ಉತ್ತರ ಕನ್ನಡ – Peepal Media

ಕಾಂಗ್ರೆಸ್ ಕರೆದಿದ್ದು ನಿಜ, ಆದ್ರೆ ಸೇರಲ್ಲ, ಬಿಜೆಪಿಯಲ್ಲೇ ಆರಾಮಾಗಿದ್ದೇನೆ: ಶಾಸಕ ದಿನಕರ ಶೆಟ್ಟಿ ಸ್ಪಷ್ಟನೆ
ಕುಮಟಾ: ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದು, ತಾವು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ನಿಜವಾದರೂ, ಬಿಜೆಪಿಯಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಈ ಹಿಂದೆ ಜೆಡಿಎಸ್‌ನಲ್ಲಿ ಶಾಸಕನಾಗಿದ್ದಾಗಲೂ ಬಿಜೆಪಿಯಿಂದ ಆಹ್ವಾನ ಬಂದಿತ್ತು, ಆದರೆ ಆಗ ನಾನು ಪಕ್ಷ ಬಿಡಲಿಲ್ಲ. ಈಗ ಬಿಜೆಪಿಯಲ್ಲಿ ನಾನು ಆರಾಮವಾಗಿದ್ದೇನೆ, ಹೀಗಿರುವಾಗ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದಿಂದ ತಮ್ಮ ಕ್ಷೇತ್ರಕ್ಕೆ ಅನುದಾನ ಕಡಿಮೆ ಬಂದರೂ ಪರವಾಗಿಲ್ಲ, ಆದರೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುವಂತೆ ನಡೆದುಕೊಳ್ಳುವುದಿಲ್ಲ ಎಂದು ದಿನಕರ ಶೆಟ್ಟಿ ಗುಡುಗಿದ್ದಾರೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಕೋಲಾ ತಾಲೂಕಿನ ಮಂಜುಗುಣಿಗೆ ಭೇಟಿ ನೀಡಿದ್ದಾಗ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ, ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರು ಹಾಸ್ಯಮಯವಾಗಿ ‘ಕಾಂಗ್ರೆಸ್‌ಗೆ ಬರಬೇಡಿ, ಅಲ್ಲೇ ಇರಿ’ ಎಂದು ಹೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ದಿನಕರ ಶೆಟ್ಟಿ ಅವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವ ಮೂಲಕ ಪಕ್ಷಾಂತರದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ತಾವು ಸದಾ ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿರುವುದಾಗಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.

ಬಿಜೆಪಿಯರವರ ಟೀಕೆಗಳ ನಡುವೆಯೂ ರಾಜ್ಯದ ಅಭಿವೃದ್ಧಿ ಸಾಗುತ್ತಿದೆ | ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು- ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಕಾರವಾರ, ಫೆಬ್ರವರಿ 22: ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನರಿಗೆ ಭರವಸೆ ನೀಡಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾರವಾರ ಲೋಕೋಪಯೋಗಿ ಇಲಾಖೆ ಆಯೋಜಿಸಲಾಗಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶದಿಂದ ನಮ್ಮ ಸರ್ಕಾರ 2016 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಂದು 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಇಂದು ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿನ ಜನರು ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದ್ದರು. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ಆಯವ್ಯಯದಲ್ಲಿ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದರು.

ಪ್ರತಿ ಜಿಲ್ಲೆಗೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕ್ಯಾನ್ಸರ್ ಯೂನಿಟ್ ಒಂದನ್ನು ಕಾರವಾರದಲ್ಲಿ ಸ್ಥಾಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನೊದುಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ 22 ಸರ್ಕಾರಿ ಮೆಡಿಕಲ್ ಕಾಲೇಜಿದ್ದು, ಮುಂದಿನ ದಿನಗಳಲ್ಲಿ ಕೋಲಾರ, ಪುತ್ತೂರು, ಬಿಜಾಪುರಗಳಲ್ಲಿ ಕಾಲೇಜು ನಿರ್ಮಿಸಲಾಗುವುದು ಎಂದರು.

