ಹಾವೇರಿ – Peepal Media

ಗ್ಯಾಂಗ್ ರೇ*ಪ್ ಪ್ರಕರಣದಲ್ಲಿ ಜಾಮೀನು; ಸಂಭ್ರಮದ ಮೆರವಣಿಗೆ ನಡೆಸಿದವರನ್ನು ಮತ್ತೆ ಬಂಧಿಸಿದ ಪೊಲೀಸರು
ಹಾವೇರಿ: ಶುಕ್ರವಾರ, ಗ್ಯಾಂಗ್ ರೇಪ್ ಪ್ರಕರಣದ ಏಳು ಪ್ರಮುಖ ಆರೋಪಿಗಳಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನ ಬೀದಿಗಳಲ್ಲಿ ಕಾರುಗಳಲ್ಲಿ ಮೆರವಣಿಗೆ ನಡೆಸಿ, ಬಿಡುಗಡೆಯ ಸಂಭ್ರಮಾಚರಣೆ ಆಚರಿಸುತ್ತಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.

ಈ ಘಟನೆ ಮೇ 20 ರಂದು ನಡೆದಿತ್ತು. ಆದರೆ ಈ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಟೀಕೆಗೆ ಗುರಿಯಾದ ಕಾರಣ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾದರು.

ಆರೋಪಿಗಳ ವಿರುದ್ಧ ಕಾನೂನುಬಾಹಿರ ಸಭೆ ಮತ್ತು ಅತಿವೇಗದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದ್ದಾರೆ. ಏಳು ಜನರ ವಿರುದ್ಧ ಎಫ್ಐಆರ್ ತಯಾರಿಸಲಾಗಿದ್ದು, ಏಳು ಪ್ರಮುಖ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕೋರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಬಂಧಿತರನ್ನು ಸಮೀವುಲ್ಲಾ ಲಾಲನವರ್, ಮೊಹಮ್ಮದ್ ಸಾದಿಕ್ ಅಗಸಿಮನಿ, ಶೋಯಬ್ ಮುಲ್ಲಾ ಮತ್ತು ರಿಯಾಜ್ ಸಾವಿಕೇರಿ ಎಂದು ಗುರುತಿಸಲಾಗಿದೆ. ಉಳಿದ ಮೂವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

2024 ರ ಜನವರಿಯಲ್ಲಿ ಹಂಗಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಏಳು ಪ್ರಮುಖ ಆರೋಪಿಗಳು ಸೇರಿದಂತೆ ಹತ್ತೊಂಬತ್ತು ಜನರನ್ನು ಬಂಧಿಸಲಾಯಿತು. ಪ್ರಕರಣದ ಇತರ ಹನ್ನೆರಡು ಆರೋಪಿಗಳನ್ನು 10 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

26 ವರ್ಷದ ಸಂತ್ರಸ್ತೆ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಂತರ, ಅವರು ಮ್ಯಾಜಿಸ್ಟ್ರೇಟ್ ಮುಂದೆ ಅತ್ಯಾಚಾರ ನಡೆದ ಬಗ್ಗೆ ಹೇಳಿಕೆ ನೀಡಿದ್ದರು. ನಂತರ ಹಂಗಲ್ ತಹಶೀಲ್ದಾರ್ ಮುಂದೆ ನಡೆದ ಗುರುತಿನ ಪೆರೇಡ್‌ನಲ್ಲಿ ಸಂತ್ರಸ್ತೆ ಶಂಕಿತರನ್ನು ಗುರುತಿಸಿದ್ದರು.

ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಒತ್ತಾಯಿಸಿ ಮನವಿ; ವಿಶ್ವ ವಿದ್ಯಾಲಯ ಉಳಿಸುವುದಾಗಿ ಸಚಿವ ಶಿವಾನಂದ ಪಾಟೀಲ ಭರವಸೆ
ಹಾವೇರಿ : ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚದಂತೆ ಹಾಗೂ ವಿಲೀನಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ-ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಎಸ್ ಪಾಟೀಲ ಅವರು ಭರವಸೆ ನೀಡಿದರು.

ನಗರದ ನಗರಸಭೆ ಕಛೇರಿಯಲ್ಲಿ ಸೋಮವಾರ ಹಾವೇರಿ ವಿ.ವಿಯನ್ನು ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೂಡಲೇ ರದ್ದುಪಡಿಸಬೇಕು ಹಾಗೂ ವಿ.ವಿ ಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿ, ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದರುಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದಲ್ಲಿ ವಿ.ವಿ ಗಳನ್ನು ಮುಚ್ಚುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ, ಹಾಗಾಗಿ ಹಾವೇರಿ ವಿ.ವಿ ಯನ್ನು ಮುಚ್ಚುವ ಪ್ರಶ್ನೆ ಬರುವುದಿಲ್ಲ ಎಂದರು.

ಆಗ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, ಸರಕಾರ ಬಜೆಟ್ ಅಧಿವೇಶನದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಆದೇಶ ಮಾಡುತ್ತದೆ ಎಂದು ಜಿಲ್ಲೆಯ ಜನತೆ ಆಶಾಭಾವನೆ ಹೊಂದಿತ್ತು. ಬಜೆಟ್ ಅಧಿವೇಶನದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ವಿಭಿನ್ನ ಮತ್ತು ಗೊಂದಲಕಾರಿ ಹೇಳಿಕೆಗಳು ನಮಗೆ ಮತ್ತಷ್ಟು ಆತಂಕವನ್ನುಂಟು ಮಾಡಿವೆ ಎಂದರು.ಸ್ವತಃ ಮುಖ್ಯಮಂತ್ರಿಗಳು ವಿ.ವಿ ಮುಚ್ಚುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ, ಸಂಪುಟ ಉಪ ಸಮಿತಿಯ ತೀರ್ಮಾನವು ಸಂಪುಟ ಸಭೆಗೆ ಬಂದ್ಮೇಲೆ ಸೂಕ್ತ ಕ್ರಮ ಕೈಗೊಳ್ತಿವಿ ಅಂತ ಹೇಳಿದ್ದಾರೆ‌. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉಪ ಮುಖ್ಯಮಂತ್ರಿಗಳು ನಾವು ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಬದಲಾಗಿ ವಿಲೀನಗೊಳಿಸುತ್ತೇವೆ ಅಂತ ಹೇಳಿದ್ದಾರೆ. ಉನ್ನತ ಶಿಕ್ಷಣ ಮಂತ್ರಿಗಳು ಕೂಡ ಇದೇ ರೀತಿ ಹೇಳಿರುವುದು ಮಾಧ್ಯಮಗಳಲ್ಲಿ ಭಿತ್ತರಗೊಂಡಿರುವುದರ ಕುರಿತು ಸಚಿವರ ಗಮನ ಸೆಳೆದರು‌.

