ಮೀಡಿಯ – Peepal Media

ಸಾವಿರಾರು ಕೋಟಿ ಭೂ ಅವ್ಯವಹಾರ ಸಿಎಂ ಕಾರ್ಯಕ್ರಮಕ್ಕೆ ಕೋಟ್ಯಂತರ ವಸೂಲಿ – ಹೆಚ್.ಡಿ. ರೇವಣ್ಣ
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕರ ಜಂಠಿ ಸಿಡಿಲು: ಹೆಚ್.ಡಿ. ರೇವಣ್ಣ ಗಂಭೀರ ಆರೋಪ

ಹಾಸನ : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಭೂ ಅವ್ಯವಹಾರ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಹಾಸನ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಭೂ ಅಕ್ರಮ, ಅನಧಿಕೃತ ಮಂಜೂರಾತಿ, ಪ್ರಕ್ರಿಯೆ ಉಲ್ಲಂಘನೆ, ಮತ್ತು ಸರ್ಕಾರದ ನಿರ್ಲಕ್ಷ್ಯ ಹಾಗೂ ಸಿಎಂ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳಿಂದ ಕೋಟ್ಯಾಂತರ ರೂ ವಸೂಲಿ ಸೇರಿ ಹೆಚ್.ಡಿ. ರೇವಣ್ಣ ಗಂಭೀರ ಆರೋಪಗಳನ್ನು ಹೊರ ಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾರೀ ಬಾಂಬ್ ಸಿಡಿಸಿದ್ದು, ೭೩ ಎಕರೆ ಭೂಮಿಗೆ ೯೭ ಜನರಿಗೆ ಅಕ್ರಮ ಮಂಜೂರಾತಿ, ೪೦೦ ಕೋಟಿ ರೂ. ವಂಚನೆ ಆರೋಪ ಕುರಿತು ಫೆಬ್ರವರಿಯಲ್ಲೇ ಕಂದಾಯ ಸಚಿವರಿಗೆ ಭೂ ಅಕ್ರಮದ ಬಗ್ಗೆ ದೂರು ಸಲ್ಲಿಸಲಾಗಿತ್ತು. ಸಚಿವ ಕೃಷ್ಣಭೈರೇಗೌಡ ಅವರು ತನಿಖೆಗೆ ಸೂಚನೆ ನೀಡಿದರೂ ಯಾವ ಪ್ರಗತಿ ಕಾಣಲಿಲ್ಲ. ಚಿಕ್ಕಕೊಂಡಗೊಳ ಗ್ರಾಮದಲ್ಲಿ ೭೩ ಎಕರೆ ಭೂಮಿಯನ್ನು ೯೭ ಜನರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದ್ದು, ಈ ಭೂಮಿಯ ಮೌಲ್ಯ ಸುಮಾರು ೪೦೦ ಕೋಟಿಗೂ ಹೆಚ್ಚು ಇದೆ. ಜೆಡಿಎಸ್ ಶಾಸಕರು ಇದು ವಿಶಾಲ ಪ್ರಮಾಣದ ಭೂ ವಂಚನೆ ಎಂದು ಆರೋಪಿಸಿ, ತಕ್ಷಣ ಎಸ್‌ಐಟಿ ರಚನೆ ಮಾಡಿ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು ಎಂದರು. ೪೦ ವರ್ಷ ಯಾರೂ ಸ್ವಾಧೀನಕ್ಕೆ ಬರದ ಭೂಮಿ ೨೦೨೩ರಲ್ಲಿ ಏಕಾಏಕಿ ಖಾಯಂ ಸಾಗುವಳಿ ಚೀಟಿ ನೀಡಲಾಗಿದೆ. ಈ ಭೂಮಿ ಮಂಜೂರು ಆಗಿ ಸುಮಾರು ೪೦ ವರ್ಷವಾದರೂ ಯಾರೂ ಸ್ವಾಧೀನಕ್ಕೆ ಬಂದಿಲ್ಲ. ೨೦೨೩ರಲ್ಲಿ ಏಕಾಏಕಿ ಖಾಯಂ ಸಾಗುವಳಿ ಚೀಟಿ ನೀಡಲಾಗಿದೆ. ಈಗ ವೇಗವಾಗಿ ಬಡಾವಣೆ ನಿರ್ಮಾಣ ಪ್ರಾರಂಭವಾಗಿದೆ. ಸ್ಥಳದಲ್ಲಿ ರಾಜಕಾಲುವೆಯನ್ನೇ ಮುಚ್ಚಿ ರಸ್ತೆ ನಿರ್ಮಿಸಿರುವ ಗಂಭೀರ ಆರೋಪವೂ ಕೇಳಿಬಂದಿದ್ದು, ಈ ಬೆಳವಣಿಗೆಗಳು ಯಾರಾದರೂ ಬಲವಾದ ಪ್ರಭಾವಕ್ಕೆ ಒಳಗಾಗಿ ಅಕ್ರಮ ಮಂಜೂರಾತಿ ನಡೆದಿದೆ ಎಂಬ ಅನುಮಾನವನ್ನು ಬಲಪಡಿಸುತ್ತಿವೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯರ ಡಿಸೆಂಬರ್ ೬ರ ಕಾರ್ಯಕ್ರಮಕ್ಕೂ ವಿವಿಧ ಇಲಾಖೆಗಳಿಂದ ಕೋಟ್ಯಂತರ ವಸೂಲಿಗೆ ಇಳಿಗಿರುವದಾಗಿ ಗಂಭೀರ ಆರೋಪ ಮಾಡಿದ್ದು, ಸಿಎಂ ಕಾರ್ಯಕ್ರಮಕ್ಕಾಗಿ ಅಧಿಕಾರಿಗಳಿಂದ ೪ ರಿಂದ ೫ ಕೋಟಿ ವಸೂಲಿ ಮಾಡಲಾಗಿದೆ. ಹುಡಾ ಒಂದರಿಂದಲೇ ೧ ಕೋಟಿ ಹಣ ವಸೂಲಿ ಆಗಿದೆ. ಇದನ್ನು ಯಾವ ಕಾರ್ಯಕ್ರಮಕ್ಕೆ ಬಳಸುತ್ತಿದ್ದಾರೆ? ಜನರ ಊಟ, ವ್ಯವಸ್ಥೆ ಯಾರ ಹೊಣೆ? ಎಂದು ಪ್ರಶ್ನೆ ಮಾಡಿದರು. ನನಗೆ ನಿಖರ ಮಾಹಿತಿ ಇಲ್ಲ, ಆದರೆ ಹೀಗೆ ಮಾತುಗಳು ನಡೆಯುತ್ತಿದೆ. ಅಧಿಕಾರಿಗಳಿಂದ ವಸೂಲಿ ನಡೀತಿದೆ ಎಂದು ಹೇಳಿ ಗಂಭೀರ ಆರೋಪದ ಬಾಂಬ್ ಸಿಡಿಸಿದರು. ನಮಗೆ ಅನುದಾನ ಕೊಡದಿದ್ದರೂ ಪರವಾಗಿಲ್ಲ. ಆದರೇ ಹಾಸನದ ಶಾಸಕ ಸ್ವರೂಪ್ ಪ್ರಕಾಶ್ ಅವರ ಹಾಸನ ಕ್ಷೇತ್ರಕ್ಕೆ ಅನುದಾನ ಕೊಡುವಲ್ಲಿ ಸರ್ಕಾರ ತೋರಿಸಿರುವ ಮಲತಾಯಿ ಧೋರಣೆಗೆ ಚಳಿಗಾಲದ ಅಧಿವೇಶನದಲ್ಲಿ ಗಟ್ಟಿಯಾಗಿ ಹೋರಾಟ ಮಾಡುವುದಾಗಿ ಘೋಷಿಸಿ ಎಚ್ಚರಿಸಿದರು. ರಾಯಚೂರಿಗೆ ಅನುದಾನ ನೀಡಿರುವಂತೆ ಹಾಸನಕ್ಕೂ ೨೦೦ ಕೋಟಿ ಅನುದಾನ ಬೇಡ ಕನಿಷ್ಠ ೧೦೦ ಕೋಟಿ ರೂ ಅನುದಾನ ನೀಡುವಂತೆ ಗಟ್ಟಿಯಾಗಿ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತುವಂತೆ ಶಾಸಕ ಸ್ವರೂಪ್ ಪ್ರಕಾಶ್ ಅವರುಗೆ ರೇವಣ್ಣ ದೈರ್ಯ ತುಂಬಿದರು.

ಹಾಸನದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಹಾಸನಕ್ಕೆ ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಸನ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ ಸರ್ಕಾರದಿಂದ ಯಾವುದೇ ಕೆಲಸವೇ ಆಗಿಲ್ಲ. ಡಿಸೆಂಬರ್ ೬ ರಂದು ಸಿಎಂ ಬರುತ್ತಿದ್ದಾರೆ. ಆದರೆ ಉದ್ಘಾಟನೆಯಾದ ಕೆಲಸಗಳು ಎಲ್ಲಾ ರೇವಣ್ಣ ಅವರ ಉಸ್ತುವಾರಿ ಅವಧಿಯದ್ದು, ಅನುದಾನ ಕುರಿತು ಅವರು ಅಧಿವೇಶನಗಳಲ್ಲಿ ಹಲವು ಬಾರಿ ಪ್ರಶ್ನಿಸಿದರೂ ಸರ್ಕಾರ ಬೇಕಾಬಿಟ್ಟಿ ಉತ್ತರ ನೀಡಿದೆ. ಹಾಸನ ಮಹಾನಗರಪಾಲಿಕೆಯ ಮೇಲ್ದರ್ಜೆಗೆ ಏರಿದರೂ ಅನುದಾನ ಮಾತ್ರ ಶೂನ್ಯ! ಹಾಸನ ನಗರಸಭೆಯನ್ನು ಮಹಾನಗರಪಾಲಿಕೆಗೆ ಮೇಲ್ದರ್ಜೆ ಮಾಡಲಾಗಿದೆ.

