ನಾಡು-ನುಡಿ – Peepal Media

“ಹಳಗನ್ನಡ ಪಠ್ಯಬೋಧನೆ ಬೇರಿಂದ ಅರಳುವ ಹೂವಿನಂತೆ”: ಹಿರಿಯ ವಿದ್ವಾಂಸ ಪ್ರೊ.ಎನ್.ಬೋರಲಿಂಗಯ್ಯ
ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ರಸಾಸ್ವಾದನೆ ಆಗುವಂತೆ ಬೋಧಿಸಿದರೆ ಬೇರುಗಳಿಂದ ಅರಳುವ ಹೂವಿನಂತೆ ಸುಗಂಧಭರಿತವಾಗಿರುತ್ತದೆ. ಹಾಗೆ ಮಾಡದೆ ಹಳಗನ್ನಡವನ್ನು ದೂರೀಕರಿಸಿದರೆ ಬೇರುಗಳನ್ನು ಕತ್ತರಿಸಿಕೊಂಡ ಮರಗಳಾಗಿ ಒಣಗಿಹೋಗುತ್ತೇವೆ” ಎಂದು ಹಿರಿಯ ವಿದ್ವಾಂಸರೂ ದಾರಿದೀಪ ಶಿಕ್ಷಣ ಕೇಂದ್ರದ ಸಂಸ್ಥಾಪಕರೂ ಆದ ಪ್ರೊ.ಎನ್.ಬೋರಲಿಂಗಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಅಂತರ್ಜಾಲದ ಮೂಲಕ ಆಯೋಜಿಸಲಾಗಿದ್ದ “ಶಾಸ್ತ್ರೀಯ ಕನ್ನಡ ಪಠ್ಯಗಳ ವಾಚನ-ವ್ಯಾಖ್ಯಾನ-ಅನುಸಂಧಾನ” ಕುರಿತಾದ ೫ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪೂರ್ವದ ಸಾಂಸ್ಕೃತಿಕಹೊನ್ನನ್ನು ತಮ್ಮ ಅಪಾರವಾದ ಪ್ರತಿಭೆಯ ಮೂಲಕ ಕಾಲಕ್ಕೆ ತಕ್ಕಂತೆ ಅನ್ವಯಿಸಿಕೊಂಡ ಪಂಪ, ಕುಮಾರವ್ಯಾಸ ಮೊದಲಾದವರು ಶಾಸ್ತ್ರೀಯ ಕನ್ನಡ ಪರಂಪರೆಯಲ್ಲಿ  ಮೇರುಕವಿಗಳೆನಿಸಿದ್ದಾರೆ. ಇಂಥವರಿಂದ ಸರ್ವಸ್ವವನ್ನೂ ಸ್ವೀಕರಿಸಿದ ಕುವೆಂಪು ಅಂಥವರು ಆಧುನಿಕ ಕನ್ನಡ ಸಂದರ್ಭದಲ್ಲಿ ಮಹಾಕವಿಯಾದರು. ಕನ್ನಡ ನೆಲದಿಂದ ಮಾತ್ರವಲ್ಲದೇ ಭಾರತೀಯ ಸಂಸ್ಕೃತಿಯಿಂದ ಹಾಗೂ ವಿಶ್ವಮಟ್ಟದ ಸಾಹಿತ್ಯ-ಸಂಸ್ಕೃತಿಗಳಿAದ ಮಾಲ್ಯಯುತವಾದುದನ್ನು ತಮ್ಮದಾಗಿಸಿಕೊಂಡ ಕುವೆಂಪು ಅವರು ತಮ್ಮ ಎಲ್ಲಾ ಸಾಹಿತ್ಯಕೃತಿಗಳಲ್ಲೂ ಅದನ್ನು ಎರಕಹೊಯ್ದಿದ್ದಾರೆ ಎಂದು ತಿಳಿಸಿದರು.

ಕನ್ನಡ ಬೋಧಕರು ಹಳಗನ್ನಡ ಪಠ್ಯಗಳನ್ನು ಬೋಧಿಸಲು ಸಮರ್ಥವಾಗಿ ಸಿದ್ಧರಾಗಬೇಕು ಮತ್ತು ತರಗತಿಗಳಲ್ಲಿ ರಸವತ್ತಾಗಿ ಬೋಧಿಸುವ ಮೂಲಕ ಕನ್ನಡ ನಾಡಿನ ಮಕ್ಕಳ ಹೃದಯಗಳಲ್ಲಿ ರತ್ನಗಳಂತೆ ಹೊಳೆಯಿಸಬೇಕು, ಸುಸಂಸ್ಕೃತರನ್ನಾಗಿ ಮಾಡಬೇಕು. ಹಾಗೆ ಕನ್ನಡ ವಿವೇಕ ಪರಂಪರೆಯ ಬೆಳಗನ್ನು ಬೋಧಿಸುವವರೇ ನಿಜವಾದ ಮನುಷ್ಯರಾಗುತ್ತಾರೆ. ಇಂದು ಮಹಿಳೆಯರನ್ನು ಬೆತ್ತಲುಗೊಳಿಸುವ, ಅಮಾನುಷವಾಗಿ ಅತ್ಯಾಚಾರ ಮಾಡುವ ವಿಕೃತಿಗಳು ಮರೆಯುತ್ತಿರುವಾಗ ನಮ್ಮ ಶಾಸ್ತ್ರೀಯ ಕನ್ನಡದ ಪಠ್ಯಗಳಲ್ಲಿರುವ ವಿವೇಕದ ಮದ್ದನ್ನು ತಂದುಕೊಳ್ಳಬೇಕಿದೆ ಮತ್ತು ಮನುಷ್ಯರ ಮತಿಗೆ ನೀಡಿ ವಿವೇಕವನ್ನು ಬೆಳಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಸಹ ಕುಲಪತಿಗಳಾದ ಡಾ.ಫಾ.ಲಿಜೋ ಪಿ. ಥಾಮಸ್ ಅವರು ಆಶಯ ನುಡಿಗಳನ್ನಾಡಿದರು. ಕರಾಮುವಿ ಕನ್ನಡ ಪ್ರಾಧ್ಯಾಪಕರೂ ಪ್ರಸಿದ್ಧ ಗಮಕಿಗಳೂ ಆದ ಪ್ರೊ.ಜ್ಯೋತಿಶಂಕರ್ ಅವರು ಕನ್ನಡ ಶಾಸನ, ಪಂಪಭಾರತ, ಕುಮಾರವ್ಯಾಸಭಾರತ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಹರಿಹರ ವಿರಚಿತ ಕುಂಬಾರ ಗುಂಡಯ್ಯನ ರಗಳೆ, ಮುದ್ದಣನ ರಾಮಾಶ್ವಮೇಧ, ರತ್ನಾಕರವರ್ಣಿಯ ಭರತೇಶ ವೈಭವ ಕಾವ್ಯಗಳಿಂದ ಆಯ್ದ ಪದ್ಯಭಾಗಗಳನ್ನು ಗಮಕದಲ್ಲಿ ವಾಚನ ಮಾಡಿದರು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಪ್ರೊ.ನೀಲಗಿರಿ ಎಂ.ತಳವಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರಾದ ಡಾ.ಸೈಯದ್ ಮುಯಿನ್ ನಿರ್ವಹಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ರವಿಶಂಕರ್ ಎ.ಕೆ., ಡಾ.ಭೈರಪ್ಪ ಎಂ., ಡಾ.ಕಿರಣಕುಮಾರ್ ಹೆಚ್.ಜಿ. ಹಾಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ-ಸಹ ಸಂಶೋಧಕರು ಉಪಸ್ಥಿತರಿದ್ದರು. ೨೫೦ಕ್ಕೂ ಹೆಚ್ಚು ಕನ್ನಡ ಅಧ್ಯಾಪಕರು ಹಾಗೂ ಸಂಶೋಧಕರು ಭಾಗವಹಿಸಿದ್ದರು.

ಕರ್ಣಾಟ ಬಲ 2 – “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” : ಕೋಟಿಗೊಬ್ಬನ ನೆನಪಿನಲ್ಲಿ
“ನಾಗರಿಕತೆ ನಶಿಸುತ್ತಿದೆ…
ದಯಮಾಡಿ ಸುಧಾರಿಸಿ..
ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ಎಂದೆಂದಿಗೂ ಶಾಶ್ವತ…” ಯುವ ಬರಹಗಾರ ಲಿಖಿತ್ ಹೊನ್ನಾಪುರ ಅವರ ಬರಹದಲ್ಲಿ

“ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ, ಕನ್ನಡಿಗರೆಲ್ಲ ಕನ್ನಡ ಮಾತನಾಡಿದರೆ ಸಾಕು” ಎಂದವರು ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ನಮ್ಮ ನಿಮ್ಮೆಲ್ಲರ ಅಭಿನಯ ಭಾರ್ಗವ ಸಾಹಸ ಸಿಂಹ ಡಾ. ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮಾಯವಾಗದ ಹೆಸರು, ಕೋಟಿಗೊಬ್ಬ, ಸಾಂಸ್ಕೃತಿಕ ರಾಯಭಾರಿ, ಜನಮನಗಳ ತಾಳಿಗೆ ತಕ್ಕಂತೆ ಬದುಕಿದ ಮತ್ತು ಬಾಳಿದ ನಿಜವಾದ ಜನನಟ. ತಮ್ಮ ಮಾತುಗಳಲ್ಲಿ, ನಡೆನುಡಿಯಲ್ಲಿ, ಹೃದಯದಲ್ಲಿ ಕನ್ನಡದ ಬಣ್ಣ ತುಂಬಿಕೊಂಡಿದ್ದ ಅವರು “ಕನ್ನಡದ ಉಳಿವಿಗೆ ಹೋರಾಟ ಬೇಕಿಲ್ಲ, ಎಲ್ಲ ಕನ್ನಡಿಗರೂ ಕನ್ನಡ ಮಾತನಾಡಿದರೆ ಸಾಕು” ಎಂದು ಹೇಳಿದಾಗ ಅದು ಕೇವಲ ಮಾತಲ್ಲ, ಅದು ಅವರ ಜೀವನದ ತತ್ವಶಾಸ್ತ್ರ.

