ಸೈನ್ಸ್ + ಟೆಕ್ನಾಲಜಿ – Peepal Media

ಸತತ 9 ತಿಂಗಳ ನಂತರ ಭೂಮಿಗೆ ಬಂದಿಳಿದ ಗಗನ ಯಾತ್ರಿಗಳು
ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣ ಬಾಹ್ಯಾಕಾಶದಲ್ಲೇ ಕಳೆದ 9 ತಿಂಗಳು ಕಳೆದ ನಂತರ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು(ಮಾ.19) ಬೆಳಗಿನ ಜಾವ 3.27ರ ಸುಮಾರಿಗೆ ಫ್ಲೋರಿಡಾದ ಸಮುದ್ರದ ಮೇಲೆ ಬಂದು ಇಳಿದಿದ್ದಾರೆ. ಬಳಿಕ ನಾಸಾ ವಿಜ್ಞಾನಿಗಳ ತಂಡ ಸಮುದ್ರದಿಂದ ಸುರಕ್ಷಿತವಾಗಿ ನೌಕೆಯನ್ನು ದಡಕ್ಕೆ ಕರೆತರಲಾಗಿದೆ. ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ನೌಕೆಯಲ್ಲಿದ್ದರು.

ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ 4 ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ ಕ್ಯಾಪ್ಸೂಲ್‌ ಐಎಸ್‌ಎಸ್‌ನಿಂದ ಹೊರಟಿತ್ತು. ಬಳಿಕ ಗಗನಯಾನಿಗಳ ಹ್ಯೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್‌ ಸ್ಪೇಸ್‌ ಸೆಂಟರ್‌ನ ಆಸ್ಪತ್ರೆಗೆ ಒಯ್ಯಲಾಗುತ್ತದೆ. ಅಲ್ಲಿ ಸುನೀತಾ, ವಿಲ್ಮೋರ್‌ರನ್ನು ತಪಾಸಣೆಗೊಳಪಡಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವರ್ಷ ಜೂ.5ರಂದು ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರು ಐಎಸ್‌ಎಸ್‌ನಲ್ಲೇ ಬಾಕಿಯಾಗಬೇಕಾಗಿತ್ತು.

ಎಲ್ಲವೂ ಅಂದುಕೊಂಡಂತೆ ಆಗಿದೆ, ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿದ್ದು, ಸ್ಪೇಸ್‌ ಎಕ್ಸ್‌ಗೆ ಧನ್ಯವಾದಗಳನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಧನ್ಯವಾದಗಳ ತಿಳಿಸಿದೆ.

ಉತ್ತಮ ಸಮಾಜ ಕಟ್ಟಲು ಎಲ್ಲಾರು ಸಾಕ್ಷರರನ್ನಾಗಿ ಮಾಡಬೇಕು – ಅಹಮದ್ ಹಗರೆ
ಹಾಸನ: ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮತ್ತು ಸಹಕಾರ ಮನೋಭಾವವುಳ್ಳ ಸಮಾಜವೊಂದನ್ನು ಕಟ್ಟಲು ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು. ಅತ್ಯಂತ ಅಗತ್ಯವಾಗಿದೆ. ನಮಗಿಂತಲೂ ತಡವಾಗಿ ಸ್ವತಂತ್ರಗೊಂಡ ದೇಶಗಳು ಇಂದು ಆರ್ಥಿಕವಾಗಿ ಮುಂದುವರೆದಿರಲು ಕಾರಣ ಅವರು ಅನುಸರಿಸಿದ ಜನ ಸಾಕ್ಷರತೆ. ಸಾಮಾನ್ಯ ಜನರು ಜಲಸಾಕ್ಷರತೆ, ಪರಿಸರ ಸಾಕ್ಷರತೆ, ಆರ್ಥಿಕ ಸಾಕ್ಷರತೆ, ರಾಜಕೀಯ ಸಾಕ್ಷರತೆ ಮತ್ತು ಅಕ್ಷರ ಸಾಕ್ಷರತೆಗಳಲ್ಲಿ ಸಾಕ್ಷರರಾಗದ ಹೊರತು ಅವರು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಅಭಿಪ್ರಾಯ ಪಟ್ಟರು.

ಇತ್ತೀಚಿಗೆ ಹಾಸನ ನಗರದ ಬಿಜಿವಿಎಸ್ ಕಚೇರಿಯಲ್ಲಿ ಜಿಲ್ಲಾ ಬಿಜಿವಿಎಸ್ ಹಮ್ಮಿಕೊಂಡಿದ್ದ ಬಿಜಿವಿಎಸ್ ಸಂಸ್ಥಾಪನಾ ದಿನದಲ್ಲಿ `ಸಮಾಜ ಬದಲಾವಣೆಗಾಗಿ ವಿಜ್ಞಾನ' ಕುರಿತು ಮಾತನಾಡಿ, ಭಾರತ ಸ್ವತಂತ್ರಗೊAಡ ನಂತರ ಅದು ಹಾಕಿಕೊಂಡ ಗುರಿ ಭಾರತವನ್ನು ಸಮಾಜವಾದಿ ರಾಷ್ಟçವನ್ನಾಗಿ ನಿರ್ಮಿಸುವುದು ಇದಕ್ಕಾಗಿ ಭಾರತ ಕಂಡುಕೊಂಡ ಮಾರ್ಗ ಜನಸತ್ತಾತ್ಮಕ ಮಾರ್ಗ ಆದರೆ ಈ ಪ್ರಜಾಪ್ರಭುತ್ವ ತನ್ನ ಹಾದಿಯಲ್ಲಿ ಇಪ್ಪತ್ತೆöÊದೇ ವರ್ಷಗಳಲ್ಲಿ ಪಾಳೆಗಾರಿ, ಜಾತಿವಾದಿ ಮಾರ್ಗದತ್ತ ಹೊರಳಿ ನಿಂತಿತು ಮತ್ತೆ ಈ ಹೊರಳು ಹಾದಿಯನ್ನು ಜನಸತ್ತಾತ್ಮಕ ಹಾದಿಗೆ ಕೊಂಡೊಯ್ಯಲು ಹೊಸಪೀಳಿಗೆಯಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬಿತ್ತಬೇಕಾಗಿದೆ ಎಂದು ತಿಳಿಸಿದ ಅವರು ಬಿಜಿವಿಎಸ್ ಕಳೆದ 36ವರ್ಷಗಳಲ್ಲಿ ಇದನ್ನು ಬÀಹುಮುಖಿನೆಲೆಯಲ್ಲಿ ಮಾಡುತ್ತಿದೆ ಆದರೆ ಅದರ ಕಾರ್ಯಕ್ಷಮತೆ ಹೆಚ್ಚಾಗಲು ಜನರನ್ನು ಹೆಚ್ಚಾಗಿ ಪಾಳ್ಗೊಳಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ, 1984 ಡಿಸೆಂಬರ್ 3 ಭಾರತವನ್ನು ತಲ್ಲಣಗೊಳಿಸಿದ ಭೂಪಾಲ್ ದುರಂತದ ಕ್ಷಣದಲ್ಲಿ 2000ಕ್ಕೂ ಅಧಿಕ ಸಾವು, 50ಸಾವಿರಕ್ಕೂ ಅಧಿಕ ಜನ ತೀವ್ರ ಗಾಯದಿಂದಾಗಿ ಊರನ್ನೇ ತ್ಯಜಿಸುವ ಸ್ಥಿತಿ, ನಂತರದ ದಿನಗಳಲ್ಲಿ ಇದರಿಂದ 22ಸಾವಿರಕ್ಕೂ ಅಧಿಕ ಸಾವು ಭಾರತವನ್ನು ಜರ್ಜರಿತ ಗೊಳಿಸಿಬಿಟ್ಟಿತ್ತು ಈ ದುರಂತದ ಹಿನ್ನಲೆಯಲ್ಲಿ ಜನರಿಗೆ ತಮ್ಮ ಜೀವ ರಕ್ಷಣೆಗೆ ವಿಜ್ಞಾನದ ಜ್ಞಾನ ತಿಳಿಸಿ ಕೊಡಲಿಕ್ಕಾಗಿ ಎಲ್ಲ ವಿಜ್ಞಾನ ಸಂಘಟನೆಗಳ ನೇತೃತ್ವದಲ್ಲಿ 1987ರಲ್ಲಿ ಬಿಜೆವಿಜೆ ಜಾಥಾ(ಭಾರತ ಜ್ಞಾನ ವಿಜ್ಞಾನ ಜಾಥಾ)ಫಲಶೃತಿ ಭಾರತ ಮೂಢನಂಬಿಕೆ, ಅಂಧಕಾರ, ಬಡತನ ಮತ್ತು ಸಾಕ್ಷರವಾಗಿ ಹಿಂದುಳಿದಿದೆ ಎಂಬ ಅರಿವಿಗೆ ಬಂತು ಜನರ ಈ ಅನಿಷ್ಠಗಳನ್ನ ನಿರ್ಮೂಲನಗೊಳಿಸಲು ಮೊದಲು ಜನರನ್ನು ಸಾಕ್ಷರರನ್ನಾಗಿಸುವುದೇ ಆದ್ಯತೆಯಾಗಬೇಕು ಆಮೂಲಕ ವಿಜ್ಞಾನ ಜ್ಞಾನ ತುಂಬಬೇಕು ಎಂಬ ತೀರ್ಮಾನಕ್ಕೆ ಬಂದು 1989ರ ಡಿಸೆಂಬರ್22ರಂದು ಬಿಜಿವಿಎಸ್ ಸಂಸ್ಥಾಪನೆಯಾಯಿತು ಎಂದು ಬಿಜಿವಿಎಸ್ ಸ್ಥಾಪನೆ ಆದ ಹಿನ್ನಲೆ ತಿಳಿಸಿ ಕಳೆದ 36ವರ್ಷಗಳಿಂದ ನೂರಾರು ವಿಜ್ಞಾನಿಗಳು, ಸಾವಿರಾರು ತಂತ್ರಜ್ಞರು, ಲಕ್ಷಾಂತರ ಶಿಕ್ಷಕರು, ಯುವಕರು ಸ್ವಯಂಪ್ರೇರಣೆಯಿಂದ ಈ ವಿಜ್ಞಾನಾಂದೋಲನಗಳಲ್ಲಿ ಭಾಗವಹಿಸಿ ಸಾಕ್ಷರತಾ ಆಂದೋಲನ, ಶಾಲಾಶಿಕ್ಷಣದ ಬೊಧನಾ ವಿಧಾನ ಉತ್ತಮಪಡಿಸುವಿಕೆ, ಪರಿಸರ ಅಧ್ಯಯನ ಚಟುವಟಿಕೆಗಳನ್ನು ವ್ಯವಸಸ್ಥಿತವಾಗಿ ನಡೆಸಿ, ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಹವಾಮಾನ ಬದಲಾವಣೆ ಮುಂತಾದ ವಿಷಯಗಳಲ್ಲಿ ಸರ್ಕಾರದ ಜೊತೆ ನೀತಿನಿರ್ಣಯರೂಪಿಸಲು ಒತ್ತಡ ತಂತ್ರ ನಡೆಸಲು ಹಾಗೂ ಕೆಲ ಸಂದರ್ಭಗಳಲ್ಲಿ ಅವುಗಳ ಜೊತೆ ಪಾಲ್ಗೊಳ್ಳಲು ಕೂಡ ಕಾರಣವಾಯಿತು ಎಂದರು. ವಿಜ್ಞಾನ ಲೇಖಕ ಕೆ.ಎಸ್ ರವಿಕುಮಾರ್ ತಮ್ಮ ಅನುಭವ ಹಂಚಿಕೊAಡು, 2014ರವರೆಗೂ ಭಾರತದಲ್ಲಿ ಜನಕೇಂದ್ರಿತ ವಿಜ್ಞಾನ ಮುಂಚೂಣೀಯಲ್ಲಿತ್ತು 2014ರ ನಂತರ ಭಾರತದಲ್ಲಿದನ’ಕೇಂದ್ರಿತ ವಿಜ್ಞಾನ ಮುಂಚೂಣಿಯಲ್ಲಿದೆ. ವಿಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುದಾನ ಕಡಿತಗೊಳಿಸಲಾಗಿದೆ ಆದರೆ ಅದೇ ಸಂದರ್ಬದಲ್ಲಿ ದನದ ಪ್ರಾಡಕ್ಟಳ ಇಂಟರ್‌ಪ್ರಿಟೇಶನ್ ಕುರಿತು ಅಂದರೆ ಗೋಮೂತ್ರ, ದನದ ಸಗಣಿಯಲ್ಲಿ ಔಷಧ ಗುಣಗಳ ಚರ್ಚೆಗೆ ಹಣ ವಿನಿಯೋಗ ಆಗುತ್ತಿದೆ ಎಂದು ವಿಡಂಬಿಸಿದ ಅವರು ಕೋವಿಡ್ ಬಂದಾಗ ಪಾಠಕಲಿಯಬೇಕಿತ್ತು ಆದರೆ ಕಲಿಯಲಿಲ್ಲ ನಾವು ಸಾವನ್ನು ಸಹಜವಾಘಿ ಸ್ವೀಕರಿಸಿಬಿಟ್ಟಿದ್ದೇವೆ, ಸಂವೇದನಾಶೂನ್ಯರಾಗಿದ್ದೇವೆ ಎಂದರು.

ಬಿಜಿವಿಎಸ್ ಸಂಸ್ಥಾಪಕ ಸದಸ್ಯ ಪಿ.ಶಾಡ್ರಾಕ್ ಸರ್ಕಾರದ ಸಾಕ್ಷರತಾ ಆಂದೋಲನಾ, ಶಿಕ್ಷಣ ಇಲಾಖೆಯ ನಲಿ-ಕಲಿ ಎನ್ನುವ ಶಿಕ್ಷಣದ ಹೊಸ ಪ್ರಯೋಗಗಳು ಬಿಜಿವಿಎಸ್ ಮೊದಲೇ ನಡೆಸಿದ Zಸಂತಸಕಲಿಕೆಯ ಚಿಣ್ಣರಮೇಳ, ಬಾಲಮೇಳ ಚಟುಚಟಿಕೆಗಳ ಮಾದರಿಗಳ ನಕಲುಗಳು ಹಾಗೂ ಸರ್ವಶಿಕ್ಷ ಅಭಿಯಾನದ ಆರಂಭದ ಬಹುಪಾಲು ಸಂಪನ್ಲೂಲ ವ್ಯಕ್ತಿಗಳು ಬಿಜಿವಿಎಸ್ ಜೊತೆ ಬೆಳೆದ ಶಿಕ್ಷಕರುಗಳೇ ಆಗಿದ್ದರು ಎಂದು ತಮ್ಮ ಅನುಭವ ಹಂಚಿಕೊAಡರು.
ಈ ಸಂದರ್ಬದಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜಿವಿಎಸ್ ಕಟ್ಟಿಬೆಳೆಸಿದ ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಪಿ.ಶಾಡ್ರಾಕ್, ಸಿ.ಸೌಭಾಗ್ಯ ಹಾಗೂ ಅಂತೋಣಿಸ್ವಾಮಿ ಉಪಸ್ಥಿತರಿದ್ದು ತಮ್ಮಗಳ ಅನುಭವ ಹಂಚಿಕೊAಡು ಸಾಕ್ಷರತೆ ಹಾಗೂ ವಿಜ್ಞಾನ ಗೀತೆಗಳನ್ನು ಹಾಡಿದರು.
ಬಿಜಿವಿಎಸ್ ತಾಲ್ಲೂಕು ಸಮಿತಿ ಸದಸ್ಯೆ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು, ಮೊದಲಿಗೆ ಬಿಜಿವಿಎಸ್ ತಾಲ್ಲೂಕು ಉಪಾಧ್ಯಕ್ಷ ಚಿನ್ನೇನಹಳ್ಳಿ ಸ್ವಾಮಿ ಸ್ವಾಗತಿಸಿದರು, ತಾಕಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಪ್ರಾಸ್ತವಿಕವಾಗಿ ಮಾತನಾಡಿದರು, ಕಡೆಯಲ್ಲಿ ಸಮತಾ ಜಿಲ್ಲಾ ಸಂಚಾಲಕಿ ಮಮತಾಶಿವು ವಂದಿಸಿದರು.

ದೇಶದ ಮೊತ್ತಮೊದಲ “ಜಿಸಿಸಿ ಕಾರ್ಯನೀತಿ” ಅನಾವರಣ ; ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
* “ನಿಪುಣ” ಯೋಜನೆಯಡಿ ವರ್ಷದಲ್ಲಿ 1 ಲಕ್ಷ ಜನರಿಗೆ ಕೌಶಲ ತರಬೇತಿ ನೀಡಲು ಐದು ಕಂಪನಿಗಳ ಜೊತೆ ಒಡಂಬಡಿಕೆಗೆ ಸಹಿ
* ರಾಜ್ಯದಲ್ಲಿ ಮೂರು ಗ್ಲೋಬಲ್ ಇನ್ನೊವೇಷನ್ ಪಾರ್ಕ್ ಸ್ಥಾಪನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಉದ್ಯಮ ವಲಯದ ಬೆಳವಣಿಗೆ ಉತ್ತೇಜಿಸಲು ಬೆಂಗಳೂರು, ಮೈಸೂರು ಮತ್ತು ಬೆಳಗಾವಿಗಳಲ್ಲಿ ಮೂರು ಜಾಗತಿಕ ನಾವೀನ್ಯತಾ ಪಾರ್ಕ್ ಗಳನ್ನು (ಗ್ಲೋಬಲ್ ಇನ್ನೊವೇಷನ್ ಡಿಸ್ಟ್ರಿಕ್ಟ್ಸ್) ಸ್ಥಾಪಿಸುವ ಜೊತೆಗೆ ಮೈಸೂರಿನ ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ತಯಾರಿಕಾ ಕ್ಲಸ್ಟರ್ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪ್ರಕಟಿಸಿದರು.

ಇಲ್ಲಿನ ಅರಮನೆ ಮೈದಾನದಲ್ಲಿ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಶೃಂಗ-24”ವನ್ನು (27ನೇ ಆವೃತ್ತಿ) ಉದ್ಘಾಟಿಸಿ ದ ಅವರು, ಸರ್ಕಾರ ಸ್ಥಾಪಿಸಲಿರುವ ಈ ಮೂರು ಜಾಗತಿಕ ನಾವೀನ್ಯತಾ ಪಾರ್ಕ್ ಗಳು ಜಿ.ಸಿ.ಸಿ.ಗಳಿಗೆ (ಗ್ಲೋಬಲ್ ಕೇಪಬಿಲಿಟಿ ಸೆಂಟರ್) ತಮ್ಮ ಕೇಂದ್ರಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಲು ಅನುವು ಮಾಡಿಕೊಡಲಿವೆ ಎಂದು ಹೇಳಿದರು.

ರಾಜ್ಯದ ಸೆಮಿಕಂಡಕ್ಟರ್ ಉತ್ಪಾದಕತೆಯನ್ನು ಕೋಚನಹಳ್ಳಿಯಲ್ಲಿಯ ಎಲೆಕ್ಟ್ರಾನಿಕ್ಸ್ ಮ್ಯಾನಫ್ಯಾಕ್ಚರಿಂಗ್ ಕ್ಲಸ್ಟರ್ ಸದೃಢಗೊಳಿಸಲಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ನಗರ-ಗ್ರಾಮೀಣ ಸಮಾನತೆಯನ್ನು ತರುವುದಕ್ಕೂ ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೂಪಿಸಲಾಗಿರುವ “ಜಿಸಿಸಿ ಕಾರ್ಯನೀತಿ”ಯನ್ನು ಅನಾವರಣಗೊಳಿಸಿದರು. ಈ ಕುರಿತು ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಈಗ ಇರುವ 875 ಜಿಸಿಸಿ ಘಟಕಗಳ ಜೊತೆಗೆ ಇನ್ನೂ 500 ಜಿಸಿಸಿ ಘಟಕಗಳ ಸ್ಥಾಪನೆ, 3.5 ಲಕ್ಷ ಉದ್ಯೋಗಗಳ ಸೃಷ್ಟಿ ಹಾಗೂ ಆರ್ಥಿಕ ಉತ್ಪಾದನೆಯನ್ನು 50 ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸುವ ಗುರಿಯನ್ನು “ಜಿಸಿಸಿ ಕಾರ್ಯನೀತಿ” ಹೊಂದಿದೆ ಎಂದು ವಿವರಿಸಿದರು.

ಮಂಗಳೂರನ್ನು ಫಿನ್ ಟೆಕ್ ವಲಯವನ್ನಾಗಿ, ಹುಬ್ಬಳ್ಳಿ-ಧಾರವಾಡ ಇವಿ ವಲಯವನ್ನಾಗಿ ಹಾಗೂ ಮೈಸೂರನ್ನು ಡ್ರೋನ್ ವಲಯವನ್ನಾಗಿ ರೂಪಿಸಲು ಸರ್ಕಾರ ಒತ್ತು ನೀಡಲಿದೆ. ನಾವೀನ್ಯತೆ, ಸುಸ್ಥಿರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದ್ದು, ಉದ್ಯಮದ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದರು.

20ನೇ ಶತಮಾನದ ಆರಂಭಿಕ ಅವಧಿಯಲ್ಲಿ ರಕ್ಷಣಾ ಸಾಮಗ್ರಿಗಳ ತಯಾರಿಕೆ ಹಾಗೂ ವೈಮಾಂತರಿಕ್ಷ ಉದ್ದಿಮೆಗಳ ಮೂಲಕ ಗಮನಸೆಳೆದ ಬೆಂಗಳೂರು ಈಗ ಮಾಹಿತಿ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ನೆಲೆಯಾಗಿ ಬೆಳೆದಿದೆ. ಐಟಿ, ಡೀಪ್ ಟೆಕ್, ಬಯೋಟೆಕ್, ಜೀವಿವಿಜ್ಞಾನಗಳು. ಬಯೋಮ್ಯಾನಫ್ಯಾಕ್ಚರಿಂಗ್, ಅಡ್ವಾನ್ಸ್ಡ್ ಮ್ಯಾನಫ್ಯಾಕ್ಚರಿಂಗ್ ಇತ್ಯಾದಿಗಳಿಗೆ ನಗರವು ಹೆಸರಾಗಿದೆ. ಅಲ್ಲದೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರಿಂಗ್ ಪ್ರತಿಭೆಗಳು ಹಾಗೂ ಎಐ ವೃತ್ತಿಪರರು ಇರುವ ನಗರವೂ ಇದಾಗಿದೆ ಎಂದು ನುಡಿದರು.

ಬೆಂಗಳೂರು ವಿಮಾನ ನಿಲ್ದಾಣದಿಂದ 50 ಕಿ.ಮೀ. ನಿಲ್ದಾಣದಲ್ಲಿ ನಾವೀನ್ಯತೆಯ ಪರಿಕಲ್ಪನೆಯಿಂದ ಕೂಡಿಡ ‘ಕ್ವಿನ್ ಸಿಟಿ’ ನಿರ್ಮಾಣವಾಗಲಿದೆ. ಇದರ ಜೊತೆಗೆ “ ನಮ್ಮ ಗ್ರಾಮ, ನಮ್ಮ ರಸ್ತೆ”, “ಬಿಯಾಂಡ್ ಬೆಂಗಳೂರು” ದಂತಹ ಉಪಕ್ರಮಗಳು ರಾಜ್ಯದ ಸಮತೋಲಿತ ಬೆಳವಣಿಗೆಗೆ ಪೂರಕವಾಗಲಿವೆ ಎಂದು ಸಿದ್ದರಾಮಯ್ಯ ನುಡಿದರು.

“ನಿಪುಣ” ಯೋಜನೆಯಡಿ ಕೌಶಲ ತರಬೇತಿ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಯುವಜನತೆಗೆ ಕೌಶಲ ತರಬೇತಿ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ‘ನಿಪುಣ’ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.”ನಿಪುಣ” ಯೋಜನೆಯಡಿ ಒಂದು ವರ್ಷದಲ್ಲಿ ಒಂದು ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ, ಬಿಎಫ್ ಎಸ್ಐ ಕನ್ಸಾರ್ಷಿಯಂ, ಈ ಐದು ಸಂಸ್ಥೆಗಳ ಜೊತೆ ಒಡಂಬಡಿಕೆಗೆ ಇಂದು ಸಹಿ ಹಾಕಲಾಗಿದೆ ಎಂದರು.

ನಗರದಲ್ಲಿ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯ ನಿರ್ಮಿಸಲು ಹಾಗೂ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸರ್ಕಾರ ಒತ್ತು ನೀಡಲಿದೆ. ಈಗ ಬೆಂಗಳೂರಿನಲ್ಲಿ ಉದ್ದಿಮೆಗಳಿಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಯಾವ ಸಮಸ್ಯೆಯೂ ಇಲ್ಲ. ಮುಂಬರುವ ದಿನಗಳಲ್ಲಿ ಸಂಚಾರ ಸೇರಿದಂತೆ ಇರುವ ಇನ್ನಿತರ ಒಂದಿಷ್ಟು ಸಮಸ್ಯೆಗಳನ್ನು ಆದ್ಯತೆ ಮೇಲೆ ನಿವಾರಿಸಲಾಗುವುದು ಎಂದರು.

ಬೆಂಗಳೂರಿನಂತಹ ನಗರ ಅಭಿವೃದ್ಧಿಯಾಗಲು ಸರ್ಕಾರವೊಂದೇ ಕಾರಣವಲ್ಲ. ಇಲ್ಲಿನ ನಗರದಲ್ಲಿ ಉದ್ಯಮಿಗಳ ಪಾಲೂ ದೊಡ್ಡದಿದೆ. ಇನ್ಫೋಸಿಸ್ ನ ನಾರಾಯಣ ಮೂರ್ತಿ, ಬಯೋಕಾನ್ ನ ಕಿರಣ್ ಮಜುಂದಾರ್ ಷಾ ಅವರಂತಹ ಉದ್ಯಮಿಗಳು ಇಲ್ಲದಿದ್ದರೆ ಬೆಂಗಳೂರು ಈಗ ಇರುವಂತೆ ಇರುತ್ತಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಸ್ವಿಗ್ಗಿಯ ಸಹಸ್ಥಾಪಕ ಶ್ರೀಹರ್ಷ ಮಜೇತಿ ಅವರನ್ನು ಸನ್ಮಾನಿಸಲಾಯಿತು.

ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಐಟಿ ಬಿಟಿ ನಿರ್ದೇಶಕ ದರ್ಶನ್, ಉಪ ಕಾರ್ಯದರ್ಶಿ ರುಚಿ ಬಿಂದಲ್ ಮತ್ತಿತರರು ಇದ್ದರು.

ಸಾವಿನ ವ್ಯಾಖ್ಯಾನವನ್ನೇ ಬದಲಿಸಲು ಹೊರಟಿದೆ ಎಐ ತಂತ್ರಜ್ಞಾನ!
“ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ..” AI ಕ್ರಾಂತಿಯ ಮುಂದುವರೆದ ಭಾಗವಾಗಿ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಕುತೂಹಲಕಾರಿ ಬರಹ. ತಪ್ಪದೇ ಓದಿ.

ಆಗಷ್ಟೆ ಕೊರೊನಾ ಮೊದಲ ಅಲೆ ಮುಗಿದಿತ್ತು. ನಮ್ಮ ತಲೆಮಾರು ನೋಡಿದ ಮೊದಲ ಸಾಂಕ್ರಾಮಿಕ ರೋಗ ಇನ್ನೂ ಶಾಂತವಾಗಿರಲಿಲ್ಲ. ಆಗಷ್ಟೆ 6 ತಿಂಗಳ ಬಾಣಂತನ ಮುಗಿಸಿ ಮಗನ ಜತೆ ಬಾಳ ಸಂಗಾತಿ ಬೆಂಗಳೂರಿಗೆ ಬಂದಿಳಿದಿದ್ದಳು. ಹೀಗಿರುವಾಗಲೇ ತೀರ್ಥಹಳ್ಳಿಯಿಂದ ಒಬ್ಬ ಕರೆ ಮಾಡಿದ್ದ. ಅವತ್ತು ನವೆಂಬರ್ 5, 2020. “ಪಿಟ್ಟಿ, ನಿನ್ನ ಅಪ್ಪ ಹೋಗಿಬಿಟ್ರು,” ಅಂದ. ಬೆಂಗಳೂರಿನ ಮಾಳಗಾಳದ ಟೀ ಅಂಗಡಿ ಮುಂದೆ ನಿಂತಿದ್ದ ನನಗೆ ಆ ಕ್ಷಣಕ್ಕೆ ಏನು ಹೇಳಬೇಕೋ ತೋಚಲಿಲ್ಲ. ಅಪ್ಪನ ಪ್ರೀತಿಯ ಮಗ ನಾನು. ನನ್ನ ಎಲ್ಲಾ ಪ್ರಯೋಗಗಳಿಗೆ ತನ್ನ ನಿಷ್ಕಲ್ಮಶ ನಗುವಿನ ಮೂಲಕವೇ ಸಮ್ಮತಿ ಕೊಟ್ಟುಕೊಂಡು ಬಂದವರು. ಸುಮಾರು ಒಂದೂವರೆ ದಶಕ ಪಾರ್ಕಿನ್ಸನ್ ಕಾಯಿಲೆಯ ಜತೆ ಗುದ್ದಾಡಿದ ಅವರ ಹೃದಯ ಕೊನೆಗೂ ಬಡಿತ ನಿಲ್ಲಿಸಿತ್ತು.

ಸಾವು ನನಗೆ ಹೊಸತೇನೂ ಆಗಿರಲಿಲ್ಲ. ನಾನಾ ರೀತಿಯ ಸಾವುಗಳಿಗೆ (ಎನ್‌ಕೌಂಟರ್, ರಸ್ತೆ ಅಪಘಾತ, ಲೈವ್‌ ಮರ್ಡರ್, ಆತ್ಮೀಯರ ಅಗಲಿಕೆ…) ಸಾಕ್ಷಿಯಾಗಿದ್ದೆ. ಸಾವಿನ ಕುರಿತು ಮೊದಲೇ ಒಂದು ರೀತಿಯ ಭಾವಶೂನ್ಯತೆ ಆವರಿಸಿಕೊಂಡಿತ್ತು. ಹೀಗಿರುವಾಗ, ನನ್ನ ಪ್ರೀತಿಯ ತಂದೆಯ ಸಾವು ಕೇವಲ ಕರ್ತವ್ಯಗಳನ್ನಷ್ಟೆ ನೆನಪಿಸಿತು. ಪ್ರತೀತಿಯಿಂದ ಬಂದ ಕೆಲಸಕ್ಕೆ ಬಾರದ ಶ್ರಾದ್ಧಾ, ಕಟ್ಲೆ ಕಾರ್ಯಗಳನ್ನು ಮುಗಿಸಿ ಬೆಂಗಳೂರಿಗೆ ವಾಪಾಸಾದೆ.

ಮೊದಲಿನಿಂದಲೂ ಬದುಕಿನ ತಿರುವುಗಳಲ್ಲಿ ಅಪ್ಪ ನೆನಪಾಗುತ್ತಿದ್ದರು. ಅವರ ಅನಿಸಿಕೆ ಏನಿರಬಹುದು ಎಂಬ ಕುತೂಹಲ ಇದ್ದೇ ಇತ್ತು. ಇದೀಗ ಅವರಿಲ್ಲ. ಇನ್ನಾವ ವಿಚಾರಕ್ಕೂ ಅವರ ಅಭಿಪ್ರಾಯ, ಅನಿಸಿಕೆಗಳು ಲಭ್ಯವಿಲ್ಲ. ಆಗಾಗ, “ಅಪ್ಪ ಇದ್ದಿದ್ದರೆ…” ಅನ್ನೋ ಆಲೋಚನೆಯೊಂದು ಸುಳಿಯಲಾರಂಭಿಸಿತು. ಈ ಸಮಯದಲ್ಲಿ ಹಿರಿಯರು ಬುದ್ಧನ ಸಾವಿಲ್ಲದ ಮನೆಯ ಸಾಸಿವೆ ಕತೆ ಹೇಳಿ ಸಮಾಧಾನಪಡಿಸಿದರು. ಇನ್ನೊಬ್ಬರು ಖುಷ್ವಂತ್ ಸಿಂಗ್‌ ಅವರ ಸಾವಿನ ಕುರಿತಾದ ಪುಸ್ತಕ ಓದಲು ಹೇಳಿದರು. ಹೀಗೆ ಸಾವಿಗೆ ಸಾಂತ್ವಾನ ಹೇಳಿಕೊಳ್ಳುವ ಅನಿವಾರ್ಯತೆಯನ್ನು, ಶೋಕಗಳನ್ನು ನೀಗಿಕೊಳ್ಳುವ ಕಲೆಯನ್ನು ಸುತ್ತಮುತ್ತಲಿನವರು ಕಲಿಸಿದರು.

ಹಾಗೆ ನೋಡಿದರೆ, ಈ ನಾಗರೀಕತೆ ಹುಟ್ಟು ಮತ್ತು ಸಾವಿಗೆ ತನ್ನದೇ ಅರ್ಥಗಳನ್ನು ಕಂಡುಕೊಂಡಿದೆ. ಏನೇ ಬಂದರೂ ಅರಗಿಸಿಕೊಂಡು ಮುಂದೆ ಹೋಗುವ ಕಲೆಯನ್ನು ರೂಢಿಸಿಕೊಂಡಿದೆ. ನಮ್ಮನ್ನು ಅಗಲುವವರು ಪೈಕಿ ಶೇ. 98ರಷ್ಟು ಸಾವುಗಳಿಗೆ ಅಂತಿಮವಾಗಿ ಹೃದಯ ಕೆಲಸ ನಿಲ್ಲಿಸುವುದೇ ಕಾರಣ. ಇನ್ನುಳಿದ ಶೇ. 2ರಷ್ಟು ಸಾವುಗಳು ಮೆದುಳು ಸ್ಥಗಿತದಿಂದ ಸಂಭವಿಸುತ್ತವೆ ಎನ್ನುತ್ತವೆ ಸಂಶೋಧನೆಗಳು. ಸಾವುಗಳನ್ನು ಮೀರಿದ ಬದುಕು ಇಲ್ಲವಾಗಿರುವ ಕಾರಣಕ್ಕೆ, ಸತ್ತವರನ್ನು ನೆನಪಿಸಿಕೊಳ್ಳಲು ಪಿತೃಪಕ್ಷ, ಶ್ರಾದ್ಧಾಗಳ ಹೆಸರಿನಲ್ಲಿ ಆಚರಣೆಗಳನ್ನು ಹುಟ್ಟುಹಾಕಿಕೊಂಡಿದ್ದೇವೆ. ಆ ಮೂಲಕ ವರ್ಷಕ್ಕೊಮ್ಮೆಯಾದರೂ ಅಗಲಿದವರನ್ನು ನೆನಪಿಸಿಕೊಳ್ಳುವ ಪ್ರಕ್ರಿಯೆ ಇದು ಅಂತ ಅನ್ನಿಸುತ್ತದೆ. ಯಾಕೆ ಇಷ್ಟು ಸಾವಿನ ಕುರಿತು ಮಾತನಾಡುತ್ತಿದ್ದೇನೆ ಎಂದರೆ, ಇದೀಗ ಈ ಎಐ ಎಂದು ಕರೆಯುವ ಕೃತಕ ಬುದ್ದಿವಂತಿಕೆಯು ಸಾವಿನ ವ್ಯಾಖ್ಯಾನಗಳನ್ನೇ ಬದಲಿಸಲು ಹೊರಟಿದೆ. ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ.

ಏನಿದು ಡಿಜಿಟಲ್ ಇಮ್ಮಾರ್ಟಲಿಟಿ?:
ಎಐ ತಂತ್ರಜ್ಞಾನ, ನ್ಯೂರೋ ಸೈನ್ಸ್ ಮತ್ತಿತರ ವಿಜ್ಞಾನದ ಆವಿಷ್ಕಾರಗಳ ಬೆಳವಣಿಗೆಯಿಂದಾಗಿ ಈಗಾಗಲೇ ನಮ್ಮದೇ ರೀತಿಯ ಅವತಾರಗಳನ್ನು ಸೃಷ್ಟಿಸುವ ಅವಕಾಶವಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜೀವಂತ ವ್ಯಕ್ತಿಗಳ ಮೆದುಳನ್ನೇ ನಕಲು ಮಾಡುವ ತಂತ್ರಜ್ಞಾನವನ್ನು ಹೊರಜಗತ್ತಿಗೆ ನೀಡಲು ಹೊರಟಿದೆ. ಇದರ ಬಿಡುಗಡೆಯ ದಿನಾಂಕವನ್ನೂ ಇನ್ನೂ ಟೆಕ್‌ ಸಂಸ್ಥೆ ಘೋಷಣೆ ಮಾಡದಿದ್ದರೂ, ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಡೀಪ್‌ಬ್ರೈನ್‌ ಎಐ ಎಂಬ ಸಂಸ್ಥೆ ಈಗಿರುವ ವ್ಯಕ್ತಿಗಳ ಧ್ವನಿ ಹಾಗೂ ಮುಖವನ್ನು ನಕಲು ಮಾಡಲು ಅವಕಾಶ ಒದಗಿಸಿದೆ. ಹೋಲ್‌ ಬ್ರೈನ್‌ ಎಮ್ಯುಲೇಶನ್ ಎಂಬ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವ ಸ್ವರೂಪಗಳ ಕುರಿತು ಟೆಕ್‌ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಒಂದು ವೇಳೆ ಮನುಷ್ಯನ ನಕಲು ಮಾಡಿದ ಡಿಜಿಟಲ್ ಮೆದುಳು ಅಸಲಿ ಮನುಷ್ಯನಂತೆ ಭಾವನೆಗಳನ್ನು ವ್ಯಕ್ತಪಡಿಸುವ, ಆಲೋಚಿಸುವ, ಸ್ವಂತಿಕೆಯನ್ನು ಬೆಳೆಸಿಕೊಂಡರೆ ಅದರ ಪರಿಣಾಮಗಳು ಏನಿರಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡಲಾಗಿದೆ. 2024ರ ‘ಲೈವ್‌ ಸೈನ್ಸ್‌’ ಸಂಚಿಕೆಯೊಂದರ ಲೇಖನವೊಂದು ಹೋಲ್‌ ಬ್ರೈನ್‌ ಎಮ್ಯುಲೇಶನ್‌ನ ನೈತಿಕತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಇದರಿಂದ ಎದುರಾಗುವ ಕಾನೂನಾತ್ಮಕ ಸಮಸ್ಯೆಗಳು ಹಾಗೂ ಸಾಮಾಜಿಕ ಸಂರಚನೆಯ ಬದಲಾವಣೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. 2022ರಲ್ಲಿ ‘ಸೈಕಾಲಜಿ ಟುಡೆ’ ಪ್ರಕಟಿಸಿದ ಅಂಕಣದಲ್ಲಿ ಮನುಷ್ಯನ ನಕಲಿ ಮೆದುಳು ಆಕೆಯ/ ಆತನ ದೇಹಾಂತ್ಯದ ನಂತರವೂ ಬದುಕುಳಿಯುವ ಮೆದುಳು ಹುಟ್ಟುಹಾಕುವ ಮನೋವೈಜ್ಞಾನಿಕ ತಲ್ಲಣಗಳನ್ನು ಪಟ್ಟಿ ಮಾಡಿದೆ. ಜತೆಗೆ, ಸಾವಿನ ಕುರಿತು ಈವರೆಗೆ ಅರಗಿಸಿಕೊಂಡ ತತ್ವಗಳಲ್ಲಿ ಏಳುವ ಕಂಪನಗಳ ಕುರಿತು ಗಮನ ಸೆಳೆಯುತ್ತದೆ.

ಕೆಲವು ಪ್ರಶ್ನೆಗಳು:
ಒಟ್ಟಾರೆ, ಮನುಷ್ಯ ಸತ್ತ ನಂತರವೂ ಆಕೆಯ/ಆತನ ಮೆದುಳನ್ನು ಉಳಿಸಿಕೊಳ್ಳುವುದು ಇವತ್ತಿಗೆ ಊಹೆಗೆ ಮೀರಿದ ಪರಿಕಲ್ಪನೆಯಾಗಿ ಉಳಿದಿಲ್ಲ. ಹಾಗಂತ ಈ ತಂತ್ರಜ್ಞಾನ ಎಲ್ಲಾ ಮನುಷ್ಯರಿಗೂ ಸಮಾನವಾಗಿ ಸಿಗುತ್ತಾ ಎಂಬ ಪ್ರಶ್ನೆ ಇದ್ದೇ ಇದೆ. ಆರ್ಥಿಕ ಅಸಮಾನತೆಯಲ್ಲಿ ಬೇಯುತ್ತಿರುವ ಈ ಸಮಾಜದಲ್ಲಿ ಇಂತಹದೊಂದು ತಂತ್ರಜ್ಞಾನ ಬಲಾಢ್ಯರ ಮೆದುಳುಗಳನ್ನು ಮಾತ್ರವೇ ಉಳಿಸುವಂತಾದರೂ ಕಷ್ಟವೇ. ಇದಕ್ಕಾಗಿ ನಮ್ಮ ಸರಕಾರಗಳು ಈ ವಿಚಾರದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ವ್ಯವಹರಿಸಬೇಕಿದೆ.

ನಮ್ಮದೇ ರಾಜ್ಯದ ಆಡಳಿತವನ್ನು ಗಮನಿಸಿ ನೋಡಿ. ಇಲ್ಲಿ ಗ್ರಾಮೀಣಾಭಿವೃದ್ಧಿಗೂ, ಐಟಿ- ಬಿಟಿಗೂ ಒಬ್ಬನೇ ಸಚಿವ. ಗ್ರಾಮೀಣಾಭಿವೃದ್ಧಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಿ ಎಂದು ರೈತರು ನೀಡಿದ ಮನವಿಯನ್ನೇ ಈತ ಕಸದ ಬುಟ್ಟಿಗೆ ಎಸೆದಿದ್ದಾನೆ. ಇಂತವರಿಂದ ಎಐ ತಂತ್ರಜ್ಞಾನ ಸೃಷ್ಟಿಸಬಹುದಾದ ಕಂದಕವನ್ನು ಮುಚ್ಚುವ ಕೆಲಸ ಆಗುತ್ತಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.

ಎರಡನೇ ಪ್ರಮುಖ ಪ್ರಶ್ನೆ ಇರುವುದು, ಸಾವಿನ ನಂತರವೂ ಬದುಕುಳಿಯುವ ತಂತ್ರಜ್ಞಾನ ಎತ್ತಬಹುದಾದ ತಾತ್ವಿಕ ವಿಚಾರಗಳ ಕುರಿತಾಗಿದ್ದು. ಪಿತೃಪಕ್ಷ, ಶ್ರಾದ್ಧಾಗಳ ಮೂಲಕ ‘ಹೋದವರೆಲ್ಲಾ ಒಳ್ಳೆಯವರು’ ಎಂಬ ತೆಳುವಾದ ನೈತಿಕ ಚೌಕಟ್ಟಿನಲ್ಲಿ ಸಮಾಜ ಈಗ ಮುಂದೆ ಸಾಗುತ್ತಿದೆ. ಒಂದು ವೇಳೆ, ಸತ್ತ ನಂತರವೂ ಮೆದುಳೊಂದು ಜೀವಂತ ಇದ್ದರೆ, ಆಗ ಅದನ್ನು ‘ಒಳ್ಳೆಯವರು’ ಎಂದು ಗುರುತಿಸುವ ಮನೋಧರ್ಮ ಉಳಿಯುತ್ತಾ? ಉತ್ತರಗಳಿಗಾಗಿ ಕಾದುನೋಡಬೇಕಿದೆ.

ಒಂದು ಸಲಹೆ :
ಈ ತಂತ್ರಜ್ಞಾನ ಭವಿಷ್ಯವನ್ನು ಬದಲಿಸುವ ಪರಿಗೆ ನಾವೆಲ್ಲಾ ಸಾಕ್ಷಿಯಾಗಬೇಕಿದೆ. ಅದಕ್ಕಾಗಿ ಅರಿಮೆಯನ್ನು ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿರುವ ಕೆಲಸವಾಗಬೇಕಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ವಾತಾವರಣದಲ್ಲಿ ವಿಶಿಷ್ಟವಾಗಿರುವ ಮೆದುಳು ಮ್ಯೂಸಿಯಂ ಒಂದನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಳೆದ 40 ವರ್ಷಗಳ ಅಂತರದಲ್ಲಿ ನಾನಾ ಕಾರಣಗಳಿಗಾಗಿ ಸತ್ತವರ ಸುಮಾರು 400ಕ್ಕೂ ಹೆಚ್ಚು ಮೆದುಳುಗಳನ್ನು ಸಂಸ್ಕರಿಸಲಾಗಿದೆ. ಇದೀಗ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಪ್ರವೇಶಾವಕಾಶವನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗೆ (https://thenimhansbrainbank.in/museum/) ಕ್ಲಿಕ್ ಮಾಡಿ, ಈಗಲೇ ನೋಂದಾಯಿಸಿಕೊಳ್ಳಿ ಮತ್ತು ವಿಶಿಷ್ಟ ಅನುಭವಕ್ಕೆ ಈಡಾಗಿ.

ಸಂಶೋಧನಾ ವರದಿ | ಸಿನೆಮಾ ನೋಡಿ ಅಳುವವರು ಅಕಾಲಿಕ ಮರಣಕ್ಕೆ ಈಡಾಗೋ ಸಾಧ್ಯತೆ ಹೆಚ್ಚಂತೆ!
ಲಂಡನ್, ಅಕ್ಟೋಬರ್ 23: ಸಿನಿಮಾ ನೋಡಿ ಅಳುವವರು, ತಿರಸ್ಕಾರಕ್ಕೆ ಹೆದರುವವರು, ಸಣ್ಣ ವಿಷಯಕ್ಕೂ ಹೆದರುವವರು ಅಕಾಲಿಕ ಮರಣಕ್ಕೆ ತುತ್ತಾಗುವ ಅಪಾಯ ಹೆಚ್ಚು ಎಂದು ಅಮೆರಿಕದ ಸಂಶೋಧಕರ ಅಧ್ಯಯನವೊಂದು ತಿಳಿಸಿದೆ.

ನರ ಸಂಬಂಧಿ ರೋಗ ಹೊಂದಿರುವವರು ಇದೇ ರೀತಿಯ ನಡವಳಿಕೆಯನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಇಂತಹ ಜನರಲ್ಲಿ ಅಕಾಲಿಕ ಮರಣದ ಅಪಾಯವು 10 ಪ್ರತಿಶತದಷ್ಟು ಹೆಚ್ಚು ಎಂದು ಅದು ಹೇಳಿದೆ.

ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ಯುಕೆ ಬಯೋಬ್ಯಾಂಕ್ ಡೇಟಾಬೇಸ್‌ನಲ್ಲಿ 5 ಲಕ್ಷ 17 ವರ್ಷ ವಯಸ್ಸಿನ ನರ ರೋಗಿಗಳನ್ನು ಅಧ್ಯಯನ ಮಾಡಿದರು. ಈ ಅಧ್ಯಯನವು ನರರೋಗವು ದುಃಖ, ಭಯ ಮತ್ತು ಕಿರಿಕಿರಿಯಂತಹ ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದೆ.

ಈ ಸಮಸ್ಯೆ ಇರುವವರಲ್ಲಿ ಮುಖ್ಯವಾಗಿ ಆತಂಕ, ಒಂಟಿತನ ಮತ್ತು ಸಿನಿಕತನ ಕಾಣಿಸಿಕೊಳ್ಳುತ್ತದೆ. ಇವು ಮಾನವನ ಮೆದುಳು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಸಂಶೋಧಕರು.

ವಿಶೇಷವಾಗಿ ಒಂಟಿತನದಿಂದ ಉಸಿರಾಟ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತವೆ ಮತ್ತು ತಮ್ಮನ್ನು ತಾವು ಹಾನಿ ಮಾಡಿಕೊಳ್ಳುವ ಆಲೋಚನೆಗಳು ಅವರಲ್ಲಿ ಹೆಚ್ಚಾಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನರರೋಗ ಹೊಂದಿರುವ ಜನರು ಮೂಡ್ ಸ್ವಿಂಗ್ ಮತ್ತು ಆಯಾಸದ ಭಾವನೆಗಳನ್ನು ಎದುರಿಸುತ್ತಾರೆ ಎಂದು ತಿಳಿದುಬಂದಿದೆ, ಇದು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ. ಪ್ರೊಫೆಸರ್ ಆಂಟೋನಿಯೊ ಟೆರಾಸಿಯಾನೊ ಅವರು ನರರೋಗದಲ್ಲಿ ಇತರ ಸಮಸ್ಯೆಗಳಿಗಿಂತ ಒಂಟಿತನವು ಹೆಚ್ಚು ಪ್ರಭಾವಶಾಲಿ ಎಂದು ಹೇಳಿದ್ದಾರೆ.

ರಾಜ್ಯ ಕೇವಲ ಬಂಡವಾಳ ಹೂಡಿಕೆ ತಾಣವಲ್ಲ, ಜ್ಞಾನ ಹಾಗೂ ಕೌಶಲ್ಯವೇ ಬಂಡವಾಳ: ಪ್ರಿಯಾಂಕ್‌ ಖರ್ಗೆ
ಉದ್ಯೋಗ ಸನ್ನದ್ಧತೆಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ʼನಿಪುಣ ಕರ್ನಾಟಕʼ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಘೋಷಿಸಿದ್ದು, ಶೀಘ್ರದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬೆಂಗಳೂರು ಟೆಕ್ ಶೃಂಗಸಭೆಗೆ ಮುನ್ನ ಸಚಿವರು ಆರ್ ಅಂಡ್ ಡಿ ಲ್ಯಾಬ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ‌ ತಜ್ಞರು ಹಾಗೂ ಪ್ರತಿನಿಧಿಗಳ ಜೊತೆ ಪರಸ್ಪರ ಸಂವಾದ ಮಾಡಿ ಸಚಿವರು ಮಾತನಾಡಿದರು

ಯುವ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸಚಿವರು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಮತ್ತು ಮನಃಸ್ಥಿತಿಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಚರ್ಚೆಗಳು, ರಸಪ್ರಶ್ನೆಗಳು ಮತ್ತು ವಿಜ್ಞಾನ ಪ್ರದರ್ಶನಗಳಂತಹ ಜ್ಞಾನಾಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮ ಚೌಕಟ್ಟನ್ನು ರೂಪಿಸಲು ಸಚಿವರು ಸಲಹೆ ನೀಡಿದರು.

ಕರ್ನಾಟಕ ಸರ್ಕಾರದ ಉದ್ದೇಶವು ಅತ್ಯಂತ ಸ್ಪಷ್ಟವಾಗಿದ್ದು, ನಾವು ಕೇವಲ ಹೂಡಿಕೆಯ ತಾಣವಾಗಿ ಇರಲು ಬಯಸುವುದಿಲ್ಲ.ಜ್ಞಾನ ಹಾಗೂ ಕೌಶಲ್ಯವೇ ನಮ್ಮ ಬಂಡವಾಳವಾಗಬೇಕೆಂದು ಬಯಸುತ್ತೇವೆ, ಪಿರಮಿಡ್ ಮಾದರಿಯಲ್ಲಿ ಶಿಕ್ಷಣ ಮೊದಲನೆಯದು ಹಾಗೂ ಕೌಶಲ್ಯ ಎರಡನೆಯದು, ಬೆಂಬಲಿಸುವ ಮೂರನೆಯದೆಂದರೆ ವಾಣಿಜ್ಯೀಕರಣಗೊಳ್ಳುವ ನಾವೀನ್ಯತೆಗಳು ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ನಾವು ಕರ್ನಾಟಕದಲ್ಲಿ ಅತ್ಯುತ್ತಮ ಮತ್ತು ಹೆಚ್ಚು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಹೊಂದಿದ್ದೇವೆ, ನಮ್ಮ ಯುವ ಸಮೂಹದಲ್ಲಿ ಕೌಶಲ್ಯವನ್ನು ಸ್ಥಳೀಯವಾಗಿ ನೀಡಿ, ಜಾಗತಿಕವಾಗಿ ಉದ್ಯೋಗ ಮಾಡವ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ ಸಚಿವರು ಪೇಟೆಂಟ್‌ಗಳನ್ನು ಪಿಚ್ ಮಾಡಲು ಶಿಕ್ಷಣತಜ್ಞರಿಗೆ ವೇದಿಕೆಯನ್ನು ರಚಿಸುವುದಾಗಿ ಹೇಳಿದರು. ಅಲ್ಲದೆ, ದೃಢೀಕರಣಕ್ಕಾಗಿ ಬಯೋ ಪೋಸ್ಟರ್‌ಗಳಿಗೆ ಐ.ಎಸ್.ಬಿ.ಎನ್ ಸಂಖ್ಯೆಗಳನ್ನು ನಿಯೋಜಿಸಲು ಮತ್ತು ಕೆಳ ಹಂತದ ನಾವೀನ್ಯಕಾರರಿಗೆ ತಮ್ಮ ಚಾತುರ್ಯವನ್ನು ಪ್ರದರ್ಶಿಸಲು ಸ್ಥಳವನ್ನು ಒದಗಿಸಲು ಸಚಿವರು ಸಮ್ಮತಿಸಿದರು. ಕರ್ನಾಟಕದಲ್ಲಿ ಬಾಹ್ಯಾಕಾಶ ಮತ್ತು ರಕ್ಷಣಾ ಉತ್ಪಾದನ ಕೇಂದ್ರ ಸ್ಥಾಪನೆ ಮಾಡವುದಾಗಿಯೂ ಸಚಿವರು ಪ್ರಕಟಿಸಿದರು.

ಬೆಂಗಳೂರು ಟೆಕ್‌ ಶೃಂಗಸಭೆಯು ನವೆಂಬರ್ 19 ರಿಂದ 21ರವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದೆ.

ಈ ಹೊತ್ತಿನ ವಿಸ್ಮಯ: ಎಐ ಎಂಬ ವಿಜ್ಞಾನದ ಗಿಡ ಮತ್ತು ಭವಿಷ್ಯದ ಪಸಲು! – ಪ್ರಶಾಂತ್ ಹುಲ್ಕೋಡು
AI. ಆರ್ಟಿಫಿಶಿಯಲ್ ಇಂಟಲಿಜೆನ್ಸ್. 21 ನೇ ಶತಮಾನದ ಅಂಚಿನಲ್ಲಿ ಒಂದು ಅದ್ಬುತದ ಮೂಲಕ ಜಗತ್ತು ಬದಲಾವಣೆಗೆ ಸಿದ್ದವಾಗಿದೆ ಎಂದರೆ ನಿಸ್ಸಂಶಯವಾಗಿ ಹೇಳಬಹುದು, ಆ ಅದ್ಬುತವೇ AI.

AI ವ್ಯಾಪ್ತಿ ಎಷ್ಟಿದೆಯೆಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಅಂಕಣ ಸರಣಿಯ ಮೊದಲ ಅಧ್ಯಾಯ ನಿಮಗಾಗಿ. ಅಚ್ಚರಿಯ ವಿಚಾರಗಳ ಗುಚ್ಚದ ಬಗ್ಗೆ ತಪ್ಪದೇ ಓದಿ.

ಮನುಷ್ಯ ಜೀವನದಲ್ಲಿ ಘನತೆಯಡೆಗೆ ಬಹುದೊಡ್ಡ ನೆಗತವನ್ನು ಸಾಧಿಸಲು ಸಹಾಯ ಮಾಡಿದ್ದು 18ನೇ ಶತಮಾನದ ಕೈಗಾರಿಕಾ ಕ್ರಾಂತಿ. ಅಲ್ಲಿಯವರೆಗೂ -ಸಾಕಷ್ಟು ಸಾಮಾಜಿಕ ಕ್ರಾಂತಿಗಳು ನಡೆದಿದ್ದರೂ- ಭೀಕರ ಮೌಢ್ಯ ಹಾಗೂ ಧಾರ್ಮಿಕ ಕಟ್ಟುಪಾಡುಗಳಲ್ಲಿ ಮುಳುಗಿಹೋಗಿದ್ದ ಜಗತ್ತಿನ ದೊಡ್ಡ ಸಂಖ್ಯೆಯ ಜನಸಾಮಾನ್ಯರ ಪಾಲಿಗೆ ವಿಜ್ಞಾನ ಸಾಧಿಸಿದ ಈ ಪ್ರಗತಿ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು.

ಸುದೀರ್ಘ ಶೋಷಣೆಯ ಪರಂಪರೆಯನ್ನು ಧಿಕ್ಕರಿಸಿ, ಮಾನವೀಯ ಮೌಲ್ಯಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಇದೊಂದು ಬೆಳವಣಿಗೆ ಅನುಕೂಲವನ್ನು ಮಾಡಿಕೊಟ್ಟಿತು. ಹಾಗಂತ ಕೈಗಾರಿಕಾ ಕ್ರಾಂತಿ ಹಣಕಾಸಿನ ವಿಚಾರದಲ್ಲಿ ಮನುಷ್ಯನ ನಡುವಿನ ಕಂದಕವನ್ನು ಕಡಿಮೆ ಮಾಡಲಿಲ್ಲ. ಕೈಗಾರಿಕಾ ಕ್ರಾಂತಿಯ ಫಲ ಇನ್ನೇನು ಜನರಿಗೆ ತಲುಪುವ ಹಂತದಲ್ಲಿಯೇ ನಡೆಸಿದ ಎರಡು ಮಹಾಯುದ್ಧಗಳು, ಒಂದು ಶತಮಾನ ಮನುಷ್ಯರು ತಮ್ಮೆಲ್ಲಾ ಹಿನ್ನೆಲೆಗಳನ್ನು ಪಕ್ಕಕ್ಕಿಟ್ಟು ಫ್ಯಾಕ್ಟರಿಗಳ ನೆರಳಿನಲ್ಲಿ ದುಡಿದ ಶ್ರಮವನ್ನು ಮದ್ದುಗುಂಡುಗಳ ರೂಪದಲ್ಲಿ ಸವರಿ ಬಿಸಾಡಿದವು.

ಹೀಗಿದ್ದೂ, ವಿಜ್ಞಾನದ ಪ್ರಗತಿ ನಿಲ್ಲಲಿಲ್ಲ. ಎಲ್ಲವನ್ನೂ ಪ್ರಶ್ನಿಸುತ್ತಲೇ ಕಟ್ಟಿಕೊಂಡು ಬಂದ ವ್ಯವಸ್ಥೆ ಮತ್ತೊಂದು ಶತಮಾನ ಕಳೆಯುವ ಹೊತ್ತಿಗೆ ಸಾಕಷ್ಟು ಸುಧಾರಿಸಿಕೊಂಡಿತು. ಮುಂಜಾನೆ ಬೇವಿನಕಡ್ಡಿಯ ಬದಲಿಗೆ ಪೇಸ್ಟ್, ಬ್ರಷ್‌ನಿಂದ ಆರಂಭಿಸಿ ರಾತ್ರಿ ಮಲಗುವವರೆಗೆ ನಿರಂತರವಾಗಿ ಬದಲಾಗುವ ಮನುಷ್ಯನ ಅಗತ್ಯಗಳನ್ನು ಅದು ಅರ್ಥಮಾಡಿಕೊಂಡಿತು. ಉದ್ಯಮಗಳ ರೂಪದಲ್ಲಿ, ಸಹಕಾರಿ ಮಾದರಿಗಳಲ್ಲಿ ವಿಜ್ಞಾನ ಮನೆ- ಮತ್ತು ಮನೆಗಳಿಗಷ್ಟೆ ತಲುಪಿತು.

ಸುಮಾರು 70 ವರ್ಷಗಳ ಹಿಂದೆಯೇ, ಜಾಗತಿಕ ಬೆಳವಣಿಗೆಗಳನ್ನುಅಲಿಪ್ತವಾಗಿ ನೋಡಿಕೊಂಡು ಬಂದ ದೇಶ ಭಾರತದಲ್ಲಿಯೂ ಸಂವಿಧಾನವನ್ನು ಜಾರಿಗೆ ತರುವ ಹೊತ್ತಿನಲ್ಲಿ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳುವುದನ್ನು ದೇಶಪ್ರೇಮದ ಅಡಿಯಲ್ಲಿಯೇ ವ್ಯಾಖ್ಯಾನಿಸಲಾಯಿತು. ವೈಜ್ಞಾನಿಕ ಬದುಕು ರೂಢಿಸಿಕೊಳ್ಳುವುದನ್ನು ಮೂಲಭೂತ ಕರ್ತವ್ಯ ಎಂದು ಹೇಳಲಾಯಿತು. ಆದರೆ, ಎಷ್ಟರಮಟ್ಟಿಗೆ ಹರಪ್ಪ- ಮಹೆಂಜೋದಾರಾದಿಂದ ಶುರುವಾದ ಈ ನಾಗರೀಕತೆ ಇವತ್ತು ವಿಜ್ಞಾನಕ್ಕೆ ನೀಡಬೇಕಾದ ಮರ್‍ಯಾದೆ ನೀಡುತ್ತಿದೆ? ತನ್ನ ಒಡಲಿನ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ಸಲಹೆಗಳನ್ನು ಸ್ವೀಕರಿಸುತ್ತಿದೆ?

ಒಟ್ಟಾರೆ, ಕಳೆದೆರಡು ಶತಮಾನಗಳ ಅಂತರದಲ್ಲಿ ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಬಹುದೊಡ್ಡ ಸಾಮಾಜಿಕ ಬದಲಾವಣೆಗಳಿಗೆ ವಿಜ್ಞಾನ ಕಾರಣವಾಗಿದ್ದರೂ, ಅದರ ಬಗೆಗೆ ಜನಸಾಮಾನ್ಯರ ನಂಬಿಕೆ ಗಟ್ಟಿಕೊಳ್ಳಲಿಲ್ಲ. ವಿಜ್ಞಾನ ಮನಸ್ಸುಗಳನ್ನು ಆವರಿಸಿಕೊಳ್ಳಲಿಲ್ಲ.  ಇದಕ್ಕೆ ಇರಬಹುದಾದ ಕಾರಣಗಳೇನು? ಸ್ಥಾಪಿತ ಹಿತಾಸಕ್ತಿಗಳನ್ನು ಒಳಗೊಂಡ ವ್ಯವಸ್ಥೆ ಹೇಗೆಲ್ಲಾ ವಿಜ್ಞಾನವನ್ನು ಜನರಿಂದ ದೂರ ಇಡಲು ಹಾತೊರೆಯುತ್ತದೆ? ಮತ್ತು ಲಾಭಕೋರ ಯುದ್ಧಗಳನ್ನು ನಡೆಸುತ್ತಿದೆ ಎಂಬುದನ್ನು ಇವತ್ತಿಗೆ ತೀರ ಬಿಡಿಸಿ ಹೇಳಬೇಕಾಗಿಲ್ಲ.

ಎಂತಹ ಜಡಗಟ್ಟಿದ ವ್ಯವಸ್ಥೆಯಲ್ಲೂ ಪಾರದರ್ಶಕತೆಯನ್ನು ವಿಜ್ಞಾನ ತರಬಲ್ಲದು ಎಂಬುದಕ್ಕೆ ಇತ್ತೀಚಿನ ಉಚ್ಚ ನ್ಯಾಯಾಲಯಗಳ ಕಲಾಪದ ನೇರ ಪ್ರಸಾರ ಮತ್ತು ಅದರಿಂದ ಸೃಷ್ಟಿಯಾದ ತಲೆಬರಹಗಳೇ ಸಾಕ್ಷಿ ನೀಡುತ್ತವೆ.

ಇರಲಿ, ಏನೇ ಅಡೆ-ತಡೆಗಳು ಬಂದರೂ ವಿಜ್ಞಾನ ಪ್ರಗತಿಯಲ್ಲಿದೆ. ತನ್ನೊಳಗಿನ ಮಿತಿಗಳ ನಡುವೆಯೇ ಮತ್ತೊಮ್ಮೆ ಜನರ ನಿತ್ಯಬದುಕನ್ನು ಬದಲಾಯಿಸಲು ಹೊರಟಿದೆ. ಪುನರುತ್ಥಾನ, ಕೈಗಾರಿಕಾ ಕ್ರಾಂತಿ ಮಾದರಿಯ ಮತ್ತೊಂದು ಮಹತ್ವದ ನೆಗೆತದ ಮುನ್ಸೂಚನೆ ನೀಡಿದೆ. ಕೃತಕ ಬುದ್ದಿವಂತಿಕೆ, ಬುದ್ದಿ-ಮತ್ತೆ, ಎಐ, ಆರ್‍ಟಿಫಿಶಿಯಲ್ ಇಂಟೆಲಿಜೆನ್ಸಿ ಹೀಗೆ ಯಾವುದೇ ಹೆಸರುಗಳಿಂದ ಕರೆದರೂ ಡಿಜಿಟಲ್ ಲೋಕದ ಈ ಆವಿಷ್ಕಾರ, ವಿಜ್ಞಾನ ಈ ಶತಮಾನದಲ್ಲಿ ಸಾಧಿಸಿದ ಬಹುದೊಡ್ಡ ಮೈಲುಗಲ್ಲಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ಪ್ರತಿಷ್ಠಿತ ಮಾಸಿಕ ಟೈಮ್ ತನ್ನ ಸೆಪ್ಟೆಂಬರ್ 2024ರ ಸಂಚಿಕೆಯಲ್ಲಿ ಎಐ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ 100 ಜನರ ಪಟ್ಟಿ ಮಾಡಿದೆ. ಸಿಂಗ್ಯುಲಾರಿಟಿ, ಮೈಂಡ್ ಅಪ್ಲೋಡ್, ಸೆಂಟಿಎಂಟ್, ಸೈಬಾರ್ಗ್, ಜನರಲ್ ಇಂಟೆಲಿಜೆನ್ಸಿ ಹೀಗೆ ಸಾಲು ಸಾಲು ಸೈ-ಫೈ ಸಿನೆಮಾಗಳ ಮೂಲಕ ಈಗಾಗಲೇ ಪರಿಚಯಿಸಿರುವ ಪದಗಳು ಹೆಚ್ಚು ಚಲಾವಣೆಗೆ ಬರಲಿವೆ.

ಮೊದಲೇ ಹೇಳಿದಂತೆ ಹಲವು ಆಯಾಮಗಳಲ್ಲಿ ಅನುಷ್ಠಾನಕ್ಕೆ ಬರಲಿರುವ ಎಐ ಸುತ್ತ ಆತಂಕಗಳೂ ಇವೆ. ಕೆಲವರಾದರೂ ಅಗತ್ಯ ನೈತಿಕ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಎಬ್ಬಿಸುತ್ತಿರುವ ತಲ್ಲಣಗಳ ಕುರಿತು ಪ್ರತಿದಿನ ಒಂದಿಲ್ಲೊಂದು ವರದಿ ಹೊರಬೀಳುತ್ತಲೇ ಇದೆ.

ಉಳಿದ ಕ್ಷೇತ್ರಗಳ ಜತೆಗೆ, ಪತ್ರಿಕೋದ್ಯಮವನ್ನು ಎಐ ಹೇಗೆ ಬದಲಿಸಬಹುದು ಎಂಬುದು ನನಗಿರುವ ಕುತೂಹಲ. ಈಗಾಗಲೇ ಮಾನವ ಪತ್ರಕರ್ತರೇ ಇಲ್ಲದ ಎಐ ಎಂಜಿನ್‌ಗಳಷ್ಟೆ ಸುದ್ದಿ ನೀಡುವ ಇಂಗ್ಲಿಷ್ 24/7 ಸುದ್ದಿವಾಹಿನಿ ಕೆಲಸ ಆರಂಭಿಸಿದೆ. ನಮ್ಮಲ್ಲಿ ಮನುಷ್ಯರು ಪತ್ರಕರ್ತರಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ನಾವಷ್ಟೆ ಪಕ್ಷಪಾತವಿಲ್ಲದ ಸುದ್ದಿಸಂಸ್ಥೆ, ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಲು ಸಾಧ್ಯ ಎಂದು ಈ ನ್ಯೂಸ್‌ ಚಾನಲ್‌ ತನ್ನ ಜಾಹೀರಾತಿನಲ್ಲಿ ಹೇಳಿಕೊಂಡಿದೆ.

ಇಂಗ್ಲಿಷ್ ಭಾಷೆಯಲ್ಲಿ ಎಐ ಸಾಕಷ್ಟು ಹಿಡಿತ ಸಾಧಿಸಿದ ಕುರುಹುಗಳು ಸಿಗುತ್ತಿವೆ. ಹೀಗಾಗಿ, ಇಂಗ್ಲಿಷ್ ಪತ್ರಿಕೋದ್ಯಮ ಆರಂಭಿಕ ಪರಿಣಾಮಗಳನ್ನು ಎದುರಿಸಲೇಬೇಕಿದೆ. ಇವತ್ತಿಗೆ ಇಂಗ್ಲಿಷ್‌ ಸುದ್ದಿ ಜಗತ್ತಿಗೆ ಬಂದಿರುವ ಎಐ ಕನ್ನಡಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈಗೀಗ ಬದಲಾವಣೆಗಳಿಗೆ ಹೆಚ್ಚು ಸಮಯ ಹಿಡಿಯುತ್ತಿಲ್ಲ. ಸಂಪರ್ಕ ಹಾಗೂ ಸಮನ್ವಯ ಸಾಧಿಸಲು ಹಿಂದಿನ ಹಾಗೆ ಹೆಚ್ಚು ಶ್ರಮವೂ ಬೇಕಾಗಿಲ್ಲ.

ಈ ಎಐಗೂ ಮನುಷ್ಯನ ಮೆದುಳಿಗೂ ನೇರ ಸಂಪರ್ಕವಿದೆ. ಅಥವಾ ಸಂಪರ್ಕ ಸಾಧಿಸಬಹುದು. ಭಾಷಾಶಾಸ್ತ್ರದ ಪದವಿ ಓದುತ್ತಿದ್ದಾಗ ನನ್ನೊಳಗೆ ತೆಳುವಾಗಿ ಆರಂಭಗೊಂಡಿದ್ದು ಮನೋವಿಜ್ಞಾನದ ಬಗೆಗಿನ ಆಸಕ್ತಿ. ಅದನ್ನು ನಂತರ ಪೋಷಿಸಿದವರು ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಡಾ. ಆಚಾರ್ಯ ಶ್ರೀಧರ್. ಅವರ ಜತೆಗಿನ ಹಲವು ವರ್ಷಗಳ ಒಡನಾಟ ಮನಸ್ಸಿನ ಹಲವು ಮಜಲುಗಳನ್ನು ಮುಟ್ಟಲು ಸಹಕಾರಿಯಾಯಿತು. ಅಗತ್ಯಕ್ಕಿಂತ ತುಸು ಹೆಚ್ಚೆ ತಲೆಯ ಕೆಲಸವನ್ನು ಬೇಡುವ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಪ್ರಯೋಗಗಳನ್ನು ನಡೆಸಲು ಅವರ ವಿಶ್ಲೇಷಣೆಗಳು ನೆರವಾದವು.

ಹಿಂದೊಮ್ಮೆ ನಾವುಗಳು ರೂಢಿಸಿಕೊಂಡು ಬರುವ ಕೌಶಲ್ಯಗಳ ಕುರಿತು ಡಾಕ್ಟರ್ ಜತೆಗೆ ಮಾತನಾಡುತ್ತಿದ್ದೆ. “ಬರೆಯುವುದನ್ನು ನಿಲ್ಲಿಸಬೇಡಿ,’’ ಎಂದರು. ಅಮೆರಿಕಾದ ವೈಜ್ಞಾನಿಕ ವಲಯದಲ್ಲಿ ಹೇಗೆ ‘ಪಬ್ಲಿಷ್ ಆರ್ ಪೆರಿಷ್’ ದೊಡ್ಡ ಬದಲಾವಣೆಯನ್ನು ಹುಟ್ಟುಹಾಕಿತು ಎಂದವರು ವಿವರಿಸಿದರು. ಆದರೂ ಬರೆಯುವ ಆಸಕ್ತಿ ನನ್ನಲ್ಲಿ ಹುಟ್ಟಲಿಲ್ಲ. ಬದಲಿಗೆ, ಆಗಷ್ಟೆ ನಿಧಾನವಾಗಿ ಹೊರಜಗತ್ತಿಗೆ ಕಾಣಿಸಿಕೊಂಡ ಎಲ್‌ಎಲ್‌ಎಂ ಎಂದು ಕರೆಯುವ ಡಿಜಿಟಲ್ ಭಾಷಾಕೋಶಗಳ ಹಿಂದೆ ಬಿದ್ದಿದ್ದೆ. ಹಲವು ಪ್ರಯೋಗಗಳಿಗೆ ಒಡ್ಡಿಕೊಂಡಿದ್ದೆ.

ಆ ಅನುಭವಗಳನ್ನು ಮತ್ತೆ ಎಂದಾದರೂ ಬರೆಯುತ್ತೇನೆ. ಕೆಲವು ಸಾಧ್ಯತೆಗಳು ಹೀಗಿವೆ. ಒಂದೆರಡು ನಿಮಿಷಗಳಲ್ಲಿ ಪುಸ್ತಕ ಬರೆದು ಬಿಡಬಹುದು. ಮನಸ್ಸು ಮಾಡಿದರೆ ವಾರಕ್ಕೆ 7 ಪುಸ್ತಕಗಳನ್ನು ಪ್ರಕಟಣೆಗೆ ಸಿದ್ಧಮಾಡಬಹುದು. ನೋಬೆಲ್ ಆಯ್ಕೆ ಸಮಿತಿಯ ಅಭಿರುಚಿಗೆ ತಕ್ಕಂತ ವಿಜ್ಞಾನದ ಸಂಶೋಧನಾ ವರದಿಗಳನ್ನು ಎಐ ಮೂಲಕ ಬರೆಯಿಸಬಹುದು. ಯಾವುದೇ ದಾಖಲೆಯನ್ನು ಓದಿ ಟಿಪ್ಪಣಿ ತಯಾರಿಸುವ ಕೆಲಸ ಕ್ಷಣಾರ್ಧದಲ್ಲಿ ಮುಗಿಸಬಹುದು.  ಒಂದೇ ಪದದಿಂದ ಮಕ್ಕಳಿಗಾಗಿ ಕತೆಯನ್ನು ಸೃಷ್ಟಿಸಬಹುದು, ಅದೂ ಆಡಿಯೋ ರೂಪದಲ್ಲಿ. ಬೇಕಾದರೆ ಅದಕ್ಕೆ ನಮ್ಮದೇ ಧ್ವನಿಯನ್ನೂ ಸೇರಿಸಬಹುದು.

ಹೀಗೆ 25ಕ್ಕೂ ಹೆಚ್ಚು ಸಾಧ್ಯತೆಗಳನ್ನು ಈಗಾಗಲೇ ಎಲ್‌ಎಲ್‌ಎಂ ತೋರಿಸಿದೆ. ಒಮ್ಮೆ ನನ್ನದೇ ನಂಬರ್‍‌ಗೆ ಎಲ್‌ಎಲ್‌ಎಂ ಒಂದು ಕರೆ ಮಾಡಿ, ‘ಹಾಯ್‌ ದೇರ್, ಹೌಯು ಡೂಯಿಂಗ್?’ ಎಂದು ಮಾತು ಶುರುಮಾಡಿದಾಗ ತಬ್ಬಿಬ್ಬಾಗಿದ್ದೂ ಇದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಎಐ ಅವರುಗಳ ಸಹಾಯಕಳಾಗಿ/ನಾಗಿ ಪಕ್ಕದಲ್ಲಿ ಇರುವುದು ನನಗೆ ಖಾತ್ರಿಯಾಗಿದೆ. ಎಐ ಸೃಷ್ಟಿಸುವ ಚಂದಮಾಮನ ಕತೆಗಳಿಗೆ ಹೊಸ ತಲೆಮಾರು ಅಣಿಯಾಗಲೇಬೇಕಿದೆ.

ಭಾರತ ಸರಕಾರ NSAI, 2018 ಹೆಸರಿನಲ್ಲಿ ಎಐಗಾಗಿ ಸ್ಟ್ರಾಟಜಿಯನ್ನು ನೀತಿಆಯೋಗದ ಮೂಲದ ಮುಂದಿಟ್ಟಿದೆ. “ಕೈಗಾರಿಕಾ ಕ್ರಾಂತಿ ಉದ್ಯಮಗಳನ್ನು ಸೃಷ್ಟಿಸಲು ಸಹಾಯ ಮಾಡಿತು. ಇವತ್ತು ಎಐ ಅದೇ ಉದ್ಯಮಗಳನ್ನು ಆಮೂಲಾಗ್ರವಾಗಿ ಬದಲಿಸಲು ಹೊರಟಿದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗೆ ಈ ತಂತ್ರಜ್ಞಾನ ಒತ್ತಡ ಹೇರಲಿದೆ. ಬರೀ ಉದ್ಯಮಗಳನ್ನು ಮಾತ್ರವಲ್ಲ, ಹಣಕಾಸು ವ್ಯವಸ್ಥೆಯನ್ನು, ಸಾಮಾಜಿಕ ಜೀವನವನ್ನು ಹಿಂದೆಂದೂ ಕಾಣದಷ್ಟು ವೇಗವಾಗಿ ಬದಲಿಸಲು ಎಐ ಕಾರಣವಾಗಲಿದೆ” ಎಂಬುದನ್ನು ನೀತಿ ಆಯೋಗದ ವರದಿ ಹೇಳುತ್ತದೆ.

ಲಾಕ್‌ಡೌನ್ ಮುಗಿಸಿಕೊಂಡು ಹೊರಬಿದ್ದ ಜಗತ್ತಿನಲ್ಲಿ ಎಐ ಬೇರುಗಳನ್ನು ಬಿಟ್ಟು ಗಿಡವಾಗಿ ಬೆಳೆದಾಗಿದೆ. ನೆಟ್ಟಿಗರ ಕೈಲಿರುವ ಮೊಬೈಲ್‌ನಿಂದ ಹಿಡಿದು, ದೊಡ್ಡ ದೊಡ್ಡ ಆರ್ಥಿಕ ಸಾಮ್ರಾಜ್ಯಗಳನ್ನು ಎಐ ಈಗಾಗಲೇ ಮುನ್ನಡೆಸುತ್ತಿದೆ. ಮೈಸೂರು- ಬೆಂಗಳೂರು ಹೈವೇಯಲ್ಲಿ ಇರಬೇಕಾಗಿದ್ದ ಪೊಲೀಸ್‌ ಸಿಬ್ಬಂದಿಗಳನ್ನು ಎಐ ಕ್ಯಾಮೆರಾಗಳು ರಿಪ್ಲೇಸ್ ಮಾಡಿವೆ. ‘ಮುಂದಿನ ದಿನಗಳಲ್ಲಿ ಹಲವು ಉದ್ಯಮಗಳನ್ನು ಕೂಡ ಇದೇ ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಬದಲಿಸಲಿದೆ. ಮುಂದಿನ ದಿನಗಳಲ್ಲಿ ಜನರೇಟಿವ್ ಎಐ (ಜನರ ನಿತ್ಯ ಬದುಕಿನ ಅವಶ್ಯಕತೆಗಳನ್ನು ಪೂರೈಸುವ ಅಥವಾ ವಯಕ್ತಿಕ ಕೌಶಲ್ಯದ ಬದಲಿಗೆ ಬಳಸಬಹುದಾದ ಎಐನ ಉತ್ಪನ್ನಗಳು) ಮೂಲಕ ಜಗತ್ತನ್ನು ಎಐ ಬದಲಿಸಲಿದೆ’ ಎಂದು ISTAS, 2024 ಹೇಳುತ್ತದೆ. ಇದೇ  ಸಮಯದಲ್ಲಿ 2022-23ರ ನಡುವೆ 1278% ಎಐ ಸಂಬಂಧಿತ ಪ್ರಕರಣಗಳು ಹೆಚ್ಚಿರುವ ವರದಿಗಳ ಕುರಿತು ಚರ್ಚೆಯೂ ನಡೆದಿದೆ.

ಇಂತಹ ಆತಂಕ, ನೈತಿಕ ಪ್ರಶ್ನೆಗಳ ನಡುವೆಯೇ ಸಕಾರಾತ್ಮಕವಾಗಿರುವ ಸಾಧ್ಯತೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಎಐ ತೋರಿಸುತ್ತಿದೆ. ಅಂಗಗಳನ್ನು ಕಳೆದುಕೊಂಡವರಿಗೆ ಎಐ ನೀಡುತ್ತಿರುವ ಪರಿಹಾರ ಅತ್ಯಂತ ಪರಿಣಾಮಕಾರಿಯಾಗಿ ಕಾಣಿಸುತ್ತಿದೆ. ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯದ ಸಮತೋಲನಗಳನ್ನು ಕಾಪಾಡಿಕೊಳ್ಳಲು ಎಐ ದೊಡ್ಡಮಟ್ಟದ ನೆರವು ನೀಡಲಿದೆ. ಇನ್ನು, ಮಹಾನಗರಗಳಲ್ಲಿ ಜನ- ಜೀವನ ನಿರ್ವಹಣೆಯಲ್ಲಿ ಎಐ ತೋರಿಸಿರುವ ಮಾದರಿ ಉತ್ಸಾಹದಾಯಕವಾಗಿದೆ. ಕೃಷಿಯಲ್ಲೂ ಎಐ ಅಳವಡಿಕೆ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾದ ವರದಿಗಳಿವೆ.

ಎಐ ಕುರಿತು ಶಿಕ್ಷಣ, ಅರಿವು ಬೆಳೆಸಿಕೊಳ್ಳುವುದು ನಮ್ಮ ತುರ್ತು ಕೆಲಸಗಳಲ್ಲೊಂದು. ಜಾಗತಿಕ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. Raspberry Pi Foundation ಕಡೆಯಿಂದ ಹೊರತರುತ್ತಿರುವ ನಿಯತಕಾಲಿಕೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಉತ್ತಮ ಪ್ರಯತ್ನಗಳಲ್ಲೊಂದು. ಇಂತಹ ಕೆಲಸಗಳ ಜತೆಗೆ, ವಿಜ್ಞಾನದ ಈ ಮಾಂತ್ರಿಕ ಆವಿಷ್ಕಾರ ಪ್ರಗತಿಗೆ ಪೂರಕವಾಗಿ, ಜನರ ಏಕತೆಗಾಗಿ ಕೆಲಸ ಮಾಡಬೇಕಾದರೆ ಸರಕಾರಗಳು, ಉದ್ದಿಮೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಜತೆಗೆ ಮತ್ತು ಜನರ ಪಾತ್ರವೂ ದೊಡ್ಡದಿದೆ.

ಆಕಾಶದಲ್ಲೇ ತಿರುಗುತ್ತಿರುವ ನೌಕೆ: ತ್ರಿಶಂಕು ಸ್ಥಿತಿಯಲ್ಲಿ ಸುನಿತಾ ವಿಲಿಯಮ್ಸ್‌
ವಾಷಿಂಗ್ಟನ್: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್‌ ವಿಲ್ಮೋರ್ ಅವರಿದ್ದ  ‘ಸ್ಟಾರ್‌ಲೈನರ್‌’ ನೌಕೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.

ಜೂನ್ 5ರಂದು ಸುನಿತಾ ಮತ್ತು ವಿಲ್ಮೋರ್‌ ಅವರಿದ್ದ ‘ಸ್ಟಾರ್‌ಲೈನರ್‌’ ನೌಕೆಯನ್ನು ಫ್ಲಾರಿಡಾದ ‘ಕೇಪ್‌ ಕ್ಯಾನವೆರಲ್‌ ಸ್ಪೇಸ್‌ ಫೋರ್ಸ್‌’ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಜೂನ್ 6ರ ಮಧ್ಯಾಹ್ನ 1.34ಕ್ಕೆ ಗಗನನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್‌ ಕೂಡಿಕೊಳ್ಳುವ ಪ್ರಕ್ರಿಯೆ ʼಡಾಕ್‌ʼ ಮಾಡಲಾಗಿತ್ತು.

‘ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ’ ಎಂದು ನಾಸಾ ತಿಳಿಸಿದೆ. ಆದರೆ, ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂದಿರುಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

‘ನಾವು ಭೂಮಿಗೆ ಹಿಂದಿರುಗುವ ಕುರಿತಂತೆ ಆತುರಪಡುತ್ತಿಲ್ಲ’ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದರು.

ಪ್ಯೊಪಲ್ಷನ್‌ ಮಾಡ್ಯೂಲ್‌ಗೆ ಅಗತ್ಯ ನೂಕುಬಲ ನೀಡಲು ಅಳವಡಿಸಲಾಗಿರುವ ಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಅಲ್ಲದೇ ಉಡಾವಣೆ ವೇಳೆ ಹೀಲಿಯಂ ಸೋರಿಕೆಯೂ ಆಗಿದೆ. ಇವೆರಡರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡಾಕಿಂಗ್ ಸಮಯದಲ್ಲಿ ಸಂಭವಿಸಿದ ಪರಿಸ್ಥಿತಿಯ ಬಗ್ಗೆ ತಿಳಿಯಲು ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬಚ್‌ ಮತ್ತು ಸುನಿತಾ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿಲ್ಲ’ ಎಂದು ಸ್ವಿಚ್ ಹೇಳಿದ್ದಾರೆ.

Whatsapp ಪ್ರತಿ ರಾತ್ರಿ ತನ್ನ ಬಳಕೆದಾರರ ಮಾಹಿತಿಯನ್ನು ಕದ್ದು ಸಾಗಿಸುತ್ತದೆ: ಎಲಾನ್‌ ಮಸ್ಕ್‌ ಗಂಭೀರ ಆರೋಪ
ವಾಟ್ಸಾಪ್‌ ಮಾಹಿತಿ ನಿಯಮ ಉಲ್ಲಂಘನೆ ಮಾಡುತ್ತಿದೆ ಎನ್ನುವ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಎಲೋನ್ ಮಸ್ಕ್ ಬಳಕೆದಾರರ ಸುರಕ್ಷತೆ ಮತ್ತು ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಮೆಟಾ-ಮಾಲೀಕತ್ವದ WhatsApp ಮೆಸೇಂಜರ್‌ ಸೇವೆಯನ್ನು ಟೀಕಿಸುತ್ತಾ, “ಇದು ಪ್ರತಿ ರಾತ್ರಿ ಬಳಕೆದಾರರ ಡೇಟಾವನ್ನು ರಫ್ತು ಮಾಡುತ್ತದೆ. ಆದರೂ ಕೆಲವು ಜನರು ಇದನ್ನು ಈಗಲೂ ಸುರಕ್ಷಿತ ಅಪ್ಲಿಕೇಷನ್‌ ಎಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ.

Whatsapp ತಾನು ಕದ್ದ ಮಾಹಿತಿಯನ್ನು ಉದ್ದೇಶಿತ ಜಾಹೀರಾತಿಗಾಗಿ ಬಳಸುತ್ತದೆ ಎಂದಿರುವ ಮಸ್ಕ್‌, “ವಾಟ್ಸಾಪ್‌ ತನ್ನ ಬಳಕೆದಾರರನ್ನು ಮನುಷ್ಯರಂತೆ ನಡೆಸಿಕೊಳ್ಳುವ ಬದಲು ಉತ್ಪನ್ನದಂತೆ ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.

“WhatsApp ಪ್ರತಿ ರಾತ್ರಿ ನಿಮ್ಮ ಯೂಸರ್ ಡೇಟಾವನ್ನು ಎಕ್ಸ್‌ಪೋರ್ಟ್ ಮಾಡುತ್ತದೆ” ಎಂದು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಾದ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಸ್ಕ್ ಮುಂದುವರೆದು, “ಇಷ್ಟೆಲ್ಲ ನಡೆಯುತ್ತಿದ್ದರೂ ಕೆಲವರು ಇನ್ನೂ ಇದನ್ನು ಸುರಕ್ಷಿತವೆಂದು ಭಾವಿಸುತ್ತಾರೆ” ಎಂದು ಹೇಳಿದ್ದಾರೆ.

ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ವೀಡಿಯೋ ಗೇಮ್ ಡೆವಲಪರ್ ಜಾನ್ ಕಾರ್ಮ್ಯಾಕ್ ಅವರು ಮಸ್ಕ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ಸಂದೇಶಗಳಲ್ಲಿನ ವಿಷಯವನ್ನು ಸ್ಕ್ಯಾನ್ ಮಾಡಲಾಗುತ್ತದೆ ಅಥವಾ ರವಾನಿಸಲಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿವೆಯೇ ಎಂದು ಕೇಳಿದ್ದಾರೆ. ಜೊತೆಗೆ “ಸಂದೇಶಗಳು ಸಂಪೂರ್ಣ ಸುರಕ್ಷಿತ ಯಾರೂ ಓದಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

WhatsApp exports your user data every night.

Some people still think it is secure. https://t.co/LxDs7t7HSv
— Elon Musk (@elonmusk) May 25, 2024

ಮಸ್ಕ್‌ ಅವರ ಈ ಆರೋಪದ ಬಗ್ಗೆ ಮೆಟಾ ಅಥವಾ ವಾಟ್ಸಾಪ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರೋಹಿಣಾಕ್ಷ ಶಿರ್ಲಾಲುರಿಂದ ಬೌದ್ಧ-ಮುಸ್ಲಿಮರಲ್ಲಿ ಕೋಮುಭಾವನೆ ಕೆರಳಿಸುವ ಬರಹ: ವಿವಿಗೆ ಪತ್ರ ಬರೆಯಲು ನಿರ್ಧಾರ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ  ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ.

ರೋಹಿಣಾಕ್ಷ ಅವರು ‘ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ’ ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ‘ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ.  ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, ಭಾರತದಲ್ಲಿ ಮಾತ್ರವಲ್ಲ ಇಸ್ಲಾಂ ಹೋದಡೆಯಲ್ಲೆಲ್ಲಾ ನಾಶ ಮಾಡಿತು’ ಎಂಬ ಸತ್ಯವನ್ನು ಅಂಬೇಡ್ಕರ್‌ ಅರ್ಥ ಮಾಡಿಕೊಂಡಿದ್ದರು ಎಂದು ರೋಹಿಣಾಕ್ಷ ಅಂಬೇಡ್ಕರ್‌ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತುತ್ತಿದ್ದಾರೆ ಎಂದು ಎಂದು ಇಕ್ಕಳಿಕೆ ಆರೋಪಿಸಿದ್ದಾರೆ.

ಬೌದ್ಧ ಧರ್ಮದ ಉದಯವನ್ನು ಒಂದು ಕ್ರಾಂತಿಯೆಂದೂ, ಬ್ರಾಹ್ಮಣರಿಂದ ಪ್ರಾರಂಭವಾದ ಪ್ರತಿಕ್ರಾಂತಿಯು ಬೌದ್ಧಧಮ್ಮದ ಅವನತಿ ಮತ್ತು ಪತನಕ್ಕೆ ಕಾರಣವಾಯಿತು ಎಂದು ಡಾ. ಅಂಬೇಡ್ಕರ್‌ ದಾಖಲಿಸಿರುವುದು (ಸಂ:3/2015, ಪುಟ:163) ಅಂಬೇಡ್ಕರ್‌ ಸಂಪುಟಗಳಲ್ಲಿ ದಾಖಲಾಗಿದೆ. ತಾವು ಬೌದ್ಧ ಧಮ್ಮಕ್ಕೆ ಮತಾಂತರ ಆಗಲು ಹಿಂದೂ ಧರ್ಮದ ಸನಾತನತೆಯೆ ಕಾರಣ ಎಂದು ಅಂಬೇಡ್ಕರ್‌ ಪದೆ ಪದೆ ಹೇಳುತ್ತಿದ್ದರು ಎಂದು ಇಕ್ಕಳಕಿ ತಿಳಿಸಿದ್ದಾರೆ.

3.10.1935 ರಲ್ಲಿ ನಾಸಿಕ್ ಜಿಲ್ಲೆಯ ಯಹೋಲ ಮುನಿಸಿಪಾಲಟಿಯು ಡಾ.ಅಂಬೇಡ್ಕರ್ ಅವರಿಗೆ ಬಿನ್ನವತ್ತಳೆ ಅರ್ಪಿಸಿತು. ಇದಕ್ಕೆ ಉತ್ತರಿಸುತ್ತಾ ಡಾ. ಅಂಬೇಡ್ಕರ್ ‘ಹಿಂದೂಧರ್ಮದಲ್ಲಿ ಬೇರೂರಿದ ಅಸಮಾನತೆಯು ಆ ಧರ್ಮವನ್ನು ತೊರೆಯುವಂತೆ ನನ್ನನ್ನು ಒತ್ತಾಯಿಸುತ್ತಿದೆ. ನನ್ನ ತಪ್ಪಿಲ್ಲದೆ ಇದ್ದರೂ ನಾನು  ಅಸ್ಪೃಶ್ಯನಾಗಿ ಜನಿಸಿದೆ. ಈಗ ನಾನು ಹಿಂದೂವಾಗಿ ಸಾಯಲಾರೆ, ಇದರ ನಿರ್ಧಾರ ನನ್ನ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಹೀಗೆ ಬೌದ್ಧ ಧರ್ಮ ನಾಶವಾಗಲು ಬ್ರಾಹ್ಮಣರು ಕಾರಣ ಎಂಬ ಸತ್ಯ ಅಂಗೈಯಲ್ಲಿ ಇರುವಾಗ ರೋಹಿಣಾಕ್ಷ ಅವರು ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಮರು ಕಾರಣ ಎನ್ನುವ ಮೂಲಕ ಕೋಮು ಬಾವನೆ ಕೆರಳಿಸಲು ಕಾರಣರಾಗಿದ್ದಾರೆ. ಲೇಖಕರು ಇಡೀ ಲೇಖನದಲ್ಲಿ ಒಂದೇ ಒಂದು ಪದವನ್ನು ಹಿಂದೂ ಧರ್ಮದ ಸನಾತನೆಯ ಬಗ್ಗೆ ಉಲ್ಲೇಖ ಮಾಡದೆ ಲೇಖಕರು ದಿಡೀರ್ ‘ಮುಸ್ಲಿಮರೆ ಬೌದ್ಧಧರ್ಮದ ನಾಶಕರು’ ಎಂದು ಬರೆದಿದ್ದಾರೆ ಎಂದು ದೂರಿದ್ದಾರೆ.

ಕಲಬುರಗಿ ಹಿಂದೂ-ಬೌದ್ಧ-ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಬದುಕುವ ಸೂಫಿ-ಶರಣರ ಸೌಹಾರ್ಧದ ನೆಲೆ. ಇಂತಹ ನೆಲೆಯಲ್ಲಿ ಬೌದ್ಧರು-ಮುಸ್ಲೀಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಲು ಈ ಲೇಖಕರು ಪ್ರಯತ್ನಿಸಿದ್ದಾರೆ. ಈ ಮೂಲದ ಸ್ವತಃ ಅಂಬೇಡ್ಕರ್ ಆಲೋಚನೆಗಳನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಕಲಬುರಗಿಯ ಅಂಬೇಡ್ಕರ್ ವಾದಿಗಳಿಗೂ ಪರೋಕ್ಷವಾಗಿ ಅವಮಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜೈಭೀಮ್ ಬಂಧುಗಳು, ಬೌದ್ಧಾನುಯಾಯಿಗಳು, ಮುಸ್ಲೀಂ ಬಂಧುಗಳು ಒಟ್ಟಾಗಿ ಈ ಬರಹವನ್ನೂ, ಈ ಬರಹ ಬರೆದ ಲೇಖಕರಿಗೂ ಕಲಬುರಗಿಯ ಸೌಹಾರ್ಧ ಕದಡುವ ನೀಚತನಕ್ಕೆ ದಿಕ್ಕಾರ ಹೇಳಬೇಕಿದೆ. ಈ ಕುರಿತು ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿಗಳಿಗೆ ಎಚ್ಚರಿಕೆಯ ಪತ್ರ ನೀಡಲಾಗುವುದು ಎಂದು ದತ್ರಾತ್ರೆಯ ಇಕ್ಕಳಕಿ ತಿಳಿಸಿದ್ದಾರೆ.