ಬ್ರೇಕಿಂಗ್ ಸುದ್ದಿ – Peepal Media

ಹಾಸನ ಮಹಾನಗರ ಪಾಲಿಕೆ ವಾರ್ಡ್ ಪುನರ್ ವಿಂಗಡಣೆ – ರಾಜ್ಯ ಸರ್ಕಾರ ಕರಡು ಪ್ರಕಟ
ಹಾಸನ : ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಪ್ರಕಾರ, 2011 ರ ಜನಗಣತಿ ಆಧಾರದ ಮೇರೆಗೆ ಹಾಸನ ಮಹಾನಗರ ಪಾಲಿಕೆಗೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ನಿಗದಿ ಪಡಿಸಿ ರಾಜ್ಯ ಸರ್ಕಾರ ಕರಡನ್ನು ಪ್ರಕಟಿಸಿದೆ.

ವಾರ್ಡ್‌ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ನಗರಸಭೆ ಅವಧಿಯಲ್ಲಿ ಇದ್ದಷ್ಟೇ ಅಂದರೆ 35 ವಾರ್ಡ್‌ಗಳೇ ಈಗಲೂ ಮುಂದುವರಿದಿವೆ. ಆದರೆ ಹಾಸನ ಮಹಾನಗರ ಪಾಲಿಕೆಯಾದ ನಂತರ ಎಲ್ಲ 35 ವಾರ್ಡ್‌ಗಳ ವ್ಯಾಪ್ತಿ ಮತ್ತು ವಿಸ್ತೀರ್ಣ ಹಿಗ್ಗಿದೆ. ಇದೀಗ ಆಯಾ ವಾರ್ಡ್‌ಗಳಿಗೆ ಸಂಬಂಧಿಸಿದ ಗಡಿ ವ್ಯಾಖ್ಯಾನ(ಚೆಕ್ಕುಬಂದಿ) ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಈ ಮೂಲಕ ಹಾಸನ ಮಹಾನಗರ ಪಾಲಿಕೆಯ ಕರಡು ವಾರ್ಡ್‌ವಾರು ಕ್ಷೇತ್ರ ಪುನರ್‌ವಿಂಗಡಣಾ ಮಾಹಿತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ೧೫ ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಈ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು, ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಹಾಸನ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕೆಂದು ಮಂಜುನಾಥ್ ಅವರು ಸೂಚಿಸಿದ್ದಾರೆ.

ಸಿಎಲ್–7 ಬಾರ್ ಲೈಸೆನ್ಸ್‌ಗೆ ₹60 ಲಕ್ಷ ಲಂಚ ಬೇಡಿಕೆ ಆರೋಪ: ಅಬಕಾರಿ ಅಧಿಕಾರಿ ನಾಗಶಯನ ಅಮಾನತು
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸಿಎಲ್–7 ಬಾರ್ ತೆರೆಯಲು ಲೈಸೆನ್ಸ್ ನೀಡಲು ₹60 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿ ನಾಗಶಯನ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.

ಸೋಮನಹಳ್ಳಿ ಗ್ರಾಮದ ಸುಂದರ್ ಅವರು ಹೊಸದಾಗಿ ಸಿಎಲ್–7 ಬಾರ್ ತೆರೆಯಲು ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅಬಕಾರಿ ಅಧಿಕಾರಿಗಳು ಸಣ್ಣ ಪುಟ್ಟ ನೆಪಗಳನ್ನು ಹೇಳಿಕೊಂಡು ಪದೇ ಪದೇ ಅರ್ಜಿಯನ್ನು ವಜಾಗೊಳಿಸುತ್ತಿದ್ದರು. ನ್ಯಾಯಾಲಯದಿಂದ ಲೈಸೆನ್ಸ್ ನೀಡುವಂತೆ ಆದೇಶ ಇದ್ದರೂ ಕೂಡ ಲೈಸೆನ್ಸ್ ನೀಡಲಾಗಿರಲಿಲ್ಲ ಎಂದು ಆರೋಪಿಸಲಾಗಿದೆ.

