ಮೀಡಿಯಾ – Peepal Media

ಆರ್.ಎಸ್.ಎಸ್.ಚಟುವಟಿಕೆಗಳಿಗೆ ವರದಿ ನೋಡಿ ಕಡಿವಾಣ ಹಾಕ್ತೀವಿ – ಸಿ.ಎಂ ಸಿದ್ದರಾಮಯ್ಯ
ಹಾಸನ : ಕಳೆದ ಮೂರಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಇನ್ನು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ವರದಿ ನೋಟಿ ಕಡಿವಾಣದ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಹಾಸನಾಂಬ ದರ್ಶನಾರ್ಥವಾಗಿ ನಗರದ ಸಮೀಪ ಇರುವ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ನಡೆಸಲು ಎಲ್ಲಾ ತಯಾರಿಯೂ ಮಾಡಲಾಗಿದೆ. ಪ್ರಸ್ತುತ ವಿಚಾರ ಕೋರ್ಟ್‌ನಲ್ಲಿ ಇದೆ. ಕೋರ್ಟ್‌ನಿಂದ ಹಸಿರು ನಿಶಾನೆ ಬಂದ ತಕ್ಷಣ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಪ್ರಜಾಪ್ರಭುತ್ವ ಬಲವಾಗಬೇಕಾದರೆ ನಿಯಮಿತ ಚುನಾವಣೆಗಳು ನಡೆಯಲೇಬೇಕು ಎಂದರು. ಒಂದೆಡೆ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮೌನ ವಹಿಸಿರುವ ವೇಳೆ ಮತ್ತೊಂದೆಡೆ ನಡೆಯುತ್ತಿರುವ ಡಿನ್ನರ್ ಕೂಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಸ್ಪಷ್ಟನೆ ನೀಡಿ, ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾವು ಶಾಸಕರು, ಸಚಿವರು ಆಗಾಗ ಸೇರುತ್ತೇವೆ, ಪಕ್ಷದ ವಿಷಯ ಚರ್ಚಿಸುತ್ತೇವೆ, ಜೊತೆಯಾಗಿ ಊಟ ಮಾಡುತ್ತೇವೆ. ಅದರಲ್ಲಿ ರಾಜಕೀಯ ಅರ್ಥ ಹುಡುಕುವುದು ಬೇಡ. ನವೆಂಬರ್ ಕ್ರಾಂತಿ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ವ್ಯಂಗ್ಯವಾಗಿ, ಯಾವ ಕ್ರಾಂತಿಯೂ ಇಲ್ಲ, ಅದು ಮಾಧ್ಯಮಗಳ ಭ್ರಾಂತಿ. ಸೃಷ್ಟಿ ಮಾಧ್ಯಮಗಳದ್ದೇ ಎಂದು ಹೇಳಿದರು. ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ವಿಚಾರದ ಕುರಿತು ಸಿಎಂ ಹೇಳಿ, ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಘಟನೆಯ ಚಟುವಟಿಕೆ ನಡೆಸುವಂತಿಲ್ಲ. ತಮಿಳುನಾಡಿನ ಮಾದರಿಯನ್ನು ಅಧ್ಯಯನ ಮಾಡುತ್ತಿದ್ದೇವೆ, ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕರು ಅನುದಾನ ತಾರತಮ್ಯದ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿರುವ ವಿಚಾರದ ಮೇಲೆ ಸಿಎಂ ಗರಂ ಆದ ಅವರು, ಜೆಡಿಎಸ್ ಮತ್ತು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಎಷ್ಟು ಅನುದಾನ ನೀಡಿದರು. ನಾವು ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ. ಸುಳ್ಳು ಆರೋಪಗಳಿಂದ ಜನರನ್ನು ದಾರಿ ತಪ್ಪಿಸಬೇಡಿ,” ಎಂದು ವಿರೋಧ ಪಕ್ಷಗಳ ಮೇಲೆ ತೀವ್ರ ಟೀಕೆ ಹೊರಹಾಕಿದರು. ಹೆಲಿಪ್ಯಾಡ್‌ನಲ್ಲಿ ರೈತ ಮುಖಂಡರು ಜಮಾಯಿಸಿ ಸಿಎಂಗೆ ಮನವಿ ಸಲ್ಲಿಸಿದರು. “ಜಿಲ್ಲೆಯಲ್ಲಿ ಸಾವಿರಾರು ಎಕರೆ ಜೋಳದ ಬೆಳೆ ಬಿಳಿಸುಳಿ ರೋಗದಿಂದ ಹಾನಿಗೊಂಡಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಬೇಡಿಕೆ ಇಟ್ಟರು. ಇದಕ್ಕೆ ಸಿಎಂ, ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದರು. ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮೊದಲು ಚುನಾವಣೆಗಳು ಮುಗಿಯಲಿ, ನಂತರ ಹೈಕಮಾಂಡ್ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ. ಈಗ ಅವರ ಗಮನ ಬಿಹಾರ ಚುನಾವಣೆಯತ್ತ ಇದೆ ಎಂದು ಹೇಳುವ ಮೂಲಕ ಸಂಪುಟ ಬದಲಾವಣೆ ಸಾಧ್ಯತೆಯ ಸುಳಿವು ನೀಡಿದರು.

ಇಂದು ಹಾಸನಾಂಬೆ ದರ್ಶನಕ್ಕೆ ಬಂದಿದ್ದೇನೆ. ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.ಇದೆ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್ಮ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ ಇತರರು ಉಪಸ್ಥಿತರಿದ್ದರು.

Srinivasa……..
I LIKE GOOD FRIEND ONLY

ಆರ್‌ಎಸ್‌ಎಸ್ ಆಟದ ಕಡಿವಾಣಕ್ಕೆ ಮೊದಲ ಹೆಜ್ಜೆ; ತಮಿಳುನಾಡು ಮಾದರಿ ಹಿಡಿದ ಸಿಎಂ ಸಿದ್ದರಾಮಯ್ಯ
ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯನವರಿಗೆ ಬರೆದ ಪತ್ರದ ನಂತರ ಈಗ ಸಿದ್ದರಾಮಯ್ಯ ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಗೆ ಎಲ್ಲಾ ರೀತಿಯ ಅಂಕುಶ ಬೀಳುವ ಬಗ್ಗೆ ಬೆಳವಣಿಗೆ ಕಂಡುಬಂದಿದೆ.

