ಶಿಕ್ಷಣ – Peepal Media

ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟ: ಮಧ್ಯಾಹ್ನ 3ಕ್ಕೆ ಆನ್‌ಲೈನ್‌ನಲ್ಲಿ ಲಭ್ಯ, ಈ ಸುದ್ದಿಯೊಳಗಿನ ಲಿಂಕ್ ಕ್ಲಿಕ್ ಮಾಡಿ
ರಾಜ್ಯದ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಮಧ್ಯಾಹ್ನ 3:00 ಗಂಟೆಗೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ https://karresults.nic.in ನಲ್ಲಿ ಪ್ರಕಟಿಸಲಾಗುವುದು.

ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶವನ್ನು ಪಡೆಯಲಿದ್ದಾರೆ. ತಾಂತ್ರಿಕ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಿರುವ ಮಂಡಳಿ, ಅಂಕಪಟ್ಟಿಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಸಜ್ಜಾಗಿದೆ.

ಇದೇ ವೇಳೆ, ಸಂಜೆ 6:15ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಲಿದ್ದು, ಫಲಿತಾಂಶದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ನಾಳೆ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಈ ಸುದ್ದಿಗೋಷ್ಠಿ ನಡೆಯಲಿದೆ.

ಪರೀಕ್ಷೆಯ ಹಿನ್ನಲೆ:
2026ರ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ಸುಗಮವಾಗಿ ನಡೆದವು.

ಮರುಮೌಲ್ಯಮಾಪನಕ್ಕೆ ಅವಕಾಶ:
ಫಲಿತಾಂಶದಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ (Revaluation) ಹಾಗೂ ಉತ್ತರಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಫಲಿತಾಂಶ ಪ್ರಕಟವಾದ ನಂತರ ಮಂಡಳಿ ಪ್ರಕಟಿಸಲಿದೆ.

ಫಲಿತಾಂಶ ವೀಕ್ಷಿಸುವ ವಿಧಾನ:
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆ ಹಾಗೂ ವಿಷಯ ಸಂಯೋಜನೆ ನಮೂದಿಸುವ ಮೂಲಕ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

CBSE 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ – ಭಾಷಾ ನೀತಿ
ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. 2026ರ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ (Students) ‘ಹೊಸ ಭಾಷಾ ನೀತಿ’ಯನ್ನು ಪ್ರಕಟಿಸಿದೆ. ಈ ಹಿಂದೆ ಕೇವಲ ಎರಡು ಭಾಷೆಗಳನ್ನು ಕಲಿಯುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಕಡ್ಡಾಯವಾಗಿ ಮೂರು ಭಾಷೆಗಳನ್ನು ಅಭ್ಯಸಿಸಬೇಕಾಗುತ್ತದೆ.

ಹೊಸ ನೀತಿಯ ಪ್ರಮುಖ ಅಂಶಗಳು

ಭಾರತೀಯ ಭಾಷೆಗಳಿಗೆ ಆದ್ಯತೆ: ವಿದ್ಯಾರ್ಥಿಗಳು ಕಲಿಯುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ್ದಾಗಿರಬೇಕು. ಉದಾಹರಣೆಗೆ: ಕನ್ನಡ, ಹಿಂದಿ, ಸಂಸ್ಕೃತ ಅಥವಾ ಇತರ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪರೀಕ್ಷೆ ಕಡ್ಡಾಯ: 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಈ ಮೂರೂ ಭಾಷೆಗಳಲ್ಲಿ ಪಾಸ್ ಆಗುವುದು ಕಡ್ಡಾಯವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಭಾಷಾ ಪ್ರಾವೀಣ್ಯತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಕರ್ನಾಟಕದ ಶಾಲೆಗಳಿಗೆ ಲಾಭ: ಈ ಹೊಸ ನೀತಿಯಿಂದಾಗಿ ಕರ್ನಾಟಕದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಹೆಚ್ಚಿನ ಆದ್ಯತೆ ಸಿಗಲಿದೆ. ವಿದ್ಯಾರ್ಥಿಗಳು ಇಂಗ್ಲಿಷ್ ಜೊತೆಗೆ ಎರಡು ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಪಠ್ಯಕ್ರಮ ವಿನ್ಯಾಸ: ಮೂರನೇ ಭಾಷೆಯನ್ನು ಸೇರಿಸುವುದರಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆಯಾಗದಂತೆ ಪಠ್ಯಕ್ರಮವನ್ನು ಸಮರ್ಪಕವಾಗಿ ವಿನ್ಯಾಸಗೊಳಿಸಲು ಮಂಡಳಿಯು ಶಾಲೆಗಳಿಗೆ ಸೂಚನೆ ನೀಡಿದೆ.

ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಬಹುಭಾಷಾ ಜ್ಞಾನವನ್ನು ಬೆಳೆಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ಭಾಷೆಗಳ ಮೂಲಕ ಅರಿಯಲು ಸಹಕಾರಿಯಾಗಲಿದೆ ಎಂದು ಮಂಡಳಿ ಆಶಿಸಿದೆ.

2026ರಿಂದ SSLC ಹೊಸ ನಿಯಮ: ಹಿಂದಿ ಸೇರಿದಂತೆ ತೃತೀಯ ಭಾಷೆ ಅಂಕಗಳಿಗೆ ಕೊಕ್
ರಾಜ್ಯದ SSLC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ಸರ್ಕಾರ ಘೋಷಿಸಿದೆ. ಇನ್ನುಮುಂದೆ SSLC ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸದೇ ಇರಲು ತೀರ್ಮಾನಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈ ಹೊಸ ನಿಯಮವನ್ನು 2026ರಲ್ಲಿ ನಡೆಯಲಿರುವ SSLC ಪರೀಕ್ಷೆಯಿಂದಲೇ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದುವರೆಗೆ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಆದರೆ ಇನ್ನುಮುಂದೆ ತೃತೀಯ ಭಾಷೆಯ 100 ಅಂಕಗಳನ್ನು ಒಟ್ಟು ಅಂಕಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಆದಾಗ್ಯೂ, ಹಿಂದಿನಂತೆ ಆ ವಿಷಯಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, ಅದರ ಫಲಿತಾಂಶವನ್ನು ಅಂಕಗಳ ಬದಲು “ಗ್ರೇಡ್” ರೂಪದಲ್ಲಿ ಅಂಕಪಟ್ಟಿಯಲ್ಲಿ ನಮೂದಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಈ ಕ್ರಮದಿಂದ ವಿದ್ಯಾರ್ಥಿಗಳ ಮೇಲಿನ ಅಂಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಸಚಿವರು ಹೇಳಿದ್ದಾರೆ. ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಒಟ್ಟು ಅಂಕಗಳನ್ನು 525ಕ್ಕೆ ಮಾತ್ರ ಲೆಕ್ಕ ಹಾಕಲಾಗುವುದರಿಂದ ಶೇಕಡಾವಾರು ಫಲಿತಾಂಶದಲ್ಲಿಯೂ ಬದಲಾವಣೆ ಕಾಣಿಸಿಕೊಳ್ಳಲಿದೆ.

ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಈ ನಿರ್ಧಾರ ಪ್ರಮುಖ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದ್ದು, ಹಿಂದಿ ಹೇರಿಕೆಯ ಗಂಭೀರ ವಿಷಯದ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರದ ಬಗ್ಗೆ ಮೆಚ್ಚುಗೆಯ ಮಾತುಗಳು ಸಿಗುವ ಸಾಧ್ಯತೆ ಇದೆ.

ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ 25% ಉಚಿತ ಪ್ರವೇಶ ಕಡ್ಡಾಯ : ಕೇಂದ್ರ, ರಾಜ್ಯ ಸರ್ಕಾರಗಳಿಗೆ ‘ಸುಪ್ರೀಂ’ ಸ್ಪಷ್ಟ ನಿರ್ದೇಶನ
ದೇಶದ ಬಡ ಹಾಗೂ ಅನನುಕೂಲಕರ ವರ್ಗಗಳ ಮಕ್ಕಳಿಗೆ ದುಬಾರಿ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಕಲ್ಪಿಸುವುದು ಕೇವಲ ಕಲ್ಯಾಣ ಕ್ರಮವಲ್ಲ, ಅದು ರಾಷ್ಟ್ರೀಯ ಧ್ಯೇಯವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಅನುದಾನರಹಿತ, ಅಲ್ಪಸಂಖ್ಯಾತರಲ್ಲದ ಶಾಲೆಗಳಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ ಶೇ.25ರಷ್ಟು ಪ್ರವೇಶ ಕೋಟಾವನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠ ಮಂಗಳವಾರ ಈ ಮಹತ್ವದ ತೀರ್ಪು ನೀಡಿದ್ದು, ಬಡ ಮಕ್ಕಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಗೆ ತರುವುದೇ ಸಂವಿಧಾನದ ಭ್ರಾತೃತ್ವದ ಗುರಿಯನ್ನು ಸಾಕಾರಗೊಳಿಸುವ ಮಾರ್ಗ ಎಂದು ಹೇಳಿದೆ. “ರಿಕ್ಷಾವಾಲಕರ ಮಗು ಮತ್ತು ಕೋಟ್ಯಾಧಿಪತಿ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮಗು ಒಂದೇ ಶಾಲೆಯಲ್ಲಿ ಓದಿದಾಗ ಮಾತ್ರ ಸಂವಿಧಾನದಲ್ಲಿ ಅಡಕವಾಗಿರುವ ಭ್ರಾತೃತ್ವದ ತತ್ವ ನಿಜವಾಗುತ್ತದೆ” ಎಂದು ಪೀಠ ಸ್ಪಷ್ಟಪಡಿಸಿದೆ.

