ಬ್ರೇಕಿಂಗ್ ಸುದ್ದಿ – Peepal Media

ಅಚೀವರ್ಸ್ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳು – ರಾಜ್ಯ ಮಟ್ಟಕ್ಕೆ ಆಯ್ಕೆ
ಸಕಲೇಶಪುರ : ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಚೀವರ್ಸ್‌ ಪ್ರಜ್ಞಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕ್ರಿಸ್ಟನ್ ಡಿ ಸಿಲ್ವಾ ಹಾಗೂ ಮೊಹಮ್ಮದ್ ಶಿಯಾನ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕ್ರಸ್ಟನ್ ಡಿ ಸಿಲ್ವಾ ಅವರು 110 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಹಾಗೂ ಮೊಹಮ್ಮದ್ ಶಿಯಾನ್ ಅವರು 100 ಮೀಟರ್ ಓಟ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ಈ ಇಬ್ಬರು ವಿದ್ಯಾರ್ಥಿಗಳು, ಇದೀಗ ಜಿಲ್ಲಾ ಮಟ್ಟದಲ್ಲಿಯೂ ಅಮೋಘ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ರಾಜ್ಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಆಪ್ತರಿಂದ ಹಣಕ್ಕೆ ಬೇಡಿಕೆ – SBUDA ಅಧ್ಯಕ್ಷ ಸುಂದರೇಶ್ ಆರೋಪ
ಶಿವಮೊಗ್ಗ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಆಪ್ತರು ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಎಸ್‌ಬಿಯುಡಿಎ) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಆರೋಪಿಸಿದ್ದಾರೆ.

ಭದ್ರಾವತಿಯವರಾದ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ಜಿಲ್ಲೆಯ ಪಕ್ಷದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಂದರೇಶ್, ಸಚಿವರ ಆಪ್ತರೊಬ್ಬರು ಎಸ್‌ಬಿಯುಡಿಎ ಅಧಿಕಾರಿಗಳಿಂದ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಬಿ.ಕೆ. ಸಂಗಮೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸುಂದರೇಶ್ ಒತ್ತಾಯಿಸಿದರು. ಅಲ್ಲದೆ, ಜಿಲ್ಲೆಯಲ್ಲಿನ ಪಕ್ಷ ಸಂಘಟನೆಯ ಕಾರ್ಯವೈಖರಿಯಿಂದ ಹಲವು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು.

ಸುಮಾರು 40 ವರ್ಷಗಳಿಂದ ಸ್ವಂತ ಹಣ ಖರ್ಚು ಮಾಡಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ನಾಯಕತ್ವ ನಿರ್ಧಾರ ಕೈಗೊಳ್ಳದಿದ್ದರೆ, ಪಕ್ಷ ತೊರೆಯಲು ನಾನು ಸಿದ್ಧ ಎಂದು ಹೇಳಿದರು.

ಕೆಲವರು ಸಚಿವರು ಹಾಗೂ ಪಕ್ಷದ ನಾಯಕರ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಸುಂದರೇಶ್ ಆರೋಪಿಸಿದರು. 25 ಲಕ್ಷ ಕಮಿಷನ್ ನೀಡುವಂತೆ ತಮ್ಮ ಕಚೇರಿಗೆ ಕೆಲವರು ಬಂದು ಕೇಳಿದ್ದಾರೆ ಎಂದು ಅವರು ಹೇಳಿದರು. ಈ ವಿಚಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ನಾಯಕತ್ವದ ಗಮನಕ್ಕೆ ತರುವುದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿರುವುದಾಗಿಯೂ ಅವರು ಹೇಳಿದರು. ಜಿಲ್ಲೆಯಾದ್ಯಂತ ಪಕ್ಷದ ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿಕೊಂಡರು.

ತಮ್ಮ ನೇತೃತ್ವದಲ್ಲಿ ಕೈಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಎಸ್‌ಬಿಯುಡಿಎ ಅಧ್ಯಕ್ಷರು ಇದೇ ವೇಳೆ ಪ್ರಸ್ತಾಪಿಸಿದರು. ವಸತಿ ಯೋಜನೆಗಳು, ವಾಣಿಜ್ಯ ಸಂಕೀರ್ಣಗಳು, ಕೆರೆಗಳ ಅಭಿವೃದ್ಧಿ ಹಾಗೂ ಉದ್ಯಾನವನಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿವಿಧ ಸ್ಥಳಗಳಲ್ಲಿ ಸುಮಾರು 1,500 ವಸತಿ ಫ್ಲ್ಯಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ವಿವಿಧ ದರಗಳ ವಿಭಾಗಗಳಲ್ಲಿ ವಸತಿ ಘಟಕಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.೭

ಕನ್ನಡನಾಡು ವಿದ್ಯಾರ್ಥಿ ಸಂಘಗಳ ಚುನಾವಣೆಯ ನೋಟ – ಸಚಿನ್ ಒಕ್ಕಲಿಗ
ಕನ್ನಡನಾಡಿನ ಕಾಲೇಜುಗಳು ಮತ್ತು ಯೂನಿವರ್ಸಿಟಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರವು ಇತ್ತೀಚೆಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಅದರ ಆಗೂ ಹೋಗುಗಳನ್ನು ನೋಡುವುದಾದರೆ ಈ ಕೆಳಗಿನನಂತೆ ನೋಡಬಹುದು. ಇನ್ನು 1990ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರವು ವಿದ್ಯಾರ್ಥಿ ಚುನಾವಣೆಗಳನ್ನು ನಿಷೇಧಿಸಿದ ನಂತರ, ಕಳೆದ 37 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರವು ಪುನರಾರಂಭಿಸಲು ಮುಂದಾಗಿದೆ ಇನ್ನು ಮೊದಲ ಹಂತದಲ್ಲಿ, ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಚುನಾವಣೆಗಳು ನಡೆಸಲಾಗುವದ್ದು ಎಂದು ಸರ್ಕಾರ ತಿಳಿಸಿದೆ. ಜೊತೆಗೆ ಸಂಘದ ಕಾರ್ಯಕಾರಿ ಸಮಿತಿಯು ಆರು ಸದಸ್ಯರನ್ನು ಹೊಂದಿರಬೇಕು, ಸಹ-ಶಿಕ್ಷಣ ಸಂಸ್ಥೆಗಳಲ್ಲಿ ಇಬ್ಬರು ಮಹಿಳೆ ಸದಸ್ಯರಿಗಾಗಿ ಮೀಸಲು ಇರಬೇಕು. ಸಮಿತಿಯು ಒಬ್ಬ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು (ಒಬ್ಬರು ಮಹಿಳೆ), ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮತ್ತು ಇಬ್ಬರು ಜಂಟಿ ಕಾರ್ಯದರ್ಶಿಗಳನ್ನು (ಒಬ್ಬರು ಮಹಿಳೆ) ಹೊಂದಿರಬೇಕು ಎಂದು ಸರ್ಕಾರ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.

