ಯಾದಗಿರಿ – Peepal Media

ದರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ತಪ್ಪಲ್ಲ: ಸತೀಶ್ ಜಾರಕಿಹೊಳಿ
ಯಾದಗಿರಿ: ದರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸುವುದು ತಪ್ಪಲ್ಲ. ಎನ್‌ಐಎ ತನಿಖೆಯಿಂದ ದೊಡ್ಡ ಮಟ್ಟದ ಸಂಚುಗಳು ಬಯಲಿಗೆ ಬರುತ್ತವೆ ಮತ್ತು ಸತ್ಯ ಹೊರಬರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾನುವಾರ ಹೇಳಿದರು.

“ಕರ್ನಾಟಕದ ಜನರು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಟಿವಿ ಮತ್ತು ಮೊಬೈಲ್‌ಗಳಲ್ಲಿ ದರ್ಮಸ್ಥಳ ವಿಷಯವನ್ನು ನೋಡುತ್ತಿದ್ದಾರೆ. ಇದಕ್ಕೆ ಒಂದು ಅಂತ್ಯ ಕಾಣಿಸಬೇಕಿದೆ. ಸಂಚಿನ ಕೋನವನ್ನು ತನಿಖೆ ಮಾಡಲು ಮತ್ತು ಸತ್ಯವನ್ನು ಹೊರತರಲು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ತಪ್ಪೇನಲ್ಲ,” ಎಂದು ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.

“ಈ ಸಂಪೂರ್ಣ ಘಟನೆ ಒಂದು ಹಳ್ಳಿಗೆ ಸಂಬಂಧಿಸಿದ್ದು, ದೇಶಕ್ಕಲ್ಲ. ಅದಕ್ಕೂ ಕಾಂಗ್ರೆಸ್ ಅಥವಾ ಬಲಪಂಥೀಯ-ಎಡಪಂಥೀಯ ಗುಂಪುಗಳಿಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯದ ಆದೇಶದ ನಂತರ ದರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ಕಾರವು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ” ಎಂದು ಅವರು ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಜಾರಕಿಹೊಳಿ, “ಆರ್‌ಎಸ್‌ಎಸ್ ಪ್ರಾರ್ಥನೆ ಹೇಳಿದರೆ ಸಿಎಂ ಆಗಬಹುದು ಎಂದಾದರೆ, ಯಾದಗಿರಿ ಶಾಸಕ ಚೆನ್ನರೆಡ್ಡಿ ಮತ್ತು ನಾನು ಸಹ ಅದನ್ನು ಹಾಡುತ್ತೇವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಸಂಸ್ಕೃತ ಗೊತ್ತಿದೆ. ಅವರು ಸಂಸ್ಕೃತ ಶ್ಲೋಕಗಳನ್ನು ಹೇಳುವ ಅಸಾಮಾನ್ಯ ಸಾಮರ್ಥ್ಯ ಹೊಂದಿದ್ದಾರೆ ಮತ್ತು ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಶ್ಲೋಕವೊಂದನ್ನು ಹೇಳಿದ್ದರು” ಎಂದರು.

ಯಾದಗಿರಿ: ಕಲುಷಿತ ನೀರು ಸೇವನೆ; ಒಂದೇ ಗ್ರಾಮದ ಮೂವರ ಸಾವು
ಕಲುಷಿತ ನೀರು ಸೇವನೆಯಿಂದ ಒಂದೇ ಗ್ರಾಮದ ಮೂವರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ವರದಿಯಾಗಿದೆ. ಸುರಪುರ ತಾಲ್ಲೂಕಿನ ತಿಪ್ಪನಟಗಿಯಲ್ಲಿ ಸಾವಿನ ಪ್ರಕರಣ ದಾಖಲಾಗಿದೆ. ಮೂವರು ಮೃತಪಟ್ಟಿದ್ದಲ್ಲದೇ ಇನ್ನೂ ಆರು ಮಂದಿ ಸ್ಥಿತಿ ಗಂಭೀರವಾಗಿದೆ.

ಕಳೆದ ಹತ್ತು ದಿನಗಳಿಂದ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯ ಕಾರಣದಿಂದ ಬೇರೆ ಬೇರೆ ಖಾಸಗಿ, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆರು ಜನರ ಸ್ಥಿತಿ ಗಂಭೀರವಾಗಿದೆ. ಈಗಾಗಲೇ ಆಸ್ಪತ್ರೆಗೆ ಸೇರಿರುವವರಲ್ಲಿ ಕೆಲವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇನ್ನೂ 20 ಜನ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ.

ತಿಪ್ಪನಟಗಿ ಗ್ರಾಮಕ್ಕೆ ಸ್ಥಳಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸುರಪುರ ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಬಿರಾದಾರ ಅವರಿಗೆ ಉಸ್ತುವಾರಿ ಸಚಿವ ದರ್ಶನಾಪುರ ಆದೇಶಿಸಿದ್ದಾರೆ.