ಸರಕಾರ ಯಾವುದೇ ಸೌಕರ್ಯಗಳನ್ನು ಒದಗಿಸದಿರುವ ಸ್ಥಿತಿಯಲ್ಲಿಯೂ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಹಾವೇರಿ ವಿ.ವಿ ಯು ಮುನ್ನಡೆಯುತ್ತಿದೆ. ಸರಕಾರದಿಂದ ಅನುದಾನವಿರದ ಪರಿಸ್ಥಿತಿಯಲ್ಲಿಯೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ರಾಜ್ಯ ಸರಕಾರ ತೀರ್ಮಾನವನ್ನು ಹಿಂಪಡೆಯುವಂತೆ ಜಿಲ್ಲೆಯ ಎಲ್ಲ ಮಠಾಧೀಶರು, ಶಿಕ್ಷಣ ತಜ್ಞರು, ಜನಪರ ಸಂಘಟನೆಗಳು ಹಾಗೂ ಜಿಲ್ಲೆಯ ಜನರು ಈಗಾಗಲೇ ಪ್ರತಿಭಟಿಸಿದ್ದಾರೆ. ಸರಕಾರ ವಿ.ವಿ ವಿಲೀನ – ಮುಚ್ಚುವ ತೀರ್ಮಾನ ಹಿಂಪಡೆಯದಿದ್ದರೆ ಹಾವೇರಿ ವಿ.ವಿ ಉಳಿವಿಗಾಗಿ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸಂಘಟನೆಗಳು, ಜನತೆ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆಂಬುದನ್ನು ಕೂಡ ಸಚಿವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ವಿಶ್ವ ವಿದ್ಯಾಲಯಗಳಿಂದಲೂ ವರದಿ ತರಿಸಿಕೊಳ್ಳಲಾಗುವುದು. ಎರಡೂ ಕಡೆಯಿಂದ ಆಲೋಚಿಸಿ ಹಾವೇರಿ ವಿ.ವಿ ಅನ್ಯಾಯವಾಗದಂತೆ ಉಳಿಸಲು ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷರಾದ ಶಶಿಕಲಾ ಆರ್ ಮಾಳಗಿ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಂಜೀವ ನೀರಲಗಿ, ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರಾದ ಹೊನ್ನಪ್ಪ ಮರೆಮ್ಮನವರ, ಉಡಚಪ್ಪ ಮಾಳಗಿ, ಎಂ. ಆಂಜನೇಯ, ಮಲ್ಲಿಕಾರ್ಜುನ ಬಳ್ಳಾರಿ, ವಿಭೂತಿ ಶೆಟ್ಟಿ‌ನಾಯಕ, ಬಸವರಾಜ ಎಸ್, ಪದ್ಮರಾಜ ಕಳಸೂರು, ಸಿದ್ದು ಮರೆಮ್ಮನವರ ಸೇರಿದಂತೆ ಇತರರು ಇದ್ದರು.

ದಲಿತ ಮಹಿಳೆ ಮೇಲೆ ಮೇಲ್ವರ್ಗದ ಜನರ ದೌರ್ಜನ್ಯ, ದಯಾಮರಣ ನೀಡಲಿ ಎಂದು ಮಹಿಳೆ ಅಳಲು
ಹಾವೇರಿ :  ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮೇಲೆ ಮೇಲ್ವರ್ಗದ ಜನರು ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಜನವರಿ 30ರಂದು ಎಸ್​ಸಿ ಸಮುದಾಯದ ಮಹಿಳೆ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಘಟನೆ ಬಗ್ಗೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ನೊಂದ ಮಹಿಳೆ ದೂರು ನೀಡಿದ್ದಾಳೆ. ದಿಲ್ಲೆಪ್ಪ, ಗುಡ್ಡಪ್ಪ, ಹನುಮಂತ, ಮಂಜಪ್ಪ, ಸೇರಿದಂತೆ 35 ಕ್ಕೂ ಹೆಚ್ಚು ಜನರ ವಿರುದ್ಧ ನೊಂದ ಮಹಿಳೆ ಜಾತಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮಾಧ್ಯಮಗಳ ಮುಂದೆ ಬಂದಿದ್ದು, ದೌರ್ಜನ್ಯವೆಸಗುತ್ತಿರುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನಮಗೆ ದಯಾಮರಣ ನೀಡಲಿ ಎಂದು ದಲಿತ ಮಹಿಳೆ ಕಣ್ಣೀರಿಟ್ಟಿದ್ದಾಳೆ.

ಈ ಸಂಬಂಧ ಇದೀಗ ಮಹಿಳೆ ಮಾಧ್ಯಮಗಳ ಮುಂದೆ ಬಂದಿದ್ದು, ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೌರ್ಜನ್ಯವೆಸಗಿದವರನ್ನು ಬಂಧಿಸಿಲ್ಲ, ನಮಗೆ ನ್ಯಾಯ ಸಿಕ್ಕಿಲ್ಲ. ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನಮಗೆ ಸಹಾಯ ಮಾಡ್ತಿಲ್ಲ. ಊರಿನ ಸರ್ಕಾರಿ ರಸ್ತೆಯಲ್ಲಿ ಓಡಾಡಲು ನಮಗೆ ಬಿಡುತ್ತಿಲ್ಲ. ಕೊರಳಿಗೆ ಚಿಪ್ಪು, ಕಾಲಿಗೆ ಪೊರಕೆ ಕಟ್ಟಿಕೊಂಡು ಬರುವಂತೆ ಹೇಳುತ್ತಾರೆ. ನಮ್ಮ ಮನೆ ಬೇಲಿ ಬಳಿಗೆ ಬಂದು ಕೆಟ್ಟದಾಗಿ ಸನ್ನೆ ಮಾಡುತ್ತಾರೆ. ‘ನಮ್ಮ ಜೊತೆ ಮಲಗು ಬಾ’ ಎಂದು ಕರೆಯುತ್ತಾರೆಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ

ಅಮಿತ್ ಶಾ ಗಡಿಪಾರಿಗೆ ಆಗ್ರಹಿಸಿ ಜೈಬೀಮ್ ಬ್ರಿಗೇಡ್ ಸಂಘಟನೆಯಿಂದ ಪ್ರತಿಭಟನೆ
ಹಾಸನ: ಗೃಹ ಮಂತ್ರಿ ಅಮಿತ್ ಶಾ ರವರು ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಹಾಸ್ಯಾಸ್ಪದವಾಗಿ ಮತ್ತು ನಾಟಕೀಯವಾಗಿ ಸಂಸತ್ ಭವನದಲ್ಲಿ ಮಾತನಾಡಿರುವ ವಿರುದ್ಧ ಅವರನ್ನು ಬಂಧನ ಮತ್ತು ಗಡಿಪಾರಿಗೆ ಆಗ್ರಹಿಸಿ ಜೈಬೀಮ್ ಬ್ರಿಗೇಡ್ ಸಂಘಟನಾ ಸಮಿತಿಯಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜೈಬೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್ ಮಾಧ್ಯಮದೊಂದಿಗೆ ಮಾತನಾಡಿ, ದೇಶದ ಗೃಹಮಂತ್ರಿ ಅಮಿತ್ ಶಾ ಅವರು ಡಿಸೆಂಬರ್ 17 ರಂದು ಸಂಸತ್ತಿನಲ್ಲಿ ಮಾತನಾಡುವಾಗ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿರುವುದು ಖಂಡನೀಯ. ಈತ ಹೇಳಿರುವುದೇನೆಂದರೆ, ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಅಂಬೇಡ್ಕರ್ ಎನ್ನುತ್ತಿರುವುದು.. ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ ಏಳು ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು ಎಂದು ಅಂಬೇಡ್ಕರ್ ಅವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾಗೆ ಒಂದು ಗಂಭೀರವಾದ ಎಚ್ಚರಿಕೆಯೊಂದನ್ನು ರವಾನಿಸಬೇಕಾಗಿದೆ. ಹೇಳುತ್ತೇವೆ ಕೇಳು ಅಮಿತ್ ಶಾ ನಮಗೆ ಏಳು ಜನ್ಮದ ಪುಣ್ಯ, ಸ್ವರ್ಗ ಬೇಡವೇ ಬೇಡ. ನಮಗೆ ಸ್ವರ್ಗ ನರಕಗಳಲ್ಲಿ ನಂಬಿಕೆ ಇಲ್ಲ. ನಮಗೆ ಅಗತ್ಯವೂ ಇಲ್ಲ. ನಮಗೆ ಅಂಬೇಡ್ಕರ್ ಒಬ್ಬರೇ ಏಕೈಕ ದೇವರು. ಅದರಲ್ಲಿ ಎಂದಿಗೂ ರಾಜಿ ಇಲ್ಲ. ಅಂಬೇಡ್ಕರ್ ಅವರ ಹೆಸರನ್ನು ಉಸಿರಾಗಿಸಿಕೊಂಡಿದ್ದೇವೆ ಎಂದರು. ಕೊನೆಯ ಉಸಿರಿರುವವರೆಗೂ ಅಂಬೇಡ್ಕರ್ ಅವರ ಹೆಸರನ್ನೇ ಉಸಿರಾಗಿಸಿಕೊಳ್ಳುತ್ತೇವೆ ಕೂಡಾ..ಅಮಿತ್ ಶಾ ನೀವೆಲ್ಲಾ ಅಂಬೇಡ್ಕರ್ ಅವರ ಸಾಧನೆ, ಹೇಳಿಗೆ ಸಹಿಸದೆ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬರುವ ಮೂಲಕ ನಿಮ್ಮ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದೀರಿ ಎಂದು ದೂರಿದರು. ಅಂಬೇಡ್ಕರ್ ಅವರನ್ನು ಮತ್ತು ಮತ್ತವರ ಸಮುದಾಯಗಳನ್ನು ಒಪ್ಪಿಕೊಳ್ಳಲು ನೀವು ಎಂದಿಗೂ ತಯಾರಿಲ್ಲ. ಇಡೀ ವಿಶ್ವವೇ ಒಪ್ಪಿಕೊಂಡು ವಿಶ್ವ ಸಂಸ್ಥೆ ಇಂದು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಘೋಷಿಸಿದೆ. ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ ನೀವು ಅವರನ್ನು ಅರಗಿಸಿಕೊಳ್ಳಲು ಆಗದಂತ ಅಸೂಯೆ.ಛೇ. ನಮಗೆ ನೀವು ಹೇಳುವ ಸ್ವರ್ಗ, ದೇವರು, ಸ್ಮರಣೆ ಬೇಡ. ಅಂಬೇಡ್ಕರ್ ಹೆಸರೊಂದೇ ಸಾಕು. ನಮಗದೇ ಶಕ್ತಿ ನಮಗದೇ ಚೈತನ್ಯ ಮತ್ತು ಸ್ಫೂರ್ತಿ. ಸಾವಿರಾರು ವರ್ಷಗಳಿಂದ ನೀವು ಹೇಳುವ ದೇವರುಗಳನ್ನು ಪೂಜಿಸಿ ಸಾಕಾಯ್ತು. ನಿಮ್ಮ ದೇವರು ನಮ್ಮನ್ನು ದೂರವೇ ಇಟ್ಟ. ಕಡೆಗೆ ಎಲ್ಲರಂತೆ ದೇವಾಲಯದೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಮಾತ್ರವಲ್ಲ, ದೇವಾಲಯದ ಬಳಿಗೆ ಸುಳಿದರೂ ನಮಗೆ ಕಷ್ಟ ಕೊಡುತ್ತಿದ್ದ. ಅಂಬೇಡ್ಕರ್ ಬಂದ ಮೇಲೆಯೇ ನಮಗೆ ಸ್ವರ್ಗ, ಮೋಕ್ಷ ಎಲ್ಲವೂ ನಮಗೆ ಅಂಬೇಡ್ಕರ್ ಸ್ಮರಣೆಯೇ ಸಾಕು ಎಂದು ಹೇಳಿದರು. ಅಮಿತ್ ಶಾನನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾ ಮಾಡಲು ಈ ಮೂಲಕ ಅಗ್ರಹಪಡಿಸುತ್ತೇವೆ. ಇಲ್ಲವಾದಲ್ಲಿ ಈತನನ್ನು ವಜಾ ಮಾಡುವವರೆಗೂ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿAದ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೈಬೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕುಮಾರ್, ಇರ್ಫಾನ್, ಅಲ್ಪಸಂಖ್ಯಾತರ ಘಟಕದ ವರ್ಷ, ಟಿಪ್ಪು ಸಂಘರ್ಷ ಸಮಿತಿ ಅದ್ಯಕ್ಷ ಮುಬಾಶೀರ್ ಅಹಮದ್, ಇತರರು ಉಪಸ್ಥಿತರಿದ್ದರು.

ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿತಾಣಗಳ ವಿರುದ್ಧ ಪ್ರಕರಣ ದಾಖಲು
ಹಾವೇರಿ: ವಕ್ಫ್‌ ವಿವಾದಕ್ಕೆ ಸಂಭಂಧಿಸಿದಂತೆ ಸುಳ್ಳು ಸುದ್ದಿ ಹಂಚಿಕೊಂಡ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿ ತಾಣಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಹಾವೇರಿಯ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನ್ಯೂಸ್‌ ಮಾನಿಟರಿಂಗ್‌ ಸೆಲ್ಲಿನಲ್ಲಿ ಕೆಲಸ ಮಾಡುವ ಸುನಿಲ ಎನ್ನುವವರು ನೀಡಿದ ದೂರನ್ನು ಆಧರಿಸಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ನಿನ್ನೆ ಮಧ್ಯಾಹ್ನ 1:00 ಗಂಟೆ ಸುಮಾರಿಗೆ E-Paper ಕನ್ನಡ ದುನಿಯಾ ಹೆಸರಿನ ಸುದ್ದಿ ತಾಣದಲ್ಲಿ, “”Breaking: ಜಮೀನಿನ ಪಹಣಿಯಲ್ಲಿ ವಕ್ಷ ಹೆಸರು ನಮೂದು: ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶಿರ್ಷಿಕೆ ಅಡಿಯಲ್ಲಿ ಹಾವೇರಿ: ಜಮೀನಿನ ಪಹಣಿಯಲ್ಲಿ ಪಕ್ಷ ಹೆಸರು ನಮೂದಾಗಿದ್ದಕ್ಕೆ ಹಾವೇರಿಯಲ್ಲಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎನ್ನುವ ಸುದ್ದಿ ಪ್ರಕಟವಾಗಿತ್ತು.

ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಷ ಹೆಸರು ನಮೂದಾಗಿದ್ದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಹಿನ್ನಲೆ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ” ಎಂದು ಸುದ್ದಿ ಮಾಡಲಾಗಿತ್ತು.

ಇದೇ ಸುದ್ದಿಯನ್ನು ಕನ್ನಡ ನ್ಯೂಸ್‌ ಎನ್ನುವ ತಾಣವೂ ಶೇರ್‌ ಮಾಡಿತ್ತು.

ನಂತರ ಇದರ ಸ್ಕ್ರೀನ್‌ ಶಾಟ್‌ ಲಗತ್ತಿಸಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್‌ ಮಾಡಿದ್ದರು. ಅವರು ತಮ್ಮ ಪೋಸ್ಟಿನಲ್ಲಿ “ಸಿದ್ದರಾಮಯ್ಯ ಹಾಗೂ ಜಮೀರ್‌ ಅಹ್ಮದ್‌ ಅವರ ನಿರ್ಧಾರದಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎನ್ನುವ ಅರ್ಥ ಬರುವಂತೆ ಪೋಸ್ಟ್‌ ಮಾಡಿದ್ದರು.

ನಂತರ ಹಾವೇರಿಯ ಪೊಲೀಸ್‌ ಇಲಾಖೆ ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿತ್ತು. ಇದಾದ ನಂತರ ಸಂಸದ ತಮ್ಮ ಟ್ವೀಟ್‌ ಅಳಿಸಿದ್ದಾರೆ.

