ಹಾಸನ – Peepal Media

ಆರೆಸ್ಸೆಸ್‌ ವಿರುದ್ಧದ ಅಕ್ರಮ ಕ್ರಮ ಕಾಂಗ್ರೆಸ್‌ಗೆ ಮುಳುಗು ನೀರಾಗಲಿದೆ: ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ
ಹೊಳೇನರಸೀಪುರ (ಹಾಸನ): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಅಕ್ರಮ ಕ್ರಮಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಒಂದು ಶತಮಾನದ ಸಂಘಟನೆಯಾಗಿದ್ದು, ಅದನ್ನು ದಮನ ಮಾಡುವ ಕೆಲಸ ಬಹಳ ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಹೇಳಿದರು.

ವಿಪಕ್ಷ ನಾಯಕರ ಭದ್ರತೆ ಹಿಂಪಡೆದ ಬಗ್ಗೆ ಟೀಕೆ:

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಸರ್ಕಾರ ಭದ್ರತೆಯನ್ನು ಹಿಂಪಡೆದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ವಿರೋಧ ಪಕ್ಷಗಳ ಮುಖಂಡರನ್ನು ದಮನಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ನಡೆಸುತ್ತಾ ಬಂದಿದೆ. ಕೊನೆಗೆ, ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ದಮನ ಆಗಲಿದೆ,” ಎಂದು ಭವಿಷ್ಯ ನುಡಿದರು.

ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅಸಹಕಾರ:

ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಕೇಂದ್ರ ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಎಚ್‌ಡಿಕೆ ಆರೋಪಿಸಿದರು. “ಕಳೆದ ಒಂದೂವರೆ ವರ್ಷದಿಂದ ಸಹಕಾರ ದೊರೆತ್ತಿದ್ದರೆ, ಇಂದು ದೇಶದಲ್ಲಿ ಕರ್ನಾಟಕವೇ ಉತ್ತಮ ಸ್ಥಾನದಲ್ಲಿ ಇರುತ್ತಿತ್ತು. ರಾಜ್ಯದಲ್ಲಿ ಅನೇಕ ಕೈಗಾರಿಕೆಗಳನ್ನು ತರಲು ಆಶಿಸಿದ್ದೆ. ಆದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈಗಾರಿಕೆ ಆರಂಭಿಸಲು ಭೂಮಿ ನೀಡದಿರುವುದರಿಂದ ತೊಡಕು ಉಂಟಾಗಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ದಮನ ಮತ್ತು ಅಸಹಕಾರದ ಆರೋಪಗಳು ರಾಜ್ಯದ ಅಭಿವೃದ್ಧಿ ಮತ್ತು ರಾಜಕೀಯ ಸಮತೋಲನದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ನೀವು ಭಾವಿಸುತ್ತೀರಿ?

ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸ ಗೋಪಾಲಸ್ವಾಮಿ ಅವರಿಂದ ಆಗಲಿ: ಕೆ.ವಿ.ಪ್ರಭಾಕರ್ ಕರೆ
ಹಾಸನ ಅ 5: ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಬಂದು ಎಲ್ಲರ ಹೃದಯಗಳನ್ನೂ ಗೆಲ್ಲುವ ಶಕ್ತಿ ಇರುವ ಗೋಪಾಲಸ್ವಾಮಿ ಅವರು ಹಾಸನ‌ ಜಿಲ್ಲಾ ರಾಜಕಾರಣದ ಘನತೆಯನ್ನು ಮರುಸ್ಥಾಪಿಸುವ ಕೆಲಸವನ್ನೂ ಮಾಡಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯ ಪಟ್ಟರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ಕ್ರೀಡಾ ಪಟುವಿಗೆ ಇರಬೇಕಾದ ಕ್ರೀಡಾ ಮನೋಭಾವ ಮತ್ತು ಬದ್ಧತೆ ಎರಡೂ ಗೋಪಾಲಸ್ವಾಮಿ ಅವರಿಗಿದೆ. ಪ್ರತಿಯೊಬ್ಬರನ್ನೂ ಅತ್ಯಂತ ಆತ್ಮೀಯವಾಗಿ ನಡೆಸಿಕೊಳ್ಳುವ ಸಜ್ಜನಿಕೆಯೇ ಗೋಪಾಲಸ್ವಾಮಿ ಅವರ ವ್ಯಕ್ತಿತ್ವದ ಶಕ್ತಿ ಎಂದರು.

ತಾವು ಪ್ರತಿನಿಧಿಸುವ ಕ್ಷೇತ್ರದ ಜನರ ಮತ್ತು ಸಮಾಜದ ಘನತೆಯನ್ನು ಹೆಚ್ಚಿಸುವುದು ಉತ್ತಮ ರಾಜಕಾರಣಿಯ ಲಕ್ಷಣ. ಈ ಲಕ್ಷಣಗಳು ಗೋಪಾಲಸ್ವಾಮಿ ಅವರಲ್ಲಿವೆ. ಹೀಗಾಗಿ ಹಾಸನ ಜಿಲ್ಲಾ ರಾಜಕಾರಣದ ಘನತೆಯನ್ನು ಮರು ಸ್ಥಾಪಿಸುವುದು ಹಾಗೂ ಹಾಸನ ಜಿಲ್ಲೆಯ ರಾಜಕಾರಣದ ಇತಿಹಾಸ ಮತ್ತು ವರ್ತಮಾನಕ್ಕೆ ಅಂಟಿರುವ ಕಳಂಕವನ್ನು ಅಳಿಸಿ ಹಾಸನದ ಜನತೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಶಕ್ತಿ ಗೋಪಾಲಸ್ವಾಮಿ ಅವರುಗಿದೆ. ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ನಾನೇ ಎಂದು ಎದೆ ಎತ್ತಿ ನಿಂತ ಹೆಮ್ಮರಗಳೆಲ್ಲಾ ಜೋರು ಮಳೆಗೆ ನೆಲಕ್ಕೆ ಬೀಳುತ್ತವೆ. ಆದರೆ ಗರಿಕೆ ಹುಲ್ಲನ್ನು ಯಾವ ಮಳೆ, ಬಿರುಗಾಳಿಯೂ ಉರುಳಿಸಲು ಸಾಧ್ಯವಿಲ್ಲ. ರಾಜಕಾರಣದಲ್ಲೂ ಅಷ್ಟೆ. ಗೋಪಾಲಸ್ವಾಮಿ ಅವರು ಗರಿಕೆ ಹುಲ್ಲಿನಷ್ಟೇ ಸರಳ ಮತ್ತು ಸಜ್ಜನಿಕೆಯನ್ನು ರೂಢಿಸಿಕೊಂಡಿದ್ದಾರೆ ಎಂದರು.

