ಜನ-ಗಣ-ಮನ – Peepal Media

ಅಂತೂ ರೈತ ಹೋರಾಟಕ್ಕೆ ಮಣಿದ ಸರ್ಕಾರ; ಕಬ್ಬಿಗೆ ಬೆಂಬಲ ಬೆಲೆ ನಿಗದಿ
ಕಳೆದ 9 ದಿನಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ನಡೆಸಿದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸರ್ಕಾರ ರೈತ ಹೋರಾಟಕ್ಕೆ ಮಣಿದಿದೆ. ಪ್ರತಿ ಟನ್ ಕಬ್ಬಿಗೆ ಒಟ್ಟು 3,300 ರೂ. ನೀಡಲು ಸರ್ಕಾರ ನಿರ್ಧರಿಸಿದೆ.

ರೈತರೊಂದಿಗಿನ ಸಭೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿ ಟನ್ ಕಬ್ಬಿಗೆ ಒಟ್ಟು 3,300 ರೂ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಟನ್ ಕಬ್ಬಿಗೆ 3200 ರೂ. ದರ ನಿಗದಿ ಮಾಡಲಾಗಿದ್ದು, ಜೊತೆಗೆ 100 ರೂ. ಸೇರಿಸಿ ಕೊಡುತ್ತೇವೆ. ಅಂದರೆ ಸರ್ಕಾರದಿಂದ 50 ರೂ., ಕಾರ್ಖಾನೆಯಿಂದ 50 ರೂ. ನೀಡಲಾಗುತ್ತದೆ. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುವ ವಿಶ್ವಾಸವಿದೆ ಎಂದರು.

ಶೇ.11.25ರಷ್ಟು ರಿಕವರಿ ಇದ್ದರೆ ಟನ್‌ಗೆ 3250 ರೂ. ಮಾಲೀಕರು ನೀಡಬೇಕು. ಇದಕ್ಕೆ ಸರ್ಕಾರದಿಂದ 50 ರೂ. ಹೆಚ್ಚುವರಿಯಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ರಿಕವರಿ ಕಡಿಮೆಯಾದರೆ ದರ ಸಹ ವ್ಯತ್ಯಾಸವಾಗಲಿದೆ. ಶೇ.10.25ರಷ್ಟು ರಿಕವರಿ ಇದ್ದರೆ ಟನ್‌ಗೆ 3200 ರೂ. ದರ ನಿಗದಿಪಡಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್‌ಆರ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ದಿನಾಂಕ 6-05-2025ರಂದು ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸಿದೆ. ಈ ಎಫ್‌ಆರ್‌ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಎಂಎಸ್‌ಪಿ ಹೆಚ್ಚಳ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ದೂರಿದರು.

ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್​ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು ಎಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಇದರ ಮರು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದ ಎಡಪಂಥೀಯ ಬಳಗ; ಜೆಎನ್‌ಯೂ ನಲ್ಲಿ ಮತ್ತೆ ಮೊಳಗಿದ ಕೆಂಬಾವುಟ
JNU ವಿದ್ಯಾರ್ಥಿ ಸಂಘ ಚುನಾವಣೆ 2025 ರ ಫಲಿತಾಂಶದಂತೆ ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. AISA, SFI ಮತ್ತು DSF ಸೇರಿದಂತೆ ಇರುವ ಒಕ್ಕೂಟವು ಎಲ್ಲಾ 4 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಒಕ್ಕೂಟದ ಪ್ರತಿನಿಧಿಗಳಾದ AISA ಯ ಅದಿತಿ ಮಿಶ್ರಾ ಅಧ್ಯಕ್ಷರಾದರೆ, SFI ಯ ಕೆ. ಗೋಪಿಕಾ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದರು. DSF ನ ಸೂರಜ್ ಯಾದವ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು ಮತ್ತು AISA ಯ ಡ್ಯಾನಿಶ್ ಅಲಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ABVP ಯ ಜಂಟಿ ಕಾರ್ಯದರ್ಶಿ ಅಭ್ಯರ್ಥಿ ಅನುಜ್ ದಮ್ರಾ 1,762 ಮತಗಳನ್ನು ಪಡೆದರು, ಆದರೆ AISA ಯ ಡ್ಯಾನಿಶ್ 1,991 ಮತಗಳನ್ನು ಪಡೆದು ಗೆಲುವಿನಿಂದ ಬೀಗಿದರು. ನವೆಂಬರ್ 6 ರಂದು ಮತದಾನ ನಡೆದಿದ್ದು, ಶೇಕಡಾ 67 ರಷ್ಟು ಮತದಾನವಾಗಿದೆ. ಈ ಶೇಕಡಾವಾರು ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಈ ಬಾರಿ ಜೆಎನ್‌ಯು ಚುನಾವಣೆಗಳು ಎಬಿವಿಪಿ ಮತ್ತು ಎಡಪಂಥೀಯರ ನಡುವಿನ ಎಡಪಂಥೀಯ ಸ್ಪರ್ಧೆಯಾಗಿತ್ತು. ಕ್ಯಾಂಪಸ್‌ನಾದ್ಯಂತ ಘೋಷಣೆಗಳು ಪ್ರತಿಧ್ವನಿಸಿದವು, ಡ್ರಮ್‌ಗಳು ಮೊಳಗಿದವು.

ಒಟ್ಟು 9,043 ವಿದ್ಯಾರ್ಥಿಗಳು ಮತ ಚಲಾಯಿಸಲು ನೋಂದಾಯಿಸಲ್ಪಟ್ಟರು. ಎಡಪಂಥೀಯರ ಕ್ಲೀನ್ ಸ್ವೀಪ್ ಎಬಿವಿಪಿಗೆ ಹೊಡೆತ ನೀಡಿತು. ಕಳೆದ ವರ್ಷ, ಎಬಿವಿಪಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿತ್ತು, ಇದು ಇತರ ಸ್ಥಾನಗಳನ್ನು ಗೆಲ್ಲುವ ಭರವಸೆಗೆ ಕಾರಣವಾಯಿತು, ಆದರೆ ಎಡಪಂಥೀಯರು ಆ ಭರವಸೆಗಳನ್ನು ಹುಸಿಗೊಳಿಸಿದರು.

ಇಂದಿಗೆ ಮುಕ್ತಾಯವಾದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ; ಆನ್‌ಲೈನ್ ನಲ್ಲಿ ನ.10 ಕ್ಕೆ ಕೊನೆಯ ದಿನ
ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಇಂದು ಕೊನೆಗೊಳ್ಳಲಿದೆ. ಆದರೆ ಆನ್‌ಲೈನ್‌ ಮೂಲಕ ಮಾಹಿತಿ ನೀಡುವವರಿಗೆ ನ.10 ವರೆಗೆ ಅವಕಾಶ ನೀಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ವಿವಿಧ ಕಾರಣದಿಂದ ಸಮೀಕ್ಷೆಯಲ್ಲಿ ಭಾಗವಹಿಸದವರಿಗೆ ಆನ್‌ಲೈನ್‌ ಮೂಲಕ ಸ್ವಯಂ ಮಾಹಿತಿ ನೀಡಲು ನ.10ರ ವರೆಗೆ ಅವಕಾಶ ನೀಡಲಾಗಿದೆ. ಆನ್‌ಲೈನ್ https://kscbcselfdeclaration.karnataka.gov.in ಲಿಂಕ್ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬೆಂಗಳೂರು ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲ ತಾಂತ್ರಿಕ ಕಾರಣಗಳು ಕಂಡು ಬಂದಿದೆ. ಯಾಕೆ ಸಮೀಕ್ಷೆ ಕಡಿಮೆಯಾಗಿದೆ ಎಂಬ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಶುಕ್ರವಾರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರಾಗಿದ್ದಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದರು. ಅಲ್ಲದೆ, ವಿದ್ಯುತ್ ಮೀಟರ್‌ ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಹಾಗೂ 5,52, 57,205 (ಶೇ.101) ಜನರ ಸಮೀಕ್ಷೆ ಮಾಡಲಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ನಿಂದ ಮಲೆನಾಡಿನ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೇಲೆ ಸುಳ್ಳು ಆರೋಪ
ಆಗುಂಬೆಯ ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ಮೇಲೆ ಅಕ್ರಮವಾಗಿ ಕಾಳಿಂಗ ಸರ್ಪ ಸೆರೆಹಿಡಿಯುವುದು, ಅದರ ಸಾಮೂಹಿಕ ಫೋಟೋ ಶೂಟ್, ಅನುಮತಿ ಇಲ್ಲದೆ ಸಂಶೋಧನೆ, ಸಂರಕ್ಷಣೆ ಅಧ್ಯಯನದ ಹೆಸರಿನಲ್ಲಿ ರೆಸಾರ್ಟ್ ನಡೆಸುತ್ತಿರುವುದು, ಅಕ್ರಮ ಕಾಡು ಪ್ರವೇಶ, ಮೋಜು -ಮಸ್ತಿ, ಕಾಳಿಂಗ ಸರ್ಪಗಳನ್ನು ವಾಣಿಜ್ಯಿಕ ಚಟುವಟಿಕೆಗಳಿಗೆ ಬಳಸುತ್ತಿರುವುದು ಮೊದಲಾದ ಹತ್ತು ಹಲವು ಗಂಭೀರ ಆರೋಪಗಳು ಬಂದು, ಅರಣ್ಯ ಇಲಾಖೆಗೆ ಸರಣಿ ದೂರುಗಳು ಸಲ್ಲಿಕೆಯಾಗಿ ತನಿಖೆ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಆರೋಪಗಳಿಗೆ ಸ್ಪಷ್ಟನೆ ಕೊಡುವ ನೆಪದಲ್ಲಿ ಕಾಳಿಂಗ ಫೌಂಡೇಶನ್ ನವರು ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯರೂ ಇದ್ದಾರೆ. ಅವರು ಹಾವಿನೊಂದಿಗೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಯನ್ನಾಗಲಿ, ಪೂಜನೀಯ ಭಾವನೆಯನ್ನು ಹೊಂದಿಲ್ಲ. ತಮಗೆ ವಿಪತ್ತು ಬಂದಾಗ ಯಾವುದೇ ಹಾವನ್ನಾದರೂ ಕೊಲ್ಲಲು ಅವರು ಸಿದ್ಧರಾಗುತ್ತಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಎಂದು ಪರಿಸರ ಸಂರಕ್ಷಕರು ತಮ್ಮ ಖಂಡನೆ ತಿಳಿಸಿದ್ದಾರೆ.

ಕಾಳಿಂಗ ಫೌಂಡೇಶನ್ ನ ಸಂಶೋಧಕರಾದ ‘ಗೌರಿಶಂಕರ್’ ಆಗುಂಬೆಯಲ್ಲಿ ಕಾಳಿಂಗ ಸರ್ಪಗಳ ಬಗೆಗೆ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಸಂಶೋಧನಾ ಪ್ರಬಂಧದಲ್ಲಿ “ನಮಗೆ ಕಾಳಿಂಗ ಸರ್ಪ ರಕ್ಷಣೆಗೆ ಕರೆಬಂದ 83.8% ಸಂದರ್ಭಗಳಲ್ಲಿ ಜನರು ಹಾವನ್ನು ಕೊಲ್ಲಲು ಬಯಸಿದ್ದರು” ಎಂದು ಸುಳ್ಳು ಮಾಹಿತಿ ನೀಡಿದ್ದರು. ಮಲೆನಾಡಿನ ಜನರಿಗೆ ಕಾಳಿಂಗ ಸರ್ಪಗಳ ಬಗೆಗೆ ಭಯ, ಭಕ್ತಿ ಇದ್ದು ಪೂಜಿಸುವ ಸಂಸ್ಕೃತಿ ಇದೆ. ಯಾರೂ ಕೂಡಾ ಕಾಳಿಂಗ ಸರ್ಪಗಳನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಇವರ ಸುಳ್ಳು ಸಂಶೋಧನೆಗೆ ಸಾರ್ವಜನಿಕ ವಲಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸುಳ್ಳಗಳ ಸಮರ್ಥನೆಗೆ ಪುನಃ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಾ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಪರಿಸರ ಸಂರಕ್ಷಕರು ಹೇಳಿದ್ದಾರೆ.

ಇಲ್ಲಿಯವರೆಗೆ ಮಲೆನಾಡಿನ ಯಾವುದೇ ಜನರು ಕಾಳಿಂಗ ಸರ್ಪವನ್ನು ಕೊಂದ ಒಂದೇ ಒಂದು ಉದಾಹರಣೆ ಇಲ್ಲ. ಹೀಗಿರುವಾಗ ‘ಮಲೆನಾಡಿನ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕಾಳಿಂಗ ಸರ್ಪಗಳನ್ನು ಕೊಲ್ಲಲು ಸಿದ್ಧರಾಗುತ್ತಾರೆ’ ಎಂಬರ್ಥದಲ್ಲಿ ಮಾತನಾಡಿರುವುದು. ತೀವ್ರ ಖಂಡನೀಯ. ಇತರೇ ಸಮುದಾಯಗಳಂತೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಿಯರು ಕೂಡಾ ಹಲವಾರು ವರ್ಷಗಳಿಂದ ಮಲೆನಾಡಿನ ಪ್ರಕೃತಿಯೊಂದಿಗೆ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಹಾವನ್ನು ಪೂಜಿಸುವ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿದ್ದಾರೆ. ವಾಸ್ತವ ಹೀಗಿರುವಾಗ ಯಾವುದೇ ದಾಖಲೆಗಳಿಲ್ಲದೆ ವೈಯಕ್ತಿಕ ಸ್ವಾರ್ಥಕ್ಕಾಗಿ ಸಮುದಾಯಗಳ ಮೇಲೆ ಗೂಬೆ ಕೂರಿಸುವುದು ಹೇಯಕರ. ಧಾರ್ಮಿಕ ದ್ವೇಷ ಬಿತ್ತುವ ಪ್ರಯತ್ನ ಕೂಡಾ ಇಲ್ಲಿ ಕಾಣುತ್ತಿದೆ. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ನೋಡಲಾಗುತ್ತಿದೆ. ಸರ್ಕಾರ ಈ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಶ್ವರ್ ಖಂಡ್ರೆಯವರೇ ಸಂಶೋಧನೆಯ ಮುಖವಾಡದಲ್ಲಿ ಬಹಿರಂಗವಾಗಿಯೇ ವಾಣಿಜ್ಯಿಕ ಚಟುವಟಿಕೆಗಳು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿರುವ ‘ಕಾಳಿಂಗ ಮನೆ/ಕಾಳಿಂಗ ಫೌಂಡೇಶನ್’ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಅಧ್ಯಯನದ ಹೆಸರಿನಲ್ಲಿ ಕಪೋಲಕಲ್ಪಿತ ಕಥೆಗಳನ್ನು ಹೆಣೆಯುತ್ತಿರುವ ಅವರಿಗೆ ಮುಂದೆ ಯಾವುದೇ ಸಂಶೋಧನೆಗೆ ಅವಕಾಶ ಕೊಡಬಾರದು. ಅವರ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕು. ಈ ಎಲ್ಲದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಪರಿಸರ ಸಂರಕ್ಷಕರು ಆಗ್ರಹಿಸಿದ್ದಾರೆ.

