ಸುಳ್ಳು ಸುದ್ದಿ ಪತ್ತೆ – Peepal Media

ಸುಳ್ಳು ಸುದ್ದಿ ಹಬ್ಬಿಸುವ ಮಾಧ್ಯಮಗಳಿಗೆ ಕಡಿವಾಣ ; ಮುಂದಿನ ಅಧಿವೇಶನದಲ್ಲೇ ವಿಧೇಯಕ ಮಂಡನೆ: ಸಚಿವ ಪರಮೇಶ್ವರ್
ರಾಜ್ಯದಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ, ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ವೈರಲ್ ಮಾಡುವ ಮಾಧ್ಯಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸದ್ಯದಲ್ಲೇ ಕಾನೂನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಯ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಯೂಟ್ಯೂಬ್, RTI ಕಾರ್ಯಕರ್ತರು ಕಿರುಕುಳವೂ ಹೆಚ್ಚಾಗುತ್ತಿದೆ. ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ರಕ್ಷಣೆ ಕೋರಿ ಹಲವು ಮನವಿ, ದೂರು ನೀಡಲಾಗಿದೆ. ಈ ಬಗ್ಗೆಯೂ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ದನ ಕಡಿದವರು ಅರೆಸ್ಟ್ : ಪೊಲೀಸರ ಕಾರ್ಯಕ್ಕೆ ಶಾಸಕ ಯಶಪಾಲ್‌ ಸುವರ್ಣ ಶ್ಲಾಘನೆ
ಶನಿವಾರ ತಡರಾತ್ರಿ ಬ್ರಹ್ಮಾವರದ ಕುಂಜಾಲು ಮುಖ್ಯ ರಸ್ತೆಯಲ್ಲಿ ದನವನ್ನು ಕಡಿದು ಕೋಮು ಸಂಘರ್ಷ ಹುಟ್ಟಲು ಕಾರಣವಾಗಿದ್ದ ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಪತ್ತೆ ಹಚ್ಚಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕೊಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಸಂಘರ್ಷ ಹುಟ್ಟುಹಾಕಲು ಕಾರಣವಾಗಿದ್ದ ಕುಂಜಾಲು ನಿವಾಸಿ ರಾಮ(49), ಪ್ರಸಾದ್ ಕುಂಜಾಲು(21), ನವೀನ್ ಮಟಪಾಡಿ(35), ಕೇಶವ ನಾಯ್ಕ ಅಡ್ಡಿಲ(50), ಸಂದೇಶ ಕುಂಜಾಲು(35) ಹಾಗೂ ರಾಜೇಶ್ ಕುಂಜಾಲು(28) ಎಂದು ಗುರುತಿಸಲಾಗಿದೆ. 7ನೇ ಆರೋಪಿ ತಲೆಮರೆಸಿಕೊಂಡಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಬ್ರಹ್ಮಾವರ ತಾಲ್ಲೂಕಿನ ಕುಂಜಾಲು ಜಂಕ್ಷನ್ ಬಳಿ ಗೋವಿನ ರುಂಡ ಹಾಗೂ ಚರ್ಮ ಪತ್ತೆಯಾಗಿತ್ತು. ಇದು ಪತ್ತೆಯಾಗುತ್ತಿದ್ದಂತೆಯೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳೀಯ ಪ್ರಜ್ಞಾವಂತರ ಸಮಯಪ್ರಜ್ಞೆ ಮತ್ತು ಪೊಲೀಸರ ತಕ್ಷಣದ ಸ್ಪಂದನೆಯ ಕಾರಣದಿಂದ ಒಂದು ದಿನಗಳ ಒಳಗಾಗಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಗಳು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿರುವುದಾಗಿ ತನಿಖೆಯ ಬಗ್ಗೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಬಳಸಿದ ಹೊಂಡ ಆಕ್ಟಿವಾ KA20 EV 6377 ಹಾಗೂ KA21 M 8071 ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್‌ಪಿ ಹರಿರಾಂ ಶಂಕ‌ರ್ ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಶಾಸಕ ಯಶಪಾಲ್ ಸುವರ್ಣ ಕೂಡ ಪೊಲೀಸರಿಗೆ ಒತ್ತಡ ಹೇರಿದ್ದರು. ಅದರಂತೆ ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಜಾಲತಾಣಗಳನ್ನೂ ಮೀರುವಂತೆ ಮಾಧ್ಯಮಗಳಲ್ಲಿ ಯುದ್ಧದ ಬಗ್ಗೆ ಸಾಲು ಸಾಲು ಸುಳ್ಳು ಸುದ್ದಿ; ಕಡಿವಾಣ ಹಾಕುವವರ್ಯಾರು?
ದೇಶದಲ್ಲಿ ಏನೇ ಉದ್ವಿಗ್ನ ವಾತಾವರಣ ಸೃಷ್ಟಿಯಾದರೂ ಮೊದಲ ತಲೆನೋವಾಗಿ ಪರಿಣಮಿಸುವುದು ಸುಳ್ಳು ಸುದ್ದಿಗಳ ಹಾವಳಿ. ಈಗಲೂ ಸಹ ಭಾರತ ಪಾಕಿಸ್ತಾನದ ನಡುವೆ ನಡೆಯುತ್ತಿರುವ ದಾಳಿಯ ಬಗ್ಗೆ ಸುಳ್ಳುಗಳ ಮಹಾಪೂರ ಈಗ ಎರಡೂ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಷ್ಟೋ ವರ್ಷಗಳ ಹಳೆಯ ಬಾಂಬ್ ದಾಳಿ, ಸಿಲಿಂಡರ್ ಸ್ಪೋಟ ಸೇರಿದಂತೆ, ಯೂಟ್ಯೂಬ್ ನಲ್ಲಿ ಬರುವ ವಿಡಿಯೋ ಗೇಮ್ ವಿಡಿಯೋಗಳೂ ಈಗ ಸುಳ್ಳು ಸುದ್ದಿಗಳ ದೊಡ್ಡ ಸರಕಾಗಿ ಮಾರ್ಪಟ್ಟಿದೆ.

ಈವರೆಗೆ ಜಾಲತಾಣಗಳಷ್ಟೇ ಸುಳ್ಳು ಸುದ್ದಿಯ ಕೇಂದ್ರಬಿಂದುವಾಗಿದ್ದು ಈಗ ಮುಖ್ಯವಾಹಿನಿ ಮಾಧ್ಯಮಗಳೂ ಪೈಪೋಟಿಗೆ ಬಿದ್ದಂತೆ ಸುಳ್ಳು ಸುದ್ದಿ, ಸುಳ್ಳು ವಿಡಿಯೋ ಹಂಚಲು ಹೊರಟಿವೆ.

