ಕೋಲಾರ – Peepal Media

ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ನೀಡಲಿದ್ದೇವೆ: ಕೆ.ಎಚ್. ಮುನಿಯಪ್ಪ
ಕೋಲಾರ: ಪ್ರಸ್ತುತ ನಡೆಯುತ್ತಿರುವ ಪರಿಶೀಲನಾ ಅಭಿಯಾನದ ವೇಳೆ ಅನರ್ಹ ಬಿಪಿಎಲ್ (BPL) ಕಾರ್ಡ್ ಹೊಂದಿರುವವರನ್ನು ತೆಗೆದುಹಾಕಿ, ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗುವುದು. ಈ ಅರ್ಹ ಫಲಾನುಭವಿಗಳಲ್ಲಿ ಕೆಲವರು ಎರಡೂವರೆ ವರ್ಷಗಳಿಂದಲೂ ಕಾಯುತ್ತಿದ್ದಾರೆ ಎಂದು ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಬುಧವಾರ ಕೆಜಿಎಫ್‌ನಲ್ಲಿ ತಿಳಿಸಿದರು.

ಇತರ ವಿಷಯಗಳ ಕುರಿತು ಹೇಳಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಸಂಪುಟ ಪುನಾರಚನೆ (Cabinet reshuffle) ಕುರಿತು ವರದಿಗಳ ಬಗ್ಗೆ ಪ್ರಶ್ನಿಸಿದಾಗ, “ಅದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವ ವಿಷಯ” ಎಂದು ಮುನಿಯಪ್ಪ ಉತ್ತರಿಸಿದರು.

ಇತ್ತೀಚೆಗೆ ನ್ಯಾಯಾಲಯದೊಳಗೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಸಚಿವರು ಖಂಡಿಸಿದರು. “ವಕೀಲರಾಗಿದ್ದರೂ ಅವರು ಅಶಿಕ್ಷಿತ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕಾನೂನು ರೂಪಿಸುವವರು, ಕಾನೂನು ಜಾರಿ ಮಾಡುವವರು ಮತ್ತು ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಹೊತ್ತವರು ಇಂತಹ ಕೃತ್ಯಗಳನ್ನು ಎಸಗುವುದನ್ನು ಖಂಡಿಸಬೇಕು. ಎಲ್ಲಾ ವಕೀಲರು ಮತ್ತು ನ್ಯಾಯಾಧೀಶರು ಈ ಘಟನೆಯನ್ನು ಸರ್ವಾನುಮತದಿಂದ ಖಂಡಿಸಿದ್ದಾರೆ” ಎಂದು ಮುನಿಯಪ್ಪ ಹೇಳಿದರು.

ಜಾತಿ ಗಣತಿಯಲ್ಲಿ ಭಾಗವಹಿಸಲು ಕರೆ

ಅಲ್ಲದೆ, ಸಚಿವರು ಸಾರ್ವಜನಿಕರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ) ಭಾಗವಹಿಸುವಂತೆ ಮನವಿ ಮಾಡಿದರು. “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸೂಚ್ಯಂಕಗಳಲ್ಲಿ ಹಿಂದುಳಿದಿರುವ ಸಮುದಾಯಗಳನ್ನು ಉನ್ನತೀಕರಿಸಲು ಈ ಸಮೀಕ್ಷೆಗೆ ಆದೇಶಿಸಲಾಗಿದೆ” ಎಂದು ಅವರು ತಿಳಿಸಿದರು. ಈ ಸಮೀಕ್ಷೆಯನ್ನು ಈಗ ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಗಿದೆ ಮತ್ತು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಜನರನ್ನು ಒತ್ತಾಯಿಸಿದರು.

ಕೋಲಾರದಲ್ಲಿ ನಕಲಿ ವೈದ್ಯರ ಎಡವಟ್ಟಿಗೆ 8 ವರ್ಷದ ಬಾಲಕಿ ಬಲಿ
ಕೋಲಾರ: ಇತ್ತೀಚೆಗೆ ಕೋಲಾರ(kolar) ಪ್ರದೇಶದಲ್ಲಿ ನಕಲಿ ವೈದ್ಯರ (Fake doctor) ಹಾವಳಿ ಸಂಖ್ಯೆ ಹೆಚ್ಚಾಗುತ್ತಿದೆ. ಕೋಲಾರದ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದ 8 ವರ್ಷದ ಬಾಲಕಿ ಈ ನಕಲಿ ವೈದ್ಯರ ಕಾಟಕ್ಕೆ ಬಲಿಯಾಗಿದ್ದಾಳೆ.

ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚುತ್ತಿದೆ. ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್ನಿಂದಲೇ ಮಗು ಸಾವನ್ನಪ್ಪಿದ್ದು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಜ್ವರ ಎಂದು ಅನಾರೋಗ್ಯದಿಂದ ಆಸ್ಪತ್ರೆಗೆ ಹೋದಾಗ ಆಕೆಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ.

ಇಂಜೆಕ್ಷನ್‌ ನಿಂದ ಜ್ವರ ಉಲ್ಬಣ
ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿಯೊಬ್ಬಳು ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದರು. ಕ್ಲಿನಿಕ್ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬಾಲಕಿಗೆ ಚಿಕಿತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದ್ದು, ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ.

ನಕಲಿ ವೈದ್ಯರ ಕ್ಲೀನಿಕ್‌ ಗಳಿಗೆ ಬೀಗ
ಕೋಲಾರ ಜಿಲ್ಲೆಯಲ್ಲಿ 3 ಕ್ಲಿನಿಕ್ಗಳ ಮೇಲೆ   ಹಿಂದೆ ತಹಶೀಲ್ದಾರರು ದಾಳಿ ಮಾಡಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ನಕಲಿ ವೈದ್ಯರ 3 ಕ್ಲಿನಿಕ್ಗಳನ್ನೂ ಮುಚ್ಚಲಾಗಿತ್ತು. ಬೆಂಗಳೂರಿನಲ್ಲಿಯೂ ಕೋರಮಂಗಲದಲ್ಲಿ ಆಯುರ್ವೇದ ಓದಿಕೊಂಡಿದ್ದ ವೈದ್ಯರೊಬ್ಬರು ಕಳೆದ 10 ವರ್ಷಗಳಿಂದಲೂ ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬಯಲಾಗಿತ್ತು. ಅದರೊಂದಿಗೆ ಚರ್ಮ ಶಾಸ್ತ್ರದ ಬಗ್ಗೆ ಓದದೇ ಇರುವವರೂ ಬ್ಯೂಟಿ ಟ್ರೀಟ್ಮೆಂಟ್ ನೀಡುತ್ತಿದ್ದರು.ಹೀಗೆ ಬೆಂಗಳೂರು, ಕಲಬುರಗಿ, ಬೆಳಗಾವಿ ಸೇರಿದಂತೆ 100 ಕ್ಕೂ ಹೆಚ್ಚು ನಕಲಿ ವೈದ್ಯರ ಹೆಸರು ಬೆಳಕಿಗೆ ಬಂದಿತ್ತು. ಇವೆಲ್ಲರ ಕ್ಲೀನಿಕ್‌ ಗಳ ಮೇಲೆ ಕ್ರಮ ಕೂಡ ಕೈಗೊಂಡಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 256 ನಕಲಿ ವೈದ್ಯರನ್ನು ಪತ್ತೆಹಚ್ಚಲಾಗಿದೆ. ಮಾರ್ಚ್ 2024 ರಲ್ಲಿ, ರಾಜ್ಯದಲ್ಲಿ ಒಟ್ಟು 1,775 ನಕಲಿ ವೈದ್ಯರಿದ್ದ ಬಗ್ಗೆ ವರದಿಯಾಗಿತ್ತು.