ಫೋಟೋ: ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಸುದ್ದಿ ಆಧಾರಿತ

ಪ್ಯಾಲೆಸ್ಟೈನ್ ಬೂಟು!
“..ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…” ಲೇಖಕ ವಿ ಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ಇಲ್ಲಿ, ಅಂದರೆ ನಾನೀಗ ಬಂದಿರುವ ಜಾಗಲ್ಲಿ ಕೇಳಿದರು,
ನೀನ್ಯಾರು?
ಅದಕ್ಕೆ ಪುರಾವೆಯೇನು?

ನಾನು ನರಕದಿಂದ ಬಂದವರಿಗೆ
ನನ್ನ ಸ್ವರ್ಗದಂಥ ನೆಲವ ಕೊಟ್ಟವಳು

ಓಹೋ ನೀನೊಂದು ಹೆಣ್ಣು…
ನೆಲ ಹೇಗೆ ನಿನ್ನದಾಗುತ್ತದೆ?

ಹೌದು, ನೆಲ ಮತ್ತು ನೆಲೆ ನನ್ನದಾದರೂ
ನನ್ನದೆಂಬ ಅಹಂ ಬಿಟ್ಟವಳು ನಾ…

ತ್ಯಾಗದ ಮಾತು ಬೇಡ
ನಿನ್ನ ಅಸ್ಮಿತೆಯ ಕುರುಹ ರುಜುವಾತು ಮಾಡು
ಈಗಲೇ…

ಅಗೋ, ಆ ಕಡೆಯ, ಒಂದೆಜ್ಜೆ ಊರುವ
ನೆಲದಿಂದ ಪುಟಿದೆದ್ದ ಕೂಸು ನಾನು
ನನ್ನಪ್ಪ ಯಹೂದಿಗಳು ಉಸಿರಾಡಲು
ತನ್ನ ಸಂಪದ್ಭರಿತ ತೋಟ ಕೊಟ್ಟವನು!

ಓಹೋ ನೀನು ಫ್ಯೂಡಲ್ಲಾ?
ಭೂಮಿಯನ್ನೇ ಉಳುವೆನೆಂಬ
ಜಂಭ ಉಳಿಸಿಕೊಂಡ
ಬೆಳಗಿನ ಜಾವದ ಕೋಳಿಯ?

ಬರ್ಲಿನ್, ಮ್ಯೂನಿಚ್, ಕ್ರೊಯೇಷಿಯಾ,
ಗ್ರೀಸಿನ ಅಥೆನ್ಸ್ ದಾಟಿ, ಮೆಡಿಟರೇನಿಯನ್ ಸಮುದ್ರದಲ್ಲಿ
ಮುಳುಗುತ್ತಿದ್ದ ಜನರಿಗೆ ನಿರಾಳ ಗಾಳಿ ಕೊಟ್ಟದ್ದು
ನನ್ನಪ್ಪ, ಅವನಂತ ಸಾವಿರಾರು ಜನ

ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಕೂಡದು
ಅಂತ ನೀತಿಶಾಸ್ತ್ರ ಹೇಳುತ್ತದೆ.‌‌..
ದಿಟ ಹೇಳು, ನೀತಿಶಾಸ್ತ್ರದ ಪ್ರಕಾರ
ನಿನ್ನ ಗುರುತೇನು?

ಅಗೋ ಅಲ್ಲಿ ಕೆಂಪುಬಣ್ಣದಿಂದ
ಶೃಂಗಾರಗೊಂಡು, ರಕ್ತಸುವಾಸನೆ
ನಾರುತ್ತಿರುವ ಬಿಳಿಯ ಬೂಟು ನಾನು…

ಈಗ ಸತ್ಯ ಹೇಳಿದೆ ನೋಡು…
ಮೊದಲೇ ನಾನೊಬ್ಬಳು ಪ್ಯಾಲೆಸ್ತೇನಿಯಳು
ಅಂದಿದ್ದರೆ ನಿನ್ನ ಗಂಟೇನು ಕರಗುತ್ತಿತ್ತು?

-ವಿ.ಆರ್.ಕಾರ್ಪೆಂಟರ್

ಸಂಸತ್ತಿನ ಪೂರ್ವಸೂರಿಗಳು -11 : ಅಲ್ಪಾವಧಿಯ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಒಬ್ಬ ರಾಜಕೀಯ ಬಂಡಾಯಗಾರ
ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹನ್ನೊಂದನೇ ಲೇಖನ

ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು.

ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿಯಾಗಿದ್ದ ಚಂದ್ರಶೇಖರ್‌ ಅವರು ಮೂರು ಬಾರಿ ರಾಜ್ಯಸಭೆಗೆ ಮತ್ತು ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದವರು. ಅವರೊಬ್ಬ ಹುಟ್ಟಾ ಬಂಡಾಯಗಾರ. ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಮಗ ರಾಜೀವ್‌ ಗಾಂಧಿ, ಪಿವಿ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳ ವಿರುದ್ಧ ರಾಜಕೀಯ ಹೋರಾಟ ನಡೆಸಿದ ಹೆಗ್ಗಳಿಕೆ ಅವರಿಗಿದೆ.

ಕಾಂಗ್ರೆಸ್‌ನೊಳಗಿನ ಬಂಡಾಯಗಾರ
1962 ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ (ಪಿಎಸ್‌ಪಿ) ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದರು. ಸಂಸದರಾಗಿ ಅವರು ಮಾಡುವ ಮೊದಲ ಕೆಲಸ, ಆಗಿನ ಪ್ರಧಾನ ಮಂತ್ರಿ ನೆಹರೂ ಅವರನ್ನು ಎದುರು ಹಾಕಿಕೊಳ್ಳುವುದು. ಆಗಿನ ಪಂಜಾಬ್‌ ಮುಖ್ಯಮಂತ್ರಿ ಪ್ರತಾಪ್‌ ಸಿಂಗ್‌ ಕೈರೋನ್‌ ವಿರುದ್ಧ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲು ಒಂದು ಆಯೋಗವನ್ನು ರಚಿಸಲಾಗಿತ್ತು. ಆ ಆಯೋಗ ತನ್ನ ವರದಿಯನ್ನು ಸಲ್ಲಿಸಿತೇ ಎಂದು ಚಂದ್ರಶೇಖರ್‌ ಪ್ರಧಾನ ಮಂತ್ರಿಯ ಬಳಿ ಕೇಳುತ್ತಾರೆ. ನೆಹರೂ ತಾನಿನ್ನೂ ಆ ವರದಿಯನ್ನು ಪಡೆದಿಲ್ಲ ಎಂದು ಉತ್ತರಿಸುತ್ತಾರೆ. ಆದರೆ, ಮರುದಿನ ಚಂದ್ರಶೇಖರ್‌ ಅವರು, ಕೆಲವು ಪತ್ರಿಕೆಗಳು ವರದಿಯ ಭಾಗಗಳನ್ನು ಪ್ರಕಟಿಸಿವೆ ಎಂದು ಹೇಳುತ್ತಾ ಅದೇ ವಿಷಯವನ್ನು ಮತ್ತೆ ಎತ್ತುತ್ತಾರೆ.

ಪ್ರಧಾನ ಮಂತ್ರಿ ತಾನು ಅದನ್ನು ಮರೆತಿದ್ದೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. “ಕ್ಷಮಿಸಿ” ಎಂದು ಚಂದ್ರಶೇಖರ್‌ ಬಳಿ ಹೇಳುತ್ತಾರೆ. ಚಂದ್ರಶೇಖರ್‌ ಆ ಪ್ರಶ್ನೆಯನ್ನು ಮುಂದುವರಿಸಿದ ರೀತಿ ನೆಹರೂ ಅವರನ್ನು ಪ್ರಭಾವಿತಗೊಳಿಸಿತ್ತು. “ಆ ಗಡ್ಡದಾರಿ ಯುವಕ ಯಾರು?” ಎಂದು ನೆಹರೂ ತನ್ನ ಸಂಪುಟದ ಮಂತ್ರಿಗಳಲ್ಲಿ ಒಬ್ಬರಾಗಿದ್ದ ದಿನೇಶ್‌ ಸಿಂಗ್‌ ಬಳಿ ಕೇಳುತ್ತಾರೆ. “ಅವರು ಉತ್ತರ ಪ್ರದೇಶದ ಪಿಎಸ್‌ಪಿ ಸದಸ್ಯ. ಇದೀಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.” ಎಂದು ಸಿಂಗ್‌ ಉತ್ತರಿಸುತ್ತಾರೆ.

ಮರುದಿನ ಅದೇ ಸಿಂಗ್‌ ಚಂದ್ರಶೇಖರ್‌ ಬಳಿ ನೆಹರೂ ಅವರನ್ನು ಭೇಟಿಯಾಗುವಂತೆ ಹೇಳುತ್ತಾರೆ. ಹಾಗೆ ಯುವ ಪೀಳಿಗೆ ಮತ್ತು ಹಳೆ ಪೀಳಿಗೆಯ ಭೇಟಿ ನಡೆಯುತ್ತದೆ. ಅದರೊಂದಿಗೆ ಚಂದ್ರಶೇಖರ್‌ ಅವರ ಸುಮಾರು ಅರ್ಧ ಶತಮಾನಗಳಷ್ಟು ಕಾಲದ ಪ್ರಜಾಸತ್ತಾತ್ಮಕ ವೃತ್ತಿಜೀವನಕ್ಕೆ ಮುನ್ನುಡಿ ಬರೆಯಲಾಗುತ್ತದೆ. 1964 ಮೇ ತಿಂಗಳಲ್ಲಿ ನೆಹರೂ ಅವರ ಮರಣದ ನಂತರ ಚಂದ್ರಶೇಖರ್‌ ಅವರು ಅಶೋಕ್‌ ಮೆಹ್ತಾ, ಎನ್‌ಡಿ ತಿವಾರಿ, ಎಸ್‌ಎಮ್. ಕೃಷ್ಣ, ವಸಂತ್‌ ಸಾಥೇ ಮೊದಲಾದವರ ಜೊತೆಗೆ ಕಾಂಗ್ರೆಸ್‌ ಪಕ್ಷವನ್ನು ಸೇರುತ್ತಾರೆ.

ಆ ನಂತರ ಚಂದ್ರಶೇಖರ್‌ ಅವರು ಇಂದಿರಾ ಗಾಂಧಿಯವರ ಆಪ್ತರಾಗುತ್ತಾರೆ. 1969 ರಲ್ಲಿ ಕಾಂಗ್ರೆಸ್‌ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಾಗಿದ್ದರು. ಇಂದಿರಾ ಗಾಂಧಿ ಚಂದ್ರಶೇಖರ್‌ ಬಳಿ ಪಕ್ಷವು ಅನುಸರಿಸಬೇಕಾದ ಆರ್ಥಿಕ ನೀತಿಗಳ ಕುರಿತು ಒಂದು ಟಿಪ್ಪಣಿ ನೀಡಲು ಕೋರಿದ್ದರು. ಚಂದ್ರಶೇಖರ್‌ ಅದಕ್ಕಾಗಿ ಒಂದು ಉನ್ನತ ಮಟ್ಟದ ಎಡಪಂಥೀಯ ಅರ್ಥಶಾಸ್ತ್ರಜ್ಞರ ಸಭೆ ಕರೆದು, ಅವರು ಇಂದಿರಾ ಗಾಂಧಿ ಕೋರಿದ ಟಿಪ್ಪಣಿ ತಯಾರಿಸಿಕೊಡಬೇಕೆಂದು ಆಗ್ರಹಿಸುತ್ತಾರೆ. ಏಐಸಿಸಿಯ ಬೆಂಗಳೂರು ಅಧಿವೇಶನದಲ್ಲಿ ಅವರು ಆ ಟಿಪ್ಪಣಿಯನ್ನು ಓದುತ್ತಾರೆ. ನಂತರದಲ್ಲಿ ಇದು ಹತ್ತು ಅಂಶಗಳ ಕಾರ್ಯಕ್ರಮ ಎಂದೇ ಪ್ರಸಿದ್ಧವಾಯಿತು. ಹಿಂದಿನ ರಾಜರುಗಳಿಗೆ ನೀಡುತ್ತಿದ್ದ ರಾಜಧನ ರದ್ಧತಿ, ಬ್ಯಾಂಕ್‌ ಮತ್ತು ಕಲ್ಲಿದ್ದಲು ರಾಷ್ಟ್ರೀಕರಣ ಮತ್ತು ಗರೀಬೀ ಹಠಾವೋ ಮೊದಲಾದ ಕಾರ್ಯಕ್ರಮಗಳಿಗೆ ಇದು ಬುನಾದಿ ಹಾಕಿತು.

ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ಅವರ ಹೋರಾಟಗಳು ಮತ್ತು ನಿಲುವುಗಳ ಕಾರಣದಿಂದ ಚಂದ್ರಶೇಖರ್‌ ಅವರನ್ನು “ಯಂಗ್‌ ಟರ್ಕ್”‌ ಎಂದೇ ಕರೆಯುತ್ತಿದ್ದರು. ಸಮಾನತೆಯ ನೀತಿಗಳಿಗಾಗಿ ಕಾಂಗ್ರೆಸ್‌ ಒಳಗಡೆಯೇ “ಸಕ್ರಿಯ ಗುಂಪು” ರಚಿಸಿಕೊಂಡಿದ್ದ ಇತರ ಯಂಗ್‌ ಟರ್ಕ್‌ಗಳಲ್ಲಿ ಕೃಷ್ಣಕಾಂತ್‌, ಮೋಹನ್‌ ಧಾರಿಯಾ, ರಾಮ್ ಧನ್ ಮತ್ತು ಲಕ್ಷ್ಮಿ ಕಾಂತಮ್ಮ ಮೊದಲಾದವರು ಸೇರಿದ್ದರು.

ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು. ಹಾಗಾಗಿಯೇ 1973-75 ರ ಪ್ರಕ್ಷಬ್ಧ ಕಾಲಘಟ್ಟದಲ್ಲಿ ಅವರು ಹಿಂದಿನ ತಲೆಮಾರಿನ ನಾಯಕರಾಗಿದ್ದ ಜಯಪ್ರಕಾಶ್‌ ನಾರಾಯಣ್‌ ಮತ್ತು ಅವರ ಆದರ್ಶ ತುಂಬಿದ ಬದುಕಿನ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಬಹಳ ಬೇಗನೇ ಅವರು ಕಾಂಗ್ರೆಸ್‌ನೊಳಗಿನ ಭಿನ್ನಮತದ ಕೇಂದ್ರಬಿಂದುವಾಗಿ ಬದಲಾಗುತ್ತಾರೆ.

ಅವರು ತಮ್ಮ ಅಧಿನಾಯಕಿ ಇಂದಿರಾ ಗಾಂಧಿಯವರ ನೀತಿಗಳನ್ನು ಕೂಡ ಕಟುವಾಗಿ ಟೀಕಿಸುತ್ತಿದ್ದರು. 1975 ಜೂನ್‌ 25 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ಚಂದ್ರಶೇಖರ್‌ ಕಾಂಗ್ರೆಸ್‌ ಸಂಸದರಾಗಿದ್ದರು. ಅಷ್ಟೇ ಅಲ್ಲದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉನ್ನತ ಅಂಗಗಳಾದ ಕೇಂದ್ರ ಚುನಾವಣಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಆದರೂ ಕೂಡ ಆಂತರಿಕ ಭದ್ರತಾ ಕಾಯ್ದೆಯಡಿಯಲ್ಲಿ ಸುಮಾರು 19 ತಿಂಗಳುಗಳ ಕಾಲ ಅವರು ಜೈಲುವಾಸವನ್ನು ಅನುಭವಿಸಬೇಕಾಗಿ ಬಂದಿತ್ತು.

ಆರಂಭಿಕ ಕಾಲ
1927 ಏಪ್ರಿಲ್‌ 17 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಇಬ್ರಾಹಿಂಪಟ್ಟಿ ಎಂಬ ಹಳ್ಳಿಯಲ್ಲಿ ಒಂದು ಕಿಸಾನ್‌ ರಜಪೂತ ಕುಟುಂಬದಲ್ಲಿ ಚಂದ್ರಶೇಖರ್‌ ಅವರ ಜನನ. ಬಲ್ಲಿಯಾದಲ್ಲಿರುವ ಸತೀಶ್ ಚಂದ್ರ ಪಿಜಿ ಕಾಲೇಜಿನಲ್ಲಿ ಪದವಿ ಮತ್ತು 1951 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಅವರ ವಿದ್ಯಾಭ್ಯಾಸ.

ವಿದ್ಯಾರ್ಥಿ ರಾಜಕೀಯದಲ್ಲಿ ಅವರೊಬ್ಬ ಫೈರ್‌ಬ್ರ್ಯಾಂಡ್ ಎಂದೇ ಪ್ರಸಿದ್ಧರಾಗಿದ್ದರು. ಆಚಾರ್ಯ ನರೇಂದ್ರ ದೇವ ಅವರೊಂದಿಗೆ ಸಮಾಜವಾದಿ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದವರು. ಓದು ಮುಗಿಸಿದ ನಂತರ, ಸಮಾಜವಾದಿ ಚಳವಳಿಯಲ್ಲಿ ಪೂರ್ಣ ಕಾಲಿಕ ಕಾರ್ಯಕರ್ತರಾಗಿ ತೊಡಗಿಸಿಕೊಳ್ಳುತ್ತಾರೆ.

ಬಲ್ಲಿಯಾದ ಪಿಎಸ್‌ಪಿ ಜಿಲ್ಲಾ ಕಾರ್ಯದರ್ಶಿಯಾಗಿ 1951 ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗುತ್ತಾರೆ. ನಂತರದ ಒಂದು ವರ್ಷದೊಳಗೆ ಪಿಎಸ್‌ಪಿಯ ಉತ್ತರ ಪ್ರದೇಶ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1955-56 ರ ಹೊತ್ತಿಗೆ ಅವರು ರಾಜ್ಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1962 ರಲ್ಲಿ ಉತ್ತರ ಪ್ರದೇಶದಿಂದ ಪಿಎಸ್‌ಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವುದರೊಂದಿಗೆ ಅವರ ಸಂಸದೀಯ ಬದುಕು ಆರಂಭವಾಗುವುದು.

1968 ಮತ್ತು 1974 ರಲ್ಲಿ ಅವರು ಉತ್ತರ ಪ್ರದೇಶದಿಂದಲೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. 1977 ರಲ್ಲಿ ಬಲ್ಲಿಯಾದಿಂದ ಜನತಾ ಪಕ್ಷದ ಸದಸ್ಯರಾಗಿ ಲೋಕಸಭೆ ಪ್ರವೇಶಿಸುತ್ತಾರೆ. 1977 ಮೇ 1 ರಂದು ಆಡಳಿತಾರೂಢ ಜನತಾ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗುತ್ತಾರೆ. 1988 ರವರೆಗೆ ಆ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.

ಅದರ ನಂತರ ಅವರು ಜನತಾ ಪಾರ್ಟಿಯ ವಿವಿಧ ಅವತಾರಗಳಲ್ಲಿ ಬಲ್ಲಿಯಾದಿಂದ ಸ್ಫರ್ಧಿಸಿ ಗೆಲ್ಲುತ್ತಾರೆ. 1980 ರಲ್ಲಿ ಜನತಾ ಪಾರ್ಟಿ, 1989 ರಲ್ಲಿ ಜನತಾ ದಳ, 1991, 1996, 1998, 1999 ಮತ್ತು 2004 ರಲ್ಲಿ ಎಸ್‌ಜೆಪಿಯಿಂದ ಗೆಲ್ಲುತ್ತಾರೆ. 1984 ರಲ್ಲಿ ಒಂದು ಬಾರಿ ಮಾತ್ರವೇ ಆ ಕ್ಷೇತ್ರದಲ್ಲಿ ಅವರು ಸೋಲು ಕಂಡಿದ್ದರು.

ಚಂದ್ರಶೇಖರ್ ಒಬ್ಬ ಅಸಾಮಾನ್ಯ ಸಂಸದೀಯ ಪಟುವಾಗಿದ್ದರು. ಅವರಿಗೆ 1995 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಸಂಸತ್ತಿನಲ್ಲಿ ಯಾವುದಾದರೂ ವಿವಾದಾತ್ಮಕ ವಿಷಯಗಳ ಕುರಿತು ಮಾತನಾಡುವಾಗ ಅಥವಾ ಅಂತಹ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವಾಗಲೆಲ್ಲ, ಇಡೀ ಸದನವು ಅವರ ಮಾತನ್ನು ಉತ್ಸಾಹದಿಂದ ಕೇಳಿಸಿಕೊಳ್ಳುತ್ತಿತ್ತು. ಸರಕಾರ ಕೂಡ ಅವರ ಅಭಿಪ್ರಾಯಗಳಿಗೆ ಗೌರವ ಕೊಡುತ್ತಿತ್ತು. ಅವರು ಮಾತನಾಡಿದರು, ಗಟ್ಟಿಯಾಗಿಯೇ ಮಾತನಾಡಿದರು, ತನ್ನ ನೋಟ್ ನೋಡದೆ ಮಾತನಾಡುತ್ತಲೇ ಹೋದರು.

ಭಾರತ ಯಾತ್ರೆ (1983)
ಚಂದ್ರಶೇಖರ್‌ ಅವರು 6 ಜನವರಿ 1983 ರಿಂದ 25 ಜೂನ್‌ 1983 ರ ತನಕ ಸುಮಾರು 4260 ಕಿ.ಮೀ ದೀರ್ಘವಾದ ಪಾದಯಾತ್ರೆ ಕೈಗೊಂಡಿದ್ದರು. ಕನ್ಯಾಕುಮಾರಿಯಿಂದ ಆರಂಭವಾದ ಆ ಪಾದಯಾತ್ರೆ ನವದೆಹಲಿಯ ರಾಜ್‌ಘಾಟ್‌ ತನಕ ಸಾಗಿತ್ತು. ಜನಸಾಮಾನ್ಯರ ನಡುವೆ ಸಂಪರ್ಕವನ್ನು ಗಟ್ಟಿಗೊಳಿಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆ ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಜನವರಿ 6 ರಂದು ಕರ್ನಾಟಕದಲ್ಲಿ ಅವರ ಪಕ್ಷ ಅಧಿಕಾರ ವಹಿಸಿಕೊಂಡ ದಿನವೇ ಅವರು ಕನ್ಯಾಕುಮಾರಿಯಿಂದ ಭಾರತ ಯಾತ್ರೆ ಹೊರಟಿದ್ದರು.

ತರ್ತು ಪರಿಸ್ಥಿತಿ ಘೋಷಣೆಯ ಎಂಟನೇ ವಾರ್ಷಿಕ ಮತ್ತು ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದ ದಿನವಾದ ಜೂನ್‌ 25 ರಂದು ನವದೆಹಲಿಯ ರಾಜ್‌ಘಾಟ್‌ನಲ್ಲಿ ಭಾರತ ಯಾತ್ರೆಯನ್ನು ಸಮಾರೋಪ ಮಾಡುತ್ತಾರೆ.

1988 ರಲ್ಲಿ ಜನತಾ ಪಾರ್ಟಿ ಇತರ ಪಕ್ಷಗಳೊಂದಿಗೆ ವಿಲೀನಗೊಂಡು ವಿ.ಪಿ. ಸಿಂಗ್‌ ನೇತೃತ್ವದ ಜನತಾ ದಳ ರೂಪುಗೊಳ್ಳುತ್ತದೆ. 1989 ರ ಸಾರ್ವತ್ರಿಕ ಚುನಾವಣೆಗಳ ನಂತರ ಜನತಾ ದಳದ ಸಂಸದೀಯ ಪಕ್ಷವನ್ನು ಮುನ್ನಡೆಸಲು ವಿ.ಪಿ ಸಿಂಗ್‌ ಅವರಿಗಿಂತ ಹೆಚ್ಚಿನ ಅರ್ಹತೆ ತನಗಿದೆ ಎಂದು ಚಂದ್ರಶೇಖರ್‌ ಭಾವಿಸುತ್ತಾರೆ.

ವಿ.ಪಿ. ಸಿಂಗ್ ಉತ್ತರ ಪ್ರದೇಶ ರಾಜಕೀಯಕ್ಕೆ ಪ್ರವೇಶಿಸುವ ಮೊದಲೇ ಸಂಸದರಾಗಿದ್ದ ಚಂದ್ರಶೇಖರ್‌ ಹಿರಿಯ ಸಂಸದರು ಮತ್ತು ಹಿರಿಯ ರಾಜಕಾರಣಿಯೂ ಆಗಿದ್ದರು. ಹಾಗಾಗಿಯೇ ತನಗೆ ಸಂಸದೀಯ ಪಕ್ಷದ ಬೆಂಬಲ ಇದೆ ಎಂದು ಅವರು ಭಾವಿಸಿರಬಹುದು.

ಆದರೆ 1988 ರಲ್ಲಿ ವಿ.ಪಿ. ಸಿಂಗ್‌ ಜೊತೆಗೆ ಕಾಂಗ್ರೆಸ್‌ ತೊರೆದು ಬಂದಿದ್ದ ಅರುಣ್‌ ನೆಹರು ಮತ್ತು ದೇವಿಲಾಲ್‌ ಮೈತ್ರಿ ಮಾಡಿಕೊಂಡು, ಸಂಸದೀಯ ನಾಯಕನನ್ನು ಆರಿಸುವ ಸಮಯ ಬಂದಾಗ, ಚಂದ್ರಶೇಖರ್‌ ಅವರಿಗೆ ಯಾವ ಸಾಧ್ಯತೆಯನ್ನೂ ಬಿಟ್ಟುಕೊಡದೆ ವಿ.ಪಿ. ಸಿಂಗ್‌ ಅವರನ್ನು ಆಯ್ಕೆ ಮಾಡಿ ಬಿಡುತ್ತಾರೆ. ಪ್ರಧಾನಿಯಾಗಿ ತನ್ನನ್ನು ಆಯ್ಕೆ ಮಾಡದ ಆ ನಡೆಯಿಂದ ಕೋಪಗೊಳ್ಳುವ ಚಂದ್ರಶೇಖರ್‌ ಸಭೆಯಿಂದ ಎದ್ದು ಹೊರ ನಡೆಯುತ್ತಾರೆ.