ಹಿಂದಿನ ಬಿಜೆಪಿ ಸರ್ಕಾರ ಕಾರವಾರದ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ
ಗ್ಯಾರಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ ನಮ್ಮ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2954 ಕೋಟಿ ರೂ.ಗಳನ್ನು ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ರಾಜ್ಯದಲ್ಲಿ ಸುಮಾರು 1,18,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಬಿಜೆಪಿಯವರು ನಮ್ಮ ಜನಪರ ಯೋಜನೆಗಳನ್ನು ಟೀಕಿಸುತ್ತಾ, ಅಭಿವೃದ್ಧಿಯಾಗುತ್ತಿಲ್ಲವೆಂದು ದೂರುತ್ತಿದ್ದಾರೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಇಲ್ಲಿನ ಸೇತುವೆ ಯೋಜನೆಗಳನ್ನುಪೂರ್ಣಗೊಳಿಸಲಿಲ್ಲ. ನಮ್ಮ ಸರ್ಕಾರ ಉಳುಗಾ ಕೆರವಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸುತ್ತೇವೆ ಎಂದರು.

ಜೂನ್ ಒಳಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾರವಾರ: ಜೂನ್ ತಿಂಗಳ ಮೊದಲು ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 450 ಹಾಸಿಗೆಗಳ ಆಸ್ಪತ್ರೆ ಮತ್ತು ಅಂಕೋಲಾದ ಗಂಗಾವಳಿ-ಮಂಜಗುಣಿ ಸೇತುವೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿಯವರು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

“ಪ್ರತಿ ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ಯೋಜನೆ ಸರ್ಕಾರದ ಮುಂದಿದೆ. ಅದಕ್ಕೂ ಮೊದಲು ಪ್ರತಿಯೊಂದು ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ನಾವು ಬಯಸುತ್ತೇವೆ,” ಎಂದು ಸಿದ್ದರಾಮಯ್ಯ ತಿಳಿಸಿದರು.

ಹೆಚ್.ಡಿ. ಕುಮಾರಸ್ವಾಮಿ ಅವರ ‘ಕುರ್ಚಿಗಾಗಿ ಜಾತಿ’ ಹೇಳಿಕೆಯು ಒಂದು ಜೋಕ್ ಎಂದು ಸಿದ್ದರಾಮಯ್ಯ ಟೀಕಿಸಿದರು. ಸದ್ಯ ಕರ್ನಾಟಕದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಈ ವರ್ಷ ಇನ್ನೂ ನಾಲ್ಕು ಕಾಲೇಜುಗಳು ಬರಲಿವೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರವು “ಹಾಲಕ್ಕಿ ಒಕ್ಕಲಿಗ” ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ರಾಜ್ಯ ಸರ್ಕಾರವು ಈ ಪ್ರಸ್ತಾವನೆಯನ್ನು ಪುನಃ ಸಲ್ಲಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅಕ್ರಮ ಸಂಬಂಧ |ಕೊಲೆ ಪ್ರಕರಣದಡಿ ಟಿವಿ ಜ್ಯೋತಿಷಿ ಸೇರಿ ಏಳು ಜನರ ಬಂಧನ
ಕಾರವಾರ/ಸಿದ್ದಾಪುರ: ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದ 43 ವರ್ಷದ ವಸಂತ ನಾಯ್ಕ ಅವರ ಕೊಲೆಗೆ ಸಂಬಂಧಿಸಿದಂತೆ, ಜನಪ್ರಿಯ ಟಿವಿ ಜ್ಯೋತಿಷಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.