ಇನ್ನು ಈ ಚುನಾವಣೆಯನ್ನು ಉನ್ನತ ಶಿಕ್ಷಣ, ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕೃಷಿ, ಪಶುಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಗಳ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ(ಸೇರಿರುವ) ಕಾಲೇಜುಗಳು ಹಾಗೂ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ನಡೆಸಲಾಗುವುದರ ಜೊತೆಗೆ ಶೈಕ್ಷಣಿಕ ವರ್ಷ ಪ್ರಾರಂಭವಾದ ಐದು ವಾರಗಳೊಳಗೆ ಚುನಾವಣೆಗಳನ್ನು ಪೂರ್ಣಗೊಳಿಸಬೇಕು ಮತ್ತು ಪ್ರಕ್ರಿಯೆ ಆರಂಭವಾದ 10 ದಿನಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ಸಹ ಸರ್ಕಾರ ಹೇಳಿದೆ.

ಇನ್ನು ಸರ್ಕಾರದ ಸಚಿವರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ವಿದ್ಯಾರ್ಥಿ ಸಂಘಟನೆಗಳು, ಬೋಧಕ ಸಿಬ್ಬಂದಿ ಹಾಗೂ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಜನರೊಂದಿಗೆ ಚರ್ಚೆ ನಡೆಸಲಾಗಿದ್ದು, ಯಾವದೇ ಅಡಚಣೆ ಆಗದಂತೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಜೊತೆಗೆ ಚುನಾವಣೆಗಳನ್ನು ವ್ಯವಸ್ಥಿತವಾಗಿ ಮತ್ತು ಯಾವುದೇ ಗೊಂದಲವಿಲ್ಲದೆ ನಡೆಸಲು ಇಲಾಖೆಯು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಹ ಅವರು ತಿಳಿಸಿದ್ದಾರೆ. ಬಣ ಬಣ ರಾಜಕೀಯ ಮತ್ತು ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವನ್ನು ಸಹಿಸಲಾಗುವುದಿಲ್ಲ. ಈ ಕಾರ್ಯಕ್ರಮವೂ ಭವಿಷ್ಯದ ರಾಜಕೀಯ ನಾಯಕರನ್ನು ರೂಪಿಸುವ ಗುರಿಯನ್ನು ಹೊಂದಿದ್ದು ಇನ್ನು ವಿದ್ಯಾರ್ಥಿ ಸಂಘದ ಚುನಾವಣೆಗಳು ನಾಯಕತ್ವದ ಗುಣಗಳು ಬೆಳವಣಿಗೆಗೆ ಹಾಗೂ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಧ್ವನಿಗೂಡಿಸಲು ಸಹಕಾರಿಯಾಗಿವೆ. ಇವು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದಲ್ಲದೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿ ಸಮುದಾಯದಲ್ಲಿ ಜಾತಿ ಪ್ರಜ್ಞೆ ಮೂಡುವುದನ್ನು ತಡೆಯುವ ಉದ್ದೇಶದಿಂದ ಇಲ್ಲಿ ಯಾವುದೇ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ, ಎಂದು ಸಚಿವರು ಹೇಳಿದ್ದಾರೆ.

ಈ ಮೇಲಿನ ಎಲ್ಲವೂ ಸಹ ಸರ್ಕಾರವೂ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದ್ದು, ಇವುಗಳು ಎಷ್ಟರ ಮಟ್ಟಿಗೆ ನ್ಯಾಯಯುತವಾಗಿ ಕಾನೂನು ಬದ್ಧವಾಗಿ ಜಾರಿಯಾಗುತ್ತವೆ ಅನ್ನೋದನ್ನು ಅರಿಯಬೇಕಿದೆ. ಇನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE 2023-24) ವರದಿಯ ಪ್ರಕಾರ, ಕರ್ನಾಟಕದ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 27,59,933 (ಸುಮಾರು 27.6 ಲಕ್ಷ) ಆಗಿದೆ. ಮತ್ತೊಂದು ಸಮಗ್ರ ಅಂದಾಜಿನ ಪ್ರಕಾರ, ಸ್ವತಂತ್ರ ಸಂಸ್ಥೆಗಳನ್ನೂ ಒಳಗೊಂಡಂತೆ ರಾಜ್ಯದ ಒಟ್ಟು ಉನ್ನತ ಶಿಕ್ಷಣದ ದಾಖಲಾತಿಯು ಸುಮಾರು 29.9 ಲಕ್ಷ ವಿದ್ಯಾರ್ಥಿಗಳನ್ನು ತಲುಪುತ್ತದೆ. ರಾಜ್ಯದ ಒಟ್ಟು ಕಾಲೇಜು ಸಂಖ್ಯೆಗಳು 4,529 ಕಾಲೇಜುಗಳಲ್ಲಿ ಸುಮಾರು 23.2 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಲಿಂಗಾನುಪಾತ ಒಟ್ಟು ವಿದ್ಯಾರ್ಥಿಗಳಲ್ಲಿ ಅಂದಾಜು 12.5 ಲಕ್ಷ ಪುರುಷರು ಮತ್ತು 11.7 ಲಕ್ಷ ಮಹಿಳಾ ವಿದ್ಯಾರ್ಥಿನಿಯರು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮೇಲಿನ ಎಲ್ಲವೂ ಸರಿ ಅಷ್ಟೇ ಆದ್ರೆ ವಾಸ್ತವವಾಗಿ ಕರ್ನಾಟಕ ರಾಜ್ಯದಲ್ಲಿ ಈ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆದರೆ ಏನಾಗಬಹುದು ಎಂಬ ಒಂದಾಲೋಚನೆ ನೋಡದಾದ್ರೆ ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ನಡೆದರೆ ಅಲ್ಲಿ ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಮತ್ತು ಬಂಡವಾಳ ಶಾಹಿಗಳ ಮಕ್ಕಳ ಕಾರು ಬಾರು, ದುಡ್ಡಿನ ಮದ,ಅಧಿಕಾರದ ಮುಂದೆ ಸಾಮಾನ್ಯ ಜನರ ಮಕ್ಕಳ ಸ್ಥಿತಿಗತಿ ಏನು? ಇನ್ನು ಈ ವಿದ್ಯಾರ್ಥಿ ಸಂಘಗಳ ಚುನಾವಣೆಯ ಹೆಸರಿನಲ್ಲಿ ಜಾತಿವಾರು & ಧರ್ಮಧಾರಿತ ಗುಂಪುಗಳ ನಡುವೆ ಬಡಿದಾಟ, ಹೊಡೆದಾಟ, ಶುರುವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಡ್ರಗ್ಸ ಅಂತಹ ಮಾದಕ ವಸ್ತುಗಳು ಕಾಲೇಜು,ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗಲು ಇದು ಸಹ ಒಂದು ದಾರಿ ಮಾಡಿಕೊಡಬಹುದೇನೋ.

