ರಾಜಕೀಯ – Peepal Media

ನಿತೀಶ್ ಕುಮಾರ್‌ಗಾಗಿ ಒಂಬತ್ತು ಮಂದಿಯನ್ನು ಕೊಲೆ ಮಾಡಿಸಿದ್ದೆ ಎಂದ ಜೆಡಿಯು ಶಾಸಕ ಅನಂತ್ ಸಿಂಗ್: ವಿವಾದದ ಬೆನ್ನಲ್ಲೇ ಹೇಳಿಕೆ ಬದಲು!
ಪಾಟ್ನಾ: ಬಿಹಾರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಘಟನೆಯೊಂದರಲ್ಲಿ, ಮೊಕಾಮಾ ಕ್ಷೇತ್ರದ ಜನತಾದಳ (ಯುನೈಟೆಡ್) ಶಾಸಕ ಅನಂತ್ ಕುಮಾರ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ಏಳಿಗೆಗಾಗಿ ಒಂಬತ್ತು ಜನರನ್ನು ಕೊಲೆ ಮಾಡಿಸಿದ್ದಾಗಿ ಸ್ಫೋಟಕ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಮುಂಬರುವ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರಿಗೆ ಜೆಡಿಯು ಟಿಕೆಟ್ ನೀಡಿರುವುದನ್ನು ವಿರೋಧಿಸುವ ಭರದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯು ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆಯೇ, ಕೆಲವೇ ಗಂಟೆಗಳಲ್ಲಿ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ಆರಂಭದಲ್ಲಿ ಮಾತನಾಡಿದ್ದ ಅನಂತ್ ಸಿಂಗ್, “ನನಗೂ ನಿತೀಶ್ ಕುಮಾರ್ ಅವರಿಗೂ ಹಳೆಯ ನಂಟಿದೆ; ಅವರ ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದ ಕಷ್ಟದ ದಿನಗಳಲ್ಲಿ ನಾನು ಅವರ ಪರವಾಗಿ ನಿಂತಿದ್ದೆ ಮತ್ತು ಅವರಿಗೆ ನೆರವಾಗಲು ಒಂಬತ್ತು ಜನರನ್ನು ಕೊಲೆ ಮಾಡಿಸಿದ್ದೆ,” ಎಂದು ಹೇಳಿದ್ದರು. ಆದರೆ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ ಸ್ಪಷ್ಟನೆ ನೀಡಿದ ಅವರು, ತಾನು ಯಾರನ್ನೂ ಕೊಲೆ ಮಾಡಿಸಿಲ್ಲ ಎಂದಿದ್ದಾರೆ.

“ಲಾಲೂ ಪ್ರಸಾದ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ನಾವು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಲಾಲೂ ಯಾದವ್ ನನ್ನ ಒಂಬತ್ತು ಜನ ಆಪ್ತರನ್ನು ಹತ್ಯೆ ಮಾಡಿಸಿದ್ದರು. ಆ ವೇಳೆ ನನ್ನ ಮೇಲೂ ಗುಂಡಿನ ದಾಳಿ ನಡೆದಿತ್ತು ಹಾಗೂ ನನ್ನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು,” ಎಂದು ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಬದಲಿಗೆ ಜನ ಸೂರಜ್ ಪಕ್ಷದ ಅಭ್ಯರ್ಥಿ ಅನುಜ್ ಸಿಂಗ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ಅನಂತ್ ಸಿಂಗ್ ಅವರ ಈ ಹೇಳಿಕೆಯನ್ನು ಜೆಡಿಯು ತಳ್ಳಿಹಾಕಿದ್ದು, ನಿತೀಶ್ ಕುಮಾರ್ ಅವರ ರಾಜಕೀಯ ಬದುಕಿನಲ್ಲಿ ಹಿಂಸೆ ಅಥವಾ ಅಪರಾಧಿಗಳ ಜತೆ ಕೈಜೋಡಿಸಿದ ಇತಿಹಾಸವಿಲ್ಲ ಎಂದು ಪಕ್ಷದ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಈ ಬೆಳವಣಿಗೆಯನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ವಿರೋಧ ಪಕ್ಷ ರಾಷ್ಟ್ರೀಯ ಜನತಾದಳ (RJD), ನಿತೀಶ್ ಕುಮಾರ್ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.

ಅನಂತ್ ಸಿಂಗ್ ಅವರ ಆರಂಭಿಕ ಹೇಳಿಕೆಯು ಕೊಲೆಯ ನೇರ ಒಪ್ಪಿಗೆಯಾಗಿದೆ ಎಂದು ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಆರೋಪಿಸಿದ್ದು, ಜೆಡಿಯು ನಾಯಕತ್ವದ ಒತ್ತಡದಿಂದಾಗಿ ಸಿಂಗ್ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ದೂರಿದ್ದಾರೆ. ಅಕ್ಟೋಬರ್ 23 ರಂದು ಬಿಹಾರ ವಿಧಾನ ಪರಿಷತ್ತಿನ ಎಂಟು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯ ಹೊಸ್ತಿಲಲ್ಲೇ ಈ ವಿವಾದ ಜೆಡಿಯು ಪಾಲಿಗೆ ತೀವ್ರ ಇಕ್ಕಟ್ಟು ತಂದಿಟ್ಟಿದೆ.

ಮಾನಹಾನಿಕರ ಸ್ಟಿಂಗ್ ಕಾರ್ಯಾಚರಣೆಗಳ ವಿರುದ್ಧ ಜೆಡಿಎಸ್ ತುರ್ತು ಸಭೆ: ಬೀದಿಯಿಂದ ನ್ಯಾಯಾಲಯದವರೆಗೆ ಹೋರಾಟಕ್ಕೆ ಎಚ್.ಡಿ. ಕುಮಾರಸ್ವಾಮಿ ಕರೆ
ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ನಕಲಿ ಹಾಗೂ ಮಾನಹಾನಿಕರ ಸ್ಟಿಂಗ್ ಕಾರ್ಯಾಚರಣೆಗಳ (Sting Operations) ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಪತ್ರಿಕೋದ್ಯಮದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮತ್ತು ಅಕ್ರಮ ಹಣ ಸುಲಿಗೆ ಜಾಲ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಕೃತ್ಯಗಳಿಂದಾಗಿ ಮುಖ್ಯಮಂತ್ರಿ ಸೇರಿದಂತೆ ಇಡೀ ರಾಜ್ಯ ಸರ್ಕಾರವೇ ಈ ಬ್ಲ್ಯಾಕ್‌ಮೇಲ್ ಶಕ್ತಿಗಳ ಕೈಗೊಂಬೆಯಾಗಿದೆ ಎಂದು ಅವರು ಗುಡುಗಿದ್ದಾರೆ.