ಲೈಸೆನ್ಸ್ ನೀಡಲು ನಾಗಶಯನ ಅವರು ₹60 ಲಕ್ಷ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ, ಸುಂದರ್ ಅವರು ಆಡಿಯೋ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಸುಂದರ್ ಅವರ ಪ್ರಕರಣವು ವಿಧಾನಸಭೆಯಲ್ಲಿಯೂ ಚರ್ಚೆಗೆ ಬಂದಿತ್ತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು, ಆರೋಪ ಎದುರಿಸುತ್ತಿರುವ ಅಬಕಾರಿ ಅಧಿಕಾರಿ ನಾಗಶಯನ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಮೆಟ್ರೋ ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್​, ಬಿಗ್ ಶಾಕ್ ?
ಬೆಂಗಳೂರು : ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಜೀವನಾಡಿಯೇ ಆಗಿದೆ. ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಜನರು ಮೆಟ್ರೋ ಮೂಲಕ ಪ್ರಯಾಣ ಮಾಡೋದೆ ಬೆಸ್ಟ್ ಅಂತಾರೆ. ನಮ್ಮ ಮೆಟ್ರೋಗಳಲ್ಲಿ ಪ್ರಯಾಣಿಕರ (Passenger) ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜೊತೆಗೆ ಮೆಟ್ರೋ ಟಿಕೆಟ್ (Metro Ticket)​ ದರ ಏನು ಕಡಿಮೆ ಇಲ್ಲ. ಕಳೆದ ವರ್ಷ ಭಾರಿ ಏರಿಕೆಯ ಶಾಕ್ ಕೊಟ್ಟಿದ್ದ ಬಿಎಂಆರ್​ಸಿಎಲ್ (BMRCL)​ ಇದೀಗ ಮತ್ತೆ ಪ್ರಯಾಣಿಕರಿಗೆ ದರ ಏರಿಕೆ ಶಾಕ್​ ಕೊಡಲು ಮುಂದಾಗಿದೆ. BMRCL ಬೋರ್ಡ್ ಮೀಟಿಂಗ್​ ನಡೆದಿದ್ದು, ದರ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ದರ ಏರಿಕೆಗೆ ಗ್ರೀನ್ ಸಿಗ್ನಲ್

ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಬಿಎಂಆರ್​ಸಿಎಲ್​ ನಿರ್ಧರಿಸಿದೆ. ಈ ಸಂಬಂಧ BMRCL ಬೋರ್ಡ್ ಮೀಟಿಂಗ್ ಕೂಡ ನಡೆದಿದೆ. ಮಹತ್ವ ಚರ್ಚೆ ಬಳಿಕ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸರ್ಕಾರದ ಅನುಮತಿಗಾಗಿ ನಮ್ಮ ಮೆಟ್ರೋ ಕಾಯುತ್ತಿದೆ.

ಶೇಕಡಾ 5 ರಷ್ಟು ದರ ಏರಿಕೆ!

ದರ ಏರಿಕೆ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಬೇಕಿದ್ದು, ಇದೀಗ ಸಭೆಯಲ್ಲಿ ಶೇಕಡಾ 5 ರಷ್ಟು ದರ ಏರಿಕೆ ಮಾಡಲು ನಮ್ಮ ಮೆಟ್ರೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಈ ವರ್ಷ ಟಿಕೆಟ್​ ದರ ಏರಿಕೆ ಮಾಡಿದ್ರೆ, ಮುಂದಿನ ವರ್ಷ ಶೇ.10% ರಷ್ಟು ದರ ಏರಿಕೆ ಮಾಡಬೇಕಾಗುತ್ತದೆ ಎಂದು BMRCL ತಿಳಿಸಿದೆ

ಸರ್ಕಾರಿ ಶಾಲೆ – ಕಾಲೇಜುಗಳ ಈ ಸಾಲಿನ ಪಠ್ಯಪುಸ್ತಕ ವಿತರಣೆ ವಿಳಂಬ
ಬೆಂಗಳೂರು: ಕರ್ನಾಟಕದಾದ್ಯಂತ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳ ವಿತರಣೆಯಲ್ಲಿ ವಿಳಂಬವುಂಟಾಗುತ್ತಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಡಿಸೆಂಬರ್‌ನಲ್ಲಿ ಪಠ್ಯಪುಸ್ತಕಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುತ್ತದೆ. ಹೆಚ್ಚಿನ ಪಠ್ಯಪುಸ್ತಕಗಳನ್ನು ಮೇ ಅಂತ್ಯದ ವೇಳೆಗೆ ಮುದ್ರಿಸಲಾಗುತ್ತದೆ.