ಹಂಗಾಮಿ ಪ್ರಧಾನಿ
ವಿ.ಪಿ. ಸಿಂಗ್ ಮತ್ತು ದೇವಿಲಾಲ್ ಒಟ್ಟಿಗೆ ಒಪ್ಪಂದ ಮಾಡಿಕೊಂಡು ತಾನು ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಿದರೆಂದು ಚಂದ್ರಶೇಖರ್‌ ಯಾವಾಗಲೂ ದೂರುತ್ತಿದ್ದರು. 1990 ರಲ್ಲಿ ಮಂಡಲ್‌ ವರದಿಯ ನಂತರದ ಗಲಾಟೆಯ ಸಮಯದಲ್ಲಿ ಅದೇ ನೆಪವನ್ನು ವಿ.ಪಿ. ಸಿಂಗ್‌ ಸರಕಾರವನ್ನು ಉರಳಿಸಲೂ ಬಳಸಿಕೊಳ್ಳುತ್ತಾರೆ. ನಂತರ ಅವರು ಹೊಸ ಪಕ್ಷವಾದ ಜನತಾ ದಳ (ಎಸ್)‌ ಕಟ್ಟುತ್ತಾರೆ. ಅವರ ಜೊತೆಗಿದ್ದ 64 ಸಂಸದರು ಮತ್ತು ರಾಜೀವ್‌ ಗಾಂಧಿಯವರ ಸಹಕಾರದಿಂದ 1990 ರಲ್ಲಿ ವಿ.ಪಿ. ಸಿಂಗ್‌ ಅವರನ್ನು ಕೆಳಗಿಳಿಸಿ ಭಾರತದ ಎಂಟನೇ ಪ್ರಧಾನ ಮಂತ್ರಿಯಾಗಿ ಚಂದ್ರಶೇಖರ್‌ ನೇಮಕಗೊಳ್ಳುತ್ತಾರೆ.

ಅವರ ಅಧಿಕಾರಾವಧಿಯಲ್ಲಿ, ಮನಮೋಹನ್ ಸಿಂಗ್ ಆರ್ಥಿಕ ಸಲಹೆಗಾರರಾಗಿದ್ದರು. ಅವರು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೊಂದಿಗೆ ಆರ್ಥಿಕ ಉದಾರೀಕರಣದ ಕುರಿತು ಹಲವು ದಾಖಲೆಗಳನ್ನು ಸಿದ್ಧಪಡಿಸಿದ್ದರು. ಆದರೆ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂಪಡೆದುಕೊಂಡ ಕಾರಣ ಸಂಸತ್ತಿನಲ್ಲಿ ಅವು ಯಾವುವೂ ಅಂಗೀಕಾರವಾಗುವುದಿಲ್ಲ.

ಜೈರಾಮ್‌ ರಮೇಶ್‌ ತಮ್ಮ “ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ” ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. “ಚಂದ್ರಶೇಖರ್‌ ಅವರ ವ್ಯಾಪಾರ ಮತ್ತು ಹೂಡಿಕೆ ಕುರಿತಾದ ಸಂಪುಟ ಸಮಿತಿಯು 11 ಮಾರ್ಚ್‌ 1991 ರಂದೇ ಹೊಸ ರಫ್ತು ನೀತಿಯನ್ನು ಅನುಮೋದಿಸಿತ್ತು. ಆ ಅನುಮೋದನೆಯಲ್ಲಿ ನಂತರದಲ್ಲಿ ಭಾರತದ ಆರ್ಥಿಕ ಸುಧಾರಣೆಗೆ ನಾಂದಿ ಹಾಡಿದ ಪಿ.ವಿ. ನರಸಿಂಹ ರಾವ್‌ ಸರಕಾರದ 4 ಜುಲೈ 1991 ರ ಪ್ಯಾಕೇಜ್‌ನ ಮುಖ್ಯ ಅಂಶಗಳು ಅಡಕವಾಗಿದ್ದವು.”

ಆದರೂ, ಚಂದ್ರಶೇಖರ್‌ ಕೇವಲ ಏಳು ತಿಂಗಳ ಕಾಲ ಮಾತ್ರವೇ ಪ್ರಧಾನಿಯಾಗಿದ್ದರು. ಚರಣ್‌ ಸಿಂಗ್‌ ನಂತರ ಎರಡನೇ ಅತಿ ಕಡಿಮೆ ಅವಧಿಯ ಪ್ರಧಾನ ಮಂತ್ರಿ ಅವರಾಗಿದ್ದರು. ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುವ ಮೊದಲೇ 1991 ಮಾರ್ಚ್‌ 6 ರಂದು ಕಾಂಗ್ರೆಸ್‌ ತನ್ನ ಬೆಂಬಲವನ್ನು ಹಿಂಪಡೆದ ಕಾರಣ ಚಂದ್ರಶೇಖರ್‌ ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಸಂಸದರಾಗಿ ಅವರು ಬಡಬಗ್ಗರ ಪರವಾಗಿ ತೀವ್ರ ಆಸಕ್ತಿ ಹೊಂದಿದ್ದರು. ಆ ವರ್ಗದ ಏಳಿಗೆಗಾಗಿ, ಸಾಮಾಜಿಕ ಬದಲಾವಣೆಗಾಗಿ ತ್ವರಿತ ನೀತಿಗಳನ್ನು ರೂಪಿಸಲು ಅವರು ಸದಾ ವಾದಿಸುತ್ತಿದ್ದರು. ಆ ಮೂಲಕ ತನ್ನದೇ ಆದ ಛಾಪು ಮೂಡಿಸಿದರು. ಅದರೊಂದಿಗೆ ಪ್ರಭುತ್ವ ಬೆಂಬಲದೊಂದಿಗೆ ಬೆಳೆದು ಬರುತ್ತಿದ್ದ ಏಕಸ್ವಾಮ್ಯತನಗಳ ವಿರುದ್ಧ ಅವರು ತೀವ್ರ ದಾಳಿಗಿಳಿದಾಗ ಅಧಿಕಾರ ಕೇಂದ್ರಗಳೊಂದಿಗೆ ಸಂಘರ್ಷವನ್ನೂ ಎದುರಿಸಬೇಕಾಯಿತು.

ಲೋಕಸಭೆಯಲ್ಲಿ ಕೆಲವು ಹಾಸ್ಯಭರಿತ ಕ್ಷಣಗಳಿದ್ದವು. ಚಂದ್ರಶೇಖರ್‌ ಅವರು ಅಟಲ್‌ ಬಿಹಾರಿ ವಾಜಪೇಯಿಯವರನ್ನು “ಗುರುದೇವ” ಎಂದು ಕರೆಯುತ್ತಿದ್ದರು. ಬದಲಿಗೆ ವಾಜಪೇಯಿ ಚಂದ್ರಶೇಖರ್‌ ಅವರನ್ನು “ಗುರು ಘಾಂಟಾಲ್”‌ ಎಂದು ಕರೆಯುತ್ತಿದ್ದರು. ಪ್ರಧಾನಮಂತ್ರಿಯಾಗಿದ್ದ ಪಿ.ವಿ. ನರಸಿಂಹರಾವ್‌ ಸಾಮಾನ್ಯವಾಗಿ ಯಾವುದೇ ವಿವಾದಾತ್ಮಕ ವಿಷಯಗಳ ಮೇಲೆ ಮಾತನಾಡುತ್ತಿರಲಿಲ್ಲ. ಆದಷ್ಟೂ ಅಂತಹ ಸಂಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ಸದಸ್ಯರು ಕೆರಳಿಸಿದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಚಂದ್ರಶೇಖರ್‌ ಒಂದು ದಿನ ಅವರನ್ನು “ಮೌನಿ ಬಾಬಾ” ಎಂದು ಕರೆದು ಬಿಟ್ಟಿದ್ದರು.

ಚಂದ್ರಶೇಖರ್‌ 1969 ರಲ್ಲಿ ಯಂಗ್‌ ಇಂಡಿಯನ್‌ ಎಂಬ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಪಾದಕರಾಗಿದ್ದರು. ಆ ಕಾಲದಲ್ಲಿ ಅತಿಹೆಚ್ಚು ಉಲ್ಲೇಖಿಸಲ್ಪಟ್ಟ ಸಂಪಾದಕೀಯಗಳು ಎಂದು ಅವು ಹೆಗ್ಗಳಿಕೆ ಪಡೆದುಕೊಂಡಿದ್ದವು. ಇಂದಿರಾ ಗಾಂಧಿಯಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗ ಮೇರಿ ಜೈಲ್‌ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದರು. ಅವರ ಬರಹಗಳ ಸಂಗ್ರಹ ಡೈನಾಮಿಕ್ಸ್‌ ಆಫ್‌ ಸೋಷಿಯಲ್ ಚೇಂಜ್‌ ಬಹಳ ಪ್ರಸಿದ್ಧವಾಗಿದೆ.

ದೀರ್ಘಕಾಲದ ಅನಾರೋಗ್ಯದ ಕಾರಣ 2007 ಜುಲೈ 8 ರಂದು ಚಂದ್ರಶೇಖರ್‌ ನಿಧನರಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಸಂಸತ್ತಿನ ಪೂರ್ವಸೂರಿಗಳು- 10: ಜೀವನಪೂರ್ತಿ ಕಮ್ಯುನಿಸ್ಟ್‌ ಆಗಿದ್ದ ಮಹಿಳಾ ಹೋರಾಟಗಾರ್ತಿ, ರೇಣು ಚಕ್ರವರ್ತಿ
ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹತ್ತನೇ ಲೇಖನ

ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳವಳಿಯಲ್ಲಿ ರೇಣು ಚಕ್ರವರ್ತಿ ಆಳವಾಗಿ ತೊಡಗಿಸಿಕೊಂಡಿದ್ದರು, ಹಲವಾರು ಮುಷ್ಕರಗಳನ್ನು ಆಯೋಜಿಸಿದ್ದರು ಮತ್ತು ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು.

ರೇಣು ಚಕ್ರವರ್ತಿ ಒಬ್ಬ ಕಮ್ಯುನಿಸ್ಟ್ ನಾಯಕಿ, ಸಂಘಟಕಿ, ಖ್ಯಾತ ಸಂಸದೀಯ ಪಟು ಮತ್ತು ಶಿಕ್ಷಣ ತಜ್ಞೆ. ಭಾರತದ ಕಮ್ಯುನಿಸ್ಟ್ ಚಳುವಳಿ ಮತ್ತು ಮಹಿಳಾ ಚಳುವಳಿಗಳ ಮೇಲೆ ಅಳಿಸಲಾಗದ ಛಾಪು ಮೂಡಿಸಿದವರು.

1948 ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ ನಿಷೇಧಿಸಲ್ಪಟ್ಟಾಗ, 1951 ರ ತನಕ ರೇಣು ಚಕ್ರವರ್ತಿ ಭೂಗತರಾಗಿದ್ದರು. ನಂತರ 1951 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲು ನಿರ್ಧರಿಸುತ್ತದೆ. ರೇಣು ಚಕ್ರವರ್ತಿ ಬಸಿರ್ಹಾತ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಆ ಮೂಲಕ ಪಶ್ಚಿಮ ಬಂಗಾಳದಿಂದ ಚುನಾಯಿತರಾದ ಏಕೈಕ ಮಹಿಳಾ ಸಂಸದರಾಗಿ ಗುರುತಿಸಿಕೊಳ್ಳುತ್ತಾರೆ. 1957 ರಲ್ಲಿ ಅದೇ ಕ್ಷೇತ್ರದಿಂದ ಅವರು ಮರು ಆಯ್ಕೆಯಾಗುತ್ತಾರೆ. 1962 ರಲ್ಲಿ ಮೂರನೇ ಲೋಕಸಭೆಗೆ ಸ್ಪರ್ಧಿಸುವ ಅವರು ಇಡೀ ದೇಶದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಂಡು ಗೆದ್ದು ಬರುತ್ತಾರೆ.

1964 ರಲ್ಲಿ ಸಿಪಿಐ ಪಕ್ಷವು ವಿಭಜನೆಯಾದ ನಂತರ ಅವರು ಹಳೆಯ ಪಕ್ಷದಲ್ಲಿಯೇ ಮುಂದುವರಿಯುತ್ತಾರೆ. ಆದರೆ, 1967 ಮತ್ತು 1971 ರ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯ ಎದುರು ಸೋಲು ಕಂಡಿದ್ದರು. ಹಾಗಂತ ಅವರು ತಮ್ಮ ಕ್ಷೇತ್ರವನ್ನು ಎಂದೂ ನಿರ್ಲಕ್ಷಿಸಲಿಲ್ಲ. ಜನರು ಅವರ ಒಡನಾಟವನ್ನು ಮೆಚ್ಚುತ್ತಿದ್ದರು. 1969 ರಲ್ಲಿ ಯುನೈಟೆಡ್‌ ಫ್ರಂಟ್‌ನ ಎರಡನೇ ಅವಧಿಯಲ್ಲಿ ಕೆಲಕಾಲ ಸಹಕಾರಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.

1958 ರಲ್ಲಿ ಅಮೃತಸರದಲ್ಲಿ ನಡೆದ ಸಿಪಿಐ ಕಾಂಗ್ರೆಸ್‌ನಲ್ಲಿ ಅವರು ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾಗಿದ್ದರು.