ಜಾತೀಯತೆ ಎಲ್ಲಿದೆ ಎನ್ನುವವರ ಗಮನಕ್ಕೆ; ಸುರಪುರದಲ್ಲಿ ದಲಿತ ಯುವಕನಿಗೆ ಜಾತಿ ನಿಂದನೆ ವಿಡಿಯೋ ವೈರಲ್
ಮಾತೆತ್ತಿದರೆ ಧರ್ಮ, ಧರ್ಮ ರಕ್ಷಣೆ, ಭಾರತ್ ಮಾತಾ ಕೀ ಜೈ, ಧರ್ಮೋ ರಕ್ಷತಿ ರಕ್ಷಿತ: ಎಂಬ ಘೋಷಣೆಗಳ ಮೂಲಕ ಹಿಂದುಳಿದ, ದಲಿತ ಸಮುದಾಯಗಳ ಯುವಕರನ್ನು ಬೀದಿಗಿಳಿಸಿ ಗಲಾಟೆ ದಾಂಧಲೆ ಎಬ್ಬಿಸುವವರು ಖುದ್ದು ಈ ವಿಡಿಯೋ ನೋಡಲೇಬೇಕು. ಧರ್ಮದ ಅಡಿಯಲ್ಲಿ ಜಾತಿ ಜಾತಿಗಳ ನಡುವೆ ಇರುವ ಕಂದಕ ಎಂತಹದು ಈ ಬಗ್ಗೆ ಎಂದಾದರೂ ದನಿ ಎತ್ತಿದ್ದು ಇದೆಯೇ ಎಂಬ ಪ್ರಶ್ನೆಗೆ ಧರ್ಮ ರಕ್ಷಕರು ತಮ್ಮ ಮೌನ ಮುರಿಯಲೇಬೇಕು.

ಅಂದಹಾಗೆ ಈ ದೃಶ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾಗರಾಳ ಗ್ರಾಮದ್ದು. ಗ್ರಾಮದ ದಲಿತ ಯುವಕ ಕಾನೂನು ಪದವಿ ಮುಗಿಸಿ ಊರಿಗೆ ಬಂದಾಗ ನೇರವಾಗಿ ಆತನಿಗೆ ಎದುರಾಗಿದ್ದೇ ಜಾತಿಯೆಂಬ ವಿಷಬೀಜ. ಗ್ರಾಮದಲ್ಲಿ ಮೇಲ್ಜಾತಿ ಎಂದು ಗುರುತಿಸಿಕೊಂಡವರು ದಲಿತ (ಮಾದಾರ) ಯುವಕನಿಗೆ ಜಾತಿ ನಿಂದನೆಯಂತಾ ಕೃತ್ಯಕ್ಕೆ ಮುಂದಾದ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನೊಬ್ಬ ನೇರವಾಗಿ “ನಿನ್ನ ಜಾತಿ ಯಾವುದು, ನಿನ್ನ ಜಾತಿ ಯಾವುದು” ಎಂದು ಕೇಳುತ್ತಿದ್ದರೆ, ಮತ್ತೊಬ್ಬ ಮಧ್ಯ ವಯಸ್ಕ ಕೂಡಾ ಅದನ್ನೇ ಕೇಳಿ ಯುವಕನನ್ನು ತಳ್ಳಲು ಶುರು ಮಾಡಿದ್ದು ವಿಡಿಯೋದಲ್ಲಿ ಸಿಕ್ಕಿದೆ. ಹಾಗೆಯೇ ವಿಡಿಯೋ ಮಾಡುತ್ತಿದ್ದವರ ಮೇಲೂ ಸಹ ಅವರು ತಿರುಗಿ ಬಿದ್ದಿದ್ದು ವಿಡಿಯೋದಲ್ಲಿ ಸೇರಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಲಿತ ಯುವಕನ ಪರವಾಗಿ ಹಲವು ನೆಟ್ಟಿಗರು ದನಿ ಎತ್ತಿದ್ದಾರೆ. ಜೊತೆಗೆ ಸಮಾಜದಲ್ಲಿ ಮೇಲ್ಜಾತಿ ಎಂದು ಕರೆಸಿಕೊಳ್ಳುವವರ ದಬ್ಬಾಳಿಕೆಯ ವಿರುದ್ಧವೂ ತೀವ್ರ ಆಕ್ರೋಶ ಹೊರಬಿದ್ದಿದೆ.

ಜಾತಿಯೇ ತೆ ಎಲ್ಲಿದೆ ಎನ್ನುವವರ ಗಮನಕ್ಕೆ.

ದಲಿತ ಹುಡುಗ LLB ಮುಗಿಸಿ ಊರಿಗೆ ಬಂದಾಗ  ಎದುರುಗೊಂಡ  "ಜಾತಿ" 😌
(ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ನಾಗರಾಳ ಗ್ರಾಮ ) pic.twitter.com/F9J5wmdAZz
— ಅನ್ಯಾಯದ ವಿರುದ್ದ (@anyayadavirudha) June 20, 2025

ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆಯೋ ಅಥವಾ ಧರ್ಮಾಂಧ ಬಿಜೆಪಿ ಅಥವಾ ಆರೆಸ್ಸೆಸ್ ರಾಜ್ಯದಲ್ಲಿ ಅಧಿಕಾರ ನಿರ್ವಹಿಸುತ್ತಿದೆಯೋ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಯಾವ ವಿಚಾರಕ್ಕೆ ಜಗಳ ಆಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ನೇರವಾಗಿ ಜಾತಿಯನ್ನು ಮಧ್ಯೆ ತಂದ ಬಗ್ಗೆ ದಲಿತ ಯುವಕನ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಜಾತಿ ಇಲ್ಲ, ಧರ್ಮವೇ ಎಲ್ಲಾ ಎಂಬುವವರು ಈ ಧರ್ಮದೊಳಗಿನ ಜಾತಿ ವ್ಯವಸ್ಥೆಯ ಬಗ್ಗೆ ಏನಂತಾರೆ ಎಂದು ಪ್ರಶ್ನೆ ಎತ್ತಿದ್ದಾರೆ.