ಬೆಂಗಳೂರಿನ ಲೋಕಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಈ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನ ರೂಪಿಸಲು ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಮುಖ ಮುಖಂಡರ ತುರ್ತು ಸಭೆ ಕರೆದಿರುವುದಾಗಿ ತಿಳಿಸಿದರು.

“ಈ ವಿದ್ಯಮಾನಗಳ ಕುರಿತು ಎಲ್ಲ ನಾಯಕರ ಅಭಿಪ್ರಾಯ ಪಡೆದು, ಮುಂದಿನ ಕಾನೂನು ಕ್ರಮ ಹಾಗೂ ಬೀದಿ ಹೋರಾಟದ ರೂಪುರೇಷೆಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗುವುದು.

ಪ್ರಸ್ತುತ ನಕಲಿ ಸ್ಟಿಂಗ್ ಕಾರ್ಯಾಚರಣೆಗಳ ಹೆಸರಿನಲ್ಲಿ ಸಾರ್ವಜನಿಕ ನಾಯಕರಿಗೆ ಯಾವುದೇ ಗೌರವವಿಲ್ಲದಂತಹ ಕೆಟ್ಟ ವಾತಾವರಣ ಸೃಷ್ಟಿಸಲಾಗುತ್ತಿದ್ದು, ಇದಕ್ಕೆ ರಾಜ್ಯಾದ್ಯಂತ ಸಂಪೂರ್ಣ ತೆರೆ ಎಳೆಯಬೇಕಿದೆ,” ಎಂದು ಅವರು ಎಚ್ಚರಿಸಿದರು. ತಮ್ಮ ಈ ನಿಲುವು ಯಾವುದೇ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ದುರುದ್ದೇಶದಿಂದ ಕೂಡಿದ್ದಲ್ಲ, ಬದಲಿಗೆ ನಾಡಿನ ಹಿತದೃಷ್ಟಿಯಿಂದ ಕೈಗೊಂಡ ತೀರ್ಮಾನ ಎಂದರು.

ಹಿಂದಿನ ಹಿರಿಯ ಪತ್ರಕರ್ತರ ಘನತೆಯನ್ನು ಸ್ಮರಿಸುತ್ತಾ ಇಂದಿನ ಮೌಲ್ಯಗಳ ಕುಸಿತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಹಿಂದೆ ಇಡೀ ದೇಶಕ್ಕೆ ಮಾದರಿಯಾಗಿದ್ದ ಪತ್ರಿಕೋದ್ಯಮದ ಹೆಸರಿನಲ್ಲಿ ಇಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಣ ವಸೂಲಿ ದಂಧೆ ನಡೆಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರದಲ್ಲಿರುವ ಪ್ರಮುಖ ವ್ಯಕ್ತಿಗಳು ಸಹ ಇಂತಹ ಬಲೆಯಲ್ಲೇ ಸಿಲುಕಿರುವ ಸಾಧ್ಯತೆಯಿದ್ದು, ಆ ಬ್ಲ್ಯಾಕ್‌ಮೇಲ್ ಹತೋಟಿಯ ಕಾರಣದಿಂದಾಗಿ ಸರ್ಕಾರ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ದೂರಿದರು.

ಈ ಷಡ್ಯಂತ್ರದ ಹಿಂದಿರುವ ನೈಜ ಮುಖಗಳನ್ನು ಸಾರ್ವಜನಿಕರ ಮುಂದೆ ಬಯಲಿಗೆಳೆಯಲು ಜೆಡಿಎಸ್ ಪಕ್ಷವು ನ್ಯಾಯಾಲಯ ಹಾಗೂ ಸಾರ್ವಜನಿಕ ರಂಗ ಎರಡರಲ್ಲೂ ಪ್ರಬಲ ಹೋರಾಟ ರೂಪಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.

“ದೇಶದ ಪ್ರತಿಭಟನೆಗಳ ಹಿಂದೆ ಎಲಾನ್ ಮಸ್ಕ್ ಕೈವಾಡ” : ಬ್ರಿಜ್ ಭೂಷಣ್ ಸಿಂಗ್ ಗಂಭೀರ ಆರೋಪ
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳು ಮತ್ತು ಆಂದೋಲನಗಳ ಹಿಂದೆ ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಅವರ ಪ್ರಭಾವವಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿದೇಶಿ ಉದ್ಯಮಿಗಳ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಅವರು ದೂರಿದ್ದು, ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, ಭಾರತದಲ್ಲಿ ನಡೆಯುತ್ತಿರುವ ಕೆಲವು ಪ್ರತಿಭಟನೆಗಳನ್ನು ಸಂಘಟಿಸಲು ಎಲಾನ್ ಮಸ್ಕ್ ಅವರ ಪ್ರಭಾವ ಹಾಗೂ ಅವರ ಒಡೆತನದ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೇಶದ ಆಂತರಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ಅವರ ವಾದವಾಗಿದೆ.

ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಆರೋಪ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು.

ಜಂತರ್ ಮಂತರ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕ ಅವರನ್ನು ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರತಿಭಟನೆ ಮತ್ತಷ್ಟು ರಾಜಕೀಯ ಮಹತ್ವ ಪಡೆದುಕೊಂಡಿದೆ.