ಹೊಸದಾಗಿ ೩೭ ಹಳ್ಳಿಗಳನ್ನು ಸೇರಿಸಲಾಗಿದೆ. ರಾಯಚೂರು ಮಹಾನಗರಪಾಲಿಕೆಗೆ ಅನುದಾನ ಬಿಡುಗಡೆಯಾದರೂ, ಹಾಸನಕ್ಕೆ ಮಾತ್ರ “ಅಗಲ್ವೆ” ಎನ್ನಲಾಗಿದೆ. ಸರ್ಕಾರದ ಮಲತಾಯಿ ಧೋರಣೆ ವಿರುದ್ದ ಈ ಚಳಿಗಾಲದ ಅಧಿವೇಶನದಲ್ಲಿ ಗಟ್ಟಿಯಾಗಿ ಹೋರಾಟ ಮಾಡುತ್ತೇನೆ ಎಂದು ಸ್ವರೂಪ್ ಪ್ರಕಾಶ್ ಘೋಷಿಸಿದರು. ಅಧಿಕೃತ/ಅನಧಿಕೃತ ಬಡಾವಣೆ ನಿರ್ಮಾಣದ ಕುರಿತು ಹಿಂದಿನ ಅಧಿವೇಶನದಲ್ಲೇ ಪ್ರಶ್ನೆ ಕೇಳಲಾಗಿತ್ತಾದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮತ್ತೊಂದು ಗಂಭೀರ ವಿಷಯ ಎತ್ತಿದರು. ನಗರ ವ್ಯಾಪ್ತಿಯ ೨೫ ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ನಗರದ ಹೊರವಲಯದ ಚಿಕ್ಕಕೊಂಡಗೊಳ ಗ್ರಾಮ ವ್ಯಾಪ್ತಿಯಲ್ಲಿ ಈ ಅಕ್ರಮ ಮಂಜೂರಾತಿ ನಡೆದಿದೆಯೆಂಬ ಆರೋಪ ಇದ್ದು, ಒಟ್ಟು ಅವ್ಯವಹಾರದ ಅಂದಾಜು ೪೦೦ ಕೋಟಿ ಅಕ್ರಮವಾಗಿದೆ. ಕಂದಾಯ ಸಚಿವರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಆದರೆ ವರ್ಷ ಕಳೆದರೂ ಒಂದು ಹೆಜ್ಜೆಯೂ ಮುಂದುವರೆಯಲಿಲ್ಲ ಎಂದು ದೂರಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜೆಡಿಎಸ್ ಶಾಸಕರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂ ಅಕ್ರಮ, ವಂಚನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಭಾರೀ ಆರೋಪ ಹೊರಬಿದ್ದಿದೆ. ಈ ದೊಡ್ಡ ಮಟ್ಟದ ಭೂ ವಂಚನೆಯ ಬಗ್ಗೆ ಹಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದರು. ೭೩ ಎಕರೆ ಭೂಮಿ ೯೭ ಜನರಿಗೆ ಅಕ್ರಮ ಮಂಜೂರಾತಿ ಮಾಡಲಾಗಿದೆ. ನಗರದ ಹೊರವಲಯದ ಚಿಕ್ಕಕೊಂಡಗೊಳ ಗ್ರಾಮದಲ್ಲಿ ೯೭ ಜನರಿಗೆ ಅಕ್ರಮವಾಗಿ ೭೩ ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಈ ಅಕ್ರಮದ ಒಟ್ಟು ಮೌಲ್ಯ ಸುಮಾರು ೪೦೦ ಕೋಟಿ ಎಂದು ಅಂದಾಜಿಸಲಾಗಿದೆ. ಇದು ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯಲ್ಲೇ ನಡೆದಿರುವ “ದೊಡ್ಡ ವಂಚನೆ” ಎಂದು ಅವರು ಸ್ಪಷ್ಟವಾಗಿ ಆರೋಪಿಸಿದರು. ಫೆಬ್ರವರಿಯಲ್ಲೇ ದೂರು ನೀಡಿ ತನಿಖೆಗೆ ಸೂಚನೆ ಕೊಡಲಾಗಿದ್ದರೂ ಆದರೆ ಕ್ರಿಯಾಶೀಲತೆ ಶೂನ್ಯವಾಗಿದೆ. ಸಚಿವ ಕೃಷ್ಣಭೈರೇಗೌಡ ಅವರು ತನಿಖೆಗೆ ಸೂಚನೆ ನೀಡಿದ್ದರೂ, ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ಹೇಳಲಾಗಿದೆ. ೪೦ ವರ್ಷಕ್ಕಿಂತಲೂ ಹಳೆಯ ಮಂಜೂರಾತಿ ೨೦೨೩ರಲ್ಲಿ ಏಕಾಏಕಿ ಖಾಯಂ ಸಾಗುವಳಿ ಚೀಟಿ!

೪೦ ವರ್ಷಗಳ ಹಿಂದೆ ಮಂಜೂರಾದ ಈ ಭೂಮಿಯನ್ನು ಸ್ವಾಧೀನಕ್ಕೆ ಬರಲು ಯಾರೂ ಮುಂದೆ ಬರಲಿಲ್ಲ. ಆದರೆ ೨೦೨೩ರಲ್ಲಿ ಏಕಾಏಕಿ ಖಾಯಂ ಸಾಗುವಳಿ ಚೀಟಿ ನೀಡಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ವೇಗವಾಗಿ ಬಡಾವಣೆ ನಿರ್ಮಾಣ ನಡೆಯುತ್ತಿರುವುದನ್ನೂ ಶಾಸಕರು ಪ್ರಶ್ನಿಸಿದರು. ರಾಜಕಾಲುವೆಯನ್ನೇ ಮುಚ್ಚಿ ರಸ್ತೆ ನಿರ್ಮಾಣ. ಈ ಪ್ರದೇಶದಲ್ಲಿ ರಾಜಕಾಲುವೆಯನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದು, ಇದು ಸಂಪೂರ್ಣ ಅಕ್ರಮ ಮತ್ತು ಪರಿಸರ ಹಾನಿಗೆ ಕಾರಣವಾಗುವ ಕ್ರಮ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಈ ಎಲ್ಲಾ ಅಂಶಗಳನ್ನು ಆಧಾರವಾಗಿ ಮುಂದಿಟ್ಟು, ಜೆಡಿಎಸ್ ಶಾಸಕರು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಭೂ ಅಕ್ರಮಕ್ಕೆ ಕಾರಣರಾದವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು. ತನಿಖೆಗೆ ತಡವಾಗುತ್ತಿರುವುದು ಅನುಮಾನಾಸ್ಪದ ಎಂದು ಹೇಳಿದರು.

ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ‌ ಶತಕಗಳ ಆಟ ಬೃಹತ್‌ ಮೊತ್ತದತ್ತ ಭಾರತ
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಭರ್ಜರಿ ಶತಕ ಸಿಡಿಸಿ ವಿಜೃಂಭಿಸಿದ್ದಾರೆ. 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಬ್ಯಾಟಿಂಗ್​ಗೆ ಆಗಮಿಸಿದ ಗಾಯಕ್ವಾಡ್, ಕೊಹ್ಲಿ ( Virat Kohli) ಜೊತೆಗೂಡಿ ಅದ್ಭುತ ಜೊತೆಯಾಟ ನೀಡಿದರು. ಆರಂಭದಿಂದಲೂ ಸಂಪೂರ್ಣ ಹಿಡಿತ ಸಾಧಿಸಿದ ಗಾಯಕ್ವಾಡ್ ಕೇವಲ 52 ಎಸೆತಗಳು ಅರ್ಧಶತಕ ಸಿಡಿಸಿದರು. ನಂತರ ಕೇವಲ 25 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು.

ಕ್ಷಿಣ ಆಫ್ರಿಕಾ ಬೌಲರ್ಸ್ ಅನ್ನು ದಂಡಿಸಿದ ವಿರಾಟ್ ಕೊಹ್ಲಿ 90 ಎಸೆತಗಳಲ್ಲಿ 53ನೇ ಏಕದಿನ ಶತಕ ಮತ್ತು 84ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಇದು ಈ ವರ್ಷ ತವರಿನಲ್ಲಿ ವಿರಾಟ್ ಕೊಹ್ಲಿ ಅವರ ಸತತ ಎರಡನೇ ಶತಕ. ಮೊದಲ ಏಕದಿನ ಪಂದ್ಯದಲ್ಲಿಯೂ ಕೊಹ್ಲಿ 135 ರನ್ ಗಳಿಸಿದ್ದರು. ಇದು ಕೊಹ್ಲಿ ಅವರ ಸತತ ಮೂರನೇ 50 ಪ್ಲಸ್ ಸ್ಕೋರ್ ಆಗಿದೆ. ಈ ಎರಡು ಏಕದಿನ ಪಂದ್ಯಗಳಿಗೂ ಮೊದಲು, ಕೊಹ್ಲಿ ಸಿಡ್ನಿಯಲ್ಲಿ ಅರ್ಧಶತಕ ಗಳಿಸಿದ್ದರು.

ಇ-ಸ್ಟ್ಯಾಂಪಿಂಗ್‌ ವ್ಯವಸ್ಥೆಗೆ ಗುಡ್‌ ಬೈ, ಸರ್ಕಾರದಿಂದ Digital E-Stamping ಜಾರಿ – ಕೃಷ್ಣಬೈರೇಗೌಡ
ಬೆಂಗಳೂರು: ಇ-ಸ್ಟ್ಯಾಂಪಿಂಗ್‌ ವ್ಯವಸ್ಥೆಗೆ ಸರ್ಕಾರ ಗುಡ್ ಬೈ ಹೇಳಿದ್ದು, ಛಾಪಾ ಅಥವಾ ಇ-ಸ್ಟ್ಯಾಂಪ್‌ ಕಾಗದಗಳಿಗೆ ಸರ್ಕಾರ ಡಿಜಿಟಲ್ ಸ್ಪರ್ಶ ನೀಡಿದೆ. ಕಳೆದ ಅಕ್ಟೋಬರ್‌ನಿಂದಲೇ ರಾಜ್ಯದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್  ಜಾರಿಗೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು ಮುಂದೆ ಡಿಜಿಟಲ್ ಛಾಪಾ ಕಾಗದಗಳ ಬಳಕೆಗೇ ಹೆಚ್ಚು ಒತ್ತು ಕೊಡಲಾಗುತ್ತದೆ. ಹಂತಹಂತವಾಗಿ ಇ-ಸ್ಟ್ಯಾಂಪ್‌ ಗಳನ್ನು ನಿಲ್ಲಿಸಲಾಗುವುದು. ಡಿಜಿಟಲ್ ಇ ಛಾಪಾಕ್ಕೆ ಮತ್ತಷ್ಟು ಬಲ ತುಂಬಲು ಡಿಜಿಟಲ್ ಸಹಿಗೆ ಕಾನೂನಿನ ಮಾನ್ಯತೆ ನೀಡಲಾಗಿದೆ. ಇದಕ್ಕಾಗಿ, ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕ-2025 ಜಾರಿಯಾಗಿದೆ ಎಂದರು. ಇನ್ನು ಮಂದೆ ಇ-ಸ್ಟ್ಯಾಂಪ್‌ ಬದಲಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವಿತರಿಸಲಾಗುತ್ತದೆ. ಸ್ಟಾಂಪಿಂಗ್‌ ದುರ್ಬಳಕೆ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಚಲನ್‌ ಕೊಟ್ಟು ಉಪ ನೋಂದಣಾಧಿಕಾರಿಗಳಿಂದ ಛಾಪಾ ಕಾಗದ ಪಡೆಯುವುದಕ್ಕೆ ಕಡಿವಾಣ ಹಾಕಲು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಮತ್ತು ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬಲ ನೀಡಲಾಗುತ್ತಿದೆ. ಇದಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ನೋಂದಣಿಯಾಗದ ಅಗ್ರಿಮೆಂಟ್‌ಗಳಿಗೂ ಡಿಜಿಟಲ್ ಇ ಸ್ಟ್ಯಾಂಪ್‌ ಅನ್ವಯಿಸಲಿದೆ. ಛಾಪಾ ಕಾಗದ ತೆಗೆದುಕೊಳ್ಳಲು ಅವುಗಳನ್ನು ಮಾರಾಟ ಮಾಡುವ ಸ್ಥಳಗಳಿಗೆ ಜನ ಹೋಗಬೇಕಾಗಿತ್ತು. ಈಗ ಮನೆಯಲ್ಲಿ ಕೂತು ಛಾಪಾ ಕಾಗದ ಖರೀದಿ ಮಾಡಬಹುದು. ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಇದು ಪೂರ್ತಿ ಆನ್‌ಲೈನ್ ನಲ್ಲಿ ಭದ್ರತೆಯಲ್ಲಿರುತ್ತೆ. ಈ ಮೊದಲು ಕಳೆದು ಹೋದರೆ ದಾಖಲೆ ಇರುತ್ತಿರಲಿಲ್ಲ. ಈಗ ಒಂದು ಬಾರಿ ಅಗ್ರಿಮೆಂಟ್ ಮಾಡಿಕೊಂಡ್ರೆ ಡಿಜಿಟಲ್ ಮೂಲಕ ದಾಖಲೆ ಭದ್ರವಾಗಿ ಇರಲಿದೆ. ಬೇಕಾದಾಗ ಇದನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಎಲ್ಲಾ ಸ್ವರೂಪದ ಡಿಜಿಟಲ್ ಅಗ್ರಿಮೆಂಟ್ ಮಾಡಲು ಅವಕಾಶ ಇದೆ. ನಂಬರ್, ಕ್ಯೂರ್ ಕೋಡ್ ಇರುತ್ತದೆ. ಡಿಜಿಟಲ್ ಛಾಪಾಕಾಗದದ ಫೀಸ್ ಕೂಡ ಹೆಚ್ಚಾಗುವುದಿಲ್ಲ. ಆಧಾರ್ ಕೊಟ್ಟು ಒಟಿಪಿ ಬಂದ ನಂತರ ಅಗ್ರಿಮೆಂಟ್ ಮಾಡಿಕೊಳ್ಳಬೇಕು. ಯಾರ ನಡುವೆ ಅಗ್ರಿಮೆಂಟ್ ಆಗುತ್ತೆ ಅವರು ಆಧಾರ್ ಕೊಟ್ಟು ಒಟಿಪಿ ಬಂದ್ಮೇಲೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಜನಸಾಮಾನ್ಯರಿಗೆ ಪತಾಂಜಲಿ ಕಂಪನಿಯಿಂದ ಕೆಟ್ಟ ತುಪ್ಪ ವಿತರಣೆ – ದಂಡ ವಿಧಿಸಿದ ಕೋರ್ಟ್
ಉತ್ತರಾಖಂಡ : ಪತಂಜಲಿ (Patanjali ) ತುಪ್ಪ (Ghee ) ಗ್ರಾಹಕರ ವಿಶ್ವಾಸ ಕಳೆದುಕೊಂಡಿದೆ. ಗುಣಮಟ್ಟದ ಪರೀಕ್ಷೆ ವಿಚಾರದಲ್ಲಿ ಫೇಲ್ ಆಗಿದೆ.