1917 ಅಕ್ಟೋಬರ್‌ 21 ರಂದು ಕಲ್ಕತ್ತಾದ ಒಂದು ಬ್ರಾಹ್ಮೋ ಕುಟುಂಬದಲ್ಲಿ ಜನಿಸಿದ ರೇಣು ಕಲ್ಕತ್ತಾದ ಲೊರೆಟೊ ಹೌಸ್ ಮತ್ತು ವಿಕ್ಟೋರಿಯಾ ಸಂಸ್ಥೆಯಲ್ಲಿ ಓದಿಕೊಂಡು ನಂತರ ಕೇಂಬ್ರಿಡ್ಜ್‌ನ ನ್ಯೂನ್‌ಹ್ಯಾಮ್ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರ್ತಿ ಮಾಡುತ್ತಾರೆ. ಕಲ್ಕತ್ತಾದಲ್ಲಿ ಆನರ್‌ ಪದವಿ ಪಡೆದ ನಂತರ, ಕೇಂಬ್ರಿಡ್ಜಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಟ್ರೈಪೋಸ್‌ ಉತ್ತೀರ್ಣರಾಗುತ್ತಾರೆ (1937-39). ಡಾ. ಬಿಧಾನ್ ಚಂದ್ರ ರಾಯ್ ಸೋದರ ಸೊಸೆಯಾಗಿದ್ದ ರೇಣು ಅವರು, ಅವರಿಂದಲೇ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದರು.

ಯುರೋಪಿನಲ್ಲಿದ್ದಾಗ, ರೇಣು ಚಕ್ರವರ್ತಿ ಫ್ಯಾಸಿಸಂನ ಉದಯವನ್ನು ಕಣ್ಣಾರೆ ಕಂಡವರು. ಬರ್ಲಿನ್ನಿನ ಅನ್ಟರ್ ಡೆನ್ ಲಿಂಡೆನ್‌ನಲ್ಲಿ ಫ್ಯಾಸಿಸ್ಟ್ ಯುವಕರು ಮಾರ್ಚ್‌ ನಡೆಸುವುದನ್ನು ಅವರು ಕಂಡಿದ್ದರು. ಆಸ್ಟ್ರಿಯಾದ ಮೇಲೆ ನಾಜಿ ಆಕ್ರಮಣಕ್ಕೆ ಸಾಕ್ಷಿಯಾಗಿದ್ದರು. ಜೆಕೊಸ್ಲೊವಾಕಿಯಾದ ವಿಘಟನೆಯ ಘಟನೆಗಳನ್ನು ಗಮನಿಸುತ್ತಿದ್ದರು. ಅವರು ಫ್ಯಾಸಿಸಮ್ಮಿನ ಕಟು ವಿರೋಧಿಯಾಗಿದ್ದರು. ಹಿಟ್ಲರನ ಕಿಂಡರ್‌, ಕುಚೆ, ಕಿರ್ಚೆ – ಮಹಿಳೆಯರು ಹೆರಿಗೆ, ಅಡುಗೆ ಮತ್ತು ಚರ್ಚ್‌ಗೆ ಸೀಮಿತ – ಎಂಬ ನಿಲುವನ್ನು ತಿರಸ್ಕರಿಸಿದ್ದರು.

ರೇಣು ಚಕರ್ವರ್ತಿ ಅವರು ಮಾರ್ಕ್ಸ್‌ವಾದಿ ಚಿಂತಕ ಜಾನ್ ಸ್ಟ್ರಾಚಿಯವರ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು. ನಂತರ FEDIND (ಫೆಡರೇಷನ್‌ ಆಫ್‌ ಇಂಡಿಯನ್‌ ಸ್ಟೂಡೆಂಟ್ಸ್‌ ಸೊಸೈಟೀಸ್‌ ಇನ್‌ ಇಂಗ್ಲೆಂಡ್‌ ಆಂಡ್‌ ಐರ್ಲೆಂಡ್)‌ ಸಂಘಟನೆಯ ಸ್ಥಾಪಕ ಕಾರ್ಯದರ್ಶಿಯಾದರು. ಅಮೇರಿಕಾದಲ್ಲಿ 1938 ರಲ್ಲಿ ನಡೆದ ಅಂತರಾಷ್ಟ್ರೀಯ ಯುವ ಕಾಂಗ್ರೆಸ್‌ನಲ್ಲಿ ಕೂಡ ಅವರು ಭಾಗವಹಿಸಿದ್ದರು.

1939 ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ತಾನು ಕೇಳಿದ್ದ ಆಕೆಯ ಧ್ವನಿಯನ್ನು ಹಿರಿಯ ಸಂಸದ ಹಿರೇನ್‌ ಮುಖರ್ಜಿ ನೆನಪಿಸಿಕೊಳ್ಳುತ್ತಾರೆ. ಆ ಸಮ್ಮೇಳನದ ಘೋಷಣೆಯು “ಯಾವ ಬಾವುಟ, ಅದು ಕೆಂಬಾವುಟ” ಎಂದಾಗಿತ್ತು.

1938 ರಲ್ಲಿ ಅವರು ಪ್ರಮುಖ ಬ್ರಿಟಿಷ್ ಕಮ್ಯುನಿಸ್ಟ್ ರಜನಿ ಪಾಮ್ ದತ್ ಅವರ ಜೊತೆ ಸಂಪರ್ಕಕ್ಕೆ ಬರುತ್ತಾರೆ. ಅದೇ ವರ್ಷ, ಅವರು ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷವನ್ನು ಸೇರುವುದು. ಭಾರತಕ್ಕೆ ಮರಳಿದ ನಂತರ ಆಗ ಇಲ್ಲಿ ಅಕ್ರಮವಾಗಿದ್ದ ಕಮ್ಯುನಿಸ್ಟ್‌ ಪಕ್ಷವನ್ನು ಸೇರಿ ಸಕ್ರಿಯ ಎಡಪಂಥೀಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆ ಕುರಿತು ಅವರು ಹೀಗೆ ಬರೆಯುತ್ತಾರೆ. “ನಾನು ಭಾರತಕ್ಕೆ ಮರಳಿ ಬಂದಿದ್ದೆ, ನನ್ನ ದೇಶದ ವಿಮೋಚನೆಗಾಗಿ ಹೋರಾಡುವ ಕಿಚ್ಚಿನ ಜೊತೆಗೆ.”

ಬ್ರಿಟನ್‌ನಲ್ಲಿದ್ದಾಗ ಪ್ರಮುಖ ಕಮ್ಯುನಿಸ್ಟ್‌ ಚಿಂತಕ ಮತ್ತು ಪತ್ರಕರ್ತ ನಿಖಿಲ್‌ ಚಕ್ರವರ್ತಿ ಅವರನ್ನು ಭೇಟಿಯಾಗುತ್ತಾರೆ. 1942 ಜನವರಿ 3 ರಂದು ರೇಣು ಮತ್ತು ನಿಖಿಲ್‌ ಭಾರತದಲ್ಲಿ ವಿವಾಹಿತರಾಗುತ್ತಾರೆ. ಅವರಿಗೆ ಜನಿಸಿದ ಮಗ ಸುಮಿತ್‌ ಚಕ್ರವರ್ತಿ, ತಂದೆ ಸ್ಥಾಪಿಸಿದ ಮೇನ್‌ಸ್ಟ್ರೀಮ್‌ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಎರಡನೇ ಮಹಾಯುದ್ಧದ ಸಮಯದಲ್ಲಿ, ಇಂಡೋ-ಬರ್ಮಾ ಗಡಿಯಲ್ಲಿ ಬ್ರಿಟಿಷ್ ಮತ್ತು ಅಮೇರಿಕನ್ ಸೈನಿಕರು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಪ್ರತಿಭಟಿಸಿ ರೇಣು ಚಕ್ರವರ್ತಿ ಮತ್ತು ಇತರರು ವೈಸ್‌ರಾಯ್‌ಗೆ ಪತ್ರ ಬರೆದು ಸಹಿ ಸಂಗ್ರಹ ನಡೆಸುತ್ತಾರೆ. ಜಪಾನ್‌ ಪಡೆಗಳು ಮುನ್ನುಗ್ಗಿ ಬರುತ್ತಿದ್ದರೂ ಕೂಡ ಬ್ರಿಟಿಷ್‌ ಸೇನೆ ಹಳ್ಳಿಗಳನ್ನು ನಾಶ ಮಾಡುವುದನ್ನು ತಡೆಯಲು ಅವರು ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ. ಅದಾಗಲೇ ಮೂಡಿ ಬರುತ್ತಿದ್ದ ಬರ ಪರಿಸ್ಥಿತಿಗೂ ಅವರು ಸ್ಪಂದಿಸುತ್ತಾರೆ.

1940 ರ ಆರಂಭದಲ್ಲಿ ದೆಹಲಿಯಲ್ಲಿ ನಡೆದ AISF ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು. ರೇಣು ಚಕ್ರವರ್ತಿ, ಕನಕ್‌ ದಾಸ್‌ಗುಪ್ತಾ ಮೊದಲಾದವರು ಬಂಗಾಳದಲ್ಲಿ ಹೆಣ್ಣುಮಕ್ಕಳನ್ನು ಸಂಘಟಿಸಿಕೊಂಡು ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸುತ್ತಾರೆ.

1940 ರಲ್ಲಿ ಛಾತ್ರಿ ಸಂಘ (ವಿದ್ಯಾರ್ಥಿನಿಯರ ಸಂಘಟನೆ) ತನ್ನ ಮೊದಲ ಸಮ್ಮೇಳನವನ್ನು ಲಕ್ನೋದಲ್ಲಿ ನಡೆಸುತ್ತದೆ. ರೇಣು ಚಕ್ರವರ್ತಿ ಅದರ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು. ತರುಣಿ ವಿದ್ಯಾರ್ಥಿನಿಯರು ಸೇರಿ ಮಹಿಳಾ ಚಳುವಳಿಗೆ ಅಡಿಪಾಯ ಹಾಕಿದ ಆ ಕಾರ್ಯಕ್ರಮಕ್ಕೆ ಸರೋಜಿನಿ ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸಿ, ಅಧ್ಯಕ್ಷತೆ ವಹಿಸಿದ್ದರು.

1942 ರ ಏಪಿಲ್‌ ತಿಂಗಳಲ್ಲಿ ರೇಣು ಚಕ್ರವರ್ತಿ, ರಾಣಿ ಮಿತ್ರಾ ದಾಸ್‌ಗುಪ್ತಾ ಮತ್ತು ಮಣಿಕುಂತಲಾ ಸೇನ್ ಅವರುಗಳು ಸೇರಿಕೊಂಡು ಮಹಿಳಾ ಆತ್ಮ ರಕ್ಷಾ ಸಮಿತಿ (MARS) ಯನ್ನು ರಚಿಸುತ್ತಾರೆ. ಅದಕ್ಕೆ ಇಲಾ ಭಟ್ಟಾಚಾರ್ಯ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ MARS ಸಾವಿರಾರು ಸದಸ್ಯರನ್ನು ಒಳಗೊಂಡ ಬೃಹತ್‌ ಮತ್ತು ಪರಿಣಾಮಕಾರಿ ಸಂಘಟನೆಯಾಗಿ ಬೆಳೆಯುತ್ತದೆ.

1942 ಡಿಸೆಂಬರ್‌ ತಿಂಗಳಲ್ಲಿ ಕಲ್ಕತ್ತಾ ಸೇರಿದಂತೆ, ವಿಶಾಖಪಟ್ಟಣ, ಚಿತ್ತಗಾಂಗ್‌ ಮತ್ತು ಇತರ ಕಡೆಗಳಲ್ಲಿ ಜಪಾನ್‌ ದಾಳಿ ಮಾಡಲು ಆರಂಭಿಸಿ ಬಾಂಬ್‌ ಸುರಿಸುತ್ತದೆ. ಆಗ ಉಂಟಾದ ಸಾಮೂಹಿಕ ವಲಸೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಬಹಳ ದೊಡ್ಡ ಮಟ್ಟದ ಸಹಾಯ ಲಭಿಸುವುದು ಇದೇ MARS ಸಂಘಟನೆಯಿಂದ. ರೇಣು ಚಕ್ರವರ್ತಿ ಆ ಪರಿಹಾರ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ತೆಭಾಗ ಚಳುವಳಿಯಲ್ಲಿ ಕೂಡ MARS ಮಹತ್ವದ ಪಾತ್ರ ವಹಿಸಿತ್ತು.

ಇದರ ಜೊತೆಗೆ, ನಿರ್ಗತಿಕ ಮಹಿಳೆಯರ ಪುನರ್ವಸತಿಗಾಗಿ ನಾರಿ ಸೇವಾ ಸಂಘವನ್ನು ಕೂಡ ಸ್ಥಾಪಿಸುತ್ತಾರೆ. AIWC (ಆಲ್‌ ಇಂಡಿಯಾ ವುಮೆನ್ಸ್‌ ಕಾನ್ಫರೆನ್ಸ್)‌ ಸದಸ್ಯರೂ ಆಗಿದ್ದ ರೇಣು ಅವರ ತಾಯಿ ಬ್ರಹ್ಮ ಕುಮಾರಿ ರಾಯ್‌ ಈ ಸಂಘದ ಕೇಂದ್ರದಲ್ಲಿದ್ದರು. ನಿಖಿಲ್‌ ಚಕ್ರವರ್ತಿ ಅವರ ತಾಯಿ ಶೈಲಜಾ ಚಕ್ರವರ್ತಿ ಕೂಡ ಮಹಿಳಾ ಸಬಲೀಕರಣಕ್ಕಾಗಿ ದುಡಿದಿದ್ದರು.

1942 ಏಪ್ರಿಲ್‌ 27 ಮತ್ತು 28 ರಂದು MARS ಸಂಘಟನೆಯ ಮೊದಲ ಸಮ್ಮೇಳನ ನಡೆಯುತ್ತದೆ. ಅಲ್ಲಿ ರೇಣು ಚಕ್ರವರ್ತಿ ಮಾತನಾಡುತ್ತಾರೆ. ಅದರ ಮೊದಲ ಪ್ರಾಂತೀಯ ಸಮ್ಮೇಳನವು 1943 ಮೇ 8 ರಂದು ಕಲ್ಕತ್ತಾದಲ್ಲಿ ನಡೆಯುತ್ತದೆ. ಅಲ್ಲಿ ಅವರು ಸವಿಸ್ತಾರವಾಗಿ ಮಾತನಾಡುತ್ತಾರೆ. ಬರ ಪರಿಹಾರಕ್ಕೆ ಒತ್ತಾಯಿಸಿ ವಿಧಾನಸಭೆಗೆ 5,000 ಮಹಿಳೆಯರ ಜಾಥಾವನ್ನು MARS ಆಯೋಜಿಸುತ್ತದೆ. ನಾಗರಿಕ ರಕ್ಷಣಾ ಘಟಕಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು ಮತ್ತು ಗಂಜಿಕೇಂದ್ರಗಳನ್ನು ಸ್ವತಃ ರೇಣು ಚಕ್ರವರ್ತಿ ಮುಂದೆ ನಿಂತು ಸಂಘಟಿಸುತ್ತಾರೆ.