ಪಾಕಿಸ್ಥಾನದ ಕರಾಚಿಯ ಬಂದರನ್ನು ಭಾರತೀಯ ನೌಕಾದಳ ದಾಳಿಯ ಮೂಲಕ ಧ್ವಂಸಗೊಳಿಸಿದೆ ಎಂದು ಹೇಳಿ ಜಾಲತಾಣಗಳ ಸುಳ್ಳನ್ನೂ ಮೀರಿಸುವಂತೆ ರಾಜ್ಯದ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳು ಸುದ್ದಿ ಮಾಡಿದ್ದವು. ವಾಸ್ತವದಲ್ಲಿ ಇದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಫಿಲಿಡೆಲ್ಫಿಯಾ ದಲ್ಲಿ ವಿಮಾನ ಪತನಗೊಂಡಿದ್ದ ವಿಡಿಯೋಗಳು ಎಂದು ಗೊತ್ತಾಗಿದೆ.

ಜಮೀನಿನಲ್ಲಿ ಬೆಂಕಿ ಹೊತ್ತಿಕೊಂಡ ಹಳೆಯ ವಿಡಿಯೋ ಒಂದನ್ನು ಎತ್ತಿಕೊಂಡು ಪಂಜಾಬಿನ ಜಲಂಧರ್‌ನಲ್ಲಿ ಪಾಕಿಸ್ತಾನ ನಡೆಸಿದ ಡ್ರೋನ್‌ ದಾಳಿ ಎಂಬ ಸುದ್ದಿಯೂ ಸೋಷಿಯಲ್ ಮೀಡಿಯಾ ಮತ್ತು ಹಲವು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು. ಪಿಟಿಐ ಸಂಸ್ಥೆ ನಡೆಸಿದ ಫ್ಯಾಕ್ಟ್ ಚೆಕ್ ವರದಿಯಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಬಯಲಾಗಿದೆ.

ಜಮ್ಮುವಿನ ರಜೌರಿ ಯಲ್ಲಿ ಆತ್ಮಾಹುತಿ ದಾಳಿ ನಡೆದಿದೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಗಳು ಹರಿದಾಡಿತ್ತು. ಭಾರತೀಯ ಸೇನೆ ಹಾಗೂ ಪಿಐಬಿ ಈ ಬಗ್ಗೆ ಕೊಟ್ಟ ಸ್ಪಷ್ಟನೆ ಯಿಂದ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.

ಇನ್ನು 2-3 ದಿನಗಳು ದೇಶಾ ದ್ಯಂತ ಎಟಿಎಂಗಳು ಕಾರ್ಯ ನಿರ್ವಹಿಸುವು ದಿಲ್ಲ ಎಂದೂ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ, ಇದು ಸುಳ್ಳು. ಎಟಿಎಂ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅಲ್ಲದೇ ಎಟಿಎಂಗಳಲ್ಲಿ ಸಾಕಷ್ಟು ನಗದೂ ಇವೆ ಎಂದು ಸರ್ಕಾರದ ಜೊತೆಗೆ ವಿವಿಧ ಬ್ಯಾಂಕುಗಳೂ ಸ್ಪಷ್ಟನೆ ನೀಡಿವೆ. ಹಲವು ವದಂತಿಗಳ ಬಗ್ಗೆ ಸರ್ಕಾರವು ಸ್ಪಷ್ಟನೆ ನೀಡಿದೆ. ಅಲ್ಲದೇ ಇಂತಹ ಹಳೆಯ ವಿಡಿಯೋಗಳನ್ನು, ಸುಳ್ಳುಸುದ್ದಿಗಳನ್ನು ಹರಡದಂತೆ ಎಚ್ಚರಿಕೆ ಯಿಂದರಲೂ, ಜವಾಬ್ದಾರಿಯಿಂದ ವರ್ತಿಸಲೂ ಸರ್ಕಾರ ತಿಳಿಸಿದೆ.

ಎಲ್ಲಕ್ಕಿಂತ ಮೇಲಾಗಿ ಒಂದು ದೇಶದಲ್ಲಿ ಯುದ್ಧ ಘೋಷಣೆ ಆಗಿದೆ ಎಂದು ಮೊಟ್ಟ ಮೊದಲು ತಿಳಿಸುವುದು ಆ ದೇಶದ ರಾಷ್ಟ್ರಪತಿ. ಆದರೆ ಜಾಲತಾಣಗಳು ಈಗಾಗಲೇ ಭಾರತ ಪಾಕಿಸ್ತಾನ ಯುದ್ಧ ಘೋಷಣೆಯನ್ನೇ ಮಾಡಿಬಿಟ್ಟಿವೆ. ರಾತ್ರೋರಾತ್ರಿ ʼindiapakistanwar’ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಬರೋಬ್ಬರಿ ಆರು ಲಕ್ಷ ಟ್ವೀಟ್‌ಗಳು ದಾಖಲೆಯಾಗಿದ್ದವು. ಇನ್ನು ಸುದ್ದಿ ವಾಹಿನಿಗಳಲ್ಲಿ ರಾತ್ರಿ ಎಂಟು ಗಂಟೆಗೆ ರಾಜಸ್ಥಾನ್‌ ಬಳಿ ಪಾಕ್‌ ಹಾಗೂ ಭಾರತದ ನಡುವೆ ಡ್ರೋನ್‌ ಜಟಾಪಟಿ ಎಂದು ಶುರುವಾದ ಅವರೇ ಹೇಳಿಕೊಳ್ಳುವ ʼಯುದ್ಧದ ಬ್ರೇಕಿಂಗ್‌ ನ್ಯೂಸ್‌ʼ ತಡರಾತ್ರಿಯಾದರೂ ನಿಲ್ಲಲಿಲ್ಲ.