ಹೆಮ್ಮನಬೈಲು ಮೂಲದ, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿಷಿ ಕಮಲಾಕರ್ ಹೆಗಡೆ (48) ಮತ್ತು ಮೃತ ವಸಂತ ಅವರ ಅತ್ತಿಗೆ (ಸಹೋದರನ ಪತ್ನಿ) ಸುಚಿತ್ರಾ ನಾಯ್ಕ (36) ಸೇರಿದಂತೆ ಇತರ ಆರು ಶಂಕಿತರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಹೆಗಡೆ ಮತ್ತು ಇತರ ಇಬ್ಬರು ಶಂಕಿತರನ್ನು ಸಿದ್ದಾಪುರದಲ್ಲಿ ಇರಿಸಲಾಗಿದ್ದು, ಉಳಿದ ನಾಲ್ವರನ್ನು ಶಿವಮೊಗ್ಗದಲ್ಲಿ ಇರಿಸಲಾಗಿದೆ.

ಆರೋಪಿ ಹೆಗಡೆಯನ್ನು ಸಿದ್ದಾಪುರಕ್ಕೆ ಕರೆತಂದ ವಾಹನಕ್ಕೆ ಅವರಗುಪ್ಪದ ನಿವಾಸಿಗಳು ಮುತ್ತಿಗೆ ಹಾಕಿದರು. ಅಲ್ಲದೆ ಅವರು ಜ್ಯೋತಿಷಿಯ ಕಾರಿನ ಮೇಲೆ ದಾಳಿ ನಡೆಸಿ ಜಖಂಗೊಳಿಸಿದರು. ವಸಂತ ನಾಯ್ಕ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಡರಾತ್ರಿಯವರೆಗೂ ಪೊಲೀಸ್ ಠಾಣೆಯ ಹೊರಗೆ ಠಿಕಾಣಿ ಹೂಡಿದ್ದರು.

ಆರೋಪಿ ಹೆಗಡೆ, ಸುಚಿತ್ರಾ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆನ್ನಲಾಗಿದೆ. ಈ ವಿಷಯದಿಂದ ಸುಚಿತ್ರಾ ಪತಿ ಮಹೇಶ್ ನಾಯ್ಕ ಖಿನ್ನತೆಗೆ ಒಳಗಾಗಿದ್ದರು. “ಮಹೇಶ್ ತನ್ನ ಮಗಳೊಂದಿಗೆ ಅವರಗುಪ್ಪದಲ್ಲಿರುವ ತಂದೆಯ ಮನೆಯಲ್ಲಿ ವಾಸವಿದ್ದರು. ಸುಚಿತ್ರಾ, ಹೆಗಡೆಯೊಂದಿಗೆ ಸೇರಿ ತನ್ನ ಪತಿ ಬಳಿಯಿದ್ದ ಮಗಳನ್ನು ಕರೆದೊಯ್ಯಲು ಅಲ್ಲಿಗೆ ಹೋಗಿದ್ದರು,” ಎಂದು ಪೊಲೀಸರು ತಿಳಿಸಿದ್ದಾರೆ.

“ಸುಚಿತ್ರಾ ಮತ್ತು ಹೆಗಡೆ ಸೇರಿ ಮಹೇಶ್ ಅವರ ಹತ್ಯೆಗೆ ಯತ್ನಿಸಿದರು. ಈ ವೇಳೆ ಮಹೇಶ್ ಅವರ ಸಹೋದರ ವಸಂತ ಅಡ್ಡಬಂದಾಗ, ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು,” ಎಂದು ಎಸ್ಪಿ ದೀಪನ್ ಎಂ.ಎನ್ ತಿಳಿಸಿದ್ದಾರೆ.

ಖಾಲಿ ಕಟ್ಟಡದಲ್ಲಿ ಪ್ರಾರ್ಥನೆ ಮಾಡುತ್ತಿದ್ದ 12 ಮಂದಿಯನ್ನು ಬಂಧಿಸಿದ ಯೋಗಿ ಸರ್ಕಾರ – ನೆಟ್ಟಿಗರ ಆಕ್ರೋಶ
ಉತ್ತರ ಪ್ರದೇಶ : ಯಾರ ಅನುಮತಿಯನ್ನು ಪಡೆಯದೆ ಖಾಲಿ ಮನೆಯಲ್ಲಿ ನಮಾಝ್ (Namaz) ಮಾಡಿದ ಕಾರಣಕ್ಕಾಗಿ 12 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ(Uttar Pradesh) ಬರೇಲಿ(Bareilly) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಮೊಹಮ್ಮದ್‌ಗಂಜ್ ಗ್ರಾಮದ ಜನರಿಂದ ಕಳೆದ ಹಲವಾರು ವಾರಗಳಿಂದ ಖಾಲಿ ಮನೆಯನ್ನು ತಾತ್ಕಾಲಿಕ ಮದರಸಾವಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಬಂದ ನಂತರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಪಿ(ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾರೆ.

