ಚಿಕ್ಕಮಗಳೂರು – Peepal Media

ಶೃಂಗೇರಿಯಲ್ಲಿ ಆನೆ ದಾಳಿ; ಇಬ್ಬರ ಬಲಿ ; ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ
ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ದಾಳಿಗೆ ಇಬ್ಬರು ಗ್ರಾಮಸ್ಥರು ಜೀವ ತೆತ್ತಿದ್ದಾರೆ. ಕೊಟ್ಟಿಗೆಗೆ ಸೊಪ್ಪು ತರಲು ಹೋಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬಾ ಎಲ್ಸಾರ ಸಮೀಪ ಈ ಘಟನೆ ನಡೆದಿದೆ. ಮೃತರನ್ನು ಉಮೇಶ್ ಮತ್ತು ಹರೀಶ್ ಎಂದು ಗುರುತಿಸಲಾಗಿದೆ.

ಹಸುವಿನ ಕೊಟ್ಟಿಗೆಗೆ ಸೊಪ್ಪು ತರುವುದಕ್ಕಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ಉಮೇಶ್ ಮತ್ತು ಹರೀಶ್ ತೆರಳಿದ್ದರು. ಆನೆ ಇರುವಿಕೆಯ ಅರಿವೇ ಇರದ ಇಬ್ಬರ ಮೇಲೆ ಎದುರಾದ ಕಾಡಾನೆ, ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.

ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದ್ದು, ಸ್ಥಳೀಯರು ಮತ್ತು ರೈತ ಸಮಿತಿಗಳು ಪ್ರತಿಭಟನೆಗೆ ಕರೆ ನೀಡಿವೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರರಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ. ಈ ದುರಂತಕ್ಕೆ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ದುರಂತದಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬಾಬರ್ ಈಗ ಇಲ್ಲದಿರಬಹುದು, ಆದರೆ ಬಾನು ಮುಷ್ತಾಕ್‌ ತರಹದವರು ಇದ್ದಾರೆ, ಹಿಂದೂಗಳು ಎಚ್ಚರದಿಂದ ಇರಬೇಕು: ಪ್ರತಾಪ್ ಸಿಂಹ
ಚಿಕ್ಕಮಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಾವು ನೀಡಿದ ಹೇಳಿಕೆಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಮುಸ್ಲಿಂ ಸಮುದಾಯದವರನ್ನು ತಾವು ವಿರೋಧಿಸಿಲ್ಲ ಎಂದು ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರು ದಸರಾವು 9 ದಿನಗಳ ಕಾಲ ನಡೆಯುವ ನೂರಕ್ಕೆ ನೂರು ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ವೇಳೆ ತಾಯಿ ಚಾಮುಂಡೇಶ್ವರಿಗೆ ವಿವಿಧ ಅಲಂಕಾರಗಳು ಮತ್ತು ಪೂಜೆಗಳು ನಡೆಯುತ್ತವೆ. ಆದ್ದರಿಂದಲೇ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ ಎಂದು ಹೇಳಿದರು.

“ಯಾವನೋ ಘಜ್ನಿ, ಅಕ್ಬರ್, ಬಾಬರ್ ಬಂದಿದ್ದ ಅಂತ ಹೇಳಬೇಡಿ. ಬಾಬರ್ ಇಲ್ಲದೆ ಇರಬಹುದು, ಆದರೆ ಮುಷ್ತಾಕ್‌ನಂತಹವರು ನಮ್ಮ ನಡುವೆ ಇದ್ದಾರೆ. ಅದಕ್ಕಾಗಿಯೇ ನಾನು ಈ ಎಚ್ಚರಿಕೆ ನೀಡಲು ಬಂದಿದ್ದೇನೆ” ಎಂದು ಅವರು ಹೇಳಿದರು.

