ಯುವ ನೋಟ – Peepal Media

ಯುವಜನ ಹಕ್ಕೊತ್ತಾಯ ಮಂಡನೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡ ಯುವಾಧಿವೇಶನ-2025
ಬೆಂಗಳೂರು 14 ಆಗಸ್ಟ್ 2025 ; ಯುವಜನ ಆಯೋಗ ರಚನೆ, ಯುವಜನರ ಹಕ್ಕುಗಳ ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು, ಸಂವಾದ ಸಹಯಾನದ ಆಯೋಜನೆಯಲ್ಲಿ ನಡೆಸಲಾದ ಯುವಾಧಿವೇಶನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಕಾರ್ಯಕ್ರಮದಲ್ಲಿ ವಿವಿಧ ವಿಚಾರಗಳನ್ನು ಮಂಡಿಸಿದ ಯುವಜನರು, ಯುವಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ, ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚಕರ ಅಗತ್ಯತೆ, ಸ್ವಚ್ಚ ಶೌಚಾಲಯಕ್ಕೆ ಆಗ್ರಹ, ನಿರುದ್ಯೋಗ ಸಮಸ್ಯೆ ನಿವಾರಣೆ, ಲಿಂಗ ಸಮಾನತೆ, ಲೈಂಗಿಕ ಶಿಕ್ಷಣದ ಮಹತ್ವ ಸೇರಿದಂತೆ ಇನ್ನೂ ಹಲವು ವಿಚಾರಗಳ ಕುರಿತು ಮತನಾಡಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಸಿ.ಜಿ ಲಕ್ಷ್ಮೀಪತಿ ಅವರು,  ” ನಮ್ಮ ಶಿಕ್ಷಣ ವ್ಯವಸ್ಥೆ ವಿಕಸನ ಹೊಂದುವ ಅಗತ್ಯ‌ ಇದೆ. ಯುವಜನರ ಮಾತುಗಳಿಗೆ ಆದ್ಯತೆ ನೀಡಬೇಕಾಗಿದೆ. ಇಂದು ಶಿಕ್ಷಕರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಆದರೆ ಅದು ಕೇವಲ‌ ಒಂದು ಕಡೆಗೆ ಸೀಮಿತವಾಗಬಾರದು, ವಿದ್ಯಾರ್ಥಿಗಳು ಕೂಡ ಶಿಕ್ಷಕರನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಬರಬೇಕಾಗಿದೆ. ನಮ್ಮಲ್ಲಿನ ಹಲವು ಯುವ ಜನರಿಗೆ ಆಪ್ತ ಸಮಾಲೋಚನೆಯ ಅಗತ್ಯ ಪ್ರತೀ ಶಾಲಾ ಕಾಲೇಜಿನಲ್ಲೂ ಇದೆ. ಇದಕ್ಕೆ ಪರಿಹಾರ ಯುವಜನರ ಆಯೋಗ ರಚನೆಯಾದಾಗ ಮಾತ್ರ ಸಾಧ್ಯ” ಎಂದು ಹೇಳಿದರು

ಇನ್ನು ಕಾರ್ಯಕ್ರಮದ ಕುರಿತು ಮಾತನಾಡಿದ ಸಾಹಿತಿ ಹಾಗೂ ರಂಗಭೂಮಿ ಕಲಾವಿದೆ ದು.ಸರಸ್ವತಿ ಅವರು ” ಯುವ ಜನರು ತಮ್ಮೊಳಗೆ ಒಂದು ಪ್ರತಿಜ್ಞೆಯನ್ನು ಮಾಡಿಕೊಳ್ಳಬೇಕು, ತಾವು ಎಂತಹದ್ದೇ ಪರಿಸ್ಥಿಯಲ್ಲೂ ಕುಗ್ಗುವುದಿಲ್ಲ ಎಂಬುವುದೆ ಆ ಪ್ರತಿಜ್ಞೆ, ಆ ಮೂಲಕ ಎಂತಹದ್ದೇ ಸಂದಿಗ್ಧ ಪರಿಸ್ಥಿತಿ ಬಂದರೂ ಯುವ ಜನರು ಅದನ್ನು ಸುಲಭವಾಗಿ ಎದುರಿಸುತ್ತಾರೆ, ಯುವಜನರಿಗೆ ಸಾಕಷ್ಟು ಆಯ್ಕೆಗಳಿವೆ ಆದರೆ ಅದಕ್ಕೆ ಸರಿಯಾದ ದಾರಿ ತೋರಿಸುವ ಜವಾಬ್ದಾರಿ ಈ ಸಮಾಜಕ್ಕೆ ಇದೆ”  ಎಂದು ಹೇಳಿದರು

ಇನ್ನು ಇದೇ ವೇಳೆ ಮಾತನಾಡಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಆರ್ ಅವರು ಯುವಜನರ ಮುಂದೆ ಸಾಕಷ್ಟು ಸವಾಲುಗಳು ಇರುವುದು ನಿಜ ಆದರೆ ಅದಕ್ಕೆ ಹಲವು ಪರಿಹಾರಗಳು ಕೂಡ ಇವೆ. ಆ ಪರಿಹಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲರ ಶ್ರಮವೂ ಅಗತ್ಯವಾಗಿದೆ. ಸಮಾಜದಲ್ಲಿ ಯುವ ಜನರಿಗೆ ತಮ್ಮದೇ ಆದ ಜವಾಬ್ದಾರಿಗಳು ಇವೆ ಅದೇ ರೀತಿ ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯ ಹೆಚ್ಚಾಗಿದೆ” ಇಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಇನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ ಮಾತನಾಡಿ ” ಇಂದು ಯುವಜನರ ಹಕ್ಕುಗಳ ರಕ್ಷಣೆ ಅತಿ ಮುಖ್ಯವಾಗಿದೆ, ಹೋರಾಟ, ಅಭಿವ್ಯಕ್ತಿ ಮತ್ತು ಸಮಾಜದ ಮುಖ್ಯ ವಾಹಿನಿಯಲ್ಲಿ ಯುವಜನರ ಪಾತ್ರ ಅತ್ಯಗತ್ಯವಾಗಿದೆ ಇದಕ್ಕೆ ನಮ್ಮ ಸುತ್ತಮುತ್ತಲಿನ ಸಮಾಜ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು, ಯುವಜನರ ಅಭಿಪ್ರಾಯಕ್ಕೆ ಆದ್ಯತೆ ನೀಡುವುದು ಕೂಡ ಅಗತ್ಯವಾಗಿದೆ ಎಂದು ಮಾತನಾಡಿದರು.

ಕಾರ್ಯಕ್ರದಲ್ಲಿ 2 ಅಧಿವೇಶನಗಳನ್ನು ನಡೆಸಲಾಗಿದ್ದು, ಇದರಲ್ಲಿ ಮೊದಲ ಅಧಿವೇಶನದಲ್ಲಿ  ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಜಿ ಲಕ್ಷ್ಮೀಪತಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ರಂಗಭೂಮಿ ಕಲಾವಿದೆ ಡಾ. ದು. ಸರಸ್ವತಿ, ಸಹಯಾನ ಸಂವಾದದ ಕೋ ಪ್ರೋಗ್ರಾಂ ಲೀಡ್ ಇಳಂಗೋ ಸ್ಟಾನಿಸ್ಲಾಸ್, ಬೆಂಗಳೂರು ಯುವ ಸಂಪನ್ಮೂಲ ಕೇಂದ್ರದ ಪ್ರೋಗ್ರಾಂ ಅಸೋಸಿಯೇಟ್ ಮಿನಿಮೋಳ್ ನೇತೃತ್ವದಲ್ಲಿ ನಡೆದಿದ್ದು, ಎರಡನೇ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಐ.ಎ.ಎಸ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಅರ್. ಐ.ಪಿ.ಎಸ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಮಾ ನಜೀರ್ ಚಿಕ್ಕನೇರಳೆ, ವಕೀಲರಾದ ಮೃದುಲಾ ಹಾಗೂ ಕೋಲಾರ ಯುವ ಸಂಪನ್ಮೂಲ ಕೇಂದ್ರದ ಪ್ರೋಗ್ರಾಂ ಅಸೋಸಿಯೇಟ್ ಆದ ಶಬೀನಾ ಅವರ ನೇತೃತ್ವದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಸಂವಾದದ ಎಲ್ಲಾ ಸಹೋದ್ಯೋಗಿಗಳು ಭಾಗವಹಿಸಿದ್ದರು. ಅಡವಿ ಆರ್ಟ್ಸ್ ಕಲೆಕ್ಟಿವ್ ನ  ತಮಟೆ ಸದ್ದಿಗೆ ದನಿಯಾದರು..

ತಳಮಟ್ಟದ ಯುವಜನರು ಉನ್ನತ ಶಿಕ್ಷಣ ಪಡೆಯುವಂತಾಗಲಿ – ಉಪನ್ಯಾಸಕರಾದ ವಸಂತ ಕುಮಾರ್
ತಳಮಟ್ಟದ ಯುವಜನರು ಉನ್ನತ ಶಿಕ್ಷಣ ಪಡೆಯುವಂತೆ ಮಾಡುವುದೇ ನಿಜವಾದ ಸಮಾಜಕರ‍್ಯ ಎಂದು ಉಪನ್ಯಾಸಕರಾದ ವಸಂತ ಕುಮಾರ್ ಎಚ್.ಆರ್. ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ನ ಎಸ್ ಈ ಏ ವಿಜ್ಞಾನ ವಾಣಿಜ್ಯ ಕಲಾ ಕಾಲೇಜಿನ ಸಮಾಜಕರ‍್ಯ ವಿಭಾಗ, ಜನಪರ ಫೌಂಡೇಷನ್ ಹಾಗೂ ವಿದ್ಯಾಜ್ಯೋತಿ ಕಾಲೇಜು ಸಹಭಾಗಿತ್ವದಲ್ಲಿ ಕಾಲೇಜಿನಲ್ಲಿ ಸಾವಿತ್ರಿಭಾಯಿ ಪುಲೆ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ “ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ” ಕುರಿತು ಅರಿವು ಕರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಷಿತ ವರ್ಗ ಹಿಂದುಳಿದ ವರ್ಗ ಯುವಜನರು ಸಾಮಾಜಿಕವಾಗಿ ವೃದ್ಧಿಯಾಗಲು ಉನ್ನತ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಸಮಾಜದ ಕಡೆಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ತಳ ಸಮುದಾಯ, ಹಿಂದುಳಿದ ಸಮುದಾಯಗಳಲ್ಲಿನ ಯುವಜನರಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಹಾಗೂ ಉನ್ನತ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಕರ‍್ಯೋನ್ಮುಖರಾಗಬೇಕು. ಹೆಣ್ಣು ಮಕ್ಕಳು ಭವಿಷ್ಯದ ನಾಳೆಗಳಿಗಾಗಿ ಇಂದಿನಿಂದಲೇ ತಯಾರಾಗಬೇಕು. ಅದಕ್ಕಾಗಿ ಶಿಕ್ಷಣವೇ ರ‍್ಯಾಯ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಜನ ನಾಗಪ್ಪ ಅವರು ಮಾತನಾಡಿ, ಸ್ವಾತಂತ್ರ‍್ಯ ಪರ‍್ವ ಭಾರತದ ಸಮಾನತವಾದಿ, ಸ್ತ್ರೀವಾದಿ ಮತ್ತು ಸಾಮಾಜಿಕ ಸುಧಾರಣೆಗಳ ಮೊದಲ ಚಾರಿತ್ರಿಕ ಹೆಜ್ಜೆ ಎಂದು ಗುರುತಿಸುವುದಾದರೆ ಅದು ಜ್ಯೋತಿ ರಾವ್ ಫುಲೆ ಮತ್ತು ಸಾವಿತ್ರಿಬಾಯಿ ಪುಲೆ ದಂಪತಿ. ಜ್ಯೋತಿ ರಾವ್ ಫುಲೆಯವರನ್ನು ಭಾರತದ ಸಾಮಾಜಿಕ ಹೋರಾಟಗಳ ತಂದೆ ಎಂದೇ ಇತಿಹಾಸವು ನೆನಪಿಸಿಕೊಳ್ಳುವುದು. ಇಂತಹ ಮಹಾನ್ ಚೇತನದ ಮಡದಿಯಾಗಿ ತನ್ನ ಬಾಳಸಂಗಾತಿಯ ಆಶಯಗಳ ಮಹತ್ವವನ್ನು ಅರಿತುಕೊಂಡು, ಅವುಗಳನ್ನು ತನ್ನ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡು ಬದುಕಿನ ಕೊನೆಯವರೆಗೂ ಮುನ್ನಡೆಸಿದ ಮಹಾನ್ ಚೇತನ ಸಾವಿತ್ರಿಬಾಯಿ ಫುಲೆ ಎಂದು ಹೇಳಿದರು.

ಭಾರತದ ಮೇಲ್ರ‍್ಗ ಹಾಗೂ ಊಳಿಗಮಾನ್ಯ ವ್ಯವಸ್ಥೆ ಶೂದ್ರರು ಮತ್ತು ಅಸ್ಪಶ್ಯರು ಕೆಲವರ ಸೇವೆಗೆಂದು ಮಾತ್ರ. ಅಕ್ಷರ, ಸ್ವತಂತ್ರ, ಸಮಾನತೆ, ಸ್ವಾಭಿಮಾನಗಳೆಲ್ಲ ತಳಸಮುದಾಯಗಳಿಗೆ ನಿಷಿದ್ದ, ಎಂಬ ನಿಯಮವನ್ನು ವಿಧಿಸಿದ್ದರು. ಅಂತಹ ಕಾಲದಲ್ಲಿ ಜಾತಿಮನಸ್ಥಿತಿಗಳ ವಿರುದ್ಧ ದೃಢವಾಗಿ ನಿಂತು ಶೂದ್ರಾತಿ ಶೂದ್ರರಿಗೆ ಅಕ್ಷರಾಭ್ಯಾಸ ಮಾಡಿಸಿ ಶಿಕ್ಷಣದ ಹಕ್ಕನ್ನು ಕಲ್ಪಿಸಿಕೊಟ್ಟು, ಸ್ವಾಭಿಮಾನದ ಜ್ಯೋತಿಯನ್ನು ಅಕ್ಷರಗಳ ಮೂಲಕ ನಮ್ಮೆಲ್ಲರೆದೆಗಳಲ್ಲಿ ಬೆಳಗಿಸಿದವರು ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಎಂದು ನುಡಿದರು.

ಮಹಿಳೆಯರಿಗೆ ಶಿಕ್ಷಣವನ್ನು ನೀಡಬೇಕೆಂಬ ಅಗಾಧವಾದ ಆಸೆ ಹೊಂದಿದ್ದ ಜ್ಯೋತಿಬಾ ಮೊದಲು ತನ್ನ ಮಡದಿ ಸಾವಿತ್ರಿಬಾಯಿಗೆ ಅಕ್ಷರಾಭ್ಯಾಸ ಮಾಡಿಸಿ ಅವರ ಮೊದಲ ಗುರುವಾದರು. ಬಾಳಸಂಗಾತಿಯ ಘನ ಉದ್ದೇಶವನ್ನು ಅರಿತ ಸಾವಿತ್ರಿಬಾಯಿ ಅಷ್ಟೇ ಆಸ್ಥೆ ಮತ್ತು ಶ್ರದ್ಧೆಯಿಂದ ಕಲಿತರು. ಕಲಿಕೆಯ ಆಸಕ್ತಿ ಅವರನ್ನು ಭಾರತದ ಶೋಷಿತ ಸಮುದಾಯಗಳ ವಿಮೋಚಕಿಯನ್ನಾಗಿ ಬೆಳೆಸಿತು. ಸಾವಿತ್ರಿಬಾಯಿ ಪತಿಯ ಮೊದಲ ಅನುಯಾಯಿ. ಅವರ ಎಲ್ಲಾ ಪ್ರಯೋಗಗಳ ಮೊದಲ ಫಲಿತಾಂಶ ಎಂದು ಮಾಹಿತಿ ನೀಡಿದರು.

ಅಂದಿನ ಕಾಲದಲ್ಲಿ ಶಿಕ್ಷಣವನ್ನು ನೀಡುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಅತ್ಯಂತ ನಿಂದನೆ, ನೋವು, ಅವಮಾನದಿಂದಲೇ ಕ್ರಮಿಸಿದ್ದರು. ಪಾಠ ಕಲಿಸಲು ಹೋಗುವ ದಾರಿಯ ಮಧ್ಯೆ ಅವರ ಮೇಲೆ ಕಲ್ಲು, ಮಣ್ಣು, ಸೆಗಣಿ ಎಸೆದರು. ಆದರೂ, ಧೃತಿಗೆಡದೇ ಎಲ್ಲವನ್ನೂ ಹಿಮ್ಮೆಟ್ಟಿಸಿ ಬಂಡೆಯಂತೆ ನಿಂತು ಅಕ್ಷರಾಭ್ಯಾಸದ ಕರ‍್ಯವನ್ನು ಮುಂದುವರಿಸಿದರು. ಹೀಗಾಗಿ, ಅವರು ನಮ್ಮೆಲ್ಲರಿಗೂ ಅಕ್ಷರದ ಮಾತೆಯಾಗಿದ್ದಾರೆ ಎಂದು ಪ್ರತಿಪಾದಿಸಿದರು.
ಈ ಸಂರ‍್ಭದಲ್ಲಿ ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್ ಹಾಗೂ ಪೆದ್ದೂರು ಮುನಿರಾಜು ಅವರು ಸಾವಿತ್ರಿ ಭಾಯಿ ಪುಲೆ, ಜ್ಯೋತಿ ಭಾಯಿ ಪುಲೆ ಹಾಗೂ ಹಲವು ಸಾಮಾಜಿಕ ಹಾಡುಗಳನ್ನು ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ವಿದ್ಯಾಜ್ಯೋತಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್, ಉಪನ್ಯಾಸಕರಾದ ಸ್ವಾಮಿ, ಎಸ್ ಈ ಏ ಕಾಲೇಜಿನ ದ್ವಿತೀಯ ಪ್ರಶಿಕ್ಷಣರ‍್ಥಿಗಳಾದ ರ‍್ಪಿತಾ, ವಿನೋಧಶ್ರೀ, ಬಾಬುರೆಡ್ಡಿ, ಜನಪರ ಫೌಂಡೇಷನ್ ನ ಯುವಯಾನ ಬಳಗದ ಅಕ್ಷಯ್, ಗಂಗೋತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೆಲದ ತವಕ – 2 ಇಪ್ಪತ್ತೊಂದನೆ ಶತಮಾನದ ಕನ್ನಡ ಸಾಹಿತ್ಯ: ಯುವ ಬರಹಗಾರರ ವಸ್ತು ವಿಷಯ
“..ಸಾಹಿತ್ಯ ಯಾವಾಗಲೂ ಭೂತದಿಂದ ಹೊರಬರುತ್ತಲೆ ವರ್ತಮಾನದ ಕನ್ನಡಿಯಾಗಬೇಕು. ೧೨ನೇ ಶತಮಾನದ ಬಸವಣ್ಣನ ಬವಣೆ ಎಷ್ಟಿತ್ತು, ಆತ ಕಲಿಯತನದಿಂದ ಆಗದಿದ್ದನ್ನು ಕವಿತ್ವದಿಂದ ಸಾಧ್ಯವಾಗಿಸಿದ್ದು ಇತಿಹಾಸ. ಸಾಹಿತ್ಯ ಧರ್ಮಾತೀತ, ಜಾತ್ಯಾತೀತ ನಿಲುವಿಗೆ ಬದ್ಧವಾಗಬೇಕು. ಆಗಲೇ ಸಾಹಿತ್ಯದ ನಿಜವಾದ ಕಸುವು ಕಣ್ಣೆರೆಯುವುದು. ಯುವ ಬರಹಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಾಣಲು ಸಾಧ್ಯ..” ಲೇಖಕರಾದ ಶ್ರೀಪತಿ ಹಳಗುಂದ ಅವರ ಬರಹದಲ್ಲಿ

ಸಾಹಿತ್ಯ ಸಮಾಜದ ಪ್ರತಿಬಿಂಬ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಪ್ರತಿಬಿಂಬಿಸಿದ್ದು ಏನನ್ನ, ಯಾವುದನ್ನ ಮತ್ತು ಏತಕ್ಕೆ ಎಂಬ ಪ್ರಶ್ನೆಯನ್ನು ಎತ್ತಬೇಕಾದದ್ದು ಅನಿವಾರ್ಯ. ಹಲ್ಮಡಿ ಶಾಸನದಲ್ಲಿ ಅಥವಾ ಅದಕ್ಕಿಂತಲೂ ಹಿಂದೆ ಕನ್ನಡ ಪದಗಳ ಕುರುಹು ಹುಡುಕುತ್ತಲೆ ಹತ್ತನೆ ಶತಮಾನಕ್ಕೆ ಅಧಿಕೃತ ಎಂಬ ತೃಪ್ತಿಕರವಾದ ಅನನ್ಯತೆಗೆ ಸಾಕ್ಷಿ ಆಗಿದ್ದೇವೆ.