ಈ ಬೆಳವಣಿಗೆಗಳನ್ನು ಉಲ್ಲೇಖಿಸಿದ ಬ್ರಿಜ್ ಭೂಷಣ್ ಸಿಂಗ್, ಪ್ರತಿಭಟನೆಯ ಸಂಘಟನೆಯ ಹಿಂದೆ ಎಲಾನ್ ಮಸ್ಕ್ ಅವರ ಸೂಚನೆಗಳಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಭಾರತವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪರಿಸ್ಥಿತಿಗಳಿಗೆ ಹೋಲಿಸುವ ಮೂಲಕ ದೇಶದ ಘನತೆಗೆ ಧಕ್ಕೆ ತರಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಇಂತಹ ರ‍್ಯಾಲಿಗಳನ್ನು ಆಯೋಜಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಭಾರತದಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಹೇಳಿರುವ ಅವರು, ದೇಶದ ವಿರುದ್ಧ ದೊಡ್ಡ ಮಟ್ಟದ ಪಿತೂರಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿದೇಶಿ ಉದ್ಯಮಿಗಳ ಹಿತಾಸಕ್ತಿಗಳ ಬಗ್ಗೆ ಆಕ್ಷೇಪ
ಭಾರತದಲ್ಲಿ ತಮ್ಮದೇ ಷರತ್ತುಗಳ ಆಧಾರದ ಮೇಲೆ ವ್ಯಾಪಾರ ನಡೆಸಲು ಬಯಸುವ ವಿದೇಶಿ ಉದ್ಯಮಿಗಳು ಕೆಲವು ಆಂದೋಲನಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ. ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಆಂತರಿಕ ವಿಚಾರಗಳಲ್ಲಿ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿಯೂ ರಾಜಕೀಯ ಷಡ್ಯಂತ್ರಗಳು ನಡೆದಿದ್ದವು ಎಂದು ಅವರು ಸ್ಮರಿಸಿದ್ದಾರೆ. ಆದರೆ, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳಿಗೂ ಎಲಾನ್ ಮಸ್ಕ್ ಅವರಿಗೂ ನೇರ ಸಂಬಂಧವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಸಾಕ್ಷ್ಯ ಅಥವಾ ದೃಢೀಕೃತ ಮಾಹಿತಿಯನ್ನು ಅವರು ಸಾರ್ವಜನಿಕವಾಗಿ ಉಲ್ಲೇಖಿಸಿರುವ ಬಗ್ಗೆ ನೀಡಿರುವ ಮಾಹಿತಿಯಲ್ಲಿ ವಿವರಗಳಿಲ್ಲ.

ಗಾಳಿಯಲ್ಲಿ ಗುಂಡು ಹೊಡೆದ ಬ್ರಿಜ್ ಭೂಷಣ್ ಸಿಂಗ್
ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ವಿದೇಶಿ ಉದ್ಯಮಿಗಳ ಕೈವಾಡವಿದೆ ಎಂಬ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಆದರೆ, ಇಂತಹ ಆರೋಪಗಳನ್ನು ಸತ್ಯವೆಂದು ಪರಿಗಣಿಸಲು ಸ್ವತಂತ್ರವಾಗಿ ಪರಿಶೀಲಿಸಬಹುದಾದ ದಾಖಲೆಗಳು, ಹಣಕಾಸಿನ ವ್ಯವಹಾರಗಳ ವಿವರಗಳು ಅಥವಾ ಇತರ ವಿಶ್ವಾಸಾರ್ಹ ಸಾಕ್ಷ್ಯಗಳು ಅಗತ್ಯವಾಗಿವೆ.

ಈ ಕುರಿತು ಎಲಾನ್ ಮಸ್ಕ್ ಅಥವಾ ಅವರ ಸಂಸ್ಥೆಗಳ ಪ್ರತಿಕ್ರಿಯೆಯೂ ನೀಡಿರುವ ಮಾಹಿತಿಯಲ್ಲಿ ಲಭ್ಯವಿಲ್ಲ.

ನಿಮ್ಮಪ್ಪನಿಗೆ, ನಿಮಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು – ಖರ್ಗೆ ವಿರುದ್ಧ ಕುಮಾರಸ್ವಾಮಿ ಗರಂ
ಬೆಂಗಳೂರು: ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಬೆಳಗ್ಗೆಯಿಂದಲೇ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರು, ಇದೀಗ ಮತ್ತೊಂದು ಹೆಜ್ಜೆ ಮುಂದೆ, ‘ಬಲಿತ ದಲಿತ’ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಎಂದು ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್ ಎಂದು ಗುಡುಗಿದ್ದಾರೆ. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ ‘ಬಲಿತ ದಲಿತ’ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ ಎಂದಿದ್ದಾರೆ.

ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್’ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ ಎಂದು ಕುಮಾರಸ್ವಾಮಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಕ್ರೋಚ್ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ – ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ
ಬೆಂಗಳೂರು: ‘ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಎರಡೂ ಒಂದೇ’, ಹೆದರಬೇಡಿ ನೀಮ್ಮನ್ನು ಇಲ್ಲಿ ಅರೆಸ್ಟ್‌ ಮಾಡಲ್ಲ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಥಣಿಸಂದ್ರದ ಟ್ರಾಫಿಕ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗೂ ಟ್ರಾಫಿಕ್ ಪೊಲೀಸರಿಗೆ ಬೈಕ್ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಹೇಳಿ ಅಚ್ಚರಿ ಮೂಡಿಸಿದರು.

‘ವಿಧ್ಯಾರ್ಥಿಗಳಿಗೆ ನೀವೆಲ್ಲ ಜೆನ್ ಝಿ(Gen-Z) ಗಳಿದ್ದೀರಾ’ ಎಂದು ಯುವಕರನ್ನು ಖರ್ಗೆ ಹುರಿದುಂಬಿಸಿದರು. ಇದೇ ವೇಳೆ ನೀವು ಕಾಂಗ್ರೇಸ್ಸಾ ಅಥವಾ ಕಾಕ್ರೋಚ್ ಜನತಾ ಪಾರ್ಟಿನಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಯಾವುದೇ ವಿದ್ಯಾರ್ಥಿಗಳು ಉತ್ತರ ಕೊಡದೇ ಸುಮ್ಮನಿದ್ದಾಗ, ‘ಹೆದರಬೇಡಿ ನೀಮ್ಮನ್ನು ಇಲ್ಲಿ ಅರೆಸ್ಟ್‌ ಮಾಡಲ್ಲ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಈ ವೇಳೆ ಅಲ್ಲೆ ನೆರೆದಿದ್ದ ಬಹುತೇಕ ವಿಧ್ಯಾರ್ಥಿಗಳು ಕಾಕ್ರೋಚ್.., ಕಾಕ್ರೋಚ್.. ಎಂದು ಕೂಗಿದರು. ಇನ್ನು ಕೆಲವು ವಿದ್ಯಾರ್ಥಿಗಳು ಕಾಂಗ್ರೆಸ್ಕಾಂ ಗ್ರೆಸ್ ಎಂದು ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಖರ್ಗೆ ಅವರು ನೀವ್ಯಾರೂ ಇಲ್ಲಿ ಇಬ್ಭಾಗವಾಗಿ ಕೂಗಬೇಡಿ, “ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೇಸ್ ಎರಡೂ ಒಂದೇ ಬಿಡಿ” ಎಂದು ಹೇಳಿದ್ದಾರೆ.