ದೇಶವನ್ನು ಉಳಿಸಿಕೊಳ್ಳಲು ಹಿಂದೂಗಳು ಜಾತಿ ಭೇದಗಳನ್ನು ಮರೆತು ಒಂದಾಗಬೇಕು ಎಂದು ಅವರು ಕರೆ ನೀಡಿದರು. ಮುಸ್ಲಿಂ ಸಮುದಾಯದವರನ್ನು ತಾವು ವಿರೋಧಿಸುವುದಿಲ್ಲ ಎಂಬುದಕ್ಕೆ ಉದಾಹರಣೆಗಳನ್ನು ನೀಡಿದ ಅವರು, “ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಇದೇ ಬಿಜೆಪಿ ಸರ್ಕಾರ. ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತರತ್ನ ನೀಡಿದ್ದು ವಾಜಪೇಯಿ ಸರ್ಕಾರ” ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ 15 ವರ್ಷದ ಬಾಲಕ ಹೃದಯಾಘಾತಕ್ಕೆ ಸಾ*ವು
ಚಿಕ್ಕಮಗಳೂರು : ರಾಜ್ಯದಲ್ಲಿ ಹೃದಯಸ್ತಂಬನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹೃದಯಾಘಾತಕ್ಕೆ (Heart Attack) ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿಯ 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಪ್ರೀತಮ್ (15) ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಯಾರಿಗಾದರೂ ಹೇಳಬೇಕು ಅನ್ನುವಷ್ಟರಲ್ಲಿ ದಿಢೀರ್ ಆಗಿ ಕುಸಿದು ಬಿದ್ದಿದ್ದಾನೆ.

ಕೂಡಲೇ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ದುರ್ದೈವಿಯನ್ನು 37 ವರ್ಷದ ಮಿಲಿಂದ್ ಕುಲಕರ್ಣಿ ಎಂದು ಗುರುತಿಸಲಾಗಿದೆ. ಈ ಆತಂಕಕಾರಿ ಘಟನೆಯ ದೃಶ್ಯ ಜಿಮ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವೇಳೆ ಮಿಲಿಂದ್ ಕುಸಿದುಬಿದ್ದ ಕೂಡಲೇ ಜಿಮ್ ನಲ್ಲಿದ್ದ ಇತರೇ ಯುವಕರು ಆತನ ಬಳಿಗೆ ಹೋಗಿ ಏನಾಗಿದೆ ಎಂಬುದನ್ನು ಪರೀಕ್ಷಿಸಿದ್ದಾರೆ. ಆ ಬಳಿಕ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತನನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆತ ಅದಾಗಲೇ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.

ಚುನಾವಣಾ ಅಕ್ರಮ ಎನ್ನುವುದು ಕಾಂಗ್ರೆಸ್‌ ಪಕ್ಷದ ಡಿಎನ್‌ಎ: ಸಿ.ಟಿ.ರವಿ
ಚಿಕ್ಕಮಗಳೂರು: ‘ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ’ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣಾ ಅಕ್ರಮದ ಡಿಎನ್‌ಎ ಇರುವುದು ಕಾಂಗ್ರೆಸ್‌ಗೆ ಎಂದು ಅವರು ಆರೋಪಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ, “ದೇಶದಲ್ಲಿ ಚುನಾವಣಾ ಅಕ್ರಮದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಏಕೆಂದರೆ, ಪ್ರಜಾಪ್ರಭುತ್ವ ವಿರೋಧಿ ಕೆಲಸಗಳನ್ನು ಮತ್ತು ಅಕ್ರಮಗಳನ್ನು ನಡೆಸಿಕೊಂಡು ಬಂದಿರುವ ಇತಿಹಾಸ ಇರುವುದು ಕಾಂಗ್ರೆಸ್‌ಗೆ. ಹೀಗಾಗಿ, ಚುನಾವಣಾ ಅಕ್ರಮದ ಡಿಎನ್‌ಎ ಇರುವುದು ಕಾಂಗ್ರೆಸ್ ಪಕ್ಷಕ್ಕೆ” ಎಂದು ಹೇಳಿದರು.

ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ಬಲಪಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು. “ಆಧಾರ್ ಕಾರ್ಡ್‌ಗಳನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಿರುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಕಾರಣ, ನಕಲಿ ಮತದಾರರನ್ನು ಸೃಷ್ಟಿಸುವ ಮೂಲಕ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿದೆ. ಚುನಾವಣಾ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುತ್ತಿರುವುದನ್ನು ಕಾಂಗ್ರೆಸ್ ಬಯಸುತ್ತಿಲ್ಲ” ಎಂದು ಅವರು ಟೀಕಿಸಿದರು.