1946-47 ರ ಕೋಮು ಗಲಭೆಗಳಲ್ಲಿ, ಅದರಲ್ಲೂ ವಿಶೇಷವಾಗಿ ನವಖಲಿಯಲ್ಲಿ ಅವರು ಸಕ್ರಿಯರಾಗಿದ್ದರು. ಅವರು ಹೀಗೆ ಬರೆಯುತ್ತಾರೆ. “ನನ್ನ ಪುಟ್ಟ ಮಗ (ಸುಮಿತ್‌) ಆಗ ಕೇವಲ ಒಂದು ವರ್ಷದ ಮಗು. ನಾನು ಕಷ್ಟದಲ್ಲಿದ್ದೆ, ಆದರೆ ನವಖಲಿಯಲ್ಲಿ ಕಷ್ಟ ಅನುಭವಿಸುತ್ತಿರುವ ಸಹೋದರಿಯರ ಕೂಗು ಕೇಳಿಕೊಂಡು ನನಗೆ ಮನೆಯಲ್ಲಿ ಉಳಿಯಲು ಸಾಧ್ಯವಿರಲಿಲ್ಲ.”

ಅವರು ಅಪಾರ ಅಧ್ಯಯನ ನಡೆಸಿ ಬರೆದಿರುವ ಪುಸ್ತಕ “ಭಾರತೀಯ ಮಹಿಳಾ ಚಳುವಳಿಯಲ್ಲಿ ಕಮ್ಯುನಿಸ್ಟರು” 1940-50 ರ ನಡುವಿನ ಮಹಿಳಾ ಚಳುವಳಿಯ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ.

ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳುವಳಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. ಹಲವು ಕಾರ್ಮಿಕ ಮುಷ್ಕರಗಳನ್ನು ಅವರು ಆಯೋಜಿಸಿದ್ದರು. ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಅವರು ಮಹಿಳಾ ಚಳುವಳಿಗೆ ಗಣನೀಯ ಕೊಡುಗೆ ನೀಡಿದವರು. 1953 ರಲ್ಲಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದ ವುಮೆನ್ಸ್‌ ಇಂಟರ್ನ್ಯಾಷನಲ್ ಡೆಮಾಕ್ರಟಿಕ್ ಫೆಡರೇಷನ್‌ (WIDF) ಸಹಿತ ಹಲವು ಸಂಘಟನೆಗಳ ಕಾರ್ಯಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.

WIDF ನ ಸಂವಿಧಾನ ಸಭೆಯು 1945 ರಲ್ಲಿ ಪ್ಯಾರಿಸ್‌ನಲ್ಲಿ MARS ಸಂಯೋಜನೆಯೊಂದಿಗೆ ನಡೆಯುತ್ತದೆ. WIDF ಸಂಘಟನೆಯು 1953 ಜೂನ್‌ ತಿಂಗಳಲ್ಲಿ ಕೋಪನ್‌ ಹೇಗನ್‌ನಲ್ಲಿ ತನ್ನ ವಿಶ್ವ ಕಾಂಗ್ರೆಸ್‌ಗೆ ಭಾರತದಿಂದ ಪ್ರತಿನಿಧಿಗಳನ್ನು ಆಹ್ವಾನಿಸುತ್ತದೆ. ವಿದೇಶದಿಂದ ಹಿಂತಿರುಗುವ ರೇಣು ಚಕ್ರವರ್ತಿ ಆ ಆಹ್ವಾನವನ್ನು ಹಿಡಿದುಕೊಂಡೇ ಬಂದಿದ್ದರು. ಆ ಮೂಲಕ 30 ಮಹಿಳೆಯರ ನಿಯೋಗ ರಚಿಸಿ ಕಳುಹಿಸಿಕೊಡುತ್ತಾರೆ.

1953 ಮಾರ್ಚ್‌ 10 ರಂದು ದೆಹಲಿಯಲ್ಲಿ ಅದರ ಪೂರ್ವಸಿದ್ಧತಾ ಸಭೆ ನಡೆಯುತ್ತದೆ. ರೇಣು ಚಕ್ರವರ್ತಿ, ಅರುಣಾ ಅಸಫ್‌ ಅಲಿ ಸೇರಿದಂತೆ 12 ರಾಜ್ಯಗಳ ಇತರ ಪ್ರತಿನಿಧಿಗಳು WIDF ಮನವಿಗೆ ಸಹಿ ಮಾಡುತ್ತಾರೆ.

1953 ಮೇ 9 ರಂದು ರಾಷ್ಟ್ರೀಯ ಪೂರ್ವಸಿದ್ಧತಾ ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಅಲ್ಲಿ ರಾಷ್ಟ್ರೀಯ ಸಮನ್ವಯ ಸಮಿತಿಯನ್ನು ರಚಿಸಲಾಗುತ್ತದೆ. 1954 ಜೂನ್‌ 4 ರಂದು ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ವುಮೆನ್‌ (NFIW) ಸಂಘಟನೆಯ ಸ್ಥಾಪನಾ ಸಭೆ ಆರಂಭವಾಗುತ್ತದೆ. ಅಲ್ಲಿ ರೇಣು ಚಕ್ರವರ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಮತ್ತು ಸಂಘಟನೆಯ ಸಂವಿಧಾನದ ಕರಡು ತಯಾರಿಸುತ್ತಾರೆ. 1962 ರ NFIW ಸಮ್ಮೇಳನದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1970 ರ ತನಕ ಅವರ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ.

1950 ರ ದಶಕದಲ್ಲಿ ಜಮ್ಶೆಡ್‌ಪುರ ಮತ್ತಿತರ ಕಡೆಗಳಲ್ಲಿ ನಡೆದ ಕಾರ್ಮಿಕ ಚಳುವಳಿಯಲ್ಲಿ ರೇಣು ಚಕ್ರವರ್ತಿ ಸಕ್ರಿಯರಾಗಿದ್ದರು. ಆ ಕಾರಣದಿಂದ ಅವರು ಮತ್ತಷ್ಟು ಸೆರೆವಾಸವನ್ನೂ ಅನುಭವಿಸುತ್ತಾರೆ. AIWC ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಇತರ ಕಮ್ಯುನಿಸ್ಟ್‌ ಮತ್ತು ಎಡಪಂಥೀಯ ಮಹಿಳೆಯರೊಂದಿಗೆ ಕೆಲಸ ಮಾಡುತ್ತಲೇ ಬಂದರು.

1940 ರಿಂದ 1947 ರವರೆಗೆ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಲೇ, ಸಾಮುದಾಯಿಕ ಮತ್ತು ಪಕ್ಷದ ಕೆಲಸಗಳಿಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರೊಬ್ಬ ಪ್ರತಿಭಾನ್ವಿತ ಗಾಯಕಿ ಮತ್ತು ಚಿತ್ರ ಕಲಾವಿದೆಯಾಗಿದ್ದರು. ಅವರ ಲೋಕಸಭಾ ವ್ಯಕ್ತಿಚಿತ್ರದಲ್ಲಿ ಅಂಕಣಗಳ ಓದು ಮತ್ತು ಬರವಣಿಗೆ ಅವರ ಹವ್ಯಾಸಗಳಾಗಿದ್ದವೆಂದು ಕಾಣಬಬಹುದು. ಅವರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೆಲ್ಲವೂ ಮಹಿಳೆಯರ ವಿಮೋಚನೆಯ ಮೇಲೆ ಕೇಂದ್ರೀಕರಿಸಿದ್ದವು.

1970 ರ ಹೊತ್ತಿಗೆ ತನ್ನ ಜನ್ಮಜಾತ ಹೃದಯ ರೋಗದಿಂದ ಬಳಲುತ್ತಿದ್ದ ಅವರು ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದರ ಹೊರತಾಗಿಯೂ ಅವರು ಸೆರೆಬ್ರಲ್‌ ಹೇಮರೇಜ್‌ ಆಗುವ ತನಕವೂ ಸಕ್ರಿಯವಾಗಿಯೇ ಇದ್ದರು.

1994 ಏಪ್ರಿಲ್ 16 ರಂದು ರೇಣು ಚಕ್ರವರ್ತಿ ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಬೊಗಸೆಗೆ ದಕ್ಕಿದ್ದು-53 : ಸಿಡಿ, ಬಾಯಿಗೆ ಬೀಗ, ಹರಕೆಗಾಗಿ ಕಳವು!
“..ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ದಮನಿತರನ್ನು ದೇವರು ಮತ್ತು ನಂಬಿಕೆಯ ಹೆಸರಿನಲ್ಲಿ ಇನ್ನಷ್ಟು ದಮನಿಸಲು ನಮ್ಮ ಸಮಾಜವು ಕಂಡುಕೊಂಡಿರುವ ಆಚರಣಾ ವ್ಯವಸ್ಥೆಗಳು ಲೆಕ್ಕವಿಲ್ಲದಷ್ಟಿವೆ. ಇಂತಾ ಆಚರಣೆಗಳಲ್ಲಿ ಕೆಲವು ಹಿಂದೆ ಮುಕ್ತವಾಗಿ ಮತ್ತು ರಾಜಾರೋಷವಾಗಿ ನಡೆಯುತ್ತಿದ್ದು, ನಂತರ ಬಿಲ ಸೇರಿದ್ದರೂ, ಕೆಲವೊಂದು ಆಚರಣೆಗಳು ಹಿಂದೂತ್ವದ ಮೂಲಭೂತವಾದಿ ನಾಯಕರ ಕುಮ್ಮಕ್ಕಿನಿಂದ ಮತ್ತೆ ಹೊರಬಂದು ಹೆಡೆಯೆತ್ತಲು ಹವಣಿಸುತ್ತಿವೆ. ಅವುಗಳಲ್ಲಿ ಒಂದು ಸಿಡಿ. ಇವು ಹಿಂಸಾತ್ಮಕ ಆಚರಣೆಗಳಾಗಿದ್ದವು.

ಸಿಡಿಯಾಟ
ಕರ್ನಾಟಕದಲ್ಲಿ ಅಮಾನವೀಯ ಪದ್ಧತಿಗಳ ದಾಖಲಾತಿ ನಡೆದಾಗ ಸಿಡಿ ಆಚರಣೆಯು ಮಂಡ್ಯ, ಚಿತ್ರದುರ್ಗ, ಕಲಬುರ್ಗಿ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿತ್ತು. ಕೆಲವು ಊರುಗಳ ಉದಾಹರಣೆ ಕೊಡಬೇಕೆಂದರೆ, ಆಳಂದ ತಾಲೂಕಿನ ಹಡಗಲಿ ಅಫ್ಜಲ್ ಪುರ ತಾಲೂಕಿನ ಘತ್ತರಗಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಹಲಗೂರು ಬಳಿಯ ಗುಂಡಾಪುರ, ದೊಡ್ಡರಸಿನಕೆರೆ, ಕಸಲಗೆರೆ, ಅರಸಿನಗೆರೆ, ಕನಕಪುರ ತಾಲೂಕಿನ ಸಾತನೂರು, ಕೇರಲಾಳಸಂದ್ರ, ಮಳಗಾಳ, ಕಬ್ಬಾಳ, ಜಗಳೂರು ತಾಲೂಕಿನ ಹಾಲೆಕಲ್ಲು ಮೊದಲಾದ ಹಳ್ಳಿಗಳಲ್ಲಿ ಒಂದೊಂದು ರೀತಿಯ ಸಿಡಿ ನಡೆಯುತ್ತಿತ್ತು.

ಸಿಡಿಯಾಟದಲ್ಲಿ ಹಿಂದುಳಿದ ಎಲ್ಲಾ ಜಾತಿಗಳವರು ಭಾಗವಹಿಸುತ್ತಾರಾದರೂ, ಮಾದಿಗರು, ನಾಯಕರು ಮುಂತಾದ “ಕೆಳ ಜಾತಿ”ಗಳಿಗೆ ಸೇರಿದವರೇ ಹೆಚ್ಚು ಮತ್ತು ಪುರುಷರಿಗಿಂತ ಮಹಿಳೆಯರೇ ಹೆಚ್ಚು. ಮಾರಮ್ಮ ಮುಂತಾದ ಹೆಣ್ಣು ದೇವತೆಗಳನ್ನು ಪ್ರಸನ್ನಗೊಳಿಸುವ ಹೆಸರಿನಲ್ಲಿ, ಹರಕೆ ರೂಪದಲ್ಲಿ ಸಿಡಿ ಆಡಲಾಗುತ್ತದೆ. ಉದಾಹರಣೆಗೆ ಕಬ್ಬಾಳದ ಕಬ್ಬಾಳಮ್ಮ, ಮಳಗಾಳದ ಮಸಣಮ್ಮ, ಹಾಲೇಕಲ್ಲಿನ ಕರಿಯಮ್ಮ, ಘತ್ತರಗಿಯ ಬಾಗಮ್ಮ… ಹೀಗೆ. ಊರಿಗೆ ಒಳ್ಳೆಯದಾಗುತ್ತದೆ, ಇಲ್ಲವಾದಲ್ಲಿ ಕೆಟ್ಟದಾಗುತ್ತದೆ ಎಂಬುದು ನಂಬಿಕೆ. ಹಲವಾರು ಕಾರಣಗಳಿಂದ ಹರಕೆ ಹೊತ್ತವರೂ ಇರುತ್ತಾರೆ.