ಸಾಹಿತ್ಯವನ್ನು ಧರ್ಮ ಆಳಿದ್ದು ಇತಿಹಾಸ, ಜೈನ, ವೀರಶೈವ, ವೈದಿಕ, ಇನ್ನೊಂದು ಜಾತಿಯೊ, ಧರ್ಮವೊ ಸಾಹಿತ್ಯವನ್ನು ಆಳಲೇ ಬೇಕಿತ್ತು. ಅಷ್ಟರಲ್ಲಿ ಕ್ರಿಸ್ತ ಮಿಷನರಿಗಳು ಬಂದು ಸಾಹಿತ್ಯವನ್ನು ಧರ್ಮದಿಂದ ವಿಮುಕ್ತವಾಗಿಸಿದ್ದು ಸ್ತುತ್ಯಾರ್ಹ, ಇದು ಇಪ್ಪತ್ತೊಂದನೆ ಶತಮಾನದ ಸತ್ಯ.

ಸಾಹಿತ್ಯವೆಂದರೆ ಪ್ರಕೃತಿ, ಪ್ರೇಮ, ಪ್ರಣಯ, ಆಧ್ಯಾತ್ಮ, ವೈಭವ ಎಂದು ಪರಿಭಾವಿಸುತ್ತಿರುವ ಕಾಲದಿಂದ ಸಾಹಿತ್ಯವೆಂದರೆ ಇಷ್ಟೇ ಅಲ್ಲ. ವೇದನೆ, ನಿವೇದನೆ, ಸಂವೇದನೆ ಎಂದು ಹೇಳತೊಡಗಿತು. ಇಪ್ಪತ್ತನೆ ಶತಮಾನದ ಉತ್ತರಾರ್ಧದಲ್ಲಿ ದಲಿತ, ಬಂಡಾಯ ಕಾಲಘಟ್ಟವೂ ಒಂದರ್ಥದಲ್ಲಿ ಒಂದು ಜನಾಂಗಕ್ಕೆ ಸೀಮಿತಗೊಳ್ಳುವ ಅಪಾಯ ಕಾಣುತ್ತಿದ್ದೇವೆ.

ಹಾಗಾದರೆ ಇಪ್ಪತ್ತೊಂದನೆ ಶತಮಾನದ ಪೂವಾರ್ಧದಲ್ಲಿ ಯುವ ಬರಹಗಾರರಿಗೆ, ಸಾಹಿತ್ಯಕ್ಕೆ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಇಂತಹ ಸವಾಲುಗಳ ಮೂಲಕ ಸಾರ್ಥತೆಗಳ ಬಗ್ಗೆ ಗಂಭೀರವಾಗಿ ಯೋಚಿಸುವ ತುರ್ತಿದೆ.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಇವೆಲ್ಲವೂ ಆಧುನೀಕರಣ ಎಂಬ ಮರದ ರೆಂಬೆ ಕೊಂಬೆಗಳು. ಹೀಗಿರುವಾಗ ಒಂದು ಭಾಷೆಯ ಸಾಹಿತ್ಯವನ್ನು, ಭಾಷೆಯನ್ನು ಭಾಷಿಕರನ್ನು ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ಸೈದ್ಧಾಂತಿಕ, ತಾತ್ವಿಕ, ತಾರ್ಕಿಕ ವಿಚಾರಗಳನ್ನು ಸಾಹಿತ್ಯಕ್ಕೆ ವಸ್ತುವಾಗಿಸಿಕೊಳ್ಳುತ್ತಲೆ ಹೊಸ ಸಮಾಜಕ್ಕೆ ಅಥವಾ ನಾನಂದುಕೊಳ್ಳುವ ಆದರ್ಶ ಸಮಾಜಕ್ಕೆ ಕಾಣಿಕೆ ನೀಡಬೇಕಿದೆ.

ಹಳೆಯದೆಲ್ಲವೂ ಶ್ರೇಷ್ಠ: ಹೊಸದು ಕನಿಷ್ಠ ಎಂಬ ಧೋರಣೆಯಿಂದ ಹೊರಬರುವ ಜಾಯಮಾನದವರಾಗಬೇಕು. ಸಾಹಿತ್ಯದ ಎಲ್ಲಾ ಪ್ರಕಾರಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಹೊಸ ತಲೆಮಾರಿನ ಬರಹಗಾರರು ಆಸಕ್ತಿ ವಹಿಸಬೇಕು. ಈ ಕಾರಣಕ್ಕೆ ‘ಮತ್ತೆ ಮತ್ತೆ ಪಂಪ’, ‘ಮತ್ತೆ ಮತ್ತೆ ಕುವೆಂಪು’ ಎಂಬ ಕೃತಿಗಳು ಹೊರಬರುತ್ತಿರುವುದು. ಅಂದರೆ ಹಳೆಯ ಬರಹಗಾರರ ಸಾಹಿತ್ಯವನ್ನು ಒರೆಗೆ ಹಚ್ಚಬೇಕಾಗಿದೆ. ಸಂಪ್ರದಾಯ ಸಾಹಿತ್ಯದಿಂದ, ವೈಚಾರಿಕತೆ ಸಾಹಿತ್ಯದ ಮೂಲಕ ಒಂದು ಪರಂಪರೆಯ ಬರಹಗಳನ್ನು ಕಾಪಾಡಿಕೊಳ್ಳುತ್ತಲೆ ಪಾರದರ್ಶಕತೆಯನ್ನು ತೋರಿಸಬೇಕಿದೆ.

ವೈಜ್ಞಾನಿಕವಾದ, ವೈಚಾರಿಕವಾದ ಆಲೋಚನೆಯ ಮೂಲಕ ಹೊಸ ಸಾಹಿತ್ಯದ ನೆಲೆಗಟ್ಟನ್ನು ಕಟ್ಟಬೇಕಿದೆ. ಕಾಲಕಾಲಕ್ಕೆ ಅಥವಾ ಆಧುನೀಕರಣಗೊಂಡಂತೆ ಸಾಹಿತ್ಯದ ವಸ್ತುವನ್ನು ವಿಶ್ಲೇಷಿಸಬೇಕಿದೆ. ಭೈರಪ್ಪನವರ ‘ಸಾರ್ಥ’ದ ವಸ್ತು ಗೊತ್ತು. ಅದೆ ಭೈರಪ್ಪ ‘ಯಾನ’ದಂತಹ ಕಾದಂಬರಿಗೆ ಬಳಸಿಕೊಂಡ ವಸ್ತುವನ್ನು ಗಮನಿಸಿ. ಇದೇ ಈ ಹೊತ್ತಿನ ಸವಾಲು ಎನ್ನೋಣವೇ?

ಸಾಹಿತ್ಯವೆಂದರೆ ಕಟ್ಟುವುದು ಮತ್ತು ಮುರಿದು ಕಟ್ಟುವುದು. ಈ ಮುರಿದು ಕಟ್ಟುವುದೇ ಸೃಜನಶೀಲತೆ ಅಥವಾ ವೈಚಾರಿಕತೆ ವಸ್ತು ಬದಲಾಗಬೇಕು. ಉದಾ: ಲಂಕೇಶರ ‘ಅವ್ವ’, ಮುಕುಂದರ ‘ಅವ್ವನ ಬಿಕ್ಕಳಿಕೆ ನಿಲ್ಲಿಸುವಿರಾ’ ಈ ಎರಡರ ಮೂಲವಸ್ತು ಒಂದೇ. ನಿರ್ದೇಶನದ ಶೈಲಿ ಬೇರೆ.

‘ಕಪ್ಪು ದಿನಗಳ ಬಗ್ಗೆ, ಕಷ್ಟದ ದಿನಗಳ ಬಗ್ಗೆ ಕವಿಗಳು ಹಾಡಬೇಕು’ ಇದು ಬ್ರೆಕ್ಟನ್ ಆಶಯ. ಈ ಭೂಮಿ ಬರೆದ ಕವನಗಳೆಂದರೆ ಮರಗಳು, ನಾವು ಅವುಗಳನ್ನು ಕತ್ತರಿಸಿ ಕಾಗದ ಮಾಡಿ ನಮ್ಮ ಪೊಳ್ಳುತನವನ್ನು ದಾಖಲು ಮಾಡಿಕೊಳ್ಳುತ್ತೇವೆ. (ಖಲೀಲ್ ಗಿಬ್ರಾನ್)

ಹೌದು, ಹೊಸ ತಲೆಮಾರಿನ ಲೇಖಕರ ಆಲೋಚನಾ ಕ್ರಮ ಸಂಘರ್ಷವಾಗಬೇಕಾ, ಸೌಹಾರ್ದವಾಗಬೇಕಾ, ಸಂವಹನವಾಗಬೇಕಾ ಎಂಬೆಲ್ಲಾ ಪ್ರಶ್ನೆ ಕಾಡುತ್ತದೆ. ಉದಾ: ಯೋಗೀಶ ಮಾಸ್ತರ ದುಂಡಿಯ ಬಗ್ಗೆ ಎತ್ತಿದ ಅಪಸ್ವರ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಬೇಕಾ, ಪ್ರಶ್ನಿಸುವ, ಪ್ರತಿರೋಧಿಸುವ ಸಂಪ್ರದಾಯವನ್ನು ಸಂಸ್ಕರಿಸುವ ಹಕ್ಕು ಯಾರಿಗಿದೆ ಎಂಬುವುದೇ ಈ ಹೊತ್ತಿನ ಸವಾಲು.

ವೈಚಾರಿಕತೆಯ ಹಿನ್ನೆಲೆಯುಳ್ಳ ಬರಹಗಾರರಿಗೆ ಸಾಂಪ್ರಾದಾಯದವರ ವಾಗಂಡನೆ ಇರುವ ಹೊತ್ತಿನಲ್ಲಿ ಯುವ ಬರಹಗಾರರು ಆಯ್ಕೆ ಮಾಡಿಕೊಳ್ಳುವ ವಸ್ತು ಹೇಗಿರಬೇಕು ಎಂಬುದನ್ನು ನಿರ್ಧರಿಸುವ ವರ್ಗ ಯಾವುದು? ಆ ಮೂಲಕ ಹೊಸ ಬಗೆಯ ಆಲೋಚನಾಕ್ರಮಕ್ಕೆ ಹಿನ್ನಡೆಯಾಗುವುದಿಲ್ಲವೇ?

ಶಿವರಾಮ ಕಾರಂತ, ಕುವೆಂಪು, ತೇಜಸ್ವಿ, ಆನ.ಕೃ., ಕಟ್ಟಿಮನಿ, ಸಾರಾ ಅಬೂಬಕರ್, ಅನಂತಮೂರ್ತಿ, ಎಚ್.ಎಸ್. ಶಿವಪ್ರಕಾಶ್, ಲಂಕೇಶ್, ಅಡಿಗರು ಮುಂತಾದವರು ಮೆಟ್ಟಿನಿಂತ ಸಾಹಿತ್ಯದ ವಸ್ತು ಪರಿಮಿತಿಯನ್ನು ಈ ತಲೆಮಾರಿನವರು ಮೆಟ್ಟಿನಿಲ್ಲಬೇಕು. ಆಗಲೇ ಸಾತ್ವಿಕವಾದ, ಸತ್ಯವಾದ ಸಾಹಿತ್ಯ ಮತ್ತು ಸಾಹಿತಿ ಬೆಳಕಿಗೆ ಬರಲು ಸಾಧ್ಯ.

ಸಾಹಿತ್ಯ ಯಾವಾಗಲೂ ಭೂತದಿಂದ ಹೊರಬರುತ್ತಲೆ ವರ್ತಮಾನದ ಕನ್ನಡಿಯಾಗಬೇಕು. ೧೨ನೇ ಶತಮಾನದ ಬಸವಣ್ಣನ ಬವಣೆ ಎಷ್ಟಿತ್ತು, ಆತ ಕಲಿಯತನದಿಂದ ಆಗದಿದ್ದನ್ನು ಕವಿತ್ವದಿಂದ ಸಾಧ್ಯವಾಗಿಸಿದ್ದು ಇತಿಹಾಸ. ಸಾಹಿತ್ಯ ಧರ್ಮಾತೀತ, ಜಾತ್ಯಾತೀತ ನಿಲುವಿಗೆ ಬದ್ಧವಾಗಬೇಕು. ಆಗಲೇ ಸಾಹಿತ್ಯದ ನಿಜವಾದ ಕಸುವು ಕಣ್ಣೆರೆಯುವುದು. ಯುವ ಬರಹಗಾರರು ಈ ನಿಟ್ಟಿನಲ್ಲಿ ಯಶಸ್ಸು ಕಾಣಲು ಸಾಧ್ಯ. ಜಾಗತೀಕರಣದ ಈ ಹೊತ್ತಿನಲ್ಲಿ ಬಹುಭಾಷಾ ಜ್ಞಾನವನ್ನು ಅರಗಿಸಿಕೊಂಡು ಸಾಹಿತ್ಯವನ್ನು ವಿಶ್ವಾತ್ಮಕ ದೃಷ್ಟಿಯಿಂದ ಮನಗಾಣಬೇಕು.

ಕಾಲ ಕಳೆದಂತೆ ಸಮಾಜ ಎದುರಿಸುವ ಸವಾಲುಗಳು ಬದಲಾಗುತ್ತಿರುತ್ತವೆ. ಒಟೊಟ್ಟಿಗೆ ಸಾಹಿತ್ಯ ಎದುರಿಸುವ ಸವಾಲುಗಳು ಬದಲಾಗಬೇಕು. ಆಗ ಮಾತ್ರ ಸಾಹಿತ್ಯ ಸೃಜನಶೀಲತೆಗೆ, ಕ್ರಿಯಾಶೀಲತೆಗೆ, ವೈಚಾರಿಕತೆಗೆ ಸಾಕ್ಷಿಯಾಗುತ್ತದೆ. ಯುವ ಬರಹಗಾರರು ಇಂದೇಕೋ ಒಬ್ಬ ನಿರ್ದಿಷ್ಟ ಲೇಖಕನ ಓದಿಗೆ ಅವನ ಸಿದ್ಧಾಂತಕ್ಕೆ ಜೋತುಬಿದ್ದು ಒಪ್ಪಿಕೊಳ್ಳುವುದು ಕಂಡುಬರುತ್ತಿದೆ. ಬದಲಿಗೆ ಒಂದು ಸಾಹಿತ್ಯವನ್ನು ಆಸ್ವಾದಿಸುವ, ಆಲೋಚಿಸುವ ಅರ್ಹತೆಯಿದ್ದಾಗ ಮಾತ್ರ ಆ ಬುದ್ಧಿವಂತ ಯೋಚನೆ ಮಾಡಬೇಕು. ಏಕಾಏಕೀ ಆರಾಧಿಸುವುದು ಈ ಹೊತ್ತಿನಲ್ಲಿ ಅಪಾಯ.

ವೈಚಾರಿಕತೆ ಎಂದರೆ ಶತಮಾನದ ಪರಂಪರೆ ಎಲ್ಲಾ ಸಾರಾಸಗಟಾಗಿ ತಿರಸ್ಕರಿಸುವುದು ಅಲ್ಲ. ಕುವೆಂಪು ಹೇಳುವಂತೆ ‘ಆಯೋಗ್ಯವಾದ ನಂಬಿಕೆಗಳನ್ನೇ ಮಾನದಂಡವನ್ನಾಗಿ ಮಾಡಿಕೊಂಡು ಬಹುಸಂಖ್ಯಾತರನ್ನು ಶೋಷಿಸುತ್ತಿರುವ ಅಲ್ಪಸಂಖ್ಯಾತ ವರ್ಗವನ್ನು ಪ್ರಶ್ನಿಸುವುದೇ ಆಗಿದೆ’. ಆ ಮೂಲಕವೆ ಒಂದು ಸಂಕ್ರಮಣ ಸ್ಥಿತಿಗೆ ಕಾರಣವಾಗಬೇಕಿದೆ.

ಒಟ್ಟಿನಲ್ಲಿ ೨೧ನೇ ಶತಮಾನದ ಹೊತ್ತಿನಲ್ಲಿ ಇರುವ ನಾವು ಪ್ರತಿ ಶತಮಾನವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಬೇಕಿದೆ. ಆದರೆ ಸವಾಲುಗಳು ಬೇರೆ ಬೇರೆ ಅಷ್ಟೆ. ತನ್ನತನವನ್ನು ಕಾಪಾಡಿಕೊಂಡು ತ್ರಿಕರಣಗಳನ್ನು ಎದುರಿಸಬೇಕಿದೆ. ತ್ರಿಕರಣಗಳೇ ಸವಾಲು. ತನ್ನತನವನ್ನು ಕಾಪಾಡಿಕೊಳ್ಳುವುದೇ ಸಾಧ್ಯತೆಯಾಗಿದೆ.

ತಂತ್ರಜ್ಞಾನವನ್ನು ಭಾಷೆಯ ಬೆಳವಣಿಗೆಗೆ ಬಳಸಿಕೊಳ್ಳುತ್ತಲೆ ಭಾಷೆಯನ್ನು ಬಳಸುವ ನಿಟ್ಟಿನಲ್ಲಿ ಯುವ ಬರಹಗಾರರು ಮುಂದಾಗಬೇಕಿದೆ. ಒಂದು ವರ್ಗದ ಸಂಸ್ಕೃತಿಯನ್ನು ವೈಭವೀಕರಿಸುತ್ತಾ ಬಹುಸಂಖ್ಯಾತರ ನೆಲಮೂಲದ ಸಂಸ್ಕೃತಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಸಾಮುದಾಯಿಕ ಸಂಸ್ಕೃತಿಯು ಇಲ್ಲವಾದರೂ ಸಾಂದರ್ಭಿಕ ಸಂಸ್ಕೃತಿಯ ಬಗ್ಗೆ ಗಂಭೀರವಾದ ಚಿಂತನೆಗೆ ತೊಡಗಿಸಿಕೊಳ್ಳಬೇಕಿದೆ.

ಯುವ ಬರಹಗಾರರು ಸ್ವತಂತ್ರವಾಗಿ ಚಿಂತಿಸಬೇಕೆ ಹೊರತು ಅದು ಶ್ವೇಚ್ಛಾಚಾರವಾಗಬಾರದು. ಹಲವು ಧರ್ಮ, ಜಾತಿ, ಜನಾಂಗ, ಭಾಷೆ ಈ ನೆಲದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರು ಹೇಳುವಂತೆ ‘ಬಡವನ ಹಸಿವನ್ನು, ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ’ ಅದು ಸಾಹಿತ್ಯಕ್ಕೂ ಅನ್ವಯವಾಗಬೇಕಿದೆ. ಅರ್ಥಾತ್ ಸಾಹಿತಿಯಿಂದ ತಕ್ಷಣದ ಪರಿಹಾರ ನಿರೀಕ್ಷೆ ಬೇಡ. ಮುಂದಿನ ಪಲ್ಲಟಗಳ ಆಶಯವಾದರೂ ಇರಲಿ.

ಗೊತ್ತಿದ್ದೋ ಗೊತ್ತಿಲ್ಲದೆಯೋ ಆಧುನೀಕರಣಕ್ಕೆ, ಜಾಗತೀಕರಣಕ್ಕೆ ನಮ್ಮನ್ನು ಒಪ್ಪಿಸಿಕೊಂಡಿದ್ದೇವೆ. ಅದೇ ಬೇಲಿಯಾಗದೆ, ಬಂಧನವಾಗದೆ ಬಾಂಧವ್ಯದ ನೆಲೆಗಟ್ಟಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಇಂದಿನ ಬರಹಗಾರರು ಮುಂದಾಗಬೇಕಿದೆ. ಕನ್ನಡದ ಸಂಶೋಧನೆಯ ವಿಚಾರಕ್ಕೆ ಬಂದರೆ ನಮ್ಮ ಯುವ ಪೀಳಿಗೆ ಆಯ್ಕೆ ಮಾಡಿಕೊಳ್ಳುವ ವಿಚಾರವೇ ಚರ್ಚಿಸಬೇಕಾಗಿದೆ. ಸಂಶೋಧನೆ ಎಂದರೆ ಹೇಳಿದ್ದನ್ನೇ ಇನ್ನೊಂದು ಅರ್ಥದಲ್ಲಿ ಹೇಳುವುದು ಅನ್ನುವಂತಹ ಜಾಯಮಾನದಿಂದ ಹೊರಬರಬೇಕಿದೆ.

ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಪದವಿ ಬೇಕು. ಆದರೆ ಆ ಬದುಕಿಗಾಗಿ ವಿಷಯದಲ್ಲಿ, ವಿಚಾರದಲ್ಲಿ ರಾಜಿಯಾಗುವ ಅವಶ್ಯಕತೆಯಿಲ್ಲ. ಅದು ಬಾಹ್ಯ ಮೌಲ್ಯಮಾಪನಕಾರರ ಭಯದಲ್ಲಿ ನಿಜವಾದ ಅಭಿಪ್ರಾಯಗಳನ್ನು ಹೊರತಂದ ಸಂಗತಿಗಳೇ ಹೆಚ್ಚು. ಈ ಮೊದಲೆ ಹೇಳಿದಂತೆ ನಮ್ಮ ಆಲೋಚನಾ ಕ್ರಮವನ್ನು ಮತ್ಯಾರೋ ನಿರ್ಬಂಧಿಸುವುದು ಎಷ್ಟು ಸರಿ?