ಸಂವಿಧಾನಾತ್ಮಕ ಬದ್ಧತೆ
ಆರ್‌ಟಿಇ ಕಾಯ್ದೆಯ ಸೆಕ್ಷನ್ 12(1)(c) ಅಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟು ಸೀಟುಗಳನ್ನು ಬಡ ಹಾಗೂ ಅನನುಕೂಲಕರ ವರ್ಗಗಳ ಮಕ್ಕಳಿಗೆ ಮೀಸಲಿಡುವುದು ಕೇವಲ ಸಾರ್ವಜನಿಕ ಹಿತಾಸಕ್ತಿ ಕ್ರಮವಲ್ಲ, ಅದು ಆರ್ಟಿಕಲ್ 21A ಮತ್ತು ಆರ್ಟಿಕಲ್ 39(f) ಅಡಿಯಲ್ಲಿ ಗುರುತಿಸಲ್ಪಟ್ಟ “ಮಗುವಿನ ಸಮಗ್ರ ಅಭಿವೃದ್ಧಿ”ಗೆ ಸಂಬಂಧಿಸಿದ ಸಂವಿಧಾನಾತ್ಮಕ ಬದ್ಧತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜಾತಿ, ವರ್ಗ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ, ಎಲ್ಲ ಮಕ್ಕಳಿಗೂ ಒಂದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಒದಗಿಸಲು ಆರ್‌ಟಿಇ ಕಾಯ್ದೆ ಅವಕಾಶ ನೀಡುತ್ತದೆ ಎಂದು ಪೀಠ ತಿಳಿಸಿದೆ.

ಮಕ್ಕಳ ಹೊಂದಾಣಿಕೆ ಕುರಿತ ಕಳವಳಕ್ಕೆ ಉತ್ತರ
ಶ್ರೀಮಂತ ಮಕ್ಕಳೊಂದಿಗೆ ದುರ್ಬಲ ವರ್ಗದ ಮಕ್ಕಳು ಒಂದೇ ಶಾಲಾ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬ ಆತಂಕಗಳಿಗೂ ನ್ಯಾಯಾಲಯ ಉತ್ತರ ನೀಡಿದೆ. ಬೋಧನಾ ಪ್ರಕ್ರಿಯೆ ಮತ್ತು ಶಿಕ್ಷಕರು ಈ ಮಕ್ಕಳ ಹಿನ್ನೆಲೆ ಹಾಗೂ ಅನುಭವವನ್ನು ಜ್ಞಾನದ ಮೂಲವಾಗಿ ಬಳಸಿಕೊಂಡು, ಅವರ ಸ್ವಾಭಿಮಾನ ಮತ್ತು ಗುರುತನ್ನು ಹೆಚ್ಚಿಸುವ ಮೂಲಕ ಸಬಲೀಕರಣಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ನಿಯಮಾವಳಿ ಜಾರಿಗೆ ಸೂಚನೆ
ಆರ್‌ಟಿಇ ಕಾಯ್ದೆಯ ಸೆಕ್ಷನ್ 38 ಅಡಿಯಲ್ಲಿ, ದುರ್ಬಲ ಮತ್ತು ಅನನುಕೂಲಕರ ವರ್ಗಗಳ ಮಕ್ಕಳನ್ನು ನೆರೆಹೊರೆಯ ಶಾಲೆಗಳಿಗೆ ಹೇಗೆ ಮತ್ತು ಯಾವ ರೀತಿಯಲ್ಲಿ ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ದಿಷ್ಟಪಡಿಸುವ ನಿಯಮಗಳು ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಪೀಠ ಹೇಳಿದೆ.

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR), ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು (SCPCR) ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಸಲಹಾ ಮಂಡಳಿಗಳೊಂದಿಗೆ ಸಮಾಲೋಚಿಸಿ, ಸೆಕ್ಷನ್ 12(1)(c) ಜಾರಿಗೆ ಅಗತ್ಯವಾದ ನಿಯಮಗಳನ್ನು ರೂಪಿಸಿ ಪ್ರಕಟಿಸಲು ಸಂಬಂಧಿತ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊರಡಿಸಿರುವ ನಿಯಮಗಳ ವಿವರಗಳನ್ನು ಸಂಗ್ರಹಿಸಿ ಮಾರ್ಚ್ 31ರೊಳಗೆ ಅಫಿಡವಿಟ್ ಮೂಲಕ ಕೋರ್ಟ್‌ಗೆ ಸಲ್ಲಿಸಲು NCPCRಗೆ ಸೂಚಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 6ರಂದು ನಡೆಯಲಿದೆ.

ಪ್ರಕರಣದ ಹಿನ್ನೆಲೆ
2016ರಲ್ಲಿ ನೆರೆಹೊರೆಯ ಖಾಸಗಿ ಅನುದಾನರಹಿತ ಶಾಲೆಯಲ್ಲಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕಾಗಿ ಸೀಟುಗಳು ಲಭ್ಯವಿದ್ದರೂ, ಆರ್‌ಟಿಇ ಕಾಯ್ದೆಯಡಿ ಪ್ರವೇಶ ನಿರಾಕರಿಸಲ್ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ವಿಶೇಷ ರಜೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಅರ್ಜಿದಾರರು ನಂತರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಇದೀಗ ದೇಶವ್ಯಾಪಿ ಪರಿಣಾಮ ಬೀರುವ ಮಹತ್ವದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಹೊರಡಿಸಿದೆ.

ಮಲಯಾಳಿ ಭಾಷಾ ಮಸೂದೆ ಕಾಸರಗೋಡು ಕನ್ನಡಿಗರಿಗೆ ಮಾರಕವೇ? ಲಾಭವೇ? ಸಿದ್ದರಾಮಯ್ಯ ರಾಜಕೀಯ ಏನು?
“ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ? ‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5, 6, 7, 8 ರಲ್ಲಿ ಏನು ಹೇಳುತ್ತದೆ? ಸಿದ್ದರಾಮಯ್ಯ ರಾಜಕೀಯ ಏನು?” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ, ತಪ್ಪದೇ ಓದಿ

ಕೇರಳ ಸರ್ಕಾರದ ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಕಾಸರಗೋಡು ಕನ್ನಡಿಗರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧಿಸಿದ್ದಾರೆ. ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯನವರ ಈ ನಿಲುವು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆಯು ಕನ್ನಡದ ವಿರುದ್ಧವಾಗಿಲ್ಲ. ಬಹುಶಃ ಕೋಗಿಲು ಸಂತ್ರಸ್ತರ ಪರವಾಗಿ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ತಿರುಗೇಟು ಕೊಡಲು ಮಲಯಾಳಿ ಭಾಷಾ ಮಸೂದೆಯನ್ನು ಸಿದ್ದರಾಮಯ್ಯ ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಮಲಯಾಳ ಕೇರಳದ ರಾಜ್ಯ ಭಾಷೆ. ರಾಜ್ಯಭಾಷೆಯೊಂದನ್ನು ‘ಅಧಿಕೃತ ಆಡಳಿತ ಭಾಷೆ’ ಎಂದು ಘೋಷಿಸಿ, ಶಾಲೆಗಳಲ್ಲಿ ಅದನ್ನು ಕಡ್ಡಾಯ ಮಾಡುವುದು ಆಯಾ ರಾಜ್ಯಗಳ ಭಾಷಾ ಬದ್ಧತೆಯನ್ನು ತೋರಿಸುತ್ತದೆ. ಕೇರಳ ಸರ್ಕಾರದ ಈ ಭಾಷಾ ಬದ್ಧತೆಯು ಕರ್ನಾಟಕಕ್ಕೆ ಮಾದರಿಯಾಗಬೇಕಿದೆ. ಹಾಗಾದರೆ, ಕಾಸರಗೋಡು ಕನ್ನಡಿಗರ ಮಾತೃಭಾಷಾ ಸ್ವಾತಂತ್ರ್ಯವನ್ನು ‘ಮಲಯಾಳಿ ಭಾಷಾ ಮಸೂದೆ -2025’ ಕಸಿದುಕೊಳ್ಳುತ್ತದೆಯೇ ? ಖಂಡಿತವಾಗಿಯೂ ಇಲ್ಲ ! ಬಹುಶಃ ಸಿದ್ದರಾಮಯ್ಯನವರು ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಪೂರ್ತಿಯಾಗಿ ಓದಿಲ್ಲವೆಂದು ಕಾಣುತ್ತದೆ.

‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5 ರಲ್ಲಿ ಹೀಗೆ ಹೇಳುತ್ತದೆ.

ಸೆಕ್ಷನ್ 5

(1) ಭಾರತ ಸಂವಿಧಾನದ ವಿಧಿ 346 ಮತ್ತು ವಿಧಿ 347ಗಳಿಗೆ ಒಳಪಟ್ಟಂತೆ, ಕೇರಳ ರಾಜ್ಯದಲ್ಲಿ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಬಳಸಬೇಕಾದ ಭಾಷೆ ಮಲಯಾಳಂ ಆಗಿರುತ್ತದೆ.

ಸೆಕ್ಷನ್ 5(2) ಉಪವಿಧಿ (1) ರಾಜ್ಯ ಸರ್ಕಾರದ ಅಧೀನದಲ್ಲಿರುವ ಈಗಿರುವ ಎಲ್ಲಾ ಇಲಾಖೆಗಳಿಗೂ ಹಾಗೂ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗುವ ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ. ಇದಲ್ಲದೆ ಸ್ಥಳೀಯ ಸಂಸ್ಥೆಗಳು, ಅರೆ-ಸರ್ಕಾರಿ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಸಂಸ್ಥೆಗಳು ಹಾಗೂ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಗಳಿಗೂ ಇದು ಅನ್ವಯಿಸುತ್ತದೆ.

ಆದರೆ ಭಾರತ ಸರ್ಕಾರದೊಂದಿಗೆ, ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳೊಂದಿಗೆ, ವಿದೇಶಗಳೊಂದಿಗೆ, ಇತರ ರಾಜ್ಯಗಳೊಂದಿಗೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮುಂತಾದವರೊಂದಿಗೆ ನಡೆಯುವ ಪತ್ರವ್ಯವಹಾರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು. ಹಾಗೆಯೇ ಕಾನೂನಿನ ಪ್ರಕಾರ ಇಂಗ್ಲಿಷ್ ಬಳಸುವುದು ಅನಿವಾರ್ಯವಾಗಿರುವ ಇತರ ಸಂದರ್ಭಗಳಲ್ಲಿ ಹಾಗೂ ತಮಿಳು ಮತ್ತು ಕನ್ನಡ ಭಾಷೆ ಮಾತನಾಡುವವರೊಂದಿಗೆ (ರಾಜ್ಯದ ಅಲ್ಪಸಂಖ್ಯಾತ ಭಾಷೆಗಳಾದ ತಮಿಳು ಮತ್ತು ಕನ್ನಡ ಹೊರತುಪಡಿಸಿ) ಸಂವಹನ ನಡೆಸುವ ಸಂದರ್ಭಗಳಲ್ಲೂ ಇಂಗ್ಲಿಷ್ ಬಳಸಬಹುದಾಗಿದೆ.

‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 6 ರಲ್ಲಿ ಹೀಗೆ ಹೇಳುತ್ತದೆ.

ಸೆಕ್ಷನ್ 6(1) ಕೇರಳದಲ್ಲಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯ ಮೊದಲ ಭಾಷೆಯಾಗಿರುತ್ತದೆ.

ಸೆಕ್ಷನ್ 6(2) ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಭಾಷೆಯ ಪ್ರಸಾರ ಮತ್ತು ಪ್ರಚಾರವನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸೆಕ್ಷನ್6(3) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ, ತಮ್ಮ ಮಾತೃಭಾಷೆಯ ಜೊತೆಗೆ ಮಲಯಾಳಂ ಭಾಷೆಯನ್ನು ಅಧ್ಯಯನ ಮಾಡುವ ಅವಕಾಶ ನೀಡಲಾಗುತ್ತದೆ.

ಹಾಗಾಗಿ ‘ಮಲಯಾಳಿ ಭಾಷಾ ಮಸೂದೆ -2025’ರ ಸೆಕ್ಷನ್ 6(3) ಪ್ರಕಾರ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಮಲಯಾಳ ಭಾಷೆ ಕಲಿಯಬಹುದು. ಕನ್ನಡ ಭಾಷೆಗೆ ಇಲ್ಲಿ ಯಾವುದೇ ಅಪಾಯ ಇರುವುದಿಲ್ಲ.

ಇವೆಲ್ಲಕ್ಕಿಂತ ಮುಖ್ಯವಾಗುವುದು ‘ಮಲಯಾಳಿ ಭಾಷಾ ಮಸೂದೆ -2025’ಯ ಸೆಕ್ಷನ್ 7.. ಇದು ಕೇರಳ ಸರ್ಕಾರವು ದ್ರಾವಿಡ ಭಾಷೆಗಳ ಬಗ್ಗೆ ಹೊಂದಿರುವ ಉದಾರತೆಯನ್ನು ತೋರ್ಪಡಿಸುತ್ತದೆ. ಬಹುಶಃ ಯಾವ ರಾಜ್ಯದಲ್ಲೂ ಇಷ್ಟು ಭಾಷಾ ಉದಾರತೆ ಇರುವುದಿಲ್ಲವೇನೋ!

ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಹೀಗೆ ಹೇಳುತ್ತದೆ.

ಸೆಕ್ಷನ್ 7  : ಇತರ ರಾಜ್ಯ–ಭಾಷಿಕ ಅಲ್ಪಸಂಖ್ಯಾತರ ಕುರಿತು ವಿಶೇಷ ಕ್ರಮಗಳು
ಸೆಕ್ಷನ್ 5 ಅಥವಾ ಸೆಕ್ಷನ್ 6ರಲ್ಲಿ ಯಾವುದೇ ಅಂಶಗಳಿದ್ದರೂ ಸಹ,

(1) ಕೇರಳ ರಾಜ್ಯದಲ್ಲಿರುವ ತಮಿಳು ಹಾಗೂ ಕನ್ನಡ ಭಾಷಿಕ ಅಲ್ಪಸಂಖ್ಯಾತರು, ಈ ಉದ್ದೇಶಕ್ಕಾಗಿ ಸರ್ಕಾರದಿಂದ ಭಾಷಿಕ ಅಲ್ಪಸಂಖ್ಯಾತ ಪ್ರದೇಶಗಳೆಂದು ಘೋಷಿಸಲಾದ ಪ್ರದೇಶಗಳಲ್ಲಿ ರುವ ರಾಜ್ಯ ಸರ್ಕಾರದ ಕಾರ್ಯಾಲಯ, ಇಲಾಖೆಗಳ ಮುಖ್ಯಸ್ಥರು ಮತ್ತು ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ತಮ್ಮ ಪತ್ರ ವ್ಯವಹಾರವನ್ನು ತಮ್ಮ ತಮ್ಮ ಭಾಷೆಗಳಲ್ಲಿ ನಡೆಸಬಹುದು. ಅಂತಹ ಸಂದರ್ಭಗಳಲ್ಲಿ ಕಳುಹಿಸಲಾಗುವ ಉತ್ತರಗಳೂ ಅವರವರ ಅಲ್ಪಸಂಖ್ಯಾತ ಭಾಷೆಗಳಲ್ಲಿಯೇ ಇರಬೇಕು.

(2) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳು, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ ಅನುಸಾರವಾಗಿ, ರಾಜ್ಯದ ಶಾಲೆಗಳಲ್ಲಿ ಲಭ್ಯವಿರುವ ತಮ್ಮ ಇಚ್ಛೆಯ ಭಾಷೆಗಳಲ್ಲಿ ಅಧ್ಯಯನ ಮುಂದುವರಿಸಬಹುದು.

(3) ಕೇರಳದಲ್ಲಿ ಅಧ್ಯಯನ ಮಾಡುತ್ತಿರುವ ಇತರ ರಾಜ್ಯಗಳು ಹಾಗೂ ವಿದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ, ಮಾತೃಭಾಷೆ ಮಲಯಾಳಂ ಅಲ್ಲದವರಿಗೆ, 9ನೇ ತರಗತಿ, 10ನೇ ತರಗತಿ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಪರೀಕ್ಷೆಗಳಲ್ಲಿ ಮಲಯಾಳಂ ಭಾಷೆಯಲ್ಲಿ ಪರೀಕ್ಷೆ ಬರೆಯುವ ಕಡ್ಡಾಯದಿಂದ ವಿನಾಯಿತಿ ನೀಡಲಾಗುತ್ತದೆ.