ನಕಲಿ ವೈದ್ಯರು ಹೆಚ್ಚಿರುವ ಜೆಲ್ಲೆ ಯಾವುದು…?
89 ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ ಮತ್ತು 154 ನಕಲಿ ವೈದ್ಯರಿಗೆ ದಂಡ ವಿಧಿಸಲಾಗಿದೆ. ಆಯುಷ್ ಇಲಾಖೆಯಲ್ಲೂ 833 ಪ್ರಕರಣಗಳು ವರದಿಯಾಗಿವೆ. ಬೀದರ್‌, ಕೋಲಾರ ಮತ್ತು ತುಮಕೂರುಗಳಲ್ಲಿ ಅತಿ ಹೆಚ್ಚು ನಕಲಿ ವೈದ್ಯರಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಕಡಿವಾಣ ಬಿದ್ದಿಲ್ಲ.ಯಾವುದೇ ವೈದ್ಯಕೀಯ ಡಿಗ್ರಿ ಇಲ್ಲದೆ ಅವರು ತಮ್ಮನ್ನು ತಾವು ವೈದ್ಯರೆಂದು ಕರೆಸಿಕೊಳ್ಳುತ್ತಿದ್ದಾರೆ. ಇಂತಹ ನಕಲಿ ವೈದ್ಯರಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ.ಅಸಲಿ ವೈದ್ಯರ ಹೆಸರಿಗೆ ಕಳಂಕ ತರುವ ನಕಲಿ ವೈದ್ಯರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಇದರಿಂದ ಸಾಮಾನ್ಯ ರೋಗಿಗಳು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ಮಂಜುನಾಥಗೌಡ ಗೆದ್ದರೆ ರಾಜಕೀಯ ತ್ಯಜಿಸುತ್ತೇನೆ: ಮಾಲೂರು ಶಾಸಕ ನಂಜೇಗೌಡರ ನೇರ ಸವಾಲು
ಕೋಲಾರ: ಹೈಕೋರ್ಟ್‌ನ ನಿರ್ದೇಶನದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆದರೆ ಮತ್ತು ಅದರಲ್ಲಿ ತಮ್ಮ ಪ್ರತಿಸ್ಪರ್ಧಿ ಕೆ.ಎಸ್. ಮಂಜುನಾಥಗೌಡ ಅವರು ಜಯಗಳಿಸಿದರೆ, ತಾವು ರಾಜಕೀಯ ಕ್ಷೇತ್ರದಿಂದಲೇ ನಿವೃತ್ತಿ ತೆಗೆದುಕೊಳ್ಳುವುದಾಗಿ ಶಾಸಕ ಕೆ.ವೈ. ನಂಜೇಗೌಡ ಸವಾಲೆಸೆದಿದ್ದಾರೆ.

ತಾಲ್ಲೂಕಿನ ರಾಮಸಂದ್ರ ಗಡಿಭಾಗದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿದ ಅವರು, “ಅವರನ್ನು (ಮಂಜುನಾಥಗೌಡ) ನಾನೇ ಹೊಸಕೋಟೆಯಿಂದ ಕರೆತಂದು ಮಾಲೂರಿನಲ್ಲಿ ಗೆಲ್ಲುವಂತೆ ಮಾಡಿದ್ದೆ. ಅಂದು ನಾನೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬಹುದಾಗಿತ್ತು. ಕೆಲವು ನಾಯಕರ ಮಾತಿಗೆ ಕಿವಿಗೊಟ್ಟು ತಪ್ಪು ಮಾಡಿದೆ. ಆದರೆ, ಈಗ ಆತ ಹುಚ್ಚು ಹಿಡಿದವರಂತೆ ವರ್ತಿಸುತ್ತಿದ್ದು, ಶಾಸಕನಾದ ಭ್ರಮೆಯಲ್ಲಿದ್ದಾನೆ. ಅವನ ಕೆಲವು ಬೆಂಬಲಿಗರು ಹಗಲುಗನಸು ಕಾಣುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧಾರ

“ಹೈಕೋರ್ಟ್ ಮರು ಮತ ಎಣಿಕೆಗೆ ಸೂಚನೆ ನೀಡಿರುವುದರ ಜೊತೆಗೆ, ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ. ಈ ಕಾರಣಕ್ಕಾಗಿ, ನಾನು ಸರ್ವೋಚ್ಚ ನ್ಯಾಯಾಲಯಕ್ಕೆ (ಸುಪ್ರೀಂ ಕೋರ್ಟ್) ಮೇಲ್ಮನವಿ ಸಲ್ಲಿಸುತ್ತೇನೆ. ಕೇವಲ ಮರು ಮತ ಎಣಿಕೆಗೆ ಸೂಚಿಸಿದ್ದರೆ ನಾನು ಮೌನವಾಗಿರುತ್ತಿದ್ದೆ. ಈ ಹಿಂದೆಯೂ ಇದೇ ಮಾತನ್ನು ಹೇಳಿದ್ದೆ. ಆದರೆ, ನನ್ನ ಆಯ್ಕೆಯನ್ನು ಅಸಿಂಧುಗೊಳಿಸಿರುವ ಕಾರಣ, ಈಗ ಇಡೀ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ. ಅದಕ್ಕೆ 30 ದಿನಗಳ ಕಾಲಾವಕಾಶವಿದೆ. ನನ್ನ ಚುನಾವಣೆಯನ್ನೇ ಅಸಿಂಧುಗೊಳಿಸಿದ ಮೇಲೆ ಮರು ಮತ ಎಣಿಕೆಯ ಬದಲು ಮತ್ತೆ ಚುನಾವಣೆ ನಡೆಸಬಹುದಿತ್ತು,” ಎಂದು ನಂಜೇಗೌಡರು ಅಭಿಪ್ರಾಯಪಟ್ಟರು.