ಈ ನಿಟ್ಟಿನಲ್ಲಿ ನಾವು ಚರ್ಚಿಸಬೇಕಿದೆ. ಪರಂಪರೆಯನ್ನು ಪ್ರಶ್ನಿಸುವುದೇ ಅಪರಾಧ ಎಂದಾಗ ಸಾಹಿತ್ಯ ಎತ್ತ ಸಾಗುತ್ತಿದೆ? ೨೦ನೇ ಶತಮಾನದ ಆರಂಭದಲ್ಲಿ ಈ ತೆರನಾದ ಬಿಕ್ಕಟ್ಟುಗಳಿದ್ದವು. ಇವೆಲ್ಲವನ್ನೂ ಮೀರಿ ಆಧುನಿಕ ಸಾಹಿತ್ಯ ನೆಲೆ ಕಂಡುಕೊಂಡಂತೆ ೨೧ನೆಯ ಶತಮಾನದ ಆರಂಭದ ಕಾಲಘಟ್ಟವು ಸಾಗಬೇಕಿದೆ.

ಒಟ್ಟಿನಲ್ಲಿ ವಸಾಹತುಶಾಹಿ ವ್ಯವಸ್ಥೆ, ರಾಷ್ಟ್ರೀಯತೆ, ಏಕೀಕರಣ ಪಾಶ್ಚಾತ್ಯ ಶಿಕ್ಷಣ ಕ್ರಮ, ಸಂಸ್ಕೃತಿಗಳ ವೈರುಧ್ಯ, ಭಾಷಿಕ ಬವಣೆ, ದೇಸಿತನದ ಕಾಳಜಿ, ಸಂಸ್ಕೃತಿ ಸಾಹಿತ್ಯ ಎಂದುಕೊಳ್ಳುತ್ತಲೆ ಆಧುನಿಕ ಕನ್ನಡ ಸಾಹಿತ್ಯದ ಪರಂಪರೆ ಒಂದು ಶತಮಾನದ ಅವಧಿಯನ್ನು ಪೂರ್ಣಗೊಳಿಸಿದೆ. ಒಂದಿಷ್ಟು ಪಲ್ಲಟಗಳೊಂದಿಗೆ ಹೊಸ ಹೊಸ ಸ್ವರೂಪಗಳೊಂದಿಗೆ ೨೧ನೇ ಶತಮಾನಕ್ಕೆ ಕಾಲಿರಿಸಿ ೨ ದಶಕಗಳ ಹೊಸ್ತಿಲಿನಲ್ಲಿ ನಿಂತಿದೆ. ವಿಭಿನ್ನ ಮಾದರಿಯ ಪಂಥ. ಧೋರಣೆಗಳಿಗೆ ನಿರಂತರವಾಗಿ ಮುಖಾಮುಖಿಯಾಗುತ್ತ ಬಂದ ನೆಲೆಗಳನ್ನು ನವೋದಯ, ಪ್ರಗತಿಶೀಲ, ನವ್ಯ, ನವೋತ್ತರ ಎಂಬ ಕಾಲಘಟ್ಟದ ಹೆಸರಿನಲ್ಲಿ ಕಂಡುಕೊಂಡಿದ್ದೇವೆ.

ಅಂತೆಯೇ ಅದು ಬೇರೆ ಬೇರೆ ಕಾಲಘಟ್ಟದಲ್ಲಿ ಹಲವು ಬಗೆಯ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ನಿರಂತರವಾಗಿ ಸ್ವೀಕರಿಸುತ್ತಲೇ ಬಂದಿದೆ. ಆಧುನಿಕ ಸಂದರ್ಭದಲ್ಲಿ ಕನ್ನಡದಲ್ಲಿ ನಡೆದ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿದರೆ ೨೦ನೆಯ ಶತಮಾನದ ಪೂರ್ವಾರ್ಧಕ್ಕೂ ಮತ್ತು ಉತ್ತರಾರ್ಧಕ್ಕೂ ವಸ್ತುಧೋರಣೆ ಮತ್ತು ಸಾತ್ವಿಕತೆಯ ದೃಷ್ಟಿಯಿಂದ ಸಾಕಷ್ಟು ಅಂತರಗಳು ನಿಖರವಾಗಿ ಕಂಡುಬರುತ್ತವೆ. ಕಳೆದ ಶತಮಾನದ ಉತ್ತರಾರ್ಧದಲ್ಲಿ ಪ್ರಕಟಗೊಂಡ ಕನ್ನಡ ಸಾಕಷ್ಟು ಸಾಹಿತ್ಯ ಕೃತಿಗಳು ಸಮಾಜಮುಖಿಯಾಗಿ ಪ್ರವಹಿಸಿದ್ದನ್ನು ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನೆ ಗುರುತಿಸಿಕೊಂಡಿದೆ. ಈ ಅವಧಿಯಲ್ಲಿ ಅಂದಿನ ಸಮುದಾಯಗಳ ಮಹಿಳೆಯರ ಮೂಲಕ ಬೆಳಕು ಕಂಡ ಸಾಹಿತ್ಯ ಕೃತಿಗಳಲ್ಲಿ ಪ್ರಗತಿಪರ ಧೋರಣೆ ದಟ್ಟವಾಗಿ ಕಾಣಸಿಗುತ್ತದೆ. ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯ ಕೃತಿಗಳಲ್ಲಿ ದಲಿತ, ಬಂಡಾಯ, ಗ್ರಾಮೀಣ ಇಸ್ಲಾಂ ಮತ್ತು ಸ್ತ್ರೀ ಸಂವೇದನೆಗಳೂ ಆಕೃತಿ ಪಡೆದದ್ದು ಕನ್ನಡ ಸಾಹಿತ್ಯದ ಜೀವಂತಿಕೆ ಮತ್ತು ಚಲನಶೀಲ ಗುರಿಗಳಿಗೆ ಸಾಕ್ಷಿಯಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೨೦ನೆಯ ಶತಮಾನದ ಕೊನೆ ದಶಕ ನವಯುಗವೊಂದನ್ನು ಸೃಷ್ಟಿಸಿದ ಕಾಲಘಟ್ಟ ಎನ್ನಬಹುದು. ನಿರ್ದಿಷ್ಟ ಪಂಥಗಳ ಗುರುತುಗಳಿಂದ ಬಿಡುಗಡೆಗೊಂಡು ಸಾಹಿತ್ಯವು ಬಹುಮುಖಿಯಾಗಿ ಪ್ರವಹಿಸಿದ ಕಾಲ ಅದು. ಆ ಅವಧಿಯಲ್ಲಿ ಆಧುನಿಕತೆ ಮತ್ತು ಜಾಗತೀಕರಣಕ್ಕೆ ಮುಖಾಮುಖಿಯಾಗಬಹುದಾದ ಅನೇಕ ಬರಹಗಳು ಮತ್ತು ಕೃತಿಗಳು ಪ್ರಕಟಗೊಂಡಿವೆ. ಮುಂದೆ ೨೧ನೆ ಶತಮಾನದ ಆರಂಭದ ದಶಕದಲ್ಲಿಯೂ ಇದರ ಬೆಳವಣಿಗೆಯ ನೆಲೆಗಳನ್ನು ಕಂಡುಕೊಳ್ಳಬಹುದಾಗಿದೆ. ಮುದ್ರಣ ಮಾಧ್ಯಮದೊಂದಿಗೆ ವಿದ್ಯುನ್ಮಾನ ಮತ್ತು ಅಂತರ್ಜಾಲ ಮಾಧ್ಯಮವು ಸಹ ಎಲ್ಲಾ ರೀತಿಯ ಮತ್ತು ವಯೋಮಾನದ ಬರಹಗಾರರಿಗೆ ಹೇರಳ ಅವಕಾಶಗಳನ್ನು ಒದಗಿಸಿದೆ. ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಅಕಾಡೆಮಿ ಪರಿಷತ್ತುಗಳು ರಚನೆ, ಪ್ರಕಟಣೆ ಮತ್ತು ಸಂಘಟನೆಯ ಕೆಲಸಗಳಿಗೆ ಹಲವು ಬಗೆಯ ಬೆಂಬಲ ನೀಡುತ್ತಿವೆ.

೨೧ನೆಯ ಶತಮಾನದ ಆರಂಭದ ದಶಕದಲ್ಲಿ ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಮತ್ತು ವೈವಿಧ್ಯಮಯ ಸ್ವರೂಪದಲ್ಲಿ ಸಾಹಿತ್ಯ ಸೃಷ್ಟಿಯಾಗಿದೆ. ಈ ಅವಧಿಯಲ್ಲಿ ಪರಿಚಿತವಾದ ಸಾಹಿತ್ಯ ಕೃತಿಗಳು ಅಧ್ಯಯನ ಮತ್ತು ಸಂಶೋಧನೆಯ ದೃಷ್ಟಿಯಿಂದ ಕೆಲವು ಮಹತ್ವದ ಫಲಿತಗಳನ್ನು ಮುಂದಿಡುತ್ತವೆ. ಈ ಫಲಿತಗಳು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಸಾಗಬೇಕಾಗಿರುವ ದಾರಿ ಮತ್ತು ಎದುರಿಸಬೇಕಾಗಿರುವ ಸವಾಲುಗಳ ಕುರಿತ ಮೇಲ್ನೋಟವನ್ನು ಸೂಚ್ಯವಾಗಿ ನೀಡುತ್ತವೆ. ಇಂದು ಕನ್ನಡ ಓದುಗರು ಸಹಜವಾಗಿ ತಮ್ಮ ಓದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಹಲವು ಮಂದಿ ಲೇಖಕರು ತಮ್ಮ ಓದುಗರು ಯಾರು ಎಂಬುದನ್ನು ಮೊದಲೇ ಕಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ೨೧ನೇ ಶತಮಾನ ತಮ್ಮ ಸೀಮಿತ ಅವಧಿಯಲ್ಲಿ ಕಂಡು ಅನುಭವಿಸಿದ ವಿಶಿಷ್ಟ ಬೆಳವಣಿಗೆ. ಇಂದಿನ ಸಾಮಾಜಿಕ ಸಂರಚನೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಮತ್ತು ಅದಕ್ಕೆ ಕಾರಣಗಳಾಗಿರುವ ಅಂಶಗಳನ್ನು ಪ್ರಕಟಪಡಿಸುವ ಬರಹಗಳು ಮತ್ತು ಕೃತಿಗಳು ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿವೆ. ಪ್ರತಿಯೊಂದು ಬರಹವು ತನ್ನ ಓದುಗರನ್ನು ತಾನೇ ಗುರುತಿಸಿಕೊಳ್ಳಬೇಕಾದ ಸಂದರ್ಭವೊಂದರ ನಡುವೆ ನಾವು ಬದುಕುತ್ತಿದ್ದೇವೆ.

೨೧ನೆಯ ಶತಮಾನದ ಆರಂಭದ ದಶಕಗಳಲ್ಲಿ ಕನ್ನಡದ ಬರವಣಿಗೆಯ ಹಟವು ಬಹು ವ್ಯಾಪಕವಾದ ಆಯಾಮವನ್ನು ಪಡೆದುಕೊಂಡಿದೆ. ನಾವು ಸಾಮಾನ್ಯವಾಗಿ ಗುರುತಿಸುವ ಸಾಹಿತ್ಯ ಪ್ರಕಾರಗಳ ಹೊರತಾಗಿ ಹಲವು ಹತ್ತು ಬಗೆಯ ವಲಯಗಳಲ್ಲಿ ಕನ್ನಡ ಪದವನ್ನು ಬಳಸುವ ಬಗೆ ವ್ಯಾಪಕವಾಗಿ ಬೆಳೆದಿದೆ. ಮಾಹಿತಿಗಾಗಿ ಕನ್ನಡದ ಬರವಣಿಗೆಯನ್ನು ಆಶ್ರಯಿಸುವುದು ಈಗ ಹೆಚ್ಚಾಗಿದೆ. ಆದ್ದರಿಂದ ಆ ವಲಯದ ಬೆಳವಣಿಗೆ ಅಧಿಕ ಪ್ರಮಾಣದಲ್ಲಿ ಸಿದ್ಧಗೊಳ್ಳುತ್ತಿದೆ. ಇಂಗ್ಲೀಷ್ ಮತ್ತು ಕನ್ನಡಗಳನ್ನು ಭಿನ್ನ ಉದ್ದೇಶಗಳಿಗಾಗಿ ಬಳಸುತ್ತಿದ್ದ ದ್ವಿಭಾಷಿಕ ಸಮುದಾಯವು ಈಗ ಮರೆಯಾಗತೊಡಗಿದೆ. ಎಲ್ಲದಕ್ಕೂ ಕನ್ನಡವನ್ನೇ ಆಶ್ರಯಿಸುವ ಏಕ ಭಾಷಿಕರು ಸಂಖ್ಯೆಯಲ್ಲಿ ಮತ್ತು ಸಾಮಾಜಿಕ ವ್ಯಾಪ್ತಿಯಲ್ಲಿ ಹೆಚ್ಚಾಗತೊಡಗಿದ್ದಾನ. ಈ ಹೊಸ ಪರಿಸ್ಥಿತಿಯನ್ನು ಎದುರಿಸಲು ಕನ್ನಡದ ಬರಹಗಾರರು ಸನ್ನದ್ಧರಾಗಬೇಕಾದ ತುರ್ತು ನಮ್ಮ ಮುಂದಿದೆ.

೨೧ನೆಯ ಶತಮಾನದ ಸಾಹಿತ್ಯ ಸಂವೇದನೆ ಗಟ್ಟಿಯಾಗಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವ್ಯಾಖ್ಯೆಗಳಲ್ಲಿ ಬದಲಾಗುತ್ತಿದೆ. ಲೈಂಗಿಕತೆಗೆ ಸಂಬಂಧಪಟ್ಟ ದೃಷ್ಟಿಯಿಂದ ಹೆಣ್ಣು ಗಂಡುಗಳನ್ನು ನೋಡುವ ಕ್ರಮ ಬಿಟ್ಟು ಸಮಾನತೆಯ ಎಡೆಗೆ ಸಾಗುತ್ತಿದೆ. ಸಮಕಾಲೀನ ಸ್ತ್ರೀಯರು ಜ್ಞಾನ ಪರಂಪರೆಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈವರೆಗೂ ಅನಾವರಣಗೊಳ್ಳದ ಸಣ್ಣ ಸಣ್ಣ ಸಮುದಾಯದ ಅನುಭವವನ್ನು ಈ ಶತಮಾನದ ಸಾಹಿತ್ಯ ಒಳಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ.

ಒಂದು ವಸಾಹತುಶಾಹಿ-ರಾಷ್ಟ್ರೀಯತೆಗಳ ಮುಖಾಮುಖಿ ವಿಮರ್ಶಾ ಚೌಕಟ್ಟುಗಳು ಮುರಿದುಬಿದ್ದು ನವ ವಸಾಹತುಶಾಹಿ ನವ ಉದಾರೀಕರಣದ ಶಕೆ ಪ್ರಾರಂಭವಾಗಿದೆ. ಇದನ್ನೆ ಸ್ಕೂಲವಾಗಿ ಮೂರನೆ ಜಗತ್ತಿಗೆ ಕಾಲಿಟ್ಟ ಜಾಗತೀಕರಣದ ಪರಿಣಾಮ ಎನ್ನಬಹುದು.

ಕನ್ನಡದ ಸಂದರ್ಭದಲ್ಲಿ ೨೦ನೆಯ ಶತಮಾನದ ಕೊನೆಯ ದಶಕ ಮತ್ತು ೨೧ನೆಯ ಶತಮಾನದ ಆರಂಭದ ದಶಕಗಳಲ್ಲಿ ಸೃಜನಶೀಲ ಮತ್ತು ವೈಚಾರಿಕ ಸಾಹಿತ್ಯದ ಅಧ್ಯಯನಕ್ಕೆ ಸಂಬಂಧಿಸಿದಂತೆ ಹಲವು ಸ್ಥಿತ್ಯಂತರಗಳನ್ನು ಕಾಣಬಹುದಾಗಿದೆ. ಮುಖ್ಯವಾಗಿ ಅಧ್ಯಯನದ ಆಸಕ್ತಿ ಮತ್ತು ಮಾದರಿಗಳಲ್ಲಿ ಈ ಬಗೆಯ ಸ್ಥಿತ್ಯಂತರಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಧುನಿಕ ಸಾಹಿತ್ಯದ ಮತ್ತೊಂದು ಸಂಕ್ರಮಣ ಕಾಲ ಎನ್ನಬಹುದು. ಈ ಅವಧಿಯಲ್ಲಿ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ತೀವ್ರ ಸ್ವರೂಪದ ಮತ್ತು ಕ್ರಾಂತಿಕಾರಕವಾದ ಬೆಳವಣಿಗೆಗಳು ಸಂಭವಿಸುತ್ತಿವೆ. ೨೧ನೆಯ ಶತಮಾನ ಎದುರುಗೊಳ್ಳುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳಿಗೆ ಕನ್ನಡ ಸೃಜನಶೀಲ ಮತ್ತು ವೈಚಾರಿಕ ಕೃತಿಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎಂಬುದು ಗಮನಾರ್ಹ.

ವಯಸ್ಸಿನ ತಾರತಮ್ಯ; ಸಾಮಾಜಿಕ ನ್ಯಾಯ!
ಯುವ ಜನರೆಂದರೆ ನಾಳೆಯ ಭವಿಷ್ಯ ಎಂದು ನಮ್ಮ ದೇಶದಲ್ಲಿ ಹೇಳುತ್ತಾ ಅವರ ಯೌವ್ವನವನ್ನೇ ಮಸುಕುಗೊಳಿಸಿ ಬಿಡುತ್ತಾರೆ. ಯುವಜನರು ನಾಳೆಯ ಭವಿಷ್ಯ ಹೌದೋ ಅಲ್ಲವೋ ಗೊತ್ತಿಲ್ಲ ಆದರೆ ಅವರು ಇಂದಿನ ಆಸ್ತಿ‌ ಅನ್ನೋದನ್ನು ಎಲ್ಲರೂ ಒಪ್ಪಿ ಅವರನ್ನು ನಿರ್ಣಾಯಕ ಜಾಗಕ್ಕೆ ಹೋಗಲು ಅವಕಾಶ ಮಾಡಿಕೊಡಬೇಕು. ಆದರೆ ಇದು ಆಗುತ್ತಿಲ್ಲ.

ಭಾರತದಲ್ಲಿ 15ರಿಂದ 29 ವಯಸ್ಸಿನೊಳಗಿನವರನ್ನು ಯುವಜನರು ಎನ್ನುತ್ತಾರೆ. ದೇಶದ ಒಟ್ಟು ಜನ ಸಂಖ್ಯೆಯ 27.3ರಷ್ಟು ಅಂದರೆ ಸುಮಾರು 37.14ಕೋಟಿ ಯುವಜನರಿದ್ದಾರೆ. 35 ವಯಸ್ಸಿನ ಒಳಗೆ ಶೇಕಡಾ 65ರಷ್ಟು ಜನರಿದ್ದಾರೆ.

ಬರೀ ಯುವಕರು ಎಂದು ಕರೆಯುವುದು ಲಿಂಗ ತಾರತಮ್ಯ ಆಗುತ್ತದೆ. ಹೀಗಾಗಿ ಯುವಕ ಮತ್ತು ಯುವತಿಯರಿಬ್ಬರನ್ನು ಉದ್ದೇಶಿಸಿ ಮಾತಾಡುವಾಗ “ಯುವಜನರೆಂದು” ಕರೆಯುವುದು ಸೂಕ್ತ.

ಸಮಾಜಶಾಸ್ತ್ರಜ್ಞರಾದ ಶಿವ ವಿಶ್ವನಾಥನ್, ನಮ್ಮ ದೇಶದಲ್ಲಿ ಯುವಜನರು ಬಹಳ ಅಸ್ಪಷ್ಟ ವರ್ಗಕ್ಕೆ ಸೇರುತ್ತಾರೆ. ಇದು ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಒಂದು ಹಂತವಾಗಿದೆ. ಆದರೆ ಕುತೂಹಲಕಾರಿಯಾಗಿ, ಯುವಜನರು ಈ ಎರಡೂ ವರ್ಗಗಳನ್ನು ಅತಿಕ್ರಮಿಸುತ್ತಾರೆ ಮತ್ತು ಆದ್ದರಿಂದ ಅದರ ವರ್ಗೀಕರಣವು ಮಸುಕಾಗಿದೆ ಎನ್ನುತ್ತಾರೆ.