ಕೇರಳದಲ್ಲಿ ಕನ್ನಡಕ್ಕೆ ಇದಕ್ಕಿಂತ ಇನ್ನೇನು ಬೇಕು? ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ರ ಪ್ರಕಾರ ಕೇರಳದ ಉತ್ತರಭಾಗದ ಕಾಸರಗೋಡು ಕನ್ನಡ ಪ್ರದೇಶದಲ್ಲಿ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಕನ್ನಡ ಕಡ್ಡಾಯವಾಗಿರುತ್ತದೆ. ಕನ್ನಡಿಗರ ಜೊತೆ ಕೇರಳದ ಉತ್ತರ ಭಾಗದ ಸರ್ಕಾರಿ ಕಚೇರಿ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡಿಗರ ಕನ್ನಡದ ಅರ್ಜಿ, ಉತ್ತರಗಳನ್ನು ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳು ಸ್ವೀಕರಿಸುವುದನ್ನು, ಕನ್ನಡದಲ್ಲೇ ವ್ಯವಹರಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ.

ಸೆಕ್ಷ 7(2) ಪ್ರಕಾರ, ಕನ್ನಡದ ಮಕ್ಕಳು ಕೇರಳದ ಉತ್ತರ ಭಾಗದಲ್ಲಿ ಕನ್ನಡದಲ್ಲೇ ಅಧ್ಯಯನ ಮುಂದುವರೆಸುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸೆಕ್ಷನ್ 7(3) ಪ್ರಕಾರ, ಕನ್ನಡದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವರಿಗೆ ಪ್ರಶ್ನೆ ಪತ್ರಿಕೆಯನ್ನೂ ಕನ್ನಡದಲ್ಲೇ ನೀಡಿ, ಉತ್ತರವನ್ನೂ ಕನ್ನಡದಲ್ಲೇ ಬರೆಯವ ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಪ್ರಾಥಮಿಕ ಶಾಲೆಯಲ್ಲೂ ಕನ್ನಡದಲ್ಲೇ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.

ಸೆಕ್ಷನ್ 9 ರ ಪ್ರಕಾರ ಕೇರಳದ ಎಲ್ಲಾ ಜಿಲ್ಲಾ ನ್ಯಾಯಾಲಯಗಳ ಆದೇಶಗಳನ್ನು, ತೀರ್ಪುಗಳನ್ನು ಮಲಯಾಳದಲ್ಲೇ ಪ್ರಕಟಿಸಬೇಕು. ಆದರೆ ಭಾಷಾ ಅಲ್ಪಸಂಖ್ಯಾತರಾಗಿರುವ ಪ್ರದೇಶದ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲೀಷ್ ನಲ್ಲಿ ಆದೇಶ, ತೀರ್ಪುಗಳನ್ನು ಪ್ರಕಟಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಬಳಸುವ ಬೋರ್ಡ್, ಜಾಹೀರಾತುಗಳಲ್ಲಿ ದ್ವಿಭಾಷಾ ನೀತಿಯನ್ನು ಅನುಸರಿಸಬೇಕು ಎಂದು ಮಲಯಾಳಿ ಭಾಷಾ ಮಸೂದೆ-2025 ಹೇಳುತ್ತದೆ. ಇದು ಕರ್ನಾಟಕದಲ್ಲಿ ಬೇಡಿಕೆಯಲ್ಲಿದೆ. ಕರ್ನಾಟಕ ಸರ್ಕಾರ ಇನ್ನೂ ದ್ವಿಭಾಷಾ ನೀತಿಯನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲ. ಕೇರಳ ದ್ವಿಭಾಷಾ ನೀತಿಯನ್ನು ಈ ಕಾಯ್ದೆಯಲ್ಲಿ ಸ್ಪಷ್ಟಪಡಿಸುತ್ತಲೇ, ಕನ್ನಡಿಗರು ಇರುವ ಪ್ರದೇಶದಲ್ಲಿ ಕನ್ನಡದಲ್ಲಿ ಜಾಹೀರಾತು, ಬೋರ್ಡ್ ಗಳನ್ನು ಪ್ರದರ್ಶಿಸಬಹುದು ಎಂದು ಕಾಯ್ದೆ ಹೇಳುತ್ತದೆ. ಇದು ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಕೇರಳ ಸರ್ಕಾರ ಕೊಟ್ಟ ಗೌರವ ಎಂಬುದು ನಾವ್ಯಾಕೆ ಹೆಮ್ಮೆಪಡಬಾರದು?

ಕೇರಳದ ಕಾಸರಗೋಡಿನಲ್ಲಿ ಈವರೆಗೂ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳು ಆತಂಕದಲ್ಲಿದ್ದವು. ನಿಧಾನಕ್ಕೆ ಕಾಸರಗೋಡಿನಲ್ಲಿ ಕನ್ನಡ ನಾಶವಾಗುತ್ತಿದೆ ಎಂಬ ಭಯ ಇತ್ತು. ಆದರೆ ಮಲಯಾಳಿ ಭಾಷಾ ಮಸೂದೆ-2025 ಸೆಕ್ಷನ್ 7 ಮೂಲಕ ಕಾಸರಗೋಡಿನಲ್ಲಿ ಕನ್ನಡ ಈಗ ಕನ್ನಡಿಗರ ಕಾನೂನು ಬದ್ಧ ಹಕ್ಕು ಆಗಿ ಮಾರ್ಪಾಟಾಗಿದೆ. ಕೇರಳ ಸರ್ಕಾರದ ಈ ಮಸೂದೆಯನ್ನು ಕನ್ನಡಿಗರು ವಿರೋಧಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ. ಇದು ಸರಿಯಾದುದಲ್ಲ. ಮಲಯಾಳಿ ಭಾಷಾ ಮಸೂದೆ-2025ಯನ್ನು ಕನ್ನಡಿಗರು ಸ್ವಾಗತಿಸಬೇಕು ಮಾತ್ರವಲ್ಲ, ಅದೇ ಮಾದರಿಯ ‘ಕನ್ನಡ ಭಾಷಾ ಮಸೂದೆ -2026’ ರನ್ನು ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಜಾರಿಗೆ ತರಬೇಕು ಎಂದು ಕನ್ನಡಿಗರು ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಬೇಕಿದೆ.

ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಮಟ್ಟ ಹೆಚ್ಚಿಸಲು ‘ಮರುಸಿಂಚನ’ ಯೋಜನೆ ಜಾರಿಗೆ
ಕರ್ನಾಟಕದ 6 ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ‘ಮರುಸಿಂಚನ’ ಯೋಜನೆಯನ್ನು ಜಾರಿಗೊಳಿಸುವ ಚಿಂತನೆ ನಡೆಸಿದೆ. ಕಲಿಕಾ ಫಲಿತಾಂಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮರುಸಿಂಚನ ಯೋಜನೆಯನ್ನು 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿದೆ.

ಒಟ್ಟಾರೆ ಈ ಯೋಜನೆಯ ಮೂಲ ಉದ್ದೇಶ ಕಲಿಕೆಯ ಅಂತರವನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ಶಾಲೆಗಳ ಸುಮಾರು 18,000 ವಿದ್ಯಾರ್ಥಿಗಳು ಈ ಉಪಕ್ರಮದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.

ಮೂಲತಃ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾದ ಮರುಸಿಂಚನ ಯೋಜನೆಯು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ಸುಧಾರಿಸುವತ್ತ ಗಮನಹರಿಸಿತು. 2023-24 ಮತ್ತು 2024-25 ಶೈಕ್ಷಣಿಕ ವರ್ಷಗಳಲ್ಲಿ, ಕರ್ನಾಟಕದ 17 ಜಿಲ್ಲೆಗಳ 69 ತಾಲ್ಲೂಕುಗಳಾದ್ಯಂತ ಎಲ್ಲಾ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಇದನ್ನು ಜಾರಿಗೆ ತರಲಾಯಿತು.

ಮರುಸಿಂಚನ ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ ಶೈಕ್ಷಣಿಕ ವರ್ಷದಲ್ಲಿ ನಡೆಸುವ ಪರಿಹಾರ ಬೋಧನೆಯ ಮೂಲಕ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಿಸುವುದು. ಶಿಕ್ಷಕರ ತರಬೇತಿಗೆ ವಿಶೇಷ ಗಮನ ನೀಡಲಾಗುವುದಾಗಿದೆ. ಯೋಜನೆಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಸಾಮಗ್ರಿಗಳನ್ನು ಪಡೆಯುತ್ತಾರೆ ಮತ್ತು ಶಿಕ್ಷಕರಿಗೆ ಸಮಗ್ರ ಬೋಧನಾ ಮಾಡ್ಯೂಲ್‌ಗಳನ್ನು ಒದಗಿಸಲಾಗುತ್ತದೆ.