2009ರ ಡಿಸೆಂಬರ್ 30ರಂದು ಅವರ ಆಕಸ್ಮಿಕ ನಿಧನವು ಕನ್ನಡ ಚಿತ್ರರಂಗವನ್ನು ಮಾತ್ರವಲ್ಲ, ಕೋಟಿಗೊಬ್ಬನ ಕೋಟ್ಯಂತರ ಅಭಿಮಾನಿಗಳ ಹೃದಯವನ್ನೇ ಬಿಗಿದಂತೆ ಮಾಡಿತು. ಆ ದುಃಖದ ದಿನದಿಂದಲೇ ಅವರ ಅಭಿಮಾನಿಗಳು ಒಂದು ಕನಸು ಕಂಡರು – ತಮ್ಮ ಹೀರೋನಿಗೆ, ತಮ್ಮ ದೇವನಿಗೆ ಒಂದು ಸ್ಮಾರಕ, ಒಂದು ಪುಣ್ಯಭೂಮಿ ನಿರ್ಮಿಸಬೇಕು ಎಂದು. ವರ್ಷಗಳವರೆಗೆ ಅವರು ಹೋರಾಡಿದರು, ಮೌನ ಪ್ರತಿಭಟನೆಗಳಿಂದ ಹಿಡಿದು, ಭಾರೀ ರ‍್ಯಾಲಿಗಳವರೆಗೆ ಎಲ್ಲವನ್ನೂ ಮಾಡಿದರು.

ಬೆಂಗಳೂರಿನ ‘ಅಭಿಮಾನ ಸ್ಟುಡಿಯೋ’ ಎಂಬ ನೆಲವು ಅಭಿಮಾನಿಗಳ ತೀರ್ಥಕ್ಷೇತ್ರವಾಗಿತ್ತು; ಅಲ್ಲಿ ಸಾವಿರಾರು ಮಂದಿ ವರ್ಷಪೂರ್ತಿ ಬಂದು, ಪ್ರಾರ್ಥನೆ ಮಾಡಿ, ಪುಷ್ಪಾರ್ಚನೆ ಮಾಡಿ, ಜನ್ಮದಿನ, ಪುಣ್ಯತಿಥಿಗಳನ್ನು ಆಚರಿಸುತ್ತಿದ್ದರು. ಆದರೆ, ಹನ್ನೊಂದು ವರ್ಷಗಳ ಈ ಭಾವನಾತ್ಮಕ ಹೋರಾಟಕ್ಕೆ ಒಂದೇ ರಾತ್ರಿ ಕತ್ತರಿ ಬಿತ್ತು. ಮಧ್ಯರಾತ್ರಿಯ ಕತ್ತಲಲ್ಲಿ, ಯಾರಿಗೂ ತಿಳಿಯದಂತೆ, ಸರ್ಕಾರ ಮತ್ತು ರಾಜಕೀಯದ ಬೆಂಬಲದೊಂದಿಗೆ, ಕೋಟಿಗೊಬ್ಬನ ಪುಣ್ಯಭೂಮಿ ನೆಲಸಮ ಮಾಡಲಾಯಿತು.

ಅಭಿಮಾನಿಗಳು ಬೆಳಗ್ಗೆ ಎದ್ದಾಗ ತಮ್ಮ ಹೀರೋನ ನೆಲವನ್ನು ಕೇವಲ ಮಣ್ಣು, ಧೂಳು, ಬಿದ್ದ ಗೇಟ್‌ಗಳ ಅವಶೇಷಗಳಾಗಿ ನೋಡಬೇಕಾಯಿತು. ಹತ್ತು ಗುಂಟೆಯ ಜಾಗವನ್ನೂ ಕೊಡಲು ಹೆದಿದ ಸರ್ಕಾರದ ಮನಸ್ಥಿತಿ ಕನ್ನಡಿಗರಿಗೆ ನಾಚಿಕೆ ತಂದಿತು. ಹೈಕೋರ್ಟ್ ಆದೇಶದಲ್ಲಿ “ಅಭಿಮಾನಿಗಳಿಗೆ ಯಾವುದೇ ಹಕ್ಕಿಲ್ಲ, ಕುಟುಂಬ ಅಥವಾ ಸರ್ಕಾರವಷ್ಟೇ ನಿರ್ಧಾರ ಮಾಡಬಹುದು” ಎಂದು ತೀರ್ಪು ಬಂದಿತ್ತು.

ಕುಟುಂಬದವರು – “ಮೈಸೂರಿನಲ್ಲಿ ಸ್ಮಾರಕವಿದೆ, ಇಲ್ಲಿ ಬೇಡ” ಎಂದು ಹಿಂದೆ ಸರಿದರು. ಹೋರಾಟಗಾರ ಅಭಿಮಾನಿಗಳು ಡಿಕೆ ಶಿವಕುಮಾರ್, ಶಿವರಾಜ್ ತಂಗಡಗಿ ಮುಂತಾದ ಮಂತ್ರಿಗಳಿಗೆ ಮನವಿ ಸಲ್ಲಿಸಿದರು, ಅವರು “ಪುಣ್ಯಭೂಮಿಯನ್ನು ಉಳಿಸುತ್ತೇವೆ” ಎಂದು ಭರವಸೆ ಕೊಟ್ಟರೂ ಅದು ಕಾಗದದಲ್ಲೇ ಉಳಿಯಿತು. ಅಂತಿಮವಾಗಿ, ರಾಜಕೀಯ-ಭೂಮಿಯ ವ್ಯವಹಾರದ ಕೆಟ್ಟ ಒಪ್ಪಂದದಲ್ಲಿ, ಕೋಟಿಗೊಬ್ಬನ ನೆನಪುಗಳ ನೆಲವನ್ನು ಮಾಲ್ ನಿರ್ಮಿಸಲು ಖಾಸಗಿ ಕೈಗಳಿಗೆ ಒಪ್ಪಿಸಲಾಯಿತು. ಇದು ಕೇವಲ ಒಂದು ಜಾಗದ ನಷ್ಟವಲ್ಲ, ಇದು ಲಕ್ಷಾಂತರ ಅಭಿಮಾನಿಗಳ ಭಾವನೆಗಳ ಕೊಲೆ.

ನಟ ದರ್ಶನ್ ತೂಗುದೀಪ ತಮ್ಮ ಕೋಪ ಮತ್ತು ನೋವನ್ನು ಮುಚ್ಚಿಡದೆ, “ನಾನು ಕಿಚ್ಚ ಆಗಿ ಅಲ್ಲ, ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ. ಸರ್ಕಾರ ಮಧ್ಯಪ್ರವೇಶ ಮಾಡಿದರೆ ನಾವು ಲಕ್ಷಾಂತರ ಅಭಿಮಾನಿಗಳು ಹಣ ಕೊಟ್ಟು, ಅರ್ಧ ಎಕರೆ ಜಾಗವನ್ನಾದರೂ ಉಳಿಸಿ, ಮತ್ತೆ ಸ್ಮಾರಕ ನಿರ್ಮಿಸೋಣ” ಎಂದು ಘೋಷಿಸಿದರು. ವಿಷ್ಣುವರ್ಧನ್ ಕೇವಲ ನಟನಲ್ಲ – ಅವರು ಕನ್ನಡದ ಹೆಮ್ಮೆ, ಅನೇಕ ದಾನ ಧರ್ಮಗಳ ಜೀವಂತ ರೂಪಕ. ತಮ್ಮ ಜೀವನದಲ್ಲಿ ಅನೇಕ ಮಂದಿಗೆ ನೆರವಾದ, ಸಹಾಯ ಮಾಡಿದ, ಜನರ ಮನದಲ್ಲಿ ಶಾಶ್ವತವಾಗಿ ನೆಲಸಿದ ವ್ಯಕ್ತಿ.

ಅವರ ಸಿನಿಮಾಗಳು – ನಾಗರಹಾವು, ಮುತ್ತಿನ ಹಾರ, ಯಜಮಾನ, ಸುವರ್ಣಮೃಗ, ಸ್ಪೂರ್ತಿ, ಸಂತೋಷ, ಹೋಳಿಗೇ ತಾಯಿ, ಸರ್ಕಾರಿ ಕಚೇರಿ, ಅಪೂರ್ವ ಸಂಗಮ – ಇವು ಕೇವಲ ಮನರಂಜನೆ ಅಲ್ಲ, ಜೀವನ ಪಾಠ, ಪ್ರೇರಣೆ, ಭಾವನೆಗಳ ಹೊತ್ತೊಯ್ದ ಕಲೆ. ಅವರು ಪರದೆ ಮೇಲೆ ಕೇವಲ ಹೀರೋ ಆಗಿರಲಿಲ್ಲ, ಬದುಕಿನಲ್ಲಿ ಸಹ ನಿಜವಾದ ಹೀರೋ. ತಮ್ಮ ಸಹನಟರು, ಸಹೋದ್ಯೋಗಿಗಳು, ಅಭಿಮಾನಿಗಳ ಮೇಲೆ ತೋರಿದ ಪ್ರೀತಿ, ಸರಳತೆ, ಕೃತಜ್ಞತೆ ಅವರ ಅಸ್ತಿತ್ವದ ಬೇರೂರಿದ ಗುಣಗಳು.

ಇಂತಹ ವ್ಯಕ್ತಿಯ ಸಮಾಧಿ, ಪುಣ್ಯಭೂಮಿಯನ್ನು ಕೇವಲ ವ್ಯವಹಾರದ ಹೆಸರಿನಲ್ಲಿ, ಹಣದ ದಾಹಕ್ಕಾಗಿ ನೆಲಸಮ ಮಾಡುವುದು ಮಾನವೀಯತೆಯ ಅವಮಾನ. ಅಭಿಮಾನ ಸ್ಟುಡಿಯೋ ಕೇವಲ ಜಾಗವಲ್ಲ – ಅದು ಕೋಟಿಗೊಬ್ಬನನ್ನು ದೇವರೆಂದು ಆರಾಧಿಸಿದ, ಅವರ ನೆನಪಿನಲ್ಲಿ ಬದುಕಿದ ಜನರ ತೀರ್ಥ. ಅಲ್ಲಿ ಪ್ರಾರ್ಥನೆ, ಗೌರವ, ನೆನಪಿನ ಸಂಕೇತವಿತ್ತು. ಇಂದು ಅದು ಅಳಿದು ಹೋದರೆ – ಅದು ಕೇವಲ ಭೌಗೋಳಿಕ ನಷ್ಟವಲ್ಲ, ಅದು ಕನ್ನಡಿಗರ ಮನದಾಳಕ್ಕೆ ಬಿದ್ದ ದೊಡ್ಡ ಪೆಟ್ಟು.