ಪಕ್ಷ ನಿಷ್ಠೆ ಮತ್ತು ಜನ‌ನಿಷ್ಠೆಯನ್ನು ಪಾಲಿಸುವ ಗೋಪಾಲಸ್ವಾಮಿ ಅವರು ಗೆದ್ದೆತ್ತಿನ ಬಾಲ ಹಿಡಿದು ಹೋಗುವವರಲ್ಲ. ಕಾರ್ಮಿಕ ಮುಖಂಡರಾಗಿ ರಾಜಕಾರಣಕ್ಕೆ ಪ್ರವೇಶ ಪಡೆದವರು. ಅತ್ಯಂತ ಸಾಮಾನ್ಯ ಶ್ರಮಿಕ ಕುಟುಂಬದಿಂದ ಬಂದು ಶ್ರವಣಬೆಳಗೊಳದ ಜನತೆಯ ಹೃದಯ ಗೆದ್ದಿದ್ದಾರೆ ಎಂದರು.

ಜೆಡಿಎಸ್ ನ ಭದ್ರ ಕೋಟೆಯಲ್ಲಿ ವಿಧಾನ ಪರಿಷತ್ ಗೆ ಗೆದ್ದು ಬಂದರು. ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡೂವರೆ ಸಾವಿರ ಹಚ್ವುವರಿ ಮತ ಬಿದ್ದಿದ್ದರೆ ಗೆದ್ದು ಬರುತ್ತಿದ್ದರು. ಹೀಗಾಗಿ ಶ್ರವಣ ಬೆಳಗೊಳದ ಜನತೆ ಗೋಪಾಲಸ್ವಾಮಿ ಅವರ ಕೈ ಬಿಡಲಿಲ್ಲ. ಜೊತೆಯಲ್ಲಿದ್ದ ಕೆಲವರ ಆಟದಿಂದ ಗೋಪಾಲಸ್ವಾಮಿ ಸೋತರು ಎಂದು ವಿವರಿಸಿದರು.

ಗೋಪಾಲಸ್ವಾಮಿ ಅವರು ತಮ್ಮ ಹುಟ್ಟು ಹಬ್ಬಕ್ಕೆ ಯಾವುದೋ ರೆಸಾರ್ಟ್ ನಲ್ಲಿ ಪಾರ್ಟಿ ಮಾಡಿ ಆಚರಿಸಿಕೊಳ್ಳುವ ಬದಲಿಗೆ ಕಬ್ಬಡಿ ಪಂದ್ಯಾವಳಿ ಆಯೋಜಿಸಿರುವುದೇ ಇವರ ಕಾಳಜಿಗಳನ್ನು ಹೇಳುತ್ತದೆ.

ಆಸ್ಪತ್ರೆಗಳು ಮತ್ತು ಬಾರ್ ಗಳು ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲ. ಕ್ರೀಡಾಂಗಣಗಳು, ಮೈದಾನಗಳು ಆರೋಗ್ಯವಂತ ಮತ್ತು ಸದೃಡ ಸಮಾಜದ ಲಕ್ಷಣ ಎಂದರು.