ಆದರೆ ಈ ವರ್ಷ, ಅನುಮೋದನೆ ಫೆಬ್ರವರಿಯಲ್ಲಿ ದೊರೆತ ಕಾರಣ ಟೆಂಡರ್‌ ಆಹ್ವಾನದಲ್ಲಿ ವಿಳಂಬವಾಯಿತು. ಪಠ್ಯಪುಸ್ತಕಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಮಾಜ (KTBS)ದೊಂದಿಗೆ ಮುದ್ರಣ ಆದೇಶ (Indent) ನೀಡುವ ಪ್ರಕ್ರಿಯೆಯೂ ತಡವಾಯಿತು. ಮಕ್ಕಳು ಶಾಲೆಯ ನಂತರ ಮನೆಯಲ್ಲಿ ಏನನ್ನು ಉಲ್ಲೇಖಿಸಿ ಓದುತ್ತಾರೆ ಅಥವಾ ಅಧ್ಯಯನ ಮಾಡುತ್ತಾರೆ, ಇದು ಮೊದಲ ಬಾರಿಗೆ ಅಲ್ಲ, ಪ್ರತಿವರ್ಷವೂ ಶಾಲೆಗಳು ಆರಂಭವಾದ ನಾಲ್ಕು ತಿಂಗಳ ನಂತರವೇ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಶಿಕ್ಷಕರು ಈ ಪಠ್ಯಪುಸ್ತಕಗಳ ಆನ್‌ಲೈನ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಕೇವಲ ಒಂದು ಪ್ರತಿಯನ್ನು ಮಾತ್ರ ಮುದ್ರಿಸುತ್ತಾರೆ ಎಂದು ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಉಮೇಶ್ ಜಿ ಗಂಗವಾಡಿ ಹೇಳುತ್ತಾರೆ.

ಪಠ್ಯಪುಸ್ತಕ ಸಂಖ್ಯೆ ಮತ್ತು ವೆಚ್ಚ

ಒಟ್ಟು 14.42 ಕೋಟಿ ರೂ. ವೆಚ್ಚದಲ್ಲಿ 38,43,650 ನೈತಿಕ ವಿಜ್ಞಾನ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುವುದು.

ಅಂಗನವಾಡಿಗೆ ಒಟ್ಟು 3.11 ಕೋಟಿ ರೂ. ವೆಚ್ಚದಲ್ಲಿ ಒಟ್ಟು 7,87,140 ಪಠ್ಯಪುಸ್ತಕಗಳು

1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟು 308 ಕೋಟಿ ರೂ. ವೆಚ್ಚದಲ್ಲಿ ಒಟ್ಟು 6,74,58,588 ಪಠ್ಯಪುಸ್ತಕಗಳು ಬೇಕಾಗಿವೆ.

ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಒಟ್ಟು 9.42 ಕೋಟಿ ರೂ. ವೆಚ್ಚದಲ್ಲಿ ಒಟ್ಟು 27,22,363 ಪಠ್ಯಪುಸ್ತಕಗಳು

ಹಾಸನದಲ್ಲಿ ಫೆ.12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ – ದರ್ಮೇಶ್‌
ಹಾಸನ : ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಫೆಬ್ರವರಿ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಹಾಸನ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ನೀಡುವಂತೆ ಹಾಸನ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಜಂಟಿಯಾಗಿ ಮನವಿ ಮಾಡಿವೆ.

ಫೆಬ್ರವರಿ 12ರಂದು ದೇಶದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು ಹಾಗೂ ನೌಕರರ ಸಂಘಟನೆಗಳು ಸೇರಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ–ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಸಲಿದ್ದಾರೆ ಎಂದು ಧರ್ಮೇಶ್ ಅವರು ತಿಳಿಸಿದರು. ವ್ಯಾಪಾರ ಸುಲಭೀಕರಣದ ಹೆಸರಿನಲ್ಲಿ 29 ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಕಾರ್ಮಿಕರ ಹಕ್ಕುಗಳ ಮೇಲೆ ಆರ್ಥಿಕ ಹಾಗೂ ರಾಜಕೀಯ ದಾಳಿ ನಡೆಸಿದಂತಾಗಿದೆ. ಇದರಿಂದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ, ಬೋನಸ್ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ. ಜೀವನೋಪಾಯ ವೇತನದ ಬದಲು ತಳಮಟ್ಟದ ಕನಿಷ್ಠ ವೇತನದ ಪ್ರಸ್ತಾವನೆ ಕಾರ್ಮಿಕರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.