ಮತದಾರರ ಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗಳಿದ್ದರೆ, ಅದನ್ನು ಸರಿಪಡಿಸಲು ಪ್ರತಿ ಪಕ್ಷಕ್ಕೂ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಲು ಅವಕಾಶವಿದೆ. ಆದರೆ ಕಾಂಗ್ರೆಸ್ ಈ ಅವಕಾಶವನ್ನು ಬಳಸಿಕೊಂಡಿಲ್ಲ, ಏಕೆಂದರೆ ಅವರು ಗಂಭೀರವಾಗಿ ಕೆಲಸ ಮಾಡುತ್ತಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಕಾಂತರಾಜು ವರದಿಗೆ ಖರ್ಚಾದ ಜನರ ಹಣವನ್ನು ವಾಪಸ್ ಪಡೆಯಿರಿ: ಸಿ.ಟಿ. ರವಿ
ಚಿಕ್ಕಮಗಳೂರು, ಜೂನ್ 12, 2025: ಕಾಂತರಾಜು ಜಾತಿ ಗಣತಿ ವರದಿ ವೈಜ್ಞಾನಿಕವಾಗಿಲ್ಲದಿದ್ದರೆ, ಅದಕ್ಕಾಗಿ ಖರ್ಚಾದ ಸಾರ್ವಜನಿಕ ಹಣವನ್ನು ವಸೂಲಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯ ಲಾಭಕ್ಕಾಗಿ ಸರ್ಕಾರ ಜಾತಿ ಗಣತಿಯನ್ನು ಮತ್ತೆ ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಕಾಂತರಾಜು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ವೈಜ್ಞಾನಿಕ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಎಂದು ಸಮರ್ಥಿಸಿಕೊಂಡಿದ್ದರು. ಜಯಪ್ರಕಾಶ್ ಹೆಗ್ಡೆ ಅದನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದ್ದರು. ಆದರೆ, ಈ ವರದಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈಗ ಮತ್ತೆ ಜಾತಿ ಗಣತಿ ನಡೆಸಲು ಸರ್ಕಾರ ಯೋಜಿಸುತ್ತಿದೆ. ಇದು ಕಾಂತರಾಜು ವರದಿಯು ಅವೈಜ್ಞಾನಿಕವೆಂದು ಒಪ್ಪಿಕೊಂಡಂತೆ,” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

“ಜಾತಿ ಮತ್ತು ಜನಸಂಖ್ಯಾ ಗಣತಿಯನ್ನು ನಡೆಸುವ ಸಾಂವಿಧಾನಿಕ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಅಲ್ಲ. ಇದು ಕಾಂಗ್ರೆಸ್‌ನ ಹಣವಲ್ಲ, ತೆರಿಗೆದಾರರ ಹಣವಾಗಿದೆ. ಈ ಗಣತಿಯಿಂದ ದಲಿತರಿಗೋ, ಹಿಂದುಳಿದ ವರ್ಗಗಳಿಗೋ ಯಾವುದೇ ಪ್ರಯೋಜನವಾಗಿಲ್ಲ,” ಎಂದು ಸಿ.ಟಿ. ರವಿ ಆರೋಪಿಸಿದರು.

ಹೊರನಾಡು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ ; ರಾಜ್ಯಪಾಲರಿಗೆ ಪತ್ರ
ಓಡಾಡುವ ರಸ್ತೆ ಮಧ್ಯೆ ಗೋಪುರ ನಿರ್ಮಾಣ ಮಾಡಿ, ಸಾರ್ವಜನಿಕ ಓಡಾಟಕ್ಕೆ ಅನಾನುಕೂಲ ಮಾಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ದೇವಸ್ಥಾನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಡಳಿತ ಮಂಡಳಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಇಂದು ಗುರುವಾರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿಯ ಉದ್ಘಾಟನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆಗಮನದ ಹಿನ್ನೆಲೆಯಲ್ಲಿ, ರಾಜ್ಯಪಾಲರಿಗೆ ಬರೆದ ಈ ಪತ್ರ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಈ ಗೋಪುರದ ಉದ್ಘಾಟನೆ ಮಾಡದಂತೆ ಗ್ರಾಮಸ್ಥರು ರಾಜ್ಯಪಾಲರಿಗೆ ಪತ್ರ ಬರೆದಿರುವಾಗ ರಾಜ್ಯಪಾಲರು ಉದ್ಘಾಟನೆ ಮಾಡುವರೇ ಅಥವಾ ಇಲ್ಲವೇ ಎಂಬಂತಾಗಿದೆ.