ಸಿಐಟಿಯು 16ನೇ ಕರ್ನಾಟಕ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಹಾಸನ : ದೇಶಾದ್ಯಂತ ಕಾರ್ಮಿಕರ ಹಕ್ಕುಗಳಿಗಾಗಿ, ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂಘಟನೆ ಸಿಐಟಿಯುವಿನ 16 ನೇ ಕರ್ನಾಟಕ ರಾಜ್ಯ ಸಮ್ಮೇಳನ 2025 ನವೆಂಬರ್ 13-15 ವರೆಗೆ ಮೂರು ದಿನಗಳ ಕಾಲ ಹಾಸನದಲ್ಲಿ ನಡೆಯಲಿದ್ದು, ಈ ಸಂಬಂಧ ಸಮ್ಮೇಳನದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರು ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಧರ್ಮೇಶ್‌, ಇಂದು ಕಾರ್ಮಿಕ ವರ್ಗದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಅದರಲ್ಲೂ ಅಸಂಘಟಿತ ಕಾರ್ಮಿಕರು ಸರಿಯಾದ ಕನಿಷ್ಠ ಕೂಲಿಯಿಲ್ಲದೆ ಬದುಕನ್ನ ನಡೆಸಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ನೀತಿಗಳ ಕುರಿತು ಚರ್ಚಿಸಿ ಮುಂದಿನ ಹೋರಾಟಗಳ ದಿಕ್ಕನ್ನು ರೂಪಿಸಲು ಹಾಸನದಲ್ಲಿ ಮೂರು ದಿನಗಳ ಕಾಲ ಕಾರ್ಮಿಕರ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಎಲ್ಲಾ ಕಾರ್ಮಿಕ ವಿಭಾಗಗಳಿಂದ ಆಯ್ದ 500 ಕ್ಕೂ ಹೆಚ್ಚು ಪ್ರತಿನಿಧಿಗಳಾಗಿ ಕಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ರಾಜ್ಯದ ಕಾರ್ಮಿಕ ವರ್ಗಕ್ಕೆ ಬಹಳ ಮಹತ್ತರವಾದದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಚ್.ಎನ್. ಪರಮಶಿವಯ್ಯ ಮಾತನಾಡುತ್ತ, ಹಾಸನ ಜಿಲ್ಲೆಯಲ್ಲಿ ಸಿಐಟಿಯು ಎಲ್ಲಾ ವಿಭಾಗದ ಜನರ ಕಷ್ಟಗಳಗೂ ಸ್ಪಂದಿಸುತ್ತಿದೆ, ಮಾತ್ರವಲ್ಲ ಹಲವು ನಿರ್ಣಾಯಕ ಹೋರಾಟಗಳನ್ನು ರೂಪಿಸಿ ಜಯಗಳಿಸುವುದರ ಮೂಲಕ ಜನತೆಗೆ ನ್ಯಾಯ ಒದಗಿಸಿದೆ. ಇಂತಹ ಸಂಘಟನೆಯ ಮಹತ್ತರವಾದ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಹಾಸನ ಜಿಲ್ಲೆಯ ಎಲ್ಲಾ ನಾಗರೀಕರ ಕರ್ತವ್ಯ, ಜಿಲ್ಲೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ಕಳುಹಿಸಲು ಬೇಕಾದ ಸಕಲ ಸಿದ್ದತೆಗೆ ಜಿಲ್ಲೆಯ ಜನತೆ ಉದಾರವಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಜಿಲ್ಲೆಯಲ್ಲಿರುವ ದೊಡ್ಡ ಸಂಖ್ಯೆಯ ರೈತ ಕಾರ್ಮಿಕರು ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕಿದೆ. ಆ ಮೂಲಕ ರಾಜ್ಯದ ಕಾರ್ಮಿಕ ಚಳುವಳಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶಮೂರ್ತಿ, ಸ್ವಾಗತ ಸಮಿತಿ ಖಜಾಂಚಿ ಜಿ.ಪಿ.ಸತ್ಯನಾರಾಯಣ, ಹಿರಿಯ ದಲಿತ ನಾಯಕರಾದ ಹುಲಿಕಲ್ ರಾಜಶೇಖರ್, ಸಂವಿಧಾನ ಓದು ಬಳಗದ ರಾಜ್ಯ ನಾಯಕರಾದ ರಾಜು ಗೊರೂರು, ಹಿರಿಯ ಮಾನವ ಹಕ್ಕುಗಳ ಹೋರಾಟಗಾರರಾದ ಇರ್ಷಾದ್ ಅಹಮದ್ ದೇಸಾಯಿ, ಮಾದಿಗ ದಂಡೋರ (ಎಂಆರ್‌ಎಚ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಕ.ರಾ.ದ.ಸಂ.ಸ.(ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕರಾದ ಈರೇಶ್ ಹಿರೇಹಳ್ಳಿ, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಎಲ್‌ಐಸಿ ನಿವೃತ್ತ ನೌಕರರ ಸಂಘದ ಮಂಜುನಾಥ್, ಬಿಜಿವಿಎಸ್-ಸಮತಾ ನಾಯಕಿ ಮಮತಾ ಶಿವು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್‌ಕುಮಾರ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ. ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ವಾಸುದೇವ ಕಲ್ಕೆರೆ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇನ್ನೂ ಮುಂತಾದವರು ಸಭೆಯಲ್ಲಿ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು. ಸಮ್ಮೇಳನದ ಕೆಲಸಗಳಿಗಾಗಿ ಹಣಕಾಸು, ವಸತಿ, ಆಹಾರ, ಪ್ರಚಾರ, ಸಾಂಸ್ಕೃತಿಕ, ಆರೋಗ್ಯ ಸೇರಿದಂತೆ ಹಲವು ಉಪಸಮಿತಿಗಳನ್ನು ರಚಿಸಲಾಯಿತು.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಗರಣ ಆರೋಪಿ ಎಂ.ಕೆ. ರಾಜೇಶ್ ಬಂಧನ
ಹಾಸನ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂ.ಕೆ. ರಾಜೇಶ್ ಅವರನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಈ ಹಗರಣದ ಸೂತ್ರಧಾರ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ರಾಜೇಶ್, ವಿವಿಧ ಸ್ಥಳಗಳಲ್ಲಿ ಅಡಗಿ ಪೊಲೀಸರು ಕಣ್ತುಂಬಿಸದಂತೆ ತಿರುಗಾಡುತ್ತಿದ್ದ. ಅರಸೀಕೆರೆಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಹಗರಣ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಗಿನ್‌ಗಳನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ಸರ್ಕಾರದ ಅನುದಾನವನ್ನು ಅಕ್ರಮವಾಗಿ ವಸೂಲಿ ಮಾಡಿರುವ ಆರೋಪ ರಾಜೇಶ್ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಇನ್ನೂ ಹೆಚ್ಚಿನ ಆರೋಪಿಗಳ ಪತ್ತೆ ಹಾಗೂ ಹಣದ ಹಾದಿ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಶೂದ್ರ ಶ್ರೀನಿವಾಸ್, ಜನ್ನಿಗೆ ಡಾ. ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿ ಶ್ರವಣಬೆಳಗೊಳದಲ್ಲಿ ಪ್ರಶಸ್ತಿ ಪ್ರದಾನ
ಚನ್ನರಾಯಪಟ್ಟಣ : ತಾಲ್ಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ 2024ನೇ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್(ಜನ್ನಿ) ಮತ್ತು 2025ನೇ ಸಾಲಿಗೆ ಶೂದ್ರ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶ್ರವಣಬೆಳಗೊಳದ ಚಾವುಂಡರಾಯ ಸಭಾಂಗಣದಲ್ಲಿ ಸೆ.18 ರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ದಿವ್ಯ ಸಾನ್ನಿಧ್ಯ ವಹಿಸುವರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ವಹಿಸಲಿದ್ದು, ಡಾ.ಸಿದ್ದಲಿಂಗಯ್ಯ ಅವರ ಶ್ರೀಮತಿ ರಮಾಕುಮಾರಿ, ಮಗಳು ಡಾ.ಮಾನಸ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹಾಜರಿರುವರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಈ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವಂತೆ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರನ್ನು ಶುಕ್ರವಾರ ಕೇಂದ್ರ ಹಾಗೂ ಜಿಲ್ಲಾ ಕಸಾಪ ವತಿಯಿಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಆಹ್ವಾನಿಸಲಾಯಿತು. ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಎಚ್.ಬಿ.ಮದನಗೌಡ, ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಶ್ರವಣಬೆಳಗೊಳ ಕಸಾಪ ಮಾಜಿ ಅಧ್ಯಕ್ಷ ಡಾ. ಬಿ.ಆರ್. ಯುವರಾಜ್, ಅಧ್ಯಕ್ಷ ನಾಗೇಂದ್ರ ರಾಯ ಮೊದಲಾದವರಿದ್ದರು.

2024 ಹಾಗೂ 25ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ:

ಎಚ್.ಜನಾರ್ಧನ (ಜನ್ನಿ): 2024ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಎಚ್.ಜನಾರ್ಧನ (ಜನ್ನಿ) ಅವರು ಸುಮಾರು ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡವರು. ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಅವರು ಬೀದಿ ನಾಟಕ ಚಳುವಳಿಯಲ್ಲಿ, ಕಾವ್ಯರಂಗ ಪ್ರಯೋಗದಲ್ಲಿ ತಮ್ಮ ವಿಶಿಷ್ಟತೆ ಮರೆದಿದ್ದಾರೆ. ಬರ ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರವನ್ನು ಪ್ರವೇಶ ಮಾಡಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜನಮನದ ಜನ್ನಿ ಎಂದೇ ಹೆಸರಾಗಿರುವ ಇವರು ಸಿದ್ದಲಿಂಗಯ್ಯ ಅವರ ಕವಿತೆಗಳನ್ನು ಗಾಯನದ ಮೂಲಕ ಜನಮನಕ್ಕೆ ತಲುಪಿಸಿದ ಸಾಧನೆಯನ್ನು ಗಮನಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಶೂದ್ರ ಶ್ರೀನಿವಾಸ್: 2025ನೇ ಸಾಲಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಶೂದ್ರ ಶ್ರೀನಿವಾಸ್ ಶೂದ್ರ ಸಾಹಿತ್ಯ ಪತ್ರಿಕೆ ಮೂಲಕ ಜನಪ್ರಿಯರಾದವರು. ಸಂವೇದನಾಶೀಲ ಬರಹಗಾರರಾದ ಅವರು ನಿರಂತರ ಹೋರಾಟಗಾರರು. ಶೂದ್ರ, ಸಲ್ಲಾಪ, ನೆಲದ ಮಾತು ಪತ್ರಿಕೆಗಳನ್ನು ಪ್ರಕಟಿಸಿದ ಹೆಗ್ಗಳಿಕೆಯ ಅವರು ಕರ್ನಾಟಕದ ಪ್ರಮುಖ ಚಳುವಳಿಗಳ ಜೊತೆಗೆ ಸದಾ ಇದ್ದವರು. ಮಾನವ ಸಂಬಂದಗಳ ವೃದ್ಧಿಗಾಗಿ ಬೋಧಿವೃಕ್ಷ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಹಲವು ಪ್ರಮುಖ ಕಾರ್ಯಕ್ರಮ ನಡೆಸಿದರು. ಲಂಕೇಶ್ ಪತ್ರಿಕೆ ಅಂಕಣಕಾರರಾಗಿ ಹೆಸರು ಮಾಡಿರುವ ಅವರು ಡಾ.ಸಿದ್ದಲಿಂಗಯ್ಯ ಅವರ ಮೊದಲ ಕೃತಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಹಾಸನದ ಮೈಕ್ರೋ ಫೈನಾನ್ಸ್ ದೌರ್ಜನ್ಯ – ಮನೆ ಬೀಗ ಒಡೆದು ಕುಟುಂಬಕ್ಕೆ ನೆರವಾದ ರೈತ ಸಂಘ
ಹಾಸನ : ಬೇಲೂರು ತಾಲ್ಲೂಕು ಬೊಮ್ಮನಹಳ್ಳಿಯಲ್ಲಿ ಸಾಲ ಪಾವತಿ ಮಾಡದ ಹಿನ್ನೆಲೆಯಲ್ಲಿ ಜನ ಸ್ಮಾಲ್ ಫೈನಾನ್ಸ್ ಸಂಸ್ಥೆಯವರು ಸೀಝ್ ಮಾಡಿದ್ದ ಮನೆ ಬೀಗವನ್ನು ರೈತ ಸಂಘದ ನಾಯಕರು ಒಡೆದು, ಮನೆಮಾಲೀಕರಿಗೆ ಪ್ರವೇಶ ಕಲ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಬೊಮ್ಮನಹಳ್ಳಿಯ ರೈತ ಪಾಲಾಕ್ಷ ಅವರು ಹಾಸನದ ಜನ ಸ್ಮಾಲ್ ಫೈನಾನ್ಸ್‌ನಿಂದ ಎರಡು ವರ್ಷಗಳ ಹಿಂದೆ ೫ ಲಕ್ಷ ರೂ. ಸಾಲ ಪಡೆದಿದ್ದರು. ಇದುವರೆಗೆ ೧ ಲಕ್ಷ ೮೭ ಸಾವಿರ ರೂ. ತೀರಿಸಿದ್ದರೂ, ತಂದೆಯ ಅನಾರೋಗ್ಯ ಕಾರಣದಿಂದ ಕಳೆದ ಕೆಲವು ತಿಂಗಳಿಂದ ಕಂತು ಬಾಕಿ ಉಳಿದಿತ್ತು. ಇದರಿಂದಾಗಿ ಸಂಸ್ಥೆಯವರು ಕಳೆದ ಒಂದುವರೆ ತಿಂಗಳ ಹಿಂದೆ ಪೊಲೀಸ್ ಭದ್ರತೆಯೊಂದಿಗೆ ಬಂದು ಮನೆಗೆ ಬೀಗ ಹಾಕಿ ಸೀಲ್ ಮಾಡಿದರು. ಮನೆಯಲ್ಲಿ ಅನಾರೋಗ್ಯ ಪೀಡಿತರು, ವೃದ್ಧೆ ಹಾಗೂ ಬಾಣಂತಿ ಮಗು ಇದ್ದರೂ ಸಹಾನುಭೂತಿ ತೋರದೆ ಹೊರ ಹಾಕಲಾಗಿದೆ ಎಂದು ಕುಟುಂಬ ದೂರಿದೆ. ಅಲ್ಲದೆ ಜಾನುವಾರು ಕಟ್ಟುವ ಕೊಟ್ಟಿಗೆಯನ್ನೂ ಸೀಝ್ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಮನೆಯಿಂದ ಹೊರ ಹಾಕಲ್ಪಟ್ಟ ಕುಟುಂಬವು ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಆಶ್ರಯ ಪಡೆಯಬೇಕಾದ ದುಸ್ಥಿತಿ ಎದುರಿಸಿತು. ಇದರಿಂದ ಬೇಸತ್ತು ಕುಟುಂಬ ರೈತ ಸಂಘದ ನೆರವಿಗಾಗಿ ಮೊರೆಹೋದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಅವರ ನೇತೃತ್ವದಲ್ಲಿ ರೈತರು ಬೊಮ್ಮನಹಳ್ಳಿಗೆ ಆಗಮಿಸಿ ಮನೆಗೆ ಹಾಕಿದ್ದ ಬೀಗವನ್ನು ಒಡೆದು ಕುಟುಂಬವನ್ನು ಒಳಗೆ ಕಳುಹಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಕಣಗಾಲ್ ಮೂರ್ತಿ, ಬೊಮ್ಮನಹಳ್ಳಿಯ ರೈತ “ಪಾಲಾಕ್ಷ ಅವರು ೫ ಲಕ್ಷ ಸಾಲ ಪಡೆದಿದ್ದರೂ ಈಗಾಗಲೇ ಒಂದು ಭಾಗ ಹಣ ತೀರಿಸಿದ್ದಾರೆ. ಆದರೆ ಫೈನಾನ್ಸ್ ಸಂಸ್ಥೆ ಆರು ಲಕ್ಷ ರೂ. ಬಾಕಿ ಇದೆ ಎಂದು ಒತ್ತಾಯಿಸಿ, ಬಾಣಂತಿ ಮಗು, ಚಿಕ್ಕ ಮಕ್ಕಳು, ವಯೋವೃದ್ಧರನ್ನು ಗಮನಿಸದೆ ಹೊರಗೆ ಹಾಕಿದೆ. ಕೊಟ್ಟಿಗೆಗೂ ಬೀಗ ಹಾಕಲಾಗಿದೆ. ಕುಟುಂಬವು ಗುಡಿಸಿಲಿನಲ್ಲಿ ವಾಸಿಸುವಂತ ಪರಿಸ್ಥಿತಿ ಬಂದಿತ್ತು. ನಾವು ಸ್ಥಳಕ್ಕೆ ಭೇಟಿ ನೀಡಿ ಬೇಸರಗೊಂಡು ಬೀಗ ಒಡೆಯುವಂತಾಯಿತು” ಎಂದು ಹೇಳಿದರು.“ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಹೆಚ್ಚುತ್ತಿದೆ. ಹಲವೆಡೆ ಮನೆಗಳಿಗೆ ಬೀಗ ಹಾಕಿರುವ ಮಾಹಿತಿ ನಮಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ಹೋರಾಟ ಆರಂಭಿಸುತ್ತೇವೆ. ಜಿಲ್ಲಾಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದೇವೆ. ರೈತರ ತೊಂದರೆ ಸಹಿಸಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ಮಾಧ್ಯಮದೊಂದಿಗೆ ಮಾತನಾಡಿದ ರೈತ ಪಾಲಾಕ್ಷ, “ಎರಡು ತಿಂಗಳಿಂದ ಕಂತು ಕಟ್ಟಿರಲಿಲ್ಲ. ಫೈನಾನ್ಸ್ ಸಂಸ್ಥೆ ಎರಡು ನೋಟಿಸ್ ಕೊಟ್ಟಿದ್ದೇವೆ ಎಂದರೂ ನಮಗೆ ಯಾವುದೇ ನೋಟಿಸ್ ತಲುಪಿಲ್ಲ. ಮೊಬೈಲ್ ಮೂಲಕವೇ ನೋಟಿಸ್ ಕಳುಹಿಸಿದ್ದಾರೆ. ನಾನು ಮನೆಯಲ್ಲಿ ಇಲ್ಲದ ಸಮಯವನ್ನು ನೋಡಿ ಪೊಲೀಸರು ಕರೆದುಕೊಂಡು ಬಂದು ಮನೆಗೆ ಬೀಗ ಹಾಕಿದ್ದಾರೆ. ಲೋನ್ ಮಾಡಿಸದ ಕೊಟ್ಟಿಗೆಯಿಗೂ ಬೀಗ ಹಾಕಿದ್ದಾರೆ. ರೈತ ಸಂಘದ ಸಹಕಾರದಿಂದ ಮತ್ತೆ ಮನೆಯೊಳಗೆ ಹೋಗಲು ಸಾಧ್ಯವಾಗಿದೆ” ಎಂದು ಹೇಳಿದರು.

ಪರಿಸರ ಸ್ನೇಹಿ ಗಣೇಶ ಮೂರ್ತಿ ವ್ಯಾಪಾರಕ್ಕಿಲ್ಲ ಬೇಡಿಕೆ
ಪಿಓಪಿ ಗಣೇಶ ಮೂರ್ತಿ ವ್ಯಾಪಾರ ನಿಲ್ಲಿಸದಿದ್ರೆ ನಾವು!

ಹಾಸನ : ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಅಷ್ಟೊಂದು ಬೇಡಿಕೆ ಇಲ್ಲ. ಆದರೇ ಶೈನಿಂಗ್ ಇರುವ ಗಣಪತಿ ಮೂರ್ತಿ ವ್ಯಾಪಾರಕ್ಕೆ ಜನರು ಮುಗಿ ಬಿದ್ದಿದ್ದು, ಕೂಡಲೇ ಪಿಓಪಿ ಗಣಪತಿ ಮೂರ್ತಿ ಮಾರಾಟ ಮಾಡುವುದ ನಿಲ್ಲಿಸದಿದ್ದರೇ ನಾವು ಕೂಡ ಪಿಓಪಿ ಗಣೇಶ ಮೂರ್ತಿ ತಂದು ಮಾರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗಣೇಶ ಮೂರ್ತಿ ವ್ಯಾಪಾರಸ್ತ ಮನೋಜ್ ಮಾತನಾಡಿ, ಪ್ರತಿವರ್ಷ ಗಣೇಶನ ಮೂರ್ತಿ ವ್ಯಾಪಾರವನ್ನು ಹಾಸನ ನಗರದ ಮಹಾವೀರ ವೃತ್ತ ಸೇರಿದಂತೆ ವಿವಿಧ ಭಾಗಗಳಲ್ಲಿ ವ್ಯಾಪಾರ ಮಾಡಲಾಗುತ್ತಿದ್ದು, ಪರಿಸರ ಗಣಪತಿ ಎಂದು ಮಣ್ಣಿನಲ್ಲಿ ಮಾಡಿದರೇ ಖರೀದಿ ಮಾಡಲು ಅಷ್ಟೊಂದು ಗ್ರಾಹಕರೇ ಬರುತ್ತಿಲ್ಲ. ಎಲ್ಲಾರು ಶೈನಿಂಗ್ ಇರುವ ಪಿಓಪಿ ಗಣಪತಿಯತ್ತ ಹೋಗುತ್ತಿದ್ದಾರೆ. ಇನ್ನು ಪೇಪರ್ ಗಣೇಶ ಎಂಬುದು ಬಂದಿದ್ದು, ಆದರೇ ಅದು ಪೇಪರ್ ಗಣಪತಿಯಲ್ಲ ಕೆಮಿಕಲ್ ಮಿಶ್ರಿತವಾಗಿದ್ದು, ಬೇಕಾದೆರೇ ಪರೀಕ್ಷೆ ಮಾಡಲು ಲ್ಯಾಬ್ ಗೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದರು. ಈ ಸಮಸ್ಯೆಯಿಂದಲೇ ಪೇಪರ್ ಗಣೇಶ ಎಂದು 10 15ಅಡಿ ಗಣೇಶನ ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದಾರೆ. ಇದನ್ನು ಪರೀಕ್ಷೆ ಮಾಡಲು ಯಾರು ಸುಳಿಯುತ್ತಿಲ್ಲ. ನಾವು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮಾಡಿ ವ್ಯಾಪಾರ ಮಾಡಿದರೇ ಅನೇಕ ಬಾರಿ ಬಂದು ಪರೀಕ್ಷೆ ಮಾಡುತ್ತಿದ್ದಾರೆ. ಪೇಪರ್ ಅಲ್ಲ. ಹಾಸನದಲ್ಲಿ ಇಡುವ ಗಣಪತಿ ಬಹುತೇಕ ಪಿಓಪಿ ಗಣಪತಿಯೇ ಇದ್ದರೂ ಇದುವರೆಗೂ ಯಾರು ಕ್ರಮಕೈಗೊಂಡಿರುವುದಿಲ್ಲ ಎಂದುರು.. ಈ ಗಣಪತಿ ವಾಪಸ್ ಕೊಂಡೂಯ್ಯಲು ಹುಡುಗರಿಗೆ ಬಾಡಿಗೆ ಕೊಡಬೇಕು. ಮಳಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಇರುವ ಗಣಪತಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಪರಿಸರ ಸ್ನೇಹಿ ಗಣೇಶನಿಗೆ ಯಾರು ಬೆಲೆ ಕೊಡುತ್ತಿಲ್ಲ. ಕೇಳುವವರೆ ಯಾರು ಇಲ್ಲ. ಕಳೆದ 25ವರ್ಷಗಳಿಂದಲೂ ಈ ಗಣಪತಿ ನಿರ್ಮಿಸಿ ವ್ಯಾಪಾರ ಮಾಡುವ ನಾವು ಈ ವರ್ಷ ಅತೀ ನಷ್ಟದಲ್ಲಿ ಸಿಲುಕಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.