ಇದೀಗ ಹಾವೇರಿಯ ಸೆನ್‌ (CEN) ಠಾಣೆಯಲ್ಲಿ ಸಂಸದ ಹಾಗೂ ಸುದ್ದಿ ಪ್ರಕಟಿಸಿದ ಸುದ್ದಿ ತಾಣಗಳ ವಿರುದ್ಧ BNS 353 (2) ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಹಾವೇರಿ : ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ, ಬಂಧನ
ಮಾದಕ ವಸ್ತು ಕಳ್ಳಸಾಗಣೆ ತಡೆಗೆ ಹಾವೇರಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಹಾವೇರಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರನ್ನು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಗಳು ಸವಣೂರಿನ ನಿವಾಸಿಗಳಾದ ಗುಲಾಮ್ ರಸೂಲ್ ಖಾನ್, ಮಲ್ಲಿಕ್ ರೆಹಾನ್ ಮತ್ತು ಪುರಾಖಾನ್ ಎಂಬುವರಿಂದ 2,96,075 ರೂ ಮೌಲ್ಯದ 11 ಕೆಜಿ 843 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಹಾವೇರಿ ಟೌನ್ ಪೊಲೀಸರು ನಾಗೇಂದ್ರಮಟ್ಟಿ-ಶಾಂತಿನಗರ ರಸ್ತೆಯಲ್ಲಿ ಮೂವರನ್ನು ಬಂಧಿಸಿದ್ದಾರೆ.

ಅವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ವೇಳೆ ಪೊಲೀಸರು ಗಾಂಜಾ, ಮೊಬೈಲ್ ಫೋನ್ ಮತ್ತು 900 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಅಂಶು ಕುಮಾರ್ ಅವರು ಈ ಪ್ರದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆಯನ್ನು ತಡೆಯಲು ಅವರ ಪರಿಶ್ರಮದ ಪ್ರಯತ್ನಗಳಿಗಾಗಿ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.

ಭೀಕರ ಅಪಘಾತ: 13 ಮಂದಿ ದುರ್ಮರಣ
ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಗಳಲ್ಲಿ ಒಂದೇ ವಾಹನದಲ್ಲಿದ್ದ 13 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ರಸ್ತೆ ಅಪಘಾತ ನಡೆದಿದೆ.

ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದಲ್ಲಿದ್ದ 13 ಜನ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

ಮೃತರು ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ. ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಟಿಟಿ ವಾಹನದಲ್ಲಿದ್ದ ಎಲ್ಲರೂ ಶಿವಮೊಗ್ಗ ಜಿಲ್ಲೆಯವರು ಎಂಬ ಮಾಹಿತಿ ಸಿಕ್ಕಿದೆ.

ಹಂಗಲ್‌: ಜೋಡಿಯನ್ನು ಥಳಿಸಿದ 7 ಜನರ ಮೇಲೆ ಸಾಮೂಹಿಕ ಬಲಾತ್ಕಾರ ಪ್ರಕರಣ, 3 ಬಂಧನ
ಬೆಂಗಳೂರು: ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ಹೊಸ ಹೇಳಿಕೆ ನೀಡಿದ ನಂತರ ಹಂಗಲ್ ಪೊಲೀಸರು ಏಳು ಮಂದಿಯ ಮೇಲೆ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಪೊಲೀಸರು ಎಫ್‌ಐಆರ್‌ಗೆ ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್ ಅತ್ಯಾಚಾರ) ಸೇರಿಸಿದ್ದಾರೆ. ಏಳು ಮಂದಿಯ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

ಸಂತ್ರಸ್ತೆ ಗುರುವಾರ ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ ನಂತರ, ಪೊಲೀಸರು ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಂಡರು. ಸಂತ್ರಸ್ತೆ ಸಾಮೂಹಿಕ ಅತ್ಯಾಚಾರ ಆರೋಪ ಮಾಡಿದ್ದು, ಅದರ ಆಧಾರದ ಮೇಲೆ ಸಂಬಂಧಿತ ಐಪಿಸಿ ಸೆಕ್ಷನ್‌ಗಳನ್ನು ಎಫ್‌ಐಆರ್‌ಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜನವರಿ 8ರಂದು ಹಾವೇರಿಯ ಹಂಗಲ್‌ನಲ್ಲಿರುವ ಹೋಟೆಲ್ ಕೋಣೆಗೆ ನುಗ್ಗಿದ ವ್ಯಕ್ತಿಗಳ ಗುಂಪೊಂದು ಅಂತರ್‌ಧರ್ಮೀಯ ದಂಪತಿಯನ್ನು ಥಳಿಸಿತ್ತು.

ಸಂತ್ರಸ್ತೆಯ ಪ್ರಕಾರ, ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಕಾಡಿನಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ಅತ್ಯಾಚಾರವೆಸಗಿದ್ದಾರೆ. ಹಂಗಲ್‌ನ ಬಸ್ ನಿಲ್ದಾಣದ ಬಳಿ ಮೂವರು ವ್ಯಕ್ತಿಗಳು ತನ್ನನ್ನು ಕಾರಿನಿಂದ ಎಸೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬುಧವಾರ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗಿದ್ದು, ಪುರುಷರ ಗುಂಪು ಹೋಟೆಲ್ ಸಿಬ್ಬಂದಿಯಂತೆ ಪೋಸ್ ನೀಡಿ ದಂಪತಿಗಳು ತಂಗಿದ್ದ ಕೋಣೆಗೆ ನುಗ್ಗಿದೆ. ಗ್ಯಾಂಗ್ ವ್ಯಕ್ತಿಯನ್ನು ಥಳಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿದೆ. ಬಿಡುವಂತೆ ದಂಪತಿಗಳು ಮನವಿ ಮಾಡಿಕೊಂಡರೂ ಆರೋಪಿಗಳು ಕಿವಿಗೊಡಲಿಲ್ಲ.

ವೀಡಿಯೊ ಕಾಣಿಸಿಕೊಂಡ ನಂತರ, ಪೊಲೀಸರು ಸಂತ್ರಸ್ತೆಯನ್ನು ಗುರುತಿಸಿ ಅವರಿಂದ ದೂರನ್ನು ಪಡೆದಿದ್ದರು. ನಂತರ ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಬುಧವಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪೊಲೀಸರು ಐಪಿಸಿ ಸೆಕ್ಷನ್ 363 (ಅಪಹರಣ), 324 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 509 (ಮಹಿಳೆಯನ್ನು ಅವಮಾನಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಎಫ್‌ಐಆರ್ ದಾಖಲಾದ ಒಂದು ದಿನದ ನಂತರ, ವೀಡಿಯೊದಲ್ಲಿ ಸಂತ್ರಸ್ತೆ ಹೊಸ ಆರೋಪಗಳನ್ನು ಮಾಡಿದ್ದಾರೆ ಮತ್ತು ತನ್ನ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವೀಡಿಯೋ ಕಾಣಿಸಿಕೊಂಡ ನಂತರ, ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡರು, ಅಲ್ಲಿ ಅವರು ಏಳು ಜನರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ.

ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಎಫ್‌ಐಆರ್‌ಗೆ ಸಂಬಂಧಿತ ಐಪಿಸಿ ಸೆಕ್ಷನ್‌ಗಳನ್ನು ಸೇರಿಸಿದ್ದಾರೆ ಮತ್ತು ಪ್ರಕರಣದ ಇತರ ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ನಾಡಿನ ಸಮಾನತೆ-ಸೌಹಾರ್ದ ಮೌಲ್ಯಗಳ ಉಳಿವಿಗೆ ಪ್ರಜೆಗಳ ಕನಿಷ್ಟ ಜವಾಬ್ದಾರಿ
ಇಂದು ಕೇಶವ ಕೃಪಾದ ಅಧಿಕೃತ ವ್ಯಕ್ತಿ ಕ.ಸಾ.ಪ.ದ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತು ಸಜ್ಜನಿಕೆಯನ್ನು ಬೆಚ್ಚಿ ಬೀಳಿಸುವ ದುಂಡಾವರ್ತಿ ತೋರುತ್ತಿದ್ದಾರೆ! ಕ.ಸಾ.ಪ. ಇತಿಹಾಸದಲ್ಲಿ ಮೊದಲ ಬಾರಿಗೆ ಮತೀಯ ದ್ವೇಷದ ನಡೆಯನ್ನು ಖುಲ್ಲಂ ಖುಲ್ಲಾ ಪ್ರದರ್ಶಿಸುತ್ತಿದ್ದಾರೆ! ಅದರ ವಿರುದ್ಧ ಸಂವಿಧಾನದ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿದು ಉಳಿಸುವ ಜವಾಬ್ದಾರಿಯು ಬರೀ ಸಾಹಿತಿ-ಕಲಾವಿದರದ್ದು ಮಾತ್ರವಲ್ಲ-ಕನ್ನಡ ನಾಡಿನಲ್ಲಿ, ನುಡಿಗಟ್ಟಿನಲ್ಲಿ ಶಾಂತಿ-ಸಮಾನತೆಗಳನ್ನು ಜತನವಾಗಿ ಇಟ್ಟುಕೊಳ್ಳಲು ಬಯಸುವ ಎಲ್ಲಾ ನಾಗರಿಕರದ್ದೂ ಆಗಿದೆ. ಪ್ರಗತಿಪರ ಚಿಂತಕ ಫಣಿರಾಜ್‌ ಅವರ ಮಹತ್ತ್ವದ ಈ ಲೇಖನ ಓದಿ..

ಕಳಪೆತನವನ್ನು ಉಪೇಕ್ಷಿಸಬಹುದು, ಕೇಡಿತನವನ್ನು ಉಪೇಕ್ಷಿಸಲಾಗದು. ಕರ್ನಾಟಕದ ಸಾಹಿತ್ಯ-ರಂಗಭೂಮಿ ವಲಯದಲ್ಲಿ ಇತ್ತೀಚಿನ ವಿದ್ಯಮಾನಗಳು ಉಪೇಕ್ಷಿಸ ಬಾರದಷ್ಟು ಕೇಡಿತನದ್ದಾಗಿವೆ. ರಂಗಾಯಣದ ನಿರ್ದೇಶಕರ ಸೃಜನಶೀಲ ಯೋಗ್ಯತೆಯ ಮಟ್ಟ ಹೇಗಾದರೂ ಇರಲಿ,  ಕಾರ್ಯಕ್ರಮಗಳ ಯೋಜನೆ, ಆಹ್ವಾನಿಸುವ ಸಂಪನ್ಮೂಲ ವ್ಯಕ್ತಿಗಳು ಮತ್ತು ರಂಗ ಪ್ರದರ್ಶನಗಳಲ್ಲಿ ಪ್ರಕಟಿಸುತ್ತಿರುವ ಖಳತನ ಸಾಮಾನ್ಯ ಸಜ್ಜನ್ನರನ್ನು ಆತಂಕಗೊಳಿಸುವಂತಿವೆ. ʼಭಂಡತನವೇ ಕಾಲಮಾನದ ಗುಣವಾಗಿದೆ ಸ್ವಾಮಿ!ʼಎಂಬ ದೇಶಾವರಿ ಮಾತುಗಳಿಂದ ಇಂಥ ಘಟನಾವಳಿಗಳನ್ನು ಸಾರಿಸಿ ಬಿಡ ಕೂಡದು. ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ-ಅದು ಖಾಸಗಿಯೇ ಇರಲೀ, ಪ್ರಭುತ್ವ ಸ್ವಾಮ್ಯದ್ದೇ ಇರಲಿ- ಅವುಗಳದ್ದೇ ಆದ ಪರಂಪರೆ, ಸಭ್ಯತೆಗಳು ಇರುತ್ತವೆ; ಸಾರ್ವಜನಿಕ ಹಿತಕ್ಕೆ ಮಾರಕವಾದಾಗ ಅವುಗಳನ್ನು ಪ್ರಶ್ನಿಸಬಹುದು-ಬದಲಿಸುವ ಮಾತನಾಡಬಹುದು ಎನ್ನುವುದು ಸರಿ-ಅದಕ್ಕೂ ಒಂದು ಪರಂಪರೆ ಇರುತ್ತದೆ; ಹಾಗಂತ ಅವುಗಳನ್ನು ವಿವೇಕಹೀನವಾಗಿ ನಿಂದಿಸುವುದು ಕೇಡಿತನ. ಅದು ಸಹ್ಯವಾಗ ಕೂಡದು. ಕನ್ನಡ ಸಾಹಿತ್ಯ ಪರಿಷತ್ತು ಹಾಗು ಅದರ ವತಿಯಿಂದ ನಡೆಯುವ ಸಮ್ಮೇಳನಗಳ ವಿಷಯದಲ್ಲೂ ಇದೇ ಬಗೆಯ ಕೇಡಿನ ಅಸಹ್ಯ ವಿದ್ಯಮಾನಗಳು ನಡೆಯುತ್ತಿವೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ 118 ವರುಷಗಳ ಇತಿಹಾಸವಿದೆ. ದೇಶದ ವಸಾಹತುಶಾಹಿ ವಿರೋಧಿ ಹೋರಾಟದ ಕಡೆತದಲ್ಲಿ ಬದುಕಿನ ಎಲ್ಲಾ ವಲಯಗಳಲ್ಲೂ ಹೊಸ ಸಾಮಾಜಿಕ ಪ್ರಜ್ಞೆಗಳೂ ಜಾಗೃತವಾಗುವ ಹೊತ್ತಲ್ಲಿ ಕಟ್ಟಿದ ಸಂಸ್ಥೆ ಇದು. ʼದೇಶದ ಗುರುತುʼ ʼಭಾಷೆಯ ಗುರುತುʼಗಳಿಗೆ ಹೊಸ ಬಗೆಯ ನಿರೂಪಣೆಗಳು ಹರಳುಗಟ್ಟಿಕೊಳ್ಳುತ್ತಿದ್ದ ಕಾಲದಲ್ಲಿ, ಆ ಕಾಲದ ಗುಣಕ್ಕೆ ಓಗೊಟ್ಟು ಹುಟ್ಟಿದ ಸಂಸ್ಥೆ ಇದು. ಅಂದಿನ ʼಕನ್ನಡ ನಾಡು-ನುಡಿʼಗಳ ನಿರ್ವಚನವು ಸರ್ವ ಸಮ್ಮತವಾಗಿಯೇನೂ ಇರಲಿಲ್ಲ-ಆದರೆ ಚಾಲ್ತಿಯಲ್ಲಿದ್ದ ಹಲವು ಬಗೆಯ ಭಿನ್ನ ನಿರ್ವಚನಗಳು ನಾಡು-ನುಡಿಯ ವಿಷಯದಲ್ಲಿ ಜಾತಿ-ಮತ-ಲಿಂಗ ಭೇದಗಳು ಸಲ್ಲವು ಎಂಬ ಕಾಲಮಾನದ ವಿಶ್ವಾತ್ಮಕ ಮೌಲ್ಯವನ್ನು ಒಪ್ಪಿಕೊಂಡಿದ್ದವು. ಕನ್ನಡ ನುಡಿ ಕಟ್ಟುಗಳಲ್ಲಿ ಈ ಬಗೆಯ ಭೇದಗಳ ಝಲಕು ಕಾಣಿಸಿಕೊಂಡ ಗಳಿಗೆಗಳಲ್ಲಿ ಮಹತ್ತ್ವದ ಸಾರ್ವಜನಿಕ ವಾಗ್ವಾದಗಳು ನಡೆದು ಮತ್ತೆ ಸಾಮರಸ್ಯದ ಸಮತೋಲವನ್ನು ಪಡೆದುಕೊಂಡದ್ದು ಇದೆ-ಕನ್ನಡ ಸಾಹಿತ್ಯ ಪರಿಷತ್ತು ಇಂಥ ರಂಗವಾದದ್ದೂ ಇದೆ. 1970ರ ದಶಕದ ಆರಂಭದಲ್ಲಿ ಕರ್ನಾಟಕದ ಸಾಮಾಜಿಕ-ರಾಜಕೀಯ ಬದುಕಿನಲ್ಲಿ ಕೆಳ ಜಾತಿ- ನುಡಿ ಕಡೆತಗಳಿಗೆ ವರ್ಗಗಳಲ್ಲಿ ಎಚ್ಚರವಾದ ಹೊಸ ಸಾಮಾಜಿಕ ಸಮಾನತೆಯ ಅರಿವಿಗೆ ಅನುಗುಣವಾಗಿ ಕನ್ನಡ ನುಡಿಯಲ್ಲಿ ಅಂತರ್ಗತವಾಗಿರುವ ಮೇಲ್ಜಾತಿಗಳ ಸಂವೇದನೆಯನ್ನು ಗುರುತಿಸಿ ವಿಮರ್ಶೆಗೆ ತೆರೆದು ʼಬರಹಗಾರರ ಒಕ್ಕೂಟʼ ಕಟ್ಟಿಕೊಂಡಾಗಲೂ ಅದು ಕ.ಸಾ.ಪ.ಕ್ಕೆ ಮೂಲ ಮೌಲ್ಯಗಳನ್ನು ಎಚ್ಚರಿಸುವ ಕರೆಗಂಟೆಯಾಗಿತ್ತು. ಅಷ್ಟಾಗಿಯೂ 1979ರಲ್ಲಿ ಸಾಮಾಜಿಕ ಜಾತಿ-ವರ್ಗ ಯಜಮಾನಿಕೆಯನ್ನು ಪ್ರತಿನಿಧಿಸುವ ಧರ್ಮಸ್ಥಳದಲ್ಲಿ ಕ.ಸಾ.ಪ. ಸಮ್ಮೇಳನ ಆಯೋಜಿತವಾದಾಗ ಪ್ರತಿರೋಧದ ದನಿಯಾಗಿ ಕಟ್ಟಿಕೊಂಡ ದಲಿತ-ಬಂಡಾಯ ಸಾಹಿತ್ಯ ಚಳುವಳಿಯೂ ಕನ್ನಡ ನಾಡು-ನುಡಿಯ ವಿಶ್ವಾತ್ಮಕ ಮೌಲ್ಯಗಳನ್ನು ಅವಗಣಿಸುವ ಕ.ಸಾ.ಪ.ದ ಧೋರಣೆಗೆ ಒಂದು ಪ್ರತಿ ತೂಕವನ್ನು ಹೇರಿ ಸಮತೂಗಿಸುವ ನಡೆಯೇ ಆಗಿತ್ತು. ಈ ಚಳುವಳಿಯ ಫಲವಾಗಿ ಕನ್ನಡ ನಾಡು ನುಡಿಯಲ್ಲಿ ಸಮಾನತೆಯ ವಿಶ್ವಾತ್ಮಕ ಮೌಲ್ಯಗಳನ್ನು ಗಟ್ಟಿಗೊಳಿಸುವ ಚಳುವಳಿಯ ಹಾದಿಯು, ಕ.ಸಾ.ಪ.ದ ಕಲಾಪಗಳಿಂದ ಹೊರಗುಳಿದು ಆ ಸಂಸ್ಥೆಯನ್ನು ಅಡಗುದಾಣದಲ್ಲಿ ಹುದುಗಿದ್ದ ಬಲಪಂಥದ ಸಾಂಪ್ರದಾಯಿಕ ಶಕ್ತಿಗಳ ಆಡುಂಬೊಲ ಆಗುವುದಕ್ಕೆ ಕಾರಣವಾಯಿತೇ? ಎಂಬುದು ಚರ್ಚಿಸಬೇಕಾದ ವಿಷಯವೇನೋ ಸರಿ. ಆದರೆ ಇದು ಇಂದು ಕ.ಸಾ.ಪ. ತಲುಪಿರುವ ಅಸಹ್ಯ ಸ್ಥಿತಿಯ ಅವಗಣನೆಗೆ ಕಾರಣ ಆಗಕೂಡದು.