ವಿಷ್ಣುವರ್ಧನ್ ತಮ್ಮ ಜೀವನದ ಅಂತ್ಯದ ಹಂತದಲ್ಲಿ, “ನಾನು ಪಂಚಭೂತಗಳಲ್ಲಿ ಕರಗಿಬಿಡಬೇಕು, ಕಟ್ಟಡಗಳಲ್ಲಿ ಬಂಧಿಯಾಗಬಾರದು” ಎಂದು ಹೇಳಿದ್ದರು. ಅವರು ಪ್ರಕೃತಿಯೊಂದಿಗೆ ಒಂದಾಗಬೇಕೆಂಬುದು ಅವರ ಆಶಯ. ಆದರೆ ಅಭಿಮಾನಿಗಳಿಗೆ, ಅವರನ್ನು ನೆನೆಸಿಕೊಳ್ಳಲು, ಗೌರವಿಸಲು, ಪ್ರಾರ್ಥಿಸಲು ಒಂದು ಸ್ಥಳದ ಅಗತ್ಯವಿದೆ. “ಪೋಸ್ಟ್ ಹಾಕಲು ಪೋಸ್ಟ್ ಬಾಕ್ಸ್ ಬೇಕು” ಎಂಬಂತೆ, ನೆನಪುಗಳಿಗೆ ಒಂದು ಸ್ಮಾರಕ ಬೇಕು.

ವಿಷ್ಣುವರ್ಧನ್ ಬದುಕಿಲ್ಲ, ಆದರೆ ಅವರ ಆತ್ಮ ಇನ್ನೂ ಕೋಟಿಗೊಬ್ಬ ಅಭಿಮಾನಿಗಳ ಕಣ್ಣೀರು ನೋಡುತ್ತಿದೆ. ಸರ್ಕಾರ, ನ್ಯಾಯಾಲಯ, ಮತ್ತು ಆ ಭೂಮಿ ಖರೀದಿದಾರರು – ನಿಮ್ಮ ಹೃದಯದಲ್ಲಿ ಸ್ವಲ್ಪ ಮಾನವೀಯತೆ ಇದ್ದರೆ, ಆ ಪುಣ್ಯಭೂಮಿಯನ್ನು ಮತ್ತೆ ಅಭಿಮಾನಿಗಳಿಗೆ ಹಿಂತಿರುಗಿಸಿ. ಹಣ ನಮಗೆ ಮುಖ್ಯವಲ್ಲ, ಗೌರವ ಮುಖ್ಯ. ಅಗತ್ಯವಿದ್ದರೆ ಕೋಟ್ಯಂತರ ಅಭಿಮಾನಿಗಳು ಹಣ ಹಾಕಲು ಸಿದ್ಧರಿದ್ದಾರೆ. ಇದು ಕೇವಲ ಒಬ್ಬ ನಟನ ವಿಷಯವಲ್ಲ, ಇದು ಕನ್ನಡ ಸಂಸ್ಕೃತಿ, ಕನ್ನಡದ ಗೌರವದ ವಿಷಯ.

ನಾವು ಇಂದು ಮೌನವಾಗಿದ್ದರೆ, ನಾಳೆ ನಮ್ಮ ಇತಿಹಾಸ, ನಮ್ಮ ನೆನಪು, ನಮ್ಮ ಹೀರೋಗಳೆಲ್ಲ ಭೂಮಿಯ ವ್ಯವಹಾರದಲ್ಲಿ ಕಳೆದು ಹೋಗುತ್ತಾರೆ. ಸಾಹಸಸಿಂಹ ನಮ್ಮ ಹೃದಯಗಳಲ್ಲಿ ಶಾಶ್ವತ – ಆದರೆ ಅವರ ನೆನಪುಗಳಿಗೆ ದ್ರೋಹ ಮಾಡಿದವರಿಗೆ ಇತಿಹಾಸವೇ ಕ್ಷಮಿಸುವುದಿಲ್ಲ. ಹೋರಾಟ ನಿಲ್ಲಬಾರದು, ಪ್ರೀತಿ ಕಡಿಮೆಯಾಗಬಾರದು, ಗೌರವ ತಗ್ಗಬಾರದು. ಕೋಟಿಗೊಬ್ಬನು ನಮ್ಮ ಹೃದಯದ ಎದೆಯಲ್ಲಿ ಬಡಿದುಕೊಂಡು ಜೀವಿಸುತ್ತಾನೆ, ನಮ್ಮ ಉಸಿರಿನ ಪ್ರತಿಯೊಂದು ಹೊಕ್ಕಳಲ್ಲೂ ಓಡಾಡುತ್ತಾನೆ.

ಅವರ ನಗು, ಅವರ ಶೈಲಿ, ಅವರ ಧ್ವನಿ, ಅವರ ಪಾತ್ರಗಳು – ಇವುಗಳನ್ನು ನೆನೆದು ಕಣ್ಣೀರು ಹಾಕುವ ಪ್ರತಿ ಅಭಿಮಾನಿಗೂ ಆ ಪುಣ್ಯಭೂಮಿ ಹಕ್ಕು. ಇದು ನಮ್ಮ ಹಕ್ಕಿನ ಹೋರಾಟ, ನಮ್ಮ ಪ್ರೀತಿಯ ಹೋರಾಟ, ನಮ್ಮ ನೆನಪುಗಳ ಹೋರಾಟ. ನೆಲಸಮ ಮಾಡಿದವರು ಒಂದೇ ರಾತ್ರಿ ಬಂದು ಹೋಗಬಹುದು, ಆದರೆ ಕೋಟಿಗೊಬ್ಬನ ನೆನಪುಗಳನ್ನು ಮಣ್ಣಿನಲ್ಲಿ ಹೂಳಲು ಯಾರಿಗೂ ಸಾಧ್ಯವಿಲ್ಲ. ನಮ್ಮ ಹೃದಯವೇ ಅವರ ನಿಜವಾದ ಸ್ಮಾರಕ, ಆದರೆ, ಗೌರವ ಸಲ್ಲಿಸಲು ಒಂದು ಸ್ಥಳ ಬೇಕು. ಆ ಸ್ಥಳವನ್ನೇ ಕಿತ್ತುಕೊಂಡ ಈ ವ್ಯವಸ್ಥೆಗೆ ದಿಕ್ಕಾರ, ಹಣದ ದಾಹಕ್ಕೆ ಶಾಪ, ಮತ್ತು ಕೋಟಿಗೊಬ್ಬನ ನೆನಪು ಉಳಿಸುವ ಹೋರಾಟಕ್ಕೆ ಜಯವಾಗಲಿ.

ಈ ಹೋರಾಟ ನಮ್ಮದು, ಇದು ಮುಂದುವರಿಯುತ್ತದೆ, ನಮ್ಮ ಉಸಿರಿನ ಕೊನೆಯವರೆಗೂ. ಸಾಹಸಸಿಂಹ ಡಾ. ವಿಷ್ಣುವರ್ಧನ್ – ಅವರು ಹೋಗಿರಬಹುದು, ಆದರೆ ಕೋಟಿಗೊಬ್ಬನ ಪ್ರೀತಿ, ಗೌರವ, ನೆನಪು – ಎಂದೆಂದಿಗೂ ಅಮರ.

ಚನ್ನರಾಯಪಟ್ಟಣ ಭೂ ವಿವಾದ : ನೆಲ ಜನ ಸಂಸ್ಕೃತಿ ಉಳಿಸುವ ಹೋರಾಟವಿದು : ಇಂದೂಧರ ಹೊನ್ನಾಪುರ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತ ಹೋರಾಟದಲ್ಲ ಚಿಂತಕರಾದ ಇಂದೂಧರ ಹೊನ್ನಾಪುರ ಅವರು ಸರ್ಕಾರಕ್ಕೆ ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಕೊಡಿ ಎಂದು ಆಗ್ರಹಿಸಿದರು. ಹೋರಾಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಾಡಿನ ಭವಿಷ್ಯ ಕಟ್ಟಿಕೊಡುವ ರೈತರಪರ ಹೋರಾಟ ನಡೀತಿದೆ. ಈ ಸಮಸ್ಯೆ ಹುಟ್ಟುಹಾಕಿರುವ ಸರ್ಕಾರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಸಮಸ್ಯೆಯನ್ನ ಹೆಚ್ಚು ಮಾಡ್ತಿದ್ದಾರೆ. ಇವತ್ತು ರೈತರ ವಿರುದ್ಧ ನಿಂತಿರುವ ಅದೇ ಸಿದ್ದರಾಮಯ್ಯ ಅವರು ಅವತ್ತು ರೈತರ ಪರ ಮಾತಾಡಿದ್ರು. ಪದೇ ಪದೇ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೀನಿ ಅಂತಾ ಹೇಳ್ತಿದ್ದೀರಿ, ಈ ಮಾತನ್ನು ಉಳಿಸಿಕೊಳ್ಳಿ ಕಾರ್ಪೊರೇಟ್ ಗಳ ಪರ ನಿಂತು, ಸಾವಿರಾರು ಎಕರೆ ರೈತ ಭೂಮಿಯನ್ನ ಲಾಭಕೋರರಿಗೆ ಕೊಡಬೇಡಿ. ನೀವು ಜನಪರವಾಗಿಯೇ ಇರಿ ಎಂದು ಆಗ್ರಹಿಸಿದ್ದಾರೆ.