ಮರಣದಂಡನೆ ಶಿಕ್ಷೆ ಪ್ರಕಟ ಊಟ-ನಿದ್ರೆ ಬಿಟ್ಟು ತೀವ್ರ ಆತಂಕದಲ್ಲಿ ಮುಸ್ಕಾನ್-ಸಾಹಿಲ್
ಮೀರತ್: ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ರನ್ನು ಭೀಕರವಾಗಿ ಕೊಂದು ದೇಹವನ್ನು ತುಂಡಾಗಿ ಕತ್ತರಿಸಿ ನೀಲಿ ಡ್ರಮ್ ನಲ್ಲಿ ಹಾಕಿದ್ದ ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಇದೀಗ ಜೈಲಲ್ಲೇ ನಿದ್ರೆ-ಊಟ ಬಿಟ್ಟು ಕಂಗಾಲಾಗಿದ್ದಾರೆ ಎನ್ನಲಾಗಿದೆ.

ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೀರತ್‌ನ ನೀಲಿ ಡ್ರಮ್‌ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ, ತೀರ್ಪಿನ ಬಳಿಕ ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಇಬ್ಬರೂ ಊಟವನ್ನೂ ಮಾಡದೆ ಮಾನಸಿಕವಾಗಿ ವಿಚಲಿತರಾಗಿದ್ದಾರೆ ಎಂದು ಜೈಲು ಆಡಳಿತದ ಮೂಲಗಳು ತಿಳಿಸಿವೆ.

ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ರಾಜ್‌ಪೂತ್‌ ಅವರನ್ನು ಕೊಂದು, ಅವರ ದೇಹವನ್ನು ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಅಡಗಿಸಿದ್ದ ಪ್ರಕರಣದಲ್ಲಿ ಮುಸ್ಕಾನ್‌ ಮತ್ತು ಸಾಹಿಲ್‌ಗೆ ಮೀರತ್ ಕೋರ್ಟ್ ಇತ್ತೀಚೆಗೆ ಮರಣದಂಡನೆ ವಿಧಿಸಿತ್ತು. ಬುಧವಾರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಬಳಿಕ ಇಬ್ಬರ ಆತಂಕ ಹೆಚ್ಚಾಗಿದೆ. ವಿಶೇಷವಾಗಿ, ತನ್ನ 10 ತಿಂಗಳ ಮಗಳು ರಾಧಾಳ ಭವಿಷ್ಯ ಮತ್ತು ಆರೈಕೆಯ ಬಗ್ಗೆ ಮುಸ್ಕಾನ್‌ ಚಿಂತಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋರ್ಟ್ ತೀರ್ಪಿಗೂ ಮುನ್ನ ಮತ್ತು ಬಳಿಕ ಇಬ್ಬರೂ ಊಟ ಮಾಡಿಲ್ಲ ಎಂದು ಜೈಲು ಆಡಳಿತದ ಮೂಲಗಳು ಹೇಳಿವೆ. ಮರಣದಂಡನೆ ಶಿಕ್ಷೆ ಪ್ರಕಟವಾದಾಗ ಮುಸ್ಕಾನ್‌ ಅಚ್ಚರಿ ಮತ್ತು ಅವಿಶ್ವಾಸ ವ್ಯಕ್ತಪಡಿಸುವ ರೀತಿಯಲ್ಲಿ “ಅರ್ರೆ!” ಎಂದು ಪ್ರತಿಕ್ರಿಯಿಸಿದ್ದರು ಎನ್ನಲಾಗಿದೆ.

ಅಂಕಿತಾ ಭಂಡಾರಿ ಪ್ರಕರಣ: ನ್ಯಾಯಕ್ಕಾಗಿ ಪೋಷಕರ ಹೋರಾಟ; ರಾಜ್ಯಪಾಲರ ನೇಮಕಕ್ಕೆ ವಿರೋಧ
ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ ಪೋಷಕರು; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಾಥ್‌ - ಸಿಬಿಐ ತನಿಖೆಗೆ ಆಗ್ರಹ

ನವದೆಹಲಿ: ಉತ್ತರಾಖಂಡದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಕೊಲೆ ಪ್ರಕರಣ ಮತ್ತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ‘ವಿಐಪಿ’ಯ ಗುರುತು ಬಹಿರಂಗಪಡಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಅಂಕಿತಾ ಅವರ ಪೋಷಕರು, ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಗುರುವಾರ ಮುಂಜಾನೆ ನಡೆದ ಪ್ರತಿಭಟನೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿ ಅಂಕಿತಾ ಅವರ ಕುಟುಂಬಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನೆ ಮುಂದುವರಿದ ಸಂದರ್ಭದಲ್ಲಿ ದೆಹಲಿ ಪೊಲೀಸರು ಅಂಕಿತಾ ಅವರ ಪೋಷಕರು ಹಾಗೂ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು. ಸುಮಾರು ಒಂದು ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ವರದಿಯಾಗಿದೆ.

ಮಗಳ ಸಾವಿನ ಪ್ರಕರಣದಲ್ಲಿ ‘ವಿಐಪಿ’ ಯಾರು?
2022ರಲ್ಲಿ ಉತ್ತರಾಖಂಡದ ಋಷಿಕೇಶ ಸಮೀಪದ ವನಂತ್ರ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಹತ್ಯೆಯಾಗಿದ್ದರು. ಸೆಪ್ಟೆಂಬರ್ 18ರಂದು ನಾಪತ್ತೆಯಾಗಿದ್ದ ಅವರ ಮೃತದೇಹ ಆರು ದಿನಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾಗಿತ್ತು.

ಪ್ರಕರಣದ ತನಿಖೆಯ ವೇಳೆ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಹಾಗೂ ಆತನ ಸಹಚರರಾದ ಅಂಕಿತ್ ಗುಪ್ತಾ ಮತ್ತು ಸೌರಭ್ ಭಾಸ್ಕರ್ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ರೆಸಾರ್ಟ್‌ಗೆ ಬರುವ ಅತಿಥಿಗಳಿಗೆ ವಿಶೇಷ ಸೇವೆ ಒದಗಿಸುವಂತೆ ಅಂಕಿತಾ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆರೋಪವೂ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿತ್ತು.

ಈ ಪ್ರಕರಣದಲ್ಲಿ ‘ವಿಐಪಿ’ಯೊಬ್ಬರ ಹೆಸರು ಪ್ರಸ್ತಾಪವಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಯೊಬ್ಬರ ಪಾತ್ರವಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ಅಂಕಿತಾ ಅವರ ಪೋಷಕರು, ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿ ತನಿಖೆ ನಡೆಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.