ಮರುಸಿಂಚನ ಯೋಜನೆಯನ್ನು ಪ್ರತಿ ತರಗತಿಗೆ 50 ಗಂಟೆಗಳ ಕಲಿಕಾ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿದ್ದು, ಐದು ಶೈಕ್ಷಣಿಕ ವರ್ಷಗಳಲ್ಲಿ ವ್ಯಾಪಿಸಿದೆ. ಇದು ವಿದ್ಯಾರ್ಥಿಗಳು ತರಗತಿಗೆ ಸೂಕ್ತವಾದ ಕಲಿಕಾ ಮಟ್ಟವನ್ನು ಸಾಧಿಸಲು ಸಹಾಯ ಮಾಡಲು ಮೂಲಭೂತ ಮತ್ತು ಪೂರ್ವಾಪೇಕ್ಷಿತ ಕೌಶಲ್ಯಗಳನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಇಲಾಖೆ ತಿಳಿಸಿದೆ.

ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಮತ್ತು ಇಂಗ್ಲಿಷ್‌ನಂತಹ ವಿಷಯಗಳನ್ನು ಒಳಗೊಂಡ ಅಭ್ಯಾಸ ಪುಸ್ತಕಗಳನ್ನು ನೀಡಲಾಗುವುದು. ಗಮನಾರ್ಹವಾಗಿ, ಹಿಂದಿ ಭಾಷೆಯನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ.

ಒಳಮೀಸಲಾತಿ ಜಾರಿಯಾದ ಕೂಡಲೇ 16,500 ಶಿಕ್ಷಕರ ನೇಮಕಾತಿ ಪೂರ್ಣ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ
ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರವು ಶೀಘ್ರವೇ 16,500 ಶಿಕ್ಷಕರನ್ನು ನೇಮಕ ಮಾಡಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಬಾಗಲಕೋಟೆಯಲ್ಲಿ ಜೂನ್ 10ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಉನ್ನತೀಕರಿಸಲು ಈ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

“ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ 43,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ, ಆದರೆ ಇದು ಸಾಕಾಗುತ್ತಿಲ್ಲ. ಒಳಮೀಸಲಾತಿ ಜಾರಿಯಾದ ನಂತರ 16,500 ಶಿಕ್ಷಕರನ್ನು ಖಾಯಂ ಆಗಿ ನೇಮಕ ಮಾಡಲಾಗುವುದು” ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಈ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿರಲಿದೆ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

ಈ ನೇಮಕಾತಿಯ ಜೊತೆಗೆ, ಸರ್ಕಾರವು ಶಾಲೆಗಳ ಮೂಲಭೂತ ಸೌಕರ್ಯವನ್ನು ಸುಧಾರಿಸಲು ಆದ್ಯತೆ ನೀಡಲಿದೆ. “ನಾವು 8,500 ಕೊಠಡಿಗಳ ನಿರ್ಮಾಣವನ್ನು ಈ ವರ್ಷ ಪೂರ್ಣಗೊಳಿಸುತ್ತೇವೆ ಮತ್ತು ಕರ್ನಾಟಕ ಸಾರ್ವಜನಿಕ ಶಾಲೆಗಳ (KPS) ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಸಚಿವರು ತಿಳಿಸಿದರು. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇದರ ಜೊತೆಗೆ, ವಿದ್ಯಾರ್ಥಿಗಳಿಗೆ CET ಮತ್ತು NEET ತರಬೇತಿಯನ್ನು ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಶಾಲೆಗಳಲ್ಲಿ ಎಐ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಘೋಷಿಸಿದರು. “ನಮ್ಮ ಗುರಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು” ಎಂದು ಮಧು ಬಂಗಾರಪ್ಪ ಒತ್ತಿ ಹೇಳಿದರು.

ಈ ನೇಮಕಾತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಕೊರತೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ. ಈ ಪ್ರಕ್ರಿಯೆಗೆ ಆರ್ಥಿಕ ಬೆಂಬಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ವಿಶೇಷ ಪ್ರತಿನಿಧಿಗಳನ್ನು ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕವಿ, ಶಿಕ್ಷಕ ವೀರಣ್ಣ ಮಡಿವಾಳರ ಅಮಾನತು: ಸರ್ಕಾರದ ಕ್ರಮ ವಿರೋಧಿಸಿ ಕವಿ ಬರೆದ ಪತ್ರ ವೈರಲ್‌
ಬೆಳಗಾವಿ:  ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಕೊಠಡಿ ನಿರ್ಮಾಣಕ್ಕೆ ಆಗ್ರಹಿಸಿದ್ದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ವಿರಣ್ಣ ಮಡಿವಾಳರ ವಿರುದ್ಧ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ನೆಪವೊಡ್ಡಿ ಅಮಾನತುಗೊಳಿಸಿದೆ. ರಾಜ್ಯ ಸರಕಾರದ ಈ ಧೋರಣೆ ವಿರುದ್ಧ ತೀವ್ರ ಅಸಮಧಾನಗೊಂಡಿರುವ ಕವಿ ವೀರಣ್ಣ ಸುದೀಘ್ರ ಪತ್ರ ಬರೆದಿದ್ದು, ಆ ಪತ್ರ ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಚಿಕ್ಕೋಡಿ ಜಿಲ್ಲೆಯ ರಾಯಭಾಗ ತಾಲೊಕಿನ ನಿಡಗುಂಡಿ ಗ್ರಾಮದ ಅಂಬೇಡ್ಕರ ನಗರದ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ  ವೀರಣ್ಣ ಮಡಿವಾಳರ ಅವರೇ ಈ ಪತ್ರ ಬರೆದಿರುವುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಆ ಪತ್ರವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಗೆ,

ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ರಾಯಬಾಗ.

ಮಾನ್ಯರೇ,

ವಿಷಯ: ತಾವು ನೀಡಿರುವ ಕಾರಣ ಕೇಳಿ ನೋಟೀಸ್ ಗೆ ನನ್ನ ಹೇಳಿಕೆಯನ್ನು ನೀಡುತ್ತಿರುವ ಕುರಿತು

ಉಲ್ಲೇಖ: ದಿನಾಂಕ:೨೭.೦೫.೨೦೨೫ ರಂದು ತಾವು ನನಗೆ ನೀಡಿರುವ ಕಾರಣ ಕೇಳಿ ನೋಟೀಸ್

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ ನಾನು ಕಳೆದ ಒಂಭತ್ತು ವರುಷಗಳಿಂದ ನಿಡಗುಂದಿಯ ಅಂಬೇಡ್ಕರ ನಗರ ಶಾಲೆಯ ಅಭಿವೃದ್ಧಿಗಾಗಿ ಅಲ್ಲಿನ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ತನುಮನಧನದಿಂದ ಸಮಯದ ರಜೆಯ ಹಂಗಿಲ್ಲದೆ ನಿರಂತರ ಶ್ರಮಿಸುತ್ತಿದ್ದೇನೆ. ದಾನಿಗಳ ಶಿಕ್ಷಣ ಪ್ರೇಮಿಗಳ ಮತ್ತು ಕರ್ನಾಟಕ ಘನಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯದೊಂದಿಗೆ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದೇವೆ. ಇದಕ್ಕೆ ಸಾಕ್ಷಿ ಎಂಬAತೆ ೨೦೨೪-೨೫ ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಶಾಲೆ ಪ್ರಶಸ್ತಿ ಮತ್ತು ಒಂದು ಲಕ್ಷ ನಗದು ಬಹುಮಾನವೂ ಬಂದಿರುವುದು ತಮ್ಮ ಗಮನಕ್ಕಿದೆ. ಇವು ಇಲಾಖೆಗೆ ಮತ್ತು ಸರಕಾರಕ್ಕೆ ಘನತೆ ತರುವ ಕೆಲಸಗಳೆಂದು ತಮಗೆ ತಿಳಿಸಿ ಹೇಳಬೇಕಾಗಿಲ್ಲ.

ಈ ನಾಡಿನ ಪ್ರಸಿದ್ಧ ಚಿಂತಕರಾದ ಟಿ.ಪಿ.ಅಶೋಕ ರವರು ನಮ್ಮ ಶಾಲೆಯನ್ನು “ಈ ಶಾಲೆ ಈ ದೇಶದ ಅತ್ಯುತ್ತಮ ಸರಕಾರಿ ಸಂಸ್ಥೆಗಳಲ್ಲಿ ಒಂದು ಮತ್ತು ಈ ಶಾಲೆಗೆ ಬಂದಾಗ ರಾಷ್ಟçಕವಿ, ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಕಾಲಿಟ್ಟ ಅನುಭವವಾಯಿತು” ಎಂದು ಹೊಗಳಿರುವುದು ನಮ್ಮ ಸರಕಾರಿ ಶಾಲೆಯನ್ನೇ. ಇದು ಇಲಾಖೆಗೆ ತಮಗೆ ಮುಜುಗರವುಂಟು ಮಾಡುವಂಥದೇ, ಇದರ ಹಿಂದೆ ಶ್ರಮಿಸಿದ ನನ್ನ ವರ್ತನೆಗಳು ‘ಅನಾಗರಿಕ’ವೇ?