ಮತ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯೆ

ಮಾಲೂರಿನಲ್ಲಿ ಮತ ಕಳ್ಳತನ ನಡೆದಿದೆ ಎಂಬ ಮಂಜುನಾಥಗೌಡರ ಆರೋಪಕ್ಕೆ ಅವರು ಪ್ರತ್ಯುತ್ತರ ನೀಡಿದರು: “2023ರಲ್ಲಿ ನಾನು ಶಾಸಕನಾಗಿದ್ದೆ ಎಂಬುದು ನಿಜ. ಆದರೆ, ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಅವರದೇ ಮಂತ್ರಿಗಳು, ಸಂಸದರು, ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಮತ ಎಣಿಕೆಯ ದಿನ ನಾನು ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದೆ. ನೀವೇ (ವಿರೋಧಿಗಳು) ಕಾವಲಿದ್ದು ಮತ ಎಣಿಕೆ ಮಾಡಿಸಿದ್ದೀರಿ. ಕೊನೆಯಲ್ಲಿ, ಅವರ ತಕರಾರಿನ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ವಿ.ವಿ.ಪ್ಯಾಟ್ ತಾಳೆ ಮಾಡಲು ಲಕ್ಕಿ ಡಿಪ್ ಎತ್ತಲು ಮುಂದಾದರು. ಮಂಜುನಾಥಗೌಡರ ಕೈಯಲ್ಲಿಯೇ ಲಾಟರಿ ಎತ್ತಿಸಿ, ನಂತರ ಫಲಿತಾಂಶ ಘೋಷಿಸಿದರು. ಈಗ ಆತ ಏನೇನೋ ಮಾತನಾಡುತ್ತಿದ್ದಾನೆ.”

“ನಾನು ಏಕೆ ವಿಡಿಯೋ ಅಥವಾ ಸಿ.ಸಿ.ಟಿ.ವಿ ದೃಶ್ಯಗಳನ್ನು ಕಳವು ಮಾಡಲಿ? ಆ ಚುನಾವಣೆಗೆ ಕೇಂದ್ರದಿಂದಲೂ ವೀಕ್ಷಕರು ಬಂದಿದ್ದರು. ಅವುಗಳನ್ನು ಸರಿಯಾಗಿ ಸಂರಕ್ಷಿಸಿಡುವುದು ಅಧಿಕಾರಿಗಳ ಜವಾಬ್ದಾರಿ. ಅಧಿಕಾರಿಗಳೇನು ನನ್ನ ಸಂಬಂಧಿಕರೇ?” ಎಂದು ಅವರು ಮರುಪ್ರಶ್ನಿಸಿದರು.

ಮಾಲೂರು ಕ್ಷೇತ್ರಕ್ಕೆ ಈಗ ಶಾಸಕರು ಇಲ್ಲ, ತಬ್ಬಲಿಯಾಗಿದೆ ಎಂಬ ಮಂಜುನಾಥಗೌಡರ ಹೇಳಿಕೆಗೆ ನಂಜೇಗೌಡರು ಪ್ರತಿರೋಧ ವ್ಯಕ್ತಪಡಿಸಿ, “ಹೈಕೋರ್ಟ್ ತನ್ನ ಆದೇಶಕ್ಕೆ 30 ದಿನಗಳ ತಡೆಯಾಜ್ಞೆ ನೀಡಿದೆ. ನಾನು ಈಗಲೂ ಶಾಸಕನೇ, ಅವರಂತೆ ಮಾಜಿ ಶಾಸಕನಲ್ಲ. ಮಾಲೂರು ಕ್ಷೇತ್ರವೂ ತಬ್ಬಲಿಯಲ್ಲ” ಎಂದು ತಿರುಗೇಟು ನೀಡಿದರು.

ಮಾಲೂರು ಶಾಸಕ ಕೆ.ವೈ ನಂಜೇಗೌಡರ ಶಾಸಕ ಸ್ಥಾನ ಅಸಿಂಧುಗೊಳಿಸಿದ ಹೈಕೋರ್ಟ್; ಸುಪ್ರೀಂಕೋರ್ಟ್‌ನಿಂದ ಮೇಲ್ಮನವಿಗೆ ಅವಕಾಶ
ಮಾಲೂಕು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆವೈ ನಂಜೇಗೌಡ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ ಅಸಿಂಧುಗೊಳಿಸಿದೆ. ಇದರ ಜೊತೆಗೆ 2023 ರ ಚುನಾವಣೆಯ ಮತಗಳ ಮರು ಎಣಿಕೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು. ಚುನಾವಣೆಯಲ್ಲಿ ಗೋಲ್‌ಮಾಲ್ ಆಗಿರುವ ಬಗ್ಗೆ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆ‌ರ್.ದೇವದಾಸ್ ಅವರದ್ದ ಪೀಠ ವಿಚಾರಣೆ ನಡೆಸಿತು.

ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿಯು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ ಹಾಗೂ ಕೋರ್ಟ್‌ ಮತ್ತೊಮ್ಮೆ ಎಣಿಕೆಯನ್ನೂ ಮಾಡುವಂತೆ ಸೂಚನೆ ನೀಡಿದೆ.

ಶಾಸಕರ ಆಯ್ಕೆ ಅಸಿಂಧು ಎಂದಿರುವ ಹೈಕೋರ್ಟ್ ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು ಎಂದಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದಿದ್ದರೆ ಶಾಸಕ ಸ್ಥಾನ ಅಸಿಂಧುವಾಗಲಿದೆ. ಮರು ಮತ ಎಣಿಕೆ ನಡೆಯಲಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೆವೈ ನಂಜೇಗೌಡ 248 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಗ್ಗೆ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿಯಾಗಿದ್ದ ಕೆಎಸ್ ಮಂಜುನಾಥ ಗೌಡ ಅನುಮಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿಯೇ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆಗೆ ಆದೇಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಹೀಗಾಗಿ ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ ಹಾಗೂ ಕೋರ್ಟ್‌ ಮತ್ತೊಮ್ಮೆ ಎಣಿಕೆಯನ್ನೂ ಮಾಡುವಂತೆ ಸೂಚನೆ ನೀಡಿದೆ.