ಪತಂಜಲಿ ಕಂಪನಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ದಂಡ ವಿಧಿಸಿದೆ.

ಚಂಡಮಾರುತದ ಹೊಡೆತಕ್ಕೆ ತತ್ತರಿಸಿದ ಶ್ರೀಲಂಕಾ – ತುರ್ತು ಪರಿಸ್ಥಿತಿ ಘೋಷಣೆ
ಶ್ರೀಲಂಕಾದಲ್ಲಿ (Srilanka) ‘ದಿತ್ವಾ’ ಚಂಡಮಾರುತದ (Ditva Cyclone) ಪರಿಣಾಮ ಅಕ್ಷರಶಃ ನಲುಗಿ ಹೋಗಿದ್ದು, 593ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾಕಷ್ಟು ಹಾನಿ ಸಂಭವಿಸಿದೆ. ಇದೀಗ ಪ್ರಧಾನಿ ಮೋದಿ (Pm Modi) ಶ್ರೀಲಂಕಾಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಚಂಡಮಾರುತದ ಆರ್ಭಟಕ್ಕೆ ಶ್ರೀಲಂಕಾ ತತ್ತರಿಸಿ ಹೋಗಿದ್ದು, ಇದೀಗ ಅಧ್ಯಕ್ಷ ದಿಸ್ಸನಾಯಕೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ದಿತ್ವಾ ಚಂಡಮಾರುತದಿಂದ ಉಂಟಾದ ಜೀವಹಾನಿ ಮತ್ತು ವ್ಯಾಪಕ ವಿನಾಶ ಕುರಿತು ಸಂತಾಪ ಸೂಚಿಸಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಆಪ್ತ ಮತ್ತು ವಿಶ್ವಾಸಾರ್ಹ ಸ್ನೇಹಿತನಾಗಿ ಈ ಕಷ್ಟದ ಸಮಯದಲ್ಲಿ ಭಾರತವು ಶ್ರೀಲಂಕಾ ಮತ್ತು ಅಲ್ಲಿನ ಜನರ ಬೆಂಬಲಕ್ಕೆ ದೃಢವಾಗಿ ನಿಂತಿದೆ  ಎಂದು ಬರೆದುಕೊಂಡಿದ್ದಾರೆ.

