ಬೆಂಗಳೂರು – Peepal Media

ವಿಶೇಷ ನಕಲಿ ಪೂಜೆ ಜ್ಯೋತಿಷಿ ಮಾತು ನಂಬಿ – 40 ಲಕ್ಷ ರೂ. ಮೌಲ್ಯದ ಚಿನ್ನ ಕಳೆದುಕೊಂಡ ಮಹಿಳೆ
ಬೆಂಗಳೂರು: ಆರೋಗ್ಯ ಹಾಗೂ ಕುಟುಂಬ ಸಮಸ್ಯೆ ನಿವಾರಿಸುವುದಾಗಿ ನಂಬಿಸಿ ಗೃಹಿಣಿಯೊಬ್ಬರಿಂದ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ 329 ಗ್ರಾಂ ಚಿನ್ನಾಭರಣಗಳನ್ನು ಪಡೆದು ನಕಲಿ ಜ್ಯೋತಿಷಿಯೊಬ್ಬ ವಂಚಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.ಗಿರಿನಗರದ ನಿವಾಸಿ ಜಿ. ಸಿ. ಶಾಂತಮ್ಮ ಎಂಬುವವರೇ ವಂಚನೆಗೊಳಗಾದ ಗೃಹಿಣಿ. ಜ್ಯೋತಿಷಿ ಸೋಗಿನಲ್ಲಿ ಬಂದಿದ್ದ ವೆಂಕಟೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ.ದೀರ್ಘಕಾಲದ ಆರೋಗ್ಯ ಸಮಸ್ಯೆಯೊಂದರ ಚಿಕಿತ್ಸೆಗಾಗಿ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಸ್ಪತ್ರೆಯ ಹೊರಭಾಗದ ಫುಟ್‌ಪಾತ್‌ನಲ್ಲಿ ವೆಂಕಟೇಶ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಆತ ಅವರಿಗೆ ಕೆಲವು ಪರಿಹಾರಗಳನ್ನು ಸೂಚಿಸಿದ್ದ ಎನ್ನಲಾಗಿದೆ.

ನಂತರ ಶಾಂತಮ್ಮ ಅವರ ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ, ತಮ್ಮ ಮಗನಿಗೆ ಇದ್ದ ಕುಡಿತ ಮತ್ತು ಧೂಮಪಾನದ ಚಟ ಬಿಡಿಸಲು ಹಾಗೂ ಮಗಳಿಗೆ ಮದುವೆಯಾಗಲು ಸಹಾಯ ಪಡೆಯುವ ಉದ್ದೇಶದಿಂದ ವೆಂಕಟೇಶ್‌ ಅವರನ್ನು ಹುಡುಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಆದರೆ, ಅಂದು ಆತ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಯ ಸಮೀಪದ ಆಟೋರಿಕ್ಷಾ ಚಾಲಕರೊಬ್ಬರಿಗೆ ತಮ್ಮ ಮೊಬೈಲ್‌ ಸಂಖ್ಯೆ ನೀಡಿ, ಅದನ್ನು ವೆಂಕಟೇಶ್‌ಗೆ ನೀಡುವಂತೆ ಕೇಳಿಕೊಂಡಿದ್ದರು.ವಾರದ ಬಳಿಕ ವೆಂಕಟೇಶ್‌ ಶಾಂತಮ್ಮ ಅವರಿಗೆ ಕರೆ ಮಾಡಿದ್ದಾನೆ. ತಮ್ಮ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಲು ಆತನನ್ನು ಮನೆಗೆ ಆಹ್ವಾನಿಸಿದ್ದರು. ಮನೆಗೆ ಬಂದ ಆತ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ, ಶೀಘ್ರದಲ್ಲೇ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಭರವಸೆ ನೀಡಿದ್ದ ಎನ್ನಲಾಗಿದೆ.ಇದಾದ ಒಂದು ವಾರದ ಬಳಿಕ ಮತ್ತೆ ಮನೆಗೆ ಬಂದ ವೆಂಕಟೇಶ್‌, ಶಾಂತಮ್ಮ ಅವರ ಮಗ ಮತ್ತು ಮಗಳ ಒಳಿತಿಗಾಗಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಬೇಕಿದೆ ಎಂದು ಹೇಳಿದ್ದಾನೆ. ಪೂಜೆ ನೆರವೇರಿಸಲು ಅವರ ಚಿನ್ನಾಭರಣಗಳು ಬೇಕಾಗುತ್ತವೆ ಎಂದು ತಿಳಿಸಿದ್ದಾನೆ.

ಆತನ ಮಾತನ್ನು ನಂಬಿದ ಶಾಂತಮ್ಮ ಅವರು ಹಂತ ಹಂತವಾಗಿ ಒಟ್ಟು 329 ಗ್ರಾಂಗೂ ಅಧಿಕ ಚಿನ್ನಾಭರಣಗಳನ್ನು ಆತನಿಗೆ ನೀಡಿದ್ದಾರೆ. ಸರ, ಬಳೆ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಆತ ಪಡೆದಿದ್ದಾನೆ ಎನ್ನಲಾಗಿದೆ. ಸುಮಾರು ಒಂದು ವರ್ಷದ ಕಾಲ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಮನೆಗೆ ಬರುತ್ತಿದ್ದ ವೆಂಕಟೇಶ್‌, ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣಗಳನ್ನು ಸಂಗ್ರಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.ಆಗಸ್ಟ್‌ 19ರಂದು ಶಾಂತಮ್ಮ ಅವರು ವೆಂಕಟೇಶ್‌ಗೆ ಕರೆ ಮಾಡಿ ವರಮಹಾಲಕ್ಷ್ಮಿ ಪೂಜೆಗಾಗಿ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಅದೇ ರಾತ್ರಿ ವೆಂಕಟೇಶ್‌ನ ಮೊಬೈಲ್‌ನಿಂದ ಅವರಿಗೆ ಗಾಯಗೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಕಳುಹಿಸಲಾಗಿದೆ. ಬಳಿಕ ವೆಂಕಟೇಶ್‌ನ ಸ್ನೇಹಿತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಶಾಂತಮ್ಮ ಅವರಿಗೆ ಕರೆ ಮಾಡಿ, ರಸ್ತೆ ಅಪಘಾತದಲ್ಲಿ ವೆಂಕಟೇಶ್‌ಗೆ ಗಂಭೀರ ತಲೆ ಗಾಯಗಳಾಗಿದ್ದು, ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾನೆ ಎನ್ನಲಾಗಿದೆ.ಮಹಿಳೆ ಗಾಬರಿಯಿಂದ ಈ ವಿಡಿಯೋವನ್ನು ತನ್ನ ಮಗಳಿಗೆ ತೋರಿಸಿದಾಗ, ಅದು ಕೃತಕವಾಗಿ ಸೃಷ್ಟಿಸಲಾದ ನಕಲಿ AI ವಿಡಿಯೋ (Deepfake) ಎಂಬುದು ಪತ್ತೆಯಾಗಿದೆ. ಅಷ್ಟರಲ್ಲೇ ಆರೋಪಿ ವೆಂಕಟೇಶ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಅನುಮಾನಗೊಂಡ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.ಇದೀಗ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4) ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ನಕಲಿ ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.