ಸಚಿವ ಪ್ರಿಯಾಂಕ್ ಖರ್ಗೆ ಮನವಿ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಕಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ರವನ್ನು ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಬಹಿರಂಗವಾಗಿ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, RSS ಚಟುವಟಿಕೆ ನಿಷೇಧ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಸ್​ ಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ RSS ಗೆ ಯಾವ ಕ್ರಮ ಕೈಗೊಳ್ಳಲಾಗಿದೆಯೋ, ಅದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಿ ಅಂತಾ ಸಿಎಸ್​ ಗೆ ಸೂಚಿಸಿರೋದಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇತ್ತ ಮತ್ತೆ ಆರೆಸ್ಸೆಸ್ ವಿರುದ್ಧ ಸೆಟೆದು ನಿಂತ ಪ್ರಿಯಾಂಕ್ ಖರ್ಗೆ “ನಾನು ಆರೆಸ್ಸೆಸ್​ ವಿರೋಧಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಿಜಿಸ್ಟರ್​ ಆಗಿರುವ ಕಾಪಿ ತೋರಿಸಿ ಎಂದು ಅವಾಜು ಹಾಕಿರುವುದಲ್ಲದೆ, RSS ತೆಗೆದರೆ ಬಿಜೆಪಿನೇ ಇರಲ್ಲ ಎಂದಿದ್ದಾರೆ. ಆರೆಸ್ಸೆಸ್​ ಚಟುವಟಿಕೆಗಳನ್ನ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಅಂತಲೂ ತಿಳಿಸಿದ್ದಾರೆ.

724 ಕೋಟಿ ರೂ ವೆಚ್ಚದ ಮೆಗಾ ಡೈರಿ ಉದ್ಘಾಟನೆಗೆ ಬಗ್ಗೆ ಚಿಂತನೆ: ಹೆಚ್.ಡಿ. ರೇವಣ್ಣ
ಹಾಸನ : ನಗರದ ಹೊರವಲಯ ಕೈಗಾರಿಕಾ ಪ್ರದೇಶದಲ್ಲಿ 724 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ 2026ರ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಉದ್ಘಾಟನೆಯಾಗಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ನಗರದ ಡೈರಿಯಲ್ಲಿ ಸೋಮವಾರ ನಡೆದ ಹಾಸನ ಹಾಲು ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾಸನ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ಒಟ್ಟು 2392.42 ಕೋಟಿಗಳಷ್ಟು ವಹಿವಾಟು ನಡೆಸಿ, ಕಳೆದ ಸಾಲಿನಿಗಿಂತ ಶೇಕಡಾ 8.58ರಷ್ಟು ಹೆಚ್ಚಳ ಸಾಧಿಸಿದೆ. ತೆರಿಗೆ ಪೂರ್ವ ಲಾಭ ?22.29 ಕೋಟಿ ಆಗಿದ್ದು, ಬೈಲಾ ಪ್ರಕಾರ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ಉಳಿದ ನಿವ್ವಳ ಲಾಭ ?5.04 ಕೋಟಿಯನ್ನು ಸದಸ್ಯ ಸಂಘಗಳಿಗೆ ಬೋನಸ್, ಡಿವಿಡೆಂಡ್ ಮತ್ತು ಇತರ ರೂಪದಲ್ಲಿ ಹಂಚಲಾಗಿದೆ. ಈ ಸಾಲಿನಲ್ಲಿ ದಿನಸಿ ಸರಾಸರಿ 14.15 ಲಕ್ಷ ಲೀಟರ್ ಹಾಲು (1717 ಸಂಘಗಳಿAದ) ಸಂಗ್ರಹಣೆ ನಡೆದಿದ್ದು, ಗರಿಷ್ಠ 15.12 ಲಕ್ಷ ಲೀಟರ್ ಹಾಲು ಸ್ವೀಕರಿಸಲಾಗಿದೆ. ಪ್ರಸ್ತುತ ಖರೀದಿ ದರವನ್ನು ಸಂಘಗಳಿಗೆ 36.17 ಮತ್ತು ಉತ್ಪಾದಕರಿಗೆ 34.50 ನಂತೆ ನಿಗದಿ ಮಾಡಲಾಗಿದೆ ಎಂದರು. 2024-25ರಲ್ಲಿ ಕಟ್ಟಡ ನಿರ್ಮಾಣ, ಯಂತ್ರೋಪಕರಣ ಖರೀದಿ, ಮೇವು ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಒಟ್ಟಾರೆ ?12 ಕೋಟಿ ಸಹಾಯಧನ ಒದಗಿಸಲಾಗಿದೆ. ಮುಂದಿನ ಸಾಲಿನಲ್ಲಿ 25.40 ಕೋಟಿ ಸಹಾಯಧನ ವಿತರಿಸಲು ಯೋಜನೆ ಇದೆ. 2025-26ಕ್ಕೆ 2719.80 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದ್ದು, ನಿವ್ವಳ ಲಾಭ 4.50 ಕೋಟಿ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಹೊಸ 75 ಸಂಘಗಳಿಗೆ ಎ.ಎಂ.ಸಿ.ಯು. ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯ ಸಂಘಗಳಲ್ಲಿ ಏಕರೂಪ ತಂತ್ರಾಂಶ (ಂಒಅS) ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, 60 ಸಾವಿರ ರಾಸುಗಳನ್ನು ರಾಸು ವಿಮಾ ಯೋಜನೆಗೆ ಒಳಪಡಿಸುವ ಗುರಿ ನಿಗದಿಪಡಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು. ರಾಜ್ಯದ 16 ಹಾಲು ಒಕ್ಕೂಟಗಳಲ್ಲಿ ಹಾಸನ ಒಕ್ಕೂಟವು ಅತಿ ಕಡಿಮೆ ಆಡಳಿತಾತ್ಮಕ ವೆಚ್ಚವನ್ನು (ಶೇ.1.69) ಮಾಡುತ್ತಿದೆ. ಬೆಂಗಳೂರು ಒಕ್ಕೂಟದಲ್ಲಿ ಈ ವೆಚ್ಚ ಶೇ.4.49 ಇದೆ. ಪ್ರಸ್ತುತ ಎಲ್ಲಾ ಹಾಲು ಒಕ್ಕೂಟಗಳು ನಷ್ಟದಲ್ಲಿದ್ದು, ಹಾಸನದಲ್ಲಿ 7 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.