“ಈ ಕಾರ್ಪೊರೇಟ್ ಸೆಕ್ಟರ್ ಎಲ್ಲಾ ನೊಂದವರನ್ನ ಬಳಸಿಕೊಳ್ತಿದೆ. ಅಭಿವೃದ್ಧಿ ಅಂದ್ರೆ ಬರೀ ಕಾರ್ಖಾನೆಗಳನ್ನ ಕಟ್ಟೊದಲ್ಲ, ಎಲ್ಲ ಜನರ ನೆಮ್ಮದಿ..ಎಲ್ಲರ ಜೊತೆ ನ್ಯಾಯಯುತವಾಗಿ ನಡೆದುಕೊಳ್ಬೇಕು. ಅದು ಬಿಟ್ಟು ಸರ್ಕಾರ ಯಾಕೆ ಈ ದುಷ್ಟಕೂಟದ ಭಾಗವಾಗುತ್ತಿದೆ ಎಂದು ರೈತರ ಪರವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

“ಎಂ.ಬಿ ಪಾಟೀಲ್ ಗೆ ಹೇಳ್ತಿದ್ದಾರೆ ಕಾರ್ಪೊರೇಟ್ ಕಂಪನಿಗಳು ಒಳ್ಳೆ ಭೂಮಿಯನ್ನ ಕೇಳ್ತಾರೆ. ಅವರಿಗೆ ಅವರು ಕೇಳಿದ ಭೂಮಿ ಕೊಡಬೇಕು ಅಂತಾ ಅವರಿಗೆ ನಾನು ಕೇಳ್ತೀನಿ, ನಾಳೆ ಕಾರ್ಪೊರೇಟ್ ಗಳು ವಿಧಾನಸೌಧ ಕೇಳಿದ್ರೆ ಕೊಡ್ತೀರಾ,  ಯಾಕೆ ಮೂರ್ಖ ಹೇಳಿಕೆಗಳನ್ನ ಕೊಡ್ತಿದ್ದೀರಿ. ಇವತ್ತು ನೀವು ದುಷ್ಟಕೂಟದ ಭಾಗವಾಗಿ, ಕಾರ್ಪೊರೇಟ್ ಕಳ್ಳರ ಜೊತೆ ನಿಂತಿದ್ದೀರಾ..ನೀವು ನಿಜಕ್ಕೂ ಹೊಟ್ಟೆಗೆ ಅನ್ನ ತಿಂತೀರಾ” ಎಂದು ಖಾರವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಮ್ಮನ್ನ ಉಳ್ಳವರ ಮನೆಗೆ ಜೀತಗಾರರನ್ನಾಗಿಸಬೇಡಿ, ಅವರ ಬಾಗಿಲು ಕಾಯುವ ಹಾಳುಗಳನ್ನಾಗಿಸಬೇಡಿ. ನಿಮಗೆ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ರೆ ಇದನ್ನ ಕೈ ಬಿಡಿ. ಅಭಿವೃದ್ಧಿ ಅಂದ್ರೆ ಎಲ್ಲಾ ಜನರ ಪರವಾಗಿರೋದು, ಕಾರ್ಖಾನೆಗಳ ಮಾಲೀಕರು ಯಾರಿಗೊ ಒಪ್ಪತ್ತಿನ ಅನ್ನ ಹಾಕಿದ್ದನ್ನ ನೋಡಿಲ್ಲ, ನೀವು ಈ ದುಷ್ಟಕೂಟದ ಭಾಗ ಆಗ್ಬೇಡಿ. ಸಿದ್ದರಾಮಯ್ಯ ಅವರೇ ನೀವೆಲ್ಲರು ವಿವೇಚನೆ ಇರೋರು ಅಂತಾ ನಾವು ನಂಬಿದ್ದೇವೆ..ನೀವು ಎಲ್ಲರ ಒಳಿತು. ಈ ನೆಲ, ಜಲವನ್ನ ಉಳಿಸೋದು ಅನಿವಾರ್ಯ. ನಿಮಗೆ ಒತ್ತಡ ಇದೆ ಅಂತಾ ಗೊತ್ತು, ನೀವು ನಿಮ್ಮ ಬದ್ಧತೆಯನ್ನು ಈ ಮೂಲಕ ತೋರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಿದ್ದಾರೆ.

ಈ ಹೋರಾಟದ ಮೂಲಕ ನಾವು ಒಂದು ಎಚ್ಚರಿಕೆ ನೀಡುತ್ತಿದ್ದೇವೆ. ಎಲ್ಲಾ ಚಳವಳಿಗಳಿಗೂ ಪುನಃಚ್ಛೇತನ ಆಗುವಂತ ಹೋರಾಟಗಳ ಮೊಳಕೆ ಇವತ್ತು ಇಲ್ಲಿ ಚಿಗುರೊಡೆಯುತ್ತಿದೆ. ನಿಮ್ಮೆಲ್ಲರನ್ನು ಕಿತ್ತು ಎಸೆಯುವ ಹೋರಾಟದ ಮೊಳಕೆ ಫ್ರೀಡಂ ಪಾರ್ಕಿನಲ್ಲಿ ಹುಟ್ಟುತ್ತಿದೆ. ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ರೈತ ಸಂಘಟನೆಗಳು ಇಲ್ಲಿ ಮೊಳಕೆ ಹೊಡೆಯುತ್ತಿವೆ. ಕರ್ನಾಟಕದ ಎಲ್ಲಾ ಚಳವಳಿಗಳು, ಕಾರ್ಮಿಕರು, ರೈತರು ಎಲ್ಲರೂ ಕರ್ನಾಟಕದ ಮೂಲೆ ಮೂಲೆಯಲ್ಲು ಈ ಹೋರಾಟಕ್ಕೆ ಜೊತೆಯಾಗ್ತಿದ್ದಾರೆ..ಇದು ಎಚ್ಚರಿಕೆ ಈ ವಿಚಾರದಲ್ಲಿ ನೀವು ರೈತಪರ ನಿಲುವನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಂಬಿದ್ದೇವೆ ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಒಳ್ಳೆ ತೀರ್ಮಾನವನ್ನು ತೆಗೆದುಕೊಂಡು ನಮಗೆ ಇಲ್ಲಿಂದ ಮುಕ್ತಿ ಕೊಡಿ ಎಂದು ಚಿಂತಕರಾದ ಇಂದೂಧರ ಹೊನ್ನಾಪುರ ಅವರು ಆಗ್ರಹಿಸಿದ್ದಾರೆ.

“ನನಗೆ ಕನ್ನಡದ ಮೇಲೆ ಪ್ರೀತಿಯೇ ಹೊರತು ಧ್ವೇಷವಲ್ಲ” : ನಟ ಕಮಲ್ ಹಾಸನ್
‘ನಾನು ಏನು ಹೇಳಿದ್ದೇನೋ ಅದನ್ನು ಪ್ರೀತಿ ಕಾರಣದಿಂದಾಗಿಯೇ ಹೇಳಿದ್ದೇನೆ ಎಂಬುದು ನನ್ನ ಭಾವನೆ. ಇತಿಹಾಸಕಾರರು ನನಗೆ ಭಾಷೆಯ ಬಗ್ಗೆ ಅಧ್ಯಯನ ಮಾಡಿ ತಿಳಿಸಿದ್ದಾರೆ. ಬೇರೆ ಯಾವುದೇ ಧ್ವೇಷದ ಉದ್ದೇಶದಿಂದ ನಾನು ಕನ್ನಡದ ಬಗ್ಗೆ ಮಾತನಾಡಿಲ್ಲ’ ಎಂದು ನಟ ಕಮಲ್ ಹಾಸನ್ ಭಾಷಾ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ನಂತಹ ಎಲ್ಲಾ ದ್ರಾವಿಡ ಭಾಷೆಗಳ ಮೂಲ ಇರುವುದು ತಮಿಳಿನಲ್ಲಿ. ಇದರ ಬಗ್ಗೆ ನನಗೆ ಅರಿವಿದೆ. ಕನ್ನಡದ ಮೇಲೆ ನನಗಿರುವುದು ಪ್ರೀತಿಯೇ ಹೊರತು ಧ್ವೇಷವಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ತಿರುವನಂತಪುರದಲ್ಲಿ ತಮ್ಮ ಮುಂದಿನ ಚಿತ್ರ ಥಗ್ ಲೈಫ್ ಪ್ರಚಾರಕ್ಕೆ ಬಂದ ಕಮಲ್ ಹಾಸನ್ ಹೀಗೆಂದು ಸ್ಪಷ್ಟನೆ ನೀಡಿದ್ದಾರೆ.

‘ತಮಿಳುನಾಡು ಅಪರೂಪವಾದ ರಾಜ್ಯ. ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ. ಹಾಗಂತ ಇಂತಹ ರಾಜ್ಯ ಬೇರೆ ಇಲ್ಲ ಎಂದು ನಾನು ಹೇಳುವುದಿಲ್ಲ’ ಎಂದರು. ‘ಒಬ್ಬ ಮೆನನ್(ಎಂ.ಜಿ.ರಾಮಚಂದ್ರನ್) ಒಬ್ಬ ರೆಡ್ಡಿ (ಒಮಂದೂರ್ ರಾಮಸ್ವಾಮಿ ರೆಡ್ಡಿಯಾರ್) ನಮ್ಮ ಮುಖ್ಯಮಂತ್ರಿಯಾಗಿದ್ದರು. ತಮಿಳು ವ್ಯಕ್ತಿ ಎಂ.ಕರುಣಾನಿಧಿ ಹಾಗೂ ಮಂಡ್ಯ ಮೂಲದ ಕನ್ನಡ ಅಯ್ಯಂಗಾರ್ ಮಹಿಳೆ (ಜೆ.ಜಯಲಲಿತಾ) ಕೂಡ ನಮ್ಮ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ತಮಿಳು ಯಾರನ್ನೂ ದೂರ ಇಡುವುದಿಲ್ಲ’ ಎಂದು ಕಮಲ್‌ ಹಾಸನ್‌ ಹೇಳಿದರು.

ಅಷ್ಟೇ ಅಲ್ಲದೆ ಅಂದಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಡೆಯಿಂದ ನನಗೆ ತೊಂದರೆಯಾದಾಗ ಕನ್ನಡಿಗರೇ ನನ್ನ ಬೆಂಬಲಕ್ಕೆ ನಿಂತಿದ್ದರು. ಕರ್ನಾಟಕಕ್ಕೆ ಬನ್ನಿ ನಿಮಗೆ ಮನೆ ಕೊಡುತ್ತೇವೆ ಎಲ್ಲಿಗೂ ಹೋಗಬೇಡಿ ಎಂದಿದ್ದರು. ಹೀಗಾಗಿ ಕನ್ನಡದ ಜನರು ಥಗ್‌ ಲೈಫ್ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

3695 ಆನೆ ಸಂಪತ್ತು ರಾಜ್ಯದಲ್ಲಿದೆ: ಸಿ.ಎಂ.ಸಿದ್ದರಾಮಯ್ಯ
ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ

ಬೆಂಗಳೂರು ಮೇ21: ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ರಾಜ್ಯದಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಆನೆಗಳನ್ನು ಹಸ್ತಾಂತರಿಸಿ ಮಾತನಾಡಿದರು.

ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ ಎಂದರು.

ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದರು.

ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಿ: ಸಿ.ಎಂ. ಸಿದ್ದರಾಮಯ್ಯ ಒತ್ತಾಯ
ಬೆಂಗಳೂರು: ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಹುದ್ದೆಯಲ್ಲಿರುವ ಮಹಿಳೆಯು ಕನ್ನಡಿಗರೊಂದಿಗೆ ದರ್ಪದಿಂದ ಮಾತನಾಡಿರುವದನ್ನ ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ಭಾರತ ಹಣಕಾಸು ಸಚಿವಾಲಯಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್‌ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸುತ್ತಿರುವುದು ತೀವ್ರವಾಗಿ ಖಂಡಿಸಿದ್ದಾರೆ.

ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್‌ಬಿಐನ ತ್ವರಿತ ಕ್ರಮವನ್ನು  ಅವರು ಪ್ರಶಂಸಿದ್ದು. ಇನ್ನು ಮುಂದೆ ಆದಾಗ್ಯೂ, ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದ್ದಾರೆ.

ಜೊತೆಗೆ ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಿ ಕನ್ನಡ ಭಾಷೆ ಬಳಸಿ ಉಳಿಸಿ – ಡಾ.ಪುರುಷೋತ್ತಮ ಬಿಳಿಮಲೆ
ಹಾಸನ : ಆಡಳಿತದಲ್ಲಿ ಕನ್ನಡ ಭಾಷೆಯನ್ನು ಶೇಕಡ ನೂರಕ್ಕೆ ನೂರರಷ್ಟು ಬಳಸುವ ಮೂಲಕ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಿ ಕನ್ನಡ ಭಾಷೆ ಬಳಸಿ ಉಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರ ಕಾಲಕಾಲಕ್ಕೆ ಅನೇಕ ಆದೇಶಗಳನ್ನು ಪ್ರಕಟಿಸಿದೆ ಆದರೆ ಆಡಳಿತದಲ್ಲಿ ಶೇಕಡ ನೂರರಷ್ಟು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ, ಇದಕ್ಕೆ ಅನೇಕ ಕಾರಣಗಳಿವೆ ಎಂದು ಅವರು ಅಧಿಕಾರಿಗಳು ಸೃಜನಶೀಲತೆಯಿಂದ ಸಮರ್ಪಕವಾಗಿ ಅನುಷ್ಠಾನ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಪರವಾದ ಕೆಲಸ ಮಾಡಲು ಬದ್ಧರಾಗಿ, ಭಾಷಾಂಧತೆ ಹುಟ್ಟು ಹಾಕಬಾರದು ಭಾಷೆ ಪ್ರೇಮ ಇರಬೇಕು ಎಂದು ತಿಳಿಸಿದರು. 2011 ರ ಜನಗಣತಿಯ ಪ್ರಕಾರ 19,569 ಮಾತೃಭಾಷೆಗಳಿವೆ ದೇಶದ ಶಕ್ತಿ ಬಹುಭಾಷಿಕತೆಯಾಗಿದೆ. ಕನ್ನಡ ಭಾಷೆ ಸೃಜನಶೀಲತೆ ಕಳೆದುಕೊಂಡು ಬರಡು ಭೂಮಿ ಆಗುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಭಾಷೆಯನ್ನು ಬಳಸುವ ಉಳಿಸುವ ಹಕ್ಕು ಹಾಗೂ ಕರ್ತವ್ಯ ನಿಮ್ಮದಾಗಿದೆ ಎಂದರು. ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಿ ರಾಜ್ಯದಲ್ಲಿ ಮಾದರಿ ಆಗಬೇಕು ಎಂದು ಹೇಳಿದರು. ಪ್ರಾಧಿಕಾರದ ಮೂಲ ಆಶಯ ಕನ್ನಡ ಭಾಷೆಯನ್ನು ಅಳಿಸಿ ಹಾಕದಂತೆ ಬೆಳೆಸಬೇಕು ಎಂಬುದಾಗಿ ಎಂದರು. ರಾಜ್ಯದಲ್ಲಿ ಶತಮಾನ ಕಂಡ 3300 ಶಾಲೆಗಳಿವೆ. ಒಟ್ಟು 49,000 ಶಾಲೆಗಳಲ್ಲಿ 11,750 ಶಾಲೆಗಳಿಗೆ ಹಕ್ಕು ಪತ್ರವಿಲ್ಲ, ಹಿಂದೆ ಶಾಲೆಗಳಿಗೆ ಗ್ರಾಮಸ್ಥರು ಜಾಗವನ್ನು ದಾನವಾಗಿ ನೀಡಿದ್ದಾರೆ. ಅವುಗಳ ಖಾತೆಯಾಗದೆ ಈಗ ತಕಾರಾರು ಆಗುವ ಸಾಧ್ಯತೆಗಳಿವೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತಹ ಶಾಲೆಗಳ ಬಗ್ಗೆ ನಿಗಾವಹಿಸಲು ತಿಳಿಸಿದರಲ್ಲದೆ, ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪಹಣಿ ಪತ್ರವನ್ನು ಫಲಕದ ರೂಪದಲ್ಲಿ ಹಾಕಲು ತಿಳಿಸಿದರು.

ಬ್ಯಾಂಕ್ ಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಭಾಷೆ ಬಳಸಿ ವ್ಯವಹಾರ ಮಾಡಲು ನೆರವಾಗಲು ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯ ಭಾಷೆಯಾದ ಕನ್ನಡ ವನ್ನು ಕಡ್ಡಾಯವಾಗಿ ಬಳಸುವಂತೆ ಕ್ರಮವಹಿಸಲು ಸೂಚಿಸಿದರು. ನಾಮಫಲಕಗಳಲ್ಲಿ ಹೆಸರಿನ ಜೊತೆಗೆ ಊರಿನ ಹೆಸರು ಹಾಕಬೇಕು ಈ ನಿಟ್ಟಿನಲ್ಲಿ ನಗರ ಸಭೆ ಅಧಿಕಾರಿಗಳು ಎಚ್ಚರವಹಿಸಿ ಎಂದು ತಿಳಿಸಿದರು. ಇಂಗ್ಲಿಷ್ ಭಾಷೆ ಮೋಹವಿದ್ದರು ಹೃದಯಕ್ಕೆ ಹತ್ತಿರವಾದ ಮಾತೃಭಾಷೆ ಕನ್ನಡದ ಬಗ್ಗೆ ಕಳಕಳಿ ಇರಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ ಬ್ಯಾಂಕ್ ಹಾಗೂ ಕೇಂದ್ರೀಯ ವಿದ್ಯಾಲಯ ಹೊರತು ಪಡಿಸಿ ಜಿಲ್ಲೆಯಲ್ಲಿ ಎಲ್ಲಾ ಕಡೆ ಶೇ.99 ರಷ್ಟು ಕನ್ನಡ ಭಾಷೆ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು. ಇ-ಆಫಿಸ್‌ನಲ್ಲಿಯೂ ಕೂಡ ಕನ್ನಡ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿರುವಂತಹ ಜಾಗಗಳ ಖಾತೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷರು ನೀಡಿರುವ ಸೂಚನೆಗಳನ್ನು ಪಾಲನೆ ಮಾಡಲಾಗುವುದು ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