2025ರ ಮೇ ತಿಂಗಳಲ್ಲಿ ಪೌರಿ ಗಢ್ವಾಲ್ ನ್ಯಾಯಾಲಯವು ಪುಲ್ಕಿತ್ ಆರ್ಯ, ಅಂಕಿತ್ ಗುಪ್ತಾ ಮತ್ತು ಸೌರಭ್ ಭಾಸ್ಕರ್ ಅವರನ್ನು ದೋಷಿಗಳೆಂದು ಘೋಷಿಸಿ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ‘ವಿಐಪಿ’ಯ ಗುರುತು ಮತ್ತು ಪಾತ್ರದ ಕುರಿತು ತನಿಖೆ ನಡೆಸಬೇಕೆಂಬ ಪೋಷಕರ ಬೇಡಿಕೆ ಮುಂದುವರಿದಿದೆ.

ರಾಜ್ಯಪಾಲರ ನೇಮಕಕ್ಕೆ ಪೋಷಕರ ಆಕ್ಷೇಪ
ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದಕ್ಕೆ ಅಂಕಿತಾ ಅವರ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೆ ನೇಮಕಾತಿಯನ್ನು ತಡೆಹಿಡಿಯಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದಾರೆ.

ತಮ್ಮ ಮಗಳ ಸಾವಿನ ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ‘ವಿಐಪಿ’ಯ ಪಾತ್ರದ ಕುರಿತು ಸಮಗ್ರ ತನಿಖೆ ನಡೆಯಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅನುಮಾನಗಳಿಗೆ ಉತ್ತರ ದೊರೆಯಬೇಕು ಎಂಬುದು ಕುಟುಂಬದ ಆಗ್ರಹವಾಗಿದೆ.

ಅಂಕಿತಾ ಅವರ ತಂದೆ ವೀರೇಂದ್ರ ಭಂಡಾರಿ ಮಾತನಾಡಿ, ತಮ್ಮ ಮಗಳ ಸಾವಿನ ಪ್ರಕರಣದಲ್ಲಿ ‘ವಿಐಪಿ’ಯ ಪಾತ್ರವಿದೆ ಎಂಬ ಮಾಹಿತಿ ಕೇಳಿಬಂದಿದೆ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ದುಷ್ಯಂತ್ ಕುಮಾರ್ ಗೌತಮ್ ಅವರ ರಾಜ್ಯಪಾಲರ ನೇಮಕಾತಿಯನ್ನು ತಡೆಹಿಡಿಯುವಂತೆ ಅವರು ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಅಂಕಿತಾ ಅವರ ತಾಯಿ ಸೋನಿ ದೇವಿ ಕೂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾವನಾತ್ಮಕ ಮನವಿ ಸಲ್ಲಿಸಿದ್ದು, ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಆದರೆ, ದುಷ್ಯಂತ್ ಕುಮಾರ್ ಗೌತಮ್ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿರುವುದಿಲ್ಲ. ಅವರು ಆರೋಪಗಳನ್ನು ನಿರಾಕರಿಸಿದ್ದು, ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ; ಕಾಂಗ್ರೆಸ್ ನಾಯಕರ ವಶಕ್ಕೆ
ಅಂಕಿತಾ ಅವರ ಪೋಷಕರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ಆಗಮಿಸಿ ಕುಟುಂಬದ ಬೇಡಿಕೆಗಳಿಗೆ ಬೆಂಬಲ ಸೂಚಿಸಿದರು.

ಅಂಕಿತಾ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ವ್ಯಕ್ತಿಯ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂಬ ಬೇಡಿಕೆಗಳು ಪ್ರತಿಭಟನೆಯಲ್ಲಿ ಪ್ರಮುಖವಾಗಿ ಕೇಳಿಬಂದವು.

ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ಖಂಡಿಸಿದ್ದಾರೆ. ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಅಂಕಿತಾ ಅವರ ಪೋಷಕರೊಂದಿಗೆ ಪೊಲೀಸರು ಕಠಿಣವಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಸುಮಾರು ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಲಾಗಿದೆ.

ನೇಮಕಾತಿ ಕುರಿತು ಚರ್ಚೆ
ದುಷ್ಯಂತ್ ಕುಮಾರ್ ಗೌತಮ್ ಅವರ ರಾಜ್ಯಪಾಲರ ನೇಮಕವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಅಂಕಿತಾ ಭಂಡಾರಿ ಪ್ರಕರಣದ ಹಿನ್ನೆಲೆಯಲ್ಲಿ ಈ ನಿರ್ಧಾರದ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ಮತ್ತು ಅನುಮಾನಗಳ ಬಗ್ಗೆ ತನಿಖೆ ನಡೆಯಬೇಕಿರುವ ಸಂದರ್ಭದಲ್ಲಿ ಸಾಂವಿಧಾನಿಕ ಹುದ್ದೆಗೆ ನೇಮಕ ಮಾಡಿರುವುದು ಸೂಕ್ತವೇ ಎಂಬ ಪ್ರಶ್ನೆಯನ್ನೂ ಪಕ್ಷದ ನಾಯಕರು ಎತ್ತಿದ್ದಾರೆ.

ಇದೇ ವೇಳೆ, ಆರೋಪಗಳನ್ನು ಗೌತಮ್ ನಿರಾಕರಿಸಿರುವುದರಿಂದ ಪ್ರಕರಣದ ಕುರಿತು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ತನಿಖೆಯ ಫಲಿತಾಂಶ ಮತ್ತು ಲಭ್ಯವಿರುವ ಸಾಕ್ಷ್ಯಗಳನ್ನು ಪರಿಗಣಿಸುವುದು ಅಗತ್ಯವಾಗಿದೆ.