ನಮ್ಮ ಶಾಲೆಯ ಕೆಲಸಗಳನ್ನು ಮೆಚ್ಚಿ ಈ ದೇಶದ ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಒಂದು ತಂಡವನ್ನು ನಮ್ಮ ಶಾಲೆಯರೆಗೂ ಕಳುಹಿಸಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಒಂದು ಸಾಕ್ಷö್ಯಚಿತ್ರ ನಿರ್ಮಿಸಿದೆ. ಇದರಿಂದ ಇಲಾಖೆಗೆ ಸರಕಾರಕ್ಕೆ ಘನತೆ ಮರ್ಯಾದೆ ಹೆಚ್ಚಿತೋ ಅಥವಾ ಕುಂದಿತೋ? ತಾವೇ ಕಾಳಜಿ ಮತ್ತು ಕರುಣೆಯ ಕಣ್ಣಿನಿಂದ ಯೋಚಿಸಿ.

ಹಲವಾರು ವರ್ಷಗಳ ಕಾಲ ಕಾದು, ನಮ್ಮ ಶಾಲೆಯಲ್ಲಿ ತರಗತಿ ಮತ್ತು ಮಕ್ಕಳ ಸಂಖ್ಯೆಗನುಗುಣವಾಗಿ ತರಗತಿ ಕೊಠಡಿಗಳಿಲ್ಲವೆಂದು ಮನಗಂಡು ಹಲವಾರು ತಾಲ್ಲೂಕು ಹಂತದ ಜಿಲ್ಲಾ ಹಂತದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಏನೂ ಸ್ಪಂದನೆ ಸಿಗದೇ ಇದ್ದಾಗ ಅನಿವಾರ್ಯವಾಗಿ ನಾನು ನಮ್ಮ ಶಾಲೆಯಿಂದ ಬಿಇಒ ಕಛೇರಿವರೆಗೆ ಡಾ.ಬಾಬಾಸಾಹೇಬ ಅಂಬೇಡ್ಕರರವರ ಫೋಟೋ ಹಿಡಿದುಕೊಂಡು ಒಂದು ಭಿತ್ತಿಪತ್ರವನ್ನು ಹಿಡಿದುಕೊಂಡು ಗಾಂಧಿ ಟೋಪಿ ಧರಿಸಿ ಸುಮಾರು ಹದಿನೈದು ಕಿ.ಮೀ ಮೌನ ಕಾಲ್ನಡಿಗೆ ಜಾಥಾದೊಂದಿಗೆ ಬಿಇಒ ಕಛೇರಿವರೆಗೂ ಬಂದು ಬಿಇಒ ಕಛೇರಿಯ ಬಾಗಿಲಲ್ಲಿ ಕೂತು ಉಪವಾಸ ಸತ್ಯಾಗ್ರಹ ಮಾಡಿರುತ್ತೇನೆ. ನಮ್ಮ ಶಾಲಾ ಮಕ್ಕಳು “ನಮ್ಮನ್ನ ಎಲ್ಲಿ ಕೂರಿಸಿ ಪಾಠ ಮಾಡ್ತೀರಿ ಸರ್? ನಾವು ಮಳ್ಯಾಗ ಬಿಸಿಲಾಗ ಛಳಿಯಾಗ ಹೊರಗ ಕುಂದರಬೇಕೇನ್ರಿ?” ಎಂದೆಲ್ಲ ಪ್ರಶ್ನಿಸಿದಾಗ ನನ್ನ ಕರುಳು ಹಿಂಡಿದಂತಾಗಿ ನೊಂದು ಅಸಹಾಯಕನಾಗಿ ನಾನು ಈ ನಿರ್ಧಾರ ಕೈಗೊಂಡಿರುತ್ತೇನೆ.

ಹೀಗೆ ಉಪವಾಸ ಕುಳಿತ ನನ್ನನ್ನ ತಾವು ಶತ್ರುವಿನ ರೀತಿ ನಡೆಸಿಕೊಂಡಿರಿ. ಏಕವಚನದಲ್ಲಿ ಸಂಬೋಧಿಸಿ ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದಿರಿ. ನನ್ನನ್ನ ನಿಮ್ಮ ಅಧಿಕಾರ ಬಲದ ಮುಂದೆ ಯರ್ಕಶ್ಚಿತ್ ಎನ್ನುವ ರೀತಿಯಲ್ಲಿ ನಡೆಸಿಕೊಂಡಿರಿ. ತಾವು ನನ್ನನ್ನ ಏಕವಚನದಲ್ಲಿ ಸಂಬೋಧಿಸುವಾಗ ನನ್ನ ಎಂ.ಎ ಇಂಗ್ಲಿಷ್ ಪದವಿ ಮತ್ತು ಕೆಸೆಟ್ ಪ್ರಮಾಣಪತ್ರ ಮತ್ತು ಎಂ.ಎ ಕನ್ನಡ ಪದವಿ ಮತ್ತು ಕೆಸೆಟ್ ಪ್ರಮಾಣ ಪತ್ರಗಳು ನೆನಪಾಗಿ ಆಳದಲ್ಲಿ ನೊಂದೆ. ನಾನು ರಾಷ್ಟ್ರಪತಿಗಳಿಂದ ಪಡೆದ ಚಿನ್ನದ ಪದಕ ನನಗೆ ಒದಗಿರುವ ಪರಿಸ್ಥಿತಿ ನೋಡಿ ಅತ್ತಂಗಾಯಿತು, ನಾನು ಪಡೆದ ಕೇಂದ್ರ ಸರಕಾರ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಡಮಾಡುವ ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಘನ ಸರಕಾರ ಕೊಡಮಾಡುವ ನನಗೆ ನೀಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ನಿರರ್ಥಕ ಎನ್ನಿಸಿದವು. ಅದೂ ಹೋಗಲಿ ಈ ನಾಡಿನ ಹತ್ತು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ನಾನು ಬರೆದಿರುವ ಪದ್ಯಗಳು ಪಠ್ಯವಾಗಿ ಆಯ್ಕೆಯಾಗಿವೆ. ನೀವು ನನ್ನನ್ನ ಅಂವ ಇಂವ ಎಂದು ಸಂಬೋಧಿಸುವಾಗ ಇವಕ್ಕೆಲ್ಲ ಎಲ್ಲಿ ಅರ್ಥ ಬಂತು ಸರ್? ಯಾವುದು ‘ಅನಾಗರೀಕತೆ’ ಎಂಬುದನ್ನ ತಾವೇ ದಯಮಾಡಿ ಪರಿಶೀಲಿಸಲು ವಿನಂತಿಸುತ್ತೇನೆ. ನಾನು ಹುದ್ದೆಯಿಂದ ಪ್ರಾಥಮಿಕ ಶಾಲಾ ಶಿಕ್ಷಕನಾಗಿರಬಹುದು ಆದರೆ ಪ್ರವೃತ್ತಿ ಮತ್ತು ವಿದ್ಯಾರ್ಹತೆಯಿಂದ ನಾನು ಕಡಿಮೆಯಲ್ಲ ಎಂದು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಕೇವಲ ನನ್ನ ಶಾಲೆ ಮಾತ್ರವಲ್ಲ ಇಡೀ ತಾಲ್ಲೂಕಿನ ಸಾವಿರಾರು ಮಕ್ಕಳಿಗೆ ಪ್ರವಾಹ ಸಂದರ್ಭದಲ್ಲಿ ಎಜುಕೇಶನ್ ಕಿಟ್ ಗಳನ್ನು ದಾನಿಗಳ ಸಹಾಯದಿಂದ ನೀಡಲು ನೆರವಾಗಿದ್ದೇನೆ. ದಿಗ್ಗೇವಾಡಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಮ್ಮ ಗೆಳೆಯರ ಸಹಾಯದಿಂದ ಒಂದು ಜೊತೆ ಸಮವಸ್ತ್ರ ನೀಡಲು ನೆರವಾಗಿದ್ದೇನೆ. ಪ್ರವಾಹ ಸಂದರ್ಭದಲ್ಲಿ ನೆರೆಯಿಂದ ಸಂತ್ರಸ್ತರಾಗಿದ್ದ ಅನೇಕ ಹಳ್ಳಿಗಳಿಗೆ ಲಕ್ಷಲಕ್ಷ ರೂಪಾಯಿಯ ಔಷಧ, ಬಟ್ಟೆ, ಹಾಸಿಗೆ ಮತ್ತು ಪಾತ್ರೆ ಪರಿಕರಗಳನ್ನ ದಾನಿಗಳ ಸಹಾಯದಿಂದ ನೀಡಿದ್ದು ತಮ್ಮ ಪ್ರಕಾರ ‘ಅನಾಗರಿಕ’ ವರ್ತನೆಯೇ ದಯಮಾಡಿ ನನ್ನ ವರ್ತನೆಗಳ ಕುರಿತು ನಿಮ್ಮ ಪೂರ್ವಾಗ್ರಹಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಕೋರುವೆ.