ಕನ್ನಡ ಅನುಷ್ಠಾನದಲ್ಲಿ ಹಾಸನ ಜಿಲ್ಲೆ ಮುಂದಿದೆ – ಡಾ.ಪುರುಷೋತ್ತಮ ಬಿಳಿಮಲೆ
ಹಾಸನ ಕನ್ನಡಿಗರ ಜೀವ ಕೇಂದ್ರ, ಹೊಯ್ಸಳರು ಆಳ್ವಿಕೆ ಮಾಡಿದ ನಾಡಾಗಿದೆ, ಐತಿಹಾಸಿಕ ಹಿನ್ನೆಲೆಯುಳ್ಳ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಸ್ಥಳಗಳು ಜಿಲ್ಲೆಯಲ್ಲಿವೆ ಹಾಸನ ಜಿಲ್ಲೆ ಕನ್ನಡ ಅನುಷ್ಠಾನದಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕನ್ನಡ ಅಭಿವೃದ್ಧಿ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿದ ಅವರು ಕನ್ನಡದ ಹೃದಯ ಭಾಗದಲ್ಲಿ ಹಾಸನವಿರುವುದರಿಂದ ಕನ್ನಡದ ಸಾಕಷ್ಟು ಅಭಿವೃದ್ದಿ ಕೆಲಸಗಳು ಇಲ್ಲಿ ಆಗುತ್ತಿವೆ, ಹಲವು ವರ್ಷಗಳಿಂದ ಕನ್ನಡ ಅನುಷ್ಠಾನ ಪರಿಶೀಲನೆಗೋಸ್ಕರ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.ಈಗಾಗಲೇ ರಾಜ್ಯದ 9 ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಕನ್ನಡ ಅಭಿವೃದ್ಧಿ ಅನುಷ್ಠಾನ ಹೇಗೆ ಆಗಿದೆ ಎಂಬುದನ್ನು ಪರಿಶೀಲಿಸಿದ್ದೇನೆ. ಮುಂದಿನ ಭಾಗವಾಗಿ ಹಾಸನ ಜಿಲ್ಲೆಗೆ ಆಗಮಿಸಿದ್ದೇನೆ ಎಂದರು.
ಯಾವುದೇ ಭಾಷೆಯಾಗಲಿ, ಅದು ಎಷ್ಟೇ ಶ್ರೇಷ್ಠ ಭಾಷೆಯಾಗಿದ್ದರೂ ಆ ಭಾಷೆ ಬಳಕೆಯಾಗದೆ ಹೋದರೆ ಉಳಿಯುವುದಿಲ್ಲ. ಹಾಗಾಗಿ ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ನಾವು ಬಳಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಅಧಿಕಾರಿಗಳು ಕೊಟ್ಟ ವರದಿಯ ಮೇರೆಗೆ ಕನ್ನಡ ಅನುಷ್ಠಾನ ಎಲ್ಲೆಡೆ ಯಶಸ್ವಿಯಾಗಿದೆ. ಒಂದು ವೇಳೆ ಎಲ್ಲಿಯಾದರೂ ಅನುಷ್ಠಾನವಾಗಿಲ್ಲವೆಂದರೆ ಅದನ್ನು ಗಮನಿಸಿ ಅನುಷ್ಠಾನ ಮಾಡಲು ಕ್ರಮ ವಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದರು.ನಾಮಫಲಕಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಗ್ರಾಮಗಳ ಹೆಸರನ್ನು ಹಾಕುವುದರ ಮೂಲಕ ಸುಮಾರು 71,000 ಕನ್ನಡ ಪದಗಳು ಉಳಿಯುತ್ತವೆ ಹಾಗೂ ಬಳಕೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಮಾತೃಭಾಷೆ ಕನ್ನಡದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಸುಮಾರು 1,32,000 ವಿದ್ಯಾರ್ಥಿಗಳು ಪಿ.ಯು.ಸಿಯಲ್ಲಿ ಸುಮಾರು 60 ರಿಂದ 62 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಬೇಸರದ ಸಂಗತಿ ಆಗಿದೆ ಇಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದಕ್ಕೆ ಕಾರಣಗಳೇನೆಂಬುದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ವರದಿ ನೀಡಲು ಸೂಚಿಸಿದ್ದೇನೆ ಎಂದರು.
ಜಿಲ್ಲಾ ತರಬೇತಿ ಕೇಂದ್ರವನ್ನ ವಿಸ್ತೃತಗೊಳಿಸಿ, ಎಲ್ಲಾ ವಿಭಾಗದ ಅಧಿಕಾರಿಗಳಿಗೆ ಕನ್ನಡದಲ್ಲಿ ಹೆಚ್ಚಿನ ಬಳಕೆಗೆ ತರಬೇತಿ ನೀಡಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸರಳ ಕನ್ನಡ ಕಲಿಕೆಗೆ ಹೊಸ ಪಠ್ಯಕ್ರಮವನ್ನು ರೂಪಿಸಿದೆ. ಅದು ವಾರಕ್ಕೆ ಮೂರು ದಿವಸ ತಿಂಗಳಿಗೆ 12 ಗಂಟೆ, ಮೂರು ತಿಂಗಳಿಗೆ 36 ಗಂಟೆ ಹೀಗೆ 36 ಗಂಟೆಗಳಲ್ಲಿ ಕನ್ನಡವನ್ನು ಹೇಳಿಕೊಡುವಂತಹ ಕ್ರಮವಾಗಿದೆ ಎಂದು ತಿಳಿಸಿದರು. ಹಾಸನ ಪ್ರಸ್ತುತ ಮಹಾನಗರ ಪಾಲಿಕೆ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ಥಳೀಯ ಹೆಸರುಗಳು ಅಳಿದು ಹೋಗಬಾರದು. ಕನ್ನಡದ ಹೆಸರುಗಳು ಇರುವಂತೆ ಎಚ್ಚರ ವಹಿಸಬೇಕು ಎಂದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಬೇರೆ ಭಾಷೆಯ ಅಧಿಕಾರಿಗಳಿಗೆ ಕನ್ನಡ ಕಲಿಕೆಯ ಕುರಿತು ಕರ್ನಾಟಕದಲ್ಲಿ ಮಾಡುವಂತಹ ಭಾಷಾ ಪರೀಕ್ಷೆಯ ಪಠ್ಯಕ್ರಮದ ಕುರಿತು ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವರದಿಯನ್ನು ನೀಡಲು ತಿಳಿಸಿದ್ದೇವೆ ಎಂದರು. ಸರ್ಕಾರದಿಂದ 1800ಕ್ಕೂ ಹೆಚ್ಚು ಆದೇಶಗಳನ್ನು ಕನ್ನಡ ಪರವಾಗಿ ಹೊರಡಿಸಿದೆ ಅಧಿಕಾರಿಗಳು ಕನ್ನಡವನ್ನು ಪ್ರೀತಿಸಿ ಆದೇಶಗಳು ಜಾರಿಗೆ ಬರುವಂತೆ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಕಲಿಯದ ಇತರ ಭಾಷಿಕರು ಕನ್ನಡವನ್ನು ಕಲಿಯುವ ಆಸಕ್ತಿ ತೋರಿಸಿದರೆ ಕನ್ನಡ ಕಲಿಕಾ ಕೇಂದ್ರವನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅನ್ಯ ಭಾಷಿಕರು ಕನ್ನಡವನ್ನು ಕಲಿಯಲು ಅನುಕೂಲವಾಗಲು 100 ಕನ್ನಡ ಕಲಿಕಾ ಕೇಂದ್ರಗಳನ್ನ ಆರಂಭಿಸಬೇಕೆಂಬುದು ಪ್ರಾಧಿಕಾರದ ಉದ್ದೇಶವಾಗಿದೆ. 100 ಕ್ಕಿಂತ ಹೆಚ್ಚು ಕೇಂದ್ರಗಳು ಆದರೂ ಸಹ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಕನ್ನಡ ಭವನ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಾಸನದಲ್ಲಿ ಕನ್ನಡ ಭವನ ಆಗುವಂತೆ ಪ್ರಯತ್ನ ಮಾಡುತ್ತೇವೆ ಸಚಿವರು ಹಾಗೂ ಅಧಿಕಾರಿಗಳ ಮುಂದೆ ಈ ಬೇಡಿಕೆಯನ್ನು ಇಡುತ್ತೇವೆ ಎಂದು ತಿಳಿಸಿದರು. ಹಿಂದಿನ ಕಾಲದಲ್ಲಿ ಅನೇಕರು ಶಾಲೆಗಳ ನಿರ್ಮಿಸುವುದಕ್ಕಾಗಿಯೆ ಜಮೀನನ್ನು ದಾನ ನೀಡಿದ್ದಾರೆ. ಅವುಗಳಲ್ಲಿ ಕೆಲವು ಸ್ಥಳಗಳಿಗೆ ದಾಖಲಾತಿಗಳಿವೆ ಮತ್ತೆ ಕೆಲವು ಸ್ಥಳಗಳಿಗೆ ದಾಖಲಾತಿಗಳಿಲ್ಲ, ಕೆಲವು ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ಬಂದಿರುವಂತಹ ಶಾಲಾ ಜಾಗವನ್ನು ಕೆಲವರು ದಾಖಲಾತಿಗಳನ್ನು ತಂದು ವಶಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ ಹಕ್ಕುಪತ್ರವನ್ನು ನೀಡುವಂತಹ ಕೆಲಸಗಳನ್ನು ಮಾಡಬೇಕು ಎಂದರು. ಸರ್ಕಾರ ಕರ್ನಾಟಕದಲ್ಲಿ ನಾಮಫಲಕಗಳಲ್ಲಿ ಶೇಕಡ 60 ರಷ್ಟು ಕಡ್ಡಾಯವಾಗಿ ಕನ್ನಡ ಇರಬೇಕು ಎಂದು ಆದೇಶ ಹೊರಡಿಸಿರುವುದು ಆಶಾದಾಯಕ ಎಂದರು.ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಬೆರಳಚ್ಚುಗಾರಿಗೆ ಕನ್ನಡ ಪದಗಳನ್ನು ಸರಿಯಾಗಿ ಜೋಡಿಸಲು ಬರುವುದಿಲ್ಲ ಎನ್ನುವಂತಹ ಸಮಸ್ಯೆಗಳು ಕೇಳಿ ಬರುತ್ತಿವೆ ಆ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸುತ್ತೇವೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾಧಿಕಾರಿ ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ ಉಪಸ್ಥಿತರಿದ್ದರು.

“ಸರ್ಕಾರ ಭಾಷಾ ನೀತಿ ಜಾರಿಗೆ ಮುಂದಾಗಲಿ”: ಡಾ.ರಮೇಶ್ ಬೆಲಂಕೊಂಡ, ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಸದಸ್ಯರು
“ನಾವು ಭಾರತೀಯರು, ಹಾಗಾಗಿ, ನಾವು ಏನೂ ಹಿಂಜರಿಕೆಯಿಲ್ಲದೆ, ನಮ್ಮನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸದೆ, ಭಾರತಕ್ಕೆ ನ್ಯಾಯಯುತವಾದ ಭಾಷಾ ನೀತಿಗಾಗಿ ನಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ನಮ್ಮ ಹಕ್ಕು. ಭಾರತದ ಮಟ್ಟದಲ್ಲಿನ ಯಾವುದೇ ನೀತಿ ಕರ್ನಾಟಕದ ಜನರ ಮೇಲೂ ಆಳವಾಗಿ ಪರಿಣಮಿಸಬಹುದು ಮತ್ತು ಪರಿಣಮಿಸುತ್ತದೆ” ಎನ್ನುವ ಮೂಲಕ ನಮ್ಮ ನಾಡು ನಮ್ಮ ಆಳ್ವಿಕೆ ತಂಡದ ಸದಸ್ಯರಾದ ಡಾ.ರಮೇಶ್ ಬೆಲ್ಲಂಕೊಂಡ ಅವರು ದೇಶದಲ್ಲಿ ದ್ವಿಭಾಷಾ ನೀತಿಗೆ ಮುಂದಾಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