ಮುಂದಿನ ಆರು ತಿಂಗಳಲ್ಲಿ ಪ್ರಧಾನಿ ಬದಲಾಗಲಿದ್ದಾರೆ: ಸಚಿವ ಸಂತೋಷ್ ಲಾಡ್ ಸ್ಫೋಟಕ ಹೇಳಿಕೆ
ಕೋಲಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಬದಲಾಗಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕೋಲಾರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಜೆಪಿಯವರಿಗೆ ಧರ್ಮ ಸಂಘರ್ಷ, ಮುಸ್ಲಿಂ ವಿರೋಧಿ ಹೇಳಿಕೆಗಳು ಮತ್ತು ಸುಳ್ಳು ಹಿಂದುತ್ವದ ರಾಜಕಾರಣ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬಿಜೆಪಿಯ ಯಾವುದೇ ನಾಯಕರ ಮಕ್ಕಳು ಎಂದಾದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಮದ್ದೂರು ಗಲಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಮೆರವಣಿಗೆಯ ಸಂದರ್ಭದಲ್ಲಿ ಕಲ್ಲುತೂರಾಟ ನಡೆಯಬಾರದಿತ್ತು. ಕಿಡಿಗೇಡಿಗಳು ಕಲ್ಲು ಎಸೆದಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಆದರೆ, ಬಿಜೆಪಿಯವರು ಇದರಲ್ಲಿಯೂ ಹಿಂದೂ-ಮುಸ್ಲಿಂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ನೇಪಾಳದ ಕನ್ನಡಿಗರ ರಕ್ಷಣೆಗೆ ಸಿದ್ಧ

ನೇಪಾಳದಲ್ಲಿರುವ ಕನ್ನಡಿಗರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಡ್, “ನೇಪಾಳದಲ್ಲಿರುವ ಕನ್ನಡಿಗರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ತಾವು ಇರುವ ಸ್ಥಳದಲ್ಲೇ ಸುರಕ್ಷಿತವಾಗಿರುವಂತೆ ಹೇಳಿದ್ದೇನೆ. ಮುಖ್ಯಮಂತ್ರಿಗಳು ಸೂಚಿಸಿದರೆ, ಕನ್ನಡಿಗರ ರಕ್ಷಣೆಗಾಗಿ ನೇಪಾಳಕ್ಕೆ ಹೋಗಲು ನಾನು ಸಿದ್ಧ,” ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಪರಿಸ್ಥಿತಿಯನ್ನು ಪ್ರಶ್ನಿಸಿದ ಅವರು, ದೇಶಾದ್ಯಂತ ಕರ್ನಾಟಕದ ಆರ್ಥಿಕ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದು ಹೇಳಿದರು.

ಭದ್ರಾವತಿ ಶಾಸಕರು “ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ” ಎಂದು ಹೇಳಿರುವ ಬಗ್ಗೆ ಮಾತನಾಡಿದ ಲಾಡ್, “ಹಿಂದೆ ದೇವೇಗೌಡರು ಸಹ ಇದೇ ಮಾತನ್ನು ಹೇಳಿದ್ದರು, ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.

ಪಾಕಿಸ್ತಾನಕ್ಕೆ ನೀರು ನಿಲ್ಲಿಸುವ ಬಗ್ಗೆ ಮಾತನಾಡುವವರು ಏಷ್ಯಾ ಕಪ್‌ನಲ್ಲಿ ಅವರ ವಿರುದ್ಧ ಕ್ರಿಕೆಟ್ ಪಂದ್ಯ ಆಡಿಸಲು ಮುಂದಾಗುತ್ತಾರೆ ಎಂದು ಲಾಡ್ ವ್ಯಂಗ್ಯ ಮಾಡಿದರು. “ಕ್ರೀಡೆ ಮತ್ತು ಸಿನಿಮಾವನ್ನು ಆ ದೃಷ್ಟಿಯಿಂದಲೇ ನೋಡಬೇಕು. ಮನಬಂದಂತೆ ನಡೆದುಕೊಂಡರೆ ಪ್ರಶ್ನಿಸುವವರು ಯಾರೂ ಇಲ್ಲ ಎಂಬ ವರ್ತನೆ ಸರಿಯಲ್ಲ,” ಎಂದು ಕಿಡಿಕಾರಿದರು.

“ಇನ್ನೂ ತಮ್ಮನ್ನು ಶ್ರೇಷ್ಠ ಪ್ರಧಾನಿ ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ಆದರೆ ಪಾಕಿಸ್ತಾನಕ್ಕೆ ಹೋಗಿ ಬಂದವರು ನರೇಂದ್ರ ಮೋದಿ ಮತ್ತು ಅಡ್ವಾಣಿ” ಎಂದು ತೀಕ್ಷ್ಣವಾಗಿ ಟೀಕಿಸಿದರು. ಕಳೆದ ಅವಧಿಯಲ್ಲಿ ಬಿಜೆಪಿ ಮಾಡಿರುವ ಸಾಲವನ್ನು ತಮ್ಮ ಸರ್ಕಾರ ತೀರಿಸುತ್ತಿದೆ ಎಂದು ಲಾಡ್ ತಿಳಿಸಿದರು.

ಧರ್ಮಸ್ಥಳ ಕ್ಷೇತ್ರಕ್ಕೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿ ಕುರಿತು ಪ್ರತಿಕ್ರಿಯಿಸಿ, “ಹಿಂದುತ್ವವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಬಿಟ್ಟರೆ ಬಿಜೆಪಿಗೆ ಮತ್ತೇನು ಗೊತ್ತು?” ಎಂದು ಪ್ರಶ್ನಿಸಿದರು. “ಹಿಂದೂ ಧರ್ಮದ ಬಗ್ಗೆ ಕಾಳಜಿಯಿದ್ದರೆ, ಸಮಾಜದಲ್ಲಿನ ಬೇರೆ ಸಮುದಾಯದವರನ್ನು ಕೀಳಾಗಿ ಕಾಣುವುದನ್ನು ನಿಲ್ಲಿಸಿ, ಬದಲಾವಣೆಗೆ ಸಹಕರಿಸಿ,” ಎಂದು ಕಿವಿಮಾತು ಹೇಳಿದರು.

ಚೆನ್ನೈ ಎಕ್ಸ್‌ಪ್ರೆಸ್ ವೇ ಸ್ಪೀಡಿಗೆ ಬಿತ್ತು ಬ್ರೇಕ್
ಕೋಲಾರ, ಜೂ16: ಇತ್ತೀಚೆಗೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ವೇ ನಲ್ಲಿ ನಡೆದ ಸರಣಿ ಅಪಘಾತಗಳಿಂದ ಜನ ಕಂಗಾಲಾಗಿದ್ದರು. ಇನ್ನೂ ಸಹಾ ಉದ್ಘಾಟನೆಯಾಗದ ಈ ರಸ್ತೆಯಲ್ಲಿ ದಿನನಿತ್ಯ ವಾಹನಗಳ ಒಡಾಟ ಹೆಚ್ಚಾಗಿದ್ದು ಜೊತೆಗೆ ಕಳ್ಳಕಾಕರ ಕಾಟವೂ ಹೆಚ್ಚಾಗಿತ್ತು. ಈ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗಿತ್ತು.