ಭಾರತದ ದೇಶದಲ್ಲಿ, ವಯಸ್ಸಿನಲ್ಲಿನ ಹಿರಿಯರಿಗೆ ಹೆಚ್ಚು ಗೌರವ ಮತ್ತು ಪೂಜನೀಯ ಸ್ಥಾನಮಾನವನ್ನು ಭಾರತ ಪರಂಪರೆಯಲ್ಲಿ ನೀಡಲಾಗಿದೆ. ಇದು ಒಂದು ಹಂತದಲ್ಲಿ ಸರಿ ಇದ್ದಿರಬಹುದು. ಆದರೆ ಬದಲಾದ ಕಾಲದಲ್ಲಿ ಮತ್ತು ಮನುಷ್ಯನಿಗೆ ತಿಳುವಳಿಕೆ ಮಟ್ಟ ಹೆಚ್ಚಾದಂತೆ, ವಯಸ್ಸಿನ ಆಧಾರದ ಮೇಲೆ ಯಾವುದನ್ನೂ ಅಳೆಯಲು ಸಾಧ್ಯವಿಲ್ಲ.

ಮೊದಲು ವಯಸ್ಸಿನ ಅನುಭದ ಆಧಾರದ ಮೇಲೆ ಮನುಷ್ಯನ ದೊಡ್ಡತನ ಮತ್ತು ಸಂಪನ್ನ ವ್ಯಕ್ತಿತ್ವ ರೂಡಿಸಿಕೊಳ್ಳುತ್ತಾನೆಂಬ ನಂಬಿಕೆ ಇತ್ತು. ಕಾಲದ ಬದಲಾವಣೆ ಇದನ್ನು ಸುಳ್ಳು ಮಾಡುತ್ತಿದೆ. ವೇಗದ ಇಂಟರ್ ನೆಟ್ ಮುಕ್ತವಾದ ಕಲಿಕೆಗೆ ಎಲ್ಲ ವಯಸ್ಸಿನ ಜನರಿಗೆ ಇಂದು ಸಿಗುತ್ತಿದೆ. ಇಲ್ಲಿ ಅನೇಕ ಅನುಭವಗಳು ಹೊಂದಿದ ಜನರ ಅನುಭವನ್ನು ಅನುಭವಿಸಿದಂತೆ ಕಲಿಯಲು ಅವಕಾಶ ಕೂಡ ಇದೆ. ವ್ಯಕ್ತಿತ್ವ ನಿರ್ಮಾಣಕ್ಕೆ ವಯಸ್ಸು ಅವಶ್ಯವೇ ಅಲ್ಲ. ಅದಕ್ಕೆ ಮುಕ್ತವಾದ ಕಲಿಕೆಯ ವಾತಾವರಣ ಇದ್ದರೆ ಸಾಕು.

ಮನೆಯಲ್ಲಿನ ಕಿರಿಯರ ಸಲಹೆ ಸೂಚನೆಗಳಿಗೆ ಬೆಲೆಯೇ ಇರುವುದಿಲ್ಲ. ಅವನು/ಳು ಏನು ಓದಬೇಕು, ಏನು ಆಟ ಆಡಬೇಕು, ಏನು ತಿನ್ನಬೇಕು, ತೊಡಬೇಕು ಅನ್ನೋದನ್ನು ಬಹುತೇಕ ಮನೆಯಲ್ಲಿ, ಅವರಿಗೇನು ಗೊತ್ತಾಗುತ್ತೆ ಬಿಡಿ ಅಂತ ತಾವೇ ನಿರ್ಧಾರ ಮಾಡಿ ಬಿಡುತ್ತಾರೆ. ಕೆಲವೊಮ್ಮೆ ಕೆಲವು ಜಾತಿಯವರು ಮೇಲ್ಜಾತಿ ವ್ಯಕ್ತಿಯ ಹೆಸರಿಟ್ಟು ಕರೆದರೆ ಅದು ಮಹಾಪರಾಧ ಎಂದು ಒಪ್ಪಿದ ಮನುವಾದದ ಮನಸ್ಥಿಯ ತರಹ, ಪಿತೃಪ್ರಭುತ್ವದ ಮನಸ್ಥಿತಿ ವಯಸ್ಸಲ್ಲಿ ಚಿಕ್ಕವರು, ದೊಡ್ಡವರನ್ನು ಹೆಸರಿಟ್ಟು ಕರೆಯುವಂತಿಲ್ಲ. ಕರೆದರೆ ಘೋರ ಅಪರಾಧ ಎಂದು ಬಿಂಬಿಸುವ ಉದಾಹರಣೆಗಳು ಪ್ರತಿದಿನ ಕಾಣುತ್ತೇವೆ. ಯಾರೇ ಯಾರಿಗಾದರೂ ಗೌರವ ಪೂರ್ವಕವಾಗಿ ಹೆಸರಿಟ್ಟು ಕರೆಯುವುದು ಕೂಡ ಸಮಾನತೆಯ ಒಂದು ಭಾಗ.

ಇನ್ನೂ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಯಸ್ಸಿನ ಅಂತರ ತುಂಬಾ ಹೆಚ್ಚಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಯುವ ಜನರಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಿವೆ. ಅದರಲ್ಲಿ ಉಳ್ಳವರ ಕುಟುಂಬದ ಮಕ್ಕಳಿಗೆ ಅನ್ನಬಹುದು.

ಇಲ್ಲಿ ನನ್ನದೇ ಅನುಭವ ತಾಜಾ ಉದಾಹರಣೆ.

ನನ್ನ ವಯಸ್ಸು 27 ಇದ್ದಾಗ ನಾನು ಯಾವುದೇ ರಾಜಕೀಯ ಮತ್ತು ಸಾಮಾಜಿಕ, ಆರ್ಥಿಕ ಹಿನ್ನೆಲೆ ಇಲ್ಲದೆ ಇದ್ದಾಗಲೂ ಒಂದು ರಾಷ್ಟ್ರೀಯ ಪಕ್ಷದಿಂದ ಯಾರಿಗೂ,ಯಾವುದೇ ಬಕೆಟ್ ಹಿಡಿಯದೇ,ನನ್ನ ಕೆಲಸದ ಅಧಾರದ ಮೇಲೆಯೇ B ಫಾರಂ ಪಡೆದು ಕಳೆದ 2023ರ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಈ ಪ್ರೋಸೆಸ್ ಅಲ್ಲಿ ಸಂಪೂರ್ಣ ಮೆರಿಟ್ ಆಧಾರದ ಮೇಲೆ ನನಗೆ ಟಿಕೇಟ್ ಸಿಕ್ಕಿತ್ತು. ಯಾರನ್ನೂ ಬೇಡಿರಲಿಲ್ಲ.

ಈ ಸಂಧರ್ಭದಲ್ಲಿ ನನಗೆ ಅನೇಕ ಕಾರ್ಯಕ್ರಮಗಳಲ್ಲಿ ಆಹ್ವಾನ ಬರೋದು. ಕೆಲ ಕಾರ್ಯಕ್ರಮಗಳ ಸಂಯೋಜಕರು ಹಣ ಕೇಳೋರು ನನ್ನ ಹತ್ತಿರ ಇಲ್ಲ, ನನ್ನ ಉದ್ದೇಶ ಸಾಮಾಜಿಕ ಕಳಕಳಿ, ಹೀಗಿದೆ ಅಂದಾಗ ಮತ್ತೆ ಕರೆ ಬರುತ್ತಿರಲಿಲ್ಲ. ಇದನ್ನೇಕೆ ಹೇಳ್ತಾ ಇದೀನಿ ಅಂದರೆ ವಯಸ್ಸಿನ ಮೀರಿದ ಕೆಲಸ ಮಾಡಲು ಮುಂದಾದಾಗ ಈ ಸಮಾಜ ಒಪ್ಪುವುದಿಲ್ಲ. ಅನೇಕೆ ಪೂರ್ವಗ್ರಹಗಳು ಇಲ್ಲಿ ಆಕ್ಟಿವ್ ಆಗಿರುತ್ತವೆ.

ನಾನು ಹೋಗುತ್ತಿದ್ದ ಎಲ್ಲ ವೇದಿಕೆಯಲ್ಲಿ ನಾನೊಬ್ಬನೇ ಕಿರಿ ವಯಸ್ಸಿನ ಯುವಕನಾಗಿರುತ್ತಿದ್ದೆ. ಕೆಲವರು ಇದನ್ನು ಇರಿಸು ಮುರಿಸು ಮಾಡಿಕೊಂಡು ನನ್ನೊಂದಿಗೆ ಸಮಾನಾಗಿ ಕೂರಲು ಹಿಂದೆ ಮುಂದೆ ಮಾಡಿದ್ದುಂಟು. ಕೆಲವೊಮ್ಮೆ ನಂಗೂ ಒಂಥರಾ ಯಾಕಾದರೂ ಹೋಗಿದ್ದೆ ಅನಿಸೋದು.

ಒಮ್ಮೆ, ಸಾವಿರಾರು ಜನರು ಸೇರಿದ್ದ ಒಂದು ಸಾಮರಸ್ಯದ ಧಾರ್ಮಿಕ ಕಾರ್ಯಕ್ರಮ, ಅದರಲ್ಲಿ ಎಲ್ಲ ರಾಜಕೀಯ ನಾಯಕರ ಹೆಸರಿತ್ತು ನನ್ನ ಹೆಸರಿಲಿಲ್ಲ. ಕಾರಣ ನಾನು ದೇಣಿಗೆ ಕೊಟ್ಟಿರಲಿಲ್ಲ. ಆದರೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ವೇದಿಕೆಯ ಮುಂಭಾಗದ ಕುರ್ಚಿಯಲ್ಲಿ ಕೂತ ನನ್ನನ್ನು ಗಮನಿಸಿದ ಕೆಲ ಯುವಕರು ನಾನು ಬೇಡ ಅಂದರೂ, M.K ಸಾಹೇಬ್ ರನ್ನ ವೇದಿಕೆಗೆ ಕರೆಯಲೇ ಬೇಕೆಂದು ಸಂಯೋಜಕರಿಗೆ ಒತ್ತಾಯ ಮಾಡಿ ವೇದಿಕೆ ಹತ್ತಿಸಿದರು.

ಈ ವೇಳೆ ಎಲ್ಲರಿಗೂ ಮಾತಾಡುವ ಅವಕಾಶ ಮಾಡಿಕೊಟ್ಟರು. ಆದರೆ ನನಗೆ ಕೊಡಲಿಲ್ಲ. ಇದು ಹೊಟ್ಟೆ ಕಿಚ್ಚಿಂದ ಅಥವಾ ಅಹಂಕಾರದಿಂದ ಹೇಳ್ತಾ ಇಲ್ಲ. ಆದರೆ ಆ ವೇದಿಕೆಯಲ್ಲಿ ಬೇರೆ ರಾಜಕೀಯ ಪಕ್ಷದ ನಾಯಕರ ಸರಿ ಸಮಾನ ನಾನು ಕಾಲು ಮೇಲೆ ಕಾಲಕಿ ಕೂತಿರುವುದೇ ಬಹುತೇಕರಿಗೆ ಆಗ್ತಿರಲಿಲ್ಲ. ಕಾರಣ ಇಷ್ಟೇ ಇವ ಚಿಕ್ಕವನು ಅನ್ನುವ ಅಸಡ್ಡೆ. ಅವರಿಗೆ ಹೋಲಿಕೆ ಮಾಡಿದರೆ ನಾನು ಒಳ್ಳೆಯ ವಾಗ್ಮಿಯುೂ ಆಗಿದ್ದೆ.

ಅದೇ ನಾನು 50 ಸಾವಿರ ಒಂದು ಲಕ್ಷ ಹಣ ದೇಣಿಗೆ ಕೊಟ್ಟಿದ್ದರೆ ಮಾತಾಡಲು ಅವಕಾಶ ಮಾಡಿಕೊಟ್ಟು ನಾಲ್ಕೈದು ಘೋಷಣೆ ಕೂಡ ಹಾಕ್ತಾ ಇದ್ದರು ಅನಿಸುತ್ತೆ. ಇಲ್ಲಿ ಆರ್ಥಿಕ,ಸಾಮಾಜಿಕ ಸ್ಥಾನಮಾನದೊಂದಿಗೆ ವಯಸ್ಸು ತುಂಬಾ ಮುಖ್ಯ ಆಗುತ್ತೆ.

ಭಾರತದಲ್ಲಿ ಲಿಂಗ ತಾರತಮ್ಯ, ಅಸ್ಪೃಶ್ಯತೆ, ಜಾತಿವಾದ, ಕೋಮುವಾದ ಇದ್ದಂತೆಯೇ ವಯಸ್ಸಿನ ಹೆಸರಲ್ಲಿ ತುಂಬಾ ತಾರತಮ್ಯ ಮತ್ತು ದೌರ್ಜನ್ಯಗಳು ನಡೆಯುತ್ತಿದೆ. ಆದರೆ ಇದರ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ.
ವಯಸ್ಸಿನ ತಾರತಮ್ಯ ಕೇವಲ ಸಾಂಪ್ರದಾಯಿಕ ಮನಸ್ಥಿತಿಯ ಜನರೇ ಮಾಡುತ್ತಾರೆಂದರೆ ಇಲ್ಲ. ಪ್ರಗತಿಪರ ಅಂದುಕೊಂಡ ಅದೆಷ್ಟೋ ಜನರು ತಮ್ಮ ಕಾರ್ಯಕ್ರಮಗಳಲ್ಲಿ ಎಲ್ಲ ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುತ್ತಾರೆ. ಅದನ್ನು ತಮ್ಮ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳುತ್ತಾರೆ ಆದರೆ ವಯಸ್ಸಿನ ತಾರತಮ್ಯ ಅವರ ಅರಿವಿಗೆ ಬರುವುದಿಲ್ಲ. ಯಾಕೆಂದರೆ ಇದು ಅನ್ಯಾಯ ಮತ್ತು ತಾರತಮ್ಯ ಎಂದು ಇನ್ನೂ ನಮ್ಮ ದೇಶದಲ್ಲಿ ಚರ್ಚೆಯ ಮುನ್ನಲೆಗೆ ಬಂದಿಲ್ಲ.

ದೊಡ್ಡ ದೊಡ್ಡ ಲೇಖಕರ, ಚಿಂತಕರ ಮಧ್ಯೆ ಯುವ ಲೇಖಕರು, ಚಿಂತಕರು ಇರುವುದಿಲ್ಲ ಅವರೇನಿದ್ದರು ವೇದಿಕೆಯ ಮುಂಭಾಗದಲ್ಲಿ ಮಾತ್ರ. ಅಗಾಂತ ಒತ್ತಾಯಪೂರ್ವಕವಾಗಿ ಯಾರನ್ನೋ ಕುಳ್ಳರಿಸಬೇಕು ಅಂತಲ್ಲ. ಯೋಗ್ಯತೆ ಮತ್ತು ಸಾಮರ್ಥ್ಯ ಇರುವ ಯುವಜನರನ್ನು ತೊಡಗಿಸಿಕೊಳ್ಳಬೇಕು.ನಿರ್ಣಾಯಕ ಸ್ಥಾನದಲ್ಲೂ ಅವಕಾಶ ಕೊಡಬೇಕು. ಆವಾಗಲೇ ಯುವಜನರ ಸಾಮಾಜಿಕ ನ್ಯಾಯ ಸ್ಥಾಪಿತವಾಗುವುದು.

ಅದೆಷ್ಟೋ ಬಾರಿ ಹಿರಿಯರ ಕೆಲ ವರ್ತನೆಗಳು ಕಿರಿಯರಿಗೆ ಮಾನಸಿಕ ಕೀಳರಿಮೆ ಉಂಟು ಮಾಡಿಸುತ್ತೆ. ಯುವ ಜನರ ಮೇಲಿನ ಪೂರ್ವಗ್ರಹಗಳನ್ನು ಹಿರಿಯರು, ಹಿರಿಯರ ಮೇಲಿನ ಪೂರ್ವಗ್ರಹಗಳನ್ನು ಕಿರಿಯರು ಕಡಿಮೆಗೊಳಿಸಿಕೊಂಡು ವಯಸ್ಸಿನ ತಾರತಮ್ಯವನ್ನು ಕಡಿಮೆಗೊಳಿಸಬೇಕು.
ಯುವಜನರು ಕೂಡ ತಮ್ಮ ಪ್ರಾತಿನಿಧ್ಯದ ಬಗ್ಗೆ ಧ್ವನಿ ಎತ್ತಬೇಕು. ವಯಸ್ಸಿನ ತಾರತಮ್ಯ ಕಡಿಮೆಗೊಳಿಸುವುದು ಕೂಡ ಸಾಮಾಜಿಕ ನ್ಯಾಯದ ತುರ್ತು ಆಗಿದೆ.

M.K ಸಾಹೇಬ್ ನಾಗೇಶನಹಳ್ಳಿ

ಕಿಕ್ಕಿರದ ಗದ್ದಲದಾಗ ಮನಸ್ಸ ಮುಟ್ಟಿದ ಮಾತ
ಬೆಂಗಳೂರ್ ಅಂದ್ರ್  ಇಲ್ಲಿ ಯಾರಿಗೆ ಏನ ಆದರೂ ಯಾರು ಹೊಳ್ಳಿ ನೋಡಲ್ಲ, ಬಿದ್ದ ಪೆಟ್ಟ ಮಾಡಕೊಂಡ್ರನು ಯಾರು ಎಬ್ಬಸಲ್ಲ,  ಎದ್ದ ನಡಿಲಿಲ್ಲ ಅಂದ್ರ ಹಿಂದ ಬಂದ ಗುದ್ದತಾರ ಅನ್ನ ಅಂಜಕಿಲೆ ನಮ್ಗ ನಾವೇ ಸುಧಾರಸಕೊಂಡ ಹೋಗಬೇಕಾದ ಟ್ರಾಫಿಕ್ ಜಾಮ್ ದುನಿಯಾ ಬೆಂಗಳೂರ್ ಅಂತೆಲ್ಲಾ ನಾ ಅನ್ಕೊಂಡಿದ್ದ ಮತ್ತ ಒಂದು ವರ್ಷದ ಬೆಂಗಳೂರ್ ಬದುಕಿನ ಅನುಭವದ ಪ್ರಕಾರ ಅದು ಖರೆನು ಹೌದು.

ಇದೆಲ್ಲ ಖರೆ ಆದ್ರ ನನ್ನ ಅನುಭವ ಮತ್ತ ಅನಿಸಿಕೆ ಇವೆಲ್ಲವಕ್ಕ ಅಪೋಜಿಟ್ ಅನ್ನಂಗ ಇವತ್ತ ಒಂದು ಘಟನೆ ನಡಿತು ಅದರ ಪೀಠಿಕೆ ಇದಿಷ್ಟು.

ದಿನ್ನ ಹೋಗದಕ್ಕಿನ ಒಂದು ತಾಸ ಮೊದಲ ಇವತ್ತ ಆಫೀಸಕ್ಕ ಹೋಗಿದ್ದ ದಿನ್ನ ಇರೋ ಸರ್ ಅವರಿಗೆ ಇವತ್ತ ಸುಟ್ಟಿ. ಯಾಕ ಅಂದ್ರ ಐತಾರ ಅದ್ಕ  ಇನ್ನ ಒಂದ  ತಾಸ ತಡ ಆತದ  ಆಫೀಸ್ ತೆಗೀಲಕ ಅಷ್ಟತನ  ಏನ್ ಮಾಡಲಿ..? ವಾಪಾಸ್ ಪಿಜಿಗಿ ಹೋಗಮ ಅಂತ ವಾಪಾಸ ಬರಸಟ್ಟತ್ತಗೆ, ಹಾದ್ಯಾಗ ಒಂದು ಗುಡಿ ಆದ್ ಅಲ್ಲಿ ಬರದಕ, ಏ.. ಎಲ್ಲಿ ಹೋಗದ ಪಿಜಿಗಿ ಇಲ್ಲೇ ಕುಡಮ ಅಂಕಾಸ ಅನ್ಸ್ತು ಅಲ್ಲೆ ಕುಂತ.

ಕುಂತಕೆ ರೋಡಿನ ನಡಬರಕ್ ಇರ ಜಾಗ ಅಂದ್ರ್ ಪುಟ್ ಪಾತ್ ಅಂತಿರಬೇಕು ಅದಕ. ಅಲ್ಲಿ ಪಾರಿವಾಳಗೊಳಗಿ ನೋಡಕೋತ ಕುಂತಿದ್ದ. ಆ ಗಾಡಿಗೋಳ ಸೌಂಡನ್ಯಾಗನು ಒಂದೆ ಚಿತ್ತಿನಿಂದ ಆ ಪಾರಿವಾಳಗೊಳಗಿ ನೋಡಕೋತ ಕುಂತಕ್ಕಿಗಿ ಮೆಟ್ರೋ ಸ್ಟೇಷನ್ಯಾಗಿಂದ ಒಬ್ಬಕ್ಕಿ ಹುಡಗಿ ಬಂದಳು. ಒಮ್ಮಿಂದ ಒಮ್ಮಿಲಿಗೇ ಅಕಿನ ಕಡಿ ಕಣ್ಣ ಹೋದವು.