ಪಾಕ್‌ ಪೈಲಟ್‌ ಜೀವಂತವಾಗಿ ಸೇನೆ ವಶಕ್ಕೆ ಹೀಗೆ ಬಾಯಿಗೆ ಬಂದ ಸುಳ್ಳುಗಳನ್ನು ಬ್ರೇಕಿಂಗ್‌ ನ್ಯೂಸ್‌ ಮಾಡಿಬಿಟ್ಟಿದ್ದರು. ಇದರ ಜೊತೆಗೆ ಪಾಕ್‌ ಪ್ರಧಾನಿ ಮನೆ ಬಳಿ ದಾಳಿ, ದಾಳಿಯ ಭೀಕರತೆಗೆ ದಾವೂದ್ ಇಬ್ರಾಹಿಂ ಕಾಲ್ಕಿತ್ತದ್ದು, ಲಾಹೋರ್‌ ನಗರದ ಮೇಲೆ ದಾಳಿ ಕಟ್ಟಡಗಳು ಧ್ವಂಸದಂತಹ ಸುಳ್ಳು ಸುದ್ದಿಗಳನ್ನು ಈಗಲೂ ಮಾಧ್ಯಮಗಳು ಜನರ ಮನಸ್ಸಿನಲ್ಲಿ ಸತ್ಯ ಎಂಬಂತೆ ಅಚ್ಚೊತ್ತಿಸಿವೆ.

ಒಟ್ಟಿನಲ್ಲಿ ಈ ಉದ್ವಿಗ್ನ ಸ್ಥಿತಿ ತಣ್ಣಗಾಗುವ ಮೊದಲು ಮಾಧ್ಯಮಗಳು ಮತ್ತು ಜಾಲತಾಣಗಳು ಎರಡೂ ದೇಶಗಳ ಮೇಲೆ ಅಣುಬಾಂಬ್ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಈಗಾಗಲೇ ಯುದ್ಧದ ಬಗ್ಗೆ ವರದಿ ಪ್ರಸಾರ ಮಾಡದಂತೆ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಸ್ಪಷ್ಟ ಸಂದೇಶ ನೀಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಈ ಮಾಧ್ಯಮಗಳು ನೀಡಿಲ್ಲ.

ವದಂತಿಗಳು ಹರಡದಿರಲು ನೀವೇನು ಮಾಡಬೇಕು?
ಎಲ್ಲ ಸುದ್ದಿ ಮೂಲಗಳನ್ನೂ ನಂಬದೇ, ಸರ್ಕಾರದ ಮಾಹಿತಿ ಪ್ರಸಾರ ಮಾಡುವ ಮಾಧ್ಯಮಗಳನ್ನಷ್ಟೇ ಅವಲಂಬಿಸುವುದು
-ಯಾವುದೇ ಸುದ್ದಿ ಬಂದಾಗಲೂ ಅದನ್ನು ಪರಿಶೀಲಿಸದೇ ಏಕಾಏಕಿ ಅದನ್ನು ಇನ್ನೊಂದೆಡೆ ಹಂಚಿಕೊಳ್ಳದಿರುವುದು
-ದಾಳಿ, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸುದ್ದಿಗಳನ್ನು ಸರ್ಕಾರ ತಿಳಿಸುವ ಮುನ್ನವೇ ಹಂಚಿಕೊಳ್ಳದಿರುವುದು
-ಸರ್ಕಾರಿ ಮೂಲದ ಮಾಹಿತಿಗಳನ್ನಷ್ಟೇ ನಂಬುವುದು ಹಾಗೂ ಆ ಸುದ್ದಿಗಳನ್ನಷ್ಟೇ ಹಂಚಿಕೊಳ್ಳುವುದು

ಯುದ್ಧ ಭೀತಿ: ಭಾರತದಲ್ಲಿ ಎಟಿಎಂಗಳು ಬಂದ್‌ ಆಗುತ್ತವೆಯೇ?
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತದಲ್ಲಿ ಎಟಿಎಂಗಳು  3 ದಿನಗಳವರೆಗೆ ಬಂದ್‌ ಆಗುತ್ತವೆ ಎಂಬ ವದಂತಿ ಹರಡುತ್ತಿದೆ. ಆದರೆ, ಈ ಮಾಹಿತಿಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯ ತಳ್ಳಿ ಹಾಕಿದೆ.

ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾಗರೀಕರಿಗೆ ದಾಳಿ ಮತ್ತು ಮುಷ್ಕರಗಳಂತಹ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ತರಬೇತಿ ನೀಡಲಾಗುತ್ತಿದೆ. ಈ ಬೆನ್ನಲ್ಲೆ ಎಟಿಎಂಗಳು ಬಂದ್‌ ಆಗುತ್ತವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸೈಬರ್ ದಾಳಿಯ ನಂತರ ಸರ್ಕಾರವು ಕೆಲವು ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಿದೆ. ಆನ್‌ಲೈನ್‌ ವಹಿವಾಟಿಗೂ ಅಡಚಣೆಯಾಗಲಿದೆ ಎಂದು ವ್ಯಾಟ್ಸಪ್‌ ಫೇಸ್‌ಬುಕ್‌ ಟ್ವೀಟರ್‌ಗಳಲ್ಲಿ ಸಂದೇಶ ಹರಿದಾಡುತ್ತಿತ್ತು.

ಆದರೆ, “ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಪಾಕಿಸ್ತಾನವು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಭಾರತದಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಂಬಬಾರದು ” ಎಂದು  ಕೇಂದ್ರ ಸರ್ಕಾರ ತಿಳಿಸಿದೆ.

ಇಂಡಿಯಾ VS ಪಾಕಿಸ್ತಾನ ಇಂಪಾರ್ಟೆಂಟ್ ಎಂದು ವಾಟ್ಸಾಪ್ ಸಂದೇಶವು ಪ್ರಾರಂಭವಾಗುತ್ತದೆ. ” ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸೈಬರ್ ದಾಳಿಯಿಂದಾಗಿ ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುವುದು “.

“ಮುಂದಿನ 2 – 3 ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಾಗುವುದು “

“ಸೈಬರ್‌ ದಾಳಿ ಸಾಧ್ಯತೆ ಇದೆ ಯುದ್ಧದ ವೇಳೆ ಆನ್‌ಲೈನ್ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಿ”

ಎಂಬ ಮೇಸೆಜ್‌  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಇದು ಸುಳ್ಳು ಸುದ್ದಿ ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿಯನ್ನು ಪಿಐಬಿಯ ಸತ್ಯ – ಪರಿಶೀಲನಾ ಘಟಕವು ಕೂಡ ಪರಿಶೀಲನೆ ನಡೆದಿದೆ. ಇದೊಂದು ನಕಲಿ ಸುದ್ದಿ ನಂಬ ಬೇಡಿ ಎಂದು ಪಿಐಬಿ ಜನರಿಗೆ ತಿಳಿಸಿದೆ. ಇವುಗಳ ಜತೆಗೆ ಐಎನ್‌ಎಸ್‌ ವಿಕ್ರಾಂತ್‌, ಎಸ್‌ 400 ಕುರಿತ ಹಲವು ನಕಲಿ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಅವುಗಳನ್ನು ನಂಬಬೇಡಿ ಎಂದು ಪಿಐಬಿ

ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ
ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.

ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.

ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ  ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.

ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email:  factcheck@pib.gov.in ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.

ಆಪರೇಷನ್‌ ಸಿಂಧೂರ್: ಪಾಕಿಸ್ತಾನದ ಸುಳ್ಳು ಸುದ್ದಿಗಳನ್ನು ರಾತ್ರೋ ರಾತ್ರಿ ಬಯಲಿಗೆಳೆದ ಮೊಹಮ್ಮದ್ ಜುಬೈರ್
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.

ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌  ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ.  ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.

ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.

X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ ಹಂಚಿಕೊಂಡಿದ್ದಾರೆ . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ,  “ಭಾರತ ನನ್ನ ರಕ್ತದಲ್ಲಿದೆ” ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.

Beware! These are Pakistani propaganda accounts pretending to be Indian Army Personals.
Don't amplify their tweets. pic.twitter.com/uhoYFDvbUM
— Mohammed Zubair (@zoo_bear) May 7, 2025

ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು “ಕಾಂಗ್ರೆಸ್ ಬೆಂಬಲಿಗ” ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್‌ ಮಾಡಿದ್ದರು.

“ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಅನ್ನು ಹಮೀದ್‌ ಮೀರ್‌ ರಿಟ್ವೀಟ್‌ ಮಾಡಿದ್ದಾರೆ.

So Pak Senior Journalist @HamidMirPAK is amplifying tweets by @Tiju0Prakash whose earlier I'd was @tiju786 ( A Pakistan propaganda account pretending to be Congress Supporter). 😏 pic.twitter.com/pUJPlafWq6
— Mohammed Zubair (@zoo_bear) May 7, 2025

ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್‌ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್‌ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.

ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ.

“ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ” ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ.

ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.

“ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,” ಎಂದು ಜುಬೈರ್ ಹೇಳಿದರು.

ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.

ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು.  ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್‌ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ.

ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್‌ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ.

boss Zubair -my deep respects 🙏🙏🙏

fills my heart with pain to realize that your own countrymen give you gaalis daily. daily non-stop. call you anti-national, pakistani etc etc and feel proud to do this.

yet you soldier on. without getting any pat on the back. i admire Modi…
— Puneet Sharma (@PuneetSharmaX) May 7, 2025

ನಕಲಿ ಸುದ್ದಿಗಳ ಕೇರಾಫ್‌ ಅಡ್ರಸ್ಸೇ ಬಿಜೆಪಿ: ನಕಲಿ ಸುದ್ದಿ ಹರಡುತ್ತಿರುವ ಟಾಪ್ 10 ಭಾರತೀಯ ಪ್ರಭಾವಿಗಳ ಪಟ್ಟಿ ನೀಡಿದ ಗ್ರೋಕ್‌ AI
ಜಾಗತಿಕ ಬಿಲಿಯನೇರ್ ಎಲೋನ್ ಮಸ್ಕ್ ಅವರ AI ಚಾಟ್‌ಬಾಟ್ ‘ಗ್ರೋಕ್’ ಬಹಿರಂಗಪಡಿಸುತ್ತಿರುವ ಸತ್ಯಗಳು ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರ ಬೆವರಿಳಿಸುತ್ತಿವೆ.

ಬಿಜೆಪಿ ಪರಿವಾರವು ಬಹಳ ದಿನಗಳಿಂದ ಹರಡುತ್ತಿದ್ದ ಸುಳ್ಳುಗಳನ್ನು ಈ ಚಾಟ್‌ಬಾಟ್ ಪುರಾವೆಗಳ ಸಮೇತ ಸುಳ್ಳೆಂದು ಸಾಬೀತುಪಡಿಸುತ್ತಿದೆ. ಈ ಸಂದರ್ಭದಲ್ಲಿ, ಅಖಿಲೇಶ್ ಮೌರ್ಯ ಎಂಬ ನೆಟಿಜನ್ ‘X’ ವೇದಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಟಾಪ್ 10 ಭಾರತೀಯ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ‘ಗ್ರೋಕ್’ ಅನ್ನು ಕೇಳಿಕೊಂಡರು.

‘ಫ್ಯಾಕ್ಟ್-ಚೆಕಿಂಗ್ ಡೇಟಾ ಮಾರ್ಚ್-2025’ ಪ್ರಕಾರ, ಗ್ರೋಕ್ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿರುವ ಬಹುತೇಕ ಎಲ್ಲರೂ ಬಿಜೆಪಿ ನಾಯಕರು ಅಥವಾ ಆ ಪಕ್ಷದ ಬೆಂಬಲಿಗರಾಗಿದ್ದಾರೆ ಎಂಬುದು ಗಮನಾರ್ಹ.

ನೂಪುರ್ ಶರ್ಮಾ

ಹಿಂದೆ ಬಿಜೆಪಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಟಿವಿ ಚಾನೆಲ್ ಒಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. ಪರಿಣಾಮವಾಗಿ, ಬಿಜೆಪಿ ಅವರನ್ನು ಪಕ್ಷದಿಂದ ಹೊರಹಾಕಿತು. ಅವರು ಇನ್ನೂ ಬಿಜೆಪಿ ಬೆಂಬಲಿಗರಾಗಿ ಉಳಿದಿದ್ದಾರೆ.

ರಾಹುಲ್ ರೋಷನ್

ಒಪಿಇಂಡಿಯಾ ವೆಬ್‌ಸೈಟ್‌ನ ಸಹ-ಸಂಸ್ಥಾಪಕ. ಈ ವೆಬ್‌ಸೈಟ್ ಬಿಜೆಪಿ ಪರವಾಗಿ ಸುದ್ದಿಗಳನ್ನು ಪ್ರಕಟಿಸುತ್ತದೆ ಎಂಬ ಆರೋಪಗಳಿವೆ. 2020 ರ ದೆಹಲಿ ಗಲಭೆ ಮತ್ತು ಕೋವಿಡ್ ಹರಡುವಿಕೆಗೆ ಸಂಬಂಧಿಸಿದಂತೆ ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ‌ ಪೋಸ್ಟ್‌ಗಳು ವಿವಾದಕ್ಕೆ ಕಾರಣವಾಗಿವೆ.

