ಬೀದರ್ – Peepal Media

ರವಿಕುಮಾರ್‌ರ ಹೇಳಿಕೆ ಮಹಿಳೆಯರಿಗೆ ಅವಮಾನ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್
ಬೀದರ್: ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ನೀಡಿರುವ ಹೇಳಿಕೆಯು ಇಡೀ ಮಹಿಳಾ ಕುಲಕ್ಕೆ ಅವಮಾನಕರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆರೋಪಿಸಿದರು.

ಶುಕ್ರವಾರ ಬೀದರ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಮಾಯಣದ ಬಗ್ಗೆ ಮಾತನಾಡುತ್ತ, ರಾಮ-ಸೀತೆಯನ್ನು ಉಲ್ಲೇಖಿಸಿ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳುತ್ತಾರೆ. ಆದರೆ, ಮತ್ತೊಂದೆಡೆ ಅವಾಚ್ಯವಾಗಿ ಮಾತನಾಡುತ್ತಾರೆ. ಇದು ಬಿಜೆಪಿಯ ಸಂಸ್ಕೃತಿಯನ್ನು ಬಯಲು ಮಾಡುತ್ತದೆ. ಇಂತಹವರಿಗೆ ಗೌರವ ಮತ್ತು ಮರ್ಯಾದೆಯ ಕೊರತೆಯಿದೆ ಎಂದು ತೀವ್ರವಾಗಿ ಟೀಕಿಸಿದರು.

ರವಿಕುಮಾರ್ ಅವರಿಗೆ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ಕೆಟ್ಟ ಚಾಳಿಯಿದೆ. ಮಹಿಳೆಯರಿಗೆ ಅವಮಾನ ಮಾಡುವುದು, ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುವುದು ಅವರ ಸ್ವಭಾವವಾಗಿದೆ. “ನನಗೂ ಸದನದಲ್ಲಿ ಸಿ.ಟಿ. ರವಿ ಇದೇ ರೀತಿ ನಿಂದಿಸಿದ್ದರು. ಇಂತಹವರಿಗೆ ನೈತಿಕ ಜವಾಬ್ದಾರಿಯೇ ಇಲ್ಲ. ಅವರು ವಿಧಾನಸಭೆಯಲ್ಲಿ ಇರಬಾರದು” ಎಂದು ಅವರು ಹೇಳಿದರು.

ನಮ್ಮ ಪಕ್ಷದಲ್ಲಿ ಒಬ್ಬರು ಜನಪ್ರಿಯ ನಾಯಕರಿದ್ದಾರೆ, ಇನ್ನೊಬ್ಬರು ಸಂಘಟನಾ ಕುಶಲತೆಯನ್ನು ಹೊಂದಿದ್ದಾರೆ. ಈ ಇಬ್ಬರೂ ಒಟ್ಟಾಗಿ ಕರ್ನಾಟಕದ ಜನತೆಗೆ ಭರವಸೆಯ ಸರ್ಕಾರವನ್ನು ನೀಡುತ್ತಿದ್ದಾರೆ. ಸರ್ಕಾರ ಸ್ಥಿರವಾಗಿದ್ದು, ಯಾವುದೇ ಗೊಂದಲವಿಲ್ಲ. “ನನ್ನ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದರೆ ಸುಮ್ಮನಿರುವುದಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಗಳು ಪ್ರೀತಿ ಮಾಡಿದ್ದಕ್ಕೆ ತಂದೆಯಿಂದಲೆ ಮಗಳ ಬರ್ಬರ ಹತ್ಯೆ
ಬೀದರ್: ಮಗಳು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೆ ದೊಣ್ಣೆಯಿಂದ ಹೊಡೆದು ತನ್ನ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಭೀಕರ ಘಟನೆ ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಬರಗೇನ್ ತಾಂಡಾದಲ್ಲಿ ಮಗಳ ಮೇಲೆ ಅಪ್ಪನೇ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾಗಿರುವ ಯುವತಿ. ತನ್ನ ಮಗಳನ್ನು ಕೊಲೆ ಮಾಡಿದ ನಂತರ ಮೋತಿರಾಮ ಎಸ್ಕೇಪ್ ಆಗಿದ್ದು, ಈ ಬಗ್ಗೆ ಸಂತಪೂರ ಪೊಲೀಸ್ ಠಾಣೆಗೆ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು ತನಿಖೆ ನಡೆಯುತ್ತಿದೆ.

ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಆಧುನಿಕ ಕಾಲದ ಭಾರತದಲ್ಲಿ ಲವ್ ಮಾಡಿ ಮದುವೆ ಅಗುವುದು ಕಾಮನ್ ಆಗಿದೆ. ತಂದೆ, ತಾಯಿ ಕೂಡ ಮಕ್ಕಳ ಪ್ರೀತಿಯನ್ನು ಒಪ್ಪಿ ಮದುವೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ಅಪ್ಪ ಮಗಳು ಲವ್ ಮಾಡಿದ್ದಾಳೆ ಎಂದು ಕೊಲೆಯನ್ನೇ ಮಾಡಿದ್ದಾನೆ.

ಆರೋಪಿಗೆ ಕಠಿಣ ಶಿಕ್ಷೆ ನೀಡಲು ಸಿಐಡಿ ತನಿಖೆ ಚುರುಕು : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಅವರು ಇಂದು ಬೀದರ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದಾದರೂ ಪ್ರಕರಣವನ್ನು ಸಿಬಿಐ ವಹಿಸಿದೆಯೇ? ಎಂದು ಪ್ರಶ್ನಿಸಿದರು. ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇನೆ. ಅವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ. ಇದರಲ್ಲಿ ರಾಜಕೀಯ ಮಾಡಬಾರದು. ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು.

ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೇಡ

ನೇಹಾ ತಂದೆಯವರು ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವೇ ರಾಜಕೀಯ ಮಾಡುತ್ತಿದೆ ಹಾಗೂ ಬಿಜೆಪಿಯವರ ಇದೇ ಧೋರಣೆಯನ್ನು ಹೊಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನೇಹಾ ಕೊಲೆ ಅನ್ಯಾಯವಾದುದು. ಅದನ್ನು ನಾವು ಖಂಡಿಸಿದ್ದೇವೆ.
ಇತರೆ ಪಕ್ಷಗಳು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಪ್ರಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರ ಆಸ್ತಿ ಕಸಿದುಕೊಂಡು ಸಂಪತ್ತು ಹಂಚುವ ಬಗ್ಗೆ ಮೋದಿಯವರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. , 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆಗಳನ್ನು ಈಡೇರಿಸಿದರೇ ? ಅಗತ್ಯವಸ್ತುಗಳ ಬೆಲೆಯನ್ನು ಮೋದಿಯವರು ಕಡಿಮೆ ಮಾಡಿದ್ದಾರೆಯೇ ಎಂದು ಸಿಎಂ ಪ್ರಶ್ನಿಸಿದರು.

ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ಮುಂದುವರೆದಿದೆ

ಕಾಂಗ್ರೆಸ್ ಪಕ್ಷ ಎಸ್ ಸಿ ಎಸ್ ಟಿಗೆ ನೀಡಲಾಗಿರುವ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಲಿದೆ ಎಂದು ಮೋದಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಮೀಸಲಾತಿ 1994 ರಿಂದ ಜಾರಿಗೆ ಬಂದಿತ್ತು. ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾಲದಲ್ಲಿ ಈ ಮೀಸಲಾತಿಯನ್ನು ಹಿಂಪಡೆದಿದ್ದಕ್ಕೆ ಈ ವರ್ಗ ಸುಪ್ರಿಂ ಕೋರ್ಟ್ನ ಮೊರೆ ಹೋಯಿತು. ಆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ನ ಮುಂದೆ 4%ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದು, ಈ ಮೀಸಲಾತಿ ಈಗಲೂ ಮುಂದುವರೆಯುತ್ತಿದೆ ಎಂದರು.