ಮಾಜಿ ಸಿ.ಎಂ ಯಡಿಯೂರಪ್ಪಗೆ ಬಿಗೆ ರಿಲೀಫ್‌ – ಪೋಕ್ಸೋ ಕೇಸ್ ತಾತ್ಕಾಲಿಕ ಬ್ರೇಕ್
ಬೆಂಗಳೂರು : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yeddyurappa) ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ (Pocso Case) ಬಿಗ್ ರಿಲೀಫ್ ಸಿಕ್ಕಿದೆ.ಪೋಕ್ಸೋ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು ಮತ್ತು ಅಷ್ಟೇ ಅಲ್ಲದೆ ಬಿಎಸ್ ವೈ ಅವರನ್ನು ಖುದ್ದಾಗಿ ಹಾಜರಾಗುವಂತೆ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಯಡಿಯೂರಪ್ಪ ಅವರಿಗೆ ಪ್ರಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ.

ಈ ನಡುವೆ, ಬೆಂಗಳೂರಿನ ಕೋರ್ಟ್‌ನಲ್ಲೂ ಯಡಿಯೂರಪ್ಪ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ಯಡಿಯೂರಪ್ಪ ಪರ ವಕೀಲರು ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು. ತಡೆ ಆದೇಶದ ದಾಖಲೆಯನ್ನು ನೀಡಲು ನ್ಯಾಯಾಧೀಶರು ಸೂಚಿಸಿದ್ದು, ಇದೀಗಷ್ಟೇ ಮಾಹಿತಿ ಸಿಕ್ಕಿದೆ, ದಾಖಲೆಗಳನ್ನು ತಕ್ಷಣ ಸಲ್ಲಿಸುತ್ತೇವೆ ಎಂದು ಯಡಿಯೂರಪ್ಪ ಪರ ವಕೀಲರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ಮೊದಲ ಫಾಸ್ಟ್ ಟ್ರಾಕ್ ಕೋರ್ಟ್‌ನಲ್ಲಿ ನಡೆಯುತ್ತಿದೆ.

ದಿತ್ವಾ ಸೈಕ್ಲೋನ್ ಅಬ್ಬರಕ್ಕೆ 203 ಜನ ನಾಪತ್ತೆ, ಶ್ರೀಲಂಕಾದಲ್ಲಿ 159 ಮಂದಿ ಬಲಿ
ಕೊಲೊಂಬೊ: ಡಿಟ್ವಾ ಚಂಡಮಾರುತದಿಂದ ಉಂಟಾದ ಧಾರಾಕಾರ ಮಳೆ ಮತ್ತು ಪ್ರವಾಹದಲ್ಲಿ ಶ್ರೀಲಂಕಾದಾದ್ಯಂತ ಇದುವರೆಗೆ 159 ಜನರು ಸಾವನ್ನಪ್ಪಿದ್ದಾರೆ, ಇನ್ನೂ 203 ಜನರು ಕಾಣೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಶನಿವಾರ ತಿಳಿಸಿದೆ.

ಒಂದು ವಾರದಿಂದ ಸುರಿದ ಭಾರೀ ಮಳೆಯಲ್ಲಿ ಮನೆಗಳು ಹಾಳಾದ ನಂತರ 43,995 ಜನರನ್ನು ಸರ್ಕಾರಿ ಕಲ್ಯಾಣ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಹಾನಿರ್ದೇಶಕ ಸಂಪತ್ ಕೊಟುವೆಗೋಡ ತಿಳಿಸಿದ್ದಾರೆ.

ಹವಾಮಾನ ವ್ಯವಸ್ಥೆಯು ದ್ವೀಪದಿಂದ ನೆರೆಯ ಭಾರತದತ್ತ ಚಲಿಸುತ್ತಿತ್ತು ಆದರೆ ಅದು ಈಗಾಗಲೇ ಭಾರಿ ವಿನಾಶವನ್ನು ಉಂಟುಮಾಡಿದೆ ಎಂದು ಡಿಎಂಸಿ ತಿಳಿಸಿದೆ.ಸಶಸ್ತ್ರ ಪಡೆಗಳ ನೆರವಿನಿಂದ ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕೊಲಂಬೊದಲ್ಲಿ ಸುದ್ದಿಗಾರರಿಗೆ ತಿಳಿಸಿದ ಕೊಟ್ಟುವೆಗೊಡ.

ಚಂಡಮಾರುತವು ಬುಧವಾರ ಭೂಕುಸಿತವನ್ನು ಉಂಟುಮಾಡಿದ್ದರೂ, ಹವಾಮಾನ ವ್ಯವಸ್ಥೆಯ ಪರಿಣಾಮಗಳು ಸೋಮವಾರದಿಂದ ಅನುಭವಕ್ಕೆ ಬಂದಿವೆ, ಇದು ದ್ವೀಪದಾದ್ಯಂತ ದಾಖಲೆಯ ಮಳೆಯನ್ನು ಪ್ರಚೋದಿಸಿತು. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಶನಿವಾರ ಹದಗೆಟ್ಟಿದ್ದು, ಕೊಲಂಬೊದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಕೆಲಾನಿ ನದಿಯ ದಡದಲ್ಲಿ ವಾಸಿಸುವವರಿಗೆ ಸ್ಥಳಾಂತರಿಸುವ ಆದೇಶಗಳನ್ನು ಹೊರಡಿಸಲು ಅಧಿಕಾರಿಗಳನ್ನು ಪ್ರೇರೇಪಿಸಿದೆ. ಕೆಲಾನಿ ಶುಕ್ರವಾರ ಸಂಜೆ ತನ್ನ ಕಟ್ಟೆಗಳನ್ನು ಒಡೆದಿದ್ದು, ನೂರಾರು ಜನರು ತಾತ್ಕಾಲಿಕ ಆಶ್ರಯಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ಡಿಎಂಸಿ ತಿಳಿಸಿದೆ.