ಮನಮೋಹನ್ ಸಿಂಗ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನ ತಿದ್ದುಪಡಿ ಮಾಡಿ 371 ಜೆ ಜಾರಿ ಮಾಡಿದರು: ಸಿ.ಎಂ ಸಿದ್ದರಾಮಯ್ಯ
ಯಾದಗಿರಿ ಜೂ 14: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಮೂರು ವರ್ಷದಲ್ಲಿ 13000 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ ಎಂದು ಸಿ.ಎಂ ಸಿದ್ದರಾಮಯ್ಯ ನುಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಆಯೋಜಿಸಿರುವ “ಆರೋಗ್ಯ ಆವಿಷ್ಕಾರ” ಯೋಜನೆಯ ಅಡಿಯಲ್ಲಿ 440.63 ಕೋಟಿ ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಿ, ಬಂಜಾರ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವರ್ಷಕ್ಕೆ 5000 ಕೋಟಿ KKRDB ಗೆ ಕೊಡುವುದಾಗಿ ನಾವು ಚುನಾವಣೆ ವೇಳೆ ಭರವಸೆ ನೀಡಿದ್ದೆವು. ಕಾಂಗ್ರೆಸ್ ಕೊಟ್ಟ ನಮ್ಮ ಭರವಸೆಯಂತೆ ಇಲ್ಲಿಯವರೆಗೂ 13000 ಕೋಟಿ ರೂಪಾಯಿ ಹಣ ನೀಡಿದ್ದೇವೆ. ಇಲ್ಲಿಯವರೆಗೂ 5300 ಕೋಟಿ ಮೊತ್ತ ಖರ್ಚಾಗಿದ್ದು ಕಾಮಗಾರಿ ಜನರಿಗೆ ತಲುಪಿದೆ ಎಂದರು.

KKRDB ಗೆ ಕೊಡುವ ಈ ಅನುದಾನದ ಹೊರತಾಗಿ ಸರ್ಕಾರ ಇಲಾಖಾವಾರು ಕಾರ್ಯಕ್ರಮಗಳಿಗಾಗಿ ಅನುದಾನ ನೀಡುತ್ತಲೇ ಇದೆ ಎಂದರು.

ನಂಜುಂಡಪ್ಪ ಅವರ ವರದಿಯ ಆಶಯಗಳನ್ನು ನಮ್ಮ ಸರ್ಕಾರ ಈಡೇರಿಸುತ್ತಿದೆ. ಆರೋಗ್ಯ, ಶಿಕ್ಷಣ, ಉದ್ಯೋಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಸಾಧಿಸುವ ಜೊತೆಗೆ ಮೂಲಭೂತ ಸೌಕರ್ಯಗಳ ಈಡೇರಿಕೆಗೆ ಹಣ ವಿನಿಯೋಗ ಮಾಡಲು ಸೂಚನೆ ನೀಡಿದ್ದೇನೆ. ಇದರ ಪ್ರಕಾರ ಅಕ್ಷರ ಆವಿಷ್ಕಾರ ನಡೆದು ಇಂದು 440.63 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ಇಂದು ಉದ್ಘಾಟನೆ ಮಾಡಿದ್ದೇವೆ. ಕೊಲ್ಲೂರು ಮಲ್ಲಪ್ಪ ಅವರ ಸ್ಮಾರಕಕ್ಕೆ ಪುಕ್ಕಟೆಯಾಗಿ ಜಗ ಕೊಟ್ಟಿದ್ಸೇವೆ. ಮಲ್ಲಪ್ಪ ಅವರು ಕಲ್ಯಾಣ ಕರ್ನಾಟಕದ ಗಾಂಧಿ ಎಂದು ಕರೆಸಿಕೊಂಡಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಇವರ ಸ್ಮಾರಕ ಕೂಡಲೇ ಆಗಬೇಕು ಎಂದು ಸಿಎಂ ಸೂಚನೆ ನೀಡಿದರು.

42 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು, ಹೊಸ ಆಸ್ಪತ್ರೆಗಳ ನಿರ್ಮಾಣ ಆಗುತ್ತಿದೆ. ಈ ಭಾಗದ ಆರೋಗ್ಯ ಸವಲತ್ತು ವಿಸ್ತರಿಸಲು ಒಟ್ಟು 847 ಕೋಟಿ ಕೊಡಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಎಲ್ಲಾ ಸುಳ್ಳುಗಳಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಏಕೆಂದರೆ ನಾವು ಅಭಿವೃದ್ಧಿಗೆ ಕೊಟ್ಟಿರುವ ಹಣ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿದೆ ಎಂದರು.

ಬೆಲೆ ಏರಿಕೆಗೆ ಕಾರಣವಾಗಿರುವುದು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಮೋದಿ ಬರುವ ಮೊದಲು ಚಿನ್ನ, ಪೆಟ್ರೋಲ್, ಡೀಸೆಲ್, ಔಷಧ, ರಸಗೊಬ್ಬರ, ಅಡುಗೆ ಎಣ್ಣೆ, ಅಡುಗೆ ಅನಿಲದ ಬೆಲೆ ಎಷ್ಟಿತ್ತು ? ಮೋದಿ ಬಂದ ಬಳಿಕ ಎಷ್ಟು ಏರಿಕೆಯಾಗಿದೆ ನೋಡಿ. ಬೆಲೆ ಏರಿಕೆಯ ಸೃಷ್ಟಿಕರ್ತ ಪ್ರಧಾನಿ ಮೋದಿ ಎಂದರು.

ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಗೆ ಅಧಿಕಾರ ಇದ್ದಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡಲಿಲ್ಲ. ಬಿಜೆಪಿ 371 ಜೆ ಗೆ ವಿರುದ್ಧವಿತ್ತು. ಉಪ ಪ್ರಧಾನಿ ಆಗಿದ್ದ ಎಲ್.ಕೆ.ಅಡ್ವಾಣಿ ಅವರು 371ಜೆ ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದಿದ್ದರು. ಕೊನೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಖರ್ಗೆ, ಧರಂ‌ಸಿಂಗ್ ಅವ್ ಹೋರಾಟಕ್ಕೆ ಮಾನ್ಯತೆ ನೀಡಿ 371ಜೆ ಜಾರಿ ಮಾಡಿದರು ಎಂದು ವಿವರಿಸಿದರು.

ನಾವು ಬಸವಣ್ಣನವರ ಆಶಯದಂತೆ ನುಡಿದಂತೆ ನಡೆಯುವರು. ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳಲ್ಲಿ ಐದು ಗ್ಯಾರಂಟಿಗಳು ಸೇರಿ 200 ಭರವಸೆಗಳು ಈಡೇರಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳನ್ನೂ ಈಡೇರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ ಎಂದರು.

ಜಿಎಸ್ ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿರುವುದು ಆರ್ಥಿಕವಾಗಿ ರಾಜ್ಯ ಪ್ರಗತಿ ಪಥದಲ್ಲಿರುವುದಕ್ಕೆ ಸಾಕ್ಷಿ . ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಿಂಗ್ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನ ತಿದ್ದುಪಡಿ ಮಾಡಿ 371 ಜೆ ಜಾರಿ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರಮ್ ಸಿಂಗ್ ಅವರ ಶ್ರಮ‌ ಮತ್ತು ಹೋರಾಟ 371ಜೆ ಜಾರಿ ಹಿಂದೆ ಕೆಲಸ ಮಾಡಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳುಶ್ಲಾಘಿಸಿದರು.

ಯಾದಗಿರಿ ಅತ್ಯಾಚಾರ ಪ್ರಕರಣ| ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ: ಜಿ. ರಾಮಕೃಷ್ಣ
ಯಾದಗಿರಿ ಜಿಲ್ಲೆಯಲ್ಲಿ ಚಿಂದಿ ಆಯಲು ತೆರಳಿದ್ದ ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆಬ್ರವರಿ 25, ಮಂಗಳವಾರ ಸಂಜೆ 5ಗಂಟೆಗೆ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಹಿರಿಯ ಚಿಂತಕ ಜಿ ರಾಮಕೃಷ್ಣ ಅವರು ಮಾತನಾಡಿ, “ಈ ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರ ಗಮನಿಸಿದರೆ ನಾವು ಮನುಷ್ಯರಾಗಿ ಬದುಕುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ.

ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳು ನದಿಯಲ್ಲಿ ಸ್ನಾನ ಮಾಡಲು ಇಳಿದಳೆಂದು ಕ್ರೂರಿಗಳು ಆಕೆಯನ್ನು ಬಡಿಗೆಗಳಿಂದ ಹೊಡೆದು ಸಾಯಿಸಿದ್ದರು. ಇಂಥವರಿಗೆ ರಕ್ಷಣೆ ಕೊಡುವ ಸಂಸ್ಕೃತಿ ನಮ್ಮ ದೇಶದಲ್ಲಿ ಇದೆ. ಇಂತಹ ಸಮಾಜದಲ್ಲಿ ನಾವಿನ್ನೂ ಫ್ಯಾಸಿಸ್ಟ್‌ ಆಗಿದ್ದೀವಾ, ಅರೆ ಫ್ಯಾಸಿಸ್ಟ್ ಆಗಿದ್ದೀವಾ, ಸೆಮಿ ಫ್ಯಾಸಿಸ್ಟ್ ಆಗಿದ್ದೀವಾ ಎಂದು ಚರ್ಚೆ ಮಾಡುತ್ತಿದ್ದೇವೆ.

ದೇಶದೆಲ್ಲೆಡೆ ಈಗ ಪುನೀತರಾದ ಜನರೇ ಇರುವುದು. ಗಂಗೆಯಲ್ಲಿ ಸ್ನಾನ ಮಾಡಿ ಬಂದಿದ್ದಾರೆ. ಐವತ್ತು ಕೋಟಿ ಜನರಲ್ಲಿ ನಲುವತ್ತು ಕೋಟಿ ಜನರಿಗೆ ಒಂದು ತರಹದ ನೀರು, ಇನ್ನು ಹತ್ತು ಕೋಟಿ ಜನರಿಗೆ ಒಂದು ತರಹದ ನೀರು. ನಾರಾಯಣ ಮೂರ್ತಿ, ಸುಧಾಮೂರ್ತಿ ತರದವರಿಗೆ ಬೇಲಿ ಕಟ್ಟಿ ಚೆನ್ನಾಗಿ ನೀರು ಹರಿಯುವ ಜಾಗ, ಸಾಮಾನ್ಯ ಜನರಿಗೆ ಚರಂಡಿ ನೀರು ಸೇರುವ ಜಾಗ.