ಹೊರನಾಡು ರಸ್ತೆಯಲ್ಲಿ, ರಸ್ತೆ ಮಧ್ಯಯೇ ನೂತನವಾಗಿ ನಿರ್ಮಾಣವಾಗಿರುವ ಗೋಪುರದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ದಿ. ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ದಂಪತಿಯ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಇದು ನಮ್ಮ ಜಾಗ ಎಂದು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಹೇಳುತ್ತಿದ್ದರೆ, ದಾಖಲೆಗಳ ಪ್ರಕಾರ ಸರ್ಕಾರಿ ರಸ್ತೆ ಎಂದಿದೆ.

ಇತ್ತ ಇಂದು ನಡೆಯಲಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿರುವುದೂ ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ‌ದಾಖಲು ಮಾಡಿರುವ ಗ್ರಾಮಸ್ಥರು, ನಾವು ಓಡಾಟ ಮಾಡುವುದಾರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರಿಗೆ ಗೋಪುರ ಉದ್ಘಾಟನೆ ಮಾಡದಂತೆ ಸ್ಥಳೀಯರು ಪತ್ರ ಬರೆದಿದ್ದಾರೆ. ಹಾಗಾಗಿ ರಾಜ್ಯಪಾಲರು ಇಂದು ಗೋಪುರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.

ಚಾರಣಕ್ಕೆ ಕುದುರೆಮುಖ ಈಗ ಮುಕ್ತ ? ಬುಕಿಂಗ್‌ ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಚಿಕ್ಕಮಗಳೂರು : ಕುದುವರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್‌, ಕುದುರೆಮುಖ ಪೀಕ್‌, ನರಸಿಂಹಪರ್ವ, ಹಿಡ್ಲುಮನೆ ಫಾಲ್ಸ್‌ ಹಾಗೂ ಕೊಡಚಾದ್ರಿ ಟ್ರೆಕ್‌ಗಳನ್ನು ಮೇ 1 ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ, ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದೆ.

ಪ್ರವಾಸಿಗರು ಆನ್‌ಲೈನ್‌ aranyavihara.karnataka.gov.in ಮೂಲಕ ಕಾಯ್ದಿರಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಪ್ರಕಟಣೆ ತಿಳಿಸಿದೆ. ಅಂದಹಾಗೆ, ಕಾಡ್ಗಿಚ್ಚು, ಬೆಂಕಿಯ ಕಾರಣದಿಂದ ಚಾರಣಿಗರ ಕ್ಷೇಮಕ್ಕಾಗಿ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಚಾರಣವನ್ನು ನಿರ್ಬಂಧಿಸಲಾಗಿತ್ತು.

ಶೃಂಗೇರಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಹೆಸರೇ ಇಲ್ಲ! ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸಂದೇಶವೇನು?
ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ಮೂರೂ ತಾಲ್ಲೂಕುಗಳನ್ನು ಒಳಗೊಂಡಂತಾ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾದ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರನ್ನು ಕೈಬಿಟ್ಟು ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ನೇರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಕಡೆಗೆ ಕಾರ್ಯಕರ್ತರು ಕಿಡಿಕಾರುವಂತಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಮಾತ್ರವಲ್ಲದೆ ಶೃಂಗೇರಿ ಕ್ಷೇತ್ರದ ಕಾರ್ಯಕರ್ತರ ಕಡೆಯಿಂದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದಿದೆ. ತನಗಾಗದ ಎಲ್ಲರನ್ನೂ ಡಾ.ಅಂಶುಮಂತ್ ಕಡೆಗಣಿಸುವ ರೀತಿ ಮತ್ತು ಕ್ಷೇತ್ರದಲ್ಲೇ ಜಿಲ್ಲಾಧ್ಯಕ್ಷರ ಬಗೆಗಿರುವ ಅಸಹನೆ ತೀವ್ರ ಮಟ್ಟದಲ್ಲಿ ಈಗ ಹೊರ ಬಿದ್ದಿದೆ. ಇದೇ ರೀತಿ ಮುಂದುವರೆದರೆ ಪಕ್ಷ ಕಟ್ಟಲು ಶ್ರಮಿಸಿರುವ ನೈಜ ಕಾರ್ಯಕರ್ತರೇ ಪಕ್ಷದಿಂದ ದೂರ ಉಳಿಯುವ ಕಾಲ ಹತ್ತಿರದಲ್ಲೇ ಇದೆ ಎಂಬ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದಾರೆ.

2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿಂದೆ ಸುಧೀರ್ ಕುಮಾರ್ ಮುರೊಳ್ಳಿಯವರ ಶ್ರಮವೇ ಪ್ರಮುಖವಾಗಿ ನಿಲ್ಲುತ್ತದೆಯೇ ಹೊರತು ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಅಲ್ಲ ಎಂದು ಪೀಪಲ್ ಮೀಡಿಯಾ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಜಿಲ್ಲಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ಇದೇ ಏಪ್ರಿಲ್ 23 ರಂದು ಕಾಂಗ್ರೆಸ್ ಪಕ್ಷದ ಕಡೆಯಿಂದ ಆಯೋಜಿಸಲಾದ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ಸ್ಥಳೀಯ ಪ್ರಭಾವಿ ಕಾಂಗ್ರೆಸ್ಸಿಗ ಸುಧೀರ್ ಕುಮಾರ್ ಮುರೋಳ್ಳಿ ಅವರ ಹೆಸರು ಕೈ ಬಿಟ್ಟ ಹಿನ್ನೆಲೆಯಲ್ಲಿ ಈ ಆಕ್ರೋಶ ಭುಗಿಲೆದ್ದಿದೆ. ಈ ಹಿಂದೆಯೂ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಇದೇ ರೀತಿಯ ಅನೇಕ ಯಡವಟ್ಟುಗಳನ್ನು ಮಾಡಿಕೊಂಡು ಬಂದಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅನೇಕ ಸ್ಥಳೀಯ ನಾಯಕರು ಜಿಲ್ಲಾಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದಾರೆ.

ಡಾ. ಅಂಶುಮಂತ್ ನಡೆಯ ಇನ್ನೊಂದು ದೊಡ್ಡ ದುರಂತವೆಂದರೆ ಏಪ್ರಿಲ್ 23 ರಂದು ನಡೆಯಲಿರುವ “ಸರ್ಕಾರದ ನಡೆ, ಕಾರ್ಯಕರ್ತರ ಕಡೆ” ಕಾರ್ಯಕ್ರಮಕ್ಕೆ ಈ ಹಿಂದೆ ಮಾಡಿಸಿದ್ದ ಆಹ್ವಾನ ಪತ್ರಿಕೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರ ಭಾವಚಿತ್ರವೇ ಮರೆಯಾಗಿತ್ತು. ಇದು ಸ್ಪಷ್ಟವಾಗಿ ಕಣ್ತಪ್ಪಿನಿಂದ ಆದ ಪ್ರಮಾದ ಅಲ್ಲವೇ ಅಲ್ಲ ಎಂದು ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆಯೂ ಶಾಸಕ ರಾಜೇಗೌಡರ ಬಗ್ಗೆ ತೀವ್ರ ಅಸಮಾಧಾನ ಇದ್ದ ಹಿನ್ನೆಲೆಯಲ್ಲಿ ಶಾಸಕರು ಆಯೋಜಿಸಿದ್ದ ಬಹುತೇಕ ಕಾರ್ಯಕ್ರಮಕ್ಕೆ ಡಾ.ಅಂಶುಮಂತ್ ಗೈರು ಹಾಜರಾಗಿದ್ದರು. ಏಪ್ರಿಲ್ 23 ರ ಕಾರ್ಯಕ್ರಮಕ್ಕೂ ಇದೇ ರೀತಿಯ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶ ಹೊರಬಿದ್ದ ನಂತರ ಅಂಶುಮಂತ್ ಶೃಂಗೇರಿ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡರ ಹೆಸರು ಮತ್ತು ಭಾವಚಿತ್ರ ಹಾಕಿದ್ದಾರೆ.