ಅಕಿನ ಮೋತಿ ಅನ್ನದ ಅತ್ತು, ಅತ್ತು ಭಾವ ಆಗಿತ್ತು. ನಾ ಅಯ್ಯ ಆ ಹುಡುಗಿ ಮೋತಿ ಯಾಕ ಅಷ್ಟ ಉಬ್ಬ್ಯಾದ, ಕಣ್ಣ ಯಾಕಾ ಅಷ್ಟ ದಪ್ಪ, ಕೆಂಪಗ ಆಗ್ಯಾವ ಅನ್ಕೋಲತ್ತಿದ್ದ. ಅಸ್ಟೊತ್ತಿಗೆ ಅಕಿನ ಹಿಂದಿಂದ ಇನ್ನೊಬ್ಬಕ್ಕಿ ಹುಡಗಿ  ಅಕಿನ ಬಾಜು ಬಂದು” ಎಕ್ಸ್ ಕ್ಯೂಸ್ ಮೀ” ಅಂದಳು. ನಾ ಅಡ್ರಸ್ ಏನಾರೆ ಕೇಳತಿರಬೇಕು ಅನ್ಕೊಂಡ ನೋಡಲತ್ತಿದ್ದ. ಆ ಹುಡುಗಿ ಈ ಹುಡುಗಿಗೆ ಹಲೋ ನೀವು ಆಗಲೆ ಅಳತಿದ್ದರಿ “Are you Ok ” ಅಂದಳು. ಮೊದಲ ಬಂದ ಹುಡುಗಿ ಹಾ ನಾನು ಚೆನ್ನಾಗಿದ್ದೀನಿ ಅಂದಳು. ಅಂದ್ರೂನು ಆ ಹುಡುಗಿ ಪಕ್ಕಾ ಅಂದಳು ಇನ್ನೊಮ್ಮ, ಅದ್ಕ ಅತ್ತ, ಅತ್ತ ದಮ್ಮಿಗಿ ಬಂದ ಹುಡುಗಿ ಮೂತಿಯೊಳಗ ಅದೆಂತಾ ಖುಷಿ ಬಂತು ಅಂದ್ರ್ ಇಷ್ಟೋತ್ತನ ನಾ ನೋಡಿದ ಹುಡಿಗಿ ಇಕಿನೇ ಏನು ಅನ್ನಂಗ ನನ್ನ ಮ್ಯಾಲ ನನಗೆ ಅನುಮಾನ ಬಂತ.

ಆ ಹುಡುಗಿ ಯಾಕ್ ಅಳ್ಳತ್ತಿಳೋ ಏನೋ. ಆದ್ರ ನನಗು ಒಬ್ಬರು ಹಿಂಗ್ ನನ್ನ ಕಣ್ಣಿರಿಗಿ ಕಾರಣ ಕೇಳೋರ ಹಾರ ಅಲ್ಲ ಅಂತಾ ಅಳು ಮುಖದಾಗೂ ನಗು ಮೂಡತು  ಅಂತ ನನಗ್ ಅನಿಸ್ತು. ಅವಾಗ ನಂಗ ಅನಿಸಿದ್ದು ಅಯ್ಯ್ ನಾ ಬೆಂಗಳೂರ್ ಅಂದ್ರ್ ಹಾದ್ಯಾಗ ಯಾರು ಬಿದ್ರುನು ಟೈಮ್ ಆಯ್ತಾ ಅಂದ್ರ್ ಬಸ್, ಮೆಟ್ರೋ ತಪ್ಪತವ ಅಂತ ಓಡಿ, ಓಡಿ ಹೊಗೋರೆ ಹಾರ ಅನ್ಕೊಂಡಿದ್ದ ಆದ್ರ ಒಬ್ಬರ ಕಣ್ಣೀರ ನೋಡಿ if you dont mind ಅಂತ ಅಂದು ಇನ್ನೊಬ್ಬರ ದುಃಖಕ್ಕ  ಮರಗೋರನು ಹಾರ ಅಲ್ಲ ಅಂತ ಬಾಳ ಅಂದ್ರ ಬಾಳ ಖುಷಿ ಆಯಿತು.

ಒಂದ ವರ್ಷಿನ ಬೆಂಗಳೂರ ಬದುಕಿನೊಳಗೆ ಎರಡು -ಮೂರು ಸಲ ಬಸ್ ನ್ಯಾಗ್ ಹೋಗಗ್ ಅರಾಮಿಲ್ಲದ ಮಲಕೊಂಡೋರಿಗಿ ಮತ್ತ ರಾತ್ರಿ ಹೊತ್ತ್ಯಾನ್ಯಾಗ್ ನಡಕೋತ ಹೋಗಾಗ ಅಂಗಡಿ ಮುಂದ ಎರಡು ಮಕ್ಕಳ ತಗೊಂಡ ಅಳ್ಕೋತ ಕುಂತ ಹೆಣ್ಣಮಗಳಿಗಿ ನೋಡಿದ್ದ, ನೋಡಿದಾಗ ಎಲ್ಲ ಕೇಳಬೇಕು ಏನ್ ಆಯಿತು ಅಂತ ಅನಿಸಿದ್ರನು,  ಅಯ್ಯ್ ಬೆಂಗಳೂರ್ ಮಂದಿ ನಾ ಏನಾರೆ ಕೇಳಿದ್ರ್ ನಿನಗೆ ಯಾಕ ಬೇಕು ಹೋಗವ್ವ ಅನ್ನಂಗ ಹಾರ ಅಂತ ಕೇಳಿದ್ದಿಲ್ಲ.

ಇವತ್ತಿನ ಈ ಘಟನೆ ನೋಡಿದ ಮ್ಯಾಲ ಅನ್ಸ್ತು ಕಂಡೋರ ದುಃಖಕ್ಕ್ ಮರಗಲಿಕರ ಇಲ್ಲಾ.  ಕಣ್ಣಿಗಿ ಕಂಡ ದುಃಖಕ್ಕ  ಒಂದು ಸಣ್ಣ ಮಾತಿಂದ ಸಮಾಧಾನ ಮಾಡಂತ ಮನಸುಗೋಳ ಆವ್ ಅಲ್ಲ ಅಂತ ಬಕ್ಕುಳ ಖುಷಿ ಆಯಿತು. ಇನ್ನುನೂ Are you ok ಅಂದ ಧ್ವನಿನ ಕಿವ್ಯಾಗ ಗುಯ್  ಗುಡ್ಲತ್ತದ, ಆ ಮೋತಿ ಕಣ್ಣಿನೊಳಗ ಹಚ್ಚಿ ಹಾಕದಂಗ ಆಗ್ಯಾದ.

ಪ್ರಾಣಿಗೋಳಿಗೂ ಮಾತ ಬರ್ತೀವ ಅಂದ್ರ ಅವು ನಮ್ಮ ಕಷ್ಟ-ಸುಖ ಕೇಳತಿವು, ಮನುಷ್ಯರಿಗಿ ಮನುಷ್ಯರೆ ಆಗಬೇಕು. ಅದ್ಕ ನಮ್ಗ ದುಃಖ, ತ್ರಾಸನ್ಯಾಗ ಇರಂತ ಮನಸಗೋಳಿಗಿ ಮಾತಾಡ್ಸಮು ಬಾಳ ಆಪ್ತತೆ ಇಂದ ಕೂಡಿದ ಒಂದು ಸಣ್ಣ ಮಾತ ಎಂತಾ ದುಃಖದಾಗ ಇರಂತ ಮನಸಿಗನು ಸಮಾಧಾನ ನೀಡತವ ಅನ್ನದ ಖರೆ ಆದ.

ಬಾಳ ಕಾರಣಕ್ಕ ಬೆಂಗಳೂರ್ ಅಂದ್ರ್ ಅಂಜಕಿ, ಒಂತರ ಚಂದಿಲ್ಲ ಈ ಊರು ನಮ್ಮೂರ ಚಂದ ಅಂತ ಅನ್ಸ್ತಿದ್ದ ಈ ಮನಸಿಗಿ ಆದ್ರ ಇವತ್ತಿನ ಈ ಕಾರಣಕ್ಕೆ ಯಾವುರಿಗಿ ಹೋದರು ಅಲ್ಲಿ ಎಲ್ಲಾ ಕಡಿನು ಚೊಲೋ ಮನಸಗೋಳ ಇರ್ತಾವ ಆದ್ರ ನಾವ್ ಚೊಲೋ ಮನಸಲೇ ನೋಡಬೇಕು ಅಂತ ಅನ್ಸ್ತು. ಹಿಂಗ್ ಅನ್ನಿಸ್ಲಿಕ್ ಮತ್ತ ಈ ಅನಿಸಿಕೆ ಬರಹ ರೂಪ ಕೊಡತನಕ ಕಾಡಿದ ಮನಸ್ಸಿಗೆ love you.

ರೇಣುಕಾ ಹನ್ನುರ್‌

ಯುವ ಬರಹಗಾರ್ತಿ

ಮಗು ಸಾಧನೆಗಳತ್ತ ಹೆಜ್ಜೆ ಹಾಕುತ್ತಿದ್ದರೆ ಸಾವು ತಾಯಿಯ ಕಡೆ ಹೆಜ್ಜೆ ಹಾಕುತ್ತಿದೆ…
ಕೇವಲ 9 ವರ್ಷಕ್ಕೆ ತಮಿಳುನಾಡಿನ ಪ್ರಖ್ಯಾತ ವಿಶ್ವ ವಿದ್ಯಾಲಯ ಧವನಿಯ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಗೌರವ ‘ಡಾಕ್ಟರೆಟ್’ ಬಿರುದು ಕೊಟ್ಟು ಸತ್ಕರಿಸಿತು. ಅತ್ಯಂತ ತೀಕ್ಷ್ಣಮತಿಯಾದ ಈಕೆ ತನ್ನ ಸಾಧನೆಯಿಂದ ನೂರಾರು ಪ್ರಶಸ್ತಿಗಳನ್ನು ಇಷ್ಟು ಚಿಕ್ಕ ವಯಸ್ಸಿಗೇ ಪಡೆದಿದ್ದಾಳೆ. ಹೀಗೆ ಸಾಧನೆಗಳ ಶಿಖರವನ್ನೇರುತ್ತಿರುವ ಆ ಪುಟ್ಟ ಬಾಲಕಿಯ ಯಶೋಗಾಥೆಯ ಬೆನ್ನಲ್ಲೇ  ಎದೆಬಿರಿಯುವ ದುರಂತ ಕಥನವೂ ಇದೆ- ಆನಂದ್ ಮುಳಬಾಗಿಲು, ಯುವ ಬರಹಗಾರ.

ಏಳು ತಿಂಗಳ ಹಿಂದೆ ಚಂದನ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕಿಯೊಬ್ಬಳು 224 ವಿಧಾನಸಭಾ ಕ್ಷೇತ್ರಗಳ ಹೆಸರುಗಳು, ದೇಶದಲ್ಲಿ ಇದುವರೆಗೂ ಆಯ್ಕೆಯಾದ ರಾಷ್ಟ್ರಪತಿಗಳ  ಹಾಗೂ ಪ್ರಧಾನಿ ಮಂತ್ರಿಗಳ ಹೆಸರುಗಳು, ರಾಷ್ಟ್ರಕವಿಗಳ ಹೆಸರು ಮತ್ತು ಕೃತಿಗಳ ಹೆಸರುಗಳು, ಅಂಬೇಡ್ಕರ್ ರವರ 60 ಬಿರುದುಗಳ ಹೆಸರು, ಭಾರತೀಯ ಸೇನಾ ಪ್ರಶಸ್ತಿಗಳ ಹೆಸರುಗಳು, ಬಸವಣ್ಣನವರ ವಚನಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಡಾ. ಪುನೀತ್ ರಾಜಕುಮಾರ್ ರವರು ಇದುವರೆಗೂ ನಟಿಸಿರುವ ಎಲ್ಲಾ ಸಿನಿಮಾಗಳ ಹೆಸರುಗಳು ಹಾಗೂ ಇಸವಿಗಳು. ಪುರಾಣದ ದೃತರಾಷ್ಟ್ರನ 101 ಮಕ್ಕಳ ಹೆಸರುಗಳು.  ಕೆಮಿಕಲ್ ಫಾರ್ಮುಲಾ ಗಳ ಹೆಸರುಗಳು ಹೀಗೆ ಇನ್ನೂ ಹಲವಾರು ರೀತಿಯ ವಿಷಯಗಳ ಬಗ್ಗೆ ಪಟ್ ಪಟ್ ಅಂಥ ಹೇಳ್ತಿದ್ದ ರೀತಿ ನೋಡಿ ಆಹಾ! ಈ ಹುಡುಗಿ ಎಂಥ ಅದ್ಭುತ ನೆನಪಿನ ಶಕ್ತಿಯುಳ್ಳವಳು ಅಂದುಕೊಂಡೆ. ಇಂಥವರು ಕೋಟಿಗಳಲ್ಲಿ ಒಬ್ಬರು ಇರಬಹುದು. ಈ ಪುಟಾಣಿ ಹುಡುಗಿಯನ್ನು ತುಂಬಾ ಜನ ಮಾಧ್ಯಮಗಳಲ್ಲಿ ನೋಡಿರಬಹುದು ಅಥವಾ ಈಕೆಯ ಬಗ್ಗೆ ಕೇಳಿರಬಹುದು.

ಸೂಪರ್ ಕಿಡ್ ಧವನಿ

ಧವನಿ ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಗ್ರಾಮದಲ್ಲಿ. ಪ್ರಸ್ತುತ ಬೆಂಗಳೂರಿನ ಹಗ್ಗನಹಳ್ಳಿಯಲ್ಲಿ ವಾಸವಾಗಿದ್ದಾರೆ. ಧವನಿಯ ತಂದೆ ಒಂದು  ಫ್ಯಾಕ್ಟರಿಯಲ್ಲಿ ಗೂಡ್ಸ್ ಲೋಡ್ ಹಾಗೂ ಅನ್ಲೋಡ್ ಮಾಡುವ ಕೆಲಸ ಮಾಡ್ತಿದ್ದಾರೆ. ತಾಯಿ ರೇಖಾ.  ಧವನಿ ಹಗ್ಗನಹಳ್ಳಿಯಲ್ಲಿಯೇ ಇರುವ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ    ತರಗತಿ ಓದುತ್ತಿದ್ದಾಳೆ. ಅತ್ಯಂತ ತೀಕ್ಷ್ಣಮತಿಯಾದ ಈಕೆ ತನ್ನ ಸಾಧನೆಯಿಂದ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ-

•ತಮಿಳುನಾಡಿನ ಪ್ರಖ್ಯಾತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪ್ರಶಸ್ತಿ

•ರಾಜ್ಯ ಸರ್ಕಾರದಿಂದ ಕೆಳದಿ ಚನ್ನಮ್ಮ ಪ್ರಶಸ್ತಿ

•ಕರ್ನಾಟಕ ಆಚಿವರ್ಸ್ ಬುಕ್ ಆಫ್‌ ರೆಕಾರ್ಡ್

•ನೇಚುರಲ್ ರೆಕಾರ್ಡ್

•ಮಲ್ಟಿಪಲ್ ರೆಕಾರ್ಡ್

•ಸೂಪರ್ ಆಚೀವರ್ಸ್ ಬುಕ್ ಆಫ್‌ ರೆಕಾರ್ಡ್

• ಸರ್ ಎಂ ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ

• ಕುವೆಂಪು ರಾಷ್ಟ್ರೀಯ ಪ್ರಶಸ್ತಿ

• ಕರುನಾಡ ಕಣ್ಮಣಿ ಪ್ರಶಸ್ತಿ

• ಕಲಾ ಅಪರಂಜಿ ರಾಜ್ಯ ಪ್ರಶಸ್ತಿ

• ಬಸವಕಾಂತಿ ಪ್ರಶಸ್ತಿ

• ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ

• ಕರ್ನಾಟಕ ದರ್ಶನ ‘ಕರ್ನಾಟಕ ಜ್ಞಾನ ಚಕ್ರವರ್ತಿ’ ಪ್ರಶಸ್ತಿ..

ಹೀಗೆ, ಇನ್ನೂ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ ಈ ಪುಟ್ಟ ಬಾಲಕಿ.

ಕೇವಲ ಒಂಭತ್ತು  ವರ್ಷಕ್ಕೆ ತಮಿಳುನಾಡಿನ ಪ್ರಖ್ಯಾತ ವಿಶ್ವ ವಿದ್ಯಾಲಯ ಇವಳ ಆಸಾಧಾರಣ ಪ್ರತಿಭೆಯನ್ನು ಗುರ್ತಿಸಿ ಗೌರವ ‘ಡಾಕ್ಟರೆಟ್’ ಬಿರುದು ಕೊಟ್ಟು ಸತ್ಕರಿಸಿತು. ಅವಳೀಗ ಡಾ. ಧವನಿ. ಹೀಗೆ ಸಾಧನೆಗಳ ಶಿಖರವನ್ನೇರುತ್ತಿರುವ ಆ ಪುಟ್ಟ ಬಾಲಕಿಯ ಯಶೋಗಾಥೆಯ ಜತೆಗೆ  ಎದೆಬಿರಿಯುವ ದುರಂತ ಕಥನವೂ ಇದೆ.

ದುರಂತ ಕಥನ

GUINNESS GIRL ಧವನಿ ಮತ್ತು ಅವಳ ತಾಯಿ ರಾಜಾಜಿನಗರದಲ್ಲಿರುವ  ಆಕೃತಿ ಬುಕ್ ಶಾಪ್ ಗೆ ಬಂದಿದ್ರು. ನಾನು ಈ ಹುಡುಗಿಯನ್ನೆಲ್ಲೋ ನೋಡಿದ್ದೀನಿ ಅಂಥ ಅನಿಸ್ತು. ಆದ್ರೆ ಎಲ್ಲಿ ನೋಡಿದ್ದೀನಿ ಅಂಥ ಜ್ಞಾಪಕಕ್ಕೆ ಬಂದಿಲ್ಲ. ಅವಳ ಅಮ್ಮ ʼಧವನಿ ಆ ಬುಕ್ ನೋಡು ಚೆನ್ನಾಗಿದೆʼ ಅಂಥ ಹೇಳಿದ್ಲು. ಆಗ ಈ ಹೆಸರು ನೆನಪಿಗೆ ಬಂತು. ಅವಳು ಇವಳೇನಾ ಅಥವಾ ಬೇರೆಯವಳಾ ಅಂಥ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದೆ. ಇವಳು ಆ ಸೂಪರ್ ಕಿಡ್ ಧವನಿ. ನನಗಾದ ಆಶ್ಚರ್ಯಕ್ಕೆ, ಖುಷಿಗೆ ಪಾರವೇ ಇರ್ಲಿಲ್ಲ. ನಂತರ ಅವಳ ತಾಯಿಯ ಜೊತೆ ಮಾತುಕತೆ ಮುಂದುವರೆಸಿದೆ. ಆ ತಾಯಿಯ ಕಥೆ ಕೇಳಿ ಕೆಲವೇ ಕ್ಷಣಗಳಲ್ಲೇ ನನ್ನ ಮನ ಮೌನವಾಗಿ, ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡ್ತು.

ಧವನಿಯ ತಾಯಿ ರೇಖಾರವರಿಗೆ ಸುಮಾರು ನಾಲ್ಕು  ವರ್ಷಗಳಿಂದ ಬೋನ್ ಕ್ಯಾನ್ಸರ್ ಇದೆ. ಪ್ರತಿದಿನ ರಾಜಾಜಿನಗರದಲ್ಲಿರುವ ಆಸ್ಪತ್ರೆ ಗೆ ಧಾವಿಸಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದಾರೆ. ಧವನಿ ಹಗ್ಗನಹಳ್ಳಿಯಲ್ಲಿಯೇ ಇರುವ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಾಲ್ಕನೇ  ತರಗತಿ ಓದುತ್ತಿದ್ದಾಳೆ. ಸಾಮಾನ್ಯವಾಗಿ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಎದ್ದು ರೆಡಿಯಾಗಿ ಅಮ್ಮ ಮಾಡಿದ ಊಟ ತಿಂದು ಶಾಲೆಗೆ ಹೊರಡುತ್ತಾರೆ. ಆದ್ರೆ  ತನ್ನ ತಾಯಿಯ ಪರಿಸ್ಥಿತಿ ನೋಡಿ ಬೆಳಿಗ್ಗೆ ಐದು ಗಂಟೆಗೆ ಎದ್ದು, ಸ್ವಲ್ಪ ಹೊತ್ತು ಓದಿಕೊಂಡು ತಾನೇ ಅಡುಗೆ ಮಾಡುವುದು ಕಲಿತು ಈಗ ತಂದೆ – ತಾಯಿಗೆ ಅಡುಗೆ ಮಾಡಿ ಹಾಕಿ ಶಾಲೆಗೆ ಹೋಗುತ್ತಿದ್ದಾಳೆ. ಈಗ ತಾಯಿಯ ಅರೋಗ್ಯ ಸಮಸ್ಯೆ ತೀವ್ರವಾಗಿರುವ ಕಾರಣ ಶಾಲೆಯಲ್ಲಿ ಶಿಕ್ಷಕರಿಂದ ಪರ್ಮಿಷನ್ ಪಡೆದು ತಾಯಿಯ ಜೊತೆ ಆಸ್ಪತ್ರೆ ಗೆ ಬರುತ್ತಿದ್ದಾಳೆ.