ಇಲ್ಲಿ ಅಪಘಾತ ಆಗಿ ಉಳಿದವರು ಬೆರಳಣಿಕೆಯಷ್ಟು ಮಾತ್ರವೆ. ಕಳೆದ ಬಾರಿ ಅಪಘಾತವಾಗಿ ಮಚ್ಚು ಹಿಡಿದು ಇಬ್ಬರು ಯುವಕರು ಕಾರೋಂದರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು. ಈ ಕುರಿತು ಸಧ್ಯ ಮಾಲೂರು ಪೋಲಿಸ್‌ ಠಾಣೆಲ್ಲಿ ದೂರು ಸಹಾ ದಾಖಲಾಗಿತ್ತು.

ಇದಾದ ನಂತರ ಎಚ್ಚೆತ್ತುಕೊಂಡ ಮಾಲೂರು ಸರ್ಕಲ್‌ ಇನ್ಸ್ಪೆಕ್ಟರ್‌ ವಸಂತ್‌ ಕುಮಾರ್‌ ಅವರು ಜಾವಾಬ್ದರಿಯುತವಾಗಿ ಮತ್ತು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ Speed Radar Gun with Camera ಮೂಲಕ ಅತಿವೇಗವಾಗಿ‌ ಚಾಲನೆ ಮಾಡುವ ವಾಹನಗಳನ್ನು ಹಾಗೂ ನಿಗದಿತ ಪ್ರಮಾಣಕ್ಕಿಂತ ವೇಗವಾಗಿ ಚಲಿಸುವ ವಾಹನ ಚಾಲಕರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಜೊತೆಗೆ ಇಲ್ಲಿ ರಸ್ತೆಯಲ್ಲಿನ ಪುಂಡರ ಬಗ್ಗೆಯೂ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕಿದ್ದು, ಸರ್ಕಾರ ಈ ಬಗ್ಗೆ ಮಾಲೂರು ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕಿದೆ.

5G-6G ಇಂಟರ್ನೇಟ್ ಯುಗದಲ್ಲಿ ನಾವು, ಆದರೆ ಕನಿಷ್ಠ 1G ನೆಟವರ್ಕ್ ಇಲ್ಲದ ಗ್ರಾಮವಿದು
ಕೋಲಾರ: ಮುಳಬಾಗಿಲು ತಾಲ್ಲೂಕು, ತಾಯಲೂರು ಹೋಬಳಿ, ಗುಮ್ಮಕಲ್ಲು ಪಂಚಾಯಿತಿ, ಸೂರಕುಂಟೆ ಗ್ರಾಮದಲ್ಲಿ ಸುಮಾರು 100-200 ಮನೆಗಳಿದ್ದು 900-1000ಜನಸಂಖ್ಯೆಯುಳ್ಳ ಈ ಗ್ರಾಮಕ್ಕಿಲ್ಲ ನೆಟವರ್ಕ್ ಭಾಗ್ಯ.

ಟೆಕ್ನಾಲಜಿ ತುಂಬ ಮುಂದೆವರೆದಿದ್ದು ಪ್ರತಿ ಕೆಲಸ ಕಾರ್ಯಕ್ಕೂ ಇಂಟರ್ನೇಟ್ ಮುಖ್ಯವಾಗಿದೆ ವಿಶೇಷವಾಗಿ ಶೈಕ್ಷಣಿಕವಾಗಿ ಶಾಲಾ-ಕಾಲೇಜುಗಳಲ್ಲಿ ನೀಡುವ ಚಟುವಟಿಕೆಗಳಿಗೆ ಇಂಟರ್ನೇಟ್ ಕನೆಕ್ಟಿವಿಟಿ ತುಂಬ ಅವಸರವಿದೆ ಇಂತಹ ಸಂದರ್ಭದಲ್ಲಿ ಈ ಸೂರಕುಂಟೆ ಗ್ರಾಮಕ್ಕೆ ನೆಟವರ್ಕ್ ಭಾಗ್ಯವಿಲ್ಲದಂತಾಗಿದೆ.

ಆರೋಗ್ಯ ಸಮಸ್ಯೆಯೋ ಇಲ್ಲ ಏನಾದರೂ ತೊಂದರೆಯಾದಲ್ಲಿ 108ಗೋ ಅಥವಾ ಪೋಲೀಸ್ ಇಲಾಖೆಯನ್ನು ಸಂಪರ್ಕಿಸಲು ಸಹ ನರಕಯಾತನೆ ಅನುಭವಿಸುತ್ತಿದ್ದಾರೆ ಈ ಗ್ರಾಮದ ಸಾರ್ವಜನಿಕರು.

ಸುಮಾರು ಬಾರಿ Service Providersಗೆ ಮನವಿ ಮಾಡಿದರು ಯಾವುದೇ ರೀತಿ ಅನುಕೂಲವಾಗಲಿಲ್ಲ ಈ ಗ್ರಾಮದ ಶಾಲೆಗೆ ಹಾಗೂ ಇತರೆ ಸರ್ಕಾರಿ ಕೆಲಸಗಳಿಗಾಗಿ ಅಧಿಕಾರಿಗಳು ಬರಲು ಸಹಾ ಹಿಂಜರಿಯುವಂತ ಸ್ಥಿತಿಯಲ್ಲಿದೆ ಈ ಗ್ರಾಮ.

ತಾಲ್ಲೂಕಿನಲ್ಲಿ ಅತಿಹೆಚ್ಚು ಟಮೋಟ ಬೆಳೆಯುವ ಗ್ರಾಮಗಳ ಪಟ್ಟಿಯಲ್ಲಿ ಈ ಗ್ರಾಮವಿದ್ದು ಕೃಷಿ ಮತ್ತು ಹೈನುಗಾರಿಕೆಯನ್ನು ನಂಬಿದರು ರೈತರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಶಯದೊಂದಿಗಿರುತ್ತಾರೆ.

ಸಂಭಂದಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ನೆಟವರ್ಕ್ ಟೌವರ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗಿಸಲು ಗ್ರಾಮಸ್ಥರು ನೋವನ್ನು ತೋಡಿಕೊಂಡಿರುತ್ತಾರೆ.

ನಮ್ಮ ಸಮಸ್ಯೆ 20ದಿನಗಳಲ್ಲಿ ಪರಿಷ್ಕಾರವಾಗದಿದ್ದಲ್ಲಿ ನಮ್ಮ ಸೂರಕುಂಟೆ ಗ್ರಾಮದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ನಡೆಸುವುದಾಗಿ KSRTC ನಿವೃತ್ತ ಮೇಲ್ವಿಚಾರಕರು ಸುಬ್ರಮಣಿ, ರಾಮಚಂದ್ರ, ಮಂಜುನಾಥ್, ಚೇತನ್ ಹಾಗೂ ಗ್ರಾಮಸ್ಥರು, ಯುವಕರು ತಿಳಿಸಿರುತ್ತಾರೆ.

ಅರ್ಥ ಪೂರ್ಣ ಬುದ್ಧ ಪೂರ್ಣಿಮೆ ಆಚರಣೆ
ಮಾಲೂರು,ಮೇ 05 :ಬುದ್ಧ ಪೂರ್ಣಿಮೆಯ ಅಂಗವಾಗಿ ನಗರವಾಸಿಗಳಾದ ಆಯುಷ್ಮತಿ ಗುಟ್ಟಮ್ಮ ಮತ್ತು ಆಯುಷ್ಮಾನ್ ಮುನಿಯಲ್ಲಪ್ಲ ನವರ ಕುಟುಂಬದ ವತಿಯಿಂದ 2587ನೇ ಬುದ್ಧ ಪೂರ್ಣಿಮೆಯನ್ನು ಅರ್ಥ ಪೂರ್ಣವಾಗಿ ಈ ಬಾರಿ ಆಯುಷ್ಮತಿ ಭಾರತಿ ಮತ್ತು ಶ್ರೀನಿವಾಸ್ ರವರ ಮನೆಯಲ್ಲಿ ತಮ್ಮ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಬುದ್ಧ ಪ್ರಾರ್ಥನೆ ಮತ್ತು ಪ್ರವಚನ ಮೂಲಕ ನೆರವೆರಿಸಿದರು.

ಈ ಕಾರ್ಯಕ್ರಮದಲ್ಲಿ ಬೌದ್ಧ ಧಮ್ಮ ಪ್ರಚರಾಕರಾದ ಎಂ ಪಾಪಣ್ಣನವರು ಪ್ರಾರ್ಥನೆಯನ್ನು ಮಾಡಿಸಿದರು ಹಾಗೆಯೇ ಊರುಗೋಲು ವೈಚಾರಿಕ ಸಂಘದ ಅಧ್ಯಕ್ಷರಾದ ಎಸ್ ನಾರಾಯಣಸ್ವಾಮಿಯವರು ಬುದ್ಧ ಮತ್ತು ಅಂಬೇಡ್ಕರ್ ರವರ ಬಗ್ಗೆ ಪ್ರವಚನವನ್ನು ನೀಡಿ ಅರಿವು ಮೂಡಿಸಿದರು.

ಜೈ ಶ್ರೀನಿ ನಾಗಸ್ ರವರು ಈ ಬುದ್ಧ ಪೂರ್ಣಮೆಯನ್ನು ಸತತವಾಗಿ 8 ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದು ಇದರ ಜೊತೆಗೆ ತಮ್ಮ ಹಳ್ಳಿಯ ತನ್ನ ಸಮುದಾಯದವರಿಗೆ ಬುದ್ಧ, ಅಶೋಕ, ಅಂಬೇಡ್ಕರ್, ಪುಲೆ, ಪೆರಿಯರ್ ಕುವೆಂಪು ಬಗ್ಗೆ ಅರಿವು ಮುಗಿಸಿಕೊಂಡು ಯುವ ಸಮುದಾಯದಲ್ಲಿ ಹೊಸ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡಿಕೊಂಡು ಬಂದಿದಾರೆ.

ಬುದ್ಧ ಪೂರ್ಣಿಮೆಯನ್ನು ಶ್ರದ್ಧೆ ಮತ್ತು ಅರ್ಥ ಪೂರ್ಣವಾಗಿ ಆಚರಿಸಿದ್ದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ನೇಹಿತರು ಅಭಿನಂದನೆಗಳನ್ನು ತಿಳಿಸಿದರು.

ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ: ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ: ಕೆ ವಿ ಪ್ರಭಾಕರ್
ಕೋಲಾರ ಮಾ 16: ನಾನು ನನಗೆ ಸಿಕ್ಕ ಅವಕಾಶಗಳ ಕಾರಣಕ್ಕೆ ಬಹಳ ಎತ್ತರಕ್ಕೆ ಬೆಳೆದಿದ್ದೇನೆ ಎಂದು ನಿಮಗೆಲ್ಲಾ ಅನ್ನಿಸಿರಬಹುದು ಆದರೆ, ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ. ಇದೇ ಮಣ್ಣಿನಲ್ಲಿ ನನ್ನ ಬೇರುಗಳು ಆಳವಾಗಿ ಇಳಿದಿವೆ. ಆದ್ದರಿಂದಲೇ ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭಾವನಾತ್ಮಕವಾಗಿ ನುಡಿದರು.

ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ ಅನುದಾನ ಒದಗಿಸಿದಕ್ಕಾಗಿ ಸಂಘ ಮತ್ತು ನಾಗರಿಕ ಜನ ಸಂಘಟನೆಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನನ್ನ ಹುಟ್ಟು, ಬಾಲ್ಯ ಎಲ್ಲಾ ಕೋಲಾರ ಮಣ್ಣಿನಲ್ಲಿ ಬೆರೆತಿದೆ. ನನ್ನ ಪತ್ರಿಕಾ ವೃತ್ತಿ ಬದುಕನ್ನು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೂ ಕೋಲಾರದ ಬೀದಿಗಳು ಎಂದು ಸ್ಮರಿಸಿದರು.

ಕಾರ್ಮಿಕ ಚಳವಳಿ, ದಲಿತ ಚಳವಳಿ, ಅಹಿಂದ ಹೋರಾಟ, ಪ್ರಗತಿಪರ ಚಳವಳಿಗಳ ನೆಲ ಕೋಲಾರ. ಈ ಎಲ್ಲಾ ಹೋರಾಟ, ಚಳವಳಿಗಳಿಗೆ ಸಾಕ್ಷಿಯಾಗಿ ನಾನು ಇಲ್ಲಿ ಬೆಳೆದಿದ್ದೇನೆ. 40 ವರ್ಷಗಳಲ್ಲಿ ಕೋಲಾರದ ಬದುಕು ಮತ್ತು ಬದಲಾವಣೆಗಳನ್ನು ನಾನು ನೋಡಿದ್ದೇನೆ. ಆದರೆ ಕೋಲಾರ ಜನರ ಹೃದಯ, ಪ್ರೀತಿ, ವಿಶ್ವಾಸ ಮಾತ್ರ 40 ವರ್ಷಗಳಿಂದ ಹಾಗೇ ಇದೆ. ಹೀಗಾಗಿ ಕೋಲಾರದ ಮಣ್ಣಿನ ಜೊತೆಗೆ ನನಗೆ ಭಾವನಾತ್ಮಕ ಬೆಸುಗೆ ಇದೆ. ಇವತ್ತು ನಾನು ಸ್ವೀಕರಿಸಿದ ಈ‌ ಅಭಿನಂದನೆ, ಗೌರವ ಎಲ್ಲವನ್ನೂ ಕೋಲಾರ ಜನರ ಹೃದಯಕ್ಕೆ, ಈ ಮಣ್ಣಿಗೆ ಅರ್ಪಿಸುತ್ತೇನೆ.

ನಾನು ಮುಖ್ಯಮಂತ್ರಿಗಳ ಸಲಹೆಗಾರನಾಗಿ, ಕ್ಯಾಬಿನೆಟ್ ದರ್ಜೆ ಪಡೆದು ಕೋಲಾರ ಪ್ರವೇಶಿಸಿದಾಗ ನನಗೆ ಮೊದಲು ನೆನಪಾಗಿದ್ದು ನಾನು ಓದಿದ ಶಾಲೆ, ನನ್ನನ್ನು ತಿದ್ದಿದ ಗುರುಗಳು ಮತ್ತು ನನಗೆ ಮೊದಲ ಸಂಬಳ ಕೊಟ್ಟ ನನ್ನ ಕೋಲಾರ ಪತ್ರಿಕೆ. ಹೀಗಾಗಿ ನಾನು ಓದಿದ ಶಾಲೆಗೆ ಮೊದಲು ಋಣ ತೀರಿಸುವ ಪ್ರಯತ್ನಕ್ಕೆ ಮುಂದಾದೆ. ಹೀಗೇ ಇಲ್ಲಿನ ಪತ್ರಿಕಾ ಸಮೂಹಕ್ಕೆ ಅನುದಾನವನ್ನು ಒದಗಿಸುವ ಸೌಭಾಗ್ಯ ಕೂಡ ನನಗೆ ಒದಗಿ ಬಂತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕಾಗಿ ನಾನು ಕೇಳಿದ್ದೆಲ್ಲವನ್ನೂ ಒದಗಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಮಾಸಿದ ಬಟ್ಟೆಯಲ್ಲಿ ನನ್ನ ಜೊತೆಗೆ ಓಡಾಡದ, ಆಡಿದ, ಒಡನಾಡಿದ ಗೆಳೆಯರು ಇಲ್ಲಿದ್ದಾರೆ. ಒಂದೇ ತಟ್ಟೆಯಲ್ಲಿ ತುತ್ತು ಹಂಚಿಕೊಂಡು ಊಟ ಮಾಡಿದ ಗೆಳೆಯರು ಇಲ್ಲಿದ್ದಾರೆ. ಮೊದಲ ಬಾರಿಗೆ ಒಟ್ಟೊಟ್ಟಿಗೇ ಪೆಗ್ ಹಾಕಿದ ಸ್ನೇಹಿತರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರಿಗೂ ನಾನು ಎದೆಯಾಳದಿಂದ ಅಭಿನಂದಿಸುತ್ತೇನೆ.

ಕೋಲಾರ ನನ್ನ ಜನ್ಮ ಭೂಮಿ, ಕಾಯಕ ಭೂಮಿ, ಕರ್ಮ ಭೂಮಿ ಎಲ್ಲವೂ ಹೌದು. ಇದರ ಋಣ ನನ್ನ ಮೇಲಿದೆ. ಈ ಋಣ ತೀರಿಸುವುಕ್ಕಾಗಿ ನಾನು ನನಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ.

“ನಾವು ಖುಷಿಯಲ್ಲಿದ್ದಾಗ ಚಪ್ಪಾಳೆ ತಟ್ಟಲು ಹತ್ತು ಬೆರಳುಗಳಿರುತ್ತವೆ. ಕಣ್ಣೀರು ಬಂದಾಗ ಒರೆಸಲು ಬರುವುದು ಒಂದೇ ಬೆರಳು” ಎನ್ನುವ ಕೊಪ್ಪಳ ಗವಿ ಮಠದ ಶ್ರೀಗಳ ಮಾತನ್ನು ಉಲ್ಲೇಖಿಸಿ, ಪತ್ರಕರ್ತರ ಕುಟುಂಬಗಳ ಕಣ್ಣೀರು ಒರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ನಾವೆಲ್ಲಾ ಅವರ ನೆರಳಲ್ಲಿ ನಾವಿದ್ದೀವಿ ಎಂದು ಸ್ಮರಿಸಿದರು.

ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕರಿಸಿದ ಕೋಲಾರದ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ತಮ್ಮ ಶಿಕ್ಷಕರುಗಳ ಹೆಸರಿಡಿದು ಸ್ಮರಿಸಿ ಎಲ್ಲರಿಗೂ ಧನ್ಯತೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಮೀರಾ ಪ್ರಭಾಕರ್ ಅವರನ್ನೂ ಸಭೆ ಅಭಿನಂದಿಸಿತು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀನಾರಾಯಣ್, ಅಕಾಡೆಮಿ ಸದಸ್ಯರಾದ ಪತ್ರಕರ್ತ ಚಿದಾನಂದ ಪಟೇಲ್, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಸೇವೆಯಿಂದ ದೇವರ ದರ್ಶನ: ರೋಟರಿ ಕ್ಲಬ್ ಅಧ್ಯಕ್ಷರಾದ ಡಾ.ನಾಗಾನಂದ ಕೆಂಪರಾಜ್
ಕೋಲಾರ,ಫೆ,28: “ಸಮಾಜಸೇವೆಯನ್ನು ಮಾಡುವುದು ಎಂದರೆ ದೇವರನ್ನು ದರ್ಶನ ಮಾಡಿಕೊಳ್ಳುವುದೇ ಆಗಿದ್ದು, ಸೇವೆಯೇ ದೇವರು” ಎಂದು ಕೋಲಾರ ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷರೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಡಾ.ನಾಗಾನಂದ ಕೆಂಪರಾಜ್ ಅವರು ಅಭಿಪ್ರಾಯಪಟ್ಟರು.