ರಾಜ್ಯದ ಯಾವುದೇ ಮೂಲೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಪಕ್ಷದ ಚಿಂತನೆ ಮತ್ತು ವೈಚಾರಿಕ ನಿಲುವಿನ ಯಾವುದೆ ಕಾರ್ಯಕ್ರಮ ಇದ್ದರೆ ತನ್ನ ಸ್ವಂತ ಖರ್ಚಿನಲ್ಲಿ ಅಲ್ಲಿಗೆ ಹೋಗಿ ಭಾಷಣ ಮತ್ತು ವಿಷಯ ಮಂಡನೆ ಮಾಡಿ ಬರುವ ಸುಧೀರ್ ಕುಮಾರ್ ಮುರೋಳ್ಳಿ, ರಾಜ್ಯ ಕೆ.ಪಿ.ಸಿ.ಸಿ ಮಟ್ಟದಲ್ಲಿ ಗುರುತರ ಜವಾಬ್ಧಾರಿ ಹೊಂದಿರುವ ನಾಯಕರು. ಇಂತವರು ತನ್ನ ಸ್ವಂತ ಕ್ಷೇತ್ರದಲ್ಲೇ ಪಕ್ಷದ ಆಹ್ವಾನ ಪತ್ರಿಕೆಯಲ್ಲಿ ಅವರನ್ನು ಹೊರಗಿಟ್ಟದ್ದು ಸ್ಪಷ್ಟವಾಗಿ ಅವರ ಮೇಲಿನ ಅಸೂಯೆಯೇ ಕಾರಣ ಎಂಬ ಬಗ್ಗೆ ಕ್ಷೇತ್ರದಾದ್ಯಂತ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸುಧೀರ್ ಕುಮಾರ್ ಮುರೋಳ್ಳಿಯವರ ಬೆಂಬಲಿಸುವವರನ್ನೂ ಸಹ ಆಹ್ವಾನ ಪತ್ರಿಕೆಯಲ್ಲಿ ಹೆಸರು ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಡಾ.ಅಂಶುಮಂತ್ ಅವರ ಮತ್ತೊಂದು ಯಡವಟ್ಟು ಎಂದರೆ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಅವಿಭಜಿತ ಉಡುಪಿ ಚಿಕ್ಕಮಗಳೂರು ಕ್ಷೇತ್ರದವರೇ ಆದರೂ ಅವರ ಹೆಸರನ್ನೂ ಕೈಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಪಕ್ಕದ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ನಾಯಕ ಮಾಜಿ ಸಚಿವರು ಜೊತೆಗೆ ಚಿಕ್ಕಮಗಳೂರು ಜಿಲ್ಲಾ ಪ್ರಚಾರ ಸಮಿತಿ ಉಸ್ತುವಾರಿಯೂ ಆದ ಕಿಮ್ಮನೆ ರತ್ನಾಕರ್ ಅವರ ಹೆಸರನ್ನೂ ಜಿಲ್ಲಾಧ್ಯಕ್ಷರು ಕೈ ಬಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿನಯ್ ಕುಮಾರ್ ಸೊರಕೆ ಮತ್ತು ಕಿಮ್ಮನೆ ರತ್ನಾಕರ್ ಅವರು ಆಯೋಜಿಸಿದ್ದ ಈ ಹಿಂದಿನ ಹಲವು ಕಾರ್ಯಕ್ರಮಗಳಲ್ಲಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಗೈರಾಗಿದ್ದರು. ಕ್ಷುಲ್ಲಕ ಕಾರಣ ಕೊಟ್ಟು ದೂರ ಇದ್ದರು. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಈ ಎಲ್ಲಾ ನಾಯಕರು ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಆಪ್ತರಾಗಿದ್ದಾರೆ ಎಂಬುದು. ಇದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕ್ಷೇತ್ರದಾದ್ಯಂತ ವ್ಯಕ್ತವಾಗಿದೆ.