ಇದೇ ರೀತಿ ಈ ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಯಾದಗಿರಿಯೇನು ಬೆಂಗಳೂರಲ್ಲ, ಪುಟ್ಟ ಹಳ್ಳಿ. ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟೇವೇನು ಕಷ್ಟ ಅಲ್ಲ. ಆದರೆ, ಇದು ಅಧಿಕಾರಿಗಳಿಗೆ ಬಡವರ ಮೇಲೆ ಇರುವ ಅಸಡ್ಡೆ ತೋರಿಸುತ್ತದೆ” ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ದಲಿತ ಮುಖಂಡ ವಡ್ಡಗೆರೆ ನಾಗರಾಜಯ್ಯ, “ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ನಡೆದು ಹತ್ತು ದಿನಗಳಾಗಿವೆ. ಆದರೆ, ಈವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ಇದು ಹಲವು ಅನುಮಾನಗಳಿವೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ಎಂದಲ್ಲ, ಇಡೀ ದೇಶದಲ್ಲಿ ಪ್ರಸ್ತುತ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಆದರೆ, ಸರ್ಕಾರಗಳು, ಪೊಲೀಸರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳ ಪರ ನಿಲ್ಲಬೇಕು. ಅತ್ಯಾಚಾರವೆಸಗಿ, ಕೊಲೆಗೈದವರನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದರು.

ಬರಹಗಾರ, ದಲಿತ ಮುಖಂಡ ಹುಲಿಕುಂಟೆ ಮೂರ್ತಿ ಮಾತನಾಡಿ, “ಆರೋಪಿಗಳು ಸಂತ್ರಸ್ತರ ಮನೆಗಳ ಬಳಿ ಹೋಗಿ ಧಮ್ಕಿ ಹಾಕಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಆರೋಪಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ಬಾಬಾ ಸಾಹೇಬರ ಮೇಲೆ ನಿಜಕ್ಕೂ ಗೌರವ ಇದ್ದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದರು.

“ಇಡೀ ದೇಶದಲ್ಲಿ ಯಾವುದೇ ಸರ್ಕಾರ, ಅಲೆಮಾರಿಗಳಿಗೆ ಇದುವರೆಗೆ ಯಾವುದೇ ರೀತಿಯಲ್ಲಿ ರಕ್ಷಣೆ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ. ಯಾಕೆ ಅಲೆಮಾರಿಗಳಾಗಿದ್ದಾರೆ ಎಂಬ ಮೂಲ ಪ್ರಶ್ನೆ ಕೇಳಬೇಕಾಗಿದೆ. ಯಾರೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿಲ್ಲ.

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಯಾಕೆ ಹೀಗಿದ್ದೇವೆ? ನಾವೀಗ ಒಟ್ಟಾಗಿ ಅಲೆಮಾರಿಗಳಿಗೆ ಭೂಮಿ ಕೊಡಿ ನೌಕರಿ ಕೊಡಿ ಎಂದು ಕೇಳಬೇಕಿದೆ. ಯಾದಗಿರಿಯ ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳ ಬಂಧನ ಸರ್ಕಾರದ ಕೈಯಲ್ಲಿ ಆಗಲ್ಲ ಅಂತಲ್ಲ, ಪೊಲೀಸರು ಮನಸ್ಸು ಮಾಡಿದರೆ ಆರೋಪಿಗಳನ್ನು ಬಂಧಿಸುವುದು ಕಷ್ಟವೇನಲ್ಲ. ಹಾಗಾಗಿ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಅಲೆಮಾರಿ ಸಮುದಾಯಗಳ ಹೋರಾಟಗಾರರು ಎಚ್ಚರಿಸಿದರು.

ಜೊತೆಗೆ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶದೆಲ್ಲೆಡೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದ ಆಕ್ರೋಶ ಮತ್ತು ಅದಕ್ಕೆ ಸರ್ಕಾರ ಸ್ಪಂದಿಸಿ ರೀತಿಯಲ್ಲಿ ಬಡ, ದಲಿತ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕೊಲೆ ನಡೆದಾಗ ಸ್ಪಂದಿಸದಿರುವುದು ದುರದೃಷ್ಟಕರ ಎಂದು ವಿವಿಧ ಸಂಘಟನೆಗಳ ಮುಖಂಡರು ವಿಷಾಧ ವ್ಯಕ್ತಪಡಿಸಿದರು.