“ಅನುಮತಿ ಇಲ್ಲದೆ ಯಾವುದೇ ಹೊಸ ಧಾರ್ಮಿಕ ಚಟುವಟಿಕೆ ಅಥವಾ ಸಭೆ ನಡೆಸುವುದು ಕಾನೂನಿನ ಬಾಹಿರವಾಗಿದೆ. ಅಂತಹ ಚಟುವಟಿಕೆಗಳು ಪುನರಾವರ್ತನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕ” ಎಂದು ಮನವಿ ಮಾಡಿದರು.

ಪೊಲೀಸರ ಮಾಹಿತಿ ಪ್ರಕಾರ, ಖಾಲಿಯಿದ್ದ ಮನೆ ಹನೀಫ್‌ ಎಂಬುವವರಿಗೆ ಸೇರಿದ್ದು, ಶುಕ್ರವಾರದ ನಮಾಜ್‌ಗೆ ತಾತ್ಕಾಲಿಕವಾಗಿ ಬಳಸಲಾಗುತ್ತಿತ್ತು. ಒಟ್ಟು 15 ಮಂದಿ ನಮಾಜ್‌ ಮಾಡುತ್ತಿದ್ದು, ಮೂವರು ತಲೆ ಮರೆಸಿಕೊಂಡಿದ್ದಾರೆ. ಅವರನ್ನ ಪತ್ತೆಹಚ್ಚಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಂಧಿತ 12 ಜನರ ವಿರುದ್ಧ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಅವರಿಗೆ ಕೋರ್ಟ್ ಜಾಮೀನು ನೀಡಿದೆ.

ನೆಟ್ಟಿಗರ ಆಕ್ರೋಶ

ಯೋಗಿ ಸರ್ಕಾರದ ಈ ನಡೆಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ ಖಾಲಿ ಕಟ್ಟಡಲ್ಲಿ ನಮಾಜ್‌ ಮಾಡಿದರೆ ನಿಮಗೇನು ಸಮಸ್ಯೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗುತಿದ್ದ ವಿದ್ಯಾರ್ಥಿಗಳು, ಜೀವ ಉಳಿಸಿದ ಲೈಫ್ ಗಾರ್ಡ್ಸ್
ಉತ್ತರ ಕನ್ನಡ : ಸಮುದ್ರದಲ್ಲಿ (Sea) ಆಟ ಆಡುವ ವೇಳೆ ಅಲೆಗಳ (Waves) ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಐವರನ್ನು ಸ್ಥಳದಲ್ಲಿದ್ದ ಲೈಫ್ ಗಾರ್ಡ್ (Life guards) ಸಮಯ ಪ್ರಜ್ಞೆ ಮೆರೆದು ಕಾಪಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಶಿಕ್ಷಕ ಸೇರಿದಂತೆ ನಾಲ್ಕು ವಿದ್ಯಾರ್ಥಿಗಳು ಕೊಚ್ಚಿ ಹೋಗುತ್ತಿದ್ದರು. ಸಮುದ್ರದ ನೀರಿನಲ್ಲಿ ಶಿಕ್ಷಕ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕಿದ್ದನ್ನು ಗಮನಿಸಿದ ಲೈಫ್​ಗಾರ್ಡ್ ಸಿಬ್ಬಂದಿ ಕೂಡಲೇ ಸಹಾಯಕ್ಕೆ ಧಾವಿಸಿ ಎಲ್ಲರನ್ನೂ ಸುರಕ್ಷಿತವಾಗಿ ತೀರಕ್ಕೆ ಕರೆತಂದಿದ್ದಾರೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಜಿಲಾಲ್(15), ನಿಯಾಜ್(15), ಆಕಾಶ್(15) ಸೇರಿ ಇನ್ನೋರ್ವ ವಿದ್ಯಾರ್ಥಿ ಸೇರಿ ಶಿಕ್ಷಕನನ್ನೂ ರಕ್ಷಣೆ ಮಾಡಲಾಗಿದೆ. ಲೈಫ್​ಗಾರ್ಡ್ ಸಿಬ್ಬಂದಿ ದರ್ಶನ್ ಹರಿಕಾಂತ್, ಚಿದಾನಂದ ಲಕ್ಕುಮನೆ, ದೀಪಕ್ ಗೌಡ, ಅಶೋಕ್ ಹರಿಕಾಂತ್, ಮಹೇಶ್​ ಮತ್ತು ಜಗ್ಗು ರಕ್ಷಣೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಕರ್ನಾಟಕದ ಕೈಗಾ ವಿದ್ಯುತ್ ಸ್ಥಾವರದಲ್ಲಿ ಗೇಟ್ ಕುಸಿದು ಸಿಐಎಸ್‌ಎಫ್ ಸಿಬ್ಬಂದಿ ಸಾವು
ಕಾರವಾರ: ಶನಿವಾರ ರಾತ್ರಿ ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ತ್ಯಾಜ್ಯ ವಿಲೇವಾರಿ ಘಟಕದ (nuclear waste disposal unit) ಪ್ರವೇಶದ್ವಾರದಲ್ಲಿದ್ದ ಭಾರೀ ಗೇಟ್ ಕುಸಿದು ಬಿದ್ದ ಪರಿಣಾಮ, 48 ವರ್ಷದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಮುಖ್ಯ ಪೇದೆ (head constable) ಸಾವಿಗೀಡಾಗಿದ್ದಾರೆ.