ಹಾಸನದಲ್ಲಿ ಪ್ರತಿದಿನ 14.30 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಅದರಲ್ಲಿ 1.70 ಲಕ್ಷ ಲೀಟರ್ ಹಾಲು ಭಾರತೀಯ ಸೇನೆಗೆ ಮಾರಾಟವಾಗುತ್ತಿದೆ. ಶೀಘ್ರದಲ್ಲೇ ಹಾಸನ ಒಕ್ಕೂಟ, ಬೆಂಗಳೂರು ಒಕ್ಕೂಟವನ್ನು ಹಿಂದಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, 240 ಹುದ್ದೆಗಳು ಖಾಲಿ ಇದ್ದರೂ, ಇರುವ ಅಧಿಕಾರಿಗಳಿಂದ ಉತ್ತಮ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕೊಡಗು ಡೇರಿಯನ್ನು 20 ಕೋಟಿ ವೆಚ್ಚದಲ್ಲಿ ನವೀಕರಣ ಮಾಡುವ ಯೋಜನೆ ಇದೆ ಎಂದರು. 1994ರಲ್ಲಿ ನಾನು ಮೊದಲ ಬಾರಿಗೆ ಅಧ್ಯಕ್ಷನಾದಾಗ ಒಕ್ಕೂಟದ ವಾರ್ಷಿಕ ವಹಿವಾಟು ಕೇವಲ 4 ಕೋಟಿ ಇತ್ತು. ಇಂದು ಅದು 3 ಸಾವಿರ ಕೋಟಿಗೆ ತಲುಪಿದೆ ಎಂದು ರೇವಣ್ಣ ನೆನಪಿಸಿದರು. ಸಭೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ನಿರ್ದೇಶಕರಾದ ನಾರಾಯಣಗೌಡ, ಸತೀಶ್ ಹೊನ್ನವಳಗಳಿ, ರಾಮಚಂದ್ರ ಗೌಡ, ಚನ್ನೇಗೌಡ, ಬಸವರಾಜ, ಸುನಾಲ್, ನಿಂಗೇಗೌಡ, ಸ್ವಾಮಿಗೌಡ, ಹೆಚ್‌ಟಿ. ಆಶಾ, ವಸಂತ, ಎಂಎಸ್. ಸತೀಶ್, ಹೇಮಂತ್ ಕುಮಾರ್, ವಿನೋದ್, ಮಂಜಣ್ಣ, ಹೊಸೂರು ಗಂಗಣ್ಣ, ಮೈಸೂರು ರಘು, ಶಿವಣ್ಣ, ವಿನಯ್ ಕುಮಾರ್ ಇತರರು ಉಪಸ್ಥಿತರಿದ್ದರು.

ಎರಡು ಹಿಂದುತ್ವವಾದಿಗಳ ಒಳಜಗಳವೇ ಧರ್ಮಸ್ಥಳ ವಿವಾದಕ್ಕೆ ಮೂಲ ಕಾರಣ: ಬಿಕೆ ಹರಿಪ್ರಸಾದ್
“ಎರಡು ಹಿಂದುತ್ವವಾದಿ ಗುಂಪಿನ ನಡುವಿನ ಕಿತ್ತಾಟವೇ ಧರ್ಮಸ್ಥಳ ಪ್ರಕರಣಕ್ಕೆ ಮೂಲ ಕಾರಣ, ಈ ವಿಚಾರದಲ್ಲಿ ಕಾಂಗ್ರೆಸ್ ಅಥವಾ ಸರ್ಕಾರದ ಪಾತ್ರವೇನೂ ಇಲ್ಲ. ಆ ಎರಡು ಗುಂಪುಗಳಷ್ಟೇ ಈ ಬಗ್ಗೆ ನಿರ್ಧರಿಸಬೇಕಿದೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಯಾವುದೋ ಬುರುಡೆಯನ್ನು ತೆಗೆದುಕೊಂಡು ಬಂದು, ನೂರಾರು ಶವವನ್ನು ಹೂತಿದ್ದೇನೆ ಎಂದು ಮುಸುಕುಧಾರಿ ಹೇಳಿದ್ದ. ಅವನು ಆರಂಭದಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಕಡೆ ಅಗೆಯಲಾಯಿತಾದರೂ, ಏನೂ ಸಿಗಲಿಲ್ಲ. ಎಸ್‌ಐಟಿ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾನೆ. ಇದೇ ಕಾರಣಕ್ಕೆ ಈತ ಬಂಧಿತನಾಗಿದ್ದಾನೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಮತ್ತು ಕೆಪಿಸಿಸಿ ಚುನಾವಣಾ ಸಮಿತಿಯ ಅಧ್ಯಕ್ಷರೂ ಆದ ವಿನಯ್ ಕುಮಾರ್ ಸೊರಕೆ, ಧರ್ಮಸ್ಥಳದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೆಸರನ್ನು ಎಳೆದು ತಂದಿದ್ದರು. ಬಿಜೆಪಿಯ ನಾಯಕರು, ಧರ್ಮಸ್ಥಳಕ್ಕೆ ಬಂದಾಗ, ಕಲ್ಲಡ್ಕ ಪ್ರಭಾಕರ ಭಟ್ ಯಾಕೆ ಹೋಗಿರಲಿಲ್ಲ. ಇದು ಧರ್ಮಸ್ಥಳದ ಬಗ್ಗೆ ಪ್ರಭಾಕರ್ ಭಟ್ ಅವರಿಗಿರುವ ಅಸಮಾಧಾನ ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದರು.

ಸೊರಕೆ ಅವರ ಮಾತಿಗೆ ಇಂಬು ಕೊಟ್ಟಂತೆ ಬಿಕೆ ಹರಿಪ್ರಸಾದ್ ಕೂಡ ‘ಈ ವಿಚಾರದಲ್ಲಿ ಕಾಂಗ್ರೆಸ್ ಅಥವಾ ಸರ್ಕಾರದ ಪಾತ್ರವೇನೂ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ನಾಯಕ ಬಿಎಲ್ ಸಂತೋಷ್ ಗುಂಪುಗಳ ನಡುವಿನ ಮುಸುಕಿನ ಗುದ್ದಾಟವೇ ಧರ್ಮಸ್ಥಳ ವಿವಾದವನ್ನು ಇಷ್ಟು ದೊಡ್ಡದಾಗಿ ಮಾಡಿದೆ. ಈ ಗುಂಪುಗಳೇ ಈ ಬಗ್ಗೆ ನಿರ್ಧರಿಸಬೇಕಿದೆ. ಎಸ್‌ಐಟಿ ತಂಡ ತನಿಖೆಯನ್ನು ನಡೆಸುತ್ತಿದೆ, ಅಂತಿಮ ರಿಪೋರ್ಟ್ ನೀಡಲು ಅವರಿಗೆ ಸಮಯಾವಕಾಶ ಬೇಕಾಗುತ್ತದೆ ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಸತ್ಯ ಆದಷ್ಟು ಬೇಗ ಹೊರಬರಲಿ ಎಂಬುದು ನಮ್ಮ ಆಶಯ ಕೂಡ. ಈ ಬೆಳವಣಿಗೆ ಭಕ್ತಾದಿಗಳ ಭಾವನೆಗೆ ಘಾಸಿಯಾಗಬಾರದು, ಹಾಗಾಗಿ, ಆದಷ್ಟು ಬೇಗ ಎಸ್‌ಐಟಿ ತನ್ನ ವರದಿಯನ್ನು ನೀಡಿದರೆ ಎಲ್ಲಾ ಗೊಂದಲಗಳು ದೂರವಾಗುತ್ತದೆ. ಇದರ ಜೊತೆಗೆ, ಕಲ್ಲಡ ಭಟ್ರ ಮತ್ತು ಸಂತೋಷ್ ಅವರ ಬಣ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