ಅಮಿತ್ ಮಾಳವೀಯ

ಬಿಜೆಪಿ ಐಟಿ ಸೆಲ್‌ನ ಉಸ್ತುವಾರಿ. 2020ರ ಕರಾಳ ಕಾನೂನುಗಳ ವಿರುದ್ಧದ ರೈತರ ಚಳವಳಿಯನ್ನು ದುರ್ಬಲಗೊಳಿಸಲು ನಕಲಿ ಸುದ್ದಿಗಳನ್ನು ಹರಡಿದ್ದರು ಎಂಬ ಆರೋಪಗಳಿವೆ. ರೈತರ ಆಂದೋಲನವನ್ನು ದಾರಿತಪ್ಪಿಸಲು ವೀಡಿಯೊಗಳನ್ನು ಮಾರ್ಫ್ ಮಾಡಲಾಗಿತ್ತು ಎಂಬ ವರದಿಗಳಿವೆ.

ಅರ್ನಬ್ ಗೋಸ್ವಾಮಿ

ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಟಿವಿಯ ಎಂಡಿ. ಅವರ ಚರ್ಚೆಗಳು ಸಾಮಾನ್ಯವಾಗಿ ಬಿಜೆಪಿ ಪರವಾಗಿಯೇ ಇರುತ್ತವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸುಳ್ಳು ಕಥೆಗಳನ್ನು ಹರಡಲಾಗಿತ್ತು ಎಂಬ ಆರೋಪಗಳಿವೆ.

ಕಂಗನಾ ಎಂಡ್‌ ಟೀಮ್

ಕಂಗನಾ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ. 2020-21ರ ರೈತ ಚಳವಳಿ, 2024ರ ಬಾಂಗ್ಲಾದೇಶ ಗಲಭೆಗಳು, ಕೋವಿಡ್ -19 ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರೋಪಗಳಿವೆ.‌

ವಿವೇಕ್ ಅಗ್ನಿಹೋತ್ರಿ

ನಿರ್ದೇಶಕ. ಬಿಜೆಪಿ ಬೆಂಬಲಿಗ. ಕಾಶ್ಮೀರದ ಕುರಿತಾದ ಬಿಬಿಸಿ ಸಮೀಕ್ಷೆಯನ್ನು ತಿರುಚಿದ ಆರೋಪ ಇವರ ಮೇಲಿದೆ. ಅಲ್ಲದೆ ತನ್ನನ್ನು ಸುಳ್ಳುಸುದ್ದಿಕೋರ ಎಂದು ಕರೆದಿದ್ದಕ್ಕೆ ಗ್ರೋಕ್‌ ತನ್ನ ಬಳಿ ಕ್ಷಮೆ ಯಾಚಿಸಿದೆ ಎಂದು ವಿವೇಕ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಗ್ರೋಕ್‌ ಹೇಳಿದೆ.

ಶಹಜಾದ್

ಇವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ಅಮೆರಿಕ 21 ಮಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ಸುಳ್ಳು ಸುದ್ದಿ ಹರಡಿದ್ದರು.

ಕಪಿಲ್ ಶರ್ಮಾ

ದೆಹಲಿ ಬಿಜೆಪಿ ಸಚಿವ. ಇವರ ಮೇಲೆ 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರೋಪಗಳಿವೆ. 2020 ರ ದೆಹಲಿ ವಿಧಾನಸಭಾ ಚುನಾವಣೆಯನ್ನು ‘ಭಾರತ vs. ಪಾಕಿಸ್ತಾನ’ ಎಂದು ಬಣ್ಣಿಸುವ ಮೂಲಕ ಎಎಪಿಯನ್ನು ಗುರಿಯಾಗಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸುರೇಶ್ ಚವಾಂಕೆ

ಬಿಜೆಪಿ ಸ್ನೇಹಿ ಮಾಧ್ಯಮ ಸುದರ್ಶನ್ ಟಿವಿಯ ಸಿಎಂಡಿ. 2020 ರಲ್ಲಿ, ‘ಯುಪಿಎಸ್‌ಸಿ ಜಿಹಾದ್’ ಹೆಸರಿನಲ್ಲಿ ಒಂದು ಗುಂಪನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಇದು ವಿವಾದಾತ್ಮಕವಾಗಿತ್ತು. ಈ ವಾಹಿನಿ ಅನೇಕ ಸುಳ್ಳು ಸುದ್ದಿಗಳು ಹರಡಿದೆ ಎಂಬ ಆರೋಪಗಳಿವೆ.

ಪುಷ್ಪೇಂದ್ರಕುಮ್

ಇವರು ಕ್ರಿಪ್ಟೋ ಪ್ರಚಾರಕ. ಬಿಟ್‌ಕಾಯಿನ್ ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಆರೋಪಗಳಿವೆ.

ಘನತೆಗೆ ತಕ್ಕಂತೆ ನಡೆದುಕೊಳ್ಳಲಿ, ಸಣ್ಣತನದ ರಾಜಕಾರಣ ಬೇಡಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು
ಹಾಸನ : ಅಸೂಯೆಯಿಂದ ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು.
ನಗರದ ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸೂರಜ್ ರೇವಣ್ಣ ಅವರದ್ದು ಬಾಲೀಷವಾದ ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ತರಹ ಮಾತನಾಡಿದ್ದಾರೆ. ಜೊತೆಗೆ ವಾಗ್ಮಿ, ದೊಡ್ಡ ಮೇದಾವಿಗಳ ತರ ಮಾತನಾಡಿದ್ದಾರೆ. ಅವರಿನ್ನು ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಎಂಎಲ್‌ಸಿ ಆಗಿರುವವರು ಅವರು. ಉದ್ಭವಮೂರ್ತಿ ತರಹ ಎದ್ದು ಬಂದವರು. ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ! ಎಂದು ವ್ಯಂಗ್ಯವಾಡಿದರು. ಅವರ ಹೇಳಿಕೆ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು ಅವರು ಎದುರಾಳಿ. ಯಾವುದೇ ವಿಚಾರದಲ್ಲಿ ನಾನು ಬಗ್ಗುವವನಲ್ಲ. ನಾನು ನಮ್ಮ ತಾತನ ಹೆಸರು ಹೇಳಿಕೊಂಡು ಬಂದವನಲ್ಲ. ಹೋರಾಟ ಮನೋಭಾವ, ತಳಮಟ್ಟದಿಂದ ಬಂದಿರುವವನು ನಾನು. ಅವರ ಹೇಳಿಕೆ ಬೇಜಾರು ತರಿಸಿದೆ. ಬದುಕಿದ್ದವರ ಬಗ್ಗೆ ಮಾತನಾಡಲಿ. ನಾವು ದೇವೇಗೌಡರ ಬಗ್ಗೆ ಯಾವತ್ತಾದರೂ ಮಾತನಾಡಿದ್ದೇವಾ! ಇವತ್ತು ಅವರ ಮೇಲೆ ಗೌರವವಿದೆ. ದೇವೇಗೌಡರು, ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಅವರ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಯಾವುದೇ ಪುರಾವೆ ಇಲ್ಲದೆ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ. ಆ ಘಟನೆಯಾದಾಗ ಸೂರಜ್ ಅವರ ವಯಸ್ಸು ಎಷ್ಟಿತ್ತು, ಮಾಹಿತಿ ಇತ್ತಾ! ಅವರ ತಂದೆ ರೇವಣ್ಣ ಅವರೇ ಏಕೆ ಇಷ್ಟು ದಿನ ಮಾತನಾಡಲಿಲ್ಲ. ಅವರ ಕುಟುಂಬದವರು ಯಾರು ಮಾತನಾಡಿಲ್ಲ. ಮೈಕ್ ಸಿಕ್ಕಿದೆ ಜನ ಶಿಳ್ಳೆ ಹೊಡಿತಾರೆ ಅಂಥ ಮಾತನಾಡಿದ್ದಾರಾ ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
ಪೆನ್‌ಡ್ರೆವ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ, ಬಲಿಪಶುಯಾಗಿದ್ದಾರೆ. ಅದಕ್ಕೆ ಕಾರಣ ಯಾರು? ಪೆನ್‌ಡ್ರೆವ್ ಒಳಗೆ ಇದ್ದ ವಿಡಿಯೋ ಮಾಡಿದ್ದು ಯಾರು?
ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇವರ ತಾತನ ಹೆಸರಿನಿಂದ ಗೆದ್ದಿದ್ದಾರೆ. ಎಂಎಲ್‌ಸಿ ಅವರ ಸಾಧನೆ ಪಟ್ಟಿ ಮೊದಲು ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದನ್ನು ಬಿಡಿ.
ಎಂಎಲ್‌ಸಿ ಸಾಧನೆ ಏನು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಎಸೆದರು.
ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿ ಮಾತು ಬರುತ್ತದೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ.
ಯಾವ ಊರಿಗೆ ಹೋದರು ಕಿತಾಪತಿ ಮಾಡಿ ಬರ್ತಾರೆ, ಅದೇ ಅವರ ಕೆಲಸ. ಅವರ ಕಾರ್ಯಕರ್ತರ ಮೇಲೆ ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ. ಇನ್ನೂ ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ! ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು. 2028ರ ಚುನಾವಣೆಯಲ್ಲಿ ಯಾರ? ಯಾರು ಏನಾಗುತ್ತಾರೆ ಗೊತಾಗುತ್ತದೆ. ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇನ್ನು ಮುಂದಾದರೂ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ, ಇಲ್ಲಾ ಸುಮ್ಮನೆ ಇರಲಿ ಎಂದು ಸಲಹೆ ನೀಡಿದರು.
ಸಾರಿಗೆ ಬಸ್ ದರ ಏರಿಕೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಂಧನ ದರ ಹೆಚ್ಚಾಗಿದ್ದು, 7ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ, ಎಲ್ಲಾ ಆಡಳಿತದಲ್ಲೂ ಬಸ್ ದರ ಏರಿಕೆ ಮಾಡಲಾಗಿದೆ ಎಂದರು. ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ. ಎಲ್ಲ ಸರ್ಕಾರಗಳು ಮಾಡಿವೆ. ರಾಜ್ಯದ ಜನ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಕೂಡ ಮುಂದುವರೆಯಲಿದೆ ಎಂದು ಭವಿಷ್ಯ ನುಡಿದರು.

ಫ್ಯಾಕ್ಟ್‌ ಚೆಕ್:‌ ತಿರುಪತಿ ಲಾಡು ಪ್ರಕರಣಕ್ಕೆ ಪಾಕಿಸ್ತಾನದ ಕಂಪನಿಯನ್ನು ತಳುಕು ಹಾಕಿದ ಸುಳ್ಳು ಸುದ್ದಿಕೋರರು!
ಬೆಂಗಳೂರು: ತಿರುಪತಿ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಉಂಟಾದ ವಿವಾದ ಹೆಚ್ಚು ಹೆಚ್ಚು ರಾಜಕೀಯ ತಿರುವನ್ನು ಪಡೆಯುತ್ತಿದ್ದು, ಕೆಲವು ರಾಜಕೀಯ ಹಿತಾಸಕ್ತಿಗಳು ಈ ಘಟನೆಯನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಸಹ ಹಬ್ಬಿಸುತ್ತಿವೆ.

ತಿರುಪತಿಗೆ ತುಪ್ಪ ಸರಬರಾಜು ಮಾಡಿದೆ ಎನ್ನಲಾದ ಎ ಆರ್‌ ಫುಡ್ಸ್‌ ಕಂಪನಿಯ ಹೆಸರಿನಲ್ಲಿ ಈ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಕಂಪನಿಯ ಮೇಲ್ಮಟ್ಟದ ಅಧಿಕಾರಿಗಳೆಲ್ಲ ಮುಸ್ಲಿಮರಾಗಿದ್ದು ಅವರು ಕೆಲಸ ಮಾಡುವ ಕಂಪನಿ ತಿರುಪತಿಗೆ ತುಪ್ಪ ಸಪ್ಲೈ ಮಾಡಿದ್ದಾರೆ ಎನ್ನುವ ಅರ್ಥ ಬರುವಂತೆ ಪೋಸ್ಟ್‌ ಮಾಡುತ್ತಿದ್ದಾರೆ.

ವಾಸ್ತವದಲ್ಲಿ ಪಾಕಿಸ್ತಾನದಲ್ಲಿಯೂ ಎ ಆರ್‌ ಫುಡ್ಸ್‌ ಹೆಸರಿನ ಕಂಪನಿಯೊಂದು ಇದ್ದು, ಅದರಲ್ಲಿನ ಅಧಿಕಾರಗಳ ಹೆಸರನ್ನು ಚೆನೈ ಮೂಲದ ಎ ಆರ್‌ ಫುಡ್ಸ್‌ ಎನ್ನುವ ಕಂಪನಿಯ ಅಧಿಕಾರಿಗಳ ಹೆಸರು ಎನ್ನುವಂತೆ ಬಿಂಬಿಸಿ ಶೇರ್‌ ಮಾಡಲಾಗುತ್ತಿದೆ.

ಪ್ರಸ್ತುತ ಪೋಸ್ಟಿನಲ್ಲಿ ನಸೀಮ್‌ ಜಾವೆದ್‌, ಮೊಹಮ್ಮದ್‌ ನಸೀಮ್‌, ಮೊಹಮ್ಮದ್‌ ನೌಮನ್‌ ಹಾಗೂ ರಹೀಲ್‌ ರೆಹಮಾನ್‌ ಎನ್ನುವ ಹೆಸರುಗಳಿವೆ. ಇವರುಗಳೇ ತುಪ್ಪ ಸಪ್ಲೈ ಮಾಡಿದ ಕಂಪನಿಯ ಆಡಳಿತ ಮಂಡಳಿ ಎಂದು ಅದರಲ್ಲಿ ಹೇಳಲಾಗಿದೆ.

ಆದರೆ ಹಿಂದೂಸ್ತಾನ್‌ ಟೈಮ್ಸ್‌ ವರದಿಯ ಪ್ರಕಾರ ಚೆನ್ನೈ ಮೂಲದ ಎ ಆರ್‌ ಫುಡ್ಸ್‌ ಎನ್ನುವ ಕಂಪನಿಯನ್ನು 1995ರಲ್ಲಿ ಸ್ಥಾಪಿಸಲಾಗಿದ್ದು, ರಾಜಶೇಖರನ್‌ ಆರ್‌, ಸೂರ್ಯ ಪ್ರಭಾ ಆರ್‌ ಮತ್ತು ಶ್ರೀನಿವಾಸನ್‌ ಎಸ್‌ ಆರ್‌ ಎನ್ನುವವರು ಇದನ್ನು ನಡೆಸುತ್ತಿದ್ದಾರೆ.

Fact Check: IC 814 ಸೀರಿಸ್‌ನಲ್ಲಿ ಕಂದಹಾರ್ ಉಗ್ರರಿಗೆ ಹಿಂದೂ ಹೆಸರೇ? ಸತ್ಯ ಏನು?
‘IC 814: ದಿ ಕಂದಹಾರ್ ಹೈಜಾಕ್’ (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.  ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು ‘ಭೋಲಾ’ ಮತ್ತು ‘ಶಂಕರ್’ ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.

176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು ಹೊರಟಿತ್ತು. ಇದನ್ನು ಐವರು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದರು, ನಂತರ ಬೇರೆ ಬೇರೆ ಸ್ಥಳಗಳಲ್ಲಿ ವಿಮಾನವನ್ನು ಇಳಿಸಿ, ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದರು. ಏಳು ದಿನಗಳ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಅಪಹರಣಕಾರರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡಿತು. ಭಾರತದ ಜೈಲಿನಲ್ಲಿದ್ದ ಮೂವರು ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಳಿಸಿದರು. ಕೊನೆಗೆ ಅಪಹರಣಕಾರರು ಜನರನ್ನು ಬಿಡುಗಡೆ ಮಾಡಿದರು. ಈ ಘಟನೆಯನ್ನು ಆಧರಿಸಿ ‘IC 814: ದಿ ಕಂದಹಾರ್ ಹೈಜಾಕ್’ ವೆನ್‌ಸೀರಿಸ್‌ ಪ್ರಸಾರವಾಗಿದೆ.

ಇದರಲ್ಲಿ ಅನುಭವ್ ಸಿನ್ಹಾ ಅವರು ವಿಮಾನ ಹೈಜಾಕ್‌ ಮಾಡಿದ ಉಗ್ರರನ್ನು ಭೋಲಾ ಮತ್ತು ಶಂಕರ್‌ ಎಂದು ಹೆಸರಿಸಿದ್ದಾರೆ. ಇದು ಉಗ್ರರನ್ನು ‘ವೈಟ್‌ವಾಶ್’‌ ಮಾಡುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರೂ, ಗೋದಿ ಮಾಧ್ಯಮಗಳೂ ಪ್ರಚಾರ ಮಾಡಿವೆ.

ಕರ್ನಾಟಕದ News18 ಕನ್ನಡ ಎಂಬ ಮಾಧ್ಯಮ ಕೂಡ ಈ ಸುಳ್ಳನ್ನು ಹರಿಯಬಿಟ್ಟಿದೆ. ಪೋಸ್ಟ್‌ ಕಾರ್ಡ್‌ ಸೇರಿದಂತೆ ಕೋಮು ಪ್ರಚೋದಕ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳು ಈ ವಿಚಾರವನ್ನು ತಿರುಚಿ ದ್ವೇಷ ಹೊರಹಾಕಿವೆ.

ಸತ್ಯ ಏನು?

IC 814 ವಿಮಾನವನ್ನು ಅಪಹರಿಸಿದ ಕುರಿತು ಅನೇಕ ಸುದ್ದಿ ವರದಿಗಳನ್ನು ನಾವು Google ನಲ್ಲಿ ನೋಡಬಹುದು. ಇವೆಲ್ಲವೂ ಇಬ್ಬರು ಅಪಹರಣಕಾರರು ಭೋಲಾ ಮತ್ತು ಶಂಕರ್ ಎಂಬ ಕೋಡ್ ಅನ್ನು ಬಳಸಿರುವುದನ್ನು ವರದಿ ಮಾಡಿವೆ. ವಿಮಾನದಲ್ಲಿದ್ದ ಭೋಪಾಲ್‌ನ ದಂಪತಿಗಳ ಅನುಭವದ ಬಗ್ಗೆ ಟೈಮ್‌ ಆಫ್‌ ಇಂಡಿಯಾ ವರದಿಯೊಂದನ್ನು ಡಿಸೆಂಬರ್ 24, 2020 ರಂದು ಪ್ರಕಟಿಸಿದೆ. ಇದರಲ್ಲಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್…” ಎಂದು ಉಗ್ರರು ತಮ್ಮನ್ನು ತಾವು ಪರಸ್ಪರ ಕರೆಸಿಕೊಳ್ಳುತ್ತಿದ್ದರೆಂದೂ, ದುರ್ಗೇಶ್ ಮತ್ತು ರೇಣು ಗೋಯೆಲ್ ಎಂಬ ಈ ದಂಪತಿಗಳಿಗೆ ಅದೊಂದು ದುಸ್ವಪ್ನವಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.

TOI ನ ವರದಿಯಲ್ಲಿ, ಭಯಾನಕತೆಯನ್ನು ವಿವರಿಸುತ್ತಾ, ಗೋಯೆಲ್, “ಭೋಲಾ ಮತ್ತು ಬರ್ಗರ್ ಪ್ರಯಾಣಿಕರನ್ನು ಹೊಡೆಯುತ್ತಿದ್ದರು, ಆದರೆ ಡಾಕ್ಟರ್ ಮತ್ತು ಚೀಫ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು,” ಎಂದು ಹೇಳಿದ್ದಾರೆ.