ಎಫ್‌ಸಿಆರ್‌ಎ ಉಲ್ಲಂಘನೆ: ಅಮೆರಿಕ ಮೂಲದ ಕ್ರಿಶ್ಚಿಯನ್ ಮಿಷನರಿ ಸಂಘಟನೆ, ಬೆಂಗಳೂರಿನ ಮುಖಂಡರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು
ಅಮೆರಿಕ ಮೂಲದ ಕ್ರಿಶ್ಚಿಯನ್ ಮಿಷನರಿ ಸಂಘಟನೆಯಾದ ‘ದಿ ತಿಮೋತಿ ಇನಿಶಿಯೇಟಿವ್’ (ಟಿಟಿಐ), ಭಾರತದಲ್ಲಿನ ಅದರ ಕಾರ್ಯಾಚರಣೆಗಳ ಮುಖ್ಯಸ್ಥ ಜೊನಾಥನ್ ರಾಜನ್, ಹಣಕಾಸು ಮುಖ್ಯಸ್ಥ ಅಜಿತ್ ವರ್ಗೀಸ್ ಮಥಾಯ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು (ಎಫ್‌ಸಿಆರ್‌ಎ) ಉಲ್ಲಂಘಿಸಿ ನವೆಂಬರ್ 2025 ರಿಂದ ಏಪ್ರಿಲ್ 2026ರ ಅವಧಿಯಲ್ಲಿ ಮಿಷನರಿ ಚಟುವಟಿಕೆಗಳಿಗಾಗಿ ಬರೋಬ್ಬರಿ ₹92.55 ಕೋಟಿ ವಿದೇಶಿ ಹಣವನ್ನು ಅಕ್ರಮವಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಜಾರಿ ನಿರ್ದೇಶನಾಲಯ (ಇಡಿ) ಹಂಚಿಕೊಂಡ ತನಿಖಾ ಮಾಹಿತಿಯ ಆಧಾರದ ಮೇಲೆ ಸಿಬಿಐ ಈ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡಿದೆ. ಅಮೆರಿಕದ ‘ಟ್ರೂಯಿಸ್ಟ್ ಬ್ಯಾಂಕ್’ ನೀಡಿರುವ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಆರೋಪಿಗಳು ದೇಶಾದ್ಯಂತ ಇರುವ ವಿವಿಧ ಎಟಿಎಂಗಳಿಂದ ನಗದನ್ನು ಹಿಂಪಡೆದಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.

ಇಡಿ ತನಿಖೆಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಇಂತಹ 1,000ಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಕಾರ್ಡ್‌ಗಳ ಮೂಲಕ ಎಟಿಎಂಗಳಿಂದ ನಗದು ಹಿಂಪಡೆದು, ಆ ಹಣವನ್ನು “ತರಬೇತಿ, ಧರ್ಮಪ್ರಚಾರ ಮತ್ತು ಬಡ ಜನರ ಬ್ರೈನ್‌ವಾಶ್ ಮಾಡಿ ಎಡಪಂಥೀಯ ಉಗ್ರವಾದಕ್ಕೆ ಪ್ರೇರೇಪಿಸಲು” ಬಳಸಲಾಗುತ್ತಿದೆ ಎಂದು ಇಡಿ ಆರೋಪಿಸಿದೆ.

ಇದಲ್ಲದೆ, ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಅಮೆರಿಕದ ಟಿಟಿಐ ಸಂಸ್ಥೆಯು ರಿಮೋಟ್ ಆಕ್ಸೆಸ್ ಮೂಲಕ ತನ್ನ ಸರ್ವರ್‌ಗಳಲ್ಲಿದ್ದ ದತ್ತಾಂಶವನ್ನು ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದೆ ಎಂದು ತನಿಖಾ ಸಂಸ್ಥೆಗಳು ದೂರಿವೆ. ಬೆಂಗಳೂರು ಮೂಲದ ಜೊನಾಥನ್ ರಾಜನ್, ಮೈಕಾ ಮಾರ್ಕ್, ಅಜಿತ್ ವರ್ಗೀಸ್ ಮಥಾಯ್, ಮೈಸೂರಿನ ಸುಪ್ರೀಂ ಜಾಯ್, ಛತ್ತೀಸ್‌ಗಢದ ವರ್ಗೀಸ್ ಚಾಕೊ ಮತ್ತು ಅಸ್ಸಾಂನ ಬಬ್ಲು ಕುರ್ಮಿ ಸೇರಿದಂತೆ ಹಲವರ ಹೆಸರುಗಳು ಈ ಜಂಟಿ ತನಿಖೆಯಲ್ಲಿ ಬಹಿರಂಗಗೊಂಡಿವೆ.

ಯುವತಿ ಕಿರುಚಾಟ ಕೇಳಿ ಬೆನ್ನಟ್ಟಿದ ಸಾರ್ವಜನಿಕರು; ಬಿಹಾರಿ ಮೂಲದ ಯುವಕರು ಸೆರೆಗೆ
ಬೆಂಗಳೂರು: ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ಯಲಾಗುತ್ತಿದೆ ಎಂಬ ಅನುಮಾನದಿಂದ ಸಾರ್ವಜನಿಕರು ಕಾರನ್ನು ಬೆನ್ನಟ್ಟಿ, ಅದರಲ್ಲಿದ್ದ ಕೆಲ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಂಡೈ ವೆನ್ಯೂ ಕಾರಿನಲ್ಲಿ ದಾಸರಹಳ್ಳಿ ಕಡೆಯಿಂದ ಯುವತಿಯನ್ನು ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿದ್ದ ಯುವತಿ ಕಿರುಚಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಅನುಮಾನಗೊಂಡು ವಾಹನವನ್ನು ತಡೆಯಲು ಮುಂದಾಗಿದ್ದಾರೆ.

ಸಾರ್ವಜನಿಕರು ಹಿಂಬಾಲಿಸುತ್ತಿದ್ದಂತೆ ಕಾರಿನಲ್ಲಿದ್ದವರು ವೇಗವಾಗಿ ವಾಹನ ಚಲಾಯಿಸಿಕೊಂಡು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಾರು ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ, ಕಾರನ್ನು ತಡೆಯಲು ಮುಂದಾದ ಸಾರ್ವಜನಿಕರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಮಾರಕಾಸ್ತ್ರ ಬಳಸಿ ಹಲ್ಲೆಗೆ ಮುಂದಾಗಿದ್ದರು ಎನ್ನುವ ಮಾಹಿತಿಯೂ ಪೊಲೀಸರ ಪರಿಶೀಲನೆಯಲ್ಲಿದೆ.

ಘಟನೆಯಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು ಕಾರನ್ನು ಬೆನ್ನಟ್ಟಿ ಆರೋಪಿಗಳನ್ನು ಹಿಡಿದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಹಿತಿ ಪಡೆದ ಮಾಗಡಿ ರಸ್ತೆ ಹಾಗೂ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಯುವತಿ ಹಾಗೂ ಕಾರಿನಲ್ಲಿದ್ದ ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಯಂತೆ ಆರೋಪಿಗಳು ಬಿಹಾರ ಮೂಲದವರು ಎನ್ನಲಾಗಿದ್ದು, ವಿಜಯನಗರ ಎಸಿಪಿ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.

ಪ್ರತ್ಯಕ್ಷದರ್ಶಿಗಳಾದ ದೀಪಕ್ ಮತ್ತು ಕಿರಣ್ ಅವರು, ಯುವತಿಯನ್ನು ಕಟ್ಟಡವೊಂದರಿಂದ ಕರೆದುಕೊಂಡು ಬರುತ್ತಿದ್ದಾಗ ಆಕೆ ಕಿರುಚಾಡುತ್ತಿರುವುದನ್ನು ಗಮನಿಸಿ ಪ್ರಶ್ನಿಸಲು ಮುಂದಾಗಿದ್ದಾಗಿ ತಿಳಿಸಿದ್ದಾರೆ. ಬಳಿಕ ಕಾರಿನಲ್ಲಿದ್ದವರು ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ತಾವು ಹಿಂಬಾಲಿಸಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಗಿ ಹೇಳಿದ್ದಾರೆ.

ಇನ್ನು ಯುವತಿ ಹಾಗೂ ಆರೋಪಿಗಳ ನಡುವಿನ ಸಂಬಂಧವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಯುವತಿಯನ್ನು ಅಪಹರಿಸಲಾಗಿತ್ತೇ ಅಥವಾ ಬೇರೆ ಕಾರಣಕ್ಕಾಗಿ ಆಕೆಯನ್ನು ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಘಟನೆಯ ನಿಖರ ಹಿನ್ನೆಲೆ ತಿಳಿದುಬರಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ – ಮಳೆಗಾಲದಲ್ಲೂ ಬೇಸಿಗೆ
ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯ (Monsoon) ವಾತಾವರಣ ಮುಂದುವರಿದು, ಅಕ್ಟೋಬರ್ ವೇಳೆಗೆ ಚಳಿಗಾಲದ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದ್ದು, ಸೆಪ್ಟೆಂಬರ್‌ನಲ್ಲೇ ಬಿಸಿಲಿನ ತೀವ್ರತೆ ಬೆಸೆಗೆಯಷ್ಟೇ (Summer) ಹೆಚ್ಚಾಗಿದೆ. ಬೆಂಗಳೂರಿನಲ್ಲೂ 75 ವರ್ಷಗಳ ಬಳಿಕ ಸೆಪ್ಟೆಂಬರ್ ಅವಧಿಯಲ್ಲಿ ದಾಖಲೆ ಮಟ್ಟದ ಉಷ್ಣಾಂಶ ವರದಿಯಾಗಿರುವ ಬೆನ್ನಲ್ಲೇ ಉತ್ತರ ಮತ್ತು ಮಧ್ಯ ಕರ್ನಾಟಕದ ಹಲವು ಭಾಗಗಳಲ್ಲೂ ಗರಿಷ್ಠ ತಾಪಮಾನ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯ ತಾಪಮಾನ ಅಂಕಿ-ಅಂಶಗಳನ್ನು ಗಮನಿಸಿದರೆ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳು ಅತ್ಯಧಿಕ ಉಷ್ಣಾಂಶ ದಾಖಲಿಸಿರುವ ಪ್ರದೇಶಗಳಾಗಿವೆ. ರಾಯಚೂರಿನಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.

ಇನ್ನು ಯಾದಗಿರಿಯಲ್ಲಿ 36.7 ಡಿಗ್ರಿ, ಬಳ್ಳಾರಿಯಲ್ಲಿ 36.6 ಡಿಗ್ರಿ, ಕೊಪ್ಪಳದಲ್ಲಿ 36.3 ಡಿಗ್ರಿ ಹಾಗೂ ವಿಜಯಪುರದಲ್ಲಿ 36.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಾಗಲಕೋಟೆಯಲ್ಲೂ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದೇ ಅವಧಿಯಲ್ಲಿ ತುಮಕೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 35.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗದಗದಲ್ಲಿ 35.6 ಡಿಗ್ರಿ ಹಾಗೂ ಮಂಡ್ಯದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 35.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಚಿತ್ರದುರ್ಗದಲ್ಲಿ 35.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ದಾವಣಗೆರೆ ಮತ್ತು ಹಾವೇರಿಯಲ್ಲಿ ತಲಾ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 35.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ತಾಪಮಾನ ಗಮನಾರ್ಹ ಮಟ್ಟದಲ್ಲಿದೆ. ಬೆಂಗಳೂರು ದಕ್ಷಿಣದಲ್ಲಿ 34.6 ಡಿಗ್ರಿ, ದಕ್ಷಿಣ ಕನ್ನಡದಲ್ಲಿ 34.4 ಡಿಗ್ರಿ, ಬೆಂಗಳೂರು ನಗರ ಮತ್ತು ಹಾಸನದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಳಗಾವಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 34.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

ಶಿವಮೊಗ್ಗದಲ್ಲಿ 33.2 ಡಿಗ್ರಿ ಸೆಲ್ಸಿಯಸ್, ಉಡುಪಿಯಲ್ಲಿ 33.9 ಡಿಗ್ರಿ ಹಾಗೂ ಉತ್ತರ ಕನ್ನಡದಲ್ಲಿ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೋಲಾರದಲ್ಲಿ 34.2 ಡಿಗ್ರಿ ಮತ್ತು ಮೈಸೂರಿನಲ್ಲಿ 34.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಮಲೆನಾಡು ಭಾಗದಲ್ಲಿಯೂ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲೆಯೇ ಇದೆ. ಕೊಡಗಿನಲ್ಲಿ 32.3 ಡಿಗ್ರಿ ಹಾಗೂ ಚಿಕ್ಕಮಗಳೂರಿನಲ್ಲಿ 32.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಒಟ್ಟಾರೆ, ಸೆಪ್ಟೆಂಬರ್‌ನಲ್ಲಿ ಮಳೆಯ ನಿರೀಕ್ಷೆಯ ನಡುವೆಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದೆ.

ಗಾಳಿಪಟ ತರಲು ಹೋಗಿ ಬಾಲಕ ಹಸುನೀಗಿದ ಪ್ರಕರಣ – ಹೆಸ್ಕಾಂಗೆ 10.52 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು: ಹೈಟೆನ್ಸನ್ ವಿದ್ಯುತ್ ಲೈನ್‌ಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಹೋಗಿ ವಿದ್ಯುತ್ ಪ್ರವಹಿಸಿ (Electric shock)‌ ಮೃತಪಟ್ಟ 11 ವರ್ಷದ ಬಾಲಕನ ಕುಟುಂಬಕ್ಕೆ 10.52 ಲಕ್ಷ ರೂ. ಪರಿಹಾರ ಒದಗಿಸುವಂತೆ ಹುಬ್ಬಳ್ಳಿ (Hubli) ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಹೈಕೋರ್ಟ್ (High Court) ನಿರ್ದೇಶನ ನೀಡಿದೆ.ಬೆಳಗಾವಿ ಜಿಲ್ಲೆಯ ಮಾರಿಹಾಳದ ನಿವಾಸಿಗಳಾದ ಮೃತ ಬಾಲಕನ ತಂದೆ ಗುಡದಪ್ಪ ರುದ್ರಪ್ಪ ತಳವಾರ ಹಾಗೂ ತಾಯಿ ರೇಣುಕಾ ಜಿ. ತಳವಾರ ಹೂಡಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ನೇತೃತ್ವದ ಧಾರವಾಡ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.ಈ ಹಿಂದೆ 2015ರಲ್ಲಿ ‘ಬಾಲಕನ ಸ್ವಯಂ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ’ ಎಂಬ ನೆಲೆಯಲ್ಲಿ ಬೆಳಗಾವಿ ಲೋಕ ಅದಾಲತ್ ಪರಿಹಾರ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಕಂಪನಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ; ಹೈಕೋರ್ಟ್
ಲೋಕ ಅದಾಲತ್‌ನ ಹಿಂದಿನ ಆದೇಶವನ್ನು ತಳ್ಳಿಹಾಕಿರುವ ನ್ಯಾಯಾಲಯ, ಬಾಲಕನೇ ಖುದ್ದು ವಿದ್ಯುತ್ ಕಂಬವನ್ನೇರಿದ್ದ ಎಂಬ ಕಾರಣವನ್ನೊಡ್ಡಿ ಪವರ್ ಕಾರ್ಪೊರೇಷನ್ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.ಸಂಪೂರ್ಣ ಜವಾಬ್ದಾರಿಯ ಕಠಿಣ ತತ್ವದ ಅಡಿ ಬಾಲಕನ ಅಕಾಲಿಕ ಸಾವಿಗೆ ಹೆಸ್ಕಾಂ ಸಂಸ್ಥೆಯೇ ಹಣಕಾಸಿನ ಪರಿಹಾರ ನೀಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಮಕ್ಕಳಲ್ಲಿ ಗಾಳಿಪಟ ಹಾರಿಸುವ ಮತ್ತು ಅದರ ಬಗ್ಗೆ ಒಲವು ಹೊಂದುವುದು ಅತ್ಯಂತ ಸಹಜ. ತಂತಿಯಲ್ಲಿ ಸಿಲುಕಿದ ಗಾಳಿಪಟವನ್ನು ಪಡೆಯಲು ಹೋದ ಬಾಲಕ ಹೆಸ್ಕಾಂ ಒಡೆತನದ ಹೈ-ವೋಲ್ವೇಜ್ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಪ್ರಾಣಬಿಟ್ಟಿರುವುದು ಸ್ಪಷ್ಟವಾದ ಅಂಶವಾಗಿದೆ. ಹೀಗಾಗಿ, ಆ ಬಾಲಕ ಕಂಬವನ್ನು ಹತ್ತಿದ್ದನೇ ಅಥವಾ ಆಕಸ್ಮಿಕವಾಗಿ ಸ್ಪರ್ಶಿಸಿದ್ದನೇ ಎಂಬ ಅಂಶಗಳು ಪರಿಹಾರ ನಿಗದಿಪಡಿಸುವ ಸಂದರ್ಭದಲ್ಲಿ ಅಷ್ಟು ಪ್ರಮುಖವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಘಟನೆಯ ಹಿನ್ನೆಲೆ
2012ರ ಸೆಪ್ಟೆಂಬರ್ 11ರಂದು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ 11 ವರ್ಷದ ಬಾಲಕ ರವಿ ತಳವಾರ, ಹೈಟೆನ್ಸನ್ ವಿದ್ಯುತ್ ತಂತಿಗಳ ಮಧ್ಯೆ ಸಿಲುಕಿದ್ದ ಗಾಳಿಪಟವನ್ನು ಕೈಗೆಳೆದುಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದನು.ಈ ದುರ್ಘಟನೆ ಕುರಿತಂತೆ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕೃತ ಎಫ್‌ಐಆರ್ ದಾಖಲಾಗಿತ್ತು. ಮಗನನ್ನು ಕಳೆದುಕೊಂಡ ಪೋಷಕರು ಪರಿಹಾರಕ್ಕಾಗಿ ಹೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇಲಾಖೆಯಿಂದ ಯಾವುದೇ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಳಗಾವಿ ಲೋಕ ಅದಾಲತ್ ಕದ ತಟ್ಟಿದ್ದರು. ಅಲ್ಲಿಯೂ ಸಹ ಅರ್ಜಿ ತಿರಸ್ಕೃತಗೊಂಡ ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಬಿಜೆಪಿಯವರು ರಣಹದ್ದುಗಳು, ಕೋಮುಗಲಭೆ ಆಗುವುದನ್ನೇ ಕಾಯುತ್ತಾರೆ – ಸಚಿವ ಯತೀಂದ್ರ
ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಮೈಸೂರು ಜಿಲ್ಲೆ ಟಿ. ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ್ ಅವರು ಮಸೀದಿ ಮುಂದೆ ಪಟಾಕಿ ಸಿಡಿಸಿದ್ರೆ, ಗ್ರಹಚಾರ ಬಿಡಿಸ್ತೇನೆ ಎಂದು ಎಚ್ಚರಿಕೆ ನೀಡಿದ್ದು, ಆಡಳಿರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ಇನ್ಸ್​​ಪೆಕ್ಟರ್ ಧನಂಜಯ್ ಪರ ನಿಂತ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಪಾಪ ಇನ್ಸ್​ಪೆಕ್ಟರ್ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ಅವರು ಬುದ್ಧಿವಾದ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

ಬುದ್ಧಿವಾದ ಹೇಳುವ ಧಾಟಿ ಸ್ವಲ್ಪ ಬದಲಾಗಿದೆ. ಅದನ್ನು ಬಿಟ್ಟರೆ ಧನಂಜಯ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದಿರುವ ಇನ್ಸ್​​ಪೆಕ್ಟರ್ ವಿರುದ್ಧ ಯಾಕೆ ಕ್ರಮಕೈಗೊಳ್ಳಬೇಕು? ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅವರಿಗೆ ಬೇಕಾದಂತಹ ರಸ್ತೆಯಲ್ಲಿ ಹೋಗಲು ಬಿಡಲು ಆಗುತ್ತಾ? ಸ್ಥಳೀಯ ಆಡಳಿತದ ಅನುಮತಿ ಪಡೆದು ಮೆರವಣಿಗೆ ಮಾಡಬಹುದು. ಅನುಮತಿ ಪಡೆಯದೆ ಏನಾದ್ರೂ ಸಮಸ್ಯೆಯಾದರೆ ಯಾರು ಹೊಣೆ? ಏನಾದರೂ ಹೆಚ್ಚುಕಡಿಮೆಯಾದರೆ? ಅದನ್ನೇ ಪಿಐ ಧನಂಜಯ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಟಿ.ನರಸೀಪುರ ಇನ್ಸ್​​ಪೆಕ್ಟರ್ ಧನಂಜಯ ಹೇಳಿರುವುದು ಸರಿಯಾಗೇ ಇದೆ ಎಂದರು.

ಬಿಜೆಪಿಯವರು ರಣಹದ್ದುಗಳು. ಕೋಮುಗಲಭೆ ಆಗುವುದನ್ನೇ ಕಾಯುತ್ತಿರುತ್ತಾರೆ. ಕೋಮುಗಲಭೆ ಆಗಬೇಕು, ಯಾರಾದ್ರೂ ಸಾಯಬೇಕೆಂದು ಬಯಸುತ್ತಾರೆ. ಸಾವಿನ ಲಾಭ ಪಡೆಯಬೇಕು ಎಂಬುದು ಬಿಜೆಪಿಯವರ ಪ್ಲ್ಯಾನ್. ಎಲ್ಲೇ ಕೋಮುಗಲಭೆ ಆದರೂ ಬಿಜೆಪಿಗೆ ಚುನಾವಣಾ ಲಾಭವಾಗಿದೆ. ಹೀಗಾಗಿ ಬಿಜೆಪಿಯವರು ಕೋಮು ಗಲಭೆ ಬಗ್ಗೆ ಆಸಕ್ತಿ ವಹಿಸುತ್ತಾರೆ. ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಅದೇ ಕೆಲಸಕ್ಕೆ ಬಂದಿದ್ದಾರೆ. ಪ್ರತಿಭಟನಾ ಮೆರವಣಿಗೆ ಸೇರಿದಂತೆ ಏನಾದರೂ ಮಾಡಲಿ ಬಿಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಸ ವಿಲೇವಾರಿ ನಿಯಮ ಉಲ್ಲಂಘನೆ: ಪಿವಿಆರ್ ಹಾಗೂ ಫೋರಂ ಮಾಲ್‌ಗೆ ₹1.25 ಲಕ್ಷ ದಂಡ ವಿಧಿಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿ, ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಸುತ್ತಿದ್ದ ಎರಡು ಪ್ರಮುಖ ವಾಣಿಜ್ಯ ಸಂಸ್ಥೆಗಳಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಬರೋಬ್ಬರಿ ₹1.25 ಲಕ್ಷ ದಂಡ ವಿಧಿಸಿದೆ.

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಕಸಂದ್ರ ವಾರ್ಡ್‌ನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಪಿವಿಆರ್ ಸಿನೆಮಾಸ್‌ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸದೆ ಇರುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿರುವುದು ಪತ್ತೆಯಾಗಿದೆ. ನಿಯಮ ಉಲ್ಲಂಘನೆಗಾಗಿ ಸ್ಥಳದಲ್ಲೇ ₹75,000 ದಂಡ ವಿಧಿಸಲಾಗಿದ್ದು, ಇದರಲ್ಲಿ ಕಸ ವಿಂಗಡಿಸದಿದ್ದಕ್ಕೆ ₹50,000 ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ₹25,000 ದಂಡ ಸೇರಿದೆ.

ಮತ್ತೊಂದು ಪ್ರಕರಣದಲ್ಲಿ, ಕನಕಪುರ ಮುಖ್ಯ ರಸ್ತೆಯ ಉತ್ತರಹಳ್ಳಿ ವ್ಯಾಪ್ತಿಯ ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನಲ್ಲಿರುವ ಶಾಪ್ ವೆಲ್ ಸೂಪರ್‌ಮಾರ್ಕೆಟ್ ಬಳಿ ಒಳಚರಂಡಿ ಸಂಸ್ಕರಣಾ ಘಟಕದ (ಎಸ್‌ಟಿಪಿ) ತ್ಯಾಜ್ಯವನ್ನು ಎಸೆದಿದ್ದಕ್ಕಾಗಿ ಫೋರಂ ಮಾಲ್‌ಗೆ ದಂಡ ವಿಧಿಸಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಈ ತ್ಯಾಜ್ಯವು ಮಾಲ್‌ನಿಂದಲೇ ಬಂದಿರುವುದನ್ನು ದೃಢಪಡಿಸಿಕೊಂಡು ತಕ್ಷಣವೇ ₹50,839 ದಂಡ ವಿಧಿಸಿ ವಸೂಲಿ ಮಾಡಿದ್ದಾರೆ.

ನಗರದಲ್ಲಿರುವ ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು, ಚಿತ್ರಮಂದಿರಗಳು ಮತ್ತು ಹೋಟೆಲ್‌ಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ.

ದೇಶದ ಮೊದಲ ಭಯೋತ್ಪಾದಕ ಗೋಡ್ಸೆಯನ್ನು ಆರಾಧಿಸುವ ಎಬಿವಿಪಿಗೆ ರಾಷ್ಟ್ರವಾದಿ ಉಮರ್ ಖಾಲಿದ್ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ: ಬಿ.ಕೆ. ಹರಿಪ್ರಸಾದ್
ಹೋರಾಟಗಾರ ಉಮರ್ ಖಾಲಿದ್ ಒಬ್ಬ ‘ರಾಷ್ಟ್ರವಾದಿ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಂಗಳವಾರ ಬಣ್ಣಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ‘ಲಾ ಆಂಡ್ ಸೊಸೈಟಿ ಕಮಿಟಿ’ಯು ಸೆಪ್ಟೆಂಬರ್ 14 ರಂದು ಆಯೋಜಿಸಿದ್ದ, ಪ್ರಸ್ತುತ ಮುಂದೂಡಲಾಗಿರುವ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆರ್‌ಎಸ್‌ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರೋಧಿಸಿದ್ದಕ್ಕೆ ಹರಿಪ್ರಸಾದ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಉಮರ್ ಖಾಲಿದ್ ಬಗ್ಗೆ ಮಾತನಾಡಲು ಎಬಿವಿಪಿಗೆ ಯಾವುದೇ ಹಕ್ಕಿಲ್ಲ ಎಂದಿರುವ ಹರಿಪ್ರಸಾದ್, “ದೇಶದ ಮೊದಲ ಭಯೋತ್ಪಾದಕ ಹಾಗೂ ದೇಶದ್ರೋಹಿ ನಾಥೂರಾಂ ಗೋಡ್ಸೆಯನ್ನು ಆರಾಧಿಸುವ ಎಬಿವಿಪಿಗೆ ಉಮರ್ ಖಾಲಿದ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ. ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಯ ಪಿತೂರಿ ಆರೋಪದಡಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಉಮರ್ ಖಾಲಿದ್ ಜೈಲುಪಾಲಾಗಿ ಆರು ವರ್ಷ ಹಾಗೂ ಶರ್ಜೀಲ್ ಇಮಾಮ್ ಜೈಲುಪಾಲಾಗಿ ಆರೂವರೆ ವರ್ಷ ಕಳೆದ ಹಿನ್ನೆಲೆಯಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಎನ್‌ಎಲ್‌ಎಸ್‌ಐಯು ಸಮಿತಿ ಆಯೋಜಿಸಿತ್ತು.

ಹರಿಪ್ರಸಾದ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಬಿವಿಪಿ, ಯಾವ ಆಧಾರದ ಮೇಲೆ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆಯಲಾಗುತ್ತಿದೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ತಿರುಗೇಟು ನೀಡಿದೆ. ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಿ ಭದ್ರತಾ ಸಿಬ್ಬಂದಿಯ ರಕ್ತ ಹರಿಸಿದ ಭಯೋತ್ಪಾದಕ ಅಫ್ಜಲ್ ಗುರುವನ್ನು ಬಹಿರಂಗವಾಗಿ ಬೆಂಬಲಿಸಿದ ವ್ಯಕ್ತಿಯನ್ನು ಕಾಂಗ್ರೆಸ್ ಹೇಗೆ ರಾಷ್ಟ್ರವಾದಿ ಎಂದು ಕರೆಯುತ್ತದೆ ಎಂದು ಎಬಿವಿಪಿ ಬೆಂಗಳೂರು ಕಾರ್ಯದರ್ಶಿ ಅಭಿನಂದನ್ ಮಿರ್ಜಿ ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಎನ್‌ಎಲ್‌ಎಸ್‌ಐಯುನಲ್ಲಿ ಯೋಜಿಸಲಾಗಿದ್ದ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಹಾಗೂ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಲ್ಹಾದ್ ಜೋಶಿ ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರಿಗೆ ಪತ್ರ ಬರೆದಿದೆ.

‘Daring’ ಗೃಹಮಂತ್ರಿಗಳೇ — ದಲಿತರ ಕೊಲೆ, ಅತ್ಯಾಚಾರದ ಬಗ್ಗೆ ಮೌನವೇಕೆ?
– ಹರಿರಾಮ್. ಎ –
ವಕೀಲರು ಹಾಗೂ ರಾಜ್ಯಾಧ್ಯಕ್ಷರು – BPS

ರಾಜ್ಯದ ಗೃಹಮಂತ್ರಿಯ ಸ್ಥಾನ ಕೇವಲ ಪೊಲೀಸ್ ಇಲಾಖೆಯನ್ನು ನಿರ್ವಹಿಸುವ ಆಡಳಿತಾತ್ಮಕ ಹುದ್ದೆಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಜೀವ, ಗೌರವ ಮತ್ತು ಸುರಕ್ಷತೆಯ ಬಗ್ಗೆ ಸರ್ಕಾರ ಹೊಂದಿರುವ ಹೊಣೆಗಾರಿಕೆಯ ಪ್ರತೀಕ. ವಿಶೇಷವಾಗಿ ದಲಿತರು, ಮಹಿಳೆಯರು ಮತ್ತು ದುರ್ಬಲ ಸಮುದಾಯಗಳ ಮೇಲೆ ಕೊಲೆ, ಅತ್ಯಾಚಾರ, ಹಲ್ಲೆ ಹಾಗೂ ಜಾತಿ ದೌರ್ಜನ್ಯದಂತಹ ಗಂಭೀರ ಘಟನೆಗಳು ವರದಿಯಾದಾಗ ಗೃಹಮಂತ್ರಿಯಿಂದ ಜನರು ನಿರೀಕ್ಷಿಸುವುದು ಸ್ಪಷ್ಟವಾದ ಪ್ರತಿಕ್ರಿಯೆ ಮತ್ತು ಕಠಿಣ ಕಾನೂನು ಕ್ರಮ.

ಆದರೆ ಇಂದು ಕೇಳಬೇಕಾದ ಪ್ರಶ್ನೆ ಏನೆಂದರೆ — ದಲಿತರ ಮೇಲಿನ ದೌರ್ಜನ್ಯಗಳ ವಿಚಾರದಲ್ಲಿ ಸರ್ಕಾರದ ಧ್ವನಿ ಅಷ್ಟೇ ಗಟ್ಟಿಯಾಗಿ ಕೇಳಿಸುತ್ತಿದೆಯೇ?

ರಾಜಕೀಯ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ RSS ಕುರಿತು ಮಾತನಾಡುವುದಕ್ಕೆ ಗೃಹಮಂತ್ರಿಗೆ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವಿದೆ. RSS ಪರವಾಗಿರಲಿ, ವಿರೋಧವಾಗಿರಲಿ, ಅದರ ಕುರಿತು ಚರ್ಚಿಸುವುದೂ ರಾಜಕೀಯದ ಭಾಗವೇ. ಆದರೆ ಗೃಹಮಂತ್ರಿಯ ಮೊದಲ ಆದ್ಯತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನಾಗರಿಕರ ರಕ್ಷಣೆಯಾಗಿರಬೇಕು.

RSS ಕುರಿತು ಮಾತನಾಡಲು ಸಮಯವಿದೆ; ಆದರೆ ದಲಿತರ ಮೇಲಿನ ಕೊಲೆ, ಅತ್ಯಾಚಾರ ಮತ್ತು ಜಾತಿ ದೌರ್ಜನ್ಯಗಳ ಕುರಿತು ಅದೇ ತೀವ್ರತೆಯಲ್ಲಿ ಮಾತನಾಡಲು ಸಮಯವಿಲ್ಲವೇ? ಎಂಬ ಪ್ರಶ್ನೆಯನ್ನು ದಲಿತ ಸಮುದಾಯ ಕೇಳಿದರೆ ಅದಕ್ಕೆ ಸರ್ಕಾರ ಉತ್ತರಿಸಲೇಬೇಕು.

ದಲಿತರ ಮೇಲಿನ ಅಪರಾಧಗಳನ್ನು ಕೇವಲ ಅಂಕಿ-ಅಂಶಗಳಾಗಿ ನೋಡಬಾರದು. ಪ್ರತಿಯೊಂದು ಕೊಲೆಯ ಹಿಂದೆ ಒಂದು ಕುಟುಂಬದ ಬದುಕಿದೆ. ಪ್ರತಿಯೊಂದು ಅತ್ಯಾಚಾರದ ಹಿಂದೆ ಒಬ್ಬ ಮಹಿಳೆಯ ಘನತೆಯ ಮೇಲೆ ನಡೆದ ಕ್ರೂರ ದಾಳಿಯಿದೆ. ಪ್ರತಿಯೊಂದು ಜಾತಿ ದೌರ್ಜನ್ಯದ ಹಿಂದೆ ಸಂವಿಧಾನ ನೀಡಿರುವ ಸಮಾನತೆಯ ಭರವಸೆಗೆ ಎದುರಾದ ಸವಾಲಿದೆ.

ಅಂತಹ ಪ್ರಕರಣಗಳಲ್ಲಿ FIR ದಾಖಲಿಸುವುದಷ್ಟೇ ಸರ್ಕಾರದ ಕರ್ತವ್ಯ ಮುಗಿದಂತಾಗುವುದಿಲ್ಲ. ತನಿಖೆ ಎಷ್ಟು ವೇಗವಾಗಿ ನಡೆಯುತ್ತಿದೆ? ಆರೋಪಿಗಳನ್ನು ಬಂಧಿಸಲಾಗಿದೆಯೇ? SC/ST (Prevention of Atrocities) Act‌ನ ಸೂಕ್ತ ಕಲಂಗಳನ್ನು ಅನ್ವಯಿಸಲಾಗಿದೆಯೇ? ಸಂತ್ರಸ್ತರಿಗೆ ಪರಿಹಾರ ಮತ್ತು ರಕ್ಷಣೆ ದೊರೆತಿದೆಯೇ? ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ಯಾವ ಹಂತದಲ್ಲಿದೆ? ಸಾಕ್ಷಿದಾರರಿಗೆ ರಕ್ಷಣೆ ಇದೆಯೇ? ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ತನಿಖೆಯ ಗುಣಮಟ್ಟವನ್ನು ಖಚಿತಪಡಿಸಲಾಗಿದೆಯೇ? — ಇವುಗಳಿಗೆ ಸರ್ಕಾರ ಉತ್ತರಿಸಬೇಕು.

‘Daring’ ಎನ್ನುವುದು ಮಾತಿನಲ್ಲಲ್ಲ, ಕ್ರಮದಲ್ಲಿ ಕಾಣಬೇಕು

ರಾಜಕೀಯ ವೇದಿಕೆಯಲ್ಲಿ ಆಕ್ರಮಣಕಾರಿಯಾಗಿ ಮಾತನಾಡುವುದು ಧೈರ್ಯವಲ್ಲ. ಅಧಿಕಾರದಲ್ಲಿರುವಾಗ ಅನ್ಯಾಯಕ್ಕೊಳಗಾದವರ ಪರವಾಗಿ ವ್ಯವಸ್ಥೆಯನ್ನು ಚಲಿಸುವಂತೆ ಮಾಡುವುದೇ ನಿಜವಾದ ಆಡಳಿತಾತ್ಮಕ ಧೈರ್ಯ.

ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಪೊಲೀಸ್ ವ್ಯವಸ್ಥೆ ತಕ್ಷಣ ಸ್ಪಂದಿಸುವಂತೆ ಮಾಡುವುದು ಧೈರ್ಯ.
ಜಾತಿಯ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಅಥವಾ ಕೊಲೆ ನಡೆದಾಗ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸಿಸುವುದು ಧೈರ್ಯ. ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಧೈರ್ಯ. ಸಂತ್ರಸ್ತ ಕುಟುಂಬದ ಮನೆಗೆ ಹೋಗಿ, “ನಿಮಗೆ ನ್ಯಾಯ ಕೊಡಿಸುವುದು ಸರ್ಕಾರದ ಹೊಣೆ” ಎಂದು ಹೇಳಿ ಅದನ್ನು ಕಾರ್ಯರೂಪಕ್ಕೆ ತರುವುದು ಧೈರ್ಯ. ಇದೇ ‘Daring Home Minister’ ಎಂಬ ಪದಕ್ಕೆ ಅರ್ಥ ನೀಡುತ್ತದೆ.

ದಲಿತರ ಸುರಕ್ಷತೆ ರಾಜಕೀಯ ವಿಷಯವಲ್ಲ — ಸಂವಿಧಾನಾತ್ಮಕ ಹೊಣೆಗಾರಿಕೆ

ದಲಿತರ ಮೇಲಿನ ದೌರ್ಜನ್ಯಗಳ ಪ್ರಶ್ನೆಯನ್ನು ಕಾಂಗ್ರೆಸ್–ಬಿಜೆಪಿ ಅಥವಾ ಎಡ–ಬಲ ರಾಜಕೀಯದ ಕನ್ನಡಕದಲ್ಲಿ ನೋಡಬಾರದು. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಗೃಹ ಇಲಾಖೆಯ ಕರ್ತವ್ಯ ಒಂದೇ — ಕಾನೂನಿನ ಮುಂದೆ ಎಲ್ಲರಿಗೂ ಸಮಾನ ರಕ್ಷಣೆ.

ದಲಿತರ ಮತ ಬೇಕಾದಾಗ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಂವಿಧಾನದ ಕುರಿತು ಭಾಷಣ ಮಾಡುವುದಷ್ಟೇ ಸಾಮಾಜಿಕ ನ್ಯಾಯವಲ್ಲ. ದಲಿತನ ಜೀವ ಅಪಾಯದಲ್ಲಿದ್ದಾಗ ಆ ಸಂವಿಧಾನದ ರಕ್ಷಣೆಯನ್ನು ಅವನ ಮನೆಬಾಗಿಲಿಗೆ ತಲುಪಿಸುವುದೇ ನಿಜವಾದ ಅಂಬೇಡ್ಕರ್ ಗೌರವ.

ಆದ್ದರಿಂದ ಗೃಹಮಂತ್ರಿಗಳಿಗೆ ನಮ್ಮ ಪ್ರಶ್ನೆ ಸರಳ:

RSS ಬಗ್ಗೆ ಮಾತನಾಡಿ — ಅದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಮೊದಲು ನಿಮ್ಮ ಇಲಾಖೆಯ ಮೂಲಭೂತ ಹೊಣೆಗಾರಿಕೆಯ ಬಗ್ಗೆ ಮಾತನಾಡಿ. ದಲಿತರ ಕೊಲೆಗಳ ಬಗ್ಗೆ ಮಾತನಾಡಿ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಮಾತನಾಡಿ. ಜಾತಿ ದೌರ್ಜನ್ಯಗಳ ಬಗ್ಗೆ ಮಾತನಾಡಿ. ತನಿಖೆ ಮತ್ತು ಶಿಕ್ಷೆಯ ಬಗ್ಗೆ ಮಾತನಾಡಿ.

ಏಕೆಂದರೆ ಗೃಹಮಂತ್ರಿಯ ಮೌನವನ್ನು ಸಂತ್ರಸ್ತರು ರಾಜಕೀಯ ತಟಸ್ಥತೆಯೆಂದು ನೋಡುವುದಿಲ್ಲ; ಅದು ಸರ್ಕಾರ ತಮ್ಮ ನೋವಿಗೆ ಎಷ್ಟು ಮಹತ್ವ ನೀಡುತ್ತಿದೆ ಎಂಬ ಪ್ರಶ್ನೆಯಾಗಿ ಅವರಿಗೆ ಕಾಣುತ್ತದೆ. ಸಂವಿಧಾನದ ಮುಂದೆ RSS ಕೂಡ ಒಂದು ವಿಷಯ; ಆದರೆ ನಾಗರಿಕನ ಜೀವ ಮತ್ತು ಗೌರವ ಸರ್ಕಾರದ ಮೊದಲ ಕರ್ತವ್ಯ.

‘Daring’ ಎಂಬ ವಿಶೇಷಣ ಭಾಷಣದಿಂದ ಸಿಗುವುದಿಲ್ಲ.
ಅನ್ಯಾಯದ ವಿರುದ್ಧ ಅಧಿಕಾರವನ್ನು ಬಳಸಿದಾಗ ಮಾತ್ರ ಅದು ಸಾಬೀತಾಗುತ್ತದೆ. ದಲಿತರ ಜೀವದ ಪ್ರಶ್ನೆ ಬಂದಾಗ ಮೌನವೇಕೆ, ಗೃಹಮಂತ್ರಿಗಳೇ?

ರೋಗಿಗಳ ಅಸಹಾಯಕತೆ ಬಂಡವಾಳವಾಗಿಸಿಕೊಳ್ಳುವ ನಕಲಿ ಔಷಧ ತಯಾರಕರ ವಿರುದ್ಧ ಕಠಿಣ ಕ್ರಮ: ಸಚಿವ ಯು.ಟಿ. ಖಾದರ್ ಎಚ್ಚರಿಕೆ
ರೋಗಿಗಳ ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡು ಲಾಭ ಗಳಿಸುವ ನಕಲಿ ಔಷಧ ತಯಾರಕರು ಮತ್ತು ಮಾರಾಟಗಾರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಕಲಿ ಔಷಧ ಜಾಲವನ್ನು ಪತ್ತೆಹಚ್ಚಿ ಭೇದಿಸಿದ ಬೆನ್ನಲ್ಲೇ ಸಚಿವರು ಈ ಖಡಕ್ ಸಂದೇಶ ರವಾನಿಸಿದ್ದಾರೆ.

ರೋಗಿಗಳ ಸಂಕಷ್ಟದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಯಾರೊಬ್ಬರ ಮೇಲೂ ಕನಿಕರ ತೋರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಈ ಅಕ್ರಮ ಜಾಲದ ಪ್ರತಿಯೊಂದು ಕೊಂಡಿಯನ್ನೂ ಪತ್ತೆಹಚ್ಚಿ ಬೇರುಸಹಿತ ಕಿತ್ತೊಗೆಯಲಾಗುವುದು ಹಾಗೂ ರಾಜ್ಯದ ರೋಗಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ವೈದ್ಯಕೀಯ ವಂಚನೆಯ ವಿರುದ್ಧ ಸರ್ಕಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಇತ್ತೀಚೆಗೆ ನಡೆದ ದಾಳಿಗಳಲ್ಲಿ ಅಂತರರಾಜ್ಯ ಸರಬರಾಜು ಜಾಲಗಳು ಬಯಲಾಗಿದ್ದು, ನಕಲಿ ಔಷಧಗಳಿಗೆ ಬಹುರಾಷ್ಟ್ರೀಯ ಬ್ರ್ಯಾಂಡ್‌ಗಳ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಜಾಲದ ಕುರಿತು ಕೂಲಂಕಷ ತನಿಖೆ ನಡೆಸಿ, ವಿತರಣಾ ಜಾಲದಲ್ಲಿರುವ ಪ್ರತಿಯೊಬ್ಬರ ಹೊಣೆಗಾರಿಕೆಯನ್ನು ನಿಗದಿಪಡಿಸಲು ಹಿರಿಯ ಐಪಿಎಸ್ ಅಧಿಕಾರಿ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.

ಈ ನಕಲಿ ಔಷಧಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೂ ಮಾಹಿತಿ ರವಾನಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ. ಒಂದು ವೇಳೆ ಈ ನಕಲಿ ಔಷಧಗಳನ್ನು ಈಗಾಗಲೇ ಖರೀದಿಸಿದ್ದರೆ, ಯಾವುದೇ ಕಾರಣಕ್ಕೂ ಅವುಗಳನ್ನು ಬಳಸದಂತೆ ಕರ್ನಾಟಕದ ಎಲ್ಲಾ ಆಸ್ಪತ್ರೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.