ಒಟ್ಟಿನಲ್ಲಿ, ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲ್ಪಟ್ಟ ಮೂವರ ವಿರುದ್ಧದ ವಿಚಾರಣೆ ಒಂದು ಹಂತ ತಲುಪಿದ್ದರೂ, ಪ್ರಕರಣದಲ್ಲಿ ಪ್ರಸ್ತಾಪವಾಗಿರುವ ‘ವಿಐಪಿ’ಯ ಗುರುತು ಮತ್ತು ಪಾತ್ರದ ಕುರಿತು ಪೋಷಕರು ಎತ್ತಿರುವ ಪ್ರಶ್ನೆಗಳು ಮತ್ತೆ ಸಾರ್ವಜನಿಕ ಚರ್ಚೆಗೆ ಬಂದಿವೆ. ತಮ್ಮ ಮಗಳಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವುದಾಗಿ ಪೋಷಕರು ಎಚ್ಚರಿಕೆ ನೀಡಿದ್ದು, ರಾಷ್ಟ್ರಪತಿಗಳ ಭೇಟಿಗೂ ಸಮಯ ಕೋರಿದ್ದಾರೆ. ಬೇಡಿಕೆ ಈಡೇರದಿದ್ದರೆ ಉತ್ತರಾಖಂಡ ಮುಖ್ಯಮಂತ್ರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ತಿಳಿಸಿದ್ದಾರೆ.

ಸಿದ್ದರಾಮಯ್ಯನವರ ತೇಜೋವಧೆ ಮಾಡಲು ಅವರ ಪಕ್ಷದಲ್ಲೇ ಒಂದು ಗ್ಯಾಂಗ್ ಸಕ್ರಿಯವಾಗಿದೆ: ಸಿ.ಡಿ. ಫ್ಯಾಕ್ಟರಿ ಮಾಫಿಯಾ ವಿರುದ್ಧ ಯತ್ನಾಳ್ ಕಿಡಿ
ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಹಿಂದುಳಿದ ವರ್ಗದ ನಾಯಕನನ್ನು ರಾಜಕೀಯವಾಗಿ ಹಣಿಯಲು ಮತ್ತು ತೇಜೋವಧೆ ಮಾಡಲು ಅವರದ್ದೇ ಪಕ್ಷದೊಳಗಿನ ಒಂದು ಗ್ಯಾಂಗ್ ಹಾಗೂ ‘ಸಿ.ಡಿ. ಫ್ಯಾಕ್ಟರಿ ಮಾಫಿಯಾ’ ಸಕ್ರಿಯವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್, ಆಡಳಿತದಲ್ಲಿರುವ ಸರ್ಕಾರಕ್ಕೆ ಅಧಿಕಾರದ ಹಪಾಹಪಿ ಮತ್ತು ಕುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಿತಿಮೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ವೈರಿಗಳನ್ನು ಸದೆಬಡಿಯಲು ‘ಸ್ಟಿಂಗ್ ಆಪರೇಷನ್’ ಎಂಬ ಅಸ್ತ್ರವನ್ನು ಬಳಸಿಕೊಳ್ಳುತ್ತಿರುವುದು ಹೇಯ ಹಾಗೂ ಖಂಡನೀಯ ಎಂದಿರುವ ಅವರು, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಈ ‘ಸಿ.ಡಿ. ಫ್ಯಾಕ್ಟರಿ ಮಾಫಿಯಾ’ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಚಾರಿತ್ರ್ಯಹನನ ಮಾಡುವ ಇಂತಹ ಅನೈತಿಕ ಪ್ರಯತ್ನಗಳು ಮೌಲ್ಯಯುತ ರಾಜಕಾರಣದ ಅಧಃಪತನದ ಸಂಕೇತವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ಹಾಗೂ ಬಡವರು, ರೈತರು, ಶೋಷಿತರು ಮತ್ತು ಶ್ರಮಿಕರ ಪರವಾಗಿ ಕೆಲಸ ಮಾಡಬೇಕಾಗಿದ್ದ ಸರ್ಕಾರ ಹಾಗೂ ನಾಯಕರು, ತಮ್ಮ ರಾಜಕೀಯ ವೈರಿಗಳನ್ನು ಸದೆಬಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. “ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ ಎಂಬುದನ್ನು ‘ಸಿ.ಡಿ. ಫ್ಯಾಕ್ಟರಿ’ಯ ಸಂಸ್ಥಾಪಕರು ಹಾಗೂ ಅದರ ಸದಸ್ಯರು ಮರೆಯಬಾರದು,” ಎಂದು ಯತ್ನಾಳ್ ಮಾರ್ಮಿಕವಾಗಿ ಎಚ್ಚರಿಕೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ನಾಯಕನಿಗೆ ಎಸಗಿದ ಈ ಅವಮಾನಕ್ಕೆ ಅದೇ ಸಮುದಾಯದ ಜನರು ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಬೆದರಿಕೆ, ಅನೈತಿಕ ಹಾಗೂ ಹುರುಳಿಲ್ಲದ ಆರೋಪಗಳು, ತೇಜೋವಧೆ ಮತ್ತು ಚಾರಿತ್ರ್ಯಹನನದ ರಾಜಕಾರಣಕ್ಕೆ ಜನರೇ ‘ಇತಿಶ್ರೀ’ ಹಾಡಲಿದ್ದಾರೆ. ಇಂತಹ ಕುಟಿಲ ಮಾರ್ಗ ಅನುಸರಿಸುವ ರಾಜಕಾರಣಿಗಳಿಗೆ ಹಾಗೂ ಅವರ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರಿಗೆ ಹಿಂದುಳಿದ ಸಮುದಾಯದವರು ಮತ್ತು ಪ್ರಜ್ಞಾವಂತ ಮತದಾರರು ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಯತ್ನಾಳ್ ಗುಡುಗಿದ್ದಾರೆ.

ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ವಿಡಿಯೋ ಸಾಕ್ಷಿ ನೀಡಲು ಚುನಾವಣಾ ಆಯೋಗ ಹಿಂದೇಟು; ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ: ಕರ್ನಾಟಕದ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ವಿವಾದ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಮೂಲ ಮತ ಎಣಿಕೆಯ ವಿಡಿಯೋ ಪತ್ತೆಯಾಗಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯ ವೇಳೆಗೆ ಲಭ್ಯವಿರುವ ಎಲ್ಲ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ. ದಾಖಲೆಗಳನ್ನು ಸಲ್ಲಿಸಲು ವಿಫಲವಾದರೆ ಆಯೋಗದ ವಿರುದ್ಧ ಪ್ರತಿಕೂಲ ತೀರ್ಮಾನ ಕೈಗೊಳ್ಳಬೇಕಾಗಬಹುದು ಎಂದು ನ್ಯಾಯಪೀಠ ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 14ರಂದು ಪ್ರಕರಣದ ವಿಚಾರಣೆ ನಡೆಸಿತು. ಚುನಾವಣೆಯಂತಹ ಮಹತ್ವದ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳೇ ಲಭ್ಯವಿಲ್ಲ ಎನ್ನುವ ಆಯೋಗದ ವಿವರಣೆಯನ್ನು ಒಪ್ಪದ ನ್ಯಾಯಾಲಯ, ದಾಖಲೆಗಳ ಸಂರಕ್ಷಣೆ ಮತ್ತು ಅವುಗಳನ್ನು ನ್ಯಾಯಾಲಯಕ್ಕೆ ಒದಗಿಸುವ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿತು.

ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ಶೇಷಾದ್ರಿ ನಾಯ್ಡು, 2023ರ ಮತ ಎಣಿಕೆಯ ವಿಡಿಯೋವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಲಯ, ಲಭ್ಯವಿರುವ ದಾಖಲೆಗಳನ್ನು ಮುಂದಿನ ವಿಚಾರಣೆಯ ವೇಳೆಗೆ ಸಲ್ಲಿಸುವಂತೆ ಸೂಚಿಸಿತು. ಈ ಕುರಿತು Bar and Bench ವರದಿ ಮಾಡಿದೆ.

201 ಮತಗಳ ಗೆಲುವಿನಿಂದ ಮರುಎಣಿಕೆಯ ವಿವಾದದವರೆಗೆ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಜೀವರಾಜ್ ಅವರು ರಾಜೇಗೌಡ ಅವರ ಆಯ್ಕೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, 2026ರ ಏಪ್ರಿಲ್ 6ರಂದು ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳ ಮರುಪರಿಶೀಲನೆ ಸೇರಿದಂತೆ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು. ನಂತರ ಮೇ 3ರಂದು ಚುನಾವಣಾಧಿಕಾರಿ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿ, ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ 255 ಮತಗಳ ಇಳಿಕೆ ದಾಖಲಿಸಿದರು. ಇದರ ಪರಿಣಾಮವಾಗಿ ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು.

ಈ ಬೆಳವಣಿಗೆಯನ್ನು ಪ್ರಶ್ನಿಸಿರುವ ರಾಜೇಗೌಡ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

562 ಮಾನ್ಯ ಅಂಚೆ ಮತಗಳ ಮರುಪರಿಶೀಲನೆ ಆರೋಪ
ಹೈಕೋರ್ಟ್ 279 ತಿರಸ್ಕೃತ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಮಾತ್ರ ಆದೇಶಿಸಿತ್ತು. ಆದರೆ, ಚುನಾವಣಾಧಿಕಾರಿ ತಮ್ಮ ಪರವಾಗಿ ಈಗಾಗಲೇ ಮಾನ್ಯಗೊಳಿಸಲಾಗಿದ್ದ 562 ಅಂಚೆ ಮತಪತ್ರಗಳನ್ನೂ ಮರುಪರಿಶೀಲನೆಗೆ ಒಳಪಡಿಸಿದ್ದಾರೆ ಎಂಬುದು ರಾಜೇಗೌಡ ಅವರ ಪ್ರಮುಖ ಆಕ್ಷೇಪವಾಗಿದೆ.

ಹೈಕೋರ್ಟ್‌ನ ಆದೇಶದ ವ್ಯಾಪ್ತಿಯನ್ನು ಮೀರಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಜೀವರಾಜ್ ಮಾಡಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಮಾನಗಳ ಹಿನ್ನೆಲೆಯಲ್ಲಿ ಮರುಎಣಿಕೆಯ ಅಗತ್ಯವೇನಿತ್ತು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಆದರೆ, ಈ ಆರೋಪಗಳು ರಾಜೇಗೌಡ ಅವರ ಅರ್ಜಿಯಲ್ಲಿ ಮಾಡಿರುವ ವಾದಗಳಾಗಿದ್ದು, ಅವುಗಳ ಕುರಿತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಮಾನ ಇನ್ನೂ ಹೊರಬಿದ್ದಿಲ್ಲ.

ನ್ಯಾಯಾಲಯಕ್ಕೆ ಅಗತ್ಯವಾದ ದಾಖಲೆಗಳೇ ಎಲ್ಲಿ?
ಮೂಲ ಮತ ಎಣಿಕೆಯ ವೀಕ್ಷಕರ ವರದಿ ಹಾಗೂ 2023ರ ಮತ ಎಣಿಕೆ ಮತ್ತು ನಂತರದ ಮರುಎಣಿಕೆಗೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಬೇಕೆಂದು ರಾಜೇಗೌಡ ಅವರ ಪರವಾಗಿ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಆದರೆ, ಮೂಲ ಮತ ಎಣಿಕೆಯ ವಿಡಿಯೋ ಪತ್ತೆಯಾಗಿಲ್ಲ ಎಂಬ ಆಯೋಗದ ಹೇಳಿಕೆ ನ್ಯಾಯಪೀಠದ ಅಸಮಾಧಾನಕ್ಕೆ ಕಾರಣವಾಯಿತು. ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸುವ ಸಂಸ್ಥೆಯೇ ಸಂಬಂಧಿತ ದಾಖಲೆಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ಲಭ್ಯವಿರುವ ಎಲ್ಲ ದಾಖಲೆಗಳನ್ನು ಮುಂದಿನ ವಿಚಾರಣೆಯ ದಿನದಂದು ಹಾಜರುಪಡಿಸಬೇಕು. ಇಲ್ಲವಾದರೆ ಆಯೋಗದ ವಿರುದ್ಧ ಪ್ರತಿಕೂಲ ತೀರ್ಮಾನಕ್ಕೆ ಬರಬೇಕಾಗಬಹುದು ಎಂದು ಪೀಠ ಎಚ್ಚರಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು 2027ರ ಫೆಬ್ರವರಿ 15ಕ್ಕೆ ಮುಂದೂಡಲಾಗಿದೆ.

ರಾಜೇಗೌಡರಿಗೆ ಮಧ್ಯಂತರ ಪರಿಹಾರ
ಮರುಎಣಿಕೆಯ ನಂತರ ತಮ್ಮ ಶಾಸಕ ಸ್ಥಾನ ಕಳೆದುಕೊಂಡಿದ್ದ ರಾಜೇಗೌಡ ಅವರಿಗೆ ಸುಪ್ರೀಂ ಕೋರ್ಟ್ 2026ರ ಮೇ ತಿಂಗಳಲ್ಲಿ ಮಧ್ಯಂತರ ಪರಿಹಾರ ನೀಡಿತ್ತು. ಅವರ ಅರ್ಜಿಯ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಶಾಸಕರಾಗಿ ಮುಂದುವರಿಯಲು ಅವಕಾಶ ಕಲ್ಪಿಸಿತ್ತು.