ಬಿಜೆಪಿ ಸಾಮಾಜಿಕ ನ್ಯಾಯ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೀದರ್, ಆಳಂದ: ಏಪ್ರಿಲ್ 24: ಬಿಜೆಪಿ ಆಡಳಿತದ ಅವಧಿಯಲ್ಲಿ ಸಂವಿಧಾನ ಅಪಾಯದಲ್ಲಿದ್ದು ಅದನ್ನು ರಕ್ಷಣೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಚಿಂತನೆ ನಡೆಸಬೇಕು. ದೇಶದ ಭವಿಷ್ಯ ರೂಪಿಸಲು ಇದು ಬಹಳ ಮುಖ್ಯ. ಜನತೆ ವಿಚಾರ ಮಾಡಿ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನರೇಂದ್ರ ಮೋದಿಯವರು 10 ವರ್ಷಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಈ ದೇಶದ ಬಡವರಿಗೆ , ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಈ ವರ್ಗದ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ, ಬಡವರ ಹಿತಕ್ಕೆ ವಿರುದ್ಧವಾಗಿರುವ ಪಕ್ಷ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿರುವ ಪಕ್ಷ. ಇದನ್ನು ಜನರು ಗಮನದಲ್ಲಿರಿಸಿಕೊಳ್ಳಬೇಕು. ನರೇಂದ್ರ ಮೋದಿ ನೀಡಿದ್ದ ಭರವಸೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಭರವಸೆಗಳನ್ನು ಈಡೇರಿಸದಿದ್ದ ಮೇಲೆ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ. ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚಿಸಿದ್ದಾರೆ. ರೈತರ ಆದಾಯ ಎರಡು ಪಟ್ಟು ಹೆಚ್ಚಿಸುತ್ತೇವೆ ಎಂದು ಹೇಳಿ, 10 ವರ್ಷಗಳಲ್ಲಿ ಒಂದು ರೂಪಾಯಿ ಕೂಡ ಹೆಚ್ಚಾಗಿಲ್ಲ. ಅದಕ್ಕೆ ಬದಲಾಗಿ ವೆಚ್ಚ ಹೆಚ್ಚಾಗಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ,ಬಡವರ, ಮಧ್ಯಮವರ್ಗದ ಜನರ ಬದುಕು ಹಸನು ಮಾಡುತ್ತೇವೆ, ಅಚ್ಚೇ ದಿನ್ ಬರುತ್ತದೆ ಎಂದು ಹೇಳಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ರೈತರ ಬೆಲೆಗಳಿಗೆ ನ್ಯಾಯಯುತ ಬೆಲೆ, ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದರು. ರೈತರು ಕೆಲವು ತಿಂಗಳಿನಿಂದ ಸಾಲ ಮನ್ನಾ, ಎಂ.ಎಸ್.ಪಿ ಕೊಡಲು ಕಾನೂನು ಮಾಡಬೇಕೆಂದು ಚಳುವಳಿ ಮಾಡುತ್ತಿದ್ದಾರೆ. ರೈತರು ಸತ್ತರೂ ಅವರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡಲಿಲ್ಲ ಎಂದರು.

10 ವರ್ಷಗಳಲ್ಲಿ ಬಿಜೆಪಿ ಯಾವ ಭರವಸೆಗಳನ್ನು ಈಡೇರಿಸಿಲ್ಲ..
ನರೇಂದ್ರ ಮೋದಿಯವರು ಅವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ. 195 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯಾಣ ಮಾಡಿ ಅದರ ಮತ್ತ ಉಳಿತಾಯವಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.