‎ಸೆಪ್ಟಂಬರ್ 14.2025 ರ ಹಿಂದಿ ದಿವಸ್ ವಿರೋಧಿಸುವ ಬಗೆ ಹೇಗೆ?
‎ಪ್ರತಿ ವರ್ಷ ನಮ್ಮ ತೆರಿಗೆ ಹಣದಲ್ಲಿ ಇಂಡಿಯಾ ಸರ್ಕಾರ ಅಂದಾಜು 500 ಕೋಟಿ ಖರ್ಚು ಮಾಡಿ ಸೆಪ್ಟೆಂಬರ್ 14ರಂದು ‘ಹಿಂದಿ ದಿವಸ್’ ಎಂದು ಆಚರಿಸುತ್ತಿದೆ. ಈ ಆಚರಣೆಗೆ ಒಂದೊಂದು ಘೋಷವಾಕ್ಯ ಬೇರೆ ಪ್ರಕಟಿಸಿ ಅದರ ಆಧಾರದಲ್ಲಿ ನಮ್ಮ ಮೇಲೆ ನಮ್ಮದೇ ದುಡ್ಡಿನಲ್ಲಿ ಮತ್ತು ನಮ್ಮ ಕನ್ನಡ ನೆಲದಲ್ಲಿಯೇ ಹಿಂದಿ ಹೇರಿಕೆಯನ್ನು ರಾಜ ರೋಷವಾಗಿ ಮಾಡುತ್ತಾ ಬರುತ್ತಿದೆ.ಇದಕ್ಕೆ ಕಡಿವಾಣ ಹಾಕಲು 2019 ರಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ನಾವುಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಜನರಲ್ಲಿ ಹಿಂದಿ ಹೇರಿಕೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ಸಿನ ಕಡೆಗೆ ಸಾಗುತ್ತಿದ್ದೇವೆ ಮತ್ತು ಇದರ ಪರಿಣಾಮ  ಪರೋಕ್ಷವಾಗಿ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಕೈಬಿಟ್ಟು ದ್ವಿಭಾಷಾ ಸೂತ್ರ ಸರ್ಕಾರ ಜಾರಿಗೊಳಿಸುವ ಸನಿಹಕ್ಕೆ ಬಂದಿದೆ.

‎ಶಿಕ್ಷಣದಲ್ಲಿ ದ್ವಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆಗೆ ಕನ್ನಡ ನಾಡಿನಲ್ಲಿ ಶೇಕಡ 50ರಷ್ಟು ಮಾತ್ರವೇ ಹಿನ್ನಡೆ ಆಗಲಿದೆ ವಿನಃ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುವುದಿಲ್ಲ. ಸಂವಿಧಾನದ ಆರ್ಟಿಕಲ್ 343 ರಿಂದ 351 ರಲ್ಲಿ ಹಿಂದಿ ಮತ್ತು ಸಂಸ್ಕೃತಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆಗೆದರೆ ಮಾತ್ರ ಕನ್ನಡ ನೆಲದಲ್ಲಿ ಸಂಪೂರ್ಣ ಹಿಂದಿ ಹೇರಿಕೆ ನಿಲ್ಲುತ್ತದೆ ಆದ ಕಾರಣ ಈ ಹಿಂದಿ ದಿವಸ ಆಚರಣೆಯನ್ನು ವಿರೋಧಿಸುವುದ ಮುಂದುವರಿಸಬೇಕು ಮತ್ತು ತೀವ್ರಗೊಳಿಸಬೇಕು  ಇಲ್ಲದಿದ್ದರೆ ಕನ್ನಡವನ್ನು ವಿಶ್ವಮಟ್ಟದದಲ್ಲಿ ಬೆಳೆಸುವುದರ ಕಡೆ ವ್ಯಯಿಸಿಬೇಕಾದ ನಮ್ಮ ಸಮಯ ಹಣವನ್ನು ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸಲು ವ್ಯಯಿಸಿಬೇಕಾಗುತ್ತದೆ.

‎ಕನ್ನಡ ಒಂದು ದೇಶ. ಕನ್ನಡ ಒಂದು ವಿಶ್ವ ಭಾಷೆ.ಅಂತ ಕನ್ನಡವನ್ನು ಇಂಡಿಯಾ ಸಂವಿಧಾನ ಬಳಸಿ ಕೇವಲ ಪ್ರಾದೇಶಿಕ ಭಾಷೆ ಮಾಡಲಾಗಿದೆ.ಇತರೆ ಪ್ರಮುಖ ದ್ರಾವಿಡ ಭಾಷೆಗಳ ಹೆಸರಿನಲ್ಲಿ ಇಲ್ಲದ ಒತ್ತಕ್ಷರ ನಮ್ಮ ಕನ್ನಡದಲ್ಲಿ ಮಾತ್ರ ಸಿಗುತ್ತದೆ ಉದಾಹರಣೆ ತೆಲುಗು ತಮಿಳು ಮಲಯಾಳಂ ತುಳು ಕೊಡವ.ಇಲ್ಲಿ ಗಮನಿಸಿ ಯಾವುದಕ್ಕೂ ಒತ್ತಕ್ಷರ ಇಲ್ಲ.ಆದರೆ ‘ಕನ್ನಡ’ದಲ್ಲಿ ನ ಗೆ ನ ಒತ್ತಕ್ಷರ ಇದೆ. ಕನ್ನಡ ಒಂದು ದೇಶ ಎಂದು ಹೇಗೆ ಹೇಳಬಹುದು ಎಂದರೆ ಕನ+ನಾಡು, ಕನ್ನಾಡು, ಕನ್ನಡ. ಹೀಗೆ ನಾಡು ಪದವನ್ನು ತನ್ನ ಹೆಸರಿನಲ್ಲಿ ಒಳಗೊಂಡಿದೆ ನಮ್ಮ ನೆಲದ ನುಡಿ ನಮ್ಮ ತಾಯಿ ನುಡಿ ಕನ್ನಡ.ನಾಡು ಎಂದರೆ ದೇಶ ಎಂದರ್ಥ ಎಂಬ ಕಾರಣಕ್ಕೆ ತಮಿಳುನಾಡು ಬದಲು ತಮಿಳಗಂ ಪದ ಬಳಸಿ ಅಲ್ಲಿನ ನಾರ್ತ್ ಹಿಂದಿಯಾ ಸಂಸ್ಕ್ರುತದ ರಾಜ್ಯಪಾಲ ಛೀಮಾರಿ ಹಾಕಿಸಿಕೊಂಡದ್ದು ಎರಡು ಮೂರು ವರ್ಷಗಳ ಹಿಂದೆ ನಡೆದಿದೆ. ಕನ್ನಡದ ಬಗ್ಗೆ ಹೇಳುತ್ತಾ ಹೋದರೆ ಪುಟಗಳು ಸಾಲದು.