ಯಾದಗಿರಿ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿಗೆ ತೀವ್ರವಾದ ಪ್ರತಿಭಟನೆ
ಯಾದಗಿರಿ : ಶಹಾಪೂರ ತಾಲೂಕಿನ ಹಾಲಬಾವಿ ಗ್ರಾಮದಲ್ಲಿನ ಸರ್ವೆ ನಂ 58 ರಲ್ಲಿ, 2.00 ಎಕರೆ ಜಮೀನಿನಲ್ಲಿ ಡಾ|| ಬಿ.ಆರ್.ಅಂಬೆಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನ ತಾಲೂಕು ಸಮಿತಿ ಶಹಾಪುರ ವತಿಯಿಂದ ಜಿಲ್ಲಾಧಿಕಾರಿಗಳು ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿ ತಾಲೂಕು ಅಧ್ಯಕ್ಷರ ಜಯರೆಡ್ಡಿ ಹೊಸ್ಮನಿ ಮಾತನಾಡಿ, “ಸದರಿ ಶಹಾಪೂರ ತಾಲೂಕಿನ ಹಾಲಭಾವಿ ಗ್ರಾಮದಲ್ಲಿನ ದಲಿತರ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮ ಮಾಡಲು ಯಾವುದೆ ಸ್ಥಳ ಇರುವುದಿಲ್ಲ ಅದಕ್ಕಾಗಿ ಹಾಲಭಾವಿ ಗ್ರಾಮದ ದಲಿತರ ಹಾಗೂ ಶಹಾಪೂರ ಡಿ.ಎಸ್.ಎಸ್ ಸಂಘ ವತಿಯಿಂದ ಮನವಿ ಮಾಡಲಾಗಿತ್ತು ಅದರಂತೆ ಉಲ್ಲೇಖ 1 ರ ಮೂಲಕ ಶಹಾಪೂರ ತಹಶಿಲ್ದಾರರು ಕಂದಾಯ ನೀರಿಕ್ಷಕರು ಹಾಗೂ ಭೂಮಾಪಕರ ವರದಿಯೊಂದಿಗೆ ಫೆಬ್ರವರಿ 04 2024 ರಂದು ಮಂಜೂರಾತಿಗಾಗಿ ಸಹಾಯಕ ಆಯಕ್ತರಿಗೆ ಪತ್ರ ಬರೆದಿರುತ್ತಾರೆ ಸುಮಾರು 6-7 ತಿಂಗಳು ಕಳೆದರು ಯಾವುದೇ ಕ್ರಮ ಜರಗಿಸಿರುವುದಿಲ್ಲ. ಕೂಡಲೇ ಡಾ।। ಬಿ.ಆರ್.ಅಂಬೆಡ್ಕರ ಭವನ ನಿರ್ಮಿಸಲು 2 ಎಕರೆ ಜಮೀನು ಮಂಜುರು ಮಾಡಲು ಮತ್ತೊಮ್ಮೆ ಒತ್ತಾಯಿಸಿ” ಹಾಲಭಾವಿ ಗ್ರಾಮಸ್ತರು ಪರವಾಗಿ ಶಹಾಪೂರ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಪ್ರತ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಣಮಂತ ಶಾರದಹಳ್ಳಿ, ಮಲ್ಲಿಕಾರ್ಜುನ ಹಾಲಭಾವಿ, ಜಯರೆಡ್ಡಿ, ಮರೆಪ್ಪ ಕನ್ಯಕೊಳ್ಳುರು, ಮರಪ್ಪ ಬೇವಿನಹಳ್ಳಿ, ಭೀಮಶಂಕರ ಸಲಾದಪೂರ, ದೇವಿಂದ್ರ ಡಿಗ್ಗಿ ಇನ್ನಿತರರು ಉಪಸ್ಥಿತರಿದ್ದರು.

ಯಾದಗಿರಿ: ಪಿಎಸ್‌ಐ ಅನುಮಾನಸ್ಪದ ಸಾವು, ಶಾಸಕ ಚೆನ್ನಾರೆಡ್ಡಿ ಮಗನ ವಿರುದ್ಧ ಪಿಎಸ್‌ಐ ಪತ್ನಿ ದೂರು
ಯಾದಗಿರಿ: ಯಾದಗಿರಿ ನಗರ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ತಿರುವು ದೊರಕಿದೆ. ಈ ಮೊದಲು ಅವರು ಹೃದಾಯಾಘಾತದಿಂದ ಮರಣ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಪರಶುರಾಮ್ ಪತ್ನಿ ಶ್ವೇತಾ ಕಾಂಗ್ರೆಸ್ ಶಾಸಕ ಚೆನ್ನಾ ರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಯಾದಗಿರಿ ಎಸ್ಪಿ ಸಂಗೀತ ಅವರ ಬಳಿ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ಸೈಬರ್‌ ಕ್ರೈಮವ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಪರಶುರಾಮ್‌ ಮೊನ್ನೆಯಷ್ಟೇ ತಮ್ಮ ಠಾಣೆಯಿಂದ ಬೀಳ್ಕೊಡುಗೆ ಪಡೆದಿದ್ದರು.

ಪೋಸ್ಟಿಂಗ್‌ ಸಲುವಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್‌ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್‌ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಎಂದು ಮಾವ ವೆಂಕಟಸ್ವಾಮಿ ಮತ್ತು ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿದ್ದಾರೆ.