ಇನ್ನು ಕೋಮುಗಲಭೆ ಸೃಷ್ಟಿಸುವಂತಹ ಸಂಘಟನೆಗಳು ಸುಲಭವಾಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಒಳಗೆ ಪ್ರವೇಶಿಸಲು ಇದೊಂದು ಹೆಬ್ಬಾಗಿಲು ಆದಂತಾಗುತ್ತದೆ, ಜೊತೆಗೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಕೋಮುಗಲಭೆಯ ಭಾವನೆಯನ್ನು ಮೂಡಿಸುವ ಮೂಲಕ ಒಂದು ಶಾಂತಿಯ ಸುಂದರ ತೋಟದ ವಾತಾವರಣವನ್ನು ಹಾಳುಗಿಡುವುದರಲ್ಲಿ ಅನುಮಾನವೇ ಬೇಡ.

ಸರ್ಕಾರ ಭವಿಷ್ಯದ ರಾಜಕೀಯ ನಾಯಕರನ್ನು ಇಲ್ಲಿಂದಲೇ ಹುಟ್ಟು ಆಗುತ್ತೇವೆ ಎಂದು ಹೇಳುತ್ತಾ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ ಆದರೆ ಇಲ್ಲಿ ನೈಜವಾಗಿ ಎಂತಹ ನಾಯಕರನ್ನು ಮತ್ತು ಯಾರನ್ನು ಹುಟ್ಟು ಹಾಕುತ್ತಾರೆ ಎಂಬುದನ್ನು ಗಮನಿಸಬೇಕು ಯಾಕೆಂದರೆ ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಮತ್ತು ಬಂಡವಾಳ ಶಾಹಿಗಳ ಮಕ್ಕಳಿಗೆ ಕಾಲೇಜುಗಳ ಮಟ್ಟದಿಂದಲೇ ಜನರು ಇವರನ್ನು ಗುರುತಿಸವ ಜೊತೆಗೆ ಭವಿಷ್ಯದ ರಾಜಕೀಯ ಜೀವನಕ್ಕೆ ಒಂದು ವೇದಿಕೆ ಮಾಡಿ ಕೊಡಲು ಮತ್ತು ಇವರು ರಾಜ್ಯ ರಾಜಕಾರಣ ಅಥವಾ ಒಕ್ಕೂಟ ಇಂಡಿಯ ರಾಜಕಾರಣದತ್ತ ಮತ್ತು ಬೇರೆ ಬೇರೆ ಸಂಘ ಸಂಸ್ಥೆಗಳ ಚುನಾವಣೆಗಳಿಗೆ ಸುಲಭವಾಗಿ ಹೆಜ್ಜೆ ಇಡಲು ಅನುವು ಮಾಡಿಕೊಡುವ ಬಹುದೊಡ್ಡ ಉದ್ದೇಶ ಸರ್ಕಾರ ಮುನ್ನಡೆಸುತ್ತಿರುವ ಅಥವಾ ರಾಜಕೀಯದಲ್ಲಿರುವ ರಾಜಕೀಯ ನಾಯಕರ ಅಭಿಪ್ರಾಯ ಇರಬಹುದೇನೋ.

ಇನ್ನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಮೇಲು-ಕೀಳು, ಬಡವ ಶ್ರೀಮಂತ, ಹೆಣ್ಣು ಗಂಡು ಎಂಬ ಎಂಬ ಭೇದಭಾವ ಇಲ್ಲದೆ ಒಂದು ಸುಂದರವಾದ ವಾತಾವರಣದಲ್ಲಿ ಒಟ್ಟಾಗಿ ವಿದ್ಯಾಭ್ಯಾಸ ಕಲಿಯುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿದ್ಯಾರ್ಥಿಗಳ ಸಂಘಗಳ ಚುನಾವಣೆಯ ಹೆಸರಿನಲ್ಲಿ ಕೊಳಕು ಕಲುಷಿತ ವಿಚಾರಗಳನ್ನು ತುಂಬಿ ವಿದ್ಯಾರ್ಥಿಗಳ ಮನಸ್ಸನ್ನು ಹಾಳುಗೆಡುವ ಮೂಲಕ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಮಕ್ಕಳ ಭವಿಷ್ಯ ಜೊತೆಗೆ ವಿದ್ಯಾರ್ಥಿ ಜೀವನ, ಭವಿಷ್ಯ ಹಾಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಅದರಿಂದ ಒಟ್ಟಾರೆಯಾಗಿ ನಾನು ಏನು ಹೇಳೋದು ಏನು ಅಂದ್ರೆ ಕನ್ನಡನಾಡಿನ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಮಾಡುವುದನ್ನು ನಿಲ್ಲಿಸುವ ಮೂಲಕ ಯಥಾ ಸ್ಥಿತಿಯನ್ನು ಕಾಪಾಡುವುದು ಒಳ್ಳೆಯದು ಎಂದು ಹೇಳುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಬರೀ ಹೊಲಸು, ಕೊಳಚೆ ಇಲ್ಲಿಗೆ ಬಿದ್ದು ಬಡ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಕೆ?? ನಮ್ಮ ಕಣ್ಣೆದುರಿಗೆ ದೆಹಲಿಯ ವಿವಿ, ಜೆಎನ್‌ಯು ಮತ್ತು ಕೇರಳದ ವಿ ವಿ ಹಾಗೂ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾನಿಲಯಗಳಲ್ಲಿ ಈಗಲ್ಲೂ ಸಹ ಆಗುತ್ತಿರುವ ಹಿಂಸಾಚಾರ, ಗಲಾಟೆಗಳು ನೋಡಿದ್ರೆ ತಿಳಿಯುತ್ತೆ ಈ ಚುನಾವಣೆಗಳ ಆಳ ಮತ್ತು ಅಗಲ ಎಂತದು ಎಂದು.

ಇನ್ನು ಹಿಂಸಾಚಾರ, ಗಲಾಟೆಗಳು ಕಾಲೇಜುಗಳಲ್ಲಿ ಜರುಗಿದ್ದ ಸಂದರ್ಭಗಳಲ್ಲಿ ಇಲ್ಲಿ ಸಾವು ನೋವುಗಳು, ಜೊತೆಗೆ ಪೊಲೀಸ್ ಅರೆಸ್ಟ್ ಅಂತಹ ಸಂದರ್ಭಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಡೇನು? ಇವರಿಗೆ ಜೈಲಿನಿಂದ ಬಿಡಿಸಲು ಸಹ ಯಾರು ಮುಂದಾಗಲು ಬರುವುದಿಲ್ಲ, ಜೊತೆಗೆ ಇವರ ಸಾವು ನೋವುಗಳು ಆದರೂ ಸಹ ಯಾರು ಸಹ ಕೇಳುವುದು ಇಲ್ಲ ಇದರಿಂದ ಇವರ ಕುಟುಂಬದ ಪಾಡೇನು ಮತ್ತು ಇವರ ಭವಿಷ್ಯವೇನು?

ಹಾಗಾದರೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ರಾಜಕೀಯ ಪ್ರಜ್ಞೆ ಬೇಡವೇ ಅಂದ್ರೆ ಯಾರು ಬೇಡ ಅಂದ್ರು ರಾಜಕೀಯ ಪ್ರಜ್ಞೆ ಬೇಕು ಆದ್ರೆ ಆದರೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಒಳಗಡೆ ಬೇಡ, ಇದರಿಂದ ಆಚೆ ಇಚ್ಛೆ ಅನುಸಾರ ಪ್ರಜ್ಞೆ ಮೂಡಿಸಲಿ ಅಷ್ಟೇ. ಇನ್ನು ವಿದ್ಯಾರ್ಥಿಗಳ ಮನಸ್ಸಿನ ಎದೆಯಲ್ಲಿ ಒಂದು ಸುಂದರ ಶಾಂತಿ ತೋಟದ ಜೊತೆಗೆ ಸರ್ವಜನಾಂಗವ ಗೌರವಿಸುವ ಮತ್ತು ಒಳಗೊಳ್ಳುವಿಕೆಯು ನಿರ್ಮಾಣವಾಗಬೇಕಿದೆ ಇದನ್ನು ಬಿಟ್ಟು ವಿದ್ಯಾರ್ಥಿಗಳ ಎದೆಯಲ್ಲಿ ಗಬ್ಬೆಬ್ಬಿಸುವ ಕೊಳಚೆಯನ್ನ ನಿರ್ಮಾಣ ಮಾಡಬಾರದು ಅಷ್ಟೇ.

– ಸಚಿನ್ ಒಕ್ಕಲಿಗ
ಕಾನೂನು ವಿದ್ಯಾರ್ಥಿ

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಇನ್ಮುಂದೆ ಟೋಲ್ ಫ್ರೀ – ಬೈಕ್‌ಗಳಿಗೆ ಬಿಗ್ ರಿಲೀಫ್
ಬೆಂಗಳೂರು : ನಗರದ ಸಂಚಾರ ದಟ್ಟಣೆಯ (Traffic)  ಪ್ರಮುಖ ಮಾರ್ಗವಾದ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ (Bengaluru) ಮೇಲ್ಸೇತುವೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ (Good News) ಸಿಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ವಸೂಲಿ ಮಾಡಲಾಗುತ್ತಿದ್ದ ಟೋಲ್ ಶುಲ್ಕ ಶೀಘ್ರದಲ್ಲೇ ರದ್ದಾಗಲಿದ್ದು, ಬೈಕ್ ಸವಾರರು ಸಂಪೂರ್ಣ ಉಚಿತವಾಗಿ ಈ ಫ್ಲೈಓವರ್ ಮೇಲೆ ಸಂಚರಿಸಲು ಅವಕಾಶ ಸಿಗಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ.

ಮುಕ್ತಾಯದ ಹಂತದಲ್ಲಿ 20 ವರ್ಷದ ಒಪ್ಪಂದ

ಕೇಂದ್ರ ಸಿಲ್ಕ್ ಬೋರ್ಡ್ ಮತ್ತು ಬೊಮ್ಮಸಂದ್ರ ನಡುವಿನ ಈ 9.9 ಕಿಲೋಮೀಟರ್ ಉದ್ದದ ಎಲಿವೇಟೆಡ್ ಫ್ಲೈಓವರ್ ಅನ್ನು ‘ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ’ (PPP) ಮಾದರಿಯಲ್ಲಿ ‘ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್’ ಸಂಸ್ಥೆಯು ಬಿಲ್ಡ್, ಆಪರೇಟ್ ಅಂಡ್ ಟ್ರಾನ್ಸ್‌ಫರ್ (BOT) ಒಪ್ಪಂದದಡಿ ನಿರ್ಮಿಸಿತ್ತು. ಸುಮಾರು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಯೋಜನೆಗೆ 2006ರಲ್ಲಿ ಚಾಲನೆ ಸಿಕ್ಕಿ, 2010ರ ಜನವರಿಯಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ನಿಯಮದ ಪ್ರಕಾರ ಈ ಖಾಸಗಿ ಸಂಸ್ಥೆಯೊಂದಿಗಿದ್ದ 20 ವರ್ಷಗಳ ಸುದೀರ್ಘ ನಿರ್ವಹಣಾ ಒಪ್ಪಂದದ ಅವಧಿಯು ಈಗ ಮುಕ್ತಾಯದ ಹಂತಕ್ಕೆ ತಲುಪಿದೆ.

ಒಪ್ಪಂದದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಮೇಲ್ಸೇತುವೆ ಹಾಗೂ ಟೋಲ್ ಪ್ಲಾಜಾದ ಸಂಪೂರ್ಣ ನಿರ್ವಹಣೆಯನ್ನು ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ಎನ್‌ಎಚ್‌ಎಐ ರಸ್ತೆಯ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆಯೇ ಟೋಲ್ ದರಗಳ ದೀರ್ಘಕಾಲಿಕ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದೆ. ಪ್ರಸ್ತುತ ದ್ವಿಚಕ್ರ ವಾಹನಗಳಿಗೆ ವಿಧಿಸಲಾಗುತ್ತಿರುವ ದರವನ್ನು ಸಂಪೂರ್ಣ ಮನ್ನಾ ಮಾಡಿ ‘ಟೋಲ್ ಫ್ರೀ’ ಮಾಡಲು ಯೋಜಿಸಲಾಗಿದೆ.

ಕಾರು-ಜೀಪ್‌ಗಳ ಶುಲ್ಕದಲ್ಲಿ ಇಳಿಕೆ ಸಾಧ್ಯತೆ

ಇದರ ಜೊತೆಗೆ ಕಾರು, ಜೀಪ್, ವ್ಯಾನ್ ಹಾಗೂ ಇತರೆ ಭಾರೀ ವಾಹನಗಳಿಗೆ ನಿಗದಿಪಡಿಸಲಾಗಿರುವ ಶುಲ್ಕದಲ್ಲೂ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಟೋಲ್‌ನಲ್ಲಿ ಕಾರುಗಳಿಗೆ ಏಕಮುಖ ಸಂಚಾರಕ್ಕೆ 65 ರೂಪಾಯಿ ನಿಗದಿಯಾಗಿದ್ದು, ಇತರೆ ವಾಹನಗಳಿಗೆ 25 ರೂಪಾಯಿಯಿಂದ 365 ರೂಪಾಯಿವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪ್ರಾಧಿಕಾರವು ಹೊಸ ದರಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ದರಗಳು ಜಾರಿಗೆ ಬರಲಿವೆ. ಇದರಿಂದ ಪ್ರತಿದಿನ ಲಕ್ಷಾಂತರ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ಸವಾರರಿಗೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ.

ಪ್ರಧಾನಿ ಮೋದಿ ಬೃಹತ್ ಜಾಗತಿಕ ಪ್ರವಾಸ – ಡಿಸೆಂಬರ್‌ನಲ್ಲಿ ಪ್ರಯಾಣ
ನವದೆಹಲಿ: ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕ (America), ಕೆನಡಾ (Canada) ಹಾಗೂ ಯುರೋಪ್ ಒಳಗೊಂಡಂತೆ ಒಟ್ಟು ನಾಲ್ಕು ದೇಶಗಳಿಗೆ ಅತ್ಯಂತ ಪ್ರಮುಖ ರಾಜತಾಂತ್ರಿಕ ಪ್ರವಾಸ ಕೈಗೊಳ್ಳಲು ಭಾರಿ ಸಿದ್ಧತೆ ನಡೆಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಹಾಗೂ ವ್ಯೂಹಾತ್ಮಕ ಸಂಬಂಧಗಳನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಈ ಬಹುದೇಶಗಳ ಪ್ರವಾಸ ಅತ್ಯಂತ ನಿರ್ಣಾಯಕ ಎನಿಸಿಕೊಂಡಿದೆ. ಈ ನಾಲ್ಕೂ ದೇಶಗಳ ಭೇಟಿಯ ವೇಳೆ ವಿವಿಧ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಶೃಂಗಸಭೆಗಳು ಜರುಗಲಿದ್ದು, ಪ್ರಮುಖವಾಗಿ ಮುಕ್ತ ವ್ಯಾಪಾರ ಒಪ್ಪಂದಗಳೇ (Trade Deals) ಕೇಂದ್ರ ಬಿಂದುವಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಯುವ ಸಾಧ್ಯತೆ

ಪ್ರಧಾನಿ ಮೋದಿಯವರ ಈ ಜಾಗತಿಕ ಪ್ರವಾಸವು ಜರ್ಮನಿಯ ಬರ್ಲಿನ್‌ನಿಂದ ಆರಂಭವಾಗುವ ಸಾಧ್ಯತೆಯಿದೆ. ಅಲ್ಲಿ ಅವರು ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆ (IGC) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದು, ಫ್ಲೋರಿಡಾದ ಮಿಯಾಮಿ ನಗರದಲ್ಲಿ ಡಿಸೆಂಬರ್ 14 ಮತ್ತು 15 ರಂದು ನಡೆಯಲಿರುವ ಜಿ-20 (G20) ಶೃಂಗಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಈ ಶೃಂಗಸಭೆಯ ಜೊತೆಜೊತೆಯಲ್ಲೇ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಪ್ರಮುಖ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಒಳಗೊಂಡ ‘ಕ್ವಾಡ್’ (QUAD) ಒಕ್ಕೂಟದ ಶೃಂಗಸಭೆಯನ್ನು ಸಹ ಇದೇ ವೇಳೆ ಆಯೋಜಿಸಲು ರಾಜತಾಂತ್ರಿಕ ಯತ್ನಗಳು ಸಾಗಿವೆ.

ಆದಾಗ್ಯೂ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಇನ್ನೂ ಕೆಲವು ಅಸ್ಪಷ್ಟತೆಗಳು ಉಳಿದುಕೊಂಡಿವೆ. ಇತ್ತೀಚೆಗೆ ಅಮೆರಿಕದಲ್ಲಿ ಜಾರಿಗೆ ತರಲಾದ ಹೊಸ ಶಾಸನವು ಭಾರತದ ಸರಕುಗಳ ಮೇಲೆ ಶೇಕಡಾ 100 ರಷ್ಟು ದಂಡನಾತ್ಮಕ ಸುಂಕ ವಿಧಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಿದ್ದು, ಇದು ಮಾತುಕತೆಗೆ ಹೊಸ ಸವಾಲಾಗಿ ಪರಿಣಮಿಸಿದೆ. ಆದರೂ ಅಮೆರಿಕದಲ್ಲಿನ ಭಾರತದ ರಾಯಭಾರಿ ಸರ್ಜಿಯೋ ಗೋರ್ ಅವರು ಉಭಯ ದೇಶಗಳ ನಡುವಿನ ಸುಂಕ ಬಿಕ್ಕಟ್ಟು ಶೀಘ್ರವೇ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಪ್ರವಾಸದ ನಂತರ ಪ್ರಧಾನಿ ಮೋದಿ ಅವರು ಕೆನಡಾಕ್ಕೆ ಭೇಟಿ ನೀಡಲಿದ್ದಾರೆ. ಇದು ಎರಡೂ ದೇಶಗಳ ನಡುವಿನ ಹಳೆಯ ಕಹಿ ನೆನಪುಗಳನ್ನು ಮರೆತು ಹೊಸ ರಾಜತಾಂತ್ರಿಕ ಅಧ್ಯಾಯವನ್ನು ಆರಂಭಿಸುವ ‘ಬಿಗ್ ರೀಸೆಟ್’ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ನೇತೃತ್ವದಲ್ಲಿ ಉಭಯ ದೇಶಗಳು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು (CEPA) ಅಂತಿಮಗೊಳಿಸಲು ಸಿದ್ಧವಾಗಿವೆ. ಈ ಒಪ್ಪಂದದ ಮೂಲಕ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 70 ಶತಕೋಟಿ ಡಾಲರ್‌ಗೆ ಏರಿಸುವ ಗುರಿ ಹೊಂದಲಾಗಿದೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವಧಿಯಲ್ಲಿ ಉಂಟಾಗಿದ್ದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಬೆಂಬಲಿತ ಕಹಿ ವಾತಾವರಣವು ಈಗ ಶಮನಗೊಂಡಿದ್ದು, ನೂತನ ಪ್ರಧಾನಿ ಕಾರ್ನಿ ಅವರ ಪ್ರಾಯೋಗಿಕ ಧೋರಣೆಯನ್ನು ನವದೆಹಲಿ ಸ್ವಾಗತಿಸಿದೆ.

ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಮೋದನೆ

ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಿ ಮೋದಿ ಬೆಲ್ಜಿಯಂಗೆ ಭೇಟಿ ನೀಡಲಿದ್ದಾರೆ. ರಾಜಧಾನಿ ಬ್ರಸೆಲ್ಸ್‌ನಲ್ಲಿ ಅವರು ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇತ್ತೀಚೆಗೆ ಅಂತಿಮಗೊಂಡ ಭಾರತ ಹಾಗೂ ಯುರೋಪಿಯನ್ ಯೂನಿಯನ್ (EU) ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಯು ಸಂಸತ್ತಿನಲ್ಲಿ ರಾಜಕೀಯ ಅನುಮೋದನೆ ದೊರೆಯಲಿದ್ದು, ಬ್ರಸೆಲ್ಸ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಇಯು ನಾಯಕರು ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಿದ್ದಾರೆ. ವಿದೇಶಾಂಗ ಸಚಿವಾಲಯವು ಶೀಘ್ರದಲ್ಲೇ ಈ ಪ್ರವಾಸದ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಇಂಡಿ ಬರಪೀಡಿತ ಪಟ್ಟಿಗೆ ಸೇರಿಸದಕ್ಕೆ ಅಸಮಾಧಾನ : ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ
ವಿಜಯಪುರ: ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ವಿರೋಧಿಸಿ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹಾಗೂ ರೈತರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಇಂಡಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಲವು ಬಾರಿ ತರಲಾಗಿತ್ತು. ಆದರೆ ತಮ್ಮ ಮನವಿಗೆ ಸರ್ಕಾರದಿಂದ ನಿರೀಕ್ಷಿತ ಸ್ಪಂದನೆ ದೊರೆಯದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕ್ಷೇತ್ರದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರ ಪರವಾಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಶಾಸಕನಾಗಿ ಮುಂದುವರಿದು ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯಶವಂತರಾಯಗೌಡ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಸೌಮ್ಯ ಸ್ವಭಾವದ ನನ್ನಂತಹವರಿಗೆ ಸರ್ಕಾರದಲ್ಲಿ ಮನ್ನಣೆ ಇಲ್ಲ. ಬಲಾಢ್ಯರಿಗೆ ಮಾತ್ರ ಮನ್ನಣೆ ಸಿಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಬರದ ಪರಿಣಾಮ ರೈತರು ಎದುರಿಸುತ್ತಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಇಂಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂಬ ಬೇಡಿಕೆ ಇತ್ತು. ಸರ್ಕಾರದ ಗಮನಕ್ಕೆ ವಿಷಯವನ್ನು ತಂದಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಆಡಳಿತಾರೂಢ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿದೆ. ಬರಪೀಡಿತ ತಾಲೂಕುಗಳ ಘೋಷಣೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಪ್ರತಾಪ ಸಿಂಹನನ್ನು ಗಡಿಪಾರು ಮಾಡಿ – ದಲಿತ ಸಂಘಟನೆಗಳ ಆಗ್ರಹ
ಹಾಸನ: ಟಿ.ನರಸೀಪುರ ಗಣೇಶ ಮೆರವಣಿಗೆ ವಿವಾದವನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಹಾಗೂ ಅಶಾಂತಿ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಪ್ರತಾಪ ಸಿಂಹ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವಂತಿರಬೇಕು. ಆದರೆ ಪ್ರತಾಪ ಸಿಂಹ ಅವರು ಒಂದು ಧರ್ಮ ಹಾಗೂ ಜಾತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 52 ವರ್ಷಗಳಿಂದ ಸಂವಿಧಾನದ ಆಶಯದಂತೆ ದೀನದಲಿತರ ಪರ ಹೋರಾಟ ನಡೆಸುತ್ತಿದೆ. ಇಂತಹ ಸಂಘಟನೆಯ ಕಾರ್ಯಕರ್ತರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಹಾಗೂ ಕಾರ್ಯಕರ್ತರು ಧರಿಸುವ ನೀಲಿ ಶಾಲಿನ ಕುರಿತು ವ್ಯಂಗ್ಯವಾಗಿ ಮಾತನಾಡಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ ಸಿಂಹ ವಿರುದ್ಧ ಕಳೆದ ಐದಾರು ವರ್ಷಗಳಲ್ಲಿ ದ್ವೇಷ ಭಾಷಣ ಸೇರಿದಂತೆ ಸುಮಾರು 22 ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಮಾಜದ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕೃಷ್ಣದಾಸ್, ಸಂದೇಶ್, ಆರ್‌ಪಿಐನ ಸತೀಶ್, ಈರೇಶ್, ರಾಜೇಶ್, ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 52 ವರ್ಷಗಳಿಂದ ಸಂವಿಧಾನದ ಆಶಯದಂತೆ ದೀನದಲಿತರ ಪರ ಹೋರಾಟ ನಡೆಸುತ್ತಿದೆ. ಇಂತಹ ಸಂಘಟನೆಯ ಕಾರ್ಯಕರ್ತರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಹಾಗೂ ಕಾರ್ಯಕರ್ತರು ಧರಿಸುವ ನೀಲಿ ಶಾಲಿನ ಕುರಿತು ವ್ಯಂಗ್ಯವಾಗಿ ಮಾತನಾಡಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ ಸಿಂಹ ವಿರುದ್ಧ ಕಳೆದ ಐದಾರು ವರ್ಷಗಳಲ್ಲಿ ದ್ವೇಷ ಭಾಷಣ ಸೇರಿದಂತೆ ಸುಮಾರು 22 ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಮಾಜದ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕೃಷ್ಣದಾಸ್, ಸಂದೇಶ್, ಆರ್‌ಪಿಐನ ಸತೀಶ್, ಈರೇಶ್, ರಾಜೇಶ್, ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು
ಬೆಂಗಳೂರು: ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಲಂಚದ ವಿಷಯವಾಗಿ “ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ” ಎಂಬ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ ವಿವಾದವೀಗ ರಾಜ್ಯಪಾಲರ ಅಂಗಳ ತಲುಪಿದೆ.ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಸಚಿವ ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು, ಭ್ರಷ್ಟಾಚಾರಕ್ಕೆ ಉತ್ತೇಜನದ ಆರೋಪ ಹೊರಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಗವರ್ನರ್​​ಗೆ ಇಮೇಲ್​​ ಮೂಲಕ ದೂರು ಸಲ್ಲಿಸಿದ್ದಾರೆ. ಸಚಿವರ ಈ ಹೇಳಿಕೆಯು ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದೆ. ಸಂವಿಧಾನದ ಪರಿಚ್ಛೇದ 14 (ಸಮಾನತೆಯ ಹಕ್ಕು) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ (Prevention of Corruption Act) ಸೆಕ್ಷನ್ 7, 8 ಮತ್ತು 12ರ (ಲಂಚ ಸ್ವೀಕಾರ, ನೀಡಿಕೆ ಹಾಗೂ ಪ್ರಚೋದನೆ) ಅಡಿಯಲ್ಲಿ ಈ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಚಿವ ಸ್ಥಾನದಿಂದ ಶಿವಲಿಂಗೇಗೌಡರನ್ನು ವಜಾಗೊಳಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಶಿವಲಿಂಗೇಗೌಡ ಹೇಳಿದ್ದೇನು?

ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಸಿರುವ ಸಚಿವ ಶಿವಲಿಂಗೇಗೌಡ, ನಾನೇನು ನೇರವಾಗಿ ಹಣ ಕೋಡೋಕೆ ಹೇಳಿದ್ನಾ? ಕೆಲಸ ಮಾಡಿಕೊಟ್ಟ ಅಧಿಕಾರಿಗಳನ್ನು ಗೌರವ ಯುತವಾಗಿ ಕಾಣಬೇಕು ಎಂದಿದ್ದೇನೆ ಅಷ್ಟೇ. ಯಾಕೆ ಇದನ್ನ ದೊಡ್ಡ ವಿಚಾರ ಮಾಡುತ್ತಿದ್ದಾರೆ? ರೈತರ ಸಮಸ್ಯೆ ಬಗ್ಗೆ ಯಾರು ಬರೆಯಲ್ಲ, ರಾಜ್ಯಪಾಲರಿಗೆ ಈ ಬಗ್ಗೆ ಹೇಳ್ತಾರಾ? ಅಲ್ಲಿ‌ ಅಧಿಕಾರಿಗಳು ಮತ್ತು ರೈತರ ನಡುವೆ ಘರ್ಷಣೆ ನಡೀತಾ ಇತ್ತು. ನಮ್ಮ‌ಮೇಲೆ‌ ಗಲಾಟೆ ಮಾಡುತ್ತಾರೆ ಅಂತ ಅಧಿಕಾರಿ‌ ಹೇಳಿದ್ದರು. ಹೀಗಾಗಿ ನಿಮ್ಮ ಕೆಲಸ ಆದ್ಮೇಲೆ ಗೌರವ ಕೊಡುವುದು ಧರ್ಮ ಎಂದು ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಮಾತನಾಡಿದ್ದ ಶಿವಲಿಂಗೇಗೌಡ, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಕೆಲಸ ಆದ ಮೇಲೆ ಅಧಿಕಾರಿಗಳಿಗೆ ಟಿಪ್ಸ್ ನೀಡುವುದು ತಪ್ಪಲ್ಲ – ಸಚಿವ ಶಿವಲಿಂಗೇಗೌಡ
ಸಕಲೇಶಪುರ: ಸರ್ಕಾರಿ ಅಧಿಕಾರಿಗಳು ಸಕಾಲದಲ್ಲಿ ಕೆಲಸ ಮಾಡಿಕೊಟ್ಟರೆ ಅವರಿಗೆ ಸಾರ್ವಜನಿಕರು ಖುಷಿಯಿಂದ ‘ಟಿಪ್ಸ್’ ಅಥವಾ ‘ಗೌರವಧನ’ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿರುವ ಹೇಳಿಕೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಸಚಿವರ ಈ ವಿವಾದಾತ್ಮಕ ಹೇಳಿಕೆಯಿಂದಾಗಿ ಇಲ್ಲಿನ ‘ಪ್ರಜಾಸೇವಾ ಆಂದೋಲನ’ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾರಿ ಗದ್ದಲ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆ ಸಭೆಯಲ್ಲಿದ್ದ ಜನರು ಕೆರಳಿದರು. ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೊತ್ತು ಆಲೂರು ತಾಲ್ಲೂಕಿನಿಂದ ಬಂದಿದ್ದ ಪುನೀತ್ ಎಂಬ ರೈತ, ಸಚಿವರ ಹೇಳಿಕೆಯನ್ನು ವೇದಿಕೆಯ ಮುಂದೆಯೇ ತೀವ್ರವಾಗಿ ಖಂಡಿಸಿದರು.ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?” ಎಂದು ರೈತ ಮತ್ತು ಅಲ್ಲಿದ್ದ ಯುವಕರು ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಸಭೆಯಲ್ಲಿ ಗದ್ದಲ ತಾರಕಕ್ಕೇರಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಚಿವ ಶಿವಲಿಂಗೇಗೌಡರು ತಕ್ಷಣವೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು.