‎ಆದರೆ ಕನ್ನಡದ ಬಗ್ಗೆ ಎಲ್ಲರಲ್ಲಿ ಇರಲೇಬೇಕಾದ ತಿಳುವಳಿಕೆ ಈ ಕೆಳಗಿನ ಸಾಲಿನಲ್ಲಿ ತಿಳಿಸಿ ಘೋಷ ವಾಕ್ಯದ ಕಡೆಗೆ ಸಾಗೋಣ.ಆ ಸಾಲು ಇಂತಿದೆ ‘ಕನ್ನಡ ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ನುಡಿ ಇತರೆ ಪ್ರಮುಖ ದ್ರಾವಿಡ ನುಡಿಗಳು ತೆಲುಗು ತಮಿಳು ಮತ್ತು ಮಲಯಾಳಂ’.

‎ಗಾಂಧಿಯವರು ಬ್ರಿಟಿಷರನ್ನು ಓಡಿಸಿ ಪ್ರಜಾಪ್ರಭುತ್ವ ತರಲು ಹೋರಾಟಕ್ಕೆ ಇಳಿದ ಆರಂಭದಲ್ಲಿ ಇಂಗ್ಲಿಷ್ ವಿರುದ್ಧ ಒಂದು ಭಾಷೆ ಬೇಕು ಎಂದು ಅವರ ಮಾತೃಭಾಷೆ ಗುಜರಾತಿಯನ್ನು ಇತರರಿಗೆ ಕಲಿಸಲು ಮುಂದಾಗಲಿಲ್ಲ ಅವರು ಮುಂದಾಗಿದ್ದು ಹಿಂದಿ ಕಲಿಸಲು ಅದಕ್ಕಾಗಿ ಅವರು 1918ರಲ್ಲಿ ಇಂದಿನ ಚೆನ್ನೈ ಅಂದಿನ ಮದ್ರಾಸ್ನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ತೆರೆದರು. ಗಾಂಧಿ ಸ್ವಾರ್ಥಿಯಾಗಿದ್ದರೆ ಗುಜರಾತಿ ಪ್ರಚಾರ ಸಭಾ ತೆರೆಯುತ್ತಿದ್ದರು ಆದರೆ ಅವರಿಗೆ ಬ್ರಿಟಿಷರ ಓಡಿಸಿ ಪ್ರಜಾಪ್ರಭುತ್ವ ತರುವುದು ಗುರಿಯಾಗಿತ್ತೆ ವಿನಹ ಇನ್ನು ಯಾವುದೇ ಸ್ವಾರ್ಥವಲ್ಲ. ಗಾಂಧಿ ಫೋಟೋ ಇಟ್ಟುಕೊಂಡು ಮತ್ತು ಅವರು ಕಟ್ಟಿದ ಸಂಸ್ಥೆಗಳ ಇಟ್ಟುಕೊಂಡು ಪರ ವಿರೋಧ ರಾಜಕೀಯ ಮಾಡುತ್ತಿರುವ ಕಿಡಿಗೇಡಿಗಳಿಗೆ ಸ್ವಾರ್ಥವೇ ಮುಖ್ಯವಾಗಿದೆ. 1964ರ ವರೆಗೂ ಖಾಸಗಿ ದೇಣಿಗೆಯಲ್ಲಿ ನಡೆಯುತ್ತಿದ್ದ ಈ ಸಂಸ್ಥೆಯನ್ನು ಇಂಡಿಯಾ ಸರ್ಕಾರ ಇಲ್ಲಿಯವರೆಗೂ ಸಾವಿರಾರು ಕೋಟಿ ನಮ್ಮ ತೆರಿಗೆ ಹಣ ನೀಡಿ ಇದನ್ನು ರಾಷ್ಟ್ರೀಯ ಮುಖ್ಯ ಸಂಸ್ಥೆಗಳಲ್ಲಿ ಒಂದು ಅಂತ ಮಾಡಿ ಇದರ ಕಚೇರಿಗಳನ್ನು ದಕ್ಷಿಣದ ಎಲ್ಲಾ ರಾಜ್ಯಗಳಲ್ಲೂ ತೆರೆದು ಹಿಂದಿ ಹೇರಿಕೆ ಕಾರಣವಾಗಿದೆ.

‎ಕರ್ನಾಟಕ ಏಕೀಕರಣದ ಗುರಿ ಇಟ್ಟುಕೊಂಡು 1890 ರಲ್ಲಿ ಶುರುವಾದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಇರುವ ಧಾರವಾಡದಲ್ಲಿಯೇ ‘ಕರ್ನಾಟಕ ರಾಜ್ಯ ಮಟ್ಟದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಕಚೇರಿ ಕೂಡ ಸ್ಥಾಪಿತವಾಗಿದೆ ಇದು ಎಂತಹ ದುರಂತ ಅಲ್ಲವೇ? ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕದ ಮುಖ್ಯ ಕಚೇರಿ ಶಾಶ್ವತವಾಗಿ ಬಂದ್ ಮಾಡಿ ಈ ಕಟ್ಟಡವನ್ನು ಕನ್ನಡ ಪದ ಕಟ್ಟುವ ಕಚೇರಿ ಯಾಗಿ ಬದಲಾಯಿಸಬೇಕೆಂದು ಈ ವರ್ಷದ ಘೋಷವಾಕ್ಯ ಇಟ್ಕೊಂಡು ನಾವುಗಳು ಸೆಪ್ಟೆಂಬರ್ 14ರ ಹಿಂದಿ ದಿವಸ್ ವಿರೋಧ ಮಾಡೋಣ ಎಂದು ಈ ಮೂಲಕ ನಿಮ್ಮೆಲ್ಲರಲ್ಲು ಮನವಿ ಮಾಡಿಕೊಳ್ಳುತ್ತಿದ್ದೇವೆ.