1980ರ ದಶಕದ ಮಧ್ಯದಿಂದ ತೀವ್ರ ಬಲಪಂಥೀಯವೂ, ಮೇಲ್ಜಾತಿ-ವರ್ಗಗಳ ಯಜಮಾನಿಕೆಯನ್ನು ಪುನಃಸ್ಥಾಪಿಸುವ ಉದ್ದೇಶಗಳನ್ನು ಉಳ್ಳದ್ದೂ ಆದ ʼಹಿಂದುತ್ವವಾದಿ ರಾಜಕೀಯʼವು ಸಮಾಜದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವಂತೆಯೇ ಕ.ಸಾ.ಪ.ದಲ್ಲಿ ಆಯಕಟ್ಟಿನ ಜಾಗೆಗಳನ್ನು ಹಿಡಿದುಕೊಳ್ಳುವ ಕೆಲಸವನ್ನು ತಾಲೂಕು ಮಟ್ಟಗಳಲ್ಲಿ ಭರದಿಂದ ನಡೆಸಿತು; ಆ ಕಾರ್ಯಾಚರಣೆಯ ಅಸಹ್ಯ ಪರಿಣಾಮಗಳು ಹೊಸ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗಿದವು. 2000ದ ನಂತರದ ವರ್ಷಗಳಲ್ಲಿ ಕರ್ನಾಟಕದ ಪಶ್ಚಿಮ ಕರಾವಳಿಯ ಜಿಲ್ಲೆಗಳಲ್ಲಿ ಮತೀಯವಾದಿ ಹಿಂಸೆಗಳು ಏರಿಕೆ ಆಗುತ್ತಿದ್ದ ಹೊತ್ತಲ್ಲಿ, ದಲಿತ-ಬಂಡಾಯ ಚಳುವಳಿಯ ಮುಂದಾಳುಗಳಲ್ಲಿ ಒಬ್ಬರಾಗಿದ್ದ ಚಂಪಾ ಅವರು ಕ.ಸಾ.ಪ. ಅಧ್ಯಕ್ಷರಾಗಿದ್ದರು. 2006ರಲ್ಲಿ ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದ್ದಾಗಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಸಂಘಪರಿವಾರದ ಸಂಘಟನೆಗಳು ಸಮ್ಮೇಳಕ್ಕೆ ಆಹ್ವಾನಿತರಾಗಿದ್ದ ಕಲ್ಕುಳಿ ವಿಠಲ ಹೆಗಡೆ ಮತ್ತು ಗೌರಿ ಲಂಕೇಶ್‌ ಅವರನ್ನು ನಿಷೇಧಿಸಲು ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಒತ್ತಡ ತಂದರು. ಆದರೆ ಚಂಪಾ ಮತ್ತು ಶಿವಮೊಗ್ಗ ಕಸಾಪ ಅಧ್ಯಕ್ಷರಾಗಿದ್ದ ಡಿ ಮಂಜುನಾಥ್‌ ತಮ್ಮ ನಿಲುವಿನಿಂದ ಹಿಂದೆ ಸರಿಯದೆ ದೃಢವಾಗಿ ನಿಂತರು. ಸಮ್ಮೇಳನ ನಡೆಯುತ್ತಿರುವಾಗ ನೆಹರೂ ಮೈದಾನದಲ್ಲಿ ರೈತ ಮುಖಂಡ ಕೆ ಟಿ ಗಂಗಾಧರ ಅವರು ಭಾಷಣ ಮಾಡುತ್ತಿರುವಾಗ ವೇದಿಕೆಗೆ ನುಗ್ಗಿ ಕಲ್ಕುಳಿ ಅವರ ಮೇಲೆ ಹಲ್ಲೆ ನಡೆಸಲು ಐವತ್ತರವತ್ತು ಕಾರ್ಯಕರ್ತರು ನುಗ್ಗಿದಾಗ ಪೊಲೀಸರು ಮತ್ತು ಕಾರ್ಯಕರ್ತರು ತೋರಿದ ಸಮಯಪ್ರಜ್ಞೆಯಿಂದ ಕಾರ್ಯಕ್ರಮ ಸುಸೂತ್ರವಾಗಿ ನಡೆದಿತ್ತು. ಸಂಘಪರಿವಾರದವರನ್ನು ತಡೆದ ಸೌಹಾರ್ದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳೂ ಬಿದ್ದವು.