ನರೇಗಾ ಕಾಯ್ದೆಯಡಿಯಲ್ಲಿ ಖಾತರಿಪಡಿಸಿದ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದು, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಿಸುವ ಮೂಲಕ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು, ರೈತರಿಗೆ ಬೆಂಬಲ ಬೆಲೆ ನೀಡದೇ ಕಂಪನಿ ಕೃಷಿ ಮತ್ತು ಬಲವಂತದ ಭೂಸ್ವಾಧೀನಕ್ಕೆ ಉತ್ತೇಜನ ನೀಡುತ್ತಿರುವುದು ರೈತರು ಹಾಗೂ ಗ್ರಾಮೀಣ ಶ್ರಮಜೀವಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಮೂಢನಂಬಿಕೆಗಳು ಮಾನವ ಪ್ರಗತಿಗೆ ಹಿನ್ನೆಡೆಯಾಗುತ್ತಿವೆ – ಬಿ.ಆರ್.ಜಾನಕಿ
ಹಾಸನ: ಮೂಢನಂಬಿಕೆಗಳು ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಪ್ರಗತಿಗೆ ಗಂಭೀರ ಅಡ್ಡಿಯಾಗುತ್ತಿವೆ. ಮೂಢನಂಬಿಕೆಗಳ ಕಾರಣದಿಂದ ಮನುಷ್ಯ ಮೋಸ ಹೋಗುತ್ತಿದ್ದು, ತನ್ನ ಅಮೂಲ್ಯ ಸಮಯ, ಹಣ ಹಾಗೂ ಚಿಂತನಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಬಿಜಿ ವಿಎಸ್ ಹಾಸನ ಜಿಲ್ಲಾ ಕಾರ್ಯದರ್ಶಿ ಜಾನಕಿ ಬಿ.ಆರ್. ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಪ್ರೌಢಶಾಲೆ, ಹೌಸಿಂಗ್ ಬೋರ್ಡ್, ಕುವೆಂಪುನಗರ, ಹಾಸನದಲ್ಲಿ ಆಯೋಜಿಸಲಾಗಿದ್ದ ವೈಜ್ಞಾನಿಕ ಮನೋವೃತ್ತಿ ಮತ್ತು ಮೂಢನಂಬಿಕೆಗಳು ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹುತೇಕ ಮೂಢನಂಬಿಕೆಗಳಿಗೆ ದೇವರು ಅಥವಾ ಧರ್ಮದೊಂದಿಗೆ ಯಾವುದೇ ನೇರ ಸಂಬಂಧವಿಲ್ಲ. ವಿಶ್ವದ ಭೌತಿಕ ನಿಯಮಗಳ ಆಧಾರದಲ್ಲಿ ಮೂಢನಂಬಿಕೆಗಳಿಗೆ ಕಾರಣ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಸಂವಾದದಲ್ಲಿ ಭಾಗವಹಿಸಿ, ಪ್ರಶ್ನೋತ್ತರಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೈಜ್ಞಾನಿಕ ಮನೋವೃತ್ತಿಯ ಅಗತ್ಯತೆಯ ಕುರಿತು ಬಿಜಿ ವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ಹಾಗೂ ಶಿಕ್ಷಕರಾದ ಬಿ.ಕೆ. ಲೋಲಾಕ್ಷಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರಾಧಾ ಎನ್.ಎಸ್. ಸೇರಿದಂತೆ ಶಿಕ್ಷಕರಾದ ಮೀನಾ ಎಸ್.ಆರ್., ಮೀನಾಕ್ಷಿ ಆರ್., ರಶ್ಮಿ ಎಂ.ಆರ್., ರವೀಂದ್ರ ಜಿ.ಜಿ., ಚನ್ನನ ಹಾಗೂ ಬೋರಮ್ಮ ಅವರು ಉಪಸ್ಥಿತರಿದ್ದರು.

ಶರಣರ ಚಿಂತನೆ ವಿಶ್ವಮಾನವತೆಯ – ಹೆಚ್.ಎಲ್. ಮಲ್ಲೇಶ್ ಗೌಡ
ಹಾಸನ : ಅರಸ ಎಂದರೆ ಮೇಲಲ್ಲ, ಅಗಸ ಎಂದರೆ ಕೀಳಲ್ಲ. ವ್ಯಕ್ತಿಯ ಘನತೆ ಅವನ ವೃತ್ತಿಯಲ್ಲಿ ಅಲ್ಲ, ಅವನ ಮೌಲ್ಯಗಳಲ್ಲಿ ಅಡಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ಶಿಕ್ಷಕ ತರಗತಿಯಲ್ಲಿ ಇರುವ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ ಎಂಬುದು ಜಗತ್ತಿನ ಸಾಮಾನ್ಯ ಸತ್ಯ. ಆದರೆ ನಿಜವಾದ ಸತ್ಯವೆಂದರೆ, ಒಂದು ತರಗತಿಯಲ್ಲಿ ಇರುವ ಅಷ್ಟು ವಿದ್ಯಾರ್ಥಿಗಳು ಸೇರಿ ಒಬ್ಬ ಶಿಕ್ಷಕರನ್ನೇ ರೂಪಿಸುತ್ತಾರೆ ಎಂಬುದು. ಈ ಪರಸ್ಪರ ಸಂಬಂಧವೇ ಶಿಕ್ಷಣದ ನಿಜವಾದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟರು. ವಿಶ್ವಕ್ಕೆ ಸಾಮಾಜಿಕ ರೂಪುರೇಷೆ ನೀಡಿದವರು ಶರಣರು. ಒಂದು ಸಾಮಾನ್ಯ ಶಿಕ್ಷಕ ಪ್ರಬುದ್ಧ ತರಗತಿಗೆ ಹೋದರೆ ಎರಡು ವರ್ಷಗಳಲ್ಲಿ ಆತ ಸಹ ಪ್ರಬುದ್ಧನಾಗುತ್ತಾನೆ. ಅದೇ ರೀತಿ, ಬಸವಣ್ಣನವರನ್ನು ಪ್ರಬುದ್ಧವಾಗಿ ರೂಪಿಸುವಲ್ಲಿ ಮಡಿವಾಳ ಮಚಿದೇವ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಬಸವಣ್ಣನ ಕಾಲಘಟ್ಟದಲ್ಲಿ ಅಲ್ಲಮಪ್ರಭುವಿನ ನೇತೃತ್ವದಲ್ಲಿ ನಡೆದ ವಿಚಾರಗೋಷ್ಠಿಯ ವೇದಿಕೆಯನ್ನು ವಿಶ್ವದ ಮೊದಲ ಪ್ರಜಾಪ್ರಭುತ್ವದ ವೇದಿಕೆ ಎಂದು ಇತಿಹಾಸ ಗುರುತಿಸಿದೆ. ಶರಣರು ತಮ್ಮ ವೃತ್ತಿಯನ್ನು ಶ್ರದ್ಧೆಯಿಂದ ನಡೆಸುತ್ತಾ, ವೃತ್ತಿಯ ಮೂಲಕ ಘನತೆ ಮತ್ತು ಮಾನವೀಯತೆಯನ್ನು ಸಾಧಿಸಬಹುದು ಎಂಬ ಸಂದೇಶವನ್ನು 12ನೇ ಶತಮಾನದಲ್ಲೇ ಜಗತ್ತಿಗೆ ನೀಡಿದರು. 12ನೇ ಶತಮಾನದಲ್ಲಿ ಹುಟ್ಟಿದ ನೂರಾರು ಶರಣರು ಪ್ರತ್ಯೇಕ ಯುಗಗಳಲ್ಲಿ ಹುಟ್ಟಿದ್ದರೆ ಯುಗಪ್ರವರ್ತಕರಾಗುವ ಶಕ್ತಿ ಹೊಂದಿದ್ದವರು. ಆದರೆ, ಒಂದೇ ಕಾಲಘಟ್ಟದಲ್ಲಿ ಒಟ್ಟಾಗಿ ಹುಟ್ಟಿ ಸಮಾಜ ಪರಿವರ್ತನೆಗೆ ಕಾರಣವಾದುದು ಅಚ್ಚರಿಯ ಸಂಗತಿ. ಬಸವಣ್ಣನವರ ಮಾರ್ಗದರ್ಶನದಲ್ಲಿ ಅನೇಕ ಶರಣರು ರೂಪುಗೊಂಡರು ಎಂಬುದು ಅವರ ಚಿಂತನೆಯ ಆಳವನ್ನು ತೋರಿಸುತ್ತದೆ ಎಂದು ಹೇಳಿದರು. ಮಡಿವಾಳ ಮಾಚಿದೇವರು ಗುರು ಬಸವೇಶ್ವರರ ಸಮಕಾಲೀನ ಶರಣರು . ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ನಾಶಪಡಿಸಲು ಉದ್ದೇಶಿಸಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಿದರು. ಅವರು ಕಲ್ಯಾಣ್‌ನಲ್ಲಿ ಧೋಬಿಯಾಗಿದ್ದರು ಎಂದು ಹಿಂದಿನ ಅವರ ಜೀವನವನ್ನು   ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ಸಾಹಿತಿಗಳು, ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಚೋರ್ಲಾ ಘಾಟ್ ₹400 ಕೋಟಿ ದರೋಡೆ ಪ್ರಕರಣ: ಮುಖ್ಯ ಆರೋಪಿ ಕಿಶೋರ್ ಶರಣು, ಬಂಧನ
ಬೆಳಗಾವಿ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿ ಮೌಲ್ಯದ ದರೋಡೆ ಪ್ರಕರಣ ಹಾಗೂ ಇದನ್ನು ಬಹಿರಂಗಪಡಿಸಿದ ಸಂದೀಪ ಪಾಟೀಲ ಅವರ ಅಪಹರಣ ಪ್ರಕರಣದ ಮುಖ್ಯ ಆರೋಪಿ ಕಿಶೋರ್ ಶನಿವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಭಾನುವಾರ ಎಸ್‌ಐಟಿ ಅಧಿಕಾರಿಗಳು ಕಿಶೋರ್ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಸಂದೀಪ ಪಾಟೀಲ ಅವರು ದಾಖಲಿಸಿದ ದೂರಿನಲ್ಲಿ, “ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ಹಣವಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ. ಈ ದರೋಡೆ ನಾನೇ ಮಾಡಿಸಿದ್ದೇನೆ ಎಂದು ಹೇಳಿ ಹಣದ ಮಾಲೀಕ ಕಿಶೋರ್ ಸಾಳವೆ ಹಾಗೂ ತಂಡದವರು ನನ್ನನ್ನು ಅಪಹರಣ ಮಾಡಿದ್ದರು” ಎಂದು ಆರೋಪಿಸಿದ್ದರು.

ಆದರೆ ಇದುವರೆಗೆ ಹಣ ದರೋಡೆ ಅಥವಾ ವಾಹನ ದರೋಡೆಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನ ಚಾಲಕ ಸೇರಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿತ್ತು. ಕಿಶೋರ್ ತಲೆಮರೆಸಿಕೊಂಡಿದ್ದು, ಇದೀಗ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಸದ್ಯ ಅಪಹರಣ ಪ್ರಕರಣದಲ್ಲಿಯೇ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್‌ ಕರ್ನಾಟಕಕ್ಕೆ ಖಾಲಿ ಚೊಂಬು ನೀಡಲಾಗಿದೆ – ಸಿಎಂ ಸಿದ್ದರಾಮಯ್ಯ ಟೀಕೆ
ಕಲಬುರಗಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಬಜೆಟ್‌ನಲ್ಲಿ ಏನೂ ನೀಡಿಲ್ಲ. ಕರ್ನಾಟಕಕ್ಕೆ ಒಂದು ಚೊಂಬು ನೀಡಿದ್ದಾರೆ ಎಂದು ಕೇಂದ್ರ ಬಜೆಟ್ ವಿರುದ್ಧ ಸಿಎಂ ಸಿದ್ದರಾಮಯ್ಯ  ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡೆರಡು ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ಹೈಸ್ಪಿಡ್ ರೈಲು ನೀಡಿದ್ದಾರೆ. ಅದು ಕೂಡ 5 ವರ್ಷ ಸಮಯ ತೆಗೆದುಕೊಂಡಿದ್ದಾರೆ. ನಮಗೆ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ರೈಲು ಬೇಕಾಗಿತ್ತು. ನೀರಾವರಿ ಯೋಜನೆಗೆ ಹಣ ಕೇಳಿದ್ದೇವೆ. ಆದರೆ, ನೀರಾವರಿ ಯೋಜನೆಗೆ ಒಂದೇ ಒಂದು ಶಬ್ದ ಇಲ್ಲ. ಅಪರ್ ಕೃಷ್ಣಾ ಹಾಗೂ ಅಪರ್ ಭದ್ರಾ ಯೋಜನೆಗೆ ಸಹಾಯ ಕೇಳಿದ್ರೂ ಏನು ನೀಡಿಲ್ಲ. ಈ ಹಿಂದೆ ಬಜೆಟ್‌ನಲ್ಲಿ ಯೋಜನೆಗೆ 5,200 ಕೋಟಿ ಹಣ ನೀಡುತ್ತೇವೆ ಎಂದಿದ್ದರು. ಆದರೆ, ಒಂದು ರೂಪಾಯಿ ಸಹ ಕೊಟ್ಟಿಲ್ಲ. ಮೇಕೆದಾಟು ಯೋಜನೆ ಪ್ರಕರಣ ಸಂಬಂಧ ತಮಿಳನಾಡು ಅರ್ಜಿ ವಜಾ ಆಗಿದೆ. ಆದರೂ ಸಹ ಆ ಯೋಜನೆಗೆ ಬಜೆಟ್‌ನಲ್ಲಿ ಹಣ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ನೀಡಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಕ್ಲಿಯರ್ ಮಾಡುವುದಾಗಿ ಯಡಿಯೂರಪ್ಪ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದರು. ಆದರೆ, ಕೇಂದ್ರ ಪರಿಸರ ಇಲಾಖೆ ಬಜೆಟ್‌ನಲ್ಲಿ ಈ ಬಾರಿ ಸಹ ಅನುಮತಿ ಕೊಟ್ಟಿಲ್ಲ. ಈ ಮೂಲಕ ಕರ್ನಾಟಕದ ಜನತೆಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಳೆಕಾಳುಗಳಿಗೆ ಸಹಾಯ ಮಾಡಿ ಎಂದು ಕೇಳಿದರೂ ಅದು ಸಹ ಮಾಡಿಲ್ಲ. 15ನೇ ಹಣಕಾಸು ಆಯೋಗ ಆರಂಭವಾಗಿದೆ. ನಾವು ಕನಿಷ್ಟ ಶೇ. 50% ಕೊಡಿ ಎಂದು ಕೇಳಿದ್ದೇವು. ಆದರೆ, ಶೇ.41% ಮಾತ್ರ ಕೊಟ್ಟಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71% ಮಾತ್ರ. 14ನೇ ಹಣಕಾಸಿಗಿಂತ ಜಾಸ್ತಿ ಮಾಡಿ ಕೊಡಿ ಅಂದರೆ 4.131 ಮಾತ್ರ ಕೊಟ್ಟಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ 14ನೇ ಹಣಕಾಸಿನಷ್ಟು ಕೂಡ ಹಣ ನೀಡಿಲ್ಲ. ಉತ್ತರ ಪ್ರದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹಣಕಾಸಿನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿ ನಮಗೆ ಅನ್ಯಾಯವಾಗಿದೆ ಎಂದಿದ್ದಾರೆ.