ಬಿಜೆಪಿ, ನರೇಂದ್ರ ಮೋದಿ ನುಡಿದಂತೆ ನಡೆಯದೇ ಸುಳ್ಳು ಹೇಳಿಕೊಂಡು ದೇಶದ ಉದ್ದಗಲಕ್ಕೂ ತಿರುಗುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. 34000 ಕೋಟಿ ರೂ.ಗಳನ್ನು ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ 52009 ಕೋಟಿ ರೂ.ಗಳನನು ಮೀಸಲಿರಿಸಲಾಗಿದೆ. 1.20 ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿರಿಸಿದೆ. ಬಿಜೆಪಿಯವರು ಬಜೆಟ್ ನ್ನು ಓದಬೇಕು. ಬಜೆಟ್ ನಲ್ಲಿ 68000 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ದಿಗೆ ಇಟ್ಟಿದ್ದೇವೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು. ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಮನ್ ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72000 ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದಾರೆ . ನಮ್ಮ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರೂ.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿತು. 8165 ಕೋಟಿ ರೂ.ಗಳನ್ನು ಸಾಲ ಮಾಡಿ ಭರಿಸಿತು. ಆದರೆ ನರೇಂದ್ರ ಮೋದಿಯವರು ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ. ಆದರೆ ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದ್ದಾರೆ. ನರೇಂದ್ರ ಮೋದಿಯವರು ಶ್ರೀಮಂತರ ಪರವಾಗಿ ಇದ್ದಾರೆ ಎಂದರು.

ಅದಾನಿ, ಅಂಬಾನಿಗೆ ಸಹಾಯ
ಶೇ 30% ಇದ್ದ ಕಾಪೋರೇಟ್ ತೆರಿಗೆಯನ್ನು 27% ಗಿಳಿಸಿ, ಅದಾನಿ, ಅಂಬಾನಿಗೆ ಸಹಾಯ ಮಾಡಿದ್ದಾರೆ. ಸಾಮಾನ್ಯ ಜನರ ಪರೋಕ್ಷ ತೆರಿಗೆಯನ್ನು 50% ಗೇರಿಸಿದರು. ಬಡವರು ಮಧ್ಯಮ ವರ್ಗದವರ ತೆರಿಗೆ ಹೆಚ್ಚಿಸಿ, ಶ್ರೀಮಂತರ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದು ಕರೆ ನೀಡಿದರು. ಕಿರಿಯ ವಯಸ್ಸಿನ ಸಾಗರ್ ಖಂಡ್ರೆಯವರನ್ನು ನಮ್ಮ ಅಭ್ಯರ್ಥಿಯಾಗಿಸಿದ್ದು, ಅವರಿಗೆ ನಿಮ್ಮ ಮತವನ್ನು ಹಾಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಬಿ.ಆರ್. ಪಾಟೀಲ್, ಶಾಸಕರಾದ ಅಜಯ್ ಸಿಂಗ್, ಅಭ್ಯರ್ಥಿ ಸಾಗರ್ ಖಂಡ್ರೆ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಬೀದರ್‌| ಆಟೋ ರಿಕ್ಷಾ, ಟ್ರಕ್‌ ಡಿಕ್ಕಿ: 7 ಮಹಿಳೆಯರು ಸಾವು, 11 ಮಂದಿಗೆ ಗಾಯ
ಚಿಟಗುಪ್ಪ: ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಮತ್ತು ಟ್ರಕ್ ಡಿಕ್ಕಿ ಹೊಡೆದ ಹಿನ್ನೆಯಲ್ಲಿ, 7 ಜನ ಮಹಿಳೆಯರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಚಿಟಗುಪ್ಪ ತಾಲೂಕಿನ ಬೆಮಳಖೇಡ ಗ್ರಾಮದಲ್ಲಿ ನಡೆದಿದೆ.

