ಧರ್ಮ- ಸಂಸ್ಕೃತಿ – Peepal Media

ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಹೆಸರಿಡಲು ಸಿದ್ದರಾಮಯ್ಯ ಗ್ರೀನ್‌ ಸಿಗ್ನಲ್
ಬೆಂಗಳೂರು : ನಗರದ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ (Metro station) ‘ಸೆಂಟ್ ಮೇರಿ’ (Saint mary) ಹೆಸರು ನಾಮಕರಣ ಮಾಡಬೇಕು ಎಂಬ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿತ್ತು. ಈ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಕೇಂದ್ರದಿಂದ ಅನುಮೋದನೆ ದೊರೆತ ಬಳಿಕ, ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಹೆಸರು ನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸೆಂಟ್ ಮೇರೀಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಎಲ್ಲಾ ಧರ್ಮವನ್ನು ಸಮಾನ ಗೌರವದಿಂದ ಕಾಣುತ್ತದೆ. ಹೀಗಾಗಿ ಬೇರೆ ಧರ್ಮವನ್ನು ಗೌರವದಿಂದ ಕಾಣುವ ಸಹಿಷ್ಣುತೆ ನಮ್ಮ ಸಮಾಜದಲ್ಲಿ ಬರಬೇಕು.ಆಗ ಮಾತ್ರ ಮನುಷ್ಯತ್ವ ಉಳಿಯಲು ಸಾಧ್ಯ ಎಂದಿದ್ದಾರೆ.

ನಮ್ಮ ರಾಜ್ಯದ ಎಲ್ಲಾ ವರ್ಗದ ಜನರಿಗೆ, ಬಡವರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಬಗ್ಗೆ ನಮ್ಮ ಸರ್ಕಾರ ಶ್ರಮ ವಹಿಸಿದೆ. ಹೀಗಾಗಿ ಎಲ್ಲಾ ಧರ್ಮದ ಜನರು, ಎಲ್ಲಾ ಪಕ್ಷದ ಬಡವರು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿಯವರೆಗೆ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗೆ ನೀಡಿದ್ದೇವೆ ಎಂದಿದ್ದಾರೆ.

ಕೊಟ್ಟಿಯೂರು ಜಾತ್ರೆ: ಭಕ್ತಿಯಲ್ಲಿ ಹೊಸ ಟ್ರೆಂಡ್!
ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು

2025 ರಲ್ಲಿ ಟ್ರೆಂಡಿಂಗ್‌ಗೆ ಬಂದಿರುವ ದೇವಸ್ಥಾನ ಮತ್ತು ಜಾತ್ರೆ ಎಂದರೆ ಉತ್ತರ ಮಲಬಾರು (ಕಣ್ಣೂರಿನ) ಕೊಟ್ಟಿಯೂರು ಶಿವ ದೇವಾಲಯ ಮತ್ತು ಅಲ್ಲಿ ನಡೆಯುವ ಕೊಟ್ಟಿಯೂರು ವೈಶಾಖ ಮಹೋತ್ಸವ. ನಾನು ಸುಮಾರು ಎರಡು ಮೂರು ವರ್ಷಗಳಿಂದ ಈ ದೇವಾಲಯ ಮತ್ತು ಜಾತ್ರೆಯ ವೀಡಿಯೋಗಳನ್ನು ನೋಡುತ್ತಾ ಬಂದಿದ್ದೇನೆ. ಈ ಬಗ್ಗೆ ಆ ಊರಿನಲ್ಲಿರುವ ನನ್ನ ಸ್ನೇಹಿತನ ಜೊತೆಗೆ ಮಾತನಾಡಿದ್ದೇನೆ.

ಈ ವರ್ಷ  ಆ ದೇವಾಲಯ ದಡೀರನೇ ಖ್ಯಾತಿಯನ್ನು ಪಡೆಯಿತು. ವರ್ಷಕ್ಕೊಮ್ಮೆ ಅಕ್ಕರೆ ಕೊಟ್ಟಿಯೂರು (ನದಿಯ ಆ ಭಾಗದ ಕೊಟ್ಟಿಯೂರು) ಎಂಬ ಕಾಡಿನಲ್ಲಿ ನಡೆಯುವ ವೈಶಾಖ ಮಹೋತ್ಸವಕ್ಕೆ ಈ ವರ್ಷ ಸಾವಿರ ಸಾವಿರ ಜನರು ಕರ್ನಾಟಕ, ತಮಿಳುನಾಡಿನಿಂದೆಲ್ಲಾ ದಂಡು ದಂಡಾಗಿ ಹೋಗುತ್ತಿದ್ದಾರೆ.

ನನ್ನ ಅಣ್ಣನೊಬ್ಬ ತಾನು ಆ ಜಾತ್ರೆಗೆ ಹೋಗುವುದಾಗಿ, ನನ್ನನ್ನು ಬರುವಂತೆ ಕೇಳಿಕೊಂಡ. ಆತನಿಗೆ ಈ ಜಾತ್ರೆಯ ಬಗ್ಗೆ ಫೇಸ್‌ಬುಕ್‌ನಿಂದ ಗೊತ್ತಾಗಿದ್ದು. ಫೇಸ್‌ಬುಕ್‌, ಇನ್ಸ್ಟಾಗ್ರಾಮಿನಲ್ಲಿ ಈ ಜಾತ್ರೆಯ ವೀಡಿಯೋಗಳು ಹರಿದಾಡುತ್ತಿವೆ. ಹಿಂದೊಮ್ಮೆ ಶಬರಿಮಲೆಗೆ ಹೋದಂತೆ, ಮಲಯಾಳಿಗಳಲ್ಲದವರೂ ಈ ಜಾತ್ರೆಗೆ ಗಾಡಿ ಮಾಡಿಕೊಂಡು ಹೋಗುತ್ತಾರೆ. ಅಲ್ಲಿ ಹೋಗಿ ಫೋಟೋ ತೆಗಿಸಿಕೊಂಡು, ವೀಡಿಯೋ ಮಾಡಿಕೊಂಡು ಅದಕ್ಕೆ ಪ್ರಚಾರವನ್ನು ನೀಡುತ್ತಿದ್ದಾರೆ. ಯೂಟ್ಯೂಬ್‌ ವ್ಲಾಗರ್‌ಗಳು ಕ್ಯಾಮರಾ ಹಿಡಿದುಕೊಂಡು, ಕೇಸರಿ ತೊಟ್ಟು ಜಾತ್ರೆಗೆ ಹೋಗಿ ‘ಕಂಟೆಂಟ್‌ʼ ಮಾಡುತ್ತಿದ್ದಾರೆ.

ಕೊಟ್ಟಿಯೂರಿನಲ್ಲಿರುವ ನನ್ನ ಸ್ನೇಹಿತ ಅನೀಶ್‌ ಕೊಟ್ಟಿಯೂರು ಹೇಳುವಂತೆ, “ಕೊಟ್ಟಿಯೂರಿನ ತುಂಬಾ KL ಗಾಡಿಗಳಿಗಿಂತ KA ಗಾಡಿಗಳೇ ತುಂಬಿ ಹೋಗಿವೆ.”

ಕಣ್ಣೂರಿನ ಕೊಟ್ಟಿಯೂರು ಗ್ರಾಮದಲ್ಲಿ ಎರಡು ದೇವಾಲಯಗಳಿಗೆ, ‘ಬಾವಲಿ ನದಿ’ಯ ಈ ಕಡೆಗೆ ಇರುವ ‘ಇಕ್ಕರೆ ಕೊಟ್ಟಿಯೂರಿನ’ ಶಿವನ್‌ ದೇವಾಲಯ ಮತ್ತು ಅ ಕಡೆ ಇರುವ ‘ಅಕ್ಕರೆ ಕೊಟ್ಟಿಯೂರುʼ ಎಂಬ ವರ್ಷಕ್ಕೊಮ್ಮೆ ವೈಶಾಖ ಮಾಸದಲ್ಲಿ ಮಾತ್ರ ಜನರ ಪ್ರವೇಶಕ್ಕೆ ಅವಕಾಶ ಇರುವ ಶಿವನ ಬನ, ಕಾಡು.

ಕೊಟ್ಟಿಯೂರು ವೈಶಾಖ ಮಹೋತ್ಸವ

ವೈಶಾಖ ಮಹೋತ್ಸಹ ಎನ್ನುವ ಬ್ರಾಹ್ಮಣರು ಅಕ್ಕರೆ ಕೊಟ್ಟಿಯೂರಿನಲ್ಲಿ ನಡೆಸುವ ಯಾಗ ಯಜ್ಞಾದಿಗಳನ್ನು ನಡೆಸುವ ಜಾತ್ರೆಗೆ ದಕ್ಷ ಭ್ರಹ್ಮನ ಮಗಳು, ಶಿವನ ಹೆಂಡತಿ ದಾಕ್ಷಾಯಿಣಿ ಯಾಗದ ಬೆಂಕಿಗೆ ಬೀಳುವ ಕತೆಯಾಗ ದಕ್ಷ ಯಜ್ಞದ ಕತೆಯೊಂದಿಗೆ ತಳುಕು ಹಾಕಿಕೊಂಡಿದೆ. ದಕ್ಷ ಯಜ್ಞ ನಡೆದದ್ದು ಇಲ್ಲಿಯೇ ಎಂದು ಇವರು ನಂಬುತ್ತಾರೆ. ಭಾರತದ ಅಲ್ಲಲ್ಲಿ ಈ ಕತೆಯನ್ನು ತಮ್ಮಲ್ಲೇ ನಡೆದದ್ದಾಗಿ ಹೇಳುತ್ತಾರೆ. ಉತ್ತರಾಖಂಡದ ಹರಿದ್ವಾರದ ಬಳಿ ಇರುವ ಕಂಕಾಳ್‌ನಲ್ಲಿ ದಕ್ಷ ಯಜ್ಞ ನಡೆದದ್ದು ಎಂಬುದು ತುಂಬಾ ಖ್ಯಾತವಾಗಿರುವ ನಂಬಿಕೆ. ಆದರೆ, ಸದ್ಯ ಕೊಟ್ಟಿಯೂರು ಟ್ರೆಂಡಿಂಗ್‌ನಲ್ಲಿ ಇರುವುದರಿಂದ ದಕ್ಷ ಯಜ್ಞ ನಡೆದದ್ದು ಕೊಟ್ಟಿಯೂರಿನಲ್ಲಿಯೇ ಎಂಬ ದೇವಾಲಯದ ಸ್ಥಳ ಪುರಾಣಗಳು ಹೇಳುತ್ತವೆ, ಅದನ್ನೇ ನಮ್ಮ ಯೂಟ್ಯೂಬರ್‌ಗಳೂ ಪ್ರಚಾರ ಮಾಡುತ್ತಾರೆ. ಸ್ಥಳ ಪುರಾಣಗಳು ಕಟ್ಟು ಕತೆಯಷ್ಟೇ, ಆ ಸ್ಥಳದ ಹೆಸರು, ಭೌಗೋಳಿಕತೆ, ಜನ ಸಮುದಾಯವನ್ನು, ಮೂಲ ಆರಾಧನಾ ಪದ್ದತಿಯನ್ನು ಜೋಡಿಸಿ ಹೊಸ ಕತೆಯನ್ನು ಬರೆದು, ಅದನ್ನು ಪುರಾಣದ ಜೊತೆಗೆ ಜೋಡಿಸುವುದು ಅದರಲ್ಲಿರುವ ವೈಶಿಷ್ಟ್ಯ. ಪಾಂಡವರು ವನವಾಸದಲ್ಲಿ ಎಲ್ಲಾ ಊರುಗಳಿಗೆ ಬಂದು ಶಿವಲಿಂಗ ಸ್ಥಾಪಿಸಿದಂತೆ!

ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಬಂದಿರುವ ಭಕ್ತರು

ಅನೀಶ್‌ ಒಂದು ಕತೆಯನ್ನು ಹೇಳಿದ. ಇದೇ ಕತೆಯನ್ನು ಕೊಟ್ಟಿಯೂರು ದೇವಾಲಯದ ಸ್ಥಳ ಪುರಾಣದಲ್ಲಿ ಕೂಡ ನೀಡಲಾಗಿದೆ: ಕುರಿಚ್ಯ ಎನ್ನುವ ಕಾಡಿನ ಜನಾಂಗದ ಬೇಟೆಗಾರರು ತಮ್ಮ ಬಾಣವನ್ನು ಹರಿತ ಮಾಡಲು ಕಲ್ಲೊಂದಕ್ಕೆ ಉಜ್ಜುವಾಗ, ಆ ಕಲ್ಲಿನಿಂದ ರಕ್ತ ಬರಲು ಆರಂಭವಾಯ್ತು! ಇದನ್ನು ಅವರು ಅಲ್ಲಿನ ಬ್ರಾಹ್ಮಣ ತರವಾಡು ಪಡಿಂಗಿಟ್ಟ ನಂಬೂತಿರಿ ಇಲ್ಲಂಗೆ ಬಂದು ಹೇಳುತ್ತಾರೆ. ಅವರು ಅದನ್ನು ಮನತನ ಗ್ರಾಮದ ನಾಯರ್‌ಗಳಿಗೆ ತಿಳಿಸಲು ಆ ಬೇಡರಿಗೆ ಹೇಳುತ್ತಾರೆ. ಹೀಗೆ ಅವರು ಸ್ವಯಂಭೂ ಲಿಂಗವನ್ನು ಪತ್ತೆ ಮಾಡುತ್ತಾರೆ.