ಈ ಅವಧಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲೂ ಸಹ ಡಾ.ಅಂಶುಮಂತ್ ಮೂಗು ತೂರಿಸಿದ್ದು ಜಿಲ್ಲಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳ ಫಲಿತಾಂಶವನ್ನೂ ಜಿಲ್ಲಾಧ್ಯಕ್ಷರು ತಡೆ ಹಿಡಿದಿದ್ದರು. ಜಿಲ್ಲೆಯಾದ್ಯಂತ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಸುಧೀರ್ ಕುಮಾರ್ ಮುರೊಳ್ಳಿಯವರ ಬೆಂಬಲಿಗರೇ ಆಗಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಫಲಿತಾಂಶ ಹೊರಬಿದ್ದರೂ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಶ್ರೀಜಿತ್ ಸೇರಿದಂತೆ ಎಲ್ಲರ ಫಲಿತಾಂಶ ಕೂಡ ತಡವಾಗಿ ಹೊರಬಿದ್ದಿತ್ತು. ಇದಕ್ಕೆ ನೇರ ಕಾರಣ ಡಾ.ಅಂಶುಮಂತ್ ಎಂಬುದು ಕ್ಷೇತ್ರದಾದ್ಯಂತ ಕೇಳಿ ಬಂದ ಆರೋಪವಾಗಿದೆ.

ಒಂದು ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳ ಎಂದರೆ ದೊಡ್ಡ ದಂಡೇ ಇತ್ತು. ಇದನ್ನು ತನ್ನ ಸಂಘಟನಾ ಚತುರತೆಯಲ್ಲಿ ಮಟ್ಟ ಹಾಕಿದ್ದು ಸುಧೀರ್ ಕುಮಾರ್ ಮುರೊಳ್ಳಿಯವರ ತಂತ್ರಗಾರಿಕೆ. ಇಂದಿಗೂ ಸಹ ಕ್ಷೇತ್ರದಲ್ಲಿ ಭಜರಂಗದಳ ಆಗಿನ ಕಾಲದಲ್ಲಿ ಮೆರೆದಂತೆ ಮೆರೆಯಲು ದೊಡ್ಡ ಅಡ್ಡಗಾಲಾಗಿರುವುದು ಸುಧೀರ್ ಕುಮಾರ್ ಮುರೊಳ್ಳಿಯವರು. ಹೀಗಿರುವಾಗ ಸುಧೀರ್ ಅವರನ್ನು ಪಕ್ಷದ ಕಾರ್ಯಕ್ರಮದಿಂದ ದೂರ ಇಟ್ಟಿರುವುದು ಡಾ.ಅಂಶುಮಂತ್ ಅವರ ಸರ್ವಾಧಿಕಾರಿ ನಡೆ ಎಂಬುದು ಕ್ಷೇತ್ರದ ಕಾರ್ಯಕರ್ತರ ದೊಡ್ಡ ಆರೋಪವಾಗಿದೆ.

ಕೆಲವೇ ದಿನಗಳ ಹಿಂದೆ ಬಿಜೆಪಿ ಮಾಜಿ ಶಾಸಕ ಡಿ‌.ಎನ್ ಜೀವರಾಜ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅವರನ್ನು ಹೊಗಳಿ ಮಾತಾಡಿದ್ದರು. ಇದು ಅವರ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಗೆ ಸ್ಪಷ್ಟ ಉದಾಹರಣೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಡಾ.ಅಂಶುಮಂತ್ ಪರೋಕ್ಷವಾಗಿ ಬಿಜೆಪಿ ಜೊತೆಗೂ ಕೈ ಜೋಡಿಸಿರಬಹುದೇ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ನ ಈ ಬೆಳವಣಿಗೆ ನೋಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಎಲ್ಲಾ ರೀತಿಯ ಅನುಕೂಲ ಆಗಲಿದ್ದು, ಡಾ.ಅಂಶುಮಂತ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆದು ಎಚ್ಚರಿಕೆ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಡಾ.ಅಂಶುಮಂತ್ ಕಾಂಗ್ರೆಸ್ಸನ್ನು ಸಂಪೂರ್ಣ ನಿರ್ಣಾಮ ಮಾಡಿಯೇ ನಿರ್ಮಿಸುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ಪಾಳೆಯದಿಂದ ಕೇಳಿ ಬರುತ್ತಿದೆ.