✍️ ಅಬಿ ಒಕ್ಕಲಿಗ
ಮುಂದಾಳು
‎ನಾವು Dravida ಕನ್ನಡಿಗರು ಚಳುವಳಿ

ಸಕಲೇಶಪುರ ಬಿರುಗಾಳಿ ಆರ್ಭಟ ಸಾವಿರಾರು ಮರಗಳು ಧರಾಶಾಹಿ – ಜನಜೀವನ ಅಸ್ತವ್ಯಸ್ತ
ಸಕಲೇಶಪುರ: ತಾಲೂಕಿನಲ್ಲಿ ಸೋಮವಾರ ಮಳೆಯ ಆರ್ಭಟ ತುಸು ಕಡಿಮೆಯಾಗಿದ್ದು ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು ಎಲ್ಲೆಡೆ ಶೀತದ ವಾತಾವರಣ ಮೂಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಹಲವು ಅನಾಹುತಗಳು ಸಂಭವಿಸಿದ್ದು ಹಲವಡೆ ಭೂಕುಸಿತಗಳು ಉಂಟಾಗಿದ್ದು ಅಲ್ಲದೆ ಸಾವಿರಾರು ಮರಗಳು ಉರುಳಿದೆ. ಸುರಿದ ಮಳೆ ಹಿನ್ನಲೆಯಲ್ಲಿ ಶಿರಾಡಿ ಘಾಟ್‌ನಲ್ಲಿ ಶನಿವಾರ ಸಂಜೆ ಹಾಗೂ ಭಾನುವಾರ ದಿನವಿಡಿ ಮಳೆ ಸುರಿದ ಪರಿಣಾಮ ವ್ಯಾಪಕ ಭೂಕುಸಿತ ಉಂಟಾಗಿ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೋಮವಾರ ತಾಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಿದ್ದರು. ಸೋಮವಾರ ಮುಂಜಾನೆ ತಾಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣ ತುಸು ಕಡಿಮೆಯಾದ್ದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪಟ್ಟಣದಲ್ಲಿ ಟ್ರಾಫಿಕ್ ಕಿರಿಕಿರಿ : ಸೋಮವಾರ ಬ್ಯಾಂಕ್, ಸರ್ಕಾರಿ ಕಚೇರಿಗಳು ಹಾಗೂ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಜನ ಆಗಮಿಸಿದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆ ಮಾಡಲು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಅಲ್ಲದೆ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಟ್ರಾಫಿಕ್ ಕಿರಿಕಿರಿ ನಿರ್ಮಾಣವಾಗಿತ್ತು.

ಶಿರಾಡಿ ಘಾಟ್‌ನಲ್ಲಿ ಅಪಾಯಕಾರಿ ಮರಗಳ ತೆರವು : ಶಿರಾಡಿ ಘಾಟ್‌ನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಹೆದ್ದಾರಿ ಬದಿಯಲ್ಲಿದ್ದ ಮರಗಳು ಎರಡು ಕಾರುಗಳ ಮೇಲೆ ಬಿದ್ದಿದ್ದವು. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ನಿರ್ದೇಶನದಂತೆ ಆರ್.ಎಫ್.ಓ ಹೇಮಂತ್ ಕುಮಾರ್ ಹಾಗೂ ತಹಶೀಲ್ದಾರ್ ಸುಪ್ರೀತಾ ನೇತೃತ್ವದಲ್ಲಿ ಅರಣ್ಯ ಇಲಾಖೆ ವತಿಯಿಂದ ಹೆದ್ದಾರಿ ಬದಿಯಲ್ಲಿನ ಹಲವು ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಯಿತು.

ಉರುಳಿರುವ ಮರಗಳು : ಭಾರಿ ಮಳೆಯಿಂದ ತಾಲೂಕಿನ ಎಲ್ಲೆಡೆ ಮರಗಳು ಉರುಳಿದ್ದು ಕೆಂದನ ಮನೆ ಜಯಪ್ರಕಾಶ್‌ರವರ ಕಾಫಿ ತೋಟದ ಸಮೀಪ ಭಾರಿ ಮರವೊಂದು ರಸ್ತೆಗೆ ಬಿದ್ದಿರುತ್ತದೆ. ಬಿಸ್ಲೆ ಘಾಟ್ ರಸ್ತೆಯಲ್ಲಿ ಹಲವಾರು ಮರಗಳು ಬಿದ್ದಿರುತ್ತದೆ.

“ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ!” : “ವಿಜಯವಾಣಿ” ಪತ್ರಿಕೆಯ ಸುಳ್ಳು ಸುದ್ದಿಗೆ ಡಿಸಿಎಂ ಸ್ಪಷ್ಟನೆ
“ಗಣೇಶ ವಿಗ್ರಹ ತಂದದ್ದು ಬಿಜೆಪಿ ಶಾಸಕ, ಪ್ರಧಾನಿಗೆ ಕೊಟ್ಟದ್ದು ಡಿಸಿಎಂ ಡಿ ಕೆ ಶಿವಕುಮಾರ್” ಎಂಬ ಸಾರಾಂಶ ಹೊತ್ತು “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ಮಂಗಳವಾರ ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿತ್ತು. ಈ ಬಗ್ಗೆ ಇಂದು ಮಧ್ಯಾಹ್ನವೇ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರ ತ್ಯಾಗರಾಜ್ ಪುಟ್ಟಪ್ಪ ಅವರು ಸ್ಪಷ್ಟನೆ ನೀಡಿದ್ದರು.

ಆ ನಂತರ ಈಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಜಾಲತಾಣದ ಮೂಲಕ ತಿರುಗೇಟು ನೀಡಿ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತಿರುಗಿ ನಿಂತಿದ್ದಾರೆ.

ಸತ್ಯ, ಅಸತ್ಯ ನೋಡದೇ, ತಲೆಬುಡ ಸೋಸದೇ “ಡಿಸಿಎಂ ಗುರಿ”ಕಾರರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಯಿಗೆ ಬಂದಂತೆ ಟೀಕೆ ಮಾಡಿದ್ದಾರೆ ಎಂದು ತ್ಯಾಗರಾಜ್ ಪುಟ್ಟಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ವಾಸ್ತವವಾಗಿ ಡಿಸಿಎಂ ಅವರೇ ಈ ಬೆಳ್ಳಿ ಗಣಪತಿ ವಿಗ್ರಹವನ್ನು ಅವರ ಮನೆಯಿಂದ ತೆಗೆದುಕೊಂಡು ಬಂದದ್ದು, ಅವರ ಕಚೇರಿ ಸಿಬ್ಬಂದಿಯೇ ಪ್ರಧಾನಿ ಭದ್ರತೆ ಹೊಣೆ ಹೊತ್ತ ಎಸ್ಪಿಜಿಯವರಿಗೆ ಕೊಟ್ಟು ತಪಾಸಣೆ ನಡೆಸಿದ್ದು, ಎಸ್ಪಿಜಿ ಸಿಬ್ಬಂದಿಯೇ ಈ ವಿಗ್ರಹವನ್ನು ಪ್ರಧಾನಿ ಅವರಿಗೆ ಡಿಸಿಎಂ ಅವರು ನೀಡಲು ನೆರವಾದದ್ದು!! ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರನಾಗಿ ಈ ಎಲ್ಲಕ್ಕೂ ನಾನು ಪ್ರತ್ಯಕ್ಷ ಸಾಕ್ಷಿ” ಎಂದು ತ್ಯಾಗರಾಜ್ ಪುಟ್ಟಪ್ಪ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರೇ ನನಗೆ ದೂರವಾಣಿ ಕರೆ ಮಾಡಿ, “ಪೇಪರ್ ನಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ನಾನು ಯಾರಿಗೂ ಈ ರೀತಿ ಹೇಳಿಲ್ಲ. ನಾನು ಸ್ಟೇಜ್ ಮೇಲೆ ಹೋಗೋಕೇ ಅವಕಾಶ ಇರಲಿಲ್ಲ. ಇನ್ನು ಪ್ರಧಾನಿಗೆ ಗಣೇಶ ವಿಗ್ರಹ ಹೇಗೆ ಕೊಡಲಿ? ಈ ಬಗ್ಗೆ ಪತ್ರಿಕೆಯವರಿಗೆ ಸ್ಪಷ್ಟನೆ ಕೊಡ್ತೇನೆ” ಅಂತ ಹೇಳಿದ್ರು.