ಈ ಅನಿರೀಕ್ಷಿತ ಅಪಘಾತವು ರಾತ್ರಿ ಪಾಳಿಯಲ್ಲಿ ಸಂಭವಿಸಿದ್ದು, ಮೃತ ಸಿಬ್ಬಂದಿ ಶೇಖರ್ ಭೀಮರಾವ್ ಜಗದಾಳೆ ಅವರು ಸ್ಥಳದಲ್ಲಿ ಕಾವಲು ಕಾಯುತ್ತಿದ್ದರು. ಜಗದಾಳೆ ಅವರು ಮೂಲತಃ ಮಹಾರಾಷ್ಟ್ರದ ಮಾಹಿಮಂಗಡದವರು.

ಚೀರಾಟವನ್ನು ಕೇಳಿದ ಜಗದಾಳೆಯವರ ಸಹೋದ್ಯೋಗಿಗಳು ತಕ್ಷಣ ನೆರವಿಗೆ ಧಾವಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಮುಖ್ಯ ಪೇದೆಗೆ ಹತ್ತಿರದ ಕ್ಲಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕೆಜಿಎಸ್ ಆಸ್ಪತ್ರೆಗೆ ಸಾಗಿಸುವ ಮೊದಲು ಕೊನೆಯುಸಿರೆಳೆದರು ಎಂದು ವಿದ್ಯುತ್ ಸ್ಥಾವರದ ಅಧಿಕಾರಿಗಳನ್ನು ಉಲ್ಲೇಖಿಸಿ ಮಲ್ಲಾಪುರ ಪೊಲೀಸರು ತಿಳಿಸಿದ್ದಾರೆ.