ಸಿಮ್‌ ಕಾರ್ಡ್‌ ಇಲ್ಲದೆ ಇನ್ನು ಮುಂದೆ ವಾಟ್ಸಪ್‌ , ಟೆಲಿಗ್ರಾಂ ಬಳಸಲಾಗುವುದಿಲ್ಲ ಮಹತ್ವದ ಆದೇಶ ?
ಬೆಂಗಳೂರು : ಮೊಬೈಲ್ ಸಿಮ್ ನೆಟ್ವರ್ಕ್ (mobile network) ಕುರಿತಂತೆ ಕೇಂದ್ರ ಸರ್ಕಾರ (Central government) ಮಹತ್ವದ ತೀರ್ಮಾನ ಕೈಗೊಂಡಿದೆ.ಕೇಂದ್ರ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ ಆ್ಯಕ್ಟಿವ್ ಸಿಮ್ ಕಾರ್ಡ್ ಇಲ್ಲದೆ ಈ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಿಲ್ಲ.ಮೊಬೈಲ್‌ನಲ್ಲಿ ಸಕ್ರಿಯವಾಗಿರುವ ಸಿಮ್ ಕಾರ್ಡ್ ಇದ್ದಾಗ ಮಾತ್ರ ವಾಟ್ಸ್ಆ್ಯಪ್ ಸೇರಿದಂತೆ ಆ್ಯಪ್ ಆಧಾರಿತ ಕಮ್ಯುನಿಕೇಷನ್ ಸೇವೆ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸುವಂತೆ ಕೇಂದ್ರ ಸರ್ಕಾರ ಖಡಕ್ ನಿರ್ದೇಶನ ನೀಡಿದೆ.120 ದಿನಗಳೊಳಗಾಗಿ ದೂರಸಂಪರ್ಕ ಇಲಾಖೆಗೆ ವರದಿಯನ್ನು ಸಲ್ಲಿಸುವಂತೆ ಆ್ಯಪ್ ಆಧಾರಿತ ಸಂವಹನ ಸೇವೆ ಒದಗಿಸುವ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.ವರದಿ ಸಲ್ಲಿಸಲು ಹಿಂದೇಟು ಹಾಕಿದರೆ ದೂರಸಂಪರ್ಕ ಕಾಯ್ದೆ 2023, ಟೆಲಿಕಾಂ ಸೈಬ‌ರ್ ಭದ್ರತಾ ನಿಯಮ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಯಾವೆಲ್ಲಾ ಆಪ್ ಮೇಲೆ ಪರಿಣಾಮ..?

ವಾಟ್ಸ್ಆ್ಯಪ್, ಸಿಗ್ನಲ್, ಟೆಲಿಗ್ರಾಮ್, ಅರಟ್ಟೆ, ಸ್ನಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್, ಜೋಷ್‌ನಂತಹ ಸಂವಹನ ಸೇವೆ ನೀಡುವ ಆ್ಯಪ್‌ಗಳ ಬಳಕೆದಾರರ ಮೇಲೆ ಇದು ಪರಿಣಾಮ ಬೀರಲಿದೆ.

ವಿರಾಟ್‌ ಶತಕ – ಕಠಿಣ ಹೋರಾಟ ನೀಡಿದ ಹರಿಣಗಳ ವಿರುದ್ಧ ಭಾರತಕ್ಕೆ ಜಯ
ರಾಂಚಿ : ದಕ್ಷಿಣ ಆಫ್ರಿಕಾ (South Africa) ವಿರುದ್ದದ ಟೆಸ್ಟ್ ಸರಣಿ (Test series) ಸೋಲಿನ ಬಳಿಕ ಭಾರತ (India) ಗೆಲುವಿನ ಲಯಕ್ಕೆ ಮರಳಿದೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಸೋಲಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ 17 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ (ODI series) ಯಲ್ಲಿ ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ರಾಂಚಿಯಲ್ಲಿ ಭಾರತದ ಪರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.

ಬಹಳ ರೋಮಾಂಚಕತೆಯಿಂದ ಕೂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 17 ರನ್ ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ ಅವರ ಶತಕ, ರೋಹಿತ್ ಶರ್ಮಾ ಮತ್ತು ನಾಯಕ ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿದ ಭಾರತ ಬಳಿಕ ಹರ್ಷಿತ್ ರಾಣಾ ಮತ್ತು ಕುಲ್ದೀಪ್ ಯಾದವ್ ಅವರ ಬೌಲಿಂಗ್ ದಾಳಿಯ ನೆರವಿನಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ರಾಜ್ಯ ರಾಜಧಾನಿಯಲ್ಲಿ ಜಿಎಸ್‌ಟಿ-ಐಟಿ ಅಧಿಕಾರಿಗಳ ದಾಳಿ, 100 ಕೋಟಿಗೂ ಅಧಿಕ ವಂಚನೆ
ಬೆಂಗಳೂರು :  ಆದಾಯ ತೆರಿಗೆ (Income Tax) ಹಾಗೂ ಜಿಎಸ್​ಟಿ (GST)  ಇಲಾಖೆಗಳು ಅಧಿಕಾರಿಗಳು ಬೆಂಗಳೂರಿನ (Bengaluru) ಅನೇಕ ಪ್ರದೇಶಗಳಲ್ಲಿ ದಾಳಿ ಮಾಡಿದ್ದು, ಮುಚ್ಚಿಡಲಾಗಿದ್ದ 100 ಕೋಟಿ ರೂ. ಮೌಲ್ಯದ ವಹಿವಾಟುಗಳನ್ನ ಪತ್ತೆ ಮಾಡಿದ್ದಾರೆ.