ಹಾಗಾದರೆ ಈ ಸುದ್ದಿ ಸೃಷ್ಟಿಯಾದದ್ದು ಹೇಗೆ? ವರದಿ ಬರೆದ ಬೃಹಸ್ಪತಿಗೆ ಈ ಸುದ್ದಿ ಕೊಟ್ಟವರು ಯಾರು? ಸುದ್ದಿ ಕೆತ್ತುವ ಮುನ್ನ ಖಚಿತ ಮಾಡಿಕೊಳ್ಳಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಬೇಡವೇ?! ಸುದ್ದಿ ಸಣ್ಣದು, ಸುಳ್ಳು ದೊಡ್ಡದು, ಪ್ರಭಾವ ಕೆಟ್ಟದ್ದು”. ಪತ್ರಿಕೆಯವರಿಗೆ ಸ್ಪಷ್ಟನೆ ನೀಡಬಹುದು. ಆದರೆ ಸಾಮಾಜಿಕ ಜಾಲತಾಣದವರಿಗೆ? ಎಂದು ತ್ಯಾಗರಾಜ್ ಪುಟ್ಟಪ್ಪ ಹೇಳಿದ್ದಾರೆ.

ಸಧ್ಯ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಜಾಲತಾಣದ ಮೂಲಕ ಹೇಳಿಕೆ ನೀಡಿದ್ದು, “ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ!” ಎಂದು ಸುಳ್ಳು ಸುದ್ದಿ ಹಬ್ಬಿಸಿದ ವಿಜಯವಾಣಿ ವಿರುದ್ಧ ಚಾಟಿ ಬೀಸಿದ್ದಾರೆ.

“ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು. ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು” ಎಂದು ಪೋಸ್ಟ್ ಮಾಡಿದ್ದಾರೆ.

ನಮ್ಮ ಮೆಟ್ರೋ ಉದ್ಘಾಟನೆ : ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಸಂಪೂರ್ಣ ನಿರ್ಬಂಧ
ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಮಾಧ್ಯಮಗಳು ಈ ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನ ವಾಹಿನಿಯ ಮೂಲಕ ಪಡೆದುಕೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬಿಎಂಆರ್‌ಸಿಎಲ್ ಪ್ರಕಾರ ಈ ನಿರ್ಬಂಧ ಭದ್ರತಾ ಕಾರಣದಿಂದಾಗಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 10, 2025 ರಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ, ಎಸ್‌ಪಿಜಿ ನಿಯಮಾವಳಿ ಪ್ರಕಾರ, ಭದ್ರತಾ ಕಾರಣಗಳಿಂದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ನೇರವಾಗಿ ಸ್ಥಳದಲ್ಲಿ ಕಾರ್ಯಕ್ರಮವನ್ನು ವರದಿ ಮಾಡಲು ಅವಕಾಶವಿರುವುದಿಲ್ಲ. ಆದರೆ, ಪ್ರಧಾನ ಮಂತ್ರಿಗಳು ಉದ್ಘಾಟನೆಯ ನೇರ ಪ್ರಸಾರದ ವೀಡಿಯೊ ಲಿಂಕ್ ಅನ್ನು ಮಾಧ್ಯಮಕ್ಕೆ ದೂರದರ್ಶನದ ಮೂಲಕ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಸಂಬಂಧಿತ ಛಾಯಾಚಿತ್ರಗಳನ್ನು ಸಹ ಮಾಧ್ಯಮಗಳಿಗೆ ಲಭ್ಯವಿರಿಸಲಾಗುತ್ತದೆ. ನಿಮ್ಮ ಸಹಕಾರವನ್ನು ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

‘ಕುಡ್ಲ ರ್‍ಯಾಂಪೇಜ್‌’ನ ಅಜಯ್ ಅಂಚನ್ ಮತ್ತಿತರರ ಮೇಲೆ ಧರ್ಮಸ್ಥಳದಲ್ಲಿ ‘ಹೆಗ್ಗಡೆ’ ಬೆಂಬಲಿಗ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆ
ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರನ್ನು ಧರ್ಮಸ್ಥಳದಲ್ಲಿ ಎಸ್‌ಐಟಿ ಕಾರ್ಯಾಚರಣೆಯನ್ನು ವರದಿ ಮಾಡಲು ತೆರಳಿದ್ದಾಗ ಹೆಗ್ಗಡೆ ಅವರ ಬೆಂಬಲಿಗರು ದಾಳಿ ಮಾಡಿ ಹೊಡೆದಿದ್ದಾರೆ.

ಕರ್ನಾಟಕದ ಡಿಜಿಟಲ್ ಮಾಧ್ಯಮಗಳ ವೇದಿಕೆಯಾದ ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಈ ಘೋರ ಕೃತ್ಯವನ್ನು ಖಂಡಿಸುತ್ತದೆ ಮತ್ತು ಅಜಯ್ ಅವರ ಮೇಲೆ ದಾಳಿ ಮಾಡಿದ ಗೂಂಡಾಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ಎರಡು ಪ್ರಕರಣಗಳಲ್ಲಿ ಅಜಯ್ ಅಂಚನ್ ಅವರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವುದು ಗಮನಾರ್ಹವಾಗಿದೆ.

ಕರ್ನಾಟಕ ಸರ್ಕಾರವು ಮಾಧ್ಯಮ ಸಂಸ್ಥೆಗಳ ಮತ್ತು ಪತ್ರಕರ್ತರ ಪ್ರಜಾಪ್ರಭುತ್ವದ ಹಕ್ಕುಗಳ ಪರವಾಗಿ ನಿಲ್ಲುವುದರ ಜೊತೆಗೆ, ವಿಶೇಷವಾಗಿ ಧರ್ಮಸ್ಥಳದ ಸುತ್ತಮುತ್ತಲಿನ ಆರೋಪಿತ ಅಪರಾಧಗಳನ್ನು ಬಯಲಿಗೆಳೆಯುವಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಮಾಧ್ಯಮಗಳನ್ನು ಹಕ್ಕುಗಳನ್ನು ಕಾಪಾಡುವ ಹೊಣೆ ಹೊರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಡಿಜಿಟಲ್ ಮೀಡಿಯಾ ಫಾರ್ ಡೆಮಾಕ್ರಸಿ ಹೇಳಿದೆ.