ತಮ್ಮ ನೋಟೀಸಿನಲ್ಲಿ ಹೇಳಿರುವಂತೆ ತಮಗೆ ನನ್ನ ಭಿತ್ತಿಪತ್ರ ಮಾತ್ರ ಕಾಣಿಸಿತು, ಆದರೆ ನಾನು ಕೈಯಲ್ಲಿ ಹಿಡಿದಿದ್ದ ನಮ್ಮ ಸಂವಿಧಾನ ಪಿತಾಮಹ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಫೋಟೋ ಯಾಕೆ ಕಾಣಿಸಲಿಲ್ಲ? ಅಥವಾ ಬಾಬಾಸಾಹೇಬರ ಫೋಟೋ ಹಿಡಿದು ನಡೆದು ಬಂದಿದ್ದರಿಂದ ಮತ್ತು ಅವರ ಫೋಟೊ ಇಟ್ಟುಕೊಂಡು, ರಾಷ್ಟçಪಿತ ಮಹಾತ್ಮಾಗಾಂಧೀಜಿ ಟೋಪಿ ಹಾಕಿಕೊಂಡು ಉಪವಾಸ ಕೂತಿದ್ದರಿಂದಲೇ ತಮಗೆ ನನ್ನ ಮೇಲೆ ಅಸಹನೆಯೇ?

ಸರಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತ ಸಮುದಾಯಗಳು ವಾಸಿಸುವಂಥ, ದೀನರು ದುರ್ಬಲರು ವಾಸಿಸುವಂಥ, ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಜನಸಮುದಾಯ ವಾಸಿಸುವಂಥ ಮತ್ತು ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರ ಮಕ್ಕಳು ಓದುವಂಥ ಒಂದು ಶಾಲೆಯನ್ನು ಅಭಿವೃದ್ಧಿಪಡಿಸಿ ಇಂದು ಮಕ್ಕಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು ನನ್ನ ಅನಾಗರಿಕ ವರ್ತನೆ ಹೇಗಾಗುತ್ತದೆ? ದಯಮಾಡಿ ತಿಳಿಸಿ. ನಾನು ಓದಿಕೊಂಡಿರುವ ಬಾಬಾಸಾಹೇಬರು, ಕಾರ್ಲ್ಮಾರ್ಕ್ಸ್, ಗಿಬ್ರಾನ್, ದೇವನೂರು ಮಹಾದೇವ, ಲಂಕೇಶ್, ಅನಂತಮೂರ್ತಿ, ಡಿ ಆರ್ ನಾಗರಾಜರು ಎಲ್ಲೂ ಇದು ಅನಾಗರಿಕ ವರ್ತನೆ ಎಂದು ಹೇಳಿಲ್ಲ. ತಾವು ಎಲ್ಲಿಯಾದರೂ ಈ ಕುರಿತು ರೆಫರೆನ್ಸ್ ಇದ್ದರೆ ನನ್ನ ಅಪತಿಳುವಳಿಕೆಯನ್ನು ಸರಿಪಡಿಸಬೇಕಾಗಿ ಕೋರುತ್ತೇನೆ.

ನಾನೊಬ್ಬ ಸರಕಾರಿ ನೌಕರ. ಸರಕಾರದ ಘನತೆ ತರುವ ಕೆಲಸ ಮಾಡುವುದು ನನ್ನ ಕರ್ತವ್ಯ. ಮತ್ತು ಅದನ್ನು ನಿರಂತರ ಮಾಡುತ್ತ ಬಂದಿದ್ದೇನೆ. ಹಾಗಾಗಿಯೇ ಇಲಾಖೆ ಮತ್ತು ಸರಕಾರವೇ ಗುರುತಿಸಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ನೀಡಿದೆ ಮತ್ತು ಅಂತರಾಷ್ಟಿçÃಯ ಪ್ರಶಸ್ತಿಗಳೂ ಕೂಡ ನನ್ನ ಶಾಲಾ ಕೆಲಸಕ್ಕಾಗಿ ನೀಡಲ್ಪಟ್ಟಿವೆ. ಮತ್ತು ಇದುವರೆಗೆ ನನಗೆ ಸಿಕ್ಕ ಪ್ರಶಸ್ತಿ ಹಣ ಮತ್ತು ಗೌರವ ಧನವನ್ನು ನಮ್ಮ ಶಾಲಾ ಮಕ್ಕಳಿಗಾಗಿಯೇ ವಿನಿಯೋಗಿಸಿದ್ದೇನೆ.

ಮಕ್ಕಳು ಬಿಸಿಲಲ್ಲಿ, ಮಳೆಯಲ್ಲಿ, ಗಾಳಿಯಲ್ಲಿ ಕೂತು ಕಲಿಯಬೇಕಾದ ಅನಿವಾರ್ಯತೆ ಯಾವ ಮಕ್ಕಳಿಗೂ ಬರಬಾರದು. ಹಲವು ವರುಷಗಳ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದ ಕಾರಣದಿಂದ ಇಲಾಖೆಯ ಗಮನ ಸೆಳೆಯುವುದಕ್ಕಾಗಿ ನನ್ನನ್ನ ನಾನು ಶಿಕ್ಷಿಸಿಕೊಂಡು ಹದಿನೈದು ಕಿ.ಮೀ ಮೌನ ಕಾಲ್ನಡಿಗೆ ಜಾಥಾ ಮಾಡಿ ಬಿಇಒ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತಿದ್ದೇನೆ.

ಒಂದು ಕಡೆ ಶಾಲಾ ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರಾಗಿದ್ದಂತ ಅನ್ಬುಕುಮಾರ್ ಸಾಹೇಬರು ನಮ್ಮ ಶಾಲಾ ಕೆಲಸಗಳನ್ನು ಮೆಚ್ಚಿ ಎರಡು ಕೊಠಡಿ ಮಂಜೂರು ಮಾಡಿ ಅಭಿನಂದಿಸಿ ಪತ್ರ ಬರೆಯುತ್ತಾರೆ. ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಸನ್ಮಾನ್ಯ ಉಮಾಮಹಾದೇವನ್ ಮೇಡಂ ರವರು ನಮ್ಮ ಶಾಲಾ ಕೆಲಸಗಳನ್ನು ಮೆಚ್ಚಿ ಅಭಿನಂದನಾ ಪತ್ರ ಕಳುಹಿಸಿ ನಮ್ಮ ಶಾಲೆಗ ಭೇಟಿ ನೀಡುವುದಾಗಿ ತಿಳಿಸುತ್ತಾರೆ, ನಾನು ನಮ್ಮ ಶಾಲಾ ಮಕ್ಕಳ ದಯನೀಯ ಸ್ಥಿತಿಯನ್ನು ಕಂಡು ನನ್ನನ್ನು ನಾನೇ ಹಿಂಸೆಗೊಳಪಡಿಸಿಕೊAಡು ಉಪವಾಸ ಸತ್ಯಾಗ್ರಹ ಕೈಗೊಂಡರೆ ತಾವು ನನ್ನದು ‘ಅನಾಗರಿಕ’ ವರ್ತನೆಯೆಂದು ಕಾರಣ ಕೇಳಿ ನೋಟೀಸ್ ನೀಡುತ್ತೀರಿ. ಯಾವುದನ್ನು ನಂಬುವುದು ಎಂದು ತಿಳಿಯದ ಅತ್ಯಂತ ನೋವಿನ ಸಂದರ್ಭದಲ್ಲಿ ನಾನಿದ್ದೇನೆ.

ಹಲವಾರು ಜನರ ಬಳಿ ಕಾಡಿಬೇಡಿ ಮಾನ್ಯ ರಾಜ್ಯಪಾಲರ ಹೆಸರಿಗೆ ಶಾಲಾ ಮಕ್ಕಳಿಗಾಗಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸರಕಾರಕ್ಕೆ ಇಲಾಖೆಗೆ ಶಾಲೆಗೆ ಹತ್ತುಗುಂಟೆ ಜಮೀನು ಖರೀದಿಸಿದ್ದು ಇಲಾಖೆಗೆ ಘನತೆ ತರುವಂಥ ಕೆಲಸವೆಂದು ನಾನು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ.