ರಾಜ್ಯವಾರು ಹಣ ಹಂಚಿಕೆ ನೋಡಿದರೆ ಬಿಹಾರ 9.948, ಯುಪಿ-17.691, ಗುಜರಾತ್ 3.755, ಕರ್ನಾಟಕಕ್ಕೆ 4.131, ಆಂಧ್ರ- 4.271 ಇದೆ. ನಾವು ತಲಾ ಆದಾಯದಲ್ಲಿ ನಂಬರ್ 1, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ಹೀಗಿದ್ರು ನಮಗೆ ಅನುದಾನ ಬಂದಿಲ್ಲ. ಬಜೆಟ್‌ಗೂ ಮುನ್ನ ನಮ್ಮ ರಾಜ್ಯದ ನೀರಾವರಿ, ಮೆಟ್ರೋ ಯೋಜನೆ, ಏಮ್ಸ್ ನೀಡಬೇಕು. ಕೆಕೆಆರ್ ಡಿಬಿಗೆ ಮ್ಯಾಚಿಂಗ್ ಗ್ರ‍್ಯಾಂಟ್ ಕೊಡಲು ಸಹ ಹೇಳಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ 13 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ನಾವು 100 ತೆರಿಗೆ ಕೊಟ್ಟರೆ 14 ರೂಪಾಯಿ ವಾಪಸ್ ಬರುತ್ತದೆ. ಉಳಿದ ಹಣ ಕೇಂದ್ರ ಸರ್ಕಾರ ಬಳಸುತ್ತದೆ. ಸೆಸ್ ಸಬ್‌ಚಾಜ್9 ಸಹ ಕೇಂದ್ರ ಕಲೆಕ್ಟ್ ಮಾಡಿ ರಾಜ್ಯಗಳಿಗೆ ಕೊಡುವುದಿಲ್ಲ. ಹೀಗಾಗಿ, 2026-27 ಬಜೆಟ್ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ

ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್
ಬೆಂಗಳೂರು : ಹಿಂದೂ ಮುಖಂಡ, ಸೌಜನ್ಯ ಪರ ಹೋರಾಟಗಾರ, ಧರ್ಮಸ್ಥಳದ ವಿರುದ್ಧ ನಿರಂತವಾಗಿ ಹೋರಾಟ ಮಾಡಿಕೊಂಡು ಬಂದ ಮಹೇಶ್ ಶೆಟ್ಟಿ ತಿಮರೋಡಿ (Mahesh shetty thimarody) ಅವರನ್ನು ಕಳೆದ ಕೆಲ ದಿನಗಳ ಹಿಂದೆ 9 ತಿಂಗಳು ಗಡಿಪಾರು (Exile) ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ಆದ್ರೆ ಈ ಆದೇಶಕ್ಕೆ ಹೈಕೋರ್ಟ್ (Highcourt) ತಡೆಯೊಡ್ಡಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪದ ಪ್ರಕರಣದ ತನಿಖೆ ಸಂದರ್ಭದಲ್ಲಿ ಬುರುಡೆ ಗ್ಯಾಂಗ್ ರಹಸ್ಯ ಬಯಲಾಗಿದ್ದು, ಈ ವೇಳೆ ಪುತ್ತೂರು ಉಪ ವಿಭಾಗಾಧಿಕಾರಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 9 ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿದ್ದರು.‌ 2025ರ ಡಿಸೆಂಬರ್ 16 ರಿಂದ 2026ರ ಸೆಪ್ಟೆಂಬರ್ 16ರವರೆಗೆ ಗಡೀಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು.ಈಗಾಗಲೇ ಖುಲಾಸೆಯಾಗಿರುವ ಪ್ರಕರಣಗಳನ್ನು ಉಲ್ಲೇಖಿಸಿ, ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು , ಆ ಬಳಿಕ ನಾವು ಸಲ್ಲಿಸಿರುವ ಆಕ್ಷೇಪಣೆಯನ್ನೂ ಪರಿಗಣಿಸದೆ ಗಡಿಪಾರು ಆದೇಶ ನೀಡಿದ್ದಾರೆ ಎಂದು ಆರ್ಜಿಯಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ನ್ಯಾಯಾಲಯದ ಆದೇಶದ ಪ್ರತಿ ಉಪವಿಭಾಗಾಧಿಕಾರಿಗೆ ಸಿಕ್ಕ ಮೂರು ವಾರಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆಯನ್ನು ಪರಿಗಣಿಸಬೇಕು. ಆ ನಂತರ ಕಾನೂನಿನ ಪ್ರಕಾರ ಆದೇಶ ಹೊರಡಿಸಬೇಕು ಎಂದು ಆದೇಶಿಸಿದ್ದಾರೆ.