ಪರಶುರಾಮ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಾಗಿ 30 ಲಕ್ಷ ರೂ. ಲಂಚ ಕೊಟ್ಟಿದ್ದರು. ಈ ಹುದ್ದೆಯನ್ನು ಪಡೆಯುವ ಸಲುವಾಗಿ ಬಹಳ ಸಾಲ ಮಾಡಿದ್ದರು. ಈಗ ಮತ್ತೆ ನಿಯಮಬಾಹಿರವಾಗಿ ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಖಿನ್ನತೆಗೆ ಜಾರಿದ್ದರು. ಈ ಕಾರಣದಿಂದ ಹೃದಯಾಘಾತವಾಗಿ ಮೃತಪಟ್ಟಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಪರಶುರಾಮ ಅವರ ಮಾವನೂ ಅಳಿಯನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರು “ಯಾದಗಿರಿ ಶಾಸಕರಿಗೆ ದುಡ್ಡಿನ ಆಸೆ ವಿಪರೀತವಾಗಿದೆ. ಅವಧಿ ಪೂರ್ವ ವರ್ಗಾವಣೆ ಕಾರಣಕ್ಕೆ ಪರಶುರಾಮ ನೊಂದಿದ್ದರು. 7 ತಿಂಗಳ ಅವಧಿಯಲ್ಲಿ ಶಾಸಕ ಬೇರೆಯವರಿಗೆ ಪಿಎಸ್‌ಐ ಆಗಿ ಪೋಸ್ಟಿಂಗ್‌ ನೀಡಿದ್ದಾರೆ. ಈ ರೀತಿಯ ವರ್ಗಾವಣೆ ನಡೆಯುತ್ತಿರುವುದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಯ ಗಮನಕ್ಕೆ ಬರುತ್ತಿಲ್ಲವೇ? ದಕ್ಷ ಅಧಿಕಾರಿಗಳೆಂದರೆ ಸಾಯುವುದಕ್ಕೆ ಇರುವುದೇ?” ಎಂದು ಅವರು ಪ್ರಶ್ನಿಸಿದ್ದಾರೆ.

ದಲಿತ ಸಂಘಟನೆಗಳಿಂದ ಪ್ರತಿಭಟನೆ

ಯಾದಗಿರಿಯ ದಲಿತ ಸಂಘಟನೆ ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆಯಲ್ಲಿ ತೊಡಗಿದ್ದು, ಆಂಬುಲೆನ್ಸ್‌ ತಡೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ನಗರದ ಖಾಸಗಿ ಆಸ್ಪತ್ರೆ ಬಳಿ ನೆರೆದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾಯಕರು ಘೋಷಣೆಗಳನ್ನು ಸಹ ಕೂಗಿ ಪ್ರತಿಭಟಿಸಿದರು.

ಮರಣೋತ್ತರ ಪರೀಕ್ಷೆಗೆಂದು ಶವ ಕೊಂಡೊಯ್ಯುವಾಗ ಆಂಬುಲೆನ್ಸ್‌ ಅಡ್ಡಗಟ್ಟಿದ ಕಾರ್ಯಕರ್ತರು ಪರಶುರಾಮ್‌ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಒಳ್ಳೆಯ ಹೆಸರನ್ನು ಪಡೆದಿದ್ದರು. ಅವರ ಸಾವಿನ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದರು.

ಕುಡಿಯುವ ನೀರಿಗೆ ಬರ : ಕಲುಷಿತ ನೀರಿನಿಂದ 37 ಮಂದಿ ಅಸ್ವಸ್ಥ
ಯಾದಗಿರಿ : ಯಾದಗಿರಿಯ ಹೊಟ್‌ಪೇಟ್‌ ಗ್ರಾಮದಲ್ಲಿ ಕಲುಷಿತ ನೀರನ್ನು ಕುಡಿದು ಒಬ್ಬ ಸಾವನ್ನಪ್ಪಿದ್ದು, 37 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಕುಡಿಯಲು ಶುದ್ದವಾದ ನೀರಿಗೆ ಅಲೆದಾಡುತ್ತಿರುವ ಯಾದಗಿರಿ ಜಿಲ್ಲೆಯ ಜನರು ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ. ಇದರಿಂದ ಜಿಲ್ಲೆ ಶಹಾಪುರ ತಾಲ್ಲೂಕಿನ ಹೋಟ್ ಪೇಟ್‌ ಗ್ರಾಮದಲ್ಲಿ  ಓರ್ವನು ಮೃತಪಟ್ಟಿದ್ದು, 37 ಜನರು ಅಸ್ವಸ್ಥಗೊಂಡಿದ್ದಾರೆ.

ಗ್ರಾಮದಲ್ಲಿ ಶನಿವಾರದಿಂದ ಇಲ್ಲಿಯವರೆಗೂ 37 ಪ್ರಕರಣಗಳು ವರದಿಯಾಗಿದ್ದು, ಹೊನ್ನಪ್ಪ ಗೌಡ ಮೃತವ್ಯಕ್ತಿಯಾಗಿದ್ದಾನೆ. ಹೊನ್ನಪ್ಪ ಗೌಡನ ಸಾವಿಗೆ ಕಲುಷಿತ ನೀರು ಕುಡಿದಿರುವುದೊಂದೇ ಕಾರಣವಲ್ಲದೇ ಬೇರೆ ಕಾರಣಗಳೂ ಇವೆ ಎಂದು ವೈದ್ಯಕೀಯ ವರದಿಗಳ ಪ್ರಕಾರ ಹೇಳಲಾಗತ್ತಿದೆ.ಲ

ಈ ಕುರಿತು ಮಾತನಾಡಿದ ಶಹಾಪುರ ತಹಶೀಲ್ದಾರರಾದ ಮಧುರಾಜ್‌, ʼಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲʼ ಎಂದು ಹೇಳಿದ್ದಾರೆ.