ವಿಶೇಷವಾಗಿ ಆರಿಸಿದ ಮರದಿಂದ ಸಿಡಿಗೋಲು ಅಥವಾ ಸಿಡಿಮರ  ತಯಾರಿಸಲಾಗುತ್ತದೆ. ಜಾತ್ರೆಯ ದಿನ ಇದಕ್ಕೆ ವಿಶೇಷ ಪೂಜೆ, ಪ್ರಾಣಿಬಲಿ, ಅಲಂಕಾರಗಳು, ವಿಧಿವಿಧಾನಗಳು ಇರುತ್ತವೆ. ಅವೆಲ್ಲವೂ ಒತ್ತಟ್ಟಿಗಿರಲಿ. ಇದೊಂದು ಮರದ ಏತದಂತಾ ರಚನೆ.  ಅದನ್ನು ಆಕಾಶದತ್ತ ಮೇಲೆತ್ತಿ ಒಂದು ಕಡೆಯಲ್ಲಿರುವ ಹಗ್ಗದ ಮೂಲಕ ಗಾಳಿಯಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಬಹುದು. ಕೆಲವು ಕಡೆ ಇವುಗಳಿಗೆ ಚಕ್ರಗಳಿದ್ದು, ಬೇಕೆಂದರೆ ಮೆರವಣಿಗೆಯಲ್ಲಿ ಕೊಂಡೊಯ್ಯಬಹುದು. ಮರದ ಇನ್ನೊಂದು ತುದಿಯಲ್ಲಿ ಹಗ್ಗಕ್ಕೆ ಕಟ್ಟಿರುವ ಕೊಕ್ಕೆ ಇರುತ್ತದೆ. ಈ ಕೊಕ್ಕೆಯನ್ನು ಸಿಡಿಯಾಡುವವರ ಬೆನ್ನು ಹುರಿಗೆ ಸಿಕ್ಕಿಸಿ ಮೇಲೆತ್ತಲಾಗುತ್ತದೆ. ಕೋಲನ್ನು ಆ ಕಡೆ ಈ ಕಡೆ ಗಾಳಿಯಲ್ಲಿ ತೂಗಾಡಿಸುತ್ತಾ ಸಿಡಿಬಂಡಿಯು ಮೆರವಣಿಗೆಯಲ್ಲಿ ಹೋಗುತ್ತದೆ. ಆ ವ್ಯಕ್ತಿಯ ಒಂದು ಕೈಯಲ್ಲಿ  ಕತ್ತಿ ಇರುತ್ತದೆ. ಎಲ್ಲಾ ಮುಗಿದ ನಂತರ ಆ ವ್ಯಕ್ತಿಯನ್ನು ಕೆಳಗಿಳಿಸಲಾಗುತ್ತದೆ. ತೀರಾ ಅಪಾಯಕಾರಿಯಾದ, ಅಪಾರ ನೋವು ಮತ್ತು ದೇಹಹಾನಿ ಉಂಟುಮಾಡುವ ಈ ಆಚರಣೆ ಯಾಕಾಗಿ ಮಾಡುತ್ತಾರೋ! ಈ ರೀತಿ ಇರುವುದನ್ನು ಬಂಡಿ ಸಿಡಿ ಎನ್ನುತ್ತಾರೆ. ಕೆಲವು ಕಡೆ ಸಿಡಿಮರವು ಒಂದೇ ಜಾಗದಲ್ಲಿ ಇರುತ್ತದೆ. ಬೇರೆಬೇರೆ ಊರುಗಳಲ್ಲಿ ಬೇರೆಬೇರೆ ವಿಧಿವಿಧಾನಗಳಿವೆ. ಕೆಲವು ಕಡೆ ತೊಟ್ಟಿಲು ಸಿಡಿ ಇತ್ತು. ಅದರಲ್ಲಿ ಕೊಕ್ಕೆಯಲ್ಲಿ ಸಿಕ್ಕಿಸುವ ಬದಲು ತೊಟ್ಟಿಲಲ್ಲಿ ಕುಳ್ಳಿರಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಕೊಕ್ಕೆಯ ಬದಲು ಸೊಂಟಕ್ಕೆ ಕಟ್ಟಿ ತೂಗಾಡಿಸಲಾಗುತ್ತದೆ. ಇನ್ನೂ ಕೆಲವು ಕಡೆಗಳಲ್ಲಿ ಮನುಷ್ಯರ ಬದಲು ಗೊಂಬೆಗಳನ್ನು ತೂಗಾಡಿಸಲಾಗುತ್ತದೆ. ಇವು ಬಹುಶಃ ಈ ಹಿಂಸಾತ್ಮಕ ಆಚರಣೆಗೆ ಕಾಲಕ್ರಮೇಣ ಮಾಡಲಾದ ಪರಿಷ್ಕರಣೆ ಅಥವಾ ಸುಧಾರಣೆಗಳಾಗಿರಬಹುದು.

ಅಫ್ಜಲ್ ಪುರ ತಾಲೂಕಿನ ಘತ್ತರಗಿಯಲ್ಲಿ ಭೀಮಾ ನದಿದಡದ ಬಾಗಮ್ಮನ ಗುಡಿಯಿದೆ. ದಾಖಲಾತಿ ಕಾಲಕ್ಕೆ ಬೇರೆಬೇರೆ ಊರುಗಳಿಂದ ಬರುವ ಸಿಡಿಯಾಡುವವರಿಗೆ ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳೂ ಇದ್ದವು. ಇಲ್ಲಿ ಎರಡು ಗಾಲಿಗಳ ಇಲ್ಲಿನ ಸಿಡಿಬಂಡಿಯ ತೊಲೆ 40ರಿಂದ 50 ಅಡಿ ಉದ್ದವಿತ್ತು. ತೊಲೆಯ ಕೊನೆಗೆ ಹಗ್ಗದಿಂದ ಕಟ್ಟಿದ ಕೊಕ್ಕೆ ಇತ್ತು. ಪಕ್ಕವೇ ಇನ್ನೊಂದು ಹಗ್ಗವಿದ್ದು, ಇದನ್ನು ಸಿಡಿಯಾಡುವವರು ಆಧಾರವಾಗಿ ಬಳಸಿಕೊಳ್ಳಬಹುದು. ದೀಪಾವಳಿ ಕಾಲದಲ್ಲಿ ಈ ಸಿಡಿ ನಡೆಯುತ್ತಿತ್ತು. ಈ ದಾಖಲಾತಿ ಸಮಯದಲ್ಲಿ (ಎರಡು ದಶಕಗಳಿಗೂ ಹಿಂದೆ) ಇದೊಂದು ದೊಡ್ಡ ಮಟ್ಟದ ವ್ಯಾಪಾರ, ಆರ್ಥಿಕ ವಹಿವಾಟು ನಡೆಯುವ ಜಾತ್ರೆ. ಆ ವರ್ಷ 42 ಮಹಿಳೆಯರು, 18 ಪುರುಷರು ಮತ್ತು ಐವರು ಇತರರು ಸಿಡಿಯಾಡಲು ಬಂದಿದ್ದರು. ಮೊದಲ ಸಿಡಿ 4,751 ರೂ.ಗಳಿಗೆ ಹರಾಜಾಗಿದ್ದರೆ, 65ನೆಯದು 501 ರೂ.ಗಳಿಗೆ. ಇಲ್ಲಿ ನದಿಯಲ್ಲಿ ಸ್ನಾನ ಇತ್ಯಾದಿ ಹಲವು ವಿಧಿಗಳಿದ್ದು, ಅವುಗಳ ವಿವರಣೆ ನಮಗೆ ಸದ್ಯ ಬೇಡ. ಸಿಡಿ ಆಚರಣೆಯ ಹಿಂಸಾತ್ಮಕ ವಿಧಾನಗಳನ್ನು ಸರಕಾರ ಹಿಂದೇಯೇ ನಿಷೇದಿಸಿತ್ತು. ಸಿಡಿ ಆಚರಣೆಗೆ ಪರವಿರೋಧಗಳು ಸಮಾಜದ ನಡುವೆಯೇ ಇವೆ. ಸರಕಾರ ನಿಷೇಧಿಸಿದರೂ ಜನರ ಮನಃಪರಿವರ್ತನೆ ಆಗದೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.

ಯಾಕೆಂದರೆ, ನಿಷೇಧದ ಹೊರತಾಗಿಯೂ ವರ್ಷಗಳಿಂದ ಸಿಡಿ ಆಚರಣೆಯು ಅಲ್ಲಲ್ಲಿ ನಡೆಯುತ್ತಲೇ ಬಂದಿದೆ. ಕೆಲವು ಕಡೆ ಸಂಘಟಕರ ವಿರುದ್ಧ ಕೇಸುಗಳು ಕೂಡಾ ದಾಖಲಾಗುತ್ತಾ ಬಂದಿವೆ. ದಲಿತ ಸಂಘಟನೆಗಳ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಬಂದಿವೆ. 2024ರ ಪತ್ರಿಕಾ ವರದಿಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ನೋಡಿದರೂ ಸಾಕು. ಹಲವಾರು ಕಡೆಗಳಲ್ಲಿ ಸಿಡಿ ಆಚರಣೆಯು ನಡೆದಿರುವುದು ತಿಳಿಯುತ್ತದೆ. ಉದಾಹರಣೆಗೆ ಮಂಡ್ಯ ಜಿಲ್ಲೆಯ ಸಂತೆ ಕೆಸಲಕೆರೆ‌, ಚಳ್ಳಕೆರೆ ತಾಲೂಕಿನ ಗೌರಸಮುದ್ರ ಬಳಿಯ ತುಮಲಿ ಮಾರಮ್ಮನ ಜಾತ್ರೆ…ಹೀಗೆ. ಅವುಗಳ ಪಟ್ಟಿಯನ್ನಿಲ್ಲಿ ನೀಡಲು ಹೋಗುವುದಿಲ್ಲ.

ನಂಬಿಕೆ ಮತ್ತು ಧರ್ಮಾಚರಣೆಯ ಹೆಸರಿನಲ್ಲಿ ಬಿಜೆಪಿ ಮತ್ತು ಕೆಲವು ಬಲಪಂಥೀಯ ಸಂಘಟನೆಗಳು ಸಿಡಿ ಆಚರಣೆಯನ್ನು ಬೆಂಬಲಿಸುತ್ತಿವೆ ಮತ್ತು ಈಗಾಗಲೇ ನಿಂತಿರುವ ಕಡೆಗಳಲ್ಲೂ ಈ ಆಚರಣೆಯನ್ನು ಮತ್ತೆ ಆರಂಭಿಸಿವೆ. ಕೆಲವು ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಇವುಗಳನ್ನು ಅಮಾನವೀಯ ಎಂದು ಕರೆದು ಆಕ್ಷೇಪದ ಧ್ವನಿಯಲ್ಲಿ ವರದಿ ಮಾಡಿದ್ದರೆ, ಇನ್ನೂ ಕೆಲವು “ಭಕ್ತರು ಭಾವಪರವಶರಾಗಿ ಈ ಸಾಂಸ್ಕೃತಿಕ ಆಚರಣೆಯನ್ನು ಕಣ್ತುಂಬಿಕೊಂಡರು” ಇತ್ಯಾದಿಯಾಗಿ ಈ ಆಚರಣೆಯನ್ನು ವೈಭವೀಕರಿಸಿ ಅತಿರಂಜಿತವಾಗಿ ವರ್ಣಿಸಿವೆ. ಇದಕ್ಕೆ ಒಂದು ಸಾಕ್ಷ್ಯವಾಗಿ ಹೇಳಬೇಕೆಂದರೆ , ಈ ಆಚರಣೆಗೆ ಕಾನೂನು ಪ್ರಕಾರ ನಿಷೇಧವಿದ್ದರೂ, ದಾವಣಗೆರೆ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಮಾಯಮ್ಮ, ಮರಿಯಮ್ಮ ದೇವಿಯರ ಜೋಡಿ ಸಿಡಿ ಉತ್ಸವ ಕಳೆದ ಸಲ ಶಾಸಕ ಎಂ.ಪಿ. ರೇಣುಕಾಚಾರ್ಯ ಎದುರೇ ನಡೆದು ವಿವಾದಕ್ಕೆ ಕಾರಣವಾಗಿತ್ತು.

ಇಂತಾ ಪ್ರಕರಣಗಳಲ್ಲಿ ಮುಂದೆ ಯಾವ ಕ್ರಮ ಕೈಗೊಳ್ಳಲಾಯಿತು ಎಂಬ ಬಗ್ಗೆ ಯಾರೂ ನಿಗಾ ಇಟ್ಟಂತೆ ಅಥವಾ ಕಾಳಜಿ ವಹಿಸಿದಂತೆ ಕಾಣುವುದಿಲ್ಲ. ತೀರಾ ಹಿಂಸಾತ್ಮಕವಾದ ಕೊಕ್ಕೆ ಸಿಡಿಯ ವರದಿಗಳು ನೋಡಲು ಸಿಗದಿರುವುದೇ ಒಂದು ಸಮಾಧಾನ. ಸರಕಾರ ಸದ್ಯಕ್ಕೆ ಒಂದೋ ಹಿಂಸಾತ್ಮಕವಲ್ಲದ ಸರಳ, ಸಾಂಕೇತಿಕ ಆಚರಣೆಗೆ ಅವಕಾಶ ಮಾಡಿಕೊಡಬೇಕು; ಇಲ್ಲವೇ ಕಾನೂನು ಉಲ್ಲಂಘಿಸುವವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ತಾನೇ ಅನುಷ್ಟಾನಗೊಳಿಸಲು ಆಗದ, ಅಥವಾ ಅನುಷ್ಟಾನಗೊಳಿಸಲು ಮನಸ್ಸಿಲ್ಲದ ಕತ್ತೆ ಕಾನೂನು ತಂದಾದರೂ ಏನು ಪ್ರಯೋಜನ?