ಶಾಸಕ ಶಿವಲಿಂಗೇಗೌಡರಿಂದ ಹಿಂದುಳಿದ ಜಾತಿಗಳಿಗೆ ಅವಮಾನ ಪ್ರತಿಭಟನೆ ಎಚ್ಚರಿಕೆ – ಜವರಪ್ಪ
ಹಾಸನ : ಹಿಂದುಳಿದ ಸಮುದಾಯಗಳಿಗೆ ಸರಕಾರದ ಸೌಲಭ್ಯಗಳನ್ನು ಅಹಿಂದ ನಾಯಕರಾದ ಸಿದ್ದರಾಮಯ್ಯ ಒತ್ತು ಕೊಡುತ್ತಿರುವುದನ್ನ ಸಹಿಸಿಕೊಳ್ಳದ ಶಾಸಕ ಶಿವಲಿಂಗೇಗೌಡರು ವಿಧಾನಸೌದ ಸಭೆಯಲ್ಲಿ ತಮ್ಮ ನಾಲಿಗೆ ಹರಿಬಿಟ್ಟು ಆ ಸೌಲಭ್ಯ ನಮಗೂ ಕೊಡಿ ಎಂದು ಸರಕಾರವನ್ನು ಟೀಕಿಸಿ ಹಿಂದುಳಿದ ಜಾತಿಗಳಿಗೆ ಅವಮಾನ ಮಾಡಲಾಗಿದೆ ಎಂದು ಯಾದವ ಸಮಾಜದ ಮುಖಂಡರು ಹಾಗೂ ಅರಸೀಕೆರೆ ತಾಲೂಕು ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಜವರಪ್ಪ ಆಕ್ರೋಶವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅಧಿವೇಶನದಲ್ಲಿ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಾನು ಕುರಿಗಾಹಿ ಕುಟುಂಬದಲ್ಲಿ ಹುಟ್ಟಿದ್ದೇನೆ. ನಮಗೂ ಹಕ್ಕುಗಳನ್ನು ನೀಡಿ ಎಂದು ಹೇಳುವ ಮೂಲಕ ನಮ್ಮ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ಹೂನ್ನಾರ ನಡೆಸಿದ್ದಾರೆ. ಅಧಿವೇಶನದ ವೇಳೆ ಕುರಿಗಾಹಿಗಳಿಗೆ ಭದ್ರತೆ ಹಾಗೂ ಇನ್ನಷ್ಟು ಹಕ್ಕುಗಳನ್ನು ಒದಗಿಸುವ ಸಲುವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿವನಂಗೆ ಗೌಡರು ಈ ಮಾತನ್ನು ಹೇಳಿರುವುದು ನಮಗೆ ಬೇಸರ ತಂದಿದೆ. ತುಂಬಿದ ಸದನದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಯಾದವ ಸಮಾಜ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಕುರಿಗಳನ್ನು ಮೇಯಿಸಲು ಮಳೆ ಬಿಸಿಲೆನ್ನದೆ ಊರಿಂದ ಊರಿಗೆ ಓಡಾಡುವಾಗ ನಮಗೆ ಯಾವುದೇ ಭದ್ರತೆ ಇಲ್ಲ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಕುರಿಗಾಹಿಗಳಿಗೆ ಒಂದಷ್ಟು ಭದ್ರತೆ ಒದಗಿಸಿದ್ದರು. ಇದೀಗ ಇನ್ನಷ್ಟು ಭದ್ರತೆ ಒದಗಿಸಲು ಯೋಜನೆ ರೂಪಿಸುವಾಗಲೇ ಶಿವಲಿಂಗೇಗೌಡರು ಕಡ್ಡಿ ಪಡಿಸುತ್ತಿರುವುದು ಖಂಡನೀಯ ಎಂದರು. ಅರಸೀಕೆರೆ ಕ್ಷೇತ್ರದಲ್ಲಿ ತೀರ ಜಾತಿ ರಾಜಕಾರಣ ಮಾಡುವ ಶಾಸಕರ ಪೈಕಿ ಶಿವಲಿಂಗೇಗೌಡ ಮುಂಚೂಣಿಯಲ್ಲಿದ್ದಾರೆ. ಇತರ ಸಮುದಾಯಗಳಿಗಿಂತ ಹೆಚ್ಚು ಮತಗಳನ್ನು ನೀಡಿ ಅವರನ್ನು ಯಾದವ ಸಮಾಜದ ಮತದಾರರು ಅವರಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಆದರೆ ಕನಿಷ್ಠ ಕೃತಜ್ಞತೆಯು ಇಲ್ಲದ ಶಿವಲಿಂಗೇಗೌಡರು ಸಮುದಾಯದ ಮೇಲೆ ದ್ವೇಷ ಸಾಧಿಸುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ ಎಂದು ಪ್ರಶ್ನೆ ಮಾಡಿದರು.