“ದೇಶದಲ್ಲಿ ಭಾಷಾ ಅಸಮಾನತೆ ಮತ್ತು ಭಾಷಾ ಅನ್ಯಾಯ ಅಸ್ತಿತ್ವದಲ್ಲಿದೆ. ದೇಶದ ಹಿಂದಿಯೇತರ ಜನಸಂಖ್ಯೆಯ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಭಾಷಾ ಅನ್ಯಾಯವು ಎಲ್ಲಾ ಹಿಂದಿಯೇತರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವಂತೆ ಕರ್ನಾಟಕ ರಾಜ್ಯದಲ್ಲೂ ಅಸ್ತಿತ್ವದಲ್ಲಿದೆ. ಕೇಂದ್ರ ಸರ್ಕಾರದ ಪ್ರಚಲಿತ ಆಚರಣೆಗಳು ಮತ್ತು ನೀತಿಗಳ ಪರಿಣಾಮವಾಗಿ ದೇಶದ ಇತರ ಅನೇಕ ರಾಜ್ಯಗಳಲ್ಲಿ  ಭಾಷಾ ಅಸಮಾನತೆ ಅಸ್ತಿತ್ವದಲ್ಲಿದೆ.” ಎಂದು ಸರ್ಕಾರಕ್ಕೆ ನೀಡಿರುವ ವಿವರವಾದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಇತರೆ ಅವಕಾಶಗಳು ಹಿಂದಿಯವರಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸ್ತುತ, ಬಹುಪಾಲು ಅಥವಾ ಸಂಪೂರ್ಣವಾಗಿ, UPSC ಪರೀಕ್ಷೆಗಳು, SSC ಪರೀಕ್ಷೆಗಳು, ಬ್ಯಾಂಕ್ ಅಧಿಕಾರಿಗಳ ಪರೀಕ್ಷೆಗಳು, ರೈಲ್ವೆ ಪರೀಕ್ಷೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪರೀಕ್ಷೆ ಸೇರಿದಂತೆ ಮುಂತಾದವುಗಳನ್ನು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ನಡೆಸಲಾಗುತ್ತಿದೆ. ಈ ನೀತಿ ಮತ್ತು ಅಭ್ಯಾಸವು ಹಿಂದಿಯೇತರ ಭಾರತೀಯರಿಗಿಂತ ಹಿಂದಿ ಭಾರತೀಯರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ. ಹಿಂದಿ ಪ್ರದೇಶಗಳ ಜನರು ಈ ಪರೀಕ್ಷೆಗಳನ್ನು ತಮ್ಮದೇ ಆದ ಪ್ರಾದೇಶಿಕ ಭಾಷೆಯಾದ ಹಿಂದಿಯಲ್ಲಿ ತೆಗೆದುಕೊಳ್ಳಬಹುದು. ಆದರೆ, ಹಿಂದಿಯೇತರ ಪ್ರದೇಶಗಳ ಜನರು ತಮ್ಮ ಸ್ವಂತ ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಬಹಳ ಅಸಮಾನವಾದ ಸ್ಪಧಾ೯ ಕ್ಷೇತ್ರಕ್ಕೆ ಕಾರಣವಾಗುತ್ತಿದೆ. ಇದು ಹಿಂದಿ ಭಾರತೀಯರಿಗೆ ವ್ಯವಸ್ಥಿತ ಗಂಭೀರ ಅನ್ಯಾಯದ ಅನುಕೂಲತೆಯನ್ನೂ ಮತ್ತು ಹಿಂದಿಯೇತರ ಭಾರತೀಯರಿಗೆ ವ್ಯವಸ್ಥಿತ ಗಂಭೀರ ಅನ್ಯಾಯದ ಅನಾನುಕೂಲತೆಯನ್ನೂ ಉಂಟು ಮಾಡುತ್ತಿದೆ.” ಎಂದು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮತ್ತು ಅನ್ಯಾಯಗಳ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಕರ್ನಾಟಕಕ್ಕೆ ನ್ಯಾಯಯುತವಾದ ದ್ವಿಭಾಷಾ ನೀತಿಯ ಅಗತ್ಯವಿದೆ.  ಕರ್ನಾಟಕದೊಳಗೆ ನಮ್ಮ ಪ್ರಾದೇಶಿಕ ಭಾಷೆ ಕನ್ನಡ ಹಾಗೂ ಭಾರತದ ಒಳಗೆ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಭಾಷೆ; ಇವೆರಡೂ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಸಂವಹನದಲ್ಲಿ ಕಡ್ಡಾಯ ಭಾಷೆಗಳಾಗಬೇಕಿದೆ. ಕನ್ನಡಕ್ಕೆ ಮೊದಲನೆ ಆದ್ಯತೆ ಮತ್ತು ಇಂಗ್ಲೀಷಿಗೆ ಎರಡನೆ ಸ್ಥಾನ ಇರಬೇಕು.  ಆಸಕ್ತಿ ಹೊಂದಿರುವವರು ತಮ್ಮ ವೈಯಕ್ತಿಕ ಸಂದರ್ಭಗಳಿಗೆ ಅನುಗುಣವಾಗಿ ಅವರಿಗೆ ಸೂಕ್ತವೆಂದು ತೋರುವ ಯಾವುದೇ ಹೆಚ್ಚುವರಿ ಭಾಷೆಗಳನ್ನು ಕಲಿಯಲು ಅವಕಾಶಗಳಿರಬೇಕು.

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ: ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ.  ಭಾರತೀಯ ಸಂವಿಧಾನವು ಯಾವುದೇ ರಾಷ್ಟ್ರ ಭಾಷೆಯನ್ನು ನಿರ್ದಿಷ್ಟ ಪಡಿಸಿಲ್ಲ. ಸಂವಿಧಾನದ ಶೆಡ್ಯೂಲ್ 8 ರಲ್ಲಿ 22 ಭಾಷೆಗಳಿದ್ದು, ಅದರಲ್ಲಿ ಹಿಂದಿಯೂ ಒಂದು. ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ಸುಳ್ಳು ಬಹಳ ವರ್ಷಗಳಿಂದ ಅನೇಕ ರೀತಿಗಳಲ್ಲಿ ಮತ್ತು ಅನೇಕ ಸ್ಥಳಗಳಲ್ಲಿ ಚಾಲ್ತಿಯಲ್ಲಿದೆ.  ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಬಿಂಬಿಸುವುದು ಸುಳ್ಳುತನ ಎನ್ನುವುದನ್ನು ಎಲ್ಲ ಹಂತಗಳಲ್ಲಿ ಹಾಗೂ ಎಲ್ಲ ಸ್ಥಳಗಳಲ್ಲಿ ಸ್ಪಷ್ಟಪಡಿಸಬೇಕಿದೆ. ಹಿಂದಿಯು ಭಾರತದಲ್ಲಿ ಕೇವಲ ಅತಿ ದೊಡ್ಡ ಪ್ರಾದೇಶಿಕ ಭಾಷೆಯಾಗಿದೆ ಮತ್ತು ಅದನ್ನು ಹಾಗೆಯೇ ಪರಿಗಣಿಸಬೇಕು. ಹಿಂದಿಯು ಕನ್ನಡ ಅಥವಾ ಇತರೆ ಯಾವುದೇ ಪ್ರಮುಖ ಭಾರತೀಯ ಭಾಷೆಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರಬಾರದು ಮತ್ತು ಕಡಿಮೆ ಪ್ರಾಮುಖ್ಯತೆಯನ್ನೂ ಹೊಂದಿರಬಾರದು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಿಂದಿಯನ್ನು ಹೇರುವ ಮೂಲಕ ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿ ಪರಿಗಣಿಸಲಾಗುತ್ತಿದೆ ಮತ್ತು ಭಾರತದಲ್ಲಿ ಕನ್ನಡಿಗರನ್ನು ಎರಡನೇ ದರ್ಜೆಯ ಭಾರತೀಯರಂತೆ ಪರಿಗಣಿಸಲಾಗುತ್ತಿದೆ. ಭಾಷಾ ನೀತಿಗಳು ಮತ್ತು ಆಚರಣೆಗಳು ಹಿಂದಿ ಹೇರಿಕೆಯ ಪರವಾಗಿವೆ. ಇದು ಇತರೆ ಹಿಂದಿಯೇತರ ರಾಜ್ಯಗಳ  ಪ್ರಜೆಗಳಿಗೂ ಅನ್ವಯವಾಗುತ್ತದೆ. ನಾವು ಕನ್ನಡವನ್ನು ಮಾತ್ರ ಒಪ್ಪಲು ಅರ್ಹವಾಗಿ ಮಾಡಿದರೆ, ಕನ್ನಡಿಗರು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಸಾಧ್ಯವಿಲ್ಲ.  ಉದ್ಯೋಗ, ವಿಜ್ಞಾನ, ವ್ಯಾಪಾರ ಮತ್ತು ಎಲ್ಲದರಲ್ಲೂ ತೊಂದರೆ ಅನುಭವಿಸಬೇಕಾಗುತ್ತದೆ. ನಮಗೆ ಕನ್ನಡ ಮತ್ತು ಇಂಗ್ಲಿಷ್ ಬೇಕು. ಇಂಗ್ಲಿಷ್ ಅನ್ನು ದ್ವೇಷಿಸುವುದರಿಂದ ಹಿಂದಿ ಹೇರಿಕೆಯನ್ನು ಸುಗಮಗೊಳಿಸಿದಂತಾಗುತ್ತದೆ. ಹಿಂದಿಯೇತರ ಭಾರತೀಯರನ್ನು ಮತ್ತಷ್ಟು ಕಡೆಗಣಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಭಾಷಾ ಹೇರಿಕೆ ಬಗ್ಗೆ ದನಿ ಏರಿಸಿದ್ದಾರೆ.

