ಸಿನಿಮಾ – Peepal Media

ರೇಣುಕಾಸ್ವಾಮಿ ಪ್ರಕರಣ: ಸಾಕ್ಷಿಯ ಹೇಳಿಕೆ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣಕ್ಕೆ ಕೋರ್ಟ್ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಾಕ್ಷಿಯ ಹೇಳಿಕೆ ವಿಡಿಯೋ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣದ ಪ್ರಮುಖ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯದ ಪ್ರಕ್ರಿಯೆಯ ಭಾಗವಾಗಿ ವಿಡಿಯೋ ರೂಪದಲ್ಲಿ ದಾಖಲಿಸಲಾಗಿತ್ತು. ಈ ಸೂಕ್ಷ್ಮ ವಿಚಾರಣೆಯ ದೃಶ್ಯಗಳನ್ನು ಕೆಲವರು ಅನುಮತಿಯಿಲ್ಲದೆ ಸ್ಕ್ರೀನ್‌ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ವಿಚಾರಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ, ಇಂತಹ ಕೃತ್ಯಗಳು ನ್ಯಾಯಾಂಗ ಪ್ರಕ್ರಿಯೆಯ ಗೌಪ್ಯತೆ ಮತ್ತು ಶಿಸ್ತಿಗೆ ಧಕ್ಕೆ ಉಂಟುಮಾಡಬಹುದು ಎಂದು ಗಂಭೀರವಾಗಿ ಪರಿಗಣಿಸಿದೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವವರು, ಹಂಚಿಕೊಂಡವರು ಹಾಗೂ ಅದರ ಪ್ರಸಾರಕ್ಕೆ ಕಾರಣರಾದ ಖಾತೆದಾರರನ್ನು ಗುರುತಿಸುವಂತೆ ನ್ಯಾಯಾಲಯ ಸೂಚಿಸಿದೆ. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ಕೋರ್ಟ್ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಲಾಗಿದೆ.

ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದ ಸೂಕ್ಷ್ಮ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ ಮತ್ತು ಪ್ರಚಾರಕ್ಕಾಗಿ ಬಳಸುವುದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗಾಗಲೇ ರಾಜ್ಯದಾದ್ಯಂತ ಭಾರೀ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ನಿರ್ದೇಶನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ವಿಚಾರಣೆ ಹಾಗೂ ಸಾಕ್ಷ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರ ಮಾಡುವವರಿಗೂ ಮಹತ್ವದ ಎಚ್ಚರಿಕೆಯಾಗಿ ಪರಿಣಮಿಸಿದೆ.

ಕೇವಲ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ: ಸಾವರ್ಕರ್ ಸಮರ್ಥನೆ ಮಾಡಿದ ನಟ ರಣದೀಪ್ ಹೂಡಾ
ಮುಂಬೈ: ಭಾರತದ ಸ್ವಾತಂತ್ರ್ಯ ಸಂಗ್ರಾಮವು ಕೇವಲ ಅಹಿಂಸಾ ಮಾರ್ಗದಿಂದ ಮಾತ್ರವೇ ಲಭಿಸಿಲ್ಲ, ಅದರಲ್ಲಿ ಸಶಸ್ತ್ರ ಕ್ರಾಂತಿಯ ಕೊಡುಗೆಯೂ ಅಪಾರವಾಗಿದೆ ಎಂದು ಬಾಲಿವುಡ್ ನಟ ಹಾಗೂ ನಿರ್ದೇಶಕ ರಣದೀಪ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ತಾವು ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿರುವ ಹೂಡಾ, ಗುಜರಾತ್‌ನ ಏಕತಾನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು.

“ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇವಲ ಅಹಿಂಸೆಯಿಂದ ಮಾತ್ರ ಎಂದು ಬಹುತೇಕರು ಭಾವಿಸಿದ್ದಾರೆ; ಆದರೆ ಅದು ಪೂರ್ಣ ಸತ್ಯವಲ್ಲ, ದೇಶಕ್ಕಾಗಿ ದೊಡ್ಡ ಮಟ್ಟದ ಸಶಸ್ತ್ರ ಕ್ರಾಂತಿಯೂ ನಡೆದಿದೆ” ಎಂದು ಅವರು ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಹಿಡಿದು ವಿನಾಯಕ ದಾಮೋದರ್ ಸಾವರ್ಕರ್ ವರೆಗೆ ಅನೇಕ ಮಹನೀಯರು ದೇಶದ ಮುಕ್ತಿಗಾಗಿ ಕ್ರಾಂತಿಯ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಈ ಐತಿಹಾಸಿಕ ವಾಸ್ತವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದಲೇ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದ ಅವರು, ಸಶಸ್ತ್ರ ಹೋರಾಟದ ಪರಂಪರೆಯಲ್ಲಿ ಸಾವರ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಾವು ಬಲವಾಗಿ ನಂಬಿರುವುದಾಗಿ ತಿಳಿಸಿದರು. ‘ಸ್ವಾತಂತ್ರ್ಯ ವೀರ ಸಾವರ್ಕರ್’ ರಣದೀಪ್ ಹೂಡಾ ನಿರ್ದೇಶನದ ಮೊದಲ ಚಿತ್ರವಾಗಿದೆ.

ಮಲ್ಟಿಪ್ಲೆಕ್ಸ್‌ ಸಿನಿಮಾ ಟಿಕೆಟ್‌ಗೆ ಶೇ.2 ಸೆಸ್‌: ಸೆಪ್ಟಂಬರ್ 30ರಿಂದ ಜಾರಿ
ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವ ಪ್ರೇಕ್ಷಕರಿಗೆ ಸೆಪ್ಟೆಂಬರ್‌ 30ರಿಂದ ಹೆಚ್ಚುವರಿ ಸೆಸ್‌ ಬಿಸಿ ತಟ್ಟಲಿದೆ. ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಕಲಾತ್ಮಕ ಸೆಸ್‌ ವಿಧಿಸುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನಿಗದಿತ ದಿನದಿಂದ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೆ ಬರಲಿದೆ.

ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು ರೂಪಿಸಲಾದ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ–2024ರ ಅನ್ವಯ ಸೆಸ್‌ ಸಂಗ್ರಹಿಸಲಾಗುತ್ತಿದೆ. ಟಿಕೆಟ್‌ ಮಾರಾಟದಿಂದ ಸಂಗ್ರಹವಾಗುವ ಸೆಸ್‌ ಮೊತ್ತವನ್ನು ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲು ಸರ್ಕಾರ ಉದ್ದೇಶಿಸಿದೆ.

2024ರಲ್ಲಿ ಈ ಸಂಬಂಧದ ವಿಧೇಯಕವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿತ್ತು. ಸೆಪ್ಟೆಂಬರ್‌ 23, 2024ರಂದು ರಾಜ್ಯಪಾಲರ ಅಂಕಿತ ದೊರೆತ ಬಳಿಕ ಕಾಯ್ದೆಯು ಅಧಿಕೃತ ರೂಪ ಪಡೆದುಕೊಂಡಿತ್ತು. ಇದೀಗ ಸುಮಾರು ಎರಡು ವರ್ಷಗಳ ಬಳಿಕ ಕಾಯ್ದೆಯಲ್ಲಿನ ಸೆಸ್‌ ಸಂಗ್ರಹದ ವ್ಯವಸ್ಥೆಯನ್ನು ಸರ್ಕಾರ ಅನುಷ್ಠಾನಕ್ಕೆ ತರಲು ಮುಂದಾಗಿದೆ.