ಇದು ಸ್ಥಳ ಪುರಾಣಗಳಲ್ಲಿ ಕಾಣುವ ಸಾಮಾನ್ಯವಾದ ಕತೆ. ಇದೇ ರೀತಿಯ ಕತೆಯನ್ನು ಅನೇಕ ದೇವಾಲಯಗಳಲ್ಲಿ ನೋಡಬಹುದು. ಮದರು ಎಂಬ ದಲಿತ ಮಹಿಳೆ ಕೆಲಸ ಮಾಡುವಾಗ, ಆಕೆಯ ಕತ್ತಿಯು ಕಲ್ಲೊಂದಕ್ಕೆ ತಾಗಿ, ಅದರಿಂದ ರಕ್ತ ಬಂತು. ಆ ಮದುರುವಿನಿಂದ ಪತ್ತೆಯಾದ ಲಿಂಗವೇ ಮದೂರು ಮದನಂತೇಶ್ವರ! ದಲಿತರಿಗೆ ಶಿವಲಿಂಗ ಸಿಗುವ ಐತಿಹ್ಯವೆಂದರೆ, ಮೂಲದಲ್ಲಿದ್ದ ಸಮುದಾಯಗಳ ಆರಾಧನಾ ಕ್ಷೇತ್ರಗಳನ್ನೇ ವೈದಿಕ ಶಿವಸ್ಥಾನಗಳಾಗಿ ಪರಿವರ್ತನೆಗೊಂಡ ಕತೆ. ಇಲ್ಲವೇ, ಬ್ರಾಹ್ಮಣೇತರ ಪೂಜಾರಿಗಳು ಆರಾಧಿಸಿಕೊಂಡು ಬರುತ್ತಿದ್ದ ದೇವಾಲಯಗಳು ವೈದಿಕ ಆರಾಧನೆಗೆ ಒಳಪಟ್ಟ ಸಂಗತಿಯನ್ನು ಈ ಕತೆಗಳು ಹೇಳುತ್ತವೆ.

ಕೊಟ್ಟಿಯೂರಿನ ಬಗ್ಗೆ ಬ್ರಿಟೀಷ್‌ ಮಾನವಶಾಸ್ತ್ರಜ್ಞ ಮತ್ತು ಪುರಾತತ್ವಶಾಸ್ತ್ರಜ್ಷ ಫ್ರೆಡ್ರಿಕ್ ಫಾಸೆಟ್ ಬರೆದಿರುವ “ದಿ ನಾಯರ್ಸ್‌ ಆಫ್ ಮಲಬಾರ್”‌ ಪುಸ್ತಕದಲ್ಲಿ ಕೆಲವು ಆಸಕ್ತಿಕರ ಸಂಗತಿಗಳು ದಾಖಲಾಗಿವೆ.

“ನಿಜವಾದ ಮಲಯಾಳಿ ಜಾತ್ರೆಯೆಂದರೆ ಉತ್ತರ ಮಲಬಾರಿನ ಕೊಟ್ಟಿಯೋರ್‌ನಲ್ಲಿ ನಡೆಯುವ ಜಾತ್ರೆ. ಅದು 3,000 ರಿಂದ 5,000 ಅಡಿ ಎತ್ತರದ ವೈನಾಡ್ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡಿನಲ್ಲಿ ನಡೆಯುತ್ತದೆ. ಇದನ್ನು ಜುಲೈನಲ್ಲಿ ಮಾನ್ಸೂನ್ ಮಳೆ ಉತ್ತುಂಗದಲ್ಲಿದ್ದಾಗ ನಡೆಸಲಾಗುತ್ತದೆ. ಜುಲೈನಲ್ಲಿ ಕೊಟ್ಟಿಯೋರ್‌ನಲ್ಲಿ ಸರಾಸರಿ ಮಳೆ ಕನಿಷ್ಠ 60 ಇಂಚು ಇರಬಹುದು, ಆದ್ದರಿಂದ ಭಕ್ತರು ಇಲ್ಲಿ ಒಳ್ಳೆಯ ಮಳೆಯನ್ನು ನೋಡುತ್ತಾರೆ. ಇದು ಕೊಟ್ಟಿಯೋರ್‌ನಲ್ಲಿ ಪರಸ್ಪರ ಬರೆಯದ ಮೇಲು ಮತ್ತು ಕೀಳು ಜಾತಿಗಳ ಜಾತ್ರೆ. ಇಲ್ಲಿಗೆ ನಾಯರ್‌ಗಳು ಮೊದಲು ಹೋಗುತ್ತಾರೆ, ಕೆಲವು ದಿನಗಳ ನಂತರ ತೀಯಾಗಳು ಹೋಗುತ್ತಾರೆ, ಹೀಗೆ ಮುಂದುವರಿಯುತ್ತದೆ. ಇದರ ಒಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಇದಕ್ಕೆ ಹೋಗುವ ಭಕ್ತರು ಗದ್ದಲ ಎಬ್ಬಿಸಿಕೊಂಡು ಹೋಗುತ್ತಾರೆ. ದಾರಿಯಲ್ಲಿ ಸಿಕ್ಕವರನ್ನು ಪರಸ್ಪರ ಅತ್ಯಂತ ಕೆಟ್ಟ ಮತ್ತು ಕೊಳಕು ಪದಗಳಲ್ಲಿ ನಿಂದಿಸುತ್ತಾರೆ. ಅದನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಬಹುಶಃ ಕೆಲವು ದಿನಗಳ ವರೆಗೆ ನಡೆಯುವ ಈ ಮೆರವಣಿಗೆಯಲ್ಲಿ, ಜನರು ಅತಿಯಾದ ಉತ್ಸಾಹದಿಂದ ಹೃದಯಕ್ಕೆ ತೃಪ್ತಿಯಾಗುವಷ್ಟು ನಿಂದಿಸುತ್ತಾರೆ. ಮಾತ್ರವಲ್ಲದೆ, ರಸ್ತೆಯ ಉದ್ದಕ್ಕೂ ಸಿಗುವ ವ್ಯಕ್ತಿ ಮತ್ತು ವಸ್ತುಗಳನ್ನು ಹಿಂಸಿಸುತ್ತಾರೆ. ಅಲ್ಲಿಂದ ಹಿಂತಿರುಗುವಾಗ ಶಾಂತವಾಗಿ ಬರುತ್ತಾರೆ.”

ಭಕ್ತರು ಈ ಪರಿಯಾಗಿ ಭಾವಾವೇಶದಿಂದ, ಹಿಂಸಾತ್ಮಕವಾಗಿ ಜಾತ್ರೆಗೆ ಹೋಗುವುದನ್ನು, ಅವರು ಬಳಸುವ ಭಾಷೆಯನ್ನು ಅರ್ಥ ಮಾಡಿಕೊಳ್ಳಲು  ಎಫ್ ಫಾಸೆಟ್‌ಗೆ ಆಗುವುದಿಲ್ಲ. ಆತ ಕೊಟ್ಟಿಯೂರಿನಲ್ಲಿ ದೇವರನ್ನು ನೋಡಲು ಬರುವ ಭಕ್ತರು ದೇವರನ್ನೂ, ತಮ್ಮೊಂದಿಗೆ ಇರುವ ಇತರ ಭಕ್ತರನ್ನೂ ಕೆಟ್ಟದಾಗಿ ನಿಂದಿಸುವುದನ್ನು ನೋಡಿ, ಇಂತಹದ್ದೇ ಆಚರಣೆ ತಿರುಪತಿಯ ಗಂಗಮ್ಮ ಉತ್ಸವದಲ್ಲಿಯೂ ನೋಡಿರುವುದಾಗಿ ಹೇಳುತ್ತಾನೆ.

ಪ್ರತಿ ವರ್ಷ ಮೇ ತಿಂಗಳ ಮೊದಲ ಮತ್ತು ಎರಡನೇ ವಾರಗಳ ನಡುವೆ ಬರುವ ತಿರುಪತಿಯ ಗಂಗಮ್ಮ ಜಾತ್ರೆಯಲ್ಲಿಯೂ ಈ ತೆರನಾದ ಭಕ್ತಿಯನ್ನು ಜಾತ್ರೆಗೆ ಬರುವ ಭಕ್ತರು ತೋರಿಸುತ್ತಾರೆ. ಗಂಗಮ್ಮನನ್ನು ತಿರುಪತಿ ಬಾಲಾಜಿ (ವೆಂಕಟೇಶ್ವರನ) ಸಹೋದರಿ ಎಂದು ನಂಬಲಾಗುತ್ತದೆ. ಈ ಜಾತ್ರೆಯಲ್ಲಿ ದೇವಿಯನ್ನು ದೇವಿಯನ್ನು ಅಶ್ಲೀಲವೆಂದು ಪರಿಗಣಿಸಲಾಗುವ ಭಾಷೆಯಲ್ಲಿ ನಿಂದಿಸಲಾಗುತ್ತದೆ. “ಗಂಗಮ್ಮ! ನಿನ್ನದು ಬುಟ್ಟಿಯಷ್ಟು ದೊಡ್ಡದಾದ… (ಯೋನಿ)” ಎಂಬಂತ ನಿಂದಾಸ್ತುತಿಯನ್ನು ಭಕ್ತರು ಮಾಡುತ್ತಾರೆ. ಮೆರವಣಿಗೆ ದೇವಾಲಯಕ್ಕೆ ಬರುತ್ತಿದ್ದಂತೆ ಒಬ್ಬರನ್ನೊಬ್ಬರು ಮೀರಿಸಬೇಕು ಎಂಬಂತೆ ನಿಂದಾಸ್ತುತಿ ಮಾಡುತ್ತಾರೆ.

ಇದನ್ನು ಅವರು ಹರಕೆಯಂತೆ ಮಾಡುತ್ತಾರೆ. ಕುಣಿಯುತ್ತಾ, ಲೈಂಗಿಕ ಸನ್ನೆಗಳನ್ನು ಮಾಡುತ್ತಾ, ಆವೇಷಗೊಳ್ಳುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ. ಕೊನೆಗೆ ಪ್ರಜ್ಞೆಯನ್ನು ಕಳೆದುಕೊಂಡು ಬೀಳುತ್ತಾರೆ. ತನ್ನ ಮಗನ ಅನಾರೋಗ್ಯಕ್ಕೆ ತಾಯಿಯೂ ಇಂತಹ ಹರಕೆಯನ್ನು ಕಟ್ಟಿಕೊಳ್ಳುತ್ತಾಳೆ.

ನಾನು ನೋಡಿದ ಇಂತಹ ಒಂದು ಜಾತ್ರೆಯೆಂದರೆ, ಕೋಡಂಗಲ್ಲೂರಿನ ಭಗವತಿಯ ಭರಣಿ ಜಾತ್ರೆ. ಇದರಲ್ಲಿ ಸಾವಿರಾರು ಮಂದಿ ಮಹಿಳೆಯರು, ಪುರುಷರು, ಮಂಗಳಮುಖಿಯರು ಗುಂಪು ಗುಂಪಾಗಿ ಕೋಲಾಟವಾಡುತ್ತಾ ಭದ್ರಕಾಳಿಯನ್ನು ಲೈಂಗಿಕ ಪರಿಭಾಷೆಗಳಿಂದ ನಿಂದಿಸುತ್ತಾರೆ. ಇದಕ್ಕೆ ಭರಣಿ ಪಾಟ್ಟ್‌ ಎಂದು ಕರೆಯುತ್ತಾರೆ. ಇದಕ್ಕಾಗಿ ಅವರು ಹಾಡುಗಳನ್ನು ಕಟ್ಟುತ್ತಾರೆ. “ಕೋಡಂಗಲ್ಲೂರಮ್ಮನಿಗೆ……ಮಾಡಬೇಕೆಂದರೆ…..ಧ್ವಜಮರದಂತ…..” ಇಂತಹ ಹಾಡುಗಳನ್ನು ಕಟ್ಟಿ ಹಾಡುತ್ತಾರೆ. ರಸ್ತೆಯಲ್ಲಿ ಕಾವಲು ಕಾಯುವ ಪೋಲೀಸನ್ನೂ ಬಿಡುವುದಿಲ್ಲ. ಅನೇಕ ಬೆಳಚ್ಚಪಾಡ ಗಂಡಸರು, ಹೆಂಗಸರು ಕೈಯಲ್ಲಿ ಗಗ್ಗರ (ಚಿಲಂಬು) ಮತ್ತು ಕಡ್ಸಲೆ (ಕತ್ತಿ) ಹಿಡಿದು ರಕ್ತಸಿಕ್ತವಾಗಿ ಆವೇಷಗೊಂಡು ಕೋಡಂಗಲ್ಲೂರು ಕ್ಷೇತ್ರದ ಸುತ್ತ ಓಡುತ್ತಾರೆ.

ಕೋಡಂಗಲ್ಲೂರು ಭರಣಿ ಜಾತ್ರೆ

ಈಗ ಸದ್ಯ ಟ್ರೆಂಡಿಂಗ್‌ನಲ್ಲಿ ಇರುವ ಕೊಟ್ಟಿಯೂರು ವೈಶಾಖ ಜಾತ್ರೆಯಲ್ಲಿಯೂ ಇಂತಹ ಆಚರಣೆಗಳಿದ್ದವು ಎಂದು ಫಾಸೆಟ್‌ ದಾಖಲಿಸಿದ್ದಾನೆ. 1894 ರಲ್ಲಿ ಫ್ರೆಡ್ರಿಕ್ ಫಾಸೆಟ್ ಕಂಡದ್ದೇನು ಎನ್ನುವುದನ್ನು ನೋಡೋಣ. ಅಲ್ಲಿ ಚೌಕಾಕಾರದ ಹುಲ್ಲಿನ ಕಟ್ಟಡ, ಮಧ್ಯದಲ್ಲಿ ದೇವಾಲಯ. ಜನರು ದೇವರನ್ನು ಪೆರುಮಾಳ್‌ (ಅಥವಾ ಪೆರುಮಾಳ್‌ ಈಶ್ವರ) ಎಂದು ಕರೆಯುತ್ತಾರೆ. (ಇದು ಇಕ್ಕರೆ ಕೊಟ್ಟಿಯೂರು ಶಿವ ದೇವಾಲಯ) ಆದರೆ ಅದರ ಒಳಗೆ ಏನಿದೆ ಎನ್ನುವುದನ್ನು ನೋಡಲು ಫಾಸೆಟ್‌ಗೆ ಅನುಮತಿ ಕೊಡಲಿಲ್ಲ. ಅವನು ಅಲ್ಲಿನ ಕೆಲವು ನಂಬೂತಿರಿ ಪುರೋಹಿತರ ಜೊತೆಗೆ ಮಾತಿಗಿಳಿದ. ಅವರು ಆ ಹಬ್ಬದ ದಿನಗಳಲ್ಲಿ ಆ ಕಡೆಯ ಕಾಡಿನಲ್ಲಿ ಒಂಟಿಯಾಗಿರಬೇಕು ಎಂದು ಹೇಳಿದರು. ಅವರು ನೀಡಿದ ಉಪಹಾರ, ಬೆಣ್ಣೆ-ಹಾಲು ಮತ್ತು ಸಕ್ಕರೆಯನ್ನು ಕೃತಜ್ಞತೆಯಿಂದ ಸ್ವೀಕರಿಸಿದ. ನಂಬೂತಿರಿಗಳು, ಬಹಳ ಅತ್ಯಾಧುನಿಕ ವ್ಯಕ್ತಿಗಳು ಮತ್ತು ಮಡಿ ಮೈಲಿಗೆ ಪಾಲಿಸುತ್ತಿದ್ದರು. ಹಾಲು ಮತ್ತು ಸಕ್ಕರೆಯನ್ನು ನೆಲದ ಮೇಲೆ ಇರಿಸಿ ಫಾಸೆಟ್‌ನನ್ನು ಆಹ್ವಾನಿಸಿದರು. ಫಾಸೆಟ್‌ನ ನಾಯಿಗೆ ತಿನ್ನಲು ಅವರು ದೊಡ್ಡ ತೆಂಗಿನಕಾಯಿಯ ತುಂಡನ್ನು ಎಸೆದರು.

ಫಾಸೆಟ್‌ ಅಲ್ಲಿಂದ ಅಕ್ಕರೆ ಕೊಟ್ಟಿಯೂರಿನ ಕಾಡಿನ ಕ್ಷೇತ್ರಕ್ಕೆ ಹೋಗುತ್ತಾನೆ. ಜಾತ್ರೆಯ ಸಮಯದ ಅಲ್ಲದ ಕಾರಣ, ಉಳಿದ ದಿನಗಳಲ್ಲಿ ಅಲ್ಲಿಗೆ ಹೋಗಲು ಜನ ಹೆದರುತ್ತಾರೆ. ನನ್ನ ಸ್ನೇಹಿತ ಅನೀಶ್‌ ಹೇಳುವಂತೆ, ಅವನ ಅಜ್ಜನಿಗೆ, ಅಪ್ಪನಿಗೆ ಬೇಟೆಗೆ ಕಾಡಿಗೆ ಹೋಗುವ ಸಮಯದಲ್ಲಿ ಆ ಕಾಡಿನ ಪರಿಸರದಲ್ಲಿ ಏನೇನೋ ಕಂಡುಬಂದಿತ್ತು.

ಫಾಸೆಟ್‌ ಜೊತೆಗೆ ನಾಯರ್‌ ಮತ್ತು ಕುರಿಚ್ಚನ್‌ ಇದ್ದರು. ಅವರಿಗೆ ನದಿಯನ್ನು ದಾಟಿ ಆ ಕಾಡಿಗೆ ಹೋಗಲು ಭಯವಿತ್ತು. ಅಲ್ಲಿಗೆ ಉಳಿದ ದಿನಗಳಲ್ಲಿ ಹೋಗುವವರು ಸಾಯುತ್ತಾರೆ ಎಂಬ ನಂಬಿಕೆ ಇತ್ತು. “ನಾವು ಆ ಪವಿತ್ರ ಸ್ಥಳವನ್ನು ತಲುಪಲು ಮೊಣಕಾಲು ಮಳುಗುವಷ್ಟು ನೀರು ಇರುವ, ಸುಮಾರು 30 ಗಜ ಅಗಲದ ಸಣ್ಣ ನದಿಯ ಮೂಲಕ ನಡೆದೆವು.  ನಮ್ಮೊಂದಿಗೆ ಇದ್ದ ನಾಯರ್‌ ಮತ್ತು ಕುರಿಚ್ಚನ್‌ ಮುಖದಲ್ಲಿ ಆತಂಕವಿತ್ತು. ಅವರು ನಮ್ಮೊಂದಿಗೆ ನದಿ ದಾಟಲು ಧೈರ್ಯ ಮಾಡಲಿಲ್ಲ,” ಎನ್ನುತ್ತಾನೆ ಫಾಸೆಟ್.‌

ಈ ಕಾಡಿಗೆ ಹೋಗುವ ತನ್ನ ಸಾಹಸವನ್ನು ವಿವರಿಸುತ್ತಾ “ಎವ್ರಿಡೈಸ್‌ನನ್ನು ಹುಡುಕಲು ಅಧೋಲೋಕಕ್ಕೆ ಹೋದ ಓರ್ಫಿಯಸ್, ನರಕದೊಳಗೆ ಪ್ರವೇಶಿಸಲು ಹೊರಟ ಡಾಂಟೆಯೂ” ಇಷ್ಟು ಭಯಾನಕ ಪ್ರಯಾಣವನ್ನು ಕೈಗೊಂಡಿರಲಿಲ್ಲ ಎಂದು ಹೇಳುತ್ತಾನೆ. ಪವಿತ್ರ ಸ್ಥಳವನ್ನು ತಲುಪಿದಾಗ, ಅದೊಂದು ಹುಲ್ಲು ಪ್ರದೇಶ. ಹಬ್ಬದ ಸಮಯದಲ್ಲಿ ಅದು ನೀರಿನಿಂದ ಮುಚ್ಚಿರುತ್ತದೆ. ಮಧ್ಯದಲ್ಲಿ 12 ಅಡಿ ವ್ಯಾಸದ ರಾಶಿ ಹಾಕಿದ ಕಲ್ಲುಗಳ ವೃತ್ತವಿದೆ. ಕಲ್ಲುಗಳ ರಾಶಿಯ ಮಧ್ಯದಲ್ಲಿ ಒಂದು ಒರಟಾದ ಲಿಂಗ.

ದೇವರ ಸಾನಿಧ್ಯ

ನಿಧಿಯನ್ನು ಹುಡುಕುವ ಯಾರೋ ಆ ಲಿಂಗವನ್ನು ಮುರಿದಿದ್ದರು ಎಂದು ಫಾಸೆಟ್‌ ಹೇಳುತ್ತಾನೆ. ಲಿಂಗದ ವೃತ್ತದಿಂದ ಪೂರ್ವ ದಿಕ್ಕಿನಲ್ಲಿ ಒಂದು ಉದ್ದವಾದ ಶೆಡ್ ಇದೆ, ಅದರ ಮಧ್ಯದಲ್ಲಿ ಇಟ್ಟಿಗೆಯ ಉದ್ದವಾದ ಎತ್ತರದ ವೇದಿಕೆ ಇದೆ. ಇದನ್ನು ಅಡುಗೆ ಮಾಡುವ ಸ್ಥಳವಾಗಿ ಬಳಸಲಾಗುತ್ತಿತ್ತು. ಹಬ್ಬದ ಸಮಯದಲ್ಲಿ ಜನರು ತಂಗಿದ್ದ ಹುಲ್ಲಿನ ಶೆಡ್‌ಗಳು ಸಹ ಇದ್ದವು. ಹುಲ್ಲು ಮತ್ತು ಕಳೆ ಗಿಡಗಳು ಎತ್ತರವಾಗಿ ಬೆಳೆದಿದ್ದವು. ಶೆಡ್‌ಗಳು ಶಿಥಿಲಗೊಂಡಿದ್ದವು, ತುಂಬಾ ವರ್ಷಗಳಿಂದ ಬಳಸದಿರುವಂತೆ ಕಾಣುತ್ತಿದ್ದವು.

ಜಾತ್ರೆಗೆ ಹೋಗುವ ಎಲ್ಲರೂ ತಮ್ಮೊಂದಿಗೆ ಕಾಣಿಗೆಯನ್ನು ತೆಗೆದುಕೊಂಡು ಹೋಗುತ್ತಾರೆ. ತೀಯಾಗಳು ಎಳೆನೀರು ತೆಗೆದುಕೊಂಡು ಹೋಗುತ್ತಾರೆ. “ನಾಯರ್‌ಗಳು ಏನು ತೆಗೆದುಕೊಂಡು ಹೋಗುತ್ತಾರೆ,” ಎಂಬುದು ತಿಳಿದಿಲ್ಲ ಎಂದು ಫಾಸೆಟ್‌ ಹೇಳುತ್ತಾನೆ. ಜಾತ್ರೆಗೆ ಹೋದವರು ತಾಳೆ ಮರದ ಮಡಲನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ. (ಈಗ ಬಿದಿರನ್ನು ಸೀಳಿ ಮಾಡಿದ ಚವಳವನ್ನು ತೆಗೆದುಕೊಂಡು ಹೋಗುತ್ತಾರೆ, ಅವನ್ನು ಕೊಟ್ಟಿಯೂರಿನಲ್ಲಿ ಮಾರಾಟವೂ ಮಾಡುತ್ತಾರೆ)

ಮಾರಾಟಕ್ಕೆ ಇಟ್ಟಿರುವ ಚವಳ

ಸಾಮಾನ್ಯವಾಗಿ ವೃತ್ತಾಕಾರವಾಗಿ ಕಲ್ಲುಗಳನ್ನು ಜೋಡಿಸಿ, ಅದರ ಒಳಗೆ ಒಂದು ಕಲ್ಲನ್ನು ಇಡುವುದು, ಅಥವಾ ಕಲ್ಲಿನ ಗೂಡಿನಂತಹ ರಚನೆ ಇಡುವುದು ಪ್ರಾಚೀನ ಸಮಾಧಿಗಳ ಲಕ್ಷಣ. ಕ್ರಿಸ್ತಪೂರ್ವ 800 ರ ಹಿಂದಿನ ವಿಶಿಷ್ಟ ಮೆಗಾಲಿಥಿಕ್ ಸಮಾಧಿಯೊಂದು ದಕ್ಷಿಣ ಕನ್ನಡದ ಕಡಬ ತಾಲೂಕಿನ ರಾಮಕುಂಜದಲ್ಲಿ ಪತ್ತೆಯಾಗಿತ್ತು. ಇಂತಹ ಸಮಾಧಿಗಳನ್ನು ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲೂ ನೋಡಿದ್ದೇನೆ.