ನೇಪಾಳ ಟೈಮ್ಸ್‌ನ ಪತ್ರಿಕೆ ಡಿಸೆಂಬರ್ 31, 2019 ರಂದು ಪ್ರಕಟಿಸಿದ  Remembering  IC814 ಎಂಬ ವರದಿಯಲ್ಲಿ ಆ ವಿಮಾನದಲ್ಲಿದ್ದ ಸಂಜಯ್ ಧಿತಾಲ್, “ಐದು ಅಪಹರಣಕಾರರಲ್ಲಿ ಎಲ್ಲರಿಗೂ ಕೋಡ್ ನೇಮ್‌ಗಳು ಇದ್ದವು: ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್,” ಎಂದು ಹೇಳಿರುವುದು ವರದಿಯಾಗಿದೆ.

ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ  ಮಾರ್ಚ್ 6, 2019 ರಂದು ಪ್ರಕಟವಾದ IC 814 hijack: How Jaish-e-Mohammed chief Masood Azhar’s brother planned Indian Airlines hijack in 1999 ಎಂಬ ವರದಿಯಲ್ಲಿ  ಪ್ರತಿಯೊಬ್ಬ ಅಪಹರಣಕಾರರು ಕೋಡ್ ಹೆಸರನ್ನು ಬಳಸಿರುವುದನ್ನು ಉಲ್ಲೇಖಿಸಲಾಗಿದೆ.

ಕೋಡ್ ಹೆಸರುಗಳನ್ನು ಬಳಸಿರುವುದನ್ನು IC 814 ರ ಫ್ಲೈಟ್ ಎಂಜಿನಿಯರ್  ಅನಿಲ್ ಕೆ ಜಗ್ಗಿಯಾ ಕೂಡ ದೃಢೀಕರಿಸಿದ್ದಾರೆ  , ಅವರು 2021 ರಲ್ಲಿ ತಮ್ಮ ಅನುಭವವನ್ನು  IC 814 Hijacked: The Inside Story ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಎಲ್ಲಕ್ಕೂ ಮುಖ್ಯವಾಗಿ ಘಟನೆ ಮುಗಿದ ಒಂದು ವಾರದ ನಂತರ ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಅಪಹರಣಕಾರರು ಚೀಫ್‌, ಡಾಕ್ಟರ್‌, ಶಂಕರ್‌ ಮತ್ತು ಬೋಲಾ ಎಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.

ಹೈಜಾಕ್ ಸಮಸ್ಯೆ ಮುಗಿದ ನಂತರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಆಗಿನ ಗೃಹ ಸಚಿವ ಎಲ್‌ ಕೆ ಅಡ್ವಾಣಿ ಅವರು ಐವರು ಅಪಹರಣಕಾರರನ್ನು ಬಹವಾಲ್‌ಪುರದ ಇಬ್ರಾಹಿಂ ಅಖ್ತರ್ ಅಲಿಯಾಸ್ ಅಥರ್, ಕರಾಚಿಯ ಡಿಫೆನ್ಸ್‌ ಏರಿಯಾದ ನಿವಾಸಿ ಸನ್ನಿ ಅಹ್ಮದ್ ಖಾಜಿ, ಕರಾಚಿಯ  ಗುಲ್ಶನ್ ಅಖ್ತರ್ ಕಾಲೋನಿಯ ಮಿಸ್ತ್ರಿ ಜಹೂರ್ ಇಬ್ರಾಹಿಂ, ಸುಕ್ಕೂರ್ ನಗರದ ಶಾಕಿರ್ ಎಂದು ಗುರುತಿಸಿರುವುದಾಗಿ ಹೇಳಿದ್ದಾರೆ. ಮುಂದುವರಿದು, ಮೌಲಾನಾ ಅಜರ್‌ನ ಸಹೋದರ ಎಂದು ಕರೆಸಿಕೊಂಡಿರುವ ಇಬ್ರಾಹಿಂನನ್ನು “ಮುಖ್ಯಸ್ಥ” ಎಂದೂ, ಸಯೀದ್‌ನನ್ನು “ಡಾಕ್ಟರ್” ಎಂದೂ, ಖಾಜಿಯನ್ನು “ಬರ್ಗರ್” ಎಂದೂ, ಇಬ್ರಾಹಿಂನನ್ನು “ಭೋಲಾ” ಎಂದೂ, ಶಾಕಿರ್‌ನನ್ನು “ಶಂಕರ್” ಎಂದು ಎಂದು ಕರೆಯಲಾಗುತ್ತಿತ್ತು, ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಕರೆಸಿಕೊಳ್ಳಲು ಬಳಸುತ್ತಿದ್ದ ಹೆಸರುಗಳು ಇವು ಎಂದು ಅಡ್ವಾಣಿ ಹೇಳಿದ್ದಾರೆ.

ಇದರಿಂದ ತಿಳಿದು ಬರುವುದು ಏನೆಂದರೆ, IC 814: The Kandahar Hijack ನಲ್ಲಿ ಬಳಸಲಾಗಿರುವ ಭೋಲಾ ಮತ್ತು ಶಂಕರ್‌ ಎಂಬ ಅಪಹರಣಕಾರರ ಹೆಸರು ಸೀರಿಸ್‌ಗೆ ಕಥೆ ರಚಿಸಿದವರ ಸೃಷ್ಟಿಯಲ್ಲ, ಕಥೆಯನ್ನು ಬರೆಯುವಾಗ ನಿಜ ಘಟನೆಯನ್ನು ಅಧ್ಯಯನ ಮಾಡಿ ರಚಿಸಿದ್ದಾರೆ. ಅಪಹರಣಕಾರರು ತಮ್ಮನ್ನು ತಾವು ಈ ಹೆಸರುಗಳಿಂದ ಕರೆಸಿಕೊಂಡ ಬಗ್ಗೆ ಸ್ವತಃ ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವೇ ದೃಢೀಕರಿಸಿದೆ.

ಈ ವಿಚಾರದಲ್ಲಿ ಯಾವುದೇ ಅಧ್ಯಯನಗಳನ್ನು ಮಾಡದೆ ಗೋದಿ ಮೀಡಿಯಾಗಳು ಮತ್ತು ಬಲಪಂಥೀಯರು ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ಯಾವುದೇ ಹುರುಳಿಲ್ಲ, ಅದು ತಲೆಬುಡವಿಲ್ಲದ ವಾದ!