ಬಯಲಾದ ತೆರಿಗೆ ವಂಚನೆ ಪ್ರಕರಣ
ಅಧಿಕಾರಿಗಳ ದಾಳಿಯಲ್ಲಿ ಮುಚ್ಚಿಡಲಾಗಿದ್ದ ವಹಿವಾಟುಗಳು ಪತ್ತೆ ಆಗಿದ್ದು, ಅಧಿಕಾರಿಗಳ ದಾಳಿಯಿಂದ ವ್ಯಾಪಕ ತೆರಿಗೆ ವಂಚನೆ ಜಾಲ ಬೆಳಕಿಗೆ ಬಂದಿದೆ. ಮಾಹಿತಿಗಳ ಪ್ರಕಾರ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿವಿಕೆ ರಸ್ತೆ, ಜೆಸಿ ರಸ್ತೆ, ಎಸ್‌ಪಿ ರೋಡ್ ಪ್ರದೇಶಗಳಲ್ಲಿನ ಹಲವು ವ್ಯಾಪಾರದ ಮಳಿಗೆಗಳ ಮೇಲೆ ದಾಳಿ ಮಾಡಿದ್ದು, ಎಲೆಕ್ಟ್ರಾನಿಕ್ಸ್, ವಾಹನ ಬಿಡಿಭಾಗಗಳು, ಗಿಫ್ಟ್ ಐಟಂಗಳು, ಡ್ರೈ ಫ್ರೂಟ್ಸ್‌ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿ–ಮಾರಾಟದಲ್ಲಿ ತೆರಿಗೆ ವಂಚನೆ ಆಗಿರುವುದನ್ನ ವಶಕ್ಕೆ ಪಡೆಯಲಾಗಿದೆ.

ಏನೆಲ್ಲಾ ಅಕ್ರಮಗಳು ಪತ್ತೆ ಆಗಿದೆ?
ಈ ದಾಳಿಯಲ್ಲಿ ಖರೀದಿ ಬಿಲ್‌ಗಳಿಗಿಂತ ಜಾಸ್ತಿ ಸರಕಿನ ಬಿಲ್‌ ಸಿಕ್ಕಿದೆ. ಇದಲ್ಲದೇ ತೆರಿಗೆ ಇಲ್ಲದೇ ಸರಕು ಖರೀದಿ ಮಾಡುವುದು ಸಹ ಪತ್ತೆ ಆಗಿದೆ. ಹಾಗೆಯೇ, ಬಿಲ್‌ ಕೊಡಲೇ ವಸ್ತುಗಳನ್ನ ಮಾರಾಟ ಮಾಡುವುದು ಜೊತೆಗೆ ಕಬ್ಬಿಣ, ಉಕ್ಕು, ಹಾರ್ಡ್‌ವೇರ್, ಸಿಮೆಂಟ್ ವ್ಯಾಪಾರಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳಲು ನಕಲಿ ಬಿಲ್‌ ಕೊಟ್ಟಿರುವುದು ಸಹ ಸಿಕ್ಕಿ ಬಿದ್ದಿದೆ. 40 ಲಕ್ಷಕ್ಕಿಂತ ಜಾಸ್ತಿ ವಹಿವಾಟು ಇದ್ದರೂ ಸಹ ಜಿಎಸ್‌ಟಿ ನೋಂದಣಿ ಮಾಡದೇ ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 1 ಸಾವಿರ ಚೀಲ ಗುಟ್ಕಾ ಮತ್ತು ಪಾನ್ ಮಸಾಲಾ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಹಾಗೆಯೇ, ಬಿಲ್‌ ಇಲ್ಲದೇ ಸಾಗಾಟ ಮಾಡುತ್ತಿದ್ದ ಕಬ್ಬಿಣದ ಸ್ಕ್ರ್ಯಾಪ್ ಸಾಗಿಸುತ್ತಿದ್ದ 75 ವಾಹನಗಳನ್ನ ಸಹ ವಶಕ್ಕೆ ಪಡೆಯಲಾಗಿದೆ.

100 ಕೋಟಿಗೂ ಹೆಚ್ಚು ತೆರಿಗೆ ವಂಚನೆ

ಇನ್ನು ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ ಐಟಿ ಹಾಗೂ ಜಿಎಸ್​ಟಿ ಅಧಿಕಾರಿಗಳು  ಕಾರ್ಯಾಚರಣೆ ಮಾಡಿದ್ದು, 500ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದು, 100 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಆಗಿರುವುದನ್ನ ಪತ್ತೆ ಮಾಡಿದೆ.

ಕರ್ನಾಟಕದಲ್ಲಿ 5 ಪಟ್ಟು ಹೆಚ್ಚಾದ ತೆರಿಗೆ ವಂಚನೆ

2024-25ರಲ್ಲಿ ಕರ್ನಾಟಕದಲ್ಲಿ ಸರಕು ಮತ್ತು ಸೇವಾ ತೆರಿಗೆ ವಂಚನೆಯಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ವಿಚಾರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಮೂರು ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 39,577 ಕೋಟಿಗೆ ತಲುಪಿದೆ ಎಂದು ಹೇಳಿದ್ದಾರೆ. 2025ನೇ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ 1,254 ಪ್ರಕರಣಗಳಲ್ಲಿ, ಸಿಜಿಎಸ್‌ಟಿ ಅಧಿಕಾರಿಗಳು ಒಂಬತ್ತು ಜನರನ್ನು ಬಂಧಿಸಿ, ಸ್ವಯಂಪ್ರೇರಿತ ತೆರಿಗೆ ಪಾವತಿಗಳ ಮೂಲಕ 1,623 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.