ಕೋಲಾರ ಸಮೀಪದ ಅಣ್ಣಿಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜಿನ ಕರ್ನಾಟಕ ನಾಗರಿಕ ರಕ್ಷಣಾ ದಳ(ಕೆಸಿಡಿಸಿ) ವತಿಯಿಂದ ಹಮ್ಮಿಕೊಂಡಿರುವ ೪ ದಿನಗಳ ‘ಕಾಲೇಜು ವಿದ್ಯಾರ್ಥಿಗಳ ಗ್ರಾಮೀಣ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಸಮಾಜಸೇವೆಗೆ ಮಹೋನ್ನತವಾದ ನೆಲೆ ಮತ್ತು ಬೆಲೆ ಇದೆ. ಮಹಾತ್ಮಾ ಗಾಂಧೀಜಿ, ವಿವೇಕಾನಂದ, ಕುವೆಂಪು ಮೊದಲಾದವರು ಬಡವರ ಸೇವೆಯನ್ನು ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಬಡವರ ಸೇವೆಯಲ್ಲಿ ಭಗವಂತನನ್ನು ಕಾಣಿರಿ ಎಂದಿದ್ದಾರೆ. ದರಿದ್ರ ದೇವೋಭವ ಎಂಬ ನುಡಿಯು ಸಮಾಜಸೇವೆಗೆ ಸ್ಫೂರ್ತಿ ನೀಡುವಂತದ್ದಾಗಿದೆ. ನಮಗೆ ಹುಟ್ಟು ಮತ್ತು ಸಾವು ಸಹಜವಾದುದು. ಆದರೆ ನಮ್ಮ ಬಾಳ್ವೆಗೆ ಬೆಲೆ ಬರುವುದು ನಾವು ಮಾಡುವ ಸೇವೆಯಿಂದ ಮಾತ್ರ ಎಂದು ತಿಳಿಸಿದರು.

ನಾವು ಎಷ್ಟು ಓದಿದ್ದೀವಿ, ಎಷ್ಟು ಸಂಪಾದನೆ ಮಾಡಿದ್ದೀವಿ, ಎಷ್ಟು ಎತ್ತರ ಬೆಳೆದಿದ್ದೀವಿ ಅನ್ನೋದಕ್ಕೆ ಬೆಲೆ ಬರೋದು ನಮ್ಮನ್ನು ಈ ನೆಲ, ಜಲ, ಜನರ ಸೇವೆಗೆ ತೊಡಗಿಸಿಕೊಂಡಾಗ ಮಾತ್ರ. ಸೇವಾ ಮನೋಧರ್ಮವು ಶ್ರೇಷ್ಠವಾದುದು. ಇದನ್ನು ಇಂದಿನ ವಿದ್ಯಾರ್ಥಿಗಳು, ಯುವಜನರು ಬೆಳೆಸಿಕೊಳ್ಳಬೇಕು. ದೇಶಕ್ಕೆ ತುರ್ತು ಸಂದರ್ಭ ಬಂದಾಗ ಜವಾಬ್ದಾರಿಯುತ ನಾಗರೀಕರಾಗಿ ದೇಶ ಸೇವೆ ಮಾಡಲು ಸಿದ್ಧರಾಗಬೇಕು ಎಂಬುದನ್ನು ಇಂತಹ ಗ್ರಾಮೀಣ ಶಿಬಿರಗಳು ಕಲಿಸಿಕೊಡುತ್ತವೆ. ಗ್ರಾಮಗಳ ಜನರಲ್ಲಿ ಕಾಣುವ ಪ್ರೀತಿ, ನೆಲದ ಅರಿವುಗಳನ್ನು ಕಲಿತುಕೊಂಡರೆ ಅದರಿಂದ ಜಗತ್ತಿನಲ್ಲಿ ಯಾವು ಮೂಲೆಯಲ್ಲಿದ್ದಾದರೂ ಬದುಕಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಮಾಜ ಸೇವಕರೂ ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮಾಜಿ ಸದಸ್ಯರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ ಅವರು ಮಾತನಾಡಿ, ಹಳ್ಳಿಯಲ್ಲಿ ಬದುಕಿ ಬಾಳಲು ಕಲಿತರೆ ಡೆಲ್ಲಿಯಲ್ಲೂ ಬಾಳಿ ಬದುಕುವ ಕೌಶಲ್ಯ ಸಿದ್ಧಿಸುತ್ತದೆ. ರೈತರೇ ರಾಷ್ಟçದ ಬೆನ್ನೆಲುಬು. ರೈತರು ಬಾಳಿಬದುಕಿ ತಮ್ಮ ಕೃಷಿಯ ಮೂಲಕ ಇಡೀ ಜಗತ್ತನ್ನು ಬೆಳಗುವ ಕಾಯಕಶ್ರದ್ಧೆಯನ್ನು ಇಂದಿನ ಹೊಸ ತಲೆಮಾರು ಅರಿಯಬೇಕು. ವಿದ್ಯಾಭ್ಯಾಸದ ಜೊತೆಗೆ ಜನಪರವಾದ ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಭಾರತ ಸಂವಿಧಾನವೆಂಬ ನಮ್ಮೆಲ್ಲರ ರಕ್ಷಾ ಕವಚವನ್ನು ಕಾಪಾಡಿಕೊಂಡು ಹಳ್ಳಿಗಳ ಉದ್ಧಾರದ ಮೂಲಕ ರಾಷ್ಟ್ರೋದ್ಧಾರವಾಗುವತ್ತ ಶ್ರಮಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಾರ್ಯದರ್ಶಿಯಾದ ಸೋಮನಾಥ್, ರಾಷ್ಟçಪ್ರಶಸ್ತಿ ಪ್ರಶಸ್ತಿ ವ್ಯಾಸ್ ಸಮ್ಮಾನ್ ಪುರಸ್ಕೃತ ಯುವ ವಿದ್ವಾಂಸರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ, ಯುವಕವಿ ಹಾಗೂ ಕಲಾವಿದ ಅಮರನಾಥ್ ಅರಿನಾಗನಹಳ್ಳಿ, ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ ಕನ್ನಡ ಉಪನ್ಯಾಸಕರಾದ ಪ್ರವೀಣ್ ಮಟ್ನಹಳ್ಳಿ ಅವರು ಉಪಸ್ಥಿತರಿದ್ದರು. ಕ್ರಿಸ್ತು ಜಯಂತಿ ಕಾಲೇಜಿನ ಕರ್ನಾಟಕ ನಾಗರಿಕ ರಕ್ಷಣಾ ದಳ(ಕೆಸಿಡಿಸಿ) ಸಂಯೋಜಕರಾದ ಡಾ.ಮುಸ್ಲಿಂ ಅಬ್ದುಲ್ ರಜಾಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಡಾ.ಎಸ್.ಇಂದಿರಾ ಅವರು ವಂದಿಸಿದರು. ಗ್ರಾಮೀಣ ಶಿಬಿರದಲ್ಲಿ ಕ್ರಿಸ್ತು ಜಯಂತಿ ಕಾಲೇಜಿನ ವಿವಿಧ ಅಧ್ಯಯನ ಶಾಖೆಗಳ ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.