ಮಾಹಿತಿ ಪ್ರಕಾರ, ಮಹಿಳೆಯರು ಕೂಲಿ ಕಾರ್ಮಿಕರಾಗಿದ್ದು, ಆಟೋ ರಿಕ್ಷಾದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿರುವ ವೇಳೆ, ಬೆಮಳಖೇಡ ಸರ್ಕಾರಿ ಶಾಲೆಯ ಬಳಿ ಟ್ರಕ್ ಡಿಕ್ಕಿ ಹೊಡೆದಿದೆ. ಈ ಕಾರಣ ಸ್ಥಳದಲ್ಲೇ ಏಳು ಜನ ಮಹಿಳೆಯರು ಸಾವನ್ನಪ್ಪಿದ್ದು, ಗಾಯಗೊಂಡ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಾಗಿಸಿದೆ ಎಂದು ತಿಳಿದುಬಂದಿದೆ.

ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿ, ಘಟನೆ ಕುರಿತು ಮಾಹಿತಿ ತಿಳಿದ ಬೆಮಳಖೇಡ ಪೊಲೀಸರು,  ಮೃತರು, ಪಾರ್ವತಿ (40), ಪ್ರಭಾವತಿ (36), ಗುಂಡಮ್ಮ (60), ಯಾದಮ್ಮ (40), ಜಗ್ಗಮ್ಮ, 34) ಈಶ್ವರಮ್ಮ (55) ಮತ್ತು ರುಕ್ಮಿಣಿ ಬಾಯಿ (60) ಎಂದು ಗುರುತಿಸಿದ್ದಾರೆ.

ವಾಹನಗಳ ಚಾಲಕರು ಸೇರಿದಂತೆ ಒಟ್ಟು 11 ಜನರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನಲೆಯಲ್ಲಿ ಘಟನೆ ಕುರಿತು ಕೇಸ್‌ ದಾಖಲಾಗಿದೆ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೀದರ್ ನಾಂದೇಡ್ ರೈಲು ಯೋಜನೆಗೆ ಅನುದಾನ: ಬೊಮ್ಮಾಯಿ ಭರವಸೆ
ಬೀದರ್: ಕೇಂದ್ರ ಸರ್ಕಾರದ ವತಿಯಿಂದ ಬೀದರ್ ನಾಂದೇಡ್ ರೈಲು ಯೋಜನೆ ಮಂಜೂರಾಗಲಿದ್ದು, ಇದರ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಹಾಗೂ ರಾಜ್ಯದ ಪಾಲಿನ ಹಣ ಎರಡನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಔರಾದ್ ನಲ್ಲಿ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಔರಾದ್ ಕೆರೆ ತುಂಬಿಸುವ ಯೋಜನೆ 36 ಕೆರೆಗಳ ತುಂಬಿಸುವ 698 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು 40 ಗ್ರಾಮಗಳಿಗೆ ಉಪಯೋಗವಾಗುತ್ತಿದೆ. ಸಂಸದ ಭಗವಂತ ಖೂಬಾ ಹಾಗೂ ಸಚಿವ ಚೌಹಾಣ್ ಅವರ ಒತ್ತಡಕ್ಕೆ ಮಣಿದು 700 ಕೋಟಿ ರೂ.ಗಳ ಯೋಜನೆಯನ್ನು ಕೈಗೊಳ್ಳಲಾಗಿದೆ. ಬರುವ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ, ನವೆಂಬರ್ ನಲ್ಲಿ ಪ್ರಾರಂಭಿಸಲಾಗುವುದು ಎಂದರು.