ಲಗೇಜ್ ಬ್ಯಾಗ್​​​​​ನಲ್ಲಿ ಕೋಟಿ, ಕೋಟಿ ಹಣ, ಖದೀಮರು ಅಂದರ್‌ ?
ಉತ್ತರ ಕನ್ನಡ : ಬಸ್ ನಲ್ಲಿ (Bus) ಸಾಕಷ್ಟು ಜನ ಒಂದೂರಿನಿಂದ ಇನ್ನೊಂದು ಕಡೆಗೆ ಪ್ರಯಾಣ ಬೆಳೆಸುತ್ತಾರೆ. ತಮ್ಮ ಜೊತೆಗೆ ಒಂದಿಸ್ಟು ಲಗೇಜ್ ನ (Luggage) ಕೂಡ ಕೊಂಡಯ್ಯುತ್ತಾರೆ..ಆದ್ರೆ ಇಲ್ಲಿಬ್ಬರು ತಮ್ಮ ಲಗೇಜ್ ಬ್ಯಾಗ್ನಲ್ಲಿ ಒಂದು ಕೋಟಿ ರೂ. (1 crore) ನಗದನ್ನು ಸಾಗೀಸುವಾಗ ಸಿಕ್ಕಿಬಿದ್ದಿದ್ದಾನೆ.

ಹೌದು ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ಮಾಡುತ್ತ ಪ್ರಯಾಣಿಕರ ಬ್ಯಾಗ್‌ಗಳನ್ನು ಚೆಕ್ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಕಲ್ಲೇಶ್‌ ಕುಮಾರ ಎಂಬಾತನ ಬ್ಯಾಗ್‌ನಲ್ಲಿ ಒಂದು ಕೋಟಿ ಹಣ ಸಿಕ್ಕಿದೆ. ಕಲ್ಲೇಶ್‌ ಕುಮಾರ್ ಮತ್ತು ಭಮ್ರು‌ ಕುಮಾರ್ ಖಾಸಗಿ ಬಸ್‌ನಲ್ಲಿ ಹಣ ಸಾಗಿಸುತ್ತಿದ್ದು.ಇವರು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ .ಇನ್ನು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ , ಪೋಲಿಸರು ವಶಪಡಿಸಿಕೊಂಡ ಹಣವು ಇತರೆ ವ್ಯವಹಾರಗಳಿಗೆ, ರಾಜಕಾರಣಿಗಳು ಕೈವಾಡವೋ ಅಥವಾ ಅಕ್ರಮ ವಿಚಾರಕ್ಕೆ ಸಂಬಂಧಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಈ ಹಣದ ಬಗ್ಗೆ ಪೊಲೀಸರು ಆ ಇಬ್ಬರು ವ್ಯಕ್ತಿಗಳ ವಿಚಾರಣೆ ನೆಡೆಸಿ, ಈ ಹಣ ಯಾರದ್ದು ಯಾರಿಗೆ ಕೊಡಲು ಸಾಗಿಸುತ್ತಿದ್ದರು ಎಂಬುವುದನ್ನ ತನಿಕೆ ಮಾಡಬೇಕಾಗಿದೆ

‘ಗ್ಯಾರಂಟಿಗಳು ಅಭಿವೃದ್ಧಿಗೆ ಅಡ್ಡಿ’ ಹೇಳಿಕೆ ನೀಡಿದ ಮರುದಿನವೇ ಯೂ-ಟರ್ನ್‌ ಹೊಡೆದ ದೇಶಪಾಂಡೆ
ದಾಂಡೇಲಿ(ಉತ್ತರ ಕನ್ನಡ ಜಿಲ್ಲೆ): ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ‘ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ’ ಒಂದು ದಿನದ ನಂತರ ತಮ್ಮ ನಿಲುವನ್ನು ಮೃದುಗೊಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತವನ್ನು ಶ್ಲಾಘಿಸಿದ ಅವರು, ತಾವು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ದಾಂಡೇಲಿಯಲ್ಲಿ ನಡೆದ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ನಾನು ನೀಡಿದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ದೇಶಪಾಂಡೆ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಸಿದ್ದರಾಮಯ್ಯ ಅವರು ಬಡವರಿಗಾಗಿ ಹೋರಾಡುವ ನಿಜವಾದ ನಾಯಕ ಮತ್ತು ಗ್ಯಾರಂಟಿಗಳನ್ನು ಘೋಷಿಸುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದಷ್ಟೇ ನಾನು ಹೇಳಿದ್ದೆ” ಎಂದಿದ್ದಾರೆ.

“ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಸಿದ್ದರಾಮಯ್ಯನವರ ಜನಪರ ನಿಲುವನ್ನು ಹಾಡಿಹೊಗಳುವುದು ನನ್ನ ಉದ್ದೇಶವಾಗಿತ್ತು. ನಾನು ಅವರನ್ನು ಟೀಕಿಸಲಿಲ್ಲ, ಅವರ ನೀತಿಗಳನ್ನು ಮೆಚ್ಚಿದೆ. ಗ್ಯಾರಂಟಿಗಳು ಅಭಿವೃದ್ಧಿಯನ್ನು ನಿಧಾನಗೊಳಿಸಿವೆ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಈ ಹಿರಿಯ ಕಾಂಗ್ರೆಸ್ ನಾಯಕರು, ಭಾನುವಾರ ನೀಡಿದ್ದ ಹೇಳಿಕೆಯಲ್ಲಿ, ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ವೇಗಕ್ಕೆ ಅಡ್ಡಿಯಾಗುವ ಆರ್ಥಿಕ ಹೊರೆಯನ್ನು ಉಂಟುಮಾಡಿವೆ ಮತ್ತು ‘ತಾನೇ ಮುಖ್ಯಮಂತ್ರಿಯಾಗಿದ್ದರೆ ಅವುಗಳನ್ನು ಜಾರಿ ಮಾಡುತ್ತಿರಲಿಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿತ್ತು. ಆದರೆ ಇದೀಗ ದೇಶಪಾಂಡೆ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.

ಶಿರಸಿ: ಆಕಸ್ಮಿಕವಾಗಿ ಏರ್ ಗನ್‌ನಿಂದ ಗುಂಡು ಹಾರಿ 9 ವರ್ಷದ ಬಾಲಕ ಸಾವು
ಶಿರಸಿ: ಶಿರಸಿ ಹೊರವಲಯದ ಸೋಮನಹಳ್ಳಿಯಲ್ಲಿ ಶುಕ್ರವಾರ ಏರ್ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಒಂಬತ್ತು ವರ್ಷದ ಬಾಲಕನೊಬ್ಬ ಎದೆಗೆ ಪೆಲೆಟ್ ತಾಗಿ ಸಾವಿಗೀಡಾಗಿದ್ದಾನೆ.

ಹಾವೇರಿ ಜಿಲ್ಲೆಯ ಮೂಲದ ಕೃಷಿ ಕಾರ್ಮಿಕ ಬಸಪ್ಪ ಉಂಡಿಯಾರ ಅವರ ಮಕ್ಕಳು ಸೋಮನಹಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಅವರಿಗೆ ಸೇರಿದ ತೋಟದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, “ಕೋತಿಗಳ ಉಪಟಳ ನಿಯಂತ್ರಿಸಲು ಗ್ರಾಮಸ್ಥರು ನೇಮಿಸಿದ್ದ ನಿತೀಶ್ ಗೌಡ, ಹೆಗಡೆ ಅವರಿಗೆ ಸೇರಿದ ಏರ್ ಗನ್‌ನೊಂದಿಗೆ ತೋಟಕ್ಕೆ ಬಂದಿದ್ದರು. ಈ ವೇಳೆ ಏಳು ವರ್ಷದ ಬಾಲಕನೊಬ್ಬ ಅಜಾಗರೂಕತೆಯಿಂದ ಟ್ರಿಗ್ಗರ್ ಎಳೆದಿದ್ದಾನೆ. ಗನ್‌ನಿಂದ ಹೊರಟ ಪೆಲೆಟ್ ಒಂಬತ್ತು ವರ್ಷದ ಬಾಲಕ ಕರಿಯಪ್ಪನ ಎದೆಗೆ ತಗುಲಿ ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.”

ಈ ಘಟನೆ ಸಂಬಂಧ ಸಿರ್ಸಿ ಪೊಲೀಸರು ತೋಟದ ಮಾಲೀಕ ರಾಘವೇಂದ್ರ ಹೆಗಡೆ ಮತ್ತು ನಿತೀಶ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.