ಈ ಬಾಲಕಿಯ ಸಾಧನೆಗಳನ್ನು ನೋಡಿ ಖುಷಿ ಪಡಬೇಕೋ ಅಥವಾ ಅವಳನ್ನು ಹೆತ್ತ  ತಾಯಿ ಆ ಮಗುವಿನಿಂದ ಶಾಶ್ವತವಾಗಿ ದೂರ ಆಗ್ತಾಳೆ ಎಂದು ತಿಳಿದು ನೋವು ಪಡಬೇಕೋ ಗೊತ್ತಿಲ್ಲ. ಪ್ರತಿ ಹೆಣ್ಣು ತನ್ನದೇ ಆದ ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ಆದ್ರೆ ಮದುವೆ ಆಗಿ ಮಕ್ಕಳಾದ್ರೆ ತಮ್ಮ ಎಲ್ಲಾ ಕನಸುಗಳನ್ನು  ಮಕ್ಕಳ ಭವಿಷ್ಯದ ಮೇಲೆ ವರ್ಗಾಯಿಸುತ್ತಾರೆ. ಈ ತಾಯಿಯ ಕಣ್ಣಿನಲ್ಲೂ ಅದು ಸ್ಪಷ್ಟವಾಗಿ ಕಾಣಿಸ್ತು. ತಾನು ಈ ಲೋಕದಿಂದ ಮರೆಯಾಗ್ತಿದ್ದೀನಿ ಅನ್ನೋ ನೋವು ಅದಾಗಿರಲಿಲ್ಲ. ಬದಲಿಗೆ ಆ ನೋವು, ಮುಂದೆ ನನ್ನ ಮಗುವಿನ ಆರೈಕೆ ಏನು ಅನ್ನೋದಾಗಿತ್ತು. ನಮಗೆ ಗೊತ್ತು ಆ ಮಗು ಮುಂದೆ ಜಗ ಮೆಚ್ಚುವ ಸಾಧಕಿ ಖಂಡಿತ ಆಗ್ತಾಳೆ ಎಂದು. ಆದ್ರೆ ಒಂಭತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಹೆತ್ತ ತಾಯಿಗೆ ತನ್ನ ಮಗುವಿನ ಬಗ್ಗೆ ಚಿಂತೆ ಇಲ್ಲದೆ ಇರಲು ಹೇಗೆ ಸಾಧ್ಯ?.

ಧವನಿಗೂ ಗೊತ್ತು ಅಮ್ಮನಿಗೆ ಬೋನ್ ಕ್ಯಾನ್ಸರ್ ಇದೆ, ಹೆಚ್ಚು ಕಾಲ ನನ್ನೊಂದಿಗೆ ಇರುವುದಿಲ್ಲ ಎಂದು. ನಾನು ಅತ್ತರೆ ಅಮ್ಮನೂ ಅಳ್ತಾರೆ, ಇದರಿಂದ ಅಮ್ಮನ ಅರೋಗ್ಯದ ಮೇಲೆ ಇನ್ನಷ್ಟು ತೀವ್ರ ಪರಿಣಾಮ ಬೀರುತ್ತೆ ಎಂದು ತಿಳಿದ ಧವನಿ ಅಳು ಮರೆತು ಅಮ್ಮನೊಂದಿಗೆ ನಗು ನಗುತ್ತಾ ಇರುತ್ತಾಳೆ. ಈ ಹುಡುಗಿಯ  ವಯಸ್ಸು ಚಿಕ್ಕದಾಗಿರ ಬಹುದು. ಆದ್ರೆ ಆಲೋಚನೆಯಲ್ಲಿ, ಜ್ಞಾನದಲ್ಲಿ, ಆಕೆ ತುಂಬಾ ಹಿರಿಯಳು ಅನ್ನಿಸ್ತದೆ. ತನ್ನೊಳಗೆ  ಹೇಳಿಕೊಳ್ಳಲಾರದ ನೋವಿದೆ. ತಾಯಿಯನ್ನು ಹೇಗಾದ್ರು ಉಳಿಸಿಕೊಳ್ಳುವ ಮನಸ್ಸು ಅವಳಿಗಿದೆ. ಅದಕ್ಕೆ ವೀಕ್ಷಕರಲ್ಲಿ ಕೈ ಮುಗಿದು ತಾಯಿಯ ಉಳಿವಿಗೆ ಸಹಾಯ ಮಾಡಿ ಎಂದು ಅಳುತ್ತಾ ಕೇಳಿ ಕೊಳ್ಳುವ ವಿಡಿಯೋವನ್ನು ನಾವು ನೋಡಿದ್ದೇವೆ.

ಕೈಲಾದಷ್ಟು ಹಣ ಸಹಾಯ ಮಾಡೋಣ

ಆ ಅಸಾಧಾರಣ ಹುಡುಗಿಯ ಭವಿಷ್ಯಕ್ಕೆ ನಾವು ಜೊತೆಯಾಗೋಣ. ಆ ಮಗು ತಾಯಿಯ ಜೊತೆ ಒಂದಷ್ಟು ಸಮಯ ಕಳೆಯಲು ಆರ್ಥಿಕ ಸಹಾಯ ಮಾಡೋಣ. ಆ ಮಗುವಿನ ಬದುಕಿಗೆ ಆಸರೆಯಾಗೋಣ.

ಈ ಕೆಳಗೆ ಕಾಣಿಸಿರುವ ಆಕೆಯ ಅಮ್ಮ ರೇಖಾ ಅವರ  ಅಕೌಂಟ್ ನಂಬರ್ ಗೆ ನಮ್ಮ ಕೈಲಾದಷ್ಟು ಹಣದ ಸಹಾಯ ಮಾಡೋಣ

Phone pay, Google pay – 9113213561

Name – Rekha AB

Karnataka Bank – 5332500101855001

IFSC code – KARB0000533

Branch : Nonavinakere

KARNATAKA BANK

ಆನಂದ್ ಮುಳಬಾಗಿಲು

ಯುವ ಬರಹಗಾರ

ಕತ್ತಿ
ಯುದ್ಧ ಮಾಡುವುದು ಸರಿ ಅಲ್ಲ. ಯುದ್ಧ ಕೆಟ್ಟದ್ದು. ಕೊಲ್ಲುವುದು ಸರಿ ಅಲ್ಲ. ಹಾಗಾಗಿ ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಮಕ್ಕಳು ನನ್ನ ಕತ್ತಿಯನ್ನು ಹಿಡಿದು ಆಟವಾಡುತ್ತಾರೆ. ನಗುತ್ತಾರೆ, ಕುಣಿಯುತ್ತಾರೆ. ಹಾಗಾಗಿ ನನ್ನ ಕತ್ತಿಯ ಮುಂದೆ ನಿನ್ನ ಕತ್ತಿ ಏನೇನೂ ಅಲ್ಲ….. ಮಕ್ಕಳ ರಂಗ ಚಟುವಟಿಕೆಯ ಸನ್ನಿವೇಶವೊಂದನ್ನು ರಂಗಕರ್ಮಿ ಸ್ಕಂದಘಾಟೆ ಹಂಚಿಕೊಂಡಿದ್ದಾರೆ.

ಮೊನ್ನೆ 9ನೇ ನವೆಂಬರ್, 2023ರ ಗುರುವಾರದ ದಿನ ನಾನು ಸ್ಕೂಲ್ನಲ್ಲಿ 7ನೇ ಕ್ಲಾಸ್ ಮಕ್ಕಳಿಗೆ ಪಾಠ ಮಾಡಬೇಕಿತ್ತು. ನನ್ನ ಗಂಟಲು ನೋಯ್ತಿತ್ತು. ನೆಗಡಿ ಆಗಿತ್ತು. ಅದಕ್ಕೆ ನಂಗೆ ಕ್ಲಾಸ್ ತೊಗೊಳಕ್ಕೆ ಸಹಾಯ ಮಾಡ್ಲಿಕ್ಕೆ ನನ್ನ ಕಲೀಗ್ ಆದಿತ್ಯ ಅಂತ ಒಬ್ಬ ನನ್ನ ಜೊತೆ ಇದ್ದ. ಅವನು ಕ್ಲಾಸ್ ಮಾಡಲು ಮುಂದಾಳತ್ವ ತಗೊಂಡ. ನಾನು ಅವ್ನಿಗೆ ಸಹಾಯ ಮಾಡ್ತಿದ್ದೆ. ಯಥಾಪ್ರಕಾರ ಗಂಟೆ ಹೊಡೆದ ನಂತರ ಮಕ್ಕಳು ಒಬ್ಬೊಬ್ಬರಾಗಿ ಬಂದು ಸೇರಿದ್ರು. ಒಂದಷ್ಟು ಬಾಡಿ ವಾರ್ಮ್ ಅಪ್ ಮಾಡ್ಸಿದೆ. ಅದಾದ್ಮೇಲೆ ಆದಿತ್ಯನಿಗೆ ಕ್ಲಾಸ್ ಮಾಡಲು ಬಿಟ್ಕೊಟ್ಟೆ. ಅವನು ಎಲ್ಲರ ಜೊತೆ ಸೇರಿ ಸರ್ಕಲ್ ಮಾಡಿ, exercise ನ instructions ಕೊಡಕ್ಕೆ ಶುರು ಮಾಡಿದ.

Exercise ಸಿಂಪಲ್ ಆಗಿತ್ತು. ಎಲ್ಲರೂ ಕಣ್ಣು ಮುಚ್ಚಿ ಅವರವರ imagination ಗೆ ತಕ್ಕಂತೆ ಒಂದು ಪಾತ್ರವನ್ನು ಚಿತ್ರಿಸಿಕೊಂಡು, ಆ ಪಾತ್ರದ ದೇಹವನ್ನು ಅನುಕರಿಸಬೇಕಿತ್ತು. ಮೊದಲಿಗೆ ಎಲ್ಲರಿಗೂ ಒಬ್ಬ ಅಜ್ಜ ಅಥವಾ ಅಜ್ಜಿಯನ್ನು imagine ಮಾಡಿಕೊಂಡು ಅವರ ದೇಹವನ್ನು ಅನುಕರಿಸಲು ಹೇಳಿದ. ಮಕ್ಕಳು ಮಾಡಿದರು. ಆ ನಂತರ, ಆ ಪಾತ್ರದ ಕೈಲಿ ಏನಾದರೂ ಒಂದು ವಸ್ತುವನ್ನು ಹಿಡಿದು  ಕೊಂಡಿರಬೇಕು ಎಂದು ಸೂಚನೆ ಕೊಟ್ಟ. ಒಂದಿಬ್ಬರು ಮಾತ್ರ ಕೋಲನ್ನು ಹಿಡಿದು ಕೊಂಡಂತೆ ಮಾಡಿದರು. ಆ ಕ್ಲೀಶೆ ವಸ್ತುವನ್ನು ಬಹಳ ಕಡಿಮೆ ಮಕ್ಕಳು ಬಳಸಿದ್ದನ್ನು ಕಂಡು ನನಗೆ ಸ್ವಲ್ಪ ಖುಷಿಯಾಯಿತು. ಅದಾದನಂತರ ಅವರಿಗೆ ನಡೆದಾಡಲು ಹೇಳಿದ. ನಡೆದಾಡಿದರು. ಯಾವುದೇ ಒಬ್ಬ ವೃದ್ಧರ caricature ನನಗೆ ಕಾಣಲಿಲ್ಲ. ಖುಷಿ ಸ್ವಲ್ಪ ಹೆಚ್ಚಾಯಿತು.

ನಂತರ ಎಲ್ಲರಿಗೂ relax ಮಾಡಲು ಹೇಳಿ, ಒಬ್ಬ ರಾಣಿಯನ್ನು imagine ಮಾಡಿಕೊಳ್ಳಲು ಹೇಳಿದ. ಗಂಡು ಮಕ್ಕಳು ಕೂಡ ರಾಣಿಯರಾಗಬೇಕಿತ್ತು. ನೋಡಕ್ಕೆ ಚಂದ ಇತ್ತು. ನೇರ ನಿಂತು, ಎದೆ ಉಬ್ಬಿಸಿ, ಒಂದು ಇಂಚು ಕುತ್ತಿಗೆ ಎತ್ತಿ, ಕಾಲುಗಳನ್ನು ಜೋಡಿಸಿ, ಸೊಂಟದ ಭಾರವನ್ನು ಒಂದು ಕಾಲಿನ ಮೇಲೆ ಊರಿ, ಕೈಗಳನ್ನು ವೃತ್ತಾಕಾರದಲ್ಲಿ ಜೋಡಿಸಿ ತಮ್ಮ ತಮ್ಮ ಹೊಕ್ಕಳು ಮುಂದೆ ತೂಗಾಡುವಂತೆ ಬಿಟ್ಟು ನಿಂತಿದ್ದರು. ಪುನಃ ಅವರಿಗೆ ಏನಾದರೂ ವಸ್ತು ಹಿಡಿದುಕೊಳ್ಳಲು ಸೂಚಿಸಲಾಗಿತ್ತು. ಕೆಲವೊಬ್ಬರು ಕನ್ನಡಿ, ಕೆಲವೊಬ್ಬರು ರಾಣಿದಂಡ, ಕೆಲವೊಬ್ಬರು ಹೂವಿನ ಮಾಲೆ ಇತ್ಯಾದಿಗಳನ್ನು ಹಿಡಿದು ಕೊಂಡರು. ರಾಣಿ ನಡೆದಾಡುವಂತೆ ನಡೆಯಲು ಸೂಚನೆ ಬಂತು. ನಡೆದಾಡಿದರು. ಹಗುರವಾಯಿತು ದೇಹ. ಪ್ರತಿ ಹೆಜ್ಜೆಯೂ ಯೋಚಿಸಿ ಇಡುವಂತೆ ಇಡುತ್ತಿದ್ದರು. ಆದರೆ ರಾಣಿಯ ದರ್ಪ ಕಡಿಮೆಯಾಗಿರಲಿಲ್ಲ. ಎಲ್ಲರೂ ಇದು ನನ್ನ ಜಾಗ, ನಾನು ಹೇಳಿದಂತೆ ನಡೆಯುವ ಜಾಗ ಎಂಬ ಭಾವನೆಯಲ್ಲಿ ನಡೆಯುತ್ತಿದ್ದರು.

ಇದನ್ನು ಗಮನಿಸಿದ ಆದಿತ್ಯ, power dynamics exercise ಪ್ರಯೋಗ ಮಾಡಲು ಯೋಚಿಸಿದ. ಇಬ್ಬರಿರುವ ಒಂದೊಂದು ಗುಂಪು ಮಾಡಲು ಹೇಳಿದ. ರಾಣಿಯ ನಡೆಯನ್ನಿಟ್ಟುಕೊಂಡೇ ಗುಂಪುಗಳನ್ನು ಮಾಡಿದರು. ಈಗ ಅವನ ಸೂಚನೆಗಳು ಹೀಗಿತ್ತು – ಗುಂಪಿನಲ್ಲಿರುವ ಇಬ್ಬರು ಪರಸ್ಪರ ಮಾತನಾಡಬೇಕು. ಆದರೆ ಅವರಿಬ್ಬರಲ್ಲಿ ಒಬ್ಬರ status ಮೇಲಿರುತ್ತದೆ. ಮತ್ತೊಬ್ಬರದ್ದು ಕೆಳಗಿರುತ್ತದೆ. ಆದರೆ ಇಬ್ಬರೂ ರಾಣಿಗಳೇ. ಆತ ಚಪ್ಪಾಳೆ ಹೊಡೆದ ನಂತರ ಅವರ conversation ಅಲ್ಲಿ ಬದಲಾವಣೆ ಮೂಡಿ status change ಆಗಬೇಕು.

ಮಕ್ಕಳು ಮಾತನಾಡಲು ಶುರು ಮಾಡಿದರು. ಅವರ ರಾಣಿಯ ಜಗತ್ತು ಬಟ್ಟೆ, ಆಭರಣ, ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೂ power shifting ಚೆನ್ನಾಗಿ ಮಾಡುತ್ತಿದ್ದರು. ಆದಿತ್ಯ ಸ್ವಲ್ಪ ಹೊತ್ತಿನ ನಂತರ ರಾಣಿಯ ಪಾತ್ರವನ್ನು ಬಿಟ್ಟು ರಾಜನ ಪಾತ್ರವನ್ನು imagine ಮಾಡಿಕೊಳ್ಳಲು ಹೇಳಿದ. ಎಲ್ಲರ ಕೈಯ್ಯಲ್ಲಿ ಒಂದು ಕತ್ತಿ ಬಂತು. ಈ ಕ್ಲೀಶೆಯನ್ನು ನೋಡಿ ನನಗೆ ಮುಂಚೆ ಆಗಿದ್ದ ಖುಷಿ ತುಂಡಾಯಿತು. ಇರಲಿ ಏನಾಗತ್ತೆ ನೋಡಣ ಅಂತ ಗಮನಿಸುತ್ತಲೇ ಇದ್ದೆ. ಆಗ ಇಬ್ಬರು ಹುಡುಗರು ಮಾತನಾಡುತ್ತಿದ್ದ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಮಾತುಗಳನ್ನು ಯಥಾವತ್ತಾಗಿ ಬರೆಯಲು ಪ್ರಯತ್ನಿಸುತ್ತೇನೆ –

ಹುಡುಗ 1 – ನನ್ನ ಕೈಯ್ಯಲ್ಲಿರುವ ಈ ಕತ್ತಿ ಜಗತ್ತಿನ ಅತ್ಯುತ್ತಮ ಕುಲುಮೆಗಾರರಿಂದ ತಯಾರಿಸಲ್ಪಟ್ಟದ್ದು. ಈ ಕತ್ತಿ ತುಂಡಾಗುವುದೇ ಇಲ್ಲ. ಜಗತ್ತಿನಲ್ಲಿ ನನ್ನೊಡನೆ ಮಾತ್ರ ಇಂತಹ ಕತ್ತಿ ಇರುವುದು. ನಿನ್ನ ಕತ್ತಿ ಇದರ ಮುಂದೆ ಏನೇನೂ ಅಲ್ಲ.

ಆದಿತ್ಯ ಚಪ್ಪಾಳೆ ತಟ್ಟಿದ. ಪವರ್ shift ಆಯಿತು

ಹುಡುಗ 2- ಹೌದು. ನನ್ನ ಕತ್ತಿ ಸಾಮಾನ್ಯ. ಆದರೆ ಈ ಕತ್ತಿ ನನಗೆ ಬಹಳ ಪ್ರಿಯವಾದದ್ದು. ನನ್ನನ್ನೇ ಹುಡುಕಿಕೊಂಡು ಬಂದ ಕತ್ತಿಯಿದು. ನಿನ್ನ ಹತ್ತಿರ ಕತ್ತಿ ಇದ್ದರೂ, ಅದನ್ನು ಹೇಗೆ ಬಳಸಬೇಕು ಎಂದು ನಿನಗೆ ಗೊತ್ತಿಲ್ಲ. ಹಾಗಾಗಿ ಆ ಕತ್ತಿ ನಿನ್ನೊಡನೆ ಇದ್ದರೆಷ್ಟು ಬಿಟ್ಟರೆಷ್ಟು?

ಚಪ್ಪಾಳೆ. Power shift.

ಹುಡುಗ 1 – ನಾನು ಈ ಕತ್ತಿಯನ್ನು ಬಳಸಲು ಕಲಿತು ಕೊಳ್ಳಬೇಕಾಗಿಯೇ ಇಲ್ಲ. ಇದನ್ನು ಒಮ್ಮೆ ಬೀಸಿದರೆ ಸಾಕು, ಸಾವಿರಾರು ಜನ ಸಾಯುತ್ತಾರೆ. ಅಂತಹ ಶಕ್ತಿಯುಳ್ಳ ಕತ್ತಿ ನನ್ನದು. ಇದರ ಮುಂದೆ ಯಾರೂ ನಿಲ್ಲಲು ಸಾಧ್ಯ ಇಲ್ಲ.

ಚಪ್ಪಾಳೆ

ಹುಡುಗ 2 – ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ.

ಹುಡುಗ 1 ತಬ್ಬಿಬ್ಬಾಗಿ ಹೋದ. ಹುಡುಗ 2 ನನ್ನು ಗೇಲಿ ಮಾಡಲು ಶುರು ಮಾಡಿದ.

ಹುಡುಗ 1 – ಯಾರನ್ನೂ ಕೊಲ್ಲುವುದಿಲ್ಲ ಎಂದರೆ ಆ ಕತ್ತಿಯಿದ್ದೇನು ಪ್ರಯೋಜನ? ಯಾಕೆ ಬೇಕು ನಿನಗೆ ಕತ್ತಿ?

ಹುಡುಗ 2 – ಯುದ್ಧ ಮಾಡುವುದು ಸರಿ ಅಲ್ಲ. ಯುದ್ಧ ಕೆಟ್ಟದ್ದು. ಕೊಲ್ಲುವುದು ಸರಿ ಅಲ್ಲ. ಹಾಗಾಗಿ ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಮಕ್ಕಳು ನನ್ನ ಕತ್ತಿಯನ್ನು ಹಿಡಿದು ಆಟವಾಡುತ್ತಾರೆ. ನಗುತ್ತಾರೆ, ಕುಣಿಯುತ್ತಾರೆ. ಹಾಗಾಗಿ ನನ್ನ ಕತ್ತಿಯ ಮುಂದೆ ನಿನ್ನ ಕತ್ತಿ ಏನೇನೂ ಅಲ್ಲ.

ಸ್ಕಂದಘಾಟೆ, ರಂಗಕರ್ಮಿ

ಇದನ್ನೂ ಓದಿ-ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?

ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದಷ್ಟೂ ಯುವ ಸಮೂಹವು ಹಾದಿ ತಪ್ಪುತ್ತಲೇ ಹೋಗುತ್ತದೆ
ಚೈತ್ರಾ ಇಂದು ತನ್ನ ಕರ್ಮಭೂಮಿಯಲ್ಲೇ ಅಪರಾಧಿಯಾಗಿ ಅನಾಥ ಸ್ಥಿತಿಯಲ್ಲಿದ್ದಾರೆ. ಆಕೆಯ ಮೇಲಿನ ಆರೋಪಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡದೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಮತ್ತು ಚುನಾವಣಾ ಬಂಡವಾಳದ ಕೂಪದಲ್ಲಿ ಇಣುಕಿ ನೋಡಿದರೆ ಚೈತ್ರಾ ಏಕಾಂಗಿಯಾಗೇನೂ ಕಾಣುವುದಿಲ್ಲ. ಚೈತ್ರಾ ಮುಂತಾದವರು ಮತೀಯ ರಾಜಕಾರಣದ ಕ್ರೂರ ವ್ಯವಸ್ಥೆಗೆ ಬಲಿಯಾದ ಯುವ ಸಮೂಹದ ಒಂದು ಭಾಗವಾಗಿ ಕಾಣುತ್ತಾರೆ – ನಾ ದಿವಾಕರ.

ಇತ್ತೀಚೆಗಷ್ಟೇ ಕರಾವಳಿ ಕರ್ನಾಟಕದ ಕುಂದಾಪುರ “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ “ಯ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಕರಾವಳಿ ಭಾಗದಲ್ಲಿ ಬ್ರಹ್ಮಾವರದಿಂದ ಶಿರೂರಿನವರೆಗೆ ವ್ಯಾಪಿಸುವ ಕುಂದಾಪ್ರ ಭಾಷಿಕರು ಆಚರಿಸಿದ ಈ ಹಬ್ಬಕ್ಕೆ ಇರುವ ಚಾರಿತ್ರಿಕ-ಜನಪದೀಯ ಹಿನ್ನೆಲೆಯೊಂದಿಗೇ ಈ ಭೂ ಪ್ರದೇಶದಲ್ಲಿರುವ ಚೆಂದದ ನೈಸರ್ಗಿಕ ತಾಣಗಳು, ಮಹಾಪ್ರಾಣಗಳೇ ಬಹುಮಟ್ಟಿಗೆ ಬಳಕೆಯಲ್ಲಿಲ್ಲದ ಕುಂದಾಪ್ರ ಭಾಷೆ, ಈ ಪ್ರಸ್ಥಭೂಮಿಯಲ್ಲೇ ಉದಿಸಿದ ಅನೇಕ ಸಾಹಿತ್ಯಕ, ಸಾಂಸ್ಕೃತಿಕ, ಕಲಾ ಪ್ರತಿಭೆಗಳು ಇವೆಲ್ಲವೂ ಕುಂದಾಪುರವನ್ನು ಕರ್ನಾಟಕದ ಹೆಮ್ಮೆಯ ನಗರವನ್ನಾಗಿಸಿದೆ. ಭೌಗೋಳಿಕ ಭಿನ್ನತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಬೆಳೆದುಬಂದಿರುವ ಈ ಪ್ರದೇಶದ ಹೆಸರು ಅಪಮಾನಕ್ಕೀಡಾಗುತ್ತಿದೆ ಎಂದು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೊಕ್ಕಿರುವುದು ವಿಪರ್ಯಾಸವಾದರೂ ವಾಸ್ತವ.

ಈ ವಿಪರ್ಯಾಸಕ್ಕೆ ಕಾರಣ ಕರ್ನಾಟಕದ ಕರಾವಳಿಯ ಒಡಲಲ್ಲಿ ಉಗಮಿಸಿ ಉಕ್ಕಿ ಹರಿಯುತ್ತಿರುವ ಮತೀಯ ದ್ವೇಷದ ತರಂಗಗಳು ಮತ್ತು ದ್ವೇಷ ಭಾವನೆಯನ್ನೂ ಬಂಡವಾಳವನ್ನಾಗಿ ಮಾಡಿಕೊಂಡ ಮತೀಯ ರಾಜಕಾರಣ, ಮತಾಂಧತೆಯ ಧ್ವನಿ ಹಾಗೂ ಜನಸಾಮಾನ್ಯರ ಸಮನ್ವಯದ ಬದುಕಿನ ತಳಪಾಯವನ್ನು ಶಾಶ್ವತವಾಗಿ ಶಿಥಿಲಗೊಳಿಸುವ ಸಾಂಸ್ಕೃತಿಕ ರಾಜಕಾರಣದ ಪ್ರಯತ್ನಗಳು. ಈ ನಡುವೆಯೇ ಕುಂದಾಪುರ ನಗರಿ ಚುನಾವಣಾ ರಾಜಕಾರಣದ ಬ್ರಹ್ಮಾಂಡ ಭ್ರಷ್ಟಾಚಾರವೂ ತನ್ನ ಒಡಲಲ್ಲೇ ಉದಯಿಸಿರುವುದನ್ನು ವಿಷಾದದಿಂದಲೇ ಗಮನಿಸುತ್ತಿದೆ. ತಮ್ಮ ಸ್ಥಳೀಯ ಚರಿತ್ರೆ-ಸಂಸ್ಕೃತಿ-ಪರಂಪರೆಯ ಬಗ್ಗೆ ಹೆಮ್ಮೆ ಇರುವ ಯಾವುದೇ ವ್ಯಕ್ತಿ-ಸಂಘಟನೆಗೂ ಈ ಅಪಮಾನದ ಭಾವ ಮೂಡುವುದು ಸಹಜ. ಚೈತ್ರಾ ಹೆಸರಿನ ಓರ್ವ ಯುವತಿಯ ಸುತ್ತ ಹೆಣೆದುಕೊಳ್ಳುತ್ತಿರುವ ಅಪರಾಧದ ಬಲೆಯಲ್ಲಿ ʼಕುಂದಾಪುರʼ ತನ್ನ ಸುಂದರ ಚರಿತ್ರೆಯೇ ವಿರೂಪಗೊಳ್ಳುವ ಆತಂಕವನ್ನು ಎದುರಿಸುವುದೂ ಸಹಜ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಗಳ ವಂಚನೆ ಮಾಡಿರುವ ಪ್ರಕರಣವೊಂದರಲ್ಲಿ ಚೈತ್ರಾ ಎಂಬ ಯುವತಿ ಸಿಲುಕಿದ್ದಾರೆ. ಅಧಿಕಾರ ರಾಜಕಾರಣದಲ್ಲಿ ಬಂಡವಾಳ ಮತ್ತು ಮಾರುಕಟ್ಟೆ ವಹಿಸುವ ಪ್ರಧಾನ ಪಾತ್ರವನ್ನು ಮತ್ತೊಂದು ಆಯಾಮದಲ್ಲಿ ಈ ಪ್ರಕರಣ ಹೊರಗೆಡಹಿದ್ದು ಗೋವಿಂದ ಬಾಬು ಪೂಜಾರಿ ಎಂಬ  ಉದ್ಯಮಿ, ಅಭಿನವ ಹಾಲಶ್ರೀ ಎಂಬ ಖಾವಿಧಾರಿ ಮಠೋದ್ಯಮಿಯೂ ಸೇರಿದಂತೆ ಹಲವರು ಈ ಹಗರಣದಲ್ಲಿ ಭಾಗಿಯಾಗಿರುವುದಾಗಿ ವರದಿಯಾಗಿದೆ. ಈಗಾಗಲೇ ಕೋಟ್ಯಂತರ ರೂಗಳ ನಗದು ತನಿಖಾ ಸಂಸ್ಥೆಗಳ ವಶವಾಗಿದ್ದು, ಟಿಕೆಟ್‌ ಹಂಚಿಕೆಯ ರಾಜಕಾರಣವು ರಾಜ್ಯದ ಗಡಿರೇಖೆಗಳನ್ನೂ ದಾಟಿ ಹೋಗಿರುವ ಸುದ್ದಿಯೂ ಕೇಳಿಬರುತ್ತಿದೆ. ಬಂಧನಕ್ಕೊಳಗಾಗಿರುವ ಚೈತ್ರಾ ಒದಗಿಸುತ್ತಿರುವ ಮಾಹಿತಿಯ ಅನುಸಾರವೇ ಈ ಬ್ರಹ್ಮಾಂಡ ಭ್ರಷ್ಟಾಚಾರದ ಕರಾಳ ಬಾಹುಗಳು ವಿಸ್ತರಿಸುತ್ತಲೇ ಇರುವುದು. ಅಧಿಕಾರ ರಾಜಕಾರಣ ಮತ್ತು ಮತೀಯ ರಾಜಕಾರಣದ ನಡುವಿನ ಅವಿನಾಭಾವ ಸಂಬಂಧಗಳನ್ನು ಇದು ಸ್ಪಷ್ಟವಾಗಿ ಹೊರಗೆಡಹಿದೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿ, ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ಬೋಧನೆ ಮಾಡುತ್ತಲೇ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ರೂಪಿಸಿಕೊಂಡ ಓರ್ವ ಮಹಿಳೆ ಇಂದು ಮತೀಯ ರಾಜಕಾರಣದ ಕರಾಳ ಕೂಪದಲ್ಲಿ ಸಿಲುಕಿದ ಅಪರಾಧಿಯಾಗಿ ಕಾಣುತ್ತಿರುವುದು ವರ್ತಮಾನದ ದುರಂತ. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಈ ಯುವತಿಯನ್ನು ಕಾಳಿಮಾತೆಯಂತೆ ಬಿಂಬಿಸಿದ ಸ್ಟಿಕ್ಕರ್‌ಗಳು ಹಲವು ವರ್ಷಗಳ ಕಾಲ ಮತೀಯ ಕಾವಲುಪಡೆಗಳ ವಾಹನಗಳ ಮೇಲೆ ರಾರಾಜಿಸಿದ್ದವು. ಉತ್ತರ ಕರ್ನಾಟಕದ ರಾಯಚೂರು-ಗಂಗಾವತಿಯಿಂದ ದಕ್ಷಿಣ ಕನ್ನಡದ ಬಂಟ್ವಾಳ- ಸುಳ್ಯದವರೆಗೆ ಈಕೆಯ ದ್ವೇಷ ಭಾಷಣಗಳು, ಮತಾಂಧತೆಯ ಕಿಡಿನುಡಿಗಳು, ಸುಳ್ಳು ಇತಿಹಾಸದ ವ್ಯಾಖ್ಯಾನಗಳು ಹರಿದಾಡಿದ್ದವು. ಈಗ  ಈ ದ್ವೇಷ ಭಾಷಣಗಳ ಫಲಾನುಭವಿಗಳೆಲ್ಲರೂ ತಮಗೂ ಆಕೆಗೂ ಸಂಬಂಧವೇ ಇಲ್ಲ ಎಂದು ಹೇಳುತ್ತಿದ್ದಾರೆ. ಮುಸ್ಲಿಂ ದ್ವೇಷದ ಮೂಲಕವೇ ಹಿಂದೂ ಸಮಾಜವನ್ನು ಒಗ್ಗೂಡಿಸಲು ಶ್ರಮಿಸುತ್ತಿರುವ ಹಿಂದುತ್ವ ಸಂಘಟನೆಗಳೂ ಸಹ ಅಂತರ ಕಾಪಾಡಿಕೊಳ್ಳುತ್ತಿವೆ.

ಹಾಗಾದರೆ ಈ ಮಹಿಳೆ ತನ್ನ ಪತ್ರಿಕೋದ್ಯಮದ ಹಾದಿಯನ್ನು ತೊರೆದು, ಆ ಹಾದಿಯ ವೃತ್ತಿ ಪಾವಿತ್ರ್ಯತೆಯನ್ನೂ ಬದಿಗಿಟ್ಟು, ಸಮಾಜದಲ್ಲಿ ಒಡಕು ಉಂಟುಮಾಡುವ ಹಾದಿಯಲ್ಲಿ ಸಾಗಿದ್ದು ಯಾರಿಗಾಗಿ? ತನ್ನ ಬಿರುಸು ಭಾಷಣಗಳ ಮೂಲಕ, ಮತದ್ವೇಷವನ್ನು ಹರಡುವ ಬಿರುನುಡಿಗಳ ಮೂಲಕ ಸಾಮಾನ್ಯ ಜನರ ನಡುವೆ ಕೋಮು ಭಾವನೆಗಳನ್ನು ಬಿತ್ತುವುದೇ ಅಲ್ಲದೆ ಪರಸ್ಪರ ಸ್ನೇಹ-ಪ್ರೀತಿ-ಬಾಂಧವ್ಯಗಳನ್ನೂ ಕಡಿದುಕೊಳ್ಳುವಂತೆ ಮಾತನಾಡುತ್ತಿದ್ದ ಚೈತ್ರಾ ಕರಾವಳಿ ಕರ್ನಾಟಕದ ಕೋಮು ರಾಜಕಾರಣದಲ್ಲಿ ಸ್ಟಾರ್‌ ವ್ಯಾಲ್ಯೂ ಇರುವಂತಹ ವಾಗ್ಮಿಯಾಗಿದ್ದುದಂತೂ ಸತ್ಯ. ಈಗ ಹಿಂದುತ್ವ ಸಂಘಟನೆಗಳನ್ನೂ ಒಳಗೊಂಡಂತೆ, ಇಡೀ ರಾಜಕೀಯ ವ್ಯವಸ್ಥೆಯೇ ಈಕೆಯ ಸಾಂಗತ್ಯ, ಸಾಮೀಪ್ಯ ಮತ್ತು ಸದಸ್ಯತ್ವವನ್ನು ನಿರಾಕರಿಸುತ್ತಿದೆ ಎಂದರೆ ಈ ಮಹಿಳೆ ಹೋರಾಟ ನಡೆಸಿದ್ದು ಏತಕ್ಕಾಗಿ? ಯಾರಿಗಾಗಿ? ಯಾವ ಗುರಿ ಸಾಧನೆಗಾಗಿ?,

ಯಾವುದೇ ಒಂದು ಸಾಮಾಜಿಕ ಪರಿಸರದಲ್ಲಿ ಯೌವ್ವನದ ಹೊಸ್ತಿಲಲ್ಲಿರುವ ಯುವ ಪೀಳಿಗೆ ಒಂದು ನಿರ್ದಿಷ್ಟ ಸೈದ್ಧಾಂತಿಕ ಮಾರ್ಗವನ್ನು ಅನುಸರಿಸುವುದೇ ಆದರೆ ಆ ಅನುಸರಣೆಯ ಹಿಂದೆ ಒಂದು ಪಕ್ಷದ ಅಥವಾ  ಸಂಘಟನೆಯ ಸೈದ್ದಾಂತಿಕ ನೆಲೆಗಳು ಇದ್ದೇ ಇರುತ್ತವೆ. ಹಾಗೆಯೇ ದಕ್ಷಿಣ ಕನ್ನಡದಲ್ಲಿ, ಕರ್ನಾಟಕದ ಕರಾವಳಿಯಲ್ಲಿ ಒಂದು ಕಾಲದಲ್ಲಿ ಎಡಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾದ ಸಾವಿರಾರು ಯುವಜನರು ನಮ್ಮ ನಡುವೆ ಕಾಣುತ್ತಾರೆ, ಇಂದಿಗೂ ಕಾಣುತ್ತಿದ್ದಾರೆ. ಆದರೆ ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶಗಳು ಕೋಮು ರಾಜಕಾರಣದ ಪ್ರಯೋಗಶಾಲೆಯಾಗಿದ್ದು, ಎರಡೂ ಬದಿಯ ಮತೀಯವಾದಿಗಳ ಮತಾಂಧ ಸಂಘಟನೆಗಳ ಶಕ್ತಿ ಪ್ರದರ್ಶನದ ತಾಣವಾಗಿ ಪರಿಣಮಿಸಿದೆ.  ಕಳೆದ ಐದಾರು ವರ್ಷಗಳಲ್ಲಿ ನಡೆದಿರುವ ಹಿಂದೂ-ಮುಸ್ಲಿಂ ಯುವಕರ ಕಗ್ಗೊಲೆಗಳು ಇದಕ್ಕೆ ಸಾಕ್ಷಿಯಾಗಿದೆ.

ಇಂತಹ ಒಂದು ದ್ವೇಷದ ಕುಲುಮೆಯಲ್ಲಿ ಬೆಂದವರಾಗಿ ಚೈತ್ರಾ ಎಂಬ ಮಹಿಳೆ ಬೆಂಕಿಯುಂಡೆ ಉಗುಳುವ ವಾಗ್ಮಿಯಾಗಿ, ಹಿಂದುತ್ವ ರಾಜಕಾರಣದ ಪ್ರಚಾರಕಿಯಾಗಿ, ದ್ವೇಷ ರಾಜಕಾರಣದ ಪರಿಚಾರಕಿಯಾಗಿ ಹೊರಹೊಮ್ಮಿದ್ದಾರೆ. ಮತೀಯ ರಾಜಕಾರಣ ಮತ್ತು ಅನ್ಯರನ್ನು ಸೃಷ್ಟಿಸುವಂತಹ ಮತಾಂಧತೆಯ ಸಾಂಸ್ಥಿಕ ಚಟುವಟಿಕೆಗಳು ಅಸಂತೃಪ್ತ, ಅವಕಾಶವಂಚಿತ ಅಥವಾ ಯಾವುದೋ ಕಾರಣದಿಂದ ನೊಂದ ಯುವಸಮೂಹವನ್ನು ಸುಲಭವಾಗಿ ತನ್ನೆಡೆಗೆ ಸೆಳೆಯುತ್ತವೆ. ಸಮನ್ವಯತೆ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಬೆಸೆಯುವ ಚಿಂತನಾ ವಾಹಿನಿಗಳಿಗಿಂತಲೂ ಸಮಾಜದ ಉದ್ದಗಲಕ್ಕೂ ವ್ಯಾಪಿಸುವ, ತಳಮಟ್ಟದ ಸಾಮಾನ್ಯ ಜನತೆಯನ್ನೂ ಆಕರ್ಷಿಸುವ ಹಾಗೂ ಸಮಾಜದಲ್ಲಿ ಒಂದು ತಾರಾಮೌಲ್ಯವನ್ನು ತಂದುಕೊಡುವ ಮತೀಯವಾದ, ಜಾತಿವಾದದಂತಹ ತಾತ್ವಿಕತೆಗಳು ಯುವ ಸಂಕುಲಕ್ಕೆ ಹೆಚ್ಚು ಅಪ್ಯಾಯಮಾನವಾಗಿಯೂ ಕಾಣುತ್ತವೆ.

ಹಾಗಾಗಿಯೇ ದಕ್ಷಿಣ ಕನ್ನಡ-ಕರಾವಳಿ ಪ್ರದೇಶದಲ್ಲಿ ಶತಮಾನದ ಇತಿಹಾಸ ಹೊಂದಿರುವ ಮಾನವೀಯ ಮೌಲ್ಯಗಳ ಚಿಂತನಾ ವಾಹಿನಿಗಳಿಗಿಂತಲೂ ಕೋಮುವಾದ-ಮತದ್ವೇಷ ಮತ್ತು ಮತೀಯ ರಾಜಕೀಯ ಆಲೋಚನೆಗಳು ಹೆಚ್ಚು ಆಕರ್ಷಣೀಯವಾಗುತ್ತವೆ. ಕರ್ನಾಟಕದ ಪ್ರಮುಖ ಮಾರ್ಕ್ಸ್‌ವಾದಿ ಚಿಂತಕರು, ಸಮಾಜ ಸುಧಾರಕ ನಾರಾಯಣಗುರು, ಕುದ್ಮಲ್‌ ರಂಗರಾವ್‌, ಶಿವರಾಮ ಕಾರಂತ ಮುಂತಾದವರ ನೆಲೆವೀಡು ಎಂದೇ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ-ಕರಾವಳಿ ಕರ್ನಾಟಕದ ಪ್ರದೇಶ ಇಂದು ಚೈತ್ರಾ ಅವರಂತಹ ದ್ವೇಷ ರಾಜಕಾರಣದ ಪರಿಚಾರಕರನ್ನು ಸೃಷ್ಟಿಸುತ್ತಿರುವುದು ಚರಿತ್ರೆಯ ವಿಡಂಬನೆಯಷ್ಟೇ ಅಲ್ಲದೆ, ವೈಚಾರಿಕ ರಾಜಕಾರಣದ ವೈಫಲ್ಯವನ್ನೂ ಸೂಚಿಸುತ್ತದೆ. ಈ ದ್ವೇಷ ರಾಜಕಾರಣವೇ ಅಧಿಕಾರ ರಾಜಕಾರಣವನ್ನು ಮುನ್ನಡೆಸುವ ಅಗ್ರ ರಥವಾದರೆ ಇಂತಹ ಕಾರ್ಯಕರ್ತರು ಚುನಾವಣಾ ಭ್ರಷ್ಟಾಚಾರದ ಪರಿಚಾರಕರೂ ಆಗುತ್ತಾರೆ.

ಸಮಾಜಮುಖಿಯಾಗಿ, ಮಾನವತೆಯ ಸರಕುಗಳೊಂದಿಗೆ ಕೂಡುಬಾಳ್ವೆಯ ವಾಹಕವಾಗಬೇಕಾದ ಯುವ ಸಮೂಹ ಮತೀಯ ರಾಜಕಾರಣದ ಕುಲುಮೆಯಲ್ಲಿ ಬೆಂದು ದ್ವೇಷಾಸೂಯೆಗಳ ರಥಸಾರಥಿಗಳಾಗಿ ಪರಿಣಮಿಸುವುದು ಜಾಗತಿಕ ವಿದ್ಯಮಾನವಾಗಿದ್ದು, ಕರಾವಳಿಯೂ ಇದಕ್ಕೆ ಹೊರತಲ್ಲ, ಕುಂದಾಪುರವೂ ಹೊರತಾಗಲಾರದು. ಚೈತ್ರಾ ಈ ರೀತಿ ತಯಾರಾದ ಕಾರ್ಯಕರ್ತೆಯಾಗಿದ್ದು ಇಂದು ತನ್ನ ಕರ್ಮಭೂಮಿಯಲ್ಲೇ ಅಪರಾಧಿಯಾಗಿ ಅನಾಥ ಸ್ಥಿತಿಯಲ್ಲಿದ್ದಾರೆ. ಆಕೆಯ ಮೇಲಿನ ಆರೋಪಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡದೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಮತ್ತು ಚುನಾವಣಾ ಬಂಡವಾಳದ ಕೂಪದಲ್ಲಿ ಇಣುಕಿ ನೋಡಿದರೆ ಚೈತ್ರಾ ಏಕಾಂಗಿಯಾಗೇನೂ ಕಾಣುವುದಿಲ್ಲ. ಅಪರಾಧಿಗಳಾಗಿ ಯಾರೂ ಜನಿಸುವುದಿಲ್ಲ. ಸಮಾಜವೇ ಅಂಥವರನ್ನು ಸೃಷ್ಟಿಸುತ್ತದೆ ಎನ್ನುವ ಪಾರಂಪರಿಕ ಮಾತುಗಳ ಹಿನ್ನೆಲೆಯಲ್ಲಿ ನೋಡಿದಾಗ, ಚೈತ್ರಾ ಮುಂತಾದವರು ಮತೀಯ ರಾಜಕಾರಣದ ಕ್ರೂರ ವ್ಯವಸ್ಥೆಗೆ ಬಲಿಯಾದ ಯುವ ಸಮೂಹದ ಒಂದು ಭಾಗವಾಗಿ ಕಾಣುತ್ತಾರೆ.

ಚೈತ್ರಾ ಅಪರಾಧಿಯೋ ಅಲ್ಲವೋ ತೀರ್ಮಾನವಾಗುವುದಕ್ಕೂ ಮುನ್ನ, ಕಲುಷಿತ ಸಾಮಾಜಿಕ ಪರಿಸರ, ದ್ವೇಷಾಸೂಯೆಗಳ ರಾಜಕೀಯ ವ್ಯವಸ್ಥೆ, ಸಂಕುಚಿತವಾಗಿರುವ ಸಾಂಸ್ಕೃತಿಕ ವಾತಾವರಣ ಮತ್ತು ಇವೆಲ್ಲದರ ವಾರಸುದಾರ ಶಕ್ತಿಗಳು ಅಪರಾಧಿಗಳಾಗಿ ನಮ್ಮ ನಡುವೆ ನಿಂತೇ ಇದ್ದಾರೆ. ಚೈತ್ರಾ ಮತ್ತಿತರರಿಗೆ ಶಿಕ್ಷೆಯಾಗಬಹುದು ಆದರೆ ಈ ಬಾಹ್ಯ ಶಕ್ತಿಗಳನ್ನು ಶಿಕ್ಷಿಸುವವರಾರು ?

ನಾ ದಿವಾಕರ

ಚಿಂತಕರು

ಮಕ್ಕಳ ಕಮರಿದ ಕನಸುಗಳು ಮತ್ತೆ ಚಿಗುರಲಿ…
ಮಕ್ಕಳು ಭವಿಷ್ಯದಲ್ಲಿ  ಸಫಲರಾಗಲು ಮೇಲಿಂದ ಮೇಲೆ  ಅವಕಾಶಗಳನ್ನು ಕಲ್ಪಿಸಿ ಗೆಲುವು  ಸಾಧಿಸುವವರೆಗೆ ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು – ಸಾರಾಅಲಿ ಪರ್ಲಡ್ಕ, ಯುವ ಬರಹಗಾರ್ತಿ

ಬದುಕಲ್ಲಿ ಸೋಲು, ಗೆಲುವು ಸಾಮಾನ್ಯ.  ಆದರೆ ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು  ಅಂತ  ಹೇಳುತ್ತಾರೆ. ‌ಆದರೆ  ಕೆಲವು ಸಂದರ್ಭಗಳಲ್ಲಿ ಸೋತವರು  ಸೋತ ಸ್ಥಿತಿಯಲ್ಲೇ ಉಳಿಯುವುದುಂಟು. ಅಂತಹವರಿಗೆ ಸುತ್ತಲಿನವರು ಅವಕಾಶಗಳನ್ನು  ಕಲ್ಪಿಸಿ ಅವರನ್ನು ಮೇಲೆತ್ತಬೇಕು.

ಹತ್ತನೆಯ ತರಗತಿಯಲ್ಲಿ  ನಡೆಯುವ “CBSE ಬೋರ್ಡ್  ಪರೀಕ್ಷೆಗೆ ” ವರ್ಷದ ಆರಂಭದಿಂದ  ಕೊನೆಯ ಪ್ರಮುಖ ಪರೀಕ್ಷೆ ಮುಗಿಯುವವರೆಗೆ  ಶಿಕ್ಷಕರು ಹಾಗೂ ಪೋಷಕರು ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸಿ ಬಹಳವೇ ಜಾಗೃತಿಯನ್ನು ಮೂಡಿಸುತ್ತಾರೆ.   ಪರೀಕ್ಷೆಯ ತಯಾರಿಯ  ನಡುವಲ್ಲಿಯೂ ಮಕ್ಕಳು ತಮ್ಮ ಮುಂದಿನ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾ, ಮುಂದೆ ತಾವು ಓದಬೇಕಾದ ಕಾಲೇಜುಗಳನ್ನು ಆರಿಸಿಕೊಳ್ಳುವಷ್ಟರ  ಮಟ್ಟಿಗೆ ತಮ್ಮದೇ ಆದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡಿರುತ್ತಾರೆ.  ವಿದ್ಯಾರ್ಥಿ ಜೀವನದಲ್ಲಿ ಹತ್ತನೆಯ ತರಗತಿಯ ಪರೀಕ್ಷೆ ಎಂದರೆ ಅತ್ಯಂತ ನಿರ್ಣಾಯಕ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಕಾರಣ   ಶಾಲಾ ಶಿಕ್ಷಕ ವೃಂದವು ಮಕ್ಕಳ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯನ್ನಿಟ್ಟು ಸಾಕಷ್ಟು ಶ್ರಮಿಸುತ್ತಿರುತ್ತಾರೆ. ಹೆತ್ತವರಂತೂ ಅವರ ಓದಿನಲ್ಲಿ  ವಿಶೇಷವಾದ ಕಾಳಜಿ ವಹಿಸುವುದನ್ನು ಕಂಡು ಮಕ್ಕಳು ಕೂಡ ಆದಷ್ಟು ಏಕಾಗ್ರತೆಯಿಂದ ಕಲಿಕೆಯಲ್ಲಿ ತಲ್ಲೀನಗೊಳ್ಳುತ್ತಾರೆ.

ಕೊನೆಗೂ  ಪಬ್ಲಿಕ್ ಪರೀಕ್ಷೆಯು ನಡೆದು ಫಲಿತಾಂಶವೂ  ಹೊರ ಬರುತ್ತದೆ. ಅದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುತ್ತಾರೆ. ಉತ್ತೀರ್ಣಗೊಂಡ ಮಕ್ಕಳು ತಮಗೆ ಲಭಿಸಿರುವ ಅಂಕಗಳ ಬಗ್ಗೆ ಹೆಮ್ಮೆಪಡುವುದೇನು,  ಸಂಭ್ರಮಿಸುವುದೇನು…. ಎಲ್ಲೆಲ್ಲೂ ವಿದ್ಯಾರ್ಥಿಗಳು ಸಡಗರದಿಂದ  ತಮ್ಮ ಅಂಕ ಪಟ್ಟಿಗಳನ್ನು  ಸ್ಟೇಟಸ್ ಹಾಕಿಕೊಳ್ಳುವುದು, ತಮ್ಮ ಆತ್ಮೀಯರು ನೀಡುವ  ಅಭಿನಂದನೆಗಳ, ಉಡುಗೊರೆಗಳ ಮಳೆಯಲ್ಲಿ ಮಿಂದೇಳುತ್ತಾ ಕುಣಿದು ವಿಜಯೋತ್ಸವ ಆಚರಿಸುತ್ತಿರುತ್ತಾರೆ.

ಮತ್ತೊಂದೆಡೆ ಪರೀಕ್ಷೆಗೆ ಸಾಕಷ್ಟು ಪೂರ್ವ ತಯಾರಿ ನಡೆಸಿದ  ಕೆಲವು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವುದಿದೆ.  ಇಷ್ಟೊಂದು ಪೂರ್ವ ಸಿದ್ಧತೆ ನಡೆಸಿಯೂ ಅನುತ್ತೀರ್ಣ ಗೊಂಡಿದ್ದಾರೆಂದರೆ, ಆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವು ಬಹಳವೇ ಕುಂಠಿತವಾಗಿತ್ತೆಂದರ್ಥ.   ವ್ಯಕ್ತಿಯು ಯಾವುದೇ ವಿಷಯದಲ್ಲಿ ಯಶಸ್ವಿಯಾಗಲು ಸಾಮರ್ಥ್ಯಗಳ ಅಗತ್ಯವಿದೆ. ಶಿಕ್ಷಣ ಶಾಸ್ತ್ರದ ಪ್ರಕ್ರಿಯೆಗಳು ಕೂಡ ಮಗು ಕೇಂದ್ರಿತ ಮತ್ತು ವೈಯಕ್ತಿಕ ಸಾಧನೆಗಳ ಮೂಲಕ ಫಲ ನೀಡುತ್ತದೆ. ಕೆಲವು ಮಕ್ಕಳಿಗೆ ಕಲಿಕೆಯೆಂದರೆ ನೀರಿನಲ್ಲಿ ಕಾಗದದ ದೋಣಿ ಇಳಿಸಿ ಆಡಿದಷ್ಟು ಸರಳವಾಗಿದ್ದರೆ, ಇನ್ನು ಕೆಲವು ಮಕ್ಕಳಿಗೆಕಬ್ಬಿಣದ ಕಡಲೆ.

ಉತ್ತೀರ್ಣಗೊಂಡ ಅಷ್ಟೊಂದು ಮಕ್ಕಳ ಸಂಭ್ರಮಗಳ ಮಧ್ಯೆ ಅನುತ್ತೀರ್ಣಗೊಂಡ  ವಿದ್ಯಾರ್ಥಿಗಳು ತಮ್ಮ ಕನಸುಗಳೆಲ್ಲವು  ಕಮರಿಹೋದವೆಂದು  ತಿಳಿದು ಮಾನಸಿಕವಾಗಿ ನೊಂದುಕೊಳ್ಳುತ್ತಾರೆ. ನಿರಾಶೆಯಿಂದ ಕೈ ಚೆಲ್ಲಿ ಕೂರದಂತೆ,  ಫಲಿತಾಂಶ  ಬಂದ ಅದೇ ತಿಂಗಳೊಳಗೆ  ಶಿಕ್ಷಣ ಮಂಡಳಿಯು ಪೂರಕ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು  ನೀಡಿ ಅವರಿಗೆ ಪುನ: ಅವಕಾಶವನ್ನು ಕಲ್ಪಿಸುತ್ತದೆ.  ಹೇಗೋ ಇನ್ನೊಮ್ಮೆ ಓದಿ ಪರೀಕ್ಷೆಗಳನ್ನು  ಬರೆದು ಉತ್ತೀರ್ಣಗೊಂಡು   ತಮ್ಮ   ಸಹಪಾಠಿಗಳ  ಜೊತೆಯಲ್ಲಿ ಮುಂದಿನ ವ್ಯಾಸಂಗ ನಡೆಸಬೇಕು ಎಂದುಕೊಂಡು ಪೂರಕ ಪರೀಕ್ಷೆಗಾಗಿ  ಮತ್ತೆ ಸಜ್ಜಾಗುತ್ತಾರೆ. ಆದರೆ  ಕೆಲವೊಮ್ಮೆ ಆ ಪರೀಕ್ಷೆಗಳು ಮೊದಲಿನ ಪರೀಕ್ಷೆಗಳಿಗಿಂತ ತುಸು ಜಟಿಲವೇ ಇರುತ್ತದೆ.  ದುರಾದೃಷ್ಟವಶಾತ್  ಕೆಲವು ಮಕ್ಕಳು  ಇಲ್ಲಿಯೂ ಅನುತ್ತೀರ್ಣಗೊಳ್ಳುತ್ತಾರೆ. ಮೇಲಿಂದ ಮೇಲೆ ಅನುತ್ತೀರ್ಣಗೊಂಡ ಈ ಮಕ್ಕಳು ತಮ್ಮ ಮೇಲಿನ ಭರವಸೆಯನ್ನು ಸಂಪೂರ್ಣ ಕಳೆದುಕೊಂಡು ದಾರಿತಪ್ಪುವಂತದ್ದು ಪ್ರಾರಂಭವಾಗುವುದೇ ಇಲ್ಲಿಂದ.

ಪರೀಕ್ಷೆಯ ಸೋಲನ್ನು  ಜೀವನದ ಸೋಲೆಂದು ಭ್ರಮಿಸಿ ಅಪಮಾನಕ್ಕೊಳಪಟ್ಟ ಈ  ಮಕ್ಕಳನ್ನು  ಸುತ್ತಲಿನ ಸಮಾಜದ ನಡವಳಿಕೆಯು ಮಾನಸಿಕವಾಗಿ  ಕುಗ್ಗಿಸುತ್ತದೆ.  ಶಾಲೆಯ  ಕೀರ್ತಿಯ ಗುರಿಯನಿಟ್ಟು ಫಲಿತಾಂಶಕ್ಕಾಗಿ ಶ್ರಮಿಸಿದ ಬಹುತೇಕ ಶಾಲಾ ಶಿಕ್ಷಕ ವೃಂದದಿಂದ ಕೂಡ ಆಮೇಲಿನ ದಿನಗಳಲ್ಲಿ ಇವರಿಗಾಗಿ ಯಾವುದೇ  ಯಾವುದೇ ಮಾಹಿತಿ ಮಾರ್ಗದರ್ಶನಗಳಾಗಲಿ ಸಿಗುವುದಿಲ್ಲ. ಇನ್ನು ನಿಮ್ಮ ಪಾಡು ನೀವೇ ನೋಡಿಕೊಳ್ಳಿ ಎಂಬಂತೆ  ಅವರೊಳಗೆ ಭರವಸೆ ತುಂಬದೆ ಸಂಪೂರ್ಣವಾಗಿ ಕೈ ಬಿಟ್ಟು ಬಿಡುವುದೂ ಉಂಟು. ಇನ್ನು ತಮ್ಮ  ಸ್ವಂತ ಮನೆಗಳಲ್ಲಿಯೂ ಮಾತಿನಲ್ಲಿ ನಿಂದಿಸಿ ತಿವಿಯುವ ಪೋಷಕರು, ಅಕ್ಕಪಕ್ಕದವರ ಪರಿಹಾಸ್ಯ ಇತ್ಯಾದಿಗಳನ್ನು ಅನುಭವಿಸುತ್ತಾ ಆ ಮಗು ತನ್ನ ಆತ್ಮಸ್ಥೈರ್ಯವನ್ನೇ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಮಕ್ಕಳು ಜಿಗುಪ್ಸೆಗೊಂಡು ಹೇಳದೆ ಕೇಳದೆ ಮನೆ ತೊರೆಯುವುದೋ, ಇನ್ನು ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದೋ ನಡೆಯುತ್ತದೆ. ಮತ್ತೆ ಕೆಲವು ಮಕ್ಕಳು ತಾನಿನ್ನು ಓದುವುದೇ ಇಲ್ಲವೆಂದು ಕಲಿಕೆಗೆ ತಿಲಾಂಜಲಿ ಇಟ್ಟು ಕೈಗೆ ಸಿಕ್ಕಿದ ಕೆಲಸಕ್ಕೆ ಸೇರಿಕೊಂಡು ಅಷ್ಟರಲ್ಲೇ ಬದುಕು ಕಟ್ಟಿಕೊಳ್ಳುವುದೂ ಇದೆ.

ಈ ಎಲ್ಲ ಅಂಶಗಳನ್ನು ಗಮನಿಸಿ ನಮ್ಮ ರಾಜ್ಯದ ಶಿಕ್ಷಣ ಇಲಾಖೆಯು ಮಕ್ಕಳ  ವಿದ್ಯಾರ್ಥಿ ಬದುಕು ಮೊಟಕುಗೊಳ್ಳದಂತೆ  ಆ ಬಗ್ಗೆ ಮತ್ತೊಮ್ಮೆ ಚಿಂತನೆ ನಡೆಸಲೇಬೇಕು. ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ  ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪುನ:ಮರು ಪರೀಕ್ಷೆ ಬರೆಯುವಂತೆ ಅವಕಾಶಗಳನ್ನು ಹೊಂದಿಸಬೇಕು. ಅವರ ಪಾಲಿನ  ಒಂದು ಶೈಕ್ಷಣಿಕ ವರ್ಷವೇ  ಹಾಳಾಗದಂತೆ ತಡೆಯಬೇಕು.  ಮಕ್ಕಳು ಭವಿಷ್ಯದಲ್ಲಿ  ಸಫಲರಾಗಲು ಮೇಲಿಂದ ಮೇಲೆ  ಅವಕಾಶಗಳನ್ನು ಕಲ್ಪಿಸಿ ಗೆಲುವು  ಸಾಧಿಸುವವರೆಗೆ ಶಾಲೆಯಿಂದ ಪ್ರೋತ್ಸಾಹ ದೊರೆಯಬೇಕು. ಮಕ್ಕಳ ಕಮರಿ ಹೋದ ಆ ಕನಸುಗಳಿಗೆ ಅವಕಾಶಗಳನ್ನು ನೀಡುತ್ತಾ ಅವುಗಳನ್ನು ಮತ್ತೆ ಚಿಗುರಿಸಬೇಕು.

ಸಾರಾಅಲಿ ಪರ್ಲಡ್ಕ

ಯುವ ಬರಹಗಾರ್ತಿ

ಇದನ್ನೂ ಓದಿ : ರೋಲ್ಕಾಲ್ ಪತ್ರಕರ್ತರ ಕಾಟ, ಕಲಾವಿದರಿಗೆ ಪೀಕಲಾಟ

ಉದ್ಯೋಗ ಮೇಳ ಪ್ರಾಯೋಜಕತ್ವಕ್ಕೆ 1.50 ಲಕ್ಷ ರೂ.ನೀಡಿ ಪ್ರೋತ್ಸಾಹಿಸಿದ ಸಚಿವ ಜಮೀರ್ ಅಹಮದ್ ಖಾನ್
ಬೆಂಗಳೂರು : ಬಿಎಂಎಸ್ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಿರುವ ಉದ್ಯೋಗ ಮೇಳ ಪ್ರಯೋಜಕತ್ವ ಮನವಿಗೆ ಸ್ಪಂದಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವೈಯಕ್ತಿಕವಾಗಿ 1.50 ಲಕ್ಷ ರೂ. ನೀಡಿ ಪ್ರೋತ್ಸಾಹಿಸಿದರು.

ಜುಲೈ 21 ರಂದು ಆಯೋಜಿರುವ ಉದ್ಯೋಗ ಮೇಳಕ್ಕೆ ನಿರ್ವಹಣೆ ವೆಚ್ಚ ಹತ್ತು ಲಕ್ಷ ರೂ.ವೆಚ್ಚ ಆಗಲಿದ್ದು ಪ್ರಾಯೋಜಕತ್ವ ಕ್ಕಾಗಿ ವಿದ್ಯಾರ್ಥಿಗಳ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿತು.
60 ಕಂಪನಿ ಗಳು ಮೇಳದಲ್ಲಿ ಭಾಗವಹಿಸುತ್ತಿದ್ದು 50 ಕಾಲೇಜುಗಳ 20 ಸಾವಿರ ಅಭ್ಯರ್ಥಿ ಗಳು ಮೇಳದಲ್ಲಿ ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು ವೈಯಕ್ತಿಕವಾಗಿ 1.50 ಲಕ್ಷ ರೂ. ಚೆಕ್ ನೀಡಿ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳ ಜತೆ ಊಟ ಸವಿದರು.