ಭಾಲ್ಕಿ ವಿಧಾನಸಭಾ ಕ್ಷೇಡತ್ರದ 24 ಸಾವಿರ ಕರೆ ಜಮೀನಿಗೆ ಒಂದು ಟಿಎಂಸಿ ನೀರಿನಲ್ಲಿ 762 ಕೋಟಿ ರೂ.ಗಳ ಯೋಜನೆಗೆ  ಮಂಜೂರಾತಿ ನೀಡಲಾಗಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಕೆಲಸ ಮಾಡಲಾಗುತ್ತಿದೆ. ಬೀದರ್ ನಲ್ಲಿ ಈ ಎರಡು ಯೋಜನೆಗಳು ಬಹಳ ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಮಾಡದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಬೀದರ್ ನಮ್ಮ ರಾಜ್ಯದ ಮುಕುಟ ಪ್ರಾಯ ಇದ್ದಹಾಗೆ. ಅತ್ಯುತ್ತಮ ಹವಾಮಾನ, ಕೈಗಾರಿಕೆಗೆ ಸೂಕ್ತ ವಾತಾವರಣ, ಕೃಷಿಗೆ ಫಲವತ್ತಾದ ಮಣ್ಣು, ಐತಿಹಾಸಿಕ ಕುರುಹುಗಳಿರುವ ಜಿಲ್ಲೆ. ಬೀದರ್ ಹಾಗೂ ಕಲಬುರ್ಗಿ ಕೋಟೆಗಳ ಅಭಿವೃದ್ದಿಗೆ ತಲಾ 20 ಕೋಟಿ ರೂ ದಗಿಸಲಾಗಿದೆ. ಪ್ರವಾಸೋದ್ಯಮ ಇಲ್ಲಿಂದ ಪ್ರಾರಂಭವಾಗಬೇಕೆಂದು ಈ ಭಾಗದ ಪ್ರವಾಸೋದ್ಯಮ ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದೇವೆ‌. ಸಮಗ್ರ ಹೈದರಾಬಾದ್  ಕರ್ನಾಟಕ ಅಭಿವೃದ್ಧಿಯ ಜೊತೆಗೆ ಬೀದರ್ ಜಿಲ್ಲೆಯ ಅಭಿವೃದ್ಧಿಯನ್ನೂ ತೆಗೆದುಕೊಳ್ಳಾಗಿದೆ. ಬಸವಕಲ್ಯಾಣ ಗ್ರಾಮದ ಸಮಗ್ರ ಅಭಿವೃದ್ಧಿಗೂ ಅನುದಾನ ಒದಗಿಸಿದೆ.  ಸಿಪೆಟ್ ಯೋಜನೆ ಕರ್ನಾಟಕಕ್ಕೆ ಮಾಡಲು ರಾಜ್ಯ ಸರ್ಕಾರದ ಪಾಲು 50 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಿ ಇಂದು ಅಡಿಗಲ್ಲು ಹಾಕಲಾಗಿದೆ. ಅದರ ಶ್ರೇಯಸ್ಸು ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಸಲ್ಲಬೇಕು ಎಂದರು.

ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿ

ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿಗೆ ಈ ವರ್ಷ ಕ್ರಮ ಕೈಗೊಂಡಿದೆ.  ಕಾರಾಂಜಾ ನದಿಯ ಕೊನೆಯ ಭಾಗದಲ್ಲಿ ನೀರು ಲಭ್ಯವಾಗಿಲ್ಲದೆ ರೈತರ ಬವಣೆ ನಮಗೆ ತಿಳಿದಿದೆ. ಕಾರಾಂಜಾ ನದಿಯಿಂದ ಔರಾದ್ ಗೆ ಕುಡಿಯುವ ನೀರು ಯೋಜನೆ ಜಾರಿಗೆ ಮಂಜೂರಾತಿ ನೀಡುವುದಾಗಿ ಭರವಸೆ ಇತ್ತರು.  ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿಯಾದಾಗ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ 9000 ಕೋಟಿ ರೂ.ಗಳನ್ನು ಒದಗಿಸುತ್ತಿದ್ದು, ನಗರ ಪ್ರದೇಶಕ್ಕೆ 7500 ಕೋಟಿ ಒದಗಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 2000 ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿದೆ.  ಪ್ರತಿ ತಾಲ್ಲೂಕಿಗೆ ಕನಿಷ್ಠ 50 ಕೊಠಡಿಗಳ ನಿರ್ಮಾಣವಾಗಲಿದೆ. 70 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 34 ಪಿ.ಹೆಚ್.ಸಿ ಕೇಂದ್ರಗಳನ್ನು ಸಿ ಹೆಚ್ ಸಿಗಳನ್ನಾಗಿ  ಮೇಲ್ದರ್ಜೆಗೇರಿಸಲಾಗುತ್ತಿದೆ.   ಕೃಷಿ,ಕೈಗಾರಿಕೆ, ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ.‌ ಪೌಷ್ಟಿಕ ಆಹಾರ, ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ವಿಶೇಷ ಅನುದಾನ, ಬೀದರ್ ಅಭಿವೃದ್ಧಿಗೆ   ನಮ್ಮಸರ್ಕಾರ ಬದ್ಧವಾಗಿದೆ ಎಂದರು.