ಕುಮಾರ ಪರ್ವತದಲ್ಲಿರುವ ಸಮಾಧಿಗಳಲ್ಲಿ ಒಂದು

ಇಂತಹ ಸಮಾಧಿಗಳನ್ನು ಜನರು ಆರಾಧಿಸುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಇಂತಹ ಸಮಾಧಿಗಳ ಮೇಲೆಯೇ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಬೌದ್ಧ ಸ್ತೂಪಗಳ ಉತ್ಖನನಗಳನ್ನು ಮಾಡುವಾಗ, ಮಣ್ಣಿನ ಅಡಿಯಲ್ಲಿ ಪ್ರಾಚೀನ ಸಮಾಧಿಗಳು ಕಂಡುಬಂದಿರುವುದನ್ನು ನಾವು ನೋಡಿದ್ದೇವೆ. ಕೊಟ್ಟಿಯೂರಿನ ಆರಾಧನೆಯೂ ಇಂತಹ ಕ್ಷೇತ್ರಗಳಲ್ಲೇ ನಡೆಯುತ್ತದೆ. ಬುಡಕಟ್ಟು ಜನರು ತಮ್ಮ ಹಿರಿಯರ ಸಮಾಧಿಗಳಲ್ಲಿ ನಡೆಸುತ್ತಿದ್ದ ಆರಾಧನೆಗಳು ವೈದಿಕ ಶೈವ ದೇವಾಲಯವಾಗಿ ಬದಲಾಗಿರಬಹುದು.

ಇದಿಷ್ಟು, ಕೊಟ್ಟಿಯೂರಿನ ಬಗ್ಗೆ.

ಕೊಟ್ಟಿಯೂರಿಗೆ ಸದ್ಯ ಜನರು ಶಬರಿಮಲೆಗೆ ಹೋದಂತೆ ಯಾತ್ರೆ ಹೋಗಲು ಆರಂಭಿಸಿದ್ದಾರೆ. 1940 ರ ದಶಕದಲ್ಲಿ, ಶಬರಿಮಲೆ ಅಯ್ಯಪ್ಪ ದೇವಾಲಯವು ಕೇರಳದ ಹೊರಗಿನ ಪ್ರದೇಶಗಳಲ್ಲಿ ವ್ಯಾಪಕವಾದ ಪ್ರಚಾರದಲ್ಲಿರಲಿಲ್ಲ. 1980 ರ ದಶಕದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ ಬಂದ ನಂತರ, ದೇವಾಲಯವು ಭಾರಿ ಜನಪ್ರಿಯತೆಯನ್ನು ಗಳಿಸಿತು. ತಮಿಳುನಾಡು ಮತ್ತು ಕರ್ನಾಟಕದ ಭಕ್ತರು ದಂಡು ದಂಡಾಗಿ ಬರಲು ಆರಂಭಿಸಿದರು. ಸಿನೇಮಾ ನಟರು, ಸಲಬ್ರೆಟಿಗಳು ಬರಲು ಆರಂಭಿಸಿದರು. ಇದಕ್ಕೆ ಮುಖ್ಯವಾದ ಕಾರಣ, 1975 ರ ಮಲಯಾಳಂ ಚಲನಚಿತ್ರ ಸ್ವಾಮಿ ಅಯ್ಯಪ್ಪನ್. ಈ ಚಲನಚಿತ್ರದ ಜನಪ್ರಿಯತೆಯ ನಂತರ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಅಯ್ಯಪ್ಪನ ಕತೆ ಹೇಳುವ ಸಿನೇಮಾಗಳು ಬಂದವು. ಟಿವಿ ಕಾರ್ಯಕ್ರಮಗಳು, ಭಕ್ತಿಗೀತೆಗಳು ಮತ್ತು ಭಜನೆಗಳ ಮೂಲಕ ಪ್ರಚಾರ ಪಡೆಯಿತು. ಶಬರಿ ಮಲೆಯ ಜ್ಯೋತಿಯ ಬಗ್ಗೆ ಅತಿಮಾನುಷ ಪರಿಕಲ್ಪನೆಗಳು ಹುಟ್ಟಿಕೊಂಡವು, ಸದ್ಯ ಇದು ಮನುಷ್ಯರ ಕೆಲಸ ಎಂಬುದು ಸಾಬೀತಾಗಿದೆ.

ಬಾಬಾ ಬುಡನ್‌ ಗಿರಿ – ದತ್ತ ಪೀಠದ ವಿವಾದದ ಸಮಯದಲ್ಲಿ, ಹಿಂದುತ್ವವಾದಿ ಸಂಘಟನೆಗಳು ಮತ್ತು ಕರ್ನಾಟಕ ಬಿಜೆಪಿ ಶಬರಿಮಲೆಯ ಭಕ್ತರು ವ್ರತ ಹಿಡಿಯುವಂತೆ ‘ದತ್ತ ಮಾಲೆʼ ಎಂಬ ಮಾಲೆ ಧರಿಸಿ, ಯಾತ್ರೆ ಹೋಗುವ ಹೊಸ ಸಂಸ್ಕೃತಿಯನ್ನು ತಂದರು. ಇದರ ಜನಪ್ರಿಯತೆ ಈಗ ಕಡಿಮೆಯಾಗುತ್ತಿದೆ.

ಸದ್ಯ ಕರ್ನಾಟಕದಲ್ಲಿ ಕೊರಗಜ್ಜ ಎಂಬ ತುಳುನಾಡಿನ ದೈವ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಕೊರಗಜ್ಜನ ಹೆಸರಿನಲ್ಲಿ ಒಳ್ಳೆಯ ಸಂಪಾದನೆಯನ್ನು ಮಾಡುವ ಪ್ರವೃತ್ತಿಯೂ ಬೆಳೆದಿದ್ದು, ಇದಕ್ಕೆ ಅನೇಕ ದೈವಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೊರಗಜ್ಜ ಎಂಬ ಖ್ಯಾತವಲ್ಲದ ದೈವವು ದಿಡೀರನೇ ಖ್ಯಾತಿಯನ್ನು ಪಡೆಯಿತು. ಬೆಂಗಳೂರು, ಮೈಸೂರಿನಲ್ಲಿ ಕೊರಗಜ್ಜನ ಗುಡಿಗಳು ಎದ್ದವು. ಬೆಂಗಳೂರಿನ ಆಟೋಗಳಲ್ಲಿ ಕೊರಗಜ್ಜನ ಸ್ಟಿಕ್ಕರ್‌ ಅಂಟಿಸಿ, ‘ಸ್ವಾಮಿ ಕೊರಗಜ್ಜʼ ಎಂದು ಬರೆದಿರುವುದನ್ನು ನೋಡಿದ್ದೇನೆ.

ಕಾಂತಾರ ಎಂಬ ಕನ್ನಡ ಸಿನೇಮಾದ ನಂತರ ಪಂಜುರ್ಲಿ ಮತ್ತು ಗುಳಿಗ ಎಂಬೆರಡು ತುಳುನಾಡಿನ ದೈವಗಳು ಇಡೀ ಭಾರತದಲ್ಲಿ ಪ್ರಚಾರಕ್ಕೆ ಬಂದವು. ಇವುಗಳ ವೇಷ ಕಟ್ಟಿಕೊಂಡು ವೇದಿಕೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಅಭಿನಯಿಸುವ, ಮೆರವಣಿಗೆ ಮಾಡುವ ಹೊಸ ಪ್ರವೃತ್ತಿಯೊಂದು ಆರಂಭ ಆಯ್ತು. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ, ಇತರ ಭಾಷೆಗಳ ರಿಯಾಲಿಟಿ ಶೋಗಳಲ್ಲೂ ಹೋ….. ಎನ್ನುತ್ತಾ ಕುಣಿಯುವ “ಕಾಂತಾರದ ಪಂಜುರ್ಲಿ, ಗುಳಿಗ” ರನ್ನು ನೋಡಿದ್ದೇವೆ. ಆರಂಭದಲ್ಲಿ ಕಾಂತಾರವನ್ನು “ದೈವಾರಾಧನೆಯನ್ನು ಪ್ರಪಂಚಕ್ಕೆ ತಿಳಿಸಿದ ಸಿನೇಮಾ” ಎಂದು ಹೊಗಳಿದ ಭಕ್ತರು ಈಗ ಸಿನೇಮಾದ ಪ್ರಚಾರದಿಂದ ಹುಟ್ಟಿಕೊಂಡ ಈ ರೀತಿಯ ಹೊಸ ಬೆಳವಣಿಗೆಯ ಬಗ್ಗೆ ಅಸಮಧಾನವನ್ನು ಹೊಂದಿದ್ದಾರೆ.

ಜನರು ಹೊಸ ಹೊಸ ದೇವರಿಗೆ ಮೊರೆ ಹೋಗುವ, ತಮ್ಮ ಭಕ್ತಿಯನ್ನು ತೋರಿಸುವ ಪ್ರವೃತ್ತಿಗೆ ಕುತೂಹಲಕಾರಿಯಾದ ನಿದರ್ಶನವೆಂದರೆ ‘ಸಂತೋಷಿ ಮಾʼ ಎಂಬ ದೇವತೆ. 1960 ರ ದಶಕದಲ್ಲಿ ಉತ್ತರ ಪ್ರದೇಶದ ಮಹಿಳೆಯರು ಪೂಜಿಸುತ್ತಿದ್ದ ಸಂತೋಷಿ ಮಾ ಎಂಬ ದೇವತೆಯನ್ನು ‘ಜೈ ಸಂತೋಷಿ ಮಾʼ ಎಂಬ ಸಿನೇಮಾ ಇಡೀ ದೇಶಕ್ಕೆ ಪರಿಚಯಿಸಿತು. ಇದಕ್ಕೂ ಹಿಂದೆ ಪುರಾಣದ ಯಾವುದೇ ಹಿನ್ನಲೆ ಇಲ್ಲದ ಈ ದೇವತೆಗೆ ಪುರಾಣಗಳು ಹುಟ್ಟಿಕೊಂಡವು.

1975 ರಲ್ಲಿ ಶೋಲೆ ಮತ್ತು ದೀವಾರ್ ಜೊತೆಗೆ, ಅಪರಿಚಿತ ಕಲಾವಿದರನ್ನು ಹಾಕಿಕೊಂಡು ಕಡಿಮೆ ಬಜೆಟ್ ನಲ್ಲಿ ‘ಜೈ ಸಂತೋಷಿ ಮಾʼ ಸಿನೇಮಾ ಬಂತು. ಬಹುತೇಕ ನೃತ್ಯಗಾರ್ತಿಯರು, ಕಲಾವಿದೆಯರನ್ನು ವೇಶ್ಯಾಗೃಹಗಳಿಂದ ಕರೆಸಿಕೊಂಡು ಬರಲಾಗಿತ್ತು.

ಈ ಬಗ್ಗೆ ಮಿಂಟ್‌ನಲ್ಲಿ ಸಂತೋಷಿ ಮಾ ಪಾತ್ರದಾರಿ ನಟಿ ಅನಿತಾ ಗುಹಾ, ಚಿತ್ರದ ಯಶಸ್ಸನ್ನು ವಿವರಿಸುತ್ತಾ, “ಪ್ರೇಕ್ಷಕರು ಸಿನೇಮಾವನ್ನು ಮೆಚ್ಚಿ ಪರದೆಯ ಮೇಲೆ ನಾಣ್ಯಗಳು, ಹೂವು, ಅಕ್ಕಿ ಎಸೆಯುತ್ತಿದ್ದರು. ಬರಿಗಾಲಿನಲ್ಲಿ ಥಿಯೇಟರ್‌ಗೆ ಬಂದು ಸಿನೇಮಾ ನೋಡುತ್ತಿದ್ದರು. ಬಾಂದ್ರಾದಲ್ಲಿ ಥಿಯೇಟರ್‌ ಹೊರಗೆ ಒಂದು ಸಣ್ಣ ಗುಡಿ ಕೂಡ ಕಟ್ಟಿದ್ದರು. 50 ವಾರಗಳ ಕಾಲ ಸಿನೇಮಾ ಓಡಿತು. ಅದೊಂದು ಪವಾಡ,” ಎಂದು ಹೇಳುತ್ತಾರೆ.

ಈ ಸಿನೇಮಾದಲ್ಲಿ ಸಂತೋಷಿ ಮಾತೆಯ ವ್ರತ ಹೇಗೆ ಮಾಡೋದು, ದೈವಿಗೆ ಯಾವ ನೈವೇದ್ಯ ಇಡೋದು, ಶುಕ್ರವಾರ ಉಪವಾಸ ಮಾಡೋದು ಮೊದಲಾದ ಪ್ರಸಂಗಗಳಿಗೆ. ಈಗಲೂ ಈ ದೇವಿಯ ಭಕ್ತರು ಶುಕ್ರವಾರ ಉಪವಾಸ ಮಾಡುತ್ತಾರೆ. “ಮೈ ತೋ ಆರತಿ ಉತರು ರೇ ಸಂತೋಷಿ ಮಾತಾ ಕಿ” ಎಂಬ ಹಾಡು ತುಂಬಾ ಫೇಮಸ್‌ ಆಯ್ತು. ಈ ಸಿನೇಮಾ ಸದ್ಯ ಯೂಟ್ಯೂಬಿನಲ್ಲಿಯೂ ಇದೆ.

ಬಜೆಟ್‌ ಮತ್ತು ಸಂಪಾದನೆಗೆ ಹೋಲಿಸಿದರೆ, ಈ ಸಿನೇಮಾವು ಇದರ ಜೊತೆ ಜೊತೆಗೆ ರಿಲೀಸ್‌ ಆದ ಶೋಲೆ ಮತ್ತು ದೀವಾರ್‌ಗಿಂತ ಸಕ್ಸಸ್‌ ಕಂಡಿತು.

ಸದ್ಯ ಕೋಳಿಯ ಮೇಲೆ ಕೂತಿರುವ ಸಂತೋಷಿ ಮಾತೆಯ ಪೋಟೋವನ್ನು ಲೈಂಗಿಕ ಅಲ್ಪಸಂಖ್ಯಾತರ ಮನೆಗಳಲ್ಲಿ, ವೃಶ್ಯಾಗೃಹಗಳಲ್ಲಿ ನೋಡಬಹುದು. ಬೆಂಗಳೂರಿನ ಬಿನ್ನಿಮಿಲ್‌ ರೋಡಿನಲ್ಲಿ ಕಾರವಾರದಲ್ಲಿ ಈ ಸಂತೋಷಿ ಮಾತೆಯ ದೇವಾಲಯಗಳಿವೆ.

ಕಾಲಕಾಲಕ್ಕೆ ಹೊಸ ದೇವರು ಹುಟ್ಟುತ್ತವೆ, ಯಾರಿಗೂ ತಿಳಿಯದ ದೇವರೊಂದು ದಿಡೀರ್‌ ಖ್ಯಾತಿಯನ್ನು ಪಡೆಯುತ್ತದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಸಿನೇಮಾಗಳ ನಂತರ ಮಂತ್ರಾಲಯಕ್ಕೆ ಬೇಟಿ ಕೊಡುವ ಭಕ್ತರ ಸಂಖ್ಯೆ ದಡೀರ್‌ ಹೆಚ್ಚಾಯಿತು.

ಒಂದೊಮ್ಮೆ ನಾನು ಬಾಲ್ಯದಲ್ಲಿ ಹೋಗುತ್ತಿದ್ದ, ಜನಜಂಗುಳಿಯಿಂದ ತುಂಬಿದ್ದ ಕಾಸರಗೋಡಿನ ಮಲ್ಲ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈಗ ಭಕ್ತರ ಸಂಖ್ಯೆ ಎರಡಂಕೆಗೆ ಇಳಿದಿದೆ. ಹಿಂದಿನಂತೆ ದಿನಂಪ್ರತಿ ನೂರಾರು ಭಕ್ತರು ಬರುತ್ತಿಲ್ಲ.

ದಕ್ಷಿಣ ಕನ್ನಡದ ಬೆಳಾಲ್‌ ಎಂಬ ಗ್ರಾಮದಲ್ಲಿ ಮರದಡಿಯಲ್ಲಿ ಇದ್ದ ದೇವಿಗೆ ಅರಿಕೋಡಿ ಚಾಮುಂಡೇಶ್ವರಿ ಎಂದು ದೇವಾಲಯ ಕಟ್ಟಿಸಲಾಗಿದೆ. ಇಲ್ಲಿಗೆ ಹೆಚ್ಚು ಪ್ರಚಾರವನ್ನು ಕೊಟ್ಟಿದ್ದು ಕೆಲವು ಯೂಟ್ಯೂಬರ್‌ಗಳು. ಈಗ ಅಲ್ಲೊಬ್ಬರು ಸ್ವಯಂಘೋಷಿತ ಧರ್ಮದರ್ಶಿ ಇದ್ದಾರೆ. ಅವರನ್ನು ಬೇಟಿ ಮಾಡಲು ಟೋಕನ್‌ ತೆಗೆದುಕೊಳ್ಳಬೇಕು. ಈ ದೇವಾಲಯದ ಪೇಸ್‌ಬುಕ್‌ ಪೇಜ್‌ನಲ್ಲಿ, “ಮಾತು ಬಾರದವರಿಗೆ ಮಾತು ಬಂತು, ಮಕ್ಕಳಾಗದವರಿಗೆ ಮಕ್ಕಳಾಯಿತು,” ಎಂಬ ಅವೈಜ್ಞಾನಿಕ ನಂಬಿಕೆಗಳನ್ನು ಹರಡಲಾಗುತ್ತಿದೆ. ದೈವಾರಾಧನೆಯ ಪಾರಂಪರಿಕ ಶೈಲಿಗೆ ಭಿನ್ನವಾಗಿ ವೈಭವೋಪೇತ ರೀತಿಯಲ್ಲಿ ಮೈಯಲ್ಲಿ ಆವಾಹಿಸಿಕೊಂಡು, ತ್ರಿಶೂಲ ಹಿಡಿದು ದೇವಿ ಮಹಾತ್ಮೆ ಯಕ್ಷಗಾನದ ದೇವಿ ಪಾತ್ರದಾರಿಯಂತೆ ಕುಣಿಯುವ ಹೊಸ ಪದ್ಧತಿ ಬಂದಿದೆ. ಈ ದೇವಾಲಯಕ್ಕೆ ಈಗ ಸಾವಿರಾರು ಭಕ್ತರಿದ್ದಾರೆ.

ಇಂತಹ ಇನ್ನೊಂದು ಹೊಸ ದೇವಾಲಯ ತ್ರಿಶೂರಿನ ವಿಷ್ಣುಮಾಯ ದೇವಾಲಯ. ಇದು ತನ್ನ ವೆಬ್‌ಸೈಟಿನಲ್ಲಿ ತ್ರಿಶೂರ್‌ನಲ್ಲಿರುವ ಏಕೈಕ ಅಧಿಕೃತ ಪೆರಿಂಗೊಟ್ಟುಕರ ದೇವಸ್ಥಾನ ವಿಷ್ಣುಮಾಯ ದೇವಾಲಯ ನಮ್ಮದು. ಪ್ರಾಚೀನ ಮತ್ತು ದೊಡ್ಡ ದೇವಾಲಯ” ಎಂದು ಬರೆದುಕೊಂಡಿದೆ. ಇದಕ್ಕೊಬ್ಬ ಧರ್ಮದರ್ಶಿ ಇದ್ದಾನೆ. ಈ ದೇವಾಲಯವನ್ನು ಪ್ರಚಾರ ಮಾಡಲು ಹಿರಿಯ ನಟಿ ಅಂಬಿಕಾ ಸೇರಿದಂತೆ ಯೂಟ್ಯೂಬರ್‌ಗಳನ್ನೆಲ್ಲಾ ಬಳಸಲಾಗುತ್ತಿದೆ.

ಜನರು ಹೊಸ ಹೊಸ ದೇವರನ್ನು, ಭಕ್ತಿಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಇಂದು ಜನಪ್ರಿಯವಾಗಿರುವ ದೇವರು ನಾಳೆ ಯಾರಿಗೂ ಬೇಡವಾಗಬಹುದು. ಈಗ ಜನಜಂಗುಳಿಯಿಂದ ತುಂಬಿರುವ ದೇವಾಲಯದಲ್ಲಿ ನಾಳೆ ಅರ್ಚಕ ಮಾತ್ರ ಇರುವ ಕಾಲ ಬರಬಹುದು. ಹೊಸ ದೇವರು, ದೇವಾಲಯ ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ರೀಲ್‌ಗಳಲ್ಲಿ ಬಂದರೆ ಸಾಕಷ್ಟೇ! ಹಿಂದೆ ಶಬರಿಮಲೆಗೆ ಹೋಗುತ್ತಿದ್ದ ಭಕ್ತರು, ಈಗ ಕೊಟ್ಟಿಯೂರನ್ನು ನೋಡಿದ್ದಾರೆ, ನಾಳೆ ಇನ್ನೊಂದು ದೇವಾಲಯ-ಅಚರಣೆಯ ರೀಲ್ಸ್‌ ಬಂದರೆ ಆ ಕಡೆಗೆ ಹೋಗುತ್ತಾರೆ.

ಭಕ್ತಿಯೆಂಬುದು ತೋರುಂಬ ಲಾಭ – ಅಲ್ಲಮ ಪ್ರಭು

ಲೇಖನ: ಚರಣ್‌ ಐವರ್ನಾಡು

ಕುಂಭಮೇಳದ ನದಿ ನೀರಿನಲ್ಲಿ ಅಪಾಯಕಾರಿ “ಕೋಲಿಫಾರ್ಮ್ ಬ್ಯಾಕ್ಟೀರಿಯಾ” ; ಬಳಕೆಗೆ ಯೋಗ್ಯವಲ್ಲ ಎಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ನದಿ ನೀರು ಸ್ನಾನಕ್ಕೆ ಮತ್ತು ಯಾವುದೇ ಸ್ವಚ್ಛತೆಯ ಉಪಯೋಗಕ್ಕೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದೆ.

ಈ ನೀರಿನಲ್ಲಿ ಪ್ರಾಣಿಗಳ ಮಲದಲ್ಲಿರುವ ಫೀಕಲ್‌ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುನರುನ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ನೀರು ಉಪಯೋಗಕ್ಕೆ ಯೋಗ್ಯವಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುವುದರಿಂದ ಈ ನದಿ ನೀರಲ್ಲಿ ಸ್ನಾನ ಮಾಡುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದ್ದು, ಅತಿ ಹೆಚ್ಚು ಜನ ಒಂದೇ ಕಡೆ ಸ್ನಾನ ಮಾಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಮಂಡಳಿ ಹೇಳಿದೆ. ಜ.12 ಮತ್ತು 13ರಂದು ಸಂಗ್ರಹಿಸಿದ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಅತ್ಯಂತ ಮಾಲಿನ್ಯದಿಂದ ಕೂಡಿದೆ ಎನ್ನಲಾಗಿದೆ.

ಕೋಲಿಫಾರ್ಮ್ ಬ್ಯಾಕ್ಟೀರಿಯಾ ಚರ್ಮರೋಗಕ್ಕೆ ಸಂಬಂಧಿಸಿದ ಹಲವು ರೋಗಗಳಿಗೆ ಕಾರಣವಾಗಬಹುದು. ಮುಂದೆ ಇದು ಮಾರಣಾಂತಿಕ ಖಾಯಿಲೆಗೂ ತುತ್ತಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಈ ನದಿ ನೀರಿನ ಬಳಕೆಯಿಂದ ದೂರ ಇರುವುದು ಒಳಿತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದೆ.

ಬೆಂಗಳೂರು ಅಂತರಾಷ್ಟ್ರೀಯ ಸಿನೆಮಾ ಉತ್ಸವಕ್ಕೆ ಇಸ್ಲಾಮೋಫೋಬಿಯ ಹರಡುವ ಚಿತ್ರ ಆಯ್ಕೆ: ಚಿಂತಕ ಕೆ ಫಣಿರಾಜ್‌ ಆಕ್ಷೇಪ
ಕನ್ನಡ ಸಿನೆ ಪ್ರೇಕ್ಷಕರು ವರ್ಷವಿಡೀ ಕುತೂಹಲದಿಂದ ಕಾಯುವ ಸಿನೆಮಾ ಹಬ್ಬಗಳಲ್ಲಿ ಬೆಂಗಳೂರಿನ ಸಿನೆಮಾ ಹಬ್ಬವೂ ಒಂದು. ಇಲ್ಲಿ ದೇಶ ವಿದೇಶಗಳ ಎಲ್ಲಿಯೂ ಕಾಣಸಿಗದ ಚಿತ್ರಗಳು, ಅದರ ಕಲಾವಿದರು, ನಿರ್ದೇಶಕರು ಕಾಣಲು ಸಿಗುವುದು ಅದಕ್ಕೆ ಕಾರಣ.

ಅದರ ಜೊತೆಗೆ ಈ ಸಿನೆಮಾ ಹಬ್ಬದ ನೆಪದಲ್ಲಿ ಸಿನೆಮಾ ಕುರಿತ ಚರ್ಚೆಗಳು ಗರಿಗೆದರುತ್ತವೆ. ಸಿನೆಮಾಸಕ್ತರ ಹಲವು ಬಗೆಯ ಕುತೂಹಲಗಳನ್ನು ಈ ಚರ್ಚೆಗಳು ತಣಿಸುತ್ತವೆ.

ಈ ಸಲದ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ಮಾರ್ಚ್ 1ರಿಂದ ಆರಂಭವಾಗಲಿದ್ದು, ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶನ ಕಾಣಲಿವೆ.

ಬುಧವಾರ ನಗರದ ವಾರ್ತಾ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ ಅವರು, ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂದು ಹೇಳಿದರು.

ಆದರೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಥೀಮ್‌ ಇಟ್ಟುಕೊಂಡು ಇಸ್ಲಾಮೋಫೋಬಿಯ ಹರಡುವ ‘Reading Lolita in Tehran’ ಎನ್ನುವ ಚಿತ್ರವನ್ನು ಆಯ್ಕೆ ಮಾಡಿರುವುದು ಸಿನೆಮಾ ಪ್ರಿಯರ ಆಕ್ಷೇಪಕ್ಕೆ ಕಾರಣವಾಗಿದೆ.

ಈ ಕುರಿತು ಈಗಾಗಲೇ ನಾಡಿನ ಹಿರಿಯ ಚಿಂತಕ ಕೆ ಫಣಿರಾಜ್‌ ಅವರು ಸಿನೆಮಾ ಉತ್ಸವದ ಕಲಾ ನಿರ್ದೇಶಕರಿಗೆ ಪತ್ರ ಬರೆದು ಚಿತ್ರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಅವರೊಂದಿಗೆ ಹಲವು ಪ್ರಜ್ಞಾವಂತ ಕಲಾವಿದರು ಹಾಗೂ ಜನಸಾಮಾನ್ಯರೂ ಈ ಕುರಿತು ದನಿಯೆತ್ತಿದ್ದಾರೆ. ಪತ್ರದ ಪೂರ್ಣ ಪಠ್ಯ ಇಲ್ಲಿದೆ:
ಮಾನ್ಯ ಕಲಾ ನಿರ್ದೇಶಕರು,
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ

ಮಾನ್ಯರೇ-
ನಾವು ಬಹುವಾಗಿ ನಿರೀಕ್ಷಿಸುತ್ತಿರುವ ಅಂತರಾಷ್ಟ್ರೀಯ ಸಿನಿಮೋತ್ಸವವು ಮಾರ್ಚ್ 1 ರಿಂದ ಪ್ರಾರಂಭವಾಗುತ್ತಿದೆ. ಅಲ್ಲಿ ಪ್ರದರ್ಶಿತವಾಗುವ ಗುಣಾತ್ಮಕ ಸಿನೆಮಾಗಳನ್ನು ನೋಡಲು ನಾವು ಕಾತುರರಾಗಿದ್ದೇವೆ. ಆದರೆ, ಏಶಿಯಾ ಸ್ಪರ್ಧ ವಿಭಾಗಕ್ಕೆ ಆಯ್ಕೆಯಾದ ಸಿನೆಮಾಗಳ ಪಟ್ಟಿಯಲ್ಲಿ ‘Reading Lolita in Tehran’ ಎಂಬ ಸಿನೆಮಾ ಆಯ್ಕೆ ಆಗಿರುವುದನ್ನು ಕಂಡು ಬಹು ಆತಂಕಿತರಾಗಿದ್ದೇವೆ.

ಪ್ರಸ್ತುತ ಚಿತ್ರೋತ್ಸವಕ್ಕೆ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಸೂಕ್ತ ಶೀರ್ಷಿಕೆಯನ್ನು ಇಟ್ಟುಕೊಂಡಿರುವಾಗ ಇಂಥ ಪ್ರಮಾದವು ಏಕಾಗಿದೆ!? ಇಸ್ರೇಲ್ ಪ್ರಭುತ್ವವು ಫಿಲಿಸ್ತೀನಿನ ಗಾಝ ಪಟ್ಟಿಯಲ್ಲಿ ನೀಚ ನರಮೇಧ ನಡೆಸುತ್ತಿರುವ ಘಾತುಕ ಅಪರಾಧಿ ಪ್ರಭುತ್ವವಾಗಿದೆ. ಅದರಿಂದ ಪ್ರಾಯೋಜಿತವಾಗಿ, ಅದರ ಘಾತುಕ ಯೋಜನೆಗಳ ಭಾಗವಾಗಿ ಕಟ್ಟಲಾಗಿರುವ ‘Reading Lolita in Tehran’ ಒಂದು ಇಸ್ಲಾಮೋಫೋಬಿಯ ಬಿತ್ತುವ ಇರಾದೆಯ ಪ್ರಚಾರ ಸಿನೆಮಾವಾಗಿದೆ!

ಇಂಥ ಸಿನೆಮಾವನ್ನು ಸ್ಪರ್ದೆ ಹಾಗು ಪ್ರದರ್ಶನಕ್ಕೆ ಆಯ್ದು, ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವು ಈ ಆಕೃತ್ಯವನ್ನು ಬೆಂಬಲಿಸುವುದನ್ನು ನಾವು ಖಂಡಿಸುತ್ತೇವೆ. ಸಿನೆಮಾ ಪ್ರೇಮಿಗಳು, ಸಿನಿಮೋತ್ಸವದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಆಗಿರುವಂತೆಯೇ ನಾವು ಶಾಂತಿಯುತ ಜಗತ್ತಿಗೆ ಆಶಿಸುವ, ಪ್ರಭುತ್ವ ಪಾತಕಿಗಳನ್ನು ನೇರವಾಗಿ ಪ್ರಶ್ನಿಸಿ ಪ್ರತಿಭಟಿಸುವ ನಾಗರಿಕರು ಆಗಿದ್ದೇವೆ- ನಾವು ಇದನ್ನು ಸಹಿಸುವುದಿಲ್ಲ. ಕೂಡಲೇ, ಪಟ್ಟಿಯಿಂದ ಪ್ರಸ್ತುತ ಸಿನೆಮಾವನ್ನು ತೆಗೆದು ಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ.

-ಕೆ.ಫಣಿರಾಜ್

ಉತ್ತಮ ಸಮಾಜ ಕಟ್ಟಲು ಎಲ್ಲಾರು ಸಾಕ್ಷರರನ್ನಾಗಿ ಮಾಡಬೇಕು – ಅಹಮದ್ ಹಗರೆ
ಹಾಸನ: ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮತ್ತು ಸಹಕಾರ ಮನೋಭಾವವುಳ್ಳ ಸಮಾಜವೊಂದನ್ನು ಕಟ್ಟಲು ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು. ಅತ್ಯಂತ ಅಗತ್ಯವಾಗಿದೆ. ನಮಗಿಂತಲೂ ತಡವಾಗಿ ಸ್ವತಂತ್ರಗೊಂಡ ದೇಶಗಳು ಇಂದು ಆರ್ಥಿಕವಾಗಿ ಮುಂದುವರೆದಿರಲು ಕಾರಣ ಅವರು ಅನುಸರಿಸಿದ ಜನ ಸಾಕ್ಷರತೆ. ಸಾಮಾನ್ಯ ಜನರು ಜಲಸಾಕ್ಷರತೆ, ಪರಿಸರ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ರಾಜಕೀಯ ಸಾಕ್ಷರತೆ ಮತ್ತು ಅಕ್ಷರ ಸಾಕ್ಷರತೆಗಳಲ್ಲಿ ಸಾಕ್ಷರರಾಗದ ಹೊರತು ಅವರು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಅಭಿಪ್ರಾಯ ಪಟ್ಟರು.

ಇತ್ತೀಚಿಗೆ ಹಾಸನ ನಗರದ ಬಿಜಿವಿಎಸ್ ಕಚೇರಿಯಲ್ಲಿ ಜಿಲ್ಲಾ ಬಿಜಿವಿಎಸ್ ಹಮ್ಮಿಕೊಂಡಿದ್ದ ಬಿಜಿವಿಎಸ್ ಸಂಸ್ಥಾಪನಾ ದಿನದಲ್ಲಿ `ಸಮಾಜ ಬದಲಾವಣೆಗಾಗಿ ವಿಜ್ಞಾನ' ಕುರಿತು ಮಾತನಾಡಿ, ಭಾರತ ಸ್ವತಂತ್ರಗೊAಡ ನಂತರ ಅದು ಹಾಕಿಕೊಂಡ ಗುರಿ ಭಾರತವನ್ನು ಸಮಾಜವಾದಿ ರಾಷ್ಟçವನ್ನಾಗಿ ನಿರ್ಮಿಸುವುದು ಇದಕ್ಕಾಗಿ ಭಾರತ ಕಂಡುಕೊಂಡ ಮಾರ್ಗ ಜನಸತ್ತಾತ್ಮಕ ಮಾರ್ಗ ಆದರೆ ಈ ಪ್ರಜಾಪ್ರಭುತ್ವ ತನ್ನ ಹಾದಿಯಲ್ಲಿ ಇಪ್ಪತ್ತೆöÊದೇ ವರ್ಷಗಳಲ್ಲಿ ಪಾಳೆಗಾರಿ, ಜಾತಿವಾದಿ ಮಾರ್ಗದತ್ತ ಹೊರಳಿ ನಿಂತಿತು ಮತ್ತೆ ಈ ಹೊರಳು ಹಾದಿಯನ್ನು ಜನಸತ್ತಾತ್ಮಕ ಹಾದಿಗೆ ಕೊಂಡೊಯ್ಯಲು ಹೊಸಪೀಳಿಗೆಯಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬಿತ್ತಬೇಕಾಗಿದೆ ಎಂದು ತಿಳಿಸಿದ ಅವರು ಬಿಜಿವಿಎಸ್ ಕಳೆದ 36ವರ್ಷಗಳಲ್ಲಿ ಇದನ್ನು ಬÀಹುಮುಖಿನೆಲೆಯಲ್ಲಿ ಮಾಡುತ್ತಿದೆ ಆದರೆ ಅದರ ಕಾರ್ಯಕ್ಷಮತೆ ಹೆಚ್ಚಾಗಲು ಜನರನ್ನು ಹೆಚ್ಚಾಗಿ ಪಾಳ್ಗೊಳಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ, 1984 ಡಿಸೆಂಬರ್ 3 ಭಾರತವನ್ನು ತಲ್ಲಣಗೊಳಿಸಿದ ಭೂಪಾಲ್ ದುರಂತದ ಕ್ಷಣದಲ್ಲಿ 2000ಕ್ಕೂ ಅಧಿಕ ಸಾವು, 50ಸಾವಿರಕ್ಕೂ ಅಧಿಕ ಜನ ತೀವ್ರ ಗಾಯದಿಂದಾಗಿ ಊರನ್ನೇ ತ್ಯಜಿಸುವ ಸ್ಥಿತಿ, ನಂತರದ ದಿನಗಳಲ್ಲಿ ಇದರಿಂದ 22ಸಾವಿರಕ್ಕೂ ಅಧಿಕ ಸಾವು ಭಾರತವನ್ನು ಜರ್ಜರಿತ ಗೊಳಿಸಿಬಿಟ್ಟಿತ್ತು ಈ ದುರಂತದ ಹಿನ್ನಲೆಯಲ್ಲಿ ಜನರಿಗೆ ತಮ್ಮ ಜೀವ ರಕ್ಷಣೆಗೆ ವಿಜ್ಞಾನದ ಜ್ಞಾನ ತಿಳಿಸಿ ಕೊಡಲಿಕ್ಕಾಗಿ ಎಲ್ಲ ವಿಜ್ಞಾನ ಸಂಘಟನೆಗಳ ನೇತೃತ್ವದಲ್ಲಿ 1987ರಲ್ಲಿ ಬಿಜೆವಿಜೆ ಜಾಥಾ(ಭಾರತ ಜ್ಞಾನ ವಿಜ್ಞಾನ ಜಾಥಾ)ಫಲಶೃತಿ ಭಾರತ ಮೂಢನಂಬಿಕೆ, ಅಂಧಕಾರ, ಬಡತನ ಮತ್ತು ಸಾಕ್ಷರವಾಗಿ ಹಿಂದುಳಿದಿದೆ ಎಂಬ ಅರಿವಿಗೆ ಬಂತು ಜನರ ಈ ಅನಿಷ್ಠಗಳನ್ನ ನಿರ್ಮೂಲನಗೊಳಿಸಲು ಮೊದಲು ಜನರನ್ನು ಸಾಕ್ಷರರನ್ನಾಗಿಸುವುದೇ ಆದ್ಯತೆಯಾಗಬೇಕು ಆಮೂಲಕ ವಿಜ್ಞಾನ ಜ್ಞಾನ ತುಂಬಬೇಕು ಎಂಬ ತೀರ್ಮಾನಕ್ಕೆ ಬಂದು 1989ರ ಡಿಸೆಂಬರ್22ರಂದು ಬಿಜಿವಿಎಸ್ ಸಂಸ್ಥಾಪನೆಯಾಯಿತು ಎಂದು ಬಿಜಿವಿಎಸ್ ಸ್ಥಾಪನೆ ಆದ ಹಿನ್ನಲೆ ತಿಳಿಸಿ ಕಳೆದ 36ವರ್ಷಗಳಿಂದ ನೂರಾರು ವಿಜ್ಞಾನಿಗಳು, ಸಾವಿರಾರು ತಂತ್ರಜ್ಞರು, ಲಕ್ಷಾಂತರ ಶಿಕ್ಷಕರು, ಯುವಕರು ಸ್ವಯಂಪ್ರೇರಣೆಯಿಂದ ಈ ವಿಜ್ಞಾನಾಂದೋಲನಗಳಲ್ಲಿ ಭಾಗವಹಿಸಿ ಸಾಕ್ಷರತಾ ಆಂದೋಲನ, ಶಾಲಾಶಿಕ್ಷಣದ ಬೊಧನಾ ವಿಧಾನ ಉತ್ತಮಪಡಿಸುವಿಕೆ, ಪರಿಸರ ಅಧ್ಯಯನ ಚಟುವಟಿಕೆಗಳನ್ನು ವ್ಯವಸಸ್ಥಿತವಾಗಿ ನಡೆಸಿ, ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಹವಾಮಾನ ಬದಲಾವಣೆ ಮುಂತಾದ ವಿಷಯಗಳಲ್ಲಿ ಸರ್ಕಾರದ ಜೊತೆ ನೀತಿನಿರ್ಣಯರೂಪಿಸಲು ಒತ್ತಡ ತಂತ್ರ ನಡೆಸಲು ಹಾಗೂ ಕೆಲ ಸಂದರ್ಭಗಳಲ್ಲಿ ಅವುಗಳ ಜೊತೆ ಪಾಲ್ಗೊಳ್ಳಲು ಕೂಡ ಕಾರಣವಾಯಿತು ಎಂದರು. ವಿಜ್ಞಾನ ಲೇಖಕ ಕೆ.ಎಸ್ ರವಿಕುಮಾರ್ ತಮ್ಮ ಅನುಭವ ಹಂಚಿಕೊAಡು, 2014ರವರೆಗೂ ಭಾರತದಲ್ಲಿ ಜನಕೇಂದ್ರಿತ ವಿಜ್ಞಾನ ಮುಂಚೂಣೀಯಲ್ಲಿತ್ತು 2014ರ ನಂತರ ಭಾರತದಲ್ಲಿದನ’ಕೇಂದ್ರಿತ ವಿಜ್ಞಾನ ಮುಂಚೂಣಿಯಲ್ಲಿದೆ. ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುದಾನ ಕಡಿತಗೊಳಿಸಲಾಗಿದೆ ಆದರೆ ಅದೇ ಸಂದರ್ಬದಲ್ಲಿ ದನದ ಪ್ರಾಡಕ್ಟಳ ಇಂಟರ್‌ಪ್ರಿಟೇಶನ್ ಕುರಿತು ಅಂದರೆ ಗೋಮೂತ್ರ, ದನದ ಸಗಣಿಯಲ್ಲಿ ಔಷಧ ಗುಣಗಳ ಚರ್ಚೆಗೆ ಹಣ ವಿನಿಯೋಗ ಆಗುತ್ತಿದೆ ಎಂದು ವಿಡಂಬಿಸಿದ ಅವರು ಕೋವಿಡ್ ಬಂದಾಗ ಪಾಠಕಲಿಯಬೇಕಿತ್ತು ಆದರೆ ಕಲಿಯಲಿಲ್ಲ ನಾವು ಸಾವನ್ನು ಸಹಜವಾಘಿ ಸ್ವೀಕರಿಸಿಬಿಟ್ಟಿದ್ದೇವೆ, ಸಂವೇದನಾಶೂನ್ಯರಾಗಿದ್ದೇವೆ ಎಂದರು.

ಬಿಜಿವಿಎಸ್ ಸಂಸ್ಥಾಪಕ ಸದಸ್ಯ ಪಿ.ಶಾಡ್ರಾಕ್ ಸರ್ಕಾರದ ಸಾಕ್ಷರತಾ ಆಂದೋಲನಾ, ಶಿಕ್ಷಣ ಇಲಾಖೆಯ ನಲಿ-ಕಲಿ ಎನ್ನುವ ಶಿಕ್ಷಣದ ಹೊಸ ಪ್ರಯೋಗಗಳು ಬಿಜಿವಿಎಸ್ ಮೊದಲೇ ನಡೆಸಿದ Zಸಂತಸಕಲಿಕೆಯ ಚಿಣ್ಣರಮೇಳ, ಬಾಲಮೇಳ ಚಟುಚಟಿಕೆಗಳ ಮಾದರಿಗಳ ನಕಲುಗಳು ಹಾಗೂ ಸರ್ವಶಿಕ್ಷ ಅಭಿಯಾನದ ಆರಂಭದ ಬಹುಪಾಲು ಸಂಪನ್ಲೂಲ ವ್ಯಕ್ತಿಗಳು ಬಿಜಿವಿಎಸ್ ಜೊತೆ ಬೆಳೆದ ಶಿಕ್ಷಕರುಗಳೇ ಆಗಿದ್ದರು ಎಂದು ತಮ್ಮ ಅನುಭವ ಹಂಚಿಕೊAಡರು.
ಈ ಸಂದರ್ಬದಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜಿವಿಎಸ್ ಕಟ್ಟಿಬೆಳೆಸಿದ ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಪಿ.ಶಾಡ್ರಾಕ್, ಸಿ.ಸೌಭಾಗ್ಯ ಹಾಗೂ ಅಂತೋಣಿಸ್ವಾಮಿ ಉಪಸ್ಥಿತರಿದ್ದು ತಮ್ಮಗಳ ಅನುಭವ ಹಂಚಿಕೊAಡು ಸಾಕ್ಷರತೆ ಹಾಗೂ ವಿಜ್ಞಾನ ಗೀತೆಗಳನ್ನು ಹಾಡಿದರು.
ಬಿಜಿವಿಎಸ್ ತಾಲ್ಲೂಕು ಸಮಿತಿ ಸದಸ್ಯೆ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಮೊದಲಿಗೆ ಬಿಜಿವಿಎಸ್ ತಾಲ್ಲೂಕು ಉಪಾಧ್ಯಕ್ಷ ಚಿನ್ನೇನಹಳ್ಳಿ ಸ್ವಾಮಿ ಸ್ವಾಗತಿಸಿದರು, ತಾಕಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಪ್ರಾಸ್ತವಿಕವಾಗಿ ಮಾತನಾಡಿದರು, ಕಡೆಯಲ್ಲಿ ಸಮತಾ ಜಿಲ್ಲಾ ಸಂಚಾಲಕಿ ಮಮತಾಶಿವು ವಂದಿಸಿದರು.

ಕೇಂದ್ರ ಸಚಿವ ಸಂಪೂಟದಿಂದ ಅಮಿತ್ ಶಾ ವಜಾಕ್ಕೆ ಆಗ್ರಹಿಸಿ, ಅಣುಕು ಶವಯಾತ್ರೆ ದಲಿತ – ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ
ಹಾಸನ: ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸುವAತೆ ಆಗ್ರಹಿಸಿ ದಲಿತ – ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದಲ್ಲದೆ ಕೇಂದ್ರ ಗೃಹಮಂತ್ರಿ ಪ್ರತಿಕೃತಿ ಧಹಿಸಿ ಜಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ಇದೆ ವೇಳೆ ಸಿ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ ಎಂದರು. ಭಾರತದ ಸಂವಿಧಾನದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೆಬ್ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ಆಡಿರುವ ಅಪಮಾನಕರ ಮಾತುಗಳು ಕೇವಲ ಆಕಸ್ಮಿಕವೇನೂ ಅಲ್ಲ.

ಸಂವಿಧಾನದ ಕುರಿತ ಚರ್ಚೆಯ ಸಂದರ್ಭದಲ್ಲಿಯೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿತ್ತು. ಅಮಿತ್ ಶಾ ಪ್ರತಿನಿಧಿಸುವ ಆರ್‌ಎಸ್‌ಎಸ್, ಜನಸಂಘ ಮತ್ತು ಬಿಜೆಪಿ ಭಾರತ ದೇಶವನ್ನು ಸಾರ್ವಭೌಮ ಸಮಾಜವಾದಿ ಮತಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರೂಪಿಸುವ ಭಾರತದ ಸಂವಿಧಾನ ಮತ್ತು ಅದರ ರಚನೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಆರಂಭದಿAದಲೂ ತೀವ್ರ ಅಸಮಾಧಾನ ಮತ್ತು ಅತೃಪ್ತಿಯನ್ನು ಹೊರಹಾಕಿರುವುದು ಇಡೀ ದೇಶಕ್ಕೇ ಗೊತ್ತಿರುವ ಇತಿಹಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರ ಜಾತಿ ಹಿನ್ನೆಲೆಯನ್ನು ಎತ್ತಿ ತೋರಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಬರೆಯಲೇ ಇಲ್ಲ ಎನ್ನುವ ಸುಳ್ಳುಗಳನ್ನು ಪ್ರಚಾರ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನವನ್ನು ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಆಗ ಬಹಿರಂಗವಾಗಿಯೇ ಹೇಳಿತ್ತು. ಅಂತಹ ಸಂಘಪರಿವಾರ ಮತ್ತು ಬಿಜೆಪಿಯ ಅಮಿತ್ ಶಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಮನುವಾದಿ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿAದ ವಜಾಗೊಳಿಸಬೇಕು ಹಾಗೂ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಆಗ್ರಹಿಸಿದರು. ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಭಾರತದ ಮಾನ್ಯ ರಾಷ್ಟ್ರಪತಿ  ಮತ್ತು ಮಾನ್ಯ ಪ್ರಧಾನ ಮಂತ್ರಿಯವರನ್ನು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಪಡಿಸುತ್ತಿರುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಹಿರಿಯ ರಂಗಕರ್ಮಿ ಪ್ರಸಾದ್ ರಕ್ಷಿದಿ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ, ದಲಿತ ಹಿರಿಯ ಮುಖಂಡರು ಕೃಷ್ಣದಾಸ್, ರಾಜಶೇಖರ್, ಡಿಎಚ್‌ಎಸ್ ಸಂಚಾಲಕ ಎಂ.ಜಿ. ಪೃಥ್ವಿ, ಸಂವಿಧಾನ ಓದು ಅಭಿಯಾನದ ರಾಜು ಗೊರೂರು, ಆಜಾದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಶಿರ್ ಅಹಮದ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ ಇತರರು ಉಪಸ್ಥಿತರಿದ್ದರು.

ರಾಮ ಮಂದಿರದಂತಹ ವಿವಾದವನ್ನು ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ: RSS ಮುಖ್ಯಸ್ಥ ಭಾಗವತ್
ಪುಣೆ:  ರಾಮ ಮಂದಿರದಂತೆ ವಿವಾದವನ್ನು ದೇಶದ ಬೇರೆ ನಗರಗಳಲ್ಲಿ ಸೃಷ್ಟಿಸಬೇಡಿ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

ವಿವಿಧ ಸ್ಥಳಗಳಲ್ಲಿ ರಾಮಮಂದಿರದಂತಹ ವಿವಾದಗಳನ್ನು ಹುಟ್ಟುಹಾಕುವುದು ಸ್ವೀಕಾರಾರ್ಹವಲ್ಲ. ವಿಭಿನ್ನ ನಂಬಿಕೆಗಳು ಮತ್ತು ಸಿದ್ಧಾಂತಗಳಿದ್ದರೂ ಹೇಗೆ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಭಾರತವು ಒಂದು ಉದಾಹರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪುಣೆಯಲ್ಲಿ “ವಿಶ್ವಗುರು ಭಾರತ” ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಭಾರತೀಯರು ಹಿಂದಿನ ತಪ್ಪುಗಳಿಂದ ಕಲಿಯಬೇಕು ಮತ್ತು ವಿವಾದವನ್ನು ತಪ್ಪಿಸುವ ಮೂಲಕ ತಮ್ಮ ದೇಶವನ್ನು ಜಗತ್ತಿಗೆ ಮಾದರಿಯನ್ನಾಗಿ ಮಾಡಲು ಶ್ರಮಿಸಬೇಕು. ರಾಮ ಮಂದಿರವು ನಂಬಿಕೆಯ ವಿಷಯವಾಗಿದೆ ಮತ್ತು ಹಿಂದೂಗಳು ಅದನ್ನು ನಿರ್ಮಿಸಬೇಕು ಎಂದು ಬಯಸಿದ್ದರು. ದ್ವೇಷದಿಂದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಹೊಸದಾಗಿ ವಿವಾದವು ಭುಗಿಲೆದ್ದಿರುವುದು ಸ್ವೀಕಾರಾರ್ಹವಲ್ಲ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಸಮಾಜದಲ್ಲಿನ ಘರ್ಷಣೆಯನ್ನು ಕಡಿಮೆ ಮಾಡಲು ಪ್ರಾಚೀನ ಸಂಸ್ಕೃತಿಗೆ ಮರಳುವುದು ಪರಿಹಾರವಾಗಿದೆ. ಉಗ್ರವಾದ, ಆಕ್ರಮಣಶೀಲತೆ, ಬಲವಂತಿಕೆ ಮತ್ತು ಇತರರ ದೇವರುಗಳನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ. ಇಲ್ಲಿ ಬಹುಸಂಖ್ಯಾತರು ಅಥವಾ ಅಲ್ಪಸಂಖ್ಯಾತರು ಎಂಬುವುದಿಲ್ಲ, ನಾವೆಲ್ಲರೂ ಒಂದು. ಪ್ರತಿಯೊಬ್ಬರೂ ಈ ದೇಶದಲ್ಲಿ ತಮ್ಮ ಆರಾಧನೆಗಳನ್ನು ಮಾಡಬಹುದು ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.

ದಾಖಲೆ ಬರೆದ ಹಾಸನಾಂಬೆ ; ಪ್ರಸಾದ, ಕಾಣಿಕೆ ಸೇರಿ ಒಟ್ಟು 12 ಕೋಟಿ 63 ಲಕ್ಷ ಆದಾಯ
ಹಾಸನ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆದು ದರ್ಶನದ ಭಾಗ್ಯ ನೀಡಿ ಈಗಾಗಲೇ ಈಗಾಗಲೇ ೨೦೨೪ರ ದರ್ಶನೋತ್ಸವಕ್ಕೆ ತೆರೆ ಎಳೆದಿದ್ದು, ಬಂದ ಭಕ್ತರಿಂದ ಟಿಕೆಟ್, ಲಾಡು ಮಾರಾಟ, ಸ್ಕ್ಯಾನ್ ಮೂಲಕ ಹಣ ಹಾಕಿರುವುದು, ಕಾಣಿಕೆ ಹುಂಡಿಯಿಂದ ಎಲ್ಲಾ ಸೇರಿ ಬರೋಬ್ಬರಿ 12,63,83,808 ರೂಗಳು ಸಂಗ್ರಹವಾಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಇತಿಹಾಸದಲ್ಲೆ ಈ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ.

ಹಾಸನಾಂಬೆ ದೇವಿಯ ಬಾಗಿಲು ಅಕ್ಟೋಬರ್ 24ಕ್ಕೆ ತೆಗೆದು ನವೆಂಬರ್ ೩ಕ್ಕೆ ಮದ್ಯಾಹ್ನ ಬಾಗಿಲು ಮುಚ್ಚಲಾಗಿದೆ. ಜಿಲ್ಲಾಡಳಿತ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಮೂಲಕ ಅದ್ಬುತವಾಗಿ ಜಾತ್ರಾ ಮಹೋತ್ಸವ ನಡೆಸಿದೆ. ಈ ಬಾರಿ 20.40 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1೦೦೦, 3೦೦ ರ ಟಿಕೆಟ್, ಆನ್ಲೈನ್ ಹಾಗೂ ಲಾಡು ಪ್ರಸಾದದ ಮೂಲಕ ಸೇರಿ 9.63 ಕೋಟಿ ರೂಪಾಯಿ ಆದಾಯ ಬಂದಿದೆ. ಭಕ್ತರು ಹಾಕಿದ 21 ವಿವಿಧ ಕಾಣಿಕೆ ಹುಂಡಿಯ ಲೆಕ್ಕಚಾರ ಕಾರ್ಯವನ್ನು ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಸಲಾಯಿತು. ಇದರಲ್ಲಿ 2,55,97,567 ರೂಗಳ ಸಂಗ್ರಹ ಎಲ್ಲಾ ಸೇರಿ ಒಟ್ಟು ೧೨ ಕೋಟಿ ೬೩ ಲಕ್ಷ ೮೩ ಸಾವಿರದ ೮೦೮ ರೂಗಳ ಸಂಗ್ರಹವಾಗುವ ಮೂಲಕ ಮತ್ತೆ ಹೊಸ ದಾಖಲೆ ಸೃಷ್ಠಿ ಮಾಡಿದೆ. ೫೧ ಗ್ರಾಂ ಚಿನ್ನ, ೯೧೩ ಗ್ರಾಂ ಬೆಳ್ಳಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಸೋಮವಾರದಂದು ಬೆಳಿಗ್ಗೆ ೭ ಗಂಟೆಗೆ ಶುರುವಾದ ಹುಂಡಿಯ ಏಣಿಕೆ ಸಂಜೆ ಸುಮಾರು ೪ ಗಂಟೆಗೆ ಪೂರ್ಣಗೊಂಡಿತು. ಏಣಿಕೆ ಮಾಡುವಾಗ ಹುಂಡಿಯಲ್ಲಿ ವಿದೇಶದ ನೋಟುಗಳು, ಹಳೆಯ ೫೦೦ ಮುಖ ಬೆಲೆಯ ನೋಟುಗಳು, ಹರಕೆ ರೂಪದಲ್ಲಿ ಕಾಣಿಕೆ ಹುಂಡಿಯಲ್ಲಿ ಕರಿಮಣಿ ಸರ, ತ್ರಿಶುಲ, ಬೆಳ್ಳಿಯ ತೊಟ್ಟಿಲು, ಚಿನ್ನದ ತಾಳಿ, ದೀಪಾ, ದೇವಿಯ ಹಸ್ತ, ಬೆಳ್ಳಿಯ ಕಣ್ಣುಗಳು, ಜ್ಯೂವೆಲರಿ ಶಾಪ್‌ನ ನಾಣ್ಯಗಳು, ದೇವಾಲಯಕ್ಕೆ ಹೋಗುವ ಪಾಸುಗಳು ಸೇರಿದಂತೆ ಹಲವಾರು ತರದ ವಸ್ತುಗಳನ್ನು ಹಾಕಲಾಗಿತ್ತು. ಇನ್ನು ಭಕ್ತರು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಮ್ಮ ಎಂದು ಕೋರಿ ಈ ವರ್ಷವೂ ಕೂಡ ವಿವಿಧ ಪತ್ರಗಳು ಕಾಣಿಕೆ ಡಬ್ಬಿಯಲ್ಲಿ ಹಾಕಿರುವುದು ಕಂಡು ಬಂದಿತು. ದೇವಿಗೆ ಮನವಿ ಸ್ಲಲಿಸಿರುವುದನ್ನು ಬಹಿರಂಗ ಪಡೆಸದಂತೆ ಅಧಿಕಾರಿಗಳು ಮನವಿ ಮಾಡಿದ್ದರು.

ಭಕ್ತರು ನೀಡಿದ ಕಾಣಿಕೆ ಹುಂಡಿ ಲೆಕ್ಕಚಾರ ಮಾಡಲು ಮೊದಲು ಶ್ರೀ ಸಿದ್ದೇಶ್ವರ ದೇವಾಲಯದ ಆವರಣ ನಿಗಧಿ ಮಾಡಲಾಗಿತ್ತು. ಆದರೆ ಮಳೆ ಬರುತ್ತಿದ್ದರಿಂದ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಉಪವಿಭಾಗಧಿಕಾರಿ ಮಾರುತಿ ಎಣಿಕೆ ಕಾರ್ಯದಲ್ಲಿ ನೇತೃತ್ವವಹಿಸಿದ್ದರು. ಬ್ಯಾಂಕ್ ಸಿಬ್ಬಂದಿಗಳು, ಸ್ಕೌಟ್ ಅಂಡ್ ಗೈಡ್ಸ್, ಕಂದಾಯ ಇಲಾಖೆ ಸಿಬ್ಬಂದಿಗಳು ಸೇರಿ ಒಟ್ಟು ೫೦೦ ಜನರನ್ನು ಏಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಮುಂದಿನ ವರ್ಷ ೨೦೨೫ರ ಅಕ್ಟೋಬರ್ ೯ ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆದು ಅಕ್ಟೋಬರ್ ೨೩ ರಂದು ಬಾಗಿಲು ಮುಚ್ಚಲಾಗುತ್ತದೆ ಎಂದು ಉಪವಿಭಾಗಧಿಕಾರಿ ಮಾರುತಿ ಮಾಹಿತಿ ನೀಡಿದರು.

ಎರಡನೇ ದಿನದ ಹಾಸನಾಂಬೆ ದೇಗುಲಕ್ಕೆ ಭಕ್ತರ ದಂಡು
ಹಾಸನ: ಹಾಸನಾಂಬೆ ಬಾಗಿಲು ತೆಗೆದು ಒಂದು ದಿನಗಳಾದರೇ ಸಾರ್ವಜನಿಕ ದರ್ಶನೊತ್ಸವ ಶುಕ್ರವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನಿತರಾದರು.

ಇಂದಿನಿಂದ ೯ ದಿನ ಭಕ್ತರಿಗೆ ಹಾಸನಾಂಬೆ ದರ್ಶನವಿದ್ದು, ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ಆರಂಭವಾಗಿರುವ ದರ್ಶನಕ್ಕೆ ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ಕಾದು ನಿಂತರು. ವರ್ಷದ ಬಳಿಕ ಶಕ್ತಿ ದೇವತೆ ಹಾಸನಾಂಬೆ ದರ್ಶನವನ್ನು ಭಕ್ತರು ಪಡೆಯುತ್ತಿದ್ದಾರೆ. ಈ ವರ್ಷ ಇನ್ನಷ್ಟು ಗಮನವಹಿಸಿ ಧರ್ಮ ದರ್ಶನ ಪಡೆಯುವ ಭಕ್ತರಿಗೆ ಯಾವ ಸಮಸ್ಯೆ ಆಗದಂತೆ ನೆರಳಿನಲ್ಲಿ ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರು ನೀಡಲು ಸ್ಕೌಟ್ ಅಂಡ್ ಗೈಡ್ಸ್ ಸ್ವಯಂ ಸೇವಕರು ಸಿದ್ಧರಿದ್ದರು. ಇನ್ನು ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಬಂದ ಭಕ್ತರಿಗೆಲ್ಲಾ ರುಚಿಕರವಾದ ಪ್ರಸಾದ ವಿತರಣೆ ಮಾಡಲಾಯಿತು. ಎರಡು ಗಂಟೆಗೊಮ್ಮೆ ವಿಭಿನ್ನವಾದ ಪ್ರಸಾದ ಕೊಡಲಾಗುತಿತ್ತು. ಇನ್ನು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಕೊಟ್ಟ ಜವಬ್ಧಾರಿಯನ್ನು ಪಾಲಿಸುತ್ತಿದ್ದರು.

“ಹಾಸನಾಂಬೆ ಜಾತ್ರೆ ವೇಳೆ ವ್ಯಾಪಾರ ಮಾಡಲು ಅವಕಾಶ ಕೊಡಿ” : ವ್ಯಾಪಾರಸ್ತರ ಪರ ರೈತ ಸಂಘದಿಂದ ಡಿಸಿಗೆ ಮನವಿ
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಈ ದೇವಾಲಯಕ್ಕೆ ಹಾದು ಹೋಗುವ ಪ್ರಸನ್ನ ಗಣಪತಿ ರಸ್ತೆ ಉದ್ದಲಕ್ಕೂ ಸಣ್ಣಪುಟ್ಟ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ನೇತೃತ್ವದಲ್ಲಿ ಜಿಲ್ಲಾಡಳಿತ ಕಛೇರಿ ಮುಂದೆ ಜಮಾಯಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ನಂತರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ದೇವಸ್ಥಾನದ ಎಂದರೇ ನಮ್ಮ ತಾತಾ, ಮುತ್ತಾತ, ನಮ್ಮ ಅಜ್ಜನ ಕಾಲದಿಂದಲೂ ನಡೆಯುತ್ತ ಬಂದಿದೆ. ಸರಕಾರವು ಇದನ್ನು ನಮ್ಮ ಹಕ್ಕು ಎಂದು ತಿಳಿದುಕೊಂಡು ಬಂದಿದ್ದಾರೆ. ಸರಕಾರದ ಹಕ್ಕು ಆಗಿರಬಹುದು ಅದನ್ನು ಮಾಡಲಿ. ವ್ಯಾಪಾರಗಾರರು, ರೈತರ ಮಕ್ಕಳು ಬಂಡಿ ಹೊಡೆದುಕೊಂಡು ಜಾತ್ರೆಗೆ ಬರುತ್ತಿದ್ದ ಸಮಯದಲ್ಲಿ ಗಾಡಿಗಳನ್ನು ರಸ್ತೆ ಬಳಿ ನಿಲ್ಲಿಸಿ ದೇವಾಲಯಕ್ಕೆ ಬರುತ್ತಿದ್ದೇವು. ಹಿಂದೆ ನಾವು ಈ ದೇವಾಲಯಕ್ಕೆ ಟಿನ್ ಗಟ್ಟಲೆ ದೀಪದ ಎಣ್ಣೆ ಕೊಟ್ಟಿದ್ದೇವೆ. ಈಗ ಇದನ್ನು ವ್ಯಾಪಾರ ಒಂದು ಉದ್ಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು. ಈ ಜಾತ್ರೆ ವೇಳೆ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಇವರಿಗೆ ಇಲ್ಲಿ ಜಾಗ ಮಾಡಿಕೊಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಇದೆ ವೇಳೆ ಸಣ್ಣಪುಟ್ಟ ವ್ಯಾಪಾರಸ್ತರಾದ ಶ್ರೀನಿವಾಸ್, ನಂದೀಶ್ ಹಾವೇರಿ, ಕೇಶವಮೂರ್ತಿ, ನವೀನ್, ದೀರಾಜ್ ಕುಮಾರ್, ಬಸವರಾಜು ಇತರರು ಉಪಸ್ಥಿತರಿದ್ದರು.