ಕರ್ನಾಟಕದ ಜನತೆ‌ ಈ ಗೂಂಡಾಗಿರಿಯನ್ನು ಖಂಡಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಲ್ಲಬೇಕೆಂದು ಮನವಿ ಮಾಡುತ್ತೇವೆ ಎಂದು ಜನತೆಗೆ ಮನವಿ ಮಾಡಿದೆ.

(ಇದೀಗ ತಿಳಿದು ಬಂದ ಮಾಹಿತಿ: ಅಜಯ್ ಅಂಚನ್ ಅವರ ಜೊತೆಗೆ, ಯುನೈಟೆಡ್‌ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಇಷ್ಟು ಜನರ ಮೇಲೆ ದಾಳಿ ಮಾಡಲಾಗಿದೆ. ಕ್ಯಾಮೆರಾವನ್ನು ಪುಡಿ ಮಾಡಿದ್ದಾರೆ ಮತ್ತು ಎಲ್ಲರೂ ಈ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು ಒಬ್ಬರಿಗೆ ತೀವ್ರ ಗಾಯಗಳಾಗಿವೆ)

ಸಂವಿಧಾನದಲ್ಲಿ ‘ಜಾತ್ಯಾತೀತ ಮತ್ತು ಸಮಾಜವಾದ’ ಪದಗಳ ಬಗ್ಗೆ ಬಿಜೆಪಿ ಸಿಎಂ ಕಡೆಯಿಂದಲೂ ಅಪಸ್ವರ
ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳಿಗೆ ಭಾರತದ ನಾಗರೀಕತೆಯಲ್ಲಿ ಯಾವುದೇ ಜಾಗವಿಲ್ಲ. ಹೀಗಾಗಿ ಸಂವಿಧಾನ ಪೀಠಿಕೆಯಲ್ಲಿ ಅವೆರಡು ಪದಗಳು ಅಪ್ರಸ್ತುತ ಎಂದು ಅಸ್ಸಾಂ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ‘..ಅವೆರಡು ಪದಗಳು ಪಾಶ್ಚಾತ್ಯ ಪರಿಕಲ್ಪನೆಗಳಾಗಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು’ ಎಂದು ಅವರು ಹೇಳಿದ್ದಾರೆ.

ಸಂವಿಧಾನ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತುಹಾಕಬೇಕೆಂಬ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೊಸ ಬೆಂಕಿ ಹಚ್ಚಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂದರ್ಭದಲ್ಲೇ ಈಗ ಬಿಜೆಪಿಯ ಒಬ್ಬೊಬ್ಬೇ ನಾಯಕರು ಸಂವಿಧಾನದ ಪ್ರಸ್ತಾವನೆ ಬಗ್ಗೆ ಕಿಡಿ ಹಚ್ಚುತ್ತಿರುವುದು ಮತ್ತೆ ಸದ್ದಾಗಿದೆ. ಈಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ಕೂಡ ದೊಡ್ಡ ಸುದ್ದಿಗೆ ಎಡೆಮಾಡಿಕೊಟ್ಟಿದೆ.

‘ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ‘ಜಾತ್ಯಾತೀತ ಮತ್ತು ಸಮಾಜವಾದ’ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದ್ದಾರೆ. ಆದರೆ ಅವು ಭಾರತೀಯ ಸಂಸ್ಕೃತಿಗೆ ಹೊಂದಿಕೆ ಆಗದ ಪದಗಳು. ಈಗ ನಾನೊಬ್ಬ ಕಟ್ಟರ್ ಹಿಂದುತ್ವವಾದಿ, ಹೀಗಿರುವಾಗ ಸಂವಿಧಾನದ ಅಡಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ನಾನು ಅದು ಹೇಗೆ ಜಾತ್ಯಾತೀತನಾಗಲಿ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

‘ಭಾರತದ ‘ಜಾತ್ಯಾತೀತ’ ಎಂಬ ಪದದ ಅರ್ಥ ತಟಸ್ಥವಾಗಿರುವುದಲ್ಲ. ಬದಲಿಗೆ ಸಕಾರಾತ್ಮವಾಗಿ ಆಲೋಚಿಸುವುದಾಗಿದೆ. ಆದರೆ ಜಾತ್ಯಾತೀತ ಪದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದ ಇಂದಿರಾ ಗಾಂಧಿ ಪಾಶ್ಚಾತ್ಯ ದೃಷ್ಟಿಕೋನದಿಂದ ಭಾರತವನ್ನು ನೋಡಿದವರು. ಹೀಗಾಗಿ ಇದನ್ನು ಪ್ರಸ್ತಾವನೆಯಿಂದ ತೆಗೆದುಹಾಕಬೇಕು’ ಎಂದು ಒತ್ತಿ ಹೇಳಿದ್ದಾರೆ.

ಗುವಾಹಟಿಯಲ್ಲಿ ‘ದಿ ಎಮರ್ಜೆನ್ಸಿ ಡೈರೀಸ್‌: ಇಯರ್ಸ್ ದಟ್ ಫೋರ್ಜ್ಡ್‌ ಎ ಲೀಡರ್‌’ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಕೃತಿಯಲ್ಲಿ ತಾವು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಸಂದರ್ಭದಲ್ಲಿನ ಕೆಲವೊಂದು ದಾಖಲೆಗಳು, ನರೇಂದ್ರ ಮೋದಿ ಅವರೊಂದಿಗೆ ಮಾಡಿದ ಕೆಲಸಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. 1975ರಿಂದ 77ರವರೆಗಿನ ತುರ್ತುಪರಿಸ್ಥಿತಿ ಸಂದರ್ಭ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇದರ ವಿರುದ್ಧ ನಡೆಸಿದ ಹೋರಾಟವನ್ನು ಉಲೇಖಿಸಲಾಗಿದೆ ಎಂದು ತಿಳಿಸಿದರು.

‘ತುರ್ತು ಪರಿಸ್ಥಿತಿ ಭವಿಷ್ಯದಲ್ಲಿ ಎದುರಾಗಬಾರದು ಎಂದರೆ ತುರ್ತು ಪರಿಸ್ಥಿತಿಯನ್ನು ನಾವು ಮರೆಯಲೂ ಬಾರದು. 1975ರ ಜೂನ್‌ 25ರಿಂದ 1977ರ ಮಾರ್ಚ್‌ 21ರವರೆಗೆ ಭಾರತದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಪತ್ರಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ವಿಚಾರಣೆ ಇಲ್ಲದೆ ಬಂಧಿಸಲಾಗುತ್ತಿತ್ತು. ಶಿಕ್ಷಣ, ನಾಗರಿಕ ಹಾಗೂ ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿತ್ತು’ ಎಂದು ಬಿಸ್ವಾ ಹೇಳಿದ್ದಾರೆ.