ಚಂದ್ರಶೇಖರ ಪಾಟೀಲ

2008ರಲ್ಲಿ ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿತವಾಯಿತು ಹಾಗು ಆ ಸಮ್ಮೇಳನಕ್ಕೆ ಹಿಂದುತ್ವವಾದಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ರಾ.ಸ್ವ.ಸಂ) ದ ಹಿತೈಷಿಯಾಗಿದ್ದ ಎಲ್.ಎಸ್.ಶೇಷಗಿರಿ ರಾವ್‌ ಅವರನ್ನು ಆಯ್ಕೆ ಮಾಡಲಾಯಿತು. ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು-ನುಡಿಯು ಆಯಾ ಕಾಲಕ್ಕೆ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚಿಸುವ ವೇದಿಕೆ ಆಗಿರ ಬೇಕು ಎನ್ನುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ  ನಿಯಮವಾಗಿತ್ತು; ಈ ಕಾರಣಕ್ಕೆ ಉಡುಪಿಯಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಕೋಮು ಹಿಂಸೆಯ ಕುರಿತು ಚರ್ಚೆಗೆ ವೇದಿಕೆ ಒದಗಿಸ ಬೇಕು, ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಹಿಂಸೆಯ ವಿದ್ಯಮಾನಗಳ ಪ್ರಸ್ತಾಪ ಮತ್ತು ರಾಜಿ ಇಲ್ಲದ ಪ್ರತಿರೋಧದ ನುಡಿಗಳು ಖಚಿತವಾಗಿ ಪ್ರಕಟವಾಗಬೇಕು ಎಂಬ ಅಹವಾಲನ್ನು ಕರ್ನಾಟಕದ ಸೌಹಾರ್ದಪ್ರಿಯ ಸಾಹಿತ್ಯ ವಲಯವು ಮುಂದಿಟ್ಟಿತು. ಅದಕ್ಕೆ ಸ್ಪಂದನೆ ದೊರಕದೇ ಇದ್ದಾಗ ಪ್ರತಿಭಟನೆಯಾಗಿ ʼಸೌಹಾರ್ದ ಸಾಹಿತ್ಯ ಸಮ್ಮೇಳನʼವನ್ನು ಸಮನಾಂತರವಾಗಿ ನಡೆಸಲಾಯಿತು ( ಪ್ರಸ್ತುತ ಸಮ್ಮೇಳನದ ಕಲಾಪಗಳಿಗೆ ಕ.ಸಾ.ಪ. ಅಧ್ಯಕ್ಷರಾಗಿದ್ದ ಚಂ.ಪಾ. ಅವರು ಪ್ರೇಕ್ಷಕರಾಗಿ ಹಾಜರಿದ್ದು ಎಲ್ಲ ಭಿನ್ನಮತದ ಟೀಕೆ-ಟಿಪ್ಪಣಿಗಳನ್ನು ಸಂಯಮದಿಂದ ಕೇಳಿಸಿಕೊಂಡರು). ಇಷ್ಟಾದರೂ ಕ.ಸಾ.ಪ.ದ ಧೋರಣೆಗಳಲ್ಲಿ ಬದಲಾವಣೆಯಾಗುವ ಬದಲಾಗಿ, ಒಡಕು ಮತೀಯವಾದಿ ಧೋರಣೆ ಪ್ರಬಲವಾಗುತ್ತಿರುವುದನ್ನೂ ಗಮನಿಸಿ ಹಾಗು ಬದಲಾಗುತ್ತಿರುವ ಕಾಲದ ಕೇಡುಗಳನ್ನು ದನಿಸುವ ಸಲುವಾಗಿಯೂ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕನ್ನಡದ ಸಮುದಾಯಗಳು ʼಜನ ನುಡಿʼ ಹಾಗು ʼಮೇ ಸಾಹಿತ್ಯ ಸಮ್ಮೇಳʼನಗಳನ್ನು ಕಾಲ ಕಾಲಕ್ಕೆ ನಡೆಸಿಕೊಂಡು ಬರುತ್ತಿದ್ದಾರೆ. ಇವೆಲ್ಲವುಗಳ ಔಚಿತ್ಯ ಪ್ರಜ್ಞೆಯನ್ನು ದಮನಿಸಿಯೇ ಸಿದ್ಧವೆಂಬಂತೆ ನವಫ್ಯಾಸಿಸ್ಟ್ ಮತೀಯವಾದಿ‌ ಧೋರಣೆಯನ್ನು ರೂಢಿಸಿಕೊಂಡಿರುವ ಕ.ಸಾ.ಪ. ವರ್ತಿಸುತ್ತಿದೆ. 2019ರಲ್ಲಿ ಶೃಂಗೇರಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಬರಹಗಾರ-ಚಳುವಳಿಗಾರ ವಿಠಲ ಹೆಗ್ಡೆಯವನ್ನು ಅಧ್ಯಕ್ಷರನ್ನಾಗಿ ತಾಲೂಕ ಕ.ಸಾ.ಪ. ಆಯ್ಕೆ ಮಾಡಿದಾಗ, ಆ ಸಮ್ಮೇಳನವನ್ನೇ ರದ್ದುಗೊಳಿಸುವ ರಾದ್ಧಾಂತವನ್ನು  ಕ.ಸಾ.ಪ.ದ ದೊಣ್ಣೆ ನಾಯಕರು ನಡೆಸಿದರು; ಒತ್ತಡಕ್ಕೆ ಮಣಿಯದೇ ತಾಲೂಕು ಸಮಿತಿಯು ಸಮ್ಮೇಳನ ನಡೆಸಲು ಮುಂದಾದಾಗ, ಗಲಭೆಯ ವಾತಾವರಣ ಸೃಷ್ಟಿ ಮಾಡಲಾಯಿತು.