ಬಸವ ಕಲ್ಯಾಣ ಅಭಿವೃದ್ದಿ

ಬಸವ ಕಲ್ಯಾಣ ಅಭಿವೃದ್ದಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. 1400 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿ ಸಂಪೂರ್ಣವಾಗಿ ಖರ್ಚು ಮಾಡಲಾಗುತ್ತಿದೆ. ಮಾರ್ಚ್ ನಿಂದ ಮುಂದಿನ ಜನವರಿವರೆಗೆ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ಬಜೆಟ್ ನಲ್ಲಿ 3000 ಕೋಟ ರೂ.ಗಳನ್ನು ಒದಗಿಸಿ ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಲಾಗಿದೆ. ಮುಂದಿನ ಬಜೆಟ್ ನಲ್ಲಿ 5000 ಕೋಟಿ ರೂ.ಗಳನ್ನು  ಮೀಸಲಿಡಲಾಗುವುದು. 1400 ನೇಮಕಾತಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 500 ಶಿಕ್ಷಕರಿದ್ದಾರೆ.  ಎನ್.ಇ. ಪಿ ಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ನೀರಾವರಿಗೆ ವಿಶೇಷ ಅನುದಾನ, ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೆ 500 ಕೋಟಿ ರೂ. ಒದಗಿಸಿದೆ. ಈ ಹಿನ್ನಲೆಯಲ್ಲಿ ಬಸವ ಕಲ್ಯಾಣ ಅಭಿವೃದ್ದಿಗೆ ವಿಶೇಷ ಅನುದಾನ ನೀಡಲಾಗಿದೆ ಎಂದರು.

ಬೀದರ್‌ನ ಹುಮ್ನಾಬಾದ್‌ನಲ್ಲಿ ಭೂಕಂಪ : ಸ್ಥಳೀಯರು ಆತಂಕ
ಬೀದರ್‌ : ಹುಮ್ನಾಬಾದ್‌ ತಾಲ್ಲೂಕಿನ ಹಿಲಾಲಪುರ್‌ ಮತ್ತು ಸಕ್ಕರಗಂಜ ಗ್ರಾಮಗಳ ನಡುವೆ  ಇಂದು ಭೂಮಿ ಕಂಪಿಸಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಭಾನುವಾರದಂದು ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆಯಲ್ಲಿ ಭೂಮಿಯ 5ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು,  ಸ್ಥಳೀಯರು ಆತಂಕಕಾರಿಯಾಗಿದ್ದಾರೆ. ಬೀದರ್‌ ಜಿಲ್ಲೆಯ  ಹುಮ್ನಾಬಾದ್‌ ತಾಲ್ಲೂಕಿನ  ಹಿಲಾಲಪುರ್‌ ಮತ್ತು ಸಕ್ಕರಗಂಜ ಗ್ರಾಮಗಳ ನಡುವೆ ಭೂಮಿ ಕಂಪಿಸಿದೆ.

ಈ ಹಿನ್ನಲೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿದ್ದು, ಆತಂಕದಲ್ಲಿದ್ದ ಸ್ಥಳೀಯರಿಗೆ ಧೈರ್ಯ ಹೇಳಿದ್ದಾರೆ.