಶ್ರದ್ಧೆಯಿಂದ ಗಮನಿಸಿ, ಅವರು ಲಯ,ತಾಳ ತಪ್ಪಿದರೆ ಒಡನೆಯೇ ಅದನ್ನು ಗುರುತಿಸುವ ಸೂಕ್ಷ್ಮಮತಿ ಈ ಬಾಲಕಿ. ನಮ್ಮ ಮಮತಾ ಸಂಗೀತ ಸುಧೆಯ ವಿಶೇಷ ಅತಿಥಿ ಈ ಬಾಲ ಪ್ರತಿಭೆ. ಕ್ಷರಧಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ ಒಂದು ವಿಶೇಷ ಕಳೆ ತುಂಬಿ ತುಳುಕಿದಂತೆ ಆಗುತ್ತದೆ. ಒಂದು ಪರಿಪೂರ್ಣತೆಯ ಭಾವ ನಮ್ಮಲ್ಲಿ ಮೂಡುತ್ತದೆ. ಇಡೀ ಕುಟುಂಬವೇ ನಮ್ಮ ಕಾರ್ಯಕ್ರಮಕ್ಕೆ ಆಗಮಿಸುತ್ತದೆ. ಮಲ್ಲೇಶ್ವರದ ಲೀಲಾದ್ರಿ ಸಭಾಂಗಣದಲ್ಲಿ ನಡೆದ ಮಮತಾ ಸಂಗೀತ ಸುಧೆಯ ಕಾರ್ಯಕ್ರಮದಲ್ಲಿ ಕ್ಷರಧಿಯು ಹಾಡಿದಾಗ ಅವಳ ಸೊಗಸಾದ ಗಾಯನಕ್ಕೆ ಬೆರಗಾಗಿ ಸಭಾಂಗಣದ ಮಾಲಿಕರು ವೇದಿಕೆಯಲ್ಲಿ ಮಗುವನ್ನು ಆಹ್ವಾನಿಸಿ ಸನ್ಮಾನ ಮಾಡಿದ್ದಾರೆ. ಈ ಪುಟ್ಟ ಬಾಲಕಿಯನ್ನು ಹಲವು ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಸನ್ಮಾನಿಸಿದ್ದಾರೆ.

ವೇದಿಕೆಯ ಭಯವಿಲ್ಲದೇ, ಯಾವುದೇ ಅಂಜಿಕೆ ಆತಂಕವಿಲ್ಲದೇ ಸುಶ್ರಾವ್ಯವಾಗಿ ಹಾಡುವ ಈ ಬಾಲೆಯಿಂದ ಸಂಗೀತ ಪ್ರೇಮಿಗಳು ಕಲಿಯುವುದು ಬಹಳವಿದೆ. ಕ್ಷರಧಿ ಪ್ರತಿಯೊಂದು ಹಾಡನ್ನೂ ಬಹಳ ತನ್ಮಯತೆಯಿಂದ ಹಾಡುತ್ತಾಳೆ. ಈ ಮಗುವಿನ ಪ್ರತಿಭೆ ಅಗಾಧವಾದದ್ದು. ಈ ಬಾಲ ಪ್ರತಿಭೆ ನಮ್ಮ ಬೆಂಗಳೂರಿನವಳು ಎನ್ನುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ಮುಂದೊಂದು ದಿನ ಈ ಮಗು ಒಂದು ಸುಪ್ರಸಿದ್ಧ ಗಾಯಕಿಯಾಗಿ ಹೊರ ಹೊಮ್ಮಲಿ. ಈಕೆಯ ಪ್ರತಿಭೆ ನಾಲ್ಕೂ ದಿಕ್ಕುಗಳಲ್ಲಿ ಪ್ರಸರಣಗೊಳ್ಳಲಿ. ಕ್ಷರಧಿಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಎಲ್ಲರೂ ಹಾರೈಸೋಣ. ನಮ್ಮ ನಾಡಿನ ಈ ಬಾಲ ಪ್ರತಿಭೆಯನ್ನು ಸಂಪೂರ್ಣ ಸಹಕಾರ ನೀಡಿ ಬೆಳೆಸೋಣ. ವಿದ್ಯಾಭ್ಯಾಸದ ಜೊತೆ ಜೊತೆಗೇ ಈ ಬಾಲೆಯ ಸಂಗೀತಾಭ್ಯಾಸವೂ ನಿರಂತರವಾಗಿ ನಡೆಯುತ್ತಿರಲಿ.

ರುಕ್ಮಿಣಿ.ಎಸ್.ನಾಯರ್
ಬೆಂಗಳೂರು.