ತಮ್ಮ ಹಿಂಬಾಲಕರಿಗೆ ಮಣೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಕೆಲಸವನ್ನು ಮಾಡಿದ್ದು, ಅಧಿಕಾರಿಗಳ ವರ್ಗಾವಣೆ ದಂದೆಯಲ್ಲಿ ಜಿಲ್ಲೆ ಒಳಗೆ ಹಣ ವಸೂಲಿ ಮಾಡಲು ಇಳಿದಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೇ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ಕೂಡಲೇ ಶಿವಲಿಂಗೇಗೌಡರು ಯಾದವ ಸಮುದಾಯದ ಕ್ಷಮೆ ಯಾಚಿಸಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಹಕ್ಕುಗಳಿಗೆ ಬೆಂಬಲ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ನಿವಾಸದ ಮುಂದೆಯೇ ಕುರಿ ಕಂಬಳಿ ಹಾಕಿಕೊಂಡು ಸಮುದಾಯದ ಜನಾಂಗ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಇದೆ ವೇಳೆ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಅಜಪ್ಪ, ಜಯರಾಮ್, ರಂಗಸ್ವಾಮಿ, ರಘು ಇತರರು ಉಪಸ್ಥಿತರಿದ್ದರು.

“ಸಮಾಜದಲ್ಲಿ ಉತ್ತಮವಾಗಿ ನೆಮ್ಮದಿಯಿಂದ ಬದುಕು ಸಾಧಿಸಬೇಕಾದರೆ ನಶಾ ಮುಕ್ತಗೊಳಿಸಿ – ಅವಿನಾಶ್‌ ಕಾಕಡೆ
ಸಕಲೇಶಪುರ : ಅವಿನಾಶ್‌ ಕಾಕಡೆ ಮಾತನಾಡಿತ್ತಾ ಈ ಊರಿನ ತುಂಬಾ ನಶಾ ಮುಕ್ತ ಕೇಂದ್ರಗಳಿರಬೇಕೆ? ಅಥವಾ ಯುವಕರು ನಶೆಯಲ್ಲಿ ಮುಳುಗುವಂತ ಸ್ಥಳಗಳಿರಬೇಕೆ? ಮನುಷ್ಯನಿಗೆ ಎರಡು ಜರೂರುಗಳಿವೆ, ಬುದ್ದಿ ಪ್ರಣೀಕವಾದ ಅಗತ್ಯ, ಇನ್ನೊಂದು ದೈಹಿಕ ಪ್ರಣೀಕವಾದ ಅಗತ್ಯವಿದೆ.

“ಭೌತಿಕ ಜಗತ್ತಿಗೆ ಭೌತಿಕವಾದ ಅಗತ್ಯಗಳಿರುತ್ತವೆ. ಅವುಗಳನ್ನು ಕೂಡಲೇ ಪರಿಹರಿಸಲು ಸಾಧ್ಯವಿಲ್ಲ. ಬೌದ್ಧಿಕ ಅಗತ್ಯಗಳಾದ ರೊಟ್ಟಿ, ಶಿಕ್ಷಣ ಸೇರಿದಂತೆ ಹಲವು ಅಗತ್ಯತೆಗಳು ನಮಗೆ ಗೊತ್ತಿರುತ್ತವೆ, ಇವುಗಳನ್ನು ಹೊರತುಪಡಿಸಿ ಯೋಚನಾಶಕ್ತಿಗಳನ್ನು ಮಾಡುವಂತಹ ಭೌತಿಕ ಶಕ್ತಿ ನಮ್ಮಲ್ಲಿರಬೇಕು”

“ಸಮಾಜದಲ್ಲಿ ಉತ್ತಮವಾಗಿ ನೆಮ್ಮದಿಯಿಂದ ಬದುಕು ಸಾಧಿಸಬೇಕಾದರೆ ನಶಾ ಮುಕ್ತಗೊಳಿಸಿದಾಗ ಮಾತ್ರ ಸಾಧ್ಯ. ಉತ್ತಮ ಶಿಕ್ಷಣವನ್ನು ಪಡೆದಿರುವಂತಹ ಪೋಷಕರು ಮನೆಯಲ್ಲಿದ್ದಾಗ ಸಮಾಜದಲ್ಲಿದ್ದಾಗ ನಮ್ಮ ಮುಂದಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಮಾರ್ಪಾಡಾಗುತ್ತದರೆ. ನಶೆಯಲ್ಲಿ ತೊಡಗಿರುವವರ ನಡುವೆ ಮಕ್ಕಳು ಬೆಳೆದಾಗ ಅವರನ್ನೇ ಅನುಸರಿಸುವ ಮೂಲಕ ಮಕ್ಕಳು ನಶೆ ಏರಿಸುವಂತಹ ಡ್ರಗ್ಸ್‌ಗಳಿಗೆ ಬಲಿಯಾಗುವುದರ ಜತೆಗೆ ದೇಶಕ್ಕೆ ಮಾರಕವಾಗುತ್ತಾರೆ”

ರಾಮಕೃಷ್ಣ ಹೆಗಡೆ, ಬಿ ಆರ್‌ ಪಾಟೀಲ್‌ ಅವರಿಂದ ಸ್ಪೂರ್ತಿಗೊಂಡಿದ್ದ ನಾನು 73 ವರ್ಷದ ಯುವಕ ವಿಶ್ವನಾಥ್‌ ಅವರಿಗೆ ನೂಲಿನ ಮಾಲೆಯನ್ನು ಸಮರ್ಪಿಸುತ್ತೇನೆ. ಪೂರಾ ದೇಶದ ಸಮಾಜವಾದಿ ಮಾಜಿ ಶಾಸಕ ವಿಶ್ವನಾಥ್‌ ಅವರು, ಯುವಕರಂತೆ ಚಳವಳಿಯಲ್ಲಿ ಉತ್ಸುಕತೆಯಿಂದಿರುವುದು ಶ್ಲಾಘನೀಯ ಎಂದರು.