ಇದೇ ವೇಳೆ, ಅಂಚೆ ಮತಪತ್ರಗಳ ಅಕ್ರಮ ತಿರುಚುವಿಕೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಜೀವರಾಜ್ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿರುವುದಾಗಿ ವರದಿಗಳು ತಿಳಿಸಿವೆ. ಆ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ 2026ರ ಮೇ ತಿಂಗಳಲ್ಲಿ ತಡೆ ನೀಡಿತ್ತು. ಈ ಆರೋಪಗಳು ಮತ್ತು ಪ್ರಕರಣದ ಕಾನೂನುಬದ್ಧ ಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗಿದೆ.

ಚುನಾವಣಾ ದಾಖಲೆಗಳ ಸಂರಕ್ಷಣೆ ಮತ್ತೆ ಚರ್ಚೆಗೆ
ಶೃಂಗೇರಿ ಕ್ಷೇತ್ರದ ವಿವಾದವು ಕೇವಲ ಇಬ್ಬರು ಅಭ್ಯರ್ಥಿಗಳ ನಡುವಿನ ಚುನಾವಣಾ ಫಲಿತಾಂಶದ ಸಂಘರ್ಷಕ್ಕೆ ಸೀಮಿತವಾಗಿಲ್ಲ. ಅಂಚೆ ಮತಗಳ ಮರುಪರಿಶೀಲನೆಯ ವ್ಯಾಪ್ತಿ, ಮತ ಎಣಿಕೆಯ ದಾಖಲೆಗಳ ಲಭ್ಯತೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯಂತಹ ಮಹತ್ವದ ಪ್ರಶ್ನೆಗಳನ್ನೂ ಇದು ಮುನ್ನೆಲೆಗೆ ತಂದಿದೆ.

ಮೂಲ ಮತ ಎಣಿಕೆಯ ವಿಡಿಯೋ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಚುನಾವಣಾ ಆಯೋಗ ಯಾವ ದಾಖಲೆಗಳನ್ನು ಸಲ್ಲಿಸುತ್ತದೆ ಮತ್ತು ಮರುಎಣಿಕೆಯ ಕಾನೂನುಬದ್ಧತೆಯ ಕುರಿತು ಸುಪ್ರೀಂ ಕೋರ್ಟ್ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಗಮನಿಸಬೇಕಾದ ಅಂಶ: ಸುಪ್ರೀಂ ಕೋರ್ಟ್ ಈ ಹಂತದಲ್ಲಿ ಚುನಾವಣಾ ಆಯೋಗದ ವಿರುದ್ಧ ಅಂತಿಮ ತೀರ್ಪು ನೀಡಿಲ್ಲ. ಲಭ್ಯವಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿ, ಅವುಗಳನ್ನು ಸಲ್ಲಿಸದಿದ್ದರೆ ಪ್ರತಿಕೂಲ ತೀರ್ಮಾನ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಚುನಾವಣಾ ವಿವಾದದ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಸುಪ್ರೀಂಗೆ ನನ್ನ ಬಗ್ಗೆ ಸರ್ಕಾರ ತಪ್ಪು ಮಾಹಿತಿ ನೀಡಿದ್ದಾರೆ – ಡಿಜಿಪಿ ಅಲೋಕ್ ಕುಮಾರ್
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮಗಳ ತನಿಖೆಗಾಗಿ ಕರ್ನಾಟಕ ಹೈಕೋರ್ಟ್ ತಮ್ಮನ್ನು ಎಸ್‌ಐಟಿ (SIT) ಮುಖ್ಯಸ್ಥರನ್ನಾಗಿ ನೇಮಿಸಿದ್ದನ್ನು ರಾಜ್ಯ ಸರ್ಕಾರ ಆಕ್ಷೇಪಿಸಿದ ರೀತಿಯ ಬಗ್ಗೆ ಕರ್ನಾಟಕ ಡಿಜಿಪಿ (ಜೈಲು) ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲೋಕ್ ಕುಮಾರ್ ನೇತೃತ್ವದ ಎಸ್‌ಐಟಿ ತಂಡ ರಚನೆಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಹೀಗಾಗಿ ಅಕ್ಟೋಬರ್ 1ರಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಸರ್ಕಾರ ಪರ ವಾದ ಮಂಡಿಸಿದ್ದ ಕಪಿಲ್ ಸಿಬಲ್, ಅಲೋಕ್ ಕುಮಾರ್ ಅವರ ವಿರುದ್ಧ ಸಿಬಿಐ ತನಿಖೆ ಬಾಕಿ ಇದೆ ಎಂದು ವಾದಿಸಿದ್ದರು. ಈ ವಾದವನ್ನು ಖಂಡಿಸಿ ಅಲೋಕ್ ಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ತಮ್ಮ ವಿರುದ್ಧ ಸಿಬಿಐ ತನಿಖೆ ಬಾಕಿಯಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿದ್ದ ಮಾಹಿತಿಯನ್ನು ತಿದ್ದುಪಡಿ ಮಾಡುವಂತೆ ಅಕ್ಟೋಬರ್ 5ರಂದು ಕರ್ನಾಟಕ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು. ಈ ಹೇಳಿಕೆಯು ವಾಸ್ತವಿಕವಾಗಿ ತಪ್ಪಾಗಿದೆ ಎಂದು ಕುಮಾರ್ ಪ್ರತಿಪಾದಿಸಿದ್ದರು. ಸರ್ಕಾರ ಸಲ್ಲಿಸಿದ ಈ ಮಾಹಿತಿಯು ಅನಗತ್ಯವಾಗಿ ತಮ್ಮ ಹೆಸರನ್ನು ವಿವಾದಕ್ಕೆ ಎಳೆತಂದಿದೆ. ತಮ್ಮ ವೃತ್ತಿಪರ ಪ್ರಾಮಾಣಿಕತೆ ಹಾಗೂ ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಅಲೋಕ್ ಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ (telephone-tapping) ಆರೋಪಗಳ ಕುರಿತು ಸಿಬಿಐ ತನಿಖೆ ಬಾಕಿಯಿದೆ ಎಂಬ ಕಾರಣವೊಡ್ಡಿ ಎಸ್‌ಐಟಿ ನೇತೃತ್ವದಿಂದ ತಮ್ಮ ನೇಮಕವನ್ನು ರಾಜ್ಯ ಸರ್ಕಾರ ವಿರೋಧಿಸಿತ್ತು.