ಹೊಸ ನಿಯಮದಂತೆ ₹200ರ ಮಲ್ಟಿಪ್ಲೆಕ್ಸ್‌ ಸಿನಿಮಾ ಟಿಕೆಟ್‌ ಖರೀದಿಸಿದರೆ ಅದರ ಮೇಲೆ ಶೇ.2ರಂತೆ ₹4 ಸೆಸ್‌ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಟಿಕೆಟ್‌ ದರ ಹೆಚ್ಚಾದಂತೆ ಸೆಸ್‌ ಮೊತ್ತವೂ ಅನುಗುಣವಾಗಿ ಏರಿಕೆಯಾಗಲಿದೆ. ಹೀಗಾಗಿ ಸೆಪ್ಟೆಂಬರ್‌ 30ರಿಂದ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ವೀಕ್ಷಣೆಯ ಒಟ್ಟು ವೆಚ್ಚದಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾಗುವ ಸಾಧ್ಯತೆ ಇದೆ.

ಮಲ್ಟಿಪ್ಲೆಕ್ಸ್‌ ವಲಯದಿಂದ ವಿರೋಧ
ಸರ್ಕಾರದ ನಿರ್ಧಾರಕ್ಕೆ ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಸಿನಿಮಾ ಟಿಕೆಟ್‌ ಸೇರಿದಂತೆ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆಯ ವೆಚ್ಚ ಹೆಚ್ಚಾಗಿರುವ ಸಂದರ್ಭದಲ್ಲಿ ಮತ್ತೊಂದು ಸೆಸ್‌ ವಿಧಿಸುವುದರಿಂದ ಪ್ರೇಕ್ಷಕರ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಪ್ರದರ್ಶಕರು ಆಕ್ಷೇಪಿಸಿದ್ದಾರೆ.

ಹೆಚ್ಚುವರಿ ಶುಲ್ಕದಿಂದ ಸಿನಿಮಾ ವೀಕ್ಷಣೆಗೆ ಪ್ರೇಕ್ಷಕರು ಹಿಂದೇಟು ಹಾಕುವ ಸಾಧ್ಯತೆಯಿದ್ದು, ಇದರ ಪರಿಣಾಮ ಚಿತ್ರಮಂದಿರಗಳ ವ್ಯವಹಾರದ ಮೇಲೂ ಬೀರುವ ಆತಂಕವನ್ನು ಮಲ್ಟಿಪ್ಲೆಕ್ಸ್‌ ವಲಯ ವ್ಯಕ್ತಪಡಿಸಿದೆ.

ಒಂದೆಡೆ ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಹಣ ಒದಗಿಸುವ ಉದ್ದೇಶದಿಂದ ಸರ್ಕಾರ ಸೆಸ್‌ ಜಾರಿಗೆ ತರುತ್ತಿದ್ದರೆ, ಮತ್ತೊಂದೆಡೆ ಹೆಚ್ಚುವರಿ ಶುಲ್ಕದಿಂದ ಪ್ರೇಕ್ಷಕರು ಹಾಗೂ ಚಿತ್ರಮಂದಿರಗಳ ಮೇಲೆ ಬೀರುವ ಪರಿಣಾಮದ ಕುರಿತು ಚರ್ಚೆ ಆರಂಭವಾಗಿದೆ. ಸೆಪ್ಟೆಂಬರ್‌ 30ರಿಂದ ಸೆಸ್‌ ಜಾರಿಗೆ ಬಂದ ಬಳಿಕ ಇದರ ನೈಜ ಪರಿಣಾಮ ಏನೆಂಬುದು ಸ್ಪಷ್ಟವಾಗಲಿದೆ.

ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗರಿ: ಕರ್ನಾಟಕಕ್ಕೆ ಸಂದ 3ನೇ ಗೌರವ
ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅದ್ಭುತ ನಟನೆಯ ಮೂಲಕ ಛಾಪು ಮೂಡಿಸಿರುವ ಖ್ಯಾತ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದಿದೆ. ಈ ತಿಂಗಳ 22ರಂದು ಗುಜರಾತ್‌ನ ಏಕ್ತಾನಗರದಲ್ಲಿ (ಕೇವಾಡಿಯಾ) ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ.

ಈ ಮೂಲಕ ಡಾ. ರಾಜ್‌ಕುಮಾರ್ (1995) ಮತ್ತು ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ (2008) ಅವರ ನಂತರ ಕರ್ನಾಟಕದಿಂದ ಈ ಮಹೋನ್ನತ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಅನಂತ್ ನಾಗ್ ಭಾಜನರಾಗಿದ್ದಾರೆ. ಇವರಿಗೆ 2025ರಲ್ಲಿ ಪದ್ಮಭೂಷಣ ಗೌರವವೂ ಸಂದಿತ್ತು.

1948 ಸೆಪ್ಟೆಂಬರ್ 4 ರಂದು ಜನಿಸಿದ ಅನಂತ್ ನಾಗ್, ರಂಗಭೂಮಿಯ ಮೂಲಕ ತಮ್ಮ ಅಭಿನಯ ಯಾನ ಆರಂಭಿಸಿ ಕಾಲೇಜು ದಿನಗಳಲ್ಲೇ 50ಕ್ಕೂ ಹೆಚ್ಚು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದರು. ‘ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು, ಇದುವರೆಗೆ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1970ರ ದಶಕದಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕಲಿಯುಗ್’ ಮುಂತಾದ ಸಮಾಂತರ ಚಿತ್ರಗಳಲ್ಲಿನ ಅವರ ನೈಜ ಮತ್ತು ಆಳವಾದ ಅಭಿನಯ ರಾಷ್ಟ್ರಮಟ್ಟದಲ್ಲಿ ಅಪಾರ ಮನ್ನಣೆ ತಂದುಕೊಟ್ಟಿತು.

ಕನ್ನಡದಲ್ಲಿ ‘ಹಂಸಗೀತೆ’, ‘ಮಿಂಚಿನ ಓಟ’, ‘ಬಾರಾ’, ‘ಚಂದನದ ಗೊಂಬೆ’, ‘ನಾ ನಿನ್ನ ಬಿಡಲಾರೆ’, ‘ಬಯಲು ದಾರಿ’, ‘ಹೊಸ ನೀರು’, ‘ಅವಸ್ಥೆ’ ಸೇರಿದಂತೆ ‘ಗಣೇಶನ ಮದುವೆ’, ‘ಗೌರಿ ಗಣೇಶ’ ಮುಂತಾದ ಹಾಸ್ಯಪ್ರಧಾನ ಚಿತ್ರಗಳು ಇವರ ವೃತ್ತಿಜೀವನದ ಮೈಲಿಗಲ್ಲುಗಳಾಗಿವೆ. ಸಹೋದರ ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಅನಂತ್ ನಾಗ್, ಗಂಭೀರ, ನಾಯಕ, ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ.

ನಾಲ್ಕು ಬಾರಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್‌ಫೇರ್, ರಾಜ್ಯೋತ್ಸವ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು 2023ರಲ್ಲಿ ಬೆಳ್ಳಿಪರದೆಯಲ್ಲಿ 50 ವರ್ಷ ಪೂರೈಸಿದ್ದರು. ನಟನೆಯಷ್ಟೇ ಅಲ್ಲದೆ, 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ 1994ರಿಂದ 1999ರವರೆಗೆ ಮಲ್ಲೇಶ್ವರಂ ಶಾಸಕರಾಗಿ ಮತ್ತು ಸಚಿವರಾಗಿಯೂ ಜನಸೇವೆ ಸಲ್ಲಿಸಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಹೇಳಿಕೆ ವಿವಾದ: ಸ್ಪಷ್ಟನೆ ನೀಡಿ ಕ್ಷಮೆ ಕೋರಿದ ನಟ ಶಿವರಾಜ್‌ಕುಮಾರ್
ಭಾರತದಲ್ಲಿ ಹಿಂದಿ ಭಾಷೆಯನ್ನು “ರಾಷ್ಟ್ರಭಾಷೆ” ಎಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದಿ ಕೇವಲ ಭಾರತದ ಭಾಷೆಗಳಲ್ಲಿ ಒಂದು ಭಾಷೆಯಷ್ಟೇ. ನ್ಯಾಷನಲ್ ಲ್ಯಾಂಗ್ವೇಜ್ ಎಂದರೆ ಭಾರತೀಯ ಭಾಷೆ (Indian Language) ಎಂಬ ಅರ್ಥದಲ್ಲಿ ನಾನು ಆ ರೀತಿ ಹೇಳಿದ್ದೆ, ನನಗೆ ಈ ವಿಚಾರದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಿರಲಿ. ಅವರವರ ಭಾಷೆ ಅವರವರಿಗೆ ಮುಖ್ಯ, ಆದರೆ ನಮಗೆ ನಮ್ಮ ಭಾಷೆಯೇ ಸರ್ವಶ್ರೇಷ್ಠ. ನಮಗೆ ಕನ್ನಡವೇ ಅತ್ಯಂತ ಮುಖ್ಯ ಮತ್ತು ಕನ್ನಡವೇ ನಮ್ಮ ಭಾಷೆ,” ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದದ ಹಿನ್ನೆಲೆ:

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್-ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಅವರು ಹಿಂದಿಯನ್ನು “ರಾಷ್ಟ್ರಭಾಷೆ” ಎಂದು ಸಹಜವಾಗಿ ಉಲ್ಲೇಖಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ಷೇಪಕ್ಕೆ ಕಾರಣವಾಗಿತ್ತು. ಭಾರತದ ಸಂವಿಧಾನದಲ್ಲಿ ಯಾವುದೇ ಒಂದು ಭಾಷೆಯನ್ನು ‘ರಾಷ್ಟ್ರಭಾಷೆ’ ಎಂದು ಘೋಷಿಸಿಲ್ಲ, 22 ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಗುರುತಿಸಲಾಗಿದೆ ಎಂದು ಕನ್ನಡ ಪರ ಸಂಘಟನೆಗಳು ಮತ್ತು ನೆಟ್ಟಿಗರು ನೆನಪಿಸಿದ್ದರು.

ವಿಶೇಷವಾಗಿ ಕನ್ನಡದ ಅಸ್ಮಿತೆ ಹಾಗೂ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದ ಡಾ. ರಾಜ್‌ಕುಮಾರ್ ಅವರ ಕುಟುಂಬದಿಂದಲೇ ಇಂತಹ ಹೇಳಿಕೆ ಬಂದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಈ ವಿವಾದ ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಶಿವರಾಜ್‌ಕುಮಾರ್ ತಕ್ಷಣವೇ ಮಾಧ್ಯಮಗಳ ಮುಂದೆ ಬಂದು, ಮಾತಿನ ಭರದಲ್ಲಿ ಹಾಗೆ ಹೇಳಿದ್ದಾಗಿ ಒಪ್ಪಿಕೊಂಡು ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಟಾಕ್ಸಿಕ್ “ಟಿಕೆಟ್” ಬಾಲಕ ಕಬೀರ್ ಪಹ್ವಾ
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.. ಆಝಾದ್ ಕಂಡಿಗ ಅವರ ಬರಹದಲ್ಲಿ

ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಟಾಕ್ಸಿಕ್” ಬಗ್ಗೆ ಪರ ವಿರೋಧಗಳ ಭರಾಟೆಯ ನಡುವೆ ಪ್ರೇಕ್ಷಕರ ಮನಗೆದ್ದು ಸಿನಿಮಾ ಲೋಕದಲ್ಲಿ ಮನೆ ಮಾತಾಗಿರುವ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.

ಬೇಡಿಕೆಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಪುಟ್ಟ ಪ್ರತಿಭೆಗಳ ಸಾಲಿನಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ಹೆಸರು ಕಬೀರ್ ಪಹ್ವಾ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಮೂಡಿಬಂದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಬಾಲ ನಟನಾಗಿ ಕಬೀರ್ ಕಾಣಿಸಿಕೊಳ್ಳುತ್ತಿರುವುದು ಇಡೀ ದೇಶದ ಸಿನಿಪ್ರಿಯರ ಕಣ್ಣು ಈ ಪುಟಾಣಿಯತ್ತ ನೆಟ್ಟಿದೆ.

ಹತ್ತರ ಹರೆಯದ ದೆಹಲಿ ಮೂಲದ ಕಬೀರ್ ಪಹ್ವಾ ಅವರ ನಟನಾ ಪಯಣವು ಅತ್ಯಂತ ರೋಚಕವಾಗಿದೆ. ದೊಡ್ಡವರಂತೆ ಗಂಭೀರವಾಗಿ ಯೋಚಿಸುವ ಕಣ್ಣುಗಳು, ಕ್ಯಾಮೆರಾ ಎದುರು ಯಾವುದೇ ಮುಜುಗರವಿಲ್ಲದೆ ಪ್ರದರ್ಶಿಸುವ ಸ್ವಾಭಾವಿಕ ಹಾವಭಾವಗಳು ಇವರನ್ನು ಇತರ ಬಾಲ ಕಲಾವಿದರಗಿಂತ ಭೇದಿಸಿ ತೋರಿಸುತ್ತವೆ.
ಈ ಹುಡುಗ ಭವಿಷ್ಯದ ಇರ್ಫಾನ್ ಖಾನ್ ಆಗೋದ್ರಲ್ಲಿ ಎರಡು ಮಾತಿಲ್ಲ ಅನ್ನುತ್ತಿದೆ ಇಂಡಿಯಾ ಸಿನಿಮಾ ಇಂಡಸ್ಟ್ರಿ.

ಕಬೀರ್ ಆರಂಭದಲ್ಲಿ ಸಣ್ಣಪುಟ್ಟ ಮಾಡಲಿಂಗ್ ಹಾಗೂ ಜಾಹೀರಾತುಗಳ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಈ ಬಾಲಕ, ನಂತರದ ದಿನಗಳಲ್ಲಿ ವಿಭಿನ್ನ ಹಾಗೂ ಚಾಲೆಂಜಿಗ್ ಪಾತ್ರಗಳ ಮೂಲಕ ಚಿತ್ರರಂಗದ ದಿಗ್ಗಜರ ಗಮನ ಸೆಳೆದರು.

ಕಬೀರ್ ಪಹ್ವಾ ಅವರ ನಟನಾ ಪ್ರತಿಭೆಗೆ ಮೊದಲ ದೊಡ್ಡ ಮೈಲಿಗಲ್ಲು ಸಿಕ್ಕಿದ್ದು ‘ಓಪಿಯಮ್’ ಚಿತ್ರದ ಮೂಲಕ. ಅಮನ್ ಸಚ್‌ದೇವ್ ನಿರ್ದೇಶನದ ಈ ಕಲಾತ್ಮಕ ಆಂಥಾಲಜಿ ಚಿತ್ರದಲ್ಲಿ ಕಬೀರ್ ನಿರ್ವಹಿಸಿದ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿತ್ತು. ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು, ಪ್ರತಿಷ್ಠಿತ ‘ಟೋಕಿಯೋ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಹಾಗೂ ಭಾರತದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಾಗ ಕಬೀರ್ ಅವರ ಮುಖಪುಟದ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಕಬೀರ್ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ನೀಡಿದ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಶಾಸ್ತ್ರಿ ವಿರುದ್ ಶಾಸ್ತ್ರಿ’. ಬಾಲಿವುಡ್‌ನ ಹಿರಿಯ ದಿಗ್ಗಜ ನಟ ಪರೇಶ್ ರಾವಲ್ ಮತ್ತು ನೀನಾ ಕುಲಕರ್ಣಿ ಅವರಂತಹ ಅನುಭವಿ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಚಿತ್ರದಲ್ಲಿ ಯಮನ್ ಅಲಿಯಾಸ್ ‘ಮೊಮೋಜಿ’ ಎಂಬ ಸಂಕೀರ್ಣ ಭಾವನೆಗಳ ಪಾತ್ರಕ್ಕೆ ಕಬೀರ್ ಜೀವ ತುಂಬಿದ ರೀತಿ ಅದ್ಭುತವಾಗಿತ್ತು.