ನನ್ನ ಮನವಿ ಇಷ್ಟೇ. ನಾನು ನಮ್ಮ ಘನ ಸರಕಾರದ ಘನತೆ ಹೆಚ್ಚಿಸುವ ಕೆಲಸ ಮಾಡಿದ್ದೇನೆಯೇ ಹೊರತು, ಇಲಾಖೆಗೆ ಅಥವಾ ಸರಕಾರಕ್ಕೆ ಮುಜುಗರ ತರುವಂಥ ಕೆಲಸ ನಾನು ಮಾಡಿರುವುದಿಲ್ಲ ಎಂದು ಈ ಮೂಲಕ ನನ್ನ ಹೇಳಿಕೆಯನ್ನು ನೀಡುತ್ತಿದ್ದೇನೆ.

ದಯಮಾಡಿ ಪರಿಗಣಿಸಿ ಮತ್ತು ಶೀಘ್ರವೇ ನಮ್ಮ ಶಾಲಾ ಮಕ್ಕಳು ಮಳೆಯಲ್ಲಿ ನೆನೆಯದಂತೆ ಬಿಸಿಲಲ್ಲಿ ಬೇಯದಂತೆ ಶಾಲೆಯಲ್ಲಿ ಕಲಿತು ತಮ್ಮ ಬದುಕು ಕಟ್ಟಿಕೊಳ್ಳಲು ದಯಮಾಡಿ ನೆರವಾಗಿ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ, ನಿಮಗೆ ಅಧಿಕಾರವಿದೆ ನಮ್ಮ ಶಾಲಾ ಮಕ್ಕಳಿಗೆ ನಾಲ್ಕು ಸುಸಜ್ಜಿತ ತರಗತಿ ಕೊಠಡಿಗಳನ್ನು ಕಟ್ಟಿಕೊಡಿ.

ನಾನು ಕನಸುಗಾರ, ಮಹಾತ್ವಾಕಾಂಕ್ಷಿ ಮತ್ತು ವಿದ್ಯಾರ್ಹತೆಯಿಂದಲೂ, ತಿಳುವಳಿಕೆಯಿಂದಲೂ ಅರ್ಹನಿದ್ದೇನೆ. ನಮ್ಮ ಶಾಲೆಯನ್ನು ಒಂದು ಅಂತರಾಷ್ಟಿçÃಯ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯಾಗಿ ನಾನು ರೂಪಿಸಬೇಕಿದೆ. ಈಗ ಬಹುಭಾಷಾ ಪ್ರಯೋಗಾಲಯ ನಿರ್ಮಿಸಿದ್ದೇವೆ. ಲಕ್ಷಾಂತರ ರೂಪಾಯಿಯ ಪಾಠೋಪಕರಣ, ಪೀಠೋಪಕರಣ, ಕಂಪ್ಯೂಟರ್, ಸಿಸಿಟಿವಿ ಯನ್ನು ಶಾಲೆಯಲ್ಲಿ ಅಳವಡಿಸಿದ್ದೇವೆ. ನಾವಿನ್ನೂ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಸಮಾಜವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸಬೇಕಿದೆ. ಇದಕ್ಕೆಲ್ಲ ಕೊಠಡಿಗಳು ಬೇಕಿದೆ. ಇದು ‘ಅನಾಕರಿಕ’ ನ ಕನಸು ಎನಿಸಿದರೆ ನಾನು ತಮಗೆ ಏನು ಹೇಳಲಿ.

ತಾವು ನನ್ನ ಕೆಲಸಗಳನ್ನ ಕಾಳಜಿಯ ಕರುಣೆಯ ಕಣ್ಣುಗಳಿಂದ ಮಾನವೀಯ ಕಣ್ಣುಗಳಿಂದ ನೋಡಿದರೆ ಬಹುಶಃ ನಾನು ನಿಮಗೆ ‘ಅನಾಗರಿಕ’ನಾಗಿ ಕಾಣಿಸಲಾರೆ.

ಮತ್ತೊಮ್ಮೆ ತಮಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನಮ್ಮ ಶಾಲಾ ಮಕ್ಕಳಿಗಾಗಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಿಕೊಡಿ. ನಮ್ಮ ಕನಸಿನ ಶಾಲೆ ನಿರ್ಮಿಸಲು ನಮ್ಮ ಜೊತೆ ಕೈಜೋಡಿಸಿ.

ತಮ್ಮ ವಿಶ್ವಾಸಿ,

ವೀರಣ್ಣ ಮಡಿವಾಳರ.

ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಹೆಚ್ಚಳದ ಮನವಿ ತಿರಸ್ಕರಿಸಿದ ಸಚಿವ ಡಾ.ಸುಧಾಕರ್; ಶೇ 7.5 ರಷ್ಟು ಹೆಚ್ಚಿಸಲು ಮಾತ್ರ ಅನುಮತಿ
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ನಿಯೋಗವು ಪದವಿ ಕೋರ್ಸ್ ಗಳ ಶುಲ್ಕವನ್ನು ಶೇ 15ರಷ್ಟು ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿರಸ್ಕರಿಸಿದ್ದಾರೆ. ಆದರೆ ಪದವಿ ಕೋರ್ಸ್ ಗಳ ಶುಲ್ಕವನ್ನು ಶೇ.7.5 ರಷ್ಟು ಹೆಚ್ಚಿಸಲು ಅನುಮತಿ ನೀಡಿದೆ.

ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದ (ಕುಪೆಕಾ) ಪ್ರತಿನಿಧಿಗಳು ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಸಚಿವರು ಪ್ರಸ್ತಾಪಿಸಿದ 7.5% ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದರು. ಸಂಘದ ಪ್ರತಿನಿಧಿಗಳು ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಕೋರಲು ವಿಶೇಷ ಕಾರಣಗಳನ್ನು ಸಲ್ಲಿಸಿದ್ದು, ಶೇ.7.5ಕ್ಕಿಂತ ಹೆಚ್ಚು ಹೆಚ್ಚಳ ಮಾಡದಿರಲು ಸಚಿವ ಡಾ.ಸುಧಾಕರ್ ಸ್ಪಷ್ಟವಾಗಿ ಸಂಘದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಕಾಲೇಜುಗಳ ಕೋರ್ಸ್ ಶುಲ್ಕದಲ್ಲಿ ಹೆಚ್ಚುವರಿ ಮೂಲಸೌಕರ್ಯ ವೆಚ್ಚಗಳು ಮತ್ತು ಇತರ ವೆಚ್ಚಗಳನ್ನು ಗಮನಸೆಳೆದರು, ಶುಲ್ಕವನ್ನು 15% ಹೆಚ್ಚಿಸಬೇಕೆಂಬ ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಒತ್ತಾಯಿಸಿದರೂ ಸಚಿವರು ನಿಯೋಗದ ಮನವಿಯನ್ನು ತಿರಸ್ಕರಿಸಿದರು. ಹಾಗೆಯೇ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗುವ ಯಾವುದೇ ಅಸಾಧಾರಣ ಪರಿಸ್ಥಿತಿ ಉದ್ಭವಿಸಿದರೆ, ಶುಲ್ಕವನ್ನು ಒಂದು ಅಥವಾ ಎರಡು ಪ್ರತಿಶತದಷ್ಟು ಹೆಚ್ಚಿಸಲು ಅವರ ಮನವಿಯನ್ನು ಸರ್ಕಾರ ಪರಿಗಣಿಸುತ್ತದೆ ಎಂದು ಸುಧಾಕರ್ ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು: ಕಾಂಗ್ರೆಸ್ ಬೇಡಿಕೆ
ದೆಹಲಿ: ಸಂವಿಧಾನದ 15(5) ನೇ ವಿಧಿಯ ಅಡಿಯಲ್ಲಿ ಖಾಸಗಿ ಮತ್ತು ಅಲ್ಪಸಂಖ್ಯಾತೇತರ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸಬೇಕೆಂದು ಕಾಂಗ್ರೆಸ್ ಪಕ್ಷ ಸೋಮವಾರ ಒತ್ತಾಯಿಸಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಸರ್ಕಾರವು ಕಾನೂನನ್ನು ಜಾರಿಗೆ ತರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಿವರಿಸಿದರು.

2005 ರ 93 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ ಸೇರಿಸಲಾದ ಸಂವಿಧಾನದ 15(5) ನೇ ವಿಧಿಯು ಸರ್ಕಾರಕ್ಕೆ ಈ ಅಧಿಕಾರವನ್ನು ನೀಡಿದೆ ಎಂದು ಅವರು ಹೇಳಿದರು. ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯು ಸದರಿ ವಿಧಿಯ ಅಡಿಯಲ್ಲಿ ಹೊಸ ಕಾನೂನನ್ನು ತರಲು ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.