ಬೌದ್ಧ ಧರ್ಮ ಸ್ವೀಕರಿಸಿದ 127 ದಲಿತ ಕುಟುಂಬಗಳು
ಯಾದಗಿರಿ: ಧಮ್ಮ ಚಕ್ರ ಪ್ರವರ್ತನಾ ದಿನ ಆಚರಣೆಯ ಸಂದರ್ಭದಲ್ಲಿ, ಶುಕ್ರವಾರ ಶೋರಾಪುರದಲ್ಲಿ ದಲಿತ ಸಮುದಾಯದ 127 ಕುಟುಂಬಗಳಲ್ಲಿನ 350 ಜನರು ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಗೋಲ್ಡನ್ ಕೇವ್ ಬುದ್ಧ ವಿಹಾರ್ ಟ್ರಸ್ಟ್ ಮತ್ತು ಅದರ ಅಧ್ಯಕ್ಷ ವೆಂಕಟೇಶ ಹೊಸಮನಿ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದು, 66 ನೇ ಧಮ್ಮ ಚಕ್ರ ಪ್ರವರ್ತನಾ ದಿನವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು ಆಯುಷ್ಮತಿ ರಮಾತಾಯಿ ಅಂಬೇಡ್ಕರ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ್ ಟ್ರಸ್ಟ್ ಮತ್ತು ಅದರ ಅಧ್ಯಕ್ಷ ವೆಂಕಟೇಶ ಹೊಸಮನಿ ಅವರು ತಮ್ಮ ಇಬ್ಬರು ಪುತ್ರರೊಂದಿಗೆ ದೀಕ್ಷೆ ಪಡೆದರು.

ಈ ವೇಳೆ ದಲಿತ ಸಮುದಾಯದವರಾಗಿ ತಾವು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿದ ಹೊಸಮನಿ ಅವರು, ಜಾತಿ ತಾರತಮ್ಯದಿಂದ ಬೌದ್ಧ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸಿದರು. ನಂತರ ಗೋಲ್ಡನ್ ಕೇವ್ ಬುದ್ಧ ವಿಹಾರದ ಗೌರವಾಧ್ಯಕ್ಷ ಪೂಜ್ಯ ವರಜ್ಯೋತಿ ಭಂತೇಜಿ ದೀಕ್ಷಾ ವಿಧಿವಿಧಾನ ನೆರವೇರಿಸಿದರು.

ಲಾರಿ ಮತ್ತು ಕಾರು ಡಿಕ್ಕಿ: 6 ಮಂದಿ ಸಾವು
ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ಅರಕೇರಾ  ಬಳಿ ಗುರುವಾರ ರಾತ್ರಿ ನಡೆದ ಕಾರು ಮತ್ತು ಲಾರಿ ನಡುವಿನ ಅಪಘಾತದಲ್ಲಿ  ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ತೆಲಂಗಾಣದ ಕೊಡಂಗಲ್ ಸಮೀಪದ ಚಿತ್ಲಾಪಲ್ಲಿಯ ಹಜರತ್ ಅಬ್ದುಲ್ ಷಾ ದರ್ಗಾದಲ್ಲಿ, ಜವಳ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುತ್ತಿರುವಾಗ, ಅರಕೇರಾ ಸಿದ್ಧಾರೂಢ ಮಠದ ಬಳಿ  ಈ ಘಟನೆ ನಡೆದಿದೆ. ಪೈಪ್‌ ಸಾಗಿಸುತ್ತಿದ್ದ ಟಾಟಾ ಗೂಡ್ಸ್ ಲಾರಿಗೆ, ಕುಟುಂಬಸ್ಥರಿದ್ದ ಹುಂಡೈ ಸ್ಯಾಂಟ್ರೊ ಕಾರು ಡಿಕ್ಕಿ ಹೊಡೆದ ಕಾರಣ ಈ ದುರ್ಘಟನೆ ಸಂಭವಿಸಿದ್ದು 6 ಜನ ಸಾವನ್ನಪ್ಪಿದ್ದಾರೆ.

ಈ ಘಟನೆ ನಡೆದ ತಕ್ಷಣ ಲಾರಿ ಡ್ರೈವರ್‌ ಪರಾರಿಯಾಗಿದ್ದಾನೆ. ಅಪಘಾತದ ಮಾಹಿತಿ ತಿಳಿದಾಕ್ಷಣ ಇಆರ್‌ಎಸ್‌ಎಸ್‌ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸ್ಥಳದಲ್ಲಿ 4 ಜನ ಸಾವನ್ನಪ್ಪಿದ್ದು, ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ, ದುರಾದೃಷ್ಟವಶಾತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದ ಕಾರಣ ಅವರು ಕೂಡ ಕೊನೆಯುಸಿರೆಳೆದಿದ್ದಾರೆ.

ಮಹ್ಮದ್ ವಾಜೀದ್ ಹುಸೇನ್(40), ಮಹ್ಮದ್ ನಜರ್ ಹುಸೇನ್ (76), ನೂರ್ ಜಹಾನ್ ಬೇಗಂ (70), ಹೀನಾ ಬೇಗಂ (30), ಇಮ್ರಾನ್ (22), ಉಮೇಜಾ (5 ತಿಂಗಳು) ಎಂಬುವವರು ಮೃತಪಟ್ಟವರಾಗಿದ್ದು, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಗ್ರಾಮದ ಎಂಜಿ ರಸ್ತೆ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌, ಪಿಐ ದೌವಲತ್ ಕುರಿ ಭೇಟಿ ನೀಡಿದ್ದು, ಘಟನೆಯಬಗ್ಗೆ ಪರಿಶೀಲಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.