ಸ್ವಯಂ ಹಿಂಸೆ, ಬಾಯಿಗೆ ಬೀಗ
ಸ್ವಯಂ ಹಿಂಸೆಯ ಆಚರಣೆ ಬೇರೆಬೇರೆ ಕಡೆ ಬೇರೆಬೇರೆ ರೀತಿಯಲ್ಲಿ ಇವೆ. ಕಲಬುರ್ಗಿಯ ಬೂಪಾಲ ತ್ಯಾಗನೂರು, ಅಳಂದ ತಾಲೂಕಿನ ಹಡಗಲಿ, ಧಾರವಾಡ ಜಿಲ್ಲೆಯ ಹಡಗಲಿ ತಾಲೂಕಿನ ಕಮತಗಿ, ಬಳ್ಳಾರಿಯ ಹಂಪಿ ಮುಂತಾದ ಕಡೆಗಳಲ್ಲಿ ಮಾದಿಗ ಜನಾಂಗದವರು ಹರಕೆ ಹೊತ್ತು ಮೈಗೆ ಕೊಕ್ಕೆಗಳನ್ನು ಸಿಕ್ಕಿಸಿ ಸ್ವಯಂ ಹಿಂಸೆ ಅನುಭವಿಸುವುದು ಕಂಡುಬಂದಿತ್ತು. ಸ್ವಯಂ ಹಿಂಸೆಯು ಮುಸ್ಲಿಮರ ಮುಖ್ಯವಾಗಿ ಶಿಯಾ ಪಂಗಡದಲ್ಲಿಯೂ ಇದೆ. ಮೊಹರಂ ಸಮಯದಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕದ ಶಿಯಾ ಸಮುದಾಯದವರು ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗಳಾದ ಹಸನ್ ಮತ್ತು ಹುಸೇನ್ ಕಾದಾಡಿದ ಕರ್ಬಲಾ ಯುದ್ಧದ ನೆನಪಿನಲ್ಲಿ ನಡೆಯುವ ಮೆರವಣಿಗೆಯಲ್ಲಿ ಆವೇಶದಿಂದ ಕುಣಿಯುತ್ತಾ, ಕೊರಡೆ ಮತ್ತಿತರ ಆಯುಧಗಳಿಂದ ಮೈಗೆ ಹೊಡೆದುಕೊಂಡು ಸ್ವಯಂ ಗಾಯ ಮಾಡಿಕೊಳ್ಳುವುದು ನಡೆಯುತ್ತದೆ. ಇದು ಇಸ್ಲಾಮೇತರ ಆಚಾರ ಎಂದು ವಿರೋಧಿಸುವ ಪ್ರಬಲ ವರ್ಗವೊಂದು ಮುಸ್ಲಿಮರಲ್ಲೇ ಇದೆ.

ಇದಕ್ಕೆ ಕಲಶವಿಟ್ಟಂತೆ ಮಂಡ್ಯದ ಕೆಲವು ಕಡೆ ಬಾಯಿಗೆ ಬೀಗ ಎಂಬ ಆಚರಣೆಯೊಂದು ನಡೆಯುತ್ತಿತ್ತು. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಬಾಯಿಗೆ ಅಡ್ಡವಾಗಿ ಅಥವಾ ನಾಲಗೆಗೆ ಲಂಬವಾಗಿ ಸರಳುಗಳನ್ನು ಚುಚ್ಚಿಕೊಳ್ಳುತ್ತಾರೆ. ದಾಖಲಾತಿ ನಡೆದ ಸಮಯದಲ್ಲಿ ಒಂದು ಕಡೆ ಒಂಭತ್ತು ಪುರುಷರು ಮತ್ತು ಮೂವರು ಮಹಿಳೆಯರು ಈ ಆಚರಣೆಯಲ್ಲಿ ಭಾಗವಹಿಸಿದ್ದರು. ವಣ್ಣಿಯರ್ ಭಕ್ತ ಮಂಡಲಿ ಎಂಬ ಹೆಸರಿನಲ್ಲಿ ನಡೆದ ಈ ಆಚರಣೆಯಲ್ಲಿ ಒಬ್ಬರು ಮಹಿಳೆ 12 ಅಡಿ ಉದ್ದದ ಸರಳೊಂದನ್ನು ಬಾಯಿಗೆ ಅಡ್ಡಲಾಗಿ ಚುಚ್ಚಿಕೊಂಡಿದ್ದೇ ಅಲ್ಲದೇ, ಅದು ಸಾಲದು ಎಂಬಂತೆ, ಡಬ್ಬಣದ ಮೂಲಕ ಮೈಗೆ ನಿಂಬೆಹಣ್ಣುಗಳನ್ನೂ ಚುಚ್ಚಿಕೊಂಡಿದ್ದರು! ಈ ಚಿತ್ರವು ಕೆಲವು ಪತ್ರಿಕೆಗಳಲ್ಲಿಯೂ ಪ್ರಕಟವಾಗಿತ್ತು.

ಹರಕೆ ಹೊತ್ತು ಕಳವು ಮಾಡುವ ಒಂದು ಪದ್ಧತಿ ಉತ್ತರ ಕನ್ನಡದ ಒಂದು ದೇವಾಲಯದಲ್ಲಿ ನಡೆಯುತ್ತಿತ್ತು. ಅಲ್ಲಿ ದೇವರಿಗೆ ಬೇರೆಬೇರೆ ರೀತಿಯಲ್ಲಿ ಹರಕೆ ಹೊರುವ ಹಾಗೆ ಜನರು ಕಳ್ಳತನದ ಹರಕೆ ಹೊರುತ್ತಿದ್ದರು. ಹೀಗೆ ಕಳವು ಮಾಡಿದ ಸೊತ್ತನ್ನು ದೇವಾಲಯಕ್ಕೆ ಸಲ್ಲಿಸಬೇಕು ಎಂಬುದು ವಿಪರ್ಯಾಸ! ಸಿಕ್ಕಿಬಿದ್ದರೆ ಏಟು ತಿನ್ನಬೇಕಾದವರು ಒಬ್ಬರು, ಕಳ್ಳಮಾಲನ್ನು ಅನುಭವಿಸುವವರು ಬೇರೊಬ್ಬರು! ಇಂತಾ ಒಂದು ವಂಚಕ ಹರಕೆ ರೂಪಿಸಿದವರ ಚಾಲಾಕಿತನವನ್ನು ಮೆಚ್ಚಲೇಬೇಕು. ಹಾಗೆಂದು ಶಿವರಾತ್ರಿಯಂದು ಕಳವು ಮಾಡುವುದು ಕರಾವಳಿಯಲ್ಲಿ ಸಾಮಾನ್ಯವೇ ಆಗಿತ್ತು. ಶಿವರಾತ್ರಿಯಂದು ಜಾಗರಣೆ ಇರಬೇಕು. ರಾತ್ರಿ ಹೊತ್ತು ಕಳವು ಮಾಡುವವರೂ, ಕಾಯುವವರೂ ಜಾಗರಣೆ ಮಾಡಲೆಂದು ಈ ಪದ್ಧತಿ ತರಲಾಗಿದೆ ಎಂಬ ಸಮಜಾಯಿಶಿಯೂ ಇತ್ತು. ಸಾಮಾನ್ಯವಾಗಿ ಬೇರೆಯವರ ತರಕಾರಿ, ತೆಂಗಿನಕಾಯಿ ಕದ್ದು, ಬೇರೆಯವರ ಮನೆಯ, ವಿಶೇಷವಾಗಿ ಬಡವರ ಮನೆಯ ಮುಂದೆ ಇಡುವುದು, ಮನೆ ಮಾಡಿಗೆ ಕಲ್ಲೆಸೆಯುವುದು, ವಸ್ತುಗಳನ್ನು ಕದ್ದು ಎಲ್ಲೆಲ್ಲಿಯೋ ಇಡುವುದು ಇತ್ಯಾದಿ ಕಿಡಿಗೇಡಿ ಕೃತ್ಯಗಳು ಸಾಮಾನ್ಯವಾಗಿದ್ದವು, ಮನರಂಜಕವಾಗಿಯೂ ಇದ್ದವು. ಇದು ಅತಿರೇಕವಾಗಿ ಸಾರ್ವಜನಿಕ ರಸ್ತೆಗಳಿಗೆ ಕಲ್ಲು ಉರುಳಿಸಿ ತಡೆ ಮಾಡುವುದು, ಬೆಳೆಗಳನ್ನು ಹಾಳುಮಾಡುವುದು, ತಮಗಾಗದವರ ಮನೆ ಮುಂದೆ ಮಲವಿಸರ್ಜನೆ ಮಾಡುವುದು, ಲಾಭಕ್ಕೆಂದೇ ಕದಿಯುವುದು ಇವೆಲ್ಲ ಕೂಡಾ ಮಿತಿ ಮೀರಿ ನಡೆಯುತ್ತಿದ್ದವು. ರಾತ್ರಿಯಿಡೀ ಇಸ್ಪೀಟು ಭಜನೆ ಇರುತ್ತಿತ್ತು. ಇವೆಲ್ಲವೂ ಕಾಲಕ್ರಮೇಣ ಕಡಿಮೆಯಾಗಿ ಇಲ್ಲವೇ ಎನ್ನುವಷ್ಟು ಕಡಿಮೆಯಾಗಿವೆ.

ಆದರೆ, ಧರ್ಮದ ಹೆಸರಿನಲ್ಲಿ ನಡೆಯುವ ಇಂತಾ ಆಚರಣೆಗಳಲ್ಲಿ ಭಕ್ತಿಶ್ರದ್ಧೆಗಳು ಮಾಯವಾಗಿ ಮನರಂಜನೆಯೇ ಉದ್ದೇಶವಾಗಿದೆ, ಆಧ್ಯಾತ್ಮಿಕತೆ ಮಾಯವಾಗಿ ಕಾಟಾಚಾರಗಳಷ್ಟೇ ಉಳಿದಿವೆ ತಿರುಳು ಮಾಯವಾಗಿ, ಚಿಪ್ಪನ್ನೇ ಜಗಿಯಲಾಗುತ್ತಿದೆಎಂಬುದನ್ನು ಇದು ಸೂಚಿಸುತ್ತದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಇನ್ನೂ ಕೆಲವು ವಿಚಿತ್ರ ಆಚರಣೆಗಳನ್ನು ಮುಂದಿನ ಕಂತಿನಲ್ಲಿ ಚುಟುಕಾಗಿ ನೋಡಿ ಮುಗಿಸೋಣ.

ಆ ಮರ ಬಿಟ್ಟ ಕಾಯಿ ನಾನು
ಖ್ಯಾತ ಮಲಯಾಳಂ ಕವಿ ಸಚ್ಚಿದಾನಂದ ಪಿಳ್ಳೈ ಅವರ ಮೂಲ ಬರಹದ, ಕನ್ನಡದ ವೈಚಾರಿಕ ಸಾಕ್ಷಿಪ್ರಜ್ಞೆ ಪಿ ಲಂಕೇಶ್ ಅವರ ಅನುವಾದದಲ್ಲಿ

ನನ್ನ ಅಜ್ಜಿಗೆ ಹುಚ್ಚು ಹಿಡಿಯಿತು,
ಅವಳನ್ನು ಮೂಲೆಯಲ್ಲಿ ಮಲಗಿಸಿದರು,
ಅಲೇ ಮುದುಕಿ
ಸತ್ತುಹೋಯಿತು.
ಅವಳ ಮೇಲೆ ಹುಲ್ಲು,
ಮಣ್ಣು ಮುಚ್ಚಿದರು.
ಅಲ್ಲಿಂದ ಒಂದು ಕುಡಿ ಹೊರಟು
ಮರವಾಯಿತು.
ಆ ಮರ ಬಿಟ್ಟ
ಕಾಯಿ ನಾನು.

ಮಡಿವಂತ ಪ್ರಧಾನಿಯ ಬಗ್ಗೆ
ಬಟ್ರೋಲ್ಟ್ ಬ್ರೆಕ್ಟ್ ಅವರ ಮೂಲ ಬರಹದಲ್ಲಿ, ಕನ್ನಡ ಅನುವಾದ ಶಾ. ಬಾಲೂರಾವ್ ಅವರಿಂದ, ವಿಶ್ವ ಅನುವಾದ ದಿನದ ವಿಶೇಷವಾಗಿ

ಕೇಳಿದ್ದೇನೆ; ಆ ಪ್ರಧಾನಿ ಕುಡಿಯುವುದಿಲ್ಲವಂತೆ
ಮೀನು ಮಾಂಸ ತಿನ್ನುವುದಿಲ್ಲವಂತೆ, ಸಿಗರೇಟು – ಚುಟ್ಟ ಸೇದುವುದಿಲ್ಲವಂತೆ
ಅವನಿರುವುದು ಒಂದು ಸಾಧಾರಣ ಮನೆಯಲ್ಲಂತೆ.
ಮತ್ತೆ ಇದನ್ನೂ ಕೇಳಿದ್ದೇನೆ; ಆ ದೇಶದ ಬಡಜನ
ಹೊಟ್ಟೆಗಿಲ್ಲದೆ ಪಾಡುಪಡುತ್ತಿದ್ದಾರಂತೆ.

ಅದರ ಬದಲು ಹೀಗೆ ಕೇಳುವುದು ಎಷ್ಟು ಮೇಲಾಗಿರುತ್ತಿತ್ತು:
ಪ್ರಧಾನಿ ಕ್ಯಾಬಿನೆಟ್ ಮೀಟಿಂಗ್’ಗಳಲ್ಲೂ ಕುಡಿದು ಕೂತಿರುತ್ತಾನೆ
ತಜ್ಞರಲ್ಲದ ಕೆಲಮಂದಿ ಕಾಯಿದೆ ಕಾನೂನು ಬದಲಾಯಿಸುತ್ತಿರುತ್ತಾರೆ
ಅವನು ಅವರ ಪೈಪಿಂದೇಳುವ ಹೊಗೆಯನ್ನೆ ನೋಡುತ್ತಿರುತ್ತಾನೆ
ಆ ದೇಶದಲ್ಲಿ ಬಡಜನರೇ ಇಲ್ಲ!