ಉಪ-ಪ್ರಾದೇಶಿಕ ಭಾಷೆಗಳಿಗೆ ನ್ಯಾಯ: ಕನಾ೯ಟಕ ಹಾಗೂ ಇತರೆ ರಾಜ್ಯಗಳು, ತಮ್ಮ ತಮ್ಮ ರಾಜ್ಯಗಳ ಉಪ-ಪ್ರದೇಶಗಳಲ್ಲಿರುವ ಭಾಷೆಗಳಿಗೂ (ಉದಾಹರಣೆ – ‘ತುಳು’ ಭಾಷೆ) ನ್ಯಾಯ ಒದಗಿಸುವ ಬಗ್ಗೆ, ಅಲ್ಲಿನ ಜನರೊಂದಿಗೆ ಚಚಿ೯ಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಭಾರತೀಯರನ್ನೂ ಅಷ್ಟೇ ಅಲ್ಲ, ಎಲ್ಲಾ ಮನುಷ್ಯರನ್ನೂ ನಾವು ಸಹೋದರ ಸಹೋದರಿಯರಂತೆ ಕಾಣಬೇಕು. ಜೊತೆಗೆ ಭಾಷೆಗೆ ಸಂಬಂಧಪಟ್ಟ ಕಾರಣಗಳಿಂದ ಯಾರನ್ನೂ ಕೆಟ್ಟದಾಗಿ ನೋಡಬಾರದು. ತಾರತಮ್ಯ ಮಾಡಬಾರದು. ಅವಕಾಶಗಳಿಂದ ವಂಚಿತರನ್ನಾಗಿ ಮಾಡಬಾರದು. ಭಾಷಾ ದಬ್ಬಾಳಿಕೆ, ಶೋಷಣೆ, ಅಧೀನತೆ ಇತ್ಯಾದಿಗಳು ಯಾವುದೇ ಒಕ್ಕೂಟಕ್ಕೆ ಉತ್ತಮ ಅಡಿಪಾಯವನ್ನು ರೂಪಿಸುವುದಿಲ್ಲ. ಸಮಾನತೆ, ಪರಸ್ಪರ ಗೌರವ, ನ್ಯಾಯ, ಯಾವುದೇ ಅರ್ಥಪೂರ್ಣ ಒಕ್ಕೂಟಕ್ಕೆ ಮೂಲಭೂತ ಅವಶ್ಯಕತೆಗಳು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಲವು ಪ್ರಮುಖ ಅಂಶಗಳ ಒಳಗೊಂಡಂತೆ ಕರ್ನಾಟಕ ಸರ್ಕಾರಕ್ಕೆ ರಾಜ್ಯವು ದ್ವಿಭಾಷಾ ನೀತಿಯನ್ನು ಘೋಷಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಧ್ಯ ಈ ಮನವಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, “ಭಾಷಾ ವಿಷಯಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಚರ್ಚೆಗಳ ವೈವಿಧ್ಯತೆಯನ್ನು ಗಮನಿಸಿದಾಗ ಕರ್ನಾಟಕಕ್ಕೆ ದ್ವಿಭಾಷಾ ಸೂತ್ರದ ಅವಶ್ಯಕತೆ ಇದೆ ಎಂದು ಅನಿಸುತ್ತದೆ. ಏನಿದ್ದರೂ ಈ ಕುರಿತಂತೆ ಸರ್ಕಾರದ ಹಂತದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ತಮ್ಮಿಂದ ಕೋರುತ್ತಿದ್ದೇನೆ” ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜಾನಪದ ಅಕಾಡೆಮಿಯಿಂದ 2024 ಸಾಲಿನ ಪ್ರಶಸ್ತಿ ಪ್ರಕಟ
ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನ ಜಾನಪದ ಲೋಕದಲ್ಲಿ ಸಾಧನೆ ಮಾಡಿದ ಕಲಾವಿದರ ಗುರುತಿಸಿ ಪ್ರಶಸ್ತಿ ಘೋಷಿಸಿದೆ. ಅದರಂತೆ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರು ಸೇರಿದಂತೆ 32 ಮಂದಿಯನ್ನು ಗುರುತಿಸಿ ವಾರ್ಷಿಕ ಪ್ರಶಸ್ತಿಯ ಪಟ್ಟಿ ಹೊರಡಿಸಿದೆ.

ದಿನಾಂಕ:02-01-2025 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯ ತೀರ್ಮಾನದಂತೆ ಈ ಕೆಳಕಂಡ ಜಾನಪದ ಕಲಾವಿದರು ಮತ್ತು ತಜ್ಞರನ್ನು 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

2024 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ ನೀಡಲಾಗುವುದು. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ ರೂ.50,000/-ಗಳು ಹಾಗೂ ಪುಸ್ತಕ ಬಹುಮಾನಿತರಿಗೆ ತಲಾ ರೂ.25,000/- ಗಳ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ತಿಳಿಸಿದೆ.

ಜಾನಪದ ಗಾಯಕರು ವಿಭಾಗದಿಂದ ಡಾ. ಜೋಗಿಲ ಸಿದ್ಧರಾಜು, ತತ್ವಪದ ಮತ್ತು ಗೀಗೀಪದ ವಿಭಾಗದಿಂದ ಶ್ರೀ ಸಿದ್ದಯ್ಯ ಸಿ ಹೆಚ್, ಡೊಳ್ಳು ಕುಣಿತ ವಿಭಾಗದಿಂದ ಶ್ರೀ ಎಂ.ಮಹೇಶ್, ಕೋಲಾಟ ವಿಭಾಗದಿಂದ ಶ್ರೀಮತಿ ಸುನಂದಮ್ಮ, ಅರೆವಾದ್ಯ, ತಮಟೆ ವಿಭಾಗದಿಂದ ಶ್ರೀ ವೆಂಕಟರಮಣಪ್ಪ, ಕಿನ್ನರಿ ಜೋಗಿ ವಿಭಾಗದಿಂದ ಶ್ರೀ ಸಿದ್ದಪ್ಪ, ಭಜನೆ ವಿಭಾಗದಿಂದ ಶ್ರೀ ಮಾರ್ತಾಂಡಪ್ಪ, ಹಗಲು ವೇಷ ವಿಭಾಗದಿಂದ ಶ್ರೀ ಎ. ಶ್ರೀನಿವಾಸ, ಹಸೆ ಚಿತ್ತಾರ ವಿಭಾಗದಿಂದ ಶ್ರೀಮತಿ ಗೌರಮ್ಮ, ಚರ್ಮವಾದ್ಯ ನಗಾರಿ ವಿಭಾಗದಿಂದ ಶ್ರೀ ಸಿ. ಮಂಜುನಾಥ, ಜಾನಪದ ಗಾಯನ ವಿಭಾಗದಿಂದ ಶ್ರೀ ಹುರುಗಲವಾಡಿ ರಾಮಯ್ಯ, ಕೋಲಾಟ ವಿಭಾಗದಿಂದ ಶ್ರೀ ಬಿ.ಟಿ.ಮಾನವ, ಭಜನೆ ವಿಭಾಗದಿಂದ ಶ್ರೀ ಬಿ. ಪಿ ಪರಮೇಶ್ವರಪ್ಪ ಆಯ್ಕೆ ಆಗಿದ್ದಾರೆ.

ಇನ್ನುಳಿದಂತೆ ತಂಬೂರಿ ಪದ ವಿಭಾಗದಿಂದ ಶ್ರೀ ಸಿದ್ಧರಾಜು ಆರ್, ಪಾಡ್ದನ ವಿಭಾಗದಿಂದ ಶ್ರೀಮತಿ ಜಯಂತಿ, ಜಾನಪದ ಗಾಯನ ವಿಭಾಗದಿಂದ ಶ್ರೀ ಎನ್. ಗಣೇಶ್ ಗಂಗೊಳ್ಳಿ, ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ ವಿಭಾಗದಿಂದ ಶ್ರೀಮತಿ ಎಸ್. ಆರ್. ಸರೋಜ, ಚೌಡಕಿ ಪದ ವಿಭಾಗದಿಂದ ಶ್ರೀಮತಿ ಕಮಲಾ ಮರಗನ್ನವರ, ಜಾನಪದ ಸಂಗೀತ ವಿಭಾಗದಿಂದ ಶ್ರೀ ಪ್ರಭು ಬಸಪ್ಪ ಕುಂದರಗಿ,  ಡೊಳ್ಳು ಕುಣಿತ ವಿಭಾಗದಿಂದ ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ, ಕರಡಿ ಮಜಲು ವಿಭಾಗದಿಂದ ಶ್ರೀ ಗಂಗಪ್ಪ. ಮ. ಕರಡಿ, ಹಾಲಕ್ಕಿ ಸುಗ್ಗಿ ಕುಣಿತ ವಿಭಾಗದಿಂದ ಶ್ರೀ ಗಣಪು ಬಡವಾ ಗೌಡ, ಸಂಪ್ರದಾಯದ ಪದ ಸೋಬಾನೆ ಪದ ವಿಭಾಗದಿಂದ ಶ್ರೀಮತಿ ಗಿರಿಜವ್ವ ಹನುಮಪ್ಪ ಬಣಕಾರ, ಹಗಲು ವೇಷ ವಿಭಾಗದಿಂದ ಡಾ.ಗೋವಿಂದಪ್ಪ ರಾಮಚಂದ್ರಪ್ಪ, ತತ್ವಪದ ವಿಭಾಗದಿಂದ ಶ್ರೀಮತಿ ಬೋರಮ್ಮ, ಜನಪದ ಗಾಯನ ವಿಭಾಗದಿಂದ ಶ್ರೀ ಮಾರುತಿ ಕೋಳಿ, ತತ್ವಪದ ವಿಭಾಗದಿಂದ ಶ್ರೀಮತಿ ಯಲ್ಲಮ್ಮ, ಭಜನೆ ವಿಭಾಗದಿಂದ ಶ್ರೀ ಹೆಚ್. ಚಂದ್ರಶೇಖರ ಹಡಪದ, ಹಗಲು ವೇಷ ವಿಭಾಗದಿಂದ ಶ್ರೀ ಕೆ.ಶಂಕರಪ್ಪ, ತತ್ವಪದ /ಭಜನೆ ವಿಭಾಗದಿಂದ ಶ್ರೀ ಗೋಪಣ್ಣ ಅವರುಗಳು ಆಯ್ಕೆ ಆಗಿದ್ದಾರೆ.

ಹಾಗೆಯೇ ತಜ್ಞ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಡಾ.ಜೀ.ಶಂ.ಪ ಪ್ರಶಸ್ತಿಯನ್ನು ಡಾ.ಮೈಲಹಳ್ಳಿ ರೇವಣ್ಣ ಅವರಿಗೆ ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿಯನ್ನು ಡಾ. ವೆಂಕಟೇಶ ಇಂದ್ವಾಡಿ ಅವರ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್, ಸದಸ್ಯರಾದ ಡಾ.ಹುಲಿಕುಂಟೆ ಮೂರ್ತಿ, ಉಮೇಶ್, ಕೆಂಕೆರೆ ಮಲ್ಲಿಕಾರ್ಜುನ, ಶಂಕರಪ್ಪ ಸಂಕಣ್ಣನವರ್, ಮಂಜೇಶ್, ದೇವಾನಂದ ವರಪ್ರಸಾದ್, ರಾಮಪ್ಪ ಹಾಗು ರಿಜಿಸ್ಟ್ರಾರ್ ನಮ್ರತಾ ಇದ್ದರು.