ಪೋಷಕರು ಮತ್ತು ಅಜ್ಜ-ಅಜ್ಜಿಯರ ನಡುವಿನ ಕಾನೂನು ಹೋರಾಟದ ನಡುವೆ ಸಿಲುಕುವ ಮಗುವಿನ ಮಾನಸಿಕ ತುಮುಲಗಳನ್ನು ಕಬೀರ್ ಬಹಳ ಪರಿಣಾಮಕಾರಿಯಾಗಿ ತೆರೆಮೇಲೆ ತಂದರು. ಈ ಚಿತ್ರ ಇವರಿಗೆ ವಿಮರ್ಶಕರ ಮೆಚ್ಚುಗೆಯನ್ನು ತಂದುಕೊಟ್ಟಿತು.

ಸದ್ಯ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದ್ದ ‘ಟಾಕ್ಸಿಕ್’ ಚಿತ್ರದಲ್ಲಿ ಕಬೀರ್ ಪಹ್ವಾ ನಟಿಸುತ್ತಿರುವುದು ಇವರ ವೃತ್ತಿಜೀವನದ ಬಿಗ್ ಬ್ರೇಕ್ ಎಂದೇ ಹೇಳಬಹುದು. ಚಿತ್ರದಲ್ಲಿ ಯಶ್ (ರಾಯಾ) ಅವರ ಮಗನ ಬಾಲ್ಯದ ಹಂತದಲ್ಲಿ ಟಿಕೇಟ್ ಆಗಿ ಕಬೀರ್ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಗಲಾಟೆ ತುಂಬಿದ, ಕತ್ತಲೆಯ ಲೋಕದ ಎಪಾಸಿಕ್ ದೃಶ್ಯಗಳಲ್ಲಿ ಈ ಬಾಲಕನ ಮುಖದ ಗಂಭೀರ ಕಳೆ ಮತ್ತು ನಿಗೂಢ ಹಾವಭಾವಗಳು ಟೀಸರ್‌ನಲ್ಲೇ ರೋಮಾಂಚನ ಮೂಡಿಸಿವೆ.

ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಬ್ಯಾನರ್ ಸಿನಿಮಾವೊಂದರಲ್ಲಿ ಈ ಮಟ್ಟದ ಪ್ರಮುಖ ಪಾತ್ರ ಸಿಕ್ಕಿರುವುದು ಕಬೀರ್ ಪ್ರತಿಭೆಗೆ ಸಿಕ್ಕ ದೊಡ್ಡ ಗೌರವ.

ಸಿನಿಮಾಗಳಷ್ಟೇ ಅಲ್ಲದೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ವೆಬ್ ಸೀರೀಸ್‌ಗಳಲ್ಲೂ ಬ್ಯುಸಿಯಾಗಿರುವ ಕಬೀರ್ ಪಹ್ವಾ, ಕೇವಲ ವಯಸ್ಸಿನಲ್ಲಿ ಚಿಕ್ಕವರಾದರೂ ನಟನೆಯಲ್ಲಿ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ನಿರ್ದೇಶಕರ ಕಲಾವಿದ ಎಂದೇ ಕರೆಸಿಕೊಳ್ಳುವ ಈ ಮುದ್ದು ಬಾಲಕ, ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಬಾಲಿವುಡ್ ಹಿರಿಯ ನಟ ದಿ. ಇರ್ಫಾನ್ ಖಾನ್ ನಂತೆ ತೆರೆಯ ಮೇಲೆ ತನ್ನ ಕಣ್ಣುಗಳ ಮೂಲಕವೇ ನಟಿಸುವ ಈ ಪುಟ್ಟ ಪ್ರತಿಭೆಯು ಭವಿಷ್ಯದ ಉತ್ತಮ ನಟನಾಗಲಿದ್ದಾರೆ ಎಂಬುವುದು ಸಿನಿ ಪ್ರಿಯರ ಅಭಿಪ್ರಾಯ.

~ ಆಝಾದ್ ಕಂಡಿಗ

‘ಟಾಕ್ಸಿಕ್’ಗೆ ‘ಎ’ ಪ್ರಮಾಣಪತ್ರ: CBFC ವಿರುದ್ಧ ಅಣ್ಣಾಮಲೈ ಕಿಡಿ; ಚಿತ್ರಗಳಲ್ಲಿನ ಹಿಂಸೆ, ಮಹಿಳಾ ವಿರೋಧಿ ಧೋರಣೆ ಬಗ್ಗೆ ಆಕ್ಷೇಪ
ಚೆನ್ನೈ: ಇತ್ತೀಚಿನ ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಅತಿಯಾದ ಹಿಂಸೆ ಹಾಗೂ ಮಹಿಳಾ ವಿರೋಧಿ ಧೋರಣೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ‘ವಿ ದಿ ಲೀಡರ್ಸ್’ ಸಂಸ್ಥಾಪಕ ಕೆ. ಅಣ್ಣಾಮಲೈ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಕ್ಕೆ CBFC ‘A’ ಪ್ರಮಾಣಪತ್ರ ನೀಡಿರುವ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ. CBFCಯ ಅಧಿಕೃತ ದಾಖಲೆ ಪ್ರಕಾರ, ಚಿತ್ರದ ಕನ್ನಡ ಆವೃತ್ತಿಗೆ ಆಗಸ್ಟ್ 13ರಂದು ‘A’ ಪ್ರಮಾಣಪತ್ರ ನೀಡಲಾಗಿದ್ದು, ತೆಲುಗು ಆವೃತ್ತಿಗೂ ಆಗಸ್ಟ್ 20ರಂದು ಇದೇ ವರ್ಗದ ಪ್ರಮಾಣಪತ್ರ ನೀಡಲಾಗಿದೆ.

‘A’ ಪ್ರಮಾಣಪತ್ರ ಎಂದರೆ ಚಿತ್ರವನ್ನು ವಯಸ್ಕ ಪ್ರೇಕ್ಷಕರಿಗೆ ಮಾತ್ರ ಉದ್ದೇಶಿಸಲಾಗಿದೆ. ಆದರೆ ಇಂತಹ ಚಿತ್ರಗಳ ಪ್ರದರ್ಶನದ ವೇಳೆ ಅಪ್ರಾಪ್ತ ವಯಸ್ಕರಿಗೆ ಪ್ರವೇಶ ನೀಡಲಾಗುತ್ತಿದೆ ಎಂಬ ಆರೋಪಗಳು ಇದೀಗ ಚರ್ಚೆಗೆ ಕಾರಣವಾಗಿವೆ. ‘ಟಾಕ್ಸಿಕ್’ ಚಿತ್ರವನ್ನು ಮಕ್ಕಳು ವೀಕ್ಷಿಸಿರುವ ವರದಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಬಂದಿವೆ.

ಭಾರತದಲ್ಲಿ ಚಲನಚಿತ್ರಗಳ ಪ್ರಮಾಣೀಕರಣ ಹಾಗೂ ‘A’ ವರ್ಗದ ಚಿತ್ರಗಳ ವಯೋಮಿತಿ ಜಾರಿಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಿದೆ ಎಂಬ ಅಭಿಪ್ರಾಯವನ್ನು ಅಣ್ಣಾಮಲೈ ವ್ಯಕ್ತಪಡಿಸಿದ್ದಾರೆ. ಅತಿಯಾದ ಹಿಂಸೆ ಮತ್ತು ಪುರುಷ ಪ್ರಧಾನ ಧೋರಣೆಗಳನ್ನು ನಿರಂತರವಾಗಿ ವೈಭವೀಕರಿಸುವ ಚಿತ್ರಣಗಳು ಯುವಜನರ ಮೇಲೆ ತಪ್ಪು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಚಿತ್ರಗಳಲ್ಲಿ ಮಹಿಳೆಯರನ್ನು ಕೇವಲ ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿಯನ್ನೂ ಅವರು ಟೀಕಿಸಿದ್ದಾರೆ. ಪುರುಷರ ಬಹುಸಂಬಂಧಗಳನ್ನು ವೈಭವೀಕರಿಸುವ ಅಥವಾ ಪುರುಷ ಪ್ರಧಾನ ಮನೋಭಾವವನ್ನು ಸಾಮಾನ್ಯಗೊಳಿಸುವಂತಹ ಚಿತ್ರಣಗಳು ಮಹಿಳಾ ವಿರೋಧಿ ಧೋರಣೆಗಳಿಗೆ ಉತ್ತೇಜನ ನೀಡಬಹುದು ಎಂಬುದು ಅವರ ವಾದವಾಗಿದೆ.