ಮೂವರನ್ನು ಕೊಂದು ತಾನು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು
ಚಿಕ್ಕಮಗಳೂರು : ವ್ಯಕ್ತಿಯೊಬ್ಬ ಅತ್ತೆ, ನಾದಿನಿ ಹಾಗೂ ಮಗಳನ್ನು ಗುಂಡುಹಾರಿಸಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಈಗ ಆರೋಪಿಯ ಕೊನೆಯ ವಿಡಿಯೊ ವೈರಲ್‌ ಆಗಿದೆ.

ರತ್ನಾಕರ್‌ ಎಂಬಾತ ತನ್ನ ಅತ್ತೆ ಜ್ಯೋತಿ, ನಾದಿನಿ ಸಿಂಧೂ ಹಾಗೂ ಮಗಳು ಖುಷಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾಗಿದ್ದ.

ವಿಡಿಯೋದಲ್ಲಿ ಈತ ತನ್ನ ಸಾಂಸಾರಿಕ ಬಾಧೆಯನ್ನು ಹಂಚಿಕೊಂಡಿದ್ದು ಎರಡು ವರ್ಷಗಳ ಹಿಂದೆಯೇ ತನ್ನ ಹೆಂಡತಿ ಬಿಟ್ಟು ಹೋಗಿದ್ದಳು. ಬಳಿಕ ಮಗಳನ್ನೂ ತೊರೆದಿದ್ದಳು. ಮಗಳನ್ನು ನಾನೇ ಸಾಕುತ್ತಿದ್ದೆ. ಮಗಳಿಗೆ ಸ್ಕೂಲಿನಲ್ಲಿ ಎಲ್ಲರೂ ಅಮ್ಮ ಎಲ್ಲಿ ಎಂದು ಕೇಳುತಿದ್ದರು. ನನ್ನ ಮಗಳು ನನಗೆ ತಿಳಿಯದಂತೆ ಮದುವೆ ಆಲ್ಬಂನಿಂದ ಒಂದು ಫೋಟೋ ತೆಗೆದುಕೊಂಡು ಹೋಗಿ ಇವಳೇ ನನ್ನ ಅಮ್ಮ ಎಂದು ತೋರಿಸಿದ್ದಳು ಎಂದಿದ್ದಾನೆ. ಈ ವಿಡಿಯೋದಲ್ಲಿ ತನ್ನ ತಂಗಿ ಹಾಗೂ ಬಾವನನ್ನು ಉದ್ದೇಶಿಸಿ ಮಾಡಿದ್ದೆನ್ನಲಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇಂದು ನಕ್ಸಲ್ ರವೀಂದ್ರ ಇಂದು ಶರಣಾಗತಿ
ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು.

ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರಪ್ಪ ಅರೋಲಿ, ಕೆ.ವಸಂತ (ತಮಿಳುನಾಡು), ಟಿ.ಎನ್.ಜಿಷಾ (ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ.

ರವೀಂದ್ರ ಭೇಟಿಯಾಗಿ ಮಾತುಕತೆ ನಡೆಸಿದ್ದು, ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ಎಸ್ಪಿ ಕಚೇರಿಯಲ್ಲಿ ಶರಣಾಗಲಿದ್ದಾರೆ ಎಂದು ನಕ್ಸಲ್ ಶರಣಾಗತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ಮತ್ತು ಕೆ.ಎಲ್.ಅಶೋಕ್ ‘ಪ್ರಜಾವಾಣಿ’ಗೆ ತಿಳಿಸಿದರು.