ಇಂದು ಕೇಶವ ಕೃಪಾದ ಅಧಿಕೃತ ವ್ಯಕ್ತಿ ಕ.ಸಾ.ಪ.ದ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತು ಸಜ್ಜನಿಕೆಯನ್ನು ಬೆಚ್ಚಿ ಬೀಳಿಸುವ ದುಂಡಾವರ್ತಿ ತೋರುತ್ತಿದ್ದಾರೆ! ಕ.ಸಾ.ಪ. ಇತಿಹಾಸದಲ್ಲಿ ಮೊದಲ ಬಾರಿಗೆ ಮತೀಯ ದ್ವೇಷದ ನಡೆಯನ್ನು ಖುಲ್ಲಂ ಖುಲ್ಲಾ ಪ್ರದರ್ಶಿಸುತ್ತಿದ್ದಾರೆ! ಇದಕ್ಕೆ ಭಿನ್ನಮತ ತೋರಿದ ಕನ್ನಡದ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಹಾಗು ಅನುಭವಿ ಪತ್ರಕರ್ತ-ಬರಹಗಾರ ಬಿ.ಎಂ.ಹನೀಫ್‌ ಬಗ್ಗೆ ಅಸಹ್ಯವಾದ ಕೀಳು ಅಪಾದನೆಗಳನ್ನು ಮಾಡುತ್ತಿದ್ದಾರೆ! ʼಅವರ ಯೋಗ್ಯತೆಯೇ ಇಷ್ಟು..ʼ ಎಂದು ಗೊಣಗಿ ಕೊಂಡಿರುವುದು ಸಭ್ಯತೆಯೂ ಅಲ್ಲ, ಸಜ್ಜನಿಕೆಯೂ ಅಲ್ಲ. ಈ ಸಂಸ್ಥೆಗೆ ಹಾಗು ಆಯೋಜಿತವಾಗಿರುವ ಈ ವರ್ಷದ ಸಮ್ಮೇಳನಕ್ಕೆ ಕರ್ನಾಟಕದ ಪ್ರಜೆಗಳ ತೆರಿಗೆ ಹಣದ ಕೋಟ್ಯಾಂತರ ರೂಪಾಯಿಗಳನ್ನು ಸರಕಾರ ನೀಡುತ್ತಿದೆ. ಅಧಿಕಾರ ಸ್ಥಾನದಲ್ಲಿ ಯಾರೇ ಅಂಡೂರಿಕೊಂಡಿದ್ದರೂ, ಅವರು ಸಂವಿಧಾನದ ನ್ಯಾಯ-ನೀತಿಯ ಮೌಲ್ಯಗಳಿಗೂ, ನಾಡು-ನುಡಿಯ ಜನಹಿತ ಪರಂಪರೆಯ ಮೌಲ್ಯಗಳಿಗೂ ಅತೀತರಾದವರೇನೂ ಅಲ್ಲ. ʼನಾವು ಹೀಗೆ…!ʼ ಎಂಬ ಭಂಡತನವನ್ನು ಅವರು ತೋರಿದರೆ, ಅದಕ್ಕೆ ಅದರ ವಿರುದ್ಧ ಘನತೆಯಿಂದ ಭಿನ್ನ ನುಡಿದು, ಸಂವಿಧಾನದ ಸಮಾನತೆ-ಸೌಹಾರ್ದ ಮೌಲ್ಯಗಳನ್ನು ಎತ್ತಿ ಹಿಡಿದು ಉಳಿಸುವ ಜವಾಬ್ದಾರಿಯು ಬರೀ ಸಾಹಿತಿ-ಕಲಾವಿದರದ್ದು ಮಾತ್ರವಲ್ಲ-ಕನ್ನಡ ನಾಡಿನಲ್ಲಿ ನುಡಿಗಟ್ಟಿನಲ್ಲಿ ಶಾಂತಿ-ಸಮಾನತೆಗಳನ್ನು ಜತನವಾಗಿ ಇಟ್ಟುಕೊಳ್ಳಲು ಬಯಸುವ ಎಲ್ಲಾ ನಾಗರಿಕರದ್ದೂ ಆಗಿದೆ.

ಈ ಹಿನ್ನೆಲೆಯಲ್ಲಿ ಜನವರಿ 8, 2023ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ʼಜನ ಸಾಹಿತ್ಯ ಸಮಾವೇಶʼವನ್ನು ನಾವು ಬೆಂಬಲಿಸೋಣ. ಸಾಧ್ಯವಿದ್ದಷ್ಟು ಅಂದು ಅಲ್ಲಿ ಹಾಜರಿರೋಣ. ಇದು ನಮ್ಮ ನಾಡಿನ ಸಮಾನತೆ-ಸೌಹಾರ್ದ ಮೌಲ್ಯಗಳ ಉಳಿವಿಗೆ ಪ್ರಜೆಗಳಾಗಿ ನಿಭಾಯಿಸಬೇಕಾದ ಕನಿಷ್ಟ ಜವಾಬ್ದಾರಿ.

ಕೆ.ಫಣಿರಾಜ್

ಪ್ರಗತಿಪರ ಚಿಂತಕರು

ಹಾವೇರಿ ತಹಶೀಲ್ದಾರ್‌ ಗಿರೀಶ್‌ ಸ್ವಾದಿ ನಾಪತ್ತೆ!
ಹಾವೇರಿ: ಇಲ್ಲಿನ ತಹಶೀಲ್ದಾರ್‌ ಗಿರೀಶ್‌ ಸ್ವಾದಿ ಅವರು ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಹಾವೇರಿ ಶಹರ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾಹಿತಿ ಪ್ರಕಾರ, ಗಿರೀಶ್‌ ಸ್ವಾದಿಯವರು, ಅವರ ಪತ್ನಿಗೆ ಅಕ್ಟೋಬರ್‌ 31 ರಂದು ರಾತ್ರಿ ಪರಿಚಿತರ ಮೊಬೈಲ್‌ನಿಂದ ಕರೆ ಮಾಡಿ, ಕರ್ನಾಟಕ ರಾಜ್ಯೋತ್ಸವ ಇರುವುದರಿಂದ ಹಾವೇರಿಯ ಹಾನಗಲ್‌ ರಸ್ತೆಯಲ್ಲಿರುವ ಶಿವಾ ರೆಸಿಡೆಸ್ಸಿಯಲ್ಲಿ ಉಳಿದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ತಹಶೀಲ್ದಾರ್‌ ಗಿರೀಶ್‌ ಸ್ವಾದಿ ಅವರು 2 ದಿನಗಳವರೆಗೆ ಮನೆಗೆ ಹೋಗದ ಕಾರಣ, ಅವರ ಪತ್ನಿ ಭಾಗ್ಯಶ್ರೀಯವರು, ಗಿರೀಶ್‌ ಸ್ವಾದಿ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಮೊಬೈಲ್‌ ಸ್ವಿಚ್‌ಆಫ್‌ ಆದ ಕಾರಣ, ಗಾಬರಿಗೊಂಡ ಅವರು ಕುಟುಂಬ ಸಮೇತ ಶಿವಾ ರೆಸಿಡೆಸ್ಸಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಹೋಟೆಲ್‌ ಸಿಬ್ಬಂದಿಯೊಬ್ಬರು, ಗಿರೀಶ್‌ ಸ್ವಾದಿಯವರು ನವೆಂಬರ್‌ 1ರಂದು ಮುಂಜಾನೆ 5 ಗಂಟೆಗೆ ತಾವು ಉಳಿದುಕೊಂಡಿದ್ದ ರೂಮ್‌ 112 ಅನ್ನು ಖಾಲಿ ಮಾಡಿ. ಏನೂ ಹೇಳದೇ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿಚಾರ ತಿಳಿದ ಕುಟುಂಬಸ್ಥರು ತಕ್ಷಣವೇ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ.