ಮೀಡಿಯಾ – Peepal Media

ಟಿವಿಕೆ ಪಕ್ಷಕ್ಕೆ ‘ಸೀಟಿ’, ಎಂಎನ್‌ಎಂಗೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ಮಂಜೂರು
ಚೆನ್ನೈ: ನಟ ವಿಜಯ್‌ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗವು ‘ಸೀಟಿ’ ಚಿಹ್ನೆಯನ್ನು ಮಂಜೂರು ಮಾಡಿದೆ. ಅದೇ ವೇಳೆ, ನಟ ಕಮಲ್‌ ಹಾಸನ್‌ ಅವರ ‘ಮಕ್ಕಳ್‌ ನೀದಿ ಮಯ್ಯಂ’ (ಎಂಎನ್‌ಎಂ) ಪಕ್ಷಕ್ಕೆ ‘ಬ್ಯಾಟರಿ ಟಾರ್ಚ್’ ಚಿಹ್ನೆ ನೀಡಲಾಗಿದೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಮುಂಬರುವ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಎರಡೂ ಪಕ್ಷಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಚುನಾವಣಾ ಚಿಹ್ನೆಗಳ ಆದೇಶ–1968ರ ಅಡಿಯಲ್ಲಿ ತಮ್ಮ ಪಕ್ಷಕ್ಕೆ ಚಿಹ್ನೆ ನಿಗದಿಪಡಿಸುವಂತೆ ಟಿವಿಕೆ ಪಕ್ಷವು ಕಳೆದ ವರ್ಷ ನವೆಂಬರ್ 11ರಂದು ಆಯೋಗಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯೊಂದಿಗೆ ಈಗಾಗಲೇ ಲಭ್ಯವಿದ್ದ ಏಳು ಮುಕ್ತ ಚಿಹ್ನೆಗಳು ಹಾಗೂ ಪಕ್ಷವೇ ರೂಪಿಸಿದ್ದ ಮೂರು ಸ್ವಯಂ-ನಿರ್ಮಿತ ಚಿಹ್ನೆಗಳ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅಂತಿಮವಾಗಿ ಆಯೋಗವು ‘ಸೀಟಿ’ ಚಿಹ್ನೆಯನ್ನು ಟಿವಿಕೆ ಪಕ್ಷಕ್ಕೆ ಹಂಚಿಕೆ ಮಾಡಿದೆ.

ವಿಜಯ್ ಅಭಿನಯದ ‘ಜಿಒಎಟಿ’ (ಗೋಟ್) ಸಿನಿಮಾದಲ್ಲಿನ ಜನಪ್ರಿಯ ‘ವಿಷಲ್ ಪೋಡು’ ಹಾಡಿನೊಂದಿಗೆ ಈಗ ಪಕ್ಷಕ್ಕೆ ಲಭಿಸಿರುವ ‘ಸೀಟಿ’ ಚಿಹ್ನೆಯ ಸಂಬಂಧವನ್ನು ಅಭಿಮಾನಿಗಳು ಮತ್ತು ರಾಜಕೀಯ ವಲಯ ವಿಶ್ಲೇಷಕರು ಗಮನಿಸುತ್ತಿದ್ದಾರೆ.

ವಿಜಯ್ ಪ್ರತಿಕ್ರಿಯೆ
ಚಿಹ್ನೆ ಘೋಷಣೆಯ ಬಳಿಕ ನಟ ವಿಜಯ್‌ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿ, “ಸೀಟಿ ಚಿಹ್ನೆಯು ಜನರ ಆಶಯಗಳು ಹಾಗೂ ವಿಜಯದ ಸಂಕೇತವಾಗಿದೆ. ನಾವು ಕೇಳಿದ್ದ ಚಿಹ್ನೆಗಳ ಪೈಕಿ ಇದಕ್ಕೆ ಆದ್ಯತೆ ನೀಡಿದ್ದೆವು. ಆಯೋಗವು ಅದನ್ನೇ ನೀಡಿರುವುದು ಸಂತೋಷ ತಂದಿದೆ” ಎಂದು ಹೇಳಿದ್ದಾರೆ.

ಪಕ್ಷದ ನಾಯಕರು ಕೂಡ, “ಸೀಟಿ ಚಿಹ್ನೆಯು ಕೇವಲ ಸಿನಿಮಾ ಸಂಬಂಧಿತವಲ್ಲ. ಫುಟ್ಬಾಲ್ ಪಂದ್ಯದಲ್ಲಿ ನಿಯಮ ಉಲ್ಲಂಘನೆಯಾದಾಗ ರೆಫರಿ ಸೀಟಿ ಊದುವಂತೆ, ವ್ಯವಸ್ಥೆಯಲ್ಲಿನ ಲೋಪದೋಷ ಹಾಗೂ ಭ್ರಷ್ಟಾಚಾರದ ವಿರುದ್ಧ ಎಚ್ಚರಿಸುವ ರಾಜಕೀಯ ಸಂಕೇತವೂ ಹೌದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್‌ಗೆ ಎದುರಾಗಿರುವ ಸವಾಲುಗಳು
ಚಿಹ್ನೆ ಮಂಜೂರಿಯಿಂದ ಸಂಭ್ರಮದ ವಾತಾವರಣವಿದ್ದರೂ, ನಟ ವಿಜಯ್ ಮುಂದೆ ಹಲವು ಸವಾಲುಗಳಿವೆ. ಅವರ ಕೊನೆಯ ಸಿನಿಮಾ ‘ಜನನಾಯಗನ್’ ಇನ್ನೂ ಬಿಡುಗಡೆಯಾಗದೆ ಅಡಕದಲ್ಲಿದ್ದು, ಮತ್ತೊಂದೆಡೆ ಕರೂರು ಕಾಲ್ತುಳಿತ ದುರಂತದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಗೆ ಅವರು ಹಾಜರಾಗುತ್ತಿದ್ದಾರೆ.

ನಿಲ್ಲದ ತಮಿಳುನಾಡು ರಾಜ್ಯಪಾಲ ಮತ್ತು ಸರ್ಕಾರದ ನಡುವಿನ ಸಂಘರ್ಷ; ಭಾಷಣ ಓದದೇ ಸಭಾತ್ಯಾಗ ಮಾಡಿದ ರಾಜ್ಯಪಾಲ ಆರ್‌.ಎನ್‌.ರವಿ
ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್‌.ಎನ್‌.ರವಿ ನಡುವಿನ ಸಂಘರ್ಷ ಮತ್ತೊಮ್ಮೆ ಬಹಿರಂಗವಾಗಿದ್ದು, ವರ್ಷದ ಮೊದಲ ವಿಧಾನಸಭಾ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಓದದೇ ಸಭಾತ್ಯಾಗ ಮಾಡಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಮಂಗಳವಾರ ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದ ರಾಜ್ಯಪಾಲ ಆರ್‌.ಎನ್‌.ರವಿ, ರಾಷ್ಟ್ರಗೀತೆ ಮುಕ್ತಾಯವಾದ ತಕ್ಷಣ ತಮ್ಮ ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದರು. ಸಂಪ್ರದಾಯದಂತೆ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಅನುಮೋದಿತ ಭಾಷಣವನ್ನು ಓದುವುದು ರೂಢಿಯಾಗಿದ್ದರೂ, ಈ ಬಾರಿ ಅದನ್ನು ಪಾಲಿಸದೆ ಅವರು ಸಭಾತ್ಯಾಗ ಮಾಡಿದ್ದಾರೆ.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಎಂ.ಅಪ್ಪಾವು, ಸ್ಥಾಪಿತ ನಿಯಮಗಳು ಹಾಗೂ ಸಂಪ್ರದಾಯಗಳಿಗೆ ರಾಜ್ಯಪಾಲರು ಬದ್ಧರಾಗಬೇಕು ಮತ್ತು ಸರ್ಕಾರದ ಅನುಮೋದಿತ ಭಾಷಣವನ್ನೇ ಓದಬೇಕು ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರ ಆಕ್ಷೇಪಣೆಗಳ ನಡುವೆ ಮಾತನಾಡಿದ ಸ್ಪೀಕರ್, ಸದನದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಶಾಸಕರಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲ ಆರ್‌.ಎನ್‌.ರವಿ, ತಮ್ಮ ಭಾಷಣಕ್ಕೆ ಅಡ್ಡಿಪಡಿಸಿರುವುದು ದುರದೃಷ್ಟಕರ ಎಂದು ಹೇಳಿ, ರಾಷ್ಟ್ರಗೀತೆಗೆ ನೀಡಬೇಕಾದ ಗೌರವ ದೊರೆತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಭಾಷಣವನ್ನು ಪೂರ್ಣಗೊಳಿಸದೇ ಅವರು ವಿಧಾನಸಭೆಯಿಂದ ಹೊರನಡೆದರು.

ಈ ಬೆಳವಣಿಗೆಯ ನಂತರ ರಾಜಭವನದಿಂದ ಪ್ರಕಟಣೆ ಹೊರಬಂದಿದ್ದು, ರಾಜ್ಯಪಾಲರ ಮೈಕ್ ಅನ್ನು ಪದೇಪದೇ ಆಫ್ ಮಾಡಲಾಗಿದ್ದು, ಮಾತನಾಡಲು ಅವಕಾಶ ನೀಡಲಾಗಲಿಲ್ಲ ಎಂದು ಆರೋಪಿಸಲಾಗಿದೆ. ಸರ್ಕಾರದ ಅನುಮೋದಿತ ಭಾಷಣದಲ್ಲಿ ಆಧಾರರಹಿತ ಹಾಗೂ ದಾರಿತಪ್ಪಿಸುವ ಅಂಶಗಳಿದ್ದು, ರಾಜ್ಯಪಾಲರು ಎತ್ತಿದ ಹಲವು ಕಳವಳಕಾರಿ ವಿಷಯಗಳು ಭಾಷಣದಲ್ಲಿ ಸೇರಿರಲಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ರಾಜ್ಯಪಾಲ ಆರ್‌.ಎನ್‌.ರವಿ ಭಾಷಣ ಓದದೇ ವಿಧಾನಸಭೆಯಿಂದ ಹೊರನಡೆದಿರುವುದು ಇದು ಮೂರನೇ ಬಾರಿ. ಈ ಕುರಿತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಇದು ಸಂಪ್ರದಾಯದ ಉಲ್ಲಂಘನೆ ಮತ್ತು ಸದನದ ಅವಮಾನ ಎಂದು ಹೇಳಿದ್ದಾರೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲ, ಸರ್ಕಾರದ ಅನುಮೋದಿತ ಭಾಷಣವನ್ನೇ ಓದಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮಸೂದೆಗಳ ವಿಚಾರ ಸೇರಿದಂತೆ ಹಲವು ಕಾರಣಗಳಿಗೆ ಹಿಂದೆಂದೂ ಜಟಾಪಟಿ ನಡೆಯುತ್ತಲೇ ಬಂದಿದೆ. ಆದರೆ ಈ ವರ್ಷದ ಮೊದಲ ಅಧಿವೇಶನದಲ್ಲಿಯೇ ಈ ರೀತಿಯ ಬೆಳವಣಿಗೆ ಸಂಭವಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಸಿಎಂ ಹಾಗೂ ನಾನು ಏನು ಮಾತನಾಡಿದ್ದೇವೆ ಎಂದು ನಮಗೆ ಗೊತ್ತು

ಒಂದೇ ಬಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಚಿಂತನೆ

ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ

ಬೆಂಗಳೂರು : “ಸಿಎಂ ಸೇರಿ ಕಾಂಗ್ರೆಸ್ ಪಕ್ಷದ 140 ಶಾಸಕರೂ ನನ್ನ ಬೆಂಬಲಕ್ಕೆ ಇದ್ದಾರೆ. ನಮ್ಮ ನಡುವೆ ಏನು ಚರ್ಚೆಯಾಗಿದೆ ಎಂದು ನಮಗೆ ಗೊತ್ತು, ಇದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

ನಿಮ್ಮ ಬೆಂಬಲಿಗರು ಹೈಕಮಾಂಡ್ ತೀರ್ಮಾನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಕೇಳಿದಾಗ, “ಯಾರು ಹೇಳಿದರು? 140 ಶಾಸಕರು ಕೂಡ ನನ್ನ ಬೆಂಬಲಿಗರೇ. ಸಿಎಂ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ನಾನು ಹಾಗೂ ಸಿಎಂ ಅವರು ಏನು ಮಾತನಾಡಿದ್ದೇವೆ ಎಂದು ನಿಮಗೆ ಗೊತ್ತಿದೆಯಾ? ರಾಹುಲ್ ಗಾಂಧಿ ಸಮ್ಮುಖದಲ್ಲಿ ನಾವು ಏನು ಮಾತನಾಡಿಕೊಂಡಿದ್ದೇವೆ, ಹೈಕಮಾಂಡ್ ಸಮ್ಮುಖದಲ್ಲಿ ಏನು ಮಾತನಾಡಿದ್ದೇವೆ, ಎಲ್ಲ ಕೂತು ಏನು ತೀರ್ಮಾನ ಮಾಡಿದ್ದೇವೆ ಎಂದು ನಮಗೆ ಗೊತ್ತಿದೆ. ಈ ವಿಚಾರವನ್ನು ನಿಮ್ಮ ಮುಂದೆ ಬಹಿರಂಗವಾಗಿ ಚರ್ಚೆ ಮಾಡಲು ಸಾಧ್ಯವೇ? ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ” ಎಂದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, “ನಾವು ದೆಹಲಿಗೆ ಹೋಗುವುದೇ ರಾಜಕೀಯ, ಪಕ್ಷ ಹಾಗೂ ಸರ್ಕಾರದ ಕೆಲಸಗಳಿಗೆ. ಮಾಧ್ಯಮಗಳು ರಾಹುಲ್ ಗಾಂಧಿ ಭೇಟಿಯಾಗಿಲ್ಲ ಎಂದು ಬರೆದಿದ್ದೀರಿ. ಒಂದು ದಿನ ನಾವು ಜೊತೆಯಲ್ಲಿ ಕೂತು ಚರ್ಚೆ ಮಾಡಿರುವ ಫೋಟೋ ವರದಿ ಮಾಡಿದ್ದೀರಿ, ಮರುದಿನ ಭೇಟಿಯೇ ಆಗಿಲ್ಲ ಎಂದು ಹೇಳುತ್ತಿದ್ದೀರಿ. ಈ ವಿಚಾರದಲ್ಲಿ ಕಾಲ ಉತ್ತರ ನೀಡಲಿದೆ ಎಂದು ಹೇಳಿದ್ದೇನೆ. ಇದರ ಹೊರತಾಗಿ ನಾನು ಬೇರೆ ವಿಚಾರ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.

ಹೈಕಮಾಂಡ್ ಒಳ್ಳೆಯ ಸುದ್ದಿ ನೀಡಲಿದೆ ಎಂದು ನಿಮ್ಮ ಸಹೋದರ ಹೇಳಿದ್ದಾರೆ ಎಂದು ಕೇಳಿದಾಗ, “ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮಗಳು ಕೂಡ ಹೇಳುತ್ತಿವೆ” ಎಂದರು.

ಏಪ್ರಿಲ್ ತಿಂಗಳಲ್ಲಿ ಒಳ್ಳೆಯ ಸುದ್ದಿ ಬರಲಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನೋಡೋಣ, ಈಗ ಆ ಮಾತು ಯಾಕೆ?” ಎಂದು ತಿಳಿಸಿದರು.

ರಾಜಕೀಯಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಅವರ ಮಾತಿನಲ್ಲಿ ಅರ್ಥವಿದೆ. ತಪ್ಪು ಎಂದು ನಾನು ಹೇಳುವುದಿಲ್ಲ. ನಾಳೆ ಬೆಳಗ್ಗೆ ಈ ಪ್ರಶ್ನೆ ಕೇಳಿ” ಎಂದು ಉತ್ತರಿಸಿದರು.

*ಒಂದೇ ಬಾರಿಗೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಚಿಂತನೆ:*

ಜಿಬಿಎ ಚುನಾವಣೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು, ಪಾಲಿಕೆ ಚುನಾವಣೆಗಳು ಯಾವಾಗ ನಡೆಯಬಹುದು ಎಂದು ಕೇಳಿದಾಗ, “ನ್ಯಾಯಾಲಯ ಆದೇಶ ನೀಡಿದೆ. ನಮ್ಮ ಸರ್ಕಾರ ಸಂವಿಧಾನದ 73, 74ನೇ ತಿದ್ದುಪಡಿಗೆ ಬದ್ಧವಾಗಿದೆ. ಯುವಕರಿಗೆ ಅಧಿಕಾರ ನೀಡಬೇಕು, ಹೊಸ ಪೀಳಿಗೆ ಅಧಿಕಾರಕ್ಕೆ ಬರಬೇಕು. ಈಗ ಐದು ಪಾಲಿಕೆಗಳಿಂದ 369 ವಾರ್ಡ್ ಗಳನ್ನು ರಚಿಸಲಾಗಿದೆ. ಇನ್ನು ಬೆಂಗಳೂರಿನ ಹೊರವಲಯವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸಲು ನಮ್ಮ ಸರ್ಕಾರ ತೀರ್ಮಿನಿಸಿದೆ. ಇವುಗಳಿಗೆ ಇದ್ದ ಮೀಸಲಾತಿ ಸಮಸ್ಯೆ ಬಗೆಹರಿಸಲು ಸಿಎಂ ಹಾಗೂ ಸಚಿವರು ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಗಳನ್ನೂ ಪಕ್ಷದ ಚಿಹ್ನೆ ಮೇಲೆ ನಡೆಸಬೇಕು ಎಂದು ಅನೇಕರು ಸಲಹೆ ನೀಡಿದ್ದು, ನಾವಿನ್ನೂ ಆ ಬಗ್ಗೆ ತೀರ್ಮಾನ ಮಾಡಿಲ್ಲ. ಒಂದೇ ಬಾರಿಗೆ ಎಲ್ಲವನ್ನು ನಡೆಸಲು ಚಿಂತನೆ ನಡೆಯುತ್ತಿದೆ” ಎಂದರು.

ಈ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಯಂತ್ರ ಹೊರತಾಗಿ ಮತಪತ್ರ ಬಳಸುವ ಬಗ್ಗೆ ಕೇಳಿದಾಗ, “ನನಗೂ ಈ ಬಗ್ಗೆ ಮಾಹಿತಿ ಬಂದಿದೆ. ಇದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಯಾವ ರೂಪದಲ್ಲಿ ಚುನಾವಣೆ ನಡೆಸಲಾಗುವುದು ಎಂಬುದಕ್ಕಿಂತ ಮತದಾನ ನಡೆಯುವುದು ಬಹಳ ಮುಖ್ಯ. ಈಗ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ನಾವು ಈಗಾಗಲೇ ಬಿಎಲ್ಎಗಳ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿದ್ದರೆ ಅವರಿಗೆ ಮತ್ತೆ ಅವಕಾಶ ಕಲ್ಪಿಸಬೇಕು ಹಾಗೂ ಅವರ ಹಕ್ಕನ್ನು ಅವರಿಗೆ ನೀಡಬೇಕು. ಅಧಿಕಾರಿಗಳ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕಾಗಿಯೇ ಇರುವ ಕಾನೂನು ಚೌಕಟ್ಟಿನಲ್ಲಿ ಚುನಾವಣಾ ಆಯೋಗ ಕೆಲಸ ಮಾಡಲಿದೆ” ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ಮೇಲೆ ಅನುಮಾನದಿಂದ ಮತಪತ್ರ ಬಳಸಲಾಗುವುದೇ ಎಂದು ಕೇಳಿದಾಗ, “ಚುನಾವಣೆ ಮಾಡಲು ನಾವ್ಯಾರು? ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗ. ರಾಜ್ಯ ಚುನಾವಣಾ ಆಯೋಗ ನಮ್ಮ ಸರ್ಕಾರದ ನಿಯಂತ್ರಣಕ್ಕೆ ಬರುವುದಿಲ್ಲ. ಅವರೇ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ” ಎಂದರು.

ಡಿಜಿಪಿ ರಾಮಚಂದ್ರ ಅವರು ಮಹಿಳೆಯರ ಜೊತೆ ಕಚೇರಿಯಲ್ಲಿ ಅಶ್ಲೀಲವಾಗಿ ವರ್ತಿಸಿರುವ ಅನೇಕ ವಿಡಿಯೋ ವೈರಲ್ ಆಗಿವೆ ಎಂದು ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಕೇಳಿ” ಎಂದರು.

ವಲಸೆ ಕಾರ್ಮಿಕರಿಗೆ ಬೆದರಿಕೆ ಆರೋಪ: ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ
ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ, ಬೆದರಿಕೆ ಹಾಗೂ ಭೀತಿಯನ್ನುಂಟುಮಾಡಿದ ಗಂಭೀರ ಆರೋಪದ ಮೇಲೆ ಕೊಲೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ‘ದ್ವೇಷದ ಮಾತಿನ ವಿರುದ್ಧ ಜನಾಂದೋಲನ / Campaign Against Hate Speech’ ಸಂಘಟನೆಯು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿತ್ತು.

ದೂರುದಾರರ ಪ್ರಕಾರ, ಪುನೀತ್ ಕೆರೆಹಳ್ಳಿ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಮುಸ್ಲಿಂ ವಲಸೆ ಕಾರ್ಮಿಕರನ್ನು “ಬಾಂಗ್ಲಾದೇಶಿಗಳು” ಎಂದು ಗುರುತಿಸಿ, ರಾತ್ರಿ ಸಮಯದಲ್ಲಿ ಘೋಷಣೆ ಕೂಗುತ್ತಿರುವುದು ದಾಖಲಾಗಿದೆ. ಈ ಮೂಲಕ ಧರ್ಮಾಧಾರಿತ ದ್ವೇಷವನ್ನು ಪ್ರಚೋದಿಸಿ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ರೀತಿಯ ಕೃತ್ಯಗಳಿಂದ ವಲಸೆ ಕಾರ್ಮಿಕರ ಗೌರವ, ಗೌಪ್ಯತೆ ಹಾಗೂ ಜೀವಸುರಕ್ಷೆಗೆ ಗಂಭೀರ ಅಪಾಯ ಉಂಟಾಗಿದ್ದು, ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಕನ್ನಡದ ಬಿಗ್‌ಬಾಸ್: ಮನರಂಜನೆಯ ಮುಖವಾಡದಲ್ಲಿ ಜಾತಿ ರಾಜಕಾರಣದ ಅಂತರಾಳ
“..ಬಿಗ್‌ಬಾಸ್ ನಲ್ಲಿ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅದೂ ಭಾರತದಂತಹ ಜಾತಿ ಕೇಂದ್ರಿತ ದೇಶದಲ್ಲಿ ಅವರ ಜಾತಿ ಹಿನ್ನೆಲೆಯು ಅವರ ವರ್ತನೆಯನ್ನು ಮತ್ತು ಇತರರು ಅವರನ್ನು ನೋಡುವ ರೀತಿಯನ್ನು ಪ್ರಭಾವಿಸುತ್ತದೆ..” ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ

ದೃಶ್ಯ ಮಾಧ್ಯಮದ ಇತಿಹಾಸದಲ್ಲಿ ‘ರಿಯಾಲಿಟಿ ಶೋ’ಗಳು ಕೇವಲ ಮನರಂಜನೆಯ ಸಾಧನಗಳಲ್ಲ; ಅವು ಒಂದು ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮನಸ್ಥಿತಿಯನ್ನು ಅಳೆಯುವ ಮಾಪಕಗಳಾಗಿವೆ. ನೆದರ್‌ಲ್ಯಾಂಡ್‌ನ ‘ಬಿಗ್ ಬ್ರದರ್’ ಪರಿಕಲ್ಪನೆಯಿಂದ ಪ್ರೇರಿತವಾಗಿ ಭಾರತಕ್ಕೆ ಕಾಲಿಟ್ಟ ‘ಬಿಗ್ ಬಾಸ್’, ಕರ್ನಾಟಕದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ, ಈ ಕಾರ್ಯಕ್ರಮದ ಜನಪ್ರಿಯತೆಯ ಆಳವನ್ನು ಶೋಧಿಸಿದಾಗ, ನ್ನು ಶೋಧಿಸಿದಾಗ, ಅಲ್ಲಿ ಕಾಣಸಿಗುವುದು ಕೇವಲ ಆಟ, ಸ್ಪರ್ಧೆ ಅಥವಾ ತಂತ್ರಗಾರಿಕೆಯಲ್ಲ; ಬದಲಾಗಿ ಕರ್ನಾಟಕದ ಆಳವಾದ ಜಾತಿ ವ್ಯವಸ್ಥೆ, ಪ್ರಾದೇಶಿಕ ಅಸಮಾನತೆ ಮತ್ತು ಗುರುತಿನ ರಾಜಕಾರಣದ ಪ್ರತಿಬಿಂಬವಾಗಿದೆ.

ಬಿಗ್ ಬಾಸ್ ಮನೆಯನ್ನು ‘ಗ್ಲಾಸ್‌ಹೌಸ್’ ಎಂದು ಕರೆಯಲಾಗುತ್ತದೆ. ಇದು ಪಾರದರ್ಶಕತೆಯ ಸಂಕೇತವೆಂದು ಹೇಳಲಾದರೂ, ಇದರೊಳಗೆ ನಡೆಯುವ ಸೂಕ್ಷ್ಮ ಜಾತಿ ರಾಜಕಾರಣ ಮತ್ತು ಸಾಮಾಜಿಕ ಶ್ರೇಣೀಕರಣವು ಅನೇಕ ಬಾರಿ ಹೊರಗಿನ ಸಮಾಜಕ್ಕಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ. ಹನ್ನೆರಡು ಸೀಸನ್‌ಗಳ ಸುದೀರ್ಘ ಪಯಣದಲ್ಲಿ, ಸ್ಪರ್ಧಿಗಳ ಆಯ್ಕೆ, ಮನೆಯೊಳಗಿನ ಗುಂಪುಗಾರಿಕೆ, ಮತ್ತು ಅಂತಿಮವಾಗಿ ಪ್ರೇಕ್ಷಕರ ಮತದಾನದ ಮಾದರಿಗಳನ್ನು (Voting Patterns) ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಜಾತಿ ರಾಜಕಾರಣವು ಒಂದು ಪ್ರಬಲ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ.

ಇಂಡಿಯಾದಲ್ಲಿ ಜಾತಿ ಎಂಬುದು ಸೂರ್ಯಸತ್ಯ! ಇಲ್ಲಿ ಜಾತಿ ಇಲ್ಲದ ಒಂದೇ ಒಂದು ಹುಲ್ಲುಕಡ್ಡಿಯೂ ಇಲ್ಲ. ಅದನ್ನು ಮೀರಲು ಎಷ್ಟೋ ಕಾರ್ಯಕ್ರಮಗಳು ಆಗ್ಗಾಗ್ಗೆ ನಡೆಯುತ್ತವೆ. ಬಿಗ್ ಬಾಸ್ ಥರದ ಕಾರ್ಯಕ್ರಮದ ಮೂಲ ಉದ್ದೇಶವು ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳನ್ನು ಒಂದೇ ಸೂರಿನಡಿ ತಂದು, ಅವರ ಸಹಬಾಳ್ವೆಯನ್ನು ಪರೀಕ್ಷಿಸುವುದಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, “ಆದರ್ಶ ಸಮಾಜವು ಮುಕ್ತವಾಗಿರಬೇಕು ಮತ್ತು ಸಾಮಾಜಿಕವಾಗಿ ಒಳಗೊಳ್ಳುವಂತೆ (Social Endosmosis) ಇರಬೇಕು”. ಆದರೆ, ಬಿಗ್ ಬಾಸ್ ಮನೆಯಲ್ಲಿ ಈ ‘ಭ್ರಾತೃತ್ವ’ವು ಅನೇಕ ಬಾರಿ ಜಾತಿ ಪ್ರಜ್ಞೆಯ ಅಡೆತಡೆಗಳನ್ನು ಎದುರಿಸುತ್ತಲೇ ಬಂದಿದೆ. ಇಲ್ಲಿನ ಜಾತಿಯನ್ನು ಮೀರಲು ಬಿಗ್ ಬಾಸ್ ಅನೇಕಬಾರಿ ಸೋತುಹೋಗಿದೆ.

ಈ ಮನೆಯೊಳಗೆ ಪ್ರವೇಶಿಸಿದ ನಂತರ ಸ್ಪರ್ಧಿಗಳು ತಮ್ಮ ಹೊರಗಿನ ಪ್ರಭಾವವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾದರೂ, ವಾಸ್ತವದಲ್ಲಿ ಅವರ ಜಾತಿ ಹಿನ್ನೆಲೆಯು ಅವರ ವರ್ತನೆಯನ್ನು ಮತ್ತು ಇತರರು ಅವರನ್ನು ನೋಡುವ ರೀತಿಯನ್ನು ಪ್ರಭಾವಿಸುತ್ತದೆ. ಅಡುಗೆ ಮನೆಯ ಕೆಲಸದಿಂದ ಹಿಡಿದು, ನಾಯಕತ್ವದ ಆಯ್ಕೆಯವರೆಗೆ, ಜಾತಿ ಆಧಾರಿತ ಶ್ರೇಣೀಕರಣವು ಸೂಕ್ಷ್ಮವಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ‘ಒಕ್ಕಲಿಗ’, ‘ಶೆಟ್ಟಿ’ ಅಥವಾ ‘ಲಿಂಗಾಯತ’ ಸಮುದಾಯದ ಸ್ಪರ್ಧಿಗಳು ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದಾಗ ಅದನ್ನು ‘ಸ್ವಾಭಾವಿಕ’ ಎಂದು ಸ್ವೀಕರಿಸುವ ಪ್ರೇಕ್ಷಕ ವರ್ಗ, ದಲಿತ ಅಥವಾ ಅಲ್ಪಸಂಖ್ಯಾತ ಸಮುದಾಯದ ಸ್ಪರ್ಧಿ ಅದೇ ಆಕ್ರಮಣಶೀಲತೆಯನ್ನು ತೋರಿದಾಗ ಅದನ್ನು ‘ಅಹಂಕಾರ’ ಅಥವಾ ‘ದುರ್ವತ್ರನೆ’ ಎಂದು ಟೀಕಿಸುವುದು ಕಂಡುಬರುತ್ತದೆ.

ಮತದಾನದ ರಾಜಕೀಯ ಮತ್ತು ಜಾತಿ
ಕರ್ನಾಟಕದ ಚುನಾವಣಾ ರಾಜಕೀಯದಲ್ಲಿ ಜಾತಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ, ಅದೇ ಮಾದರಿಯು ಬಿಗ್ ಬಾಸ್ ಮತದಾನದಲ್ಲೂ ಕಾಣಿಸುತ್ತದೆ. ಪ್ರೇಕ್ಷಕರು ಸ್ಪರ್ಧಿಗಳನ್ನು ಕೇವಲ ಅವರ ಆಟದ ಆಧಾರದ ಮೇಲೆ ಮೌಲ್ಯಮಾಪನ 3 ಮೌಲ್ಯಮಾಪನ ಮಾಡುವುದಿಲ್ಲ; ಬದಲಾಗಿ, “ನಮ್ಮ “ನಮ್ಮ ಹುಡುಗ ಹುಡುಗ” ಅಥವಾ “ನಮ್ಮ ಸಮುದಾಯದ ಪ್ರತಿನಿಧಿ” ಎಂಬ ಭಾವನಾತ್ಮಕ ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿನ ‘ಫ್ಯಾನ್ ಪೇಜ್’ಗಳು (Fan Pages) ಪರೋಕ್ಷವಾಗಿ ಜಾತಿ ಸಂಘಟನೆಗಳಂತೆ ಕಾರ್ಯನಿರ್ವಹಿಸುತ್ತವೆ. ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗದ ಸ್ಪರ್ಧಿಗಳಿಗೆ ಒಂದು ರೀತಿಯ ಬೆಂಬಲ ಸಿಕ್ಕರೆ, ಉತ್ತರ ಕರ್ನಾಟಕದ ಲಿಂಗಾಯತ ಅಥವಾ ಕುರುಬ ಸಮುದಾಯದ ಸ್ಪರ್ಧಿಗಳಿಗೆ ಬೇರೆಯದೇ ಆದ ಮತಬ್ಯಾಂಕ್ ಕೆಲಸ ಮಾಡುತ್ತದೆ. ಇದು ಕರಾವಳಿ ಭಾಗಕ್ಕೂ ಅನ್ವಯವಾಗುತ್ತದೆ.

“ಎಸ್ ಕೆಟಗರಿ” ವಿವಾದ: ಬಿಗ್‌ಬಾಸ್ ಮನೆಯಲ್ಲಿನ ಅಸ್ಪೃಶ್ಯತೆಯ ಆಧುನಿಕ ರೂಪ
ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಂತ ಗಂಭೀರವಾದ ಮತ್ತು ನೇರವಾದ ಜಾತಿ ನಿಂದನೆಯ ಆರೋಪ ಕೇಳಿಬಂದಿದ್ದು 12ನೇ ಸೀಸನ್‌ನಲ್ಲಿ ಇದು ಕಾರ್ಯಕ್ರಮದ ಮನರಂಜನಾ ಸ್ವರೂಪವನ್ನು ಮೀರಿ, ಕಾನೂನಾತ್ಮಕ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು. ಸ್ಪರ್ಧಿ ಅಶ್ವಿನಿ ಗೌಡ ಅವರು ಸಹ-ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, “ವೆಸ್ ಕೆಟಗರಿ” (S Category) ಎಂಬ ಪದವನ್ನು ಬಳಸಿದರು. ಮೇಲ್ನೋಟಕ್ಕೆ ಇದು ಇಂಗ್ಲಿಷ್ ಪದದಂತೆ ಕಂಡರೂ, ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಇದು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡಗಳನ್ನು (ST) ಹೀಯಾಳಿಸಲು ಬಳಸುವ ಒಂದು ಸಾಂಕೇತಿಕ ಪದವಾಗಿದೆ. “ನಿನ್ನ ಯೋಗ್ಯತೆ ನನಗೆ ಗೊತ್ತು,” “ನೀನು ಎಲ್ಲಿಂದ ಬಂದಿದ್ದೀಯಾ ಅಂತ ಗೊತ್ತು” ಎಂಬಂತಹ ಮಾತುಗಳೊಂದಿಗೆ ಎಸ್ ಕೆಟಗರಿ’ ಪದವನ್ನು ಜೋಡಿಸಿದಾಗ, ಅದು ಕೇವಲ ವೈಯಕ್ತಿಕ ನಿಂದನೆಯಾಗದೆ, ಇಡೀ ಸಮುದಾಯದ ಮೇಲಿನ ದಾಳಿಯಾಗಿ ಪರಿಣಮಿಸುತ್ತದೆ.

ಜಾತಿ ವ್ಯವಸ್ಥೆಯಲ್ಲಿ, , ಒಬ್ಬ ವ್ಯಕ್ತಿಯ ಅರ್ಹತೆಯನ್ನು ಅವನ/ಅವಳ ಹುಟ್ಟಿನ ಆಧಾರದ ಮೇಲೆ ಳೆಯಲಾಗುತ್ತದೆ. ಅಶ್ವಿನಿ ಗೌಡ ಗೌಡ ಅವರು ಈ ಪದವನ್ನು ಬಳಸುವ ಮೂಲಕ, ರಕ್ಷಿತಾ ಅವರ ಸಾಮಾಜಿಕ ಹಿನ್ನೆಲೆಯನ್ನು ಕೆದಕಿ, ಅವರನ್ನು ಕೀಳಾಗಿ ಕಾಣುವ ಮನಸ್ಥಿತಿಯನ್ನು ಪ್ರದರ್ಶಿಸಿದರು. ಇದು ಆಧುನಿಕ ಸಮಾಜದಲ್ಲಿ ಅಸ್ಪೃಶ್ಯತೆ ಹೇಗೆ ಭಾಷೆಯ ಮೂಲಕ, ಸಂಕೇತಗಳ ಮೂಲಕ ಜೀವಂತವಾಗಿದೆ’ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ದಲಿತಪರ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. “ಒಂದು ಸಾರ್ವಜನಿಕ ವೇದಿಕೆಯಲ್ಲಿ, ಲಕ್ಷಾಂತರ ಜನರು ನೋಡುತ್ತಿರುವಾಗ ಇಂತಹ ಜಾತಿ ಸೂಚಕ ಪದಗಳನ್ನು ಬಳಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ” ಎಂದು ಮಹಿಳಾ ಆಯೋಗಕ್ಕೂ ದೂರು ನೀಡಲಾಯಿತು. ಇದು ಬಿಗ್ ಬಾಸ್ ಮನೆಯು ಕೇವಲ ಆಟದ ಮೈದಾನವಲ್ಲ, ಬದಲಾಗಿ ಜಾತಿ ಪೂರ್ವಗ್ರಹಗಳು ಪ್ರದರ್ಶನಗೊಳ್ಳುವ ತಾಣವಾಗಿದೆ ಎಂಬುದನ್ನು ಸಾಬೀತುಪಡಿಸಿತು.

ಇದರ ನಡುವೆ ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ಅವರು ವಾಲ್ಮೀಕಿ ನಾಯಕ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದವರಾಗಿದ್ದು, ಇಂತಹ ಘಟನೆಗಳು ನಡೆದಾಗ ಅವರ ಪ್ರತಿಕ್ರಿಯೆ ಅತ್ಯಂತ ನಿರ್ಣಾಯಕವಾಗಿರುತ್ತದೆ. ಹಿಂದೆ ಹುಚ್ಚ ವೆಂಕಟ್ ಅವರು ಸಹ-ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದಾಗ ಸುದೀಪ್ ಅವರು ತೆಗೆದುಕೊಂಡ ಕಠಿಣ ನಿಲುವು ಜನಮೆಚ್ಚುಗೆಗಳಿಸಿತ್ತು. ಆದರೆ, ಜಾತಿ ನಿಂದನೆಯ ವಿಷಯ ಬಂದಾಗ ಅವರು ಬಹುತೇಕ ಸುಮ್ಮನಾದರೆನ್ನಿಸುತ್ತದೆ. ಈ ವಿವಾದವು ಟಿಆ‌ಪಿ (TRP) ಹೆಚ್ಚಿಸುವ ತಂತ್ರವೋ ಅಥವಾ ನಿಜವಾಗಿಯೂ ಸಮಾಜದ ಕನ್ನಡಿಯೋ ಎಂಬ ಸಂಶಯವನ್ನು ಹುಟ್ಟುಹಾಕಿದ್ದಂತೂ ನಿಜ.

ಒಕ್ಕಲಿಗ ಮತ್ತು ಲಿಂಗಾಯತ ರಾಜಕಾರಣ
ಕರ್ನಾಟಕದ ರಾಜಕಾರಣದಂತೆಯೇ, ಬಿಗ್ ಬಾಸ್ ಮನೆಯಲ್ಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಸ್ಪರ್ಧಿಗಳು ಹೆಚ್ಚಿನ ಪ್ರಾಬಲ್ಯವನ್ನು ಎಲ್ಲಾ ಸೀಸನ್‌ ಗಳಲ್ಲೂ ಹೊಂದಿರುತ್ತಾರೆ. ಈ ಸಮುದಾಯಗಳ ಸ್ಪರ್ಧಿಗಳು ಗೆಲ್ಲುವಲ್ಲಿ ಜಾತಿ ರಾಜಕಾರಣ ಕೆಲಸ ಮಾಡುತ್ತದೆ

ಹಳೆ ಮೈಸೂರು ಭಾಗದಲ್ಲಿ (ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ) ಒಕ್ಕಲಿಗ ಸಮುದಾಯವು ಪ್ರಬಲವಾಗಿದೆ. ಬಿಗ್ ಬಾಸ್‌ನಲ್ಲಿ ‘ಗೌಡ’ ಎಂಬ ಉಪನಾಮದೊಂದಿಗೆ ಬರುವ ಸ್ಪರ್ಧಿಗಳು (ಉದಾಹರಣೆಗೆ ವಿನಯ್ ಗೌಡ, ಅಶ್ವಿನಿ ಗೌಡ, ಭವ್ಯಾ ಗೌಡ) ಆರಂಭದಿಂದಲೇ ಒಂದು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ.

ಸೀಸನ್ 10ರಲ್ಲಿ ಭಾಗವಹಿಸಿದ್ದ ವಿನಯ್ ಗೌಡ ಎಂಬ ಸ್ಪರ್ಧಿಯನ್ನು ‘ಆನೆ’, ‘ಹುಲಿ’ ಎಂದೆಲ್ಲಾ ಬಿಂಬಿಸಲಾಯಿತು. ಅವರ ಆಕ್ರಮಣಕಾರಿ ವರ್ತನೆಯನ್ನು ‘ಗೌಡ್ರ ಗತ್ತು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈಭವೀಕರಿಸಲಾಯಿತು. ಪುಲ್ವಾಮಾ ದಾಳಿಯ ಕುರಿತು ಅವರು ನೀಡಿದ ಹೇಳಿಕೆ ಮತ್ತು ಸೈನಿಕನ ಪಾತ್ರದ ಮೂಲಕ ಅವರು ಗಳಿಸಿದ ಜನಪ್ರಿಯತೆ, ಒಕ್ಕಲಿಗ ಸಮುದಾಯದ ‘ಯೋಧ/ರಕ್ಷಕ’ ಎಂಬ ಇಮೇಜ್ ಅಡಿಯಲ್ಲಿ ಕ್ರೋಢೀಕರಣಗೊಂಡಿತು. ಅವರು ಜೈಲಿಗೆ ಹೋದ ಸಂದರ್ಭದಲ್ಲೂ (ಮಚ್ಚು ಪ್ರದರ್ಶನ ಪ್ರಕರಣ), ಅವರ ಅಭಿಮಾನಿಗಳು ಅದನ್ನು ಸಮರ್ಥಿಸಿಕೊಂಡ ರೀತಿ, ಜಾತಿ ಬೆಂಬಲವು ತಪ್ಪುಗಳನ್ನು ಹೇಗೆ ಮರೆಮಾಚುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಅಶ್ವಿನಿ ಗೌಡ ಅವರು ‘ಎಸ್ ಕೆಟಗರಿ’ ಪದ ಬಳಸಿದಾಗ, ಅವರ ಸಮುದಾಯದ ಕೆಲವು ಬೆಂಬಲಿಗರು ಅವರನ್ನು “ದಿಟ್ಟ ಕನ್ನಡತಿ” ಎಂದು ಸಮರ್ಥಿಸಿಕೊಂಡರು. ಇಲ್ಲಿ ‘ಕನ್ನಡ’ ಅಸ್ಮಿತೆಯನ್ನು ಬಳಸಿ ಜಾತಿವಾದವನ್ನು ಮುಚ್ಚಿಹಾಕುವ ದುಷ್ಟ ಪ್ರಯತ್ನ ನಡೆಯಿತು.

ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದ್ದರೂ, ಬಿಗ್ ಬಾಸ್ ಇತಿಹಾಸದಲ್ಲಿ ಈ ಭಾಗದ ಸ್ಪರ್ಧಿಗಳು ತಮ್ಮ ಭಾಷೆ ಮತ್ತು ಶೈಲಿಯ ಕಾರಣದಿಂದಾಗಿ ತಾರತಮ್ಯವನ್ನು ಎದುರಿಸಿದ್ದಾರೆ.

ಹಿರಿಯ ನಟಿ ಶ್ರುತಿ ಅವರು ಲಿಂಗಾಯತ ಸಮುದಾಯದವರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರ ಗೆಲುವಿನಲ್ಲಿ (ಸೀಸನ್ 3) ಅವರ ಸಿನಿಮಾಗಳ ಜನಪ್ರಿಯತೆಯ ಜೊತೆಗೆ, ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಲಿಂಗಾಯತ ಮತಬ್ಯಾಂಕ್‌ಗಳ ಪಾತ್ರವೂ ಮಹತ್ವದ್ದಾಗಿತ್ತು. ಅವರು ಮನೆಯೊಳಗೆ ಪ್ರದರ್ಶಿಸಿದ ‘ಭಾವನಾತ್ಮಕ ತಾಯಿ’ (Emotional Mother) ಪಾತ್ರವು ಸಾಂಪ್ರದಾಯಿಕ ಮತದಾರರನ್ನು ಸೆಳೆಯಿತು.

ಇನ್ನು ಸೀಸನ್ 4ರ ವಿಜೇತ ಪ್ರಥಮ್ ಯಾವುದೇ ನಿರ್ದಿಷ್ಟ ಜಾತಿಯ ಹಣೆಪಟ್ಟಿಯೊಂದಿಗೆ ಗುರುತಿಸಿಕೊಳ್ಳದಿದ್ದರೂ, ಅವರ ವರ್ತನೆ ಮತ್ತು ಭಾಷಾ ಶೈಲಿಯು ಬ್ರಾಹ್ಮಣ ಅಥವಾ ಮೇಲ್ವರ್ಗದ ಹಿನ್ನೆಲೆಯನ್ನು ಸೂಚಿಸುತ್ತಿತ್ತು. ಆದರೆ, ಅವರು ತಮ್ಮನ್ನು ‘ಒಳ್ಳೆ ಹುಡುಗ’ ಎಂದು ಬಿಂಬಿಸಿಕೊಳ್ಳುವ ಮೂಲಕ, ಜಾತಿ ಮೀರಿದ ಇಮೇಜ್ ಸೃಷ್ಟಿಸಿದರು. ಇದು ಮಧ್ಯಮ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

‘ಶೆಟ್ಟಿ‘ ಸಮುದಾಯದ ಅನಿರೀಕ್ಷಿತ ಪ್ರಾಬಲ್ಯ
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ‘ಬಂಟ’ (ಶೆಟ್ಟಿ) ಸಮುದಾಯದ ಸ್ಪರ್ಧಿಗಳ ಸತತ ಗೆಲುವು. ಕರ್ನಾಟಕದ ಜನಸಂಖ್ಯೆಯಲ್ಲಿ ಬಂಟ ಸಮುದಾಯದ ಪ್ರಮಾಣ ಕಡಿಮೆಯಿದ್ದರೂ, ಬಿಗ್ ಬಾಸ್ನಲ್ಲಿ ಅವರ ಸಾಧನೆ ಅಸಾಧಾರಣವಾಗಿದೆ.
* ಚಂದನ್ ಶೆಟ್ಟಿ (ಸೀಸನ್ 5): ಸಂಗೀತ ನಿರ್ದೇಶಕ ಮತ್ತು ಗಾಯಕ.
* ಶೈನ್ ಶೆಟ್ಟಿ (ಸೀಸನ್ 7): ಕಿರುತೆರೆ ನಟ ಮತ್ತು ಉದ್ಯಮಿ.
* ರೂಪೇಶ್ ಶೆಟ್ಟಿ (ಸೀಸನ್ 9/OTT): ಕರಾವಳಿಯ ಬಹುಭಾಷಾ ನಟ.

ಈ ಸ್ಪರ್ಧಿಗಳ ಗೆಲುವಿಗೆ ಕೇವಲ ಅವರ ವೈಯಕ್ತಿಕ ಪ್ರತಿಭೆ ಕಾರಣವಲ್ಲ. ಇದರ ಹಿಂದೆ ಒಂದು ಪ್ರಬಲವಾದ ಸಾಮಾಜಿಕ-ಆರ್ಥಿಕ ತಂತ್ರಗಾರಿಕೆ ಇದೆ:

1. ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಪ್ರಾಬಲ್ಯ: ಕರಾವಳಿ ಭಾಗದ (ದಕ್ಷಿಣ ಕನ್ನಡ, ಉಡುಪಿ) ಜನರು ಹೆಚ್ಚಿನ ಸಾಕ್ಷರತೆ ಮತ್ತು ಇಂಟರ್ನೆಟ್ ಬಳಕೆಯನ್ನು ಹೊಂದಿದ್ದಾರೆ. ಆನ್‌ಲೈನ್ ವೋಟಿಂಗ್ ಪ್ರಕ್ರಿಯೆಯಲ್ಲಿ ಇದು ನಿರ್ಣಾಯಕವಾಗುತ್ತದೆ.
2. ಸಮುದಾಯದ ಒಗ್ಗಟ್ಟು: ಬಂಟ ಸಮುದಾಯವು ಮುಂಬೈ, ಬೆಂಗಳೂರು ಮತ್ತು ವಿದೇಶಗಳಲ್ಲಿ ಪ್ರಬಲವಾಗಿದೆ. ತಮ್ಮ ಸಮುದಾಯದ ಸ್ಪರ್ಧಿ ಅಂತಿಮ ಹಂತಕ್ಕೆ ಬಂದಾಗ, ಇಡೀ ಸಮುದಾಯವು ಸಂಘಟಿತವಾಗಿ ಮತ ಚಲಾಯಿಸುತ್ತದೆ (Block Voting).
3. ಸಾಂಸ್ಕೃತಿಕ ಹೈಬ್ರಿಡಿಟಿ: ಈ ಸ್ಪರ್ಧಿಗಳು ತುಳು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಲೇ, ಬೆಂಗಳೂರಿನ ಆಧುನಿಕ ಜೀವನಶೈಲಿಗೂ ಒಗ್ಗಿಕೊಳ್ಳುತ್ತಾರೆ. ಇದರಿಂದ ಅವರು ಕರಾವಳಿಯ ಪ್ರಾದೇಶಿಕ ಮತಗಳು ಮತ್ತು ಬೆಂಗಳೂರಿನ ಅರ್ಬನ್ ಮತಗಳನ್ನು ಏಕಕಾಲದಲ್ಲಿ ಪಡೆಯುತ್ತಾರೆ.

ಉತ್ತರ ಕರ್ನಾಟಕ vs ದಕ್ಷಿಣ ಕರ್ನಾಟಕ
ಬಿಗ್ ಬಾಸ್ ಮನೆಯಲ್ಲಿ ಆಗಾಗ್ಗೆ ಕೇಳಿಬರುವ ದೂರು ಎಂದರೆ ಉತ್ತರ ಕರ್ನಾಟಕದ ಭಾಷೆಯನ್ನು ಹೀಯಾಳಿಸುವುದು. ಇದು ಕೇವಲ ಭಾಷೆಯ ವಿಷಯವಲ್ಲ; ಇದು ಪ್ರಾದೇಶಿಕ ಮತ್ತು ವರ್ಗ ತಾರತಮ್ಯದ ಸಂಕೇತವಾಗಿದೆ.
* ಆಡುಭಾಷೆಯ ಅವಹೇಳನ: ಉತ್ತರ ಕರ್ನಾಟಕದ ಶೈಲಿಯನ್ನು ‘ರಗಡ್’ ಅಥವಾ ‘ಅಸಭ್ಯ’ ಎಂದು ಬಿಂಬಿಸಲಾಗುತ್ತದೆ. ಮೈಸೂರು ಭಾಗದ ಕನ್ನಡವನ್ನು ‘ಶುದ್ಧ’ ಅಥವಾ ‘ಶ್ರೇಷ್ಠ’ ಎಂದು ಪರಿಗಣಿಸುವ ಮನಸ್ಥಿತಿ ಮನೆಯ ಸ್ಪರ್ಧಿಗಳಲ್ಲಿ ಎದ್ದು ಕಾಣುತ್ತದೆ.
* ಶಶಿಕುಮಾ‌ರ್ (ಸೀಸನ್‌6 ವಿಜೇತೆ): ಕೃಷಿ ಪದವೀಧರ ಮತ್ತು ನೃತ್ಯಪಟು ಶಶಿಕುಮಾ‌ರ್ ಅವರ ಗೆಲುವು ಈ ತಾರತಮ್ಯಕ್ಕೆ ಒಂದು ಉತ್ತರವಾಗಿತ್ತು. ಅವರು ‘ರೈತ’ ಅಸ್ಮಿತೆಯನ್ನು ಬಳಸಿಕೊಂಡು, ಉತ್ತರ ಮತ್ತು ದಕ್ಷಿಣದ ನಡುವಿನ ಕಂದಕವನ್ನು ಮುಚ್ಚಿದರು. ಆದರೆ, ಅವರಿಗೂ ಆರಂಭದಲ್ಲಿ ಭಾಷೆಯ ಕಾರಣಕ್ಕೆ ಮುಜುಗರ ಎದುರಿಸಬೇಕಾಯಿತು.
* ಹನುಮಂತ (ಸೀಸನ್11 ವಿಜೇತೆ): ಹನುಮಂತ ಅವರ ಗೆಲುವು ಈ ಪ್ರಾದೇಶಿಕ ರಾಜಕಾರಣಕ್ಕೆ ದೊಡ್ಡ ಪೆಟ್ಟು ನೀಡಿತು. ಹಾವೇರಿ ಜಿಲ್ಲೆಯ ಲಂಬಾಣಿ ತಾಂಡಾದಿಂದ ಬಂದ ಹನುಮಂತ, ತಮ್ಮ ಮುಗ್ಧತೆ ಮತ್ತು ಅಪ್ಪಟ ಗ್ರಾಮೀಣ ಭಾಷೆಯಿಂದಲೇ ಜನರ ಮನ ಗೆದ್ದರು. ನಗರ ಕೇಂದ್ರಿತ ಸ್ಪರ್ಧಿಗಳು ಅವರನ್ನು ಗೇಲಿ ಮಾಡಿದ್ದು, ಅಂತಿಮವಾಗಿ ಅವರಿಗೆ ಅನುಕಂಪದ ಅಲೆಯಾಗಿ ಪರಿವರ್ತನೆಯಾಯಿತು.

ಹನುಮಂತ ಲಮಾಣಿ: ಅಹಿಂದ ಮತಗಳ ಧ್ರುವೀಕರಣ ಮತ್ತು ಐತಿಹಾಸಿಕ ಗೆಲುವು
ಸೀಸನ್ 11ರ ವಿಜೇತ ಹನುಮಂತ ಲಮಾಣಿ ಅವರ ಗೆಲುವು ಬಿಗ್ ಬಾಸ್ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ಅಧ್ಯಾಯವಾಗಿದೆ. ಲಂಬಾಣಿ ಸಮುದಾಯವು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಪಟ್ಟಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ ಗ್ಲಾಮರ್, ಫ್ಯಾಷನ್ ಮತ್ತು ಇಂಗ್ಲಿಷ್ ಭಾಷೆಯ ಪ್ರಾಬಲ್ಯವಿರುವ ಈ ಶೋನಲ್ಲಿ, ಕುರಿ ಕಾಯುವ ಹಿನ್ನೆಲೆಯ ಒಬ್ಬ ಯುವಕ ಗೆದ್ದಿದ್ದು ಸಾಮಾನ್ಯ ವಿಷಯವಲ್ಲ. ಹನುಮಂತ ಅವರ ಗೆಲುವನ್ನು ಕೇವಲ ‘ಸಿಂಪಥಿ’ ಎಂದು ಕರೆಯಲಾಗದು. ಇದು ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ವರ್ಗದ ಮತಗಳ ಧ್ರುವೀಕರಣದ ಫಲಿತಾಂಶವಾಗಿದೆ.

* ವೈಲ್ಡ್ಕಾರ್ಡ್ ಎಂಟ್ರಿ: ಸಾಮಾನ್ಯವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಗೆಲ್ಲುವುದಿಲ್ಲ. ಆದರೆ ಹನುಮಂತ ಅವರು ಬಂದ ರೀತಿ ಮತ್ತು ಅವರು ಪ್ರತಿನಿಧಿಸಿದ ‘ಕೆಳವರ್ಗದ’ ಧ್ವನಿ, ಅವರನ್ನು ಜನಸಾಮಾನ್ಯರ ಹೀರೋ ಮಾಡಿತು.
* ತ್ರಿವಿಕ್ರಮ್vs ಹನುಮಂತ: ರನ್ನರ್ ಅಪ್ ಆದ ತ್ರಿವಿಕ್ರಮ್ ಅವರು ಸುಶಿಕ್ಷಿತ, ಅರ್ಬನ್ ಹಿನ್ನೆಲೆಯ ನಟ. ಅಂತಿಮ ಹಣಾಹಣಿಯು ‘ಶ್ರೀಮಂತ vs ಬಡವ’ ಅಥವಾ ‘ಮೇಲ್ಟಾತಿ ವರ್ತನೆ vs ಕೆಳವರ್ಗದ ಮುಗ್ಧತೆ’ ಎಂಬ ಸ್ವರೂಪ ಪಡೆಯಿತು. ಹನುಮಂತ ಅವರಿಗೆ ಬಿದ್ದ 5 ಕೋಟಿಗೂ ಅಧಿಕ ಮತಗಳು, ಕರ್ನಾಟಕದ ಗ್ರಾಮೀಣ ಮತ್ತು ದಲಿತ ವರ್ಗವು ಅವರನ್ನು ತಮ್ಮ ಪ್ರತಿನಿಧಿಯಾಗಿ ಸ್ವೀಕರಿಸಿದ್ದನ್ನು ತೋರಿಸುತ್ತದೆ.

ಅಭಿಮಾನಿ ಸಂಘಗಳು ಅಥವಾ ಜಾತಿ ಸೇನೆಗಳು?
ಬಿಗ್ ಬಾಸ್ ಹೊರಗಿನ ಪ್ರಪಂಚದಲ್ಲಿ, ನಟ ದರ್ಶನ್ ತೂಗುದೀಪ (ಡಿ-ಬಾಸ್) ಅವರ ಅಭಿಮಾನಿ ಸಂಘಗಳು ಮತದಾನದ ಮೇಲೆ ಬಲವಾದ ಪ್ರಭಾವ ಬೀರುತ್ತವೆ. ದರ್ಶನ್ ಅವರ ಅಭಿಮಾನಿ ಬಳಗವು ಒಂದು ನಿರ್ದಿಷ್ಟ ವರ್ಗ ಮತ್ತು ಸಮುದಾಯದ (ಕುರುಬ/ಬಲಿಜ/ಒಕ್ಕಲಿಗ ಮಿಶ್ರಿತ ಹಿಂದುಳಿದ ವರ್ಗಗಳ) ಬೆಂಬಲವನ್ನು ಹೊಂದಿದೆ.

ಮನೆಯೊಳಗೆ ಯಾರಾದರೂ ದರ್ಶನ್ ಅವರನ್ನು ಹೊಗಳಿದರೆ ಅಥವಾ ಅವರ ಡೈಲಾಗ್ ಹೊಡೆದರೆ, ಹೊರಗೆ ‘ಡಿ-ಬಾಸ್‌ ಆರ್ಮಿ’ ಅವರಿಗೆ ಓಟ್ ಹಾಕಲು ಶುರು ಮಾಡುತ್ತದೆ. ವಿನಯ್ ಗೌಡ ಅವರು ದರ್ಶನ್ ಅವರ ಪರವಾಗಿ ಮಾತನಾಡಿದ್ದು ಮತ್ತು ಅವರ ಶೈಲಿಯನ್ನು ಅನುಕರಿಸಿದ್ದು ಅವರಿಗೆ ಮತಗಳನ್ನು ತಂದುಕೊಟ್ಟಿತು.

ದರ್ಶನ್ ಅಥವಾ ಅವರ ಬೆಂಬಲಿತ ಸ್ಪರ್ಧಿಗಳ ವಿರುದ್ಧ ಮಾತನಾಡುವವರನ್ನು (ವಿಶೇಷವಾಗಿ ಮಹಿಳೆಯರನ್ನು) ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳಾಗಿ ನಿಂದಿಸಲಾಗುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವು ಈ ಅಭಿಮಾನಿ ಸಂಘಗಳಲ್ಲಿರುವ ಕೆಲವರ ಹಿಂಸಾತ್ಮಕ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿದೆ. ಬಿಗ್ ಬಾಸ್ ಮತದಾನದಲ್ಲೂ ಕೂಡಾ ಇದೇ ‘ಗ್ಯಾಂಗ್ ಮೆಂಟಾಲಿಟಿ’ ಕೆಲಸ ಮಾಡುತ್ತದೆ.

ಬಿಡದಿ ಸ್ಟುಡಿಯೋ ಸೀಲ್ ಮತ್ತು ಸೇಡಿನ ರಾಜಕಾರಣ
ಬಿಗ್ ಬಾಸ್ ಸೀಸನ್ 12ರಲ್ಲಿ ನಡೆದ ‘ಜಾಲಿವುಡ್ ಸ್ಟುಡಿಯೋ’ (Jollywood Studio) ಸೀಲ್ ಮಾಡಿದ ಘಟನೆ ಕಾರ್ಯಕ್ರಮದ ಮೇಲೆ ರಾಜಕೀಯ ಹಿಡಿತವನ್ನು ತೋರಿಸುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಹಾನಿಯ ನೆಪವೊಡ್ಡಿ ಸ್ಟುಡಿಯೋಗೆ ಬೀಗಮುದ್ರೆ ಹಾಕಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ದ್ವೇಷದ ಭಾಗ ಎಂದು ಬಿಜೆಪಿ ಆರೋಪಿಸಿತು.

ಈ ಘಟನೆಯು ರಾಮನಗರ ಜಿಲ್ಲೆಯ (ಈಗ ಬೆಂಗಳೂರು ದಕ್ಷಿಣ) ರಾಜಕೀಯ ಮೇಲಾಟದ ಭಾಗವಾಗಿತ್ತು. ಸ್ಟುಡಿಯೋ ಮಾಲೀಕರು ಮತ್ತು ಶೋ ಆಯೋಜಕರು ಯಾವ ರಾಜಕೀಯ ಪಕ್ಷಕ್ಕೆ ಅಥವಾ ನಾಯಕರಿಗೆ ನಿಷ್ಠರಾಗಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸ್ಪರ್ಧಿಗಳನ್ನು ರಾತ್ರೋರಾತ್ರಿ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದು, ಮನರಂಜನಾ ಉದ್ಯಮವು ರಾಜ್ಯದ ಪ್ರಬಲ ಜಾತಿ ನಾಯಕರ (Vokkaliga Strongmen) ಕಪಿಮುಷ್ಠಿಯಲ್ಲಿ ಸಿಲುಕಿರುವುದನ್ನು ತೋರಿಸುತ್ತದೆ.

ಕೆಳಗಿನ ಕೋಷ್ಟಕವು ಬಿಗ್ ಬಾಸ್ ವಿಜೇತರ ಹಿನ್ನೆಲೆ ಮತ್ತು ಅವರ ಗೆಲುವಿಗೆ ಕಾರಣವಾದ ಸಾಮಾಜಿಕ ಅಂಶಗಳನ್ನು ವಿವರಿಸುತ್ತದೆ:

ವಾಸ್ತವದ ಆಚೆಗೆ ಇರುವ ಕಟುಸತ್ಯ
ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹನ್ನೆರಡು ಸೀಸನ್‌ಗಳ ಕೂಲಂಕುಷ ಪರಿಶೀಲನೆಯು ಒಂದು ಆಘಾತಕಾರಿ ಸತ್ಯವನ್ನು ಬಯಲು ಮಾಡುತ್ತದೆ: ಗ್ಲಾಸ್‌ಹೌಸ್ ಒಳಗಿನ ಪ್ರಜಾಪ್ರಭುತ್ವವು ಹೊರಗಿನ ಜಾತಿ ರಾಜಕಾರಣದಿಂದ ಮುಕ್ತವಾಗಿಲ್ಲ.

1. ಜಾತಿಯೇ ಬಂಡವಾಳ: ಸ್ಪರ್ಧಿಯೊಬ್ಬರು ‘ಗೌಡ’ ಅಥವಾ ‘ಶೆಟ್ಟಿ’ ಆಗಿದ್ದರೆ, ಅವರಿಗೆ ಆರಂಭಿಕ ಬೆಂಬಲ (Initial Capital) ಸಿಗುವುದು ಸುಲಭ. ಆದರೆ ಹನುಮಂತ ಅವರಂತಹ ದಲಿತ/ಗಿರಿಜನ ಸಮುದಾಯದ ಸ್ಪರ್ಧಿಗಳು ಗೆಲ್ಲಬೇಕಾದರೆ, ಅವರು ಅಸಾಧಾರಣವಾದ ಸಹನೆ ಮತ್ತು ಪ್ರತಿಭೆಯನ್ನು ತೋರಬೇಕಾಗುತ್ತದೆ.
2. ಅಸ್ಪೃಶ್ಯತೆಯ ರೂಪಾಂತರ: “ಎಸ್ ಕೆಟಗರಿ”ಯಂತಹ ಪದಗಳ ಬಳಕೆ ತೋರಿಸುವುದೇನೆಂದರೆ, ಅಸ್ಪೃಶ್ಯತೆ ಮತ್ತು ಜಾತಿ ನಿಂದನೆಯು ಈಗ ಹೊಸ ರೂಪ ಪಡೆದುಕೊಂಡಿದೆ. ನೇರವಾಗಿ ಜಾತಿ ಹೆಸರು ಹಿಡಿದು ಬೈಯುವ ಬದಲು, ಸಂಕೇತಗಳ ಮೂಲಕ (Coded Language) ಅವಮಾನಿಸಲಾಗುತ್ತದೆ.
3. ಪ್ರಾದೇಶಿಕ ಅಸಮತೋಲನ: ಮೈಸೂರು ಭಾಗದ ಮತ್ತು ಕರಾವಳಿ ಭಾಗದ ಸ್ಪರ್ಧಿಗಳು ಗೆದ್ದಷ್ಟು ಸುಲಭವಾಗಿ ಉತ್ತರ ಕರ್ನಾಟಕದ ಸ್ಪರ್ಧಿಗಳು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅವರ ಭಾಷೆಯನ್ನು ಹಾಸ್ಯದ ವಸ್ತುವಾಗಿ ನೋಡುವ ಪ್ರವೃತ್ತಿ ಇಂದಿಗೂ ಇದೆ.
4. ರಾಜಕೀಯದಾಳ: ಬಿಗ್ ಬಾಸ್ ಸೆಟ್ಗೆ ಬೀಗ ಹಾಕುವುದು ಅಥವಾ ಸ್ಪರ್ಧಿಗಳ ಮೇಲೆ ಕೇಸ್ ಹಾಕುವುದು ಕೇವಲ ಕಾನೂನು ಕ್ರಮವಲ್ಲ; ಅದು ರಾಜಕೀಯ ನಾಯಕರು ತಮ್ಮ ಅಧಿಕಾರ ಪ್ರದರ್ಶಿಸಲು ಬಳಸುವ ತಂತ್ರವಾಗಿದೆ.

ಅಂತಿಮವಾಗಿ, ಬಿಗ್ ಬಾಸ್ ಕನ್ನಡದಲ್ಲಿ “ಯಾರು ಬೇಕಾದರೂ ಗೆಲ್ಲಬಹುದು“ ಎಂಬುದು ಕೇವಲ ಘೋಷವಾಕ್ಯವಷ್ಟೇ. ವಾಸ್ತವದಲ್ಲಿ, ಗೆಲುವು ಎಂಬುದು ಜಾತಿ ಬಲ, ಪ್ರಾದೇಶಿಕ ಬೆಂಬಲ ಮತ್ತು ರಾಜಕೀಯ ಸಮೀಕರಣಗಳ ಸಂಕೀರ್ಣ ಲೆಕ್ಕಾಚಾರದ ಮೇಲೆ ನಿಂತಿದೆ. ಪ್ರೇಕ್ಷಕರು ತಮ್ಮ ಅರಿವಿಲ್ಲದೆಯೇ ಈ ಜಾತಿ ರಾಜಕಾರಣದ ಭಾಗವಾಗುತ್ತಿದ್ದಾರೆ ಮತ್ತು ತಮ್ಮ ಮತಗಳ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಮತ್ತೊಮ್ಮೆ ದೃಢೀಕರಿಸುತ್ತಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘನೆ: ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ಹೂಡಿದ್ದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ರವಿಕಾಂತೇಗೌಡ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ಸಲೀಂ ಅವರು ಈ ಆದೇಶ ನೀಡಿದ್ದಾರೆ. 2023ರ ಸೆಪ್ಟೆಂಬರ್ 8ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಪ್ರತಿವಾದಿಯಾದ ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅವರು ಉಲ್ಲಂಘಿಸಿದ್ದಾರೆ ಎಂಬುದು ಸಾಬೀತಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅದರಂತೆ ರಾಕೇಶ್ ಶೆಟ್ಟಿ ಅವರು ಮೂರು ತಿಂಗಳ ಕಾಲ ಜೈಲಿನಲ್ಲಿ ಇರಬೇಕಿದ್ದು, ಜೈಲಿನಲ್ಲಿ ಅವರಿಗೆ ತಗಲುವ ವೆಚ್ಚಗಳನ್ನು ದಾವೆದಾರ ಬಿ.ಆರ್. ರವಿಕಾಂತೇಗೌಡ ಅವರೇ ಭರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಫೆಬ್ರವರಿ 1ರಂದು 2025-26ರ ಕೇಂದ್ರ ಬಜೆಟ್ ಮಂಡನೆ
ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು (ಭಾನುವಾರ) ಸಂಸತ್ತಿನಲ್ಲಿ ಮಂಡಿಸಲಾಗುವುದು. ಅದಕ್ಕೂ ಮುನ್ನ ಜನವರಿ 29ರಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ.

ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜನವರಿ 28ರಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 2ರವರೆಗೆ ಮುಂದುವರಿಯಲಿದೆ. ವಾಡಿಕೆಯಂತೆ, ಜನವರಿ 28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಎರಡೂ ಸದನಗಳನ್ನು ಕರೆಯಲು ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ ಎಂದು ರಿಜಿಜು ತಿಳಿಸಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ಹಂತವು ಜನವರಿ 28ರಿಂದ ಫೆಬ್ರವರಿ 13ರವರೆಗೆ ನಡೆಯಲಿದ್ದು, ಎರಡನೇ ಹಂತವು ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ
ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕೆಂದು ಪತ್ರಕರ್ತ ಹಾಗೂ ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು ನಡೆಸುತ್ತಿರುವ ಅಭಿಯಾನದ ಮನವಿ ಪತ್ರವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು.

ಈ ವೇಳೆ ಪತ್ರಕರ್ತರಾದ ಶಿವಾನಂದ ತಗಡೂರು ಹಾಗೂ ಬಿ.ಎನ್. ರಮೇಶ್ ಉಪಸ್ಥಿತರಿದ್ದರು.

ಮನವಿ ಪತ್ರವನ್ನು ಸ್ವೀಕರಿಸಿ ವಿವರಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಮರ್ಯಾದಾಗೇಡು ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ತರಲಾಗುವುದು ಎಂದು ಭರವಸೆ ನೀಡಿದರು. ಜಾತಿ ದ್ವೇಷದಿಂದ ನಡೆಯುವ ಹಿಂಸೆ, ಹತ್ಯೆಗಳಂತಹ ಅಮಾನವೀಯ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಮನವಿ ಪತ್ರದಲ್ಲಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದ್ದು, ಇದು “ಜಾತಿ ಭಯೋತ್ಪಾದನೆ”ಯ ರೂಪ ಪಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಅಂತರ್‌ಜಾತಿ ವಿವಾಹಗಳನ್ನು ವಿರೋಧಿಸುವ ಮನೋಭಾವದಿಂದ ಪ್ರೀತಿಸಿದ ಯುವಕ-ಯುವತಿಯರನ್ನೇ ಅಥವಾ ದಂಪತಿಗಳನ್ನು ಮರ್ಯಾದೆಯ ಹೆಸರಿನಲ್ಲಿ ಕುಟುಂಬಸ್ಥರೇ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಉಲ್ಲೇಖಿಸಲಾಗಿದೆ.

ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಅಂತರ್‌ಜಾತಿ ವಿವಾಹ ಮಾಡಿಕೊಂಡಿದ್ದ ತುಂಬು ಗರ್ಭಿಣಿ ಯುವತಿಯನ್ನು ಜಾತಿ ದ್ವೇಷದಿಂದ ಹತ್ಯೆ ಮಾಡಿರುವ ಘಟನೆಗೆ ಉದಾಹರಣೆ ನೀಡಲಾಗಿದ್ದು, ಇಂತಹ ಕ್ರೌರ್ಯಗಳನ್ನು “ಘೋರ ಅಪರಾಧ”ವೆಂದು ಪರಿಗಣಿಸಿ ಕಠಿಣ ಶಿಕ್ಷೆಯ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಮರ್ಯಾದಾಗೇಡು ಹತ್ಯೆಗಳಿಗೆ ಬಲಿಯಾದ ಯುವತಿ ‘ಮಾನ್ಯಾ’ ಅವರ ಹೆಸರಿನಲ್ಲಿ ಉಗ್ರ ಶಿಕ್ಷೆಯ ಕಾಯ್ದೆಯನ್ನು “ಮಾನ್ಯಾ ಕಾಯ್ದೆ” ಎಂದು ನಾಮಕರಣ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಮೂಲಕ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಲಾಗಿದೆ.

ಅಭಿಯಾನಕ್ಕೆ ಸಾವಿರಾರು ನಾಗರಿಕರು, ಪತ್ರಕರ್ತರು, ಲೇಖಕರು, ಸಾಹಿತಿಗಳು, ಕಲಾವಿದರು ಹಾಗೂ ಸಾಮಾಜಿಕ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು
ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌ ರಾಜಕಾರಣ ಇದೀಗ ಕರ್ನಾಟಕದಲ್ಲೂ ಪ್ರಾರಂಭವಾಗುವ ಲಕ್ಷಣ ಕಂಡುಬಂದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಬೇರು ಕಡಿದು ಹಾಕಲು ಸರ್ಕಾರ ತೀರ್ಮಾನಿಸಿರುವ ಪರಿಣಾಮವಾಗಿ, ಡ್ರಗ್‌ ಪೆಡ್ಲರ್‌ಗಳು ವಾಸಿಸುವ ಅನಧಿಕೃತ ಮನೆಗಳ ಮೇಲೆ ಬುಲ್ಡೋಜರ್‌ ಹತ್ತಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ವಿಧಾನಪರಿಷತ್ತಿನಲ್ಲಿ ಘೋಷಿಸಿದರು.

ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆ ಬುಲ್ಡೋಜರ್‌ ಕ್ರಮ
ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌ ಅವರು, ಅನೇಕ ವಿದೇಶಿ ಪ್ರಜೆಗಳು—ವಿಶೇಷವಾಗಿ ಆಫ್ರಿಕನ್ ರಾಷ್ಟ್ರಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ—ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವುದನ್ನು ಉಲ್ಲೇಖಿಸಿದರು.
“ಮಾದಕ ವಸ್ತು ಮಾರಾಟಗಾರರು ಬಾಡಿಗೆಗೆ ವಾಸಿಸುವ ಮನೆಗಳನ್ನು ಸಹ ನಾವು ಕೆಡವಲು ಸಿದ್ಧರಾಗಿದ್ದೇವೆ. ಮನೆ ಬಾಡಿಗೆ ನೀಡಿರುವ ಮನೆಮಾಲೀಕರನ್ನೂ ಗುರುತಿಸಲಾಗಿದೆ” ಎಂದು ಅವರು ತಿಳಿಸಿದರು.

ಅಷ್ಟೇ ಅಲ್ಲ, ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಪೊಲೀಸರು ಸಹ ಭಾಗಿಯಾಗಿರುವುದು ಪತ್ತೆಯಾದರೆ, ಸೇವೆಯಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಸ್ಪಷ್ಟಪಡಿಸಿದರು.

ಡ್ರಗ್ಸ್‌ ಮಾರುತ್ತಿದ್ದ 300 ವಿದೇಶಿ ಪ್ರಜೆಗಳ ಗಡೀಪಾರು
ರಾಜ್ಯದಲ್ಲಿ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ನಾಗರಿಕರ ಮೇಲೆ ಗಟ್ಟಿಯಾದ ಕ್ರಮ ಹೇರಲಾಗುತ್ತಿದೆ. ಸಮಿತಿಯಲ್ಲಿ ಮಾತನಾಡಿದ ಪರಮೇಶ್ವರ್‌ ಅವರು,

— “ಡ್ರಗ್ಸ್‌ ಮಾರಾಟದ ಪ್ರಕರಣಗಳಲ್ಲಿ ಸಿಕ್ಕಿಬಿದ್ದ 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಈಗಾಗಲೇ ಗಡೀಪಾರು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

—“ಬಂಧನ ನಿಮಗೆ ಭಾರತದಲ್ಲೇ ಉಳಿಯಲು ಸಹಾಯವಾಗುತ್ತದೆ ಎಂದು ಕೆಲ ಪೆಡ್ಲರ್‌ಗಳು ಭಾವಿಸುತ್ತಿದ್ದಾರೆ; ಆದರೆ ನಾವು ಅವರನ್ನು ನೇರವಾಗಿ ಗಡೀಪಾರು ಮಾಡುತ್ತಿದ್ದೇವೆ” ಎಂದು ಹೇಳಿದರು.
ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್‌ಗಳ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬ ಉಂಟಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲೇ ಮೊದಲ ಆಂಟಿ-ನಾರ್ಕೋಟಿಕ್ಸ್‌ ಟಾಸ್ಕ್ ಫೋರ್ಸ್​
ರಾಜ್ಯದಲ್ಲಿ ಮಾದಕ ವಸ್ತುಗಳ ಹರಡುವಿಕೆಯನ್ನು ತಡೆಯಲು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ದೇಶದಲ್ಲೇ ಮೊದಲ ‘ಆಂಟಿ-ನಾರ್ಕೋಟಿಕ್ಸ್‌ ಟಾಸ್ಕ್ ಫೋರ್ಸ್’ ಸ್ಥಾಪಿಸಲಾಗಿದೆ. ಈ ತಂಡವು ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಕಾರ್ಯಚರಣೆಗಳನ್ನು ನಡೆಸುತ್ತಿದೆ.

ಕಾಂಗ್ರೆಸ್‌ನ ಬುಲ್ಡೋಜರ್‌ ನೀತಿ– ಹಿಂದಿನ ನಿಲುವಿಗೆ ವಿರುದ್ಧ?
ಬಿಜೆಪಿ ಸರ್ಕಾರಗಳು ಅನಧಿಕೃತ ಕಟ್ಟಡಗಳ ಮೇಲೆ ಬುಲ್ಡೋಜರ್‌ ಹತ್ತಿಸುವ ಕ್ರಮವನ್ನು ಅನುಸರಿಸುತ್ತಿವೆ ಎಂದು ಕಾಂಗ್ರೆಸ್‌ ವರ್ಷಗಳ ಕಾಲ ತೀವ್ರ ಟೀಕೆ ಮಾಡುತ್ತಾ ಬಂದಿತ್ತು. ಆದರೆ ಇದೇ ಕಾಂಗ್ರೆಸ್‌ ಸರ್ಕಾರ ಈಗ ಬುಲ್ಡೋಜರ್‌ ಕ್ರಮ ಜಾರಿಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಹೇಳಿಕೆಗನುಗುಣವಾಗಿ, “ಅಪರಾಧಕ್ಕೆ ಸಂಬಂಧಿಸಿದ ಆರೋಪ ಮಾತ್ರ ಆಸ್ತಿಯನ್ನು ಕೆಡವಲು ಆಧಾರವಲ್ಲ; ಕಾನೂನು ಪ್ರಕ್ರಿಯೆ ಪಾಲಿಸಲೇಬೇಕು” ಎಂಬ ತೀರ್ಪು ಹೊರಬಿದ್ದಿತ್ತು. ಇದನ್ನು ನೆನಪಿಸುತ್ತಾ ವಿರೋಧ ಪಕ್ಷಗಳು ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲು ಆರಂಭಿಸಿವೆ.

ಸರ್ಕಾರದ ದತ್ತಾಂಶ: ಡ್ರಗ್ ಪ್ರಕರಣಗಳಲ್ಲಿ ಏರಿಕೆ
ಗೃಹ ಇಲಾಖೆಯ ಪ್ರಕಟಿಸಿದ ವಿವರಗಳ ಪ್ರಕಾರ:

2024ರಲ್ಲಿ:
4,168 ಡ್ರಗ್ ಪ್ರಕರಣಗಳು
1,833 ಪ್ರಕರಣಗಳಲ್ಲಿ ಶಿಕ್ಷೆ

2025 (ನವೆಂಬರ್ 15ರ ವರೆಗೆ):
5,747 ಪ್ರಕರಣಗಳು
1,079 ಶಿಕ್ಷೆಗಳು

ಬೆಂಗಳೂರು ನಗರದ ಡಿಸೆಂಬರ್ ಮೊದಲ ವಾರದ ವರದಿ:
1,078 ಡ್ರಗ್ ಅಪರಾಧಗಳು
1,543 ಮಂದಿಯನ್ನು ಬಂಧನ
52 ವಿದೇಶಿ ನಾಗರಿಕರು
1,446.75 ಕೆಜಿ ಮಾದಕ ವಸ್ತು ವಶ
160 ಕೋಟಿ ರೂ ಮೌಲ್ಯದ ವಸ್ತುಗಳ ವಶಪಡಿಕೆ

ಡಿ.ಕೆ. ಶಿವಕುಮಾರ್‌ಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೋಟಿಸ್
ದೆಹಲಿ ಪೊಲೀಸ್‌ರ ಆರ್ಥಿಕ ಅಪರಾಧ ವಿಭಾಗ (ಇ.ಓ.ಡಬ್ಲ್ಯೂ) ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 29ರಂದು ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 19ರೊಳಗೆ ವಿಚಾರಣೆಗೆ ಹಾಜರಾಗುವಂತೆ ಅಥವಾ ಹಣಕಾಸು ಮತ್ತು ವಹಿವಾಟು ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ನೋಟಿಸ್ ಅಕ್ಟೋಬರ್ 3ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ್ದು, ಶಿವಕುಮಾರ್ ಅವರು ಮುಖ್ಯ ಮಾಹಿತಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ನೋಟಿಸ್‌ನಲ್ಲಿ ಕೇಳಲಾದ ವಿವರಗಳು
ನೋಟಿಸ್‌ನಲ್ಲಿ ಶಿವಕುಮಾರ್ ಅವರ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್‌ ಪಕ್ಷದೊಂದಿಗಿನ ಸಂಬಂಧ, ಯಂಗ್ ಇಂಡಿಯಾ (ವೈಐ) ಸಂಸ್ಥೆಗೆ ಕಳಿಸಿದ ಹಣದ ಮೂಲ, ಉದ್ದೇಶ, ಆದಾಯ ತೆರಿಗೆ ದಾಖಲೆಗಳು ಮತ್ತು ದಾನ ಪತ್ರಗಳನ್ನು ಕೇಳಲಾಗಿದೆ.

ಇದರ ಜೊತೆಗೆ, ಯಂಗ್ ಇಂಡಿಯಾ ಅಥವಾ ಎಐಸಿಸಿ ಅಧಿಕಾರಿಗಳೊಂದಿಗಿನ ಸನ್ನಿವೇಶಗಳು, ಯಾರ ಆದೇಶದ ಮೇರೆಗೆ ಈ ಹಣ ವರ್ಗಾಯಿಸಲಾಯಿತು ಮತ್ತು ಅದರ ಬಳಕೆಯ ಬಗ್ಗೆ ತಿಳಿವಳಿಕೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಹೇಳಲಾಗಿದೆ.

ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಜೊತೆಗೆ ₹2.5 ಕೋಟಿ ದಾನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ
ನ್ಯಾಷನಲ್ ಹೆರಾಲ್ಡ್ ಪ್ರಕರಣವು 2013ರಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅವರ ದೂರು ಆಧಾರದ ಮೇಲೆ ಆರಂಭವಾಗಿದ್ದು, ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸ್ಥೂಲ ಸಂಪತ್ತುಗಳನ್ನು ಯಂಗ್ ಇಂಡಿಯನ್ ಸಂಸ್ಥೆ ₹50 ಲಕ್ಷಕ್ಕೆ ತಗುಲಿಸಿಕೊಂಡಿದೆ ಎಂದು ಆರೋಪ ಹೊಂದಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿಯರು “ಯಂಗ್ ಇಂಡಿಯಾ”ದಲ್ಲಿ ಶೇ 76% ಷೇರುಗಳನ್ನು ಹೊಂದಿದ್ದಾರೆ ಮತ್ತು ಈ ಪ್ರಕರಣದಲ್ಲಿ ಅಪರಾಧಿ ಷಡ್ಯಂತ್ರ, ಮೋಸ ಮತ್ತು ವಿಶ್ವಾಸ ದ್ರೋಹದ ಆರೋಪಗಳಿವೆ.

ಇದಕ್ಕೂ ಮುಂಚೆ ಜಾರಿ ನಿರ್ದೇಶನಾಲಯ (ಇಡಿ)ಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಸಹೋದರರನ್ನು ವಿಚಾರಣೆ ನಡೆಸಿತ್ತು.