ಇದೇ ವೇಳೆ, ‘ಟಾಕ್ಸಿಕ್’ ಚಿತ್ರದ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ CBFC ಕೆಲವು ಬದಲಾವಣೆಗಳನ್ನು ಸೂಚಿಸಿರುವುದು ದಾಖಲಾಗಿದೆ. ಚಿತ್ರದ ಹಿಂದಿ ಆವೃತ್ತಿಗೆ ಆಗಸ್ಟ್ 25ರಂದು ‘A’ ಪ್ರಮಾಣಪತ್ರ ನೀಡುವ ಮೊದಲು, ಮಗುವಿನತ್ತ ಇರುವ ನಿಂದನಾತ್ಮಕ ಸಂಭಾಷಣೆಯನ್ನು ಮ್ಯೂಟ್ ಮಾಡುವುದು ಹಾಗೂ ಮಾದಕ ವಸ್ತು ಬಳಕೆಗೆ ಸಂಬಂಧಿಸಿದ ದೃಶ್ಯಗಳನ್ನು ಕಡಿತಗೊಳಿಸುವಂತೆ ಮಂಡಳಿ ಸೂಚಿಸಿತ್ತು ಎಂದು ವರದಿಯಾಗಿದೆ.

CBFCಯ ಅಧಿಕೃತ ದಾಖಲೆಯಲ್ಲಿಯೂ ‘ಟಾಕ್ಸಿಕ್’ ಚಿತ್ರವನ್ನು ಹಿಂಸೆ, ಅಸೂಯೆ ಹಾಗೂ ಕಠಿಣ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡ ಕಥೆಯಾಗಿ ವಿವರಿಸಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಚಿತ್ರಗಳಲ್ಲಿ ಹಿಂಸೆಯನ್ನು ಎಷ್ಟರ ಮಟ್ಟಿಗೆ ಪ್ರದರ್ಶಿಸಬೇಕು, ಮಹಿಳೆಯರ ಚಿತ್ರಣಕ್ಕೆ ಯಾವ ರೀತಿಯ ಸಾಮಾಜಿಕ ಹೊಣೆಗಾರಿಕೆ ಇರಬೇಕು ಮತ್ತು ‘A’ ಪ್ರಮಾಣಪತ್ರದ ವಯೋಮಿತಿ ನಿಯಮಗಳನ್ನು ಚಿತ್ರಮಂದಿರಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂಬ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

‘ಈ ವಿವಾದವನ್ನು ನೀವೇಕೆ ಮುಗಿಸಲು ಬಿಡುತ್ತಿಲ್ಲ?’: ಕಂಗನಾ ರಣಾವತ್ ಜೊತೆಗಿನ ವಾಕ್ಸಮರದ ಕುರಿತು ಮಾಧ್ಯಮದವರ ವಿರುದ್ಧ ತಾಪ್ಸಿ ಪನ್ನು ಗರಂ
ತಮ್ಮ ಮುಂಬರುವ ‘ಗಾಂಧಾರಿ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ತಾಪ್ಸಿ ಪನ್ನು, ನಟಿ ಕಂಗನಾ ರಣಾವತ್ ಅವರೊಂದಿಗಿನ ದೀರ್ಘಕಾಲದ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಮಾಧ್ಯಮಗಳ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ವಿಷಯವನ್ನು ನೀವೇಕೆ ಮುಗಿಸಲು ಬಿಡುತ್ತಿಲ್ಲ?” ಎಂದು ನೇರವಾಗಿ ಪ್ರಶ್ನಿಸಿದ ಅವರು, ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸಿದರೆ ವಿವಾದವು ತಾನಾಗಿಯೇ ಅಂತ್ಯಗೊಳ್ಳುತ್ತದೆ ಎಂದಿದ್ದಾರೆ.

‘ಗಾಂಧಾರಿ’ ಚಿತ್ರದ ಟ್ರೇಲರ್ ಪ್ರಿವ್ಯೂ ವೇಳೆ ಕಂಗನಾ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ತಾಪ್ಸಿ, “ನೀವು ಇಬ್ಬರನ್ನೂ ಈ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸಿದರೆ ಈ ವಿಚಾರ ಯಾವಾಗಲೋ ಮುಗಿದುಹೋಗುತ್ತಿತ್ತು. ಬಹುಶಃ ಈ ಜಗಳವನ್ನು ನೋಡಿ ಆನಂದಿಸುವುದೇ ಜನರಿಗೆ ಇಷ್ಟವಾಗಿರಬಹುದು, ಅದಕ್ಕಾಗಿಯೇ ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳಲಾಗುತ್ತಿದೆ” ಎಂದು ಉತ್ತರಿಸಿದರು.

ಇದಕ್ಕೂ ಮುನ್ನ ನೀಡಿದ್ದ ಹೇಳಿಕೆಯೊಂದರಲ್ಲಿ ತಾಪ್ಸಿ, “ನಾನು ಕಂಗನಾ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಅವರ ಬಗ್ಗೆ ನನ್ನ ನಿಲುವು ನನ್ನ ಪಾಲನೆ-ಪೋಷಣೆ (ಸಂಸ್ಕಾರ) ಮತ್ತು ದೃಷ್ಟಿಕೋನವನ್ನು ತೋರಿಸಿದರೆ, ಅವರ ವರ್ತನೆ ಅವರ ಸಂಸ್ಕಾರವನ್ನು ತೋರಿಸುತ್ತದೆ. ಯಾರು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿ” ಎಂದು ಹೇಳಿದ್ದರು.

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಗನಾ ರಣಾವತ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಪ್ಸಿ ಅವರನ್ನು ‘ಸಸ್ತಿ ಕಾಪಿ’ (ಕಳಪೆ ನಕಲು) ಎಂದು ಕರೆದು, ತಮ್ಮ ಪೋಷಕರನ್ನು ಮತ್ತು ಸಂಸ್ಕಾರವನ್ನು ಅಪಹಾಸ್ಯ ಮಾಡಲಾಗಿದೆ ಎಂದು ಕಿಡಿಕಾರಿದ್ದರು. 2019 ರಲ್ಲಿ ‘ಜಡ್ಜ್‌ಮೆಂಟಲ್ ಹೈ ಕ್ಯಾ’ ಚಿತ್ರದ ಟ್ರೇಲರ್ ಪ್ರಶಂಸೆಯ ವೇಳೆ ಶುರುವಾದ ಈ ಇಬ್ಬರು ನಟಿಯರ ನಡುವಿನ ವಾಕ್ಸಮರ ಇಂದಿಗೂ ಮುಂದುವರಿದಿದೆ.

ಚೀನೀ ಆನಿಮೇಷನ್ ಚಿತ್ರ ‘ನಿಯು ಲೈ’: ಕೇವಲ ₹1 ಲಕ್ಷ ಖರ್ಚಿನ ಚಿತ್ರ, ಈಗ ₹20 ಕೋಟಿ ಗಳಿಕೆಯ ಅಚ್ಚರಿಯ ಹಿಟ್!
ಬೀಜಿಂಗ್: ವಿಮರ್ಶಕರಿಂದ ‘2026ರ ಅತ್ಯಂತ ಕಳಪೆ ಸಿನಿಮಾ’ ಹಾಗೂ ‘ಕೃತಕ ಬುದ್ಧಿಮತ್ತೆಗಿಂತಲೂ (AI) ಕಡೆ’ ಎಂಬ ವ್ಯಂಗ್ಯಕ್ಕೆ ಗುರಿಯಾಗಿದ್ದ ಚೀನಾದ ಆನಿಮೇಟೆಡ್ ಚಲನಚಿತ್ರ ‘ನಿಯು ಲೈ’ (Niu Lai – ‘ದಿ ಕೌ ಈಸ್ ಕಮಿಂಗ್’) ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಜಯಭೇರಿ ಬಾರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತು ಹರಿದಾಡಿದ ನಕಾರಾತ್ಮಕ ಟ್ರೋಲ್‌ಗಳು ಮತ್ತು ಕುತೂಹಲವೇ ಈ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣವಾಗಿದೆ.

ಕೇವಲ ಇಬ್ಬರು ವ್ಯಕ್ತಿಗಳಾದ ಕ್ಸಿನ್ ಯುಮೆಂಗ್ ಮತ್ತು ಸನ್ ಲಿಫಾಂಗ್ ಸೇರಿಕೊಂಡು ಸುಮಾರು ಐದು ವರ್ಷಗಳ ಕಾಲ ಶ್ರಮಪಟ್ಟು ಈ 86 ನಿಮಿಷಗಳ ಆನಿಮೇಷನ್ ಚಿತ್ರವನ್ನು ಸಿದ್ಧಪಡಿಸಿದ್ದರು. ಇವರಿಬ್ಬರೇ ಚಿತ್ರಕಥೆ, ನಿರ್ದೇಶನ, ನಿರ್ಮಾಣ ಹಾಗೂ ಡಬ್ಬಿಂಗ್ (ಧ್ವನಿ) ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ನವಜಾತ ಕರು ಮತ್ತು ಹಕ್ಕಿಯೊಂದರ ಸುತ್ತ ಸಾಗುವ ಈ ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾದಾಗ ಯಾವುದೇ ಪ್ರಚಾರ, ಟ್ರೈಲರ್ ಅಥವಾ ಮಾರ್ಕೆಟಿಂಗ್ ಇರಲಿಲ್ಲ.

ಬಿಡುಗಡೆಯಾದ ಮೊದಲ 10 ದಿನಗಳಲ್ಲಿ ಕೇವಲ 300ಕ್ಕೂ ಕಡಿಮೆ ಮಂದಿ ಟಿಕೆಟ್ ಖರೀದಿಸಿದ್ದು, ಚಿತ್ರ ಗಳಿಸಿದ್ದು ಕೇವಲ 7,700 ಯುವಾನ್ (ಸುಮಾರು ₹1.04 ಲಕ್ಷ) ಮಾತ್ರ. ಆದರೆ ಚಿತ್ರದ ಕಳಪೆ ಗ್ರಾಫಿಕ್ಸ್, ಮರದಂತಿರುವ ಪಾತ್ರಗಳು ಮತ್ತು ಗೊಂದಲದ ಕಥೆಯನ್ನು ಟ್ರೋಲ್ ಮಾಡುವ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಸಿನಿಮಾ ಅಷ್ಟೊಂದು ಕಳಪೆಯಾಗಿದೆಯೇ ಎಂದು ಸ್ವತಃ ನೋಡುವ ಕುತೂಹಲದಿಂದ ಜನರು ಚಿತ್ರಮಂದಿರಗಳತ್ತ ಮುಗಿಬಿದ್ದರು.

ಪ್ರೇಕ್ಷಕರ ಈ ಅನಿರೀಕ್ಷಿತ ಆಸಕ್ತಿಯಿಂದಾಗಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 14.9 ಮಿಲಿಯನ್ ಯುವಾನ್ (ಸುಮಾರು ₹20 ಕೋಟಿ) ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸು ಕಂಡಿದೆ. ಆಧುನಿಕ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಈ ಚಿತ್ರದ ಸರಳ ಮತ್ತು ಕೈಯಿಂದ ಮಾಡಿದಂತಹ (ಹ್ಯಾಂಡ್‌ಮೇಡ್) ಶೈಲಿ ಕೆಲ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಿದೆ ಎಂದೂ ಪ್ರಶಂಸೆ ವ್ಯಕ್ತವಾಗಿದೆ.

ಪೇಟ್ರಿಯಾರ್ಕಿ ಇಂಡಸ್ಟ್ರಿಯಲ್ಲಿ ಫೆಮಿನಿಸಂನ ಗಟ್ಟಿ ಧ್ವನಿಯೇ ಗೀತು ಮೋಹನ್ ದಾಸ್ ?
ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲೆಡೆ ಕೇಳಿಸುತ್ತಿರುವ ಏಕೈಕ ಹೆಸರು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’. ರಾಕಿಂಗ್ ಸ್ಟಾರ್ ಯಶ್ ಅವರ ವಿಭಿನ್ನ ಮೈಲಿಗಲ್ಲಿನ ಈ ಗ್ಯಾಂಗ್‌ಸ್ಟರ್ ಚಿತ್ರವು ಬಿಡುಗಡೆಗೂ ಮುನ್ನವೇ ಅಭೂತಪೂರ್ವ ಸಂಚಲನ ಸೃಷ್ಟಿಸಿದೆ. ‘ಕೆಜಿಎಫ್’ ನಂತರ ಯಶ್ ಯಾವ ನಿರ್ದೇಶಕರ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆ ಹೈಪ್ ಅನ್ನು ಸಮರ್ಥವಾಗಿ ನಿಭಾಯಿಸಿ, ಪ್ಯಾನ್ ಇಂಡಿಯಾವನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾದ ಸಾರಥ್ಯ ವಹಿಸಿದವರು ಪ್ರತಿಭಾವಂತೆ ನಿರ್ದೇಶಕಿ ‘ಗೀತು ಮೋಹನದಾಸ್’.

ದೃಶ್ಯಕಾವ್ಯದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಕಲೆಗಾರಿಕೆ ಗೀತು ಅವರದ್ದು. ಬಾಲನಟಿಯಿಂದ ನಿರ್ದೇಶನದ ಗದ್ದುಗೆಯವರೆಗೆ ಕೇರಳ ಮೂಲದ ಗೀತು ಮೋಹನದಾಸ್ ಅವರ ಸಿನಿ ಪಯಣ ಬಹಳ ಆಸಕ್ತಿದಾಯಕವಾದದ್ದು. ಇವರು ಸಿನಿಮಾ ಜಗತ್ತಿಗೆ ಹೊಸಬರೇನಲ್ಲ; ಬಾಲ್ಯದಲ್ಲಿಯೇ ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು.

1986ರಲ್ಲಿ ಬಿಡುಗಡೆಯಾದ ಮಲಯಾಳಂನ ‘ಒನ್ನು ಮುದಲ್ ಪೂಜ್ಯಂ ವರೆ’ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ‘ಅತ್ಯುತ್ತಮ ಬಾಲನಟಿ’ ಕೇರಳ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ತದನಂತರ ಅವರು 1988ರಲ್ಲಿ ‘ಎನ್ ಬೊಮ್ಮಕುಟ್ಟಿ ಅಮ್ಮಾವುಕ್ಕು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಬಾಲನಟಿಯಾಗಿ ಕಾಲಿಟ್ಟಿದ್ದರು.

ಗೀತು ಮೋಹನ್ ದಾಸ್ ಅವರ ಮೂಲ‌ ಹೆಸರು ಗಾಯತ್ರಿ. ತನ್ನ ಮೊದಲ ಚಿತ್ರ ‘ಒನ್ನು ಮುದಲ್ ಪೂಜ್ಯಂವರೆ’ ಎಂಬ ಸಿನಿಮಾದಲ್ಲಿ ಇವರಿಗೆ ಸಿಕ್ಕ ಪಾತ್ರದ ಹೆಸರು ‘ಗೀತು’ ಎಂದಾಗಿತ್ತು. ಬಾಲ ನಟಿಯಾಗಿ ಮುದ್ದಾಗಿ ನಟಿಸಿದ ಇವರನ್ನು ಜನ ಗೀತು ಎಂದು ಕರೆಯಲು ಪ್ರಾರಂಭಿಸಿದರು. ಮುಂದಕ್ಕೆ ಇದೇ ಹೆಸರನ್ನು ಸ್ಕ್ರೀನ್‌ ಹೆಸರಾಗಿ ಮುಂದುವರೆಸಿದರು. ಮೋಹನ್ ದಾಸ್ ಎಂಬುವುದು ಗೀತು ಅವರ ತಂದೆಯ ಹೆಸರು. ಹಾಗಾಗಿ ಕೇರಳದ ಸಂಸ್ಕ್ರತಿ ಯಂತೆ ತನ್ನ ಹೆಸರಿನ ಮುಂದೆ ತನ್ನ ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾರೆ.

ನಟನೆಯಲ್ಲಿ ಯಶಸ್ಸು ಸಿಕ್ಕರೂ ಅವರ ಮನಸ್ಸು ಸದಾ ಸಿನಿಮಾ ನಿರ್ದೇಶನ ಮತ್ತು ಕಥೆ ಹೇಳುವ ಕಲೆಯ ಕಡೆಗಿತ್ತು. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೆ, ಕೇವಲ ತನ್ನ ಸ್ವಂತ ಪ್ರತಿಭೆ ಮತ್ತು ದೃಢ ನಿರ್ಧಾರದಿಂದ ಅವರು ನಿರ್ದೇಶನದ ಹಾದಿಯನ್ನು ಆರಿಸಿಕೊಂಡರು. ಇದಕ್ಕಾಗಿ ಇವರು ಬ್ರಿಟನ್‌ನ ಪ್ರತಿಷ್ಠಿತ ಲಂಡನ್ ಇನ್ಸ್ಟಿಟ್ಯೂಟ್ ನಲ್ಲಿ ಸಿನಿಮಾ ಹಾಗು ಕಲಾ‌ ಶಿಕ್ಷಣವನ್ನು ಪಡೆದು ಸಿನಿಮಾ ನಿರ್ಮಾಣದ ತಾಂತ್ರಿಕತೆ ಮತ್ತು ದೃಶ್ಯ ಸಂಯೋಜನೆಯ ಸೂಕ್ಷ್ಮತೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ.

ಗೀತು ಮೋಹನದಾಸ್ ಅವರ ಸಿನಿಮಾಗಳು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದರೂ, ಕಮರ್ಷಿಯಲ್ ಮಾರುಕಟ್ಟೆಯಲ್ಲಿ ಅವು ದೊಡ್ಡ ಮಟ್ಟದ ಹಣಗಳಿಕೆ ಮಾಡುವಲ್ಲಿ ಆರಂಭದಲ್ಲಿ ಸೆಣಸಾಡಬೇಕಾಯಿತು. ಇವರ ನಿರ್ದೇಶನದ ‘ಲಯರ್ಸ್ ಡೈಸ್’ ಮತ್ತು ‘ಮೂತುನ್’ ಚಿತ್ರಗಳು ಜಾಗತಿಕ ಮಟ್ಟದ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡವು. ಆದರೆ ಬಾಕ್ಸಾಫಿಸಿನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆರ್ಟ್ ಫಿಲ್ಮ್‌ಗಳ ಜಗತ್ತಿನಲ್ಲಿ ಅಪಾರ ಮನ್ನಣೆ ಸಿಕ್ಕರೂ, ಮೇಲ್ವರ್ಗದ ಹಾಗೂ ಕಮರ್ಷಿಯಲ್ ಪ್ರೇಕ್ಷಕರನ್ನು ತಲುಪುವಲ್ಲಿ ಈ ಸಿನಿಮಾಗಳು ವಾಣಿಜ್ಯಿಕವಾಗಿ ಸವಾಲುಗಳನ್ನು ಎದುರಿಸಿದವು.

ಇಂಡಸ್ಟ್ರಿಯಲ್ಲಿ ಮಹಿಳಾ ನಿರ್ದೇಶಕರಿಗೆ ಬಜೆಟ್ ಬೃಹತ್ ಮಟ್ಟದಲ್ಲಿ ಸಿಗುವುದು ಮತ್ತು ಪುರುಷ ಪ್ರಾಧಾನ್ಯತೆಯ ಕಮರ್ಷಿಯಲ್ ಸ್ಪೇಸ್‌ನಲ್ಲಿ ಗೂಡುಕಟ್ಟಿಕೊಳ್ಳುವುದು ಅವರಿಗೆ ಅಗ್ನಿಪರೀಕ್ಷೆಯಂತೆಯೇ ಇತ್ತು. ಹಲವರು ಅವರ ಶೈಲಿಯನ್ನು ಪ್ರಶ್ನಿಸಿದರು, ಕೆಲವರು ಸಂದೇಹ ವ್ಯಕ್ತಪಡಿಸಿದರು.

ಸಿನಿಮಾರಂಗದಲ್ಲಿ ಎಲ್ಲರೂ ಅವರ ಸ್ಟೈಲ್ ಬಗ್ಗೆ ಮಾತನಾಡುತ್ತಿದ್ದಾಗ, ರಾಕಿಂಗ್ ಸ್ಟಾರ್ ಯಶ್ ಅವರ ಪ್ರತಿಭೆಯನ್ನು ಗುರುತಿಸಿ ಬೃಹತ್ ಬಜೆಟ್‌ನ ‘ಟಾಕ್ಸಿಕ್’ ಚಿತ್ರದ ಜವಾಬ್ದಾರಿಯನ್ನು ಒಪ್ಪಿಸಿದರು.

ಟಾಕ್ಸಿಕ್ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಗೀತು, “ಎಲ್ಲರೂ ನನ್ನ ಸಾಮರ್ಥ್ಯದ ಬಗ್ಗೆ ಅನುಮಾನ ಪಟ್ಟಾಗ ಯಶ್ ನನಗೆ ಈ ಅವಕಾಶ ನೀಡಿದರು” ಎಂದು ಸ್ಮರಿಸಿಕೊಂಡಿದ್ದಾರೆ. ಸುಮಾರು ನಾಲ್ಕೈದು ವರ್ಷಗಳ ಸತತ ಶ್ರಮ, ಕಥೆಯ ಮೇಲಿನ ಒಲವು ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೂಡಿ ಮಾಡಿದ ರಿಸರ್ಚ್ ‘ಟಾಕ್ಸಿಕ್’ ಚಿತ್ರವನ್ನು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದೆ. ಕೇವಲ ಭಾರತೀಯ ಚಿತ್ರರಂಗವಷ್ಟೇ ಅಲ್ಲದೆ ಹಾಲಿವುಡ್ ಮಟ್ಟದ ತಂತ್ರಜ್ಞರನ್ನು ಒಗ್ಗೂಡಿಸಿ, ಪೋಸ್ಟ್-ಇಂಡಿಪೆಂಡೆನ್ಸ್ ಗೋವಾ ಹಿನ್ನೆಲೆಯ ಗ್ಯಾಂಗ್‌ಸ್ಟರ್ ಕಥೆಯನ್ನು ತೆರೆಮೇಲೆ ತರಲು ಅವರು ಪಟ್ಟ ಶ್ರಮ ಸಿನಿಮಾದ ಟ್ರೈಲರ್ ನಲ್ಲಿ ಮೇಲ್ನೋಟಕ್ಕೆ ಕಂಡ ಸತ್ಯ.

ಗೀತು ಮೋಹನದಾಸ್ ಅವರ ಜೀವನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ರೋಚಕ ಹಾಗೂ ಆಸಕ್ತಿದಾಯಕ ಸಂಗತಿಗಳೆಂದರೆ ಇವರ ನಿರ್ದೇಶನದ ಮೊದಲ ಫೀಚರ್ ಸಿನಿಮಾ ‘ಲಯರ್ಸ್ ಡೈಸ್’ ಚಿತ್ರವು ಆಸ್ಕರ್ ನ ಭಾರತದ ಅಧಿಕೃತ ಪ್ರವೇಶವಾಗಿ ಪ್ರತಿಷ್ಠಿತ ಆಸ್ಕರ್ ನ ಅಕಾಡೆಮಿ ಅವಾರ್ಡ್ಸ್ ಅಂದರೆ ವಿದೇಶಿ ಭಾಷೆಯ ಚಲನಚಿತ್ರ ವಿಭಾಗಕ್ಕೆ ಆಯ್ಕೆಯಾಗಿತ್ತು.