ಅಧಿಕಾರಿಗಳು ಬಲವಂತವಾಗಿ ಹಣ ವಸೂಲಿ ಮಾಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಗೌರವ ಸಲ್ಲಿಸಬೇಕು ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ಹೊರತು, ಲಂಚ ನೀಡುವುದನ್ನು ಪ್ರೋತ್ಸಾಹಿಸಿಲ್ಲ” ಎಂದು ಸ್ಪಷ್ಟನೆ ನೀಡಿದರು. ಬಳಿಕ ಮಧ್ಯಪ್ರವೇಶಿಸಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಪ್ರತಿಭಟನಾ ನಿರತ ಯುವಕರನ್ನು ಸಮಾಧಾನಪಡಿಸಿದರು. ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿಯು ಕೆಲಸ ಮಾಡಲು ಸಾರ್ವಜನಿಕರಿಂದ ಲಂಚ ಅಥವಾ ಹಣಕ್ಕೆ ಬೇಡಿಕೆಯಿಟ್ಟರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ ? ಕಾನೂನು ಬದ್ದವಾಗಿ ಚರ್ಚೆ ನಡೆಸಲಾಗುತ್ತಿದೆ – ಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ಕೆಪಿಎಸ್‌ಸಿ (Kpsc) ನೇಮಕಾತಿ ಅಕ್ರಮಗಳ ತನಿಖೆಗೆ ಹೈಕೋರ್ಟ್‌ ವಿಶೇಷ ತನಿಖಾ ತಂಡ (SIT) ರಚಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (Cm Dk Shivakumar) ನೀಡಿರುವ ಹೇಳಿಕೆ ಇದೀಗ ಗಮನ ಸೆಳೆದಿದೆ. “ಕೆಪಿಎಸ್‌ಸಿಯನ್ನೇ ಮುಚ್ಚಿದರೆ ಹೇಗೆ?” ಎಂಬ ಬಗ್ಗೆಯೂ ಕಾನೂನುಬದ್ಧವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕೆಪಿಎಸ್‌ಸಿ ವಿಚಾರವಾಗಿ ಹೈಕೋರ್ಟ್‌ SIT ರಚಿಸಿರುವುದಕ್ಕೆ ತಮ್ಮದೇನೂ ಆಕ್ಷೇಪವಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ರಾಜ್ಯದ ಪೊಲೀಸ್‌ ತನಿಖಾ ಸಂಸ್ಥೆಗಳು ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದ್ದು, ಹಲವು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಜಾರಿ ನಿರ್ದೇಶನಾಲಯವೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ತನಿಖೆ ನಡೆಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್‌ ತನಿಖೆಯನ್ನು ಮಾನಿಟರ್ ಮಾಡಬಹುದು, ತನಿಖೆಯ ವರದಿಯನ್ನು ತರಿಸಿಕೊಳ್ಳಬಹುದು. ಆದರೆ ತನಿಖಾ ತಂಡದಲ್ಲಿ ಯಾರನ್ನು ನೇಮಿಸಬೇಕು, ಯಾರನ್ನು ಸೇರಿಸಬೇಕು ಎಂಬುದನ್ನು ಸರ್ಕಾರಕ್ಕೆ ಬಿಡಬೇಕೇ ಎಂಬ ವಿಚಾರ ಈಗ ಚರ್ಚೆಯಲ್ಲಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮಾತನಾಡಿದ ಅವರು, “ದೊಡ್ಡ ಕದೀಮರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಸಾಕಷ್ಟು ದಾಖಲೆಗಳು ಸಿಗುತ್ತಿವೆ” ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ವ್ಯವಸ್ಥೆಯನ್ನೇ ಮುಂದುವರಿಸಬೇಕೇ ಅಥವಾ ಬೇರೊಂದು ವ್ಯವಸ್ಥೆ ರೂಪಿಸಬೇಕೇ ಎಂಬ ಬಗ್ಗೆ ಕಾನೂನುಬದ್ಧವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

“ಮಕ್ಕಳ ಭವಿಷ್ಯ ಮುಖ್ಯ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು. ನಾವು ನಂಬಿಕೆ ಇಟ್ಟು ಜವಾಬ್ದಾರಿ ನೀಡಿದವರು ಈ ರೀತಿಯ ಅಕ್ರಮಗಳಲ್ಲಿ ಭಾಗಿಯಾದರೆ ಏನು ಮಾಡಬೇಕು ಎಂಬುದನ್ನು ಯೋಚಿಸಬೇಕಾಗುತ್ತದೆ” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ತಮ್ಮ ಹಿಂದಿನ ಅನುಭವವನ್ನೂ ಪ್ರಸ್ತಾಪಿಸಿದ ಅವರು, ತಾವು ಪವರ್‌ ಮಿನಿಸ್ಟರ್‌ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ನೀಡುವ ಪ್ರಕ್ರಿಯೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಕೆಪಿಎಸ್‌ಸಿ ನೇಮಕಾತಿ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯನ್ನು ಮರಳಿ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ನಡುವೆ, ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಸೇರಿದಂತೆ ಸಂಬಂಧಿತ ಪ್ರಕರಣಗಳ ತನಿಖೆಯನ್ನು ಈ ತಂಡ ನಡೆಸಲಿದ್ದು, 100 ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಗಡುವು ನೀಡಿದೆ. ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿರುವ ಸಂದರ್ಭದಲ್ಲೇ, ಸಂಸ್ಥೆಯ ಭವಿಷ್ಯದ ಬಗ್ಗೆಯೂ ಕಾನೂನುಬದ್ಧವಾಗಿ ಚರ್ಚೆ ನಡೆಸಲಾಗುತ್ತಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.