ಸಕಲೇಶಪುರ : ಡ್ರಗ್ಸ್‌ ಮೂಲಕ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಮಾಜಿ ಶಾಸಕ ಎಚ್‌ ಎಂ ವಿಶ್ವನಾಥ್‌
ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶವೇನೆಂದರೆ ಮಕ್ಕಳನ್ನು ಡ್ರಗ್ಸ್‌ನಲ್ಲಿ ಮುಳುಗಿಸಿದರೆ, ಮುಂದಿನ ಉತ್ತಮ ಪ್ರಜೆಗಳು ಈ ದೇಶದಲ್ಲಿ ಇಲ್ಲದಂತಾಗುತ್ತದೆ. ಆ ನಂತರ ಭಾರತವನ್ನು ಮುಳುಗಿಸಬುದೆಂಬ ನಿಟ್ಟಿನಲ್ಲಿ ಅಮೆರಿಕಾ ಸೇರಿದಂತೆ ಅಕ್ಕಪಕ್ಕದ ರಾಷ್ಟ್ರಗಳು ಸಂಚು ರೂಪಿಸಿವೆ ಎಂಬುದು ಅಧ್ಯಯನದಿಂದ ಕಂಡುಬಂದಿದೆ ಎಂದು ಡ್ರಗ್ಸ್‌ ಮುಕ್ತ ಸಕಲೇಶಪುರದ ಪ್ರಮುಖರು ಹಾಗೂ ಮಾಜಿ ಶಾಸಕ ಎಚ್‌ ಎಂ ವಿಶ್ವನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹಮ್ಮಿಕೊಂಡಿರುವ ʼಡ್ರಗ್ಸ್‌ ಮುಕ್ತ ಸಕಲೇಶಪುರʼ ಎರಡನೇ ವರ್ಷದ ಆಂದೋಲನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಯಿ ಗರ್ಭದಿಂದ ಒಂದು ಹುಟ್ಟು ಆದರೆ, ಸಮಾಜದ ಒಳಿತಿಗೆ ತೆರೆದುಕೊಳ್ಳುವುದೇ ಎರಡನೇ ಹುಟ್ಟು. ಇದಕ್ಕೆ ದ್ವಿಜ ಎನ್ನುತ್ತಾರೆ.ನಿನ್ನ ಜೀವಿತಕಾಲದಲ್ಲಿ ಎಂದೂ ಕೂಡ ಅಮಲು ಬರುವ ಪದಾರ್ಥಗಳನ್ನು ಸೇವಿಸಬಾರದು, ನಿನ್ನ ಹೆಣ್ಣುಮಕ್ಕಳನ್ನು ಯಾವುದೇ ಅಮಲುಗಾರರಿಗೆ ಮದುವೆ ಮಾಡಿಕೊಡಬಾರದು ಎಂದು ನನ್ನ ತಾಯಿ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದರು. ಇಂತಹ ನೈತಿಕ ಶಿಸ್ತು, ಧೈರ್ಯವನ್ನು ತುಂಬಿದಂತಹ ನನ್ನ ತಾಯಿಗೆ ಚಿರರುಣಿ ಎಂದು ಹೇಳಿದರು.

ಬಿ ಆರ್‌ ಪಾಟೀಲ್‌ ಅವರು ಕಾಂಗ್ರೆಸ್‌ ಸರ್ಕಾರದ ಸಂಪುಟದ ಸಚಿವರು ನನಗೆ ಚಳುವಳಿ ಮಿತ್ರರು. ಚೈನಾ ಪ್ರವಾಸಕ್ಕಾಗಿ ಹೋದಾಗ ಅದಕ್ಕೆ ಅವಕಾಶ ನೀಡಿದವರು ಬಿ ಆರ್‌ ಪಾಟೀಲ್.‌ ರಾಜಕೀಯ ಪಕ್ಷಗಳು ಎಲ್ಲವೂ ಒಂದೇ. ಆದರೆ ಬಣ್ಣ ಬೇರೆ, ಹಾಗಾಗಿ ನಾವು ಚಳುವಳಿಯ ಭಾಗವಾಗಿ ನಿಲ್ಲೋಣ, ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮುಕ್ತ ಆಂದೋಲನದಲ್ಲಿ ಭಾಗಿಯಾಗಿದ್ದೆವು. ಪಂಜಾಬಿನ ಶೇ.50ರಿಂದ 60ರಷ್ಟು ಮಕ್ಕಳು ಡ್ರಗ್ಸ್‌ನಲ್ಲಿ ಮುಳುಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ರಾಜ್ಯದಲ್ಲಿಯೂ ಕೂಡ ಅಧಿಕಾರಿಗಳು ಸಾರ್ವಜನಿಕರು ಒಟ್ಟುಗೂಡಿದಾಗ ಮಾತ್ರ ಸಮಾಜವನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಪೊಲೀಸ್‌ ಮತ್ತು ಅಬಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದಾದಾಗ ಮಾತ್ರ ಇಂತಹ ದುಶ್ಚಟಗಳನ್ನು ತಡೆಗಟ್ಟುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.

“ವಿಶೇಷವಾಗಿ ಮುಸ್ಲಿಂ ಹೆಣ್ಣುಮಕ್ಕಳು ಯಾವುದೇ ಕಾರನಕ್ಕೂ ಹೊರಗೆ ಬರುವುದಿಲ್ಲ. ಆದರೆ ಇಂದು ಡ್ರಗ್ಸ್‌ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆಂದರೆ ನಮ್ಮ ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಎಷ್ಟರ ಮಟ್ಟಿಗೆ ಡ್ರಗ್ಸ್‌ ಮಿತಿಮೀರಿದೆ ಎಂಬುದನ್ನು ಅರಿಯಬೇಕಾಗಿದೆ. ಇವತ್ತು ಸಮಾಜದಲ್ಲಿರುವಂತ ಪಿಡುಗನ್ನು ತೊಲಗಿಸಲು ನಾನೂ ಕೂಡ ಚಳವಳಿ ಕೈಗೊಂಡಿದ್ದೇನೆ. ಅರಣ್ಯ ಇಲಾಖೆಯ ಹಲವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಅಸ್ಸಾನಿಂದ ಬಂದಿರುವ ಕೆಲಸಗಾರರ ಬಳಿ ಎರಡೂವರೆ ಕೆಜಿ ಗಾಂಜಾ ಸಿಕ್ಕಿದೆ. ಬೆಳೆಗಾರರು, ಪೋಷಕರು ಜಾಗ್ರತರಾಗಿ ಗಾಂಜಾ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು” ಎಂದು ಕರೆ ನೀಡಿದರು.