ಗೀತು ನಿರ್ದೇಶಿಸಿದ ‘ಕೇಳುಕ್ಕುನ್ನುಂಡೋ’ ಎಂಬ ಕಿರುಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸುವುದರ ಜೊತೆಗೆ, ಕೇರಳದ 12ನೇ ತರಗತಿಯ ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವಾಗಿ ಸೇರ್ಪಡೆಗೊಂಡಿದೆ.

ನಿರ್ದೇಶನದ ಕಡೆಗೆ ಸಂಪೂರ್ಣವಾಗಿ ತೊಡಗಿಕೊಳ್ಳುವ ಮೊದಲು, ಅವರು 2004ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಅಗಲೆ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಅವರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಒಲಿದುಬಂದಿತ್ತು.

ಗೀತು ಅವರು ಹೆಸರಾಂತ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಛಾಯಾಗ್ರಾಹಕ ಹಾಗೂ ನಿರ್ದೇಶಕ ರಾಜೀವ್ ರವಿ ಅವರನ್ನು ವಿವಾಹವಾಗಿದ್ದಾರೆ. ವಿಶೇಷವೆಂದರೆ, ಗೀತು ನಿರ್ದೇಶನದ ‘ಲಯರ್ಸ್ ಡೈಸ್’ ಹಾಗೂ ‘ಮೂತುನ್’ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದವರೇ ಅವರ ಪತಿ ರಾಜೀವ್ ರವಿ.

ಇನ್ನು ಗೀತು ಅವರು ತಮ್ಮ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಕಥೆಗಳನ್ನು ಅಥವಾ ತೀವ್ರ ಭಾವನಾತ್ಮಕ ಸತ್ಯಗಳನ್ನು ತೋರಿಸಿದರೂ, ತಮ್ಮನ್ನು ತಾವು ಕೇವಲ ‘ಮಹಿಳಾ ನಿರ್ದೇಶಕಿ’ ಎಂದು ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. “ನಾನು ನಿರ್ದೇಶಕಿ ಅಷ್ಟೇ, ಕಥೆಗೆ ಲಿಂಗಭೇದವಿಲ್ಲ” ಎಂದು ಹಲವು ಸಂದರ್ಶನಗಳಲ್ಲಿ ದೃಢವಾಗಿ ಹೇಳಿದ್ದಾರೆ. ಹಾಗಂತ ಇವರು ಪಿತೃ ಪ್ರಧಾನ್ಯತೆಯನ್ನು ಒಪ್ಪುವವರಲ್ಲ. ಕೇರಳ ಚಲನಚಿತ್ರರಂಗದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು, ಸುರಕ್ಷತೆ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳ ತಡೆಯಲು ರೂಪಿಸಲಾದ ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (WCC) ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಗೀತು ಮೋಹನದಾಸ್ ಕೂಡ ಒಬ್ಬರು. ಪೇಟ್ರಿಯಾರ್ಕಿ ಇಂಡಸ್ಟ್ರಿಯಲ್ಲಿ ದೊಡ್ಡ ಬದಲಾವಣೆ ತರಲು ಅವರು ಈ ಸಂಘಟನೆಯ ಮೂಲಕ ಸಕ್ರಿಯವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಗೀತು ಅವರ ಸಿನಿಮಾಗಳು ಪಿತೃಪ್ರಭುತ್ವದ ಮೌಲ್ಯಗಳನ್ನು ಪ್ರಶ್ನಿಸುತ್ತವೆ. ‘ಮೂತನ್’ ಚಿತ್ರದಲ್ಲಿನ ಲಿಂಗ ತಳಮಳಗಳು, ಸಮಾಜದ ಕಟ್ಟುಪಾಡುಗಳು ಮತ್ತು ಸ್ತ್ರೀ ಸ್ವಾತಂತ್ರ್ಯದ ಆಯಾಮಗಳನ್ನು ಅವರು ಯಾವುದೇ ರಾಜಿ ಇಲ್ಲದೆ ತೆರೆಮೇಲೆ ತಂದಿದ್ದಾರೆ.

ತನ್ನನ್ನು ತಾನು ‘ಫೆಮಿನಿಸ್ಟ್ ನಿರ್ದೇಶಕಿ’ ಎಂದು ಸೀಮಿತಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲವಾದರೂ, ಅವರ ಪ್ರತಿಯೊಂದು ಹೆಜ್ಜೆಯೂ ಚಿತ್ರರಂಗದಲ್ಲಿ ಪಿತೃಪ್ರಭುತ್ವದ ಗೋಡೆಗಳನ್ನು ಕೆಡವಿ ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಗೌರವ ತಂದುಕೊಡುವ ದಿಟ್ಟ ಹೋರಾಟದ ಭಾಗವಾಗಿದ್ದಾರೆ.

ಭಾರತೀಯ ಕಮರ್ಷಿಯಲ್ ಸಿನಿಮಾಗಳ ಟ್ರೆಂಡ್ಗಿಂತ ಭಿನ್ನವಾಗಿ, ಕಲಾತ್ಮಕ ಹಾಗು ವಾಸ್ತವಿಕ ಅಂಶಗಳನ್ನೊಳಗೊಂಡ ಸ್ವತಂತ್ರ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಲು ಶ್ರಮಿಸುವವರಲ್ಲಿ ಗೀತು ಕೂಡ ಒಬ್ಬರು. ಕಮರ್ಷಿಯಲ್ ಪ್ರೆಶರ್ ಗೆ ಮಣಿಯದೆ ತಮ್ಮದೇ ಆದ ವಿಭಿನ್ನ ಕಂಟೆಂಟ್ ಮೂಲಕ ಸಿನಿಮಾಗಳನ್ನು ತಯಾರಿಸೋದು ಇವರ ವಿಶೇಷತೆ.

ಇಂದು ಗೀತು ಮೋಹನದಾಸ್ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಿರ್ದೇಶಕಿಯರಲ್ಲಿ ಒಬ್ಬರು ಎಂಬುವುದು ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಸೋಲುಗಳಿಗೆ ತಲೆಬಾಗದೆ, ತನ್ನ ವಿಭಿನ್ನ ನಿರೂಪಣಾ ಶೈಲಿಯನ್ನು ಬಿಡದೆ ಅವರು ಸಾಧಿಸಿ ತೋರಿಸಿದ ರೀತಿ ಇಂದಿನ ಯುವ ಪೀಳಿಗೆಯ ನಿರ್ದೇಶಕರಿಗೆ, ತಂತ್ರಜ್ಞರಿಗೆ ದೊಡ್ಡ ಸ್ಪೂರ್ತಿ. ಕಷ್ಟದ ಹಾದಿಯನ್ನು ಸವೆದು ಜಾಗತಿಕ ಸಿನಿಮಾದ ಕಿರೀಟ ತೊಡಲು ಹೊರಟಿರುವ ಗೀತು ಅವರ ನಿರ್ದೇಶನ ಟಾಕ್ಸಿಕ್ ಸಿನಿಮಾ ಯಾವ ಮಟ್ಟದಲ್ಲಿ ಹೊರಹೊಮ್ಮಲಿದೆ ಹಾಗು ಈ ಸಿನಿಮಾದಲ್ಲಿ ಪೇಟ್ರಿಯಾರ್ಕಿಯನ್ನು ಮುರಿದು ಫೆಮಿನಿಸಂಗೆ ಎಷ್ಟು ಮಹತ್ವ ನೀಡಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.

-ಆಝಾದ್ ಕಂಡಿಗ
ಪತ್ರಕರ್ತ